ಹಿಂದುಗಳಿಗಾಗುತ್ತಿರುವ ಅನ್ಯಾಯಕ್ಕೆ ಕೊನೆಯೆಂದು?
ಇತಿಹಾಸವನ್ನು ನೋಡಿದಾಗ ಬಹುಸಂಖ್ಯಾಕರೆಂದು ಕರೆಸಲ್ಪಡುವ, ಹಿಂದುಗಳ ಸ್ಥಾನವಾದ ಹಿಂದುಸ್ಥಾನದಲ್ಲಿ ಹಿಂದುಗಳ ಮೇಲೆ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಕ್ರಮಣಗಳನ್ನು ನಡೆಯುತ್ತಲೇ ಬಂದಿದೆ. ಸಮಾಜದಲ್ಲಿ ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುವವರು ಯಾವುದೇ ತಪ್ಪನ್ನೆಸಗಿದರೂ ಆ ಬಗ್ಗೆ ಕಣ್ಣುಮುಚ್ಚಿ ಕೂರುವ ವಿಲಕ್ಷಣತೆ ದೇಶದ ಬುದ್ದಿಜೀವಿಗಳಲ್ಲಿ ಮಾತ್ರವಲ್ಲ ಕೆಲವೊಂದು ರಾಜಕೀಯ ನಾಯಕರುಗಳು ಹಾಗೂ ಆಡಳಿತ ಯಂತ್ರದಲ್ಲಿರುವುದು ವಿಚಿತ್ರವಾಗಿದೆ.. ಕರಾವಳಿಯಲ್ಲಿ ನಡೆದ ಕೆಲವೊಂದು ಘಟನೆಗಳನ್ನು ಸಾವಧಾನವಾಗಿ ಮಾನವೀಯ ನೆಲೆಯಲ್ಲಿ, ಧರ್ಮಾಧರ್ಮದ ತಕ್ಕಡಿಯಲ್ಲಿಟ್ಟು ತುಲನೆ ಮಾಡಿದರೆ ಬಹುಸಂಖ್ಯಾತರಾದ ಹಿಂದುಗಳ ಮೇಲೆ ದೌರ್ಜನ್ಯಗಳು ಮೀತಿಮಿರಿರುವುದು ಸ್ಪಷ್ಟ. ನ್ಯಾಯಾಲಯದಲ್ಲಿ ಕಣ್ಣಿಗೆ ಕಪ್ಪುಪಟ್ಟಿಯನ್ನು ಧರಿಸಿದ ನ್ಯಾಯದೇವತೆಯನ್ನು ಭ್ರಷ್ಟಾಚಾರದ ಸೋಗಿನಲ್ಲಿ ಏಕಮುಖವಾಗಿ ಕರೆದೊಯ್ಯುತ್ತಿದ್ದಾರೆ ಎನ್ನುವುದು ಅವಿದ್ಯಾವಂತನಿಗೂ ತಿಳಿಯುತ್ತದೆ.
ಉಡುಪಿಯಲ್ಲಿ ಇತ್ತೀಚಿಗೆ ಗುಜಾರಾತಿನಿಂದ ಮುಸ್ಲಿಂ ಸಮಾಜದ ಏಳು ಮಂದಿ ಗಂಟು ಮೂಟೆ ಸಮೇತವಾಗಿ ಬಂದಾಗ ಸ್ವಲ್ಪ ಮಟ್ಟಿನ ಗೊಂದಲ ನಿರ್ಮಾಣವಾಯಿತು. ಅವರು ಬಂದ ಪರಿಯನ್ನು ನೋಡಿದ ಜಾಗೃತ ನಾಗರಿಕರು ಕೂಡಲೇ ಪೋಲಿಸರಿಗೆ ಮಾಹಿತಿಯನ್ನು ಮುಟ್ಟಿಸಿದಾಗ, ಬಂದ ಪೊಲೀಸರು ಅವರು ಮತಪ್ರಚಾರಕ್ಕಾಗಿ ಬಂದಿದ್ದಾರೆ ಎಂದು ಹೇಳಿ ಕಳುಹಿದ್ದಾರೆ. ಮತಪ್ರಚಾರಕ್ಕಾಗಿ ಒಮ್ಮೆಲೆ ಏಳು ಮಂದಿ ಬರಬೇಕಾಗಿತ್ತೆ ಎನ್ನುವ ಪ್ರಶ್ನೆ ಮೂಡುತ್ತದೆ. ಮುಸ್ಲಿಂ ಸಮಾಜದವರು ಬಂದರೆ ಮತಪ್ರಚಾರಕರು ಎಂದು ನಿರ್ಲಕ್ಷಿಸುವ ಯತ್ನದ ಹಿಂದಿರುವ ಮಾನಸಿಕತೆ ಯಾವುದು?
ಸಮಾಜದಲ್ಲಿ ಯಾವುದೇ ಉತ್ತಮ ಕೆಲಸ ಮಾಡಿದರೂ ಅವರಿಗೆ ಬೆಂಬಲ ಕೊಡುವವರು ತುಂಬಾ ಕಡಿಮೆ . ಅವರನ್ನು ಹೇಗಾದರೂ ಮಾಡಿ ತುಳಿದು ತಾನು ಸ್ವತಂತ್ರನಾಗಬೇಕು ಎನ್ನುವ ಮನೋಭಾವನೆ ಕೆಲವರದು. ಇದು ಹಿಂದುಗಳಲ್ಲಿ ಅನಾದಿಕಾಲದಿಂದಲೂ ನಡೆದುಬಂದ ರೀತಿಯಾಗಿದೆ. ಹಿಂದು ಸಮಾಜದಲ್ಲಿ ಒಗ್ಗಟ್ಟಿಲ್ಲದ ಕಾರಣವೇ ಅನ್ಯಮತೀಯರ ಆಕ್ರಮಣ ನಮ್ಮಧರ್ಮದ ಮೇಲಾಗುತ್ತಿದೆ. ಸಮಾಜದಲ್ಲಿ ಯಾರು ಮುಂಚೂಣಿಯಲ್ಲಿ ನಿಂತು ಅವಿರತ ಹಿಂದು ಧರ್ಮಕಾರ್ಯ ಮಾಡುತ್ತಾರೆಯೋ ಅವರನ್ನು ಹೇಗಾದರೂ ಮಾಡಿ ಸಂಚಿನಲ್ಲಿ ಸಿಲುಕಿಸಿ ತುಳಿಯುವುದೇ ದುಷ್ಟಸಂಘಟನೆಗಳ ಕುತಂತ್ರವಾಗಿದೆ. ಇದರಲ್ಲಿ ಕೆಲವೊಂದು ಸ್ವಾರ್ಥಿ ಹಿಂದುಗಳೇ ಸೇರಿಕೊಂಡು ಅವರೊಂದಿಗೆ ಸಾಥ್ ನೀಡುತ್ತಿರುವುದು ಬೇಸರದ ಸಂಗತಿ. ಯಾರು ಸಮಾಜವನ್ನು ತನ್ನ ಸಂಸಾರ, ಕುಟುಂಬವೆಂದು ಭಾವಿಸಿ ಹಗಲಿರುಳು ಕೆಲಸಮಾಡುತ್ತಾರೋ, ಹಿಂದುತ್ವದ ಪರವಾಗಿ ಎಲ್ಲಾ ಧಾರ್ಮಿಕ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಾರೋ ಅವರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾದ ಸಂಚಿನಲ್ಲಿ ಸಿಲುಕಿಸಲಾಗುತ್ತದೆ. ಆತ ಯಾವುದೇ ತಪ್ಪನ್ನು ಮಾಡದಿದ್ದರೂ ಆತನ ವಿರುದ್ದ ವ್ಯವಸ್ಥಿತವಾದ ಸಂಚಿನಲ್ಲಿ ಸಿಲುಕಿಸಿ ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸದಂತೆ ತಡೆಯುವ ಮೂಲಉದ್ದೇಶವೇ ಹೊರತು ಬೇರಾವ ದೃಷ್ಠಿಯಿಂದಲೂ ಅಲ್ಲ.. ಅನೇಕ ದುಷ್ಟಸಂಘಟನೆಗಳ ಆಮಿಷಕ್ಕೆ ಕೆಲವು ಹಿಂದುಗಳು ಬಲಿಯಾಗಿ ಅವರು ಹೇಳಿದಂತೆ ಕುಣಿಯುವ ಕರಡಿಯಂತಾಗಿದ್ದಾರೆ. ಅಥವಾ ಅವರು ತೋರಿಸುವ ಆಮಿಷಕ್ಕೆ ಬಲಿಯಾಗಿ ನೆರಮನೆಯವರನ್ನೆ ವೈರಿಯೆಂದು ಭಾವಿಸಿದ್ದಾರೆ. ಇಲ್ಲಿ ವ್ಯವಸ್ಥಿತವಾದ ಸಂಚುನಡೆಸುವ ಜಾಲ ಕೆಲಸಮಾಡುತ್ತಿದೆ.
ಇತ್ತೀಚಿಗೆ ಹಲವಾರು ಘಟನೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಗಮನಿಸಿದರೆ ಇದರ ಹಿಂದೆ ದುಷ್ಟಶಕ್ತಿಗಳ ತಂತ್ರವಿರುವುದು ಸ್ಪಷ್ಟವಾಗುತ್ತದೆ. ಸುಳ್ಯದಲ್ಲಿ ನಡೆದ ಘಟನೆ, ಕುಂದಾಪುರದ ಆರ್ಡಿಯಲ್ಲಿ ನಡೆದ ಗೋವಿನ ಅಪಹರಣ ಹಾಗೂ ಪದವಿಪೂರ್ವ ಶಿಕ್ಷಕರ ಮಷ್ಕರದಲ್ಲಿ ವಿದ್ಯಾರ್ಥಿನಿಯರ ಪಾಲ್ಗೊಳ್ಳುವಿಕೆಯ ನಂತರದ ಎಲ್ಲಾ ಮಾಹಿತಿಗಳನ್ನು ಕೂಲಂಕಷವಾಗಿ ಆಲೋಚಿಸಿದಾಗ ಮತೀಯಶಕ್ತಿಗಳ ಕೈವಾಡದೊಂದಿಗೆ ಅವರಿಗೆ ಸಾಥ್ ನೀಡುವಂಥ ಅಧಿಕಾರಿವರ್ಗ ನಮ್ಮ ಕಣ್ಣಮುಂದೆ ನಿಲ್ಲುತ್ತವೆ. ಐದಾರು ತಿಂಗಳುಗಳ ಹಿಂದೆ ಕುಂದಾಪುರ ತಾಲೂಕಿನ ಆರ್ಡಿಯಲ್ಲಿ ಮನೆಯಲ್ಲಿ ಕಟ್ಟಿದ ದನಗಳು ಕಾಣೆಯಾಗುತ್ತಿದ್ದ ಮಾಹಿತಿಯನ್ನು ಪಡೆದು ಹಿಂದು ಸಂಘಟನೆಯ ಕೆಲವು ಯುವನಾಯಕರು ಅವರನ್ನು ಹಿಡಿಯಲು ಮುಂದಾದರು. ಅವರ ದುರದೃಷ್ಟ .ಕದಿಯುತ್ತಿದ್ದ ವ್ಯಕ್ತಿಗಳು ಸಿಕ್ಕಿ ಅವರನ್ನು ಪೋಲಿಸರಿಗೆ ಒಪ್ಪಿಸುವುದರೊಳಗೆ ಆತ ಇಹಲೋಕವನ್ನು ತ್ಯಜಿಸಿದ್ದ. ಕಾಗೆ ಕುಳಿತುಕೊಳ್ಳುವುದಕ್ಕೂ, ರೆಂಬೆ ಮುರಿಯುವುದಕ್ಕೂ ಸರಿ ಹೋಯ್ತು..ಅಂತ ಪರಿಸ್ಥಿತಿ ಯುವನಾಯಕರದ್ದು. ಕೂಡಲೇ ಅವರಿಗೆ ಬೆಂಬಲಿಗರಾಗಿ ಕಾಂಗ್ರೆಸ್ ಪಕ್ಷದ ಹಲವು ದುರೀಣರು ಕಾರ್ಯಮಗ್ನರಾಗಿ ಮನೆಯಲ್ಲಿ ಮಲಗಿದಂತ ನಾಯಕರನ್ನೆಲ್ಲಾ ಸೇರಿಸಿ ಕೇಸು ದಾಖಲಿಸಿದರು. ಯಳಂತೂರು ವಿಜಯಕುಮಾರ ಶೆಟ್ಟಿ, ಆರ್ಡಿ ಗಣೇಶ ಆಚಾರ್, ಸಂತೋಷ ಕುಮಾರ್ ಶೆಟ್ಟಿ, ಅರಸಮ್ಮಕಾನ್ ಶ್ರೀಧರ ಶೆಟ್ಟಿ ಇವರುಗಳು ಹಿಂದುತ್ವದ ಪರವಾಗಿ ಕೆಲಸಮಾಡುತ್ತಾರೆ ಎನ್ನುವ ಒಂದೇ ದೃಷ್ಟಿಯಿಂದ ವ್ಯವಸ್ಥಿತವಾದ ಜಾಲದಲ್ಲಿ ಸಿಲುಕಿಸಲಾಯಿತು. ನಂತರದ ದಿನಗಳಲ್ಲಿ ಅವರ ಪರವಾಗಿ ಯಾರು ಮಾತನಾಡುತ್ತಾರೋ ಅವರನ್ನು ಹಿಡಿದು ಅವರು ಎಲ್ಲಿದ್ದಾರೆ ಹೇಳಿ ಎಂದು ಚಿತ್ರಹಿಂಸೆ ಪೋಲಿಸರಿಂದ.. ಈ ರೀತಿಯಾಗಿ ಅವರನ್ನು ಹಿಂದು ಸಂಘಟನೆಗಳಿಂದ ದೂರ ಇರುವಂತೆ ಮಾಡಿ ಅಲ್ಪಸಂಖ್ಯಾತರ ಸಮಾಜಘಾತುಕ -ಕಾನೂನು ಬಾಹಿರ ಕೃತ್ಯಗಳಿಗೆ ನೆರವಾಗುವುದು ಎಷ್ಟು ಸರಿ?
ಇತ್ತೀಚಿಗೆ ಸುಳ್ಯದಲ್ಲಿ ನಡೆದ ಘಟನೆಯನ್ನು ಅವಲೋಕಿಸಿದಾಗಲೂ ಪೊಲೀಸರ ಕೃತ್ಯಗಳು ಬೆಳಕಿಗೆ ಬರುತ್ತದೆ. ಅನ್ಯಮತೀಯ ಇಬ್ಬರು ಯುವಕರು ಕಾಲೇಜಿನ ಯುವತಿಯರನ್ನು ಕರೆದೊಯ್ದ ಕೃತ್ಯ ಮತ್ತು ಸಂಜೆ ಕಾರಿನಲ್ಲಿ ಅನ್ಯಮತೀಯ ಯುವಕರಿಬ್ಬರು ಕಾರಿನಲ್ಲಿ ಕರೆದೊಯ್ಯುತ್ತಿದ್ದ ಘಟನೆಯ ಬಳಿಕ ಸುಳ್ಯ ಪೆಲೀಸರು ಬಿಜೆಪಿ ಮುಖಂಡರ ವಿರುದ್ದ ಹಾಗೂ ಅವರ ಸಂಸಾರದ ಮೇಲೆ ನಡೆಸಿದ ಅಮಾನವೀಯ ಕೃತ್ಯದಿಂದ ನಾಗರಿಕರು ಆಘಾತಗೊಂಡಿದ್ದಾರೆ. ಇಲ್ಲೂ ಹಿಂದು ಎನ್ನುವುದು ನತದೃಷ್ಟ ಸಂಗತಿಯಾಯಿತು. ಹಿಂದುಗಳಾಗಿದ್ದರಿಂದ ಈ ಅಮಾನುಷ ದೌರ್ಜನ್ಯ ಮಾಧ್ಯಮಗಳಲ್ಲಿ ಚರ್ಚೆಯಾಗಲಿಲ್ಲ, ಮಾನವ ಹಕ್ಕು ಗುಂಪುಗಳಿಗೆ ಈ ಹಿಂಸೆ ಅನ್ಯಾಯ ಎಂದೆನಿಸಲಿಲ್ಲ! ಮಧ್ಯರಾತ್ರಿಯ ಸಮಯದಲ್ಲಿ ಹಿಂದು ಸಂಘಟನೆ ನಾಯಕರ ಮನೆಗೆ ನುಗ್ಗಿದ ಪೊಲೀಸರು ಗಂಡಸರ ಮೇಲೆ ಕೈಮಾಡಿರುವುದಲ್ಲದೇ ಮಾತೆಯರ ಮೇಲೆಯೇ ದೌರ್ಜನ್ಯವನ್ನು ಎಸಗಿದ ಕೃತ್ಯ ಕ್ಷಮಿಸಲರ್ಹವಲ್ಲ. ಪೊಲೀಸರು ಖಾಕಿ ಬಟ್ಟೆಯನ್ನು ಧರಿಸಿದ ಮಾತ್ರಕ್ಕೆ ಅವರ ಮಾನವೀಯ ಗುಣಗಳೆಲ್ಲಾ ಮಾಯವಾಯಿತೇ ?. ಸಂಘಪರಿವಾರ ಸಮಾಜದಲ್ಲಿ ಯಾವುದೇ ಕೆಲಸ ಮಾಡಿದರೂ ಕಾಂಗ್ರೆಸ್ ಹಾಗೂ ಅವರಿಂದ ಪ್ರಲೋಭನೆಗೀಡಾಗಿರುವ ಆಡಳಿತಕ್ಕೆ ಅಪಥ್ಯವಾಗಿರುವುದೇಕೆ?
ಕೆಲವು ದಿನಗಳ ಹಿಂದೆ ರಾಜ್ಯಾದ್ಯಂತ ಪದವಿಪೂರ್ವ ಶಿಕ್ಷಕರ ವೇತನದ ತಾರತಮ್ಯಕ್ಕಾಗಿ ಮುಷ್ಕರ ನಡೆದು ಕೊನೆಗೆ ಅವರ ಪಾಲಿಗೆ ನ್ಯಾಯಒದಗಿಸುತ್ತೇವೆ ಎನ್ನುವ ಆಶ್ವಾಸನೆಯೊಂದಿಗೆ ಕೊನೆಗೊಂಡಿತು. ಶಿಕ್ಷಕರ ಮುಷ್ಕರಕ್ಕೆ ಉಡುಪಿಯ ಕೆಲವು ಕಾಲೇಜಿನ ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಸಾಥ್ ನೀಡಿದರು.
ಆ ವಿದ್ಯಾರ್ಥಿಗಳು ಶಿಕ್ಷಕರಿಗೆ ನ್ಯಾಯ ದೊರಕಬೇಕು ಎನ್ನುವ ಒಂದು ಉದ್ದೇಶವಾದರೆ, ಶಿಕ್ಷರರಿಲ್ಲದೆ ತರಗತಿ ನಡೆಯದಿದ್ದರೆ ಪರೀಕ್ಷೆಗಳು ಹತ್ತಿರ ಬಂದಾಗ ಒತ್ತಡ ನಿರ್ಮಾಣವಾಗುತ್ತದೆ ಎನ್ನುವ ಘನತರವಾದ ಉದ್ದೇಶವನ್ನು ಹೊತ್ತು ಅವರಿಗೆ ಸಾಥ್ ನೀಡಿದ್ದಾರೆ. . ಹಾಗಿರುವಾಗ ಅವರೆಲ್ಲಾ ಎಬಿವಿಪಿ ಹಿಂದುಗಳ ಸಂಘಟನೆ ಎನ್ನುವ ಕಾರಣದಿಂದ ಪ್ರತಿಭಟನೆಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ, ಸಂಜೆಯಾಗುವುದರೊಳಗೆ ಅವರ ವಿಳಾಸವನ್ನು ಪತ್ತೆ ಹಚ್ಚಿ ಪೊಲೀಸರು ಬಂದು ಕಾರ್ಯಾಚರಣೆ ಮಾಡುತ್ತಾರೆ ಅಂದರೆ ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯವೆಲ್ಲಿದೆ ಸ್ವಾಮಿ...
ಶಿಕ್ಷಕರು ಹಿಂದು ಮತ್ತು ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯೆಯನ್ನು ಕಲಿಸಿರುವರೇ? ಯಾವುದೇ ಮುಸ್ಲಿಂ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಸಮಯವನ್ನು ಧಾರೆಯೆರೆಯಲಿಲ್ಲವೇ? ಈ ಮಾತನ್ನು ಹೇಳುವುದಕ್ಕೂ ಕಾರಣವಿಷ್ಟೇ..ಎಲ್ಲಾ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೂ, ಮುಸ್ಲಿಂ ವಿದ್ಯಾರ್ಥಿಗಳು ಭಾಗವಹಿಸದಿರುವುದಕ್ಕೆ ಕಾರಣವಾದರೂ ಯಾವುದು? .ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ನ್ಯಾಯಸಮಾನವಾಗಿರಬೇಕು ಆದರೆ ಕರಾವಳಿಯಲ್ಲಿ ದುಷ್ಟಸಂಘಟನೆ, ಬುದ್ಧಿಜೀವಿಗಳ ಮತ್ತು ಪೊಲೀಸರ ದೌರ್ಜನ್ಯಗಳಿಂದ ಹಿಂದುಗಳಿಗೆ ನ್ಯಾಯ ಒದಗಿಸುವವರು ಯಾರು? ಯಾವುದೇ ಮತಕ್ಕೂ ಅನ್ಯಾಯವನ್ನು ಮಾಡದೇ ತಮ್ಮ ಧರ್ಮದ ನೆಲೆಯಲ್ಲಿ ಜೀವನ ಸಾರ್ಥಕ್ಯಕ್ಕೆ ಶ್ರಮಿಸುವ ಹಿಂದುಗಳ ಕುರಿತು ಸರ್ಕಾರ ಆಲೋಚನೆ ನಡೆಸಿ ಸೂಕ್ತಕ್ರಮವನ್ನು ಕೈಗೊಂಡಾಗಲೇ ಹಿಂದುಗಳಿಗೆ ನೆಮ್ಮದಿಯ ಉಸಿರನ್ನು ಬಿಡುವುದಕ್ಕೆ ಸಾಧ್ಯ.
ಸಂದೇಶ ಶೆಟ್ಟಿ ಆರ್ಡಿ
No comments:
Post a Comment