ಉಡುಪಿಯ ಕೇಶವಶಿಲ್ಪದಲ್ಲಿ ಜಾಗೃತ ಶಿಕ್ಷಣ...!
ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೆ..
ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿ ಹಿಮಾಲಯವಿದ್ದರೆ...
ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ..
ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ...?
ದಿ.ಶಿವರಾಮು ಅವರ ಪದ್ಯದ ಸಾಲುಗಳ ಮನನ ಮಾಡಿದರೆ ಶನಿವಾರ ಉಡುಪಿಯ ಕೇಶವ ಶಿಲ್ಪದಲ್ಲಿ ನಡೆದ ಘಟನೆ ನೋಡಿದರೆ ತದ್ವೀರುದ್ದ ಅನಿಸುತ್ತೆ...
ಸೈನಿಕ ಶಿಕ್ಷಣ ಪದ್ದತಿಯಲ್ಲಿ ಬೌದ್ದಿಕ, ಶಾರೀರಿಕ ಹಾಗೂ ಜಾಗೃತ ಶಿಕ್ಷಣವನ್ನು ನೀಡಿ ಉತ್ತಮ ಸೈನಿಕನ ತಯಾರಿ ಮಾಡುವುದು ಹಿಂದಿನಿಂದಲೂ ನಡೆದು ಬಂದ ಕ್ರಮ. ಶಾಲಾ ಶಿಕ್ಷಣವನ್ನು ಮುಗಿಸಿದ ಬಳಿಕ, ಶಾರೀರಿಕ ದೃಢತೆಯನ್ನು ಗಮನಿಸಿ ಅವನನ್ನು ಸೈನಿಕ ಶಾಲೆಗೆ ಸೇರಿಕೊಳ್ಳುತ್ತಿದ್ದರು ಎಂದು ನಾವು ಕೇಳಿದ್ದೇವೆ. ಅಲ್ಲಿಗೆ ಸೇರಿದ ಕೆಲವರು ಅಲ್ಲಿಯ ಶಿಕ್ಷಣ ಪದ್ದತಿಗೆ ಹೆದರಿ ಕಾಲ್ಕಿತ್ತಿದ್ದು ಇದೆ. ಅಂತ ಕಠಿಣವಾದ ಶಿಕ್ಷಣ ಪದ್ದತಿ. ಎಷ್ಟೇ ಚಳಿ, ಮಳೆ ಗಾಳಿ ಇದ್ದರೂ ಕೂಡ ಕರೆ ಬಂದಾಗ ಹೋಗಬೇಕಾಗುತ್ತದೆ. ಅಂಥ ಮನಸ್ಥಿತಿ ನಿರ್ಮಾಣ ಮಾಡಿರುತ್ತಾರೆ.ಆದರೆ ಉಡುಪಿಯ ಕೇಶವ ಶಿಲ್ಪದಲ್ಲಿ ಆದ ಘಟನೆ ನೋಡಿದಾಗ ಇವರಿಗೆ ಆದ ಶಿಕ್ಷಣ ಎಲ್ಲಿಯದು ಎನ್ನುವ ಭಾವನೆ ಮನಸ್ಸಿನಲ್ಲಿ ಮೂಡುವುದು ಸಹಜವೇ?
ಅ.೨೨ ಶನಿವಾರ ತಡರಾತ್ರಿಯಲ್ಲಿ ಜಗತ್ತೆ ಮಲಗಿ ನಿದ್ರಿಸುತ್ತಿದ್ದರೆ ಕೇಶವ ಶಿಲ್ಪದಲ್ಲಿ ಮಾತ್ರ ಮೂವರೂ ಕುಳಿತು ಗಂಭಿರವಾದ ವಿಷಯ ಚರ್ಚೆಮಾಡುತ್ತಿರುವ ಹಾಗೆ ನನಗೆ ತೋರಿತು. ನನ್ನ ಮನಸ್ಸಿನಲ್ಲಿ ಇವರಿಗೇನಾಗಿದೆ. ಹಿರಿಯವರಾದ ಕಾರಣ ವಿಚಾರಮಾಡದೆ ಸುಮ್ಮನೆ ಮಲಗಿದೆ. ನಿದ್ರಾದೇವಿಯ ಮಡಿಲಿಗೆ ತಲೆಯಿಟ್ಟಿದ್ದೆ ತಡ ಯಾವ ಪರಿಯ ನಿದ್ರೆಯೋ? ಪಕ್ಕದಲ್ಲಿ ಬಾಂಬ್ ಸಿಡಿದ ಶಬ್ದವಾದರೂ ಕೂಡಲೇ ಎಚ್ಚರವಾಗುವುದಿಲ್ಲ. ಎನ್ನುವುದಕ್ಕೆ ಆಗ ನಡೆದ ಘಟನೆಯೆ ಜ್ವಲಂತ ಸಾಕ್ಷಿಯಾಯಿತು. ಅನೇಕ ವಿದ್ಯಾರ್ಥಿಗಳೊಂದಿಗೆ ಬೈಠಕ್ ಮುಗಿಸಿ ಮಲಗಿದ್ದು ಗೊತ್ತು...ನಂತರ ಪ್ರಕಾಶ್‌ಜೀ ಬಂದು ಕರೆದಾಗ ಎನೋ ಎಡವಟ್ಟಾಗಿದೆ ಎಂದು ತಿಳಿಯಿತು. ಅದೇ ಸಮಯದಲ್ಲಿ ಭೂಮಿಯೇ ಅಲುಗಾಡುವಷ್ಟು ಭಯಂಕರ ಶಬ್ದ...ಎಲ್ಲರಿಗೂ ಗಾಬರಿ ಆಗ ಅವರು ಹೇಳಿದ ಮಾತು ನಮ್ಮಲ್ಲಿಗೆ ಭಯೋತ್ಪಾಧಕರು ಬಂದಿದ್ದಾರೆ. ಎಬಿವಿಪಿಯ ಚೇತನ್ ಹಾಗೂ ಅವನ ಸ್ನೇಹಿತರನ್ನು ಬಂದಿಸಿದ್ದಾರೆ. ೨ನೇ ಮಾಳಿಗೆಯಲ್ಲಿ ಇದ್ದಾರೆ. ಅವರೆಲ್ಲರನ್ನು ಮುಗಿಸುವಷ್ಟು ವಿದ್ಯಾರ್ಥಿಗಳಿದ್ದರೂ, ಅವರಲ್ಲಿ ಅತ್ಯಾಧುನೀಕ ಬಂದೂಕುಗಳಿರುತ್ತವೆ ಎಂದು ಹಿರಿಯರು ಹೇಳಿದ್ದರಿಂದ ಜೀವದ ಮೇಲಿನ ಆಸೆಯಿಂದ ಧೈರ್ಯ ಮಾಡಲೇ ಇಲ್ಲಾ. ಹಿರಿಯರೆಲ್ಲಾ ನಗರದ ಸ್ವಯಂಸೇವಕರಿಗೆ ಕರೆಮಾಡುವುದಕ್ಕೆ ಶುರುವಿಟ್ಟರು. ಕ್ಷಣ ಹೊತ್ತಿನಲ್ಲಿ ಉಟ್ಟಬಟ್ಟೆಯಲ್ಲಿ ಸುಮಾರು ೨೦ ಜನ ಸ್ವಯಂಸೇವಕರ ಆಗಮನ ಕಾರ್ಯಲಯದತ್ತ.ಕೆಲವರ ಕೈಯಲ್ಲಿ ದಂಡ, ಕತ್ತಿಗಳನ್ನು ಹಿಡಿದು ಬಂದರೆ,ಕೆಲವರು ಪಂಚೆಯನ್ನು ಹರಿದು ಅದರೊಳಗೆ ಕಲ್ಲನ್ನು ಇಟ್ಟು ವೀರಯೋಧರಂತೆ ಕಂಡುಬಂದರು. ಆಗಲೇ ನಮಗೆಲ್ಲಾ ಧೈರ್ಯ.. ತುಂಬಾ ಜನ ಇರುವಾಗ ಅವರೆಲ್ಲಾ ಯಾವ ಲೆಕ್ಕ ಎನ್ನುವುದು ಎಲ್ಲರ ಅಭಿಪ್ರಾಯ...
ಹಾಗೆ ಒಳಗಡೆ ಹೊಗುವುದಕ್ಕೂ ಸಮಸ್ಯೆ ಎದುರಾಯಿತು. ಒಳಗಡೆ ಭಯೋತ್ಪಾಧಕರು ಚಿಲಕ ಹಾಕಿಕೊಂಡಿದ್ದಾರೆ.ಆಗಲೇ ಕನಕನ ಕಿಂಡಿಯಂತಿರುವ ದಾರಿಯಿಂದ ಹೊರಗಡೆ ಇದ್ದವರಲ್ಲಿ ಚಿಕ್ಕವನನ್ನು ಆರಿಸಿ ಒಳಗೆ ಕಳುಹಿಸಿ,ಅವನು ಬಾಗಿಲನ್ನು ತೆರೆದ ಮೇಲೆ ಎಲ್ಲರೂ ಒಳಗಡೆ ಹೋದೆವು. ಮೊದಲನೇ ಮಹಡಿಯ ಕಡೆ ಹೋದದ್ದೆ ತಡ ಎನೋ ಒಂದು ಬೆಳಕು ಕಂಡಿತು. ಅಲ್ಲಿ ಅವರೆಲ್ಲಾ ಇರಬಹುದು ಎಂದು ಭಾವಿಸಿ, ಯುದ್ದಕ್ಕೆ ಸಿದ್ದರಾಗುವ ಸೈನಿಕರಂತೆ ಸಿದ್ದರಾದಾಗ ದೇಶಭಕ್ತಿಗೀತೆ ಮೊಳಗಿತು. ಮಂದಬೆಳಕಿನಲ್ಲಿ ಪಾಂಡುರಂಗಣ್ಣ ಎದ್ದು ನಿಂತು ಬೌದ್ದಿಕ್ ಪ್ರಾರಂಭಿಸಿಯೇ ಬಿಟ್ಟರು.ಆಗಲೇ ಮೂವರು ಹಿರಿಯರು ಕುಳಿತು, ಗಂಭೀರವಾಗಿ ಚರ್ಚೆಮಾಡುತ್ತಿದ್ದುದರ ಮರ್ಮ ತಿಳಿಯಿತು ಸ್ವಯಂಸೇವಕರಿಗೆ ತಡರಾತ್ರಿಯಲ್ಲಿ ಭಯೋತ್ಪಾದಕರ ಹೆಸರಿನಲ್ಲಿ ಕಲಿಸಿದ ಜಾಗೃತ ಶಿಕ್ಷಣ ಎಂದು ತಿಳಿದಾಗ ಮನಸ್ಸು ನಿರಾಳವಾಯಿತು.
ನಗರದ ಸ್ವಯಂಸೇವಕರಿಗೆ ತಮ್ಮ ಕಾರ್ಯಲಯದ ಮೇಲೆ ಯಾವ ತೆರನಾದ ಕಾಳಜಿ, ನಮ್ಮ ಹಿಂದು ಬಾಂದವರೂ ಕಷ್ಟದಲ್ಲಿ ಸಿಲುಕಿದ್ದಾರೆ ಎಂದು ತಿಳಿದಾಗ ತಮ್ಮ ಪ್ರಾಣವನ್ನೆ ಪಣವಾಗಿಟ್ಟು ಹೊರಾಟಕ್ಕಿಳಿಯುತ್ತಾರೆ ಎಂದು ಕಣ್ಣಾರೆ ನೋಡಿದಾಗ ಸಂತೋಷದ ಕಂಬನಿ ಉಕ್ಕಿ ಬಂತು.
ಬಂದವರಲ್ಲಿ ಹೆಚ್ಚಿನವರೂ ಯುವಕರೇ...ನಾನೂ ಮಲಗಿದ್ದೆ ವಾದಿರಾಜ್‌ಜೀ ಕರೆ ಮಾಡಿದಾಗ ಹಾಗೆ ಓಡಿ ಬರುತ್ತಿದ್ದೆ. ಬೇರೆ ಆಯುಧ ಯಾವುದು ಕಣ್ಣಿಗೆ ತೋರಲಿಲ್ಲ. ಶಾಖೆಗೆ ಹೋಗಿ ತಂದಿಟ್ಟ ದಂಡ ನೋಡಿ ಅದನ್ನೇ ತೆಗೆದು ರಸ್ತೆಯಲ್ಲಿ ಬರುವಾಗ ಅವರನ್ನು ಯಾವ ರೀತಿ ಹೊಡೆಯುವುದು ಎಂದು ಅಬ್ಯಾಸ ಮಾಡುತ್ತಾ ಬಂದೆ ಎಂದು ಶರಣ್ ನಗುತ್ತಾ ಹೇಳುತ್ತಾರೆ.
ಆದರೆ ಭಯೋತ್ಪಾಧಕರು ಬಾರದೇ ಹಿರಿಯರು ನಮ್ಮನ್ನೆಲ್ಲಾ ನಂಬಿಸಿದ ಪರಿ ಮೆಚ್ಚಲೇಬೇಕು. ಯಾರಿಗೂ ಸಂಶಯಬರದ ರೀತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡಿ... ತಡರಾತ್ರಿಯಲ್ಲಿ ಜಾಗೃತ ಶಿಕ್ಷಣವನ್ನು ಅದರಲ್ಲೂ ದೀಪಾವಳಿಯ ಮುನ್ನಾದಿನ ಉಡುಗೊರೆಯಾಗಿ ನೀಡಿ ಸಂತೋಷದ ಹೊನಲಿನಲ್ಲಿ ತಮ್ಮ ಮನೆ ಸೇರುವಂತೆ ಮಾಡಿದ ಸ್ವಯಂಸೇವಕರಿಗೆ ಚಿರಋಣಿ....
ಸಂದೇಶ ಶೆಟ್ಟಿ ಆರ್ಡಿ
No comments:
Post a Comment