Wednesday 18 April 2012

ಅಲ್ಪಸಂಖ್ಯಾತರಿಗೂ ಓಬಿಸಿ ಮೀಸಲಾತಿ !
ಹಿಂದು ಸಮಾಜಕ್ಕೆ ಅವಳಿ ಕಂಟಕ
ಹಿಂದು ಸಮಾಜದ ಹಿಂದುಳಿದ ವರ್ಗದ ಶೇ.೨೭ ಮಿಸಲಾತಿಯನ್ನು ಕಡಿತಗೊಳಿಸಿ ಅಲ್ಪಸಂಖ್ಯಾತರಿಗೆ ಶೇ.೪.೫ ಒಳಮೀಸಲಾತಿ ನೀಡಿರುವ ಯುಪಿಎ ಸರ್ಕಾರದ ಕ್ರಮ ನ್ಯಾಯ ಸಮ್ಮತವಾಗಿಲ್ಲ. ಸಾಚ್ಚಾರ್ ಕಮೀಟಿ ಹಾಗೂ ಜಸ್ಟೀಸ್ ರಂಗನಾಥ್ ಮಿಶ್ರಾ ಆಯೋಗದ ನೇಮಕವೇ ದುರುದ್ದೇಶಪೂರಿತವಾದುದು. ಈಗ ಕೇಂದ್ರ ಸರ್ಕಾರದ ಮತೀಯ ಆಧಾರಿತ ಮೀಸಲಾತಿ, ಪ್ರಸ್ತಾಪವು, ಭಾರತದ ಏಕತೆ, ಅಖಂಡತೆಗೆ ಮಾರಕವಾಗಿರುವುದು ಮಾತ್ರವಲ್ಲ ದೇಶದ ಮುಸಲ್ಮಾನ, ಕ್ರೈಸ್ತರಲ್ಲಿ ಪ್ರತ್ಯೇಕತಾ ವಾದವನ್ನು ಪ್ರಚೋದಿಸುವಂತಾದ್ದಾಗಿದೆ.
ಒಳಮಿಸಲಾತಿಯು ಹಿಂದು ಸಮಾಜದ ಸಂವಿಧಾನದತ್ತ ಹಕ್ಕಿನ ಹರಣ ಮಾಡುವಂತಿದೆ. ಅಲ್ಪಸಂಖ್ಯಾತರು ವಿವಿಧ ಮೀಸಲಾತಿ-ಸವಲತ್ತುಗಳನ್ನು ಪಡೆಯುತ್ತಿದ್ದರೂ, ಹಿಂದುಗಳಿಗೆ ಮಿಸಲಾಗಿರುವ ಮಿಸಲಾತಿಯನ್ನು ಕಡಿತಗೊಳಿಸಿ, ಅವರಿಗೆ ನೀಡಲಾಗುವ ಒಳಮೀಸಲಾತಿ ಹಿಂದುಗಳ ಪಾಲಿಗೆ ಮಾರಕವಾಗಿದೆ. ಅಲ್ಪಸಂಖ್ಯಾತರು ನಡೆಸುವ ಸಂಸ್ಥೆಗಳಲ್ಲಿ ಸರ್ಕಾರಿ ಅನುದಾನವಿದ್ದಾಗಲೂ ಹಿಂದುಳಿದ ವರ್ಗದವರಿಗೆ ಅವಕಾಶ ನೀಡಲಾಗುತ್ತಿಲ್ಲ. ಕೇರಳದಂತಹ ರಾಜ್ಯಗಳಲ್ಲಿ ಮುಸ್ಲಿಂ ಮತೀಯ ಶಾಲೆಗಳಲ್ಲಿನ ಮುಲ್ಲಾಗಳಿಗೆ ಸರ್ಕಾರದ ಬೊಕ್ಕಸದಿಂದ ೪೦೦೦ರೂ.ಗಳ ಮಾಸಿಕ ವೇತನ ಘೋಷಣೆಯಾಗಿದೆ !
ಹಿಂದುಳಿದ ವರ್ಗಗಳ ಶೇ.೨೭ ರ ಮಿಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಶೇ.೪.೫ ಒಳಮಿಸಲಾತಿಯನ್ನು ನೀಡಿದರೆ ಅದು ಖಂಡಿತ ನ್ಯಾಯವಲ್ಲ. ಮತೀಯ ಆಧಾರಿತ ಮೀಸಲಾತಿ ಸಂವಿಧಾನವಿರೋಧಿಯಲ್ಲವೇ? ಮತೀಯ ಆಧಾರದಲ್ಲಿ ಆಂಧ್ರಪ್ರದೇಶ, ಕೇರಳ, ತಮಿಳ್ನಾಡು ಪ್ರಾಂತಗಳಲ್ಲಿ ಈಗಾಗಲೇ ನೀಡಲಾಗಿರುವ ಮಿಸಲಾತಿಯನ್ನು ರದ್ದುಗೊಳಿಸಬೇಕು.ಅಲ್ಲದೆ ನಮ್ಮಲ್ಲಿ ಜಾತಿ ಭೇದವಿಲ್ಲ, ಎಲ್ಲರೂ ಸಮಾನರು ಎಂದೆಲ್ಲ ಹೇಳಿಕೊಳ್ಳುವ ಮುಸ್ಲಿಮರು- ಕ್ರೈಸ್ತರು ಈ ಮೀಸಲಾತಿ ಕೇಳುತ್ತಿರುವುದರ ಹಿಂದಿರುವುದೇನು?
ನಮ್ಮ ಇತಿಹಾಸವನ್ನು ನೋಡಿದಾಗ ಅನೇಕ ವರ್ಷಗಳಿಂದ ಹಿಂದುಗಳ ಮೇಲೆ ಸತತ ಕ್ರೂರ ಆಕ್ರಮಣಗಳು ನಡೆದಿವೆ. ಭರತ ಚಕ್ರವರ್ತಿಯಿಂದ ಭಾರತವೆಂದು, ಹಿಂದುಗಳ ವಾಸಸ್ಥಾನವಾದ್ದರಿಂದ ಹಿಂದುಸ್ಥಾನವೆಂದು ಕರೆದ ಭಾರತದಲ್ಲಿ ಹಿಂದುಗಳಿಗೆ ಸತತ ಅನ್ಯಾಯವಾಗುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ತಿರ್ಮಾನಿಸಿದ ಕೋಮುಗಲಭೆ ಮಸೂದೆ ಮೂಲಕ ಹಿಂದುಗಳ ಎಲ್ಲ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಹುನ್ನಾರ ನಡೆದಿದೆ. ಹಿಂದುಗಳ ಪಾಲಿಗೆ ಕರಾಳವಾಗಿರುವ ಆ ಮಸೂದೆ ಹಾಗೂ ಅಲ್ಪ ಸಂಖ್ಯಾತರಿಗೆ ನೀಡಲು ತೀರ್ಮಾನಿಸಿದ ಒಳಮಿಸಲಾತಿಯೂ ಹಿಂದುಗಳನ್ನು ಸಂಕೋಲೆಗಳಿಂದ ಬಂಧಿಸಿ ತನ್ನ ರಾಜಕೀಯ ಬೆಳೆಯನ್ನು ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಕಾಂಗ್ರೆಸ್. ಸಿಂಗ್‌ಅವರನ್ನು ತಾಳಕ್ಕೆ ತಕ್ಕಂತೆ ಕುಣಿಸಬಲ್ಲ ಸೂತ್ರಧಾರಿ ಸೋನಿಯಾ ಆಂಟಾನಿಯೋ ಮೈನೋ ಇದರ ಹಿಂದಿರುವುದು ಮತ್ತು ಅದರ ಹಿಂದೆ ಭಾರೀ ಕಾರಸ್ಥಾನ ಇರುವುದು ಸರ್ವವಿದಿತ.
ವೈಭವಯುತವಾದ ಭಾರತೀಯ ಬೀದಿಗಳಲ್ಲಿ ರತ್ನ,ವಜ್ರ,ವೈಢೂರ್ಯಗಳನ್ನು ಸೇರಿನಿಂದ ಅಳೆದುಕೊಡುತ್ತಿದ್ದ ಪರ್ವಕಾಲವನ್ನು ಕೇಳಿದ್ದೇವೆ. ನಮ್ಮಲ್ಲಿರುವ ಅಜಂತಾ, ಎಲ್ಲೋರಾ, ಕಾಶಿ, ಸೋಮನಾಥ ಅನೇಕ ದೇವಸ್ಥಾನಗಳು ಸುವರ್ಣಮಯವಾಗಿದ್ದ ಕಾಲದಲ್ಲಿ ಮೊಘಲರ ದಾಳಿಯಿಂದ ಸಂಪತ್ತನ್ನೆಲ್ಲಾ ದೋಚಿಕೊಂಡು ಹೋದರೂ, ಭಾರತಮಾತೆಯ ಮಡಿಲು ಅಕ್ಷಯ ಪಾತ್ರೆಯಂತೆ. ದೇಹಿ ಅಂತ ಬಂದವರಿಗೆ ಆಶ್ರಯ ನೀಡಿ ತನ್ನ ಮಾತೃಗುಣವನ್ನು ವಿಶ್ವದ ಮೂಲೆ ಮೂಲೆಗೂ ಪಸರಿಸುವಂತೆ ಮಾಡಿದ್ದಾಳೆ. ಹಿಂದುಗಳು ಪರಮತ ಸಹಿಷ್ಣುಗಳು. ಯಾರಿಗೂ ಕೇಡನ್ನು ಬಯಸದೆ ಅವರೂ ಕೂಡ ನಮ್ಮಲ್ಲಿ ಒಬ್ಬರು,ಅವರೂ ಕೂಡ ಭಾರತಾಂಬೆಯ ಮಕ್ಕಳು ಎನ್ನುವುದನ್ನು ಸಾರಿ ಹೇಳಿದರು. ಆದರೆ ಅಲ್ಪಸಂಖ್ಯಾತರೆಂದು ಕರೆಯಲ್ಪಡುವವರು ಸಾಧ್ಯವಾದಷ್ಟು ಚೌಕಾಶಿ ಮಾಡುವುದರಲ್ಲೇ ಸಿಕ್ಕಿದ್ದನ್ನು ಬಾಚಿಕೋ ಎನ್ನುವಂತೆ ನಡೆದುಕೊಳ್ಳುತ್ತಿರುವುದು ದುರಂತ.
ಸ್ವಾತಂತ್ರ್ಯನಂತರ ಮತೀಯ ದ್ವೇಷದ ಬೆಂಕಿಗೆ ತುಪ್ಪ ಸವರಿದ್ದು ಕಾಂಗ್ರೆಸ್ ಸರ್ಕಾರ. ದೇಹದ ರಕ್ತದ ಕಣ ಕಣದಲ್ಲಿಯೂ ದೇಶಭಕ್ತಿಯನ್ನು ಹಾಗೂ ದೇಶ ಹಿತದ ಚಿಂತನೆಯಲ್ಲಿ ಸ್ವಾರ್ಥವನ್ನು ಬಯಸದೇ, ಹಿಂದು ಸಮಾಜದ ಏಳ್ಗೆಗಾಗಿ ಶ್ರಮಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಅಪಪ್ರಚಾರ ಮಾಡುವುದಲ್ಲದೆ ಅದನ್ನು ಸಂಪೂರ್ಣ ನಿರ್ನಾಮ ಮಾಡಬೇಕೆಂದು ಹೇಳುತ್ತಿದೆ. ದೇಶದ್ರೋಹಿ ಭಯೋತ್ಪಾದಕ ಶಕ್ತಿಗಳ ಬಗ್ಗೆ ಮೃದು ಧೋರಣೆ ತಳೆಯಲಾಗುತ್ತಿದೆ.
ಭ್ರಷ್ಟಾಚಾರದ ಆರೋಪಗಳಿಂದ ತತ್ತರಿಸಿರುವ ಕಾಂಗ್ರೆಸ್ ನೇತೃತ್ವದ ಕೇಂದ್ರಸರ್ಕಾರ ಮುಂದಿನ ಚುನಾವಣೆಯನ್ನು ಕಣ್ಣಮುಂದಿರಿಸಿ, ಅಲ್ಪಸಂಖ್ಯಾತರ ವೋಟ್ ಪಡೆಯಲು ಹಾಗೂ ಜಾಗೃತವಾಗಿರುವ ಹಿಂದುಶಕ್ತಿಯನ್ನು ತುಳಿಯುವ ಉದ್ದೇಶದಿಂದ ಮಸೂದೆಯನ್ನು ಹಾಗೂ ಮಿಸಲಾತಿಯನ್ನು ನೀಡುವ ಷಡ್ಯಂತ್ರ ಮಾಡುತ್ತಿದೆ.
ಮೈ-ಕೊರೆಯುವ ಚಳಿಯಲ್ಲಿ ದೇಶಕ್ಕಾಗಿ ಹೋರಾಡುವ ಹಾಗೂ ಮಡಿದ ವೀರ ಸೈನಿಕನಿಗೆ ಇಲ್ಲದ ಸವಲತ್ತುಗಳು ಮತೀಯಗಲಭೆಗೆ ಕಾರಣರಾಗುವ ಅಲ್ಪಸಂಖ್ಯಾತನಿಗೆ ದೊರಕುತ್ತದೆ. ಇದರಿಂದ ಅಲ್ಪಸಂಖ್ಯಾತರಿಗೆ ಕಾನೂನಿನ ಭೀತಿ ಇಲ್ಲದೆ, ಹಿಂಸೆ, ದಂಗೆ ನಡೆಸಲು ಮುಕ್ತ ಅವಕಾಶವಾಗುತ್ತದೆ. ಈಗಾಗಲೇ ಇದರ ಮುನ್ಸೂಚನೆ ಗೋಚರಿಸುತ್ತಿದೆ.
ಇಂತಹ ಕ್ರಮಗಳಿಂದ ಮತೀಯ ಉನ್ಮಾದ, ಸಂಘರ್ಷ ಹಾಗೂ ದಂಗೆಗಳು ಹೆಚ್ಚಾಗಬಹುದು. ಹಿಂದುಳಿದ ವರ್ಗದ ಮೀಸಲಾತಿಯನ್ನು ಅಲ್ಪ ಸಂಖ್ಯಾತರಿಗೆ ನೀಡುವ ಕಾರಣ ಹಿಂದುಳಿದ ವರ್ಗ ಆರ್ಥಿಕ ಸಂಕಟ ಹಾಗೂ ನಿರುದ್ಯೋಗ ಸಮಸ್ಯೆಗೆ ತುತ್ತಾಗಬಹುದು. ಅಂತಾರಾಷ್ಟ್ರೀಯ ಮುಸ್ಲಿಂ, ಕ್ರೈಸ್ತ ಲಾಬಿಗಳು ಹಿಂದುಗಳ ಮೇಲೆ ಇನ್ನಷ್ಟು ಒತ್ತಡ ಹೇರುವಂತೆ ಮಾಡಬಹುದು. ವೋಟ್‌ಬ್ಯಾಂಕ್ ರಾಜನೀತಿಯನ್ನು ವಿಫಲಗೊಳಿಸಲು ಹಿಂದು ಸಮಾಜ ಒಟ್ಟಾಗಿ ಹೋರಾಟಮಾಡಬೇಕಾಗಿದೆ. ಹಿಂದುಗಳು ಸಮಾಜದಲ್ಲಿ ಹೊಂದಿಕೊಂಡು ಹೋಗುವ ಗುಣವನ್ನು ಬೆಳೆಸಿಕೊಂಡಿದ್ದೇವೆ. ಪರಿಸರದಲ್ಲಿ ಎಷ್ಟೇ ದುಷ್ಕೃತ್ಯಗಳು ನಡೆಸುತ್ತಿದ್ದರೂ, ಅವರು ನಮ್ಮವರು ಎನ್ನುವ ಭಾವನೆಯಿಂದಲೇ ಇರುವುದು ಎಂಬುದು ಅವರ ಸಹಿಷ್ಣುತೆಯ ಔನ್ನತ್ಯಕ್ಕೆ ಸಾಕ್ಷಿ.
ಕೇವಲ ಮುಂದಿನ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಅಲ್ಪಸಂಖ್ಯಾತರನ್ನು ಓಲೈಸುವುದಕ್ಕಾಗಿ ಒಳಮಿಸಲಾತಿ ಹಾಗೂ ಕೋಮು ಮಸೂದೆಯನ್ನು ಜಾರಿಗೊಳಿಸಲು ಇನ್ನಿಲ್ಲದ ಕಸರತ್ತು ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ ಎನ್ನುವುದು ಸ್ಪಷ್ಟ. ಈ ಬಗ್ಗೆ ಜಾಗೃತ ಹಿಂದು ಬಂದುಗಳು ಜೊತೆಗೂಡಿ ಹೋರಾಡಬೇಕಾದ ಅವಶ್ಯಕತೆಯಿದೆ.
- ಸರ್ವೇ ಜನಃ ಸುಖೀನೋ ಭವಂತು...
ಸಂದೇಶ ಶೆಟ್ಟಿ ಆರ್ಡಿ

No comments:

Post a Comment