ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೧ನೇ ಜನ್ಮ ದಿನಾಚರಣೆ
ಸಮಾಜ ಪರಾವರ್ತನೆ ಮಾಡದೆ ಸಂವಿಧಾನದ ಮೂಲಕ ಪರಿವರ್ತನೆ ಮಾಡಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್
ಮಂಗಳೂರು: ಅಂಬೇಡ್ಕರ್ ಅಸ್ಪೃಶ್ಯತೆಯಿಂದ ನೊಂದಿದ್ದರೂ, ಸಮಾಜವನ್ನು ಪರಾವರ್ತನೆ ಮಾಡದೆ ಸಂವಿಧಾನ ರಚನೆಯ ಮೂಲಕ ಪರಿವರ್ತನೆಯ ದಿಕ್ಕನ್ನು ಸೂಚಿಸಿದ ಶ್ರೇಷ್ಠ ನಾಯಕ ಎಂದು ಸಾಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಅವರು ಶನಿವಾರ ನಗರದ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದ.ಕ.ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರು ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೧ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಖಂಡವಾದ ಜಾತೀಯತೆಯಿಂದ ಮನಸ್ಸಿಗೆ ನೋವಾಗಿದ್ದರೂ ಅದನ್ನು ಪ್ರಕಟಿಸದೆ ಸಮಾಜಕ್ಕೆ ನ್ಯಾಯ ಒದಗಿಸುವಂಥ ಸಂವಿಧಾನ ರಚನೆ ಮಾಡಿದ್ದಾರೆ. ದೇಶ ಕಲ್ಯಾಣದ ಚಿಂತನೆಯಿಂದ ಕ್ರಾಂತಿಕಾರಿಯಾಗಿ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾ, ಶೋಷಣೆ ರಹಿತ ಸಮಾಜದ ಬದಲಾವಣೆಗೆ ಶ್ರಮಿಸಿದ್ದಾರೆ ಎಂದರು.
ಶಿಕ್ಷಣಕ್ಕೆ ಆದ್ಯತೆ ನೀಡಿ ರಾಷ್ಟ್ರಕ್ಕೆ ಹೊಸ ದಿಕ್ಕನ್ನು ಸೃಷ್ಠಿಸಿ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳಿಂದ ಪ್ರೇರಿತರಾಗಿ ಗುಲಾಮಿತನದಿಂದ ಹೊರಗೆ ಬರುವಂಥ ಪ್ರಕಾಶಿತ ರಾಷ್ಟ್ರ ನಿರ್ಮಾಣದ ಸಂವಿಧಾನ ರಚಿಸಿದ್ದಾರೆ. ಇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭ್ರಷ್ಠಾಚಾರ ಮುಕ್ತ ಸಮಾಜ ನಿರ್ಮಾಣದಲ್ಲಿ ಮಾದರಿಯಾಗೋಣ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಸಭೆಯ ಉಪಾಧ್ಯಕ್ಷ ಎನ್.ಯೋಗೀಶ್ ಭಟ್ ಮಾತನಾಡಿ, ಸ್ವ-ಚಿಂತನೆ, ಪ್ರೀತಿ, ಶ್ರದ್ದೆ, ಸ್ವೀಕಾರ ಮಾಡುವಂಥ ಗುಣಗಳಿಂದ ಸಮಾಜದಲ್ಲಿ ಆದ್ಯತೆ ದೊರೆಯುತ್ತದೆ. ಜಾತಿ ಶ್ರೇಷ್ಠ ಎನ್ನುವ ಅಂಶ ಬಿಟ್ಟು ಭಾರತೀಯರು ಎನ್ನುವ ಭಾವನೆ ಪ್ರಜ್ಞೆಯಾಗಬೇಕು ಎಂದ ಅವರು ಕಾನೂನಿನ ತೊಡಕುಗಳನ್ನು ಸರಿಪಡಿಸಿ, ಯೋಜನೆಗಳನ್ನು ಸಾಮಾನ್ಯ ಜನತೆಗೆ ತಲುಪಿಸಲು ಇಚ್ಚಾಶಕ್ತಿಯ ಅವಶ್ಯಕತೆಯಿದೆ ಎಂದರು.
ಭಾರತದ ಸಬಲೀಕರಣಕ್ಕಾಗಿ ಕಾನೂನು ರೀತಿಯ ಪರಿವರ್ತನೆಗೆ ಪ್ರಯತ್ನಿಸಿ ಸಾಮಾಜಿಕ ಹಾಗೂ ಶೈಕ್ಷಣಿಕ ಬದಲಾವಣೆಗೆ ಶ್ರಮಿಸಿದ್ದಾರೆ. ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಹಾಗೂ ರಾಷ್ಟ್ರ ನಾಯಕರ ಚಿಂತನೆಗಳನ್ನು ಅಳವಡಿಸಿಕೊಂಡಾಗ ದೇಶ ಉನ್ನತಿ ಸಾಧ್ಯ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ.ಅಭಯ ಕುಮಾರ್ ಕೌಕ್ರಾಡಿ ಆಶಯ ಭಾಷಣ ಮಾಡಿ, ಅಂಬೇಡ್ಕರ್ ಅವರು ಗಾಂಜಿಯ ಜೊತೆ ರಾಜಕೀಯದಲ್ಲಿ ತಾತ್ವಿಕ ಸಂದೇಶವನ್ನು, ಆರ್ಥಿಕ ಚಿಂತನೆಗಳಿಂದ ಆರ್ಥಿಕ ಸುಧೃಡತೆಯನ್ನು, ಶಿಕ್ಷಣ ತಜ್ಞನಾಗಿ ಏಕರಾಷ್ಟ್ರೀಯ ಕಲ್ಪನೆಯ ಚಿಂತನೆಯನ್ನು ದೇಶದ ಜನತೆಯಲ್ಲಿ ಹುಟ್ಟುಹಾಕಿದ್ದಾರೆ. ಏಕಧರ್ಮದ ಮೂಲಕ ರೂಪುಗೊಳ್ಳುವ ಸಂವಿಧಾನದಿಂದ ಆಂತರಿಕ ಗೊಂದಲಗಳು ಸೃಷ್ಠಿಯಾಗುತ್ತದೆ ಎಂದು ಭಾವಿಸಿ ಶ್ರೇಷ್ಠ ಸಂವಿಧಾನ ರಚನೆಮಾಡಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಯು.ಟಿ.ಖಾದರ್, ಕರಾವಳಿ ಅಭಿವೃದ್ದಿ ಪ್ರಾಕಾರ ಬಿ.ನಾಗರಾಜ ಶೆಟ್ಟಿ, ದ.ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಧನಲಕ್ಷ್ಮಿ ಜನಾರ್ದನ್, ತಾ.ಪಂ.ಉಪಾಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ಉಪಮೇಯರ್ ಅಮಿತಕಲಾ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ದನ ಗೌಡ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್, ಜವಾಹರ್ ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಜಿಲ್ಲಾಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಕಾರಿ ಡಾ.ಕೆ.ಎಸ್.ವಿಜಯಪ್ರಕಾಶ, ಮಹಾನಗರ ಪಾಲಿಕೆ ಆಯುಕ್ತ ಡಾ.ಕೆ.ಹರೀಶ್ ಕುಮಾರ್ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪಶ್ಚಿಮ ವಲಯ ಐಜಿಪಿ ಪ್ರತಾಪ ರೆಡ್ಡಿ, ಎಸ್‌ಪಿ ಅಭಿಷೇಕ ಗೋಯಲ್ ಉಪಸ್ಥಿತರಿದ್ದರು.
ಜಿಲ್ಲಾ ಸಮಾಜ ಕಲ್ಯಾಣ ಅಕಾರಿ ಅರುಣ್ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
No comments:
Post a Comment