ಊಟಕ್ಕಿಲ್ಲದ ಉಪ್ಪಿನಕಾಯಿ-ಗೋವುಗಳೇ ನಾಶವಾಗುತ್ತಿರುವಾಗ ಹಾಲಿಗೆ ಬೆಂಬಲ ಬೆಲೆ.
ದುಃಖ ಮಡಿಲಲಿಟ್ಟು ಕುಟುಂಬ ಸಂತೋಷದಲ್ಲಿ ಭಾಗಿಯಾಗಲು ಸಾಧ್ಯವೇ?
ಮೇ.೮ ರಂದು ವಿಧಾನ ಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ಕಣ್ಣಿದ್ದು ಕುರುಡರಾಗುವ ಪರಿಸ್ಥಿತಿ ನಮ್ಮದಾಗಿದೆಯೇ ಎನ್ನುವ ಗೊಂದಲದ ಪರಿಸ್ಥಿತಿ. ರಾಜ್ಯದ ಮುಖ್ಯಮಂತ್ರಿ ಚುಕ್ಕಾಣಿಯನ್ನು ಹಿಡಿದ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುವಾಗ ಘೋಷಣೆ ಮಾಡಿರುವುದನ್ನು ಗಮನಿಸಿದಾಗ ಇವರಿಗೆ ಸಾಮಾಜಿಕ ಕಳಕಳಿ ಇರಬಹುದು ಎಂದು ಎಲ್ಲರೂ ತಿಳಿದುಕೊಂಡಿದ್ದರು. ಹಳ್ಳಿಯ ಬಡಜನತೆ ಹಾಗೂ ಮಧ್ಯಮ ವರ್ಗದವರ ಜೀವನ ನಿರ್ವಹಣೆಗೆ ಅನುಕೂಲವಾಗುವಂತ ಕೆ.ಜಿ. ಅಕ್ಕಿಗೆ ೧ರೂ ಹಾಗೂ ಹಾಲಿನ ಪ್ರೋತ್ಸಾಹ ಬೆಲೆಯಲ್ಲಿ ಹೆಚ್ಚಳ. ಈ ವಿಷಯವನ್ನು ಕೇಳಿದ ಹಳ್ಳಿಯ ಮುಗ್ದ ಜನತೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಸಂತೋಷದಿಂದ ಸಂಭ್ರಮಿಸುವಾಗಲೇ ಮತ್ತೊಂದು ಹೇಳಿಕೆ ಸಂತೋಷವನ್ನು ಆಚರಿಸಬೇಕೆ? ಅಥವಾ ದುಃಖದಲ್ಲಿ ಭಾಗಿಯಾಗಬೇಕೆ ಎನ್ನುವಲ್ಲಿಯೂ ಗೊಂದಲ.
ಅಲ್ಪಸಂಖ್ಯಾತರನ್ನು ಓಲೈಕೆ ಮಾಡಬೇಕೆಂಬ ನೆಲೆಯಲ್ಲಿ ೧೯೬೪ ರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಯಥಾವತ್ತಾಗಿ ಮುಂದುವರಿಸಲಾಗುವುದು ಎಂದು ಹೇಳಿಕೆ ನೀಡಿರುವುದು ಮುಂದಿನ ಎಂಪಿ ಚುನಾವಣೆಯ ಮುನ್ಸೂಚನೆಯೇ? ಇಲ್ಲವಾದರೆ ಬಿಜೆಪಿ ಆಡಳಿತದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧಕ್ಕೆ ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ಗಳಲ್ಲಿ ಅನುಮೋದನೆ ಪಡೆದ ಬಿಜೆಪಿ ಸರಕಾರ ರಾಜ್ಯಪಾಲರ ಅಂತಿಮ ಅಂಕಿತಕ್ಕೆ ಕಳುಹಿಸಿತ್ತು. ಆದರೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಆ ಕಡತಕ್ಕೆ ಅಂತಿಮ ಅಂಗೀಕಾರ ನೀಡದೆ ಇಲ್ಲಿಯವರೆಗೆ ಯೋಜನೆ ಜಾರಿಯಾಗದೇ ಜೇಡರ ಬಲೆ-ಧೂಳುಗಳಿಂದಾವೃತವಾದ ಹಳೆಯ ಕಡತಗಳ ಸಾಲಿಗೆ ಸೇರ್ಪಡೆಯಾಗಿದೆಯೇ ಎನ್ನುವ ಸಂದೇಹ. ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿದ್ದರೂ, ಸಿದ್ದರಾಮಯ್ಯ ರಾಜಕೀಯ ಪ್ರೇರಿತ ದುರುದ್ದೇಶ ಹಾಗೂ ಒಂದು ವರ್ಗವನ್ನು ಓಲೈಕೆ ಮಾಡುವ ಸಲುವಾಗಿ ಈ ಹೇಳಿಕೆ ನೀಡಿದ್ದಾರೆ ಎನ್ನುವುದು ಜನತೆಯ ಅಭಿಮತ.
ಪ್ರಪಂಚದಲ್ಲಿರುವ ಎಲ್ಲಾ ವರ್ಗಗಳೂ ಕೂಡ ಗೋವಿನಿಂದ ಒಂದಲ್ಲ ಒಂದು ತೆರನಾದ ಸಹಾಯ ಪಡೆದಿದ್ದಾರೆ. ಆದರೆ ಹಿಂದುಗಳಿಗೆ ಮಾತ್ರ ಗೋವು ಅನಾದಿಕಾಲದಿಂದಲೂ ಪೂಜನೀಯ ಪ್ರಾಣಿ. ಮುಕ್ಕೋಟಿ ದೇವತೆಗಳನ್ನು ನಾವು ಗೋವಿನ ಮಹತ್ ರೂಪಿನಲ್ಲಿ ಕಾಣುತ್ತೇವೆ. `ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ' ಎನ್ನುವ ಗೋವಿನ ಹಾಡಿನಲ್ಲಿ ಗೋವಿನ ಮಹತ್ವಿಕೆ ವರ್ಣಿತವಾಗಿದೆ. ಮಗುವೊಂದು ತಾಯಿಯ ಎದೆಹಾಲು ಕುಡಿಯುವುದನ್ನು ನಿಲ್ಲಿಸಿದ ನಂತರ ಅದಕ್ಕೆ ಹಸುವಿನ ಹಾಲನ್ನು ಕುಡಿಸಲಾಗುತ್ತದೆ. ಹಸುವಿನ ತುಪ್ಪ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಸಗಣಿಯೋ ಒಳ್ಳೆಯ ಗೊಬ್ಬರ. ಇನ್ನೂ ಗೋಮೂತ್ರವಂತೂ ಬಗೆ ಬಗೆಯ ರೋಗಗಳಿಗೆ ರಾಮಬಾಣವೆನ್ನುವುದು ಜನಜನಿತ.
ಸ್ವಾತಂತ್ರ್ಯಪೂರ್ವದಲ್ಲಿ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ತಮ್ಮ ಆಡಳಿತದ ಹತೋಟಿ ತರಲು ಆರಿಸಿಕೊಂಡ ಮಾರ್ಗ ಶಿಕ್ಷಣ ಪದ್ದತಿ ಹಾಗೂ ಕೃಷಿ ಪದ್ದತಿಯ ಮೇಲೆ ಹೊಡೆತ ನೀಡಿದ್ದು, ಅದು ನಮ್ಮ ಸಂಸ್ಕೃತಿಯ ಮೇಲೆ ಎಂದೂ ಮಾಸದ ಬರೆಯನ್ನು ಎಳೆದಿರುವುದಂತೂ ಸತ್ಯ. ಅದರಿಂದ ಚೇತರಿಸಿ ಕೊಳ್ಳಲು ಇಷ್ಟರವರೆಗೆ ಸಾಧ್ಯವಾಗಿಲ್ಲ. ಗುರುಕುಲ ಶಿಕ್ಷಣ ಪದ್ದತಿಯ ನಾಶಕ್ಕಾಗಿ, ಇಂಗ್ಲಿಷ್ ಶಿಕ್ಷಣ ಪದ್ದತಿಯನ್ನು ಮೆಕಾಲೆ ಜಾರಿಗೆ ತಂದನು. ಋಷಿ ಪರಂಪರೆಯ ಕೃಷಿ ಪದ್ದತಿಯ ನಾಶಕ್ಕಾಗಿ ಆಯ್ದುಕೊಂಡ ಮಾರ್ಗವೇ ಗೋಹತ್ಯೆ...
ನಿರ್ಭಾಧಿತವಾಗಿ ಗೋಹತ್ಯೆ ಪ್ರಾರಂಭವಾಗುತ್ತಿದ್ದಂತೆ ದೇಶದಲ್ಲಿ ಹಾಲು, ಮೊಸರು, ತುಪ್ಪದ ಪ್ರಮಾಣ ಕಡಿಮೆಯಾಗತೊಡಗಿತು. ಇದು ರಾಷ್ಟ್ರವ್ಯಾಪಿಯಾಗಿ ಚರ್ಚೆ-ಗುಸುಗುಸು ಆರಂಭವಾಗುತ್ತಿದ್ದಂತೆ ಪಾಶ್ಚಿಮಾತ್ಯರು ವಿಟಮಿನ್‌ಗಳ ಚರ್ಚೆ ಆರಂಬಿಸಿದರು. ಇದು ನಮ್ಮವರ ಕಿವಿಗಳಿಗೆ ಬೇಗ ಮುಟ್ಟಿತು. ಮೊದಲೇ ನಮ್ಮವರದು ಹಿತ್ತಾಳೆ ಕಿವಿಯಲ್ಲವೇ? ನಮ್ಮತನವಿಲ್ಲದೇ ಬೇರೆಯವರು ಹೇಳಿರುವುದನ್ನೇ ಸತ್ಯವೆಂದು ನಂಬಿಕೊಂಡು ಅಗ್ನಿಸಾಕ್ಷಿಯಾಗಿ ಕೈ ಹಿಡಿದ ಹೆಂಡತಿಯನ್ನು ನಡುದಾರಿಯಲ್ಲಿ ಕೈಬಿಟ್ಟು ಹೋಗುವಂತ ದ್ಯೇಯನಿಷ್ಠರು. ಯಾವಾಗ ಪಾಶ್ಚಾತ್ಯರು ವಿಟಮಿನ್‌ಗಳ ಕುರಿತು ಚರ್ಚೆ ಆರಂಭಿಸಿದರೋ ಆಗ ನಮ್ಮವರ ಗಮನ ಹಾಲು, ತುಪ್ಪಗಳಿಂದ ಬೇರೆಯಾಗಿ ವಿಟಮಿನ್‌ಗಳತ್ತ ಹರಿಯಿತು. ಗೋ-ಉತ್ಪನ್ನಗಳಿಂದ ಬೇರೆಯಾಗಿ ತರಕಾರಿಗಳತ್ತ ಜನರ ಆಕರ್ಷಣೆ ವಿಪರೀತವಾಯಿತು. ತುಪ್ಪದಲ್ಲಿ ಕೊಬ್ಬಿನಂಶ ಇರುವುದರಿಂದ ಅದನ್ನು ತಿಂದರೆ ಹೃದಯರೋಗ ಬರುತ್ತದೆ ಎಂದು ಪಾಶ್ಚಿಮಾತ್ಯರು ದೇಶವ್ಯಾಪಿಯಾಗಿ ಪ್ರಚಾರ ಮಾಡಿದರು. ಪಾಶ್ಚಿಮಾತ್ಯರ ಈ ಪ್ರಚಾರಕ್ಕೆ ನಮ್ಮವರಲ್ಲಿರುವ ಪರಂಪರೆಯ ಜ್ಞಾನ ಮಸುಕಾಗ ತೊಡಗಿತು. ಅದನ್ನೇ ಸತ್ಯವೆಂದು ನಂಬಿದರು. ವಿಶೇಷವೆಂದರೆ ದೇಶದ ಶಿಕ್ಷಿತವರ್ಗ ಈ ಪ್ರಚಾರಕ್ಕೆ ಮರುಳಾಯಿತು. ಶಂಖದಿಂದ ಬಂದದ್ದೆಲ್ಲಾ ತೀರ್ಥವೆಂದು ಭಾವಿಸಿ ಎಲ್ಲರ ಚಿತ್ತ ತರಕಾರಿಯತ್ತ ಹೊರಳಿದರೆ ಗೋಹತ್ಯೆ ಮಾತ್ರ ಅವ್ಯಾಹತವಾಗಿ ನಡೆಯುತ್ತಲೇ ಇತ್ತು.
ದೇಶಿ ಹಸುವಿನ ತುಪ್ಪದಿಂದ ಸಿಗುವ ಶಕ್ತಿ ಯಾವುದೇ ವಿಟಮಿನ್ ಮತ್ತು ಮಾಂಸಾಹಾರದಲ್ಲಿ ಸಿಗೋದು ಸಾಧ್ಯವೇ ಬಂಧುಗಳೇ? ಗೋವಿನ ಹಾಲಿನಿಂದ ಕ್ಷಣಮಾತ್ರದಲ್ಲಿಯೇ ಅಸಿಡಿಟಿಯಂತಹ ರೋಗಗಳು ಪರಿಹಾರವಾಗುತ್ತೆ? ಗೋಮೂತ್ರದಿಂದ ಶರೀರದಲ್ಲಿನ ಎಲ್ಲಾ ದುಷ್ಪರಿಣಾಮಗಳನ್ನು, ಅಸಂತುಲನೆಯನ್ನು ಸಂಪೂರ್ಣ ದೂರಗೊಳಿಸುವ ರಾಸಾಯನಿಕ ಗುಣ ಮತ್ತು ಕ್ಷಮತೆ ಇದೆ. ಮಗುವಿಗೆ ಕುಡಿಸುವುದಕ್ಕೆಂದೆ ತಾಯಿಯ ಬಳಿ ಸಾಕಷ್ಟು ಎದೆ ಹಾಲಿದೆ ನಿಜ. ಆದರೆ ಮಜ್ಜಿಗೆ-ಮೊಸರುಗಳು ಹಸಿವೆಗೆ ಅಮೃತವಿದ್ದಂತೆ ಮತ್ತು ಜೀರ್ಣಕ್ಕೆ ಸಂಜೀವಿನಿಯಿದ್ದಂತೆ. ಅಂತ ಪೂಜನೀಯ ಗೋಮಾತೆಯ ವಂಶ ನಾಶದ ದುರಂತ ಕಥೆಯಿಂದು ಕಣ್ಣೀರಾಗಿ ನಮ್ಮ ಮುಂದಿದ್ದಾಳೆ.
ಈಗ ನಾವು ಎಂತಹ ದುರಂತಮಯ ಸನ್ನಿವೇಶವನ್ನು ಕಾಣುತ್ತಿದ್ದೇವೆ. ದಿನ ಬೆಳಗಾದರೆ ಕುಡಿಯುವುದಕ್ಕೆ ಟೀ, ಕಾಫಿ ಅಥವಾ ಹಾಲು ಇನ್ನಿತರ ಯಾವುದೇ ಪೇಯಕ್ಕಾದರೂ ಹಾಲು ಎನ್ನುವುದು ಅತಿಮುಖ್ಯ. ಯಾವುದೇ ಮತ, ಧರ್ಮದವರಿರಲಿ ಅವರಿಗೆ ಹಾಲು ಮುಖ್ಯ. ನಮ್ಮ ದಿನಚರಿ ಪ್ರಾರಂಭವಾಗುವುದೇ ಗೋಮಾತೆ ನೀಡುವ ಅಮೃತದಿಂದ ಎಂದು ತಿಳಿದಿದ್ದರೂ ನಾವು ಯಾಕೆ ಅನಾಗರಿಕರಂತೆ ವರ್ತಿಸುತ್ತಿದ್ದೇವೆ. ದಿನದಿಂದ ದಿನಕ್ಕೆ ಗೋಸಂತತಿಯು ವಿನಾಶದ ಹೊಸ್ತಿಲಲ್ಲಿದೆ ಎಂದು ತಿಳಿದರೂ ಯಾಕೆ ತಟಸ್ಥರಾಗಿದ್ದೇವೆ. ಸ್ವಾತಂತ್ರ್ಯಪೂರ್ವದಲ್ಲಿ ೩೫೦ ಇದ್ದ ಕಸಾಯಿಖಾನೆಗಳು ಈಗ ೩೫೦೦ಕ್ಕೂ ಮಿಕ್ಕಿವೆ. ಗೋವನ್ನು ಪೂಜಿಸುವ ಹಿಂದೂಗಳ ಭಾವನೆಗೆ ಧಕ್ಕೆ ಬರುವಂಥ ಕೃತ್ಯ ಇದಾಗಿದೆ ಎಂದು ತಿಳಿಸಿದರೂ, ಯಾಕೀ ಮೌನವೃತ? ಇದನ್ನೆಲ್ಲಾ ನೋಡಿದರೆ ನಾವು ಕುಟುಂಬದೊಂದಿಗೆ ಸಂಭ್ರಮ ಆಚರಿಸಲು ಸಾಧ್ಯವೇ? ವೈಜ್ಞಾನಿಕತೆಯ ಸೋಗಿನಲ್ಲಿ ಮೂಕಪ್ರಾಣಿಗಳ ವೇದನೆಗೆ ಕಣ್ಣೀರಾಗದೇ ಸ್ವಾರ್ಥತೆಯನ್ನು ಸಾಧಿಸುತ್ತಿದ್ದೇವೆ.
ಕುಂದಾಪುರ ತಾಲೂಕಿನ ಆರ್ಡಿಯಲ್ಲಿ ಕಳೆದ ವಾರ ನಾಲ್ವರೂ ಅನ್ಯಮತೀಯ ಯುವಕರು ತಡ ರಾತ್ರಿಯಲ್ಲಿ ಮನೆಯ ಮುಂದೆ ಮಲಗಿರುವ ದನವನ್ನು ಕದ್ದೊಯ್ದರು. ಅಂದರೆ ಅವರ ಧೈರ್ಯ ಎಷ್ಟರ ಮಟ್ಟಿನದು? ಇಲ್ಲಾ ಅವರಿಗೆ ನೈತಿಕವಾಗಿ ಸಹಾಯ ಮಾಡುವವರು ಯಾರು? ಅಧಿಕಾರಕ್ಕೆ ಬಂದಾಕ್ಷಣ ಮನೆಯ ಮುಂದಿರುವ ದನವನ್ನು ಕದ್ದೊಯ್ಯುವ ಇವರು ದಿನಗಳೆದಂತೆ ನಮ್ಮ ಮನೆಯ ಮಹಿಳೆಯರ ಅಪಹರಿಸುವ ದಿನ ಬಹಳ ದೂರವಿಲ್ಲ ಎನ್ನುವ ಸತ್ಯವನ್ನು ಯಾಕೆ ಅರಿಯುತ್ತಿಲ್ಲ? ಬಂಧುಗಳೇ ನಿಮ್ಮ ಅಂತರಾತ್ಮವನ್ನು ಪ್ರಶ್ನಿಸಿಕೊಳ್ಳಿ.
ನಾಲ್ಕು ಚಕ್ರದ ವಾಹನದಲ್ಲಿ ಏಳೆಂಟು ಮಂದಿ ಕುಳಿತುಕೊಳ್ಳಲು ತ್ರಾಸಪಡುತ್ತೇವೆ. ಕುಳಿತುಕೊಳ್ಳಲು ಸ್ಥಳವಕಾಶವಿಲ್ಲದ ಬಸ್‌ಗಳನ್ನು ಏರುವುದಿಲ್ಲ. ಆದರೆ ದಷ್ಟ-ಪುಷ್ಟವಾಗಿ ಬೆಳೆದ ಹತ್ತಾರು ಗೋವುಗಳನ್ನು ತುಂಬುತ್ತಾರೆ ಅಂದರೆ ಯಾವ ರೀತಿ ಚಿತ್ರಹಿಂಸೆ ನೀಡುತ್ತಾರೆ. ನಾವಿರುವ ಪರಿಸರದಲ್ಲಿ ಅನೇಕ ಭಾರಿ ಇಂತಹ ಘಟನೆಗಳು ನಡೆದಿದ್ದರೂ, ಇಷ್ಟರವರೆಗೆ ಪೊಲೀಸರಿಗೆ ಯಾವುದೇ ದೂರನ್ನು ದಾಖಲಿಸಿಲ್ಲವೆಂದಾದರೆ ಅಂಬಾ ಎನ್ನುವ ಆಕಳಿನ ಧ್ವನಿ ನಮ್ಮ ಅಂತಃಕರಣವನ್ನು ಇನ್ನೂ ತಟ್ಟಿಲ್ಲವೇ? ಪಕ್ಕದ ಮನೆಯ ತೆಂಗಿನ ಮರದ ಕೊಂಬೆಯೊಂದು ಮನೆಯಂಗಳಕ್ಕೆ ಬಿದ್ದರೆ ದಾಖಲೆಗಳನ್ನು ಹಿಡಿದುಕೊಂಡು ಪೊಲೀಸ್ ಠಾಣೆ, ಕೋರ್ಟು ಕಚೇರಿ ಎಂದು ಅಲೆದಾಡುವ ನಾವು ಕಣ್ಣೆದುರಿಗೆ ಅನ್ಯಾಯವಾಗುತ್ತಿದ್ದರೂ, ತಡೆಯುವ ಗೋಜಿಗೆ ಹೋಗುತ್ತಿಲ್ಲ.
ದಿನನಿತ್ಯ ಸಾವಿರಾರು ಗೋವುಗಳನ್ನು ದೇಶದ ಮೂಲೆ-ಮೂಲೆಯಿಂದ ಅಪಹರಿಸಿ ಕೊಲ್ಲುವುದನ್ನು ಕಾಣುತ್ತಿದ್ದೇವೆ. ತಾಯಿಯನ್ನು ಕಳೆದುಕೊಂಡ ಆ ತಬ್ಬಲಿ ಕರುವಿನ ಮುಖವನ್ನು ನೋಡಿದರೆ ಅಯ್ಯೊ ಅನ್ನಿಸುವುದಿಲ್ಲವೆ? ನಮ್ಮಲ್ಲಿರುವ ಕರುಣೆ ಹಾಗೂ ಸ್ವಾಭಿಮಾನ ಅಡಗಿಹೊಯಿತೆ? ಸೌಧೆಯನ್ನು ಚೆನ್ನಾಗಿ ಕುಕ್ಕಿದರೆ ಬೆಂಕಿ ಧಗಧಗ ಉರಿಯುತ್ತದೆ. ಹಾವನ್ನು ತುಳಿದರೆ ಹೆಡೆಬಿಚ್ಚಿ ಬುಸುಗುಡುತ್ತದೆ. ಪ್ರಾಣಿ ಹಾಗೂ ಮನುಷ್ಯರನ್ನು ಪ್ರಚೋದಿಸಿದಾಗ ಅಥವಾ ಸಿಟ್ಟಿಗೇಳಿಸಿದಾಗ ಮಾತ್ರ ತಮ್ಮ ಶಕ್ತಿ ಪ್ರದರ್ಶಿಸುವ ಜನ ಗೋಮಾತೆಯ ರಕ್ಷಣೆಯಲ್ಲಿ ಮಾತ್ರ ಯಾಕೀ ಮೌನ...ಕೆಲಸಕ್ಕೆ ಮನ ಮಾಡುವ ಮುನ್ನ ಆಂತರಿಕ ಒತ್ತಡದಿಂದ, ಹೇಗಾದರೂ ಪಾರಾಗಬೇಕು ಎಂಬ ಅನಿವಾರ್ಯತೆ ಇರಬಹುದು. ಇನ್ನು ಮುಂದೆ ತೊಂದರೆಯೇ ಬರಬಾರದು ಎನ್ನುವ ಭದ್ರಭವಿತವ್ಯದ ಬಯಕೆ ಇರಬಹುದು ಅಥವಾ ನಾನೇನು ಎನ್ನುವುದನ್ನು ಇವರಿಗೆ ತೋರಿಸಿಯೇ ಬಿಡುತ್ತೇನೆ ಎನ್ನುವ ಛಲ ಇರಬಹುದು.
ಹಾವನ್ನು ತುಳಿದರೆ ಮಾತ್ರ ಅದು ಬುಸುಗುಡುವಂತೆ, ಕೊಳ್ಳಿಯನ್ನು ಕುಕ್ಕಿದರೆ ಮಾತ್ರ ಪ್ರಜ್ವಲಿಸುವಂತೆ ಮನುಷ್ಯನ ಮನಸ್ತಿತಿಯೂ ಕೂಡ ಅಂತೆಯೇ. ಯಾರಿಂದಲಾದರೂ ಕೆಣಕಿಸಿಕೊಂಡಾಗ, ಅಪಹಾಸ್ಯಕ್ಕೆ ಗುರಿಯಾದಾಗ ಮಾತ್ರ ತಮ್ಮ ಶಕ್ತಿ ಪ್ರದರ್ಶಿಸುತ್ತಾರೆ. ಹಠದಲ್ಲಿ ಬಿದ್ದು ಸಾಧನೆಯಲ್ಲಿ ತೊಡಗಿ ಅಸಾಧ್ಯವಾದುದನ್ನು ಸಾಧಿಸುತ್ತಾರೆ.
ಹಾಗಂತ ಹಾವು ಯಾವಾಗಲೂ ಹೆಡೆಬಿಚ್ಚಿ ಬುಸುಗುಡಬೇಕು ಅಂತಲ್ಲ ಅಥವಾ ಶಕ್ತಿವಂತರು ಅನವಶ್ಯಕವಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕಂತಲೂ ಅಲ್ಲ. ಇರುವ ಶಕ್ತಿಯನ್ನು ಗರಿಷ್ಟ ಪ್ರಮಾಣದಲ್ಲಿ ತಮ್ಮ ಉನ್ನತಿಗೆ ಬಳಸಿಕೊಳ್ಳಬೇಕು ಎನ್ನುವ ಆಶಯ. ಜಿದ್ದಿಗೆ ಬಿದ್ದಾಗ ಛಲ ಸಾಧಿಸುವ ನಾವು ಗೋಮಾತೆಯ ರಕ್ಷಣೆಯ ವಿಷಯದಲ್ಲಿ ನಮ್ಮ ಶಕ್ತಿಯನ್ನು ಯಾವ ಪ್ರಯೋಜನಕ್ಕೂ ಬಾರದಂತೆ ಬಿಡಬೇಕೆ..
ನಿಮ್ಮ ಬುದ್ದಿಶಕ್ತಿಗೆ ಕೆಲಸವನ್ನು ನೀಡಿ, ಇನ್ನಾದರೂ ಎಚ್ಚೆತ್ತು ಗೋಮಾತೆಯ ರಕ್ಷಣೆಗಾಗಿ ಹೋರಾಡುತ್ತಾ, ಜಾಗೃತರಾಗಿ ಪೊಲೀಸರಿಗೆ ದೂರು ನೀಡುವ ಗುಣವನ್ನು ಬೆಳೆಸಿಕೊಳ್ಳೊಣ. ಇದರಿಂದ ಸಂಭವಿಸುವ ಗಲಾಟೆಗಳು ಕಡಿಮೆಯಾಗಬಹುದೆನೋ? ಇದುವೇ ಸುದಿನವೆಂದು ಭಾವಿಸಿ, ಗೋಮಾತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸಂಕಲ್ಪಮಾಡಿ ಕೇಂದ್ರ ಹಾಗೂ ರಾಜ್ಯಸರ್ಕಾರಕ್ಕೆ ಎಚ್ಚರಿಕೆಯ ಘಂಟೆಯೊಂದನ್ನು ಮೊಳಗಿಸುವ..ಹಿಂದುಗಳ ಶಕ್ತಿಯನ್ನು ಜಗತ್ತಿಗೆ ತೋರಿಸೋಣ.
ಏನಂತಿರಾ...
No comments:
Post a Comment