Thursday 19 April 2012



ದುಃಖವನ್ನು ಮಡಿಲಲಿಟ್ಟು ಹಬ್ಬವನ್ನು ಸಂತೋಷದಿಂದ ಆಚರಿಸಲು ಸಾಧ್ಯವೇ...?
ನಾವು ಪೂಜನೀಯವೆಂದು ಹೇಳುವ ಗೋಮಾತೆಯನ್ನು ಭಕ್ತಿ, ಆದರದಿಂದ ಪೂಜಿಸುವ ದಿನವಿದು. ಹಿಂದುಗಳಿಗೆ ಗೋವು ಅನಾದಿಕಾಲದಿಂದಲೂ ಪೂಜನೀಯ ಪ್ರಾಣಿಯಾಗಿದೆ.ಮುಕ್ಕೋಟಿ ದೇವತೆಗಳನ್ನು ನಾವು ಗೋವಿನಲ್ಲಿ ಕಾಣುತ್ತೇವೆ. `ಇಟ್ಟರೆ ಸಗಣಿಯಾದೆ,ತಟ್ಟಿದರೆ ಬೆರಣಿಯಾದೆ' ಎಂದು ಗೋವಿನ ಹಾಡಿನಲ್ಲಿ ವರ್ಣಿತವಾಗಿದೆ. ತಾಯಿಯ ಎದೆಹಾಲು ನಿಲ್ಲಿಸಿದ ನಂತರ ಮಕ್ಕಳಿಗೆ ಹಸುವಿನ ಹಾಲನ್ನು ಕುಡಿಸಲಾಗುತ್ತದೆ. ಹಸುವಿನ ತುಪ್ಪ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಸಗಣಿಯೋ ಒಳ್ಳೆಯ ಗೊಬ್ಬರ. ಇನ್ನೂ ಗೋಮೂತ್ರವಂತೂ ಬಗೆ ಬಗೆಯ ರೋಗಗಳಿಗೆ ರಾಮಬಾಣ.
ಸ್ವಾತಂತ್ರ್ಯಪೂರ್ವದಲ್ಲಿ ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ತಮ್ಮ ಆಡಳಿತದ ಹತೋಟಿ ತರಲು ಆರಿಸಿಕೊಂಡ ಮಾರ್ಗ ಶಿಕ್ಷಣ ಪದ್ದತಿ ಹಾಗೂ ಕೃಷಿ ಪದ್ದತಿಯ ಮೇಲೆ ಹೊಡೆತ ನೀಡಿದ್ದು, ಅದು ನಮ್ಮ ಸಂಸ್ಕೃತಿಯ ಮೇಲೆ ಎಂದೂ ಮಾಸದ ಬರೆಯನ್ನು ಎಳೆದರು. ಅದರಿಂದ ಚೇತರಿಸಿ ಕೊಳ್ಳಲು ಇಷ್ಟರವರೆಗೆ ಸಾಧ್ಯವಾಗಿಲ್ಲ. ಗುರುಕುಲ ಶಿಕ್ಷಣ ಪದ್ದತಿಯ ನಾಶಕ್ಕಾಗಿ, ಇಂಗ್ಲಿಷ್ ಶಿಕ್ಷಣ ಪದ್ದತಿಯನ್ನು ಮೆಕಾಲೆ ಜಾರಿಗೆ ತಂದನು. ಕೃಷಿ ಪದ್ದತಿಯ ನಾಶಕ್ಕಾಗಿ ಆಯ್ದುಕೊಂಡ ಮಾರ್ಗವೇ ಗೋಹತ್ಯೆ...
ನಿರ್ಭಾಧಿತವಾಗಿ ಗೋಹತ್ಯೆ ಪ್ರಾರಂಭವಾಗುತ್ತಿದ್ದಂತೆ ದೇಶದಲ್ಲಿ ಹಾಲು, ಮೊಸರು, ತುಪ್ಪದ ಪ್ರಮಾಣ ಕಡಿಮೆಯಾಗತೊಡಗಿತು. ಇದು ರಾಷ್ಟ್ರವ್ಯಾಪಿಯಾಗಿ ಚರ್ಚೆ-ಗುಸುಗುಸು ಆರಂಭವಾಗುತ್ತಿದ್ದಂತೆ ಪಾಶ್ಚಿಮಾತ್ಯರು ವಿಟಮಿನ್‌ಗಳ ಚರ್ಚೆ ಆರಂಬಿಸಿದರು. ಇದು ನಮ್ಮವರ ಕಿವಿಗಳಿಗೆ ಬೇಗ ಮುಟ್ಟಿತು. ಇದರಿಂದ ನಮ್ಮವರ ಗಮನ ಹಾಲು, ತುಪ್ಪಗಳಿಂದ ಬೇರೆಯಾಗಿ ವಿಟಮಿನ್‌ಗಳತ್ತ ಹರಿಯಿತು. ಗೋ-ಉತ್ಪನ್ನಗಳಿಂದ ಬೇರೆಯಾಗಿ ತರಕಾರಿಗಳತ್ತ ಜನರನ್ನು ಸೆಳೆಯಲಾಯಿತು. ತುಪ್ಪದಲ್ಲಿ ಕೊಬ್ಬಿನಂಶ ಇರುವುದರಿಂದ ಅದನ್ನು ತಿಂದರೆ ಹೃದಯರೋಗ ಬರುತ್ತದೆ ಎಂದು ಪಾಶ್ಚಿಮಾತ್ಯರು ದೇಶವ್ಯಾಪಿಯಾಗಿ ಪ್ರಚಾರ ಮಾಡಿದರು.ಈ ಪ್ರಚಾರಕ್ಕೆ ನಮ್ಮ ಪರಂಪರೆಯ ಜ್ಞಾನ ಮಸುಕಾಗತೊಡಗಿತು. ವಿಶೇಷವಾಗಿ ದೇಶದ ಶಿಕ್ಷಿತವರ್ಗ ಈ ಪ್ರಚಾರಕ್ಕೆ ಮರುಳಾಯಿತು. ಶಂಖದಿಂದ ಬಂದದ್ದೆಲ್ಲಾ ತೀರ್ಥವೆಂದು ಭಾವಿಸಿ ಎಲ್ಲರ ಚಿತ್ತ ತರಕಾರಿಯತ್ತ ಹೊರಳಿದರೆ ಗೋಹತ್ಯೆ ಮಾತ್ರ ನಡೆಯುತ್ತಲೇ ಇತ್ತು.ದೇಶಿ ಹಸುವಿನ ತುಪ್ಪದಿಂದ ಸಿಗುವ ಶಕ್ತಿ ಯಾವುದೇ ವಿಟಮಿನ್ ಮತ್ತು ಮಾಂಸಾಹಾರದಲ್ಲಿ ಸಿಗೋದು ಸಾಧ್ಯವಾ ಬಂಧುಗಳೇ? ಗೋವಿನ ಹಾಲಿನಿಂದ ಕ್ಷಣಮಾತ್ರದಲ್ಲಿಯೇ ಅಸಿಡಿಟಿಯಂತಹ ರೋಗಗಳು ಪರಿಹಾರವಾಗುತ್ತೆ? ಗೋಮೂತ್ರದಿಂದ ಶರೀರದಲ್ಲಿನ ಎಲ್ಲಾ ದುಷ್ಪರಿಣಾಮಗಳನ್ನು,,ಅಸಂತುಲನೆಯನ್ನು ಸಂಪೂರ್ಣ ದೂರಗೊಳಿಸುವ ರಾಸಾಯನಿಕ ಗುಣ ಮತ್ತು ಕ್ಷಮತೆ ಇದೆ. ಮಗುವಿಗೆ ಕುಡಿಸುವುದಕ್ಕೆಂದೆ ತಾಯಿಯ ಬಳಿ ಸಾಕಷ್ಟು ಎದೆಹಾಲಿದೆ ನಿಜ ಆದರೆ ಮಜ್ಜಿಗೆ-ಮೊಸರುಗಳು ಹಸಿವೆಗೆ ಅಮೃತವಿದ್ದಂತೆ ಮತ್ತು ಜೀರ್ಣಕ್ಕೆ ಸಂಜೀವಿನಿಯಿದ್ದಂತೆ.ಅಂತ ಪೂಜನೀಯ ಗೋಮಾತೆ ವಂಶ ನಾಶದ ದುರಂತ ಕಥೆಯ ಕಣ್ಣೀರಾಗಿ ನಮ್ಮ ಮುಂದಿದ್ದಾಳೆ.
ಎಂತಹ ದುರಂತಮಯ ಸನ್ನಿವೇಶವನ್ನು ನಾವು ಕಾಣುತ್ತಿದ್ದೇವೆ.ದಿನ ಬೆಳಗಾದರೆ ಕುಡಿಯುವುದಕ್ಕೆ ಟೀ, ಕಾಫಿ ಅಥವಾ ಹಾಲು ಇನ್ನೀತರ ಯಾವುದೇ ಪೇಯಕ್ಕಾದರೂ ಹಾಲು ಅತೀಮುಖ್ಯ. ಯಾವುದೇ ಮತ, ಧರ್ಮದವರಿರಲಿ ಅವರಿಗೆ ಹಾಲು ಮುಖ್ಯ. ನಮ್ಮ ದಿನಚರಿ ಪ್ರಾರಂಭವಾಗುವುದೇ ಗೋಮಾತೆ ನೀಡುವ ಅಮೃತದಿಂದ ಎಂದು ತಿಳಿದಿದ್ದರೂ ನಾವು ಯಾಕೆ ಅನಾಗರಿಕರಂತೆ ವರ್ತಿಸುತ್ತಿದ್ದೇವೆ. ದಿನದಿಂದ ದಿನಕ್ಕೆ ಗೋಸಂತತಿಯು ವಿನಾಶದ ಹೊಸ್ತಿಲಲ್ಲಿದೆ ಎಂದು ತಿಳಿದರೂ ಯಾಕೆ ತಟಸ್ಥರಾಗಿದ್ದೇವೆ.ಸ್ವಾತಂತ್ರ್ಯಪೂರ್ವದಲ್ಲಿ ೩೫೦ ಇದ್ದ ಕಸಾಯಿಖಾನೆಗಳು ಈಗ ೩೫೦೦ಕ್ಕೂ ಮಿಕ್ಕಿವೆ. ಹಿಂದೂಗಳ ಭಾವನೆಗೆ ಧಕ್ಕೆ ಬರುವಂಥ ಕೃತ್ಯವನ್ನು ಎಸಗುತ್ತಿದ್ದರೂ ಯಾಕೆ ಮೌನವೃತವನ್ನು ತಾಳಿದ್ದೇವೆ? ಇದನ್ನೆಲ್ಲಾ ನೋಡಿದರೆ ನಾವು ಗೋಪೂಜೆಯನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವೇ?
ಕುಂದಾಪುರ ತಾಲೂಕಿನ ಆರ್ಡಿಯಲ್ಲಿ ಬಲೀಂದ್ರ ಪೂಜೆಯ ಹಿಂದಿನ ರಾತ್ರಿ ನಾಲ್ವರೂ ಅನ್ಯಮತೀಯ ಯುವಕರು ತಡರಾತ್ರಿಯಲ್ಲಿ ಮನೆಯ ಮುಂದೆ ಮಲಗಿರುವ ದನವನ್ನು ಕದ್ದೊಯ್ಯುತ್ತಾರೆ ಅಂದರೆ ಅವರ ಧೈರ್ಯ ಎಷ್ಟರಮಟ್ಟಿನದು? ಇಲ್ಲಾ ಅವರಿಗೆ ಸಹಾಯ ಮಾಡುವವರು ಯಾರು? ಈಗ ಮನೆಯ ಮುಂದಿರುವ ದನವನ್ನು ಕದ್ದೊಯ್ಯುವ ಇವರು ನಮ್ಮ ಮನೆಯ ಮಹಿಳೆಯರ ಅಪಹರಿಸುವ ದಿನ ಹತ್ತಿರವಿದೆ ಎಂದು ಯಾಕೆ ಅರ್ಥಮಾಡಿಕೊಳ್ಳುತ್ತಿಲ್ಲ? ಒಮ್ಮೆ ನಮ್ಮ ಅಂತರಾತ್ಮವನ್ನು ಪ್ರಶ್ನಿಸಿಕೊಳ್ಳೊಣ....
ನಾಲ್ಕು ಚಕ್ರದ ವಾಹನದಲ್ಲಿ ಏಳೆಂಟು ಮಂದಿ ಕುಳಿತುಕೊಳ್ಳಲು ತ್ರಾಸಪಡುವಾಗ, ದಷ್ಟ-ಪುಷ್ಟವಾಗಿ ಬೆಳೆದ ಹತ್ತಾರು ಗೋವುಗಳನ್ನು ತುಂಬುತ್ತಾರೆ ಅಂದರೆ ಯಾವ ರೀತಿ ಚಿತ್ರಹಿಂಸೆ ನೀಡುತ್ತಾರೆ. ನಮ್ಮ ಪರಿಸರದಲ್ಲಿ ಅನೇಕ ಭಾರಿ ಇಂತಹ ಘಟನೆಗಳು ನಡೆದಿವೆ..ಆದರೆ ಇಷ್ಟರವರೆಗೆ ಯಾವುದೇ ದೂರನ್ನು ಪೊಲೀಸರಿಗೆ ನೀಡಿಲ್ಲ...
ದಿನನಿತ್ಯ ಸಾವಿರಾರು ಗೋವುಗಳನ್ನು ದೇಶದ ಮೂಲೆಯಿಂದಲೂ ಅಪಹರಿಸಿ ಕೊಲ್ಲುವುದು ಕಾಣುತ್ತಾ ಇದ್ದೇವೆ. ಗೋಪೂಜೆಯ ಮುನ್ನಾಧಿನ ಇಂಥ ಕಹಿಘಟನೆಗಳು ನಡೆಯುವಾಗ ಸಂತೋಷದಿಂದ ಹಬ್ಬವನ್ನು ಆಚರಣೆಮಾಡುವುದು ಹೇಗೆ? ತಾಯಿಯನ್ನು ಕಳೆದುಕೊಂಡ ಆ ತಬ್ಬಲಿಯ ಮುಖವನ್ನು ನೋಡಿದರೆ ಅಯ್ಯೊ ಅನ್ನಿಸುವುದಿಲ್ಲ ಯಾಕೆ? ನಮ್ಮಲ್ಲಿ ಕರುಣೆ ಹಾಗೂ ಸ್ವಾಭಿಮಾನ ಅಡಗಿಹೊಯಿತೆ ಎನ್ನುವುದು ನಿಗೂಢವಾಗಿದೆ.
ಸೌಧೆಯನ್ನು ಚೆನ್ನಾಗಿ ಕುಕ್ಕಿದರೆ ಬೆಂಕಿ ಧಗಧಗ ಉರಿಯುತ್ತದೆ. ಹಾವನ್ನು ತುಳಿದರೆ ಹೆಡೆಬಿಚ್ಚಿ ಬುಸುಗುಡುತ್ತದೆ. ಪ್ರಾಣಿ ಹಾಗೂ ಮನುಷ್ಯರನ್ನು ಪ್ರಚೋದಿಸಿದಾಗ ಅಥವಾ ಸಿಟ್ಟಿಗೇಳಿಸಿದಾಗ ಮಾತ್ರ ತಮ್ಮ ಶಕ್ತಿ ಪ್ರದರ್ಶಿಸುವ ಜನ ಗೋಮಾತೆಯ ರಕ್ಷಣೆಯಲ್ಲಿ ಯಾಕೆ ಮೌನದಿಂದಿದ್ದಾರೆ.
ಕೆಲಸಕ್ಕೆ ಮನಮಾಡುವ ಮುನ್ನ ಆಂತರಿಕ ಒತ್ತಡದಿಂದ, ಹೇಗಾದರೂ ಪಾರಾಗಬೇಕು ಎಂಬ ಅನಿವಾರ್ಯತೆ ಇರಬಹುದು. ಇನ್ನು ಮುಂದೆ ತೊಂದರೆಯೇ ಬರಬಾರದು ಎನ್ನುವ ಭದ್ರಭವಿತವ್ಯದ ಬಯಕೆ ಇರಬಹುದು ಅಥವಾ ನಾನೇನು ಎನ್ನುವುದನ್ನು ಇವರಿಗೆ ತೋರಿಸಿಯೇ ಬಿಡುತ್ತೇನೆ ಎನ್ನುವ ಛಲ ಇರಬಹುದು.
ಹಾವನ್ನು ತುಳಿದರೆ ಮಾತ್ರ ಅದು ಬುಸುಗುಡುವಂತೆ, ಕೊಳ್ಳಿಯನ್ನು ಕುಕ್ಕಿದರೆ ಮಾತ್ರ ಪ್ರಜ್ವಲಿಸುವಂತೆ ಮನುಷ್ಯನ ಮನಸ್ತಿತಿಯೂ ಕೂಡ ಅಂತೆಯೇ. ಯಾರಿಂದಲಾದರೂ ಕೆಣಕಿಸಿಕೊಂಡಾಗ, ಅಪಹಾಸ್ಯಕ್ಕೆ ಗುರಿಯಾದಾಗ ಮಾತ್ರ ತಮ್ಮ ಶಕ್ತಿ ಪ್ರದರ್ಶಿಸುತ್ತಾರೆ. ಹಠದಲ್ಲಿ ಬಿದ್ದು ಸಾಧನೆಯಲ್ಲಿ ತೊಡಗಿ ಅಸಾಧ್ಯವಾದುದನ್ನು ಸಾಧಿಸುತ್ತಾರೆ.
ಹಾಗಂತ ಹಾವು ಯಾವಾಗಲೂ ಹೆಡೆಬಿಚ್ಚಿ ಬುಸುಗುಡಬೇಕು ಅಂತಲ್ಲ ಅಥವಾ ಶಕ್ತಿವಂತರು ಅನವಶ್ಯಕವಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕಂತಲೂ ಅಲ್ಲ. ಇರುವ ಶಕ್ತಿಯನ್ನು ಗರಿಷ್ಟ ಪ್ರಮಾಣದಲ್ಲಿ ತಮ್ಮ ಉನ್ನತಿಗೆ ಬಳಸಿಕೊಳ್ಳಬೇಕು ಎನ್ನುವ ಆಶಯ. ಜಿದ್ದಿಗೆ ಬಿದ್ದಾಗ ಛಲ ಸಾಧಿಸುವ ನಾವು ಗೋಮಾತೆಯ ರಕ್ಷಣೆಯ ವಿಷಯದಲ್ಲಿ ನಮ್ಮ ಶಕ್ತಿಯನ್ನು ಯಾವ ಪ್ರಯೋಜನಕ್ಕೂ ಬಾರದಂತೆ ಬಿಡಬೇಕೆ...
ಇನ್ನಾದರೂ ಎಚ್ಚೆತ್ತು ಗೋಮಾತೆಯ ರಕ್ಷಣೆಗಾಗಿ ಜಾಗೃತರಾಗಿ ಪೊಲೀಸರಲ್ಲಿ ದೂರನ್ನು ನೀಡುವ ಗುಣವನ್ನು ಬೆಳೆಸಿಕೊಳ್ಳೊಣ...ಗೋಪೂಜೆಯ ಸುದಿನದಂದು ಆ ನಿಟ್ಟಿನಲ್ಲಿ ಸಂಕಲ್ಪಮಾಡಿ ಕೇಂದ್ರ ಹಾಗೂ ರಾಜ್ಯಸರ್ಕಾರಕ್ಕೆ ಎಚ್ಚರಿಕೆಯ ಘಂಟೆಯೊಂದನ್ನು ಮೊಳಗಿಸಿ, ಹಿಂದುಗಳ ಶಕ್ತಿಯನ್ನು ಜಗತ್ತಿಗೆ ತೋರಿಸೋಣ....
-ಸಂದೇಶ್ ಶೆಟ್ಟಿ ಆರ್ಡಿ

No comments:

Post a Comment