ಎನ್‌ಸಿವಿಟಿ/ಎಸ್‌ಸಿವಿಟಿ ಪ್ರಮಾಣಪತ್ರ-ಗೊಂದಲದಲ್ಲಿ ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು.
ಮಂಗಳೂರು: ಸರಕಾರಿ ಶಿಕ್ಷಣ ಸಂಸ್ಥೆಗಳೆಂದಾಗ ಅಚ್ಚರಿಯನ್ನು ವ್ಯಕ್ತಪಡಿಸುವವರೇ ಅಕವಾಗಿರುವ ಕಾಲಘಟ್ಟದಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಇಲಾಖೆಗಳು ಮುಂದುವರಿಯುತ್ತಿಲ್ಲದಿರುವುದು ಬೇಸರದ ಸಂಗತಿ. ಸರಕಾರಿ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯಾಸಗೈದ ಒಂದು ಕೇಂದ್ರದ ವಿದ್ಯಾರ್ಥಿಗಳಿಗೆ ರಾಜ್ಯದ ಇತರೆಡೆ ಅದುವೇ ಸರಕಾರಿ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಪ್ರಮಾಣಪತ್ರದಲ್ಲಿ ಬದಲಾವಣೆಯಾದರೆ ವಿದ್ಯಾರ್ಥಿಗಳಿಗೆ ಹೇಗಾಗಬೇಡ..ಇದು ಮಂಗಳೂರಿನ ಉದ್ಯೋಗ ಮತ್ತು ತರಬೇತಿ ಸಂಸ್ಥೆಯ(ಐಟಿಐ) ದುರಂತ.
ರಾಜ್ಯದಲ್ಲಿ ಒಟ್ಟು ೧೫೮ ಉದ್ಯೋಗ ಮತ್ತು ತರಬೇತಿ ಸಂಸ್ಥೆಗಳಿದ್ದು ಅದರಲ್ಲಿ ೨೨ ಮಹಿಳಾ ಐಟಿಐ ಕಾಲೇಜುಗಳಿವೆ. ಉಳಿದಂತೆ ೧೩೬ ಐಟಿಐ ಕಾಲೇಜುಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ.೩೩ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಈ ಐಟಿಐ ಕಾಲೇಜುಗಳು ಡೈರೆಕ್ಟೊರೇಟ್ ಜನರಲ್ ಆಫ್ ಎಂಫ್ಲಾಯ್‌ಮೆಂಟ್ ಅಂಡ್ ಟ್ರೈನಿಂಗ್ (ಡಿಜಿಇಟಿ)ನಲ್ಲಿ ಸದಸ್ಯತ್ವವನ್ನು ಪಡೆಯಬೇಕಿದೆ. ಸದಸ್ಯತ್ವ ಪಡೆದ ಸಂಸ್ಥೆಗಳಲ್ಲಿ ನ್ಯಾಶನಲ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್ ಪ್ರಮಾಣ ಪತ್ರ ನೀಡಲಾಗುತ್ತದೆ. ಇದೇ ರೀತಿ ರಾಜ್ಯ ಮಟ್ಟದಲ್ಲಿ ಸ್ಟೇಟ್ ಕೌನಿಲ್ಸ್ ಆಫ್ ವೆಕೇಷನಲ್ ಟ್ರೈನಿಂಗ್ ಪ್ರಮಾಣಪತ್ರವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಎನ್‌ಸಿವಿಟಿ ಹಾಗೂ ಎಸ್‌ಸಿವಿಟಿ ಎರಡು ಪ್ರಮಾಣಪತ್ರಗಳಲ್ಲಿಯೂ ವ್ಯತ್ಯಾಸವಿದೆ.
ಡಿಜಿಇಟಿಯಿಲ್ಲಿ ಸದಸ್ಯತ್ವ ಪಡೆಯಲು ಸಂಸ್ಥೆಗೆ ತನ್ನದೇ ಆದ ಪಠ್ಯಕ್ರಮವನ್ನು ಆಯಾ ವಿಷಯಗಳಿಗೆ ಸಂಬಂಸಿದಂತೆ ಸೂಚಿಸುತ್ತದೆ. ಅವರು ವಿಸಿದ ವಿವಿಧ ಕೋರ್ಸ್‌ಗಳಿಗೆ ಬೇಕಾಗುವ ಉಪಕರಣಗಳನ್ನು ಖರೀದಿಸಿದಾಗ ಸಂಸ್ಥೆಗೆ ಸದಸ್ಯತ್ವ ಸಮಿತಿಯು ಬಂದು ಅವರು ಯೆಸ್ ಎನ್ನುವ ಉತ್ತರ ನೀಡಿದಾಗ ಸಂಸ್ಥೆಯಲ್ಲಿ ಎನ್‌ಸಿವಿಟಿ ಪ್ರಮಾಣಪತ್ರ ನೀಡುವುದಕ್ಕೆ ಯೋಗ್ಯವಾಗಿರುತ್ತದೆ. ಕೆಲವು ಸಂಸ್ಥೆಗಳಲ್ಲಿ ಘಟಕಗಳಿಗೆ ವಹಿಸಿಕೊಡುವುದರಿಂದ ಒಂದು ವರ್ಷದ ವಿದ್ಯಾರ್ಥಿಗಳಿಗೆ ಎನ್‌ಸಿವಿಟಿ, ಇನ್ನೊಂದು ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಎಸ್‌ಸಿವಿಟಿ ಪ್ರಮಾಣ ಪತ್ರ ಸಿಗುತ್ತದೆ.
ಮಂಗಳೂರಿನ ಐಟಿಐ ಕಾಲೇಜು:
ನಗರದ ಕೆಪಿಟಿಯಲ್ಲಿರುವ ಸರಕಾರಿ ಐಟಿಐ ಕಾಲೇಜಿನಲ್ಲಿ ೬ ತಿಂಗಳು, ೧ವರ್ಷ ಹಾಗೂ ೨ ವರ್ಷದ ವೃತ್ತಿ ತರಬೇತಿಗಳು ಸೇರಿದಂತೆ ಒಟ್ಟು ೧೪ ಕೋರ್ಸ್‌ಗಳಿಗೆ ಒಟ್ಟು ೪೬೨ ವಿದ್ಯಾರ್ಥಿಗಳು ಇದರ ಅವಕಾಶವನ್ನು ಪಡೆದುಕೊಳ್ಳುತ್ತಿದ್ದಾರೆ. ಸಂಸ್ಥೆಯಲ್ಲಿ ೧೪ ಕೋರ್ಸ್‌ಗಳು ಎನ್‌ಸಿವಿಟಿ ಪ್ರಮಾಣ ಪತ್ರ ಪಡೆದುಕೊಂಡಿದೆ ಎಂದು ಶಿಕ್ಷಕ ವರ್ಗ ತಿಳಿಸುತ್ತಿದ್ದಾರೆ. ಆದರೆ ಮೆಕ್ಯಾನಿಕಲ್ ರೆಫ್ರಿಜರೇಶನ್ ಅಂಡ್ ಏರ್ ಕಂಡಿಷನಿಂಗ್(ಎಂಆರ್‌ಎಸಿ) ನಲ್ಲಿ ಅಭ್ಯಸಿಸುತ್ತಿರುವ ೧೭ ವಿದ್ಯಾರ್ಥಿಗಳಿಗೆ ಮಾತ್ರ ರಾಜ್ಯ ಸಮಿತಿ ವೃತ್ತಿಪರ ತರಬೇತಿ(ಎಸ್‌ಸಿವಿಟಿ)ಪ್ರಮಾಣಪತ್ರ ಪಡೆದುಕೊಳ್ಳುತ್ತಿದ್ದಾರೆ. ಉಳಿದ ವಿದ್ಯಾರ್ಥಿಗಳಂತೆ ತರಗತಿಗೆ ಹಾಜರಾಗಿ, ಅವರು ನೀಡಿದಷ್ಟೆ ಶುಲ್ಕವನ್ನು ನೀಡಿದ್ದರೂ, ಇವರು ಪಡೆದುಕೊಳ್ಳುತ್ತಿರುವುದು ಎಸ್‌ಸಿವಿಟಿ ಪ್ರಮಾಣಪತ್ರ.
ಏನಿದು ಎನ್‌ಸಿವಿಟಿ ಹಾಗೂ ಎಸ್‌ಸಿವಿಟಿ
ನ್ಯಾಶನಲ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್(ಡಿಜಿಇಟಿ) ಹಾಗೂ ಸ್ಟೇಟ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್(ಎಸ್‌ಸಿವಿಟಿ) ಎನ್ನುವುದಾಗಿದ್ದು, ಎನ್‌ಸಿವಿಟಿ ರಾಷ್ಟ್ರೀಯ ಮಾನ್ಯತೆ ಪಡೆದ ಪ್ರಮಾಣಪತ್ರವಾಗಿದೆ. ಎಸ್‌ಸಿವಿಟಿ ರಾಜ್ಯಮಟ್ಟದಲ್ಲಿ ನೀಡುವ ಪ್ರಮಾಣಪತ್ರವಾಗಿದ್ದು, ಇದನ್ನು ಪಡೆದವರು ಕೇಂದ್ರ ಸರಕಾರದ ರೈಲ್ವೆಯಂತಹ ಯಾವುದೇ ಇಲಾಖೆಯಲ್ಲಿಯೂ ಕೆಲಸ ಪಡೆಯಲು ಅರ್ಹರಾಗಿರುವುದಿಲ್ಲ. ಉಳಿದಂತೆ ಖಾಸಗಿ ಸಹಭಾಗಿತ್ವದ ಯಾವುದೇ ಸಂಸ್ಥೆಯಲ್ಲಿ ದೇಶದ ಯಾವುದೇ ಭಾಗದಲ್ಲಿ ಇವರು ಕೆಲಸ ಮಾಡಲು ಅರ್ಹರಾಗಿತ್ತಾರೆ. ಅದೇ ರೀತಿ ಎನ್‌ಸಿವಿಟಿ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು ಕೇಂದ್ರ ಹಾಗೂ ರಾಜ್ಯ ಸರಕಾರ ಯಾವುದೇ ಇಲಾಖೆಯಲ್ಲಿಯೂ ಸೇವೆ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚಾಗಿ ವಿದ್ಯಾರ್ಥಿಗಳು ರೈಲ್ವೆ ಇಲಾಖೆಗೆ ಉದ್ಯೋಗಗಳಿಗೆ ಆಸಕ್ತರಾಗಿದ್ದು, ಎಸ್‌ಸಿವಿಟಿ ಪ್ರಮಾಣಪತ್ರದಿಂದ ಅವರ ಭವಿಷ್ಯದ ಕನಸು ನನಸಾಗದೇ ಉಳಿಯುತ್ತದೆ. ಇವರ ಜೂನಿಯರ್ ಬ್ಯಾಚ್‌ನ ವಿದ್ಯಾರ್ಥಿಗಳು ಎನ್‌ಸಿವಿಟಿ ಪ್ರಮಾಣಪತ್ರಕ್ಕೂ, ೨೦೧೩ನೇ ಸಾಲಿನಲ್ಲಿ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳು ಎಸ್‌ಸಿವಿಟಿಗೆ ಪ್ರಮಾಣಪತ್ರ ಪಡೆದುಕೊಳ್ಳುತ್ತಾರೆ.
ಯಾಕೀ ಸಮಸ್ಯೆ:
ಎಂಆರ್‌ಎಸಿ ವಿಭಾಗದಲ್ಲಿ ಎರಡು ಘಟಕಗಳಿದ್ದು, ಒಂದು ಘಟಕ ಈಗಾಗಲೇ ಡಿಜಿಇಟಿಯಿಂದ ಸದಸ್ಯತ್ವ ಪಡೆದುಕೊಂಡಿದ್ದು, ಆ ಘಟಕದಲ್ಲಿರುವ ವಿದ್ಯಾರ್ಥಿಗಳು ಎನ್‌ಸಿವಿಟಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಡಿಜಿಇಟಿ ಸದಸ್ಯತ್ವ ಪಡೆಯದ ಇನ್ನೊಂದು ಘಟಕದಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಎಸ್‌ಸಿವಿಟಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ.
೧೪ ವೃತ್ತಿ ತರಬೇತಿಗಳಿರುವ ಸಂಸ್ಥೆಗೆ ೪೬ ಶಿಕ್ಷಕರು ಅಗತ್ಯವಿದ್ದರೂ, ಪ್ರಸ್ತುತ ೨೦ ಶಿಕ್ಷಕರಿದ್ದಾರೆ. ಹಾಜರಾತಿ ಪುಸ್ತಕದಲ್ಲಿ ೨೨ ಶಿಕ್ಷಕರನ್ನು ತೋರಿಸಲಾಗುತ್ತಿದ್ದು, ಇಬ್ಬರು ಶಿಕ್ಷಕರು ಪ್ರಬಾರ ನೆಲೆಯಲ್ಲಿ ಪುತ್ತೂರು ಮತ್ತು ಗದಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕೇತರ ಸಿಬ್ಬಂದಿಗಳು ೧೦ ಬೇಕಿದ್ದರೂ, ೪ ಜನರಿದ್ದು, ಗ್ರೂಫ್ ಡಿಯಲ್ಲಿ ಒಬ್ಬರಿದ್ದು, ೧ಹುದ್ದೆ ಖಾಲಿಯಾಗಿದೆ.
ವಿದ್ಯಾರ್ಥಿವೇತನ:
ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಅವರು ಆರಿಸಿಕೊಂಡ ವೃತ್ತಿಗೆ ಸಂಬಂಸಿದಂತೆ ಉಪಕರಣಗಳನ್ನು ನೀಡಲಾಗುತ್ತಿದೆ. ಅಲ್ಲದೇ ಶಿಷ್ಯವೇತನ ಪ್ರತಿ ತಿಂಗಳಿಗೆ ರೂ.೨೫೦ ದೊರಕುತ್ತಿದೆ. ಉಳಿದ ವಿದ್ಯಾರ್ಥಿಗಳ ಹಾಜರಾತಿ ಮತ್ತು ೨೦ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರುವ ವಿದ್ಯಾರ್ಥಿಗಳಿಗೆ ತಿಂಗಳಿಗೆ ೫೦ ಶಿಷ್ಯವೇತನ ದೊರಕುತ್ತದೆ.
ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಐಟಿಐ ಕಾಲೇಜುಗಳ ವಿದ್ಯಾರ್ಥಿಗಳು ಎನ್‌ಸಿವಿಟಿ/ಎಸ್‌ಸಿವಿಟಿ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಅದರ ಹೊರತು ಕೆಲವೊಂದು ವಿದ್ಯಾರ್ಥಿಗಳಿಗೆ ಎಸ್‌ಸಿವಿಟಿ ಪ್ರಮಾಣ ಪತ್ರ ನೀಡಿದರೆ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಿದಂತಾಗುವುದಿಲ್ಲವೇ? ಈ ಕುರಿತು ರಾಜ್ಯದ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ ಗಮನಹರಿಸಬೇಕು. ರಾಜ್ಯದ ಎಲ್ಲಾ ಐಟಿಐ ಕಾಲೇಜುಗಳ ಗುಣಮಟ್ಟ ಸುಧಾರಿಸುವಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಖಾಸಗಿ ಐಟಿಐ ಕಾಲೇಜುಗಳು ಪರೀಕ್ಷಾ ಫಲಿತಾಂಶ ಪ್ರಕಟವಾದ ಕೂಡಲೇ ನೇಮಕಾತಿ ಪ್ರಾರಂಭಿಸುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳನ್ನು ಅನುಸರಿಸುತ್ತಾರೆ. ಸರಕಾರಿ ಐಟಿಐ ಕಾಲೇಜುಗಳ ವಿಳಂಭ ಆನ್‌ಲೈನ್ ಅರ್ಜಿಯನ್ನು ಶೀಘ್ರ ಕರೆಯುವಲ್ಲಿ ಕಾರ್ಯನಿರತವಾಗಬೇಕು. ಹಲವಾರು ಅವ್ಯವಸ್ಥೆಗಳ ಗೂಡಾಗಿರುವ ಸರಕಾರಿ ಐಟಿಐ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಇಲಾಖೆ ಶ್ರಮಿಸಬೇಕು.
ಎನ್‌ಸಿವಿಟಿ/ಎಸ್‌ಸಿವಿಟಿ ಪ್ರಮಾಣಪತ್ರಗಳಿಂದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸಂಸ್ಥೆಯಲ್ಲಿ ಎಂಆರ್‌ಎಸಿ ವಿಭಾಗದಲ್ಲಿರುವ ಎರಡು ಘಟಕಗಳಲ್ಲಿ ಒಂದು ಘಟಕ ಡಿಜಿಇಟಿ ಸದಸ್ಯತ್ವ ಪಡೆದುಕೊಂಡಿದೆ. ಇನ್ನೊಂದು ಉಪಕರಣಗಳ ಕೊರತೆಯಿಂದ ಸದಸ್ಯತ್ವ ಪಡೆದಿಲ್ಲ. ಈ ಕುರಿತು ರಾಜ್ಯದ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಲಾಗಿದೆ.
ಶಿವಪ್ಪ -ಪ್ರಾಂಶುಪಾಲ ಗಂಡು ಮಕ್ಕಳ ಐಟಿಐ ಕಾಲೇಜು ಮಂಗಳೂರು.
No comments:
Post a Comment