Friday, 22 November 2013

ಅಂತರಂಗದಲ್ಲಿ ಕಾಮ ತುಂಬಿಕೊಂಡು ಬಾಹ್ಯದಲ್ಲಿ ರಾಮ ರಾಮ
ವೈಜ್ಞಾನಿಕತೆಯ ಗುಂಗಿನಲ್ಲಿ ಕಾಮಪಶರಾಗುವ ನೀಚರಿಂದ ಮರ್‍ಯಾದಸ್ಥರಿಗೂ ಅವಮಾನ
ಯುಕ್ತಿಯುಕ್ತಂ ಪ್ರಗೃಹ್ಣೀಯಾತ್ ಬಾಲಾದಪಿ ವಿಚಕ್ಷಣಃ/
ರವೇರವಿಷಯಂ ವಸ್ತು ಕಿಂ ನ ದೀಪಃ ಪ್ರಕಾಶಯೇತ್?//
ವಿವೇಕವಿರುವ ಯಾವುದನ್ನಾದರೂ ಯಾರಿಂದಲಾದರೂ (ಮಕ್ಕಳಿಂದಾದರೂ)ಪ್ರಾಜ್ಞರು ಸ್ವೀಕರಿಸಬೇಕು. ಸೂರ್ಯನಿಂದ ಬೆಳಗಿಸಲಾಗದ ವಸ್ತುಗಳನ್ನು ಇರುಳಿನಲ್ಲಿ ದೀಪವು ಬೆಳಗಿಸಿ ತೋರಿಸುವುದಿಲ್ಲವೇ!
ಎಂತಹ ಅರ್ಥಪೂರ್ಣ ಮಾತುಗಳಿವು. ನನಗೆ ಎಲ್ಲವೂ ತಿಳಿದಿದೆ ಎಂದು ಸಮಾಜದಲ್ಲಿ ವ್ಯಕ್ತಿಯೊರ್ವ ಮಾಡಿದ ತಪ್ಪುಗಳನ್ನೆಲ್ಲಾ ಒಪ್ಪಿಕೊಂಡು ಮೌನಮುದ್ರೆ ತಾಳಿ ಸಮಾಜದಲ್ಲಿ ನಾವಿಂದು ಅಹುದು ಅಹುದು ಎಂದು ತಲೆಯಾಡಿಸುವ ಬಸವ ನಂತಾಗಿದ್ದೇವೆಯೊ ಎನ್ನುವ ಸಂದೇಹ. ಇದಕ್ಕೆ ಪೂರಕವೆನ್ನುವಂತೆ ಅನೇಕ ಘಟನೆಗಳು ನಮ್ಮ ಕಣ್ಣಮುಂದೆ ನಡೆಯುತ್ತಿದೆ.                                                                                                     ವೈಜ್ಞಾನಿಕ  ಯುಗದಲ್ಲಿ ನಾವಿದ್ದೇವೆ ಎನ್ನುವ ಹೆಮ್ಮೆ ಒಂದೆಡೆ. ಇನ್ನೊಂದೆಡೆ ವೈಜ್ಞಾನಿಕತೆಯ ಸೋಗಿನಲ್ಲಿ ನಮ್ಮತನವನ್ನೇ ಕಳೆದುಕೊಳ್ಳುತ್ತಿದ್ದೇವೆಯೇ ಎನ್ನುವ ಆತಂಕ. ಹಿರಿಯರ ಕಾಲದಲ್ಲಿದ್ದ ಮಾನವೀಯ ಸಂಬಂಧಗಳು ಎತ್ತ ಹೋಗಿವೆ. ಸಮಾಜದಲ್ಲಿಂದು ನೀತಿ ಹೇಳುವವರು ಮಾಡುವ ಅನ್ಯಾಯಗಳ ಕುರಿತು ನಾವೆಲ್ಲಾ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಂತು ಸತ್ಯ. ಮೈಯೆಲ್ಲಾ ಕಾಮ ತುಂಬಿಕೊಂಡು ಮೇಲ್ನೋಟಕ್ಕೆ ರಾಮ ಕೃಷ್ಣ--ಗೋವಿಂದ, ಅಲ್ಲಾ, ಏಸು ಎಂದು ದೇವರ ಹೆಸರನ್ನು ಹೇಳುತ್ತಾ, ಕುತ್ತಿಗೆಯಲ್ಲಿ ಜ್ಯೋತಿಷಿಗಳು ಹೇಳಿದ ಮಾರುದ್ದದ ಮಾಲೆ ಧರಿಸಿರುತ್ತಾರೆ. ಹಣೆಯ ಮೇಲೆ ನಾಮ, ವಿಭೂತಿಗಳು ರಾರಾಜಿಸುತ್ತವೆ. ಆದರೆ ಹುಡುಗಿಯ ವಿಷಯದಲ್ಲಿ ಮಾತ್ರ ಮೂರು ಬಿಟ್ಟವರ ಥರ ಅವರ ವರ್ತನೆ.
ಯಾವುದೇ ಊರಿನಲ್ಲಿ ಉತ್ತಮ ರಾಜಕೀಯ ನಾಯಕರ ಉದಯವಾಗದಿದ್ದರೂ, ಪುಡಾರಿ ನಾಯಕರಿಗಂತೂ ಕೊರತೆಯೆನ್ನುವುದಿಲ್ಲ. ತಾವೇ ದೊಡ್ಡ ಸಂಭಾವಿತರೆನ್ನುವ ನಿಟ್ಟಿನಲ್ಲಿ ಸಮಾಜದಲ್ಲಿ ನಡೆಯುವ ಅನ್ಯಾಯಗಳಿಗೆ ಹೈಕೋರ್ಟುಗಳ ನ್ಯಾಯಾದೀಶರಂತೆ ನ್ಯಾಯ ತೀರ್ಮಾನ ಮಾಡುವ ಇವರುಗಳಿಂದಲೇ ಸಮಾಜದಲ್ಲಿ ಅತ್ಯಾಚಾರ, ಅನಾಚಾರಗಳು ನಡೆಯುತ್ತಿವೆ.
ಬಡ ಕುಟುಂಬದ ಹೆಣ್ಣುಮಕ್ಕಳು ಜೀವನದಲ್ಲಿ ಕಷ್ಟಕೋಟಲೆ ಅನುಭವಿಸುತ್ತಾ, ಟಿ.ವಿ.ಮಾಧ್ಯಮಗಳ ಪ್ರಭಾವದಿಂದ ಆದಷ್ಟು ಬೇಗ ಸಿರಿವಂತರಾಗಬೇಕು. `ಸಾಲ ಮಾಡಿಯಾದರೂ ತುಪ್ಪ ತಿನ್ನು' ಎನ್ನುವ ನಾಣ್ಣುಡಿಯಂತೆ ಮಾನ ಮರ್ಯಾದೆ, ಶೀಲ ಕಳೆದುಕೊಂಡಾದರೂ ತಾನು ಹಣಗಳಿಸಬೇಕು. ಮೈತುಂಬಾ ಬಂಗಾರದ ಒಡವೆಗಳನ್ನು ಧರಿಸಿ ಮೆರೆದಾಡಬೇಕು ಎನ್ನುವ ನೆಲೆಯಲ್ಲಿ ಮೈಮುರಿದು ದುಡಿಯಲು ಮನಸ್ಸು ಬಾರದೆ, ದೇಹವನ್ನೇ ಪರಪುರುಷನಿಗೆ ಒಪ್ಪಿಸುವ ಮಾನಸಿಕತೆ ಹೆಣ್ಣುಮಕ್ಕಳಲ್ಲಿ ಬೆಳೆಯುತ್ತಿದೆ ಎನ್ನುವುದು ಕರ್ಣ ಕಠೋರವಾದರೂ, ವಾಸ್ತವ ಸಂಗತಿ..!
ಎರಡು ಕೈ ಸೇರಿದಾಗ ಮಾತ್ರ ಚಪ್ಪಾಳೆಯಾಗುತ್ತದೆಯೇ ವಿನಃ ಒಂದು ಕೈ ಸೇರಿದರೆ ಅದು ಚಪ್ಪಾಳೆಯಾಗುವುದಕ್ಕೆ ಸಾಧ್ಯವೇ ಇಲ್ಲಾ. ಸಮಾಜದಲ್ಲಿ ಹೆಣ್ಣನ್ನು ಗುರುತಿಸುವುದು ಆಕೆ ತೊಟ್ಟ ಉಡುಗೆ ತೊಡುಗೆ, ಧರಿಸಿದ ಆಭರಣಗಳಿಂದಲ್ಲ. ಹೆಣ್ಣಿಗೆ ಶೀಲವೆ ಶೋಭೆ ಎನ್ನುವ ಮಾತು ಸರ್ವಕಾಲಕ್ಕೂ ಅನ್ವಯವಾಗುವಂತದ್ದು. ವೈಜ್ಞಾನಿಕವಾಗಿ ನಾವು ತಂತ್ರಜ್ಞಾನಗಳಿಗೆ ಹೊಂದಿಕೊಂಡು, ಅದುವೇ ನಮ್ಮ ಜೀವನವೆಂದು ಸಾಗಿದ್ದರೂ, ಹೆಣ್ಣಿನ ವಿಷಯ ಬಂದಾಗ ಆಕೆ ರೂಪವತಿಯಾಗಿಲ್ಲದಿದ್ದರೂ ಶೀಲವಂತಳಾಗಿರಬೇಕು ಎನ್ನುವ ಮಾನಸಿಕತೆ ಗಂಡು ಮಕ್ಕಳದಾಗಿರುತ್ತದೆ. ಪ್ರಸ್ತುತ ಸಮಾಜದಲ್ಲಿ ಮದುವೆಯಾದ ನವದಂಪತಿಗಳ ಮೂಹೂರ್ತ ಮುಗಿದು, ಸಭಾಭವನದಿಂದ ಹೊರಹೋಗುವ ಮೊದಲೇ ಕೋರ್ಟ್ ಮೆಟ್ಟಿಲು ಹತ್ತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಾರೆಂದರೆ ಅವರಲ್ಲಿನ ಭಿನ್ನಮತಕ್ಕೆ ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳುವ ಅಗತ್ಯವಿದೆಯಲ್ಲವೇ? ಹೆಚ್ಚಿನ ಹೆಣ್ಣುಮಕ್ಕಳ ಶೀಲ, ಚಾರಿತ್ರ್ಯಗಳ ಸತ್ಯಾಂಶ ತಿಳಿದುಕೊಂಡ ವರ ಮಹಾಶಯ ಆಕೆಯೊಂದಿಗೂ ಹಾಗೂ ವರನ ವಿಷಯ ತಿಳಿದ ವಧುವು ವಿಚ್ಛೇದನಕ್ಕೆ ಮನ ಮಾಡುತ್ತಿರುವುದು ದಾಂಪತ್ಯ ಜೀವನಕ್ಕೆ ಆವರಿಸಿಕೊಂಡ ವಿಲಕ್ಷಣತೆಯ ವೈರಸ್ ಅಂತಲ್ಲವೇ?
ದರಿದ್ರತಾ ಧೀರತಯಾ ವಿರಾಜತೇ ಕುರೂಪತಾ ಶೀಲತಯಾ ವಿರಾಜತೇ/
ಕುಭೋಜನಂ ಚೋಷ್ಣತಯಾ ವಿರಾಜತೇ ಕುವಸ್ತ್ರತಾ ಶುಭ್ರತತಾ ವಿರಾಜತೇ//
ಬಡತನದಲ್ಲಿಯೂ ಕೂಡ ಬುದ್ಧಿ ವಿವೇಕವು ಸ್ಥಿರತೆ-ಶೋಭೆ ಕೊಡುತ್ತದೆ. ಕುರೂಪವಿದ್ದರೂ ಒಳ್ಳೆಯ ನಡತೆ ಶೋಭೆ ತರುತ್ತದೆ. ಕೆಟ್ಟ ಅಡಿಗೆಯೂ ಬಿಸಿಯಾಗಿದ್ದಲ್ಲಿ ರುಚಿಸುತ್ತದೆ. ಹರಕು ಬಟ್ಟೆಯೂ ಶುಭ್ರವಾಗಿದ್ದರೆ ಶೋಭಿಸುತ್ತದೆ. ಸಮಾಜದಲ್ಲಿರುವ ವಸ್ತುಸ್ಥಿತಿಯು ನಮ್ಮ ಅಭಿರುಚಿಯ ಮೇಲಿನ ಮಾನಸಿಕತೆಯ ನೆಲೆಯಾಗಿದೆ. ಕಾಮಾತುರಾಣಾಂ ನ ಭಯಂ ನ ಲಜ್ಜಾ ಎನ್ನುವ ನಾಣ್ಣುಡಿಯಂತೆ ಕಾಮ ಅತಿಯಾದವನಿಗೆ ಭಯ, ನಾಚಿಕೆಯೆನ್ನುವುದು ಆತನ ಹತ್ತಿರಕ್ಕೆ ಸುಳಿಯುವುದಿಲ್ಲ. ಮೂರು ಬಿಟ್ಟವರಿಗೆ ನಾಚಿಕೆಯೆನ್ನುವುದಿಲ್ಲವಾದರೂ, ಇಂತಹವರಿಂದ ಮರ್‍ಯಾದಸ್ತರಿಗೂ ಮುಖವೆತ್ತಿ ನಡೆದಾಡುವುದು ಕಷ್ಟವಾಗುತ್ತಿರುವುದು ಪ್ರಸ್ತುತ ಸಮಾಜದ ದುರಂತ. ಇದನ್ನು ಯಾವುದೇ ಇಲಾಖೆ ತಡೆಯಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಬಂದಾಗ ಒಪ್ಪಿಗೆಯಿಂದ ನಡೆಯುವ ಕೆಲಸಗಳಿಗೆ ಯಾವ ಇಲಾಖೆ ಏನು ತಾನೆ ಮಾಡಲು ಸಾಧ್ಯ? ಲೇಖನದಲ್ಲಿ ಕೆಲವೊಂದು ಉದಾಹರಣೆ ನೀಡುವುದರೊಂದಿಗೆ ಸಾಮಾನ್ಯವಾಗಿರುವ ಅಂಶಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. (ಇಲ್ಲಿನ ಘಟನೆಗಳು ನಿರ್ದಿಷ್ಟವಾದ ವ್ಯಕ್ತಿಗೆ ಸೇರಿದ್ದಲ್ಲ-ಸಂದರ್ಭಕ್ಕೆ ತಕ್ಕಂತೆ ಹೆಸರುಗಳನ್ನು ಸೇರಿಸಲಾಗಿದೆ) ದೃಢಕಾಯದ ವ್ಯಕ್ತಿಯೊರ್ವ ಸಮಾಜದಲ್ಲಿ ಉದ್ದಿಮೆ ನಡೆಸುತ್ತಾ `ಪ್ರಶಾಂತ'ತೆಯ ಜೀವನ ನಡೆಸಬೇಕಿದ್ದವ, ಕೆಲಸಕ್ಕೆ ಬರುವ ಬಡ ಹೆಣ್ಣು ಮಕ್ಕಳನ್ನು ತನ್ನ ಹಣಬಲದಿಂದ ಕಾಮಪಿಪಾಸುವಾಗಿ ಮಂಚಕ್ಕೆ ಕರೆಯುತ್ತಾನೆಂದರೆ ಇಂತಹವರು ದೇವಳಗಳಿಗೆ ಹಣ ನೀಡಿದಾಕ್ಷಣ ಹಿರಿಯ ವ್ಯಕ್ತಿಯಾಗಲು ಸಾಧ್ಯವೇ? ಆಚಾರ-ವಿಚಾರ, ತಾನು ಮಾಡುವ ಕಾರ್ಯದಿಂದ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಬೇಕೆ ಹೊರತು ಸಮಾಜದಲ್ಲಿ ಬಡವರ ಪಾಲಿಗೆ ಬೆಳಕಾಗಿರಬೇಕಾದ ವ್ಯಕ್ತಿಯೇ ಮುಗ್ದ ಹೆಣ್ಣು ಮಕ್ಕಳನ್ನು ಹಣಬಲದಿಂದ ಕಾಮದಾಟಕ್ಕೆ ಬಳಸಿಕೊಳ್ಳುವ ದುರ್ದರ ಸ್ಥಿತಿ ಬೇರೆ ಬೇಕೆ? ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ಅವರ ಬಾಳಿನಲ್ಲಿ `ಸಂತೋಷ' ದ ಬೆಳಕು ಮೂಡಿಸಲು ನ್ಯಾಯಪಂಚಾಯ್ತಿಕೆ ಮಾಡುವ ವ್ಯಕ್ತಿಯೇ ಮುಖವಾಡ ಕಳಚಿಕೊಂಡು, ಆ ಹೆಣ್ಣುಮಕ್ಕಳ ಅಸಹಾಯಕತೆ, ದೌರ್ಬಲ್ಯವನ್ನು ತನಗೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾನೆಂದರೆ ಇವರಿಂದ ಸಮಾಜ ಏನನ್ನು ನಿರೀಕ್ಷೆ ಮಾಡಬಹುದು. ಹಿಂದುಗಳ ಪವಿತ್ರ ಗ್ರಂಥ ರಾಮಾಯಣದ ನಾಯಕ ಏಕಪತ್ನಿ ವೃತಸ್ಥ `ಸೀತಾರಾಮ' ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆತನ ಹೆಸರು ಇರಿಸಿಕೊಂಡ ವ್ಯಕ್ತಿಗಳು ರಾಮನಂತೆ ವ್ಯವಹರಿಸಬೇಕಿತ್ತು. ಆದರೆ ಆಧುನಿಕ ಜಗತ್ತಿನಲ್ಲಿ ಮಾತ್ರ ಅವರ ವ್ಯವಹಾರಗಳು ತದ್ವಿರುದ್ದ. ಗೋವು ಅಪಹರಣ, ಲವ್‌ಜಿಹಾದ್, ಪ್ರತಿಭಟನೆ ಎಂದು ಬ್ಯಾನರ್ ಹಿಡಿದುಕೊಂಡು ಪ್ರಚಾರಕ್ಕಾಗಿ ಹಾತೊರೆಯುವ ವ್ಯಕ್ತಿಯ ಮನೆಯ ಹೆಣ್ಣುಮಕ್ಕಳ ಮೊಬೈಲ್ ಸಂಖ್ಯೆ ಪಡೆದುಕೊಂಡು ಅವರಿಗೆ ನಿರಂತರ ಕರೆ ಮಾಡಿ, ನಿನ್ನನ್ನು ಅತ್ಯಂತ ಸಿರಿವಂತೆಯನ್ನಾಗಿ ಮಾಡುತ್ತೇನೆ ಎನ್ನುವ ನೀಚನ ವಿರುದ್ದ ಧ್ವನಿ ಹೊರಬರದ ಸಮಾಜದ ಪ್ರಮುಖ ಸಂಘಟನೆಯ ಮುಖಂಡನಿಂದ ಸಮಾಜದಲ್ಲಿ ಯಾವ ಹೆಣ್ಣನ್ನು ತಾನೇ ರಕ್ಷಣೆ ಮಾಡಲು ಸಾಧ್ಯ?
ಇವರೆಲ್ಲಾ ಸಮಾಜದಲ್ಲಿ ಗಣ್ಯವ್ಯಕ್ತಿಗಳೆಂದು ತಾವೇ ಬಿಂಬಿಸಿಕೊಳ್ಳುತ್ತಾರೆ. ಉದ್ಯಮಿ, ಸಾಮಾಜಿಕ ಕಾರ್ಯಕರ್ತ, ಸಂಘಟನೆಯ ಮುಖಂಡನೆಂದು ಬಿಂಬಿಸಿಕೊಳ್ಳುವ ಇವರುಗಳು ಮಾಡುವ ಅನಾಚಾರಗಳಿಂದ ಸಮಾಜದ ಉನ್ನತಿಯಂತೂ ಸಾಧ್ಯವೇ ಇಲ್ಲಾ. ಇಷ್ಟು ಮಾತ್ರವಲ್ಲ. ಅಜ್ಞಾನದ ಅಂದಕಾರ ತೊಲಗಿಸಿ ಸುಜ್ಞಾನದ ಬೆಳಕನ್ನು ಹರಿಸಲು ತಾಯಿಯ ನಂತರದ ಸ್ಥಾನವಿರುವುದು ಗುರುವಿಗೆ ಮಾತ್ರ. Teachers is like the candle which lights others in consuming itself. ಗುರು ಚಲಿಸುವ ಗ್ರಂಥಾಲಯವಿದ್ದಂತೆ. ಮೊಗೆದಷ್ಟು ವಿಷಯಗಳು ಹೊರಜಗತ್ತಿಗೆ ತಿಳಿಯುತ್ತದೆ. ಗುರುವಿನ ಸ್ಥಾನಕ್ಕೆ ಅಷ್ಟು ಮಹತ್ವವಿದೆ. ಪುರಾಣದಲ್ಲಿ ಬ್ರಹ್ಮದೇವ ಹುಟ್ಟಿಸಿದ ಮಗಳನ್ನೆ ಮದುವೆಯಾಗಿದ್ದ ಎನ್ನುವ ಘಟನೆ ಕೇಳಿ ತಿಳಿದಿದ್ದೆವು. ಆದರೆ ಪ್ರಸ್ತುತ ಸಮಾಜದಲ್ಲಿ ಗುರು ಆಧುನಿಕ ಬ್ರಹ್ಮರಾಗಲು ಹೊರಟಿದ್ದಾರೆ. ಮುದಿಗೂಬೆ `ಚಿನ್ನಯ್ಯ', ನಾಮಾಂಕಿತ ಗುರು ಸ್ಥಾನದಲ್ಲಿರುವ ಉದ್ಯಮಿ `ಮುದ್ದು', ಹೆಂಡತಿಯಿದ್ದರೂ ಆಕೆಯೊಂದಿಗೆ ಜಗಳವಾಡಿ ಕುಡುಬಿ ಸಮಾಜದ ವಿವಾಹಿತೆ ಹೆಂಗಸಿನೊಂದಿಗೆ ಸಂಪರ್ಕವಿಟ್ಟುಕೊಂಡಿರುವ `ವಿಜಯ'...ಸಮಾಜದಲ್ಲಿರುವ ಅಲ್ಪಗುರುಗಳ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ. ಇವರನ್ನೆಲ್ಲಾ ಶಿಕ್ಷಕರು ಎಂದು ಹೇಳಿದರೆ ನಮ್ಮ ಬಾಯಿ ಹೊಲಸಾಗುತ್ತದೆ. ಮೇಲೆ ನೋಡಿ ಉಗುಳಿದ ಎಂಜಲು ನಮ್ಮ ಮುಖದ ಮೇಲಲ್ಲದೇ ಬೇರೆ ಕಡೆ ಬೀಳುವುದಕ್ಕೆ ಸಾಧ್ಯವಿಲ್ಲವೆ? ಇಂತಹ ಅನೇಕ ಶಿಕ್ಷಕರುಗಳ ಕಾಮಪುರಾಣಗಳು ದಾಖಲಾಗಿದ್ದು, ಸಮಾಜದಲ್ಲಿ ಎಲ್ಲರಿಗೂ ತಿಳಿದಿರುವ ಸತ್ಯತೆಯಾದರೂ ಇಂತಹವರ ಮಧ್ಯೆ ಒಳ್ಳೆಯ ಶಿಕ್ಷಕರುಗಳು ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ತಾನು ಕಲಿಸಿದ ವಿದ್ಯಾರ್ಥಿಗಳನ್ನೆ ಕಾಮದಾಟಕ್ಕೆ ಬಳಸಿಕೊಂಡ ಕಾಮಾಂಧರು. ಶಾಲೆಯಲ್ಲಿ ಲೈಂಗಿಕ ಶಿಕ್ಷಣದ ಜಾಗೃತಿ ಮೂಡಿಸಬೇಕು ಎನ್ನುವ ಆಗ್ರಹ ಒತ್ತಾಯಗಳು ಕೇಳಿಬರುತ್ತಿದ್ದರೆ, ಇಂತಹ ಶಿಕ್ಷಕರುಗಳು ಪ್ರ್ಯಾಕ್ಟಿಕಲ್ ಆಗಿ ಮಾಡಿತೋರಿಸುತ್ತಿದ್ದಾರೆ ಎಂದಾಗ ಕಾನೂನು ಹಾಗೂ ಶಿಕ್ಷಣ ಇಲಾಖೆಗೆ ಸವಾಲಾಗಿ ನಮ್ಮಗಳ ನಡುವೆಯಿದ್ದಾರೆ.
ಲೈಂಗಿಕ ಭಾವನೆಗಳೇ ಅರ್ಥವಾಗದ ಮುಗ್ದ ಹೆಣ್ಣುಮಕ್ಕಳ ಗುಪ್ತಾಂಗಳ ಸ್ಪರ್ಶ ಮಾಡುವ ನೀಚ ಶಿಕ್ಷಕರು ಇಲಾಖೆಯಲ್ಲಿ ವಕ್ಕರಿಸಿಕೊಂಡಿದ್ದರೂ, ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಇಂತಹವರನ್ನು ಗುರುತಿಸಿ, ಕಿತ್ತೆಸೆಯುವುದರ ಮೂಲಕ ಶಿಕ್ಷಕ ವೃತ್ತಿಯ ಶಿಕ್ಷಣವನ್ನು ಮುಗಿಸಿ, ಬಯಸಿದ ಕೆಲಸ ಸಿಗದೆ, ನಗರಗಳನ್ನು ಸೇರಿ ಜೀವನ ನಿರ್ವಹಣೆಗಾಗಿ ಸಿರಿವಂತರ ಮನೆಯ ಸೆಕ್ಯೂರಿಟಿಗಳಾಗಿಯೊ, ಹೊಟೇಲ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಡಿಮೆ ಸಂಬಳಕ್ಕೆ ಶಿಕ್ಷಕ ವೃತ್ತಿಯನ್ನೆ ಮಾಡುತ್ತಿರುವ ಯುವಸಮೂಹವಿಂದು ಉತ್ಸುಕರಾಗಿದ್ದಾರೆ. ಅಂತಹ ಜೀವಗಳಿಗೆ ಜೀವನದ ಕಷ್ಟ ನಷ್ಟಗಳ ಅರಿವಿದೆ. ಅವರಿಂದ ನಾವು ಉತ್ತಮ ಪುಷ್ಪಗಳನ್ನು ರೂಪಿಸುವ ಘನತರ ಜವಾಬ್ದಾರಿ ನಿರೀಕ್ಷಿಸಲು ಸಾಧ್ಯವಿದೆ ಎನ್ನುವ ಮಾತು ಅತಿಶಯೋಕ್ತಿಯೆನಿಸುವುದಿಲ್ಲ.
ಇತ್ತೀಚಿಗೆ ಮಣಿಪಾಲದ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ನಾಲ್ವರು ಅತ್ಯಾಚಾರ ನಡೆಸಿರುವುದು ರಾಜ್ಯವ್ಯಾಪಿ ಪ್ರಚಾರಗೊಂಡು, ಅನೇಕ ಹೋರಾಟಗಳು ನಡೆದಿದ್ದವು. ಅದು ಹೋರಾಟಗಳಾಗಿಯೇ ಉಳಿದು, ಪ್ರಚಾರ ಪಡೆದುಕೊಂಡು ಕಡತಗಳಲ್ಲಿ ಉಳಿದಿದೆ. ಆರೋಪಿಗಳು ಮಾತ್ರ ಸದ್ಯದಲ್ಲಿಯೇ ಹೊರಗಡೆ ಬರಲಿದ್ದಾರೆ ಎನ್ನುವುದಂತೂ ಕಹಿ ಸತ್ಯ. ಇಂತಹ ಘಟನೆಗಳು ನಮ್ಮ ನೆನಪಿನಿಂದ ಮಾಸುವ ಮುನ್ನವೇ ಏನು ಅರಿಯದ ಖಾಸಗಿ ಶಾಲೆಯ ೪ ನೇ ತರಗತಿಯ ಮುಗ್ದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನಡೆಯಿತಲ್ಲ. ಅದು ಕೂಡ ಮಣಿಪಾಲದಲ್ಲಿಯೆ ಎನ್ನುವಾಗ ಹೆಣ್ಣುಮಕ್ಕಳು ಮತ್ತಷ್ಟು ಭಯಕ್ಕೆ ಒಳಗಾಗಿದ್ದಾರೆ.
ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಕ್ಕರೆ ಮಾತ್ರ ಸಾಲುವುದಿಲ್ಲ. ಭಯದ ವಾತಾವರಣ ಮುಕ್ತಗೊಂಡು ಪೋಷಕರು ಕೂಡ ಮಕ್ಕಳು ಸುರಕ್ಷಿತವಾಗಿದ್ದಾರೆ ಎನ್ನುವ ನಿಟ್ಟುಸಿರುವ ಬಿಡುವಂತೆ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಪಾಠ ಬೋಧನೆ ಮಾತ್ರವಲ್ಲ ಶಿಕ್ಷಕರಿಗಿರುವ ನೀತಿ ಸಂಹಿತೆ ಪಾಲನೆಯೊಂದಿಗೆ ಮಕ್ಕಳ ಸುರಕ್ಷತೆ, ಭದ್ರತೆ ನಿಟ್ಟಿನಲ್ಲಿ ಹೆತ್ತವರ ಬಳಿಕದ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಸಾಕಷ್ಟು ಹೊರೆಯಿದ್ದರೂ, ಜವಾಬ್ದಾರಿಯುತವಾಗಿ ನಿಭಾಯಿಸುವ ಅಗತ್ಯವಿದೆ. ಸರಕಾರಿ-ಖಾಸಗಿ ಯಾವುದೇ ಶಾಲೆಯಿರಲಿ, ಶಿಕ್ಷಕ ರಕ್ಷಕ ಸಂಘದ ರಚನೆಯಾಗಬೇಕು. ಕನಿಷ್ಟ ಮೂರು ತಿಂಗಳಿಗೊಮ್ಮೆ ಸೇರಬೇಕು. ಪಾಠ ಮಾತ್ರವಲ್ಲ ಶಾಲೆಯ ಒಳ ಹೊರಗಿನ ವ್ಯವಸ್ಥೆಯಲ್ಲಿನ ಲೋಪ ಕಂಡು ಹುಡುಕಿ ಬಗೆಹರಿಸುವುದರೊಂದಿಗೆ ಶಾಲಾ ಬಸ್ಸುಗಳಲ್ಲಿರುವ ಸಿಬ್ಬಂದಿ ಬಗ್ಗೆ ಹೆತ್ತವರೂ ಕೂಡ ಮಾಹಿತಿ ಪಡೆದುಕೊಳ್ಳಬೇಕು. ಅಲ್ಲಿ ಕೆಲಸ ನಿರ್ವಹಿಸುವ ವ್ಯಕ್ತಿಗಳು ಮಕ್ಕಳನ್ನು ಸ್ಪರ್ಶಿಸದೆ ವ್ಯವಹರಿಸುವಂತಾಗಬೇಕು.
ಅಂತರ್ಜಾಲ, ಆಧುನಿಕ ಮಾಧ್ಯಮ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಬಿಗಿ ಕ್ರಮ ಅಗತ್ಯವನ್ನು ಪೋಷಕರು ಮನಗಾಣಬೇಕಿದೆ. ಕಚೇರಿ ಮತ್ತು ಶಾಲೆಗಳಲ್ಲಿ ಹೆಣ್ಮಕ್ಕಳ ಮೇಲಾಗುವ ಲೈಂಗಿಕ ಕಿರುಕುಳ ದೌರ್ಜನ್ಯ ತಡೆ ಹಾಗೂ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಸಹಿತ ಸರಕಾರದಿಂದ ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆ ಕಟ್ಟು ನಿಟ್ಟಾಗಿ ಪಾಲಿಸಬೇಕು. ಇಂತಹ ನಿರ್ಲಕ್ಷ್ಯತನಗಳು ಕಂಡುಬಂದಲ್ಲಿ ಯಾವುದೇ ಆಮಿಷ, ಒತ್ತಡಗಳಿಗೆ ಒಳಗಾಗದೆ ಕರ್ತವ್ಯ ನಿಭಾಯಿಸಬೇಕು. ಸಮಾಜದಲ್ಲಿ ಪ್ರತಿಷ್ಠೆ, ಅನಿವಾರ್ಯತೆ ಹೆಸರಲ್ಲಿ ಮನೆ ಹತ್ತಿರದಲ್ಲೇ ಶಾಲೆ ಇದ್ದರೂ ಮಕ್ಕಳನ್ನು ಬಸ್ಸಿನಲ್ಲಿ ದೂರದ ಶಾಲೆಗೆ ಕಳಿಸಲಾಗುತ್ತಿದೆ. ಮನೆಯಿಂದ ಹೊರಗಿನ ಮಕ್ಕಳ ಬಾಲ್ಯವಿಂದು ಅಸುರಕ್ಷಿತವಾಗಿದೆ. ಇದಕ್ಕೆ ಸಮಾಜದ ಎಲ್ಲರೂ ಕಾರಣ. ಅಮೂಲಾಗ್ರವಾಗಿ ಬದಲಾವಣೆ , ಪರಿವರ್ತನೆ ಆಗಬೇಕು. ಈ ನಿಟ್ಟಿನಲ್ಲಿ ಚರ್ಚೆ ಚಿಂತನೆ, ಸಾಮಾಜಿಕ ಮೌಲ್ಯವರ್ಧನೆ ಆಗಬೇಕು.
ಸಮಾಜದಲ್ಲಿ ಇನ್ನೊರ್ವರಿಗೆ ಬುದ್ದಿ ಹೇಳುವುದು, ಬೆರಳಿಟ್ಟು ತೋರಿಸುವುದಕ್ಕಿಂತ ನಾವು ಸರಿಯಾಗಿರಬೇಕು. ಗಣ್ಯವ್ಯಕ್ತಿಗಳಂತೆ ಬಿಂಬಿಸಿಕೊಳ್ಳುವುದಕ್ಕಿಂತ ತಮ್ಮ ಮನೆಯಲ್ಲಿಯೂ ಹೆಂಡತಿ, ಮಕ್ಕಳು, ಅಕ್ಕ-ತಂಗಿಯರು ಇದ್ದಾರೆ ಎನ್ನುವ ಭಾವನೆ ಯಾಕೆ ಮೂಡಿಸಿಕೊಳ್ಳುತ್ತಿಲ್ಲ. ಸರಸ್ವತಿ, ವಿಮಲ, ಸೀತಾ, ಲಕ್ಷ್ಮೀ, ಸೀತಾರಾಮ, ಈಶ್ವರ, ನಾರಾಯಣ, ಕೃಷ್ಣ ಎನ್ನುವ ದೇವರುಗಳ ಹೆಸರನ್ನಿರಿಸಿಕೊಂಡು ಹೆಸರಿನ ಮೌಲ್ಯಕ್ಕೆ ಕುಂದು ತರುವಂತ ಕಾರ್ಯದಲ್ಲಿ ನಿರತರಾಗುವ ಬದಲು `ಮಾನ'ಯುತ ಜೀವನ ನಡೆಸಲು ಸಾಧ್ಯವಿದೆ ಎನ್ನುವ ಸತ್ಯ ಅರಿಯಬೇಕು. ಇನ್ನೊರ್ವರ ಮನೆಯ ಹೆಣ್ಣು ಮಕ್ಕಳ ಕುರಿತು ಕೀಳಾಗಿ ವ್ಯವಹರಿಸುವಾಗ, ನನ್ನಂತೆ ಇನ್ನೊರ್ವ ತನ್ನ ಹೆಂಡತಿ, ಮಗಳನ್ನು ಕೂಡ ಕಾಮದೃಷ್ಠಿಯಿಂದ ನೋಡುತ್ತಾನೆ ಎನ್ನುವ ಸತ್ಯ ಅರಿತಾಗ ಸಮಾಜದಲ್ಲಿ ಇಂತಹ ಕೃತ್ಯಗಳನ್ನು ತಡೆಗಟ್ಟಬಹುದು. ಮುಖವಾಡ ಕಳಚಿ ಸುಂದರ ಸಮಾಜ ನಿರ್ಮಾಣ ಮಾಡಲು ಮರ್‍ಯಾದೆಯ ಜೀವನ ನಡೆಸಿದಾಗ ಸಿಗುವ ಗೌರವ ನೂರ್ಕಾಲ ಇರುವುದರಲ್ಲಿ ಸಂಶಯವೇ ಇಲ್ಲಾ. ಹಣದಿಂದ ಪಡೆಯುವ ಗೌರವ ಕ್ಷಣಿಕವೆನ್ನುವುದನ್ನು ಅರಿತಾಗ ನಮ್ಮ ಬದುಕು ಹಸನಾಗುತ್ತದೆ. ಜೀವನದಲ್ಲಿ ಮಾನ-ಮರ್ಯಾದೆಯೇ ಮುಖ್ಯಎನ್ನುವುದು ನನ್ನ ಭಾವನೆ. ಏನಂತಿರಾ..



ಹೆಣ್ಣು ಮಕ್ಕಳೇ ಮಾನಸಿಕ ಎಚ್ಚರಿಕೆಯೊಂದಿಗೆ ಧೈರ್ಯ ತಂದುಕೊಳ್ಳಿ
   -ಭವಿಷ್ಯದ ಅಪಾಯಕಾರಿ ಘಟನೆಗಳಿಗೆ ಇದುವೇ ಮಹಾನ್ ಆಯುಧ
ದೆಹಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ, ಉಜಿರೆಯ ಸೌಜನ್ಯಳ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣಗಳು ಮನದಿಂದ ಮಾಸುವ ಮೊದಲೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಣಿಪಾಲದಲ್ಲಿ ಇಂತದೊಂದು ಘಟನೆ ನಡೆಯಿತಲ್ಲ ಎಂದು ಜನಸಾಮಾನ್ಯರು ಒಮ್ಮೆ ಆತಂಕಿತರಾಗಿದ್ದರು. ಆದರೆ ಇಂತಹ ಘಟನೆಗಳು ಸರ್ವೇ ಸಾಮಾನ್ಯವಾಗಿದೆ ಎನ್ನುವುದು ಜನತೆಯ ಬಾಯಿಯಿಂದ ಕೇಳಿಬರುತ್ತಿದೆ.
ಜೂ.೨೦ ರಂದು ರಾತ್ರಿ ಹೆಸರಾಂತ ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದ ಕೇರಳ ಮೂಲದವಳಾದ ಆಕೆ ಗ್ರಂಥಾಲಯದಿಂದ ತನ್ನ ಫ್ಲ್ಯಾಟಗೆ ಹಿಂತಿರುಗುತ್ತಿದ್ದಾಗ ಅಪಹರಿಸಿ ಸಾಮೂಹಿಕ ಅತ್ಯಾಚಾರ ವೆಸಗಿದ್ದರು ಎನ್ನುವುದಾಗಿ ಬಿಂಬಿತವಾಗಿತ್ತು. ಇದು ಎಷ್ಟರಮಟ್ಟಿಗೆ ಸರಿಯಾಗಿದೆ ಎನ್ನುವುದು ನಾವು ಅರಿಯಬೇಕಿದೆ. ನಿಜವಾಗಿ ಆಕೆಯನ್ನು ಅಪಹರಿಸಿರುವುದೇ? ಅಪಹರಿಸಿ ಆಕೆಯನ್ನು ಬಲತ್ಕಾರ ಮಾಡಿದ್ದಾರೆಯೇ? ಯಾವ ರೀತಿ, ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಹೀಗೆ ಹಲವಾರು ಪ್ರಶ್ನೆಗಳು ಮೂಡುವುದು ಸಹಜ. ಅಲ್ಲದೇ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ನಡೆಸಲಾಗಿದ್ದರೂ, ಸುಮಾರು ೧೨ ದಿನಗಳವರೆಗೆ ಆಕೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಸಂಶಯಕ್ಕೆ ಎಡೆಮಾಡಿದೆ. ಇಂತಹ ಅತ್ಯಾಚಾರಗಳು ಮಣಿಪಾಲದಲ್ಲಿ ಸಾಮಾನ್ಯವೇನಲ್ಲ. ಆದರೆ ಅವತ್ತು ಮಾತ್ರ ರಾತ್ರಿ ಪಾಳಿಯಲ್ಲಿ ಕಾವಲು ಕಾಯುತ್ತಿದ್ದ ವ್ಯಕ್ತಿಯಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಮೆಡಿಕಲ್ ವಿದ್ಯಾರ್ಥಿನಿ ಗ್ರಂಥಾಲಯದಿಂದ ಹೊರಗೆ ಬರುವುದಕ್ಕಿಂತ ಶಂಕಿತ ಆರೋಪಿ ಆನಂದನ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದು, ತಾನೀಗ ಲೈಬ್ರೆರಿಯಿಂದ ಹೊರಟಿದ್ದೇನೆ ಎನ್ನುವ ಸಂದೇಶದ ಜಾಡನ್ನು ಹಿಡಿದು ಪೊಲೀಸರು ತನಿಖೆ ನಡೆಸಿದ್ದರು. ವೈದ್ಯಕೀಯ ವಿದ್ಯಾರ್ಥಿನಿಯೊರ್ವಳು ಸಾಮಾನ್ಯ ಆಟೋ ಚಾಲಕನಾಗಿರುವ ಆನಂದನಿಗೆ ಸಂದೇಶ ಕಳುಹಿಸಿದ್ದಾಳೆ ಎಂದರೆ ಅವರಿಬ್ಬರೂ ಪ್ರೇಮಿಗಳೇ ಎನ್ನುವ ಸಂಶಯ ಎಲ್ಲರಲ್ಲೂ ಮೂಡುತ್ತದೆಯಲ್ಲವೇ? ಹೀಗೆ ಪ್ರಕರಣವನ್ನು ಭೇದಿಸಿದ್ದಾರಂತೆ? ಸಂದೇಶ ಸ್ವೀಕರಿಸಿದ ಆಕೆಯನ್ನು ಕರೆದುಕೊಂಡು ಹೋಗಲು ಆನಂದ ಆಟೋದಲ್ಲಿ ಬಂದಿದ್ದಾಗ ಆಟೋದೊಳಗಿದ್ದ ಆತನ ಇಬ್ಬರು ಸ್ನೇಹಿತರು ಕಂಠಪೂರ್ತಿ ಕುಡಿದಿರುವುದನ್ನು ಗಮನಿಸಿ, ಅವನೊಂದಿಗೆ ಹೋಗಲು ನಿರಾಕರಿಸಿದ್ದಳು. ಈ ಸಂದರ್ಭದಲ್ಲಿ ಬಲವಂತವಾಗಿ ಆಕೆಯನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋದ ಅವರು ಆಕೆಯನ್ನು ಬಲತ್ಕರಿಸಿದ್ದರಂತೆ? ನಂತರ ಅವಳನ್ನು ಜೀವಂತವಾಗಿ ಆಕೆಯ ವಾಸವಾಗಿರುವ ಅಪಾರ್ಟ್‌ಮೆಂಟ್ ಸಮೀಪ ತಂದು ಬಿಟ್ಟು ಹೋಗಿದ್ದಾರಂತೆ? ಅಬ್ಬಾ ಏನಿದು ಅಂತೆ ಕಂತೆಗಳ ಸಂತೆ ಎನ್ನುವುದಾಗಿ ಎಲ್ಲರಿಗೂ ಸಂಶಯ, ಕುತೂಹಲ ಜಾಸ್ತಿಯಾಗುತ್ತಿದೆ ಅಲ್ಲವೇ? ಖಂಡಿತಾ ಆ ರೀತಿ ಆಗಲೇ ಬೇಕು. ಇಂತಹ ವಿಷಯವನ್ನು ತಿಳಿದುಕೊಳ್ಳುವಾಗಲೂ ಎಲ್ಲರಿಗೂ ಆತುರವಿದ್ದೆ ಇರುತ್ತದೆ. ಆ ನಿಟ್ಟಿನಲ್ಲಿಯೇ ಕೆಲವೊಂದು ಪ್ರಶ್ನೆಗಳನ್ನು ವಿಷಯದ ಮಧ್ಯದಲ್ಲಿ ತುರುಕಿದ್ದೇನೆ. ಈ ಪ್ರಕರಣದ ಕುರಿತು ತಿಳಿದುಕೊಳ್ಳುವಾಗ ನನಗೆ ಹುಟ್ಟಿದ ಕೆಲವೊಂದು ಅನುಮಾನಗಳೇ ಇಂದು
ಪ್ರಶ್ನಾ ರೂಪತಾಳಿದೆ.
ಮಣಿಪಾಲ ವಿಶ್ವವಿದ್ಯಾನಿಲಯ ದೇಶ-ವಿದೇಶದಲ್ಲಿಯೇ ಪ್ರಸಿದ್ಧಿ ಪಡೆದಿದ್ದು, ಹಳ್ಳಿಯ ಜನತೆಗೆ ಫ್ಯಾಶನ್ ಹಾಗೂ ಎಂ ಟಿವಿಯ ಸೊಬಗನ್ನು ಉಣಬಡಿಸಿದ ಕೀರ್ತಿ ಏನಿದ್ದರೂ, ಮಣಿಪಾಲ ವಿವಿಯ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ. ಮನೆಯಲ್ಲಿ ಬೇಕಾದಷ್ಟು ಹಣವಿದ್ದರೂ, ಬಿಕ್ಷುಕನಿಗಿಂತಲೂ ಕಡೆಯಾದ ಬಟ್ಟೆಯನ್ನು ಧರಿಸಿ, ರಾಜರೋಷವಾಗಿ ಜನರ ಮಧ್ಯದಲ್ಲಿ ಓಡಾಡುವುದು, ಸಾರ್ವಜನಿಕ ಸ್ಥಳದಲ್ಲಿಯೇ ಸಿಗರೇಟುಗಳಿಂದ ಯಾವ ಕಾರ್ಖಾನೆಗಳಿಗೂ ಕಡಿಮೆಯಿಲ್ಲವೆನ್ನುವಂತೆ ಹೊಗೆ ಬಿಡುವುದು, ಅನೇಕ ಬಾರ್ ಅಂಡ್ ರೆಸ್ಟೋರೆಂಟ್‌ಗಳು ತಡರಾತ್ರಿಯವರೆಗೂ ಕಾರ್ಯನಿರ್ವಹಿಸುವುದು, ಇವರ ಅನೈತಿಕ ವ್ಯವಹಾರಕ್ಕಾಗಿಯೇ ಅನೇಕ ಲಾಡ್ಜ್‌ಗಳು ಪಲ್ಲಂಗವನ್ನು ತಯಾರಿಸಿರುವುದು. ಇಲ್ಲಿ ಅಭ್ಯಾಸ ಮಾಡುತ್ತಿದ್ದ ಶೇ.೮೦ರಷ್ಟು ವಿದ್ಯಾರ್ಥಿಗಳು ಮೇಲೆ ತಿಳಿಸಿದ ಎಲ್ಲಾ ಸುಖವನ್ನು ಅನುಭವಿಸಿದವರೇ? ಇದಕ್ಕೆ ತಲೆಯಾಡಿಸುತ್ತಾ ಮಣಿಪಾಲ ವಿಶ್ವವಿದ್ಯಾನಿಲಯ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಅನೇಕ ಬಾರಿ ಇಂತಹ ಪ್ರಕರಣಗಳು ನಡೆದಿದ್ದರೂ, ಆಡಳಿತ ಮಂಡಳಿಯ ಪ್ರಬಾವದಿಂದ ಅವುಗಳು ಬೆಳಕಿಗೆ ಬರಲೇ ಇಲ್ಲಾ. ಈ ಪ್ರಕರಣವೂ ಕೂಡ ಬೆಳಕಿಗೆ ಬರುತ್ತಿರಲಿಲ್ಲ. ಎಂದಿನಂತೆ ಕಾರ್ಯನಿರ್ವಹಿಸುವ ವಾಚ್‌ಮೆನ್ ಅಂದು ಇದ್ದಿದ್ದರೆ ಸದ್ದಿಲ್ಲದೇ ಈ ಪ್ರಕರಣ ಮುಚ್ಚಿಹೋಗುತ್ತಿತ್ತು. ಆದರೆ ಅತ್ಯಂತ ಗಂಭೀರವಾದ ಗ್ಯಾಂಗ್‌ರೇಪ್ ಪ್ರಕರಣ ಬಯಲಿಗೆ ಬರಲು ಮೂಲ ಕಾರಣಕರ್ತ ಮಣಿಪಾಲ ವಿವಿ ಗ್ರಂಥಾಲಯದ ಸೆಕ್ಯುರಿಟಿ ಸಿಬ್ಬಂದಿ. ಆದರೆ ಒಬ್ಬಳು ಹೆಣ್ಣು ಮಗಳಿನ ಅಪಹರಣ ಪ್ರಕರಣ ಬೆಳಕಿಗೆ ತರಲು ಯತ್ನಿಸಿದ ಈ ಸಿಬ್ಬಂದಿಯ ಕರ್ತವ್ಯ ದಕ್ಷತೆ, ಪ್ರಾಮಾಣಿಕತೆ, ಸಾಮಾಜಿಕ ಕಾಳಜಿ, ಜೀವಪರ ನಿಲುವುಗಳ ಪ್ರಶ್ನಿಸದೆ, ಸರಕಾರ, ಪೊಲೀಸ್ ಇಲಾಖೆಯನ್ನು ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ. ಆದರೆ ಸತ್ಯಾಂಶವೆನೆಂದರೆ ಇವರ ಹೊಗಳಿಕೆಗೆ ಕಾರಣೀಕರ್ತ, ಮೂಲಬಿಂದು ಸೆಕ್ಯುರಿಟಿ ಸಿಬ್ಬಂದಿ ಮಾತ್ರ ಇಂದು ಯಾರಿಗೂ ಬೇಡವಾಗಿದ್ದಾನೆ.
ಸತ್ಯ ಎಷ್ಟು ಕಹಿಯಾಗಿರುತ್ತದೆ. ತಾನು ಪ್ರಾಮಾಣಿಕವಾಗಿ ಇರುತ್ತೇನೆ. ಪ್ರಪಂಚವನ್ನು ಸರಿಮಾಡುತ್ತೇನೆ ಎಂದು ಬಡವನಾದವ ಮನ ಮಾಡಿದರೆ ಆತ ಎಲ್ಲರಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಾನೆ ಎನ್ನುವುದು ಆತ ಅರಿಯಬೇಕಿತ್ತು. ಆತ ಅದನ್ನು ಅರಿಯದೇ ಸತ್ಯಾಂಶವನ್ನು ಜನತೆಗೆ ಬಿತ್ತರಿಸುವ ಮನಮಾಡಿದ. ಪರಿಣಾಮವಾಗಿ ಆತ ಇಂದು ಕೆಲಸ ಕಳೆದು ಕೊಳ್ಳುವಂತ ಪರಿಸ್ಥಿತಿ. ಮೊದಲಿನ ಘಟನೆಗಳು ಇದೇ ರೀತಿ ಮುಚ್ಚಿ ಹೋಗಿವೆ ಎನ್ನುವುದು ಸಾಮಾನ್ಯನಿಗೂ ಅರಿವಿಗೆ ಬರುತ್ತದೆ. ಅತ್ಯಾಚಾರ ಪ್ರಕರಣ ನಡೆದು ಸಿಸಿ ಕ್ಯಾಮರಾದ ಮೂಲದ ಆರೋಪಿಗಳ ಜಾಡನ್ನು ಹಿಡಿದ ಪೊಲೀಸರು ಮೂವರನ್ನು ಬಂದಿಸಿದ್ದಾರೆ. ಪ್ರಮುಖ ಆರೋಪಿ ಯೋಗೀಶ್ ಪೂಜಾರಿ, ಹರಿಪ್ರಸಾದ ಹಾಗೂ ಆನಂದನನ್ನು ಬಂಧಿಸಲಾಗಿದೆ. ಇತ್ತೀಚಿಗೆ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ್ದಾರೆ ಎನ್ನುವ ನೆಲೆಯಲ್ಲಿ ಹರೀಂದ್ರ ಪೂಜಾರಿ, ಬಾಲಚಂದ್ರ ಪೂಜಾರಿ ಅವರುಗಳನ್ನು ಬಂಧಿಸಿದ್ದಾರೆ ಎನ್ನುವಾಗ ಪೊಲೀಸರು ಕಾರ್ಯತತ್ಪರತೆಗೆ ಮೆಚ್ಚಲೇ ಬೇಕು ಅಲ್ಲವೇ?
ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು, ಮಣಿಪಾಲ ವಿವಿ ಆಡಳಿತ ಮಂಡಳಿ, ಮಾಹಿತಿದಾರರು, ಪೊಲೀಸ್ ಸಿಬ್ಬಂದಿಯನ್ನು ಕೊಂಡಾಡುವ ಪೊಲೀಸ್ ಅಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರನ್ನು ಕೊಂಡಾಡುತ್ತಿದ್ದಾರೆಯೇ ವಿನಃ ಯಾರೊಬ್ಬರೂ ವಿದ್ಯಾರ್ಥಿನಿಯ ಅಪಹರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಸೆಕ್ಯೂರಿಟಿ ಸಿಬ್ಬಂದಿಯನ್ನು ಈ ನಡುವೆ ಮರೆತು ಬಿಟ್ಟಿದ್ದಾರೆ. ಮಣಿಪಾಲ ವಿವಿ ಆಡಳಿತ ಮಂಡಳಿ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ೩ ಲಕ್ಷ ರೂ.ಬಹುಮಾನ ನೀಡುತ್ತೇವೆ ಎಂದು ಪೊಲೀಸ್ ಇಲಾಖಾಧಿಕಾರಿಗಳ ಮೂಲಕ ಘೋಷಣೆ ಮಾಡಿದೆ. ಇಲಾಖೆಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೨ಲಕ್ಷ ರೂ ಬಹುಮಾನ ಘೋಷಿಸಿದೆ. ಆದರೆ ಪ್ರಕರಣ ಬೆಳಕಿಗೆ ಬರಲು ಕಾರಣಕರ್ತನಾದ ತನ್ನದೇ ಸಂಸ್ಥೆಯ ಗ್ರಂಥಾಲಯದ ಸೆಕ್ಯೂರಿಟಿ ಸಿಬ್ಬಂದಿಗೆ ಬಹುಮಾನವಾಗಲೀ, ಭಡ್ತಿ ನೀಡುವುದರ ಬದಲು ಅಮಾನತಿನಂಥ ಶಿಕ್ಷೆ ವಿಧಿಸಿದೆ. ವಿವಿಯ ಈ ಕೃತ್ಯದಿಂದಾಗಿ ಪ್ರಕರಣ ಬಯಲಾಗದೇ, ಅಲ್ಲಿಯೇ ಮುಚ್ಚಿ ಹೋಗಬೇಕಾಗಿತ್ತು ಎನ್ನುವ ಉದ್ದೇಶವಿತ್ತು ಎಂದು ನಾಗರಿಕ ಸಮಾಜದಲ್ಲಿ ಸಂಶಯ ಹರಡುವಂತೆ ಮಾಡಿದೆ.
ವಿವಿಧ ಪಕ್ಷಗಳ ರಾಜಕಾರಣಿಗಳು, ಜನಪ್ರತಿನಿಧಿಗಳು, ಕೆಲವು ಸಂಘ-ಸಂಸ್ಥೆಗಳು ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸ್ ಇಲಾಖೆಯನ್ನು ಅಭಿನಂದಿಸಿದರು. ಆದರೆ ಯಾರು ಕೂಡ ಅಪ್ಪಿ ತಪ್ಪಿಯೂ ಸಾಮಾನ್ಯರಲ್ಲಿ ಸಾಮಾನ್ಯನಾದ ಸೆಕ್ಯೂರಿಟಿ ಸಿಬ್ಬಂದಿಯನ್ನು ಸೌಜನ್ಯಕ್ಕೂ ಕನಿಷ್ಟ ನೆನಪೂ ಕೂಡ ಮಾಡಿಕೊಂಡಿಲ್ಲ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳ ನಿಜವಾದ ಆಶಯವನ್ನು ನಾಗರಿಕ ಸಮಾಜ ಪ್ರಶ್ನಿಸುವಂತೆ ಮಾಡಿದೆ ಎನ್ನುವುದು ಸತ್ಯ. ಕೆಲವರಿಗೆ ಪ್ರಚಾರ ಮುಖ್ಯ. ಇನ್ನು ಕೆಲವರಿಗೆ ಉನ್ನತ ಅಧಿಕಾರಿಗಳ ಗಮನ ಸೆಳೆಯುವ, ಆ ಮೂಲಕ ಅವರಿಗೆ ಹತ್ತಿರವಾಗುವ ಪ್ರಯತ್ನ. ಮತ್ತೆ ಕೆಲವರಿಗೆ ಪ್ರಕರಣದ ಹಿನ್ನೆಲೆ ಮತ್ತು ನಿಜವಾದ ಮುಖವನ್ನು ಮರೆ ಮಾಚುವುದು ಮುಖ್ಯ. ಇವರಿಗೆಲ್ಲ ಮಣಿಪಾಲದ ಮತ್ತು ಆಡಳಿತ ಪಕ್ಷದ ಹಿತಾಸಕ್ತಿ ಕಾಪಾಡುವುದರಲ್ಲಿ ಇರುವಷ್ಟು ಆಸಕ್ತಿ ಇಡೀ ಪ್ರಕರಣ ಬಹಿರಂಗಕ್ಕೆ ಬರಲು ಕಾರಣಕರ್ತನಾದ ಸಾಮಾನ್ಯರಲ್ಲಿ ಸಾಮಾನ್ಯನಾದ ಸೆಕ್ಯೂರಿಟಿ ಸಿಬ್ಬಂದಿಯ ನೆನಪು ಮಾಡಿಕೊಳ್ಳದೇ ಇರುವುದು ಸರಕಾರ, ಜನಪ್ರತಿನಿಧಿಗಳು, ರಾಜಕಾರಣಿಗಳು, ಸರಕಾರಿ ಅಧಿಕಾರಿಗಳ ನಡವಳಿಕೆಗಳು ಹಾಗೂ ವಿವಿ ಮತ್ತು ಆಸ್ಪತ್ರೆ ಸಿಬ್ಬಂದಿಯ ಧೋರಣೆ, ವಿದ್ಯಾರ್ಥಿನಿಯ ಮೌನ ಸಾರ್ವಜನಿಕರಲ್ಲಿ ಪ್ರಕರಣದ ಕುರಿತಾಗಿ ಬಗ್ಗೆ ಅನುಮಾನ ಮೂಡಿಸುತ್ತಿದೆ.
ಯೋಗೀಶ್ ಪೂಜಾರಿ, ಹರಿಪ್ರಸಾದ್, ಆನಂದ ಪಾಣಾರ ಅವರುಗಳು ಆರೋಪಿಗಳೇ ನಿಜವಾಗಿರುವುದಾದರೆ ಅವರಿಗೆ ಶಿಕ್ಷೆ ನೀಡಲು ಯಾಕೆ ಹಿಂಜರಿಯುತ್ತಿದ್ದಾರೆ. ಸಾಕ್ಷ್ಯಗಳನ್ನು ನಾಶ ಮಾಡಲು ಪ್ರಚೋದನೆ ನೀಡಿದ ಹರೀಂದ್ರ ಪೂಜಾರಿ, ಬಾಲಚಂದ್ರ ಪೂಜಾರಿ ಅವರುಗಳು ಯಾಕೆ ಯಾರ ಪ್ರಚೋದನೆಯಿಂದ ಈ ಕೃತ್ಯ ಎಸಗಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿಯ ಮೌನಕ್ಕೆ ಕಾರಣಗಳಾವು? ಆಕೆಗೆ ಯಾರಾದರೂ ಒತ್ತಡ ಹೇರಿದ್ದಾರೆಯೇ? ವಿವಿಯ ಧೋರಣೆಯೇನು? ಇಲಾಖೆಯ ನಿಲುವುಗಳೇನು? ಹೀಗೆ ಹಲವಾರು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದರೂ, ಪೊಲೀಸರು ಆರೋಪಿಗಳನ್ನು ಬಂದಿಸಿದ್ದರೂ, ಇವರೇ ನಿಜವಾದ ಆರೋಪಿಗಳಾ? ಆದರೂ ಒಂದಂತೂ ಸತ್ಯ. ಪ್ರಕರಣ ಮಾತ್ರ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು, ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಅತ್ಯಾಚಾರ ನಡೆದಿರುವುದಂತೂ ಹೌದು. ಈ ಪ್ರಕರಣದ ಅಂತ್ಯ ಯಾವ ರೀತಿ ಎನ್ನುವುದೇ ಕಾದು ನೋಡಬೇಕಿದೆ. ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆಯೇ? ಹಿಂದಿನ ಪ್ರಕರಣದಂತೆ ಈ ಕಡತಗಳು ಕೊಠಡಿಯ ಅಟ್ಟಕ್ಕೆ ಸೇರಿ ಧೂಳು ಹಿಡಿಯುತ್ತದೆಯೇ?
ಅದೇನೇ ಇರಲಿ ಪದೇ ಪದೇ ರಾಜ್ಯದಲ್ಲಿ, ದೇಶದಲ್ಲಿ ನಮ್ಮ ಮನೆಯ ಪಕ್ಕದಲ್ಲಿಯೇ ಇಂತಹ ಪ್ರಕರಣಗಳು ನಡೆಯುತ್ತಿರುವುದರಿಂದ ಹೆಣ್ಣುಮಕ್ಕಳು ದೈರ್ಯದಿಂದ ತಿರುಗಾಡುವುದೇ ಕಷ್ಟಸಾದ್ಯ. ಗಾಂಧೀಜಿ ಕಂಡ ಕನಸು ನನಸಾಗುವುದು ಸಾಧ್ಯವೇ ಇಲ್ಲ ಎನ್ನುವಂತ ಪರಿಸ್ಥಿತಿ. ಹೆಣ್ಣು ಮಗಳೊರ್ವಳು ಮಧ್ಯರಾತ್ರಿ ಯಾವುದೇ ಅಂಜಿಕೆಯಿಲ್ಲದೇ ತಿರುಗಾಡುತ್ತಾಳೆ ಎಂದಾಗ ನಮಗೆ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿದೆ ಎಂದು ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದ್ದರೂ, ಹಗಲಿನಲ್ಲಿಯೇ ಹೆಣ್ಣು ಮಗಳು ತಿರುಗಾಡುವುದೇ ಕಷ್ಟ. ಇನ್ನೂ ರಾತ್ರಿಯಲ್ಲಿ ಕಲ್ಪನೆ ಮಾಡಿಕೊಳ್ಳುವುದೇ ಕಷ್ಟ. ಕರಾವಳಿಯಲ್ಲಿ ಇಂತಹ ಘಟನೆಗಳು ಹಲವಾರು ನಡೆಯುತ್ತಿದೆ. ಅವುಗಳಲ್ಲಿ ಬೆಳಕಿಗೆ ಬರುವುದು ಕೆಲವೊಂದು ಪ್ರಕರಣಗಳು ಮಾತ್ರ. ಜೀವನ ನಿರ್ವಹಣೆಗಾಗಿ, ಮನೆಯಲ್ಲಿರುವ ಬಡತನವನ್ನು ನಿವಾರಿಸಲು ಒಬ್ಬಂಟಿಯಾಗಿ ಪಟ್ಟಣಗಳಲ್ಲಿ ಕಾರ್ಯ ನಿರ್ವಹಿಸುವ, ಒಂಟಿಯಾಗಿ ತಿರುಗುವ ಮಹಿಳೆಯರಿಗಾಗಿ ಟೈಮ್ಸ್ ಆಫ್ ದೀನಬಂಧು ಪತ್ರಿಕೆಯ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬಿಸಲು ಕೆಲವೊಂದು ಸಲಹೆಗಳನ್ನು ನೀಡುತ್ತಿದೆ.

ಹೆಣ್ಣುಮಕ್ಕಳೇ ಜಾಗರೂಕರಾಗಿರಿ: 

೧.ಬಹುಮಹಡಿ ಅಪಾರ್ಟ್‌ಮೆಂಟ್ ಅಥವಾ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳೆ ಅನಿವಾರ್ಯವಾಗಿ ತಡರಾತ್ರಿಯಲ್ಲಿ ಅಲ್ಲಿನ ಲಿಫ್ಟ್‌ನಲ್ಲಿ ಪುರುಷರೊಂದಿಗೆ ಸಂಚರಿಸಬೇಕಿದ್ದರೆ? 
*ಲಿಫ್ಟ್‌ನೊಳಗೆ ಹೋದಾಗ ಮಹಿಳೆ ಮೊದಲಿಗೆ ಮಾಡಬೇಕಾದ ಕಾರ್ಯವೆಂದರೆ ಉದಾಹರಣೆಗೆ ಆಕೆಗೆ ೧೩ ನೇ ಮಹಡಿಗೆ ತೆರಳ ಬೇಕಿದ್ದರೆ ಕೇವಲ ೧೩ನೇ ಬಟನ್‌ನ್ನು ಮಾತ್ರ ಒತ್ತಬೇಡಿ. ೧ರಿಂದ ೧೩ ಮಹಡಿಯ ಎಲ್ಲಾ ಬಟನ್‌ಗಳನ್ನು ಒತ್ತಿ ಪ್ರತಿ ಮಹಡಿಯಲ್ಲಿಯೂ ಲಿಫ್ಟ್ ನಿಲ್ಲುತ್ತದೆ. ಎದುರಿಗಿರುವ ಪುರುಷನ ಕುರಿತಾಗಿ ಭಯ ಕಡಿಮೆಯಾಗಬಹುದು.

೨. ನಿಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಅಪರಿಚಿತನೊರ್ವ ದಾಳಿಗೆ ಬಂದಾಗ?
*ಧೈರ್ಯಗೆಡಬೇಡಿ. ನೀವು ಅಡುಗೆ ಮನೆಗೆ ಓಡಬೇಕು. ಮೆಣಸಿನ ಹುಡಿ ಮತ್ತು ಅರಶಿನ ಪುಡಿ ಎಲ್ಲಿದೆ ಎಂದು ನಿಮಗೆ ಮಾತ್ರ ತಿಳಿದಿದೆ. ಅಲ್ಲದೇ ಚಾಕು ಮತ್ತು ತಟ್ಟೆಗಳಿರುವುದನ್ನು ನೋಡಿ ಅವುಗಳು ಮುಗಿಯುವರೆಗೆ ಆತನೆಡೆಗೆ ಎಸೆಯಬೇಕು. ಈ ಸಂದರ್ಭದಲ್ಲಾದ ಶಬ್ದ ಹಾಗೂ ಬೊಬ್ಬೆಯಿಂದ ಎದುರಾಳಿ ಭಯಗೊಳ್ಳುತ್ತಾನೆ. ಆತ ಸಿಕ್ಕಿಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಅಲ್ಲಿಂದ ಆತ ಓಡಿಹೋಗುತ್ತಾನೆ. 

೩.ರಾತ್ರಿ ಸಮಯದಲ್ಲಿ ಆಟೋ ಅಥವಾ ಟ್ಯಾಕ್ಸಿ ಪಡೆಯುವಾಗ?
*ರಾತ್ರಿ ಆಟೋ ಅಥವಾ ಟ್ಯಾಕ್ಸಿ ಹಿಡಿದು ಕುಳಿತುಕೊಳ್ಳುವುದಕ್ಕಿಂತ ಮುಂಚಿತವಾಗಿ ಅದರ ನೋಂದಣಿ ಸಂಖ್ಯೆಯನ್ನು ಗಮನಿಸಿ, ಕೂಡಲೇ ನಿಮಗೆ ಗೊತ್ತಿರುವ ನಂಬರ್‌ಗೆ ಸಂದೇಶ ರವಾನಿಸಿ. ನಂತರ ನಿಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ಚಾಲಕನಿಗೆ ಅರ್ಥ ಆಗುವ ಭಾಷೆಯಲ್ಲಿ ಮೊಬೈಲ್‌ನಿಂದ ಕರೆ ಮಾಡಿ. ಯಾರೂ ನಿಮ್ಮ ಕರೆಗೆ ಉತ್ತರವನ್ನು ನೀಡದಿದ್ದರೂ ಸಂಭಾಷಣೆಯಲ್ಲಿರುವಂತೆ ನಟಿಸಿ. ಚಾಲಕ ತನ್ನ ವಿವರಗಳು ಇತರರಿಗೆ ತಿಳಿದಿದೆ ಎನ್ನುವ ಭಯದಿಂದ ತಾನು ಯಾವುದೇ ತಪ್ಪು ಕಾರ್ಯಗಳಿಗೆ ಮನ ಮಾಡಿದರೆ ಗಂಭೀರ ಸಮಸ್ಯೆಯಾಗಬಹುದು ಎಂದು ತಿಳಿಯುತ್ತಾನೆ. ಆಗ ಆತನೇ ಸುರಕ್ಷಿತವಾಗಿ ನಿಮ್ಮನ್ನು ಮನೆಗೆ ತಲುಪಿಸುತ್ತಾನೆ. ಸಂಭಾವ್ಯ ಆಕ್ರಮಣಕಾರರೊಂದಿಗೆ ನೀವು ನಡೆಸುವ ಚಟುವಟಿಕೆಯೇ ನಿಮ್ಮ ರಕ್ಷಕನಾಗಿರುತ್ತದೆ. ಎಲ್ಲಕ್ಕಿಂತ ಮೊದಲು ಕುಡಿದುಕೊಂಡಿದ್ದಾನೆಯೇ ಎನ್ನುವುದನ್ನು ಗಮನಿಸಿಕೊಳ್ಳಿ. 

೪.ಚಾಲಕ ರಸ್ತೆ ಬದಲಾವಣೆ ಮಾಡಿದಾಗ?
*ಎಚ್ಚರದಲ್ಲಿದ್ದು, ನೀವು ಸೇರಬೇಕಾದ ಸ್ಥಳ ಅದಲ್ಲವೆನ್ನುವುದನ್ನು ಮನಗಂಡು ಅಪಾಯದ ವಲಯ ತಲುಪುತ್ತಿದ್ದೇವೆ ಎನ್ನುವುದನ್ನು ಅರಿತುಕೊಳ್ಳಬೇಕು. ಈ ಸಂದರ್ಭದಲ್ಲಿ ನಿಮ್ಮ ಪರ್ಸ್‌ನ ಹ್ಯಾಂಡಲ್ ಅಥವಾ ನಿಮ್ಮ ದುಪ್ಪಟ್ಟಾವನ್ನು ಆತನ ಕುತ್ತಿಗೆಗೆ ಸುತ್ತಿ, ಹಿಂದುಗಡೆ ಎಳೆಯಬೇಕು. ಸೆಕೆಂಡುಗಳ ಅಂತರದಲ್ಲಿ ಈ ಕ್ರಿಯೆ ನಡೆಯುವುದರಿಂದ ಆತ ಅಸಹಾಯಕನಾಗುತ್ತಾನೆ. ಕೆಲವು ಸಂದರ್ಭದಲ್ಲಿ ನಿಮ್ಮಲ್ಲಿ ಪರ್ಸ್ ಅಥವಾ ದುಪ್ಪಟ್ಟಾ ಇಲ್ಲದಾಗ ಅವನು ಧರಿಸಿದ ಶರ್ಟ್‌ನ ಕಾಲರ್ ಹಿಡಿದು ಹಿಂದಕ್ಕೆ ಎಳೆಯಬೇಕು. ಮೇಲಿನ ಬಟನ್ ಧರಿಸಿರುವುದರಿಂದ ಕುತ್ತಿಗೆ ಬಿಗಿದು ಅಸಹಾಯಕನಾಗುತ್ತಾನೆ.

೫.ರಾತ್ರಿಯ ಸಮಯದಲ್ಲಿ ನಿಮ್ಮನ್ನು ಯಾರಾದರೂ ಅನುಸರಿಸುತ್ತಿದ್ದರೆ...
*ದಾರಿಯ ಪಕ್ಕದಲ್ಲಿರುವ ಅಂಗಡಿ ಅಥವಾ ಮನೆಯನ್ನು ಗುರುತಿಸಿ ನಿಮ್ಮ ಪರಿಸ್ಥಿತಿಯನ್ನು ವಿವರಿಸಿ. ಕೆಲವೊಂದು ಸಂದರ್ಭದಲ್ಲಿ ರಾತ್ರಿ ಸಮಯದಲ್ಲಿ ಅಂಗಡಿಗಳು ಮುಚ್ಚಿರುತ್ತವೆ. ಈ ಸಂದರ್ಭದಲ್ಲಿ ನೇರವಾಗಿ ಎಟಿಎಂ ನೊಳಗೆ ಹೋಗಬೇಕು. ಎಟಿಎಂ ಕೇಂದ್ರದಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳು ಇರುತ್ತಾರೆ. ಅಲ್ಲದೇ ಕ್ಲೋಸ್ ಸರ್ಕ್ಯೂಟ್ ಟೆಲಿವಿಷನ್ ಮೂಲಕ ಎಲ್ಲವನ್ನು ಪರೀಕ್ಷಿಸಲಾಗುತ್ತದೆ. ಗುರುತು ಹಿಡಿಯಬಹುದು ಎನ್ನುವ ನೆಲೆಯಲ್ಲಿ ದಾಳಿಗೆ ಮುಂದಾಗುವುದಿಲ್ಲ.
ಮಾನಿನಿಯರೇ, ಇದೆಲ್ಲದಕ್ಕಿಂತ ಮುಖ್ಯವಾಗಿ ಮಾನಸಿಕ ಎಚ್ಚರಿಕೆಯನ್ನು ಹೊಂದಿ, ಧೈರ್ಯವನ್ನು ತಂದುಕೊಂಡಾಗ ಅದುವೇ ನಿಮ್ಮ ಪಾಲಿಗೆ ಮಹಾನ್ ಆಯುಧವಾಗುತ್ತದೆ. ಯಾವುದೇ ಸಂದರ್ಭದಲ್ಲಿಯೂ ಧೈರ್ಯಗೆಡದಿರಿ..ಸ್ನೇಹಿತರೇ ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಪ್ರೀತಿ-ಪಾತ್ರ ಸಹೋದರಿಯರೊಂದಿಗೆ ಹಂಚಿಕೊಂಡಾಗ ಭವಿಷ್ಯದಲ್ಲಿ ಸಂಭವಿಸುವ ಘಟನೆಗಳಿಗೆ ಧೈರ್ಯ ತುಂಬಬಹುದು ಏನಂತಿರಾ...



ಅವಳು ನನಗೆ ಬೇಕೇ ಬೇಕು ಎನ್ನುವ ತಿಕ್ಕಲುತನದ ಅಪಾಯ..!ಅನಾಹುತ..!
ಪ್ರೀತಿ-ಪ್ರೇಮದ ಗುಂಗಿನಲ್ಲಿ ತಂದೆ-ತಾಯಿಯನ್ನು ಬೇರೆ ಮಾಡುವ ಯುವಜನಾಂಗ 

ವೈಜ್ಞಾನಿಕ ಯುಗದಲ್ಲಿ ನಾವಿದ್ದೇವೆ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುತ್ತೇವೆ. ನಾವು ಮಾಡಬೇಕಾದ ಹೆಚ್ಚಿನ ಕೆಲಸವನ್ನು ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುವ ಕಂಪ್ಯೂಟರ್, ರೊಬೋಟ್‌ಗಳು, ವಿಷಯಗಳ ತಾಣ ಇಂಟರ್ನೆಟ್, ಸಂಬಂಧಗಳನ್ನು ಬೆಳೆಸುವ ಜಾಲತಾಣಗಳು ಅನೇಕವಿದ್ದರೂ, ನಾವೆಲ್ಲೋ ಕಳೆದು ಹೋಗುತ್ತಿದ್ದೇವೆ ಎನ್ನುವ ಭಾವನೆ ನಮಗೆ ಬರುವುದೇ ಇಲ್ಲಾ. ಹಿಂದಿನ ಕಾಲದಲ್ಲಿ ಪತ್ರದ ಮೂಲಕ ಸಂಪರ್ಕಿಸಬೇಕಿದ್ದ ಮಾನವೀಯ ಕೌಟುಂಬಿಕ ಸಂಬಂಧಗಳಿಂದು, ಕ್ಷಣಮಾತ್ರದಲ್ಲಿ ಅವರನ್ನು ಸಂಪರ್ಕಿಸುವ, ಅವರೊಂದಿಗೆ ಗಂಟೆಗಟ್ಟಲೆ ಹರಟೆ ಹೊಡೆಯುವ ಸಾಧನಗಳು ಮನುಷ್ಯ ಕೈ ಸೇರಿವೆ. ಇದರಿಂದಾಗಿ ಮನುಷ್ಯನಿಗೆ ಸ್ವಂತವಾಗಿ ಆಲೋಚಿಸುವ ಬುದ್ದಿ ಕಡಿಮೆಯಾಗಿದೆ ಎನ್ನುವುದಂತೂ ಸ್ಪಷ್ಟ.
ಮೊಬೈಲ್ ಮೂಲಕ ಹತ್ತಾರು ರೋಮ್ಯಾಂಟಿಕ್ ಮೆಸೇಜ್‌ಗಳು ರವಾನೆಯಾಗಿದ್ದೇ ತಡ ಪ್ರೀತಿ ಪ್ರೇಮದ ಪುರಾಣವೇ ಆರಂಭವಾಗುವ ಈ ದಿನದಲ್ಲಿ ಮುಂದಾಗುವ ಪರಿಣಾಮದ ಪರಿವಿಲ್ಲದೇ ದುಡುಕುವ ಹುಡುಗಾಟದ ಹುಡುಗ-ಹುಡುಗಿಯರು ಏನೇನೋ ಅನಾಹುತ ಅನುಭವಿಸುವುದಿದೆ. ``ಕಾಮಾತುರಾಣಾಂ ನ ಭಯಂ ನ ಲಜ್ಜಾ" ಎನ್ನುವ ಮಾತಿನಂತೆ ಬರೀ ಮೋಹವನ್ನೆ ಪ್ರೀತಿಯೆಂದು ಪರಿಭಾವಿಸುವ ಹುಚ್ಚು ಖೊಡಿ ಮನಸ್ಸಿನ ಬೆನ್ನಿಗೆ ಬಿದ್ದವರು ಮಾಡಬಾರದ್ದನ್ನೆಲ್ಲಾ ಮಾಡಿ, ತಮ್ಮ ಬದುಕನ್ನೇ ನರಕವಾಗಿಸಿಕೊಳ್ಳುತ್ತಾರೆ. ನಮ್ಮೂರಿನ ಎರಡು ಘಟನೆಯನ್ನು ನೀವು ತಿಳಿದಾಗ ಕೌಟುಂಬಿಕ ಸಂಬಂಧಗಳ ಸೂಕ್ಷ್ಮತೆಯ ಅರಿವು ನಿಮ್ಮ ಪಾಲಿಗೂ ತಿಳಿಯುತ್ತದೆ.
ಘಟನೆ-೧:
ಬಂಟ ಸಮುದಾಯದ ದಂಪತಿಗೆ ನಾಲ್ವರು ಮಕ್ಕಳಲ್ಲಿ ಬದುಕಿದ್ದು ಆರತಿಗೊರ್ವ ಮಗ(ಚಂದ್ರ), ಕೀರ್ತಿಗೊರ್ವಳು ಮಗಳು ಲತಾ(ಹೆಸರು ಬದಲಿಸಲಾಗಿದೆ). ಇವರ ತಂದೆ ಎಲ್ಲರಂತೆ ಕುಡಿತದ ಹವ್ಯಾಸಕ್ಕೆ ತೊಡಗಿ, ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಡುಕ ಗಂಡ ಉಪಟಳವಿದ್ದರೂ, ತಾಯಿ ಮಾತ್ರ ಮಕ್ಕಳನ್ನು ಕಷ್ಟ ಪಟ್ಟು ಓದಿಸುತ್ತಿದ್ದರು. ತಾಯಿಯ ಆಸೆಗೆ ಮಗ ಚಂದ್ರ ಮಸಿ ಬಳಿಯದೆ ಚೆನ್ನಾಗಿ ಓದಿ ಉದ್ಯೋಗಗಿಟ್ಟಿಸಿಕೊಂಡು ಸಂತೋಷದ ಜೀವನ ನಡೆಸಬೇಕು ಎನ್ನುವ ಆಸೆ ಚಿಗುರೊಡೆದಿತ್ತು. ತಂಗಿಯಾದ ಲತಾ ಅಣ್ಣನಂತೆ ಚೆನ್ನಾಗಿ ಓದು ಮುಗಿಸುವ ಬದಲು ಪ್ರಥಮ ಪಿಯುಸಿಗೆ ಹೋಗುವಾಗಲೇ ಪ್ರೀತಿ ಪ್ರೇಮದ ಸುಳಿಗೆ ಸಿಲುಕಿ, ಅದು ಮನೆಯವರಿಗೆ ವಿಷಯ ತಿಳಿಯುವುದರೊಂದಿಗೆ ಶಿಕ್ಷಣಕ್ಕೆ ತೀಲಾಂಜಲಿಯನ್ನಿಟ್ಟುಕೊಂಡಿದ್ದಳು. ಇಷ್ಟಾದ ಮೇಲೆಯೂ ಕೂಡ ಆಕೆಗೆ ಬುದ್ದಿ ಬರಬೇಕಿತ್ತು. ಆದರೆ ಮನೆಯ ಹತ್ತಿರದ ದೇವಸ್ಥಾನಕ್ಕೆ ಆರೂಢ ಪ್ರಶ್ನೆ ಕೇಳಲು ಕೇರಳದ ಪುದುವಾಳರು ಬಂದಿದ್ದು, ಅವರನ್ನು ಕರೆದುಕೊಂಡು ಬಂದ ಕಾರಿನ ಚಾಲಕನೊಂದಿಗೆ ಪ್ರೇಮಾಂಕುರವಾಗಿತ್ತು. ಅಲ್ಲಿನ ಇವರಿಬ್ಬರ ಸಂಭಾಷಣೆ ಮುಂದುವರಿದು, ರಿಜಿಸ್ಟರ್ ಮದುವೆಯಲ್ಲಿ ಕೊನೆಗೊಂಡಿತ್ತು. ಆದರೆ ಲತಾಳನ್ನು ಮದುವೆಯಾದವನಿಗೆ ಅದು ಪ್ರಥಮ ಮದುವೆಯಾಗಿರಲಿಲ್ಲ. ಸತ್ಯ ತಿಳಿಯುವುದರೊಳಗೆ ಕಾಲ ಮಿಂಚಿ ಹೋಗಿದ್ದು, ಆಕೆ ಸಂಪೂರ್ಣವಾಗಿ ತವರಿನ ಸಂಬಂಧ ಕಡಿದುಕೊಂಡಿದ್ದಳು. ಕಷ್ಟದ ಜೀವನ ಸಾಗಿಸುತ್ತಿದ್ದ ಲತಾ ಕೊನೆಗೊಂದು ದಿನ ಮನೆಯವರೊಂದಿಗೆ ನನಗಿಲ್ಲಿ ಕಷ್ಟವಾಗುತ್ತಿದೆ ಎಂದು ಹೇಳಿದವಳು ಇತ್ತೀಚಿಗೆ ಹೆಣವಾಗಿ ಮನೆಗೆ ಬಂದಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಂಡಳೇ? ಕೊಲೆಯೋ? ಎನ್ನುವುದು ಇನ್ನೂ ಕೂಡ ಪ್ರಶ್ನಾತೀತ.
ಘಟನೆ:೨:
ಇವರು ಕೂಡ ಮಧ್ಯಮ ವರ್ಗದ ಬಂಟ ಸಮುದಾಯದ ತಂದೆ ತಾಯಿಗೆ ಮೂವರು ಮಕ್ಕಳು. ಇಬ್ಬರು ಗಂಡು ಹಾಗೂ ಓರ್ವ ಹುಡುಗಿ. ಹಿರಿಯವ ಅಣ್ಣ, ನಂತರದಲ್ಲಿ ಹೆಣ್ಣು ಕೊನೆಯವನೇ ಹರ್ಷರಾಜ್(ಹೆಸರು ಬದಲಿಸಲಾಗಿದೆ). ತಂದೆ-ತಾಯಿ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಚೆನ್ನಾಗಿ ಓದಿಸಿದ್ದರು. ಅಣ್ಣ ಒಳ್ಳೆಯ ಉದ್ಯೋಗ ಪಡೆದು ತಂಗಿಗೆ ಮದುವೆ ಮಾಡಿಸಲು ಹೆಣ್ಣನ್ನು ನೋಡುತ್ತಿರುವಾಗಲೇ ಹವ್ಯಾಸಿ ಫೋಟೋಗ್ರಫಿ ಕೆಲಸ ನಿರ್ವಹಿಸುತ್ತಿದ್ದ ತಮ್ಮ ರಾಯನ ಪ್ರೀತಿಯಲ್ಲಿ ಮೋಹವೇ ಜಾಸ್ತಿಯಾಗಿ ಅದು ಕಾಮವಾಗಿ ಮಾರ್ಪಟ್ಟಿತ್ತು. ಅಕ್ಕನಿಗೆ ಮದುವೆ ಮಾಡಿಸಬೇಕು, ತಂದೆ ತಾಯಿಗೆ ಬೆನ್ನೆಲುಬಾಗಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಕಿಂಚಿತ್ ಯೋಚನೆಯೇ ಇಲ್ಲದೇ ತಾನು ಪ್ರೀತಿಸಿದ ಹೆಣ್ಣಿನೊಂದಿಗೆ ಮನೆ-ಸಂಬಂಧವನ್ನು ತೊರೆದು ಬೇರೆ ಊರಿನಲ್ಲಿ ನೆಲೆಯಾಗಿ ಬಿಟ್ಟ. ಇಂತಹ ಪರಿಸ್ಥಿತಿಯಲ್ಲಿ ಮನೆಯ ವಾತಾವರಣ ಹೇಗಿರುತ್ತದೆ ಎನ್ನುವುದನ್ನು ಊಹಿಸಲು ಕಷ್ಟಸಾಧ್ಯ. ಮದುವೆಯಾಗದ ಅಕ್ಕನಿಗೆ ಗಂಡು ನೋಡಲು ಹೆಣಗುವ ಅಣ್ಣ, ಕಷ್ಟಪಟ್ಟು ಸಾಕಿ ಬೆಳೆಸಿ, ಅನಾರೋಗ್ಯದಲ್ಲಿರುವ ಪೋಷಕರನ್ನು ಲೆಕ್ಕಿಸದೇ ಪ್ರೀತಿಯ ಮೋಹಕ್ಕೆ ಸಿಲುಕಿ ಮನೆಬಿಟ್ಟು ತೆರಳಿದ ವಿದ್ಯಾವಂತ ಯುವಕ ಹರ್ಷರಾಜ್.
ಹೀಗೆ ಅನೇಕ ಘಟನೆಗಳು ಸಮಾಜದಲ್ಲಿ ನಡೆಯುತ್ತಿರುತ್ತವೆ. ಪ್ರೀತಿ ಮಾಡುವುದು ತಪ್ಪಲ್ಲ. ಅದನ್ನು ಪಡೆದುಕೊಳ್ಳಬೇಕು ಎನ್ನುವ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಹುಚ್ಚು ಪ್ರೀತಿಗೆ ಬಲಿಯಾಗಿ, ಹಿಂದೆ ಮುಂದೆ ಆಲೋಚಿಸದೆ ತನ್ನ ಜೀವನವನ್ನೇ ಕೊನೆಗಾಣಿಸಿದ ಲತಾ ಒಂದೆಡೆಯಾದರೆ, ಮುತ್ತು ಕೊಡೊಳು ಸಿಕ್ಕಾಗ ತುತ್ತನ್ನ ನೀಡಿದ ಪೋಷಕರನ್ನು ತೊರೆದ ಹರ್ಷರಾಜ್ ಇವರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ನಿರೀಕ್ಷಿಸಲು ಸಾಧ್ಯವೇ? ಪೋಷಕರು ನೋಡಿದ ಗಂಡು-ಹೆಣ್ಣನ್ನು ಮದುವೆ ಮಾಡಿಕೊಂಡಾಗ ಸಂತೋಷದ ಜೀವನ ಸಾಗಿಸಬಹುದಾಗಿದ್ದರೂ, ಎಲ್ಲಿಯೋ ಒಂದು ಕಡೆ ನಾವು ಎಡವುತ್ತಿದ್ದೇವೆ ಎನ್ನುವುದು ಸತ್ಯ.
ಈ ವಿಷಯ ಪ್ರಸ್ತಾಪಿಸುವಾಗ ನನ್ನ ಸ್ನೇಹಿತನೊರ್ವ ಕರೆ ಮಾಡಿ, ತಂದೆ-ತಾಯಿಯರ ಮಾತಿಗೆ ಮನ್ನಣೆ ನೀಡಿ, ಹಿಂದು ಸಂಪ್ರದಾಯದಂತೆ ತಂಗಿಯರಿಗೆ ಮದುವೆ ಮಾಡಿಸಿದ ನಂತರವೇ ಮದುವೆಯಾಗಲು ತೀರ್ಮಾನಿಸಿ ವರ್ಷ ಮೂವತ್ತು ಕಳೆದರೂ ಮದುವೆ ಯಾಗುವುದು ಬಿಡು. ಪ್ರೀತಿಯ ಬಲೆಯಲ್ಲಿ ಸಿಲುಕಲು ಸಾಧ್ಯವಾಗಿಲ್ಲ ಎಂದಾಗ ಆತನ ಮಾತಿನಲ್ಲೂ ಸತ್ಯಾಂಶವಿದೆ ಎನಿಸಿತು. ಆತ ಪ್ರೀತಿ ಮಾಡಲು ಸಾಧ್ಯವಿಲ್ಲದೆ ಇಲ್ಲಿಯವರೆಗೆ ಕುಳಿತಿರುವುದಲ್ಲ. ಆತನ ಮೇಲಿರುವ ಘನತರ ಜವಾಬ್ದಾರಿ ಮುಗಿಸಿದ ನಂತರ ಮದುವೆಯಾಗಬೇಕು ಎನ್ನುವ ನೆಲೆಯಲ್ಲಿ ತಂದೆ ತಾಯಿಗೆ ಆಸರೆಯಾಗಬೇಕು ಎನ್ನುವ ಉನ್ನತವಾದ ಗುರಿಯಿದೆಯಲ್ಲ. ಪ್ರಸ್ತುತ ವೈಜ್ಞಾನಿಕ ಯುಗದಲ್ಲಿ ಇಂತಹ ಉದಾತ್ತವಾದ ಗುರಿ, ಉದ್ದೇಶಗಳು ಮರೆಯಾಗುತ್ತಿದೆ ಎನ್ನುವ ಸತ್ಯ ಅರಿಯಬೇಕಿದೆ.
ಪ್ರೀತಿ ಎನ್ನುವುದು ಸಹಜವಾದುದೇ? ಆದರೆ ಇದೇ ಪ್ರೀತಿಯು ಹಲವು ರೀತಿಯ ಗೊಂದಲದ ಸಂಗತಿಗಳಿಗೆ ಎಡೆಮಾಡುತ್ತದೆ. ಎರಿಕ್ ಫ಼್ರಾಮ್ ಎನ್ನುವ ಸಮಾಜಶಾಸ್ತ್ರಜ್ಞ ಹೇಳುವ ಹಾಗೆ ನಿಜವಾದ ಪ್ರೀತಿಯಲ್ಲಿ ಕೊಡುವ ಗುಣವಿದೆಯೇ ಹೊರತು ಕಸಿಯುವ, ಕಿತ್ತುಕೊಳ್ಳುವ, ವಿರೂಪಗೊಳಿಸುವ ಭಂಜನೆಯ ಗುಣವಿರುವುದಿಲ್ಲ. ಪೊಸ್ಸೆಸ್ಸಿವ್ ಗುಣ ಒಂದು ಹಂತದವರೆಗೆ ಓಕೆ. ಆದರೆ ಅದು ಅತಿರೇಕಕ್ಕೆ ತಿರುಗಿ ಏನೇ ಆಗಲಿ ಅವಳು ನನಗೆ ಬೇಕೆ ಬೇಕು, ಪಡೆದೆ ತೀರುತ್ತೇನೆ ಎನ್ನುವ ಹಠ ಪ್ರಯೋಗದ ನಡುವೆ ಅವಳು ಒಂದೊಮ್ಮೆ ಒನ್‌ವೇ ಪ್ರೀತಿಯನ್ನು ನಿರಾಕರಿಸಿದ್ದೆಯಾದರೆ ಈತ ಇದ್ದಕ್ಕಿದ್ದಂತೆ ಸೈತಾನ ರೂಪ ತಾಳುತ್ತಾನೆ. ಅಷ್ಟರವರೆಗೆ ಚಿನ್ನ, ರನ್ನ ಎಂದು ಕೊಂಡಾಡಿದ ವ್ಯಕ್ತಿ ಆಕೆಯ ಸುಂದರ ಮುಖಕ್ಕೆ ಆಸಿಡ್ ಎರಚುವುದೋ, ಕತ್ತು ಕೊಯ್ಯುವ ಇಲ್ಲವೇ ಹಲ್ಲೆ ಮಾಡುವ ಹುಂಬತನಕ್ಕಿಳಿಯುತ್ತಾನೆ. ಇಂಥಾ ತಿಕ್ಕಲು ಮನ:ಸ್ಥಿತಿಯನ್ನೇ ಸಿನೆಮಾ ಮಾಡಿ ದುಡ್ಡು ಮಾಡಿಕೊಂಡವರಿಗೂ ನಮ್ಮಲ್ಲಿ ಕೊರತೆಯೆನಿಲ್ಲಾ.
ತಿಕ್ಕಲು ಹುಡುಗನೊಬ್ಬನ ಅತಿಯಾದ ಪೊಸೆಸ್ಸಿವ್‌ನಿಂದಾಗಿ ಅನೇಕ ಸುಂದರ ಯುವತಿಯರಿಂದು ವಿಕಾರವಾಗಿದ್ದಾರೆ. ೧೯೯೯ ರ ಎಪ್ರಿಲ್ ೨೦ರಂದು ಹಸೀನಾ, ೨೦೦೧ರ ಫೆಬ್ರವರಿಯಲ್ಲಿ ನೂರಜಹಾನ್, ೨೦೦೨ರ ಆಗಸ್ಟ್ ೧೨ರಂದು ಶ್ರುತಿ ಸತ್ಯನಾರಾಯಣ, ೨೦೦೭ರ ಜೂನ್ ೨೪ರಂದು ಸರೋಜಿನಿ ಕಲಭಾಗ, ೨೦೦೭ರ ಅಗಸ್ಟ್ ೮ ರಂದು ಹಿನಾ ಫ಼ಾತಿಮಾ, ೨೦೦೮ರ ಅಕ್ಟೋಬರ್ ೨೧ರಂದು ಕಾರ್ತಿಕಾ ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಇವರೆಲ್ಲರೂ ಆಸಿಡ್ ಧಾಳಿಗೆ ತುತ್ತಾದವರು. ಇದು ನಿಜವಾದ ಪ್ರೀತಿಯೇ? ಖಂಡಿತಾ ಅಲ್ಲಾ. ನಿಜವಾದ ಪ್ರೀತಿಯು ಹೀಗೆ ಹಿಂಸೆ-ಸೇಡಿಗೆ ಪುಷ್ಟಿ ನೀಡುವುದಿಲ್ಲ ಎನ್ನುವ ಸತ್ಯಾಂಶ ತಿಳಿದಿರಬೇಕು.
ಈಚೆಗೆ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ಆಕಾಶ ಎನ್ನುವ ಹುಡುಗ ರೋಷನಿ ಗುಪ್ತಾ ಎನ್ನುವ ಹುಡುಗಿಯನ್ನು ಕೊಡಲಿಯಿಂದ ಹಲ್ಲೆ ಮಾಡಿದ್ದು ಅಲ್ಲದೆ ಮರಣಪತ್ರ ಬರೆದಿಟ್ಟು ತಾನೂ ಕೂಡಾ ಕತ್ತು ಕತ್ತರಿಸಿಕೊಂಡಿದ್ದಾನೆ. ರೋಷನಿಯ ತಲೆಬುರುಡೆಗೆ ತೀವ್ರ ಪೆಟ್ಟು ಬಿದ್ದು ಈಗ ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಕೊಡಲಿಯ ಪೆಟ್ಟು ಕೊಟ್ಟಾತ ಅದಾಗಲೇ ಇಹಲೋಕ ತ್ಯಜಿಸಿದ್ದಾನೆ. ಬಿಹಾರ ಗಯಾ ಮೂಲದ ಆಕಾಶ ಒಬ್ಬ ಬಡ ರೈತನ ಮಗ. ಓದಲೆಂದು ದೆಹಲಿಗೆ ಬಂದವನು ಮಾಡಿರುವ ಕಿಸಾಮತಿ ಇದು. ಆತ ಬರೆದಿರುವ ಮರಣ ಪತ್ರದಲ್ಲಿ ನನ್ನನ್ನು ಕ್ಷಮಿಸಿ, ಪ್ರತಿ ಬಾರಿಯೂ ಹುಡುಗರದೆ ತಪ್ಪಿರುವದಿಲ್ಲ.. ನಾನು ಎಂಥವನು ಎನ್ನುವದನ್ನು ನನ್ನ ಗೆಳೆಯರಿಂದ ಕೇಳಿ ತಿಳಿಯಿರಿ ಹೀಗೆ ಇನ್ನೂ ಅನೇಕ ವಿಷಯಗಳನ್ನು ನಾಲ್ಕು ಪುಟದ ಪತ್ರದಲ್ಲಿ ಬರೆದಿದ್ದ ಆಕಾಶ್. ಸ್ನೇಹಿತರು ಹೇಳುವಂತೆ ಆಕಾಶ್ ಅಂತರ್ಮುಖಿಯಾಗಿದ್ದು, ಕಡಿಮೆ ಮಾತನಾಡುತ್ತಿದ್ದ. ತನ್ನದೆ ಸಹಪಾಠಿಯನ್ನು ಭೀಕರವಾಗಿ ಕೊಡಲಿಯಿಂದ ಹಲ್ಲೆ ಮಾಡಿ, ತಾನೂ ಸಾವಿಗೀಡಾಗಿದ್ದು ಸರಿಯಾದ ನಿಲುವಂತೂ ಅಲ್ಲವೇ ಅಲ್ಲಾ.
ಮೇ ತಿಂಗಳಲ್ಲಿ ಮುಂಬೈನ ಬಾಂದ್ರಾದಲ್ಲಿ ಒಬ್ಬ ಯುವಕ ೨೩ ವರ್ಷ ವಯಸ್ಸಿನ ಯುವತಿಯ ಮುಖಕ್ಕೆ ಆಸಿಡ್ ಎರಚಿ ಪರಾರಿಯಾದ. ಆ ಹುಡುಗಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾಳೆ ಅವಳ ಮೊಬೈಲನ್ನು ಪೋಲಿಸರು ಪರಿಶೀಲಿಸಿದಾಗ ಅದರಲ್ಲಿ ಸುಮಾರು ೨೫೦ ರಷ್ಟು ರೋಮ್ಯಾಂಟಿಕ್ ಸಂದೇಶಗಳಿದ್ದವು. ಆ ಸಂದೇಶಗಳು ದೆಹಲಿಯ ಅನಾಮಿಕನೊಬ್ಬನಿಂದ ಬಂದಿತ್ತು. ಕಳೆದ ತಿಂಗಳು ಚೆನೈನ ಎಮ್‌ಜಿಆರ್ ಸ್ವಾಯತ್ತ ವಿಶ್ವವಿದ್ಯಾಲಯದಲ್ಲಿ ಜಾರ್ಖಂಡ್ ಮತ್ತು ಬಿಹಾರದ ಇಬ್ಬರು ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ವಿಷಯವಾಗಿ ಜಗಳಾಡಿ ಒಬ್ಬಾತ ಪಿಸ್ತೂಲಿನಿಂದ ಇನ್ನೊಬ್ಬನ ತಲೆಗೆ ಗುರಿಯಿಟ್ಟಿದ್ದ. ಹೊಡೆದವನು ತಾನು ಪ್ರೀತಿಸುತ್ತಿರುವ ಹುಡುಗಿಯೊಂದಿಗೆ ಮಾತನಾಡಬೇಡ ಎನ್ನುವುದು ಕಡಕ್ ವಾರ್ನಿಂಗ್ ಆಗಿತ್ತು. ವಿಚಿತ್ರವೆಂದರೆ ಆ ಹುಡುಗಿ, ಈ ಇಬ್ಬರು ಯುವಕರು ಒಂದೇ ತರಗತಿಯಲ್ಲಿ ಓದುವವರು.
ಕಳೆದ ಎಪ್ರಿಲ್‌ನಲ್ಲಿ ಮುಂಬೈನ ಠಾಣಾದಲ್ಲಿ ಒಂದು ಘಟನೆ ನಡೆದಿತ್ತು. ೧೯ ವರ್ಷದ ಓರ್ವ ಯುವತಿಯನ್ನು ೨೨ ವರ್ಷದ ಒಬ್ಬ ಯುವಕ ಪ್ರೀತಿಸುತ್ತಿದ್ದ. ಅದು ಬಹುತೇಕ ಒನ್‌ವೇ ಲವ್ ಆಗಿತ್ತು. ಆ ಹುಡುಗಿ ಅವನನ್ನು ಮದುವೆಯಾಗಲು ಇಷ್ಟವಿಲ್ಲ ಎಂದದ್ದೇ ಆತ ನೇರವಾಗಿ ಅವರ ಮನೆಗೆ ತೆರಳಿ, ಕಲಹಕ್ಕಿಳಿದು ಆ ಹುಡುಗಿಯ ಕತ್ತಲ್ಲಿ ಚಾಕು ಹಾಕಿ ಬಿಟ್ಟ ಹಾಗೆಯೇ ತಾನೂ ಕತ್ತನ್ನು ಸೀಳಿಕೊಂಡ. ಸುದೈವಕ್ಕೆ ಇಬ್ಬರೂ ಬದುಕಿ ಉಳಿದರು. ಇಂತಹ ಅದೆಷ್ಟೋ ಘಟನೆಗಳು ಪ್ರೇಮ ವೈಫ಼ಲ್ಯ ಇಲ್ಲವೆ ನಿರಾಕರಣೆಯ ಹೆಸರಲ್ಲಿ ನಮ್ಮೂರಲ್ಲಿಯೂ ನಡೆಯುತ್ತಿವೆ.
ಅದರಲ್ಲಿಯೂ ಈಗೀಗ ಮೊಬೈಲ್ ಮೂಲಕ ಪ್ರೇಮ ಪ್ರಕರಣ ಆರಂಭವಾಗುತ್ತಿವೆ. ಮೊಬೈಲ್‌ಗಳ ಮೂಲಕವೇ ಎಲ್ಲಾ ಸಂಬಂಧಗಳಿಗೂ ಅವಕಾಶ ಕಲ್ಪಿಸುವುದರಿಂದ ಪ್ರಬುದ್ಧತೆ ಮತ್ತು ಪರಸ್ಪರರನ್ನು ಅರಿಯಲು ಅಲ್ಲಿ ಅವಕಾಶವೇ ಇಲ್ಲದಂತಾಗಿದೆ. ಮೊಬೈಲ್ ಪರಿಚಯದ ಹುಡುಗಾಟವೇ ಪ್ರೇಮವಾಗಿ ಅನೇಕ ಅನಾಹುತಗಳಿಗೆ ಕಾರಣವಾಗಿದೆ. ಹಗಲಿರುಳೆನ್ನದೇ ನಿರಂತರ ರೋಮ್ಯಾಂಟಿಕ್ ಮೆಸೇಜ್‌ಗಳನ್ನು ರವಾನಿಸುವುದೇ ಪ್ರೀತಿ ಎನ್ನುವುದನ್ನು ತಿಳಿದುಕೊಂಡಿದ್ದಾರೆ. ಪ್ರೇಮ ಎನ್ನುವುದು ತರಾತುರಿಯಲ್ಲಿ ಕುದುರುವ ವ್ಯವಹಾರವಲ್ಲ. ಹಾಗೆಯೇ ಮೋಹ ಸೆಳೆತಗಳನ್ನೇ ಹಂಬಲಿಸಿ ಪ್ರೀತಿಸುವದು ಸರಿಯೂ ಅಲ್ಲ. ಆದರೆ ಪ್ರೀತಿಯ ಮೌಲ್ಯವನ್ನು ಅರಿಯದೇ ಸಿಕ್ಕಾಪಟ್ಟೆ ಪ್ರೀತಿಸಿ, ಯುವಸಮೂಹ ಅನಾಹುತಕ್ಕೆ ನಾಂದಿಯಾಗಿರುವ ಅನೇಕ ಘಟನೆಗಳು ನಮ್ಮ ಕಣ್ಣಮುಂದಿದೆ. ಆದರೂ ನೈಜಪ್ರೀತಿಯನ್ನು ಅರಿಯುವ ತಾಳ್ಮೆ ಕಳೆದುಕೊಂಡಿದ್ದಾರೆ.
ಪ್ರೀತಿಯನ್ನು ಒಂದು ಮೌಲ್ಯ ಎಂದು ಪರಿಗಣಿಸುವ ಮನೋಭಾವ ಬೆಳೆಯಬೇಕು. ಆ ದಿಶೆಯಲ್ಲಿ ನಮ್ಮ ಯುವಕರಿಗೆ ಸುತ್ತಲಿನ ಪರಿಸರ ಮಾರ್ಗದರ್ಶನ ನೀಡಬೇಕು. ಅದಕ್ಕೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಿರಬೇಕು. ಹಣವಿದ್ದಾಕ್ಷಣ ದೇಗುಲಗಳಿಗೆ ದಾನ ಧರ್ಮ ಮಾಡುತ್ತಾ, ಊರಿನಲ್ಲಿ ಗಣ್ಯ ವ್ಯಕ್ತಿಗಳೆಂದು ಗುರುತಿಸಿಕೊಳ್ಳುವ ವ್ಯಕ್ತಿಗಳ ಕಾಮಪುರಾಣವು ಹೆಚ್ಚಾದೊಡನೆ ಆ ಊರಿನ ಸಾಮಾನ್ಯ ಯುವಸಮೂಹವು ಕೂಡ ದೃತಿಗೆಡುತ್ತದೆ. ಮದುವೆಯಾಗಿ ಮಕ್ಕಳಿರುವ ಪುರುಷ ಅಥವಾ ಮಹಿಳೆಯೇ ಸಮಾಜದಲ್ಲಿ ಅನೈತಿಕ ವ್ಯವಹಾರದಲ್ಲಿ ಭಾಗಿಯಾಗುತ್ತಾನೆ/ಳೆ ಎಂದರೆ ಅವರಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಎನ್ನುವ ಪ್ರಶ್ನೆ ಸಹಜವಾದುದು. ಇವುಗಳ ನಡುವೆಯೇ ಪ್ರೀತಿ ಪ್ರೇಮದ ಹೆಸರಿನಲ್ಲಿ ತಲೆಕೆಡಿಸಿಕೊಂಡು ಅದು ಫಲಿಸದೇ ಹೋದಾಗ ಹೀನ ಕೃತ್ಯಗಳಿಗೂ ಮುಂದಾಗುತ್ತಾನೆ. ಪ್ರೀತಿಸಿದವರು ಬೇರಾದಾಗ ಕತ್ತು ಕತ್ತರಿಸಿಕೊಳ್ಳುವ ಇಲ್ಲವೇ ಕೊಯ್ಯುವ, ವಿಷ ಸೇವಿಸುವ ಇಲ್ಲವೇ ಆಸಿಡ್ ಎರಚುವ ಕ್ರಿಯೆಗಳಿಗಿಂತಲೂ ಈ ಪ್ರೀತಿ ಎನ್ನುವುದು ಅಗಾಧವಾದುದು. ನಿಜವಾದ ಪ್ರಾಮಾಣಿಕ ಪ್ರೀತಿ ಪರಸ್ಪರರ ಖುಷಿ ಮತ್ತು ಏಳ್ಗೆಯನ್ನು ಬಯಸುತ್ತದೆಯೇ ಹೊರತು ಪರಸ್ಪರರ ದುರಂತ ಕತೆಗಳನ್ನಲ್ಲ ಎನ್ನುವುದನ್ನು ಎಲ್ಲಾ ಯುವ ಪ್ರೇಮಿಗಳು ಅರಿತುಕೊಳ್ಳಬೇಕು. ಪ್ರೀತಿಯೆನ್ನುವುದು ಪ್ರೀತಿಸಿದ ವ್ಯಕ್ತಿಯನ್ನು ಬಲವಂತವಾಗಿ ಪಡೆದು, ಅನುಭವಿಸುವುದಲ್ಲ. ಪ್ರೀತಿಸುವ ಜೀವಗಳು ಒಂದಾಗಬೇಕು, ಪ್ರತಿನಿತ್ಯ ಜೊತೆಗಿರಬೇಕು, ಪ್ರತಿಕ್ಷಣ ಮಾತನಾಡುತ್ತಿರಬೇಕು ಎನ್ನುವುದು ಮಾತ್ರ ಪ್ರೀತಿಯಲ್ಲ. ಅನಿವಾರ್ಯ ಕಾರಣದಿಂದ ಪ್ರೀತಿಸುವವರು ದೂರಾದಾಗ ಅವರನ್ನು ಹಿಂಸಿಸದೇ, ಅವರು ಸಂತೋಷವಾಗಿರಬೇಕು ಎಂದು ಬಯಸುವುದೇ ನಿಜವಾದ ಪ್ರೀತಿ..ಏನಂತಿರಾ


ಪ್ರೀತಿ-ಪ್ರೇಮದ ಗುಂಗು-ಮೋಹದ ಮುಸುಕಿನಲ್ಲಿ ಮರೆಯಾಗುತ್ತಿರುವ ತಂದೆ-ತಾಯಿಯ ನೈಜ ಪ್ರೀತಿ

ವೈಜ್ಞಾನಿಕ ಯುಗದಲ್ಲಿ ನಾವಿದ್ದೇವೆ ಎಂದು ಎದೆಯುಬ್ಬಿಸಿ, ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತೇವೆ. ನಮ್ಮ ಕೆಲಸವನ್ನು ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುವ ಕಂಪ್ಯೂಟರ್, ರೊಬೋಟ್‌ಗಳು, ವಿಷಯಗಳ ಸಂಗ್ರಹಕ್ಕೆ ಅಂತರ್ಜಾಲ, ಸಂಬಂಧಗಳನ್ನು ಬೆಳೆಸುವ ಸಾಮಾಜಿಕ ಜಾಲತಾಣಗಳಿಂದ ನಮ್ಮತನವೆನ್ನುವುದು ನಮಗೆ ಅರಿವಿಲ್ಲದೇ ಮರೆಯಾಗುತ್ತಿದ್ದರೂ, ಅದರ ಕುರಿತು ಕ್ಯಾರೆ ಎನ್ನದೇ ದಿನ ದೂಡುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಪತ್ರದ ಮೂಲಕ ಸಂಪರ್ಕಿಸಬೇಕಿದ್ದ ಮಾನವೀಯತೆಯ, ಕೌಟುಂಬಿಕ ಸಂಬಂಧಗಳಿಂದು, ಅಂಕಿಗಳನ್ನು ಒತ್ತಿದರೆ ಕ್ಷಣಮಾತ್ರದಲ್ಲಿ ಅವರೊಂದಿಗೆ ಮಾತನಾಡುವ, ದೃಶ್ಯದ ಮೂಲಕವು ಅವರೊಂದಿಗೆ ಹರಟುವ ಸಾಧನಗಳಿಗೇನೂ ಕೊರತೆಯಿಲ್ಲಾ. ಮಾರುಕಟ್ಟೆಗೆ ದಿನನಿತ್ಯ ಹೊಸ ಹೊಸ ಸಾಧನಗಳು ಬರುತ್ತಿದ್ದು, ಮನುಷ್ಯ ಮಾತ್ರ ಅವುಗಳ ಮೊರೆ ಹೋಗಿ ಸ್ವಂತವಾಗಿ ಆಲೋಚಿಸುವ ಬುದ್ದಿ ಕಡಿಮೆಯಾಗುತ್ತಿದೆ ಎನ್ನುವುದಂತು ಸತ್ಯ. ಅದನ್ನು ಅರಿಯುವ ಮೊದಲೇ ಬಾಳಿ ಬದುಕಬೇಕಿದ್ದ ಅನೇಕರು ಸಂಬಂಧಗಳನ್ನು ಕಡಿದುಕೊಂಡಿದ್ದು ಮಾತ್ರವಲ್ಲದೇ ಲೋಕವನ್ನೇ ಬಿಟ್ಟು ಪರಲೋಕ ಸೇರಿದವರು ಅದೆಷ್ಟೋ ಮಂದಿ.
ಮೊಬೈಲ್ ಮೂಲಕ ಹತ್ತಾರು ರೋಮ್ಯಾಂಟಿಕ್ ಮೆಸೇಜ್‌ಗಳು ರವಾನೆಯಾಗಿದ್ದೇ ತಡ ಪ್ರೀತಿ ಪ್ರೇಮದ ಪುರಾಣವೇ ಆರಂಭವಾಗುವ ಈ ದಿನದಲ್ಲಿ ಮುಂದಾಗುವ ಪರಿಣಾಮದ ಪರಿವಿಲ್ಲದೇ ದುಡುಕುವ ಹುಡುಗಾಟದ ಹುಡುಗ-ಹುಡುಗಿಯರು ಏನೇನೋ ಅನಾಹುತ ಅನುಭವಿಸುವುದಿದೆ. ``ಕಾಮಾತುರಾಣಾಂ ನ ಭಯಂ ನ ಲಜ್ಜಾ" ಎನ್ನುವ ಮಾತಿನಂತೆ ಬರೀ ಮೋಹವನ್ನೆ ಪ್ರೀತಿಯೆಂದು ಪರಿಭಾವಿಸುವ ಹುಚ್ಚು ಖೊಡಿ ಮನಸ್ಸಿನ ಬೆನ್ನಿಗೆ ಬಿದ್ದವರು ಮಾಡಬಾರದ್ದನ್ನೆಲ್ಲಾ ಮಾಡಿ, ತಮ್ಮ ಬದುಕನ್ನೇ ನರಕವಾಗಿಸಿಕೊಳ್ಳುತ್ತಾರೆ. ಹಿಂದು ಸಮಾಜದ ಹೆಣ್ಣುಮಕ್ಕಳನ್ನು ಲವ್‌ಜಿಹಾದ್ ಎನ್ನುವ ಹೆಸರಿನಲ್ಲಿ ಪ್ರೀತಿಸಿ ಮದುವೆಯಾಗುವ ಮುಸ್ಲಿಂರು ಒಂದೆಡೆಯಾದರೆ, ಸ್ಲೋ ಪಾಯ್ಸ್‌ನ್‌ನಂತೆ ಮತಾಂತರದೊಂದಿಗೆ ಹಿಂದು ಹೆಣ್ಣುಮಕ್ಕಳನ್ನು ಅಪಹರಿಸುವ ಜಾಲ ಸಕ್ರೀಯವಾಗಿದೆ. ಪ್ರೀತಿಸಿದ ವ್ಯಕ್ತಿಗೆ ಹೆಣ್ಣು ಸಿಗಲಿಲ್ಲವೆಂದ ಮಾತ್ರಕ್ಕೆ ತನ್ನ ಜೀವನವೇ ಅಂತ್ಯವಾಯಿತು ಎಂದು ಹೀನ ಕೃತ್ಯಕ್ಕೂ ಮನಮಾಡುವ ಯುವ ಸಮೂಹ. ಸಮಾಜದಲ್ಲಿ ಅನೇಕ ಘಟನೆಗಳು ನಮ್ಮ ಕಣ್ಣೆದುರಿಗೆ ನಡೆಯುತ್ತಿದ್ದರೂ, ಯಾಕೆ ನಮ್ಮ ಹೆಣ್ಣುಮಕ್ಕಳಿಗೆ ಅರ್ಥವಾಗುವುದಿಲ್ಲ. ಪ್ರೀತಿಸುವ ಕಣ್ಣಿಗೆ ತಂದೆ-ತಾಯಿಯ ಪ್ರೀತಿ ಕಾಣದೇ ಹೋಗುತ್ತದೆಯೇ? ಇಲ್ಲಿನ ಉದಾಹರಣೆಗಳನ್ನು ತಿಳಿದಾಗ ಕೌಟುಂಬಿಕ ಸಂಬಂಧಗಳ ಸೂಕ್ಷ್ಮತೆಯ ಅರಿವು ಎಲ್ಲರಿಗೂ ಅರಿವಾಗುತ್ತದೆ ಎನ್ನುವುದು ನನ್ನ ಭಾವನೆ.
ಬಂಟ ಸಮುದಾಯದ ದಂಪತಿಗೆ ನಾಲ್ವರು ಮಕ್ಕಳಲ್ಲಿ ಬದುಕಿದ್ದು ಆರತಿಗೊರ್ವ ಮಗ (ಚಂದ್ರ), ಕೀರ್ತಿಗೊರ್ವಳು ಮಗಳು ಲತಾ(ಹೆಸರು ಬದಲಿಸಲಾಗಿದೆ). ಇವರ ತಂದೆ ಎಲ್ಲರಂತೆ ಕುಡಿತದ ಹವ್ಯಾಸಕ್ಕೆ ತೊಡಗಿ, ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಡುಕ ಗಂಡನ ಉಪಟಳವಿದ್ದರೂ, ತಾಯಿ ಮಾತ್ರ ಮಕ್ಕಳನ್ನು ಕಷ್ಟ ಪಟ್ಟು ಓದಿಸಿದ್ದರು. ತಾಯಿಯ ಆಸೆಯನ್ನು ಚಂದ್ರ ಹುಸಿಗೊಳಿಸಿಲ್ಲ. ಚೆನ್ನಾಗಿ ಓದಿ ಉದ್ಯೋಗಗಿಟ್ಟಿಸಿಕೊಂಡು ಸಂತೋಷದ ಜೀವನ ನಡೆಸಬೇಕು ಎನ್ನುವ ಆಸೆ ಚಿಗುರೊಡೆದಿದೆಯಷ್ಟೆ. ಲತಾ ಮಾತ್ರ ಅಣ್ಣನಂತೆ ಚೆನ್ನಾಗಿ ಓದು ಮುಗಿಸುವ ಬದಲು ಪ್ರಥಮ ಪಿಯುಸಿಗೆ ಹೋಗುವಾಗಲೇ ಪ್ರೀತಿ ಪ್ರೇಮದ ಸುಳಿಗೆ ಸಿಲುಕಿ, ಅದು ಮನೆಯವರಿಗೆ ವಿಷಯ ತಿಳಿಯುವುದರೊಂದಿಗೆ ಶಿಕ್ಷಣಕ್ಕೆ ತೀಲಾಂಜಲಿಯನ್ನಿಟ್ಟುಕೊಂಡಿದ್ದಳು. ಇಷ್ಟಾದ ಮೇಲೆಯೂ ಕೂಡ ಆಕೆಗೆ ಬುದ್ದಿ ಬರಬೇಕಿತ್ತು. ಆದರೆ ಮನೆಯ ಹತ್ತಿರದ ದೇವಸ್ಥಾನಕ್ಕೆ ಆರೂಢ ಪ್ರಶ್ನೆ ಕೇಳಲು ಕೇರಳದ ಪುದುವಾಳರು ಬಂದಿದ್ದು, ಅವರನ್ನು ಕರೆದುಕೊಂಡು ಬಂದ ಕಾರಿನ ಚಾಲಕ ಕ್ರಿಶ್ಚಿಯನ್ ಸಮುದಾಯದ ಜಾನ್‌ನೊಂದಿಗೆ ಪ್ರೇಮಾಂಕುರವಾಗಿತ್ತು. ಅಲ್ಲಿನ ಇವರಿಬ್ಬರ ಸಂಭಾಷಣೆ ಮುಂದುವರಿದು, ರಿಜಿಸ್ಟರ್ ಮದುವೆಯಲ್ಲಿ ಕೊನೆಗೊಂಡಿತ್ತು. ಆದರೆ ಲತಾಳನ್ನು ಮದುವೆಯಾದವನಿಗೆ ಅದು ಪ್ರಥಮ ಮದುವೆಯಾಗಿರಲಿಲ್ಲ ಎನ್ನುವ ಸತ್ಯ ಲತಾಳಿಗೆ ತಿಳಿಯುವುದರೊಳಗೆ ಕಾಲ ಮಿಂಚಿ ಹೋಗಿದ್ದು, ಆಕೆ ಸಂಪೂರ್ಣ ತವರಿನ ಸಂಬಂಧ ಕಡಿದುಕೊಂಡಿದ್ದಳು. ಕಷ್ಟದ ಜೀವನ ಸಾಗಿಸುತ್ತಿದ್ದ ಲತಾ ಕೊನೆಗೊಂದು ದಿನ ಮನೆಯವರೊಂದಿಗೆ ನನಗಿಲ್ಲಿ ಕಷ್ಟವಾಗುತ್ತಿದೆ ಎಂದು ಹೇಳಿದವಳು ಇತ್ತೀಚಿಗೆ ಹೆಣವಾಗಿ ಮನೆಗೆ ಬಂದಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಂಡಳೇ? ಕೊಲೆಯೋ? ಎನ್ನುವುದು ಇನ್ನೂ ಕೂಡ ಪ್ರಶ್ನಾತೀತ.
ಲವ್‌ಜಿಹಾದ್ ಹೆಸರಿನಲ್ಲಿ ಕಟಪಾಡಿಯ ಅಕ್ಷತಾ, ಕಾಸರಗೋಡಿನ ಸ್ವಪ್ನಾ, ಕುಂದಾಪುರದ ಜ್ಯೋತಿ, ಬೆಂಗಳೂರಿನ ಕಾವೇರಿ ಹೀಗೆ ಅನೇಕ ಹೆಸರುಗಳು ಪಟ್ಟಿ ಮಾಡಬಹುದು. ಪ್ರೀತಿ ಮಾಡುತ್ತೇವೆ ಎನ್ನುವ ಇವರ ಪ್ರೀತಿಯಲ್ಲಿ ಮೋಹವೇ ಜಾಸ್ತಿಯಾಗಿ ಅದು ಕಾಮವಾಗಿ ಮಾರ್ಪಟ್ಟಿತ್ತು. ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ತುತ್ತನ್ನವನ್ನು ಬೇಯಿಸಿ ಹಾಕಿದ ತಂದೆ-ತಾಯಿಯರ ಪ್ರೀತಿ ಅವರ ಕಣ್ಣಿಗೆ ಮಂಕಾಗಿ ಕಾಣುತ್ತದೆ. ಕಷ್ಟಪಟ್ಟು ಸಾಕಿ ಬೆಳೆಸಿದ, ಅನಾರೋಗ್ಯದಲ್ಲಿರುವ ಪೋಷಕರನ್ನು ಲೆಕ್ಕಿಸದೇ ಪ್ರೀತಿಯ ಮೋಹಕ್ಕೆ ಸಿಲುಕಿ ಮನೆಬಿಟ್ಟು ತೆರಳಿದ ಈ ಯುವತಿಯರು ತಮ್ಮ ಕಷ್ಟವನ್ನು ತಾವೇ ತಂದುಕೊಳ್ಳುತ್ತಾರೆ. ಲವ್‌ಜಿಹಾದ್ ಹೆಸರಿನಲ್ಲಿ ಪ್ರೀತಿಯ ಮೋಹಕ್ಕೆ ಸಿಲುಕಿ ಅವರೊಂದಿಗೆ ಹೋಗುವಾಗಲೇ ಆಲೋಚನೆ ಮಾಡಬೇಕು. ಹಿಂದು ಧರ್ಮದಲ್ಲಿದ್ದಂತೆ ಸ್ವಾತಂತ್ರ್ಯ, ಪ್ರೀತಿಸುವಾಗ ಇರುವ ಸ್ವೇಚ್ಛೆ ತಮಗೆ ಮುಂದೆ ಸಿಗುವುದಿಲ್ಲ ಎನ್ನುವ ಯೋಚನೆಯನ್ನೂ ಕೂಡ ಮಾಡುವುದಿಲ್ಲ. ಮದುವೆಯಾದ ದಿನದಿಂದಲೇ ಅವರು ಜೆರ್ಸಿ ದನದಂತೆ ವರ್ಷದಿಂದ ವರ್ಷಕ್ಕೆ ಕರು(ಮಗು)ವನ್ನು ಹಾಕುತ್ತಾ, ಬುರ್ಖಾದ ಮುಸುಕಿನಲ್ಲಿ ಜೀವನ ನಡೆಸುತ್ತಾ, ವರ್ಷವಾಗದಿದ್ದರೂ ಮುದಿಯಾಗಿ ಕಸಾಯಿಖಾನೆಗೆ ಸೇರಬೇಕಾಗುತ್ತದೆ. ಇದನ್ನು ನಮ್ಮ ಹೆಣ್ಣುಮಕ್ಕಳು ಅರಿಯದೇ ತಾವೇ ಹಗಲು ನೋಡಿದ ಬಾವಿಯಲ್ಲಿ ಹೋಗಿ ಬೀಳುತ್ತಾರೆ. ಇದನ್ನೆಲ್ಲಾ ಅರಿಯುವಾಗ ಕಾಲಮೀರಿ ಹೋಗಿರುತ್ತದೆ.
ಸಮಾಜದಲ್ಲಿಂದು ಅನೇಕ ಘಟನೆಗಳು ನಡೆಯುತ್ತಿದೆ. ಪ್ರೀತಿ ಮಾಡುವುದು ತಪ್ಪಲ್ಲ. ಮೊಬೈಲ್ ಪ್ರೀತಿಯಲ್ಲಿ ಸ್ವಾರ್ಥ, ಕಾಮವೇ ಅಧಿಕವಿರುತ್ತದೆ. ಲವ್‌ಜಿಹಾದ್ ಎನ್ನುವ ಹೆಸರಿನಲ್ಲಿ ಮುಸ್ಲಿಂ ಯುವಕರು ಹಿಂದು ಹೆಣ್ಣುಮಕ್ಕಳನ್ನು ತಮ್ಮ ಬಲೆಗೆ ಬೀಸಲು ದಿನದ ೨೪ ಗಂಟೆಗಳೂ ಸಾಮಾಜಿಕ ಜಾಲತಾಣ, ಮೊಬೈಲ್ ಸಿಕ್ಕಿದ ನಂಬರ್‌ಗಳಿಗೆ ಕರೆ, ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತಾರೆ. ಎಲ್ಲಿಯಾದರೂ ಹೆಣ್ಣು ತಪ್ಪಿ ಪ್ರತಿಕ್ರಿಯೆ ನೀಡಿದರೆ ಅವಳ ಭವಿಷ್ಯಕ್ಕೆ ಆಕೆಯೇ ಎಳ್ಳುನೀರು ಬಿಟ್ಟಂತಾಗುತ್ತದೆ. ಸಕಾಲದಲ್ಲಿ ಎಚ್ಚೆತ್ತುಕೊಂಡರೆ ಯಾವುದೇ ಅನಾಹುತಗಳು ಸಂಭವಿಸುವುದಿಲ್ಲಎನ್ನುವ ಸತ್ಯವನ್ನು ಕೂಡ ಅರಿಯಬೇಕು.
ಪ್ರೀತಿಯನ್ನು ಪಡೆಯಬೇಕು ಎನ್ನುವ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಹುಚ್ಚು ಪ್ರೀತಿಗೆ ಬಲಿಯಾಗಿ ಪೋಷಕರನ್ನು ತೊರೆಯುವ ಮಕ್ಕಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ನಿರೀಕ್ಷಿಸಲು ಸಾಧ್ಯವೇ? ಪೋಷಕರು ನೋಡಿದ ಗಂಡು-ಹೆಣ್ಣನ್ನು ಮದುವೆ ಮಾಡಿಕೊಂಡಾಗ ಸಂತೋಷದ ಜೀವನ ಸಾಗಿಸಬಹುದಾಗಿದ್ದರೂ, ಎಲ್ಲಿಯೋ ಒಂದು ಕಡೆ ನಾವು ಎಡವುತ್ತಿರುವುದಂತು ಸತ್ಯ.
ಅದಕ್ಕಿಂತಲೂ ಹೊರತಾಗಿರುವ ವಿಚಿತ್ರತೆಯ ಮನೋಭಾವ ಪ್ರೀತಿಸುವ ಮನಸ್ಸುಗಳಲ್ಲಿ ಮೂಡುತ್ತಿರುವುದು ಆಘಾತಕಾರಿ ಬೆಳವಣಿಗೆಯೇ ಸರಿ. ಪ್ರೀತಿ ಸಹಜವಾದುದೇ? ಆದರೆ ಇದೇ ಪ್ರೀತಿ ಹಲವು ರೀತಿಯ ಗೊಂದಲಗಳಿಗೆ ಎಡೆಮಾಡುತ್ತದೆ. ಎರಿಕ್ ಫ಼್ರಾಮ್ ಎನ್ನುವ ಸಮಾಜಶಾಸ್ತ್ರಜ್ಞ ಹೇಳುವ ಹಾಗೆ ನಿಜವಾದ ಪ್ರೀತಿಯಲ್ಲಿ ಕೊಡುವ ಗುಣವಿದೆಯೇ ಹೊರತು ಕಸಿಯುವ, ಕಿತ್ತುಕೊಳ್ಳುವ, ವಿರೂಪಗೊಳಿಸುವ ಭಂಜನೆಯ ಗುಣವಿರುವುದಿಲ್ಲ. ಪೊಸ್ಸೆಸ್ಸಿವ್ ಗುಣ ಒಂದು ಹಂತದವರೆಗೆ ಓಕೆ. ಆದರೆ ಅದು ಅತಿರೇಕಕ್ಕೆ ತಿರುಗಿ ಏನೇ ಆಗಲಿ ಅವಳು ನನಗೆ ಬೇಕೆ ಬೇಕು, ಪಡೆದೆ ತೀರುತ್ತೇನೆ ಎನ್ನುವ ಹಠ ಪ್ರಯೋಗದ ನಡುವೆ ಅವಳು ಒಂದೊಮ್ಮೆ ಒನ್‌ವೇ ಪ್ರೀತಿ ನಿರಾಕರಿಸಿದ್ದೆಯಾದರೆ ಈತ ಇದ್ದಕ್ಕಿದ್ದಂತೆ ಸೈತಾನ ರೂಪ ತಾಳುತ್ತಾನೆ. ಅಷ್ಟರವರೆಗೆ ಚಿನ್ನ, ರನ್ನ ಎಂದು ಕೊಂಡಾಡಿದ ವ್ಯಕ್ತಿ ಆಕೆಯ ಸುಂದರ ಮುಖಕ್ಕೆ ಆಸಿಡ್ ಎರಚುವುದೋ, ಕತ್ತು ಕೊಯ್ಯುವ ಇಲ್ಲವೇ ಹಲ್ಲೆ ಮಾಡುವ ಹುಂಬತನಕ್ಕಿಳಿಯುತ್ತಾನೆ.
ಪ್ರೀತಿಯಲ್ಲಿ ಅದನ್ನು ಪಡೆಯಬೇಕೆನ್ನುವ ಪೊಸೆಸ್ಸಿವ್‌ನಿಂದಾಗಿ ಅನೇಕ ಸುಂದರ ಯುವತಿಯರಿಂದು ವಿಕಾರವಾಗಿದ್ದಾರೆ. ೧೯೯೯ ರ ಎಪ್ರಿಲ್ ೨೦ರಂದು ಹಸೀನಾ, ೨೦೦೧ರ ಫೆಬ್ರವರಿಯಲ್ಲಿ ನೂರಜಹಾನ್, ೨೦೦೨ರ ಆಗಸ್ಟ್ ೧೨ರಂದು ಶ್ರುತಿ ಸತ್ಯನಾರಾಯಣ, ೨೦೦೭ರ ಜೂನ್ ೨೪ರಂದು ಸರೋಜಿನಿ ಕಲಭಾಗ, ೨೦೦೭ರ ಅಗಸ್ಟ್ ೮ ರಂದು ಹಿನಾ ಫ಼ಾತಿಮಾ, ೨೦೦೮ರ ಅಕ್ಟೋಬರ್ ೨೧ರಂದು ಕಾರ್ತಿಕಾ ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಇವರೆಲ್ಲರೂ ಆಸಿಡ್ ಧಾಳಿಗೆ ತುತ್ತಾದವರು. ಇದು ನಿಜವಾದ ಪ್ರೀತಿಯೇ? ಖಂಡಿತಾ ಅಲ್ಲಾ. ನಿಜವಾದ ಪ್ರೀತಿಯು ಹೀಗೆ ಹಿಂಸೆ-ಸೇಡಿಗೆ ಪುಷ್ಟಿ ನೀಡುವುದಿಲ್ಲ ಎನ್ನುವ ಸತ್ಯಾಂಶ ತಿಳಿದಿರಬೇಕು.
ಈಚೆಗೆ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ರೈತನ ಮಗನಾದ ಆಕಾಶ ಎನ್ನುವ ಹುಡುಗ ರೋಷನಿ ಗುಪ್ತಾ ಎನ್ನುವ ಹುಡುಗಿಯನ್ನು ಕೊಡಲಿಯಿಂದ ಹಲ್ಲೆ ಮಾಡಿದ್ದ. ಮೇ ತಿಂಗಳಲ್ಲಿ ಮುಂಬೈನ ಬಾಂದ್ರಾದಲ್ಲಿ ಒಬ್ಬ ಯುವಕ ೨೩ ವರ್ಷ ವಯಸ್ಸಿನ ಯುವತಿಯ ಮುಖಕ್ಕೆ ಆಸಿಡ್ ಎರಚಿ ಪರಾರಿಯಾಗಿದ್ದು, ಹುಡುಗಿ ಇನ್ನೂ ಚೇತರಿಸಿಕೊಂಡಿಲ್ಲ. ಮೊಬೈಲ್ ಪರೀಕ್ಷಿಸಿದಾಗ ಅದರಲ್ಲಿ ೨೫೦ಕ್ಕೂ ಅಧಿಕ ರೋಮ್ಯಾಂಟಿಕ್ ಮೆಸೇಜ್‌ಗಳಿದ್ದವಂತೆ.  ಕಳೆದ ತಿಂಗಳು ಚೆನೈನ ಎಮ್‌ಜಿಆರ್ ಸ್ವಾಯತ್ತ ವಿಶ್ವವಿದ್ಯಾಲಯದಲ್ಲಿ ಜಾರ್ಖಂಡ್ ಮತ್ತು ಬಿಹಾರದ ಇಬ್ಬರು ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ವಿಷಯವಾಗಿ ಜಗಳಾಡಿ ಒಬ್ಬಾತ ಪಿಸ್ತೂಲಿನಿಂದ ಇನ್ನೊಬ್ಬನ ತಲೆಗೆ ಗುರಿಯಿಟ್ಟಿದ್ದನು. ಮುಂಬೈನ ಠಾಣಾದಲ್ಲಿ ೧೯ ವರ್ಷದ ಓರ್ವ ಯುವತಿಯನ್ನು ೨೨ ವರ್ಷದ ಒಬ್ಬ ಯುವಕ ಪ್ರೀತಿಸುತ್ತಿದ್ದ. ಅದು ಬಹುತೇಕ ಒನ್‌ವೇ ಲವ್ ಆಗಿತ್ತು. ಆ ಹುಡುಗಿ ಅವನನ್ನು ಮದುವೆಯಾಗಲು ಇಷ್ಟವಿಲ್ಲ ಎಂದದ್ದೇ ಆತ ನೇರವಾಗಿ ಅವರ ಮನೆಗೆ ತೆರಳಿ, ಕಲಹಕ್ಕಿಳಿದು ಆ ಹುಡುಗಿಯ ಕತ್ತಲ್ಲಿ ಚಾಕು ಹಾಕಿ ಬಿಟ್ಟ ಹಾಗೆಯೇ ತಾನೂ ಕತ್ತನ್ನು ಸೀಳಿಕೊಂಡ. ಸುದೈವಕ್ಕೆ ಇಬ್ಬರೂ ಬದುಕಿ ಉಳಿದರು. ಇಂತಹ ಅದೆಷ್ಟೋ ಘಟನೆಗಳು ಪ್ರೇಮ ವೈಫ಼ಲ್ಯ ಇಲ್ಲವೆ ನಿರಾಕರಣೆಯ ಹೆಸರಲ್ಲಿ ನಮ್ಮೂರಲ್ಲಿಯೂ ನಡೆಯುತ್ತಿವೆ.
ನಾವು ಎಲ್ಲಿ ಎಡವುತ್ತಿದ್ದೇವೆ. ಮೊಬೈಲ್..ಇದರ ಮೂಲಕವೇ ಎಲ್ಲಾ ಸಂಬಂಧಗಳಿಗೂ ಅವಕಾಶ ಕಲ್ಪಿಸುವುದರಿಂದ ಪ್ರಬುದ್ಧತೆ ಮತ್ತು ಪರಸ್ಪರರನ್ನು ಅರಿಯಲು ಅಲ್ಲಿ ಅವಕಾಶವೇ ಇಲ್ಲದಂತಾಗಿದೆ. ಮೊಬೈಲ್ ಪರಿಚಯದ ಹುಡುಗಾಟವೇ ಪ್ರೇಮವಾಗಿ ಅನೇಕ ಅನಾಹುತಗಳಿಗೆ ಕಾರಣವಾಗಿದೆ. ಹಗಲಿರುಳೆನ್ನದೇ ನಿರಂತರ ರೋಮ್ಯಾಂಟಿಕ್ ಮೆಸೇಜ್‌ಗಳನ್ನು ರವಾನಿಸುವುದೇ ಪ್ರೀತಿ ಎನ್ನುವುದನ್ನು ಯುವಸಮೂಹ ತಿಳಿದುಕೊಂಡಿದ್ದಾರೆ. ಪ್ರೇಮ ಎನ್ನುವುದು ತರಾತುರಿಯಲ್ಲಿ ಕುದುರುವ ವ್ಯವಹಾರವಲ್ಲ. ಹಾಗೆಯೇ ಮೋಹ ಸೆಳೆತಗಳನ್ನೇ ಹಂಬಲಿಸಿ ಪ್ರೀತಿಸುವದು ಸರಿಯೂ ಅಲ್ಲ. ಆದರೆ ಪ್ರೀತಿಯ ಮೌಲ್ಯವನ್ನು ಅರಿಯದೇ ಸಿಕ್ಕಾಪಟ್ಟೆ ಪ್ರೀತಿಸಿ, ನೈಜಪ್ರೀತಿಯನ್ನು ಅರಿಯುವ ತಾಳ್ಮೆ ಕಳೆದುಕೊಂಡ ಯುವಸಮೂಹ ಅನಾಹುತಕ್ಕೆ ನಾಂದಿಯಾಗಿತ್ತಿದ್ದಾರೆ.
ಪ್ರೀತಿಯನ್ನು ಒಂದು ಮೌಲ್ಯ ಎಂದು ಪರಿಗಣಿಸುವ ಮನೋಭಾವ ಬೆಳೆಯಬೇಕು. ಆ ದಿಶೆಯಲ್ಲಿ ನಮ್ಮ ಯುವಕರಿಗೆ ಸುತ್ತಲಿನ ಪರಿಸರ ಮಾರ್ಗದರ್ಶನ ನೀಡಬೇಕು. ಅದಕ್ಕೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಿರಬೇಕು. ಹಣವಿದ್ದಾಕ್ಷಣ ದೇಗುಲಗಳಿಗೆ ದಾನ ಧರ್ಮ ಮಾಡುತ್ತಾ, ಊರಿನಲ್ಲಿ ಗಣ್ಯ ವ್ಯಕ್ತಿಗಳೆಂದು ಗುರುತಿಸಿಕೊಳ್ಳುವ ವ್ಯಕ್ತಿಗಳ ಕಾಮಪುರಾಣವು ಹೆಚ್ಚಾದೊಡನೆ ಆ ಊರಿನ ಸಾಮಾನ್ಯ ಯುವಸಮೂಹವು ಕೂಡ ದೃತಿಗೆಡುತ್ತದೆ. ಮದುವೆಯಾಗಿ ಮಕ್ಕಳಿರುವ ಪುರುಷ ಅಥವಾ ಮಹಿಳೆಯೇ ಸಮಾಜದಲ್ಲಿ ಅನೈತಿಕ ವ್ಯವಹಾರದಲ್ಲಿ ಭಾಗಿಯಾಗುತ್ತಾನೆ/ಳೆ ಎಂದರೆ ಅವರಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಎನ್ನುವ ಪ್ರಶ್ನೆ ಮೂಡುತ್ತದೆ. ಇವುಗಳ ನಡುವೆಯೇ ಪ್ರೀತಿ ಪ್ರೇಮದ ಹೆಸರಿನಲ್ಲಿ ತಲೆಕೆಡಿಸಿಕೊಂಡು ಅದು ಫಲಿಸದೇ ಹೋದಾಗ ತಾಳ್ಮೆ ಕಳೆದುಕೊಂಡು ಹೀನ ಕೃತ್ಯಗಳಿಗೂ ಮುಂದಾಗುತ್ತಾನೆ. ಪ್ರೀತಿಸಿದವರು ಬೇರಾದಾಗ ಕತ್ತು ಕತ್ತರಿಸಿಕೊಳ್ಳುವ ಇಲ್ಲವೇ ಕೊಯ್ಯುವ, ವಿಷ ಸೇವಿಸುವ ಇಲ್ಲವೇ ಆಸಿಡ್ ಎರಚುವ ಕ್ರಿಯೆಗಳಿಗಿಂತಲೂ ಈ ಪ್ರೀತಿ ಎನ್ನುವುದು ಅಗಾಧವಾದುದು. ನಿಜವಾದ ಪ್ರಾಮಾಣಿಕ ಪ್ರೀತಿ ಪರಸ್ಪರರ ಖುಷಿ ಮತ್ತು ಏಳ್ಗೆಯನ್ನು ಬಯಸುತ್ತದೆಯೇ ಹೊರತು ಪರಸ್ಪರರ ದುರಂತ ಕತೆಗಳನ್ನಲ್ಲ ಎನ್ನುವುದನ್ನು ಎಲ್ಲಾ ಯುವ ಪ್ರೇಮಿಗಳು ಅರಿತುಕೊಳ್ಳಬೇಕು. ಪ್ರೀತಿಯೆನ್ನುವುದು ಪ್ರೀತಿಸಿದ ವ್ಯಕ್ತಿಯನ್ನು ಬಲವಂತವಾಗಿ ಪಡೆದು, ಅನುಭವಿಸುವುದಲ್ಲ. ಪ್ರೀತಿಸುವ ಜೀವಗಳು ಒಂದಾಗಬೇಕು, ಪ್ರತಿನಿತ್ಯ ಜೊತೆಗಿರಬೇಕು, ಪ್ರತಿಕ್ಷಣ ಮಾತನಾಡುತ್ತಿರಬೇಕು ಎನ್ನುವುದು ಮಾತ್ರ ಪ್ರೀತಿಯಲ್ಲ. ಅನಿವಾರ್ಯ ಕಾರಣದಿಂದ ಪ್ರೀತಿಸುವವರು ದೂರಾದಾಗ ಅವರನ್ನು ಹಿಂಸಿಸದೇ, ಅವರು ಸಂತೋಷವಾಗಿರಬೇಕು ಎಂದು ಬಯಸುವುದೇ ನಿಜವಾದ ಪ್ರೀತಿ. ಪ್ರೀತಿಯ ನಡುವೆಯೂ ತಮ್ಮ ಪೋಷಕರ ಸುಖ-ಸಂತೋಷವನ್ನು ಮನಗಂಡು ಅದನ್ನು ಈಡೇರಿಸುವವರು ನಿಜವಾದ ಮಕ್ಕಳು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ತಂದೆ ತಾಯಿಯ ನೈಜ ಪ್ರೀತಿಯನ್ನು ಅರಿಯೋಣವಲ್ಲವೇ..ಏನಂತಿರಾ


ಗ್ರಾಮಾಭಿವೃದ್ಧಿಯ ಹರಿಕಾರ-ಬಡವರು-ಕುಡುಕರ ಪಾಲಿನ ನಂದಾದೀಪ
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀಕ್ಷೇತ್ರಕ್ಕೆ ಕಳಂಕ ತಂದ ದುಷ್ಟ ಶಕ್ತಿಗಳ ಸಂಚು ಬಹಿರಂಗಗೊಳ್ಳಲಿ 
ವಿದ್ಯಾ ವಿವಾದಾಯ ಧನಂ ಮದಾಯ, ಶಕ್ತಿಃ ಪರೇಷಾಂ ಪರಪೀಡನಾಯ/
ಖಲಸ್ಯ ಸಾಧೋರ್ವಿಪರೀತ ಮೇತತ್ ಜ್ಞಾನಾಯ ದಾನಾಯ ಚ ರಕ್ಷಣಾಯ//
ಸುಂದರವಾದ ಸೂಕ್ತಿಯ ನಿಜವಾದ ಅರ್ಥ ಮನಗಂಡಾಗ ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳಲ್ಲಿನ ಸೂಕ್ಷ್ಮತೆ ಅರ್ಥೈವಿಸಿಕೊಳ್ಳಲು ಸಾಧ್ಯ. ತಾತ್ಪರ್ಯವಿಷ್ಟೆ ``ದುಷ್ಟನಿಗೆ ವಿದ್ಯೆಯೆನ್ನುವುದು ವಿವಾದಗಳಿಗೂ, ಧನವು ಅಹಂಕಾರಕ್ಕೂ ಶಕ್ತಿಯು ಇನ್ನೊಬ್ಬರನ್ನು ಪೀಡಿಸಲು ಉಪಯೋಗಕ್ಕೆ ಬರುತ್ತದೆ. ಆದರೆ ಸಜ್ಜನರಿಗೆ ಹೀಗಲ್ಲ. ವಿದ್ಯೆ-ಧನ-ಶಕ್ತಿಗಳು ಜ್ಞಾನ-ದಾನ-ರಕ್ಷಣೆಗಳಿಗಾಗಿಯೇ ಸಮಾಜಕ್ಕೆ ಅವರಿಂದ ಮೀಸಲಾಗುತ್ತದೆ". ಇದು ಸಜ್ಜನ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಬಾಳಿನಲ್ಲಿ ಅಕ್ಷರಶಃ ಸತ್ಯವೆನ್ನುವುದು ನನ್ನ ಭಾವನೆ. ಮಾತ್ರವಲ್ಲ ಶ್ರೀಕ್ಷೇತ್ರ ಭಕ್ತಾಭಿಮಾನಿಗಳೆಲ್ಲರದು. ದುಷ್ಟ ಶಕ್ತಿಗಳು  ತಮ್ಮ ತಂತ್ರವನ್ನು ಸಜ್ಜನರ ಮೇಲೆಯೇ ಪ್ರಯೋಗಿಸಿದರಲ್ಲ ಎನ್ನುವಾಗ ನಾವು ಎಲ್ಲಿದ್ದೇವೆ ಎನ್ನುವ ಸಂಶಯ ಕಾಡುತ್ತದೆ.
ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ದುರುದ್ದೇಶ ಪೂರ್ವಕ ಟೀಕೆಗಳಿಂದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮನಸ್ಸು ನೋಯಿಸುವಂತ ಘಟನೆ ವರದಿಯಾಗುತ್ತಿರುವುದು ಕಲಿಯುಗದ ಸಾರ್ವಭೌಮತೆ ತಿಳಿಸುತ್ತಿವೆಯೊ ಎನ್ನುವಂತಾಗಿದೆ. ಪರಶುರಾಮ ಸೃಷ್ಟಿಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೂಲ ಲಿಂಗಾತ್ಮನಾಗಿ ಮಂಜುನಾಥ ಸ್ವಾಮಿ ಪ್ರಸಿದ್ದಿ ಪಡೆದರೂ, ಕ್ಷೇತ್ರದ ಮಹಿಮೆ ಮಾತ್ರ ಪುಣ್ಯಭೂಮಿಯ ಪಟ್ಟಾಭಿಷಿಕ್ತ ಖಾವಂದರ ಧೀಮಂತ ವ್ಯಕ್ತಿತ್ವದಿಂದಲೇ ಜಗ-ದ್ವಿಖ್ಯಾತವಾಗಿದೆ ಎನ್ನುವುದು ನೂರರಷ್ಟು ಸತ್ಯ. ಹೆಗ್ಗಡೆಯವರ ದಕ್ಷತೆಯ ದಿಟ್ಟ ನಾಯಕತ್ವ ಗುಣ ಅಸಾಮಾನ್ಯವಾದುದು. ಪ್ರಶಸ್ತಿ, ಪುರಸ್ಕಾರಗಳನ್ನು ಹಣ ನೀಡಿ ಕೊಂಡುಕೊಳ್ಳುವ ಜನರಿರುವ ಸಾಮಾನ್ಯ ಜಗತ್ತಿನಲ್ಲಿ ಸೇವೆಯ ಮೂಲಕ ವಿಶ್ವಮಾನ್ಯತೆಗೆ ಪಾತ್ರರಾಗಿ ಡಾಕ್ಟರೇಟ್, ಪದ್ಮಶ್ರೀಗಳಂತಹ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
ಧರ್ಮಕ್ಷೇತ್ರ, ಪುಣ್ಯಕ್ಷೇತ್ರದ ಧರ್ಮಾಧಿಕಾರಿಯಾಗಿ ಬಡವರ ಪಾಲಿಗೆ ಬೆಳಕಾಗಿರುವ ಪೂಜ್ಯ ಖಾವಂದರ ಕುರಿತು ಇಲ್ಲದ ಸಲ್ಲದ ಆರೋಪ ಮಾಡಿರುವುದು, ಧರ್ಮವೇ ಘನತೆವೆತ್ತ ಧರ್ಮದ ನೆಲೆಬೀಡು ಧರ್ಮಸ್ಥಳದ ಪರಿಸರದಲ್ಲಿ ವಾಸವಾಗಿರುವ ನಾಗರಿಕರಿಗೆ ಇದು ಸಭ್ಯತೆಯೆನಿಸುತ್ತದೆಯೇ? ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಸಿಐಡಿ ತನಿಖೆ ಪ್ರಗತಿಯಲ್ಲಿರುವಾಗ ಗೌರವಯುತ ವ್ಯಕ್ತಿಯ ಹಾಗೂ ಘನತೆಯ ಶ್ರೀಕ್ಷೇತ್ರದ ಮೇಲೆ ಆರೋಪ ಮಾಡಿ ಜನತೆಯ ದೃಷ್ಟಿಯಲ್ಲಿ ತಪ್ಪಿತಸ್ಥರು ಎನ್ನುವ ಭಾವನೆ ಮೂಡಿಸುವುದು ಎಷ್ಟರಮಟ್ಟಿಗೆ ಸರಿ?
ಹಿಂಸೆಯೇ ನಿಷಿದ್ದವಾದ ಜೈನಕುಲದಲ್ಲಿ ಜನಿಸಿದ ವೀರೇಂದ್ರ ಹೆಗ್ಗಡೆಯವರು ಸಮಾಜದಲ್ಲಿ ನ್ಯಾಯ, ನೀತಿ, ಧರ್ಮಕ್ಕಾಗಿ ಅವಿರತ ಶ್ರಮಿಸಿದವರು. ಕರಾವಳಿ ಜಿಲ್ಲೆಗಳು ಮಾತ್ರವಲ್ಲದೇ ರಾಜ್ಯದಲ್ಲಿರುವ ಅನೇಕ ಪ್ರದೇಶಗಳಲ್ಲಿ ಸಾಮಾಜಿಕ-ಶೈಕ್ಷಣಿಕ ಸೇವೆಯೊಂದಿಗೆ ಗ್ರಾಮಾಭಿವೃದ್ಧಿಯ ಹರಿಕಾರರಾಗಿ, ಬಡವರ-ಮದ್ಯಮ ವರ್ಗದ ಜನತೆಯ ಸಮೃದ್ಧಿಯುತ ಜೀವನಕ್ಕೆ ಪ್ರೇರಕರಾಗಿದ್ದಾರೆ. ಕುಡಿತವೇ ಜೀವನವೆಂದು ಸುರಪಾನ ಮುಕ್ತರಾಗಿರುವ ಕುಟುಂಬದ ಯಜಮಾನರಿಗೆ ಮಧ್ಯವರ್ಜನಾ ಶಿಬಿರಗಳನ್ನು ಆಯೋಜಿಸಿ, ಸಮಗ್ರ ಜನತೆಗೆ ಶಾಂತಿ-ಸಮಾಧಾನ-ನೆಮ್ಮದಿಯ ಬಾಳ್ವೆಗೆ ಪಾತ್ರವಾಗಿರುವ ಹೆಗ್ಗಡೆಯವರ ಮೇಲಿನ ಆರೋಪಗಳ ಹಿಂದೆ ದುರುದ್ದೇಶ ಅಡಗಿದೆ ಎನ್ನುವುದು ಸತ್ಯ. ಘಟನೆಯ ಹಿಂದಿನ ಎಲ್ಲಾ ಮನಸ್ತಾಪ ಶೀಘ್ರವೇ ಶಮನಗೊಂಡು ಧರ್ಮಸ್ಥಳ ಕ್ಷೇತ್ರ ಹಾಗೂ ಪೂಜ್ಯ ಖಾವಂದರನ್ನು ನಂಬಿದ ಭಕ್ತ ಸಮೂಹದಲ್ಲಿ ಶಾಂತಿಯುತ, ನೆಮ್ಮದಿಯ ಬಾಳಿಗೆ ಮಂಜುನಾಥ ದೇವರು ಅನುಗ್ರಹಿಸಬೇಕು ಎನ್ನುವುದು ಸಕಲರ ಅಭಿಪ್ರಾಯ.
ಹೆಗ್ಗಡೆಯವರ ಮನಸ್ಸಿಗೆ ನೋವಾಗುವ ಘಟನೆಯಾದರೂ ಯಾವುದು?
ದೇಶದ ರಾಜಧಾನಿ ದೂರದ ದೆಹಲಿಯಲ್ಲಿ ಅಮಾನುಷವಾಗಿ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಅತ್ಯಾಚಾರ ಪ್ರಕರಣ ನಡೆದಾಗ ದೇಶ-ವಿದೇಶದ ಜನತೆ ತಮ್ಮಲ್ಲಿರುವ ಅಕ್ರೋಶ ವ್ಯಕ್ತಪಡಿಸಿದ್ದರು. ಆದರೆ ನಮ್ಮ ರಾಜ್ಯದ ಧರ್ಮದ ನೆಲೆಬೀಡು ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಪ್ರಕರಣ ರಾಜ್ಯದ ಕೆಲವು ಕಡೆ ಸುದ್ದಿ ಮಾಡಿತೇ ಹೊರತು ರಾಜ್ಯದ ಗಡಿಯನ್ನು ಕೂಡ ದಾಟಿಲ್ಲ. ದೆಹಲಿ ಹಾಗೂ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿನ ಭೀಕರತೆಗೇನು ಕಡಿಮೆಯಿರಲಿಲ್ಲ. ದೆಹಲಿಯ ೨೩ ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಎನ್ನುವ ಹುಡುಗಿಯ ಸಾವಿಗೆ ಕಣ್ಣಿರು ಸುರಿಸಿದ, ನಮ್ಮ ಜನ ಧರ್ಮಸ್ಥಳದ ೧೭ ವರ್ಷದ ಸೌಜನ್ಯಾಳ ಸಾವಿಗೆ ಮಾತ್ರ ಅಷ್ಟೊಂದು ಪ್ರಾಮುಖ್ಯತೆ ನೀಡಿಲ್ಲದಿರುವುದು ಬೇಸರದ ಸಂಗತಿ? ದೆಹಲಿಯ ಜೀವಕ್ಕೊಂದು ನ್ಯಾಯ, ಹಳ್ಳಿಯ ಜೀವಕ್ಕೊಂದು ನ್ಯಾಯವನ್ನು ಒದಗಿಸಿದ ನಾಗರಿಕರಲ್ಲಿಗ ಸಂಶಯದ ವಿಷಬೀಜವನ್ನು ಬಿತ್ತಲು ದುಷ್ಟಶಕ್ತಿಗಳು ಶ್ರಮಿಸುತ್ತಿವೆ.
ನ್ಯಾಯಕ್ಕೊಸ್ಕರ ಹೋರಾಡಿದ ಬಡ ಸೌಜನ್ಯಾಳ ಹೆತ್ತವರ ಹೋರಾಟಕ್ಕೆ ಪ್ರಕರಣ ನಡೆದು ವರ್ಷ ಒಂದಾದರೂ, ನ್ಯಾಯ ಸಿಕ್ಕಿಲ್ಲ. ಬಡ ಕುಟುಂಬದ ನೋವಿಗೆ ನ್ಯಾಯ ದೊರಕಿಸಿ ಕೊಡಬೇಕಾದ ನಮ್ಮ ಕಾನೂನು ಪಾಲಕರು ಹಾಗೂ ಕಾನೂನು ರಕ್ಷಕರು ಪ್ರಕರಣದ ನೈಜತೆಯನ್ನು ಭೇದಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವಾಗ ಸಮಾಜದ ವ್ಯವಸ್ಥೆಯ ಕುರಿತು ಪ್ರಶ್ನೆಗಳು ಎದುರಾಗುತ್ತದೆ. ದಿನದಿಂದ ದಿನಕ್ಕೆ ಸಂಶಯಾತ್ಮಕ ಪ್ರಶ್ನೆಗಳು ಹೆಚ್ಚುತ್ತಿವೆಯೇ ಹೊರತು ಉತ್ತರ ಮಾತ್ರ ಶೂನ್ಯವಾಗಿದೆ. ಹಣ, ಅಧಿಕಾರ ಬಲದಿಂದ ನ್ಯಾಯ ದೇವತೆಯ ಕಣ್ಣಿಗೆ ಶಾಶ್ವತವಾಗಿ ಬಟ್ಟೆ ಕಟ್ಟಲಾಗಿದೆ. ದೇಶದ ಅನೇಕ ಪ್ರಕರಣಗಳಲ್ಲಿ ಕಾನೂನು ದ್ವಿಮುಖವಾಗಿ ಸಾಗಿ ನ್ಯಾಯ ದೊರಕದ ಸ್ಥಿತಿ ನಿರ್ಮಾಣವಾಗಿದೆ. ಉಜಿರೆಯ ಸೌಜನ್ಯ ಪ್ರಕರಣದಲ್ಲೂ ನೈಜಅಪರಾಧಿಗಳು ಸಿಗದೆ, ಪೊಲೀಸರ ವಿಳಂಭದಿಂದ ಪೂಜ್ಯ ಹೆಗ್ಗಡೆ ಹಾಗೂ ಕ್ಷೇತ್ರದ ಹೆಸರನ್ನು ಕೆಡಿಸುವ ಷಡ್ಯಂತ್ರ ರೂಪುಗೊಂಡಿವೆ ಎನ್ನುವುದು ಮೇಲ್ಮುಖವಾಗಿ ಗೋಚರವಾಗುತ್ತದೆ.
ಅಂದು ನಡೆದದ್ದಾದರೂ ಏನು ಸ್ವಾಮಿ?
ಅಂದು ೨೦೧೨ ರ ಅ.೯ ರಂದು ಸಂಜೆ ಕಾಲೇಜಿನಿಂದ ಮನೆಗೆ ಹೊರಟ ಸೌಜನ್ಯಾ (೧೭) ಮನೆಗೆ ತಲುಪಲೇ ಇಲ್ಲ . ಮನೆಯಲ್ಲಿ ಮಗಳಿಗೋಸ್ಕರ ಕಾಯುತ್ತಿದ್ದ ಹೆತ್ತವರು ದಿನಂಪ್ರತಿ ಕಾಲೇಜಿನಿಂದ ಕ್ಲಪ್ತ ಸಮಯದಲ್ಲಿ ಆಗಮಿಸುತ್ತಿದ್ದ ಮಗಳು ಆಗಮಿಸದಿದ್ದಾಗ ಆತಂಕಗೊಂಡಿದ್ದರು. ಸ್ಥಳಿಯರ ಜೊತೆಗೂಡಿ ರಾತ್ರಿಯಿಡಿ ಹುಡುಕಿದರೂ ಮಗಳು ಮಾತ್ರ ಸಿಗಲೇ ಇಲ್ಲಾ. ಮರುದಿನ ಬೆಳಿಗ್ಗೆಯೂ ಹುಡುಕಾಟ ಮುಂದುವರಿಸಿದಾಗ ಮಧ್ಯಾಹ್ನದ ವೇಳೆಗೆ ನೇತ್ರಾವತಿ ಸ್ನಾನ ಘಟ್ಟದಿಂದ ಸ್ವಲ್ಪ ದೂರದಲ್ಲಿ ಮುಖ್ಯ ರಸ್ತೆಯಿಂದ ಬಲ ತಿರುವು ಮೂಲಕ ಪಾಂಗಾಳಕ್ಕೆ ಹೋಗುವ ರಸ್ತೆ ಬದಿಯ ಕಾಡಿನಲ್ಲಿ ಸೌಜನ್ಯಳ ಮೃತದೇಹ ಸಿಕ್ಕಿತ್ತು. ಹೆತ್ತ ಜೀವಗಳಿಗೆ ತಮ್ಮ ಮಗಳನ್ನು ಆ ಪರಿಸ್ಥಿತಿಯಲ್ಲಿ ನೋಡಿ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಆದರೆ ಹೆತ್ತವರ ನೋವು ಯಾರ ಮನಸ್ಸಿಗೂ ಅರ್ಥವಾಗಿಲ್ಲ. ಆ ಹೊತ್ತಿಗಾಗಲೇ ಅಪರಾಧಿಗಳು ತಮ್ಮ ರಕ್ತದ ಕೈಗಳನ್ನು ಪ್ರಸನ್ನೆಯಾಗಿ ಹರಿಯುತ್ತಿರುವ ನೇತ್ರಾವತಿಯಲ್ಲಿ ತೊಳೆದುಕೊಂಡು ಮನೆ ಸೇರಿದ್ದರು. ಆದರೆ ಸೌಜನ್ಯಳ ಹೆತ್ತ ಜೀವಗಳ ಪರಿಸ್ಥಿತಿಯನ್ನು ಓರ್ವ ತಂದೆಯಾಗಿಯೊ, ತಾಯಿಯಾಗಿಯೊ, ಅಣ್ಣ, ಅಕ್ಕ, ಬಂಧುವಾಗಿಯೋ ಮಾನವೀಯ ನೆಲೆಯಲ್ಲಿ ಯೋಚಿಸಿ ನೋಡಿದರೆ ಘಟನೆಯ ತೀವ್ರತೆ ಅರ್ಥವಾಗುತ್ತದೆ. ಆ ಮುಗ್ದ ಜೀವದ ಸಾವಿಗೆ ನ್ಯಾಯ ಒದಗಿಸಿಕೊಡ ಬೇಕಾಗಿದ್ದ ಆಗಿನ ಬಿಜೆಪಿ ಸರಕಾರ ಸರಿಯಾಗಿ ಆ ಘಟನೆಗೆ ನ್ಯಾಯ ಒದಗಿಸಿಕೊಡುವ ಕಿಂಚಿತ್ ಪ್ರಯತ್ನ ಕೂಡ ಮಾಡಿಲ್ಲ. ಈ ಪ್ರಕರಣದಲ್ಲಿ ಪೋಲಿಸರ ನಡೆಯೂ ಕೂಡ ಅನುಮಾನಕ್ಕೆ ದಾರಿ ಮಾಡಿ ಕೊಡುತ್ತಿದೆ. ಬಿಜೆಪಿ ಸರಕಾರ ಹಾಗೂ ಪೊಲೀಸ್ ಇಲಾಖೆ ಪ್ರಕರಣದ ಸೂಕ್ತ ತನಿಖೆ ಮಾಡಿದ್ದರೆ ಇಂದು ಧರ್ಮಸ್ಥಳ ಹಾಗೂ ಧರ್ಮವನ್ನು ಮೈಗೂಡಿಸಿಕೊಂಡ ವೀರೇಂದ್ರ ಹೆಗ್ಗಡೆಯವರ ಮೇಲೆ ವೃಥಾ ಆರೋಪಗಳು ಬರುತ್ತಿರಲಿಲ್ಲ ಎನ್ನುವುದು ಸ್ಪಷ್ಟ.
ಪ್ರಕರಣವನ್ನು ಆರಂಭದಲ್ಲಿಯೇ ಮುಚ್ಚಿಹಾಕುವ ಪ್ರಯತ್ನ ನಡೆದಿದ್ದವು ಅನ್ನೋದು ಸೌಜನ್ಯಾಳ ಹೆತ್ತವರ ಆರೋಪ. ಪ್ರಕರಣದಲ್ಲಿ ಕೆಲವೊಂದು ಪ್ರಭಾವಿ ವ್ಯಕ್ತಿಗಳ ಹೆಸರನ್ನು ತಳುಕು ಹಾಕಲಾಗಿದೆ. ಆರೋಪಿಗಳು, ಮೃತ ಸೌಜನ್ಯ ಹಾಗೂ ದೇವರಿಗೆ ಹೊರತಾಗಿ ಎಲ್ಲರೂ ಪ್ರಕರಣವನ್ನು ಕೇಳಿದ್ದಾರೆಯೇ ಹೊರತು ನೈಜತೆ ಏನೆಂಬುದು ಒಬ್ಬರಿಗೂ ತಿಳಿದಿಲ್ಲ. ಪ್ರಕರಣದ ತನಿಖೆ ನಡೆದು ನಿಜವಾದ ಆರೋಪಿಗಳಿಗೆ ಶಿಕ್ಷೆಯಾದರೆ ಸೌಜನ್ಯ ಎನ್ನುವ ಮುಗ್ದ ಆತ್ಮಕ್ಕೆ ಶಾಂತಿ ಸಿಗುತ್ತದೆ ಮಾತ್ರವಲ್ಲದೇ ಶ್ರೀ ಕ್ಷೇತ್ರದ ಮೇಲಿನ ಆರೋಪ ಹಾಗೂ ಹೆಗ್ಗಡೆಯವರ ಮೇಲಿನ ಕಳಂಕ ದೂರಾಗುತ್ತವೆ. ದೆಹಲಿ ಘಟನೆಯಂತೆ ಸೌಜನ್ಯಳ ಪ್ರಕರಣವನ್ನು ಕೇಂದ್ರ ಸರಕಾರ ಹಾಗೂ ಈಗಿನ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದಾಗ ಮಾತ್ರ ಈ ಘಟನೆಗೆ ನ್ಯಾಯ ಸಿಗಲು ಸಾಧ್ಯವಿದೆ.
ಸಿಕ್ಕಿಹಾಕಿಕೊಂಡ ಅಪರಾಧಿ?
ಸೌಜನ್ಯ ಕೊಲೆ ಪ್ರಕರಣ ಸಂಬಂಧ ಇನ್ನೊಂದು ವಾರದಲ್ಲಿ ಸರ್ಕಾರಕ್ಕೆ ಅಂತಿಮ ವರದಿ ನೀಡಲು ಸಿಐಡಿ ನಿರ್ಧರಿಸಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕುಟುಂಬ ವರ್ಗದ ಪಾತ್ರವಿದೆ ಎಂದು ಕೆಲವರು ಆಪಾದನೆ ಮಾಡಿದ ಹಿನ್ನೆಲೆಯಲ್ಲಿ, ಸರ್ಕಾರದ ಸೂಚನೆ ಪ್ರಕಾರ, ಹೆಚ್ಚುವರಿ ತನಿಖೆ ನಡೆಸಿದ ಸಿಐಡಿ ಈಗ ಅಂತಿಮ ಹಂತ ತಲುಪುತ್ತಿದೆ. ಪ್ರಾರಂಭಿಕ ತನಿಖೆಯಲ್ಲಿ ಸಿಐಡಿ ೨೦೧೩ ರ ಜನವರಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆ ವರದಿಯಲ್ಲಿ ಆರೋಪಿ ಸಂತೋಷ್ ರಾವ್ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದಾನೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹೆಚ್ಚುವರಿ ತನಿಖೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಿರುವ ಸಿಐಡಿ ಅಧಿಕಾರಿಗಳು, ಈಗ ಕೆಲವರು ಆರೋಪ ಮಾಡುತ್ತಿರುವ ವ್ಯಕ್ತಿಗಳು ಘಟನೆ ನಡೆದ ಸಂದರ್ಭದಲ್ಲಿ ಉಜಿರೆಯಲ್ಲಿ ಇರಲಿಲ್ಲ ಎಂಬ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಈ ಎಲ್ಲ ಅಂಶಗಳನ್ನು ಆಧರಿಸಿ, ಇನ್ನೊಂದು ವಾರದಲ್ಲಿ ಅಂತಿಮ ವರದಿ ನೀಡಲಿದೆ. ಪ್ರಕರಣದಲ್ಲಿ ಹೆಗ್ಗಡೆ ಕುಟುಂಬ ವರ್ಗದವರ ಕೈವಾಡವಿದೆ ಎನ್ನುವ ಆರೋಪ ವ್ಯಕ್ತವಾದ ನಂತರ ದಕ್ಷ ಅಧಿಕಾರಿ ಡಿಐಜಿ ಸೌಮೇಂದು ಮುಖರ್ಜಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್‌ಪಿ ಸಿರಿಗೌರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಆದರೆ ಹೊಸ ಆರೋಪ ಸಾಬೀತು ಮಾಡುವುದಕ್ಕೆ ಅಗತ್ಯವಾದ ಯಾವುದೇ ಅಂಶಗಳು ತನಿಖೆ ಸಂದರ್ಭದಲ್ಲಿ ಪತ್ತೆಯಾಗಿಲ್ಲ ಎನ್ನುವುದು ಅಧಿಕಾರಿಗಳ ಹೇಳಿಕೆ.
ವೈಜ್ಞಾನಿಕ ಪರೀಕ್ಷೆಯಲ್ಲಿ ರಾವ್ ಆರೋಪಿ:
ಮುಖ್ಯವಾಗಿ ಆರೋಪಿ ಸಂತೋಷ್ ರಾವ್ ಹಾಗೂ ಸೌಜನ್ಯ ಮೃತ ದೇಹದಲ್ಲಿ ದೊರೆತ ಅಂಶಗಳನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದಾಗ ಆತನೇ ಈ ಕೃತ್ಯ ಎಸಗಿದ್ದಾನೆ ಎನ್ನುವುದು ದೃಢಪಟ್ಟಿದೆ. ಈ ವಿಚಾರದ ಕುರಿತಾಗಿ ಸಿಐಡಿ ದೋಷಾರೋಪ ಪಟ್ಟಿಯಲ್ಲೂ ಹೇಳಿರುವುದನ್ನು ಗಮನಿಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆರೋಪಿ ಸಂತೋಷ್ ಕುಮಾರ್ ವಿಕೃತ ಮನಸ್ಥಿತಿಯವನಾಗಿದ್ದು, ಅಸಹಾಯಕ ಸ್ಥಿತಿಯಲ್ಲಿ ಸಿಕ್ಕ ಸೌಜನ್ಯಳ ಮೇಲೆ ಅತ್ಯಚಾರ ಎಸಗಿ ಕೊಲೆ ಮಾಡಿದ್ದ. ಪೊಲೀಸರು ಆತನನ್ನು ಬಂಧಿಸಿದಾಗ ಮೊದಲು ಕೊಲೆ ಮಾಡಿದ್ದು ಮಾತ್ರ ಹೌದು ಎಂದು ಒಪ್ಪಿದ್ದ. ನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ಅತ್ಯಾಚಾರದ ಸಂಗತಿಯನ್ನೂ ಬಾಯ್ಬಿಟ್ಟಿದ್ದ ಎಂದು ಸಿಐಡಿ ಮೂಲಗಳು ತಿಳಿಸಿವೆ. ಆತ ಅತ್ಯಂತ ವಿಕೃತವಾಗಿ ಅತ್ಯಾಚಾರ ಎಸಗಿದ್ದ. ಆ ಸಂದರ್ಭ ಆತನ ಮರ್ಮಾಂಗಕ್ಕೂ ಗಾಯವಾಗಿತ್ತು. ನಂತರ ಆತ ಸೌಜನ್ಯಳ ಗುಪ್ತಾಂಗದೊಳಗೆ ಮರಳನ್ನು ಹಾಕಿ ಪರಾರಿಯಾಗಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸೌಜನ್ಯ ಹತ್ಯೆಯನ್ನು ಸಂತೋಷ್ ರಾವ್ ಮಾಡಿದ್ದಾನೆ ಎನ್ನುವುದಕ್ಕೆ ಬೇಕಾದ ಸಾಕ್ಷ್ಯಗಳು ನಮ್ಮ ಬಳಿ ಇದೆ. ಸಿಬಿಐ ಸೇರಿದಂತೆ ಬೇರೆ ಯಾವುದೇ ತನಿಖಾ ಸಂಸ್ಥೆ ತನಿಖೆ ನಡೆಸಿದರೂ, ಇದಕ್ಕಿಂತ ಭಿನ್ನವಾದ ಸಂಗತಿ ಹೊರಬರಲು ಸಾಧ್ಯವಿಲ್ಲ ಎನ್ನುವುದನ್ನು ಸಿಐಡಿ ಅಧಿಕಾರಿಗಳು ಬಹಿರಂಗವಾಗಿ ಸವಾಲು ಹಾಕಬಲ್ಲರು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನುವಾಗ ಹೆಗ್ಗಡೆಯವರ ಮೇಲಿನ ಆರೋಪ ಷಡ್ಯಂತ್ರ ಎನ್ನುವುದು ಸ್ಪಷ್ಟ ತಾನೇ?
ಪ್ರಕರಣದ ನಂತರದಲ್ಲಿ ಹೆಗ್ಗಡೆಯವರು ಏನೆನ್ನುತ್ತಾರೆ?
ಸೌಜನ್ಯಾ ಅತ್ಯಾಚಾರ -ಕೊಲೆ ಪ್ರಕರಣ ಹಾಗೂ ಧರ್ಮಸ್ಥಳದಲ್ಲಿ ನಡೆದ ಜೋಡಿ ಕೊಲೆಯು ಕ್ಷೇತ್ರದಿಂದ ಹೊರಗೆ ನಡೆದಿದ್ದರೂ ಈ ಬಗ್ಗೆ ಸಮರ್ಪಕವಾದ ತನಿಖೆ ನಡೆಸುವಂತೆ ಘಟನೆಯ ಬೆನ್ನಲ್ಲೇ ಆಗಿನ ಗೃಹ ಸಚಿವರಿಗೆ ದೂರವಾಣಿ ಕರೆ ಮಾಡಿ ಒತ್ತಾಯಿಸಿದ್ದೆ. ಮುಂದೆ ಸಿಐಡಿ ತನಿಖೆಗೆ ಆಗ್ರಹಿಸಿದ್ದೆ. ತಾನಾಗಲಿ, ತನ್ನ ಕುಟುಂಬದವರಾಗಲಿ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ.  ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ತನ್ನ ತಮ್ಮನ ಮಗ ನಿಶ್ಚಲನ ಹೆಸರನ್ನು ಎಳೆಯಲಾಗಿದೆ. ಆತ ನ್ಯೂಯಾರ್ಕ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ. ಘಟನೆ ನಡೆದ ಸಂದರ್ಭದಲ್ಲೂ ಆತ ಅಲ್ಲಿಯೇ ಇದ್ದ ಎಂದು ಸ್ಪಷ್ಟಪಡಿಸಿದ ಹೆಗ್ಗಡೆ ಪಾಸ್‌ಪೋರ್ಟ್ ಮತ್ತು ಬ್ಯಾಂಕ್ ವ್ಯವಹಾರದ ದಾಖಲೆಗಳನ್ನು ಮುಂದಿಟ್ಟಿದ್ದರು. ಸೌಜನ್ಯಾ ಕೊಲೆ ನಡೆದ ಬಳಿಕ ಮನೆಯವರು ತನ್ನ ಬಳಿ ಬಂದಿದ್ದರು. ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದೆ. ಆ ಬಳಿಕ ಅವರ ಮನೆಗೆ ನಾಗರಿಕ ಸೇವಾ ಟ್ರಸ್ಟ್‌ನವರು, ತಿಮರೋಡಿ ಮಹೇಶ್ ಶೆಟ್ಟಿ, ಕೇಮಾರು ಶ್ರೀಗಳು ಭೇಟಿ ನೀಡಿದ ಬಳಿಕ ಇಡೀ ಪ್ರಕರಣ ತಿರುವು ಪಡೆದಿದೆ.
ನನ್ನ ಸೇವಾ ಕಾರ್ಯಗಳನ್ನು ಎಂದಿಗೂ ನಿಲ್ಲಿಸುವುದಿಲ್ಲ. ನನ್ನಲ್ಲಿ ಆತ್ಮವಿಶ್ವಾಸ, ಆತ್ಮಾಭಿಮಾನದ ಕೊರತೆ ಆಗಿಲ್ಲ. ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ಬಗ್ಗೆ ಸಂಪೂರ್ಣ ಜವಾಬ್ದಾರಿ ಸರ್ಕಾರ, ಬೆಳ್ತಂಗಡಿ ಶಾಸಕರದ್ದು. ನಾನು ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರದ ಅಭಿಮಾನಿಗಳ ಬೃಹತ್ ಸಮಾವೇಶದಲ್ಲಿ ಹೇಳಿಕೆ ನೀಡಿದ್ದಾರೆ.
ಸೌಜನ್ಯಾ ಪ್ರಕರಣದ ತನಿಖೆಗೆ ಪೂರ್ಣ ಸಹಕಾರ ನೀಡಿದ್ದೇನೆ. ಆಕೆ ಕಾಲವಾದಾಗ ಹೃದಯ ಪೂರ್ವಕವಾಗಿ ಅವರ ಮನೆಯವರೊಂದಿಗೆ ಸ್ಪಂದಿಸಿದ್ದೇನೆ. ತನಿಖೆ ಮಾಡುವುದು ಸರ್ಕಾರ ಹಾಗೂ ಪೊಲೀಸರ ಕೆಲಸ. ತನಿಖೆಯಾಗಿಲ್ಲ ಎಂದರೆ ಅದು ಪೊಲೀಸರು ಹಾಗೂ ಸರ್ಕಾರಕ್ಕೆ ಅವಮಾನ. ಆರಂಭದಲ್ಲೇ ಸಿಐಡಿ ತನಿಖೆ ನಡೆಸಿದ್ದು, ತನಿಖೆಯ ವಿಚಾರಗಳನ್ನು ಅವರು ಬಹಿರಂಗ ಪಡಿಸಿರಲಿಲ್ಲ. ಈ ಬಗ್ಗೆ ಅವರನ್ನು ಕೇಳಿದಾಗ ತನಿಖಾ ಸಂದರ್ಭ ಮಾಹಿತಿಗಳನ್ನು ಬಹಿರಂಗ ಪಡಿಸಲು ಕಾನೂನು ಪ್ರಕಾರ ಸಾಧ್ಯವಿಲ್ಲ ಎಂದಿರುವುದೇ ಜನರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಮುಂದೆ ಸಿಬಿಐ ಅಥವಾ ಯಾವುದೇ ತನಿಖೆಗಳಾಗಲಿ ಅದನ್ನು ನಡೆಸುವುದು ಮತ್ತು ಸತ್ಯ ಹೊರತರುವ ಜವಾಬ್ದಾರಿ ಎಂದು ಸ್ಪಷ್ಟವಾಗಿ ನುಡಿದಿದ್ದರು.
ಧರ್ಮಸ್ಥಳದಲ್ಲಿ ಯಾವುದೇ ಭೂ ಮಾಫಿಯಾ ಇಲ್ಲ. ಯಾಕೆ ತಪ್ಪು ಅಭಿಪ್ರಾಯಗಳು ಮೂಡುತ್ತಿವೆ ಎನ್ನುವುದು ತಿಳಿಯುತ್ತಿಲ್ಲ. ಶ್ರೀಮಂತರು ನಮ್ಮಿಂದ ದೂರ ಇದ್ದಾರೆ ಎಂದು ತಿಳಿದುಕೊಂಡಿದ್ದೆ. ಆದರೆ ಇಂದು ಬಡವರನ್ನೂ ದೂರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕೆಲವು ಶಕ್ತಿಗಳು ಅನಗತ್ಯ ಗೊಂದಲ ಹುಟ್ಟಿಸುವ ಪ್ರಯತ್ನ ನಡೆಸಿದ್ದಾರೆ. ನನ್ನ ಕೆಲಸ ನಾನು ನಿಲ್ಲಿಸುವುದಿಲ್ಲ. ಇಂದಿನಿಂದ ಹೊಸ ಹುರುಪಿನಿಂದ, ಹೊಸ ಯೋಜನೆಗಳನ್ನು ಸಾಕಾರಗೊಳಿಸಲು ಶ್ರಮಿಸುತ್ತೇನೆ.
ಧರ್ಮದ ನೆಲೆಬೀಡು ಧರ್ಮಸ್ಥಳದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೆ ಪೊಲೀಸರ, ಸರಕಾರದ ವೈಫಲ್ಯದಿಂದಾಗಿ ತನಿಖೆ ನಡೆದಿಲ್ಲದಿರುವುದೇ ಇಂದು ಹೆಗ್ಗಡೆ ಹಾಗೂ ಶ್ರೀಕ್ಷೇತ್ರಕ್ಕೆ ಮಸಿ ಬಳಿಯುವ ಕಾರ್ಯವಾಗಿದೆ. ಇಲಾಖೆ ಸೂಕ್ತ ರೀತಿಯಲ್ಲಿ ಪ್ರಕರಣವನ್ನು ಬೇದಿಸಿ, ಮುಗ್ದೆಯ ಆತ್ಮಕ್ಕೆ ಶಾಂತಿ ದೊರಕಿಸುವುದರೊಂದಿಗೆ ಅಂಟಿಕೊಂಡಿರುವ ಕಳಂಕವನ್ನು ಹೋಗಲಾಡಿಸಬೇಕು. ಸತ್ಯತೆ ಜಗತ್ತಿನ ಜನತೆಗೆ ತಿಳಿಯಬೇಕು. ತಪ್ಪು ಯಾರು ಮಾಡಿದ್ದರೂ, ಕಾನೂನಿನ ಮಟ್ಟಿಗೆ ಎಲ್ಲರೂ ಸಮಾನ ಎನ್ನುವ ಭಾವನೆ ನಮ್ಮದು. ಆದ್ದರಿಂದ ಈ ಪ್ರಕರಣವು ಶೀಘ್ರದಲ್ಲಿ ಇತ್ಯರ್ಥವಾಗಲಿ. ಮುಗ್ದೆ ಸೌಜನ್ಯಳ ಆತ್ಮಕ್ಕೆ ಶಾಂತಿ ದೊರಕಲಿ. ಕ್ಷೇತ್ರಕ್ಕೆ ಅಂಟಿದ ಕಪ್ಪು ಕಲೆ ಹಾಗೂ ಹೆಗ್ಗಡೆಯವರ ಮೇಲಿನ ಕಳಂಕಗಳು ದೂರಾಗಲಿ ಎನ್ನುವುದು ಎಲ್ಲರ ಹಾರೈಕೆ.

ಗಣ್ಯರು ಏನಂತಾರೆ? 
ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಅಪನಂಬಿಕೆ ಬರುವಂತಹ ಸಂಚುಗಳು ನಡೆಯುತ್ತಿದೆ. ಧರ್ಮಸ್ಥಳದಂತಹ ಕ್ಷೇತ್ರಗಳ ಮೇಲಿನ ನಂಬಿಕೆ ಹೊರಟು ಹೋದರೆ ಶ್ರದ್ಧಾ ಕೇಂದ್ರಗಳೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. 
ಡಾ.ಡಿ.ವೀರೇಂದ್ರ ಹೆಗ್ಗಡೆ-ಧರ್ಮಾಧಿಕಾರಿ, ಧರ್ಮಸ್ಥಳ

ಕ್ಷುಲ್ಲಕ ವಿಚಾರವನ್ನು ಮುಂದಿಟ್ಟು, ಕೆಲವು ದುಷ್ಕರ್ಮಿಗಳು ಮಾತನಾಡುತ್ತಿದ್ದು, ಸಿಐಡಿ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರದ ಚಾರಿತ್ರ್ಯಹರಣ ಮಾಡುವುದಕ್ಕೆ ಪೂರ್ಣ ವಿರಾಮ ಹಾಕಬೇಕು. ಈ ಕುರಿತು ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳ ಗಮನಕ್ಕೆ ತಂದು ಸತ್ಯಾಂಶ ಹೊರತರುವಲ್ಲಿ ಪ್ರಯತ್ನಿಸುತ್ತೇನೆ.
ವಿನಯಕುಮಾರ್ ಸೊರಕೆ-ನಗರಾಭಿವೃದ್ಧಿ ಸಚಿವ 

ತುಳುನಾಡಿನ ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆ ತರುವಂತಹ ಶಕ್ತಿಗಳನ್ನು ಧೈರ್ಯವಾಗಿ ಎದುರಿಸುತ್ತೇವೆ. ಸಮಾಜವು ಕ್ಷೇತ್ರದೊಂದಿಗಿದೆ. ಪ್ರತಿಭಟನೆಗಳು ಪೊಲೀಸರ ವಿರುದ್ಧ ನಡೆದು ಸತ್ಯ ಹೊರಬರಲಿ. ಎಂದೆಂದಿಗೂ ಸತ್ಯದ ಜೊತೆ ನಾವಿದ್ದೇವೆ.
ಡಾ.ಎಂ.ಎನ್.ರಾಜೇಂದ್ರಕುಮಾರ್-ಅಧ್ಯಕ್ಷ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್.


ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಡಾ.ಹೆಗ್ಗಡೆಯವರ ಹೆಸರನ್ನು ಎಳೆತಂದು ಅವರ ಗೌರವಕ್ಕೆ ಚ್ಯುತಿ ತರಲು ಪ್ರಯತ್ನಿಸಿರುವುದು ಖಂಡನೀಯ. ಧರ್ಮಾಧಿಕಾರಿಯವರ ನೋವು ನಮ್ಮೆಲ್ಲರ ನೋವಾಗಿದೆ. ಅವರು ನಂಬಿದಂತ ಸತ್ಯ ಅವರನ್ನು ಕಾಪಾಡಿಕೊಂಡು ಬರುತ್ತದೆ. ಡಾ.ಎಂ.ಮೋಹನ್ ಆಳ್ವ-ಅಧ್ಯಕ್ಷ, ಆಳ್ವಾಸ್ ಶಿಕ್ಷಣ ಸಂಸ್ಥೆ.












ಪತಿಯನ್ನು ಕಳೆದುಕೊಂಡ  ಮಹಿಳೆ ಅಮಂಗಲೆಯಲ್ಲ-ಆಕೆ ಸುಮಂಗಲೆ

ಕುದ್ರೋಳಿಯಲ್ಲಿ ಇಬ್ಬರು ವಿಧವೆಯರು ಶಾಶ್ವತ ಅರ್ಚಕಿಯರಾಗಿ ನೇಮಕ-ಪೂಜಾರಿ ಸಾಧನೆ.

ಯತ್ರನಾರ್ಯಸ್ತು ಪೂಜ್ಯಂತೆ ರಮಂತೆ ತತ್ರದೇವತಾ' ಎಲ್ಲಿ ಸ್ತ್ರೀಯರು ಸಂತೋಷದಿಂದ ಬದುಕುತ್ತಾರೋ ಅಲ್ಲಿ ದೇವತೆಗಳು ನೆಲೆಯಾಗುತ್ತಾರಂತೆ. ಭಾರತೀಯ ಪರಂಪರೆಯಲ್ಲಿ ಮಹಿಳೆಗೆ ಮಹತ್ವದ ಸ್ಥಾನವಿದೆ. ಹೆಣ್ಣು ಪ್ರತಿಯೊರ್ವನ ಜೀವನದಲ್ಲಿಯೂ ಪ್ರಥಮವಾಗಿ ತಾಯಿಯಾಗಿ ಮಗುವಿಗೆ ಎದೆಹಾಲಿನೊಂದಿಗೆ ಮಾತೃಪ್ರೀತಿ ಉಣಬಡಿಸುತ್ತಾಳೆ. ಸ್ತ್ರೀಯು ವ್ಯಕ್ತಿಯೊರ್ವನ ಬಾಳಿನಲ್ಲಿ ಹೆಂಡತಿಯಾಗಿ, ಅಕ್ಕ, ತಂಗಿ, ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ, ಅಜ್ಜಿ, ಸ್ನೇಹಿತೆಯಾಗಿ ಕಾಣಿಸಿಕೊಳ್ಳುತ್ತಾಳೆ. ಪ್ರತಿಯೊಂದು ಶುಭ ಕಾರ್ಯಕ್ಕೂ ತಾಯಿ, ಅಮ್ಮನ ಹಾರೈಕೆಯೊಂದಿದ್ದರೆ ಯಶಸ್ಸು ದಾಖಲಿಸಬಹುದು ಎನ್ನುವುದು ಎಲ್ಲರ ನಂಬಿಕೆ ಮಾತ್ರವಲ್ಲ ಅದು ನಿಜವು ಕೂಡ.
ಇಷ್ಟೆಲ್ಲಾ ಹೊಗಳಿಕೆಗೆ ಅರ್ಹವಾಗುವ ಮಹಿಳೆಯು ಸಮಾಜದಲ್ಲಿಂದು ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಶೋಷಣೆಗಳಿಗೆ ತುತ್ತಾಗುವುದು ಮಾತ್ರವಲ್ಲದೇ ಪ್ರತಿಯೊರ್ವರ ದೃಷ್ಟಿಯಲ್ಲಿಯೂ ಕಾಮದ ಬಿಂದುವಾಗಿ ಬಿಂಬಿಸಿಕೊಳ್ಳುತ್ತಾಳೆ ಅಲ್ಲಾ ನೋಡುಗ ಕಾಮುಕರ ದೃಷ್ಟಿಯಲ್ಲಿ ಆ ರೀತಿ ಕಾಣಿಸಿಕೊಳ್ಳುತ್ತಾಳೆ. ಮದುವೆಯಾಗಿ ಗಂಡನೊಂದಿಗೆ ಸುಖಸಂಸಾರ ಸಾಗಿಸುತ್ತಿರುವಾಗ ಹೆಣ್ಣಿಗೆ ಎಲ್ಲಿಲ್ಲದ ಮಾನ್ಯತೆ, ಸಮಾಜದಲ್ಲಿ, ಕುಟುಂಬದಲ್ಲಿ ಯಾವುದೇ ಶುಭ ಕಾರ್ಯವಾಗುವುದಿದ್ದರೂ, ಮಹಿಳೆಗೆ ಪ್ರಥಮ ಆದ್ಯತೆಯೊಂದಿಗೆ ಆಕೆಯೇ ಶುಭ ಮೂಹೂರ್ತ ನಿಗದಿಗೊಳಿಸುತ್ತಾಳೆ. ಹೆಣ್ಣು ಅಥವಾ ಪುರುಷನಿಗೆ ಮದುವೆ ಎನ್ನುವುದು ಒಂದು ಸಂಸ್ಕಾರ. ಹಿಂದು ಪದ್ದತಿಯಂತೆ ಸಪ್ತಪದಿ ತುಳಿದು ಮದುವೆಯಾಗುವ ಗಂಡು ಹೆಣ್ಣುಗಳು ಮುಂದಿನ ದಿನದಲ್ಲಿ ಸಮಾಜದ ಕಣ್ಣಿಗೆ ಗಂಡ-ಹೆಂಡಿರಾಗಿ ಬಾಳುವೆ ನಡೆಸುತ್ತಾರೆ. ಮದುವೆಯಾಗುವುದಕ್ಕಿಂತ ಮುಂಚೆ ಹೆಣ್ಣಿಗೆ  ಗೌರವ ಸಿಗುತ್ತದೆ. ಮದುವೆ ಎನ್ನುವ ಮೂರಕ್ಷರದ ಸಂಸ್ಕಾರದಲ್ಲಿ ಮಾಂಗಲ್ಯ ಎನ್ನುವ ಕರಿಮಣಿಯ ಬಂಧನದೊಂದಿಗೆ ಗಂಡ-ಹೆಂಡಿರಾಗಿ ಸಮಾಜದ ಕಣ್ಣಿನಲ್ಲಿ ಆಕೆ ಸುಮಂಗಲಿಯಾಗುತ್ತಾಳೆ. ವಿಧಿವಷಾತ್ ಆಕಸ್ಮಿಕವಾಗಿ ಗಂಡ ಮಡಿದರೆ ಆಕೆ ಅಮಂಗಲಿಯಾಗುತ್ತಾಳಂತೆ? ಅಲ್ಲಿಯವರೆಗೆ ಸಮಾಜದಲ್ಲಿ ದೊರಕುತ್ತಿದ್ದ ಮಾನ-ಮರ್ಯಾದೆಗಳು ಹೆಣ್ಣಿಗೆ ಗಂಡ ಇಹಲೋಕ ತೊರೆದ ಮೇಲೆ ಇಲ್ಲವಾಗುತ್ತದೆ. ಯಾವುದೇ ಶುಭಕಾರ್ಯದಲ್ಲಿ ಭಾಗವಹಿಸುವ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ತಾನು ಹೆತ್ತ ಮಕ್ಕಳಿಗೆ ಮದುವೆ ಮಾಡುವಾಗಲೂ ಕೂಡ ಗಂಡನನ್ನು ಕಳೆದುಕೊಂಡ ಹೆಂಗಳೆಯರು ವೇದಿಕೆಯಲ್ಲಿ ಕಂಗೊಳಿಸುವ ಅವಕಾಶವಿಲ್ಲದೆ, ಸಮಾರಂಭದಲ್ಲಿ ಯಾವುದೋ ಮೂಲೆಯಲ್ಲಿಯೋ ನಿಂತು ಅಥವಾ ಅಲ್ಲಿಗೆ ಬರದೆ ದುಃಖದಿಂದ ಸಂತೋಷ ಅನುಭವಿಸಬೇಕಾದ ಪರಿಸ್ಥಿತಿ. ಸಮಾಜದಲ್ಲಿರುವ ಇಂತಹ ದುಸ್ಥಿತಿ ಮನಗಂಡ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರು ಛಲಬಿಡದೆ ಅವರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ಶ್ರಮಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನವರಾತ್ರಿಯ ಶುಭ ಮಹೂರ್ತದಲ್ಲಿ ಪತಿಯನ್ನು ಕಳೆದುಕೊಂಡ ಜಿಲ್ಲೆಯ ಇಬ್ಬರು ಮಹಿಳೆಯರಿಗೆ ಗೋಕರ್ಣನಾಥೇಶ್ವರ ಹಾಗೂ ಅನ್ನಪೂರ್ಣೇಶ್ವರಿ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿ, ಪೂಜೆ-ಆರತಿಯೊಂದಿಗೆ ಪ್ರಸಾದ ವಿತರಣೆಗೆ ಅವಕಾಶ ಕಲ್ಪಿಸಿ, ದೇಶದಲ್ಲಿಯೇ ಪ್ರಥಮ ಬಾರಿಗೆ ವಿಧವೆಯರಿಗೆ ದೇವಳದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯಲಾಯಿತು.
ಸಾಮಾಜಿಕ ಸುಧಾರಕ ನಾರಾಯಣಗುರುಗಳ ಮೂಲಕ ಬಿಲ್ಲವ ಸಮಾಜವಿಂದು ಬದಲಾವಣೆಯ ಬೆಳಕು ಕಾಣುತ್ತಿದೆ. ಕುದ್ರೋಳಿಯಲ್ಲಿ ನಾರಾಯಣಗುರುಗಳು ಗೋಕರ್ಣನಾಥೇಶ್ವರನ್ನು ಪ್ರತಿಷ್ಠಾಪಿಸಿ, ಸ್ವಚ್ಚತೆಗೆ ಪ್ರತಿದ್ದವಾಗಿರುವ ಈ ಕ್ಷೇತ್ರದಲ್ಲಿ ಈಗ ಬದಲಾವಣೆಯ ಬೆಳಕು ಕಾಣಿಸುತ್ತಿದೆ. ಇತಿಹಾಸ ಪ್ರಸಿದ್ಧಿ ಪಡೆದ ಈ ಕ್ಷೇತ್ರ ಈಗ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಗೆ ನಾಂದಿಯಾಗಿದೆ.
ಮನುಷ್ಯರೆ ಹಾಕಿಕೊಂಡಿರುವ ಬಂಧನದಲ್ಲಿ ವಿಧವೆಯರು ಸಾಮಾಜಿಕವಾಗಿ ಯಾವುದೇ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಸಮಾಜದಿಂದ ಸಮ್ಮತವಾಗಿಲ್ಲ. ಪುರಾತನವಾದ ಬಂಧನವನ್ನು ಕಳಚಿಕೊಂಡು ವಿಧವೆಯರು ಕೂಡ ಪುಣ್ಯಕಾರ್ಯದಲ್ಲಿ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬಹುದು ಎನ್ನುವುದಕಷ್ಟೆ ಸೀಮಿತವಾಗಿರದೆ, ದೇವರ ಪೂಜೆ ಮಾಡುವ ಅರ್ಚಕರ ಸ್ಥಾನಕ್ಕೂ ಅರ್ಹರು ಎನ್ನುವುದನ್ನು ಸಾಧಿಸಿ ತೋರಿಸಿದವರು ಪೂಜಾರಿ.
ಇಬ್ಬರು ವಿಧವೆಯರಿಗೆ ಕುದ್ರೋಳಿ ಕ್ಷೇತ್ರದಲ್ಲಿ ಶಾಶ್ವತ ಅರ್ಚಕರಾಗಿ ದೇವರ ಪೂಜಾ ಕೈಂಕರ್ಯ ಕೈಗೊಳ್ಳಲಿದ್ದಾರೆ ಎಂದಾಗ ಪತ್ರಿಕಾ ಹೇಳಿಕೆಗಳ ಮೂಲಕ ಖಂಡಿಸಿದ್ದರು. ಎರಡು ವರ್ಷದ ಹಿಂದಿನ ನವರಾತ್ರಿಯಲ್ಲಿ ವಿಧವೆಯರು ರಥ ಎಳೆದಾಗ ಸಂಪ್ರದಾಯವಾದಿಗಳು ಹೌಹಾರಿದ್ದರು. ಮತ್ತೊಮ್ಮೆ ಈ ಕ್ಷೇತ್ರದಲ್ಲಿ ವಿಧವೆಯರೆ ಚಂಡಿಕಾಯಾಗದಲ್ಲಿ ಪಾಲ್ಗೊಳ್ಳುವ ಮೂಲಕ ವಿಧವೆಯರು ಅಮಂಗಳೆಯರಲ್ಲ ಎನ್ನುವ ಸಂದೇಶ ಸಾರಿದ್ದರು. ಪೂಜಾರಿಯವರ ತೀರ್ಮಾನಕ್ಕೆ ಸಮಾಜದಿಂದ ಹಲವಾರು ವಿರೋಧಗಳು ಬಂದಿದ್ದರೂ, ಪೂಜಾರಿಯವರ ಛಲ ಮತ್ತು ಸ್ವತಂತ್ರ ನಿಲುವಿನಿಂದಾಗಿ ವಿಧವೆಯರಿರ್ವರನ್ನು ಶಾಶ್ವತ ಅರ್ಚಕಿಯರಾಗಿ ಬಹುವಿರೋಧದ ನಡುವೆಯೂ ಸಮರ್ಥವಾಗಿ ನೇಮಕಗೊಳಿಸಿದ್ದಾರೆ.
ಶೂದ್ರರಿಗೆ ದೇವಸ್ಥಾನದ ಮೆಟ್ಟಿಲು ತುಳಿಯುವ ಅವಕಾಶವಿಲ್ಲ ಎನ್ನುವ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಹಿಂದುಳಿದವರು, ಅಸ್ಪೃಶ್ಯರಿಗೂ ದೇವಸ್ಥಾನಕ್ಕೆ ಹೋಗುವ ಹಕ್ಕಿದೆ, ದೇವರನ್ನು ಪೂಜಿಸುವ ಅವಕಾಶವಿದೆ ಎನ್ನುವ ಮೂಲಕ ಶ್ರೀ ಕ್ಷೇತ್ರದ ಸ್ಥಾಪನೆಗೈದ ನಾರಾಯಣಗುರುಗಳು ಮಾನವತಾವಾದದ ಪ್ರತಿಪಾದಕರಾಗಿದ್ದಾರೆ. ಮೇಲು-ಕೀಳು ಎನ್ನುವ ಮನುಷ್ಯ ನಿರ್ಮಿತ ಗೋಡೆಯನ್ನು ಕೆಡವಿ ಕೆಳವರ್ಗದವರಲ್ಲೂ ಸ್ವಾಭಿಮಾನದ ಬೀಜ ಬಿತ್ತಿದ್ದು, ಶ್ರೀಕ್ಷೇತ್ರ ಕೇವಲ ಆರಾಧನಾ ಸ್ಥಳವಾಗಿರದೆ ಸ್ವಾಭಿಮಾನದ ಪ್ರತೀಕವಾಗಿ ಬೆಳೆಯಿತು. ಸಾಮಾಜಿಕ ಅಸಮಾನತೆಯ ಕಂದಾಚಾರದ ಬೆಂಕಿಯಲ್ಲಿ ಬೇಯುವ ವಿಧವೆಯರ ಮುಖದಲ್ಲಿ ಮುಗುಳು ನಗು ಅರಳಲು ಕಾರಣರಾದವರು ಪೂಜಾರಿ. ಹೆತ್ತ ತಾಯಿ ವಿಧವೆಯಾದರೂ ಕೂಡ ಮಕ್ಕಳಿಗೆ ಆಕೆ ಪೂಜ್ಯಳು ಎಂದು ಪ್ರತಿಪಾದಿಸುತ್ತೇವೆ. ಆದರೆ ಆಕೆಯನ್ನು ನಾವು ಮಂಗಳ ಕಾರ್ಯಗಳಿಂದ ದೂರ ಇಟ್ಟು ಸಂಪ್ರದಾಯದ ಹೆಸರಲ್ಲಿ ಪ್ರತ್ಯೇಕಿಸುತ್ತೇವೆ. ಮಾನಸಿಕವಾಗಿ ವಿಧವೆಯರನ್ನು ಕುಬ್ಜರಾಗಿಸುವ ನಮ್ಮ ನಂಬಿಕೆ, ಆಚರಣೆಗಳು ಅಮಾನವೀಯ ಎನ್ನುವ ಪರಿವೆಯೇ ಇಲ್ಲದವರಂತೆ ವರ್ತಿಸುತ್ತೇವೆ.
ಗುಲ್ವಾಡಿ ವೆಂಕಟರಾಯರ ಕನ್ನಡದ ಮೊಟ್ಟಮೊದಲ ಕಾದಂಬರಿಯಲ್ಲಿ ಓರ್ವ ವಿಧವೆಯ ಬದುಕನ್ನು ಮನಮಿಡಿಯುವಂತೆ ಜನತೆಗೆ ತಲುಪಿಸಿ, ಆಕೆಗೆ ಮರು ಮದುವೆ ಮಾಡಿಸುವ ಮೂಲಕ ನಿಜವಾದ ಧರ್ಮದ ವಿಜಯ ಎನ್ನುವ ಸಂದೇಶ ಸಾರಿದ್ದರು. ಶತಮಾನಗಳ ಹಿಂದೆಯೇ ಇಂತಹ ಕ್ರಾಂತಿಕಾರಿ ನಿಲುವು ತಳೆಯುವ ಎದೆಗಾರಿಕೆ ಓರ್ವ ಲೇಖಕರು ತೋರಿಸಿದ್ದಾರೆ. ಸಂಪ್ರದಾಯ,ಆಚರಣೆಗಳೇ ಅತಿ ಮುಖ್ಯ ಎನ್ನುವ ಕಾಲಘಟ್ಟದಲ್ಲಿ ಲೇಖಕ ಗುಲ್ವಾಡಿ ಸಂಪ್ರದಾಯದ ಗೋಡೆ ಕೆಡಹುವ ಸಾಹಸ ಮಾಡಿದ್ದರು.
ಪೂಜಾರಿ ಓರ್ವ ರಾಜಕಾರಣಿಯಾಗಿ ಸಾಲಮೇಳ ನಡೆಸುವ ಮೂಲಕ ಬಡವರು, ಮಹಿಳೆಯರು ಸ್ವಾವಲಂಬಿಯಾಗಲು ಸಹಕಾರಿಯಾದರು. ಸಾರ್ವಜನಿಕವಾಗಿ ಸಾಲಮೇಳ ನಡೆಸುವ ಮೂಲಕ ಬ್ಯಾಂಕಿನ ಬಾಗಿಲುಗಳು ಬಡವರಿಗೆ ಮುಕ್ತವಾಗುವಂತೆ ಮಾಡಿದ್ದಾರೆ. ಕ್ಷೇತ್ರದಲ್ಲಿ ವಿಧವೆಯರಿಗೆ ಪೂಜಾರಿ ಅವರು ಕಲ್ಪಿಸಿ ಕೊಟ್ಟಿರುವ ಹೊಸ ಅವಕಾಶಗಳು ಮತ್ತು ತೆಗೆದುಕೊಂಡಿರುವ ನಿಲುವುಗಳು ನಾರಾಯಣಗುರುಗಳ ತತ್ವ, ಆದರ್ಶ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳಿಗೆ ಪೂರಕ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಮನುಷ್ಯರು ನಿರ್ಮಿಸಿದ ಕಟ್ಟುಪಾಡುಗಳಿಗೆ ದೇವರು ಪರಿಹಾರ ಕೊಡಲು ಸಾಧ್ಯವಿಲ್ಲ, ಮನುಷ್ಯರೇ ಅದಕ್ಕೆ ಪರಿಹಾರ ನೀಡಬೇಕು. ಮನುಷ್ಯತ್ವ, ಮಾನವೀಯತೆಯನ್ನು ಪ್ರತಿಪಾದಿಸುವವರು ಪೂಜಾರಿ ಅವರ ಕಾರ್ಯವನ್ನು ಮೆಚ್ಚಿದರೆ ಅತಿಶಯೋಕ್ತಿಯಲ್ಲ.
ಅಂದು ಸೆಪ್ಟೆಂಬರ್ ೮ ರ ಭಾನುವಾರದಂದು ಕರಾವಳಿಯ ಜನತೆಯ ಕಿವಿಗಳು ಚುರುಕಾಗಿದ್ದು, ಮೈಯೆಲ್ಲಾ ಕಣ್ಣಾಗಿ ಕುದ್ರೋಳಿ ಕ್ಷೇತ್ರದಲ್ಲಿ ಏನಾಗುತ್ತದೆ ಎನ್ನುವ ಕುತೂಹಲಕ್ಕೆ ಒಳಗಾಗಿದ್ದರು. ಬೆಳಿಗ್ಗೆ ೧೦.೨೦ರ ಸುಮಾರಿಗೆ ಪತಿಯನ್ನು ಕಳೆದುಕೊಂಡ ಇಬ್ಬರು ಸಮವಸ್ತ್ರಧಾರಿ ಮಹಿಳೆಯರನ್ನು ಚೆಂಡೆ, ವಿವಿಧ ವಾದ್ಯಘೋಷಗಳೊಂದಿಗೆ ಆವರಣ ದ್ವಾರದಿಂದ ನೆರೆದ ಗಣ್ಯರೊಂದಿಗೆ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ಶ್ರೀ ಕ್ಷೇತ್ರಕ್ಕೆ ಸಂಪೂರ್ಣವಾಗಿ ಪ್ರದಕ್ಷಿಣೆ ಬಂದು, ದೇವಳದ ಒಳಗಿನ ನಾರಾಯಣ ಗುರುಗಳ ಮೂರ್ತಿಗೆ ನಮಿಸಿದ ಅವರು ಶನೀಶ್ವರ, ಗಣಪತಿ, ಸುಬ್ರಹ್ಮಣ್ಯಸ್ವಾಮಿ, ಅನ್ನಪೂರ್ಣೇಶ್ವರಿ, ಕಾಲಭೈರವ, ನವಗ್ರಹಗಳಿಗೆ ನಮಿಸಿದರು. ಬೆ.೧೦.೪೭ ರ ಶುಭಮೂಹೂರ್ತದಲ್ಲಿ ಗೋಕರ್ಣನಾಥೇಶ್ವರನ ಗರ್ಭಗುಡಿ ಪ್ರವೇಶ ಮಾಡಿದರು. ಶಿವಲಿಂಗಕ್ಕೆ ಪುಷ್ಪವನ್ನು ಅರ್ಚಿಸಿ, ವಿವಿಧ ಆರತಿ ಗೈದ ಇಂದಿರಾ ಶಾಂತಿ ಹಾಗೂ ಲಕ್ಷ್ಮೀ ಶಾಂತಿಯರು ಎಲ್ಲರಿಗೂ ತೀರ್ಥ ಪ್ರಸಾದ ವಿತರಿಸಿದರು.
ನಂತರ ೧೧.೦೮ಕ್ಕೆ ಅವರು ಗರ್ಭಗುಡಿಯ ಹಿಂಬಾಗದಲ್ಲಿರುವ ಅನ್ನಪೂರ್ಣೇಶ್ವರಿ ಗುಡಿ ಪ್ರವೇಶಿಸಿ, ಪೂಜೆ ಸಲ್ಲಿಸಿ, ತೀರ್ಥ ಪ್ರಸಾದ ವಿತರಿಸಿದರು. ನವಗ್ರಹ ಪೂಜೆ, ಹನುಮಾನ್ ಪೂಜೆ, ಶ್ರೀಕೃಷ್ಣ ಮಂದಿರ ಪ್ರವೇಶಿಸಿ ಆರತಿ ಬೆಳಗಿದರು. ದೇವಳದ ಆವರಣದಲ್ಲಿರುವ ಅಶ್ವತ್ಥಕಟ್ಟೆಯಲ್ಲಿ ನೂತನವಾಗಿ ಸ್ಥಾಪಿಸಿದ ದತ್ತಾತ್ರೇಯ ವಿಗ್ರಹ ಅನಾವರಣಗೊಳಿಸಿ, ಪೂಜೆ ಸಲ್ಲಿಸಿ, ಪ್ರಸಾದ ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಅವರು ನವದುರ್ಗೆಯರು, ಗಣಪತಿ, ಶಾರದಾ ಮಾತೆಗೆ ಪೂಜೆ ಸಲ್ಲಿಸಿದರು. ನಂತರ ಮಹಿಳಾ ಅರ್ಚಕರು ನಾರಾಯಣಗುರುಗಳ ಸನ್ನಿದಿಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸುತ್ತಿದ್ದರು.
ಪುತ್ತೂರು ಬನ್ನೂರು ಗ್ರಾಮದ ಇಂದಿರಾ ಶಾಂತಿ, ಬಂಟ್ವಾಳ ಮೂಡ ಬಿಸಿರೋಡ್‌ನ ಲಕ್ಷ್ಮೀ ಶಾಂತಿ ಅವರುಗಳು ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಿದ ಅರ್ಚಕರು. ಇಂದಿರಾ ಶಾಂತಿ ಕಳೆದ ನಾಲ್ಕು ತಿಂಗಳಿನಿಂದ ತರಬೇತಿ ಪಡೆದಿದ್ದು, ಲಕ್ಷ್ಮೀಶಾಂತಿ ೩ ದಿನದಿಂದ ತರಬೇತಿ ಪಡೆದುಕೊಂಡಿದ್ದಾರೆ. ಬೆಳ್ತಂಗಡಿಯ ಗ್ರಾ.ಪಂ.ಸದಸ್ಯೆಯೊರ್ವರು ೪ ತಿಂಗಳು ತರಬೇತಿ ಪಡೆದಿದ್ದರು. ಕೊನೆಯಲ್ಲಿ ಅವರಿಗೆ ಆಯ್ಕೆಗೆ ಅವಕಾಶ ನೀಡಿದಾಗ, ಪಂಚಾಯತ್ ಸದಸ್ಯೆಯಾಗಿ ಮುಂದುವರಿಯುವುದಾಗಿ ಹೇಳಿದ್ದರು. ಅವರ ಸದಸ್ಯತನದ ಅವದಿ ಮುಗಿದ ನಂತರ ಮನಸ್ಸಿದ್ದರೆ ಅರ್ಚಕರಾಗಿ ಬರುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಿಲ್ಲವ ಸಮಾಜಕ್ಕೆ ಸೇರಿದ ಇವರುಗಳು ಬಿ.ಸಿ.ರೋಡ್‌ನಲ್ಲಿರುವ ಗುರುಮಂದಿರದಲ್ಲಿ ಲೋಕೇಶ್ ಶಾಂತಿ ಅವರಲ್ಲಿ ತರಬೇತಿ ಪಡೆದಿದ್ದಾರೆ. ಅವರು ಅರ್ಚಕರಾಗಿರುವಾಗ ಹಳದಿ ಬಣ್ಣದ ಸೀರೆ-ಕುಪ್ಪಸ ತೊಡುವುದು ಸಂಪ್ರದಾಯವಾಗಿದೆ. ಮಹಿಳಾ ಅರ್ಚಕರಿಗೆ ರಿಯಾಯಿತಿಯಿದ್ದು, ವೇತನವನ್ನು ನೀಡಲಾಗುತ್ತದೆ ಎನ್ನುವುದು ಪೂಜಾರಿಯವರ ಅಭಿಪ್ರಾಯ.
ಸಮಾಜದಲ್ಲಿರುವ ಅಂಧಕಾರವನ್ನು ತೊಲಗಿಸಲು ಕುದ್ರೋಳಿ ಕ್ಷೇತ್ರದಲ್ಲಿ ಉತ್ತಮ ಕಾರ್ಯವನ್ನು ಕೈಗೊಂಡಿದ್ದಾರೆ. ಪತಿಯನ್ನು ಕಳೆದುಕೊಂಡ ಮಹಿಳೆಯು ಅಮಂಗಲೆಯಾಗದೆ ಸುಮಂಗಲಿ ಎನ್ನುವುದು ಕುದ್ರೋಳಿ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಅವರಿಗೆ ಸಿಗುವ ಗೌರವ, ಮಾನ್ಯತೆಗಳಿಂದ ಸಾಬೀತಾಗುತ್ತಿದೆ. ವಿರೋಧಗಳ ನಡುವೆಯು ಸಮಾನತೆಯ ತತ್ವವನ್ನು ಸಾರಿದ ನಾರಾಯಣಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಕ್ಕೆ ತೋರ್ಪಡಿಸಿದ ಪೂಜಾರಿ ಅವರ ಕಾರ್ಯವನ್ನು ಬುದ್ದಿವಂತ ಸಮಾಜವಿಂದು ಒಪ್ಪಿಕೊಳ್ಳಲೆ ಬೇಕಿದೆ. ಅಂತೂ ವಿಧವೆಯರ ಮುಖದಲ್ಲಿಯೂ ಮಂದಹಾಸ ಮೂಡಿಸಿದ್ದಾರೆ ಎನ್ನುವುದು ಸ್ಪಷ್ಟ..ಏನಂತಿರಾ

ಭಯ ಹುಟ್ಟಿಸುವವರೆ ಅಧಿಕವಾಗಿರುವ ಸಮಾಜದಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯರಿಗೆ ಶಕ್ತಿ ತುಂಬಬೇಕು. ಪ್ರತಿ ಮನೆಯಲ್ಲಿಯೂ ಗಂಡನನ್ನು ಕಳೆದುಕೊಂಡ ಮಹಿಳೆಯಿದ್ದಾಳೆ ಎನ್ನುವುದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ನಾರಾಯಣಗುರುಗಳ ತತ್ವವನ್ನು ಅಳವಡಿಸಿಕೊಂಡು ಕ್ಷೇತ್ರದಲ್ಲಿ ಇಂತಹ ಕಾರ್ಯ ಹಮ್ಮಿಕೊಳ್ಳಲಾಗಿದೆ. ಪತಿಯನ್ನು ಕಳೆದುಕೊಂಡ ಮಹಿಳೆಯರಿಗೆ ಆತ್ಮಶಕ್ತಿ ತುಂಬುವ ಕೆಲಸ ಸಮಾಜದಿಂದಾಗಬೇಕು.
ಬಿ.ಜನಾರ್ದನ ಪೂಜಾರಿ-ಕೇಂದ್ರ ಮಾಜಿ ಸಚಿವ, ಕ್ಷೇತ್ರದ ನವೀಕರಣದ ರೂವಾರಿ. 

ವಿಧವಾ ಅರ್ಚಕಿಯರಿವರು: 
ಬಂಟ್ವಾಳ ಮೂಡ ಬಿ.ಸಿ.ರೋಡ್‌ನ ೬೫ ವರ್ಷದ ಲಕ್ಷ್ಮೀಶಾಂತಿ ೨೦ ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡಿದ್ದರು. ಇವರು ೨ ಗಂಡು ಹಾಗೂ ೩ ಹೆಣ್ಣು ಮಕ್ಕಳನ್ನು ಹೊಂದಿದ್ದು, ಎಲ್ಲರಿಗೂ ಮದುವೆಯಾಗಿದೆ. 
ಪುತ್ತೂರು ಬನ್ನೂರು ಗ್ರಾಮದ ೪೫ ವರ್ಷದ ಇಂದಿರಾ ಶಾಂತಿ ಐದು ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಇವರಿಗೆ ೨ ಗಂಡು ಹಾಗೂ ೧ ಹೆಣ್ಣು ಮಗುವಿದೆ. 













ಲವ್ ಜಿಹಾದ್‌ಗೆ ಪೂರಕ ಅಂಶ-ಪ್ರೀತಿಸಿ ಮದುವೆಯಾದ ಜೋಡಿ-ಭಯೋತ್ಪಾದನೆಯಲ್ಲಿ ಭಾಗಿ!
ಸೌಂದರ್ಯ ಮರೆಮಾಚುವ ಬುರ್ಖಾ-ಮಕ್ಕಳನ್ನು ಹಡೆಯುವ ಯಾಂತ್ರಿಕ ಬದುಕು ಬೇಕೆ-ಹಿಂದೂ ಹೆಣ್ಣು ಮಕ್ಕಳೇ ಆಲೋಚಿಸಿ ಹೆಜ್ಜೆ ಹಾಕಿ.
ಆಯೆಷಾ ಬಾನು..ಮಂಗಳೂರಿನಲ್ಲಿ ವಾಸವಾಗಿದ್ದ ಮೂರು ಮಕ್ಕಳ ತಾಯಿ ಕೆಲವೇ ಘಂಟೆಗಳ ಅಂತರದಲ್ಲಿ ದೇಶಾದ್ಯಂತ ಪ್ರಚಾರ ಪಡೆದವಳು. ಭಯೋತ್ಪಾದಕರಿಗೆ ಹಣ ವರ್ಗಾವಣೆ ಮಾಡಿದ ಆಯೆಷಾ ನರೇಂದ್ರ ಮೋದಿಯ ಹೂಂಕಾರ್ ರ್‍ಯಾಲಿಗೆ ಬಾಂಬ್ ಇರಿಸಲು ಪರೋಕ್ಷವಾಗಿ ಕಾರಣವಾಗಿದ್ದಾಳೆ ಎನ್ನುವ ದಾಖಲೆಗಳ ಮೂಲಕ ಜೈಲು ಸೇರಿದ್ದಾಳೆ. ಲವ್ ಜಿಹಾದ್‌ನ ಪರಿಣಾಮವಾಗಿ ಮುಸ್ಲಿಂ ಯುವಕನೊರ್ವ ಈಕೆಯನ್ನು ಮದುವೆಯಾಗಿ ಬುರ್ಖಾದೊಳಗೆ ಸೌಂದರ್ಯ ಮರೆಮಾಚುವಂತೆ ಮಾಡಿ, ಆಕೆಯ ಮುಗ್ದತೆಯನ್ನು ದುರ್ಬಳಕೆ ಮಾಡಿ, ಭಯೋತ್ಪಾದನಾ ಕೃತ್ಯಗಳಿಗೆ ಬಳಸಿಕೊಂಡಿದ್ದ.
ಹಿಂದು ಹೆಣ್ಣುಮಕ್ಕಳನ್ನು ಮುಸ್ಲಿಂ ಯುವಕರು ಪ್ರೀತಿಯ ನಾಟಕವಾಡಿ, ಮದುವೆಯಾಗಿ ಶೀಲವನ್ನೆಲ್ಲಾ ಸೂರೆಗೊಂಡ ನಂತರ ಭಯೋತ್ಪಾದನಾ ಚಟುವಟಿಕೆಗಳಿಗೆ, ವೇಶ್ಯಾವಾಟಿಕೆಗೆ ತಳ್ಳುವ ಲವ್‌ಜಿಹಾದ್ ಜಾಲ ಸಕ್ರೀಯವಾಗಿದೆ ಎಂದು ರಾಷ್ಟ್ರೀಯವಾದಿ ಸಂಘಟನೆಯೊಂದು ಕಳೆದ ೧೦ ವರ್ಷಗಳ ಹಿಂದೆ ವರದಿ ಮಾಡಿತ್ತು. ಈ ಸಂದರ್ಭದಲ್ಲಿ ಎಡಪಂಥಿಯ ಸಂಘಟನೆಗಳು ಅವರಿಗೆ ಕಣ್ಣು ಕಾಣುವುದಿಲ್ಲ. ಪ್ರೀತಿ ಮಾಡುವುದೇ ತಪ್ಪೆ..ಮಾಡಿದವರು ಮದುವೆಯಾಗಬಾರದೆ ಎನ್ನುವ ಎಡಬಿಡಂಗಿತನದ ಹೇಳಿಕೆ ನೀಡಿ, ಲವ್‌ಜಿಹಾದ್ ಸರಿ ಎನ್ನುವಂತೆ ತೇಪೆ ಹಚ್ಚಿದ್ದರು. ರಾಷ್ಟ್ರೀಯವಾದಿ ಸಂಘಟನೆಯ ಹೇಳಿಕೆಗೆ ಸಾಕ್ಷಿಯಾಗಿ ಭಯೋತ್ಪಾದಕರಿಗೆ ಹಣ ಒದಗಿಸುವ ಕೊಂಡಿ ಆಯೆಷಾ ಬಾನು ಸಿಕ್ಕಿಹಾಕಿಕೊಳ್ಳುವ ಮೂಲಕ ಆ ವರದಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಯಾರೀಕೆ ಆಯೇಷಾ?
ಕೊಡಗಿನ ವಿರಾಜಪೇಟೆಯ ದೇವಣಗೇರಿ ಗ್ರಾಮದ ದಲಿತ ಕುಟುಂಬಕ್ಕೆ ಸೇರಿದ ಪುತ್ತೊಳಿ ೧೯೯೫ರಲ್ಲಿ ಮಡಿಕೇರಿಯಲ್ಲಿ ಕಾರಿನ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಜಪೆಯ ನಿವಾಸಿ ಜುಬೇರ್ ಮಹಮ್ಮದ್‌ನನ್ನು ಪ್ರೀತಿಸಿ ಮದುವೆಯಾಗಿದ್ದಳು ಎನ್ನುವುದಕ್ಕಿಂತ ಲವ್‌ಜಿಹಾದ್‌ಗೆ ಬಲಿಯಾಗಿದ್ದಳು ಎನ್ನುವುದೇ ಸೂಕ್ತ. ಮದುವೆಯಾಗುವವರೆಗೆ ಪುತ್ತೊಳಿಯಾಗಿದ್ದ ಆಕೆ ಮದುವೆಯಾದ ನಂತರ ಆಯೆಷಾಬಾನುವಾಗಿ ಪರಿವರ್ತನೆಗೊಂಡಿದ್ದಳು. ಹಿಂದು ಹೆಣ್ಣುಮಕ್ಕಳು ಮದುವೆಯಾದ ನಂತರ ಜುಬೇರ್ ಯಾಕೆ ರಾಮ, ಕೃಷ್ಣನಾಗಿ ಪರಿವರ್ತನೆಯಾಗಿಲ್ಲ. ಪುತ್ತೋಳಿಯೇ ಯಾಕೆ ಆಯೇಷಾ ಆಗಿ ಪರಿವರ್ತಿತವಾದಳು..ಇದುವೇ ಲವ್‌ಜಿಹಾದ್. ಆಕೆಯನ್ನು ಅಲ್ಲಿಂದ ಕರೆತಂದ ಜುಬೇರ್ ಬಜ್ಪೆಯ ಸಮೀಪ ಬಾಡಿಗೆ ಮನೆಯಲ್ಲಿ ಸಂಸಾರ ಪ್ರಾರಂಭಿಸಿದ್ದ. ಆರಂಭದಲ್ಲಿ ಚಿನ್ನ-ರನ್ನ ಎಂದು ಕೊಂಡಾಡುತ್ತಿದ್ದ ಜುಬೇರ್‌ಗೆ ದಿನ ಕಳೆದಂತೆ ಆಯೆಷಾಳ ಬಗೆಗಿನ ಒಲವು ಕಡಿಮೆಯಾಗತೊಡಗಿತು. ಈತನ್ಮಧ್ಯೆ ತಂದೆ-ತಾಯಿಯೊಂದಿಗೆ ಬೇರೆಯಾಗಿದ್ದ ಜುಬೇರ್ ಅವರ ಮನೆಗೆ ನಿತ್ಯ ಹಾಜರಿ ಹಾಕತೊಡಗಿದ್ದ. ಹಿಂದು ಸೊಸೆಯನ್ನು ಅವರು ಸ್ವೀಕರಿಸಲು ಜುಬೇರ್‌ನ ಪೋಷಕರು ಸಿದ್ದರಿಲ್ಲದೇ, ಬೇರೆ ಮದುವೆಯಾಗಲು ಒತ್ತಾಯ ಹಾಕುತ್ತಿದ್ದರಂತೆ? ಅದಕ್ಕೆ ಜುಬೇರ್ ಅವರು ನೋಡಿದ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದನಂತೆ? ಅಥವಾ ಆಯೆಷಾಳ ಮೇಲಿನ ಒಲವು ಕಡಿಮೆಯಾದಂತೆ, ದಿನನಿತ್ಯ ಊಟ ಮಾಡಿದ ಆಹಾರ ರುಚಿಕಾಣದೆ, ಕಂಗೆಟ್ಟಿದ್ದ ಜುಬೇರ್ ಎರಡನೇ ಮದುವೆಯಾಗಿದ್ದ ಎನ್ನುವುದು ಸ್ಪಷ್ಟ. ಹೊಸ ಹೆಂಡತಿ ಜುಬೇರ್‌ನ ಮನೆಯ ಪ್ರೀತಿಯ ಸೊಸೆಯಾಗಿ ಆತನ ಮನೆಯಲ್ಲಿ ವಾಸಿಸಲು ಮಾಡಿಕೊಟ್ಟಿದ್ದ ಎನ್ನುವಾಗ ಪುತ್ತೋಳಿಯ ಮೇಲಿಟ್ಟಿದ್ದ ಅವನ ಪ್ರೀತಿ ಯಾವ ರೀತಿಯದ್ದು ಎನ್ನುವುದು ಸ್ಪಷ್ಟವಲ್ಲವೇ?
ಗಂಡನ ಎರಡನೇ ಮದುವೆಯನ್ನು ಅಸಹಾಯಕಳಾಗಿ ಸಹಿಸಿಕೊಂಡು ಗಂಡನೊಂದಿಗೆ ಹೊಂದಾಣಿಕೆಯಲ್ಲಿ ಸಂಸಾರ ನಡೆಸುತ್ತಿದ್ದಳು. ಈತನ್ಮದ್ಯೆ ಎರಡು ಸಂಸಾರದ ಭಾರವನ್ನು ಹೊರಲಾರದೆ ಜುಬೇರ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಕಾನೂನಿನ ತೊಡಕಿಲ್ಲದಿರುವ ಮುಸ್ಲಿಂ ಸಮುದಾಯದಲ್ಲಿ ಮಕ್ಕಳ ಹೆರುವಿಕೆಗೆ ಯಾವುದೇ ಆರ್ಥಿಕ ಸಂಕಷ್ಟ ಅಡ್ಡಿಯಾಗಿಲ್ಲ. ಆಯಿಷಾ ಎರಡನೇ ಮಗುವಿನ ತಾಯಿಯಾದಳು. ನಂತರ ಜುಬೇರ್ ಸೌದಿ ಅರೇಬಿಯಾಕ್ಕೆ ಹೊರಟು ನಿಂತಿದ್ದಾಗ ಆಯಿಷಾಳೇ ತನ್ನಲ್ಲಿದ್ದ ಚಿನ್ನವನ್ನು ಮಾರಾಟ ಮಾಡಿ ಗಂಡನ ಕೈಗಿತ್ತಿದ್ದಳು. ಯಾರ ಚಿನ್ನಾಭರಣದಿಂದ ಸೌದಿಗೆ ತೆರಳಿದ್ದನೋ ಜುಬೇರ್ ದಿನಗಳೆದಂತೆ ಆಕೆಯನ್ನೆ ಮರೆಯತೊಡಗಿದ. ತಂದೆ-ತಾಯಿಯ ಒತ್ತಾಯಕ್ಕೆ ನಿಧಾನವಾಗಿ ಪ್ರತಿಕ್ರಿಯೆ ನೀಡತೊಡಗಿದ್ದ. ಬಾಡಿಗೆ ಮನೆಯಲ್ಲಿ ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದ ಆಯೆಷಾಳಿಗೆ ಜೀವನ ನಿರ್ವಹಿಸುವುದೆ ಕಷ್ಟವಾಗಿತ್ತು. ಈ ಸಂದರ್ಭ ಪ್ರೀತಿಸಿ ಮದುವೆಯಾಗಬಾರದಿತ್ತು ಎನ್ನುವ ಸತ್ಯಾಂಶ ಅರಿವಾಗ ತೊಡಗಿತ್ತು. ಆದರೆ ರೈಲು ಹೋದ ಮೇಲೆ ಟಿಕೇಟ್ ಕೊಂಡಂತ ಪರಿಸ್ಥಿತಿ ಪುತ್ತೋಳಿಯದು.
ಮುಸ್ಲಿಂ ಯುವಕನ ಪ್ರೀತಿಗೆ ಬಲಿಯಾಗಿ ತನ್ನ ಹುಟ್ಟೂರು, ಧರ್ಮ, ತಂದೆ ತಾಯಿ, ಕುಟುಂಬವನ್ನು ತೊರೆದು ಬಂದಿದ್ದ ಆಕೆಗೆ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ದಿನದ ತುತ್ತು ತಿನ್ನಿಸುವುದೂ ಕಷ್ಟವಾಗತೊಡಗಿತು. ಇತ್ತ ಸೌದಿಗೆ ತೆರಳಿದ ಗಂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಗಂಡನ ಮನೆಯ ಬಳಿ ಹೋದರೆ ಗೇಟಿನ ಒಳಗೆ ಪ್ರವೇಶವಿರಲಿಲ್ಲ. ಅಕ್ಷರಶಃ ಬೀದಿಪಾಲಾದ ಆಯಿಶಾ ಇಬ್ಬರು ಮಕ್ಕಳೊಂದಿಗೆ ಹೇಗಾದರೂ ಬದುಕಬೇಕು ಎಂದು ಹಠಕ್ಕೆ ಬಿದ್ದಿದ್ದಳು.
ನಂತರ ಸೌದಿಯಿಂದ ಹಿಂತಿರುಗಿದ ಜುಬೇರ್‌ಗೆ ತಂದೆ ಮರಣ ಹೊಂದಿದಾಗ ಆತ ನಡೆಸುತ್ತಿದ್ದ ಬೀಡಿ ಬ್ರಾಂಚ್ ಮುನ್ನಡೆಸುವ ಘನತರ ಜವಾಬ್ದಾರಿ ದೊರೆಯಿತು. ಈಸಂದರ್ಭ ಮತ್ತೆ ಆಯೆಷಾ, ಜುಬೇರ್ ಒಂದಾದರು. ಜುಬೇರ್‌ಗೆ ಗಲ್ಫ್‌ನಲ್ಲಿ ಪಾಕಿಸ್ತಾನದ ವ್ಯಕ್ತಿಯಿಂದ ಭಯೋತ್ಪಾದನೆಗೆ ಇಂಬು ನೀಡುವ ಸಂಪರ್ಕ ದೊರಕಿತ್ತು. ಇದನ್ನು ಮುಗ್ದೆ ಆಯೇಷಾಳ ಮೇಲೆ ಜುಬೇರ್ ಪ್ರಯೋಗಿಸಿದ್ದ. ಶ್ರೀಮಂತಿಕೆ ಸೋಗಿಗೆ ಬಲಿಯಾದ ಆಯೇಷಾ ಕಾಲಕ್ರಮೇಣ ಗಂಡನ ಚಟುವಟಿಕೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದಳು. ಇದಕ್ಕೆ ಪುಷ್ಟಿ ನೀಡುವ ಹಲವಾರು ಘಟನೆಗಳು ಸಾಕ್ಷಿಯಾಗಿದೆ.
ನರೇಂದ್ರ ಮೋದಿಯ ಹೂಂಕಾರ್ ರ್‍ಯಾಲಿಯಲ್ಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಜಾಡನ್ನು ಹಿಡಿದು ಮಂಗಳೂರಿನವರೆಗೆ ಆಗಮಿಸಿದ್ದರು. ಬಾಂಬ್ ಸ್ಪೋಟವಾದ ಸಂದರ್ಭದಲ್ಲಿಯೇ ಜುಬೇರ್ ಬೇರೆ ಹೆಸರಿನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ, ಮಂಗಳೂರಿನಿಂದ ಪರಾರಿಯಾಗಲು ಬಯಸಿದ್ದ. ಇದನ್ನು ತನಿಖೆಯ ವೇಳೆ ಇಲ್ಲವೆಂದು ವಾದಿಸಿದ್ದರೂ, ಕೆಲವೊಂದು ಸಂಶಯಗಳಿಗೆ ಕಾರಣವಾಗುತ್ತಿದೆ. ಜುಬೇರ್ ಒಂದು ಪಾಸ್‌ಪೋರ್ಟ್ ಇದ್ದರೂ, ಮತ್ತೊಂದು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪಾಕಿಸ್ಥಾನಕ್ಕೆ ತೆರಳಲು ಯೋಜನೆ ರೂಪಿಸುತ್ತಿದ್ದ. ಜುಬೇರ್ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿರುವ ದಾಖಲೆಗಳು ಇದನ್ನು ಪುಷ್ಟೀಕರಿಸಿವೆ. ಹೆಸರು ಬದಲಿಸಿಕೊಂಡು ಪಾಸ್‌ಪೋರ್ಟ್‌ಗಾಗಿ ಸಲ್ಲಿಸಿದ ಅರ್ಜಿಯ ನಕಲು ಪ್ರತಿಗಳು ಸಾಕ್ಷ್ಯ ಒದಗಿಸಿವೆ. ಜುಬೇರ್ ಹುಸೇನ್ ಎನ್ನುವ ಹೆಸರಿನಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದ. ಹೆಸರು ಬದಲಾವಣೆಯ ಕುರಿತಂತೆ ಪತ್ರಿಕಾ ಜಾಹಿರಾತನ್ನು ಕೂಡ ಆತ ನೀಡಿದ್ದ. ಪೊಲೀಸರು ಜುಬೇರ್ ಮನೆ ಪರಿಶೀಲನೆಗಾಗಿ ದಾಳಿ ನಡೆಸಿದಾಗ ಅಲ್ಲಿ  ಹಲವು ದಾಖಲೆಗಳು ಸೇರಿದಂತೆ, ಎರಡನೇ ಪಾಸ್ ಪೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯ ಜೆರಾಕ್ಸ್ ಪ್ರತಿ ಲಭಿಸಿತ್ತು. ಹೆಸರು ಬದಲಾಯಿಸಿರುವ ಅಫಿಡವಿಟ್ ಮತ್ತು ಹೆಸರು ಬದಲಾಯಿಸಿದ್ದೇನೆ ಎಂದು ಪತ್ರಿಕಾ ಜಾಹಿರಾತು ಪೋಲಿಸರ ಕೈವಶವಾಗಿದೆ. ಆತ ಮೊದಲ ಪಾಸ್‌ಪೋರ್ಟ್ ಮಾಡಿದ್ದು ೧೯೯೧ರಲ್ಲಿ. ನಂತರ ೧೯೯೫ರಲ್ಲಿ ಸೌದಿಗೆ ತೆರಳಿದಾತ ೨೦೦೨ಕ್ಕೆ ಮತ್ತೆ ಭಾರತಕ್ಕೆ ಹಿಂತಿರುಗಿದ್ದು, ಪುನಃ ವಿದೇಶಕ್ಕೆ ಹೋಗಿರಲಿಲ್ಲ. ಅಲ್ಲದೆ ಆ ಬಳಿಕ ಅದೇ ಪಾಸ್ ಪೋರ್ಟ್‌ನ್ನು ಮರು ನವೀಕರಣ ಮಾಡಬಹುದಾಗಿತ್ತು. ತಕ್ಷಣ ಬೇರೆ ಹೆಸರಿನಲ್ಲಿ ಹೊಸ ಪಾಸ್ ಪೋರ್ಟ್ ಮಾಡಿ ಒಂದೇ ತಿಂಗಳೊಳಗೆ ಪಾಕಿಸ್ಥಾನಕ್ಕೆ ತೆರಳಲು ನಿರ್ಧರಿಸಿದ್ದ.  ಇಲ್ಲವಾದರೆ ಆತ ಅಚಾನಕ್ ಪಾಸ್ಪೋರ್ಟ್ ಮಾಡಲು ನಿರ್ಧರಿಸುತ್ತಿರಲಿಲ್ಲ ಎಂದು ಪೋಲಿಸರು ಅನುಮಾನ ವ್ಯಕ್ತಪಡಿಸಿದ್ದರು. ಮಹಮ್ಮದ್ ಜುಬೇರ್ ತನ್ನ ಎರಡನೇ ಹೆಸರಾದ ಜುಬೇರ್ ಹುಸೈನ್ ಎಂಬ ಹೆಸರಿನಲ್ಲಿ ಪಾಸ್‌ಪೋರ್ಟ್ ಮಾಡಲು ಸ್ಕೆಚ್ ಹಾಕಿದ್ದ. ತನ್ನ ಪತ್ನಿ ಆಯಿಶಾ ವಾಸ ಹೂಡಿರುವ ಪಂಜಿಮೊಗರು ಮಂಜೊಟ್ಟಿಯ ಮನೆ ವಿಳಾಸವನ್ನಿಟ್ಟು, ೨ ನೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಇಬ್ಬರು ಆರೋಪಿಗಳನ್ನು ಬಿಹಾರ್ ಪೋಲಿಸರು ಬಿಹಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸಲಿದ್ದಾರೆ. ಆಯಿಷಾ ಕಾಸರಗೋಡಿನಲ್ಲಿ ಹವಾಲ ಹಣ ವಿತರಿಸಿದ್ದಾಳೆ ಎನ್ನುವ ಗುಮಾನಿ ವ್ಯಕ್ತವಾಗಿದೆ.
ಆಯೇಷಾ-ಜುಬೇರ್‌ಗೆ ಟ್ರಾನ್ಸಿಸ್ಟ್  ವಾರಂಟ್:
ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಉಗ್ರರ ಚಟುವಟಿಕೆಗಳಿಗೆ ಹವಾಲಾ ಹಣವನ್ನು ಪೂರೈಸುತ್ತಿದ್ದರು ಎಂಬ ಆರೋಪದಡಿ ಬಂಧಿತರಾಗಿರುವ ಆಯೇಷಾ ಬಾನು(೪೦) ಹಾಗೂ ಆಕೆಯ ಪತಿ ಜುಬೇರ್‌ಗೆ, ಟ್ರಾನ್ಸಿಸ್ಟ್ ವಾರಂಟ್ ನೀಡುವ ಮೂಲಕ ಬಿಹಾರ ಪೊಲೀಸರಿಗೆ ಒಪ್ಪಿಸಿದರು. ಈ ಘಟನೆಯಿಂದ ಇಡೀ ದೇಶದ ಚಿತ್ತ ಈಗ ಮಂಗಳೂರಿನತ್ತ ನೆಟ್ಟಿದೆ. ಇದಕ್ಕೆ ಕಾರಣವಾದ ಆಯೇಷಾ ಪ್ರಕರಣ ಮಂಗಳೂರು ಮಾತ್ರವಲ್ಲ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಜೊತೆಗೆ ಮಂಗಳೂರು ಉಗ್ರರ ತಾಣವಾಗುತ್ತಿದೆ ಎಂಬುದನ್ನೂ ಪುಷ್ಠೀಕರಿಸಿದೆ. ಈ ಹಿಂದೆ ಯಾಸಿನ್ ಭಟ್ಕಳ್ ಬಂಧನವಾದ ಬಳಿಕ ಆತ ಮಂಗಳೂರಿನ ಅತ್ತಾವರದಲ್ಲಿ ಉಳಿದುಕೊಂಡಿದ್ದ ಫ್ಲಾಟ್‌ನ್ನು ಪತ್ತೆಹಚ್ಚಲಾಗಿತ್ತು. ಇಲ್ಲಿಂದ ಬಾಂಬ್ ತಯಾರಿಕೆಯ ಹಲವು ಸ್ಪೋಟಕಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಯಾಸಿನ್ ಮಂಗಳೂರನ್ನೇ ತನ್ನ ಪ್ರಮುಖ ಅಡಗುದಾಣವನ್ನಾಗಿಸಿಕೊಂಡಿದ್ದಲ್ಲದೆ ಇಲ್ಲಿಂದಲೇ ಬಾಂಬ್ ತಯಾರಿಸಿ ಸರಬರಾಜು ಮಾಡುತ್ತಿದ್ದ ಎಂಬ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿತ್ತು. ಈಗ ಭಯೋತ್ಪಾದನೆಗೆ ಸಂಬಂಧಿಸಿಯೇ ಮಂಗಳೂರು ಮತ್ತೆ ಸುದ್ದಿಯಲ್ಲಿದೆ. ಜೊತೆಗೆ ಲವ್ ಜಿಹಾದ್‌ನ ಕರಾಳತೆಯ ಅರಿವೂ ಆಗುತ್ತಿದೆ.
ಆಯೇಷಾ ಖಾತೆಯಿಂದ ರೂ.೫ ಕೋಟಿ ವಿಲೇವಾರಿ:
ವಿವಿಧ ಬ್ಯಾಂಕಿನ ೩೫ ಖಾತೆಗಳ ಮೂಲಕ ಹವಾಲಾ ಹಣದ ವಿಲೇವಾರಿ ಮಾಡುತ್ತಿದ್ದ ಆಯೇಷಾ ಈಗ ಪೊಲೀಸರ ಅತಿಥಿ. ಆಯೇಷಾ ಮಂಗಳೂರಿನ ಹಂಪನಕಟ್ಟೆಯ ಖಾಸಗಿ ಬ್ಯಾಂಕ್ ಒಂದರಿಂದಲೇ ಐದು ಕೋಟಿಗೂ ಮಿಕ್ಕಿ ಆಯೇಷಾ ಹಣ ವಿಲೇವಾರಿ ಮಾಡಿರುವ ಸಾಧ್ಯತೆ ದಟ್ಟವಾಗಿದೆ. ಇಷ್ಟು ದೊಡ್ಡ ಮೊತ್ತ ಯಾಕಾಗಿ ರವಾನೆಯಾಯಿತು ಎಂಬ ಕುರಿತು ತನಿಖೆ ನಡೆಯುತ್ತಿದೆ. ಉತ್ತರ ಭಾರತದಲ್ಲಿ ಬಂಧಿತರಾದ ನಾಲ್ವರಿಗೆ ಆಯೇಷಾಳ ಖಾತೆಯಿಂದಲೇ ಹಣ ರವಾನೆಯಾಗಿರುವುದು ಸ್ಪಷ್ಟವಾಗಿದ್ದು, ಈ ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ. ಹವಾಲಾ ಮೂಲಕ ಬಂದ ಹಣ ಯಾರ್‍ಯಾರ ಕೈಸೇರುತ್ತಿತ್ತು? ಈ ಪ್ರಕರಣದ ಹಿಂದೆ ಇನ್ನೆಷ್ಟು ಕರಾಳ ಮುಖಗಳಿವೆ ಎಂಬುದು ಸಮಗ್ರ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ ಎನ್ನುವುದು ಬಿಹಾರ ಪೊಲೀಸರ ಅಭಿಪ್ರಾಯ. ಆಯೇಷಾ ಹೊಂದಿದ್ದ ಮಂಗಳೂರಿನ ಬ್ಯಾಂಕ್‌ನ ಒಂದರ ಖಾತೆಯನ್ನು (ಸಂಖ್ಯೆ ೦೦೧೪೦೫೫೦೦೦೮೬) ಜುಬೇರ್ ಸ್ವತಃ ನಿರ್ವಹಿಸುತ್ತಿದ್ದ. ಈತನೆ  ಬೇರೆ ಬೇರೆ ಕಡೆ ಹಣ ರವಾನಿಸಿರುವ ಸಾಧ್ಯತೆಯಿದೆ ಎಂದು ಬಿಹಾರದ ಲಕ್ಕಿಸ್‌ರಾಯಿ ಪೊಲೀಸ್ ಠಾಣೆ ಎಸ್‌ಐ ರಾಜ್ ಕಿಶೋರ್ ಸಿಂಗ್ ಮಾಹಿತಿ ನೀಡಿದ್ದಾರೆ. ಒಂದೇ ಖಾತೆಗೆ ನಾಲ್ವರು ಹಣ ಹಾಕುತ್ತಿದ್ದುದರ ಬಗ್ಗೆ ಅನುಮಾನಗೊಂಡು ಸಂತೋಷ್ ಕುಮಾರ್ ಎಂಬ ಪೊಲೀಸ್ ಅಧಿಕಾರಿ ಗೋಪಾಲ್ ಕುಮಾರ್, ಗಣೇಶ್ ಪ್ರಸಾದ್, ಪವನ್ ಕುಮಾರ್ ಮತ್ತು ವಿಕಾಸ್ ಕುಮಾರ್ ಎಂಬವರನ್ನು ಬಂಧಿಸಿದ್ದರು ಈ ವೇಳೆ ಅವರು ಆಯೇಷಾಳ ಹೆಸರು ತಿಳಿಸಿದ್ದರು ಎಂದು ಸಿಂಗ್ ತಿಳಿಸಿದ್ದಾರೆ. ಲಕ್ಕಿಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ ೪೨೦, ೪೬೭, ೪೬೮, ೪೭೧, ಕಾನೂನುಬಾಹಿರ ಚಟುವಟಿಕೆಗೆ ಸಂಬಂಧಿಸಿದಂತೆ ಯುಎಪಿಎ ಸೆಕ್ಷನ್ ೧೭, ೧೮, ೧೮ ಬಿ, ೨೮, ೩೮ ಅನ್ವಯ ಕೇಸು ದಾಖಲಾಗಿದೆ.
ಆಯೇಷಾ ಜಾಣೆ: ಅತ್ಯಂತ ಜಾಣ್ಮೆಯಿಂದಲೇ ಆಯೇಷಾ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿದ್ದಳು. ಐದು ರಾಷ್ಟ್ರೀಕೃತ ಬ್ಯಾಂಕ್ ಖಾತೆಗಳನ್ನು ಹೊಂದಿದ್ದ ಈಕೆ ಯಾರಿಗೂ ಅನುಮಾನ ಬಾರದಿರಲಿ ಎಂದು ಒಮ್ಮೆ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಳು ಎನ್ನಲಾಗಿದೆ.
ಜುಬೇರ್ ಸೂತ್ರಧಾರ ! ಆಶಾ ಆಗಿದ್ದ ವಿರಾಜಪೇಟೆಯ ಆಯೇಷಾ ಜುಬೇರ್‌ನನ್ನು ಮದುವೆಯಾದ ಬಳಿಕ ಆಯೇಷಾ ಆಗಿದ್ದಾಳೆ. ಪತ್ನಿಯನ್ನು ಮುಂದಿಟ್ಟು ತನ್ನ ಹವಾಲ ಹಣದ ರುಚಿ ಕಂಡಿದ್ದ ಜುಬೇರ್ ಪತ್ನಿಯನ್ನು ಮುಂದಿಟ್ಟುಕ್ಕೊಂಡೇ ತನ್ನ ಪಾಪೀ ಕೃತ್ಯ ಎಸಗಿರುವ ಸಾಧ್ಯತೆಯಿದೆ. ತನ್ನ ಪಾಪಿ ಕೃತ್ಯಕ್ಕಾಗಿಯೇ ಜುಬೇರ್ ಪ್ರೀತಿಯ ನಾಟಕವಾಡಿದನೇ?(ಲವ್ ಜಿಹಾದ್)ಎಂಬ ಕುರಿತೂ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆಯೇಷಾ ಸೇರಿದಂತೆ ಜುಬೇರ್‌ನ ಸಮಗ್ರ ವಿಚಾರಣೆಯಾದರೆ ಇನ್ನೆಷ್ಟು ಮಂದಿ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾರೆ? ಪ್ರೀತಿಯ ನಾಟಕಕ್ಕೆ ಬಲಿಯಾದ ಹಿಂದೂ ಯುವತಿಯರೆಷ್ಟು?ಎನ್ನುವ ಅಂಶಗಳು ಬೆಳಕಿಗೆ ಬರಲಿವೆ.
ರಾಜ್ಯದ ಎಲ್ಲಾ ಭಾಗದಲ್ಲಿಯೂ ಮುಸ್ಲಿಂ ಯುವಕರು ಹಿಂದು ಹೆಣ್ಣುಮಕ್ಕಳನ್ನು ಪ್ರೀತಿಸುವ ನಾಟಕವಾಡಿ ಅವರನ್ನು ಮದುವೆಯಾಗಿ ಭಯೋತ್ಪಾದನೆ, ಸೆಕ್ಸ್ ಮಾಫಿಯಾಗಳಿಗೆ ಬಲಿ ನೀಡುತ್ತಾರೆ ಎನ್ನುವ ಮಾತುಗಳು ಹಿಂದು ಹೆಣ್ಣುಮಕ್ಕಳಿಗೆ ಅರ್ಥವಾಗುತ್ತಿಲ್ಲ. ಜಗತ್ತಿನಲ್ಲಿ ಪ್ರೀತಿ ಮಾಡುವುದು ತಪ್ಪಲ್ಲ. ತಾನು ಪ್ರೀತಿಸಿದ ಯುವಕನಿಗಾಗಿ ತನ್ನ ಹೆತ್ತವರನ್ನೇ ದೂರಮಾಡುವ ಪ್ರೀತಿಯಿಂದ ಸಾಧಿಸುವುದಾದರೂ ಏನು? ತಂದೆ ಕಷ್ಟಪಟ್ಟು ದುಡಿದು ವಿದ್ಯಾಭ್ಯಾಸ ಕೊಡಿಸುತ್ತಾರೆ. ತನ್ನ ರಕ್ತವನ್ನೆ ಬಸಿದು, ಎದೆಹಾಲನ್ನಾಗಿ ತಾಯಿ ಉಣಬಡಿಸಿರುವುದನ್ನು ಮರೆತು ಪ್ರೀತಿಯ ಮೋಹಕ್ಕೆ ಬಲಿಯಾಗಿ ಓಡಿ ಹೋಗುತ್ತಾರೆ. ಇಂತಹ ಹೆಣ್ಣುಮಕ್ಕಳು ಅನೇಕರು ಸೆಕ್ಸ್‌ಮಾಫಿಯಾಗಳಿಗೆ, ಭಯೋತ್ಪಾದನೆಗೆ ಬಲಿಯಾಗುತ್ತಿದ್ದಾರೆ. ನಿಜವಾದ ಪ್ರೀತಿಯಾಗಿದ್ದರೆ ಆಕೆಗೆ ಅವರ ಮನೆಯಲ್ಲಿ ಉನ್ನತ ಸ್ಥಾನ ಸಿಗಬೇಕಿತ್ತು. ಆದರೆ ಅವರಿಗೆ ಎರಡು ಕಡೆಯಿಂದಲೂ ತಿರಸ್ಕಾರ. ಕೇವಲ ಮನೆಗಳಿಂದ ಮಾತ್ರವಲ್ಲ. ಎರಡೂ ಧರ್ಮಗಳಿಂದ ತಿರಸ್ಕಾರದ ನಡುವೆ ಇವರ ದಾಂಪತ್ಯದ ಹೆಣಗಾಟ ಮಾಡಬೇಕಾಗುತ್ತದೆ. ಮುಸ್ಲಿಂ ಯುವಕರನ್ನು ಪ್ರೀತಿಸಿ ಮದುವೆಯಾದ ಹೆಣ್ಣುಮಕ್ಕಳು ಅವರ ಮನೆಯನ್ನು ಬೆಳಗುವ ಜ್ಯೋತಿಯಾಗದೆ, ಕೇವಲ ಜೆರ್ಸಿ ದನದಂತೆ ವರ್ಷದಿಂದ ವರ್ಷಕ್ಕೆ ಮಕ್ಕಳನ್ನು ಹಡೆಯುವ ಯಂತ್ರವಾಗಿ ಮಾರ್ಪಡಾಗುತ್ತಿದ್ದಾಳೆ ಎನ್ನುವುದು ಘನಘೋರ ಸತ್ಯ. ಹಿಂದು ಧರ್ಮದಲ್ಲಿ ಸ್ವಚ್ಚಂದವಾಗಿ ಹಾರಾಡುತ್ತಿದ್ದ ಹೆಣ್ಣಮಗಳು ಲವ್‌ಜಿಹಾದ್‌ಗೆ ತುತ್ತಾಗಿ ಬುರ್ಖಾದೊಳಗೆ ತನ್ನ ಸೌಂದರ್ಯವನ್ನು ಮರೆಮಾಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವ ಸತ್ಯವನ್ನು ಅರಿಯಿರಿ..ಪೋಷಕರ ಮರ್ಯಾದೆ ಉಳಿಸುವುದರೊಂದಿಗೆ ಆಯೆಷಾಳಂತೆ ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ನೀಡುವ ದಾಳವಾಗದಂತೆ ಎಚ್ಚರಿಕೆ ವಹಿಸಿಕೊಳ್ಳಿ..ಏನಂತಿರಾ.


Sunday, 22 September 2013


ಸೇವೆಗೆ ಪರ್ಯಾಯ ಪದ  `ಯೂತ್ ಫಾರ್ ಸೇವಾ'

ಮಂಗಳೂರು: ಘೋರ ಚಳಿಯನ್ನೂ ಲೆಕ್ಕಿಸದೆ, ಜೀವದ ಹಂಗು ತೊರೆದು ದ್ರೋಹಿ ಪಾಕ್ ಸೈನಿಕರನ್ನು ಮಣಿಸಿ ಭಾರತಮಾತೆಯ ಅಂಗವಾದ ಕಾರ್ಗಿಲ್‌ನ್ನು ಶತ್ರುಗಳ ಹಿಡಿತದಿಂದ  ಗೆದ್ದು ವಿಜಯ ಸಾಧಿಸಿದಾಗಲೂ ನಮ್ಮ ಯೋಧರು ಯಾವುದೇ ಪ್ರಚಾರ ಬಯಸಿರಲಿಲ್ಲ. ಇಂಡಿಯನ್ ಆರ್ಮಿಯ ವಿಶೇಷತೆ ಇದು. ಕಾರ್ಗಿಲ್ ವಿಜಯ ಸಂಕೇತವಾಗಿ ಜು.೨೬ ರಂದು ವಿಜಯೋತ್ಸವ ಆಚರಿಸುತ್ತೇವೆ ಬಹಳ ಸಂಭ್ರಮದಿಂದ , ಗೌಜಿಯಿಂದ....
ಆದರೆ ಹಿಂದು ಸೇವಾ ಪ್ರತಿಷ್ಠಾನದ `ಯೂತ್ ಫಾರ್ ಸೇವಾ' ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆಯಾದ್ದು  ತೀರಾ ವಿಭಿನ್ನ ತೆರ ಮತ್ತು ಅನುಕರಣೀಯ ರೀತಿಯಲ್ಲಿ.ಕುಂದಾಪುರ ತಾಲೂಕಿನ ಆರ್ಡಿಯ ಸರಕಾರಿ ಮಾದರಿ ಹಿ. ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯದಂದು ನಡೆದ ವಿನೂತನ ಕಾರ್ಯಕ್ರಮಕ್ಕೆ  ಪ್ರಚಾರದ ಅಬ್ಬರವಿರಲಿಲ್ಲ.ಯಾವುದೇ ಕರಪತ್ರ ವಿತರಣೆಯಿಲ್ಲ,  ದುಂದು ವೆಚ್ಚರಹಿತ ತೀರಾ ಸರಳ ಕಾರ್ಯಕ್ರಮ ಅದಾಗಿತ್ತು. ನಿವೃತ್ತ ಶಿಕ್ಷಕ, ಜನಪ್ರತಿನಿಧಿಗಳನ್ನು ಶಾಲೆಯ ಪುಟಾಣಿ ಮಕ್ಕಳು ಪ್ರೀತಿಯಿಂದ ವೇದಿಕೆಗೆ ಬರಮಾಡಿಕೊಂಡರು. ಅತಿಥಿಗಳಿಂದ ಕಾರ್ಗಿಲ್ ವಿಜಯೋತ್ಸವ- ಯೋಧರ ಸಾಹಸ ಗಾಥೆಗಳನ್ನು ಕೇಳಿಸಿಕೊಂಡ ಪುಟಾಣಿಗಳು, ಹಿರಿಯರ  ಶುಭಹಾರೈಕೆಯ ನುಡಿಗಳೊಂದಿಗೆ ಉಚಿತ ಪುಸ್ತಕಗಳನ್ನು ಖುಷಿಯಿಂದ ಸ್ವೀಕರಿಸಿ ಕುಣಿದಾಡಿದರು.
ಸರ್ವ ಶಿಕ್ಷಣ ಅಭಿಯಾನದಲ್ಲಿ ,ಸರಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ನೆಲೆಯಲ್ಲಿ ಅಕ್ಷರ ದಾಸೋಹ, ಉಚಿತ ಬೈಸಿಕಲ್ ವಿತರಣೆ, ಮಕ್ಕಳ ದೇಹದಲ್ಲಿ ಕಬ್ಬಿಣಾಂಶ ಹೆಚ್ಚಿಸಲು ಮಾತ್ರೆ, ಪೌಷ್ಠಿಕಾಂಶ ವರ್ಧನೆಗೆ ಹಾಲು ವಿತರಣೆ ಹೀಗೆ  ಅನೇಕ ವಿದ್ಯಾರ್ಥಿಪರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಅಭಿವೃದ್ಧಿಪರ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದರೂ, ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತಗೊಳ್ಳುತ್ತಿದ್ದು, ಅನೇಕ ಕಡೆಗಳಲ್ಲಿ ಮುಚ್ಚುವಂತಹ ಸ್ಥಿತಿಯೇ ಗೋಚರಿಸುತ್ತಿದೆ. ಸರಕಾರಿ ಶಾಲೆಯ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಸರಕಾರೇತರ ಸಂಸ್ಥೆಯೊಂದು ಶ್ರಮಿಸುತ್ತಿರುವುದು ಗಮನಾರ್ಹ. ಈ ಸೇವಾಸಂಸ್ಥೆ  ಇನ್ಯಾವುದಲ್ಲ, ಹಿಂದು ಸೇವಾ ಪ್ರತಿಷ್ಠಾನದ ಅಂಗಸಂಸ್ಥೆ `ಯೂತ್ ಫಾರ್ ಸೇವಾ'(ವೈಎಫ್‌ಎಸ್).
ನಿರ್ಗತಿಕ ಮಕ್ಕಳಿಗೆ ಆಸರೆ, ಶಿಕ್ಷಣ.....
ಸಮಾಜದ ನಿರ್ಗತಿಕ ಮಕ್ಕಳಿಗೆ ಆಸರೆ ನೀಡಬೇಕು, ಆರ್ಥಿಕವಾಗಿ ಸಬಲರಲ್ಲದ ಕೊಳೆಗೇರಿಯ ಮಕ್ಕಳು ಹಾಗೂ ನಾನಾ ಕಾರಣಗಳಿಂದಾಗಿ ಶಿಕ್ಷಣಾವಕಾಶದಿಂದ ವಂಚಿತರಾದವರ ಶಿಕ್ಷಣಕ್ಕೆ ನೆರವಾಗಬೇಕು ಎಂಬ ಉದಾತ್ತ ಧ್ಯೇಯದಿಂದ ,ಸೇವಾ ಮನೋಭಾವವನ್ನೊಳಗೊಂಡ ಸಮಾನ ಮನಸ್ಕರ ಯುವಪಡೆಯು ೨೦೦೭ ಏಪ್ರಿಲ್‌ನಲ್ಲಿ ರಚನೆಯಾಯಿತು. ಈ ತಂಡವೇ ಯೂತ್ ಫಾರ್ ಸೇವಾ. ವೈಎಫ್‌ಎಸ್ ಸರಕಾರಿ ಶಾಲೆಗಳಿಗೆ, ಎನ್‌ಜಿಒ, ಸರಕಾರಿ ಆಸ್ಪತ್ರೆಗಳಿಗೆ ಹಾಗೂ ಸಾಮಾಜಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಇತರ ಸಂಸ್ಥೆಗಳಿಗೂ ಸಹಕಾರ ನೀಡುತ್ತಿದೆ. ವೈಎಫ್‌ಎಸ್‌ನ ಕಾರ್ಯಕರ್ತರು ತಮ್ಮ ವೃತ್ತಿಯ ಬಿಡುವಿನ ವೇಳೆಯಲ್ಲಿ ಸ್ವಯಂ ಪ್ರೇರಿತರಾಗಿ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮಾದರಿ ಸಂಸ್ಥೆ  ಹಿಂದು ಸೇವಾ ಪ್ರತಿಷ್ಠಾನದ ಒಂದು ಅಂಗವಾಗಿದೆ. 
ಉದಾತ್ತ ಧ್ಯೇಯಗಳಿವು...
ಶಾಂತಿ-ನೆಮ್ಮದಿಯುಕ್ತ  ಸ್ವಾವಲಂಬೀ ಸಮಾಜ ನಿರ್ಮಾಣದೊಂದಿಗೆ ಸಾಮರಸ್ಯ ಮತ್ತು ಬೆಳವಣಿಗೆಯನ್ನು ಸಾಧಿಸುವುದು ವೈಎಫ್‌ಎಸ್ ಕನಸು.  ಸ್ವಯಂ ಸೇವಕರಲ್ಲಿ ಸೇವಾ ಮನೋಭಾವವನ್ನು ಬಲಪಡಿಸುವುದು, ಸಮಾಜದಲ್ಲಿ  ಧನಾತ್ಮಕ ಪರಿವರ್ತನೆಗಳೊಂದಿಗೆ  ಅಧಿಕಾರ ಮತ್ತು ವ್ಯಕ್ತಿ ನಿರ್ಮಾಣ, ಸಂಸ್ಥೆಯ ಸೇವೆಗಳನ್ನು ಸಮುದಾಯಕ್ಕೆ ಪರಿಣಾಮಕಾರಿಯಾಗಿ ತಲುಪಿಸುವುದು ಸಂಘಟನೆಯ ಆಶಯವಾಗಿದೆ. ಸ್ವ-ಇಚ್ಛೆಯಿಂದ ಭಾರತೀಯ ಸಂಸ್ಕೃತಿಯ ಬುನಾದಿಯಲ್ಲಿ, ಅಭಿವೃದ್ಧಿಗೆ ಪೂರಕ  ಮಾದರಿಗಳ ರಚನೆ, ಪ್ರತೀ ಬಡ ವ್ಯಕ್ತಿಯ ಸಮರ್ಥ ಬದುಕಿಗೆ ಪ್ರೋತ್ಸಾಹದ ಜತೆ ಜತೆಗೆ ಸಮಗ್ರ ಸಮಾಜದ ಉನ್ನತಿಗೆ ಶ್ರಮಿಸುವ ಉದಾತ್ತ ಧ್ಯೇಯಗಳಿವೆ ವೈಎಫ್‌ಎಸ್ ಯುವಪಡೆಗೆ.
ವಿದ್ಯಾರ್ಥಿಗಳ ದತ್ತು ಸ್ವೀಕಾರ
ಶಿಕ್ಷಣಕ್ಕಾಗಿ ಸ್ಕೂಲ್ ಕಿಟ್ ವಿತರಣೆ, ವಿದ್ಯಾರ್ಥಿಯ ದತ್ತು ಸ್ವೀಕಾರ, ಬಿಡುವಿನ ವೇಳೆಯಲ್ಲಿ ಇಂಗ್ಲಿಷ್, ವಿಜ್ಞಾನ, ಕಂಪ್ಯೂಟರ್  ಸಹಿತ ಹಲವು ವಿಷಯಗಳ ಬೋಧನೆ, ಪರಿಸರವೆಂಬ ಪ್ರತ್ಯೇಕ ವಿಭಾಗದಲ್ಲಿ  ಗ್ರೀನ್ ಕ್ಲಬ್ಸ್, ಗ್ರೀನ್ ಕಮಾಂಡೋಸ್, ಹಸಿರು ಪರಿಸರ ಮತ್ತು ಚಿಗುರು ಕಾರ್ಯಕ್ರಮದ ಮೂಲಕ ಆರೋಗ್ಯ ರಕ್ಷಣೆ, ಡಾಕ್ಟರ್‍ಸ್ ಫಾರ್ ಸೇವಾ ಇತ್ಯಾದಿ ಕಾಯಕ್ರಮಗಳನ್ನು ನಡೆಸುತ್ತಿದೆ. ಸ್ಕೂಲ್ ಕಿಟ್ ವಿತರಣೆಯಲ್ಲಿ ಸ್ಕೂಲ್ ಬ್ಯಾಗ್, ನೋಟ್ ಪುಸ್ತಕಗಳು, ವಿದ್ಯಾ ಪರಿಕರಗಳನ್ನು ನೀಡಲಾಗುತ್ತಿದೆ. ಈ ವರ್ಷ ಸುಮಾರು ೧೦ಸಾವಿರಕ್ಕೂ ಅಧಿಕ ಮಕ್ಕಳು ಈ ಸೌಲಭ್ಯ ಪಡೆದರು. ೨೦೧೧ರಲ್ಲಿ ಬೆಂಗಳೂರಿನ ೫೮ ಶಾಲೆಗಳು ಹಾಗೂ ಬೆಂಗಳೂರು ಹೊರತು ಪಡಿಸಿ ೨೨ ಶಾಲೆಗಳ ಒಟ್ಟು ೮,೬೦೦ ಮಕ್ಕಳು ಸಂಸ್ಥೆಯ ಈ ಸೌಲಭ್ಯಕ್ಕೆ ಭಾಜನರಾಗಿದ್ದರು. ೨೦೦೯ ಜೂನ್‌ನಲ್ಲಿ ಪ್ರಾರಂಭಗೊಂಡ `ಸ್ಪಾನ್ಸರ್ ಎ ಚೈಲ್ಡ್ ' ಯೋಜನೆಯಡಿ  ೨೦೧೧-೧೨ರ ಸಾಲಲ್ಲಿ  ೫೩೪ ದಾನಿಗಳು ೮೩೬ ಮಕ್ಕಳನ್ನು ದತ್ತು ಸ್ವೀಕರಿಸಿದ್ದು, ಈ ಮಕ್ಕಳೀಗ ಶಿಕ್ಷಣ ಪಡೆಯುತ್ತಿದ್ದಾರೆ. 
ಉಚಿತ ಶಿಕ್ಷಣ
ಸರಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಸಂಸ್ಥೆಯ ಕಾರ್ಯಕರ್ತರು ತಮ್ಮ ಬಿಡುವಿನ ಅವಧಿಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಗಮನಾರ್ಹ. ಸೇವಾ ಮನೋಭಾವದ ಯೂತ್ ಫಾರ್ ಸೇವಾದ ಹಲವು ಯೋಜನೆಗಳಿಂದಾಗಿ, ಸಮಾಜದ ನಿರ್ಗತಿಕ ಮಕ್ಕಳು, ಆರ್ಥಿಕವಾಗಿ ಸಬಲರಲ್ಲದ ಕುಟುಂಬಗಳ  ಎಷ್ಟೋ ಮಕ್ಕಳು ಶಿಕ್ಷಣ ಭಾಗ್ಯದ ಜತೆ ಜತೆಗೆ ಬಹಳಷ್ಟು ಪ್ರಯೋಜನ ಹೊಂದುವಂತಾಗಿದೆ.
ರಾಜ್ಯದಲ್ಲೇ ಮಾದರಿ:
ದೇಶದ ಭೋಪಾಲ್, ದಿಲ್ಲಿ, ಚೆನ್ನೈ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ  ವೈಎಫ್‌ಎಸ್ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ಯೂತ್ ಫಾರ್ ಸೇವಾದ ಯೋಜನೆಯು ಪ್ರಥಮ ಬಾರಿಗೆ ಕರಾವಳಿಯ ಕುಂದಾಪುರ ತಾಲೂಕಿನ ಆರ್ಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ದೊರೆತಿರುವುದು ವಿಶೇಷ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ, ಮೂಲಭೂತ ಸೌಕರ್ಯಗಳ ಕೊರತೆಯಿರುವ ಅಲ್ಬಾಡಿ ಗ್ರಾಮದ ಆರ್ಡಿ ಶಾಲೆಯ ಮಕ್ಕಳಿಗೆ ಇಂತಹ ಸೇವೆ ಹೊಸತು.
ಆರ್ಡಿ ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದರೂ ೧೬೪ ವಿದ್ಯಾರ್ಥಿಗಳಿದ್ದಾರೆ. ವೈಎಫ್‌ಎಸ್‌ನಿಂದ ಈ ಬಾರಿ ಕಾರ್ಗಿಲ್ ವಿಜಯ ದಿನದಂದು ಉಚಿತ ನೋಟ್ ಪುಸ್ತಕ ಹಾಗೂ ವಿದ್ಯಾಸಲಕರಣೆಗಳನ್ನು  ಯೋಧರ ನೆನಪಲ್ಲಿ ವಿತರಿಸಿರುವುದು ರಾಜ್ಯದಲ್ಲೇ ಮಾದರಿ.
ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಸುರೇಶ್ ಶೆಟ್ಟಿ ಆರ್ಡಿ, ಶಾಲೆಯ ಮುಖ್ಯೋಪಾಧ್ಯಾಯ ಕೆ.ಗೋವಿಂದ ನಾಯ್ಕ, ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಣೇಶ್ ಕುಮಾರ ಅರಸಮ್ಮಕಾನು ಸಮರ್ಥವಾಗಿ ನಿರ್ವಹಿಸಿದ್ದರು. ಗಣೇಶ್ ಶೆಟ್ಟಿ ಕೊಂಜಾಡಿ, ಪ್ರತಾಪ ನಾಯ್ಕ, ಪ್ರಕಾಶ ಹಾಂಡ, ದಿನೇಶ್ ಹೆಗ್ಡೆ, ಸಂತೋಷ ನಾಯ್ಕರ ತಂಡವು ಸಹಕರಿಸಿತ್ತು.
ಮರೆಯಾಗುತ್ತಿದೆ
ಸೇವಾ ಮನೋಭಾವ:
ಪೋಷಕರು ಮಕ್ಕಳನ್ನು ಬೆಳೆಸುವಾಗ  ಮಕ್ಕಳಿಗೆ ಶಿಕ್ಷಣ ಕೊಡಿಸುವ ವೇಳೆ ಈ ವಿಷಯಗಳಲ್ಲಿ ಅವರಿಗೆ ಆಸಕ್ತಿ  ಇದೆಯೋ ಇಲ್ಲವೋ ಎಂಬುದನ್ನು ತಿಳಿಯುವ ಗೋಜಿಗೇ ಹೋಗುವುದಿಲ್ಲ.   ವಿದ್ಯಾರ್ಥಿಗಳು ರ್‍ಯಾಂಕ್ ಪಡೆಯಲು, ಸೀಟುಗಳನ್ನು ಪಡೆಯಲು ರೋಬೋಟ್‌ಗಳಂತೆ ಪೈಪೋಟಿ ನಡೆಸುತ್ತಾರೆ.  ರ್‍ಯಾಂಕ್ ಗಳಿಸುವ ಉದ್ದೇಶದಿಂದ ದಿನದ ೨೪ ಗಂಟೆಗಳೂ ಅಭ್ಯಾಸ ಮಾಡುತ್ತಾ, ಬಾಲ್ಯವನ್ನು ಯಾವಾಗಲೋ ಕಳಕೊಂಡಿರುತ್ತಾರೆ. ರ್‍ಯಾಂಕ್ ಬಂದರೆ ಮಾತ್ರ ಜೀವನ ಎಂಬ ಭಾವನೆಯನ್ನು ಮಕ್ಕಳಿಗೆ ಇಂಜೆಕ್ಟ್  ಮಾಡಿರುವುದೂ ಮಕ್ಕಳ ಈ ತೆರ ಮೆಂಟಾಲಿಟಿಗೆ ಕಾರಣ.  ಯಾವ ಕೋರ್ಸ್ ಮಾಡಿದರೆ ಭವಿಷ್ಯದಲ್ಲಿ ಎಷ್ಟು ಸಂಪಾದನೆ ಮಾಡಬಹುದು ಎಂಬ ಲೆಕ್ಕಾಚಾರ ಮೂಲಕ  ಸ್ವಾರ್ಥ ಮನೋಭಾವವೂ ಸದ್ದಿಲ್ಲದೇ ಮಕ್ಕಳ ವ್ಯಕ್ತಿತ್ವದಲ್ಲಿ ತುಂಬಿಕೊಳ್ಳುತ್ತದೆ. ಯಾವ ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ಸಿಕ್ಕಿರುವುದೋ  ಅವರಿಂದ ಮಾತ್ರ ಸೇವಾ ಮನೋಭಾವ ನಿರೀಕ್ಷಿಸಲು ಸಾಧ್ಯವಿದೆ . ಇದು ನಿವೃತ್ತ ಶಿಕ್ಷಕ ಜಗ್ಲುಗುಡ್ಡೆಯ ಬಾಬು ಶೆಟ್ಟಿ ಅವರ ಅಭಿಮತ. 
ಸಂಪಾದನೆಯೆನ್ನುವುದು ಸ್ವಂತಕ್ಕೆ ಮಾತ್ರ ಬಳಕೆಯಾಗದೇ ಸಮಾಜದ ದೀನರ ಸೇವೆಗೂ ಬಳಕೆಯಾಗಬೇಕು. ಹಿಂದು ಧರ್ಮದಲ್ಲಿ ನಮ್ಮ ಸಂಪಾದನೆಯ ಅತ್ಯಲ್ಪವನ್ನು ಸ್ವಂತಕ್ಕೂ, ಅಲ್ಪವನ್ನು ತಂದೆ-ತಾಯಿಯ ಆರೈಕೆಗೂ, ಒಂದಂಶವನ್ನು  ಧಾರ್ಮಿಕ ಕಾರ್ಯಕ್ಕೂ ಹಾಗೆ ಸಮಾಜ ಸೇವೆಗೂ ಮೀಸಲಿರಿಸಬೇಕು ಎನ್ನಲಾಗಿದೆ. ಇದೇ ರೀತಿ ಸಂಸ್ಕಾರ ಭರಿತರಾಗಿ ಹಿಂದು ಧರ್ಮದ ಸಂದೇಶಗಳನ್ನು ಪಾಲನೆ ಮಾಡುತ್ತಾ ಸೇವಾ ಮನೋಭಾವನೆಯಿಂದ ದುಡಿಯುತ್ತಿರುವ ಯೂತ್ ಫಾರ್ ಸೇವಾದ ಸೇವಾಕಾರ್ಯ ನಿಜಕ್ಕೂ ಅನುಕರಣೀಯ. 

ಅಭಿಮತ:
ಶಿಕ್ಷಣ ರಂಗದ ಅಭಿವೃದ್ಧಿಯಲ್ಲಿ ದಾನಿಗಳ ಹಾಗೂ ಸಂಘಸಂಸ್ಥೆಗಳ ಪಾತ್ರ ಹೆಚ್ಚಿನ ಮಹತ್ವ ಪಡೆಯುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲು ಇನ್ನೂ ಹೆಚ್ಚಿನ ಸೌಲಭ್ಯ ಹಾಗೂ ಪ್ರೋತ್ಸಾಹದ ಅಗತ್ಯವಿದೆ.
. ಪ್ರಕಾಶ ಶೆಣೈ-ಸ್ವ ಉದ್ಯೋಗಿ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಸಿಗುವ ಸೌಲಭ್ಯವನ್ನು ಉಪಯೋಗಿಸಿಕೊಂಡು ಉತ್ತಮ ಫಲಿತಾಂಶ ದಾಖಲಿಸುತ್ತಿರುವುದು ಶ್ಲಾಘನೀಯ. ಸರಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ಸೌಲಭ್ಯ ಒದಗಿಸುವ ಅನಿವಾರ್ಯತೆಯಿದೆ.
.ದೀಪಿಕಾ ಶೆಟ್ಟಿ  ಆರ್ಡಿ,
ಕುಂದಾಪುರ ತಾ.ಪಂ.ಅಧ್ಯಕ್ಷೆ.


ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಂಘಸಂಸ್ಥೆಗಳಿಂದ ಸಹಕಾರ ಸಿಗುವುದು ಬಹಳ ವಿರಳ. ಹಿಂದು ಸೇವಾ ಪ್ರತಿಷ್ಠಾನದ ಯೂತ್ ಫಾರ್ ಸೇವಾ ವತಿಯಿಂದ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯಾಗಿ ಮಕ್ಕಳ ಮುಖಗಳು ಅರಳಿವೆ. ನಗರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದರೂ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಗ್ರಾಮೀಣ ಸರಕಾರಿ ಶಾಲೆಯನ್ನು ಗುರುತಿಸಿ ಸೇವೆ ನೀಡಿರುವುದು ಗಮನಾರ್ಹ. ಇವರ ಸೇವೆಯು ಈ ಶಾಲಾ ಮಕ್ಕಳಿಗೆ ನಿರಂತರವಾಗಿರಲಿ.
. ಪಲ್ಲವಿ ಶೆಟ್ಟಿ ,
ಶಾಲಾ ಗೌರವ ಶಿಕ್ಷಕಿ








ದೇಶದ ಆರ್ಥಿಕತೆಯ ಬೆನ್ನೆಲುಬನ್ನೇ ಮುರಿಯುವ ಕೈಗಾರಿಕೆಯ ಅಗತ್ಯವಿದೆಯೇ? ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದ ಕುರಿತಾಗಿ ಒಂದಿಷ್ಟು..
(೧೨೦೦ ಮೆ.ಗಾ ವ್ಯಾಟ್ ನಂದಿಕೂರು ವಿದ್ಯುತ್ ಸ್ಥಾವರದ ದುಷ್ಪರಿಣಾಮ ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಇರುವ ಕರಾವಳಿ ಜನತೆಗೆ ೪ ಸಾವಿರ ಮೆ.ವ್ಯಾಟ್‌ನ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ..ಕೃಷಿ, ಪರಿಸರ, ಪುಣ್ಯಕ್ಷೇತ್ರ, ನದಿ-ಜಲಮೂಲಗಳಿಗೆ ಆಪತ್ತು)
ಮನೆಯ ಮಾಳಿಗೆ ನೋಡುತ್ತಾ ಅಂಗಾತ ಮಲಗಿರುವ ವ್ಯಕ್ತಿ ವರ್ಷವಿಡೀ ಕೂಗುತ್ತಿದ್ದಾನೆ. ಯಾತನಮಯ ನೋವಿನಿಂದ ಕಿರುಚಾಡುತ್ತಿದ್ದಾನೆ. ಆದರೂ ಆತ ಮಗುವಲ್ಲ. ಪ್ರಾಯವಾಗಿದ್ದರೂ ಮಗುವಿನಂತಿರುವ ನಡೆದಾಡಲು ಶಕ್ತಿಯಿಲ್ಲದೇ ಮನೆಯೊಳಗೆ ತೆವಳುತ್ತಾ ಅನೇಕ ವರ್ಷಗಳಿಂದ ಕಾಲ ಕಳೆಯುತ್ತಿದ್ದಾನೆ. ಒಂದೊಂದು ಮನೆಯಲ್ಲಿನ ಮಕ್ಕಳು ಕೂಡ ಯಾವುದೋ ಒಂದು ಸಮಸ್ಯೆಯಿಂದ ನರಳುತ್ತಿದ್ದಾರೆ. ಈ ಪ್ರದೇಶದಲ್ಲಿ ಸುಂದರ ಯುವತಿಯಿದ್ದರೂ, ಕೈ ಹಿಡಿದು ಬಾಳು ನೀಡುತ್ತೇನೆ ಎನ್ನುವುದಕ್ಕೆ ಯಾವ ಯುವಕರು ಮುಂದೆ ಬರುತ್ತಿಲ್ಲ. ಆ ಊರಿನ ಯುವಕರಿಗೆ ಬೇರೆ ಊರಿನವರು ಹೆಣ್ಣು ಕೊಡಲು ಯಾರು ಕೂಡ ಮುಂದೆ ಬರುತ್ತಿಲ್ಲ. ಹುಟ್ಟುವ ಮಕ್ಕಳು ಅಂಗವೈಕಲ್ಯದಿಂದ ಕೂಡಿದ್ದರೆ ಎನ್ನುವ ಭಯದಿಂದ ಹೆಣ್ಣು ಕೂಡ ಗರ್ಭ ಧರಿಸುವುದಿಲ್ಲ. ಇಂತಹ ಅನೇಕ ವೈರುದ್ಯಗಳಿಂದ ನಲುಗುತ್ತಿರುವ ಕೊಕ್ಕಡ, ಪಟ್ರಮೆ ಇತ್ಯಾದಿ ಪ್ರದೇಶಗಳ ಹೆಸರುಗಳನ್ನು ಕೇಳಿದರೆ ಮೈ ಜುಮ್ಮೆನ್ನುತ್ತದೆ. ಇದಕ್ಕೆ ಕಾರಣ ಮಹಾಮಾರಿ ಏಡ್ಸ್, ಕ್ಯಾನ್ಸರ್ ಅಲ್ಲವೇ ಅಲ್ಲಾ. ಅದಕ್ಕಿಂತಲೂ ಭೀಕರವಾದ ಎಂಡೋಸಲ್ಫಾನ್‌ನ ಪರಿಣಾಮವಿದು.
ನವ ಮಂಗಳೂರು ಬಂದರು ನಿರ್ಮಾಣಕ್ಕೆ ಫಲವತ್ತಾದ ಭೂಮಿ ಬಿಟ್ಟು ಕಾಟಿಪಳ್ಳ-ಕೃಷ್ಣಾಪುರ ಕೇಂದ್ರದಲ್ಲಿ ಕಡಿಮೆ ಸೆಂಟ್ಸ್‌ನಲ್ಲಿ ಮನೆಕಟ್ಟಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿರುವ ಅನ್ನದಾತನ ಬದುಕಿನ ಬವಣೆ ಅಧ್ಯಯನಕ್ಕೆ ಯೋಗ್ಯವಾಗಿದೆ. ಮಂಗಳೂರು ತೈಲಾಗಾರ ನಿರ್ಮಾಣಕ್ಕೆ ಭೂಸ್ವಾಧೀನವಾಗಿ ಈಗ ಚೇಳಾರಿನಲ್ಲಿ ಏದುಸಿರುವ ಬಿಡುತ್ತಿರುವ ನಿರ್ವಸಿತರು, ಎಂಎಸ್‌ಇಝೆಡ್ ಸ್ಥಾಪನೆಯಿಂದಾಗಿ ಭೂಮಿ ಕಳೆದುಕೊಂಡವರ ಸ್ಥಿತಿಗತಿ. ಪಡುಬಿದ್ರಿ ನಂದಿಕೂರು ವಿದ್ಯುತ್ ಸ್ಥಾವರದ ಸುಮಾರು ೩೦ ಕಿ.ಮೀ ಸುತ್ತಳತೆಯಲ್ಲಿ ಹಸಿರು ಗಿಡಗಳಿಂದು ನಳನಳಿಸುವುದಿಲ್ಲ. ಯುಪಿಸಿಎಲ್‌ನಿಂದ ಹಾರುವ ಬೂದಿಯ ಪ್ರಭಾವದಿಂದ ಪರಿಸರವೇ ನಾಶವಾಗಿದೆ ಎನ್ನುವುದಕ್ಕೆ ಇಲ್ಲಿರುವ ಹೂವು-ಹಣ್ಣುಗಳೇ ಸಾಕ್ಷಿ. ಅಭಿವೃದ್ಧಿಯ ಹೆಸರಿನಲ್ಲಿ ಲಗ್ಗೆಯಿಡುವ ಕೈಗಾರಿಕೆಗಳು ಮನುಷ್ಯರನ್ನು ಮನುಷ್ಯರಾಗಿ ಬದುಕಲು ಅವಕಾಶ ಕೊಡುವುದಿಲ್ಲ. ಕೈಗಾರಿಕೆಗಳು ಭೂಮಿಗೆ ಪರ್ಯಾಯವಾಗಿ ಹಣ ನೀಡಿದ್ದು, ನಮ್ಮ ಬದುಕನ್ನೆ ಕಿತ್ತುಕೊಂಡಿವೆ. ಭೂ ಮಾಲಿಕ ಕೈಗಾರಿಕೆಗಳ ಕಾರಣದಿಂದ ಫಲವತ್ತಾದ ಭೂಮಿ ಕಳೆದುಕೊಂಡು ನರಕ ಜೀವನ ನಡೆಸುತ್ತಿದ್ದಾನೆ. ಕೈಗಾರಿಕೆಗಳಿಗೆ ಭೂಮಿ ಬಿಟ್ಟುಕೊಟ್ಟ ರೈತ ಹಣದ ಥೈಲಿಯನ್ನು ಕೈಯಲ್ಲಿ ಹಿಡಿದುಕೊಂಡು ಬಾರು, ಮೋಜು ಮಸ್ತಿಯಲ್ಲಿ ಕಾಲ ಕಳೆದು ಬಿಕಾರಿಯಾಗುವ ಕಾಲ ಸನ್ನಿಹಿತವಾಗುತ್ತಿದೆಯೊ ಎನ್ನುವ ಭೀತಿ ಕಾಡುತ್ತಿದೆ.
ಮೇಲಿನ ಎಲ್ಲಾ ಅಂಶಗಳು ಸರಕಾರ ಜನಸ್ನೇಹಿ ಎನ್ನುವ ನೆಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿದ್ದರ ಹಿಂದೆ ಜನತೆಗೆ ಆಗಿರುವ ತೊಂದರೆಗಳ ವಾಸ್ತವ ಸತ್ಯ. ಕಡಂದಲೆ, ಕೊಜೆಂಟ್ರಿಕ್ಸ್ ಹಾನಿಕಾರಕ ಕೈಗಾರಿಕೆಗಳನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ಜನ ಹೆಮ್ಮೆ ಪಟ್ಟುಕೊಂಡರೂ ನಂದಿಕೂರು ಸ್ಥಾವರ ಇವೆರಡಕ್ಕಿಂತ ಹೇಗೆ ಭಿನ್ನ ಎಂದು ಇಂದು ಸಮರ್ಥನೆ ಮಾಡಲು ಸಾಧ್ಯವೇ? ಎಂಆರ್‌ಪಿಎಲ್ ತ್ಯಾಜ್ಯ ನೀರು ಹರಿಸುವ ಕೊಳವೆ ಅಳವಡಿಸುವ ಸಂದರ್ಭ ನಡೆದ ಗೋಲಿಬಾರ್‌ನಲ್ಲಿ ಗಾಯಗೊಂಡವರಿಗೆ ಪರಿಹಾರ, ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತು ಎನ್ನುವುದು ಬಿಟ್ಟರೆ ಶ್ರೀಸಾಮಾನ್ಯನಿಗೆ ಯಾವುದೇ ಪ್ರಯೋಜನ ಆಗಿಲ್ಲಎನ್ನುವುದು ಕಟುಸತ್ಯ. ನೆಲ-ಜಲ ನಮ್ಮದು. ಆದರೆ ಇಲ್ಲಿ ತಯಾರಾಗುವ ಪೆಟ್ರೋಲ್ ಕಡಿಮೆ ದರದಲ್ಲಿ ಬಳಕೆ ಮಾಡುವ ಭಾಗ್ಯ ರಾಜಧಾನಿ ದೆಹಲಿ ಜನಕ್ಕೆ. ಉದ್ಯೋಗದ ಆಯ್ಕೆಯಲ್ಲೂ ಅವರದ್ದೇ ಮಾನದಂಡ, ಅವರದ್ದೇ ಜನ. ಇಲ್ಲಿಯೂ ತಾರತಮ್ಯವಿದ್ದರೂ, ಎಲ್ಲರೂ ಭಾರತೀಯರು ಎನ್ನುವ ಸಮಾಧಾನ ಒಂದೆಡೆ.
ನಾನೀಗ ಹೇಳ ಹೊರಟಿರುವುದು ದೇಶದ ಬೆನ್ನೆಲುಬಿಗೆ ಏಟಾಗಿರುವ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ನಮ್ಮ ಘನ ಆಡಳಿತ ವ್ಯವಸ್ಥೆ ಮುಂದಾಗಿದೆ. ರೈತ ದೇಶದ ಬೆನ್ನೆಲುಬು ಎನ್ನುವುದು ಎಲ್ಲರಿಗೂ ಗೊತ್ತು. ಅವರಿಂದಲೇ ದೇಶದ ಶೇ.೬೫ರಷ್ಟು ಆರ್ಥಿಕತೆ ದೇಶದ ಮೇಲಾಗುತ್ತದೆ ಎಂದಾಗ ರೈತರ ಸಾಮರ್ಥ್ಯವನ್ನು ಒಪ್ಪಿಕೊಳ್ಳಲೇಬೇಕಲ್ಲವೇ? ಕರಾವಳಿಯ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಪ್ರಸ್ತಾಪಿಸಿರುವ ಕೊಲತ್ತಾರು ಪದವು ಪ್ರದೇಶದಲ್ಲಿ ಹಲವಾರು ರೈತ ಕುಟುಂಬ ಕೃಷಿಯೊಂದಿಗೆ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಈ ಯೋಜನೆಯ ಮೂಲಕ ರೈತರ ಜೀವನ ಹಾಳುಗೆಡವಿದರೆ ದೇಶದ ಬೆನ್ನೆಲುಬು ಮುರಿದಂತಾಗುವುದಿಲ್ಲವೇ?
ಯೋಜನೆಗೆ ಪ್ರಸ್ತಾಪಿಸಿರುವ ಭೂಮಿಯು ಅನುಪಯುಕ್ತ ಪಾಳು ಭೂಮಿ ಎನ್ನುವುದು ಈ ಭೂಮಿ ಗುರುತಿಸಿರುವ ಆಡಳಿತ ಶಾಹಿಗಳ ಹುರುಳಿಲ್ಲದ ವಾದ. ಯೋಜನೆಯ ಪ್ರಾರಂಭಿಕ ಹಂತದಲ್ಲಿ ಒಟ್ಟು ೭೫೦ ಎಕರೆ ಭೂಮಿ ಬೇಕಾಗಿದ್ದು ಇದೀಗ ಗುರುತು ಮಾಡಿರುವ ಭೂಮಿಯಲ್ಲಿ ಸುಮಾರು ೨೦೦ ಎಕರೆಯಷ್ಟು ಸ್ಥಳವು ಗೋಮಾಳದ ಹೊರತಾಗಿ ಉಳಿದ ೫೫೦ ಎಕ್ರೆಗಿಂತ ಹೆಚ್ಚಿನ ಜಾಗದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಇಂದು ನಿಡ್ಡೋಡಿಗೆ ಭೇಟಿ ನೀಡಿದರೆ ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಪ್ರಕೃತಿ ಮಾತೆಯು ನಮ್ಮನ್ನು ಕೈಬೀಸಿ ಕರೆಯುತ್ತಿದ್ದಾಳೆ. ಕಣ್ಣು ಹಾಯಿಸಿದಷ್ಟು ಉದ್ದಕ್ಕೆ ನಾಟಿ ಮಾಡಿರುವ ಹೊಲಗದ್ದೆಗಳು, ಕಬ್ಬು, ಅಡಿಕೆ, ತೆಂಗು, ಕರಿಮೆಣಸು, ವೀಳ್ಯದೆಲೆ ಮೊದಲಾದ ಬೆಳೆಗಳನ್ನು ನಿಡ್ಡೋಡಿಯ ಕೊಲತ್ತಾರು ಪದವು ಪ್ರದೇಶದಲ್ಲಿ ಕಣ್ತುಂಬ ನೋಡಬಹುದು.
ವೈಜ್ಞಾನಿಕ ಯುಗದಲ್ಲಿ ಕೃಷಿಯಿಂದ ವಿಮುಖರಾಗುತ್ತಿರುವವರು ಹೆಚ್ಚಾಗಿದ್ದಾರೆ. ಆದರೂ ಕೊಲತ್ತಾರು ಪದವಿನ ಕಂಬಳ ಗದ್ದೆಯಲ್ಲಿ ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಈ ಜಮೀನಿನ ಮಾಲಕ ಮಾದವ ಗೌಡ. ನಾವು ನಮ್ಮ ಹಿರಿಯರ ಕಾಲದಿಂದ ಇಲ್ಲಿಯೇ ವಾಸವಾಗಿದ್ದೇವೆ. ನಮಗೆ ಕೃಷಿ ಕೆಲಸ ಬಿಟ್ಟರೆ ಬೇರಾವುದೇ ಕೆಲಸಗಳು ತಿಳಿದಿಲ್ಲ. ನಮ್ಮ ಜೀವ ಏನಿದ್ದರೂ, ಈ ಭೂಮಿಯಲ್ಲಿಯೇ ಇದೆ. ಇಲ್ಲಿಂದ ನಮ್ಮನ್ನು ತೊರೆಯುವಂತೆ ಮಾಡಿದರೆ ಪ್ರಾಣಬಿಟ್ಟೆವು ಹೊರತು ಇಲ್ಲಿಂದ ಕದಲುವುದಿಲ್ಲ. ಹುಟ್ಟಿದ ಭೂಮಿಯಲ್ಲಿಯೇ ಸಾಯಲು ಬಯಸುತ್ತೇವೆ ಎಂದಾಗ ಗೌಡರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿರುವುದನ್ನು ಕಂಡಾ ದೇಶ ಕಾಯುವ ಸೈನಿಕರಿಗೂ, ಕೃಷಿ ಭೂಮಿಯನ್ನೇ ತಮ್ಮ ಜೀವನವನ್ನಾಗಿಸಿದ ರೈತರ ಭೂಮಿಯ ಪ್ರೀತಿ ಯಾವ ರೀತಿಯದ್ದೆನ್ನುವುದು ದೃಢಪಡುತ್ತದೆ.
ನೀರಾವರಿ ಪ್ರದೇಶ:
ಕೊಲತ್ತಾರು ಪದವು ಎನ್ನುವ ಪ್ರದೇಶವು ಹೆಸರಿಗೆ ಮಾತ್ರ ಪದವು( ತುಳುಭಾಷೆಯಲ್ಲಿ ಪದವು ಎಂದರೆ ಗುಡ್ಡ ಪ್ರದೇಶ) ಆಗಿದ್ದರೂ ಕೂಡ ಅಲ್ಲಿ ವರ್ಷಪೂರ್ತಿ ನೀರಿನ ಬರ ಎದುರಾಗುವುದಿಲ್ಲ ಎಂಬುದಕ್ಕೆ ಕಂಬಳ ಗದ್ದೆಯಲ್ಲಿ ಮೂರು ಬೆಳೆಗಳನ್ನು ಬೆಳೆಯುವುದು ಹಾಗೂ ತುಂಬಿದ ಬಾವಿಯಿಂದ ಹರಿದು ಹೋಗುತ್ತಿರುವ ನೀರೇ ಸಾಕ್ಷಿ. ನಿಡ್ಡೋಡಿ ಗ್ರಾಮಕ್ಕೆ ನೀರಿನ ಪೂರೈಕೆ ಮಾಡಲು ಏಕೈಕ ಬೋರ್‌ವೆಲ್‌ನ್ನು ಸ್ಥಳೀಯ ಗ್ರಾಮ ಪಂಚಾಯತ್ ಅವಲಂಬಿಸಿದ್ದು ಆ ಬೋರ್ ವೆಲ್ ಇದೇ ಕೊಲತ್ತಾರು ಪದವು ಪ್ರದೇಶದಲ್ಲಿದೆ. ವರ್ಷ ಪೂರ್ತಿ ಇಡೀ ಗ್ರಾಮಕ್ಕೆ ಈ ಬೋರ್ ವೆಲ್‌ನಿಂದಲೇ ಯಾವುದೇ ವ್ಯತ್ಯಯವಿಲ್ಲದೆ ನೀರು ಪೂರೈಕೆಯಾಗುತ್ತಿದೆ. ಯೋಜನೆಗೆ ಹೆಚ್ಚಿನ ಪ್ರಮಾಣದ ನೀರಿರುವುದರಿಂದ ಸರ್ಕಾರ ಈ ಭೂಮಿ ಆಯ್ಕೆ ಮಾಡಿರಬಹುದು. ಹಾಗಾಗಿ ಇಲ್ಲಿ ನಮಗೆ ವರವಾಗಿರುವ ನೀರೇ ಶಾಪವಾಗಿ ಪರಿಣಮಿಸಿದೆ ಎಂಬುದು ಸ್ಥಳೀಯರ ದುಗುಡ.
ಕೃಷಿಯೊಂದಿಗೆ ಹೈನುಗಾರಿಕೆ:
ಸ್ಥಳೀಯ ನಿವಾಸಿಗಳು ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆ ಕೂಡ ಮಾಡುತ್ತಿದ್ದಾರೆ. ಈ ಪ್ರದೇಶದ ಯಾವುದೇ ಮನೆಗಳಿಗೆ ಭೇಟಿ ನೀಡಿದರೂ ಕೂಡ ಮನೆಯ ಹಿತ್ತಲಲ್ಲಿನ ಹಟ್ಟಿಯಲ್ಲಿರುವ ಮೂರರಿಂದ ನಾಲ್ಕು ಹಸುಗಳು ಅಂಬಾ, ಅಂಬಾ ಎನ್ನುವ ಕೂಗಿನಿಂದ ನಮ್ಮನ್ನು ಸ್ವಾಗತಿಸುತ್ತವೆ. ಸುಮಾರು ೪೦೦ ರಾಸುಗಳು ಮೇಯಲು ಸರ್ಕಾರಿ ಭೂಮಿ ಹಾಗೂ ಗೋಮಾಳವಾಗಿರುವ ಸುಮಾರು ೨೦೦ ಎಕರೆ ಪ್ರದೇಶವನ್ನೇ ಅವಲಂಬಿಸಿದ್ದಾವೆ. ನಿಡ್ಡೋಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸೊಸೈಟಿ ಇದ್ದು ಇಲ್ಲಿಗೆ ವರ್ಷಕ್ಕೆ ಹೆಚ್ಚಿನ ಹಾಲು ಪೂರೈಕೆಯಾಗುತ್ತಿರುವುದು ಇದೇ ಕೊಲತ್ತಾರು ಪದವಿನಿಂದ.
ಕಲುಷಿತಳಾಗುವಳು ನಂದಿನಿ:
ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ನಿಡ್ಡೋಡಿ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಗೂ ವ್ಯತಿರಿಕ್ತ ಪರಿಣಾಮವುಂಟಾಗುವುದು ಖಂಡಿತ. ಪುಣ್ಯಕ್ಷೇತ್ರ ಕಟೀಲಿನಲ್ಲಿ ಹರಿಯುವ ಪುರಾಣ ಪ್ರಸಿದ್ದ ನಂದಿನಿ ಹೊಳೆಯು ನಿಡ್ಡೋಡಿ ಹಾಗೂ ಮುಚ್ಚೂರು ಗ್ರಾಮಗಳಲ್ಲಿ ಹರಿದು ಆ ನಂತರ ಕಟೀಲ್‌ಗೆ ತಲುಪುತ್ತದೆ. ಹೆಚ್ಚಿನವರಿಗೆ ನಂದಿನಿ ಕಟೀಲು ಕ್ಷೇತ್ರದಲ್ಲಿ ಮಾತ್ರ ಪರಿಚಿತವಾಗಿದೆಯೇ ಹೊರತು ನಿಡ್ಡೋಡಿ ಪ್ರದೇಶದಲ್ಲಲ್ಲ. ಯೋಜನೆಯು ಜಾರಿಯಾದರೆ ಅಲ್ಲೇ ಪಕ್ಕದಲ್ಲಿ ಹರಿಯುವ ನಂದಿನಿ ಕಲುಷಿತಳಾಗುವುದರಲ್ಲಿ ಎರಡು ಮಾತಿಲ್ಲ. ನಂದಿನಿ ಹರಿಯುವ ಪ್ರದೇಶದ ಉದ್ದಕ್ಕೂ ಸುಮಾರು ಮೂರು ಕಿಲೋಮಿಟರುಗಳವರೆಗೆ ನಂದಿನಿಯನ್ನೇ ಆಶ್ರಯಿಸಿ ಬದುಕು ಸಾಗಿಸುವ ರೈತರ ಕೃಷಿ ಭೂಮಿಗೆ ಕಲುಷಿತ ನೀರು ಹರಿದು ಅವರು ಕೂಡ ಸಂಕಷ್ಟ ಪಡಬೇಕಾಗಬಹುದು ಎನ್ನುವ ಆತಂಕ ಜನತೆಯಲ್ಲಿ ಮನಮಾಡಿದೆ.
ಈ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಕೇವಲ ನಿಡ್ಡೋಡಿ ಪ್ರದೇಶದ ಜನರು ಮಾತ್ರ ನಿರಾಶ್ರಿತರಾಗದೆ ಸುತ್ತಮುತ್ತಲಿನ ಗ್ರಾಮಗಳಾದ ಮುಚ್ಚೂರು, ತೆಂಕ ಮಿಜಾರು, ಬಡಗ ಮಿಜಾರು ಗ್ರಾಮಗಳ ಜನರು ಕೂಡ ಸಂಕಷ್ಟ ಎದುರಿಸಬೇಕಾಗುತ್ತದೆ. ಇಲ್ಲಿಂದ ಹಾರುವ ಹಾರು ಬೂದಿ ಸುತ್ತಮುತ್ತಲಿನ ಕೃಷಿ ಭೂಮಿಗಳಿಗೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಲ್ಲದು ಎಂಬುದು ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಸ್ಥಾಪಿಸಿರುವ ಯುಪಿಸಿಎಲ್ ನಿಂದಾಗಿರುವ ಅಡ್ಡಪರಿಣಾಮಗಳೇ ಸಾಕ್ಷಿ. 
ಕೇಂದ್ರ ಸರ್ಕಾರ ತನ್ನ ಪ್ರಾಯೋಜಕತ್ವದಲ್ಲಿ ಈ ಪ್ರದೇಶದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲು ಮನಮಾಡುತ್ತಿದೆ. ನಿಡ್ಡೋಡಿ, ಮೂಡುಬಿದಿರೆ ವಿಧಾನ ಸಭಾ ವ್ಯಾಪ್ತಿಗೆ ಒಳಪಟ್ಟಿರುವ ಗ್ರಾಮ. ಕೆಲ ದಿನಗಳ ಹಿಂದೆ ನೆಮ್ಮದಿಯಿಂದ ತಮ್ಮ ಪಾಡಿಗೆ ತಮ್ಮ ಕೃಷಿ ಚಟುಚಟಿಕೆಗಳನ್ನು ಮಾಡಿಕೊಂಡು ಯಾರದ್ದೇ ಹಂಗಿಲ್ಲದೆ ಜೀವಿಸುತ್ತಿದ್ದ ಈ ಗ್ರಾಮದ ಹಾಗೂ ಆಸುಪಾಸಿನ ಗ್ರಾಮದ ಜನರು ಇಂದು ಆತಂಕದಿಂದಲೇ ದಿನಗಳೆಯುತ್ತಿದ್ದಾರೆ.
ಈ ಹಿಂದೆ ಇಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುತ್ತಾರೆ ಎಂಬ ವದಂತಿ ಮಾತ್ರ ಇತ್ತು. ಆದರೆ ಮೇ ೧೬ ರಂದು ಕೇಂದ್ರ ಸರ್ಕಾರದ ಸಮಿತಿಯೊಂದು ಸಮೀಕ್ಷೆಗಾಗಿ ಈ ಪ್ರದೇಶಕ್ಕೆ ಆಗಮಿಸಿದ ಸಂದರ್ಭದಲ್ಲಿ ಊರಿನವರೆಲ್ಲರಿಗೂ ಬರಸಿಡಿಲು ಬಡಿದಂತಾದರೂ ಎಲ್ಲರೂ ಒಟ್ಟಾಗಿ ತಮ್ಮ ಪ್ರತಿಭಟನೆಗೆ ಸಿದ್ದರಾದರು. ಆ ಸಂದರ್ಭ ಸ್ಥಳೀಯರು, ಬಂದಿರುವ ಅಧಿಕಾರಿಗಳಲ್ಲಿ ಬಂದಿರುವ ಕಾರಣ ಕೇಳಿದಾಗಲೂ ಸ್ಪಷ್ಟ ಉತ್ತರವನ್ನು ತಂಡದಲ್ಲಿದ್ದ ಯಾವುದೇ ಅಧಿಕಾರಿಗಳು ನೀಡಿಲ್ಲ. ಮಾದ್ಯಮದವರು ಬಂದು ಕೇಳಿದಾಗ ನಾವು ಸರ್ವೆ ಮಾಡಲು ಬಂದಿದ್ದೇವೆ ಎಂದು ಹೇಳಿದರು. ಗ್ರಾಮಸ್ಥರು ಬಹಳ ಮುಗ್ದತೆಯಿಂದ ಮಾದ್ಯಮದವರಿಂದಾಗಿ ನಮಗೆ ನಮ್ಮೂರಿನಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾಗುತ್ತದೆ ಎನ್ನುವುದು ತಿಳಿಯಿತೇ ಹೊರತು ಬೇರಾರೂ ನಮಗೆ ಆ ಬಗ್ಗೆ ತಿಳಿಸಿಲ್ಲ ಎನ್ನುತ್ತಿದ್ದಾರೆ.
ಸ್ಪಷ್ಟ ಮಾಹಿತಿ ನೀಡದ ಸರ್ಕಾರ:
ತಮ್ಮೂರಿನಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾಗುತ್ತದೆ ಎಂದು ನಮಗೆ ಮಾದ್ಯಮಗಳಿಂದ ತಿಳಿದ ತಕ್ಷಣ ನಾವು ಸರ್ಕಾರದ ವಿವಿಧ ಇಲಾಖೆಗಳಿಗೆ ತೆರಳಿ ಮಾಹಿತಿ ಪಡೆಯಲು ಪ್ರಯತ್ನಿಸಿದೆವು. ಆದರೆ ಅಂದಿನಿಂದ ಇಂದಿನವರೆಗೂ ಯಾರೂ ಕೂಡ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸ್ಥಳೀಯ ಶಾಸಕರು, ಸಂಸದರು ಹಾಗೂ ಜಿಲ್ಲೆಯ ಇತರ ಜನಪ್ರತಿನಿಧಿಗಳನ್ನು ಭೇಟಿಯಾಗಿ ನಮ್ಮ ಕಷ್ಟ ತೋಡಿಕೊಂಡಾಗ ಎಲ್ಲರೂ ನಾವು ಸ್ಥಾವರ ಸ್ಥಾಪನೆಯಾಗಲು ಬಿಡುವುದಿಲ್ಲ ಎನ್ನುತ್ತಾರೆ. ಆದರೆ ಯಾರೊಬ್ಬರೂ ಇದನ್ನು ಬಲವಾಗಿ ವಿರೋಧಿಸಿಲ್ಲ. ಇಂದು ನಾವು ಎಲ್ಲಾ ರಾಜಕಾರಣಿಗಳಲ್ಲಿ ವಿಶ್ವಾಸ ಕಳೆದುಕೊಂಡಿದ್ದು, ನಮ್ಮ ಹೋರಾಟವನ್ನು ರಾಜಕೀಯ ರಹಿತವಾಗಿ ಮಾಡಲು ನಮ್ಮದೇ ಮುಂದಾಳತ್ವದಲ್ಲಿ 'ಮಾತೃಭೂಮಿ ಸಂರಕ್ಷಣಾ ಸಮಿತಿ' ಎಂಬ ಸಮಿತಿ ನಿರ್ಮಿಸಿ, ಹೋರಾಟದ ರೂಪುರೇಷೆಗಳನ್ನು ರಚಿಸಿ ಅದರಂತೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳುವ ಗ್ರಾಮಸ್ಥರಲ್ಲಿ ತಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಬಗೆಗೆ ತಮಗಿದ್ದ ಹತಾಶ ಭಾವನೆ ಅವರ ಮುಖದಲ್ಲಿ ವ್ಯಕ್ತವಾಗುತ್ತಿತ್ತು. ಮಠಾಧೀಶರು ಹಾಗೂ ರಾಜಕಾರಣಿಗಳೆಲ್ಲರೂ ಪತ್ರಿಕೆಗಳಲ್ಲಿ ನಾವು ನಿಡ್ಡೋಡಿ ಯೋಜನೆ ವಿರೋಧಿಸುತ್ತೇವೆ ಎನ್ನುತ್ತಾರೆಯೇ ಹೊರತು ಯಾರೂ ನಮ್ಮ ಬಳಿಗೆ ಬಂದು ನಮ್ಮ ಕಷ್ಟ ವಿಚಾರಿಸಿಲ್ಲ. ಕೆಲವರು ಈ ಯೋಜನೆಯನ್ನು ತಮ್ಮ ಪ್ರಚಾರ ವಸ್ತುವನ್ನಾಗಿ ಮಾಡಲು, ಪತ್ರಿಕೆಗಳಿಗೆ ಹೇಳಿಕೆ ನೀಡುತ್ತಿದ್ದಾರೆ. ಈ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯು ಬಹಳಷ್ಟು ಹಿಂದೆಯೇ ಪ್ರಸ್ತಾವನೆಯಲ್ಲಿದ್ದ ಯೋಜನೆಯೇ ಎನ್ನುವ ಸಂಶಯವೂ ಕಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇಂತಹ ಹಳ್ಳಿ ಪ್ರದೇಶಗಳಿಗೆ ತೆರಳುವ ರಸ್ತೆಗಳನ್ನು ಸರ್ಕಾರವು ಸಾಕಷ್ಟು  ವರ್ಷಗಳ ಹಿಂದೆಯೇ ಅಗಲವಾಗಿ ಅಭಿವೃದ್ದಿಪಡಿಸಿರುವುದು. ಜಿಲ್ಲೆಯ ಇತರ ಯಾವುದೇ ಗ್ರಾಮೀಣ ಪ್ರದೇಶಗಳಿಗೆ ತೆರಳುವ ರಸ್ತೆಯೂ ಈ ರೀತಿ ಅಭಿವೃದ್ದಿ ಹೊಂದಿಲ್ಲ ಎನ್ನುವುದು ಕೂಡ ಗಮನಿಸಬೇಕಾದ ಅಂಶ.
ಆಸ್ತಿಕರ ಶ್ರದ್ದಾ ಕೇಂದ್ರವಾಗಿ ಜಗತ್ತಿನಾದ್ಯಂತ ಇರುವ ಆಸ್ತಿಕರನ್ನು ಸೆಳೆಯುವ ಪುರಾಣ ಪ್ರಸಿದ್ದ ನಂದಿನಿ ನದಿ ತಟದಲ್ಲಿರುವ ಶ್ರೀ ಕ್ಷೇತ್ರ ಕಟೀಲಿಗೆ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದಿಂದ ಹೆಚ್ಚಿನ ಅಪಾಯ ಕಾದಿದೆ ಎಂಬುದು ನಿಡ್ಡೋಡಿ ಪರಿಸರದ ಜನರ ಗೋಳಾಗಿದೆ. ಈ ಬಗ್ಗೆ ಅವರನ್ನು ವಿಚಾರಿಸಿದರೆ, ಕಟೀಲು ಕ್ಷೇತ್ರದಲ್ಲಿ ಹರಿಯುವ ನಂದಿನಿ ನದಿಯು ನಿಡ್ಡೋಡಿ ಪರಿಸರದಲ್ಲೇ ಹರಿಯುತ್ತಿದೆ. ಇಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಅದರಿಂದ ಉತ್ಪತ್ತಿಯಾಗುವ ತ್ಯಾಜ್ಯವು ನದಿಗೆ ಸೇರಿ ಮಲಿನಗೊಳ್ಳುತ್ತದೆ. ಇದರಿಂದ ಕಟೀಲು ಕ್ಷೇತ್ರ ಕೂಡ ಮಲಿನವಾಗುವುದು ಎಂಬುದು ಜನರ ಅಳಲು.
ಕಟೀಲು ಕ್ಷೇತ್ರಕ್ಕೆ ತೊಂದರೆ:
ನಿಡ್ಡೋಡಿ ಸ್ಥಾವರದಿಂದ ಕಟೀಲಿಗಾಗುವ ದುಷ್ಪರಿಣಾಮದ ಬಗ್ಗೆ ಶ್ರೀ ಕ್ಷೇತ್ರ ಕಟೀಲಿನ ಮುಖ್ಯ ಅರ್ಚಕ ಲಕ್ಷ್ಮಿನಾರಾಯಣ ಅಸ್ರಣ್ಣರನ್ನು ಟೈಮ್ಸ್ ಆಫ್ ಧೀನಬಂದು ಮಾತನಾಡಿಸಿದಾಗ ನಿಡ್ಡೋಡಿ ಸ್ಥಾವರದಿಂದಾಗಿ ನಿಡ್ಡೋಡಿಗಿಂತಲೂ ಜಾಸ್ತಿಯಾಗಿ ಕಟೀಲಿಗೆ ಹಾನಿಯಾಗಲಿದೆ. ನಿಡ್ಡೋಡಿ ಪರಿಸರವು ಭೌಗೋಳಿಕವಾಗಿ ಅತಿ ಚಿಕ್ಕದಾಗಿದ್ದರೂ ಕೂಡ ಸುತ್ತಮುತ್ತಲಿನ ಹತ್ತು ಹಳ್ಳಿಗಳು ಅದನ್ನೇ ಅವಲಂಬಿಸಿವೆ. ಈ ಪ್ರದೇಶಕ್ಕೆ ಶಿಖರ ಪ್ರಾಯವಾಗಿ ನಿಡ್ಡೋಡಿ ಇದೆ. ಅಲ್ಲಿನ ಜನರು ಶ್ರಮಜೀವಿಗಳಾಗಿದ್ದು ಕೃಷಿಯಿಂದ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಕಟೀಲು ಕ್ಷೇತ್ರಕ್ಕೂ ಆ ಪ್ರದೇಶದ ಜನರೇ ಬೆಳೆಸಿದ ತರಕಾರಿ ಪೂರೈಕೆಯಾಗುತ್ತಿದೆ. ಅಲ್ಲಿ ಹಸಿರು ತುಂಬಿ ತುಳುಕುತ್ತಿದ್ದು, ಕೈಗಾರಿಕೆ ಸ್ಥಾಪನೆಯಾದರೆ ಪರಿಸರ ನಾಶವಾಗುವುದರೊಂದಿಗೆ ಜನರ ಭಾವನಾತ್ಮಕ ಸಂಬಂಧಗಳಿಗೆ ಘಾಸಿಯಾಗುವುದು ಖಂಡಿತ ಎಂದಿದ್ದಾರೆ.
ಮಂಗಳೂರಿನಲ್ಲಿ ಈಗಾಗಲೇ ಸ್ಥಾಪನೆಯಾಗಿರುವ ಎಂಆರ್‌ಪಿಎಲ್ ನಂತಹ ಕೈಗಾರಿಕೆಗಳಿಂದ ವಾತಾವರದಲ್ಲಿ ಸಾಕಷ್ಟು ಏರುಪೇರುಗಳಾಗಿದ್ದು, ಮತ್ತೆ ಇದೇ ಪರಿಸರದಲ್ಲಿ ಕೈಗಾರಿಕೆ ಸ್ಥಾಪನೆಯಾದರೆ ಹಾನಿ ಖಂಡಿತ. ಶ್ರೀ ಕ್ಷೇತ್ರ ಕಟೀಲು ಹಿಂದೂ ಧರ್ಮದ ಕ್ಷೇತ್ರ ಮಾತ್ರವಾಗಿರದೆ ಎಲ್ಲಾ ಜಾತಿ ಧರ್ಮದ ಆರಾಧನೀಯ ಕ್ಷೇತ್ರವಾಗಿದೆ. ಇಲ್ಲಿ ಹರಿಯುವ ನಂದಿನಿ ನದಿ ತೀರ್ಥದಂತಿದ್ದು, ಭಕ್ತಾದಿಗಳು ರೋಗ ರುಜಿನಗಳ ನಿವಾರಣೆಗಾಗಿ ತೀರ್ಥಸ್ಥಾನ ಮಾಡುತ್ತಾರೆ. ಅದರಿಂದ ಅವರಿಗೆ ಉಪಶಮನವಾಗುತ್ತದೆ ಎನ್ನುವುದು ಐತಿಹ್ಯ.
ಕಟೀಲು ಕ್ಷೇತ್ರದಲ್ಲಿ ಪೂಜೆ ಮಾಡಲು ಅರ್ಚಕರು ನದಿಯಲ್ಲಿ ಮಿಂದು ಪೂಜೆ ಮಾಡಬೇಕೆನ್ನುವ ನಿಯಮವಿದೆ. ದೇವಿಗೆ ನಂದಿನಿ ನದಿ ನೀರಿನಿಂದಲೇ ಅಭಿಷೇಕವಾಗಬೇಕು ಎಂಬುದು ದೇವಿಯ ಇಚ್ಚೆ. ಬೇಸಿಗೆ ಕಾಲದಲ್ಲಿ ನೀರಿಗೆ ಕೊರತೆ ಇದ್ದ ಸಂದರ್ಭದಲ್ಲೂ ನದಿಯಲ್ಲಿ ಸುಮಾರು ಅರ್ಧ ಕಿಲೋಮೀಟರ್ ನಡೆದು ಅಲ್ಲಿರುವ ನೀರಿನ ಒರತೆಯಿಂದ ನೀರನ್ನು ಸಂಗ್ರಹಿಸಿ ಸ್ನಾನ ಹಾಗೂ ಅಭಿಷೇಕಕ್ಕೆ ನೀರನ್ನು ಸಂಗ್ರಹಿಸುತ್ತೇವೆ. ಈ ಪರಿಸರದಲ್ಲಿ ಉಷ್ಣ ವಿದ್ಯುತ್ ಸ್ಥಾವರವಾದರೆ ನಂದಿನಿ ಖಂಡಿತವಾಗಿಯೂ ಮಲಿನಲಾಗುವಳು ಹಾಗೂ ದೇವಿಗೆ ಆ ಮಲಿನ ನೀರಿನಿಂದಲೇ ಅಭಿಷೇಕ ಮಾಡಬೇಕಾದ ದುಸ್ಥಿತಿ ಎದುರಾಗಬಹುದು. ನಾವು ದೇಶದ ಅಭಿವೃದ್ದಿಗಾಗಿ ಕೈಗಾರಿಕೆಗಳು ಬೇಕು ಎಂಬುದನ್ನು ಒಪ್ಪುತ್ತೇವೆ ಆದರೆ ಫಲವತ್ತಾದ ಭೂಮಿಯನ್ನು ಅದಕ್ಕಾಗಿ ಬಲಿಕೊಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.
ನಿಡ್ಡೋಡಿಯ ಜನರು ಈಗಾಗಲೇ ಹೋರಾಟದ ಹಾದಿ ತುಳಿದಿದ್ದು ನಿಮ್ಮಂತಹ ಪ್ರಭಾವಿ ವ್ಯಕ್ತಿಗಳು ಮುಂದಾಳತ್ವವಹಿಸಿದರೆ ಇನ್ನಷ್ಟು ಪರಿಣಾಮಕಾರಿಯಾಗಬಹುದು ಎನ್ನುವ ಸ್ಥಳೀಯರ ಅಭಿಪ್ರಾಯ ಅಸ್ರಣ್ಣರ ಮುಂದಿಟ್ಟಾಗ ನಾವು ಈ ಹೋರಾಟಕ್ಕೆ ಮುಂದಾಳತ್ವ ವಹಿಸುತ್ತೇವೆ. ಕೈಗಾರಿಕೆಯು ನಿಡ್ಡೋಡಿಗಿಂತಲೂ ಹೆಚ್ಚಿನ ಹಾನಿ ಕಟೀಲು ಕ್ಷೇತ್ರಕ್ಕೆ ಮಾಡುವುದರಿಂದ ಅದು ನಮ್ಮ ಕರ್ತವ್ಯ.
ಮಚ್ಚೂರು ದುರ್ಗಾಪರಮೇಶ್ವರಿ ದೇವಸ್ಥಾನ:
ಸ್ಥಾವರ ರಚಿಸಲು ಗುರುತಿಸಿರುವ ಸ್ಥಳದಿಂದ ಕೇವಲ ಮೂರೇ ಮೂರು ಕಿಲೋ ಮೀಟರ್ ದೂರದಲ್ಲಿರುವುದು ಶತಮಾನಗಳ ಹಿಂದಿನ ಕಥೆ ಹೇಳುವ ಮುಚ್ಚೂರು ದುರ್ಗಾಪರಮೇಶ್ವರಿ ದೇವಸ್ಥಾನ. ಈ ದೇವಸ್ಥಾನ ಇದೀಗ ಹರಿಭಟ್‌ರ ಆಡಳಿತಕ್ಕೆ ಒಳಟ್ಟಿದ್ದು, ಅವರು ಮುಂಬೈಯ ಸಯನ್ ಈಸ್ಟ್ ನಲ್ಲಿರುವ ಗೋಕುಲ್ ಕೃಷ್ಣ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ನಿರ್ವಹಿಸುತ್ತಿರುವ ಕಾರಣ ಅವರ ತಮ್ಮ ರಘುಪತಿ ಭಟ್ ಪೂಜಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರದೇ ಕುಟುಂಬದವರಾದ ರಾಘವೇಂದ್ರ ಭಟ್ ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ನಿಡ್ಡೋಡಿ ಸ್ಥಾವರ ಸ್ಥಾಪನೆಯ ಕುರಿತು ಮುಚ್ಚೂರು ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ನಿರ್ವಹಿಸಿರುವ ಹಿರಿಯರಾದ ಅನಂತ ಭಟ್ ಅವರನ್ನು ಮಾತನಾಡಿಸಿದಾಗ, ಪರಶುರಾಮ ಸೃಷ್ಟಿಯೆಂದೇ ಕರೆಯಲ್ಪಡುವ ನಮ್ಮ ತುಳುನಾಡು ಪ್ರಕೃತಿ ಸಂಪತ್ತಿನಿಂದಾಗಿ ಶ್ರೀಮಂತವಾಗಿದ್ದು, ಇಲ್ಲಿನ ಪ್ರಕೃತಿಯನ್ನು ಕಂಡ ಕೈಗಾರಿಕೆಗಳು ಅದರ ಉಪಯೋಗ ಪಡೆದುಕೊಳ್ಳಲು ಇತ್ತ ಲಗ್ಗೆಯಿಡುತ್ತಿವೆ. ತುಳುನಾಡಿಗೆ ಈಗಾಗಲೇ ಸಾಕಷ್ಟು ಕೈಗಾರಿಕೆಗಳು ಬಂದು ಇಲ್ಲಿನ ಪ್ರಕೃತಿಯನ್ನು ಹಾಳುಗೆಡವಿದ್ದು, ಇದೀಗ ಮತ್ತೆ ಹಸಿರಿನಿಂದ ಕಂಗೊಳಿಸುತ್ತಿರುವ ನಿಡ್ಡೋಡಿ ಪರಿಸರವು ಕೈಗಾರಿಕೆಗಳ ಕೆಂಗಣ್ಣಿಗೆ ಗುರಿಯಾಗುತ್ತಿವೆ. ಇಲ್ಲಿಗೆ ಉಷ್ಣ ವಿದ್ಯುತ್ ಸ್ಥಾವರ ಬಂದರೆ ಪ್ರಕೃತಿ ನಾಶವಾಗುವುದು ಖಂಡಿತ. ನಮಗೆ ಎಲ್ಲಾ ಸೌಲಭ್ಯ ನೀಡಿರುವ ಪ್ರಕೃತಿಯೇ ಶಾಪವಾಗುತ್ತಿದೆ ಎಂದು ತಮ್ಮ ನೋವು ತೋಡಿಕೊಂಡರು.
ಕೊಡಮಣಿತ್ತಾಯ ದೈವಸ್ಥಾನ:
ಮುಚ್ಚೂರು ದೇವಸ್ಥಾನದ ಪರಿಸರದಲ್ಲಿಯೇ ಇರುವ ಕೊಡಮಣಿತ್ತಾಯ ದೈವಸ್ಥಾನವು ಊರ ಜನರ ಬಹು ನಂಬಿಕೆಯ ಕ್ಷೇತ್ರವಾಗಿದ್ದು, ತುಳುನಾಡಿನ ಜನರ ತಿಂಗಳಾದ ಸುಗ್ಗಿ ಸಂಕ್ರಮಣದಂದು ಇಲ್ಲಿ ಉತ್ಸವ ಕಾರ್ಯಾದಿಗಳು ನಡೆಯುತ್ತದೆ. ಇದೀಗ ಆ ದೈವಸ್ಥಾನವೂ ಕೂಡ ಅಪಾಯವನ್ನು ಎದುರಿಸುತ್ತಿದೆ.
ಸಂತ ಥೆರಸಾ ಚರ್ಚ್:
ನಿಡ್ಡೋಡಿ ಪರಿಸರದಿಂದ ಕೂಗಳತೆಯ ದೂರದಲ್ಲಿರುವ ನಿಡ್ಡೋಡಿಯ ಸಂತ ಥೆರೆಸಾ ಚರ್ಚ್ ಗೆ ಭೇಟಿ ನೀಡಿದ ಆರ್ ಎನ್ ಎನ್ ಲೈವ್ ತಂಡದೊಂದಿಗೆ ಈ ಸ್ಥಾವರದ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ ಚರ್ಚಿನ ಧರ್ಮಗುರುಗಳಾದ ರೆವರೆಂಡ್ ಫಾದರ್ ಜೋಸೆಫ್ ಲೋಬೊ, ನಿಡ್ಡೋಡಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಕುಟುಂಬಗಳು ವಾಸಿಸುತ್ತಿವೆ. ಕುಡುಬಿ ಗೌಡ ಮತ್ತು ಕ್ರೈಸ್ತರೇ ಜಾಸ್ತಿಯಾಗಿದ್ದು ಅವರೆಲ್ಲರೂ ಕೃಷಿಯನ್ನೇ ಅವಲಂಬಿಸಿದ್ದಾರೆ. ಸುತ್ತಮುತ್ತಲಿನ ಹಳ್ಳಿಗಳು ನಿಡ್ಡೋಡಿಯಲ್ಲಿ ಬೆಳೆಯುವ ತರಕಾರಿಗಳನ್ನಾಗಲೀ ಅಥವಾ ಇತರ ಕೃಷಿ ಉತ್ಪನ್ನಗಳನ್ನು ಅವಲಂಬಿಸಿದ್ದಾವೆ ಹೊರತು ಮಾರುಕಟ್ಟೆಯಲ್ಲಿ ಸಿಗುವ ವಿಷಭರಿತ ತರಕಾರಿಗಳನ್ನಲ್ಲ. ಇಲ್ಲಿ ಸ್ಥಾವರ ಸ್ಥಾಪನೆಯಾದರೆ ಇಲ್ಲಿನ ಜನರ ಜೀವನ ಹಾಳಾಗುವುದರ ಜತೆಗೆ ಊರೇ ನಾಶವಾಗುತ್ತದೆ. ಸರ್ಕಾರ ಕೈಗಾರಿಕೆ ಸ್ಥಾಪಿಸಬೇಕು ನಿಜ ಆದರೆ ಅವುಗಳಿಗಾಗಿ ಫಲಭರಿತ ಭೂಮಿ ಬಲಿ ನೀಡುವುದು ಸಮಂಜಸವಲ್ಲ. ಇಂದು ಕೈಗಾರಿಕೆಗಳಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ವಾದ ಮಂಡಿಸಿದರೂ ಕೃಷಿಯನ್ನೇ ನಂಬಿ ಅದನ್ನೇ ತಮ್ಮ ಉದ್ಯೋಗವನ್ನಾಗಿಸಿ ಕೊಂಡಿರುವವರನ್ನು ನೆಲೆ ಕಳೆದುಕೊಳ್ಳುವಂತೆ ಮಾಡಿ ಇತರರಿಗೆ ಉದ್ಯೋಗ ನೀಡುವುದೆಂದರೆ ಅದು ಮೂರ್ಖತನವಲ್ಲವೇ? ಸ್ಥಾವರ ಸ್ಥಾಪನೆಯಾಗದಂತೆ ತಡೆಯಲು ಊರಿನವರು ಈಗಾಗಲೇ ಹೋರಾಟ ಪ್ರಾರಂಭಿಸಿದ್ದು, ಅವರ ಹೋರಾಟಕ್ಕೆ ಧರ್ಮಗುರುವಾಗಿ ಜನರನ್ನು ಒಗ್ಗೂಡಿಸುವುದರೊಂದಿಗೆ ನೈತಿಕವಾಗಿಯೂ ನಾನು ಬೆಂಬಲಿಸುತ್ತೇನೆ ಹಾಗೂ ರಾಜ್ಯದ ಜನರು ಬೆಂಬಲಿಸುವಂತೆ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ನೆಲ್ಲಿತೀರ್ಥ:
ನಮ್ಮ ಪತ್ರಿಕೆಯಲ್ಲಿ ಕ್ಷೇತ್ರದರ್ಶನ ವಿಭಾಗದಲ್ಲಿ ನೆಲ್ಲಿತೀರ್ಥದ ಕುರಿತು ಲೇಖನ ಪ್ರಕಟವಾಗಿತ್ತು. ನಿಡ್ಡೋಡಿಯಿಂದ ಕೆಲವು ಕಿಲೋಮೀಟರುಗಳ ದೂರದಲ್ಲಿರುವ ಅಪರೂಪದ ಗುಹಾಲಯ ದೇವಸ್ಥಾನ ನೆಲ್ಲಿತೀರ್ಥ ಕ್ಷೇತ್ರವೂ ಕೂಡ ಇಲ್ಲಿ ನಿರ್ಮಾಣವಾಗುವ ಉಷ್ಣ ವಿದ್ಯುತ್ ಸ್ಥಾವರದಿಂದ ಅಪಾಯ ಎದುರಿಸುತ್ತದೆ. ಈ ದೇವಸ್ಥಾನವು ಬಲು ಅಪರೂಪವಾಗಿದ್ದು, ಗುಹೆಯಲ್ಲಿ ತೆವಳುತ್ತಾ ತೆರಳಿ ಆ ನಂತರ ಸಿಗುವ ವಿಶಾಲವಾದ ಪ್ರಾಂಗಣದಲ್ಲಿರುವ ಸೋಮನಾಥೇಶ್ವರನ ಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಈ ಸ್ಥಳಕ್ಕೆ ರಾಜ್ಯದಾದ್ಯಂತ ಭಕ್ತರು ಆಗಮಿಸುತ್ತಿದ್ದು ಆಸ್ತಿಕರ ಶ್ರದ್ದೆಯ ಕೇಂದ್ರವಾಗಿದೆ. ಉಷ್ಣ ವಿದ್ಯುತ್ ಸ್ಥಾವರದಿಂದ ಪ್ರಕೃತಿಗೆ ಉಂಟಾಗುವ ದುಷ್ಪರಿಣಾಮವು ಕ್ರಮೇಣ ಇಲ್ಲಿನ ಗುಹೆಯ ಮೇಲೂ ಉಂಟಾಗಬಹುದು ಎನ್ನುವುದು ಆಸ್ತಿಕರ ಕೂಗು.
ಕುಡುಬಿ ಜನಾಂಗದ ಸೀತಾರಾಮ ದೇವಸ್ಥಾನ:
ನಿಡ್ಡೋಡಿ ಪ್ರದೇಶದಲ್ಲಿ ನೆಲೆನಿಂತಿರುವ ಕುಡುಬಿ ಸಮುದಾಯದವರ ಆರಾಧ್ಯ ದೇವರಾದ ಅಶ್ವತ್ಹಪುರದ ಸೀತಾರಾಮ ದೇವಸ್ಥಾನವು ಕೂಡ ನಂದಿನಿ ತಟದಲ್ಲಿಯೇ ಇದ್ದು, ಕುಡುಬಿ ಸಂಸ್ಕೃತಿಯ ಹಲವು ಮಗ್ಗುಲುಗಳಿಗೆ ಸಾಕ್ಷಿಯಾಗಿದ್ದು ಇದೀಗ ಅಪಾಯದ ಪರಿಸ್ಥಿತಿ ಎದುರಿಸುತ್ತಿದೆ. ಸ್ಥಾವರ ಸ್ಥಾಪಿಸಲು ಗುರುತಿಸಿರುವ ಕೊಲತ್ತಾರು ಪದವು ಎಂಬ ಸ್ಥಳದಲ್ಲಿರುವ ಕುಡುಬಿ ಸಮಾಜದ ಜನರು ಆರಾಧಿಸುವ ಸಾವಿರ ದೈವಗಳ ದೈವಸ್ಥಾನವು ಸ್ಥಳೀಯರ ಭಕ್ತಿಯ ಕೇಂದ್ರವಾಗಿದ್ದು, ಇಲ್ಲಿ ಯಾವುದೇ ಕೋರಿಕೆಗಳನ್ನು ಸಲ್ಲಿಸಿದರೂ ಕೂಡ ಈಡೇರುತ್ತದೆ ಎನ್ನುವುದು ಸ್ಥಳೀಯರ ನಂಬಿಕೆ. ಹಾಗಾಗಿ ಇತ್ತೀಚೆಗೆ ಊರಿನ ಹಿರಿಯರು ಮಕ್ಕಳೆನ್ನದೆ ಎಲ್ಲರೂ ತಮ್ಮ ಊರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರವು ಸ್ಥಾಪನೆಯಾಗದಂತೆ ಆ ದೈವಗಳೇ ನೋಡಿಕೊಳ್ಳಬೇಕು ಎಂದು ದೈವಗಳಿಗೆ ಮೊರೆ ಹೋಗಿದ್ದಾರೆ.
ಇನ್ನುಳಿದಂತೆ ಶಿಬರೂರಿನ ಕೊಡಮಣಿತ್ತಾಯ ದೈವಸ್ಥಾನ, ಮುಚ್ಚೂರು ಕಾನದ ಶ್ರೀ ರಾಮ ಮಂದಿರ, ದೈಲಬೆಟ್ಟುವಿನ ಅಬ್ಬಗ ದಾರಗ ಮಹಾಲಿಂಗೇಶ್ವರ ದೇವಸ್ಥಾನ, ಸಂಪಿಗೆಯ ಚರ್ಚ್, ಊರಿನಲ್ಲಿರುವ ದೈವಸ್ಥಾನ, ನಾಗಬನ ಮೊದಲಾದ ಶ್ರದ್ದಾ ಕೇಂದ್ರಗಳಿಗೂ ಈ ಸ್ಥಾವರದಿಂದಾಗಿ ಅಪಾಯ ಎದುರಾಗಿದೆ. ಇಲ್ಲಿ ಸ್ಥಾವರ ಸ್ಥಾಪನೆಯಾಗುವುದರಿಂದ ಕೇವಲ ಕೃಷಿ ಅಥವಾ ಹಸಿರು ಮಾತ್ರ ನಾಶವಾಗದೆ, ಹಲವು ಶತಮಾನಗಳಿಂದ ಜನರು ಉಳಿಸಿಕೊಂಡು ಬಂದಿರುವ ಸಂಸ್ಕೃತಿ ಕೂಡ ನಾಶವಾಗುತ್ತದೆ ಎನ್ನುವುದು ಕಟುಸತ್ಯ.
ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಪಾಲು ಇದರಲ್ಲಿ ಅಡಕವಾಗಿದೆ ಎನ್ನುವುದು ಸತ್ಯ
ಸರ್ಕಾರವು ರೈತನ ಬೆಲೆಗಟ್ಟಲಾಗದ ಕೃಷಿ ಭೂಮಿಯಲ್ಲಿ ಯೋಜನೆಯನ್ನು ಸ್ಥಾಪಿಸುವ ಬದಲು ಪಾಳು ಬಿದ್ದಿರುವ ಕಡೆಗಳಲ್ಲಿ ಇಂತಹ ಯೋಜನೆಗಳನ್ನು ಸ್ಥಾಪಿಸಲು ಮನಸ್ಸು ಮಾಡಬೇಕಾಗಿದೆ. ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎಂದಾಗ ಧುತ್ತನೆ ಪ್ರತ್ಯಕ್ಷವಾಗುವ ಹೋರಾಟ ಸಮಿತಿಗಳು. ನಂದಿಕೂರು ಯೋಜನೆಯಲ್ಲಿಯೂ ಕೂಡ ಪರ್ಯಾಯ ಹೋರಾಟ ಸಮಿತಿ, ಪರಿಸರಕ್ಕೆ ಹಾನಿಯಾಗುವುದಿಲ್ಲವೆಂದು ರಕ್ತದಲ್ಲಿ ಬರೆದುಕೊಡುವ ಘೋಷಣೆ- ಚಪ್ಪಾಳೆ ಗಿಟ್ಟಿಸುವಂಥ ಭಾಷಣಗಳು ಸರ್ವೇ ಸಾಮಾನ್ಯ.  ಅನೇಕ ಕೈಗಾರಿಕೆಗಳು ಸ್ಥಾಪನೆಗೊಳ್ಳುವ ಪ್ರಾರಂಭದಲ್ಲಿ ಹೋರಾಟಗಳು ನಡೆದಿದ್ದವು. ಆದರೆ ಕೊನೆಯಲ್ಲಿ ಆ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ಮುಖಗಳನ್ನು ನೋಡಲು ಇನ್ನೊಂದು ಕೈಗಾರಿಕೆಯ ಪ್ರಸ್ತಾಪವಾಗಬೇಕು? ಇಷ್ಟೆಲ್ಲಾ ಹೇಳಿದ ಮೇಲೂ ನಿಡ್ಡೋಡಿ ಸ್ಥಾವರ ಸಮರ್ಥಿಸಿ ಕೊಳ್ಳುವವರಿದ್ದರೆ ಅಂಥವರನ್ನು ಏನೆಂದು ಕರೆಯಬೇಕು. ೧೨೦೦ ಮೆ.ವಾ ಸಾಮರ್ಥ್ಯದ ನಂದಿಕೂರು ಸ್ಥಾವರದ ಅನಾಹುತ ಸಹಿಸಿಕೊಳ್ಳುವುದು ಕಷ್ಟ ಎನ್ನುತ್ತಿರುವಾಗ ೪೦೦೦ ಮೆ.ವಾ ಸಾಮರ್ಥ್ಯದ ಸ್ಥಾವರ ಮತ್ತು ಅದರಿಂದಾಗುವ ಪರಿಣಾಮ ಜೀರ್ಣಿಸಿಕೊಳ್ಳಲು ಸಾಧ್ಯವೇ?
ಕರಾವಳಿಯಲ್ಲಿ ಸ್ಥಾಪನೆಯಾಗಿರುವ ಮತ್ತು ಸ್ಥಾಪನೆಯಾಗುತ್ತಿರುವ ಕೈಗಾರಿಕೆಗಳೆಲ್ಲವೂ ರಾಸಾಯನಿಕ ಆಧಾರಿತ ಮತ್ತು ಕಲ್ಲಿದ್ದಲು ಆಧಾರಿತ. ಹಾಗಾದರೆ ಕರಾವಳಿ ಎನ್ನುವುದು ತ್ಯಾಜ್ಯವನ್ನು ಡಂಪ್ ಮಾಡುವ ತಿಪ್ಪೇಗುಂಡಿಯೇ? ಉದ್ಯೋಗವಕಾಶ ನೀಡುವ ಕೈಗಾರಿಕೆಗಳು ಇತರ ರಾಜ್ಯಗಳಿಗೆ ಅಥವಾ ರಾಜ್ಯದ ಬೇರೆ ಸ್ಥಳಗಳಿಗೆ, ತ್ಯಾಜ್ಯ ವಿಸರ್ಜಿಸುವ ಕೈಗಾರಿಕೆಗಳು ಮಾತ್ರ ಕರಾವಳಿಗೆ ಎಲ್ಲಿದೆ ಸ್ವಾಮಿ ನ್ಯಾಯ? ಆದ್ದರಿಂದ ಜನತೆ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ವಿರೋದ ವ್ಯಕ್ತಪಡಿಸುವುದರೊಂದಿಗೆ ಪರಿಸರವನ್ನು ರಕ್ಷಿಸಬೇಕಾದ ಅಗತ್ಯವಿದೆ ಎನ್ನುವುದು ಸತ್ಯ.
ಏನಂತಿರಾ...




ತೀವ್ರ ಬೆನ್ನು ನೋವಿನ ಸೆಳೆತಕ್ಕೆ ಸಿಕ್ಕಿ ಅಕಾಲದಲ್ಲಿ ತೆರೆಮರೆಗೆ ಸರಿದ ಗಿರ್ಕಿ ವೀರ-ಉದಯ ನಾವುಡ ಮಧೂರು
ಕರಾವಳಿಯ ಗಂಡುಕಲೆಯೆನಿಸಿದ ಯಕ್ಷಗಾನ ರಂಗದಲ್ಲಿ ದುಡಿದವರು ಅದೆಷ್ಟೊ ಮಂದಿ. ಕಲೆಯ ಕಂಪನ್ನು ಸೂಸುತ್ತಾ, ಪುರಾಣದ ಸತ್ವವನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಬಯಲಾಟ ಅಥವಾ ಡೇರೆ ಮೇಳಗಳ ಕಲಾವಿದರ ಪಾತ್ರ ಹಿರಿದು. ಅನೇಕ ಕಲಾವಿದರು ಯಕ್ಷಗಾನ ರಂಗದಲ್ಲಿ ಅವಿರತವಾಗಿ ದುಡಿದು, ನಮ್ಮಿಂದ ಅಗಲಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್, ಹರಾಡಿ ರಾಮಗಾಣಿಗ, ಕಾಳಿಂಗ ನಾವುಡ, ರಾಮ ನಾರಿ ಅದೆಷ್ಟೊ ಕಲಾವಿದರು ರಂಗದಲ್ಲಿ ಮಿಂಚಿದ್ದು, ಮಾತ್ರವಲ್ಲದೇ ಅವರ ಸಾಧನೆಯ ಪೂರವನ್ನು ನಮ್ಮಲ್ಲಿಂದು ಬಿಟ್ಟು ಅವರನ್ನು ದಿನನಿತ್ಯ ಸ್ಮರಿಸುವಂತೆ ಮಾಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಯಕ್ಷಗಾನದಲ್ಲಿ ತೆಂಕು-ಬಡಗು, ಬಡಾಬಡಗು ಶೈಲಿಗಳಿದ್ದರೂ, ತೆಂಕು ತಿಟ್ಟಿನಲ್ಲಿ ಮಾತ್ರ ಕನ್ನಡ-ತುಳು ಭಾಷೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು. ಆದರೆ ಯಕ್ಷಗಾನ ಪ್ರಪಂಚದಿಂದ ತುಳು ಮೇಳಗಳು ಮರೆಯಾಗಿದೆ. ಮೇಳಗಳು ಮರೆಯಾದಾಕ್ಷಣ ತುಳು ಕಲಾವಿದರು ಕೆಲವರು ಮರೆಯಾಗಿದ್ದಾರೆ. ಆದರೆ ಅನಿವಾರ್ಯ ಕಾರಣದಿಂದ ತುಳು ಯಕ್ಷಗಾನ ಮೇಳದಲ್ಲಿ ಸತತ ೨೬ ವರ್ಷಗಳ ಸೇವೆ ಸಲ್ಲಿಸಿ, ಅನಾರೋಗ್ಯಕ್ಕೆ ತುತ್ತಾಗಿ ಯಕ್ಷಗಾನ ರಂಗದಿಂದ ಹೊರಗುಳಿದು ವಿಶ್ರಾಂತ ಜೀವನ ನಡೆಸುತ್ತಿರುವ ಗಿರ್ಕಿ ವೀರ ಉದಯ ನಾವುಡ ಮಧೂರು ಇವರನ್ನು ಬಲ್ಲವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.
ನಾವುಡರ ಪುಂಡುವೇಷದ ಅಬ್ಬರವನ್ನು ನೋಡುವಾಗ ಯಕ್ಷಗಾನದ ಕುರಿತಾಗಿ ನಮಗೆ ಸರಿಯಾಗಿ ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿ ಬಲಿತಿರಲಿಲ್ಲ. ಅರ್ಥವಾಗುವ ಹೊತ್ತಿನಲ್ಲಿ ಅವರು ವೇಷ ಮಾಡುವ ಸ್ಥಿತಿಯನ್ನು ಭಗವಂತ ಕರುಣಿಸಿಲ್ಲ ಎನ್ನುವುದಕ್ಕೆ ಬೇಸರ. ನಾವುಡರ ಯೌವನದ ಸಮಯದಲ್ಲಿ ವೈಜ್ಞಾನಿಕವಾಗಿ ಈಗಿನಷ್ಟು ಮುಂದುವರಿಯದ ಕಾರಣ ಅವರ ಕುಣಿತಗಳ ಯಾವುದೇ ದಾಖಲಿಕರಣವಿಲ್ಲದೆ ಅವರ ವೇಷದ ಸವಿಯನ್ನು ಅನುಭವಿಸುವುದಕ್ಕೆ ಸಾಧ್ಯವಿಲ್ಲದಾಯಿತು ಎನ್ನುವ ಬೇಸರದ ನುಡಿಯನ್ನಾಡಬೇಕಾದ ಅನಿವಾರ್ಯತೆ. ಅಸ್ವಾಭಾವಿಕವಾಗಿ ಯಕ್ಷಗಾನ ರಂಗದಿಂದ ಬೇರೆಯಾಗಿ ಕಲಾವಿದನೊರ್ವ, ಯಕ್ಷ ಅಭಿಮಾನಿಯಾದ  ನಾವುಡರ ವಯಸ್ಸು ಮಾತ್ರ ನಲ್ವತ್ತೇಳು.
ಯಕ್ಷಗಾನದ ಅಭಿಮಾನಿಗಳು ವಿಭಿನ್ನ. ಜ್ಞಾನವನ್ನು ಸಂಪಾದಿಸಲೋಸುಗ ಪುರಾಣದ ಪ್ರಸಂಗ ನೋಡುವ ಒಂದು ವರ್ಗವಾದರೆ, ಸಾಮಾಜಿಕ ಜೀವನ ಶೈಲಿಗೆ ಅನುಗುಣವಾಗಿ ನಾಟ್ಯ, ದಿಗಿಣದ ಸವಿಯನ್ನು ಅನುಭವಿಸಲು ತೆರಳುವ ವರ್ಗವೇ ಬೇರೆಯಾಗಿತ್ತು. ತುಳು ಯಕ್ಷಗಾನ ಪ್ರಪಂಚದಲ್ಲಿಯೇ ತನ್ನದೇ ಆದ ವಿಭಿನ್ನ ದಿಗಿಣಗಳ ಮೂಲಕ ಛಾಪನ್ನು ಮೂಡಿಸಿದ ದಿಗಿಣ ವೀರ(ಗಿರ್ಕಿ ವೀರ)ಉದಯ ನಾವುಡ ಮಧೂರು ಅವರ ಹೆಸರು ಕೇಳಿದವರು (ಯುವಸಮೂಹವನ್ನು ಹೊರತುಪಡಿಸಿ)ಕಡಿಮೆ.
ಕಲಾವಿದನಾದವ ಕೌಟುಂಬಿಕವಾಗಿ ಯಾವುದೆ ಸಮಸ್ಯೆಗಳಿದ್ದರೂ, ಅದನ್ನು ರಂಗದಲ್ಲಿ ತೋರಗೊಡುವುದಿಲ್ಲ. ರಂಗದಲ್ಲಿ ಅಭಿಮಾನಿಗಳ ಕರತಾಡನ, ಸಿಳ್ಳೆಗೆ ಸೋಲುವ ಕಲಾವಿದ ಯಾವತ್ತೂ ಕೂಡ ಪ್ರೇಕ್ಷಕರಿಗೆ ವಂಚಿಸುವುದಿಲ್ಲ. ಅಭಿಮಾನಿಗಳ ಅಭಿಮಾನಕ್ಕೆ ತನಗಿರುವ ಬೇಸರ, ಆರೋಗ್ಯದ ಸ್ಥಿತಿಯನ್ನು ಲೆಕ್ಕಿಸದೆ ರಂಗದಲ್ಲಿ ಮಿಂಚುವ ಕಲಾವಿದ ತನಗೆ ಕಲಾಮಾತೆಯ ಸೇವೆಗೆ ಅವಕಾಶ ನೀಡಿದ ಯಜಮಾನರ ಖಾತೆಯನ್ನು ತುಂಬಲು ಮೈಮರೆತು ಕಾರ್ಯ ನಿರ್ವಹಿಸುತ್ತಾನೆ. ಯಜಮಾನರುಗಳ ದಬ್ಬಾಳಿಕೆಗೆ, ತಾರತಮ್ಯಕ್ಕೆ ನೋವು ಮಾಡಿಕೊಳ್ಳದೆ ಅಭಿಮಾನಿಗಳು ಹಾಗೂ ಯಜಮಾನರಿಗಾಗಿ ಯಕ್ಷ ತಿರುಗಾಟದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾರೆ. ಕುಟುಂಬದ ಸದಸ್ಯನೊರ್ವ ಅಥವಾ ಕಟ್ಟಿಕೊಂಡ ಹೆಂಡತಿಯಾದರೂ, ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರೂ, ಮನಸ್ಸಿನಲ್ಲಿರುವ ನೋವನ್ನು ಹೊರಗೆ ತೋರ್ಪಡಿಸದೆ ಕಲಾರಸಿಕರನ್ನು ಅಪಾರವಾಗಿ ರಂಜಿಸುತ್ತಾರೆ. ತಾನು ಸೇವೆ ಮಾಡಿದಷ್ಟು ದಿನ ಯಕ್ಷಗಾನದಲ್ಲಿ ಯಾವುದೇ ನಿರಾಸಕ್ತಿ ತಾಳದೆ ಪ್ರೇಕ್ಷಕರನ್ನು ರಂಜಿಸಿ, ಅಕಾಲ ಅನಾರೋಗ್ಯಕ್ಕೆ ತುತ್ತಾಗಿ ತಂದೆ ಹಾಗೂ ತಾನು ನೆಚ್ಚಿದ ಯಕ್ಷವೃತ್ತಿಗೆ ತಿಲಾಂಜಲಿ ಹೇಳಿದ ಉಭಯ ತಿಟ್ಟುಗಳ ಖ್ಯಾತ ಯಕ್ಷಗಾನ ಕಲಾವಿದ, ತೆಂಕುತಿಟ್ಟಿನ ಗಿರ್ಕಿ ವೀರ `ಮಧೂರು ಉದಯ ನಾವುಡ' ರದು ನೋವಿನ ಕಥೆ.
ತಂದೆಯ ಒತ್ತಾಯಕ್ಕೆ ಮಣಿದು ಬಾಲ್ಯಾವಸ್ಥೆಯಲ್ಲಿಯೇ ಕುಟುಂಬದ ನಾಲ್ವರು ಗಂಡು ಮಕ್ಕಳು ಸೇರಿದಂತೆ ದೊಡ್ಡಪ್ಪನ ಮಗನೊಂದಿಗೆ ಖ್ಯಾತ ಕಿರೀಟ ವೇಷಧಾರಿ ಕೂಡ್ಲು ನಾರಾಯಣ ಬಲ್ಯಾಯರಲ್ಲಿ ಹೆಜ್ಜೆಗಾರಿಕೆ ಕಲಿತು ಯಕ್ಷಮಾತೆಯ ಸೇವೆಗೆ ಧುಮುಕಿದರು. ಇವರು ೧೯೬೬ ರ ಮಾರ್ಚ್ ೫ ರಂದು ವಿಷ್ಣು ನಾವುಡ ಮತ್ತು ಲೀಲಾವತಿ ದಂಪತಿಗಳ ಮೂರನೇ ಪುತ್ರನಾಗಿ ಜನಿಸಿ, ೬ ನೇ ತರಗತಿಯ ಶಿಕ್ಷಣ ಮುಗಿಸಿ, ತನ್ನ ೧೫ ನೇ ವಯಸ್ಸಿನಲ್ಲಿ ಕುಬಣೂರು ಶ್ರೀಧರ್ ರಾವ್ ಅವರ ವ್ಯವಸ್ಥಾಪಕತ್ವದ ಕೂಡ್ಲುಮೇಳ ಪ್ರವೇಶಿಸಿದರು. ನಂತರ ಸುರತ್ಕಲ್, ಪುತ್ತೂರು, ಬಪ್ಪನಾಡು, ಮಧೂರು, ಗಣೇಶಪುರ, ಕುಂಟಾರು, ಕಾಂತಾವರ, ಸಾಲಿಗ್ರಾಮ, ಪೆರ್ಡೂರು ತೆಂಕು ಹಾಗೂ ಬಡಗಿನ ಡೇರೆ ಮೇಳದಲ್ಲಿ ಒಟ್ಟು ೨೬ ವರ್ಷ ತಿರುಗಾಟ ಪೂರೈಸಿದ್ದರು. ಸ್ತ್ರೀವೇಷ ಹಾಗೂ ಪುಂಡುವೇಷದಲ್ಲಿ ಗುರುತಿಸಿಕೊಂಡ ಇವರು ಕ್ರಮೇಣ ಪುಂಡುವೇಷದ ಹುಲಿಯೆಂದೆ ಖ್ಯಾತರಾದವರು.
ಪೆರ್ಡೂರು ಮತ್ತು ಸಾಲಿಗ್ರಾಮ ಮೇಳದಲ್ಲಿಯೂ ತೆಂಕಿನ ವೇಷಗಾರಿಕೆಯೊಂದಿಗೆ ಬಡಗಿನ ಚೆಂಡೆಯಲ್ಲಿಯೂ ತಮ್ಮ ಅತ್ಯದ್ಬುತ ಪ್ರತಿಭೆಯಿಂದ ಬಡಗಿನಲ್ಲಿಯೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡವರು ನಾವುಡರು. ಹಿರಿಯಣ್ಣ ರಾಧಾಕೃಷ್ಣ ನಾವುಡ ಅವರ ಪ್ರೋತ್ಸಾಹದೊಂದಿಗೆ ಯಕ್ಷಗಾನ ತಿರುಗಾಟದಲ್ಲಿ ಸುದೀರ್ಘ ೨೦ ವರ್ಷಗಳು ಜೊತೆಯಲ್ಲಿಯೇ ರಾಮ-ಲಕ್ಷ್ಮಣರಂತೆ ಯಕ್ಷಮಾತೆಯ ಕಲಾಸೇವೆಗೈದಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ. ಖ್ಯಾತ ಪುಂಡುವೇಷಧಾರಿಯೆಂದೆ ಖ್ಯಾತಿ ಹೊಂದಿದ ಇವರ ಕೀರ್ತಿ ಡೇರೆ ಮೇಳಗಳಲ್ಲಿನ ಕರಪತ್ರಕಗಳಲ್ಲಿ ``ಯಕ್ಷಾಭಿಮಾನಿಗಳೇ ಗಿರ್ಕಿ ವೀರ ಉದಯ ನಾವುಡರ ಗಿರ್ಕಿ ನೋಡಲು ಮರೆಯದಿರಿ" ಎಂದು ಅಚ್ಚಾಗುತ್ತಿದ್ದವು. ಸಾಮಾಜಿಕ ತುಳು ಪ್ರಸಂಗಗಳಲ್ಲಿ ಮಾತ್ರವಾಗಿರದೆ ಪುರಾಣ ಪ್ರಸಂಗಗಳಲ್ಲಿಯ ಬಬ್ರುವಾಹನ, ಅಭಿಮನ್ಯು, ಭಾರ್ಗವ, ರುಕ್ಮಾಂಗ-ಶುಭಾಂಗ, ಚಂಡ-ಮುಂಡ ಇತ್ಯಾದಿ ವೇಷಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು.
ತಂದೆಯ ಒತ್ತಾಯಕ್ಕೆ ಯಕ್ಷಗಾನ ಪ್ರವೇಶ ಮಾಡಿದ್ದರೂ, ೧೬ ವರ್ಷಗಳವರೆಗೆ ಯಕ್ಷಗಾನದಲ್ಲಿ ಯಾವುದೇ ಆಸಕ್ತಿ ತಳೆದಿರಲಿಲ್ಲ. ಪ್ರತಿವರ್ಷವೂ ಕೂಡ ತಂದೆಯ ಒತ್ತಾಯಕ್ಕೆ ಮೇಳಕ್ಕೆ ಆಗಮಿಸುತ್ತಿದ್ದೆ. ಅನಿವಾರ್ಯತೆಯಿಂದ ನಿವೃತ್ತಿಯಾಗುವುದಕ್ಕಿಂತ ಮುಂಚಿನ ೧೦ ವರ್ಷಗಳಲ್ಲಿ ಯಕ್ಷಗಾನದಲ್ಲಿ ಆಸಕ್ತಿ ಹುಟ್ಟಿತ್ತು. ತಿರುಗಾಟದ ಸಂದರ್ಭ ಅಭಿಮಾನಿಗಳು ರಂಗದಲ್ಲಿನ ತನ್ನ ಕಸುಬನ್ನು ನೋಡಿ, ಯೋಗಕ್ಷೇಮ ವಿಚಾರಿಸಲು ಮುಖತಃ ಭೇಟಿಯಾಗುತ್ತಿದ್ದರೋ ಆಗಲೇ ಯಕ್ಷಗಾನ ಬೇಕು ಅಂತ ಅನಿಸಿತ್ತು. ಮೇಳಕ್ಕೆ ಸೇರಿದ ೧೩ನೇ ವರ್ಷದಲ್ಲಿ ನೋವು ಪ್ರಾರಂಭವಾದಾಗ ೨ ವರ್ಷ ಯಕ್ಷಗಾನದಿಂದ ವಿರಮಿಸಿದ್ದೆ. ಆಗ ಅಭಿಮಾನಿಗಳಿಂದ ಬೇರಾದ ಮಾನಸಿಕ ಯಾತನೆ ಅನುಭವಕ್ಕೆ ಬಂದಿತ್ತು. ದೇವರ ದಯೆಯಿಂದ ಅಭಿಮಾನಿಗಳ ಹಾರೈಕೆಯಿಂದ ಪುನಃ ಯಕ್ಷಗಾನಕ್ಕೆ ಮರಳುವಂತಾಯಿತು. ತುಳು ಯಕ್ಷಗಾನದಲ್ಲಿಯೇ ತನ್ನ ಸೇವೆ ಮುಂದುವರಿಸುವಂತಾಯಿತು ಎನ್ನುವುದು ಅವರ ಮನದಾಳದ ಮಾತು.
ತುಳು ಯಕ್ಷಗಾನ ಕಲಾವಿದರನ್ನು ಮರೆತರು...
ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎನ್ನುವ ಹೋರಾಟಗಳು ಅನೇಕ ವರ್ಷಗಳಿಂದ ನಡೆಯುತ್ತಿದೆ. ತುಳು ಭಾಷೆಯನ್ನು ಗೌರವಿಸಬೇಕು, ಪ್ರೀತಿಸಬೇಕು ಅದನ್ನು ಇತರರಿಗೂ ತಿಳಿಯಪಡಿಸಬೇಕು. ತುಳುವಿಗೆ ಪ್ರತ್ಯೇಕ ರಾಜ್ಯಗಳು ಲಭ್ಯವಾಗಬೇಕು ಎನ್ನುವ ತುಳುವರ ಧ್ವನಿಗಳಿಂದು ಅಲ್ಲಲ್ಲಿ ಕೇಳಿಬರುತ್ತಿದೆ. ಈ ಮಾತು ಉಲ್ಲೇಖಕ್ಕೂ ಕಾರಣವಿದೆ. ಕಾಸಿಗಾಗಿರುವ ಕಲೆಯಲ್ಲಿ ತುಳು ಭಾಷೆಯ ಕುರಿತಾಗಿರುವ ಅಭಿಮಾನವೋ, ಯಜಮಾನರುಗಳ ಬೊಕ್ಕಸವನ್ನು ತುಂಬಿಸಲೋಸುಗ ಅಥವಾ ಕಲಾವಿದರು ತಮ್ಮ ಜೀವನ ನಿರ್ವಹಣೆಗಾಗಿ ತುಳು ಯಕ್ಷಗಾನವನ್ನು ವೃತ್ತಿಯನ್ನಾಗಿ ಆಯ್ದುಕೊಂಡಿದ್ದರೂ, ತುಳು ಯಕ್ಷಗಾನ ಕಲಾವಿದರಿಂದ ಶುದ್ಧ ತುಳುವಿನ ಪರಿಮಳ ಎಲ್ಲೆಡೆಯೂ ಪಸರಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ತುಳುವಿನಂತೆ ಆಂಗ್ಲಭಾಷೆಯ ಮಿಶ್ರಣವಿಲ್ಲದೇ, ಈಗಿನ ನಾಟಕದಲ್ಲಿರುವ ಇಂಗ್ಲಿಷ್ ಡೈಲಾಗುಗಳ ಹೊರತಾಗಿರುವ ತುಳುವಿನ ಮೂಲ ತುಳು ಯಕ್ಷಗಾನದಲ್ಲಿದ್ದು, ಅದನ್ನು ಫಸರಿಸುವ ಕಾರ್ಯ ಅನೇಕ ತುಳು ಕಲಾವಿದರು ಮಾಡುತ್ತಿದ್ದರು. ಆದರೂ ತುಳು ಯಕ್ಷಗಾನ ಕಲಾವಿದರನ್ನು ಗುರುತಿಸುವ ಕಾರ್ಯವಾಗುತ್ತಿಲ್ಲ ಎನ್ನುವುದಂತು ಸತ್ಯ. ಇದಕ್ಕೆ ಉದಾಹರಣೆ ಉದಯ ನಾವುಡ ಮಧೂರು.
ತೆಂಕುತಿಟ್ಟು ಯಕ್ಷಗಾನ ಪ್ರಪಂಚದಲ್ಲಿಯೇ ವಿಶಿಷ್ಟವಾದ ಶೈಲಿ ಅಳವಡಿಸಿಕೊಂಡಿದ್ದರು. ಎಲ್ಲಾ ಕಲಾವಿದರು ಬಲದಿಂದ ಎಡಕ್ಕೆ ದಿಗಿಣ ಹಾರಿದರೆ, ಇವರು ಮಾತ್ರ ಎಡದಿಂದ ಬಲಕ್ಕೆ ಹಾರುತ್ತಿದ್ದರು. ಪೆರ್ಡೂರು ಮತ್ತು ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ಮಾಡಿರುವ ಕಾರಣ ತೆಂಕುತಿಟ್ಟಿನಲ್ಲಿಯೂ ಬಡಗಿನ ಶೈಲಿಯನ್ನು ಅವರದೇ ಆದ ಕಲ್ಪನೆಯಲ್ಲಿ ಅಳವಡಿಸಿಕೊಂಡು ಪ್ರತಿಯೊಂದು ಪದ್ಯದಲ್ಲಿಯೂ ಪ್ರತ್ಯೇಕತೆಯನ್ನು ಕಾಯ್ದುಕೊಂಡು ಅಭಿನಯಿಸುತ್ತಿದ್ದರು. ಬಡಗುತಿಟ್ಟಿನಲ್ಲಿ ಚೈತ್ರಚಂದನ, ಸಿರಿಸಂಪಿಗೆ, ಧರ್ಮಸಾಮ್ರಾಜ್ಯ, ಚಾಣಕ್ಯತಂತ್ರಎನ್ನುವ ಪ್ರಸಂಗಗಳಲ್ಲಿ ರಂಜಿಸಿದ ಇವರು ವಿಭಿನ್ನ ಶೈಲಿಯ ಬಡಗು ಅಭಿಮಾನಿಗಳನ್ನು ಪಡೆಯಲು ಸಹಕಾರಿಯಾಗಿದೆ. ನಾಟ್ಯ, ಅಬ್ಬರದ ಕುಣಿತಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದ ನಾವುಡರು ಮಾತುಗಾರಿಕೆಗೆ ಕಡಿಮೆ ಆಸಕ್ತಿ ತೋರಿದ್ದರು. ಮಾತು ಕಡಿಮೆಯಾದರೂ ಸ್ಪಷ್ಟ, ಸ್ಪುಟವಾದ ಮಾತುಗಳಿಂದ ಗುರುತಿಸಿಕೊಂಡಿದ್ದರು.
ತೆಂಕುತಿಟ್ಟಿನ ಯಕ್ಷಗಾನ ರಂಗದಲ್ಲಿಯೇ ದಾಖಲೆಯೆನ್ನಬಹುದು. ತನ್ನ ೧೬ ನೇ ವರ್ಷದ ಯಕ್ಷಗಾನ ತಿರುಗಾಟದಲ್ಲಿ ಪುತ್ತೂರು ಶ್ರೀಧರ ಭಂಡಾರಿ ವ್ಯವಸ್ಥಾಪಕತ್ವದ ಪುತ್ತೂರು ಮೇಳದಲ್ಲಿದ್ದಾಗ `ನಾಡ ಕೇದಗೆ' ಎನ್ನುವ ಪ್ರಸಂಗದಲ್ಲಿ ೪೫೦ ದಿಗಿಣ ಹೊಡೆದಿದ್ದೆ. ಪ್ರತಿಯೊಂದು ದಿಗಿಣ ಹೊಡೆಯುವಾಗ ನಾನೇ ಲೆಕ್ಕ ಹಾಕುತ್ತಿದ್ದೆ ಎಂದು ಸಂತೋಷದಿಂದ ಹೇಳುವ ನಾವುಡರು ಸಂಘಸಂಸ್ಥೆಗಳಿಂದ ಕೆಲವೊಂದು ಕಡೆ ಸನ್ಮಾನಗಳು ದೊರೆತರೂ, ಅನಾರೋಗ್ಯದಿಂದ ಬಳಲುತ್ತಿದ್ದಾಗ ಯಾರು ಗುರುತಿಸುತ್ತಿಲ್ಲ. ಯೌವನದಲ್ಲಿ, ಆರೋಗ್ಯ ಸರಿಯಿರುವಾಗ, ಹಣೆಬರಹ ಚೆನ್ನಾಗಿರುವಾಗ ಅಭಿಮಾನಿಗಳು, ಯಜಮಾನರು ಎಲ್ಲರೂ ಮಾತನಾಡಿಸುತ್ತಾರೆ. ಆರೋಗ್ಯ ಸರಿಯಿಲ್ಲದೇ ಮನೆಯಲ್ಲಿದ್ದಾಗ ಕುಟುಂಬದ ಹೊರತಾಗಿ ಯಾರಿಗೂ ಬೇಡದವರಾಗುತ್ತೇವೆ. ನಾಲ್ಕು ವರ್ಷದಿಂದ ಮೇಳದಿಂದ ಹೊರಗಿದ್ದು, ಯಾರಿಗೂ ಬೇಡದ ಕಲಾವಿದನಾಗಿದ್ದೇನೆ ಎನ್ನುವಾಗ ಅವರ ಕಣ್ಣಂಚಿನಲ್ಲಿ ದುಃಖದ ಕಣ್ಣೀರು ಬಂದು ಮರೆಯಾಗಿತ್ತು.
ಪ್ರತಿ ತಿಂಗಳು ೧೦೦೦ ರೂಗಿಂತಲೂ ಅಧಿಕ ಮದ್ದಿಗಾಗಿ ವ್ಯಯಿಸುವ ಇವರು ಪ್ರಸ್ತುತ ಕೇಬಲ್ ಕಲೆಕ್ಷನ್ ಮಾಡುತ್ತಿದ್ದಾರೆ. ಮೆಚ್ಚಿನ ಮಡದಿಯಾಗಿ ರಾಜೇಶ್ವರಿಯನ್ನು ಕೈಹಿಡಿದ ಇವರ ದಾಂಪತ್ಯದ ಫಲವಾಗಿ ೮ ನೇ ತರಗತಿಯಲ್ಲಿರುವ ಮಗಳು ಸ್ವಾತಿ ಹಾಗೂ ೪ ನೇ ತರಗತಿಯಲ್ಲಿ ಕಲಿಯುತ್ತಿರುವ ಮಗ ಕೃಷ್ಣಪ್ರಕಾಶರೊಂದಿಗೆ ಕಷ್ಟದ ಜೀವನ ನಡೆಸುತ್ತಿದ್ದರೂ, ಮೊಗದಲ್ಲಿರುವ ನಗು ಇನ್ನು ಕೂಡ ಮಾಸಿಲ್ಲ. ಹೃದಯದಲ್ಲಿ ತಿರುಗಾಟದಲ್ಲಿನ ನೋವು-ನಲಿವು, ದೈಹಿಕವಾಗಿ ಬೆನ್ನು ನೋವನ್ನು ಅನುಭವಿಸುತ್ತಿದ್ದರೂ, ಯಕ್ಷಗಾನದ ಕುರಿತು ಅಪಾರವಾದ ಅಭಿಮಾನ ಹೊಂದಿದ್ದಾರೆ. ನೋವು ಕಡಿಮೆಯಾದರೆ ಸಂಪಾದನೆಗಾಗಿ ಅಲ್ಲದಿದ್ದರೂ, ಅಭಿಮಾನಿಗಳಿಗೆ ರಂಜನೆ ನೀಡಲು ಯಕ್ಷಗಾನಕ್ಕೆ ಮರಳಿ ಬರುವ ಇರಾದೆಯನ್ನು ಕೂಡ ಹೊಂದಿದ್ದಾರೆ. ಪ್ರಸ್ತುತ ಯೌವನದಲ್ಲಿ ತನ್ನ ವಿಭಿನ್ನತೆಯ ಗಿರಕಿಯಿಂದಲೇ ಅಭಿಮಾನಿಗಳನ್ನು ರಂಜಿಸಿದ ನಾವುಡರಿಗೆ ಅಭಿಮಾನಿಗಳ ಸಹಕಾರದ ಅಗತ್ಯವಿದೆ. ಅವರ ಕಷ್ಟಕ್ಕಾಗಿ ಮರುಗುವವರು ೦೯೦೪೮೬೩೦೧೨೩ ಸಂಪರ್ಕಿಸಬಹುದು.
ಸಮಾಜದಲ್ಲಿ ಕೈಕಾಲು ಸರಿಯಿದ್ದವರಿಗೆ ಸಹಾಯ ಮಾಡುತ್ತಾ, ಪ್ರಸಕ್ತ ರಂಗದಲ್ಲಿ ಮಿಂಚುವ ಸ್ಟಾರ್ ಕಲಾವಿದರಿಗೆ ದಿನನಿತ್ಯ ಸನ್ಮಾನಗಳು ನಡೆಯುತ್ತಿರುತ್ತವೆ. ಅವರಿಗೆಲ್ಲಾ ಬೇಕಾದಷ್ಟು ಸಂಪಾದನೆ ಮಾಡಿದ್ದರೂ, ಸನ್ಮಾನಗಳಿಂದ ದೊರಕುವ ಮೊತ್ತವು ಕೂಡ ದ್ವಿಗುಣವೇ. ಸನ್ಮಾನ ಮಾಡುವುದು ತಪ್ಪಲ್ಲ. ಕಲಾವಿದನನ್ನು ಗುರುತಿಸುವುದು ಸಮಂಜಸವೇ ಆದರೂ ಸಮಾಜದಲ್ಲಿರುವ ಅಶಕ್ತನಾಗಿರುವ ಕಲಾವಿದನನ್ನು ಗುರುತಿಸಿದಾಗ ಅವರು ಮಾಡಿದ ಕಾರ್ಯಕ್ಕೆ ಸತ್ಪಲ ದೊರಕುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ನೂರ್ಕಾಲ ಸತ್ಯ. ಮುಂದೆ ಸಂಘಟಕರು ಸಮಾರಂಭ ಆಯೋಜಿಸುವಾಗ ಇಂತಹ ಜನತೆಯ ನೆನಪಿನಲ್ಲಿರುವ ಕಾರ್ಯಕ್ರಮ ರೂಪಿಸುವಂತಾಗಲಿ.

ಯಕ್ಷಗಾನಂ ಗೆಲ್ಗೆ


ಬಾಕ್ಸ್:
ಯಾವುದೇ ಮೇಳವಿರಲಿ, ಅಲ್ಲಿರುವ ಯಜಮಾನರುಗಳ ಮಾನಸಿಕತೆ ಬದಲಾಗಬೇಕು. ಓರ್ವ ಕಲಾವಿದ ಕೈಕಾಲು ಗಟ್ಟಿಯಾಗಿದ್ದುದುಡಿಯುವಾಗ ಅಭಿಮಾನಿಗಳಿಗೆ ಸಂತೋಷ ಪಡಲು, ಯಜಮಾನರಿಗೆ ಖಾತೆ ಭರ್ತಿಯಾಗಿಸಲು ಬೇಕಾಗುತ್ತಾನೆ. ಕಲಾವಿದ ಯಕ್ಷ ತಿರುಗಾಟದ ೬ ತಿಂಗಳು ತನ್ನ ಜೀವವನ್ನೆ ಲೆಕ್ಕಿಸದೆ ಕೆಲಸ ನಿರ್ವಹಣೆ ಮಾಡುತ್ತಾನೆ. ಹರಕೆ ಮೇಳವಾದರೆ ದೇವಸ್ಥಾನಕ್ಕೆ ಪ್ರಸಿದ್ಧಿ, ಡೇರೆ ಮೇಳಗಳಲ್ಲಿ ಯಜಮಾನರುಗಳಿಗೆ ಹೆಸರು, ಕೀರ್ತಿ ಹಾಗೂ ಹಣ. ಆದರೆ ಕಲಾವಿದನಿಗೆ ಮಾತ್ರ ಅಭಿಮಾನಿಗಳು ಹಾಕಿದ ಸಿಳ್ಳೆ, ಚಪ್ಪಾಳೆಗಳು ಮಾತ್ರ. ಅದರಿಂದಲೇ ತಮ್ಮ ಜೀವವನ್ನು ಯಕ್ಷಗಾನಕ್ಕಾಗಿ ತೇಯ್ದ ಕಲಾವಿದರು ಅನೇಕರಿದ್ದಾರೆ. ದೇಹದ ಅನಾರೋಗ್ಯದಿಂದ ಅಶಕ್ತನಾಗಿ ಮೂಲೆಗುಂಪಾದಾಗ ಆತನಿಗೆ ಪ್ರೋತ್ಸಾಹ, ಆಸರೆಯಾಗುವವರು ಕುಟುಂಬಿಕರು ಮಾತ್ರ ಎನ್ನುವ ಬೇಸರದ ನುಡಿ ಉದಯ ನಾವುಡರದ್ದು.