Friday 29 June 2012

BALMATA COLLEGE STUDENTS

ಶತಕದ ಸಂಭ್ರಮದಲ್ಲಿ ಬಲ್ಮಠ ಮಹಿಳಾ ಕಾಲೇಜು
-ಸಂದೇಶ ಶೆಟ್ಟಿ ಆರ್ಡಿ
ಮಂಗಳೂರು: ಹೆಣ್ಣು ಮಗುವಿಗೆ ವಿದ್ಯೆ ನೀಡಿದರೆ ಶಾಲೆಯೊಂದು ತೆರೆದಂತೆ.  “ವಿದ್ಯಾದದಾತಿ ವಿನಯಂ" ವಿದ್ಯೆಯು ವ್ಯಕ್ತಿಗೆ ಶೋಭೆಯನ್ನು ತರುವುದರೊಂದಿಗೆ ಸಮಾಜದಲ್ಲಿ ಗೌರವ ದೊರಕಿಸಿ ಕೊಡುತ್ತವೆ. ಸಂಸ್ಥೆ ಖಾಸಗಿ ಅಥವಾ ಸರಕಾರಿಯಾಗಿರಲಿ ಪ್ರತಿಯೊಂದು ವಿದ್ಯಾಸಂಸ್ಥೆ  ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಮಾಡುವುದು ಸುಳ್ಳಲ್ಲ. ನಗರದ ಹೃದಯ ಭಾಗದಲ್ಲಿರುವ ಬಲ್ಮಠ ಮಹಿಳಾ ವಿದ್ಯಾಸಂಸ್ಥೆಯು ಅನೇಕ ಪುಷ್ಪವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ೧ರಿಂದ ಪದವಿಯವರೆಗೆ ಶಿಕ್ಷಣ ನೀಡುತ್ತಿರುವ ಈ ವಿದ್ಯಾದೇಗುಲಕ್ಕಿಗ ಶತಕದ ಸಂಭ್ರಮ...ಅಲ್ಲದೇ ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೧೦೦ಫಲಿತಾಂಶದ ಸಾಧನೆ ಮಾಡಿದೆ.
ವಿದ್ಯಾಸಂಸ್ಥೆಯ ಹಿನ್ನೆಲೆ:
೧೨೫ ವರ್ಷಕ್ಕಿಂತಲೂ ಹಳೆಯದಾದ ಬಲ್ಮಠ ಕಾಲೇಜು ಪ್ರಾರಂಭದಲ್ಲಿ ಗಣಪತಿ ಕಾಲೇಜಿನ ಆಸುಪಾಸಿನಲ್ಲಿರುವ ನಲಂದಾ ಕಾಲೇಜಿನಲ್ಲಿ ಪ್ರಾರಂಭಗೊಂಡು, ಲೇಡಿಸ್ ಕ್ಲಬ್‌ಗೆ ಸ್ಥಳಾಂತರಗೊಂಡು, ೧೯೧೨ರಲ್ಲಿ ಈಗಿರುವ ಕಟ್ಟಡಕ್ಕೆ ಬಂದಿದೆ. ಈ ಕಾಲೇಜು ಮದ್ರಾಸ್ ಪ್ರಾಂತ್ಯದ ವ್ಯಾಪ್ತಿಗೆ ಬರುವ ದಕ್ಷಿಣ ವಲಯದೊಳಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಗವರ್ನ್‌ಮೆಂಟ್ ಟ್ರೈನಿಂಗ್ ಸ್ಕೂಲ್ ಫಾರ್ ಮಿಸ್ಟ್ರೇಸ್ ಎನ್ನುವ ನಾಮಧೇಯದೊಂದಿಗೆ ೧೯೧೨ರಲ್ಲಿ ಪ್ರಾರಂಭಗೊಂಡಿತ್ತು. ಕೊಯಂಬತ್ತೂರಿನ ರಾಜಾಸ್ಟ್ರೀಟ್‌ನ ಹೈಯರ್ ಸೆಕಂಡರಿ ಸ್ಕೂಲ್ ಇದೇ ಮಾದರಿಯಲ್ಲಿರುವುದು ಸಾಕ್ಷಿಯಾಗಿದೆ. ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಕೊಯಂಬತ್ತೂರು ಇನ್‌ಸ್ಪೆಕ್ಟರ್‌ರ ವ್ಯಾಪ್ತಿಗೆ ಬಲ್ಮಠ ಸೇರಿದಂತೆ ಕಲ್ಲಿಕೋಟೆ, ಕಣ್ಣನ್ನೂರಿನಲ್ಲಿರುವ ವಿದ್ಯಾಸಂಸ್ಥೆಗಳು ಒಳಪಟ್ಟಿದ್ದವು.
ಮಹಿಳೆಯರ ಟೀಚರ್‍ಸ್ ಟ್ರೈನಿಂಗ್ ಸ್ಕೂಲ್‌ನಲ್ಲಿ ೧ರಿಂದ ೮ ರವರೆಗೆ ಪ್ರಾರಂಭಗೊಂಡು ೯,೧೦ ಮತ್ತು ಶಿಕ್ಷಕಿಯರ ತರಬೇತಿ ತರಗತಿಗಳು ಸೇರ್ಪಡೆಗೊಂಡವು. ಭೂಗೋಳ, ಪ್ರಕೃತಿ ಅಧ್ಯಯನ, ಇತಿಹಾಸ, ನೃತ್ಯ, ಚಿತ್ರಕಲೆ, ಸಂಗೀತ, ಕಸೂತಿಕಲೆ, ಕೆನಾರೀಸ್(ಕನ್ನಡ) ಭಾಷೆ, ಕಾವ್ಯ, ಆಂಗ್ಲ ಭಾಷೆ, ಕೈತೋಟ ಇತ್ಯಾದಿ ವಿಷಯಗಳನ್ನು ಕ್ರಮಬದ್ದವಾಗಿ ಕಲಿಸಲಾಗುತ್ತಿತ್ತು.
ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ವಿದ್ಯಾರ್ಥಿ ವೇತನ ಸಂದಾಯವಾಗುತ್ತಿತ್ತು. ೨ನೇ ಮಹಾಯುದ್ದದ ಸಂದರ್ಭದಲ್ಲಿ ಸಂಸ್ಥೆಯು ಧನ ಸಂಗ್ರಹ ಮಾಡಿ ರಾಜ್ಯಪಾಲರ ನಿಧಿಗೆ ಒದಗಿಸಿದ್ದು, ಗಣ್ಯವ್ಯಕ್ತಿಗಳಿಂದ ಮಹಾಯುದ್ದದ ಕುರಿತು ಅತಿಥಿ ಉಪನ್ಯಾಸ ವ್ಯವಸ್ಥೆಗೊಳಿಸಿ, ಯುದ್ದದ ವರದಿ ಬೆಳವಣಿಗೆಯನ್ನು ಶಾಲಾ ಅಸೆಂಬ್ಲಿಯಲ್ಲಿ ಚರ್ಚಿಸುತ್ತಿದ್ದರು. ಆಗಿನ ಬ್ಯಾರಿಸ್ಟರ್ ಅಡ್ವೋಕೇಟ್ ಎ.ಕೆ. ನಂಬಿಯಾರ್ ಉಪನ್ಯಾಸ ನೀಡಿರುವುದಕ್ಕೆ ದಾಖಲೆಯಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ದ.ಕ.ಜಿಲ್ಲೆಯಲ್ಲಿ ಕುಂದಾಪುರ, ಕಾಸರಗೋಡು, ಮಂಗಳೂರು, ಉಡುಪಿ, ಉಪ್ಪಿನಂಗಡಿ ಎನ್ನುವ ೫ ತಾಲೂಕುಗಳು ಸೇರಿ, ಮಂಗಳೂರು ಜಿಲ್ಲಾ ಕೇಂದ್ರವಾಗಿದ್ದು, ಏಕೈಕ ಮಹಿಳಾ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿತ್ತು. ೧೯೭೨ರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಾರಂಭಗೊಂಡು ೨೦೦೪ರವರೆಗೆ ೧೪ ಪ್ರಾಚಾರ್ಯರು ಕಾಲೇಜಿನ ಏಳ್ಗೆಗಾಗಿ ಶ್ರಮಿಸಿದ್ದರು. ಶ್ಯಾಮ್ ಭಟ್ ಪ್ರಾಚಾರ್ಯರಾದ ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆತು, ಶಾಸಕರ ನೆರವಿನಿಂದ ಕಾಲೇಜು ಪ್ರತಿಷ್ಠಿತ ವಿದ್ಯಾಕೇಂದ್ರವಾಗಿ ರೂಪುಗೊಂಡಿದೆ. ಕಮಲಾಕರ ಹಾಲಂಬಿಯವರ ಅವಧಿಯಲ್ಲಿ ಪಿಯುಸಿ ವಿಜ್ಞಾನ ವಿಭಾಗ , ಸಮಾಜಶಾಸ್ತ್ರ, ವಾಣಿಜ್ಯ ವಿಭಾಗ ಪ್ರಾರಂಭಗೊಂಡವು. ಕಳೆದ ೭ ವರ್ಷಗಳಿಂದ ವಿಜ್ಞಾನ ಪಿ.ಯು.ಸಿ.ವಿಭಾಗಕ್ಕೆ ಕಂಪ್ಯೂಟರ್ ವಿಜ್ಞಾನ, ಜೀವಶಾಸ್ತ್ರದ ಬದಲಿಗೆ ಆಯ್ಕೆ ವಿಷಯವಾಗಿ ವಿದ್ಯಾರ್ಥಿಗಳಿಗೆ ಲಭ್ಯವಿದೆ. ೧೯೮೭ ರಿಂದ ಕಾಲೇಜಿನಲ್ಲಿ ವೃತ್ತಿ ಶಿಕ್ಷಣ ವಿಭಾಗ (ಜೆ.ಒ.ಸಿ)ದಲ್ಲಿ ಹೊಲಿಗೆ ಮತ್ತು ವಸ್ತ್ರವಿನ್ಯಾಸ ಪಿಯುಸಿ ಸರಿಸಮಾನ ಡಿಪ್ಲೋಮಾ ತರಗತಿ ಪ್ರಾರಂಭಗೊಂಡಿತ್ತು. (ಈಗ ಸರಕಾರದ ನೀತಿಯಂತೆ ರದ್ದಾಗಿದೆ). ೨೦೦೪ ಜೂ. ವಾಣಿಜ್ಯ ವಿಭಾಗದಲ್ಲಿ ಇತಿಹಾಸದ ಬದಲಿಗೆ ಕಂಪ್ಯೂಟರ್ ವಿಜ್ಞಾನ ಐಚ್ಚಿಕ ವಿಷಯವಾಗಿ ಅಭ್ಯಾಸ ಮಾಡುವ ಅವಕಾಶ ಒದಗಿದೆ.
ಸಂಸ್ಥೆಯಲ್ಲಿರುವ ಸೌಲಭ್ಯ:
ಕಾಲೇಜಿನಲ್ಲಿ ಸರಸ್ವತಿ ಬುಕ್‌ಬ್ಯಾಂಕ್‌ನ್ನು ತೆರವುಗೊಳಿಸಲಾಗಿದ್ದು ದಾನಿಗಳ ನೆರವಿನಿಂದ ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ  ಪ್ರಥಮ ಆದ್ಯತೆಯೊಂದಿಗೆ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರಥಮ ಪಿಯುಸಿ ವಿಜ್ಞಾನ (ಪಿಸಿಎಂಬಿ) ವಿಭಾಗದ ವಿದ್ಯಾರ್ಥಿನೀಯರ ಅರ್ಹತೆಯನ್ನು ಗಮನಿಸಿ ರೂ.೯೦೮ ಮೌಲ್ಯದ ಪಠ್ಯಪುಸ್ತಕವನ್ನು ದಾನಿಗಳ ನೆರವಿನಿಂದ ನೀಡಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆ, ವ್ಯಕ್ತಿತ್ವ ವಿಕಸನದಂತಹ ಪುಸ್ತಕವನ್ನು ನೀಡಲಾಗುವುದು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯನ್ನು ನೀಡಲಾಗಿದೆ. ಯಾವುದೇ ಟ್ಯೂಷನ್‌ಗೆ ಹೋಗದೇ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿದ್ದಾರೆ. ವಿದ್ಯಾರ್ಥಿ, ಉಪನ್ಯಾಸಕರಿಗೂ ಹಾಗೂ ಶೈಕ್ಷಣಿಕ ಪಾವಿತ್ರತೆ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಪವಿತ್ರ ನದಿಗಳ ಹೆಸರುಗಳನ್ನು ಪ್ರತಿಯೊಂದು ಕೊಠಡಿಗೆ ಇರಿಸಲಾಗಿದೆ. ೧ ರಿಂದ ೧೦ನೇ ತರಗತಿ, ಪಿಯುಸಿಯಲ್ಲಿ ಕಲಾ, ವಾಣಿಜ್ಯ(ಕಂಪ್ಯೂಟರ್ ಸೈನ್ಸ್) , ವಿಜ್ಞಾನ(m..ಞ.ಚಿ-), ಡಿಗ್ರಿಯಲ್ಲಿ ಬಿ.ಎ, ಬಿ.ಕಾಮ್, ಬಿ.ಬಿ.ಎಂ, ಬಿ.ಸಿ.ಎ, ಎ.ಎಸ್ಸಿ  ವಿಷಯವನ್ನು ಭೋದಿಸಲಾಗುತ್ತಿದೆ. ಸರಕಾರಿ ನಿಯಮದಂತೆ ಸಾಮಾನ್ಯ ಅರ್ಹತೆ ಶೇ.೫೦ ಹಾಗೂ ಮಿಸಲಾತಿ ಶೇ.೫೦ ಆಧರಿಸಿ ಸೀಟುಗಳ ಹಂಚಿಕೆ ಮಾಡಲಾಗುತ್ತಿದೆ. ೨೦೦೯ರಲ್ಲಿ ಸರಕಾರದಿಂದ ಪ್ರಾರಂಭವಾದ ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮ ಈ ವಿದ್ಯಾಸಂಸ್ಥೆಯಲ್ಲಿ ೨೦೦೩ರಲ್ಲಿಯೇ ಪ್ರಾರಂಭಗೊಂಡು ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ನ ಬಗ್ಗೆ ಮೂಲಅಂಶವನ್ನು ತಿಳಿಸಿಕೊಡುವ ಶಿಕ್ಷಣ ನಡೆಯುತ್ತಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಉದಾರ ದಾನಿಗಳ ನೆರವು, ಶಾಲಾಭಿವೃದ್ಧಿ ಸಂಸ್ಥೆಯ ನೆರವು ಪಡೆದು ಎಲ್ಲಾ ತರಗತಿಗೆ ಉಪನ್ಯಾಸಕರ ನೇಮಕ ಮಾಡಲಾಗಿದೆ. ಕರ್ಣಾಟಕ ಬ್ಯಾಂಕ್, ಕಾರ್ಪೋರೇಶನ್, ಇನ್‌ಪೋಸಿಸ್, ಕಂಪ್ಯೂಟರ್ ಕಲಿಯುತ್ತಿರುವ ವಿದ್ಯಾರ್ಥಿಗಳ ಪೋಷಕರ ನೆರವಿನಿಂದ ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಮಾಡಲಾಗಿದೆ.
ಸಂಪನ್ನೆಯ ಪ್ರಧಾನ ಸಂಪಾದಕ  ಕೆ.ವಾಸುದೇವ ಕಾಮತ್:
೧೮ ವರ್ಷಗಳ ಸಮಾಜಶಾಸ್ತ್ರ ಉಪನ್ಯಾಸ ವೃತ್ತಿಯಲ್ಲಿ ೧೫ ವರ್ಷ ಶೇ.೧೦೦ ಫಲಿತಾಂಶ ದಾಖಲಿಸಲು ಕಾರಣಿಕರ್ತರಾಗಿ ಪ್ರಸ್ತುತ ಈ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜಿನ ವಾರ್ಷಿಕ ಸಂಚಿಕೆ ಸಂಪನ್ನೆಯ ಪ್ರಧಾನ ಸಂಪಾದಕರಾಗಿ ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ನಿರ್ಮಾಣ ಮಾಡಿರುವುದಲ್ಲದೇ ಪ್ರತಿಯೊಂದು ತರಗತಿಯಲ್ಲಿಯೂ ಪ್ರತ್ಯೇಕ ಸಂಚಿಕೆಯನ್ನು ತರುವಲ್ಲಿ ಕಾರಣೀಭೂತರಾಗಿದ್ದಾರೆ. ದಾನಿಗಳ ನೆರವಿನಿಂದ ೩೦ ಕಂಪ್ಯೂಟರ್‌ನ್ನು ಸಂಸ್ಥೆಗೆ ಒದಗಿಸುವಲ್ಲಿ ಶ್ರಮಿಸಿದ್ದಾರೆ.  ಮಳೆನೀರಿನ ಕೊಯ್ಲು, ಪರಿಸರ ಹಸಿರೀಕರಣ, ಐಚ್ಚಿಕ ಕನ್ನಡ, ಬಿತ್ತಿಪತ್ರ, ಗೋಡೆ ಬರಹ, ೧೯೯೪ರಿಂದ ಯಕ್ಷಗಾನ ತರಬೇತಿ ಒದಗಿಸುವಲ್ಲಿ ಶ್ರಮಿಸಿದ್ದಾರೆ. ಶತಮಾನೋತ್ಸವ ಸಂದರ್ಭದಲ್ಲಿ ದೇವಸ್ಯ ಮಾಸ್ಟರ್ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಪ್ರಾರಂಭಿಸುವ ಮಹತ್ತರ ಗುರಿಯನ್ನು ಇರಿಸಿಕೊಂಡಿದ್ದಾರೆ. ರ್‍ಯಾಂಕ್ ತೆಗೆಯುತ್ತೇನೆಂಬ ನಂಬಿಕೆಯಿದ್ದರೂ ಹಣಕಾಸಿನ ತೊಂದರೆಯಿಂದ ಪ್ರತಿಷ್ಠಿತ ಸಂಸ್ಥೆಗೆ ಸೇರಲು ಆಗಲಿಲ್ಲ ಎಂದು ನಿರಾಸೆ ತಾಳುವ ವಿದ್ಯಾರ್ಥಿನೀಯರಿಗೆ ಎಲ್ಲಾ ರೀತಿಯ ನೆರವು ಬಲ್ಮಠ ಮಹಿಳಾ ಸಂಸ್ಥೆ ನೀಡುತ್ತದೆ. ವಿದ್ಯಾರ್ಥಿಗಳ ಮಟ್ಟವನ್ನು ಗಮನಿಸಿ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಫಲಿತಾಂಶ ದಾಖಲಿಸುವಲ್ಲಿ ಶಿಕ್ಷಕ ವರ್ಗ ಸಹಕಾರಿಯಾಗಿದ್ದಾರೆ. 
ವಿದ್ಯಾಸಂಸ್ಥೆಗೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯ:
ಸಂಸ್ಥೆಯಲ್ಲಿ ಬಿಎ, ಬಿಕಾಮ್, ಬಿಬಿಎಂ, ಬಿಸಿಎ, ಈ ವರ್ಷದಿಂದ ಪ್ರಾರಂಭವಾದ ಬಿ.ಎಸ್ಸಿ (ಭೌತಶಾಸ್ತ್ರ, ಲೆಕ್ಕಶಾಸ್ತ್ರ, ಕಂಪ್ಯೂಟರ್ ಸೈನ್ಸ್) ಇರುವುದರಿಂದ ಕೊಠಡಿಯ ಕೊರತೆ ಕಂಡುಬರುತ್ತಿದೆ. ಈ ಬಾರಿ ೮ ನೇ ತರಗತಿಗೆ ೩೫, ೯(೧೨೦), ೧೦ ನೇ(೭೮), ಪ್ರಥಮ ಪಿಯುಸಿಗೆ ೩೬೬ ವಿದ್ಯಾರ್ಥಿನೀಯರು ಸೇರ್ಪಡೆಗೊಂಡಿದ್ದಾರೆ. ೧ರಿಂದ ೧೦ನೇ ತರಗತಿಯಲ್ಲಿ ೪೦೦ವಿದ್ಯಾರ್ಥಿಗಳು, ಪಿಯುಸಿಯಲ್ಲಿ ೭೦೦, ಡಿಗ್ರಿಯಲ್ಲಿ ೮೬೦, ಡಿ.ಎಡ್‌ನಲ್ಲಿ ೧೦೦ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿರುವುದು ವಿಶೇಷವಾಗಿದೆ. ಪಿಯುಸಿ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್, ಹಿಂದಿ, ಕಾಮರ್ಸ್ ವಿಷಯದಲ್ಲಿ ಉಪನ್ಯಾಸಕರು ಹಾಗೂ ಶಿಕ್ಷಕೇತರ ವಿಭಾಗದಲ್ಲಿ ಸಿಬ್ಬಂದಿಯ ಕೊರತೆಯಿದೆ. ಐದಾರು ವರ್ಷಗಳಿಂದ ಸುಣ್ಣ-ಬಣ್ಣ ಕಾಣದ ಸಂಸ್ಥೆಗೆ ಲೋಕೋಪಯೋಗಿ ಇಲಾಖೆಗೆ ಮನವಿ ನೀಡಿದ್ದರೂ ಕಾರ್ಯ ವಿಳಂಭವಾಗುತ್ತಿದೆ.
 ಸರಕಾರದ ನೀತಿಯಂತೆ ಟೈಲರಿಂಗ್ ಮಷಿನ್‌ಗಳು ಯಾವುದೇ ಕಾರ್ಯನಿರ್ವಹಿಸದೇ ಹಾಳು ಬಿದ್ದಿದೆ. ಸರಕಾರದ ಅನುಮತಿ ದೊರಕಿದರೆ ಬಡವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೃತ್ತಿ ಕೌಶಲ್ಯವನ್ನು ಕಲಿಸಲಾಗುವ ಹಂಬಲದಲ್ಲಿದ್ದಾರೆ. ಬಲ್ಮಠ ಸಂಸ್ಥೆಯಲ್ಲಿ ಕಲಿತು ದೇಶ ವಿದೇಶದಲ್ಲಿ ಉನ್ನತ ಸ್ಥರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನೂರರ ಸಂಭ್ರಮದಲ್ಲಿರುವ ಬಲ್ಮಠ ಮಹಿಳಾ ವಿದ್ಯಾಸಂಸ್ಥೆಯನ್ನು ಮಾದರಿ ಸಂಸ್ಥೆಯನ್ನಾಗಿ ಬೆಳೆಸುವ ಇಚ್ಚೆಯಿದೆ. ಹಾಗೂ ನೂತನ ಕಟ್ಟಡದ ವ್ಯವಸ್ಥೆ ಮಾಡುವ ಗುರಿಯಿದೆ. ವಿದ್ಯಾರ್ಥಿಯ ಬೌಧ್ದಿಕ ಬೆಳವಣಿಗೆಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಲಾಗಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ೨ ಬಾರಿ ಶೇ.೧೦೦ ಫಲಿತಾಂಶ ಹಾಗೂ ಪಿಯುಸಿಯಲ್ಲಿ ಶೇ.೯೪ ಫಲಿತಾಂಶ ದಾಖಲಿಸಿದ ಸಂತೃಪ್ತಿಯಿದೆ.
ಎನ್.ಯೋಗೀಶ್ ಭಟ್- ಕರ್ನಾಟಕ ವಿಧಾನ ಸಭಾ ಉಪಾಧ್ಯಕ್ಷ

ಬಡತನದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅರ್ಹತೆ ಆಧಾರದಲ್ಲಿ ಸಾಮಾಜಿಕ ಸೇವಾ ಮನೋಭಾವನೆಯಿಂದ ಉಚಿತ ಶಿಕ್ಷಣ ನೀಡಲು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದೆ ಬರಬೇಕಾಗಿದೆ. ಸಂಸ್ಥೆಯ ಮುಂಬಾಗದಲ್ಲಿರುವ ಬಸ್‌ನಿಲ್ದಾಣದಿಂದ ವಿದ್ಯಾರ್ಥಿಗಳ ಏಕಾಗ್ರತೆಗೆ ತೊಂದರೆಯುಂಟಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕಾಗಿದೆ. ಇಲ್ಲಿಯವರೆಗೆ ನೆರವು ನೀಡಿದ ಸಂಸ್ಥೆಗಳಿಗೆ ಋಣಿಯಾಗಿದ್ದೇವೆ.
ಕೆ.ವಾಸುದೇವ ಕಾಮತ್-ಪ್ರಾಂಶುಪಾಲರು ಮಹಿಳಾ ಕಾಲೇಜು ಬಲ್ಮಠ.

ಮಹಿಳೆಯರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳು ಈ ಶಿಕ್ಷಣ ಸಂಸ್ಥೆಯಲ್ಲಿದೆ. ೮ ನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗೆ ಓದಿದ್ದೇನೆ. ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಮಂಗಳೂರು ನಗರದಲ್ಲಿ ಬೆಳೆದು ನಿಂತಿದೆ.  ನಿರ್ಮಲಾ- ಕೆಎಸ್‌ಆರ್‌ಟಿಸಿ (ಬಿಎಂಟಿಸಿ)ಟ್ರಾಫಿಕ್ ಸಬ್‌ಇನ್‌ಸ್ಪೆಕ್ಟರ್ ಬೆಂಗಳೂರು.

ಆರ್ಥಿಕವಾಗಿ ಸದೃಢರಾಗಿಲ್ಲದ ನನ್ನ ಶಿಕ್ಷಣ ವ್ಯವಸ್ಥೆಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ಬಳಗ ಪ್ರೋತ್ಸಾಹ ನೀಡಿದ್ದಾರೆ. ಪಠ್ಯಪುಸ್ತಕದ ಖರೀದಿ ಹಾಗೂ ಇಂಜಿನಿಯರಿಂಗ್ ಶಿಕ್ಷಣ ವ್ಯವಸ್ಥೆಗೆ ದಾನಿಗಳ ನೆರವನ್ನು ಒದಗಿಸಿಕೊಟ್ಟಿದ್ದಾರೆ.
ವಿಖಿತಾ ಶೆಟ್ಟಿ- ದ್ವಿತೀಯ ರ್‍ಯಾಂಕ್( ೨೦೧೧-೧೨ ವಿಜ್ಞಾನ ವಿಭಾಗ)
ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿಶೇಷ ಸೌಲಭ್ಯವನ್ನು ಒದಗಿಸಿ, ಸಿಇಟಿ ಪರೀಕ್ಷೆಯನ್ನು ಬರೆಯುವುದರೊಂದಿಗೆ ಇತರ ಕಾಲೇಜಿನ ಮಕ್ಕಳಿಗೆ ಸರಿಸಮಾನರಾಗಿ ಬೆಳೆಯಲು ಅವಕಾಶ ಮಾಡಿದೆ. ಪ್ರಾಂಶುಪಾಲರಾದ ಶ್ಯಾಮ ಭಟ್, ವಾಸುದೇವ ಕಾಮತ್ ಮಕ್ಕಳ ಕುರಿತು ಕಾಳಜಿ ವಹಿಸಿದ್ದಾರೆ. ವಾಸುದೇವ ಕಾಮತ್ ಬಡವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ತುಂಬಿ ಶಿಕ್ಷಣಕ್ಕೆ ಅವಕಾಶ ನೀಡಿದ್ದಾರೆ.
ಶುಭಗೌರಿ-ಹಳೆ ವಿದ್ಯಾರ್ಥಿನಿ







No comments:

Post a Comment