Wednesday, 18 April 2012

ಮಂಗಳೂರಿನ ಪುರಭವನದಲ್ಲಿ ಡಾ.ನಾದಾ ಅವರಿಗೆ ನಾದಾಭಿನಂದನ
ಐ qsಟ್ಠ Zಛಿ Zಠಿಛ್ಟಿ ಟ್ಞ್ಝqs ಜ್ಞ್ಛಿಟ್ಟಞZಠಿಜಿಟ್ಞ ಠಿಛಿZeಛ್ಟಿ ಜಿo ಟಠಿ ಛ್ಚಿಛಿooZqs Zo ಠಿeಛಿqs Zಛಿ ZಡಿZಜ್ಝಿZಚ್ಝಿಛಿ ಜ್ಞಿ ಜಿಚ್ಟಿZಜಿಛಿo Zb ಜ್ಞಿಠಿಛ್ಟ್ಞಿಛಿಠಿ. ಆಠಿ ಜ್ಛಿ qsಟ್ಠ Zಛಿ Zಠಿಛ್ಟಿ ಜ್ಞಿomಜ್ಟಿZಠಿಜಿಟ್ಞ, ಞಟಠಿಜಿqZಠಿಜಿಟ್ಞ Zb ಜಟಟb ಜ್ಠಜಿbಛ್ಞ್ಚಿಛಿ ಠಿಛಿZeಛ್ಟಿ ಜಿo ಛ್ಚ್ಚಿಛಿooಟ್ಟqs.
ಪ್ರತಿಯೊಬ್ಬನ ಜೀವನದಲ್ಲಿಯೂ ಗುರುಗಳ ಪಾತ್ರ ಮುಖ್ಯವಾಗಿರುತ್ತದೆ. ಗುರುವಿನಿಂದ ಕಲಿತ ವಿದ್ಯೆಯು ಲೋಕದಲ್ಲಿ ಉತ್ತಮ ವ್ಯಕ್ತಿತ್ವ ನೆಲೆಗೊಳಿಸಿ ಶ್ರೇಷ್ಠ ಜೀವನ ನಡೆಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ ವಿದ್ಯಾರ್ಥಿ ಜೀವನದಲ್ಲಿ ಗುರುಗಳ ಪ್ರಾಮುಖ್ಯತೆ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ಅವರು ನಮ್ಮ ನಡೆನುಡಿಯಲ್ಲಿ ತಪ್ಪಿದಾಗ ತಿದ್ದಿ ಸರಿದಾರಿಗೆ ಕೊಂಡೊಯ್ಯಲು ಹರಸಾಹಸ ಮಾಡುತ್ತಾರೆ. ಆದರೆ ಆ ಸಮಯದಲ್ಲಿ ನಮ್ಮ ಮನಃ ಕೇಳುವ ಸ್ಥಿತಿಯಲ್ಲಿರುವುದಿಲ್ಲ ಎನ್ನುವುದೇನೋ ನಿಜವಾದರೂ ಅದರ ನಿಜವಾದ ಮರ್ಮ ತಿಳಿಯುವುದು ಶಾಲೆ-ಕಾಲೇಜು ಜೀವನವನ್ನು ಮುಗಿಸಿ ವೃತ್ತಿಜೀವನಕ್ಕೆ ಕಾಲಿರಿಸಿದಾಗ ತಿಳಿಯುತ್ತದೆ. ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕನ್ನು ಹರಿಸಲು ಗುರುವಿನ ಮೂಲಮಂತ್ರವೇ ಸಾಕಾಗಿರುತ್ತದೆ. ಜೀವನದಲ್ಲಿ ಅನೇಕ ಗುರುಗಳು ಬಂದರೂ ಅವರ ನೆನಪು ಮಾತ್ರ ಕೆಲವೊಂದು ಸಂದರ್ಭದಲ್ಲಿ ಮಾತ್ರ ಮಾಡಿಕೊಳ್ಳುತ್ತೇವೆ.
ಇತ್ತೀಚಿಗೆ ನಗರದ ಪುರಭವನದಲ್ಲಿ ಅಂಥಹ ಗುರುಗಳ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕೇವಲ ನನ್ನ ಗುರುಗಳು ಮಾತ್ರವಲ್ಲ. ನಾಲ್ಕು ದಶಕಗಳ ಕಾಲ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಸಮಯವನ್ನು ವ್ಯಯಿಸಿ ಸಮಾಜದಲ್ಲಿ ಗುರುತಿಸುವಂತೆ ಮಾಡಿದ ಗುರುಗಳಿಗೆ ಶಿಷ್ಯರ ಸಮ್ಮುಖದಲ್ಲಿ ನಾದಾಭಿನಂದನೆ ಕಾರ್ಯಕ್ರಮ.
ಕೇವಲ ಶಿಷ್ಯರು ಮಾತ್ರ ಸೇರುವ ಕಾರ್ಯಕ್ರಮವೆಂದು ನಾನು ತಿಳಿದು ಹೋದಾಗ ಆದ ಆಶ್ಚರ್ಯ ಹೇಳತೀರದು. ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರು ಮಾತ್ರವಿರದೆ ಸಿನಿಮಾ ರಂಗದಲ್ಲಿ ಖ್ಯಾತಿಯನ್ನು ಗಳಿಸಿದ ಗಿರೀಶ್ ಕಾಸರವಳ್ಳಿ, ನಾಗತಿಹಳ್ಳಿ ಚಂದ್ರಶೇಖರ್, ಮಂಡ್ಯರಮೇಶ್, ಜಯಶ್ರೀ ಇಂತಹ ಕಲಾವಿದರ ದಂಡು ಪುರಭವನದಲ್ಲಿ ಬೀಡುಬಿಟ್ಟಿತ್ತು. ಒಂದು ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆಂದರೆ ಅವರ ಕೀರ್ತಿ ಎಲ್ಲಿಯವರೆಗಿದೆ ಎನ್ನುವುದು ಸ್ಫಷ್ಟವಾಗುತ್ತದೆ. ಅಂಥ ಗುರುಗಳನ್ನು ಪಡೆದ ಶಿಷ್ಯರೆಲ್ಲಾ ಧನ್ಯರೇ ಸರಿ.
ಅವರು ಕೇವಲ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಸಾಹಿತ್ಯ, ನಾಟಕ ಯಕ್ಷಗಾನ, ಸುಗಮ ಸಂಗೀತ ಕ್ಷೇತ್ರದಲ್ಲಿಯೂ ಕೂಡ ಸಾಮರ್ಥ್ಯವನ್ನು ತೋರಿದವರು. ಜೀವನಾನುಭವ ಅರ್ಥೈಸುವ ಕೃತಿಗಳಿಂದ ಹಾಗೂ ವಿಷಯೋಪಭೋಗದ ವಸ್ತುಗಳಿಗೆ ಆಕರ್ಷಿತವಾಗುವ ಮನಸ್ಸುಗಳನ್ನು ತನ್ನ ಸಾಹಿತ್ಯ ಕೃಷಿಯಿಂದ ತಡೆದು ಕಲೆ, ಸಂಸ್ಕೃತಿಯ ಕುರಿತು ಆಸಕ್ತಿ ತಳೆಯುವಂತೆ ಮಾಡಿದ್ದಾರೆ. ವೈಜ್ಞಾನಿಕತೆಯ ಬೆಳವಣಿಗೆಯ ಭರಾಟೆಯಲ್ಲಿ ಸಾಹಿತ್ಯಗಳು ಸೊರಗುತ್ತಿದ್ದರೂ ಅವನ್ನು ಜಾಗೃತವಾಗುವಂತೆ ಮಾಡಿದವರು. ಜಾಗತೀಕರಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಭರದಲ್ಲಿ ಭಾಷೆಯನ್ನು ಮರೆಯುವ ಯುವಜನತೆಯ ಪಾಲಿಗೆ ಸಾಹಿತ್ಯ ಕೃಷಿಯಿಂದ ವ್ಯಕ್ತಿಯ ಹೃದಯ ಪರಿವರ್ತನೆ ಮಾಡಿ ವ್ಯಕ್ತಿತ್ವ ವಿಕಸನವಾಗಬೇಕು ಎಂದು ಆಶಿಸಿದ ಗುರುಗಳಿವರು.
ಸಾಹಿತ್ಯ ಬೆಳೆಯಲು ಕೃತಿ ರಚಿಸಿದರೆ ಸಾಲದು, ಅದಕ್ಕೆ ಸಂಘಟಿತ ಪ್ರಚಾರ ದೊರೆಯಬೇಕು, ಈ ಕಾರ್ಯವನ್ನ್ನೂ ನಾ.ದಾ. ಮಾಡಿದ್ದಾರೆ. ಕಡಿಮೆ ಪದ ಬಳಸಿ, ಜೀವನಾನುಭವ ಪರಿಣಾಮಕಾರಿಯಾಗಿ ಅರ್ಥವಾಗುವಂತೆ ಮಾಡಿರುವುದು ಇವರ ಕೃತಿಗಳ ವೈಶಿಷ್ಟ್ಯವಾಗಿದೆ ಎಂದು ಪ್ರೊ. ಕೆ.ಎಸ್.ನಿಸಾರ್ ಅಹಮದ್ ಉದ್ಘಾಟನಾ ಸಮಾರಂಭದಲ್ಲಿ ಶ್ಲಾಘಿಸಿದರು.
ಡಾ.ನಾ.ದಾಮೋದರ ಶೆಟ್ಟಿ ಅವರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಯಾವ ರೀತಿ ತಲುಪಿಸಬೇಕು ಎನ್ನುವ ತಿಳುವಳಿಕೆ ಹಾಗೂ ಆಡಳಿತ ಭಾಷೆಯಾಗಿ ಕನ್ನಡವನ್ನು ತರಲು ಹೋರಾಟ ಮಾಡಿ ಯಶಸ್ವಿಯಾಗಿದ್ದರು. ಮಾತೃಭಾಷೆ ಮಲೆಯಾಳವಾದರೂ, ಕನ್ನಡ- ಮಲೆಯಾಳಿ ಭಾಷೆಯ ಸೇತುವಾಗಿ ನಾ.ದಾ. ಕನ್ನಡವನ್ನು ಉಳಿಸಿದ್ದಾರೆ. ಶಿಕ್ಷಣ, ಕಲೆ, ಸಂಸ್ಕೃತಿ, ಧಾರಾವಾಹಿ, ರಂಗಭೂಮಿ, ಪತ್ರಿಕಾ ಅಂಕಣಕಾರರಾಗಿ ಕನ್ನಡ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಾದಾಂತರಂಗ, ನಾದಾಭಿನಂದನ, ನಾದಾವಲೋಕನ, ನಾದಾವತರಣ ಎನ್ನುವ ನಾಲ್ಕು ಭಾಗಗಳನ್ನು ಒಳಗೊಂಡ ನಾದಾ ಅವರ ಕುರಿತಾದ ಅಭಿನಂದನಾ ಗ್ರಂಥ ಎಂದು ಲೋಕಾರ್ಪಣ ಗೊಂಡಿರುವುದು ವಿಶೇಷವಾಗಿದೆ.
ಈ ಕಾರ್ಯಕ್ರಮದಲ್ಲಿ ನಡೆದ ವಿಚಾರಗೋಷ್ಠಿ, ನಾಟಕ, ಸುಗಮ ಸಂಗೀತಗಳು ನಾದ ಅವರ ವಿಶೇಷ ಒಲವಿನ ಕ್ಷೇತ್ರವೆ ಆಗಿವೆ.
ಬಾಲ್ಯದಲ್ಲಿ ಬಡತನದಲ್ಲಿ ಹುಟ್ಟಿ, ಬೆಳೆಯುತ್ತಾ ಶ್ರೀಮಂತಿಕೆಯನ್ನು ತನ್ನ ಕಾಯಕದಲ್ಲಿ ಕಂಡವರು. ನಾದಾ ಅವರ ನಿರಂತರ ಚಡಪಡಿಕೆ ಎಲ್ಲಾ ಕೆಲಸ ಕಾರ್ಯಗಳಿಗೂ ಅಡಿಪಾಯವಾಗಿದೆ. ಚಡಪಡಿಕೆಯುಳ್ಳ ಗುರುಗಳು ಸಿಗುವುದು ವಿದ್ಯಾರ್ಥಿಗಳ ಅದೃಷ್ಟ. ನಾದಾ ಕಟ್ಟಿದ ಚಿನ್ನದ ಸೇತುವೆಗಳಿಂದ ಯಶಸ್ಸಿನ ಮೆಟ್ಟಿಲನ್ನು ಅನೇಕ ವಿದ್ಯಾರ್ಥಿಗಳು ಏರಿದ್ದಾರೆ ಎನ್ನುವುದಕ್ಕೆ ಕಿಕ್ಕಿರಿದು ತುಂಬಿದ ಸಭಾಂಗಣವೇ ಸಾಕ್ಷಿಯಾಯಿತು.
ನಾ.ದಾ.ಅವರ ನಿರಂತರ ಚಡಪಡಿಕೆಯು ಸಾಹಿತ್ಯಕೃಷಿಗೆ ಅಡಿಪಾಯವಾಗಿದೆ. ಇವರು ತನ್ನ ಸೂಕ್ಷ್ಮಗ್ರಹಿಕೆಯಿಂದ ಶಿಷ್ಯರ ತಪ್ಪುಗಳನ್ನು ತಿದ್ದಿ ಉತ್ತಮ ಸಮಾಜ ಕಟ್ಟಲು ಸಹಕಾರಿಯಾಗಿದ್ದಾರೆ. ಸಮಯಪ್ರಜ್ಞೆ, ಗೆಳೆತನ, ನಿತ್ಯ ನಿರಂತರ ಚಡಪಡಿಕೆಯಿಂದ ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ಸಮಾಜಮುಖಿಯಾಗಿದ್ದಾರೆ. ಸದಾ ಚಡಪಡಿಸುತ್ತಿರುವುದರಿಂದ ಬೇರೆಯವರ ಕುರಿತು ಚಿಂತನೆಗೆ ಅವಕಾಶವೇ ಇರುವುದಿಲ್ಲ. ಇದರಿಂದ ಹೊಸ ಅನ್ವೇಷಣೆಗೆ ಸಹಾಯಕವಾಗುತ್ತದೆ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ನಾದಾ ಅವರ ಕಲಿಸುವಿಕೆಯ ಶೈಲಿ ಮಾತ್ರ ಆಶ್ಚರ್ಯ ಪಡಬೇಕು. ಪಠ್ಯಪುಸ್ತಕವಿಲ್ಲದೆ ಎಲ್ಲಾ ಗಳೆಗನ್ನಡದ ಪಠ್ಯವನ್ನು ಲೀಲಾಜಾಲವಾಗಿ ಎಂಥಹ ದಡ್ಡನಿಗೂ ಕೂಡ ಅರ್ಥೈಸುವುದರಲ್ಲಿ ನಾದಾ ಅವರ ಶಿಕ್ಷಣಕ್ರಮ ವಿಶೇಷವಾಗಿದೆ. ವಿದ್ಯೆಯೊಂದಿಗೆ ಬಡ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡುವುದು ಇವರ ಮತ್ತೊಂದು ಗುಣವಾಗಿದೆ.
ಗುರುಗಳ ಕುರಿತು ಮಾತನಾಡಿದರೆ ಅತಿಶಯೋಕ್ತಿಯೆನಿಸುತ್ತದೆ ಅಲ್ಲಾ ಅವರ ಕುರಿತು ಮಾತನಾಡುವಂತ ಸ್ಥಾನವೂ ಕೂಡ ನನ್ನದಲ್ಲ. ಪ್ರಸ್ತುತ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಜೀವನವನ್ನು ಅನುಭವಿಸುತ್ತಿರುವ ಇವರು ಚಿತ್ರ ರಂಗದತ್ತ ಮುಖಮಾಡಿದ್ದಾರೆ.
-ಗುರುಭ್ಯೊ ನಮಃ-

No comments:

Post a Comment