Thursday, 19 April 2012

ಕುಂದಾಪ್ರ ಕನ್ನಡ ರುಚಿ ಕಾಣಿ ಮರ್ರೆ

ಮನುಷ್ಯನ್ ಬುದ್ದಿವಂತಿಕೆ ಇದೆ ಅಲ್ದಾ ಕಾಂಬ ನೀವೆ ಹೇಳಿ..?
ನಮ್ಮೂರಿಂದ ಉಡುಪಿಗೆ ಒಂದೂವರೆ ಗಂಟ್ಯಂಗ ಹ್ವಾಪಕಾರು ಈ ರಸ್ತ್ಯಂಗ ಅಸ್ಟ್ ಬೇಗ ಹ್ವಾಪ್‌ಕ ಆತೀಲೆ. ಯಾಕ್ ಅಂತ ಎಲ್ರಿಗೂ ಗೊತ್ತ ಮರಾಯಾರೆ..ರಸ್ತಿ ಹೊಂಡ ಕಂಡ್ರ ತಲಿ ತಿರುಗುತ್ತ ಮಳ್ಗಾಲದಂಗ ಬಾಳಿಗಿಡ ನೆಟ್ರ ೬ತಿಂಗ್ಳಂಗ್ ಕೊನಿ ಬಿಡತ್ ಹಾಂಗ್‌ಇತ್..ಶಾಲಿಗ್ ಹ್ವಾಪ್ ಮಕ್ಕಳ್ ಬೇಗ ಹ್ವಾಪ್ ಬಸ್ಸಂಗ್ ಹ್ವ್ಯಾಕ್ ಇಲ್ಲದಿರೆ ಅವಕ್ಕ ಲೇಟಾತ್ತಲ್ಯ. ಸೀಟ್ ಅಂತೂ ಸಿಕ್ಕೂದಿಲ್ಲ ,ನಿಂತಕಂಬಕ್ ಆತೀಲೆ..ಮಕ್ಕಳ ಬ್ಯಾಗ್ ಕಂಡ್ರ ಅಕ್ಕಿ ಚೀಲ ಕಂಡಂಗ್ ಆತ್..ಅವು ನಡಕ್ಕಂಡ್ ಹ್ವಾಪದೆ ಕಷ್ಟದಂಗ ಹಾಂಗಿಪ್ಪತ್ತಿಗ್ ಆ ಬ್ಯಾಗ್‌ನ ಹೊತ್ತಕಂಡ ಹ್ವಾಯ್ಕಲ್ಲ...ನಂಗಂತ್ತು ಬಸ್ಸಂಗ್ ನಿಂತಕಂಬಕ್ಕ ಜಾಗ ಸಿಕ್ಕರ ಸಾಕ್‌ಅಂಬಂಗೆ..ಬಸಂಗ್ ನಾವ್ ನಿಂತಕಂಬಕೆ ಕಷ್ಟ..ಆರೆ ಕೆಲವ್ರ ಮಾತ್‌ಕೆಂಡ್ರ ಸಿಟ್ಟ ಬತ್..ಅದ್ರಂಗೂ ಆ ಕಂಡೆಕ್ಟ್ರ ನುಗಳಕಂಡ ಹ್ವಾಪತಿಗೆ ಕಾಲ್ನ ಮೆಟ್‌ಕಂಡ್ ಹೋತ..ಎಂತ ಮಾಡುಕಾತ್ ಅವನ ಕೆಲಸ ಮಾಡ್ಕಲ್ಲ ಅವ ಇಲ್ದಿರೆ ಕೆಂತ್ರಲ್ಲ..ನಮ್ಮ ಭಾಷಿಯೆ ಒಂತರಾ..ನಂಗಂತು ಉಡುಪಿ ಕಡಿ ಭಾಷಿ ಅರ್ಥ ಆತೀಲೆ..ಕನ್ನಡ ಆರ್ ಅರ್ಥ ಮಾಡ್ಕಣ್ಕಲಕ್..ತುಳು ಅರ್ಥ ಆತೀಲೆ...ಅಸ್ಟ್ ರಶ್‌ಇಪ್ಪತ್ತಿಗೂ ಬಸ್ನ್ ಹಿಂಬದಿಯಿಂದ ಜೊರ್ ಜೊರ್ ಮಾತಕೆಂಡಂಗಿತ್. ನಂಗೆ ಇದನ್ನ ಕಂಡ ಕೂಡ್ಲೆ ಎಂತ ಅಂತ ತಿಳಕಂಬ ಅಂದೇಳಿ ಕೆಲವರ ಹತ್ರ ಕೇಳ್ದಿ..ಅದ್ ಎಂತ ಅಲ್ದೆ ಕೂಕಂಬ ಸೀಟಿಗಾಯಿ ಗಲಾಟಿ ಮಾಡಕ್ಕಂತಿದ್ರ. ಹ್ವಾಯ್ ಅಲ್ ನಡೆದ್ ಇಸ್ಟೆ ಕಣಿ..ಇದನ್ ಕೆಂಡ್ರ ಮೇಲ್ ನಿಮಗ್ ಎಂತ ಅನ್ಸುತ್ತೊ ನಂಗೂ ಹೇಳಿ ಅಕಾ..
ಇಬ್ರ ಗಂಡ್ಸರ್ ಹೆಬ್ರಿಂಗೆ ಬಸ್ ಹತ್ರ ಅಂಬ್ರ..ಅಷ್ಟೋತ್ತಿಗೆ ಎಲ್ಲಾ ಸೀಟ್ ಭರ್ತಿ ಆಯಿಇತ್ತಂಬ್ರ. ಹಿಂದಿನ ಕಡಿನ ಹತ್ರ ಒಂದ್ ಸೀಟ್ ಮಾತ್ರ ಖಾಲಿ ಇತ್ತಂಬ್ರ..ಅದ್ಕ ನಾ ಕುತ್ಕಂತಿ ಅಂತ ಒಬ್ಬ..ಇನ್ನೊಬ್ಬ ನಾನ್‌ಕುತಕಂತಿ ಅಂತ ಹಿಂಗೆ ಮಾತಮಾತ್ ಆಯಿ ಜೋರಾಯ್ತ..ಗಮ್ಮತಂದ್ರ ಅದ್ರಂಗ್ ಒಬ್ಬ ಹೆಬ್ರಿಯಂವ.. ಇನ್ನೊಬ್ಬ ಪೆರ್ಡೂರ್‍ನವ..ಜಗಳ ಆಯಿ ಆ ಸೀಟ್ಂಗ್ ಹೆಬ್ರಿಯವ ಕುತ್ಕಂಡ..ಕಡ್ಯಿಕ್ ಅವಂಗೂ ಸೀಟ್ ಸಿಕ್ತ..ಬಸ್ ಹೊರಡತ್ ಇಬ್ರೂ ಸುಮ್ಮನಾಯ್ಕಂಡ್ರ..ಪೆರ್ಡೂರ್ ಹತ್ರ ಬಂದದೆ ಸಯಿ ಮರ್ರೆ ಮತ್ ಸುರುಆಯ್ತ್ ಕಣಿ ಜಗಳ..ಅವ್ ಇಳ್ಕಂಡ್ ಹ್ವಾಪತ್ತಿಗೆ ಧಮ್ ಇದ್ರ ಇಲ್ಬಾರ ಅಂದೇಳಿ ಹೇಳ್ದ..ನಂಗ್ ಇವ್ನಿಗೆ ಎಂತ ಆಯ್ತ ಅಂತ ಗೊತ್ತಾಯ್ಲ..ಮತ್ ಗೊತ್ತಾಯ್ತ ಅದ್ ಇಳ್ಕಂಡ್ ಹೋದ್ನಲ್ಲ ಅವ್ನ ಊರಅಂತ..ಅವ್ರ ಅವ್ರ ಊರಂಗ್ ಅವ್ರ ಹುಲಿಗಳ ಅಲ್ದ..ಇಲ್ದಿದ್ರೆ ಹೆಬ್ರಿಯವ್ ಹೆಬ್ರಿಂಗೆ ಹಾರ್‍ದ ಅದ ಅವ್ನ ಊರಮನಿ..ಇವ್ನ ಕಂಡ್ರ ಇವ್ನ ಊರಮನೀಂಗ್ ಹಾರ್‍ದ..ತಪ್ಪು ಯಾರ್ ಮಾಡ್ರು ಅವ್ರ ಊರಂಗ್ ಅವ್ರಿಗೆ ಸಫೋರ್ಟ ಮಾಡ್ತ್ರಲ...ಇವ್ರಿಬ್ರ ಕತೀನೂ ಹಾಂಗೆ ಆಯ್ತ. ಬಸ್ಸಂಗ್ ಕೂಕಂಬ ಸಿಟಿಗೆ ಜಗ್ಳ ಮಾಡ್ಕಂಬರ್ ತಮ್ ಜಾಗಕ್ಕ ಗಲಾಟಿ ಮಾಡ್ಕಂಬ್ರದ್ರಲ್ಲಿ ತಪ್ಪಿಲ್ಲ. ಅಲ್ಲ ಅವ್ನ ತಪ್‌ಇದ್ರೂ ಅವ ಸರಿಮಾಡೂಕೆ ತೆಗೆದ್ಕಂಡ ದಾರಿ ಕಂಡ್ರ ಅವ್ನ ಬುದ್ದಿವಂತಿಕೆ ಗೋತ್ತಾತ್. ಇದ್ನೆಲ್ಲಾ ಕಂಡ ನಂಗೆ ಒಂದ್‌ಮಾತ್ ನೆನಪಾತ್...ಪ್ರಾಣಿಗಳಂಗ್ ಆನಿ ಗಟ್ಟಿ ಆರೂ ಅದ್ ನೀರಂಗ್ ಇಪ್ ಮೊಸಳಿಗೆ ಸೋತೀತ್ ಅಂಬ್ರಲ್ಲ..ಅಲ್ ಮೊಸಳಿ ಇರು ಜಾಗ ಮುಖ್ಯ ಆಯ್ತ..ನೆಲದ ಮೇಲ್ ಆನಿ ಇದ್ರ ಮೊಸಳಿನ ಕೊಲ್ಲತ್ತಿತ್..ಅದ್ ನೀರಂಗ್ ಇಪಕ್ಕಾಯಿ ಸೊತ್ ನೆಲದ್ಮೇಲ್ ಇದ್ರ ಮೊಸಳಿ ಸೋಲತಿತ್.
ಯಾವ್ದಾರ್ ಊರಂಗ್ ಇಪ್ ನಾಯಿ ಆ ಊರಂಗ್ ರಾಜನ ತರ ಇರತ್..ಅದ್ನ ಬಿಟ್ ಬೇರೆ ಊರಿಗ್ ಹ್ವಾರೆ ಅದನ್ ಕೇಳ್ವರೆ ಇಲ್ಲ..ಆ ಊರಂಗ್ ಅದ್ರ ಆಟ ನಡೆತ್ಯಿಲ..ಅದ್ಕೆ ಅಲ್ಲದ್ ಸುಮ್ನೆ ಕೂತ್ಕಣ್ಕ..ಇವ್ರಿಬ್ರ ಕತೀನೂ ಹಂಗೆ ಆಯ್ತ್...ಇದ್ನೆಲ್ಲ ಕಂಡ್ ಮೇಲೆ ನಂಗ್ ಅನ್ಸೂದ್ ಸ್ಥಳ ನೋಡಿ ಹಾರೂದ್ ಅಂದ್ರ ಇದೆ ಅಲ್ದ...ನಿವ್‌ಎಂತಂತ್ರಿ... ಆರ್ಡಿ ಸಂದೇಶ ಶೆಟ್ಟಿ

No comments:

Post a Comment