Thursday 19 April 2012

ಪ್ರತಿಯೊಬ್ಬ ಹಿಂದುವಿನ ಮನದಾಳದ ಮಾತು-ಧರ್ಮದ ರಕ್ಷಣೆ, ಭಾರತಮಾತೆಯ ಸೇವೆ:
(ಏಳಿ ಏಳಿ ಎಚ್ಚರಾಗಿ ಹಿಂದು ಬಾಂಧವರೆ...ಪಕ್ಷ ಯಾವುದಾದರೇನು? ಧರ್ಮ,ದೇಶ ಒಂದೇ ತಾನೇ...)
ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರಸರ್ಕಾರ ಮಂಡಿಸಲಿರುವ ಹಿಂದು ವಿರೋಧಿ ಮಸೂದೆಯ ಕುರಿತು ಪ್ರತಿಯೊಬ್ಬ ಹಿಂದುವಿನ ಮನಸ್ಸಿನಲ್ಲಿ ಇಂಥ ಭಾವನೆ ಮೂಡಿದರೆ ನ್ಯಾಯಸಮ್ಮತವಾದುದೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಭಾರತದ ಇತಿಹಾಸವನ್ನು ಕೆದಕಿ ನೋಡಿದಾಗ ಅನೇಕ ವರ್ಷಗಳಿಂದ ಹಿಂದುಗಳ ಮೇಲೆ ಆಗಬಾರದ,ಸಹಿಸಲು ಸಾಧ್ಯವಾಗದ ಘನಘೋರ ದುರಂತಗಳೇ ನಡೆದಿವೆ. ಭರತ ಚಕ್ರವರ್ತಿಯಿಂದ ಭಾರತವೆಂದು, ಹಿಂದುಗಳ ವಾಸಸ್ಥಾನವಾದ್ದರಿಂದ ಹಿಂದುಸ್ಥಾನವೆಂದು ಕರೆದ ಭಾರತದಲ್ಲಿ ಹಿಂದುಗಳಿಗೆ ದಿನದಿಂದ ದಿನಕ್ಕೆ ಅನ್ಯಾಯವಾಗುತ್ತಿದೆ. ಕೆಲವೊಂದು ಘಟನೆಗಳನ್ನು ಕೇಳಿದ್ದೇವೆ. ಅನೇಕ ಹಿರಿಯರು ಕಣ್ಣಾರೆ ನೋಡಿದ್ದಾರೆ. ಹಿಂದು ಬಾಂದವರ ಪಾಲಿಗೆ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿರುವ ಮಸೂದೆಯಿಂದ ತಮ್ಮೆಲ್ಲಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಮಹಾಹುನ್ನಾರ ನಡೆಯುತ್ತಿದೆ ಎನ್ನುವುದು ಸ್ಪಷ್ಟ. ಹಿಂದುಗಳ ಪಾಲಿಗೆ ಕರಾಳ ಮಸೂದೆಯಾಗಿ, ತನ್ನ ಬಲಿಷ್ಟವಾದ ಬೃಹತ್ ಸಂಕೋಲೆಗಳಿಂದ ನಮ್ಮನ್ನು ಬಂದಿಸಿ ತಮ್ಮ ರಾಜಕೀಯ ಬೆಳೆಯನ್ನು ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರಸರ್ಕಾರ. ಕೇವಲ ಅಧಿಕಾರದ ಪೀಠ ಮಾತ್ರ ಇವರ ಪಾಲಿಗಿದ್ದರೂ, ಅಲ್ಲಿಯ ಸರ್ವ ಸೂತ್ರಧಾರಿ ಸೋನಿಯಾ ಆಂಟಾನಿಯೋ ಮೈನೋ ಎನ್ನುವ ಗಾಂಧಿ ಕುಟುಂಬಕ್ಕೆ ಸೊಸೆಯಾಗಿ ಬಂದ ವಿದೇಶಿ ತಳಿ ಎನ್ನುವುದು ಪ್ರತಿಯೊಬ್ಬ ಅನಕ್ಷರಸ್ಥನಿಗೂ ತಿಳಿದಿದೆ.
ಅಂದು ಹೇಗಿತ್ತು? ಇಂದು ಹೇಗಾಗಿದೆ? ಹಿಂದುಸ್ಥಾನ.ವೈಭವಯುತವಾದ ಭಾರತದಲ್ಲಿ ಬೀದಿಗಳಲ್ಲಿ ರತ್ನ,ವಜ್ರ,ವೈಡೂರ್ಯಗಳನ್ನು ಸೇರಿನಿಂದ ಅಳೆದುಕೊಡುತ್ತಿದ್ದ ಪರ್ವಕಾಲವನ್ನು ಕೇಳಿದ್ದೇವೆ. ನಮ್ಮಲ್ಲಿರುವ ಅಜಂತಾ, ಎಲ್ಲೋರಾ, ಕಾಶಿ, ಸೋಮನಾಥ ಅನೇಕ ದೇವಸ್ಥಾನಗಳು ಸುವರ್ಣಮಯವಾಗಿದ್ದ ಕಾಲದಲ್ಲಿ ಮೋಘಲರ ಧಾಳಿಯಿಂದ ಸಂಪತ್ತನ್ನೆಲ್ಲಾ ದೋಚಿಕೊಂಡು ಹೋದರೂ, ಭಾರತಮಾತೆಯ ಮಡಿಲು ಅಕ್ಷಯ ಪಾತ್ರೆಯಂತೆ, ದೇಹಿ ಅಂತ ಬಂದವರಿಗೆ ಆಶ್ರಯ ನೀಡಿ ತನ್ನ ಮಾತೃಗುಣವನ್ನು ವಿಶ್ವದ ಮೂಲೆ ಮೂಲೆಗೂ ಪಸರಿಸುವಂತೆ ಮಾಡಿದ್ದಾಳೆ. ಹಿಂದುಗಳು ಸಹಧರ್ಮ ಸಹಿಷ್ಣುಗಳು, ಇತರ ಧರ್ಮಗಳಿಗೂ ಕೂಡ ಕೇಡನ್ನು ಬಯಸದೆ ಅವರೂ ಕೂಡ ನಮ್ಮಲ್ಲಿ ಒಬ್ಬರು,ಅವರೂ ಕೂಡ ಭಾರತಾಂಬೆಯ ಮಕ್ಕಳು ಎನ್ನುವುದನ್ನು ಸಾರಿಹೇಳಿದರು. ಆದರೆ ಅಲ್ಪಸಂಖ್ಯಾತರೆಂದು ಕರೆಯುವ ಅವರು ಮಾತ್ರ ಹಿಂದುಗಳ ಮಾರಣಹೋಮಕ್ಕೆ ಕಾರಣರಾದರು. ಇಷ್ಟಾದರೂ ಹಿಂದುಗಳು ಮಾತ್ರ ಅವರು ನಮ್ಮವರು ಎನ್ನುವ ಭಾವನೆಯಿಂದ ಬದುಕತೊಡಗಿದರು.ಇದು ತ್ಯಾಗಭೂಮಿ ಎನಿಸಿದ ಭಾರತದ ಮಣ್ಣಿನ ಗುಣ ಎನ್ನುವುದೂ ಸ್ಫಷ್ಟ. ವ್ಯಾಪಾರದ ತಕ್ಕಡಿಯನ್ನು ಹಿಡಿದು ಬಂದ ಬ್ರಿಟಿಷರು ಸುಮಾರು ೨೦೦ ವರ್ಷಗಳವರೆಗೆ ಆಳ್ವಿಕೆ ನಡೆಸಿ ಇಲ್ಲಿರುವಂಥ ಸಂಪತ್ತನ್ನೆಲ್ಲಾ ದೋಚಿಕೊಂಡು ಹೊದದ್ದು ಮಾತ್ರವಲ್ಲ, ನಮ್ಮ ಸಂಸ್ಕೃತಿ, ಶಿಕ್ಷಣಪದ್ದತಿ ಹಾಗೂ ಮುಸಲ್ಮಾನರಲ್ಲಿ ಹಿಂದುಗಳ ಮೇಲೆ ದ್ವೇಷಭಾವನೆಯನ್ನು ಬಿತ್ತಿ ಪ್ರತ್ಯೇಕ ಎರಡು ದೇಶಗಳನ್ನು ನಿರ್ಮಿಸಿ ಹೊರಟುಹೊದರು. ಪೂರ್ವಪಾಕಿಸ್ತಾನ ಹಾಗೂ ಪಶ್ಚಿಮ ಪಾಕಿಸ್ತಾನ ಮೊದಲು ಅಖಂಡ ಭಾರತದಲ್ಲಿ ಸೇರಿದ್ದರೂ ಬ್ರಿಟಿಷರ ಕಾರಣದಿಂದ ಇಬ್ಬಾಗವಾಯಿತು. ಮುಸಲ್ಮಾನರಿಗಾಗಿಯೇ ಪ್ರತ್ಯೇಕ ಎರಡೂ ದೇಶಗಳಿದ್ದರೂ, ಭಾರತಾಂಬೆ ಮಾತ್ರ ಅವರೂ ಕೂಡ ನಮ್ಮ ಮಕ್ಕಳು ಎನ್ನುವ ಭಾವನೆಯಿಂದ ಮಾತೃಮಾತ್ಸಲ್ಯ ತೋರಿ ಆಶ್ರಯ ನೀಡಿದಳು.
ಸ್ವಾತಂತ್ರ್ಯನಂತರ ಆ ದ್ವೇಷದ ಬೆಂಕಿಗೆ ತುಪ್ಪ ಸವರಿದವರು ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ, ಇದಕ್ಕೆ ಸಾಥ್ ನೀಡಿದವರು ಜಗತ್ತಿಗೆ ಮಹಾತ್ಮನೆನಿಸಿದ ಗಾಂಧೀಜಿ. ಪಾಕಿಸ್ತಾನಕ್ಕೆ ಪರಿಹಾರ ಕೊಡದಿದ್ದರೆ ಉಪವಾಸ ಸಾಯುತ್ತೇನೆ ಎಂದು ಹಠಹಿಡಿದಾಗ, ನೆಹರೂ ಗಾಂಧೀಜಿಯವರ ಬೇಡಿಕೆಗೆ ಅಸ್ತು ಎಂದರು. ಆಗಲೇ ದೇಶ ಕೋಟಿಗಟ್ಟಲೇ ಸಾಲವನ್ನು ಹೊಂದಿತು. ನಂತರ ಬಂದ ಗಾಂಧಿ ಕುಟುಂಬದವರೇ ಕಾಂಗ್ರೆಸ್‌ನ ಸಾರಥಿಗಳಾಗಿ, ದೇಶದ ಸುವ್ಯವಸ್ಥೆಯನ್ನು ಹಾಳುಗೆಡಹುದಕ್ಕೆ ಪ್ರಾರಂಬಮಾಡಿದರು. ದೇಹದ ರಕ್ತದ ಕಣ ಕಣದಲ್ಲಿಯೂ ದೇಶಭಕ್ತಿಯನ್ನು ಹಾಗೂ ದೇಶ ಹಿತದ ಚಿಂತನೆಯಲ್ಲಿ ಸ್ವಾರ್ಥವನ್ನು ಬಯಸದೇ, ಹಿಂದು ಸಮಾಜದ ಏಳ್ಗೆಗಾಗಿ ಶ್ರಮಿಸುವ ರಾಷ್ಡ್ರಿಯ ಸ್ವಯಂಸೇವಕ ಸಂಘದ ವಿರುದ್ದ ಅಪಪ್ರಚಾರ ಮಾಡುವುದಲ್ಲದೇ ಅದನ್ನು ಸಂಪೂರ್ಣ ನಿರ್ನಾಮ ಮಾಡಬೇಕೆಂದು ಶ್ರಮಿಸುತ್ತಿದ್ದರೂ ಹಿಂದು ಸಮಾಜವು ಎಚ್ಚರಿಕೆಯ ಧ್ವನಿ ಕಾಲದಿಂದ ಕಾಲಕ್ಕೆ ಮಾಡುತ್ತಿದೆ. ದೇಶದ ಇಂಚುಗಳಲ್ಲಿಯೂ ಭಗವಾಧ್ವಜ ಹಾರಾಡುತ್ತಿರುವುದನ್ನು ನೋಡಿ, ಎರಡು ಗುಂಪುಗಳಾಗಿ ಮಾಡಿ ಒಡೆದು ಆಳುವ ಷಡ್ಯಂತ್ರದ ರೂಪವೇ ಈ ಮಸೂದೆ.
ಭ್ರಷ್ಟಾಚಾರದ ಆರೋಪಗಳಿಂದ ತತ್ತರಿಸಿರುವ ಕೇಂದ್ರಸರ್ಕಾರ ಮುಂದಿನ ಚುನಾವಣೆಯನ್ನು ಕಣ್ಣಮುಂದಿರಿಸಿ, ಅಲ್ಪಸಂಖ್ಯಾತರ ಮನಒಲಿಸಲು ಹಾಗೂ ದೇಶಾಧ್ಯಂತ ಜಾಗೃತವಾಗಿರುವ ಹಿಂದುಶಕ್ತಿಯನ್ನು ತುಳಿಯುವ ಉದ್ದೇಶದಿಂದ ಮಸೂದೆಯನ್ನು ಜಾರಿಗೆ ತರುವ ಷಡ್ಯಂತ್ರ ಮಾಡುತ್ತಿದೆ. ಹಿಂದು ಸಂಘಟನೆಗಳ ಮೇಲೆ ಭಯೋತ್ಪಾದನೆಯ ಸುಳ್ಳು ಆರೋಪ ಮಾಡುತ್ತಿರುವ ಶಕ್ತಿಗಳ ಷಡ್ಯಂತ್ರದ ಭಾಗವೇ ಮಸೂದೆ. ಒಂದು ಪಕ್ಷ ಈ ಮಸೂದೆ ಜಾರಿಯಾದರೆ ಯಾವುದೇ ಸಂದರ್ಭದಲ್ಲಿ ಹಿಂದುಗಳು ಪ್ರಾಣಹಾನಿ-ಸಂಪತ್ತು ನಷ್ಟವಾದಲ್ಲಿ ಅದು ಮತೀಯ ಗಲಭೆಯೇ ಅಲ್ಲ. ಅಲ್ಪಸಂಖ್ಯಾತರಿಗೆ ಹಾನಿಯಾದಲ್ಲಿ ಮಾತ್ರ ಅದು ಮತೀಯ ಗಲಭೆ ಎಂದು ಪರಿಗಣಿಸಲ್ಪಡುವ ಮಸೂದೆ ೯ ಅದ್ಯಾಯ,೧೩೮ವಿಧಿಗಳನ್ನು ಒಳಗೊಂಡು ಹಿಂದುಗಳ ಪಾಲಿಗೆ ಕರಾಳ ಮಸೂದೆಯಾಗಿದೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಸಂವಿಧಾನ ರಚಿತವಾಗಿ, ವಾಕ್, ಧಾರ್ಮಿಕ, ಅನೇಕ ಮೂಲಭೂತ ಸ್ವಾತಂತ್ರ್ಯವನ್ನು ನಮ್ಮ ಪಾಲಿಗೆ ನೀಡಿದ್ದರೂ ಈ ಮಸೂದೆ ಅಂಗೀಕಾರವಾದ ಮರುಕ್ಷಣದಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡು ಗುಲಾಮಿತನದ ಜೀವನವನ್ನು ನಡೆಸಬೇಕಾಗುವುದು. ಇತಿಹಾಸದ ನೈಜ ಚಿತ್ರಣವನ್ನು ನೋಡಿದಾಗ ಹಿಂದುಗಳು ಯಾವ ರೀತಿಯಾದ ಕಷ್ಟವನ್ನು ಎದುರಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ಈ ಮಸೂದೆಯಲ್ಲಿ ಸೆಕ್ಷನ್೩ಸಿ-ಕೋಮುಹಿಂಸೆ, ಸೆಕ್ಷನ್೩ಜೆ-ನೊಂದವ್ಯಕ್ತಿ,ಸೆಕ್ಷನ್೩ಕೆ-ಸಾಕ್ಷಿದಾರ ಹೀಗೆ ಹಿಂದುಗಳ ಪಾಲಿಗೆ ಮಸೂದೆಯ ಒಂದೊಂದೆ ಭೀಕರತೆಯ ಪುಟಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಗಲಭೆಗಳಾದ ಸಮಯ ಹಿಂದುವಿನ ತಪ್ಪಿಲ್ಲದಿದ್ದರೂ, ಅಲ್ಲಿ ಹಿಂದುವಿನ ವಿರುದ್ದ ಪ್ರಕರಣ ದಾಖಲಿಸಬಹುದು. ಸಮಾಜದಲ್ಲಿ ಇಂದು ಗೋವುಗಳ ಅಪಹರಣ ಜಾಸ್ತಿಯಾಗುತ್ತಿದೆ. ಮಾನವ ಕಳ್ಳಸಾಗಣೆ ಮಿತಿಮಿರುತ್ತಿದೆ. ಇದೆಲ್ಲಾ ನಮ್ಮ ಕಣ್ಣೆದುರಿನಲ್ಲಿ ನಡೆದರೂ ನಾವು ಅಸಹಾಯಕರು. ವ್ಯಾಜ್ಯಗಳು ನ್ಯಾಯಾಲದ ಮುಂದೆ ಹೋದರೆ ನೊಂದವ್ಯಕ್ತಿಯೇ ತನ್ನ ತಪ್ಪಿಲ್ಲವೆಂದು ಸಾಬೀತುಪಡಿಸಬೇಕು. ಅವನ ಪರವಾಗಿ ಯಾವ ವಕೀಲರು ವಾದಮಾಡುವ ಹಾಗಿಲ್ಲ ಸ್ವತಃ ವಾದಮಾಡಿ ಬಿಡುಗಡೆಗೊಳ್ಳಬೇಕು.ಇಲ್ಲವಾದರೆ ಸೆರೆಮನೆವಾಸಕ್ಕೆ ಸಿದ್ದವಾಗಬೇಕು. ಲೈಂಗಿಕ ಹಲ್ಲೆ ನಡೆದರೂ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕಾಗುತ್ತದೆ. ಅಲ್ಪಸಂಖ್ಯಾತನೊಬ್ಬ ಹಿಂದುವಿನ ವಿರುದ್ದ ದೂರಿ, ಪೋಲಿಸರು ಬಂದಿಸಿದರೆ ಹಿಂದುವಿನ ಪಾಲಿಗೆ ಜಾಮೀನು ರಹಿತ ಸೆರಮನೆವಾಸ. ಅವನ ತಪ್ಪಿಲ್ಲದಿದ್ದರೂ ನ್ಯಾಯಾಲಯದಲ್ಲಿ ಅವನ ತಪ್ಪೆಂದು ನಿರ್ಣಯವಾದರೆ ಪ್ರತಿವಾದಿ ಕೇಳಿದಷ್ಟೂ ಹಣವನ್ನು ಅಥವಾ ಆಸ್ತಿಯ ಮುಟ್ಟುಗೋಲು ಹಾಕುವಂಥ ಅಧಿಕಾರವಿರುತ್ತದೆ.
ನೊಂದ ಅಲ್ಪಸಂಖ್ಯಾತನಿಗೆ ರಕ್ಷಣೆ ಹಾಗೂ ಪರಿಹಾರ ಕೇಂದ್ರಗಳ ಸ್ಥಾಪನೆಮಾಡಲಾಗುತ್ತದೆ. ಮಾನಸಿಕ ನೊಂದವನಿಗೆ-೩ಲಕ್ಷ, ಜಾಗಕ್ಕೆ ಅಕ್ರಮ ಪ್ರವೇಶಕ್ಕೆ ೨ಲಕ್ಷ, ಸಾಮಾನ್ಯಗಾಯಕ್ಕೆ ೨ಲಕ್ಷ, ಅಂಗಊನತೆಗೆ ೩ಲಕ್ಷ, ಸಾವಿಗೆ ೫ಲಕ್ಷ....ಇದು ಕನಿಷ್ಟ ಪರಿಹಾರ.ಕೊರೆಯುವ ಚಳಿಯಲ್ಲಿ ದೇಶಕ್ಕಾಗಿ ಹೋರಾಡಿ ಮಡಿದ ವೀರ ಸೈನಿಕನಿಗೆ ಇಲ್ಲದ ಸವಲತ್ತುಗಳು ಮತೀಯಗಲಭೆಗೆ ಕಾರಣರಾಗುವ ಅಲ್ಪಸಂಖ್ಯಾತನಿಗೆ ದೊರಕುತ್ತದೆ. ಇದರಿಂದ ಅಲ್ಪಸಂಖ್ಯಾತರಿಗೆ ಕಾನೂನಿನ ಭೀತಿ ಇಲ್ಲದೇ, ಹಿಂಸೆ, ದಂಗೆ ನಡೆಸಲು ಮುಕ್ತ ಅವಕಾಶವಾಗುತ್ತದೆ.
ಗಾಂಧೀಜಿ ರಘುಪತಿ ರಾಘವ ರಾಜರಾಮ,ಪತಿತ ಪಾವನ ಸೀತಾರಾಮ..ಈಶ್ವರ ಅಲ್ಲಾ ತೇರೆ ನಾಮ, ಸಬಕೋ ಸನ್ಮತಿ ದೇ ಭಗವಾನ್...ಎನ್ನುತ್ತಾ ಪರೋಕ್ಷವಾಗಿ ಅಲ್ಪಸಂಖ್ಯಾತರಿಗೆ ಬೆಂಬಲ ನೀಡಿದರು. ಪ್ರಥಮ ಪ್ರಧಾನಿ ಚೀನಾ-ಭಾರತ್ ಭಾಯೀ ಭಾಯೀ ಎಂದು ದೇಶಕ್ಕೆ ಘೋರ ಆಪತ್ತನ್ನು ತಂದದ್ದು ಮಾತ್ರವಲ್ಲ, ಹಿಂದುಸ್ಥಾನದಲ್ಲಿ ಹುಟ್ಟಿ ನನ್ನನ್ನು ಕತ್ತೆ ಎಂದಾದರೂ ಕರೆಯಿರಿ ಹಿಂದು ಎನ್ನುವುದಾಗಿ ಕರೆಯಬೇಡಿ ಎಂದು ಹಿಂದುತ್ವಕ್ಕೆ ಕಪ್ಪುಚುಕ್ಕೆ ಇಟ್ಟಿದ್ದರು. ನಂತರ ಬಂದ ಇಂದಿರಾಗಾಂಧಿ, ರಾಜೀವ ಗಾಂಧಿ ಹಿಂದು ಸಂಘಟನೆಗಳ ಧಮನಕ್ಕೆ ಪ್ರಯತ್ನಿಸಿದರು. ಮುಂದೆ ಗಾಂಧಿ ಕುಟುಂಬಕ್ಕೆ ಸೊಸೆಯಾಗಿ ಬಂದ ವಿದೇಶಿ ತಳಿ ಸೋನಿಯಾ ಆಂಟಾನಿಯೋ ಮೈನೋ ಪ್ರಧಾನಮಂತ್ರಿಯನ್ನೆ ಅಲ್ಲಾಡಿಸುವಷ್ಟರ ಮಟ್ಟಿಗೆ ಬೆಳೆದು ನಿಂತು ಹಿಂದುಗಳ ದಮನಕ್ಕೆ ಮಹಾಸಂಚನ್ನೆ ಮಾಡಿದ್ದಾರೆ. ಇವರಿಗೆ ಅಲ್ಪಸಂಖ್ಯಾತರೇ ಮುಖ್ಯವಾದರೆ? ಬಹುಸಂಖ್ಯಾತ ಹಿಂದುಗಳಿರುವ ಹಿಂದುಸ್ಥಾನದಲ್ಲಿ ಕೇವಲ ಅವರ ಮತಗಳನ್ನು ಹಿಡಿದು ಪುನಃ ಅಧಿಕಾರ ಸ್ಥಾಪಿಸುತ್ತೇವೆ ಎನ್ನುವ ಅವರ ಹುಂಬತನಕ್ಕೆ ಏನೆಂದುಕೊಳ್ಳೋಣ.
ಹಿಂದುಗಳು ಸಮಾಜದಲ್ಲಿ ಹೊಂದಿಕೊಂಡು ಹೋಗುವ ಗುಣವನ್ನು ಬೆಳೆಸಿಕೊಂಡಿದ್ದೇವೆ. ಪರಿಸರದಲ್ಲಿ ಎಷ್ಟೇ ದುಷ್ಕೃತ್ಯಗಳು ನಡೆಸುತ್ತಿದ್ದರೂ, ಅವರು ನಮ್ಮವರು ಎನ್ನುವ ಭಾವನೆಯಿಂದ ಸುಮ್ಮನಿದ್ದೇವು. ಆದರೆ ಎಲ್ಲಿಯವರೆಗೆ ಸಹಿಸಿಕೊಳ್ಳಬಹುದು.ಹಿಂದುಗಳು ಇಷ್ಟರವರೆಗೆ ಸುಮ್ಮನಿದ್ದದ್ದು ಅವರ ಪಾಲಿಗೆ ನಾವು ನೀಡಿರುವ ಆತಿಥ್ಯ.ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದು ಮಲಗಿರುವ ಸಿಂಹವನ್ನು ಎಚ್ಚರಿಸಿ, ಹಿಂದುಗಳಲ್ಲಿರುವ ಸಿಂಹಸದೃಶ್ಯ ಹಿಂದುಭಾವನೆಯನ್ನು ಮತ್ತೆ ಕೆರಳಿಸಿದ್ದಿರಾ? ಮತೀಯ ಹಿಂಸಾಚಾರ ತಡೆ ಮಸೂದೆಯು ದೇಶದ ಅಖಂಡತೆ,ಅಸ್ಮಿತೆಗಳ ಬಗ್ಗೆಯೇ ಪ್ರಶ್ನಿಸುವ ವಿಕೃತ ಮನಸ್ಸುಗಳು ಒಂದೆಡೆ ಸೇರಿ ತಯಾರಿಸಿದ ವಿಕೃತ ಮಸೂದೆಯ ಅರಿವು ಬೃಹತ್ ಹಿಂದೂ ಸಮಾಜದಲ್ಲಿ ಜಾಗೃತವಾಗಿದೆ. ಯಾರಿಂದಲೂ ಚುನಾಯಿಸಲ್ಪಡದ ರಾಷ್ಟ್ರೀಯ ಸಲಹಾಮಂಡಳಿ, ವಿದೇಶಿ ಶಕ್ತಿಯ ಹುನ್ನಾರದಿಂದ ಹಿಂದುಗಳನ್ನು ದಮನಿಸಲು ಎತ್ತಿಕೊಂಡಿರುವ ಷಡ್ಯಂತ್ರ ಎನ್ನುವುದು ತಿಳಿದಿದೆ. ಹಿಂದು ಬಾಂದವರಿಗೆ ಎಲ್ಲರಲ್ಲೂ ಹೊಂದಿಕೊಂಡು ಸಹಬಾಳ್ವೆಯನ್ನು ನಡೆಸಬೇಕು ಎಂದು ನಮ್ಮ ಧರ್ಮವೇ ಸಾರುತ್ತದೆ.ಚಳಿಗಾಲದ ಅಧಿವೇಶನದಲ್ಲಿ ಅಲ್ಪಸಂಖ್ಯಾತರನ್ನು ಓಲೈಸುವ ಮಸೂದೆ ಜಾರಿಮಾಡಲು ಪ್ರಯತ್ನಿಸಿದರೆ ದುಷ್ಟಶಕ್ತಿಗಳಿಗೆ ಹಿಂದು ಬಾಂದವರ ಎಚ್ಚರಿಕೆಯ ಮಾತುಗಳು... ಮೈಕೊರೆಯುವ ಚಳಿಯಲ್ಲೂ ಮಾತುಗಳೇ ತೊದಲುವ ಸ್ಥಿತಿಯಲ್ಲಿ ದೇಹದ ಶಕ್ತಿ ಕಡಿಮೆಯಾಗಿದೆ ಎಂದು ಭಾವಿಸಿದರೆ ಅದು ತಪ್ಪು ಕಲ್ಪನೆ. ಘೋರ ಚಳಿಯಲ್ಲೂ ಹಿಂದುಗಳು ಮನಸ್ಸು ಮಾಡಿದರೆ ಎದುರಾಳಿಯ ಬೆವರನ್ನು ಇಳಿಸುವ ಕಾರ್ಯದಲ್ಲಿ ತೊಡಗುತ್ತಾರೆ ಎನ್ನುವುದನ್ನು ದೇಶದ ಮೂಲೆ ಮೂಲೆಯಲ್ಲಿಯೂ ಜಾಗೃತ ಹಿಂದು ಬಾಂದವರೂ ತೋರಿಸುತ್ತಿದ್ದಾರೆ. ಪ್ರತಿಯೊಬ್ಬ ಹಿಂದುವಿನ ತೊದಲುನುಡಿ ಹಿಂದುಸ್ಥಾನದ ರಕ್ಷಣೆ, ಹಿಂದುಗಳ ರಕ್ಷಣೆ, ಭಾರತಮಾತೆಯ ಸೇವಾಕೈಂಕರ್ಯದಲ್ಲಿ ತೊಡಗುವ ಗುಣವಾಗಿದೆ.
- ಸರ್ವೇ ಜನಃ ಸುಖೀನೋ ಭವಂತು...
ಸಂದೇಶ ಶೆಟ್ಟಿ ಆರ್ಡಿ

No comments:

Post a Comment