Friday 21 June 2013

ಸೌಕೂರು


ಪುಷ್ಪ ಪವಾಡ ಖ್ಯಾತಿಯ ಸೌಕೂರು ಮಾತೆ-ಮದುವೆಯ ಯೋಗ ಕೂಡಿಸುವ ಮಹಾತಾಯಿ
ಅತ್ಯಂತ ಪ್ರಾಚೀನವಾದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಡುಪಿ ಜಿಯ ಕಾರಣಿಕ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದೆ. ಈ ದೇವಸ್ಥಾನಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ.
ಸೌಕ್ಯ ಮುನಿಗಳು ಈ ಸ್ಥಳದಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಿದ ಕಾರಣದಿಂದ ಅವರ ಹೆಸರಿನಿಂದಲೆ ಕರೆಯಲಾಯಿತು. ಸೌಕ್ಯ ಮುನಿ ವಾಸವಾಗಿದ್ದ ಸೌಕ್ಯಪುರವೇ ಮುಂದೆ ಸೌಕೂರು ಎಂದು ಪ್ರಸಿದ್ದವಾಯಿತು. ಪರಾಶಕ್ತಿಯು ದುರ್ಗಾಸುರನನ್ನು ಕೊಂದು ಈ ಸ್ಥಳದಲ್ಲಿ ದೇವಿಯು ದುರ್ಗಾಪರಮೇಶ್ವರಿ ಅಮ್ಮನವರಾಗಿ ನೆಲೆಯಾಗಿದ್ದರು. ಈ ಮಹಾತಾಯಿಯ ಪವಾಡ ಅಪಾರ. ಈ ತಾಯಿಯು ಕಮಲೆ ಶಿಲೆಯ ಬ್ರಾಹ್ಮೀ ದುರ್ಗೆಯ ಅಕ್ಕನೆನ್ನುವ ಪ್ರತೀತಿ ಇದೆ. ಈಗಲೂ ಜನರು ಅದನ್ನು ನಂಬುತ್ತಿದ್ದಾರೆ. ಇವಳು ಹಿರಿಯವಳು, ಬ್ರಾಹ್ಮೀ ಕಿರಿಯವಳು ಎಂದು ಜನ ಜನಿತವಾದ ನಾಣ್ಣುಡಿಯೊಂದಿಗೆ ಬೆರೆತ ಐತಿಹ್ಯವಿದೆ. ದೇವಿಯು ಲಕ್ಷ್ಮೀ, ಕಾಳಿ ಮತ್ತು ಸರಸ್ವತಿಯ ಮೂರು ರೂಪವೊಂದಾಗಿ ತ್ರಿಶಕ್ತಿ ದೇವತೆಯಾಗಿ ತ್ರೈಲೋಕಪಾಲಕಿಯಾಗಿzಳೆ. ಇವಳ ಶಕ್ತಿ ಅಪಾರವಾದುದು. ಮಹಿಮೆ ಕೇಳಿದರೆ ಜನುಮವೇ ಪಾವನಮಯವಾಗುತ್ತದೆ. ಇವಳು ಪುಪ್ಷಪವಾಡ ಖ್ಯಾತಿಯ ದೇವತೆ. ಅಂದರೆ ಮದುವೆ ಸಂಬಂದಗಳನ್ನು ಈ ತಾಯಿಯ ಮುಡಿಯ ಮೇಲೆ ಇಟ್ಟು ಎಡ-ಬಲ ಕಡೆಯಿಂದ ಪ್ರಸಾದ ರೂಪದಲ್ಲಿ ಪುಷ್ಪ ಜರಿದರೆ ಶುಭ ಹಾಗೂ ಮುಂದುವರಿಸಬೇಕೆಂದು ಇಲ್ಲ ವಾದಲ್ಲಿ ಬೇಡವೆಂದು ತಿಳಿಯುವ ಮೂಲಕ ಮದುವೆಯ ಸಂಬಂದ ಮುಂದುವರೆಸುತ್ತಾರೆ.
ಸೌಕೂರು ದೇವಸ್ಥಾನದ ಗರ್ಭಗುಡಿಯಲ್ಲಿ ಏಕಪೀಠದ ಮೇಲೆ ಮೂರು ಲಿಂಗಗಳನ್ನು ಪ್ರತಿಷ್ಠಾಪಿಸಿzರೆ. ಅವು ದುರ್ಗಾ ದೇವಿಯ ಮಹಾಕಾಳಿ ಸ್ವರೂಪಿ, ಮಹಾಲಕ್ಷ್ಮೀ, ಮಹಾಸರಸ್ವತಿಯ ಪ್ರತೀಕಗಳಾಗಿವೆ. ಶ್ರೀ ದುರ್ಗಾಪರಮೇಶ್ವರಿ ಎಂದು ಕರೆಯುವ ಪಂಚಲೋಹದ ಅಲಂಕಾರ ಮೂರ್ತಿಯನ್ನು ಲಿಂಗಗಳ ಹಿಂಬದಿಯಲ್ಲಿ ಸ್ಥಾಪಿಸಿzರೆ. ಈ ಕ್ಷೇತ್ರದಲ್ಲಿ ಲಿಂಗ ಸ್ವರೂಪಿಯಾಗಿ ತ್ರಿಶಕ್ತಿ ಆವಿರ್ಭವಿಸಿರುವ ದೇವಿಯನ್ನು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರೆಂದು ಆರಾಸುತ್ತಾರೆ.
ಪುಷ್ಪ ಪವಾಡ ಖ್ಯಾತಿಯ ಮಾತೆ:
ಪುಷ್ಪ ಪವಾಡ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಭಕ್ತಾದಿಗಳ ಪ್ರಶ್ನೆ, ಪ್ರಸಾದ, ನೆಂಟಸ್ತಿಕೆಗಳ ಬಗ್ಗೆ ಹೂವಿನ ಪ್ರಸಾದ ನೋಡುವ ಖ್ಯಾತಿಯ ಕ್ಷೇತ್ರವಾಗಿದೆ. ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಿ ಮದುವೆಯ ಯೋಗ ಕೂಡಿಸುವ ಮಹಾತಾಯಿ ಎಂಬ ನಂಬಿಕೆ ಇದೆ. ದೇವಿಗೆ ಸಿಂಗಾರ ಗೊನೆ ಏರಿಸಿ ಅದರ ಮೇಲೆ ಹೂಗಳನ್ನಿಡುತ್ತಾರೆ. ಭಕ್ತರು ತಮ್ಮ ಕಾರ್ಯವನ್ನು ಉzಶಿಸಿ ಪ್ರಾರ್ಥಿಸಿಕೊಂಡು ದೇವಿಯ ಸನ್ನಿಯ ಪ್ರಸಾದ ಕೋರುತ್ತಾರೆ. ದೇವಿಯ ಮುಡಿಯಿಂದ ಹೂವಿನ ಪ್ರಸಾದವಾದಾಗ ಭಕ್ತಾಗಳು ಧನ್ಯತೆಯಿಂದ ನಮಸ್ಕರಿಸುತ್ತಾರೆ. ಪ್ರಸಾದದ ಪುಷ್ಪಗಳು ದೇವಿಯ ಮುಡಿಯಿಂದ ಎಡ ಬಲಗಳೆನ್ನದೆ ಎತ್ತ ಕಡೆ ಬಿದ್ದರೂ ಸಮ ಕಾರ್ಯ ಜಯ ಎಂದು ಭಕ್ತರು ನಂಬಿಕೆ. ಪುಷ್ಪ ಬೀಳದೆ ಇದ್ದರೆ ಆ ಕಾರ್ಯದ ಬಗ್ಗೆ ಪರಾಮರ್ಶಿಸಲು ಕಾರ್ಯ ಮುಂದೂಡುತ್ತಾರೆ.
ಇತರ ದೇವತೆಗಳು:
ದೇವಸ್ಥಾನದಲ್ಲಿ ಪರಿವಾರ ದೇವತೆಗಳಾಗಿ ಈಶ್ವರ, ಗಣಪತಿ, ವೀರಭದ್ರ, ಹುಲಿ ದೇವರುಗಳಿzರೆ. ಶಿರದಿಂದ ಎದೆಯ ಭಾಗದ ವರೆಗೆ ಮಾತ್ರ ಇರುವ ವೀರಭದ್ರ ದೇವರ ಅಪರೂಪದ ಶಿಲಾಮೂರ್ತಿಯೊಂದು ಇಲ್ಲಿದೆ. ವರ್ಣಮಯವಾದ ಬಾಗಿಲು ಬೊಬ್ಬರ್ಯ ಇಲ್ಲಿzನೆ. ವಿಶೇಷ ಪರ್ವಗಳಲ್ಲಿ ಬಾರಿಸುವ ಪುರಾತನ ಕಾಲದ ದೊಡ್ಡದೊಂದು ಗಂಟೆ ಇಲ್ಲಿದೆ.
ದೇವಾಲಯದ ಗರ್ಭಗುಡಿ ಸಂಪೂರ್ಣ ಶಿಲಾಮಯವಾಗಿ ಪೂರ್ವಾಭಿಮುಖವಾಗಿದೆ. ದೇವಸ್ಥಾನದ ಗೋಪುರ, ಶಿಖರವು ಶಿಲ್ಪಕಲೆಯ ವೈಭವ ನೋಡುವಂತಿದೆ. ಇಲ್ಲಿ ಅತೀ ಎತ್ತರದ ಧ್ವಜಸ್ತಂಭವು ದೇವಸ್ಥಾನದ ಸೌಂದರ್ಯಕ್ಕೆ ಮೆರುಗು ನೀಡಿದೆ. ಸೌಕೂರು, ಕಮಲಶಿಲೆ, ಕೊಲ್ಲೂರು ಅಮ್ಮನವರ ದೇವಸ್ಥಾನಗಳಲ್ಲಿ ಪರಸ್ಪರ ಸಾಮ್ಯಗಳಿದ್ದು ಜನ ಅಕ್ಕ-ತಂಗಿಯರ ದೇವಸ್ಥಾನ ಎಂದು ಭಕ್ತಿಯಿಂದ ಹೇಳುತ್ತಾರೆ. ಕ್ಷೇತ್ರದ ಒಳ ಪೌಳಿಯಲ್ಲಿ ಸುಮಾರು ಹತ್ತನೆ ಶತಮಾನಕ್ಕೆ ಸಲ್ಲುವ ಶಿಲಾ ಶಾಸನಗಳಿವೆ. ಒಳ ಸುತ್ತಿನ ಹೆಬ್ಬಾಗಿಲಿನ ಮಾಡಿಗೆ ತಾಮ್ರದ ಹೊದಿಕೆಯನ್ನು ವ್ಯವಸ್ಥೆಗೊಳಿಸಲಾಗಿದೆ.
ಸೌಕೂರು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸುಂದರವಾದ ಚತುರ್ಭುಜ ದುರ್ಗಾಪರಮೇಶ್ವರಿ ಅಮ್ಮನವರ ಉತ್ಸವ ಮೂರ್ತಿ ಇದೆ. ಇಷ್ಟೊಂದು ಪ್ರಖ್ಯಾತವಾದ ಈ ಪ್ರಾಚೀನ ದೇವಸ್ಥಾನವು ಇತ್ತೀಚೆಗೆ ಗರ್ಭಗುಡಿ ಹೊರತು ಪಡಿಸಿ ಸಂಪೂರ್ಣ ನವೀಕರಣವಾಗಿದೆ. ಕುಬ್ಜಾ ಹಾಗೂ ವಾರಾಹಿ ನದಿಗಳ ಸಂಗಮದ ಸಮೀಪದ ಎತ್ತರದ ಸ್ಥಳದಲ್ಲಿ ಸೌಕೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ನಿರ್ಮಿಸಲಾಗಿದೆ. ಸೌಕೂರು ಅಮ್ಮನವರ ಕ್ಷೇತ್ರದ ಪರಿಸರದಲ್ಲಿ ಜನುವಾರು ಕಳೆದು ಹೋದರೆ ಹುಲಿದೇವರಿಗೆ ವಿವಿಧ ರೀತಿಯ ಹರಕೆ ಸಲ್ಲಿಸುವ ಪದ್ಧತಿಯಿದೆ.
ದೇವಸ್ಥಾನದ ಪೂರ್ವ ದಿಕ್ಕಿನಲ್ಲಿ ಅಶ್ವತ್ಥಕಟ್ಟೆ ಇದ್ದು, ಉತ್ತರ ದಿಕ್ಕಿನಲ್ಲಿ ನಾಗ ಸಾನ್ನಿಧ್ಯವಿದೆ. ನಾಗ ಸಾನ್ನಿಧ್ಯದ ಕೆಳಗೆ ಸ್ವಲ್ಪ ದೂರದ ಜಗದಲ್ಲಿ ಮೇಲುಗಡೆ ಸೀಳಿದ ಶಿಲೆಕಲ್ಲು ಇದೆ. ಇದನ್ನು ಶ್ರೀದೇವರ ಮೂಲಸ್ಥಾನ ಎಂದು ಭಾವಿಸಿ, ಉತ್ಸವದ ದಿನಗಳಲ್ಲಿ ಇಲ್ಲಿಯೂ ಪೂಜೆ ಸಲ್ಲಿಸುವ ಪದ್ಧತಿ ಇದೆ. ಸೌಕೂರು, ಗುಲ್ವಾಡಿ ಗ್ರಾಮದ ಕೂಡು ಗ್ರಾಮವಾಗಿದ್ದು ಪುರಾತನ ಗುಲ್ವಾಡಿ ಕೋಟೆಯ ಅವಶೇಷಗಳ ಜಗದಿಂದ ಸ್ವಲ್ಪವೇ ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.
೧೭೮೨ ರ ಮೈಸೂರು ಅರಸರ ಸೇನೆಯ ಬಸ್ರೂರು ದಾಳಿಯ ನಂತರ ಗುಲ್ವಾಡಿ ನಿರ್ಜನವಾಯಿತು. ಕೋಟೆಯ ಒಳಗಿದ್ದ ಗೋಪಾಲಕೃಷ್ಣ ದೇವಸ್ಥಾನ ಎರಡಂಕಣದ ಕಟ್ಟಡವಿದ್ದರೂ-ದೇವರ ಮೂರ್ತಿ ಮಾತ್ರ ನಾಪತ್ತೆಯಾಗಿದೆ. ಗುಲ್ವಾಡಿ ಕೋಟೆಯ ಸ್ಥಳದ ಸಮೀಪ ಇರುವ ಆಂಜನೇಯ ದೇವಸ್ಥಾನದಲ್ಲಿ ಸಾಧಾರಣ ಎರಡೂವರೆ ಅಡಿ ಎತ್ತರದ ಶಿಲಾ ಪ್ರತಿಮೆ ಈಗಲೂ ಇದೆ. ಸೌಕೂರು ದೇವಸ್ಥಾನದ ಇತಿಹಾಸದಲ್ಲಿ ಇದನ್ನು ತಾತಯ್ಯನ ಮಠ ಎಂದು ಗುರುತಿಸಲಾಗಿದೆ. ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಿಯ ಆರಾಧಕರಾಗಿ-ಗುಲ್ವಾಡಿ ಕೋಟೆಯಲ್ಲಿದ್ದ ರಾಮ ಕ್ಷತ್ರಿಯ ಸೇನೆಯ ದಂಡಿಗೆಗಳ ಯೋಧರು-ಕೋಟೆಯ ಪತನದ ನಂತರ ಕುಟುಂಬ ಸಹಿತ ಕುಂದಾಪುರಕ್ಕೆ ವಲಸೆ ಹೋಗಿದ್ದರು ಎಂದು ತಿಳಿದು ಬರುತ್ತದೆ. ಇದೇ ಕಾಲದಲ್ಲಿ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಮಾರ್ಗದಲ್ಲಿದ್ದ  ಕಂಬದಕೋಣೆ, ಕೆರ್ಗಾಲು ಬಳಿಯ ಹಳಗೇರಿಗಳು ಸೇನಾ ಪಾಳೆಯ ಮತ್ತು ಹೊಸ ಕೋಟೆಗಳು ಶತ್ರುಗಳ ಹಿಂಸೆಗೆ ತುತ್ತಾಗಿ ಜರ್ಜರಿತವಾಯಿತು.
ಹಳಗೇರಿಯ ನದಿ ಮುಖಜ ಭೂಮಿಯಲ್ಲಿರುವ ಅತ್ಯಂತ ಪುರಾತನವಾದ ಶಿಲಾಮಯ ಕುಕ್ಕೇಶ್ವರ ದೇವಸ್ಥಾನದ ಇತಿಹಾಸದಲ್ಲಿ ಇದನ್ನು ಉಖಿಸಿ, ಹಳಗೇರಿ ಸೇನಾ ಬೀಡು ಖಾಲಿಯಾದ ಪ್ರಸಂಗವನ್ನು ಕೂಡ ಪ್ರಸ್ತಾಪಿಸಲಾಗಿದೆ. ಕನ್ನಡ ಕರಾವಳಿಯ ಪ್ರದೇಶ ಪುಣ್ಯ ಕ್ಷೇತ್ರಗಳ ಬೀಡು, ವಿಜಯನಗರ ಸಾಮ್ರಾಜ್ಯದ ನಂತರ ಕೆಳದಿಯರಸರ ಆಳ್ವಿಕೆಯ ಕಾಲದಲ್ಲಿ ರಾಜಾಶ್ರಯದೊಡನೆ ಶಿಲ್ಪಕಲಾ ವೈಭವದಿಂದ ಮೆರೆದ ಹಲವು ದೇವಸ್ಥಾನಗಳು ಇಲ್ಲಿವೆ.
ಶ್ರೀರಂಗ ಪಟ್ಟಣದ ಯುದ್ಧದ ನಂತರ ಕನ್ನಡ ಕರಾವಳಿ ಇಂಗ್ಲಿಷರ ಆಡಳಿತಕ್ಕೊಳಪಟ್ಟಿದ್ದು, ಕೆನರಾ ಜಿಯ ಪ್ರಥಮ ಕಲೆಕ್ಟರ್ ಲೋರ್ಡ್ ಮುನ್ರೋ ಕಾಲದಲ್ಲಿಯೆ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸರ್ಕಾರ ಮನ್ನಣೆ ನೀಡಿ ವಾರ್ಷಿಕ ತಸ್ತೀಕು ಪಟ್ಟಿಯಲ್ಲಿ ನಮೂದಿಸಲಾಗಿದೆ ಎಂದು ತಿಳಿಯುತ್ತದೆ.
ಸೌಕೂರು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇನ್ನೂರು ವರ್ಷಗಳಿಂದ ಕಲಾ ಸೇವೆ ಮಾಡುತ್ತ ದೇವಿಯ ನೆನಪನ್ನು ಸದಾ ಮಾಡುತ್ತಿದೆ. ಮಹಾದೇವಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರನ್ನು ನಂಬಿದವರಿಗೆ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾಳೆ. ಇವಳ ಮಹಿಮೆಯನ್ನು ತಿಳಿಯಲು ಶ್ರೀ ದೇವಿಯನ್ನು ಒಮ್ಮೆ ಕಣ್ತುಂಬ ನೋಡಿ ಕೃತಾರ್ಥರಾಗಿ, ಭಗವತಿ ದುರ್ಗೆಯ ಪಾದಾರವಿಂದಗಳಿಗೆ ಎರಗಿ ಅಮ್ಮನ ಕೃಪಾಶೀರ್ವಾದವನ್ನು ಪಡೆಯಿರಿ.

ಸ್ಥಳಕ್ಕೆ ದಾರಿ: ದೇವಿಯ ತಾಣವನ್ನು ಸಂದರ್ಶಿಸಲು ಕೊಲ್ಲೂರು ಮೂಕಾಂಬಿಕಾ ಅಮ್ಮನವರು ಮತ್ತು ಬ್ರಾಹ್ಮೀ ದುರ್ಗೆಯನ್ನು ನೋಡಿ ಅದೇ ಮಾರ್ಗವಾಗಿ ನೇರಳಕಟ್ಟೆಯಿಂದ ಶ್ರೀ ಸೌಕೂರು ದೇವಿಯ ಸಾನಿಧ್ಯವನ್ನು ಕಾಣಬಹುದು. ಕುಂದಾಪುರದಿಂದ ತಲ್ಲೂರು-ನೇರಳಕಟ್ಟೆ ಮಾರ್ಗದಲ್ಲಿ ಸಾಗಿದಾಗ ಗುಲ್ವಾಡಿ ಸಮೀಪದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಭವ್ಯ ಗೋಪುರ ಗೋಚಾರವಾಗುತ್ತದೆ.
ಭಕ್ತರೇ ದೇವಿಯನ್ನೊಮ್ಮೆ ಕಣ್ಣಾರೆ ನೋಡಿ-ನಿಮ್ಮ ಜೀವನ ಪಾವನವಾಗಿಸಿಕೊಳ್ಳಿ.


ಸೋರುತಿಹುದು ಗ್ರಂಥಾಲಯದ ಮಾಳಿಗೆ-ವಿಶ್ವವಿದ್ಯಾನಿಲಯ ಕಾಲೇಜಿನ ಅವ್ಯವಸ್ಥೆ.
ಮಂಗಳೂರು: ಪ್ರಾಥಮಿಕ-ಪ್ರೌಡಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕು ಗೊಳಿಸುತ್ತಿರುವುದನ್ನು ಮನಗಂಡು, ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಪ್ರಯತ್ನ ನಡೆಸುತ್ತಿದೆ. ಇನ್ನೊಂದೆಡೆ ವಿದ್ಯಾರ್ಜನೆ ಮಾಡಬೇಕೆನ್ನುವ ನೆಲೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದರೂ, ಉನ್ನತ ಶಿಕ್ಷಣ ನೀಡುವ ಕಾಲೇಜುಗಳು ಅವ್ಯವಸ್ಥೆಯ ಆಗರಗಳಾಗುತ್ತಿರುವುದಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಎಂದಾಗ ಆಶ್ಚರ್ಯ ಪಡಲೇ ಬೇಕು. 
ಮಂಗಳೂರು ನಗರದ ಹೃದಯ ಭಾಗದಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಆಡಳಿತವಿದ್ದಾಗ ಕಾರ್ಯಾರಂಭಗೊಳಿಸಿತ್ತು. ೧೮೬೮ ರಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಪ್ರಾರಂಭಗೊಂಡಾಗ ಗ್ರಂಥಾಲಯ ರಚಿಸಲಾಗಿದ್ದು, ಅತ್ಯಂತ ಪುರಾತನವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ೨೦೦೦ದಲ್ಲಿ ವಿವಿ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದ ಅಪತ್ಯಕ್ಕೆ ವಹಿಸಿದ ನಂತರ ನೂತನ ಗ್ರಂಥಾಲಯವನ್ನು ಕಾಲೇಜಿನ ಹಿಂಬಾಗದಲ್ಲಿ ನಿರ್ಮಾಣ ಮಾಡಲಾಗಿದೆ.
ತರ್ಕಶಾಸ್ತ್ರ, ಇತಿಹಾಸ, ಆಡಳಿತಾತ್ಮಕ, ಕಾನೂನು, ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯಕ್ಕೆ ಸಂಬಂಸಿದ ಪುಸ್ತಕಗಳು ಸೇರಿದಂತೆ ಕಲೆ, ಸಾಹಿತ್ಯ, ಕಾದಂಬರಿ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭ್ಯವಿದೆ. ಅತ್ಯಂತ ಹಳೆಯದಾದ ನಿಘಂಟುಗಳ ಸಂಗ್ರಹವು ಕೂಡ ಈ ಗ್ರಂಥಾಲಯದಲ್ಲಿದ್ದು, ವಿದ್ಯಾರ್ಥಿಗಳ ಜ್ಞಾನದ ವೃದ್ಧಿಗೆ ಸಹಕಾರಿಯಾಗಿದೆ. ಕೇರಳದ ಗೋವಿಂದ ಕೃಷ್ಣ ಚೆಟ್ಟೂರ್ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪೂರೈಸಿ, ಈ ಕಾಲೇಜಿನ ಪ್ರಾಂಶುಪಾಲರಾದ ಸಂದರ್ಭ ಅಲ್ಲಿ ಪ್ರಕಟಗೊಂಡ ಅನೇಕ ಪುಸ್ತಕಗಳನ್ನು ಇಲ್ಲಿಗೆ ತರಿಸಿಕೊಂಡಿದ್ದರು. ಈಗಲೂ ಅವರ ಸಂಗ್ರಹಗಳು ಕಾಲೇಜಿನ ಗ್ರಂಥಾಲಯದಲ್ಲಿರುವುದು ವಿದ್ಯಾರ್ಥಿಗಳ ಸೌಭಾಗ್ಯ. ವಿದ್ಯಾರ್ಥಿಗಳಿಗೆ ಕಾಲೇಜು ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಯಲ್ಲಿಯೂ, ಪ್ರಸ್ತುತ ರಾಜಕೀಯ, ಕ್ರೀಡೆ, ಸಾಹಿತ್ಯ ಇತ್ಯಾದಿ ವಿಷಯಗಳನ್ನು ತಿಳಿಯಲು ಕನ್ನಡ, ಇಂಗ್ಲೀಷ್, ಹಿಂದಿ, ಮಲೆಯಾಳಂ ಭಾಷೆಯ ಪತ್ರಿಕೆಗಳು ಇಲ್ಲಿ ಲಭ್ಯವಿದೆ.
ಸೋರುತಿಹುದು ಗ್ರಂಥಾಲಯದ ಮಾಳಿಗೆ:
ಸಂತ ಶಿಶುನಾಳ ಷರೀಪರ ಸೋರುತಿಹುದು ಮನೆಯ ಮಾಳಿಗೆ...ಎನ್ನುವ ಪದ್ಯವನ್ನು ಯಥಾವತ್ತಾಗಿ ಕಾಲೇಜಿನ ಆಡಳಿತ ಮಂಡಳಿ ಪಾಲನೆ ಮಾಡಿದಂತಿದೆ. ದೂರದ ಊರುಗಳಿಂದ ಹಾಗೂ ಅನ್ಯರಾಜ್ಯಗಳಿಂದ ವಿದ್ಯಾರ್ಜನೆಗಾಗಿ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ. ದಕ್ಷಿಣ ಕನ್ನಡ ಮಾತ್ರವಲ್ಲದೇ ಇತರ ಜಿಲ್ಲೆಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದುಕೊಂಡು ಈ ಕಾಲೇಜ್‌ನಲ್ಲಿ ಶಿಕ್ಷಣ ಮುಂದುವರಿಸುತ್ತಿದ್ದಾರೆ. ಗ್ರಂಥಾಲಯ ವಿಶಾಲವಾಗಿದ್ದು, ಪುಸ್ತಕಗಳನ್ನಿಡಲು ಮರದಿಂದ ರಚಿಸಿ ಕಪಾಟು, ವಾಚನಾಲಯ ಎಲ್ಲವನ್ನು ಆಧುನಿಕತೆಗೆ ತಕ್ಕಂತೆ ಅಳವಡಿಸಿ ಕೊಂಡಿದ್ದಾರೆ. ಗ್ರಂಥಾಲಯ ನಿರ್ಮಾಣವಾಗಿ ಹಲವು ವರ್ಷಗಳು ಕಳೆದು, ಪ್ರತಿ ಬಾರಿ ರಿಪೇರಿಯಾಗುತ್ತಿದೆಯಾದರೂ, ಗ್ರಂಥಾಲಯದೊಳಗೆ ಮಾತ್ರ ನೀರು ನಿಂತುಕೊಂಡಿರುತ್ತದೆ. ಜನಾರ್ದನ ಎನ್ನುವ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಾಗಿ ಅಲ್ಲಲ್ಲಿ ಸೋರುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಾ, ಪುಸ್ತಕಗಳನ್ನು ಒದಗಿಸುತ್ತೇವೆ ಎನ್ನುವ ಕಾಲೇಜ್ ಗ್ರಂಥಾಲಯದ ಅವಸ್ಥೆ ಹೀಗಿದೆ.
ಸಾವಿರಾರು ರೂಪಾಯಿ ಮೌಲ್ಯದ ಯಾವುದೇ ಗ್ರಂಥಾಲಯದಲ್ಲಿಯೂ ಕಾಣಸಿಗದ ಸುಮಾರು ೬೩,೦೦೦ಕ್ಕೂ ಅಕ ಅತಿ ಪುರಾತನ ಕೃತಿಗಳು, ಗ್ರಂಥಗಳು ಇಲ್ಲಿ ದೊರಕುತ್ತಿದ್ದರೂ, ಅವುಗಳ ರಕ್ಷಣೆಗೆ ಸರಿಯಾದ ಸೂರು ಮಾತ್ರ ಇಲ್ಲಿಲ್ಲಾ. ಎಷ್ಟೆ ಅತ್ಯಾಧುನಿಕ, ಅತಿ ಹೆಚ್ಚಿನ ಮೌಲ್ಯದ ಪುಸ್ತಕವಾದರೂ ಕೂಡ, ಅದಕ್ಕೆ ನೀರಿನಂಶ ತಾಗಿದರೆ ಅವುಗಳ ಬಾಳಿಕೆ ಕಡಿಮೆಯಾಗುತ್ತದೆ. ಹೀಗಿರುವಾಗ ಕೊಠಡಿಯೊಳಗೆ ಪುಸ್ತಕಗಳನ್ನು ಜೋಡಿಸಿರುವ ಕಪಾಟಿನ ಮೇಲೆ ನೀರು ಸೋರುತ್ತಿದ್ದು, ತಗಡಿನ ಸೀಟನ್ನು ಅಡ್ಡಲಾಗಿ ನಿಲ್ಲಿಸಲಾಗಿದೆ. ಎಡಬಿಡದೆ ಮಳೆ ಸುರಿದರೆ ಹೊರಗಡೆ ಇರುವಷ್ಟೆ ನೀರು ಕೊಠಡಿಯೊಳಗೆ ತುಂಬಿಕೊಳ್ಳುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೊಠಡಿಯೊಳಗೂ ಕೊಡೆಯನ್ನು ಹಿಡಿದುಕೊಂಡು ಅಧ್ಯಯನ ಮಾಡುವ ಪರಿಸ್ಥಿತಿ ವಿದ್ಯಾರ್ಥಿಗಳ ಮುಂದಿದೆ.
ಕೇರಳದಿಂದ ಇಲ್ಲಿಗೆ ಬಂದು ಇದೀಗ ದ್ವಿತೀಯ ವರ್ಷದಲ್ಲಿ  ಅಭ್ಯಾಸ ಮಾಡುತ್ತಿದ್ದೇವೆ. ಕಳೆದ ವರ್ಷವೂ ಕೂಡ ಇದೇ ಪರಿಸ್ಥಿತಿ ಇತ್ತು. ಕಾಲೇಜಿನ ಹಲವಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿ ಸಂಘಟನೆಗಳ ಮೂಲಕ ಹೋರಾಟ ನಡೆಸಿದ್ದೆವು. ಆದರೆ ಕೆಲವೊಂದು ಸಮಸ್ಯೆ ಪರಿಹಾರವಾಗಿದ್ದರೂ, ಗ್ರಂಥಾಲಯದ ಸಮಸ್ಯೆ ಹಾಗೆಯೇ ಇದೆ ಎನ್ನುವುದು ವಿದ್ಯಾರ್ಥಿಗಳ ಅಳಲು.
ತಾರಸಿಯ ಒಳಪದರ ಕಳಪೆ ಕಾಮಗಾರಿಯಿಂದ  ಕಿತ್ತು ಬರುತ್ತಿದ್ದು, ಮಳೆಗಾಲದಲ್ಲಿ ನೀರು ಸೋರುತ್ತದೆ. ಕಳೆದ ಐದಾರು ವರ್ಷಗಳಿಂದ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಸಮಸ್ಯೆ ಈಗಲೂ ಹಾಗೆ ಇದೆ ಎನ್ನುವುದು ಸಿಬ್ಬಂದಿಗಳ ಉತ್ತರ.
ಕಾಲೇಜಿನ ಆಡಳಿತ ಮಂಡಳಿಯಿಂದ ಇಲ್ಲಿಯವರೆಗೆ ಮಾದ್ಯಮಗಳಿಗೆ ಒಳಪ್ರವೇಶಕ್ಕೆ ಅನುಮತಿ ನೀಡಿಲ್ಲ. ಒಳಪ್ರವೇಶಕ್ಕೆ ಪ್ರಾಂಶುಪಾಲರ ಅನುಮತಿ ಪಡೆದುಕೊಂಡು ಹೋಗಬೇಕು. ಯಾವುದೇ ಮಾಹಿತಿಯನ್ನಾದರೂ ಅಲ್ಲಿಯೇ ನೀಡುತ್ತಾರೆ ವಿನಃ ಪ್ರವೇಶಕ್ಕೆ ಅವರಿಂದ ಅನುಮತಿ ಸಿಗುವುದಿಲ್ಲ. ಪ್ರತಿವರ್ಷವೂ ರಿಪೇರಿಗೆಂದು ಹಣ ಕಾದಿರಿಸಿ, ರಿಪೇರಿ ಮಾಡಲಾಗುತ್ತದೆ ಎನ್ನುವುದು ಲೈಬ್ರಿರಿಯನ್‌ರ ಅಭಿಪ್ರಾಯ.
ಸಂಬಂಸಿದ ಇಂಜಿನಿಯರಿಂಗ್ ವಿಭಾಗ ಸಂಪರ್ಕಿಸಿದರೆ ಕಾಲೇಜಿನಿಂದ ಮನವಿ ಬಂದಿದೆ. ಇಲ್ಲಿಯವರೆಗೆ ಗ್ರಂಥಾಲಯ ರಿಪೇರಿಗೆಂದು ಪ್ರತ್ಯೇಕ ಟೆಂಡರ್ ಕರೆದಿಲ್ಲ. ಕಳೆದ ಬಾರಿ ಮನವಿ ಮಾಡಿದ್ದರೂ, ಅದರ ಕುರಿತು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಅವರ ಪ್ರತ್ಯುತ್ತರ.
ವಿಶ್ವವಿದ್ಯಾನಿಲಯ ಸ್ವಾಮ್ಯಕ್ಕೆ ಒಳಪಟ್ಟ ವಿಶ್ವವಿದ್ಯಾನಿಲಯ ಕಾಲೇಜು ಅಭಿವೃದ್ಧಿ ಕಾಣುತ್ತಿದೆ. ನೂತನ ಕಟ್ಟಡಗಳ ಕಾಮಗಾರಿ ಪ್ರಾರಂಭವಾಗಿದೆ. ಹಳೆಯ ಕಟ್ಟಡ ಸುಂದರಗೊಳಿಸಲು ಕೆಲವೊಂದು ಕೊಠಡಿಯನ್ನು ಪುನರ್ರಚಿಸಲಾಗುತ್ತಿದೆ. ಆದರೆ ಸಾವಿರಾರು ರೂಪಾಯಿ ವೆಚ್ಚದ ಪುಸ್ತಕಗಳಿಗೆ ರಕ್ಷಣೆಯಿಲ್ಲ. ಕೇಂದ್ರ ಸಚಿವ ಎಂ.ವೀರಪ್ಪ ಮೊಲಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿದ್ಯಾಭ್ಯಾಸ ಮಾಡಿದ ಕಾಲೇಜಿಗೆ ಇಂತಹ ಪರಿಸ್ಥಿತಿ. ವಿದ್ಯಾರ್ಜನೆಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಹಾಗೂ ಗ್ರಂಥಾಲಯದಲ್ಲಿರುವ ಪುಸ್ತಕಗಳ ರಕ್ಷಣೆಗೆ ವಿಶ್ವವಿದ್ಯಾನಿಲಯ ಕಾಲೇಜು ಆಡಳಿತ ಮಂಡಳಿ ಶ್ರಮಿಸಬೇಕಿದೆ. ಇನ್ನಾದರೂ ಗ್ರಂಥಾಲಯದ ಸೋರುವಿಕೆಗೆ ಮುಕ್ತಿ ದೊರಕಿತೇ ಎನ್ನುವ ನಿರೀಕ್ಷೆ ವಿದ್ಯಾರ್ಥಿಗಳದು.


ಎನ್‌ಸಿವಿಟಿ/ಎಸ್‌ಸಿವಿಟಿ ಪ್ರಮಾಣಪತ್ರ-ಗೊಂದಲದಲ್ಲಿ ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು.
ಮಂಗಳೂರು: ಸರಕಾರಿ ಶಿಕ್ಷಣ ಸಂಸ್ಥೆಗಳೆಂದಾಗ ಅಚ್ಚರಿಯನ್ನು ವ್ಯಕ್ತಪಡಿಸುವವರೇ ಅಕವಾಗಿರುವ ಕಾಲಘಟ್ಟದಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಇಲಾಖೆಗಳು ಮುಂದುವರಿಯುತ್ತಿಲ್ಲದಿರುವುದು ಬೇಸರದ ಸಂಗತಿ. ಸರಕಾರಿ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯಾಸಗೈದ ಒಂದು ಕೇಂದ್ರದ ವಿದ್ಯಾರ್ಥಿಗಳಿಗೆ ರಾಜ್ಯದ ಇತರೆಡೆ ಅದುವೇ ಸರಕಾರಿ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಪ್ರಮಾಣಪತ್ರದಲ್ಲಿ ಬದಲಾವಣೆಯಾದರೆ ವಿದ್ಯಾರ್ಥಿಗಳಿಗೆ ಹೇಗಾಗಬೇಡ..ಇದು ಮಂಗಳೂರಿನ ಉದ್ಯೋಗ ಮತ್ತು ತರಬೇತಿ ಸಂಸ್ಥೆಯ(ಐಟಿಐ) ದುರಂತ.
ರಾಜ್ಯದಲ್ಲಿ ಒಟ್ಟು ೧೫೮ ಉದ್ಯೋಗ ಮತ್ತು ತರಬೇತಿ ಸಂಸ್ಥೆಗಳಿದ್ದು ಅದರಲ್ಲಿ ೨೨ ಮಹಿಳಾ ಐಟಿಐ ಕಾಲೇಜುಗಳಿವೆ. ಉಳಿದಂತೆ ೧೩೬ ಐಟಿಐ ಕಾಲೇಜುಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ.೩೩ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಈ ಐಟಿಐ ಕಾಲೇಜುಗಳು ಡೈರೆಕ್ಟೊರೇಟ್ ಜನರಲ್ ಆಫ್ ಎಂಫ್ಲಾಯ್‌ಮೆಂಟ್ ಅಂಡ್ ಟ್ರೈನಿಂಗ್ (ಡಿಜಿಇಟಿ)ನಲ್ಲಿ ಸದಸ್ಯತ್ವವನ್ನು ಪಡೆಯಬೇಕಿದೆ. ಸದಸ್ಯತ್ವ ಪಡೆದ ಸಂಸ್ಥೆಗಳಲ್ಲಿ ನ್ಯಾಶನಲ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್ ಪ್ರಮಾಣ ಪತ್ರ ನೀಡಲಾಗುತ್ತದೆ. ಇದೇ ರೀತಿ ರಾಜ್ಯ ಮಟ್ಟದಲ್ಲಿ ಸ್ಟೇಟ್ ಕೌನಿಲ್ಸ್ ಆಫ್ ವೆಕೇಷನಲ್ ಟ್ರೈನಿಂಗ್ ಪ್ರಮಾಣಪತ್ರವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಎನ್‌ಸಿವಿಟಿ ಹಾಗೂ ಎಸ್‌ಸಿವಿಟಿ ಎರಡು ಪ್ರಮಾಣಪತ್ರಗಳಲ್ಲಿಯೂ ವ್ಯತ್ಯಾಸವಿದೆ.
ಡಿಜಿಇಟಿಯಿಲ್ಲಿ ಸದಸ್ಯತ್ವ ಪಡೆಯಲು ಸಂಸ್ಥೆಗೆ ತನ್ನದೇ ಆದ ಪಠ್ಯಕ್ರಮವನ್ನು ಆಯಾ ವಿಷಯಗಳಿಗೆ ಸಂಬಂಸಿದಂತೆ ಸೂಚಿಸುತ್ತದೆ. ಅವರು ವಿಸಿದ ವಿವಿಧ ಕೋರ್ಸ್‌ಗಳಿಗೆ ಬೇಕಾಗುವ ಉಪಕರಣಗಳನ್ನು ಖರೀದಿಸಿದಾಗ ಸಂಸ್ಥೆಗೆ ಸದಸ್ಯತ್ವ ಸಮಿತಿಯು ಬಂದು ಅವರು ಯೆಸ್ ಎನ್ನುವ ಉತ್ತರ ನೀಡಿದಾಗ ಸಂಸ್ಥೆಯಲ್ಲಿ ಎನ್‌ಸಿವಿಟಿ ಪ್ರಮಾಣಪತ್ರ ನೀಡುವುದಕ್ಕೆ ಯೋಗ್ಯವಾಗಿರುತ್ತದೆ. ಕೆಲವು ಸಂಸ್ಥೆಗಳಲ್ಲಿ ಘಟಕಗಳಿಗೆ ವಹಿಸಿಕೊಡುವುದರಿಂದ ಒಂದು ವರ್ಷದ ವಿದ್ಯಾರ್ಥಿಗಳಿಗೆ ಎನ್‌ಸಿವಿಟಿ, ಇನ್ನೊಂದು ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಎಸ್‌ಸಿವಿಟಿ ಪ್ರಮಾಣ ಪತ್ರ ಸಿಗುತ್ತದೆ.
ಮಂಗಳೂರಿನ ಐಟಿಐ ಕಾಲೇಜು:
ನಗರದ ಕೆಪಿಟಿಯಲ್ಲಿರುವ ಸರಕಾರಿ ಐಟಿಐ ಕಾಲೇಜಿನಲ್ಲಿ ೬ ತಿಂಗಳು, ೧ವರ್ಷ ಹಾಗೂ ೨ ವರ್ಷದ ವೃತ್ತಿ ತರಬೇತಿಗಳು ಸೇರಿದಂತೆ ಒಟ್ಟು ೧೪ ಕೋರ್ಸ್‌ಗಳಿಗೆ ಒಟ್ಟು ೪೬೨ ವಿದ್ಯಾರ್ಥಿಗಳು ಇದರ ಅವಕಾಶವನ್ನು ಪಡೆದುಕೊಳ್ಳುತ್ತಿದ್ದಾರೆ. ಸಂಸ್ಥೆಯಲ್ಲಿ ೧೪ ಕೋರ್ಸ್‌ಗಳು ಎನ್‌ಸಿವಿಟಿ ಪ್ರಮಾಣ ಪತ್ರ ಪಡೆದುಕೊಂಡಿದೆ ಎಂದು ಶಿಕ್ಷಕ ವರ್ಗ ತಿಳಿಸುತ್ತಿದ್ದಾರೆ. ಆದರೆ ಮೆಕ್ಯಾನಿಕಲ್ ರೆಫ್ರಿಜರೇಶನ್ ಅಂಡ್ ಏರ್ ಕಂಡಿಷನಿಂಗ್(ಎಂಆರ್‌ಎಸಿ) ನಲ್ಲಿ ಅಭ್ಯಸಿಸುತ್ತಿರುವ ೧೭ ವಿದ್ಯಾರ್ಥಿಗಳಿಗೆ ಮಾತ್ರ ರಾಜ್ಯ ಸಮಿತಿ ವೃತ್ತಿಪರ ತರಬೇತಿ(ಎಸ್‌ಸಿವಿಟಿ)ಪ್ರಮಾಣಪತ್ರ ಪಡೆದುಕೊಳ್ಳುತ್ತಿದ್ದಾರೆ. ಉಳಿದ ವಿದ್ಯಾರ್ಥಿಗಳಂತೆ ತರಗತಿಗೆ ಹಾಜರಾಗಿ, ಅವರು ನೀಡಿದಷ್ಟೆ ಶುಲ್ಕವನ್ನು ನೀಡಿದ್ದರೂ, ಇವರು ಪಡೆದುಕೊಳ್ಳುತ್ತಿರುವುದು ಎಸ್‌ಸಿವಿಟಿ ಪ್ರಮಾಣಪತ್ರ.
ಏನಿದು ಎನ್‌ಸಿವಿಟಿ ಹಾಗೂ ಎಸ್‌ಸಿವಿಟಿ
ನ್ಯಾಶನಲ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್(ಡಿಜಿಇಟಿ) ಹಾಗೂ ಸ್ಟೇಟ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್(ಎಸ್‌ಸಿವಿಟಿ) ಎನ್ನುವುದಾಗಿದ್ದು, ಎನ್‌ಸಿವಿಟಿ ರಾಷ್ಟ್ರೀಯ ಮಾನ್ಯತೆ ಪಡೆದ ಪ್ರಮಾಣಪತ್ರವಾಗಿದೆ. ಎಸ್‌ಸಿವಿಟಿ ರಾಜ್ಯಮಟ್ಟದಲ್ಲಿ ನೀಡುವ ಪ್ರಮಾಣಪತ್ರವಾಗಿದ್ದು, ಇದನ್ನು ಪಡೆದವರು ಕೇಂದ್ರ ಸರಕಾರದ ರೈಲ್ವೆಯಂತಹ ಯಾವುದೇ ಇಲಾಖೆಯಲ್ಲಿಯೂ ಕೆಲಸ ಪಡೆಯಲು ಅರ್ಹರಾಗಿರುವುದಿಲ್ಲ. ಉಳಿದಂತೆ ಖಾಸಗಿ ಸಹಭಾಗಿತ್ವದ ಯಾವುದೇ ಸಂಸ್ಥೆಯಲ್ಲಿ ದೇಶದ ಯಾವುದೇ ಭಾಗದಲ್ಲಿ ಇವರು ಕೆಲಸ ಮಾಡಲು ಅರ್ಹರಾಗಿತ್ತಾರೆ. ಅದೇ ರೀತಿ ಎನ್‌ಸಿವಿಟಿ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯ ಸರಕಾರ ಯಾವುದೇ ಇಲಾಖೆಯಲ್ಲಿಯೂ ಸೇವೆ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚಾಗಿ ವಿದ್ಯಾರ್ಥಿಗಳು ರೈಲ್ವೆ ಇಲಾಖೆಗೆ ಉದ್ಯೋಗಗಳಿಗೆ ಆಸಕ್ತರಾಗಿದ್ದು, ಎಸ್‌ಸಿವಿಟಿ ಪ್ರಮಾಣಪತ್ರದಿಂದ ಅವರ ಭವಿಷ್ಯದ ಕನಸು ನನಸಾಗದೇ ಉಳಿಯುತ್ತದೆ. ಇವರ ಜೂನಿಯರ್ ಬ್ಯಾಚ್‌ನ ವಿದ್ಯಾರ್ಥಿಗಳು ಎನ್‌ಸಿವಿಟಿ ಪ್ರಮಾಣಪತ್ರಕ್ಕೂ, ೨೦೧೩ನೇ ಸಾಲಿನಲ್ಲಿ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳು ಎಸ್‌ಸಿವಿಟಿಗೆ ಪ್ರಮಾಣಪತ್ರ ಪಡೆದುಕೊಳ್ಳುತ್ತಾರೆ.
ಯಾಕೀ ಸಮಸ್ಯೆ:
ಎಂಆರ್‌ಎಸಿ ವಿಭಾಗದಲ್ಲಿ ಎರಡು ಘಟಕಗಳಿದ್ದು, ಒಂದು ಘಟಕ ಈಗಾಗಲೇ ಡಿಜಿಇಟಿಯಿಂದ ಸದಸ್ಯತ್ವ ಪಡೆದುಕೊಂಡಿದ್ದು, ಆ ಘಟಕದಲ್ಲಿರುವ ವಿದ್ಯಾರ್ಥಿಗಳು ಎನ್‌ಸಿವಿಟಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಡಿಜಿಇಟಿ ಸದಸ್ಯತ್ವ ಪಡೆಯದ ಇನ್ನೊಂದು ಘಟಕದಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಎಸ್‌ಸಿವಿಟಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ.
೧೪ ವೃತ್ತಿ ತರಬೇತಿಗಳಿರುವ ಸಂಸ್ಥೆಗೆ ೪೬ ಶಿಕ್ಷಕರು ಅಗತ್ಯವಿದ್ದರೂ, ಪ್ರಸ್ತುತ ೨೦ ಶಿಕ್ಷಕರಿದ್ದಾರೆ. ಹಾಜರಾತಿ ಪುಸ್ತಕದಲ್ಲಿ ೨೨ ಶಿಕ್ಷಕರನ್ನು ತೋರಿಸಲಾಗುತ್ತಿದ್ದು, ಇಬ್ಬರು ಶಿಕ್ಷಕರು ಪ್ರಬಾರ ನೆಲೆಯಲ್ಲಿ ಪುತ್ತೂರು ಮತ್ತು ಗದಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕೇತರ ಸಿಬ್ಬಂದಿಗಳು ೧೦ ಬೇಕಿದ್ದರೂ, ೪ ಜನರಿದ್ದು, ಗ್ರೂಫ್ ಡಿಯಲ್ಲಿ ಒಬ್ಬರಿದ್ದು, ೧ಹುದ್ದೆ ಖಾಲಿಯಾಗಿದೆ.
ವಿದ್ಯಾರ್ಥಿವೇತನ:
ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಅವರು ಆರಿಸಿಕೊಂಡ ವೃತ್ತಿಗೆ ಸಂಬಂಸಿದಂತೆ ಉಪಕರಣಗಳನ್ನು ನೀಡಲಾಗುತ್ತಿದೆ. ಅಲ್ಲದೇ ಶಿಷ್ಯವೇತನ ಪ್ರತಿ ತಿಂಗಳಿಗೆ ರೂ.೨೫೦ ದೊರಕುತ್ತಿದೆ. ಉಳಿದ ವಿದ್ಯಾರ್ಥಿಗಳ ಹಾಜರಾತಿ ಮತ್ತು ೨೦ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರುವ ವಿದ್ಯಾರ್ಥಿಗಳಿಗೆ ತಿಂಗಳಿಗೆ ೫೦ ಶಿಷ್ಯವೇತನ ದೊರಕುತ್ತದೆ.
ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಐಟಿಐ ಕಾಲೇಜುಗಳ ವಿದ್ಯಾರ್ಥಿಗಳು ಎನ್‌ಸಿವಿಟಿ/ಎಸ್‌ಸಿವಿಟಿ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಅದರ ಹೊರತು ಕೆಲವೊಂದು ವಿದ್ಯಾರ್ಥಿಗಳಿಗೆ ಎಸ್‌ಸಿವಿಟಿ ಪ್ರಮಾಣ ಪತ್ರ ನೀಡಿದರೆ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಿದಂತಾಗುವುದಿಲ್ಲವೇ? ಈ ಕುರಿತು ರಾಜ್ಯದ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ ಗಮನಹರಿಸಬೇಕು. ರಾಜ್ಯದ ಎಲ್ಲಾ ಐಟಿಐ ಕಾಲೇಜುಗಳ ಗುಣಮಟ್ಟ ಸುಧಾರಿಸುವಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಖಾಸಗಿ ಐಟಿಐ ಕಾಲೇಜುಗಳು ಪರೀಕ್ಷಾ ಫಲಿತಾಂಶ ಪ್ರಕಟವಾದ ಕೂಡಲೇ ನೇಮಕಾತಿ ಪ್ರಾರಂಭಿಸುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳನ್ನು ಅನುಸರಿಸುತ್ತಾರೆ. ಸರಕಾರಿ ಐಟಿಐ ಕಾಲೇಜುಗಳ ವಿಳಂಭ ಆನ್‌ಲೈನ್ ಅರ್ಜಿಯನ್ನು ಶೀಘ್ರ ಕರೆಯುವಲ್ಲಿ ಕಾರ್ಯನಿರತವಾಗಬೇಕು. ಹಲವಾರು ಅವ್ಯವಸ್ಥೆಗಳ ಗೂಡಾಗಿರುವ ಸರಕಾರಿ ಐಟಿಐ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಇಲಾಖೆ ಶ್ರಮಿಸಬೇಕು.


ಎನ್‌ಸಿವಿಟಿ/ಎಸ್‌ಸಿವಿಟಿ ಪ್ರಮಾಣಪತ್ರಗಳಿಂದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸಂಸ್ಥೆಯಲ್ಲಿ ಎಂಆರ್‌ಎಸಿ ವಿಭಾಗದಲ್ಲಿರುವ ಎರಡು ಘಟಕಗಳಲ್ಲಿ ಒಂದು ಘಟಕ ಡಿಜಿಇಟಿ ಸದಸ್ಯತ್ವ ಪಡೆದುಕೊಂಡಿದೆ. ಇನ್ನೊಂದು ಉಪಕರಣಗಳ ಕೊರತೆಯಿಂದ ಸದಸ್ಯತ್ವ ಪಡೆದಿಲ್ಲ. ಈ ಕುರಿತು ರಾಜ್ಯದ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಲಾಗಿದೆ.
ಶಿವಪ್ಪ -ಪ್ರಾಂಶುಪಾಲ ಗಂಡು ಮಕ್ಕಳ ಐಟಿಐ ಕಾಲೇಜು ಮಂಗಳೂರು.


ಇಲಾಖೆಯ ಬಗ್ಗೆ ಸಂಶಯ- ವಿದ್ಯಾರ್ಥಿಗಳಿಗೆ ನಿರಾಶೆ, ಆತಂಕ
ಪಿಯು ಮರುಮೌಲ್ಯಮಾಪನ : ೧೦,೭೨೯ ಪತ್ರಿಕೆಗಳು `ನೋ ಚೇಂಜಸ್'

ಮಂಗಳೂರು: ೨೦೧೨-೧೩ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯು ಪರೀಕ್ಷೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ೧೩,೩೪೩ ವಿದ್ಯಾರ್ಥಿಗಳ ಪೈಕಿ ೧೦,೭೨೯ಮಂದಿಯ  ಉತ್ತರ ಪತ್ರಿಕೆಗಳ ಅಂಕಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪ್ರಕಟಗೊಂಡಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಅಸಮಧಾನ ವ್ಯಕ್ತವಾಗಿದೆ.
ವಿದ್ಯಾರ್ಥಿಗಳು ತಮ್ಮಲ್ಲಿರುವ ಆತ್ಮವಿಶ್ವಾಸ ಹಾಗೂ ಪೋಷಕರು ತಮ್ಮ ಮಕ್ಕಳ ಕಲಿಕಾ ಸಾಮರ್ಥ್ಯದ ಮೇಲಿನ ನಂಬಿಕೆಯಿಂದ ಪಡೆದ ಅಂಕಗಳ ಬಗ್ಗೆ ತೃಪ್ತಿಯಾಗದೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಾರಿ ಸಲ್ಲಿಸಿದ ಒಟ್ಟು ಅರ್ಜಿಗಳಲ್ಲಿ ಶೇ. ೮೦.೪೦ರಷ್ಟು ಉತ್ತರ ಪತ್ರಿಕೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎನ್ನುವ ವರದಿ ಬಿತ್ತರಗೊಂಡಿದೆ. ಈ ಮೂಲಕ  ೧೦,೭೨೯ ಮಂದಿಯ ಮರುಮೌಲ್ಯಮಾಪನಕ್ಕೆ ಕಟ್ಟಿದ ಹಣ ಮಾತ್ರ ಯಾವುದೇ ಅಂಕದ ಬದಲಾವಣೆಯಿಲ್ಲದೇ ವ್ಯರ್ಥಗೊಂಡಿದೆ.
ಮರುಮೌಲ್ಯಮಾಪನದಲ್ಲಿ  ಅಂಕಗಳು ಹೆಚ್ಚು ಅಥವಾ ಕಡಿಮೆಯಾಗಬಹುದು. ಆದರೆ ಬಹುತೇಕ ಮಂದಿಯ ಅಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದು  ಮರುಮೌಲ್ಯಮಾಪನ ನಿಜವಾಗಿ ನಡೆದಿದೆಯೇ ಎಂಬ ಬಗ್ಗೆ ಸಂಶಯ ಮೂಡಿಸಿದೆ.
೨೦೧೨-೧೩ನೇ ಸಾಲಿನಲ್ಲಿ ಉತ್ತೀರ್ಣರಾದವರು:
ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯು  ಪರೀಕ್ಷೆಯಲ್ಲಿ ರಾಜ್ಯದಲ್ಲಿ ಒಟ್ಟು ೬,೧೧,೫೬೯ ವಿದ್ಯಾರ್ಥಿಗಳು ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.  ೧,೬೭,೯೪೨ ಬಾಲಕರು ಹಾಗೂ ೧,೯೫,೧೧೫ ಬಾಲಕಿಯರ ಸಹಿತ ೬,೬೩,೦೫೭ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದರು. ಫಲಿತಾಂಶದಲ್ಲಿ ತೃಪ್ತಿಯಿದ್ದರೂ ನಿರೀಕ್ಷೆಗಿಂತ ಕಡಿಮೆ ಅಂಕ ಗಳಿಕೆಯಾದ ಹಿನ್ನೆಲೆಯಲ್ಲಿ  ಹಾಗೂ ಅನುತ್ತೀರ್ಣರಾದವರು  ಹೆಚ್ಚಿನ ಗುರಿ ಸಾಧನೆಯ  ನಂಬಿಕೆಯಿಂದ ಮರುಮೌಲ್ಯಮಾಪನಕ್ಕೆ ಪೋಷಕರನ್ನು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಇದೀಗ ಮರುಮೌಲ್ಯಮಾಪನದ ಅವರ ಆಸೆಗೆ ತಣ್ಣೀರೆರಚಿದೆ.
ಇಲಾಖೆಯ ನಿಯಮ:
ಫಲಿತಾಂಶ ಪ್ರಕಟಗೊಂಡು ವಿದ್ಯಾರ್ಥಿಯು ಬಯಸಿದರೆ ಉತ್ತರ ಪತ್ರಿಕೆಯ ಫೋಟೊ ಪ್ರತಿ ಪಡೆಯಲು ರೂ.೪೨೦ಪಾವತಿ ಮಾಡಬಹುದಾಗಿತ್ತು. ಇದಕ್ಕೆ ಮೇ ೧೩ಕೊನೆಯ ದಿನಾಂಕವಾಗಿತ್ತು. ಪ್ರಶ್ನೆ ಪತ್ರಿಕೆಯೊಂದರ ಮರು ಮೌಲ್ಯಮಾಪನಕ್ಕೆ ರೂ.೧೦೫೦ ಹಾಗೂ ಅಂಕಗಳ ಮರು ಎಣಿಕೆಗೆ ರೂ.೨೮೦ಪ್ರತಿ ಪತ್ರಿಕೆಗೆ ನಿಗದಿಗೊಳಿಸಿದ್ದು, ಎರಡು ವಿಭಾಗಕ್ಕೂ ಮೇ ೨೦ಕೊನೆಯ ದಿನಾಂಕ ನಿಶ್ಚಿತವಾಗಿತ್ತು. ವಿದ್ಯಾರ್ಥಿಯು ಮರುಎಣಿಕೆಗೆ ಸಲ್ಲಿಸಿದ್ದ ಪತ್ರಿಕೆಯಲ್ಲಿ ಹಿಂದೆ ಗಳಿಸಿದ ಅಂಕಕ್ಕಿಂತ ೬ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡರೆ ಮಾತ್ರ ಪೂರ್ತಿ ಹಣ ವಾಪಾಸು ನೀಡಲಾಗುತ್ತಿತ್ತು. ತಪ್ಪಿದಲ್ಲಿ ಹಣ ಇಲಾಖೆ ಯ ಖಾತೆಗೆ ತುಂಬುತ್ತಿತ್ತು.
ಮರು ಮೌಲ್ಯಮಾಪನಕ್ಕೆ ಬಂದ ಅರ್ಜಿಗಳು:
ಈ ಬಾರಿ ೧೩,೩೪೩ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರತಿ ವಿದ್ಯಾರ್ಥಿಯು ರೂ.೧೦೫೦ ರಂತೆ ಇಲಾಖೆಗೆ ರೂ.೧,೪೦,೧೦,೧೫೦ ನ್ನು ಸಲ್ಲಿಸಿದ್ದಾರೆ. ಮರು ಎಣಿಕೆಗೆ ಸಲ್ಲಿಕೆಯಾದ ಅರ್ಜಿಗಳಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಬದಲಾವಣೆಯಾದ ಅಂಕಗಳು, ಅಂಕಗಳು ಬದಲಾದರೂ ಮಾನ್ಯತೆಯಿಲ್ಲದ ಹಾಗೂ ಯಾವುದೇ ಬದಲಾವಣೆಯಿಲ್ಲ ಎಂದು ಮೂರು ವಿಭಾಗದಲ್ಲಿ ಫಲಿತಾಂಶ ಪ್ರಕಟವಾಗಿದೆ. ಆದರೆ ಈ ಬಾರಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಒಟ್ಟು ೧೦,೭೨೯ ಉತ್ತರ ಪತ್ರಿಕೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಮೂಲಕ ೧,೧೨,೬೫,೪೫೦ ರೂ. ಇಲಾಖೆಯ ಬೊಕ್ಕಸಕ್ಕೆ ಸೇರ್ಪಡೆಯಾಗಿದೆ. ಅರ್ಜಿ ಸಲ್ಲಿಕೆಯಾದ ವಿದ್ಯಾರ್ಥಿಗಳಲ್ಲಿ ೧,೬೮೪ ವಿದ್ಯಾರ್ಥಿಗಳಿಗೆ ಹಿಂದೆ ಪಡೆದ ಅಂಕಗಳಿಗಿಂತ ಹೆಚ್ಚು ಹಾಗೂ ಕಡಿಮೆಯಾಗಿ ಪ್ರಸ್ತುತ ಅಂಕದಲ್ಲಿ ಬದಲಾವಣೆಯಾಗಿದೆ. ಅಲ್ಲದೇ ೯೩೦ ವಿದ್ಯಾರ್ಥಿಗಳಿಗೆ ಅಂಕದಲ್ಲಿ ಬದಲಾವಣೆಯಾದರೂ ಅದಕ್ಕೆ ಯಾವುದೇ ಮಾನ್ಯತೆ ಇಲ್ಲ. ೧೦,೭೨೯ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದ ವಿದ್ಯಾರ್ಥಿಗಳ ಅಂಕದಲ್ಲಿ ಬದಲಾವಣೆಯಾದರೂ ಕನಿಷ್ಟ ೬ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಹಣ ಮರಳಿ ಸಿಗುತ್ತದೆ. ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಗಮನಿಸಿದರೆ ಬದಲಾವಣೆಯಾಗಿ ಮಾನ್ಯತೆ ಇಲ್ಲದ ಪಟ್ಟಿಯಲ್ಲಿ ೬ಕ್ಕಿಂತ ಕಡಿಮೆ ಅಂಕಗಳನ್ನು ಪಡೆದವರೆ ಹೆಚ್ಚಾಗಿದ್ದಾರೆ. ಇಲ್ಲಿಯೂ ಕೂಡ ಮೌಲ್ಯಮಾಪನಕ್ಕೆ ಕಟ್ಟಿದ ಹಣದ ವಾಪಸಾತಿ ಇಲ್ಲ . ಅಂಕಗಳಲ್ಲಿ ಬದಲಾವಣೆಯಾದ ಪಟ್ಟಿಯಲ್ಲಿಯೂ ಋಣಾತ್ಮಕ ಅಂಕಗಳು ಗೋಚರವಾಗುತ್ತಿದ್ದವು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿಯಮಗಳಿಂದ ವಿದ್ಯಾರ್ಥಿಗಳಿಂದ ನೇರ ಇಲಾಖೆಗೆ ಹಣ ಸಂಗ್ರಹವಾಗುತ್ತಿರುವುದರ ಕುರಿತು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿದರೂ ಮೌನಕ್ಕೆ ಶರಣಾಗಿದ್ದಾರೆ. ಅಲ್ಲಲ್ಲಿ ಕೆಲವೊಂದು ವಿದ್ಯಾರ್ಥಿಗಳು ಧ್ವನಿಯಿಲ್ಲದ ಧ್ವನಿಯಿಂದ ಪಿಸುಪಿಸು ಮಾತನಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿನ ಗೊಂದಲತೆಯನ್ನು ನಿವಾರಿಸಬೇಕು.

ಬಾಕ್ಸ್:
ಮೌಲ್ಯಮಾಪನದಲ್ಲಿ ಮಾಪಕರ ಗೊಂದಲಗಳಿಂದಾಗಿ ಅಂಕಗಳಲ್ಲಿ ಬದಲಾವಣೆಯಾದರೂ, ಮರುಮೌಲ್ಯಮಾಪನದ ಸಂದರ್ಭ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಇಲಾಖಾ ನಿಯಮದಂತೆ ಕ್ರಮ ಕೈಗೊಳ್ಳಬಹುದಾಗಿದ್ದರೂ ವಿದ್ಯಾರ್ಥಿಗಳಿಗೆ ಈ ಬಾರಿ ಅನ್ಯಾಯವಾಗಿದೆ. ಮರು ಮೌಲ್ಯಮಾಪನದಲ್ಲಿ ಹೆಚ್ಚು ಅಂಕ ಬಂದಾಗ ಮೊದಲ ಮೌಲ್ಯಮಾಪಕನಿಗೆ ಕೈಗೊಳ್ಳುವ ಕ್ರಮವನ್ನು ಸಡಿಲಗೊಳಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎನ್ನುವುದು ತಿಳಿಯುತ್ತದೆ. ಇಲಾಖೆಯಲ್ಲಿನ ಇಂತಹ ಭ್ರಷ್ಟತೆಯನ್ನು ತಡೆಗಟ್ಟಬೇಕು.
ರಮೇಶ್ ಕೆ. , ಅಭಾವಿಪ ರಾಜ್ಯ ಕಾರ್ಯದರ್ಶಿ.

ಪೋಷಕರು ಕಷ್ಟದಿಂದ ಹಣ ನೀಡಿದ್ದಾರೆ. ಇಲಾಖೆಯ ಫಲಿತಾಂಶಕ್ಕೆ ಪೋಷಕರು ಹಾಗೂ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪಿಯು ಶಿಕ್ಷಣ ಇಲಾಖೆಯ ಭ್ರಷ್ಟಾಚಾರವನ್ನು ತಡೆಗಟ್ಟಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಶ್ರಮಿಸಬೇಕು.

ಶಿವಕುಮಾರ್-
ಅಭಾವಿಪ, ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ.

ಅಕ್ರಮ ನಿವಾಸಿಗಳಿಗೆ ನಿತಾಕತ್ ಕಾರ್ಮಿಕ ಕಾನೂನು ಅನ್ವಯ-ಸಭ್ಯರಿಗಿಲ್ಲ ಭಯ.
ಕಾನೂನಿನ ನೆಪದಲ್ಲಿ ದೇಶದ ನೆನಪು ಮರುಕಳಿಕೆ

ಉತ್ತರಕೆ ನೋಡಲ್ಲಿ ಯಾರಿಹನು..ಕಿರೀಟದಂತೆ ಶೋಭಿಸುವ ಹಿಮರಾಜ ತಾನಿಹನು;
ದಕ್ಷಿಣದ ಕಡೆ ನೋಡಲಲ್ಲಿ ತಾನು ಮಾತೆಯ ಪಾದವನ್ನು ತೊಳೆಯುತಾಲಿರುವ ವೈಭವದ ನಾಡು..ನಮ್ಮ ಭಾರತದೇಶ. ಮೂರು ಕಡೆ ನೀರಿನಿಂದಲೂ, ಒಂದು ಕಡೆ ನೆಲದಿಂದಲೂ ಆವೃತವಾಗಿದ್ದು, ವಿವಿಧ ಸಂಪನ್ಮೂಲಗಳ ಆಗರವಾಗಿದೆ. ಇಲ್ಲಿ ಹರಿಯುವ ನದಿಗಳು ಮಳೆಗಾಲದಲ್ಲಿ ತುಂಬಿಹರಿಯುತ್ತಿರುವುದರಿಂದ ನದಿಯ ಇಕ್ಕೆಲಗಳಲ್ಲೂ ಫಲವತ್ತಾದ ಮಣ್ಣು ಶೇಖರಣೆಗೊಳ್ಳುತ್ತದೆ. ಇದು ಕೃಷಿಗೆ ಯೋಗ್ಯವಾಗಿದ್ದರಿಂದಲೇ ನದಿ ದಂಡೆಯ ಇಕ್ಕೆಲಗಳಲ್ಲಿಯೂ ರೈತರು ವಾಸವಾಗಿದ್ದಾರೆ. ಇದರಿಂದಾಗಿಯೇ ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು, ಆರ್ಥಿಕ ಅಭಿವೃದ್ಧಿಯಲ್ಲಿಯೂ ಕೃಷಿಯ ಪಾತ್ರ ಮಹತ್ವದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕವಾದ ಪ್ರಗತಿಯಲ್ಲಿ ಕಾಂಚಾಣದ ಆಸೆಗಾಗಿ, ರಿಯಲ್ ಎಸ್ಟೇಟ್‌ಗಳ ಭರಾಟೆಯಿಂದ ಕೃಷಿ ಭೂಮಿಗಳೆಲ್ಲಾ ಮಾಯವಾಗುತ್ತಿದೆ. ಶಿಕ್ಷಣ ಕಲಿತ ರೈತನ ಮಗ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗದೆ ವೈಟ್ ಕಾಲರ್‌ನ ಉದ್ಯೋಗವನ್ನರಸಿ ಪಟ್ಟಣ ಸೇರುತ್ತಿದ್ದಾನೆ. ಆಧುನಿಕತೆಯ ಸೋಗಿನಲ್ಲಿರುವ ಹಳ್ಳಿಯ ಮಕ್ಕಳು ಕೂಡ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಮಾಡುವ ಮಾದರಿ ನೋಡುವಂತಾಗಿದೆ. ಕೃಷಿ ಭೂಮಿ ಹೊಂದಿರುವವರು ಕೃಷಿ ಮಾಡಲು ನಿರಾಸಕ್ತಿ ತೋರುವುದರಿಂದಲೋ ಅಥವಾ ಆಸಕ್ತಿ ಇದ್ದರೂ, ಕೃಷಿ ಭೂಮಿಯಿಲ್ಲದವರೂ ಅನಿವಾರ್ಯವಾಗಿ ವಿವಿಧ ಉದ್ಯೋಗವನ್ನರಸಿ ದೇಶ-ವಿದೇಶದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಗೊತ್ತಿದ್ದೊ, ಗೊತ್ತಿಲ್ಲದೆಯೋ ಆಗುವ ಅಚಾತುರ್ಯಗಳಿಂದಾಗಿ ತಾವಿರುವ ಸ್ಥಳದಲ್ಲಿಯೂ ಸಂಚಕಾರ ಒದಗಿದಾಗ ನಾವು ಆ ಕುರಿತು ಮೌನ ವಹಿಸದೆ ಇದು ಯಾಕಾಗಿ ಎಂದು ಪ್ರಶ್ನಿಸಿಕೊಂಡಾಗ ನಮಗೆ ಉತ್ತರದೊರಕುತ್ತದೆ ಎನ್ನುವ ಭಾವನೆ. ಇಂತಹುದೆ ಘಟನೆ ಇತ್ತೀಚಿಗೆ ಗಲ್ಫ್ ರಾಷ್ಟ್ರಗಳ ಸೌದಿ ಅರೇಬಿಯಾದಲ್ಲಿ ಜಾರಿಯಾದ ನಿತಾಕತ್ ಕಾನೂನಿನಿಂದ ಹಲವು ನಿಷ್ಠಾವಂತ ಕಾರ್ಮಿಕರು ತಮ್ಮ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಯಿತಲ್ಲ ಎನ್ನುವ ನೋವು ಮನದಲ್ಲಿ. ತಮ್ಮದಲ್ಲದ ತಪ್ಪಿಗೆ ಒಮ್ಮೆ ನಿಷ್ಠಾವಂತರೂ ಕೂಡ ತಲೆತಗ್ಗಿಸಬೇಕಾಯಿತಲ್ಲ ಎನ್ನುವ ದುಗುಡ.
ಏನಿದು ನಿತಾಕತ್? ಎನ್ನುವ ಸಂಶಯ ಎಲ್ಲರಿಗೂ ಕಾಡುತ್ತದೆ. ಸೌದಿ ಅರೇಬಿಯಾದಲ್ಲಿ ಜಾರಿಯಾದ ನೂತನ ಕಾರ್ಮಿಕ ಕಾನೂನು ಈ ನಿತಾಕತ್. ಈ ಕಾನೂನಿನನ್ವಯ ಸೌದಿ ಅರೇಬಿಯಾದಲ್ಲಿರುವ ಕಂಪೆನಿಗಳು ಶೇ.೧೦ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕಿರುವುದು ಕಡ್ಡಾಯ. ಪ್ರಸಕ್ತ ೨೦ ಲಕ್ಷಕ್ಕೂ ಅಕ ಭಾರತೀಯರು ಸೌದಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ ಎಂದಾಗ ಆಶ್ಚರ್ಯ ಪಡಲೇ ಬೇಕು. ದೇಶದಲ್ಲಿ ವಿದ್ಯಾಭ್ಯಾಸ  ಮುಗಿಸಿ, ತ್ಯಾಗಭೂಮಿ ಭಾರತದಲ್ಲಿ ಜೀವನ ನಿರ್ವಹಣೆ ಮಾಡುವ ಮನಸ್ಸಿಲ್ಲದೇ, ಕುರುಡು ಕಾಂಚಾಣದ ವ್ಯಾಮೋಹದಿಂದ ವಿದೇಶಗಳಿಗೆ ತೆರಳುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ದೇಶದಲ್ಲಿ ವಾಸಿಸುವ ದೇಶಭಕ್ತರು ಒಂದು ಹೊತ್ತಿನ ಗಂಜಿಯಾದರೂ ಕುಡಿದುಕೊಂಡು, ದಿನನಿತ್ಯ ಅಪ್ಪ ಅಮ್ಮನ ಮುಖವನ್ನು ನೋಡುತ್ತಾ ಕುಟುಂಬಿಕರೊಡನೆ ಸಂತೋಷದಿಂದ ಕಾಲ ಕಳೆಯಬಹುದು ಎನ್ನುವ ನಂಬಿಕೆಯಿಂದ ಇಲ್ಲಿಯೇ ನೆಲೆಕಂಡವರು ಅನೇಕರಿದ್ದಾರೆ. ಆದರೆ ವಿದೇಶದ ವ್ಯಾಮೋಹದಿಂದ ಮಾತ್ರ ತಮ್ಮ ಸಂಸಾರದೊಂದಿಗೋ ಅಥವಾ ಏಕಾಂಗಿಯಾಗಿಯೋ ಉದ್ಯೋಗ ಮಾಡಿಕೊಂಡಿದ್ದಾರೆ. ಅವರಿಗೆ ಈ ನಿತಾಕತ್ ಕಾನೂನು ಅನ್ವಯವಾಗುತ್ತಿದೆ. ಸೌದಿ ಸರಕಾರ ನಿತಾಕತ್ ಜಾರಿ ಮಾಡಿದ ಕೂಡಲೇ ಹೆತ್ತಬ್ಬೆಯ ನೆನಪಾಗಿರಬೇಕು. ತಮ್ಮನ್ನು ರಕ್ಷಿಸಲು, ನೆಲೆನಿಲ್ಲಲು ಈ ಭೋಗ ಭೂಮಿಯಲ್ಲಿ ಸ್ಥಳವಿಲ್ಲ. ಕಾಂಚಾಣದ ವ್ಯಾಮೋಹದಿಂದ ಇಲ್ಲಿಯೇ ಇದ್ದರೆ ಜೈಲು ವಾಸವೇ ಗತಿಯೆನ್ನುವುದು ಅರಿವಿಗೆ ಬಂದ ಕೂಡಲೇ ಭಾರತೀಯ ಉದ್ಯೋಗಿಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ಪ್ರಾಯೋಜಕರಿಗೆ ನೀಡಿದ್ದರಿಂದ ತಾಯ್ನಾಡಿಗೆ ಮರಳಲು ಅಗತ್ಯವಿರುವ ತುರ್ತು ಪ್ರಮಾಣಪತ್ರಗಳಿಗಾಗಿ ಭಾರತೀಯ ದೂತಾವಾಸಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಮೇ ೨ ರವರೆಗೆ ೧೮ ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸುತ್ತಿದೆ.
ರಾಮಾಯಣದಲ್ಲೊಂದು ಸನ್ನಿವೇಶವಿದೆ. ಲಂಕೆಗೆ ಸೇತುವೆ ಬಲಿದು ಸೀತಾದೇವಿಯನ್ನು ಬಿಡಿಸಿಕೊಂಡು ಬರುವ ಉದ್ದೇಶದಿಂದ ವಾನರ ಸೇನೆಯೊಂದಿಗೆ ರಾಮಲಕ್ಷ್ಮಣರು ಲಂಕೆ ಪ್ರವೇಶ ಮಾಡುತ್ತಾರೆ. ಘೋರ ಯುದ್ದದ ನಂತರ ದಶಕಂಠ ರಾವಣನನ್ನು ಸಂಹಾರ ಮಾಡುತ್ತಾರೆ. ಸುವರ್ಣಮಯೀ ಲಂಕಾನಗರಿ ನೋಡಿದ ಲಕ್ಷ್ಮಣನಿಗೆ ಅಲ್ಲಿಯ ಸೌಂದರ್ಯ ನೋಡಿ ವ್ಯಾಮೋಹವುಂಟಾಗುತ್ತದೆ. ಆತ ಅಣ್ಣಾ, ಸುವರ್ಣಮಯೀಯಾದ ಲಂಕೆ ನಾವು ಗೆದ್ದು ಕೊಂಡಿದ್ದೇವೆ. ಇಲ್ಲಿಯೇ ನಾವು ನೆಲೆ ನಿಲ್ಲೋಣವೆಂದು ಮನದಿಂಗಿತ ಅರುಹಿದಾಗ ರಾಮ ಹೇಳುವ ಮಾತು ಈ ಸಂದರ್ಭದಲ್ಲಿ ಉಲ್ಲೇಖನೀಯ.
ಹೇ ಲಕ್ಷ್ಮಣಾ, ಅಪೀ ಸ್ವರ್ಣಮಯೀ ಲಂಕಾ ನ ಮೇ ರೋಚತೇ
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಫಿ ಗರೀಯಸಿ//-
(ತಮ್ಮಾ ಲಕ್ಷ್ಮಣಾ ಸುವರ್ಣಮಯೀ ಲಂಕೆಯನ್ನು ನೋಡಿ ರೋಚಕವಾದರೂ, ಹೆತ್ತ ತಾಯಿ, ಹೊತ್ತ ನೆಲ ಸ್ವರ್ಗಕ್ಕಿಂತಲೂ ಮಿಗಿಲು) ಎನ್ನುವ ಶ್ರೀರಾಮನ ಅಮೃತವಾಣಿಯನ್ನು ಅರ್ಥ ಮಾಡಿಕೊಳ್ಳದೇ ದೇಶದ ಗಡಿಯನ್ನು ದಾಟಿ ಹೋಗಿದ್ದವರಿಗೆ  `ನಿತಾಕತ್' ಮೂಲಕ ಎಚ್ಚರಿಕೆ ಸಂದೇಶ ನೀಡಬೇಕಾಯಿತು ಎಂದೆನಿಸುತ್ತಿದೆ. 
ರಾಷ್ಟ್ರದಲ್ಲಿರುವ ನಿರುದ್ಯೋಗ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಸೌದಿ ಸರಕಾರವು ನೂತನವಾಗಿ ಜಾರಿಗೊಳಿಸಿದ `ನಿತಾಕತ್' ಕಾರ್ಮಿಕ ಕಾನೂನುನಿಂದಾಗಿ ಅಲ್ಲಿ ಉದ್ಯೋಗದಲ್ಲಿರುವ ಭಾರತೀಯರು ಸಾಮೂಹಿಕವಾಗಿ ನಿರ್ಗಮಿಸುತ್ತಿದ್ದಾರೆ. ಹೊಸ ಕಾರ್ಮಿಕ ನೀತಿಯಿಂದ ಭಾರತೀಯ ಸಮುದಾಯವು ತಕ್ಷಣಕ್ಕೆ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಜಂಟಿ ಕ್ರಿಯಾ ಸಮಿತಿಯೊಂದನ್ನು ರಚಿಸಲು ಮಾತುಕತೆಯ ವೇಳೆ ಎರಡೂ ರಾಷ್ಟ್ರಗಳು ಸಮ್ಮತಿಸಿದ್ದವು. ಕಳೆದ ಕೆಲವು ವರ್ಷಗಳಿಂದ ಸೌದಿಗೆ ತೆರಳಿರುವವರ ಸಂಖ್ಯೆಯಲ್ಲಿ ಅದರಲ್ಲೂ ಮುಸಲ್ಮಾನರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ ಎನ್ನುವುದು ಅಂಕಿ ಅಂಶಗಳಿಂದ ತಿಳಿಯುತ್ತಿದೆ. ಎರಡು ಸರಕಾರಗಳ ಮಾತುಕತೆಯ ಮೂಲಕ ನಿತಾಕತ್‌ನ್ನು ಜುಲೈ೩ ರವರೆಗೆ ವಿಸ್ತರಿಸಲಾಗಿದ್ದು, ಮೂರು ತಿಂಗಳ ರಿಯಾಯಿತಿ ಅವದಿ ನೀಡಲಾಗಿದೆ. ನೂತನ ಕಾರ್ಮಿಕ ಕಾನೂನು ಸೌದಿಯಲ್ಲಿ ಅವದಿ ಮೀರಿ ನೆಲೆಸಿರುವ ಹಾಗೂ ೧೯೯೭ರಿಂದಲೂ ತಾಯ್ನಾಡಿಗೆ ಭೇಟಿ ನೀಡದಿರುವ ಭಾರತೀಯರನ್ನು ತವರಿಗೆ ಕಳುಹಿಸಲು ಸೂಕ್ತವಾಗಿದೆ.
ಅವದಿ ಮುಕ್ತಾಯಗೊಂಡರೂ ಸೌದಿಯಲ್ಲೆ ಅಕ್ರಮವಾಗಿ ಉಳಿದುಕೊಂಡಿರುವ ಭಾರತೀಯರು ಈ ಹೆಚ್ಚುವರಿ ಕಾಲಮಿತಿಯೊಳಗೆ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು ಅಥವಾ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು. ಇವೆರಡೂ ಸಾಧ್ಯವಾಗದಿದ್ದಲ್ಲಿ ಅಂತಹವರು ಯಾವುದೇ ದಂಡವಿಲ್ಲದೆ ತಾಯ್ನಾಡಿಗೆ ಮರಳಬಹುದೆನ್ನುವ ಉದಾರತೆ ತೋರಿಸಿದೆ. ತಮ್ಮ ಉದ್ಯೋಗಗಳನ್ನು ಕ್ರಮಬದ್ಧಗೊಳಿಸಲು ವಿಫಲರಾಗಿರುವ ಭಾರತೀಯರು ಸೌದಿ ತೊರೆಯಲು ಅಗತ್ಯವಿರುವ ತುರ್ತು ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜುಲೈ೩ ರ ಅಂತಿಮ ಗಡುವು ಮುಕ್ತಾಯ ಗೊಳ್ಳುತ್ತಿರುವಂತೆಯೇ ಸೂಕ್ತ ದಾಖಲೆ ಪತ್ರಗಳಿಲ್ಲದ ವಿದೇಶಿಯರು ಜೈಲಿಗೆ ತಳ್ಳಲ್ಪಡುವರಲ್ಲದೆ, ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯ ಗಂಟೆಯನ್ನು ಕೂಡ ನೀಡಿದೆ. ಅಧಿಕೃತ ಮೂಲಗಳ ಪ್ರಕಾರ ಸಂಸ್ಕರಣೆಗೆ ಒಳಪಡಿಸಲಾದ ಒಟ್ಟು ೫೬,೭೩೪ ಅರ್ಜಿಗಳಲ್ಲಿ ೨೧,೩೩೧ ಅರ್ಜಿಗಳು ಉತ್ತರ ಪ್ರದೇಶ ಮೂಲದವರದ್ದಾಗಿದೆ. ಅಲ್ಲದೇ ಕೇರಳಿಗರ ಅರ್ಜಿಗಳು ಕೂಡ ಅಧಿಕ ಪ್ರಮಾಣದಲ್ಲಿವೆಯಂತೆ. ರಾಷ್ಟ್ರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಗೆ ಯಾವುದೇ ದಂಡನೆಯಿಲ್ಲದೆ ತಾಯ್ನಾಡಿಗೆ ಮರಳಲು ೧೯೯೭ ರ ಬಳಿಕ ಸೌದಿ ಅರೇಬಿಯವು ಇದೇ ಮೊದಲ ಬಾರಿಗೆ ಒಂದು ಅವಕಾಶ ನೀಡುತ್ತಿದೆ. ಈ ರೀತಿಯಾಗಿ ಸೌದಿ ಸರಕಾರ ಅಕ್ರಮಿಗಳಿಗೂ ಸಹಾಯ ಮಾಡಿ ಭ್ರಷ್ಠಾಚಾರಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಅಲ್ಲಿಂದ ಭಾರತಕ್ಕೆ ಬಂದ ನಂತರ ಇಲ್ಲಿನ ಘನ ಸರ್ಕಾರ ವಿಮಾನ ನಿಲ್ದಾಣದಿಂದ ಹಿಡಿದು, ಅವರ ಮನೆ ಬಾಗಿಲ ಹೊಸ್ತಿಲನ್ನು ತುಳಿಯುವ ತನಕದ ಎಲ್ಲಾ ಖರ್ಚುಗಳನ್ನು ಭರಿಸಲು ನಿರ್ಧರಿಸಿದೆ. ಭ್ರಷ್ಠರಿಗೆ ಇಷ್ಟೊಂದು ಮಣೆಹಾಕುವ ಸರಕಾರ ಇಂತವರನ್ನು ಯಾಕಾಗಿ ಅಲ್ಲಿಂದ ಕಳುಹಿದ್ದಾರೆ ಎನ್ನುವ ಸತ್ಯವನ್ನು ತಿಳಿಯಲು ಮುಂದಾಗಿದ್ದರೆ ಅವರಿಗೆ ರಾಜಮರ್‍ಯಾದೆ ನೀಡುತ್ತಿರಲಿಲ್ಲ. ದೇಶದ ಕೀರ್ತಿಯನ್ನು ಜಾಗತಿಕವಾಗಿ ಹೆಚ್ಚುವಂತೆ ಮಾಡಿದ ದೇಶಭಕ್ತರಿಗೆ ಸಿಗದ ಮರ್‍ಯಾದೆ, ಅಕ್ರಮವಾಗಿ ನೆಲೆಸಿ, ದೇಶದಿಂದ ಹೊರಹಾಕಿದವರಿಗೆ ಇಲ್ಲಿ ರಾಜಮರ್‍ಯಾದೆ ಎಂತಹ ನಾಚಿಕೆಗೇಡಿನ ವಿಷಯ.  
ಕಂಪೆನಿಗಳಲ್ಲಿ ಸ್ಥಳೀಯರಿಗೆ ಶೇ. ೧೦ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸೌದಿ ಸರಕಾರ ಕೆಲವು ತಿಂಗಳ ಹಿಂದೆ ನಿತಾಕತ್ ಕಾರ್ಮಿಕ ಕಾನೂನು ಜಾರಿಗೊಳಿಸಲು ನಿರ್ಧರಿಸಿತ್ತು. ಅದರಂತೆ ಅಲ್ಲಿನ ಸರಕಾರಿ ಅಧಿಕಾರಿಗಳು ಫೆಬ್ರವರಿ ತಿಂಗಳಲ್ಲಿ ವಿವಿಧ ಕಂಪೆನಿಗಳಿಗೆ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ಉದ್ಯೋಗ ಮಾಡುತ್ತಿದ್ದ ಹಲವರನ್ನು ಬಂದಿಸಿದ್ದು, ಇನ್ನು ಕೆಲವರು ದಾಳಿ ವೇಳೆ ತಪ್ಪಿಸಿಕೊಂಡಿದ್ದರು. ಈತನ್ಮಧ್ಯೆ ಕೆಲವರು ಬಂಧನ ಭೀತಿಯಿಂದ ತವರೂರಿಗೆ ತೆರಳಿದ್ದರು. ಸೌದಿಯ ಈ ಕಾನೂನಿನ ಕುಣಿಕೆಗೆ ಬಿದ್ದವರಲ್ಲಿ ಹೆಚ್ಚಿನವರು ಭಾರತೀಯರೇ. ಸಮಸ್ಯೆಗೆ ಸಿಕ್ಕವರ ಕುಟುಂಬಿಕರು ಪರಿಹಾರ ಕಲ್ಪಿಸಲು ಸರಕಾರದ ಮೇಲೆ ಒತ್ತಯಿಸಿದ್ದರು. ಭಾರತ ಸರಕಾರದ ಮನವಿಗೆ ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ  ನಿತಾಕತ್ ಕಾನೂನಿನ ಕೆಲವು ನಿಯಮದಲ್ಲಿ ಸಡಿಲಿಕೆ ಮಾಡಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಕಾನೂನು ಬಾಹಿರವಾಗಿ ಉದ್ಯೋಗ ಪಡೆದವರಿಗೆ ಅದರಲ್ಲೂ ಕಾರ್ಮಿಕ ವರ್ಗಕ್ಕೆ ಕ್ಷಮಾದಾನ. ಒಂದು ಕಂಪೆನಿಯಿಂದ ಮತ್ತೊಂದು ಕಂಪೆನಿಗೆ ತೆರಳಿ ಕೆಲಸ ಮಾಡುವ ಅವಕಾಶ, ಅರ್ಹ ಮನೆಗೆಲಸದವರನ್ನು ಕಚೇರಿ ಕೆಲಸಕ್ಕೂ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಅಲ್ಲದೆ ಬಂಧನ ಭೀತಿ ಮತ್ತು ಆರಂಭದಲ್ಲಿ ಬಿಗಿ ಕಾನೂನಿಗೆ ಸಿಲುಕಿ ಉದ್ಯೋಗ ಕಳೆದುಕೊಂಡು ಸ್ವದೇಶಕ್ಕೆ ತೆರಳಿದ್ದವರು ಕೂಡ ಮರಳಲು ಅವಕಾಶವಿದೆ. ಹಕಾಮ ಶುಲ್ಕ, ಉದ್ಯೋಗ ಅನುಮತಿ ಶುಲ್ಕ ಹಾಗೂ ದಂಡ ಪಾವತಿಯಿಂದ ವಿನಾಯಿತಿ ನೀಡಿದ್ದಾರೆ.
ಅದಕ್ಕಿಂತಲೂ ಅಚ್ಚರಿಯೆನ್ನುವಂತೆ ೨೦೦೮ ರ ಜುಲೈ೩ ಮುಂಚೆ ಹಜ್ ಉಮ್ರ ವೀಸಾದಲ್ಲಿ ತೆರಳಿದ ಸಾವಿರಾರು ಮಂದಿ ತಾಯ್ನಾಡಿಗೆ ಮರಳದೆ ಅಲ್ಲೇ ಕೆಲಸ ಮಾಡಿಕೊಂಡಿದ್ದಾರೆ ಎನ್ನುವ ಅಂಶವೊಂದು ಬೆಳಕಿಗೆ ಬಂದಿದೆ. ಧಾರ್ಮಿಕ ಕ್ಷೇತ್ರಗಳ ಸಂದರ್ಶನವೆನ್ನುವುದಾಗಿ ಅನೇಕ ಮುಸ್ಲಿಮರು ಮಕ್ಕಾ ಮದಿನಾಕ್ಕೆ ಹಜ್ ಯಾತ್ರೆಗೆ ತೆರಳುತ್ತಾರೆ. ಗೋಹತ್ಯೆ ಸೇರಿದಂತೆ ಇತರ ಪಾಪಕೃತ್ಯಗಳಲ್ಲಿ ಭಾಗಿಯಾದ ಇವರು ಪುಣ್ಯ ಸಂಪಾದನೆಗಾಗಿ ಧಾರ್ಮಿಕತೆಯ ಮುಖವಾಡ ಧರಿಸಿ, ತಮ್ಮ ಪಾಪಕೃತ್ಯಗಳನ್ನು ಕಳೆಯಲು ಹಜ್‌ಯಾತ್ರೆಗೆ ತೆರಳುತ್ತಾರೆ. ಧಾರ್ಮಿಕ ಕ್ಷೇತ್ರದ ದರ್ಶನ ಮಾಡಿಕೊಂಡು ತಿರುಗಿ ಬಂದಿದ್ದರೆ ಭಾರತಮಾತೆ ಕ್ಷಮಿಸುತ್ತಿದ್ದಳೆನೋ? ಅಥವಾ ಹತ್ಯೆಯಾದ ಗೋಮಾತೆಯ ಆತ್ಮ ಈ ಪಾಪಿಗೆ ಬುದ್ಧಿ ಬಂದಿರಬಹುದು ಎಂದು ಕ್ಷಮೆ ನೀಡುತ್ತಿದ್ದಿರಬಹುದು? ಯಾಕೆಂದ್ರೆ ಆಕೆ ಸಹನೆಯ ಪ್ರತಿರೂಪ. ಭಾರತ ಸರಕಾರದ ಹಣದಿಂದ ಹಜ್‌ಯಾತ್ರೆಗೆಂದು ತೆರಳಿದ್ದರೂ, ಅದನ್ನು ಮರೆತು ಅಲ್ಲಿಯೇ ನೆಲೆಗೊಂಡವರು ಅನೇಕ ಮಂದಿಯಿದ್ದಾರೆ. ಕಾಂಚಾಣದ ಆಸೆ ಹಾಗೂ ವಿದೇಶೀ ವ್ಯಾಮೋಹದಿಂದಲೂ ಕೂಡ ಇಂತಹ ಅಕ್ರಮ ಕೃತ್ಯಗಳಲ್ಲಿ ಭಾಗಿಯಾಗಲು ಮನಮಾಡುತ್ತಾರೆ. ಇದರಿಂದ ಸಭ್ಯರೂ ಕೂಡ ತಲೆತಗ್ಗಿಸುವಂತ ಪರಿಸ್ಥಿತಿ. 
ಹೆಂಡಿರೇತಕೆ, ಮಕ್ಕಳೇತಕೆ, ಭಂಡಿ ತುಂಬಿದ ಧನವಿದೇತಕೆ
ಯಮನವರು ಬಂದು ಚಂಡಪಾಶದಿ ಕಟ್ಟಿ ಕೊಂಡು ಹೋ-ಹಂದಿನಲಿ ಕಂಡು ಬಿಡಿಸುವವರುಂಟೆ ಎಂದು ಪ್ರಾಜ್ಞರು ಹೇಳಿದ್ದಾರೆ. ಇದನ್ನೆಲ್ಲಾ ತಿಳಿದುಕೊಂಡಿದ್ದರೂ, ದಿನನಿತ್ಯದ ಜೀವನ ನಿರ್ವಹಣೆಗೆ ಬೇಕಾಗುವ ಹಣಕ್ಕಿಂತ ಅತ್ಯಧಿಕ ಆಸ್ತಿ ಸಂಪಾದಿಸಲು ಹುಟ್ಟಿದ ದೇಶವನ್ನೇ ಬಿಟ್ಟು ಹೋಗಿ ವಿದೇಶಗಳಲ್ಲಿ ನೆಲೆಯಾಗುತ್ತಾರೆ. ಅಲ್ಲಿ ನಿಯತ್ತಿನಿಂದ ಕೆಲಸ ನಿರ್ವಹಿಸಿದರೆ ಅಲ್ಲಿಯೂ ಕೂಡ ವಿಶೇಷ ಮರ್‍ಯಾದೆ ದೊರಕುತ್ತದೆ. ಅಲ್ಲಿ ಹೋಗಿ ತಮ್ಮ ಕೆಟ್ಟ ಚಾಳಿಯನ್ನು ಮುಂದುವರಿಸಿದರೆ, ಅಲ್ಲಿನ ಕಾನೂನು ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದರೆ ಅವರಿಗೆ ಜೈಲು, ಗಡಿಪಾರು ಅಥವಾ ಶಿರಚ್ಛೇದನದಂತ ಕಠಿಣ ಶಿಕ್ಷೆಯನ್ನು ವಿಧಿಸುತ್ತಾರೆ ಎನ್ನುವುದಕ್ಕೆ ಕೆಳಗಿನ ಅಂಕಿಅಂಶಗಳೇ ಸಾಕ್ಷಿ. 
ವಿಶ್ವದ ೮೦ ದೇಶಗಳ ಜೈಲಿನಲ್ಲಿ ೬,೫೦೦ಕ್ಕೂ ಅಧಿಕ ಭಾರತೀಯರು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆಶ್ಚರ್ಯ ಆದರೂ ಸತ್ಯ. ಅವರ ಪೈಕಿ ಅರ್ಧದಷ್ಟು ಮಂದಿ ಮುಸಲ್ಮಾನರು ವಾಸಿಸುವ ಮೂರು ಕೊಲ್ಲಿ ದೇಶಗಳಲ್ಲಿದ್ದಾರೆ. ಕುವೈತ್‌ನಲ್ಲಿ ೧,೬೯೧, ಸೌದಿ ಅರೇಬಿಯದಲ್ಲಿ ೧,೧೬೧ ಮತ್ತು ಯುಎಇಯಲ್ಲಿ ೧,೦೧೨ ಕೈದಿಗಳಿದ್ದಾರೆ.
ನೆರೆಯ ದೇಶಗಳ ಪೈಕಿ ದೇಶದ ಬದ್ದ ವೈರಿ ಪಾಕಿಸ್ತಾನದಲ್ಲಿ ೨೫೩, ಚೀನಾದಲ್ಲಿ ೧೫೭, ನೇಪಾಳದಲ್ಲಿ ೩೭೭, ಶ್ರೀಲಂಕಾದಲ್ಲಿ ೬೩, ಇಟಲಿಯಲ್ಲಿ ೧೨೧, ಬ್ರಿಟನ್‌ನಲ್ಲಿ ೪೨೬, ಅಮೇರಿಕಾದಲ್ಲಿ ೧೫೫ ಕೈದಿಗಳಿದ್ದಾರೆ. ಈ ಮಾಹಿತಿಯನ್ನು ಹ್ಯೂಮನ್ ರೈಟ್ಸ್ ಡಿಫೆನ್ಸ್ ಫೋರಂ ಎನ್ನುವ ಎನ್‌ಜಿಒ ಮಾಹಿತಿ ಹಕ್ಕಿನ ಮೂಲಕ ಪಡೆದಿದೆ. ವಿದೇಶಿ ಜೈಲುಗಳಲ್ಲಿ ೬,೫೬೯ ಭಾರತೀಯರು ಇರುವುದನ್ನು ಮಾಹಿತಿ ಹಕ್ಕು ನಿರ್ಧಿಷ್ಟವಾಗಿ ತಿಳಿಸಿದೆ. ಆದರೆ ಭಾರತದ ಜೈಲಿನಲ್ಲಿ ವಿದೇಶಿಯರು ಬೆರಳೆಣಿಕೆಯಷ್ಟಿದ್ದಾರೆ ಎಂದಾಗ ವಿದೇಶಿಗರು ತಪ್ಪು ಮಾಡಿಲ್ಲ ಎನ್ನುವ ಸೂಚಕವೇ?
ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಈ ಮಾಹಿತಿಯನ್ನು ಪಡೆದಿದ್ದರೂ, ಇದು ಬದಲಾಗುತ್ತಾ ಹೋಗುತ್ತದೆ. ಆದರೆ ಕೈದಿಗಳ ಕುರಿತು ಹಾಗೂ ಅವರು ಎದುರಿಸುತ್ತಿರುವ ಆರೋಪಗಳ ಬಗ್ಗೆ ವಿವರವನ್ನು ನೀಡಿಲ್ಲ. ಸಣ್ಣಪುಟ್ಟ ಅಪರಾಧಗಳು, ಮಾದಕವಸ್ತು ಸಾಗಣೆ ಮತ್ತು ಗೃಹ ಹಿಂಸೆಗಳಿಗಾಗಿ ಭಾರತೀಯರು ಯುರೋಪ್‌ನಲ್ಲಿ ಜೈಲಿಗೆ ಹೋಗುತ್ತಾರೆ ಎಂದು ವಿಶ್ವಸಂಸ್ಥೆಗೆ ಭಾರತದ ಮಾಜಿ ರಾಯಭಾರಿ ಟಿ.ಪಿ. ಶ್ರೀನಿವಾಸನ್ ಹೇಳಿದ್ದು, ಕೊಲ್ಲಿ ದೇಶಗಳಲ್ಲಿರುವ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳು ದೋಷಪೂರಿತ ಗುತ್ತಿಗೆಗಳು, ಅಕ್ರಮ ವಾಸ್ತವ್ಯ ಮತ್ತು ವಲಸೆಗಾಗಿಯೇ ಬಂದಿಯಾಗಿದ್ದಾರೆ ಎಂದಿದ್ದರು. ಯುಎಇಯ ಭಾರತೀಯ ರಾಯಭಾರ ಕಚೇರಿ ಮೂಲಗಳ ಪ್ರಕಾರ ೧೨ ದಿನಗಳ ಅವಧಿಯಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಯುಎಇಗೆ ಆಗಮಿಸಿ ಅಲ್ಲಿನ ನಿಯಮವನ್ನು ಉಲ್ಲಂಘಿಸಿದವರಲ್ಲಿ ಆಂದ್ರಪ್ರದೇಶ ೧೫೦, ತಮಿಳು ನಾಡು ೧೩೦, ಕೇರಳ ೧೨೪, ಉಳಿದಂತೆ ಪಂಜಾಬ್, ರಾಜಾಸ್ತಾನ್ ಮತ್ತು ಉ.ಪ್ರದೇಶದವರು ಸೇರಿದ್ದಾರೆ. ಪಾಸ್‌ಫೋರ್ಟ್ ಕಳೆದುಕೊಂಡವರು, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು, ನಿಯಮ ಉಲ್ಲಂಘನೆ ಮಾಡಿದವರು, ವೀಸಾ ರದ್ದುಗೊಂಡವರು ಹಲವು ಬಗೆಯ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಈ ನಿತಾಕತ್ ಕಾರ್ಮಿಕ ಕಾನೂನು, ದಾಖಲೆಗಳು ಸರಿಯಾಗಿ ಜೋಡಿಸಿಕೊಂಡು ನಿಯಮ ಉಲ್ಲಂಘನೆ ಮಾಡದೇ ಬದುಕುವ ಯಾವುದೇ ಭಾರತೀಯನಿಗೂ ಅನ್ವಯವಾಗುವುದಿಲ್ಲ. ಅವರಿಗೆ ಮೊದಲಿನಂತೆ ಸಕಲ ಮಾನ-ಮರ್ಯಾದೆಗಳು ದೊರಕುತ್ತವೆ ಎನ್ನುವ ಸತ್ಯವನ್ನು ಅರಿಯಬೇಕಿದೆ.
ಹ್ವಾಯ್ ಇಲ್ಕೇಣಿ ಮರ್ರೆ: ನಮ್ಮ ದೇಶದಲ್ಲಿರುವ ಕಾನೂನು, ಕಟ್ಟಳೆಗಳು ಭಾರತೀಯನಿಗೆ ಮಾತ್ರ ಅನ್ವಯವಾಗುತ್ತದೆಯೇ ಎನ್ನುವ ಸಂಶಯ. ವಿದೇಶಿಗನೊಬ್ಬ ಬಂದು ವರ್ಷದೊಳಗೆ ಆತನಿಗೆ ಬೇಕಾದ ಪಡಿತರ ಚೀಟಿ, ಪಾಸ್‌ಪೋರ್ಟ್, ಮತಗುರುತಿನ ಚೀಟಿ  ಸೇರಿದಂತೆ ಆ ಕಾರ್ಡು-ಇ ಕಾರ್ಡುಗಳನ್ನು ಮಾಡಿಕೊಳ್ಳುತ್ತಾನೆ. ಆದರೆ ಇಲ್ಲಿ ಹತ್ತಾರು ವರ್ಷಗಳಿಂದ ಬದುಕುತ್ತಿರುವ ಭಾರತೀಯನಿಗೆ ಮಾತ್ರ ಯಾವ ಸೌಲಭ್ಯವೂ ದೊರಕುವುದಿಲ್ಲ. ಕೊಲ್ಲಿ ರಾಷ್ಟ್ರಗಳಲ್ಲಿ ಕಾರ್ಮಿಕರಿಗೆ ಉದ್ಯೋಗ ಭರವಸೆ ನೀಡುವ ನಿಟ್ಟಿನಲ್ಲಿ ನಿತಾಕತ್ ಕಾರ್ಮಿಕ ಕಾನೂನು ಜಾರಿ ತಂದು ವಿದೇಶಿಗರನ್ನು ತವರಿಗೆ ಅಟ್ಟುತ್ತಿದ್ದಾರೆ. ಭಾರತದಲ್ಲಿಯೂ ಇಂತಹ ಕಾನೂನು ಜಾರಿಗೊಳಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸೌದಿಯಲ್ಲಿ ಇಂತಹ ಕಾನೂನು ಜಾರಿಗೆ ತಂದು ನಮ್ಮವರ ಭಾರತೀಯತೆಯನ್ನು ಜಾಗೃತಗೊಳಿಸಬೇಕಾಯಿತಲ್ಲವೇ? ನಾವೆಲ್ಲಾ ಭಾರಿ ಬುದ್ಧಿವಂತರೆನ್ನುವುದು ಎಷ್ಟರಮಟ್ಟಿಗೆ ಸರಿ ಹೇಳಿ?


ದೇಶದ ಗೌರವ-ಕೀರ್ತಿಯನ್ನು ಜಗದಗಲಕ್ಕೆ ವಿಸ್ತಾರಗೊಳಿಸಿದ ಭಾರತೀಯ ಕಬಡ್ಡಿ ತಂಡ ವಿಶ್ವಕಪ್‌ನಲ್ಲಿ ಗೆದ್ದು ದೆಹಲಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರನ್ನು ಆಮಂತ್ರಿಸಲು ಬೆರಳೆಣಿಕೆಯಷ್ಟು ಮಂದಿ. ಕ್ರೀಡಾಪಟುಗಳೇ ಅವರವರ ವಸ್ತುಗಳನ್ನು ಕೊಂಡು ಹೋಗಲು ಸರಕಾರದ ಯಾವುದೇ ವ್ಯವಸ್ಥೆಯಿಲ್ಲದೆ ಸ್ವಂತ ಖರ್ಚಿನಲ್ಲಿ ಮನೆಗೆ ತೆರಳಿದ ಘಟನೆ ನೆನಪಿನಿಂದ ಮಾಸಿಲ್ಲ. ಆದರೆ ಕಾನೂನು ಬಾಹಿರವಾಗಿ ವಿದೇಶದಲ್ಲಿ ನೆಲೆಯಾಗಿ ` ನಿತಾಕತ್' ಕಾರ್ಮಿಕ ಕಾನೂನಿನಿಗೆ ಮಣಿದು ದೇಶಕ್ಕೆ ಬಂದಾಗ ಇಲ್ಲಿನ ಘನ ಸರಕಾರದಿಂದ ಅವರಿಗೆ ರಾಜಮರ್‍ಯಾದೆ. ಅವರು ವಿಮಾನ ನಿಲ್ದಾಣದಿಂದ ಮನೆಯ ತನಕ ತೆರಳುವ ಎಲ್ಲಾ ಖರ್ಚನ್ನು ಸರಕಾರ ಭರಿಸುತ್ತದೆಯಂತೆ? ದೇಶದ ಕೀರ್ತಿಯನ್ನು ಹೆಚ್ಚಿಸಿದವರಿಗೆ ಅವಮಾನ-ದೇಶಕ್ಕೆ ಅಪಕೀರ್ತಿ ತಂದವರಿಗೆ ಸಮ್ಮಾನ...ಎಂಥಾ ಲೋಕವಯ್ಯ

Monday 3 June 2013

ಸಿದ್ದರಾಮಯ್ಯನವರ ಸಂಪುಟದಲ್ಲಿ ಕರಾವಳಿಗೆ ದಕ್ಕಿದ ಸೌಭಾಗ್ಯ-ನಾಲ್ಕು ಸಚಿವ ಸ್ಥಾನ
ಬಯಲು ಸೀಮೆಗೆ ಬಂದರು ಖಾತೆ-ಮೀನು ಮುಟ್ಟದವರ ಕೈಗೆ ಮೀನುಗಾರಿಕೆ.


ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶವೆನ್ನುವ ಹೆಗ್ಗಳಿಕೆ ಒಂದೆಡೆ ಇನ್ನೊಂದೆಡೆ ಅರಬ್ಬಿ ಸಮುದ್ರ ಆವರಿಸಿಕೊಂಡಿದೆ ಎನ್ನುವ ಹೆಮ್ಮೆ ಕರಾವಳಿ ಜನತೆಗೆ. ಇದು ಭೌಗೋಳಿಕವಾದ ವಿಷಯವಾದರೆ ರಾಜಕೀಯವಾಗಿಯೂ ೨೦೧೩ರ ವಿಧಾನ ಸಭೆ ಚುನಾವಣೆಯಲ್ಲಿ ಇಲ್ಲಿಯವರಿಗೆ ಸಿಗದ ಸಂತೋಷ ಸಿಕ್ಕಿದೆ. ಕರ್ನಾಟಕದಲ್ಲಿ ಆಡಳಿತ ವಹಿಸಿಕೊಂಡ ಕಾಂಗ್ರೆಸ್‌ಪಕ್ಷದಿಂದ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಅತಿಶಯೋಕ್ತಿಯಲ್ಲ. ೨೦ ವರ್ಷಗಳಿಂದಿಚೆಗೆ ಕರಾವಳಿಯ ನಾಯಕರುಗಳಿಗೆ ಒಮ್ಮೆಲೆ ಕ್ಯಾಬಿನೆಟ್ ಅಥವಾ ರಾಜ್ಯ ಸಚಿವರಾಗಿ ಆಯ್ಕೆಗೊಂಡ ಉದಾಹರಣೆಗಳಿಲ್ಲ. ಪ್ರಥಮ ಬಾರಿಗೆ ಎನ್ನುವಂತೆ ಕರಾವಳಿ ಭಾಗದ ನಾಲ್ಕು ಮಂದಿಗೆ ಸಚಿವ ಸ್ಥಾನ ನೀಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯವರ ಚಾಕಚಕ್ಯತೆಯೆನ್ನಲೇ? ಅಥವಾ ಅವರು ಕರಾವಳಿ ಭಾಗಕ್ಕೆ ಒಮ್ಮೆಲೆ ನಾಲ್ಕು ಸಚಿವ ಸ್ಥಾನ ನೀಡಿರುವುದರಲ್ಲಿಯೂ ಸ್ವಾರ್ಥವಿದೆಯೇ? ಸಾಮಾನ್ಯವಾಗಿ ತರ್ಕಿಸಿದರೆ ಜನ ಸಾಮಾನ್ಯರ ಅಬಿಪ್ರಾಯವೂ ಕೂಡ ಹೌದೆನ್ನುತ್ತದೆ. ಇನ್ನು ಒಂದು ವರ್ಷದೊಳಗೆ ಎಂಪಿ ಚುನಾವಣೆಯು ನಡೆಯಲಿರುವ ಮುನ್ಸೂಚನೆಯಾಗಿದೆ.
ಕರಾವಳಿಯ ಜನತೆ ಬುದ್ದಿವಂತರೆನ್ನುವುದಕ್ಕೆ ಈ ಬಾರಿಯ ವಿಧಾನ ಸಭಾ ಚುನಾವಣೆಯನ್ನು ಗಮನಿಸಿದರೆ ತಿಳಿಯುತ್ತದೆ. ಬಿಜೆಪಿಯ ಭದ್ರಕೋಟೆಯೆನಿಸಿಕೊಂಡ ಪ್ರದೇಶಗಳಲ್ಲಿಯೂ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ  ಕಾರಣವಾಗಿರುವುದು. ಪಕ್ಷದಲ್ಲಿ ಕಚ್ಚಾಟ ನಡೆಯುತ್ತಿರುವಾಗ ಏನು ಮಾತನಾಡದೆ ಸುಮ್ಮನಿದ್ದು ತಮ್ಮ ಅಮೂಲ್ಯವಾದ ಮತ ಚಲಾವಣೆಯ ಮೂಲಕ ಬಿಜೆಪಿ ಕಚ್ಚಾಟ, ಗೊಂದಲಗಳಿಗೆ ಪೂರ್ಣವಿರಾಮ ಹಾಕಿದ್ದಾರೆ. ಬಿಜೆಪಿಯ ಆಡಳಿತವನ್ನು ಕೊನೆಗಾಣಿಸಬೇಕೆನ್ನುವ ನಿಟ್ಟಿನಲ್ಲಿ ಅವರ ಆಡಳಿತದಲ್ಲಾದ ಅಭಿವೃದ್ಧಿಯನ್ನು ಕಡೆಗಣಿಸಿ ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. ಅವಿಭಜಿತ ದಕ್ಷಿಣ ಕನ್ನಡದಲ್ಲಿರುವ ಎಂಟು ವಿಧಾನ ಸಭಾ ಕ್ಷೇತ್ರದಲ್ಲಿ ೭ ಸ್ಥಾನವನ್ನು ಕಾಂಗ್ರೆಸ್‌ನ ಮಡಿಲಿಗೆ ಸೇರಿಸಿದ್ದರು. ಮೀಸಲು ಕ್ಷೇತ್ರ ಸುಳ್ಯದಲ್ಲಿ ಮಾತ್ರ ಸಾವಿರಕ್ಕೂ ಚಿಲ್ಲರೆ ಮತಗಳಿಂದ ಬಿಜೆಪಿ ಒಂದು ಸ್ಥಾನ ಗಳಿಸಿಕೊಂಡಿರುವುದನ್ನು ಹೊರತು ಪಡಿಸಿ ಬೇರಾವ ಕಡೆಯೂ ಬಿಜೆಪಿಗೆ ಸ್ಥಾನ ದಕ್ಕಿಲ್ಲ. ಉಡುಪಿ ಜಿಲ್ಲೆಯಲ್ಲಿಯೂ ಕೂಡ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗಳಿಸಿಕೊಂಡಿದ್ದು, ಅಲ್ಲಿಯೂ ಕೂಡ ಬಿಜೆಪಿ ಒಂದು ಸ್ಥಾನ ಮಾತ್ರ ಗಳಿಸಿಕೊಂಡಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿಯಿಂದಾದ ಅವಮಾನಕ್ಕೆ ಸೆಡ್ಡು ಹೊಡೆದು ಬಿಜೆಪಿಯನ್ನು ಧೂಳಿಪಟ ಮಾಡಿರುವ ಘಟನೆ ಕುಂದಾಪುರದ ಜನತೆಯು ಸಜ್ಜನ ವ್ಯಕ್ತಿಯ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. ರಾಜಕೀಯದಲ್ಲಿ ಸ್ವಾರ್ಥ ತುಂಬಿರುವಾಗ  ಹಾಲಾಡಿಯಂತ ನಿಷ್ಠಾವಂತರಿಗೆ ಅನ್ಯಾಯ ಮಾಡುತ್ತಾರೆಂದರೆ, ಯಾರಿಗಾದರೂ ಬೇಸರವಾಗದಿರಲು ಸಾಧ್ಯವೇ?
ಅದರ ಪರಿಣಾಮವೇ ಕರಾವಳಿಯ ಈ ಚುನಾವಣೆಯ ಫಲಿತಾಂಶ. ಬಿಜೆಪಿಯ ದೌರ್ಜನ್ಯಕ್ಕೆ ಹಾಲಾಡಿಗಾದ ಅನ್ಯಾಯಕ್ಕೆ ಕರಾವಳಿಯ ಎಲ್ಲಾ ಬಂಟ ಸಮುದಾಯ ಸೇಡನ್ನು ತೀರಿಸಿಕೊಂಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಪ್ರತಿಯೆನ್ನುವಂತೆ ಸಿದ್ದರಾಮಯ್ಯವರ ಸಂಪುಟದಲ್ಲಿ ಕರಾವಳಿಯಿಂದ ಆರಿಸಿ ಹೋದ ೧೦ ಜನ ಕಾಂಗ್ರೆಸ್ ಶಾಸಕರಲ್ಲಿ ನಾಲ್ವರಿಗೆ ಮಂತ್ರಿಗಿರಿ. ಅವಿಭಜಿತ ದಕ್ಷಿಣ ಜಿಲ್ಲೆಗೆ ನಾಲ್ಕು ಸಚಿವ ಸ್ಥಾನ ದೊರಕುವುದರೊಂದಿಗೆ ೨೦ ವರ್ಷಗಳ ಬಳಿಕ ರಾಜ್ಯ ಸರಕಾರದಲ್ಲಿ ಕರಾವಳಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಆದರೆ ಖಾತೆ ಹಂಚಿಕೆಯಾಗುವಾಗ ಮಾತ್ರ ಪ್ರಾದೇಶಿಕ ಮಹತ್ವವನ್ನು ಸಿಎಂ ಮರೆತು ಬಿಟ್ಟಿದ್ದಾರೆಯೇ ಎನ್ನುವ ಸಂಶಯ ಮೂಡುತ್ತಿದೆ. ಕರಾವಳಿಯ ಬಂಟ್ವಾಳದ ಶಾಸಕ ಬಿ.ರಮಾನಾಥ ರೈ ಅವರಿಗೆ ಅರಣ್ಯ, ಜೈವಿಕ ಮತ್ತು ಪರಿಸರ ಖಾತೆ, ಉಳ್ಳಾಲ ಶಾಸಕ ಯು.ಟಿ.ಖಾದರ್‌ರಿಗೆ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ, ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್‌ರಿಗೆ ಯುವಜನ ಸೇವೆ ಮತ್ತು ಮೀನುಗಾರಿಕೆ ಖಾತೆ, ಉಡುಪಿ ಕಾಪು ಶಾಸಕ ವಿನಯಕುಮಾರ್ ಸೊರಕೆಗೆ ನಗರಾಭಿವೃದ್ಧಿ ಖಾತೆಯನ್ನು ನೀಡಿದ್ದಾರೆ. ಕರಾವಳಿಗೆ ನಾಲ್ಕು ಸಚಿವ ಸ್ಥಾನ ದೊರಕಿದೆ ಎನ್ನುವಾಗ ಸಂತೋಷವಾಗಿದ್ದರೂ, ಖಾತೆ ಹಂಚಿಕೆಯಲ್ಲಿ ಅನ್ಯಾಯವಾಗಿದೆಯೇ ಎನ್ನುವ ಸಂಶಯದ ಎಳೆ ತಳಕಾಡುತ್ತದೆ.
ಹಿಂದೆ ರಾಜ್ಯದಲ್ಲಿ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಕರಾವಳಿ ಭಾಗದ ಜನರಿಗೆ ಬಂದರು ಹಾಗೂ ಮೀನುಗಾರಿಕೆ ಖಾತೆ ಕಟ್ಟಿಟ್ಟ ಬುತ್ತಿಯಾಗಿತ್ತು. ಭೌಗೋಳಿಕ ದೃಷ್ಟಿಯಿಂದ ಉಡುಪಿ, ದಕ್ಷಿಣಕನ್ನಡ ಹಾಗೂ ಉತ್ತರಕನ್ನಡ ಜಿಲ್ಲೆಗಳಿಗೆ ಮೀಸಲು ಎನ್ನುವಷ್ಟರ ಮಟ್ಟಿಗೆ ನಿರ್ಧರಿತವಾಗಿರುತ್ತಿತ್ತು. ಕರಾವಳಿ ನಗರವೆಂದರೆ ಬಂದರು ನಗರಿ ಎನ್ನುವ ಪರ್‍ಯಾಯ ಹೆಸರು ಕೂಡ ಇದೆ. ಬಯಲು ಸೀಮೆಯ ಬಾಬುರಾವ್ ಚೆಂಚನಸೂರ್ ಅವರಿಗೆ ಜವಳಿ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರನ್ನಾಗಿಯೂ ಮತ್ತು ಮೂಡಬಿದ್ರೆಯ ಶಾಸಕ ಅಭಯಚಂದ್ರ ಜೈನ್ ಅವರನ್ನು ಯುವಜನ ಸೇವೆ ಮತ್ತು ಮೀನುಗಾರಿಕೆ ಖಾತೆ ಸಚಿವರನ್ನಾಗಿ ಆಯ್ಕೆ ಮಾಡಿದ್ದಾರೆ. ಎಂತಹ ವಿಪರ್‍ಯಾಸ ನೋಡಿ. ಸಿದ್ದು ಸಚಿವ ಸಂಪುಟದಲ್ಲಿ ಕಡಲು ಕಾಣದ ಬಯಲು ಸೀಮೆಗೆ ಬಂದರು ಖಾತೆ ನೀಡಲಾಗಿದೆ. ಪ್ರಾಣಿ ಹಿಂಸೆ ಮಾಡದೆ, ಮೀನನ್ನು ಮುಟ್ಟದವರ ಪಾಲಿಗೆ ಮೀನುಗಾರಿಕೆ ಖಾತೆಯ ಭಾಗ್ಯ ಒಲಿದುಬಂದಿದೆ. ಉ.ಕ. ಸೇರಿದಂತೆ ಕರಾವಳಿಯಿಂದ ೫ ಸಚಿವರು ಸಂಪುಟದಲ್ಲಿದ್ದರೂ, ಸಮುದ್ರ ತಟದಲ್ಲಿರುವ ಎರಡು ಕ್ಷೇತ್ರಗಳಿಗೆ ಸಚಿವ ಸ್ಥಾನ ಒಲಿದರೂ, ಬಂದರೂ ಖಾತೆ ದೂರ ಸರಿದಿರುವುದು ವಿಪರ್‍ಯಾಸ. ಇದು ಮಹತ್ವದ ಖಾತೆಯಾಗಿರುವುದರಿಂದ ಖಾತೆ ವಿಂಗಡನೆ ಸಮಯದಲ್ಲಿ ಮುಖ್ಯಮಂತ್ರಿಗಳು ನಾನಾ ಒತ್ತಡಗಳಿಗೆ ಮಣಿದಿರುವ ಸಾಧ್ಯತೆಗಳೇ ಜಾಸ್ತಿಯಿದ್ದಿರಬಹುದು.
ಕರಾವಳಿ ಭಾಗದ ಜನತೆಗೆ ನಾಲ್ವರು ಸಚಿವರನ್ನು ಕಾಣುವಂತಾಗಿದ್ದು, ೨೦ ವರ್ಷಗಳ ಬಳಿಕ ಬಂದ ಭಾಗ್ಯಎಂದರೂ ತಪ್ಪಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಭಾಗದ ವಿಧಾನ ಪರಿಷತ್ ಸದಸ್ಯರೇ ಮಂತ್ರಿಗಿರಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ಮಟ್ಟಿಗೆ ಇದು ಮಹತ್ವದ ಬೆಳವಣಿಗೆ. ೧೯೯೩-೯೪ರ ಅವಧಿಯಲ್ಲಿ ಕಾರ್ಕಳದವರೆ ಆದ ವೀರಪ್ಪ ಮೊಲಿ ಸಂಪುಟದಲ್ಲಿ  ಮೊಲಿ ಸಹಿತ ಅಂದಿನ ದ.ಕ ಜಿಲ್ಲೆಯ ನಾಲ್ವರು ಚುನಾಯಿತ ವಿಧಾನಸಭೆಯ ಸದಸ್ಯರಿಗೆ ಪ್ರಾತಿನಿಧ್ಯ ದೊರಕಿತ್ತು. ಇದೀಗ ಎರಡು ದಶಕಗಳ ಬಳಿಕ ಅದೇ ಕಾಂಗ್ರೆಸ್ ಸರಕಾರ ಕರಾವಳಿಗೆ ಮರು ಮನ್ನಣೆ ನೀಡುತ್ತಿರುವುದು ಗಮನಾರ್ಹ ಸಂಗತಿ.
ಈ ಚುನಾವಣೆಯಲ್ಲಿ ೧೦ ಸ್ಥಾನ ಗಳಿಸಿಕೊಂಡಿದ್ದ  ಕಾಂಗ್ರೆಸ್ ಈ ಪ್ರಾಂತ್ಯದಲ್ಲಿ ತನ್ನ ಸಾಮ್ರಾಜ್ಯ ಮರುಸ್ಥಾಪಿಸಲು ನೆರವಾದ ಕರಾವಳಿಗೆ ನೀಡಿದ ಭರ್ಜರಿ ಕೊಡುಗೆಯಾಗಿದೆ. ಅದರಲ್ಲಿ ದ.ಕ.ಜಿಲ್ಲೆಯಲ್ಲಿ ಚುನಾಯಿತ ೭ ಶಾಸಕರಲ್ಲಿ ಮೂವರಿಗೆ ಅದೃಷ್ಟ ಖುಲಾಯಿಸಿದೆ. ಮಂಗಳೂರು ತಾಲೂಕಿನ ನಾಲ್ವರು ಅಲ್ಪಸಂಖ್ಯಾತ ಶಾಸಕರಲ್ಲಿ ಇಬ್ಬರು ಸಚಿವರು. ಇವರೆಲ್ಲಾ ಹಳೆ ಕಾಂಗ್ರೆಸ್ ಪರಂಪರೆಯಿಂದ ಬಂದವರಾಗಿದ್ದು, ಕರಾವಳಿಯಲ್ಲಿ ಪಕ್ಷದ ಗ್ರಾಫ್ ಕುಸಿದಿದ್ದಾಗಲೂ ನಿಷ್ಠೆಯಲ್ಲಿ ಮಾತ್ರ ಅಚಲವಾಗಿದ್ದರು. ಕಾಂಗ್ರೆಸ್‌ನ ಈ ನಡೆಯ ಹಿಂದೆ ಕರಾವಳಿ ಬಗೆಗಿನ ಮಮಕಾರವೋ, ಮುರಿದು ಬಿದ್ದ ಗತಸಾಮ್ರಾಜ್ಯವನ್ನು ಮರು ಕಟ್ಟುವ ತಂತ್ರವೋ ಇರಬಹುದು. ಆದರೆ ಛಿದ್ರವಾದ ಭದ್ರಕೋಟೆಯನ್ನು ಮರು ಭದ್ರಪಡಿಸಿಕೊಳ್ಳಲು ಬಿಜೆಪಿಗೆ ಅವಕಾಶ ನಿರಾಕರಿಸುವ ಉದ್ದೇಶವಂತೂ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ತಪ್ಪು ಮಾಡುವುದು ಮಾನವನ ಸಹಜ ಗುಣ. ತಪ್ಪನ್ನು ತಿದ್ದಿಕೊಂಡು ಬಾಳ್ವೆ ನಡೆಸುವುದು ದೊಡ್ಡ ಗುಣ. ಆದರೆ ತಪ್ಪು ಮಾಡಿರುವುದಕ್ಕೆ ಕರಾವಳಿಯ ಜನತೆ ಸರಿಯಾದ ಪಾಠ ಕಲಿಸಿದ್ದಾರೆ. ಆದರೆ ಮಾಡಿಕೊಂಡ ತಪ್ಪುಗಳನ್ನು ತಿದ್ದಿಕೊಂಡು ಎದ್ದೇಳಲು ಬಿಜೆಪಿ ಅವಕಾಶ ಕೊಡದಂತೆ ಕರಾವಳಿ ಜನರ ಸಹಾನು ಭೂತಿಗಳಿಸುವುದು ಕಾಂಗ್ರೆಸ್‌ಗೆ ಇಲ್ಲಿ ಮುಖ್ಯವಾಗಿರುವ ಉದ್ದೇಶವಿರಬಹುದು. ಇದರ ಮೊದಲ ಹೆಜ್ಜೆಯಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ಮಂಗಳೂರಿನ ನೈತಿಕ ಪೊಲೀಸ್ ದಾಳಿಗಳು ಮತ್ತು ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಗಳ ಕುರಿತಂತೆ ಕಡತಗಳನ್ನು ತರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗೃತವಾಗಿರುವ ಬಿಜೆಪಿ ತುರ್ತು ಸಭೆ ಕರೆದು ಸರಕಾರದ ಯಾವುದೇ ನಿಲುವು, ಕ್ರಮಗಳಿಗೂ ಹಿಂಸಾತ್ಮಕ ದಾರಿ ಹಿಡಿಯದೆ ಚಳುವಳಿ ಮಾರ್ಗ ಅನುಸರಿಸುವಂತೆ ತನ್ನ ಪರಿವಾರಕ್ಕೆ ಸೂಚನೆ ನೀಡತೊಡಗಿರುವುದು ಕರಾವಳಿಯಲ್ಲಿನ ಹೊಸ ಬೆಳವಣಿಗೆ.
೧೯೯೭ರಲ್ಲಿ ದ.ಕ.ದಿಂದ ಉಡುಪಿ ಜಿಲ್ಲೆ ಪ್ರತ್ಯೇಕಗೊಂಡ ಬಳಿಕ ಕರಾವಳಿಯ ಎರಡು ಜಿಲ್ಲೆಗಳ ಚುನಾಯಿತ ವಿಧಾನ ಸಭೆ ಸದಸ್ಯರಿಗೆ ಮಂತ್ರಿಗಿರಿ ಮನ್ನಣೆ ಒಲಿದದ್ದೆ ಕಡಿಮೆ. ೧೯೯೪ ರಲ್ಲಿ ಬಿಜೆಪಿ ಭರ್ಜರಿ ಜಯಬೇರಿ ಭಾರಿಸಿದ್ದರೂ, ಜನತಾದಳ ಗದ್ದುಗೆ ಹಿಡಿದ ಪರಿಣಾಮ ಸಂಪುಟದಲ್ಲಿ ಕರಾವಳಿಯ ಎಂಎಲ್‌ಎಗಳಿಗೆ ಶೂನ್ಯಸಂಪಾದನೆಯಾಗಿತ್ತು. ಆಗ ಜನತಾದಳದ ಶಾಸಕ ಬಿ.ಎ.ಮೊದಿನ್‌ಗೆ ಅವಕಾಶ ಸಿಕ್ಕಿತ್ತು. ೧೯೯೯-೨೦೦೪ ರಲ್ಲಿ ಕೃಷ್ಣ ಸಂಪುಟದಲ್ಲಿ ಬಂಟ್ವಾಳದ ಶಾಸಕ ರಮಾನಾಥ ರೈಗೆ ಸ್ಥಾನ ಸಿಕ್ಕಿದ್ದು, ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಮಂತ್ರಿ ಸ್ಥಾನದಲ್ಲಿ ಆಡಳಿತ ನಡೆಸಿದ ಅನುಭವವೂ ಇದೆ. ೨೦೦೪ರಲ್ಲಿ ಅವಿಭಜಿತ ಜಿಲ್ಲೆಯ ೧೫ ರಲ್ಲಿ ಕಾಂಗ್ರೆಸ್ ೧೧ ಸ್ಥಾನಗಳಿಸಿದ್ದರೂ, ಧರ್ಮಸಿಂಗ್ ಸಂಪುಟದಲ್ಲಿ ಕರಾವಳಿಗೆ ಬರಿ ಚಿಪ್ಪು ಮಾತ್ರ. ೨೦೦೬-೦೮ ರಲ್ಲಿ ಕುಮಾರಸ್ವಾಮಿ ಸಂಪುಟದಲ್ಲಿ ನಾಗಾರಾಜ ಶೆಟ್ಟಿಗೆ ೨೦ ತಿಂಗಳ ಅಧಿಕಾರ ಯೋಗ. ೨೦೦೮ ರಲ್ಲಿ ಅವಿಭಜಿತ ಜಿಲ್ಲೆಯಲ್ಲಿ ಬಿಜೆಪಿ ೧೩ರಲ್ಲಿ ೮ ಸ್ಥಾನ ಗೆದ್ದರೂ ಯಡಿಯೂರಪ್ಪ ಸಂಪುಟದಲ್ಲಿ ಕರಾವಳಿ ಶಾಸಕರಿಗೆ ದಕ್ಕಿದ ಸ್ಥಾನ ಕೇವಲ ಒಂದು ಮಾತ್ರ. ಅದು ಕೃಷ್ಣ ಜೆ.ಪಾಲೆಮಾರ್ ಅವರು. ಅವರು ಸದನಲ್ಲಿ ನೀಲಿ ಚಿತ್ರ ನೋಡಿದ್ದರು ಎನ್ನುವ ಅಪಕೀರ್ತಿಗೆ ಗುರಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದನ್ನು ಬಿಟ್ಟರೆ ದಿ.ಡಾ.ವಿ.ಎಸ್.ಆಚಾರ್ಯ, ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ಇವರೆಲ್ಲಾ ವಿಧಾನ ಪರಿಷತ್ ಸದಸ್ಯರು. ಶೆಟ್ಟರ್ ಸಂಪುಟ ರಚನೆಯಲ್ಲಿ ಕುಂದಾಪುರದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಕೊನೆ ಕ್ಷಣದಲ್ಲಿ ಸಚಿವ ಸ್ಥಾನದಿಂದ ಅವಕಾಶ ವಂಚಿತರಾಗಿ, ಬಿಜೆಪಿಯ ಪ್ರಾಥಮಿಕ ಸದಸ್ಯತನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಅತ್ಯಧಿಕ ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯನವರ ಅಧಿಕಾರದಲ್ಲಿ ಕರಾವಳಿಯ ಪಾಲಿಗೆ ನಾಲ್ಕು ಸಚಿವ ಸ್ಥಾನ ಗಳಿಸಿಕೊಟ್ಟಿದ್ದಾರೆ. ಕರಾವಳಿಯ ಸಮಸ್ಯೆಗಳು ಅನೇಕವಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಎಂಡೋಸಲ್ಫಾನ ಪೀಡಿತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು. ಕುಡಿಯುವ ನೀರಿನ ಸಮಸ್ಯೆ, ಅಕ್ರಮ ಮರಳುಗಾರಿಗೆ, ಅರಣ್ಯನಾಶ ಇತ್ಯಾದಿ. ನಾಲ್ವರು ಸಚಿವರುಗಳಿದ್ದು, ಕರಾವಳಿಯ ಜನತೆಯ ಸಮಸ್ಯೆಗಳನ್ನು ಆಲಿಸಿ, ಅದನ್ನು ಪರಾಮರ್ಶಿಸಿ ಅದನ್ನು ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಪಡಬೇಕಾದ ಅಗತ್ಯತೆಯಿದೆ. ಆಗಲೇ ಮತದಾರ ನಿಮ್ಮನ್ನು ಮತ್ತೊಮ್ಮೆ ಆರಿಸಿಕಳುಹಿಸುತ್ತಾನೇ ಎನ್ನುವುದರಲ್ಲಿ ಸಂಶಯವಿಲ್ಲ...
ಏನಂತಿರಾ...



ಊಟಕ್ಕಿಲ್ಲದ ಉಪ್ಪಿನಕಾಯಿ-ಗೋವುಗಳೇ ನಾಶವಾಗುತ್ತಿರುವಾಗ ಹಾಲಿಗೆ ಬೆಂಬಲ ಬೆಲೆ.
ದುಃಖ ಮಡಿಲಲಿಟ್ಟು ಕುಟುಂಬ ಸಂತೋಷದಲ್ಲಿ ಭಾಗಿಯಾಗಲು ಸಾಧ್ಯವೇ?


ಮೇ.೮ ರಂದು ವಿಧಾನ ಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ಕಣ್ಣಿದ್ದು ಕುರುಡರಾಗುವ ಪರಿಸ್ಥಿತಿ ನಮ್ಮದಾಗಿದೆಯೇ ಎನ್ನುವ ಗೊಂದಲದ ಪರಿಸ್ಥಿತಿ. ರಾಜ್ಯದ ಮುಖ್ಯಮಂತ್ರಿ ಚುಕ್ಕಾಣಿಯನ್ನು ಹಿಡಿದ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುವಾಗ ಘೋಷಣೆ ಮಾಡಿರುವುದನ್ನು ಗಮನಿಸಿದಾಗ ಇವರಿಗೆ ಸಾಮಾಜಿಕ ಕಳಕಳಿ ಇರಬಹುದು ಎಂದು ಎಲ್ಲರೂ ತಿಳಿದುಕೊಂಡಿದ್ದರು. ಹಳ್ಳಿಯ ಬಡಜನತೆ ಹಾಗೂ ಮಧ್ಯಮ ವರ್ಗದವರ ಜೀವನ ನಿರ್ವಹಣೆಗೆ ಅನುಕೂಲವಾಗುವಂತ ಕೆ.ಜಿ. ಅಕ್ಕಿಗೆ ೧ರೂ ಹಾಗೂ ಹಾಲಿನ ಪ್ರೋತ್ಸಾಹ ಬೆಲೆಯಲ್ಲಿ ಹೆಚ್ಚಳ. ಈ ವಿಷಯವನ್ನು ಕೇಳಿದ ಹಳ್ಳಿಯ ಮುಗ್ದ ಜನತೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಸಂತೋಷದಿಂದ ಸಂಭ್ರಮಿಸುವಾಗಲೇ ಮತ್ತೊಂದು ಹೇಳಿಕೆ ಸಂತೋಷವನ್ನು ಆಚರಿಸಬೇಕೆ? ಅಥವಾ ದುಃಖದಲ್ಲಿ ಭಾಗಿಯಾಗಬೇಕೆ ಎನ್ನುವಲ್ಲಿಯೂ ಗೊಂದಲ.
ಅಲ್ಪಸಂಖ್ಯಾತರನ್ನು ಓಲೈಕೆ ಮಾಡಬೇಕೆಂಬ ನೆಲೆಯಲ್ಲಿ ೧೯೬೪ ರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಯಥಾವತ್ತಾಗಿ ಮುಂದುವರಿಸಲಾಗುವುದು ಎಂದು ಹೇಳಿಕೆ ನೀಡಿರುವುದು ಮುಂದಿನ ಎಂಪಿ ಚುನಾವಣೆಯ ಮುನ್ಸೂಚನೆಯೇ? ಇಲ್ಲವಾದರೆ ಬಿಜೆಪಿ ಆಡಳಿತದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ಗಳಲ್ಲಿ ಅನುಮೋದನೆ ಪಡೆದ ಬಿಜೆಪಿ ಸರಕಾರ ರಾಜ್ಯಪಾಲರ ಅಂತಿಮ ಅಂಕಿತಕ್ಕೆ ಕಳುಹಿಸಿತ್ತು. ಆದರೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಆ ಕಡತಕ್ಕೆ ಅಂತಿಮ ಅಂಗೀಕಾರ ನೀಡದೆ ಇಲ್ಲಿಯವರೆಗೆ ಯೋಜನೆ ಜಾರಿಯಾಗದೇ ಜೇಡರ ಬಲೆ-ಧೂಳುಗಳಿಂದಾವೃತವಾದ ಹಳೆಯ ಕಡತಗಳ ಸಾಲಿಗೆ ಸೇರ್ಪಡೆಯಾಗಿದೆಯೇ ಎನ್ನುವ ಸಂದೇಹ. ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿದ್ದರೂ, ಸಿದ್ದರಾಮಯ್ಯ ರಾಜಕೀಯ ಪ್ರೇರಿತ ದುರುದ್ದೇಶ ಹಾಗೂ ಒಂದು ವರ್ಗವನ್ನು ಓಲೈಕೆ ಮಾಡುವ ಸಲುವಾಗಿ ಈ ಹೇಳಿಕೆ ನೀಡಿದ್ದಾರೆ ಎನ್ನುವುದು ಜನತೆಯ ಅಭಿಮತ. 
ಪ್ರಪಂಚದಲ್ಲಿರುವ ಎಲ್ಲಾ ವರ್ಗಗಳೂ ಕೂಡ ಗೋವಿನಿಂದ ಒಂದಲ್ಲ ಒಂದು ತೆರನಾದ ಸಹಾಯ ಪಡೆದಿದ್ದಾರೆ. ಆದರೆ ಹಿಂದುಗಳಿಗೆ ಮಾತ್ರ ಗೋವು ಅನಾದಿಕಾಲದಿಂದಲೂ ಪೂಜನೀಯ ಪ್ರಾಣಿ. ಮುಕ್ಕೋಟಿ ದೇವತೆಗಳನ್ನು ನಾವು ಗೋವಿನ ಮಹತ್ ರೂಪಿನಲ್ಲಿ ಕಾಣುತ್ತೇವೆ.  `ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ' ಎನ್ನುವ ಗೋವಿನ ಹಾಡಿನಲ್ಲಿ ಗೋವಿನ ಮಹತ್ವಿಕೆ ವರ್ಣಿತವಾಗಿದೆ. ಮಗುವೊಂದು ತಾಯಿಯ ಎದೆಹಾಲು ಕುಡಿಯುವುದನ್ನು ನಿಲ್ಲಿಸಿದ ನಂತರ ಅದಕ್ಕೆ ಹಸುವಿನ ಹಾಲನ್ನು ಕುಡಿಸಲಾಗುತ್ತದೆ. ಹಸುವಿನ ತುಪ್ಪ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಸಗಣಿಯೋ ಒಳ್ಳೆಯ ಗೊಬ್ಬರ. ಇನ್ನೂ ಗೋಮೂತ್ರವಂತೂ ಬಗೆ ಬಗೆಯ ರೋಗಗಳಿಗೆ ರಾಮಬಾಣವೆನ್ನುವುದು ಜನಜನಿತ.
ಸ್ವಾತಂತ್ರ್ಯಪೂರ್ವದಲ್ಲಿ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ತಮ್ಮ ಆಡಳಿತದ ಹತೋಟಿ ತರಲು ಆರಿಸಿಕೊಂಡ ಮಾರ್ಗ ಶಿಕ್ಷಣ ಪದ್ದತಿ ಹಾಗೂ ಕೃಷಿ ಪದ್ದತಿಯ ಮೇಲೆ ಹೊಡೆತ ನೀಡಿದ್ದು, ಅದು ನಮ್ಮ ಸಂಸ್ಕೃತಿಯ ಮೇಲೆ ಎಂದೂ ಮಾಸದ ಬರೆಯನ್ನು ಎಳೆದಿರುವುದಂತೂ ಸತ್ಯ. ಅದರಿಂದ ಚೇತರಿಸಿ ಕೊಳ್ಳಲು ಇಷ್ಟರವರೆಗೆ ಸಾಧ್ಯವಾಗಿಲ್ಲ. ಗುರುಕುಲ ಶಿಕ್ಷಣ ಪದ್ದತಿಯ ನಾಶಕ್ಕಾಗಿ, ಇಂಗ್ಲಿಷ್ ಶಿಕ್ಷಣ ಪದ್ದತಿಯನ್ನು ಮೆಕಾಲೆ ಜಾರಿಗೆ ತಂದನು. ಋಷಿ ಪರಂಪರೆಯ ಕೃಷಿ ಪದ್ದತಿಯ ನಾಶಕ್ಕಾಗಿ ಆಯ್ದುಕೊಂಡ ಮಾರ್ಗವೇ ಗೋಹತ್ಯೆ...
ನಿರ್ಭಾಧಿತವಾಗಿ ಗೋಹತ್ಯೆ ಪ್ರಾರಂಭವಾಗುತ್ತಿದ್ದಂತೆ ದೇಶದಲ್ಲಿ ಹಾಲು, ಮೊಸರು, ತುಪ್ಪದ ಪ್ರಮಾಣ ಕಡಿಮೆಯಾಗತೊಡಗಿತು. ಇದು ರಾಷ್ಟ್ರವ್ಯಾಪಿಯಾಗಿ ಚರ್ಚೆ-ಗುಸುಗುಸು ಆರಂಭವಾಗುತ್ತಿದ್ದಂತೆ ಪಾಶ್ಚಿಮಾತ್ಯರು ವಿಟಮಿನ್‌ಗಳ ಚರ್ಚೆ ಆರಂಬಿಸಿದರು. ಇದು ನಮ್ಮವರ ಕಿವಿಗಳಿಗೆ ಬೇಗ ಮುಟ್ಟಿತು. ಮೊದಲೇ ನಮ್ಮವರದು ಹಿತ್ತಾಳೆ ಕಿವಿಯಲ್ಲವೇ? ನಮ್ಮತನವಿಲ್ಲದೇ ಬೇರೆಯವರು ಹೇಳಿರುವುದನ್ನೇ ಸತ್ಯವೆಂದು ನಂಬಿಕೊಂಡು ಅಗ್ನಿಸಾಕ್ಷಿಯಾಗಿ ಕೈ ಹಿಡಿದ ಹೆಂಡತಿಯನ್ನು ನಡುದಾರಿಯಲ್ಲಿ ಕೈಬಿಟ್ಟು ಹೋಗುವಂತ ದ್ಯೇಯನಿಷ್ಠರು. ಯಾವಾಗ ಪಾಶ್ಚಾತ್ಯರು ವಿಟಮಿನ್‌ಗಳ ಕುರಿತು ಚರ್ಚೆ ಆರಂಭಿಸಿದರೋ ಆಗ ನಮ್ಮವರ ಗಮನ ಹಾಲು, ತುಪ್ಪಗಳಿಂದ ಬೇರೆಯಾಗಿ ವಿಟಮಿನ್‌ಗಳತ್ತ ಹರಿಯಿತು. ಗೋ-ಉತ್ಪನ್ನಗಳಿಂದ ಬೇರೆಯಾಗಿ ತರಕಾರಿಗಳತ್ತ ಜನರ ಆಕರ್ಷಣೆ ವಿಪರೀತವಾಯಿತು. ತುಪ್ಪದಲ್ಲಿ ಕೊಬ್ಬಿನಂಶ ಇರುವುದರಿಂದ ಅದನ್ನು ತಿಂದರೆ ಹೃದಯರೋಗ ಬರುತ್ತದೆ ಎಂದು ಪಾಶ್ಚಿಮಾತ್ಯರು ದೇಶವ್ಯಾಪಿಯಾಗಿ ಪ್ರಚಾರ ಮಾಡಿದರು. ಪಾಶ್ಚಿಮಾತ್ಯರ ಈ ಪ್ರಚಾರಕ್ಕೆ ನಮ್ಮವರಲ್ಲಿರುವ ಪರಂಪರೆಯ ಜ್ಞಾನ ಮಸುಕಾಗ ತೊಡಗಿತು. ಅದನ್ನೇ ಸತ್ಯವೆಂದು ನಂಬಿದರು. ವಿಶೇಷವೆಂದರೆ ದೇಶದ ಶಿಕ್ಷಿತವರ್ಗ ಈ ಪ್ರಚಾರಕ್ಕೆ ಮರುಳಾಯಿತು. ಶಂಖದಿಂದ ಬಂದದ್ದೆಲ್ಲಾ ತೀರ್ಥವೆಂದು ಭಾವಿಸಿ ಎಲ್ಲರ ಚಿತ್ತ ತರಕಾರಿಯತ್ತ ಹೊರಳಿದರೆ ಗೋಹತ್ಯೆ ಮಾತ್ರ ಅವ್ಯಾಹತವಾಗಿ ನಡೆಯುತ್ತಲೇ ಇತ್ತು.
ದೇಶಿ ಹಸುವಿನ ತುಪ್ಪದಿಂದ ಸಿಗುವ ಶಕ್ತಿ ಯಾವುದೇ ವಿಟಮಿನ್ ಮತ್ತು ಮಾಂಸಾಹಾರದಲ್ಲಿ ಸಿಗೋದು ಸಾಧ್ಯವೇ ಬಂಧುಗಳೇ? ಗೋವಿನ ಹಾಲಿನಿಂದ ಕ್ಷಣಮಾತ್ರದಲ್ಲಿಯೇ ಅಸಿಡಿಟಿಯಂತಹ ರೋಗಗಳು ಪರಿಹಾರವಾಗುತ್ತೆ? ಗೋಮೂತ್ರದಿಂದ ಶರೀರದಲ್ಲಿನ ಎಲ್ಲಾ ದುಷ್ಪರಿಣಾಮಗಳನ್ನು, ಅಸಂತುಲನೆಯನ್ನು ಸಂಪೂರ್ಣ ದೂರಗೊಳಿಸುವ ರಾಸಾಯನಿಕ ಗುಣ ಮತ್ತು ಕ್ಷಮತೆ ಇದೆ. ಮಗುವಿಗೆ ಕುಡಿಸುವುದಕ್ಕೆಂದೆ ತಾಯಿಯ ಬಳಿ ಸಾಕಷ್ಟು ಎದೆ ಹಾಲಿದೆ ನಿಜ. ಆದರೆ ಮಜ್ಜಿಗೆ-ಮೊಸರುಗಳು ಹಸಿವೆಗೆ ಅಮೃತವಿದ್ದಂತೆ ಮತ್ತು ಜೀರ್ಣಕ್ಕೆ ಸಂಜೀವಿನಿಯಿದ್ದಂತೆ. ಅಂತ ಪೂಜನೀಯ ಗೋಮಾತೆಯ ವಂಶ ನಾಶದ ದುರಂತ ಕಥೆಯಿಂದು ಕಣ್ಣೀರಾಗಿ ನಮ್ಮ ಮುಂದಿದ್ದಾಳೆ.
ಈಗ ನಾವು ಎಂತಹ ದುರಂತಮಯ ಸನ್ನಿವೇಶವನ್ನು ಕಾಣುತ್ತಿದ್ದೇವೆ. ದಿನ ಬೆಳಗಾದರೆ ಕುಡಿಯುವುದಕ್ಕೆ ಟೀ, ಕಾಫಿ ಅಥವಾ ಹಾಲು ಇನ್ನಿತರ ಯಾವುದೇ ಪೇಯಕ್ಕಾದರೂ ಹಾಲು ಎನ್ನುವುದು ಅತಿಮುಖ್ಯ. ಯಾವುದೇ ಮತ, ಧರ್ಮದವರಿರಲಿ ಅವರಿಗೆ ಹಾಲು ಮುಖ್ಯ. ನಮ್ಮ ದಿನಚರಿ ಪ್ರಾರಂಭವಾಗುವುದೇ ಗೋಮಾತೆ ನೀಡುವ ಅಮೃತದಿಂದ ಎಂದು ತಿಳಿದಿದ್ದರೂ ನಾವು ಯಾಕೆ ಅನಾಗರಿಕರಂತೆ ವರ್ತಿಸುತ್ತಿದ್ದೇವೆ. ದಿನದಿಂದ ದಿನಕ್ಕೆ ಗೋಸಂತತಿಯು ವಿನಾಶದ ಹೊಸ್ತಿಲಲ್ಲಿದೆ ಎಂದು ತಿಳಿದರೂ ಯಾಕೆ ತಟಸ್ಥರಾಗಿದ್ದೇವೆ. ಸ್ವಾತಂತ್ರ್ಯಪೂರ್ವದಲ್ಲಿ ೩೫೦ ಇದ್ದ ಕಸಾಯಿಖಾನೆಗಳು ಈಗ ೩೫೦೦ಕ್ಕೂ ಮಿಕ್ಕಿವೆ. ಗೋವನ್ನು ಪೂಜಿಸುವ ಹಿಂದೂಗಳ ಭಾವನೆಗೆ ಧಕ್ಕೆ ಬರುವಂಥ ಕೃತ್ಯ ಇದಾಗಿದೆ ಎಂದು ತಿಳಿಸಿದರೂ, ಯಾಕೀ ಮೌನವೃತ? ಇದನ್ನೆಲ್ಲಾ ನೋಡಿದರೆ ನಾವು ಕುಟುಂಬದೊಂದಿಗೆ ಸಂಭ್ರಮ ಆಚರಿಸಲು ಸಾಧ್ಯವೇ? ವೈಜ್ಞಾನಿಕತೆಯ ಸೋಗಿನಲ್ಲಿ ಮೂಕಪ್ರಾಣಿಗಳ ವೇದನೆಗೆ ಕಣ್ಣೀರಾಗದೇ ಸ್ವಾರ್ಥತೆಯನ್ನು ಸಾಧಿಸುತ್ತಿದ್ದೇವೆ. 
ಕುಂದಾಪುರ ತಾಲೂಕಿನ ಆರ್ಡಿಯಲ್ಲಿ ಕಳೆದ ವಾರ ನಾಲ್ವರೂ ಅನ್ಯಮತೀಯ ಯುವಕರು ತಡ ರಾತ್ರಿಯಲ್ಲಿ ಮನೆಯ ಮುಂದೆ ಮಲಗಿರುವ ದನವನ್ನು ಕದ್ದೊಯ್ದರು. ಅಂದರೆ ಅವರ ಧೈರ್ಯ ಎಷ್ಟರ ಮಟ್ಟಿನದು? ಇಲ್ಲಾ ಅವರಿಗೆ ನೈತಿಕವಾಗಿ ಸಹಾಯ ಮಾಡುವವರು ಯಾರು? ಅಧಿಕಾರಕ್ಕೆ ಬಂದಾಕ್ಷಣ ಮನೆಯ ಮುಂದಿರುವ ದನವನ್ನು ಕದ್ದೊಯ್ಯುವ ಇವರು ದಿನಗಳೆದಂತೆ ನಮ್ಮ ಮನೆಯ ಮಹಿಳೆಯರ ಅಪಹರಿಸುವ ದಿನ ಬಹಳ ದೂರವಿಲ್ಲ ಎನ್ನುವ ಸತ್ಯವನ್ನು ಯಾಕೆ ಅರಿಯುತ್ತಿಲ್ಲ? ಬಂಧುಗಳೇ ನಿಮ್ಮ ಅಂತರಾತ್ಮವನ್ನು ಪ್ರಶ್ನಿಸಿಕೊಳ್ಳಿ.
ನಾಲ್ಕು ಚಕ್ರದ ವಾಹನದಲ್ಲಿ ಏಳೆಂಟು ಮಂದಿ ಕುಳಿತುಕೊಳ್ಳಲು ತ್ರಾಸಪಡುತ್ತೇವೆ. ಕುಳಿತುಕೊಳ್ಳಲು ಸ್ಥಳವಕಾಶವಿಲ್ಲದ ಬಸ್‌ಗಳನ್ನು ಏರುವುದಿಲ್ಲ. ಆದರೆ ದಷ್ಟ-ಪುಷ್ಟವಾಗಿ ಬೆಳೆದ ಹತ್ತಾರು ಗೋವುಗಳನ್ನು ತುಂಬುತ್ತಾರೆ ಅಂದರೆ ಯಾವ ರೀತಿ ಚಿತ್ರಹಿಂಸೆ ನೀಡುತ್ತಾರೆ. ನಾವಿರುವ ಪರಿಸರದಲ್ಲಿ ಅನೇಕ ಭಾರಿ ಇಂತಹ ಘಟನೆಗಳು ನಡೆದಿದ್ದರೂ, ಇಷ್ಟರವರೆಗೆ ಪೊಲೀಸರಿಗೆ ಯಾವುದೇ ದೂರನ್ನು ದಾಖಲಿಸಿಲ್ಲವೆಂದಾದರೆ ಅಂಬಾ ಎನ್ನುವ ಆಕಳಿನ ಧ್ವನಿ ನಮ್ಮ ಅಂತಃಕರಣವನ್ನು ಇನ್ನೂ ತಟ್ಟಿಲ್ಲವೇ? ಪಕ್ಕದ ಮನೆಯ ತೆಂಗಿನ ಮರದ ಕೊಂಬೆಯೊಂದು ಮನೆಯಂಗಳಕ್ಕೆ ಬಿದ್ದರೆ ದಾಖಲೆಗಳನ್ನು ಹಿಡಿದುಕೊಂಡು ಪೊಲೀಸ್ ಠಾಣೆ, ಕೋರ್ಟು ಕಚೇರಿ ಎಂದು ಅಲೆದಾಡುವ ನಾವು ಕಣ್ಣೆದುರಿಗೆ ಅನ್ಯಾಯವಾಗುತ್ತಿದ್ದರೂ, ತಡೆಯುವ ಗೋಜಿಗೆ ಹೋಗುತ್ತಿಲ್ಲ.
ದಿನನಿತ್ಯ ಸಾವಿರಾರು ಗೋವುಗಳನ್ನು ದೇಶದ ಮೂಲೆ-ಮೂಲೆಯಿಂದ ಅಪಹರಿಸಿ ಕೊಲ್ಲುವುದನ್ನು ಕಾಣುತ್ತಿದ್ದೇವೆ. ತಾಯಿಯನ್ನು ಕಳೆದುಕೊಂಡ ಆ ತಬ್ಬಲಿ ಕರುವಿನ ಮುಖವನ್ನು ನೋಡಿದರೆ ಅಯ್ಯೊ ಅನ್ನಿಸುವುದಿಲ್ಲವೆ? ನಮ್ಮಲ್ಲಿರುವ ಕರುಣೆ ಹಾಗೂ ಸ್ವಾಭಿಮಾನ ಅಡಗಿಹೊಯಿತೆ? ಸೌಧೆಯನ್ನು ಚೆನ್ನಾಗಿ ಕುಕ್ಕಿದರೆ ಬೆಂಕಿ ಧಗಧಗ ಉರಿಯುತ್ತದೆ. ಹಾವನ್ನು ತುಳಿದರೆ ಹೆಡೆಬಿಚ್ಚಿ ಬುಸುಗುಡುತ್ತದೆ. ಪ್ರಾಣಿ ಹಾಗೂ ಮನುಷ್ಯರನ್ನು ಪ್ರಚೋದಿಸಿದಾಗ ಅಥವಾ ಸಿಟ್ಟಿಗೇಳಿಸಿದಾಗ ಮಾತ್ರ ತಮ್ಮ ಶಕ್ತಿ ಪ್ರದರ್ಶಿಸುವ ಜನ ಗೋಮಾತೆಯ ರಕ್ಷಣೆಯಲ್ಲಿ ಮಾತ್ರ ಯಾಕೀ ಮೌನ...ಕೆಲಸಕ್ಕೆ ಮನ ಮಾಡುವ ಮುನ್ನ ಆಂತರಿಕ ಒತ್ತಡದಿಂದ, ಹೇಗಾದರೂ ಪಾರಾಗಬೇಕು ಎಂಬ ಅನಿವಾರ್ಯತೆ ಇರಬಹುದು. ಇನ್ನು ಮುಂದೆ ತೊಂದರೆಯೇ ಬರಬಾರದು ಎನ್ನುವ ಭದ್ರಭವಿತವ್ಯದ ಬಯಕೆ ಇರಬಹುದು ಅಥವಾ ನಾನೇನು ಎನ್ನುವುದನ್ನು ಇವರಿಗೆ ತೋರಿಸಿಯೇ ಬಿಡುತ್ತೇನೆ ಎನ್ನುವ ಛಲ ಇರಬಹುದು.
ಹಾವನ್ನು ತುಳಿದರೆ ಮಾತ್ರ ಅದು ಬುಸುಗುಡುವಂತೆ, ಕೊಳ್ಳಿಯನ್ನು ಕುಕ್ಕಿದರೆ ಮಾತ್ರ ಪ್ರಜ್ವಲಿಸುವಂತೆ ಮನುಷ್ಯನ ಮನಸ್ತಿತಿಯೂ ಕೂಡ ಅಂತೆಯೇ. ಯಾರಿಂದಲಾದರೂ ಕೆಣಕಿಸಿಕೊಂಡಾಗ, ಅಪಹಾಸ್ಯಕ್ಕೆ ಗುರಿಯಾದಾಗ ಮಾತ್ರ ತಮ್ಮ ಶಕ್ತಿ ಪ್ರದರ್ಶಿಸುತ್ತಾರೆ. ಹಠದಲ್ಲಿ ಬಿದ್ದು ಸಾಧನೆಯಲ್ಲಿ ತೊಡಗಿ ಅಸಾಧ್ಯವಾದುದನ್ನು ಸಾಧಿಸುತ್ತಾರೆ.
ಹಾಗಂತ ಹಾವು ಯಾವಾಗಲೂ ಹೆಡೆಬಿಚ್ಚಿ ಬುಸುಗುಡಬೇಕು ಅಂತಲ್ಲ ಅಥವಾ ಶಕ್ತಿವಂತರು ಅನವಶ್ಯಕವಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕಂತಲೂ ಅಲ್ಲ. ಇರುವ ಶಕ್ತಿಯನ್ನು ಗರಿಷ್ಟ ಪ್ರಮಾಣದಲ್ಲಿ ತಮ್ಮ ಉನ್ನತಿಗೆ ಬಳಸಿಕೊಳ್ಳಬೇಕು ಎನ್ನುವ ಆಶಯ. ಜಿದ್ದಿಗೆ ಬಿದ್ದಾಗ ಛಲ ಸಾಧಿಸುವ ನಾವು ಗೋಮಾತೆಯ ರಕ್ಷಣೆಯ ವಿಷಯದಲ್ಲಿ ನಮ್ಮ ಶಕ್ತಿಯನ್ನು ಯಾವ ಪ್ರಯೋಜನಕ್ಕೂ ಬಾರದಂತೆ ಬಿಡಬೇಕೆ..
ನಿಮ್ಮ ಬುದ್ದಿಶಕ್ತಿಗೆ ಕೆಲಸವನ್ನು ನೀಡಿ, ಇನ್ನಾದರೂ ಎಚ್ಚೆತ್ತು ಗೋಮಾತೆಯ ರಕ್ಷಣೆಗಾಗಿ ಹೋರಾಡುತ್ತಾ, ಜಾಗೃತರಾಗಿ ಪೊಲೀಸರಿಗೆ ದೂರು ನೀಡುವ ಗುಣವನ್ನು ಬೆಳೆಸಿಕೊಳ್ಳೊಣ. ಇದರಿಂದ ಸಂಭವಿಸುವ ಗಲಾಟೆಗಳು ಕಡಿಮೆಯಾಗಬಹುದೆನೋ? ಇದುವೇ ಸುದಿನವೆಂದು ಭಾವಿಸಿ, ಗೋಮಾತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸಂಕಲ್ಪಮಾಡಿ ಕೇಂದ್ರ ಹಾಗೂ ರಾಜ್ಯಸರ್ಕಾರಕ್ಕೆ ಎಚ್ಚರಿಕೆಯ ಘಂಟೆಯೊಂದನ್ನು ಮೊಳಗಿಸುವ..ಹಿಂದುಗಳ ಶಕ್ತಿಯನ್ನು ಜಗತ್ತಿಗೆ ತೋರಿಸೋಣ.
ಏನಂತಿರಾ...




ಶ್ರೀ ಕ್ಷೇತ್ರ ತಿರುಪತಿ-
ಮೂರು ಮುಕ್ಕಾಲು ಘಳಿಗೆಯಲ್ಲಿ ತಿಮ್ಮಪ್ಪನ ಮುತ್ತಿನ ಕಿರೀಟ ನೋಡಿದರೆ ಕಷ್ಟವೆಲ್ಲಾ ಪರಿಹಾರ..ಇಲ್ಲಿನ ಲಡ್ಡು ಬಹಳ ಫೆಮಸ್ಸು

ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ವ್ಯಾಪ್ತಿಯ ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ಬೆಟ್ಟಗಳ ತಪ್ಪಲಿನಲ್ಲಿದೆ ಈ ತಿರುಪತಿ. ಹೆಸರು ಕೇಳಿದಾಕ್ಷಣ ಧಾರ್ಮಿಕತೆ ಮನದುಂಬಿಕೊಳ್ಳುವ ಈ ಪ್ರದೇಶ ದೇಶದ ಸಾಂಸ್ಕೃತಿಕ ಶ್ರೀಮಂತ ನಗರಿಗಳಲ್ಲಿ ಒಂದಾಗಿದೆ. ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ತಿರುಪತಿಗೆ ನಿತ್ಯ ಸಾವಿರಾರು ಭಕ್ತರು ಮಾತ್ರವಲ್ಲ, ಪ್ರವಾಸಿಗರು ಆಗಮಿಸುತ್ತಾರೆ.
ತಿರುಪತಿ ಇಂದು ಜನಪ್ರಿಯತೆಯ ಉತ್ತುಂಗದಲ್ಲಿದೆ. ಇದರ ಹೆಸರೇ ಇಂದು ವಿಶ್ವಮಟ್ಟದಲ್ಲಿ ಆಂದ್ರಪ್ರದೇಶವನ್ನು ಗುರುತಿಸುವಂತೆ ಮಾಡಿದೆ ಎಂದರೂ ತಪ್ಪಾಗಲಾರದು. ವಿಶೇಷ ಎಂದರೆ ಈ ತಿರುಪತಿ ಶಬ್ದದ ನಿಜಾರ್ಥ ಇದುವರೆಗೂ ಸ್ಪಷ್ಟವಾಗಿಲ್ಲ. ಮಾಹಿತಿ ಪ್ರಕಾರ ತಿರು ಹಾಗೂ ಪತಿ ಎನ್ನುವ ಎರಡು ಶಬ್ದದ ಸಮ್ಮಿಲನ ಇದಾಗಿದೆ. ತಮಿಳು ಭಾಷೆಯಲ್ಲಿ ತಿರು ಎಂದರೆ ಗೌರವಾನ್ವಿತ ಎಂದಾಗುತ್ತದೆ. ಅದೇ ರೀತಿ ಪತಿ ಎಂದರೆ ಗಂಡ ಎಂದಾಗುತ್ತದೆ. ಈ ಎರಡೂ ಶಬ್ದದ ಒಟ್ಟಾರ್ಥ ಜವಾಬ್ದಾರಿಯುತ ಪತಿ/ಒಡೆಯ ಎಂದಾಗುತ್ತದೆ.
ತಿರುಪತಿ ದೇವಾಲಯ ತಿರುಮಲ ಪರ್ವತ ಶ್ರೇಣಿಗಳಲ್ಲಿದೆ. ಈ ಪರ್ವತ ಶ್ರೇಣಿಯು ನಗರ ಕೇಂದ್ರಕ್ಕೆ ಅತ್ಯಂತ ಹತ್ತಿರವಾಗಿದೆ. ತಿರುಮಲ ಪರ್ವತವು ವಿಶ್ವದ ಅತ್ಯಂತ ಹಿರಿಯ ಕಲ್ಲಿನ ಪರ್ವತಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ಜನಪ್ರಿಯ ಈ ದೇವಾಲಯವನ್ನು ಯಾರು ಕಟ್ಟಿದ್ದಾರೆ ಎನ್ನುವ ಪುರಾವೆ ಇದುವರೆಗೆ ಸಿಕ್ಕಿಲ್ಲ. ಆದರೆ ಅನೇಕ ಆಡಳಿತಗಾರರು ರಾಜರು ದೇವಾಲಯದ ಜೀರ್ಣೋದ್ಧಾರ, ನವೀಕರಣ ಮಾಡಿದ್ದಾರೆ. ನಾಲ್ಕನೇ ಶತಮಾನದಿಂದಲೂ ಇದನ್ನು ನವೀಕರಿಸಿರುವ ಬಗ್ಗೆ ಮಾಹಿತಿ ಇದೆ. ೧೪-೧೫ ನೇ ಶತಮಾನದಲ್ಲಿ ಈ ದೇವಾಲಯವು ಮುಸ್ಲಿಮರ ದಾಖಲೆಯಲ್ಲಿ ನಮೂದಾಗಿದೆ. ಇದಲ್ಲದೆ ಬ್ರಿಟಿಷರು ಕೂಡಾ ಇದನ್ನು ರಕ್ಷಿಸಿಕೊಂಡು ಬಂದರು. ಇಂದು ವಿಶ್ವದ ಅತ್ಯಂತ ರಕ್ಷಣಾತ್ಮಕ ವಲಯಗಳಲ್ಲಿ ಬರುವ ದೇವಾಲಯಗಳಲ್ಲಿ ಇದು ಒಂದಾಗಿದೆ. ಮದ್ರಾಸ್ ವಿಧಾನಸಭೆಯಲ್ಲಿ ಇದಕ್ಕಾಗಿಯೇ ೧೯೩೩ರಲ್ಲಿ ಪ್ರತ್ಯೇಕ ಕಾನೂನು ರಚನೆಯಾಗಿತ್ತು. ದೇವಾಲಯದ ರಕ್ಷಣೆ, ನಿರ್ವಹಣೆ ಹೊಣೆಯನ್ನು ಪ್ರತ್ಯೇಕ ತಿರುಪತಿ, ತಿರುಮಲ ದೇವಾಸ್ಥಾನ ಸಮಿತಿ ರಚಿಸಿ ಅದರ ಅಧೀನಕ್ಕೆ ನೀಡಲಾಗಿದೆ. ಅಂದು ಮದ್ರಾಸ್ ಸರಕಾರ ಇದಕ್ಕಾಗಿಯೇ ಪ್ರತ್ಯೇಕ ಜಿಲ್ಲಾಧಿಕಾರಿಯನ್ನು ನೇಮಕ ಮಾಡಿ ಎಂದು ಆದೇಶ ಹೊರಡಿಸಿದೆ. ತಿರುಪತಿ ತಿರುಮಲ ದೇವಸ್ಥಾನ ವ್ಯಾಪ್ತಿಯು ಅದನ್ನು ನೋಡಿಕೊಳ್ಳುತ್ತಿರುವವರಿಗೆ  ಮುಡಿಪಾಗಿದೆ. ಇದಕ್ಕೆ ಪ್ರತ್ಯೇಕ ಧಾರ್ಮಿಕ ಸಲಹಾ ಸಮಿತಿ ಇದ್ದು ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಮಾಹಿತಿ ನೀಡುತ್ತದೆ. ತಿರುಪತಿ ಪಟ್ಟಣವು ಕೊಟ್ಟೂರಿಗೆ ಸಮೀಪವಾಗಿದೆ. ಇಂದು ಇದನ್ನು ಕೆಟಿ ರೋಡ್ ಅನ್ನಲಾಗುತ್ತದೆ. ನಂತರ ಇದು ಗೋವಿಂದ ರಾಜ ಸ್ವಾಮಿ ದೇವಾಲಯಕ್ಕೆ ಸ್ಥಳಾಂತರಗೊಂಡಿತು. ಅಂದು ಅದೇ ಸ್ಥಳ ನಿರೀಕ್ಷೆಗೂ ಮೀರಿದ ಅಗಾಧ ಬೆಳವಣಿಗೆ ಸಾಧಿಸಿದೆ. ಈ ನಗರವು ಹಬ್ಬ ಹಾಗೂ ಉತ್ಸವಗಳ ನಗರವಾಗಿ ಅಭಿವೃದ್ಧಿಗೊಂಡಿದೆ.
ಹಬ್ಬ ಹರಿದಿನಗಳ ನಗರ:
ತಿರುಪತಿ ದೇವಾಲಯ ಕೇವಲ ಧಾರ್ಮಿಕ ಕೇಂದ್ರವಾಗಿ ಮಾತ್ರ ಜನಪ್ರಿಯವಾಗಿಲ್ಲ. ಬದಲಾಗಿ ಇದೊಂದು ಶ್ರೀಮಂತ ಸಾಂಸ್ಕೃತಿಕ ಕೇಂದ್ರವೂ ಆಗಿದೆ. ಹಬ್ಬ ಹಾಗೂ ಹರಿದಿನಗಳಿಗೆ ಇದು ಅತ್ಯಂತ ಪ್ರಸಿದ್ದಿ ಹೊಂದಿದೆ. ಮೇ ತಿಂಗಳಲ್ಲಿ ಇಲ್ಲಿ ನಡೆಯುವ ಗಂಗಮ್ಮ ಜಾತ್ರೆ ಇದಕ್ಕೊಂದು ಉತ್ತಮ ಉದಾಹರಣೆ. ಭಕ್ತ ಸಮೂಹವು ನಿರೀಕ್ಷೆಗೂ ಮೀರಿದ ಉತ್ಸಾಹ, ಸಂಭ್ರಮ ಹಾಗೂ ಪಾಲ್ಗೊಳ್ಳುವಿಕೆ ಇಲ್ಲಿ ಕಾಣುತ್ತದೆ. ಇದು ಧಾರ್ಮಿಕ ಶಕ್ತಿ ಕೇಂದ್ರವಾಗಿ ಜನಪ್ರಿಯವಾಗಿದ್ದು, ಭಕ್ತರು ದೇವಾಲಯ ಆವರಣದಲ್ಲಿಯೇ ಸುತ್ತಾಡುತ್ತಾ, ಪ್ರದಕ್ಷಿಣೆ ಹಾಕಿ ಪ್ರಾರ್ಥಿಸುತ್ತಾರೆ. ಅತ್ಯಂತ ಶಕ್ತಿಶಾಲಿ ಧಾರ್ಮಿಕ ಕೇಂದ್ರ ಎನ್ನುವ ಭಾವನೆ ಇಲ್ಲಿನವರಿಗಿದೆ. ಕೇಶ ಮುಂಡನ ಮಾಡಿಸಿಕೊಂಡು ಮುಡಿಯನ್ನು ದೇವರಿಗೆ ಅರ್ಪಿಸಿ ಹಣೆಗೆ ಗಂಧದ ಲೇಪನವನ್ನು ಭಕ್ತರು ಇಟ್ಟುಕೊಳ್ಳುತ್ತಾರೆ. ಮಹಿಳೆಯರು ತಲೆಯ ಮೇಲೆ ಮಲ್ಲಿಗೆ ಹೂವಿನ ಮಾಲೆ ಸುತ್ತಿಕೊಂಡು ದೇವಾಲಯದ ಆವರಣದೊಳಗೆ ಪ್ರವೇಶಿಸುತ್ತಾರೆ. ಜಾತ್ರೆಯಲ್ಲಿ ಕೊನೆಯದಾಗಿ ದೇವಿಯ ಬೃಹತ್ ಮಣ್ಣಿನ ಮೂರ್ತಿಯನ್ನು ಒಡೆದು ಹಾಕಲಾಗುತ್ತದೆ. ಇಲ್ಲಿಗೆ ಸಮೀಪದ ಹಾಗೂ ದೂರದೂರಿನಿಂದ ಭಕ್ತರು ಇತ್ತ ಆಗಮಿಸುತ್ತಾರೆ. ತಿರುಪತಿಯ ಅತ್ಯಂತ ಜನಪ್ರಿಯ ಉತ್ಸವಗಳಲ್ಲಿ ಬ್ರಹ್ಮೋತ್ಸವಂ ಕೂಡ ಒಂದು. ಅತಿ ದೊಡ್ಡ ಆಚರಣೆ ಇದಾಗಿದೆ. ದೇವಾಲಯ ನಗರಿಯ ಇತರೆ ಆಚರಣೆಯಲ್ಲಿ ಪ್ರಮುಖವಾದುದು ವಿಜಯನಗರ ಉತ್ಸವ. ಇದನ್ನು ಚಂದ್ರಗಿರಿ ಕೋಟೆಯಲ್ಲಿ ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ರಾಯಲ್ಸಿಮಾ ನೃತ್ಯ ಹಾಗೂ ಆಹಾರ ಉತ್ಸವ ಆಯೋಜನೆಯಾಗುತ್ತದೆ. ಅತಿ ಹೆಚ್ಚು ಸಂಖ್ಯೆಯ ಜನರನ್ನು ಇದು ಆಕರ್ಷಿಸುತ್ತದೆ.
ಪ್ರಮುಖ ಆಕರ್ಷಣೆಗಳು:
ಇಲ್ಲಿ ಧಾರ್ಮಿಕ ಕೇಂದ್ರಗಳು ಅಪಾರ ಸಂಖ್ಯೆಯಲ್ಲಿವೆ. ಶಕ್ತಿಶಾಲಿ ದೇವರುಗಳಿವೆ. ಮುಖ್ಯವಾದವೆಂದರೆ ತಿರುಪತಿ ದೇವಾಲಯ, ವರಾಹಸ್ವಾಮಿ ದೇವಾಲಯ, ವೆಂಕಟೇಶ್ವರ ಸ್ವಾಮಿ, ಪದ್ಮಾವತಿ, ಗೋವಿಂದರಾಜ, ಶ್ರೀನಿವಾಸ ಮಂಗಪುರಂ ಇತ್ಯಾದಿ. ಅನೇಕ ವಿಧದ ಪಕ್ಷ ಹಾಗೂ ಪ್ರಾಣಿಗಳ ಆವಾಸ ತಾಣವಾಗಿರುವ ಶ್ರೀ ವೆಂಕಟೇಶ್ವರ ಜೈವಿಕ ಪಾರ್ಕ್‌ಗೆ ಕೂಡ ಇಲ್ಲಿ ಭೇಟಿ ನೀಡಬಹುದಾದ ತಾಣಗಳಲ್ಲಿ ಒಂದಾಗಿದೆ. ಹಣ ನೀಡಿ ಪ್ರವೇಶ ಪಡೆಯುವ ತಾಣ ಕಲ್ಲಿನ ಉದ್ಯಾನ ಶಿಲಾತೋರಣಂ. ಇದು ಕೂಡಾ ನೋಡಲೇ ಬೇಕಾದ ಸ್ಥಳ. ಇನ್ನು ಇಷ್ಟಾದ ಮೇಲೆ ತಿರುಪತಿಗೆ ಭೇಟಿ ನೀಡಿ ಇಲ್ಲಿನ ಸಿಹಿ ಪೊಂಗಲ್(ಅನ್ನ)ಹಾಗೂ ಲಡ್ಡು(ಲಾಡು)ತಿನ್ನದೇ ತೆರಳಲು ಸಾಧ್ಯವೇ ಇಲ್ಲ. ಮರದ ಆಕರ್ಷಕ ಕೆತ್ತನೆಯುಳ್ಳ ಕರಕುಶಲ ವಸ್ತುಗಳನ್ನು ಕೊಳ್ಳದೇ ಹೋದರೆ ಇಲ್ಲಿಗೆ ಬಂದೂ ಬರದಂತೆ ಅನ್ನಿಸುತ್ತದೆ. ಅಷ್ಟು ಪ್ರಸಿದ್ದಿ ಇಲ್ಲಿನ ಕರಕುಶಲ ವಸ್ತುಗಳಿಗೆ. ಬಿಳಿ ಮರದ ಗೊಂಬೆಗಳು, ಕಲಾ ಮಕರಿ ಇತ್ಯಾದಿಗಳು ಇಲ್ಲಿ ಪ್ರಸಿದ್ದಿ. ತಂಜಾವೂಡು ಚಿನ್ನದ ಎಲೆ ಲೇಪನ ಹಾಗೂ ಚಂದನದ ಉಂಡೆ ಇಲ್ಲಿ ಅತ್ಯಂತ ಪ್ರಮುಖ.
ಚಾರಿತ್ರಿಕ ಹಿನ್ನೆಲೆ:
ಭೃಗುಮುನಿ ತ್ರಿವೇಣಿ ಸಂಗಮದಲ್ಲಿ ಸತ್ರಯಾಗವನ್ನು ಕೈಗೊಂಡ ಸಂದರ್ಭದಲ್ಲಿ ಆಗಮಿಸಿದ ನಾರದ ಮಹರ್ಷಿಗಳು ಯಾಕಾಗಿ ಯಾಗವನ್ನು ಮಾಡುತ್ತಿರಾ ಋಷಿವರ್ಯರೇ ಎಂದು ಪ್ರಶ್ನಿಸಿದಾಗ ಭೃಗುಮುನಿಗಳು ತ್ರಿಮೂರ್ತಿಗಳಿಗಾಗಿ ಹವಿಸ್ಸನ್ನು ಅರ್ಪಿಸಲು ಯಾಗವನ್ನು ಕೈಗೊಂಡಿರುವುದಾಗಿ ಹೇಳುತ್ತಾರೆ. ಆದರೆ ನಾರದ ಮಹರ್ಷಿಗಳು ಮೂರು ಮೂರ್ತಿಗಳು ನಿಮ್ಮ ಹವಿಸ್ಸನ್ನು ಸ್ವೀಕರಿಸುವ ಸ್ಥಿತಿಯಲ್ಲಿಲ್ಲ. ಅವರೆಲ್ಲಾ ನಿದ್ರಾಸ್ಥಿತಿಯಲ್ಲಿದ್ದಾರೆ ಎನ್ನುವ ಮಾತನ್ನು ಹೇಳಿದಾಗ ಪರೀಕ್ಷೆಗೆಂದು ತೆರಳುತ್ತಾರೆ ಭೃಗು ಮುನಿ.
ಪ್ರಾರಂಭದಲ್ಲಿ ಸತ್ಯಲೋಕಕ್ಕೆ ತೆರಳಿದಾಗ ಬ್ರಹ್ಮ ಆತನ ಮಡದಿ ಶಾರದೆಯೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದ್ದು, ಇವರನ್ನು ಮಾತನಾಡಿಸದೆ ಇದ್ದಾಗ ಕೋಪಗೊಂಡ ಮುನಿಗಳು ಭೂಲೋಕದಲ್ಲಿ ಪೂಜೆ ಇಲ್ಲದೇ ಹೋಗಲಿ ಎನ್ನುವ ಶಾಪ ನೀಡಿ ಅಲ್ಲಿಂದ ನೇರವಾಗಿ ಕೈಲಾಸಕ್ಕೆ ತೆರಳುತ್ತಾರೆ. ಕೈಲಾಸನಾಥ ಮಡದಿ ಪಾರ್ವತಿಯೊಂದಿಗೆ ತಾಂಡವ ನೃತ್ಯದಲ್ಲಿ ತೊಡಗಿದ್ದು, ಇವರನ್ನು ನಿರ್ಲಕ್ಷಿಸಿದ ಕಾರಣದಿಂದ ಕುಪಿತರಾಗಿ ಭೂಲೋಕದಲ್ಲಿ ಲಿಂಗಕ್ಕೆ ಪೂಜೆ ಸಲ್ಲಿಸುವಂತಾಗಲಿ ಎಂದು ಶಾಪ ನೀಡುತ್ತಾರೆ. ಅಲ್ಲಿಂದ ವೈಕುಂಠಕ್ಕೆ ತೆರಳುತ್ತಾರೆ. ಇತ್ತ ವೈಕುಂಠದಲ್ಲಿ ವಿಷ್ಣುವು ಲಕ್ಷ್ಮಿಯೊಂದಿಗೆ ಒಂದು ನಾಟಕವನ್ನು ಆಡುತ್ತೇನೆ. ಅದನ್ನು ನೀನು ನೋಡುತ್ತಿರು ಎಂದು ಮರೆಯಲ್ಲಿ ನೋಡುತ್ತಿರು ಎಂದು ನಿದ್ರೆ ಬಂದವನಂತೆ ನಟಿಸುತ್ತಾನೆ. ಭೃಗುಮುನಿ ವೈಕುಂಠಕ್ಕೆ ಬಂದಾಗ ನಿದ್ರೆ ಬಂದಂತೆ ನಟಿಸುತ್ತಿರುವ ವಿಷ್ಣುವನ್ನು ನೋಡಿ ಅವನನ್ನು ಎಚ್ಚರಿಸುವ ಸಲುವಾಗಿ ಆತನ ವೃಕ್ಷಸ್ಥಳಕ್ಕೆ ಕಾಲಿನಿಂದ ಒದೆಯುತ್ತಾನೆ. ನಂತರ ಭೃಗುಮುನಿಯ ಕಾಲಿನಲ್ಲಿರುವ ಶಕ್ತಿಯ ಕಣ್ಣನ್ನು ಪಡೆದು, ಆತನನ್ನು ಉಪಚರಿಸಿ ಅಲ್ಲಿಂದ ಬೀಳ್ಕೊಡುತ್ತಾನೆ. ಆದರೆ ಲಕ್ಷ್ಮೀ ಮಾತ್ರ ವಿಷ್ಣುವನ್ನು ತೊರೆದು ಅಲ್ಲಿಂದ ತೆರಳುತ್ತಾಳೆ. ವಿಷ್ಣುವು ಲಕ್ಷ್ಮೀಗೆ ವೃಕ್ಷಸ್ಥಳದಲ್ಲಿ ಜಾಗವನ್ನು ನೀಡಿದ್ದು, ತನ್ನದಾಗಿರುವ ಜಾಗಕ್ಕೆ ಅಪಮಾನವೆಸಗಿದ ಕಾರಣವನ್ನು ಮುಂದಿಟ್ಟು ವೈಕುಂಠವನ್ನು ಲಕ್ಷ್ಮೀದೇವಿ ತೊರೆದು ಕರವೀರ ಪುರದಲ್ಲಿ ನೆಲೆಯಾಗುತ್ತಾಳೆ. ಪ್ರಸ್ತುತ ಅದೇ ಸ್ಥಳ ಕೊಲ್ಲಾಪುರವಾಗಿದೆ. ಪತ್ನಿಯ ಅಗಲುವಿಕೆಯಿಂದ ನೊಂದ ವಿಷ್ಣುವು ಶ್ರೀನಿವಾಸ ಎನ್ನುವ ಹೆಸರಿನಲ್ಲಿ ಭೂಲೋಕವನ್ನೆಲ್ಲಾ ಸಂಚರಿಸಿ, ಲಕ್ಷ್ಮೀಯ ಇರವನ್ನು ತಿಳಿಯದೆ ಒಂದು ಹುತ್ತದಲ್ಲಿ ನೆಲೆಯಾಗುತ್ತಾನೆ.
ಈ ವಿಷಯವನ್ನು ತಿಳಿದ ಲಕ್ಷ್ಮೀದೇವಿಯು ಬ್ರಹ್ಮ ಮತ್ತು ಈಶ್ವರದಲ್ಲಿ ವಿಷಯವನ್ನು ತಿಳಿಸಿದಾಗ ಅವರಿಬ್ಬರು ದನ-ಕರುವಿನ ರೂಪ ಪಡೆದುಕೊಂಡು ಚೋಳರಾಜನಲ್ಲಿ ಆಶ್ರಯ ಪಡೆಯುತ್ತಾರೆ. ದನವನ್ನು ಕಾಯುತ್ತಿದ್ದ ಗೋಪಾಲಕರು ಒಂದು ದಿನ ದನವೊಂದು ಹುತ್ತಕ್ಕೆ ಹಾಲು ಸುರಿಸುವುದನ್ನು ಕಂಡು ದೊರೆಯಲ್ಲಿ ದೂರಿದಾಗ ಚೋಳರಾಜ ಕೊಡಲಿಯಿಂದ ದನವನ್ನು ಕಡಿಯಲು ಮುಂದಾದಾಗ ಕೊಡಲಿಯ ಪೆಟ್ಟು ಶ್ರೀನಿವಾಸ ಹಣೆಗೆ ತಾಗುತ್ತದೆ. ಇದರಿಂದ ಕ್ರೋಧಗೊಂಡ ಶ್ರೀನಿವಾಸ ಚೋಳರಾಜನಿಗೆ ಪಿಶಾಚಿಯಾಗು ಎಂದು ಶಾಪ ನೀಡುತ್ತಾನೆ. ಅರಿಯದೇ ಮಾಡಿದ ತಪ್ಪಿಗಾಗಿ ವಿಮೋಚನೆ ಕೇಳಿದಾಗ ಮುಂದೊಂದು ದಿನ ಒಂದು ಸ್ಥಳದಲ್ಲಿ ನೆಲೆಯಾಗಿ ನಿಂತಾಗ ತನಗೆ ಮುತ್ತಿನ ಕಿರೀಟ ನೀಡುತ್ತಾರೆ. ಅದನ್ನು ಮೂರು ಕ್ಷಣದೊಳಗೆ ನೋಡಿದರೆ ನಿನ್ನ ಶಾಪ ವಿಮೋಚನೆ ಎನ್ನುವ ಪರಿಹಾರ ನೀಡಿ, ಹಣೆಗಾದ ಗಾಯಕ್ಕೆ ಅತ್ತಿಹಾಲನ್ನು ಹುಡುಕುತ್ತಾ ಮುಂದುವರಿಯುತ್ತಾನೆ. ಹೀಗೆ ದಾರಿಯಲ್ಲಿ ಮುಂದುವರಿಯುವಾಗ ದಾರಿಯಲ್ಲಿ ವರಾಹಸ್ವಾಮಿ ಸಿಕ್ಕಿ ಪರಿಚಯ ಮಾಡಿಕೊಳ್ಳುತ್ತಾನೆ. ಶ್ರೀನಿವಾಸ ಎನ್ನುವ ಹೆಸರನ್ನು ಕೇಳಿದಾಗ ಬಕುಳಾದೇವಿ ಹೇಳಿದ ಹುಡುಗ ಈತನೇ ಇರಬೇಕೆನ್ನುವ ನೆಲೆಯಲ್ಲಿ ಆತನನ್ನು ಕರೆದುಕೊಂಡು ಆಶ್ರಮಕ್ಕೆ ತೆರಳುತ್ತಾನೆ. ಬಕುಳಾದೇವಿಯೇ ಶ್ರೀನಿವಾಸನ ತಾಯಿ ಎನ್ನುವುದು ಗೊತ್ತಾಗಿ ತಾಯಿ-ಮಗ ಒಂದಾಗುತ್ತಾರೆ. ಇದಕ್ಕೂ ಪೂರ್ವ ಹಿನ್ನೆಲೆಯಿದೆ. ಶ್ರೀಕೃಷ್ಣ ಪರಂದಾಮದಲ್ಲಿ ಶ್ರೀಕೃಷ್ಣ ಯಶೋಧೆಯಲ್ಲಿ ಅಮ್ಮಾ ನಿನಗೆ ಏನಾದರೂ ಆಸೆ ಇದ್ದರೆ ಹೇಳು? ಅದನ್ನು ನಾನು ನಡೆಸಿಕೊಡುತ್ತೇನೆ ಎಂದಾಗ ೧೬ಸಾವಿರಕ್ಕೂ ಅಧಿಕ ಮಂದಿ ಸ್ತ್ರೀಯರನ್ನು ವಿವಾಹವಾದರೂ ಕಲ್ಯಾಣವನ್ನು ನೋಡುವ ಭಾಗ್ಯ ನನ್ನ ಪಾಲಿಗೆ ಇಲ್ಲದಾಯಿತು. ನನ್ನ ಪಾಲಿಗೆ ಕಲ್ಯಾಣವನ್ನು ನೋಡುವ ಭಾಗ್ಯವನ್ನು ಯಾವಾಗ ಕರುಣಿಸಿತ್ತಿಯಾ ಎಂದು ಕೇಳಿದಾಗ ಶ್ರೀನಿವಾಸ ಎನ್ನುವ ರೂಪದಲ್ಲಿ ಭೂಲೋಕದಲ್ಲಿ ಜನ್ಮತಾಳಿದಾಗ ಕಲ್ಯಾಣವನ್ನು ನೋಡುವ ಭಾಗ್ಯ ಕರುಣಿಸುತ್ತೇನೆ ಎಂದು ಅಭಯವನ್ನಿತ್ತಿದ್ದನು.
ತಾಯಿ-ಮಗ ಒಂದಾಗಿದ್ದರೂ ಅವರನ್ನು ಚಿಂತೆಯೊಂದು ಕಾಡುತ್ತಿದ್ದು, ಉಳಿದುಕೊಳ್ಳಲು ಸ್ಥಳವಿರಲಿಲ್ಲ. ಅದಕ್ಕೆ ವರಾಹ ೧೦೦ಅಡಿ ಭೂಮಿಯನ್ನು ನೀಡುತ್ತಾನೆ. ಅಲ್ಲಿಯೇ ವಾಸವಾಗಿದ್ದರು. ಒಂದು ದಿನ ಶ್ರೀನಿವಾಸ ಭೇಟೆಗೆಂದು ತೆರಳಿದಾಗ ತೊಂಡ ದೇಶದ ರಾಜ ಆಕಾಶರಾಜನ ಮಗಳಾದ ಪದ್ಮಾವತಿಯನ್ನು ನೋಡಿ, ಮದುವೆಯಾಗುವಂತೆ ಭಿನ್ನವಿಸುತ್ತಾನೆ. ಲಕ್ಷ್ಮೀಯೇ ಪದ್ಮಾವತಿಯಾಗಿ ಜನ್ಮತಾಳಿದ್ದೂ, ಅವನೇ ತನ್ನ ರಮಣ ಎನ್ನುವುದಾಗಿ ತಿಳಿದಿರುವುದಿಲ್ಲ. ಮದುವೆಯ ಭಿನ್ನವಿಕೆಯನ್ನು ತಿರಸ್ಕರಿಸಿ ತೆರಳುವಾಗ ಶ್ರೀನಿವಾಸನು ಪದ್ಮಾವತಿಯ ಹಣೆಯ ಮೇಲೆ ಕೈಯಿಟ್ಟಾಗ ಆತನೇ ತನ್ನ ಪತಿ ಎನ್ನುವುದು ತಿಳಿಯುತ್ತದೆ. ಭೇಟೆಯಿಂದ ಮನೆಗೆ ಬಂದ ಶ್ರೀನಿವಾಸ ಚಿಂತೆಯಿಂದ ಮಲಗಿರುವುದನ್ನು ನೋಡಿ ತಾಯಿ ಪ್ರಶ್ನಿಸಿದಾಗ ಈ ವಿಷಯವನ್ನು ಪ್ರಸ್ತಾಪಿಸುತ್ತಾನೆ. ನಂತರ ತಾಯಿ ಆಕಾಶರಾಜನಲ್ಲಿ ಮದುವೆಯ ಪ್ರಸ್ತಾಪವಿಟ್ಟಾಗ ಆತ ಮದುವೆಗೆ ಮುಕ್ಕೊಟಿ ದೇವತೆಗಳು ಆಗಮಿಸಬೇಕು. ಅಲ್ಲದೇ ತ್ರಿಮೂರ್ತಿಗಳು ಉಪಸ್ಥಿತರಿದ್ದು, ಬ್ರಹ್ಮನ ಪುರೋಹಿತ್ಯ ನಡೆಯಬೇಕು. ಅಲ್ಲದೇ ಹೇರಳವಾದ ಧನಕನಕಗಳನ್ನು ನೀಡಬೇಕು ಎಂದಾಗ ಶ್ರೀನಿವಾಸ ಕುಬೇರನಲ್ಲಿ ಸಾಲ ಪಡೆದು ನಿಧಾನವಾಗಿ ತೀರಿಸಿದರಾಯಿತು ಎನ್ನುವ ಸಲಹೆ ನೀಡುತ್ತಾನೆ. ಈ ರೀತಿಯಾಗಿ ಪದ್ಮಾವತಿಯನ್ನು ಮದುವೆಯಾದ ಶ್ರೀನಿವಾಸ ತಿರುಮಲದಲ್ಲಿ ನೆಲೆಯಾಗಿ ನಿಲ್ಲುತ್ತಾನೆ. ಇದೇ ಸಂದರ್ಭದಲ್ಲಿ ತಿರುಪತಿಗೆ ಬಂದಾಗ ಮೊದಲು ವರಾಹ ಸ್ವಾಮಿಗೆ ಪೂಜೆ ನೀಡಬೇಕು. ಅಲ್ಲಿನ ಲಡ್ಡುಪ್ರಸಾದ ಮಹತ್ವದ್ದಾಗಿದೆ. ಅಲ್ಲದೇ ಇಲ್ಲಿಗೆ ಬರುವ ಭಕ್ತರು ಮೂರು ಮೂಕ್ಕಾಲು ಘಳಿಗೆಯಲ್ಲಿ ತಿರುಪತಿ ತಿಮ್ಮಪ್ಪನ ಮುತ್ತಿನ ಕಿರೀಟ ನೋಡುತ್ತಾರೋ ಅವರ ಸಂಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎನ್ನುವ ಅಭಯವನ್ನು ನೀಡುತ್ತಾನೆ.
ವಾತಾವರಣ ಮತ್ತು ಸಂಪರ್ಕ:
ತಿರುಪತಿಗೆ ಬರುವುದು ಅತ್ಯಂತ ಸುಲಭವಾಗಿದ್ದು, ಪ್ರಯಾಣ ಸಾಕಷ್ಟು ಆರಾಮದಾಯಕ. ರೇನಿಗುಂಟಾ ವಿಮಾನ ನಿಲ್ದಾಣ ತಿರುಪತಿಯಿಂದ ೧೫ ಕಿ.ಮೀ ದೂರದಲ್ಲಿದೆ. ದಿಲ್ಲಿ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತಿತರ ಭಾಗಗಳಿಂದ ರೇನಿಗುಂಟಾಗೆ ನಿರಂತರ ವಿಮಾನ ಸಂಪರ್ಕವಿದೆ. ದೇಶದ ಎಲ್ಲಾ ನಗರಗಳಿಂದ ನೇರಸಂಪರ್ಕ ಹೊಂದಿರುವ ಉತ್ತಮ ರೈಲು ನಿಲ್ದಾಣ ತಿರುಪತಿಯಲ್ಲಿಯೇ ಇದೆ. ಖಾಸಗಿ ಸರಕಾರಿ ಬಸ್‌ಗಳಿಗಂತೂ ಕೊರತೆಯಿಲ್ಲ. ಚೆನ್ನೈ, ಬೆಂಗಳೂರು, ವೈಜಾಗ್, ಹೈದ್ರಾಬಾದ್‌ಗಳಿಂದ ಇಲ್ಲಿಗೆ ಸಂಪರ್ಕವಿದೆ. ನಗರದ ಒಳಗೆ ಸಂಚರಿಸುವುದು ಕೂಡ ಆರಾಮದಾಯಕವಾಗಿದ್ದು, ಕಾರು, ಬಸ್‌ಗಳು ಸಾಕಷ್ಟಿವೆ. ಒಂದು ದಿನದ ಬಾಡಿಗೆ ರೂಪದಲ್ಲಿ ನಗರ ಸುತ್ತಲೂ ಕಾರುಗಳು ಕೂಡ ಇಲ್ಲಿ ಸಿಗುತ್ತವೆ. ಸಾಮಾನ್ಯ ದರದಲ್ಲಿ ಇವು ಸಿಗುವುದು ವಿಶೇಷ. ಚಳಿಗಾಲದಲ್ಲಿ ಅಂದರೆ ಡಿಸೆಂಬರ್‌ನಿಂದ ಫೆಬ್ರವರಿ ನಡುವಿನ ಅವಧಿ ತಿರುಪತಿ ಭೇಟಿಗೆ ವರ್ಷದಲ್ಲೆ ಉತ್ತಮ ಕಾಲ. ಬೇಸಿಗೆಯಲ್ಲಿ ವಿಪರೀತ ಸೆಖೆ ಇರುತ್ತದೆ. ಈ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡದಿರುವುದೇ ಒಳಿತು. ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ಸೌಂದರ್ಯ ಒಂದಿಷ್ಟು ಹೆಚ್ಚಿಸುತ್ತದೆ. ತಿರುಪತಿ ನಗರವೇ ಧಾರ್ಮಿಕ ಆಚರಣೆ, ನಡತೆಗೆ ಹೆಸರಾದ ತಾಣ. ಇಲ್ಲಿಗೆ ಬರುವಾಗ ತರುವ ಹಾಗೂ ತರಬಾರದ ವಸ್ತುಗಳ ಬಗ್ಗೆ ಪ್ರವಾಸಿಗರು ತಿಳಿದಿದ್ದರೆ ಉತ್ತಮ. ಸೂಕ್ತ ಬಟ್ಟೆ ತೊಡುವುದು ಇಲ್ಲಿ ಮುಖ್ಯ. ಟೋಪಿ ಅಥವಾ ಹ್ಯಾಟ್‌ಗಳನ್ನು ತರದಿದ್ದರೆ ಉತ್ತಮ. ಜಡೆಗೆ ಹೂ ಮುಡಿಯುವಂತಿಲ್ಲ. ಏಕೆಂದರೆ ಹೂವು ದೇವರಿಗೆ ಮಾತ್ರ ಇಲ್ಲಿ ಮೀಸಲು. ಮಾಂಸ ಹಾಗೂ ಮದ್ಯ ಇಲ್ಲಿ ಸಮರ್ಪಕವಾಗಿ ಸಿಗುವುದಿಲ್ಲ. ಅಲ್ಲದೇ ಸೇವಿಸುವುದನ್ನು ನಿಷೇಧಿಸಲಾಗಿದೆ. ಕ್ಯಾಮರಾ, ಫೋನ್ ಇತ್ಯಾದಿ ವಸ್ತುವನ್ನು ದೇವಾಲಯದ ಆವರಣದಲ್ಲಿ ಬಳಸುವಂತಿಲ್ಲ. ತಿರುಪತಿ ಧಾರ್ಮಿಕ ಆಚರಣೆಗೆ ಮಾತ್ರ ಹೆಸರಾಗಿಲ್ಲ. ಬದಲಾಗಿ ಒಂದು ಪ್ರವಾಸಿ ತಾಣವಾಗಿಯೂ ಜನಪ್ರಿಯವಾಗಿದೆ. ತನ್ನದೇ ಆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಬಿಂಬಿಸುತ್ತದೆ.



ರಾಜ್ಯದಲ್ಲಿ ಗುಟ್ಕಾ ನಿಷೇಧ...ಉತ್ತಮ ಆರೋಗ್ಯಕ್ಕಾಗಿ ಈ ಕಾನೂನು
ಕ್ಯಾನ್ಸರ್‌ಕಾರಕ ಗುಟ್ಕಾಕ್ಕೆ ``ಅಡಿಕೆ "ಬಲಿ-ರೈತರಿಗಿಲ್ಲ ಪರ್ಯಾಯ ವ್ಯವಸ್ಥೆ.

ಸುಪ್ರಿಂ ಕೋರ್ಟ್‌ನ ಆದೇಶಕ್ಕೆ ಮಣಿದು ದೇಶದಲ್ಲಿರುವ ೨೨ ರಾಜ್ಯಗಳು ಗುಟ್ಕಾ ನಿಷೇಧಕ್ಕೆ ಮನಮಾಡಿದ್ದು, ೨೩ ನೇ ರಾಜ್ಯವಾಗಿ ಕರ್ನಾಟಕ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವ ತಂಬಾಕು ರಹಿತ ದಿನವಾದ ಮೇ ೩೧ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಟ್ಕಾ ನಿಷೇಧ ಕಾನೂನು ಜಾರಿಗೊಳಿಸಿರುವ ಆದೇಶ ಹೊರಡಿಸಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನಲೆ ಹಾಗೂ ಕೇಂದ್ರ ಸರ್ಕಾರದ ಕಾಯ್ದೆ ಮೇರೆಗೆ ರಾಜ್ಯಾದ್ಯಂತ ಗುಟ್ಕಾ ನಿಷೇಧ ಜಾರಿಯಾಗಲಿವುದರಿಂದ ಅನೇಕ ಕುಟುಂಬಗಳು ಸಂತೋಷಕ್ಕೆ ಒಳಗಾಗಿದ್ದು, ರಾಜ್ಯದಲ್ಲಿರುವ ಅಡಿಕೆ ಬೆಳೆಗಾರರು ಸರಕಾರದ ಈ ನಿರ್ಧಾರದಿಂದ ಆತಂಕಕ್ಕೆ ಒಳಗಾಗಿದ್ದಾರೆ.
ಗುಟ್ಕಾ ಹಾಗೂ ಪಾನ್ ಮಸಾಲ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಯಾವುದೇ ಆಹಾರ ಪದಾರ್ಥಗಳ ಉತ್ಪಾದನೆ, ಸಂಗ್ರಹ, ಮಾರಾಟ ಹಾಗೂ ವಿತರಣೆಯನ್ನು ಮೇ ೩೧ರ ಮಧ್ಯ ರಾತ್ರಿಯಿಂದಲೇ ರಾಜ್ಯಾದ್ಯಂತ ನಿಷೇಧಿಸಲಾಗಿದೆ. ಗುಟ್ಕಾ ಪಾನ್ ಮಸಾಲ ನಿಷೇಧ ಕಂಡ ೨೩ ನೇ ರಾಜ್ಯ ಕರ್ನಾಟಕವಾಗಿದೆ. ಗುಟ್ಕಾ ಹಾಗೂ ಪಾನ್ ಮಸಾಲದಲ್ಲಿರುವ ಅಂಶಗಳನ್ನು ಗಮನಿಸಿದರೆ ಸಣ್ಣ ಪ್ರಮಾಣದಲ್ಲಿ ಅಡಿಕೆ ಇರುತ್ತದೆ. ಉಳಿದಂತೆ ಆರೋಗ್ಯಕ್ಕೆ ಹಾನಿಯುಂಟು ಮಾಡುವ ರಾಸಾಯನಿಕ ಪದಾರ್ಥಗಳೇ ಹೆಚ್ಚಿರುತ್ತದೆ. ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಯಾವ ತೊಂದರೆಯು ಆಗುವುದಿಲ್ಲ ಎನ್ನುವುದು ಆರೋಗ್ಯ ಸಚಿವರ ಅಭಿಪ್ರಾಯವಾಗಿದೆ.
೨೦೦೯ ರಲ್ಲಿ ಗುಟ್ಕಾ ನಿಷೇಧದ ಪ್ರಸ್ತಾಪ ಬಂದಾಗ ದೆಹಲಿಗೆ ಅಡಿಕೆ ಬೆಳೆಗಾರರ ನಿಯೋಗ ಕೊಂಡೊಯ್ಯಲಾಗಿತ್ತು. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಕೂಡ ನಿಯೋಗದ ಜೊತೆಯಲ್ಲಿದ್ದು, ಅಡಿಕೆ ಹಾಗೂ ಗುಟ್ಕಾ ನಡುವಿನ ಸಂಬಂಧದ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರ ಬಳಿ ಹೇಳಿ ಕೇಂದ್ರ ಸರ್ಕಾರದ ಮನವೊಲಿಕೆ ಮಾಡಲಾಗಿತ್ತು. ಅಂದು ಅಡಿಕೆ ಬೆಳೆಗಾರರ ಪರವಾಗಿ ಮಾತನಾಡಿದ ಸಿದ್ದರಾಮಯ್ಯ ಇಂದು ಗುಟ್ಕಾ ನಿಷೇಧ ಮಾಡಿ ಅಡಿಕೆ ಬೆಳೆಗಾರರ ಬದುಕು ಕಿತ್ತುಕೊಂಡಂತಾಗಿದೆ ಎನ್ನುವ ಮಾತುಗಳು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕೇಳಿಬರುತ್ತಿವೆ. ಗುಟ್ಕಾ ನಿಷೇಧದಿಂದ ನೇರವಾಗಿ ಅಡಿಕೆ ಬೆಳೆಗಾರರು ತೊಂದರೆ ಗೀಡಾಗುತ್ತಾರೆ. ಗುಟ್ಕಾದಿಂದಲೇ ಆರೋಗ್ಯ ಕೆಡುತ್ತದೆ ಎನ್ನುವುದು ತಪ್ಪು. ಆದರೆ ಅದುವೇ ನಿಜವಾದರೆ ಅದಕ್ಕಿಂತಲೂ ಮಾರಕವಾದ ಮದ್ಯ, ಸಿಗರೇಟ್ ಮುಂತಾದವುಗಳು ಕೂಡ ಅರೋಗ್ಯಕ್ಕೆ ಹಾನಿಯುಂಟು ಮಾಡುವ ಅಂಶಗಳಲ್ಲವೇ? ಅದನ್ನು ಕೂಡ ನಿಷೇಧಿಸಬೇಕಿತ್ತು. ಆದರೆ ಸರಕಾರ ಮದ್ಯ ಹಾಗೂ ಸಿಗರೇಟ್‌ಗಳನ್ನು ನಿಷೇಧಿಸಲು ಯಾಕೆ ಮುಂದಾಗುತ್ತಿಲ್ಲ? ಇಲ್ಲ ಇಂತಹ ಕಂಪೆನಿಗಳ ಮಾಫಿಯಾಕ್ಕೆ ಬಲಿಯಾಗಿದೆಯೇ ಎನ್ನುವ ಸಂಶಯ ಮೂಡುವುದು ಸಹಜವಲ್ಲವೇ?
ಆರೋಗ್ಯವೇ ಭಾಗ್ಯ ಎನ್ನುವುದು ನಾಣ್ಣುಡಿಯಾದರೂ ಆರೋಗ್ಯವಾಗಿದ್ದಾಗ ಜೀವನದಲ್ಲಿ ಎದುರಿಸುವ ಎಲ್ಲಾ ಸವಾಲುಗಳನ್ನು ಧೈರ್ಯವಾಗಿ ಎದುರಿಸಬಹುದು. ಆದರೆ ಆರೋಗ್ಯವೇ ಕೆಟ್ಟಾಗ ನಾವು ಯಾವ ಕಾರ್ಯ ಮಾಡಲು ಸಾಧ್ಯವಿದೆ. ಸುಪ್ರಿಂ ಕೋರ್ಟ್‌ನ ತೀರ್ಪಿಗೆ ರಾಜ್ಯಸರಕಾರ ಮನ್ನಣೆ ನೀಡದೆ ಹೋದರೆ ಕಾನೂನು ಉಲ್ಲಂಘನೆ ಮಾಡಿದಂತಾಗುತ್ತಿತ್ತಲ್ಲವೇ?  ಕಾನೂನು ಪಾಲನೆ ಮಾಡಿದರೆ ರೈತ ವಿರೋದಿ ಸರಕಾರ ಎನ್ನುವ ಹೆಗ್ಗೆಳಿಕೆಗೆ ಪಾತ್ರವಾಗುತ್ತದೆ. ಅದು ಏನೇ ಇದ್ದರೂ, ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಗುಟ್ಕಾವನ್ನು ನಿಷೇಧ ಮಾಡುವ ರಾಜ್ಯ ಸರಕಾರದ ನಿರ್ಧಾರಕ್ಕೆ ವ್ಯಾಪಕ ಚರ್ಚೆಗಳು ರಾಜ್ಯಾದ್ಯಂತ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಅಡಿಕೆಯ ಉತ್ಪನ್ನಗಳನ್ನು ನಿಷೇಧಿಸುವುದು ಸರಿಯಲ್ಲ. ಆರೋಗ್ಯಕ್ಕೆ ಹಾನಿಯಾಗುವ ತಂಬಾಕಿನ ಅಂಶವನ್ನು ನಿಷೇಧ ಮಾಡಬೇಕು. ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿಗೆ ಮಾನ್ಯತೆ ನೀಡಿ ರಾಜ್ಯ ಸರಕಾರ ಕೈಗೊಂಡ ನಿರ್ಧಾರ ಯೋಗ್ಯವಾದರೂ, ಅಡಿಕೆ ಬೆಳೆಗಾರರಿಗೆ ಪರ್‍ಯಾಯ ವ್ಯವಸ್ಥೆ ಅಳವಡಿಸದೆ ನಿಷೇಧ ಮಾಡಿರುವುದು ನ್ಯಾಯವಲ್ಲ. ಸುಪ್ರಿಂ ಕೋರ್ಟ್ ಮತ್ತು ರಾಜ್ಯ ಸರಕಾರದ ನಿರ್ಧಾರದಿಂದ ಹಲವಾರು ವರ್ಷಗಳಿಂದ ಅಡಿಕೆ ಬೆಳೆಗಾರರು ತಮ್ಮ ಜೀವನ ನಿರ್ವಹಣೆಗೆ ಅಡಿಕೆ ಕೃಷಿಯನ್ನು ನಂಬಿಕೊಂಡಿದ್ದು, ಅಡಿಕೆಯ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಂತಾಗಿ ಅವರನ್ನು ನಡುನೀರಿನಲ್ಲಿ ಕೈಬಿಟ್ಟಂತಾಗಿದೆ ಎಂದು ಅವರು ಟೈಮ್ಸ್ ಆಫ್ ದೀನಬಂದು ಪತ್ರಿಕೆಯೊಂದಿಗೆ ತಮ್ಮ ಅನಿಸಿಕೆಯನ್ನು ತೋಡಿಕೊಂಡರು.
ಪ್ರ:ಅಡಿಕೆ ಬೆಳೆಗಾರರ ಸಂಘದ ಹುಟ್ಟು ಹೇಗೆ ಮತ್ತು ಯಾಕಾಗಿ? 
ಉ:ಅಡಿಕೆ ಬೆಳೆಗಾರರ ಸವಾಲು-ಸಂಕಷ್ಟಗಳಿಗೆ ಪರಿಹಾರ ಒದಗಿಸುವ ಗುರಿಯನ್ನಿರಿಸಿಕೊಂಡು, ಸರಕಾರ ಮತ್ತು ಸರಕಾರಿ ಅಧೀನದಲ್ಲಿರುವ ಸಂಶೋಧನಾ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲು ಮತ್ತು ಅಡಿಕೆ ಬೆಳೆಯ ದರ ಕುಸಿತವಾದಾಗ ಬೆಂಬಲ ಬೆಲೆ ಹಾಗೂ ಮಾರುಕಟ್ಟೆಯನ್ನು ವ್ಯವಸ್ಥೆಗೊಳಿಸಲು ಸಂಘ ಸ್ಥಾಪನೆಯಾಗಿತ್ತು. ಅಡಿಕೆ ಪತ್ರಿಕೆಯನ್ನು ಹುಟ್ಟುಹಾಕಿ ಅಡಿಕೆ ಬೆಳೆಗಾರರ ಸಮಸ್ಯೆ ಹಾಗೂ ಸವಾಲುಗಳ ಲೇಖನದ ಮೂಲಕ ರೈತರನ್ನು ಜಾಗೃತಗೊಳಿಸುವಲ್ಲಿ ಶ್ರಮಿಸಿದ್ದೇವು. ಕೃಷಿ ಭೂಮಿ ಇದ್ದರೆ ಸಾಲುವುದಿಲ್ಲ. ಕೃಷಿಯಾಳುಗಳ ಸಮಸ್ಯೆಯಿದ್ದಾಗಲೂ ಅದನ್ನು ವ್ಯವಸ್ಥಿತವಾಗಿ ಮುಂದುವರಿಸಿಕೊಂಡು ಹೋಗುವ ರೈತರ ಪಾಲಿಗೆ ಗುಟ್ಕಾ ನಿಷೇಧದಿಂದ ದಿಕ್ಕು ತೋಚದಂತಾಗಿದೆ.
ಪ್ರ: ರಾಜ್ಯದಲ್ಲಿ ಅಡಿಕೆ ಬೆಳೆಗಾರರು ಎಷ್ಟಿದ್ದಾರೆ? ಉತ್ಪಾದನೆ ಹೇಗಿದೆ?
ಉ: ರಾಜ್ಯದಲ್ಲಿ ಅಂದಾಜು ೩೦ಲಕ್ಷ ಕುಟುಂಬಗಳು ಅಡಿಕೆ ಕೃಷಿಯನ್ನು ಅವಲಂಬಿಸಿದ್ದು, ಅವರಲ್ಲಿ ಶೇ.೯೦ರಷ್ಟು ಚಿಕ್ಕ ಕೃಷಿಕರಾಗಿದ್ದಾರೆ. ದೇಶದಲ್ಲಿನ ೬ ಲಕ್ಷ ಟನ್ ಅಡಿಕೆ ಉತ್ಪಾದನೆಯಲ್ಲಿ ೩ ಲಕ್ಷ ಟನ್ ರಾಜ್ಯದಲ್ಲಿಯೇ ಬೆಳೆಯುತ್ತಿದ್ದಾರೆ. ಬೆಲೆ ಏರಿಕೆಯ ಕಾಲಘಟ್ಟದಲ್ಲಿ ಲಾಭವಿಲ್ಲದಿದ್ದರೂ, ಜೀವನ ನಿರ್ವಹಣೆಗಾಗಿ ಹೆಣಗಾಡುತ್ತಿದ್ದಾರೆ. ಕೂಲಿ ಕಾರ್ಮಿಕರ ಅಭಾವ, ಗೊಬ್ಬರ, ಕೀಟನಾಶಕ ಸಿಂಪಡನೆ, ಯಂತ್ರೋಪಕರಣಗಳ ಬೆಲೆ ಹೆಚ್ಚಳದಿಂದ ಲಾಭಾಂಶವಿಲ್ಲದಿದ್ದರೂ ಅದರಲ್ಲಿಯೇ ರೈತರು ತೃಪ್ತರಾಗಿದ್ದಾರೆ. ಬೆಳೆದ ಬೆಳೆಗೆ ಬೇಡಿಕೆ ಕಡಿಮೆಯಾದಾಗ ಮಾರಾಟಗಾರರು ಕೃತಕ ಸಮಸ್ಯೆಯನ್ನು ಸೃಷ್ಠಿಸಿ, ಲಾಭ ಗಳಿಸಿಕೊಳ್ಳುತ್ತಾರೆ.
ಪ್ರ: ಆರೋಗ್ಯಯುತ ಜೀವನ ನಡೆಸಲು ಗುಟ್ಕಾ ನಿಷೇಧ ನ್ಯಾಯವಲ್ಲವೇ?
ಉ: ದೇಶದಲ್ಲಿನ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಶೇ.೫೦ರಷ್ಟನ್ನು ರಾಜ್ಯದಲ್ಲಿಯೇ ಬೆಳೆಯುತ್ತಿದ್ದಾರೆ. ಗುಟ್ಕಾ ನಿಷೇಧದಿಂದ ಅಡಿಕೆಯ ಬೇಡಿಕೆ ಕುಸಿತಗೊಂಡು ಮಧ್ಯವರ್ತಿಗಳು ಇದರಿಂದ ಸಾಕಷ್ಟು ಲಾಭಗಳಿಸುತ್ತಾರೆ. ಆರೋಗ್ಯ ದೃಷ್ಟಿಯಿಂದ ಗುಟ್ಕಾ ಉತ್ಪನ್ನ ನಿಷೇಧಿಸಿದ್ದೇವೆ ಎನ್ನುವಾಗ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಕ್ಕರೆ, ಮೈದಾದಲ್ಲಿಯೂ ಹಾನಿಯಿದೆ ಎನ್ನುವ ಅಂಶ ಮನಗಾಣಬೇಕಿದೆ. ಮದ್ಯ, ಸಿಗರೇಟ್ ನಿಷೇಧಿಸದೆ ದೇಹದ ಆರೋಗ್ಯ ರಕ್ಷಣೆ ಮಾಡುತ್ತೇವೆ ಎನ್ನುವ ನೆಲೆಯಲ್ಲಿ ಗುಟ್ಕಾ ನಿಷೇಧ ಮಾಡುವುದು ನ್ಯಾಯವೇ?
ಪ್ರ: ಗುಟ್ಕಾ ಕ್ಯಾನ್ಸರ್‌ಕಾರಕ ಎನ್ನುವ ಮಾತು ಸುಳ್ಳೆ?
ಉ: ಗುಟ್ಕಾ ಉತ್ಪನ್ನದಲ್ಲಿ ಶೇ.೮೦ರಷ್ಟು ಅಡಿಕೆಯಾಗಿದ್ದು, ಶೇ.೫ ರಷ್ಟು ತಂಬಾಕಿನ ಅಂಶಗಳಿದ್ದು ಉಳಿದಂತೆ ಇತರ ಅಂಶಗಳನ್ನು ಮಿಶ್ರಣ ಮಾಡಿರುತ್ತಾರೆ. ಒಂದು ಪ್ಯಾಕ್ ಗುಟ್ಕಾದಲ್ಲಿ ಶೇ.೫ ರಷ್ಟಿರುವ ತಂಬಾಕು ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ. ಕಡಿಮೆ ಅಂಶವಿರುವ ತಂಬಾಕು ಕ್ಯಾನ್ಸರ್‌ಗೆ ಕಾರಣವಾಗುತ್ತದೆಯೇ ಹೊರತು ಅಡಿಕೆಯಲ್ಲ. ಆದ್ದರಿಂದ ಗುಟ್ಕಾವನ್ನು ನಿಷೇಧಿಸುವುದು ಸರಿಯಲ್ಲ. ತಂಬಾಕು ಬೆಳೆಸದಿದ್ದರೆ ಬೇರೆ ಬೇರೆ ವಿಧಾನಗಳಲ್ಲಿ ಅವರಿಗೆ ೫ ಲಕ್ಷ ರೂ.ವರೆಗೆ ಪರಿಹಾರ ನೀಡುವಂತೆ, ಸರಕಾರವು ಗುಟ್ಕಾ ನಿಷೇಧದಲ್ಲಿಯೂ ಅಡಿಕೆ ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು.
ಪ್ರ: ಅಡಿಕೆಯಿಂದ ಕ್ಯಾನ್ಸರ್ ಸಂಭವಿಸಿದ ಘಟನೆಗಳು ಎಲ್ಲಿಯಾದರೂ ವರದಿಯಾಗಿವೆಯೇ?
ಉ: ಅಡಿಕೆಯ ಉತ್ಪನ್ನಗಳು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎನ್ನುವುದನ್ನು ಯಾವ ಸಂಶೋಧನಕಾರನು ತಿಳಿಸಿಲ್ಲ. ದೇಶದಲ್ಲಿ ಶೇ.೬೦ರಷ್ಟು ಕೆಂಪು ಹಾಗೂ ಶೇ.೪೦ರಷ್ಟು ಬಿಳಿ ಅಡಿಕೆ ಉತ್ಪಾದನೆಯಾಗುತ್ತದೆ. ರಾಜ್ಯದಲ್ಲಿ ಸಿಗುವ ಕೆಂಪುಅಡಿಕೆಯು ಬೆಲೆ ಜಾಸ್ತಿಯಾಗಿರುವುದರಿಂದ ಗುಟ್ಕಾ ಉತ್ಪನ್ನಗಳಿಗೆ ಬಳಕೆ ಮಾಡುವುದು ಕಡಿಮೆ. ಗುಟ್ಕಾ ಉತ್ಪನ್ನಗಳಿಗೆ ತಂಬಾಕು ಬಳಕೆ ಮಾಡಿದಾಗ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಬದನಾಜೆ ಶಂಕರ ಭಟ್ ಅಡಿಕೆಯ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿದ್ದು, ಕೇವಲ ಅಡಿಕೆಯನ್ನು ಮಾತ್ರ ತಿನ್ನಬಾರದು. ಸುಗಂಧ ದ್ರವ್ಯಗಳೊಂದಿಗೆ ಅಡಿಕೆಯನ್ನು ಸೇವಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವ ಅಂಶವನ್ನು ತಿಳಿಯಪಡಿಸಿದ್ದರು. 
ಪ್ರ: ಗುಟ್ಕಾ ನಿಷೇಧ ಕುರಿತ ಸರಕಾರದ ನಿರ್ಧಾರಕ್ಕೆ ನಿಮ್ಮ ನಿಲುವು?
ಉ: ಅಡಿಕೆಯೇ ಮೂಲಧಾರವಾಗಿರುವ ಗುಟ್ಕಾದಲ್ಲಿ ತಂಬಾಕಿನ ಅಂಶವನ್ನು ನಿಷೇಧಿಸಬೇಕೆ ಹೊರತು ಗುಟ್ಕಾಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ. ೮-೧೦ ವರ್ಷದ ಮಕ್ಕಳಿಗೆ ಅವ್ಯಾಹತವಾಗಿ ಗುಟ್ಕಾ ಉತ್ಪನ್ನಗಳು ಸಿಗುತ್ತಿದೆ ಎನ್ನುವ ಕಾರಣ ನೀಡುತ್ತಿರುವುದು ಬಾಲಿಶತನ. ಮಂಗಳೂರಿನಂತಹ ನಗರ ಪ್ರದೇಶದಲ್ಲಿ ಡ್ರಗ್ಸ್-ಗಾಂಜಾಗಳು, ಶಾಲಾ-ಕಾಲೇಜು ಮಕ್ಕಳು ಬಯಸಿದಾಗ ಸಿಗುತ್ತದೆ. ೧೬ ವರ್ಷದೊಳಗಿನ ಮಕ್ಕಳಿಗೆ ಮದ್ಯ ನೀಡಬಾರದು ಎನ್ನುವ ಕಾನೂನು ಇದ್ದರೂ ಅದನ್ನು ಪಾಲಿಸುತ್ತಿಲ್ಲ. ಮೊದಲು ತಂಬಾಕು ವಸ್ತುಗಳು ಡಬ್ಬದಲ್ಲಿ ಸಿಗಲು ಪ್ರಾರಂಭವಾದಾಗ ಗುಟ್ಕಾದ ಬೇಡಿಕೆ ಕಡಿಮೆಯಾಗಿತ್ತು. ೧೯೮೫ ರ ಸುಮಾರಿಗೆ ಪ್ಯಾಕೆಟ್‌ಗಳಲ್ಲಿ ಗುಟ್ಕಾ ಸಿಗಲು ಪ್ರಾರಂಭಿಸಿದಾಗ ಅದರ ಬೇಡಿಕೆ ಒಮ್ಮೆಲೆ ಜಾಸ್ತಿಯಾಯಿತು. ಮಕ್ಕಳಿಗೆ ಗುಟ್ಕಾ ಸಿಗುತ್ತದೆ ಎನ್ನುವಲ್ಲಿ ಪೋಷಕರ ನಿರ್ಲಕ್ಷ್ಯವೂ ಇದೆಯಲ್ಲವೇ? ವ್ಯಕ್ತಿಯು ಅಮಲು ಪದಾರ್ಥ ಸೇವಿಸಿದಾಗ ನಂತರದ ದಿನದಲ್ಲಿ ಮನಸ್ಸು ಹಾಗೂ ದೇಹ ಕೇಳುವುದಿಲ್ಲ. ಹವ್ಯಾಸಕ್ಕೆಂದು ಮಾಡಿದ ಅಭ್ಯಾಸವೇ ಮುಂದುವರಿದಾಗ ಅದು ಚಟವಾಗಿ ಮಾರ್ಪಡುತ್ತದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಹಾಗಿರುವಾಗ ಗುಟ್ಕಾದಲ್ಲಿರುವ ತಂಬಾಕಿನ ಅಂಶ ಜಾಸ್ತಿಯಾದಾಗ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರ: ನಿಮ್ಮ ಪ್ರಕಾರ ಇದಕ್ಕೆ ಪರ್ಯಾಯ ವ್ಯವಸ್ಥೆ ಯಾವ ರೀತಿ?
ಉ: ಅಡಿಕೆಯನ್ನು ಉಪಯೋಗಿಸಿ, ಸುಗಂಧ ವಸ್ತುಗಳನ್ನು ತಯಾರಿಸುವುದಕ್ಕೆ ಅವಕಾಶ ಕಲ್ಪಿಸಬೇಕು. ಗುಟ್ಕಾ ನಿಷೇಧಿಸುವುದರ ಹೊರತಾಗಿ ಯಾವುದೇ ದುಷ್ಪರಿಣಾಮ ಇಲ್ಲದ ಉತ್ಪನ್ನಗಳ ತಯಾರಿಕೆಗೆ ಪ್ರೇರಣೆ ನೀಡಬೇಕು. ಉದಾ: ಸಿರಸಿಯ ತೋಟಗಾರ ಸರ್ವಿಸ್ ಸೊಸೈಟಿಯಲ್ಲಿ ೧೩ ಲಕ್ಷ ಟನ್ ಅಡಿಕೆಯಿಂದ ೪೦ಲಕ್ಷದಷ್ಟು ರಾಸಾಯನಿಕ ಮತ್ತು ತಂಬಾಕಿನ ಅಂಶಗಳನ್ನು ಬಳಸದೆ ಪಾನ್ ಸುಪಾರಿ, ಸಿಹಿ ಪೊಟ್ಟಣಗಳಂತಹ ೯ ಬಗೆಯ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ. ಅಡಿಕೆಯ ಉತ್ಪನ್ನಗಳಿಗೆ ಬೇಡಿಕೆಯಿದ್ದು, ಆರೋಗ್ಯಕ್ಕೆ ಹಾನಿಯಾಗುವ ಅಂಶಗಳನ್ನು ಇವುಗಳಿಂದ ಬೇರ್ಪಡಿಸಿ, ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ಅಡಿಕೆಯಿಂದ ಹೊಸ ಹೊಸ ಉತ್ಪನ್ನಗಳನ್ನು ಕಂಡು ಹಿಡಿಯಲು ಸರಕಾರ ಹಾಗೂ ಸಂಶೋಧನಾ ಕೇಂದ್ರಗಳು ಕಾರ್ಯ ತತ್ಪರರಾಗಬೇಕು.
ಒಟ್ಟಿನಲ್ಲಿ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿರುವುದಕ್ಕೆ ವ್ಯಾಪಕ ಪ್ರತಿಕ್ರಿಯೆಗಳು ಬರುತ್ತಿವೆ. ಗುಟ್ಕಾ ವಿರೋಧಿಸುವವರ ಗುಂಪು ಈ ತೀರ್ಪಿನಿಂದ ಸಂತೋಷಗೊಂಡಿದ್ದು, ಗುಟ್ಕಾ ಅಭಿಮಾನಿಗಳು ಮಾತ್ರ ಇದಕ್ಕೆ ಪರ್ಯಾಯವಾಗಿ ಯಾವ ಉತ್ಪನ್ನಗಳು ಮಾರುಕಟ್ಟೆಗೆ ಬರಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಗುಟ್ಕಾ ನಿಷೇಧದಿಂದ ಹಲವಾರು ಗೋಡೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಶುಭ್ರತೆಯನ್ನು ಕಾಪಾಡಲು ಸಹಕಾರಿಯಾಗಿದ್ದು, ಅನೇಕ ಯುವಮನಸ್ಸುಗಳು ಕ್ಯಾನ್ಸರ್‌ಗೆ ತುತ್ತಾಗುವುದನ್ನು ತಡೆಯಲು ಸಹಾಯಕವಾಗಲಿದೆ. ಆದರೆ ಗುಟ್ಕಾ ನಿಷೇಧ ನ್ಯಾಯವಾದುದಾದರೂ ಅಡಿಕೆ ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರಕಾರದ ಜವಾಬ್ದಾರಿಯಾಗಿದೆ.
ಗುಟ್ಕಾ ನಿಷೇಧದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರ ರೈತರ ಅಭಿಪ್ರಾಯಗಳು ಹೀಗಿವೆ ನೋಡಿ:
ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ, ಗೋಹತ್ಯಾ ನಿಷೇಧ ದಂತಹ ಕಾಯ್ದೆಯನ್ನು ಜಾರಿಗೊಳಿಸುವ ಬದಲು ಏಕಾಏಕಿ ಗುಟ್ಕಾ ನಿಷೇಧ ಜಾರಿಗೆ ತಂದಿರುವುದು ಸರಿಯಲ್ಲ. ಇದರಿಂದ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಆಗತ್ತೆ. ಅಡಿಕೆ ಬೆಳೆಗಾರರ ಬಗ್ಗೆ ಸರ್ಕಾರ ಮೊದಲು ಚಿಂತನೆ ನಡೆಸಬೇಕಿತ್ತು. ಗುಟ್ಕಾ ನಿಷೇಧದ ಬಗ್ಗೆ ಅಡಿಕೆ ಬೆಳೆಗಾರರ ಅಭಿಪ್ರಾಯವನ್ನು ಒಮ್ಮೆಯಾದರೂ ಕೇಳಬೆಕಿತ್ತು. ಹೀಗೆ ಇದ್ದಕ್ಕಿದ್ದಂತೆ ಕಾಯ್ದೆ ಜಾರಿ ಮಾಡುವ ಬದಲು ಕೆಲದಿನ ಕಾದು ನೋಡಿ, ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿತ್ತು. ಗುಟ್ಕಾ ನಿಷೇಧ ಜಾರಿ ಮಾಡಿ ಸರ್ಕಾರ ಒಮ್ಮೆಲೆ ಅಡಿಕೆ ಬೆಳೆಗಾರರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಅಡಿಕೆಯನ್ನೇ ನಂಬಿರುವ ನಮ್ಮಂತಹ ಬೆಳೆಗಾರರು ಮುಂದೇನು ಮಾಡ್ಬೇಕು?
ರಘು ಶೆಟ್ಟಿ ಕೊಪ್ಪ - ಅಡಿಕೆ ಬೆಳೆಗಾರರು.

ಮೊದಲೇ ರಾಜ್ಯದಲ್ಲಿ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಈಗಾಗಲೇ ಅಡಿಕೆಗೆ ಬೆಲೆ ಕಡಿಮೆಯಾಗಿದೆ. ಈಗ ಗುಟ್ಕಾ ನಿಷೇಧ ಮಾಡುವುದರಿಂದ ಪರೋಕ್ಷವಾಗಿ ಪರಿಣಾಮ ಬಿರುತ್ತದೆ. ಇದರಿಂದ ಅಡಿಕೆ ಬೆಳೆಯನ್ನೇ ವಾಣಿಜ್ಯ ಬೆಳೆಯಾಗಿ ನಂಬಿರುವ ಕರಾವಳಿ ಭಾಗದ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ.
ಬಾಲಕೃಷ್ಣ - ಕೃಷಿಕ ಅಮವಾಸೆಬೈಲು

ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಗುಟ್ಕಾ ನಿಷೇಧ ಒಳ್ಳೆಯದೇ. ಆದರೆ ಪ್ರಸ್ತುತ ರಾಜ್ಯದಲ್ಲಿ ಕೆಲ ವರ್ಷಗಳ ಹಿಂದೆ ಇದ್ದಷ್ಟು ಗುಟ್ಕಾ ಸೇವನೆ ಮಾಡುವವರು ಇಲ್ಲಾ. ಬಹಳಷ್ಟು ಕಡಿಮೆಯಾಗಿದ್ದಾರೆ. ಬಹುತೇಕ ಭಾಗಗಳಲ್ಲಿ ಅಡಿಕೆಯನ್ನೇ ಪ್ರಮುಖ ಬೆಳೆ, ಜೀವನಾಧಾರವನ್ನಾಗಿ ಅವಲಂಭಿಸಿದ್ದಾರೆ. ಯುವಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಗುಟ್ಕಾ ನಿಷೇಧ ಜಾರಿಗೆ ತಂದಿರುವುದಾಗಿ ಹೇಳುತ್ತಿರುವ ಸರ್ಕಾರ, ಅಡಿಕೆ ಬೆಳೆಗಾರರ ಬಗ್ಗೆಯೂ ಯೋಚಿಸ ಬೇಕಿತ್ತು. ರೈತರ ಸಮಸ್ಯೆ ನಿವಾರಣೆಗೆ ಮೊದಲು ಪರ್ಯಾಯ ವ್ಯವಸ್ಥೆ ಕೈಗೊಂಡು ಬಳಿಕ ಗುಟ್ಕಾ ನಿಷೇಧ ಮಾಡಬೇಕಿತ್ತು.
ಸುಭಾಷ್ ಪುತ್ತೂರು.

ಗುಟ್ಕಾ ನಿಷೇಧದ ಉದ್ದೇಶ ಒಳ್ಳೆಯದಾದರೂ ಇದರಿಂದ ಅಡಿಕೆ ಬೆಳೆ ಮೇಲೆ ಪರಿಣಾಮ ಬೀರುವುದರಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ನಂತರ ಗುಟ್ಕಾ ನಿಷೇಧ ಜಾರಿ ಮಾಡಬೆಕಿತ್ತು. ರಾಜ್ಯದಲ್ಲಿ ಗುಟ್ಕಾ ತಿನ್ನುವವರ ಸಂಖ್ಯೆಗಿಂತ ಮಧ್ಯ ಸೇವನೆ ಮಾಡುವವರ ಸಂಖ್ಯೆ ಹೆಚ್ಚಿದೆ. ಗುಟ್ಕಾ ನಿಷೇಧ ಮಾಡುವುದಕ್ಕೂ ಮುನ್ನ ಮದ್ಯ ಮಾರಾಟ ಮತ್ತು ಸೇವನೆಗೆ ನಿಷೇಧ ಹೇರಬೇಕಿತ್ತು. ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗದು. ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಸ್ಪಂದಿಸುತ್ತೇವೆ ಎಂದು ಈಗ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕೆಲ ದಿನದ ಬಳಿಕ ತಾವು ಹೇಳಿದ ಭರವಸೆಯನ್ನೇ ಮರೆತು ಬಿಡುತ್ತಾರೆ. ರಾಜ್ಯದಲ್ಲಿ ರೈತರ ಸ್ಥಿತಿಯೇ ಸಂಕಷ್ಟದಲ್ಲಿದೆ ಹೀಗಿರುವಾಗ ಈ ಬಗ್ಗೆ ಯೋಚಿಸದ ಸರ್ಕಾರ ಅಡಿಕೆ ಬೆಳೆ ರೈತರ ಬಗ್ಗೆ ಯೊಚಿಸುತ್ತದೆ ಎಂಬ ವಿಶ್ವಾಸ ನಮಗಿಲ್ಲ.
ರಾಮಕೃಷ್ಣ - ಶಿವಮೊಗ್ಗ