ಹಿಂದುತ್ವಕ್ಕೆ ಚೈತನ್ಯ ತುಂಬಿದ ಮಹಾಪುರುಷ
ಯಾವ ವ್ಯಕ್ತಿಯ ಪ್ರಭಾವ ಮತ್ತು ಸಂದೇಶ ಆತನ ಜೀವಿತ ಕಾಲದ ಶತಶತಮಾನಗಳ ನಂತರವೂ ಪ್ರಸ್ತುತವೆನಿಸುತ್ತದೋ ಆತ ನಿಜವಾಗಿಯೂ ಓರ್ವ ಮಹಾಪುರುಷ. ಸ್ವಾಮಿ ವಿವೇಕಾನಂದರು ಅಂತಹವರು .
ಸ್ವಾಮಿಜಿಯವರ ಸಂದೇಶ ಜನತೆಯ ಯಾವುದೇ ಒಂದು ವಿಭಾಗಗಕ್ಕೆ ಸೀಮಿತವಾದುದಲ್ಲ. ಅವರ ಮೆಚ್ಚಿನ ಶಿಷ್ಯೆ ಭಗಿನಿ ನಿವೇದಿತಾ ನುಡಿದಂತೆ ಅವರು ಜನ್ಮತಃ ಲೋಕಪ್ರೇಮಿಯಾದರೂ ನೆಚ್ಚಿಕೊಂಡದ್ದು ತಮ್ಮ ಮಾತೃಭೂಮಿಯನ್ನು... ಅವರ ಸಂದೇಶ ಮಾತ್ರ ಸಮಸ್ತ ವಿಶ್ವಕ್ಕೆ ಅನ್ವಯವಾಗುವಂತದ್ದು. ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಯಾಗಿದ್ದರು. ಅವರೊಬ್ಬ ಪ್ರಖರ ರಾಷ್ಟ್ರಪ್ರೇಮಿ. ಅದಕ್ಕೆ ಭಾರತದ ರಷ್ಟ್ರಭಕ್ತಸಂತ ಎಂದು ವಿದೇಶಿಯರು ಕರೆದರು.
೧೮೯೩ರ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಅವರು ಆಡಿದಂತ ಮಾತುಗಳು ವಿಶ್ವಕ್ಕೆ ಅದರಲ್ಲೂ ನಮ್ಮ ಹಿಂದುಧರ್ಮದ ಕೀರ್ತಿಯನ್ನು ಜಗದ ಮೂಲೆ ಮೂಲೆಗೂ ವ್ಯಾಪಿಸಲು ಕಾರಣವಾಗಿದೆ.ಭೋಗಸಂಸ್ಕೃತಿಯ ನೆಲವೆನಿಸಿದ ಅಮೆರಿಕದಲ್ಲಿ ಸೋದರ-ಸೋದರಿಯರೆ ಎನ್ನುವಂಥ ಮಾತುಗಳು ಎಂತಹ ರೋಮಾಂಚನ ಉಂಟು ಮಾಡಿತೆಂಬುದನ್ನು ನೋಡಿದಾಗ ನಮ್ಮ ಸಂಸ್ಕೃತಿ-ಸಭ್ಯತೆಗಳ ಔನ್ನತ್ಯವನ್ನು ಅರ್ಥ ಮಾಡಿಕೊಳ್ಳಬಹುದು. ಅತ್ಯಂತ ಕಿರಿಯ ಧರ್ಮನುಯಾಯಿಯಾದ ಸ್ವಾಮೀಜಿಯವರನ್ನು ಕಡೆಗಣಿಸಬೇಕು ಎನ್ನುವ ಉದ್ದೇಶದಿಂದ ಹಿಂದು ಧರ್ಮಗ್ರಂಥವನ್ನು ಕೆಳಗಡೆ ಇರಿಸಿ ಅವಮಾನಗೈದ ಸಂದರ್ಭದಲ್ಲೂ ತಳಪಾಯದ ಮಹತ್ವದ ಬಗ್ಗೆ ಒತ್ತಿ ಹೇಳಿ ಈ ಅವಮಾನಕ್ಕೆ ತಕ್ಕ ಉತ್ತರ ಹೇಳಿದವರು ಅವರು. ಜಗತ್ತಿನಲ್ಲಿ ಎಷ್ಟೆ ಮತಗ್ರಂಥಗಳು ಇದ್ದರೂ ಅವೆಲ್ಲಕ್ಕೂ ಮೂಲಧಾರ ಹಿಂದು ಧರ್ಮ ಎಂದು ನುಡಿದಾಗ ಯಾರು ಇವರನ್ನು ಹೀಯಾಳಿಸಬೇಕೆಂದು ಬಯಸಿದ್ದರೋ ಅವರೇ ನಾಚಿಕೆಯಿಂದ ತಲೆತಗ್ಗಿಸುವಂತಾಯಿತು. ಅವರ ರಾಷ್ಟ್ರಭಕ್ತಿ ಯಾವ ರೀತಿಯಾಗಿತ್ತು ಎನ್ನುವುದಕ್ಕೆ ಅವರು ಕನ್ಯಾಕುಮಾರಿಯನ್ನು ತಲುಪಿದಾಕ್ಷಣ ಮರಳಿನ ರಾಶಿಯ ಮೇಲೆ ಹೊರಳಾಡಿ ಅಮ್ಮ ಇಷ್ಟು ದಿನ ವಿದೇಶಿ ನೆಲದಲ್ಲಿ ಇದ್ದು ಬಂದದ್ದರಿಂದ ದೇಹವೆಲ್ಲಾ ಹೊಲಸಾಗಿದೆ. ನಿನ್ನ ಅಮೃತಸ್ಪರ್ಶದಿಂದ ಪುನರ್ಜನ್ಮ ಪಡೆದ ಅನುಭವ ನನ್ನ ಪಾಲಿಗಾಗಿದೆ.
ಹೀಗೆ ಪಾಶ್ಚಾತ್ಯ ದೇಶಗಳಲ್ಲಿ ಹಿಂದುಧರ್ಮದ ದಿಗ್ವಿಜಯ ಸಾರಿ ಬಂದ ಸ್ವಾಮೀಜಿಯವರಿಗೆ ಮದ್ರಾಸಿನಲ್ಲಿ ಕೆಲವು ಕಾಲೇಜು ವಿದ್ಯಾರ್ಥಿಗಳು ಸ್ವಾಮೀಜಿ ನೀವಂತೂ ಕಾಷಾಯ ವಸ್ತ್ರಧಾರಿಗಳು. ಪ್ರಾಯಶಃ ಯಾವುದೇ ವಿಧದ ಹೋರಾಟದಲ್ಲಿ ನೇರವಾಗಿ ಪಾಲ್ಗೋಳ್ಳಲು ನಿಮಗೆ ಸಾಧ್ಯವಾಗಲಾರದು. ಆದರೂ ಸ್ವರಾಜ್ಯ ಹೋರಾಟವನ್ನು ಬೆಂಬಲಿಸಿ ನೀವೊಂದು ಹೇಳಿಕೆಯನ್ನೆಕೆ ನೀಡಬಾರದು?
ಪ್ರಶ್ನೆ ಕೇಳುತ್ತಿದ್ದಂತೆ ಸ್ವಾಮೀಜಿಯವರ ಮುಖದಿಂದ ಉತ್ತರ ಸಿಡಿಲಿನಂತೆ ಗುಡುಗಿತು. ಜ್ಞಿbಛಿmಛ್ಞಿbಛ್ಞ್ಚಿಛಿ!.. ಐ Z ಜಛಿಠಿ qsಟ್ಠ ಐbಛಿmಛ್ಞಿbಛ್ಞ್ಚಿಛಿ ಠಿಟಞಟ್ಟ್ಟಟಡಿ, ಜ್ಛಿ qsಟ್ಠ ಡಿZಠಿ; ಚ್ಠಿಠಿ ಡಿeಛ್ಟಿಛಿ Zಛಿ ಞಛ್ಞಿ ಡಿeಟ Z bಜಿಜಛಿoಠಿ ಜಿಠಿ? ಪುನಃ ಸ್ವಲ್ಪ ಹೊತ್ತಿನ ನಂತರ ಸ್ವಾಮೀಜಿಯೇ ಪ್ರಶ್ನಿಸಿದರು. ಈಟ qsಟ್ಠ hಟಡಿ ಠಿeZಠಿ ಜ್ಞಿbಛಿmಛ್ಞಿbಛ್ಞ್ಚಿಛಿ ಞಛಿZo ಛಿomಟ್ಞoಜಿಚಿಜ್ಝಿಜಿಠಿqs?
ಸ್ವಾಮೀಜಿಯವರ ದೃಷ್ಟಿಯಲ್ಲಿ ಸ್ವರಾಜ್ಯ ಪ್ರಾಪ್ತಿ ಕಷ್ಟದ ಸಂಗತಿಯಾಗಿರಲೇ ಇಲ್ಲಾ. ಸ್ವರಾಜ್ಯವನ್ನು ಗಳಿಸಲು ಹಾಗೂ ಗಳಿಸಿದ್ದನ್ನು ಉಳಿಸಿ, ಅನುಭವಿಸಲು ಪೂರ್ವಭಾವಿಯಾಗಿ ಅನಿವಾರ್ಯವಾಗಿ ಇರಲೇಬೇಕಾದ ಯೋಗ್ಯತೆ ನಮ್ಮ ಸಮಾಜದಲ್ಲಿ ಇಲ್ಲವಲ್ಲ ಎನ್ನುವ ಚಿಂತೆ ಅವರದಾಗಿತ್ತು. ನೂರಾರು ವರ್ಷಗಳ ಭ್ರಷ್ಟ ಅಧಿಕಾರಿಗಳ ಆಡಳಿತದ ಗುಲಾಮಗಿರಿಯ ಭ್ರಷ್ಟ ಸಂಸ್ಕಾರಗಳಿಂದ ಹಲವು ವಿದದ ದುರ್ಗುಣಗಳೇ ಹಿಂದು ಸಮಾಜದಲ್ಲಿ ತುಂಬಿರುವುದನ್ನು ಗಮನಿಸಿ ಮೇಲಿನಂತೆ ಗುಡುಗಿದ್ದಾರೆ.
ಸ್ವಾಮೀಜಿಯವರು ಬಡಿದೆಬ್ಬಿಸಿದ್ದರಿಂದಲೇ ದೀರ್ಘನಿದ್ರೆಯಲ್ಲಿದ್ದ ಹಿಂದು ಕೇಸರಿಯು ಮೈಕೊಡವಿ ಎದ್ದು ನಿಂತಿತ್ತು. ವಿದೇಶದಲ್ಲಿದ್ದಾಗ ಹಿಂದು ಸ್ವಾಭಿಮಾನವನ್ನೆ ಎತ್ತಿಹಿಡಿದ ಅವರು,. ಹಿಂದು ಸಮಾಜದಲ್ಲಿ ತುಂಬಿಕೊಂಡಿರುವ ವೈಷಮ್ಯ, ಅಸೂಯೆ, ಮತ್ಸರ, ಮೂಢನಂಬಿಕೆ, ಮಡಿವಂತಿಕೆ, ಅಸ್ಪೃಶ್ಯತೆ, ಅಸಂಘಟನೆ ಇತ್ಯಾದಿ ವಿವಿಧ ದೋಷಗಳನ್ನು ನಿವಾರಿಸಲು ಗಂಭೀರ ಯತ್ನ ನಡೆಸಿದರು.ವಿವೇಕಾನಂದರು ಒಂದು ಸಂದರ್ಭದಲ್ಲಿ ದೇಶದ ಹಿತ ಸಾಧಿಸುವ ಹಂಬಲ ನಿಮಗಿದ್ದಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನೂ ಓರ್ವ ಗುರುಗೋವಿಂದ ಸಿಂಹನಾಗಬೇಕು. ನಮ್ಮ ದೇಶ ಬಾಂಧವರಲ್ಲಿ ಸಹಸ್ರಾರು ದೋಷಗಳು ನಿಮಗೆ ಕಂಡಾವು. ಆದರೆ ಅವರಲ್ಲಿನ ಹಿಂದು ರಕ್ತ ಗುರುತಿಸಿ. ಅವರು ನಿಮಗೆ ಸರ್ವಬಗೆಯಲ್ಲೂ ಕೇಡು ಬಗೆಯಬಹುದು. ಆದರೆ ನೀವು ಮೊದಲು ಪೂಜಿಸಬೇಕಾದ ದೇವರುಗಳು ಅವರು. ಅವರಲ್ಲಿ ಪ್ರತಿಯೊಬ್ಬನು ನಿಮ್ಮನ್ನು ಶಪಿಸಬಹುದು. ಆದರೆ ನಿಮ್ಮಿಂದ ಸ್ನೇಹದ ಮರುದನಿಯನ್ನೆ ಅವರು ಕೇಳಲಿ..ಒಂದು ವೇಳೆ ಅವರು ನಿಮ್ಮನ್ನು ಹೊರದಬ್ಬಲೂ ಬಹುದು. ಆದರೂ ಆ ನರಶಾರ್ಧೂಲ ಗುರುಗೋವಿಂದನಂತೆ ಮೌನವಾಗಿ ಪ್ರಾಣನೀಗಲೂ ಬದಿಗೆ ಸರಿದು ನಿಲ್ಲಿರಿ...ಅಂತಹವನೇ ಹಿಂದು ಎನಿಸಿಕೊಳ್ಳಲೂ ಯೋಗ್ಯ.ಅದೇ ನಮ್ಮೆದುರು ಸದಾಸರ್ವದಾ ಇರಬೇಕಾದ ಆದರ್ಶ.
ಹಿಂದು ಸಮಾಜದ ಕುರಿತಾಗಿ ಸ್ವಾಮೀಜಿಯವರ ಮನದಾಳದಲ್ಲಿ ಮಿಡಿಯುತ್ತಿದ್ದ ಕಳಕಳಿಯೇ ಶಬ್ದರೂಪ ತಾಳಿದ ಅಮೂಲ್ಯವಾದ ಮಾತುಗಳಿವು. ಪ್ರಾಂಜಲ ಮನದಿಂದ ಸಮಾಜವನ್ನು ಪ್ರೀತಿಸುತ್ತಿದ್ದ ಕಾರಣವೇ ಅದರ ದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸುವಂತ ನೈತಿಕ ಅಧಿಕಾರವನ್ನು ಅವರು ಹೊಂದಿದ್ದರು.ಪ್ರೀತಿಯೇ ಇಲ್ಲದ ಒಣಮನದ ಟೀಕೆ ಆಗಿರಲಿಲ್ಲ ಅದು..
ಹಿಂದು ಸಮಾಜದಲ್ಲಿ ಮೊದಲು ಆತ್ಮವಿಶ್ವಾಸವನ್ನು ಜಾಗೃತಗೊಳಿಸಿ, ನಂತರ ತನ್ನೊಳಗಿನ ಕೊರತೆ ಮತ್ತು ದೋಷಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಲು ಅಗತ್ಯವಾದ ಮನೋಭೂಮಿಕೆಯನ್ನು ಅವರು ರೂಪಿಸಿದರು. ಭಾರತದ ಪುನರೋದಯಕ್ಕಾಗಿ ಅವರು ಹಾಕಿಕೊಂಡಿದ್ದ ಯೋಜನೆಯ ಮೊದಲ ಹಂತವಿದು... ಯೋಜನೆಯ ಮುಂದಿನ ಭಾಗವೇ ಸಮಾಜ ಸಂಘಟನೆಯಿದು. ಪಾಶ್ಚಾತ್ಯ ದೇಶಗಳಲ್ಲಿದ್ದಾಗ ಸ್ವಾಮೀಜಿಯವರು ಅಲ್ಲಿನ ಸಂಘಟಿತ ಸಾಮಾಜಿಕ ಜೀವನ. ಸಂಘಟನೆಯೊಂದಿದ್ದಲ್ಲಿ ಅದರಿಂದ ಅದ್ಬುತವಾದ ಕಾರ್ಯ ಸಾಧನೆಯಾಗಬಲ್ಲದು ಎನ್ನುವುದು ಅವರಿಗಿಲ್ಲಿ ಅನುಭವವಾಗಿತ್ತು.
ಹಿಂದು ಸಮಾಜವು ಇನ್ನಿತರ ಸೆಮೆಟಿಕ್ ಮತಗಳಂತೆ ಒಂದು ಸಂಘಟಿತ ಮತವಲ್ಲ. ಆ ರೀತಿ ಆಗುವುದಕ್ಕೆ ಸಾಧ್ಯವೂ ಇಲ್ಲ, ಅಗತ್ಯವೂ ಇಲ್ಲ. ತನ್ನದೇ ಆದ ವಿಶೇಷತೆಯನ್ನು ಅದು ಉಳಿಸಿಕೊಳ್ಳಬೇಕು. ಜೊತೆಯಲ್ಲಿ ಸಂಘಟನೆಯ ಸ್ವಭಾವವನ್ನು ಅದು ರೂಢಿಸಿಕೊಳ್ಳಬೇಕು ಎಂಬುದು ಅವರ ಅಪೇಕ್ಷೆಯಾಗಿತ್ತು. ಹಲವಾರು ಜಾತಿ, ಭಾಷೆ, ಮತ, ಪಂಥ, ಉಪಾಸನಾ ಪದ್ದತಿಗಳಿಂದ ಕೂಡಿರುವ ವೈವಿದ್ಯಪೂರ್ಣವಾದ ಸಮಾಜವಿದು. ಈ ವಿವಿಧತೆಗಳ ನಡುವೆಯೂ ತನ್ನ ಏಕತೆಯನ್ನು ಅನೂಚಾನವಾಗಿ ಉಳಿಸಿಕೊಂಡು ಬಂದಿರುವುದೇ ವಿಶೇಷ. ಹಿಂದು ಸಮಾಜವನ್ನು ಒಂದಾಗಿ ಪೋಣಿಸಿರುವ ಆ ಏಕತೆಯ ಸೂತ್ರವನ್ನು ಬಳಸಿಕೊಂಡು ಹಿಂದು ಸಮಾಜವನ್ನು ಬಲಪಡಿಸಿದಾಗ ಲಾಭವಾಗದೇ ಉಳಿಯಲಾರದು ಎನ್ನುವುದು ಬಲವಾದ ನಂಬಿಕೆ.
ನಮ್ಮ ದೇಶದಲ್ಲಿನ ಜೀವನದಾಯಿ ಸಮಾನತತ್ವಗಳನ್ನು ಹೊರತೆಗೆಯಬೇಕು. ಈ ದೇಶದಲ್ಲಿನ ಪ್ರತಿಯೊಬ್ಬ ಸ್ತ್ರಿ-ಪುರುಷನೂ ಪ್ರತಿಯೊಂದು ಮಗುವು ಅದನ್ನು ಅರಿತು, ಅರಗಿಸಿಕೊಂಡು ಬಾಳಿನಲ್ಲಿ ಇಳಿಸುವಂತಾಗಬೇಕು. ಅದೇ ನಮ್ಮ ಆಕಾಂಕ್ಷೆ... ಇದೇ ಮೊದಲನೇ ಹೆಜ್ಜೆ.
ಎಲ್ಲರ ಮನಸ್ಸಿನಲ್ಲಿರುವ ಸಮಾನ ಭಾವನೆಗಳನ್ನು ಒಂದೇ ಕಡೆ ಕ್ರೋಢಿಕರಿಸುವ ವ್ಯವಸ್ಥೆಯಾಗಿ ದೇಶದಾದ್ಯಂತ ಓಂ ದೇವಾಲಯಗಳನ್ನು ಆರಂಬಿಸುವ ವಿಚಾರ ಮಾಡಿದರು. ಹಿಂದುಗಳಿಗೆ ಓಂ ಎನ್ನುವುದು ಸರ್ವೋಚ್ಚ ಧನಿ-ದೇವತೆ...ಯಾರಿಗೆ ಓಂ ಮಾನ್ಯವಿಲ್ಲವೋ ಆ ಪಂಥಕ್ಕೆ ಹಿಂದು ಎನಿಸಿಕೊಳ್ಳಲೂ ಅಧಿಕಾರವೇ ಇಲ್ಲಾ. ಪ್ರತಿಯೊಬ್ಬನಿಗೂ ಪಂಥದ ಕಲ್ಪನೆಗಳ ಮೂಲಕ ಹಿಂದು ಧರ್ಮವನ್ನು ಚಿತ್ರಿಸುವ ಅಧಿಕಾರವಿದೆ. ಆದರೆ ಅವರೆಲ್ಲರೂ ಒಂದೂಗೂಡಿ ಬರಲು ಓಂ ದೇವಾಲಯವಿರಬೇಕು. ಮಿಕ್ಕ ಮಂದಿರಗಳಲ್ಲಿ ನಿಮಗೆ ಬೇಕಾದ ಮೂರ್ತಿಗಳನ್ನು ಅಥವಾ ಚಿಹ್ನೆಗಳನ್ನು ಇಟ್ಟುಕೊಳ್ಳಿ. ಆದರೆ ಇಲ್ಲಿ ಮಾತ್ರ ಮಿಕ್ಕ ಪಂಥದವರೊಂದಿಗೆ ಜಗಳಕ್ಕೆ ನಿಲ್ಲಬೇಡಿ ಎಂದು ಹೇಳಿದ್ದಾರೆ.
ಶಿಲ್ಪಿಯೂ ಶಿಲೆಯಲ್ಲಿ ಅನಗತ್ಯ ಭಾಗವನ್ನೆಲ್ಲಾ ನಿರ್ಮಮಕಾರದಿಂದ ಕೆತ್ತಿ ಹಾಕುತ್ತಾನೆ. ಸುಂದರವಾಗಿ ಬಟ್ಟೆಯನ್ನು ಹೊಲಿಯುವ ದರ್ಜಿಯೂ ಓರೆಕೊರೆಯಾಗಿ ಕತ್ತರಿಸುತ್ತಾನೆ. ಆದರೆ ಯಾರು ಶಿಲ್ಪಿಯನ್ನಾಗಲಿ, ದರ್ಜಿಯನ್ನಾಗಲಿ ದೂರುವುದಿಲ್ಲ. ಬದಲಿಗೆ ಮೂಡುವ ಸೊಬಗಿನ ಕೃತಿಗೆ ಮೆಚ್ಚಿ ತಲೆದೂಗುತ್ತಾರೆ. ಅದರಂತೆ ವಿವೇಕಾನಂದ ಹಿಂದುಧರ್ಮಕ್ಕೆ ಕೆಸರಿನಂತೆ ಅಂಟಿದ ಆಚಾರಗಳನ್ನು ಖಂಡಿಸಿದ ಮಾತುಗಳನ್ನು ಅರ್ಥೈಸಬೇಕು. ಒಟ್ಟಾರೆಯಾಗಿ ಹಿಂದುಧರ್ಮದ ಹಿತದ ಅದಮ್ಯ ತುಡಿತವೇ ಅಲ್ಲಿ ಎದ್ದು ಕಾಣುವುದೆಂಬುದನ್ನು ಗುರುತಿಸಬೇಕು.
ನಾವೆಲ್ಲಾ ಗೊತ್ತಿದ್ದೊ ಗೊತ್ತಿಲ್ಲದೆಯೋ ಯಾರದೋ ಮೇಲ್ಪಂಕ್ತಿಯನ್ನು ಕಣ್ಣೇದುರಿಸಿ ಮುನ್ನಡೆಯುತ್ತಿರುತ್ತೇವೆ. ಬದುಕು ತೀರಾ ಗೊಂದಲವಾಗಿ ನಿರ್ಣಯ ತುಂಬಾ ಕಠಿಣವಾದಾಗ ಮಾರ್ಗದರ್ಶನಕ್ಕಾಗಿ ಹಂಬಲಿಸುತ್ತೇವೆ. ಆಗೆಲ್ಲಾ ವಿವೇಕಾನಂದರೆ ನೀಡಿದ ಮಾರ್ಗದರ್ಶನವೊಂದಿದೆ. ಸಾಧ್ಯವಾದಷ್ಟು ಹಿಂದಕ್ಕೆ ನೋಡು, ಇತಿಹಾಸದೊಳಗಿಂದ ಕಂಡುಕೋ....ವಿವೇಕಾನಂದರ ಸ್ಮರಣೆಮಾಡುತ್ತಾ ಅವರು ಹಿಂದು ಧರ್ಮದ ಏಳ್ಗೆಗಾಗಿ ಹೋರಾಡಿದ ಕ್ಷಣಗಳನ್ನು ನೆನಪಿಸುತ್ತಾ ಹಿಂದು ಸಮಾಜದ ನಿರ್ಮಾಣದಲ್ಲಿ ಕೈಜೋಡಿಸೋಣ...
ಸಂದೇಶ ಶೆಟ್ಟಿ ಆರ್ಡಿ
No comments:
Post a Comment