Thursday 21 June 2012



amratha shatty
jayashri poojary

ಸರಕಾರಿ ಪ್ರೌಢಶಾಲೆ ಆರ್ಡಿಗೆ ಸುವರ್ಣ ಮಹೋತ್ಸವ ಸಂಭ್ರಮ:
ಸುವರ್ಣ ಅಕ್ಷರಗಳಲ್ಲಿ ಪಡಿಮೂಡಿದ ಎಸ್‌ಎಸ್‌ಎಲ್‌ಸಿಯ ಫಲಿತಾಂಶ:
ಕೆ.ಎಸ್.ಶೆಟ್ಟಿ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರಕಾರಿ ಪ್ರೌಢಶಾಲೆ ಆರ್ಡಿಯು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ ಎಂದಾಗ ವಿಶೇಷವೇನಿದೆ ಎನ್ನುವ ಪ್ರಶ್ನೆ ಮೂಡುವುದು ಸಹಜವಾಗಿದ್ದರೂ ಮುಂದೆ ಏನೋ ವಿಶೇಷವಿದೆಯೆನಿಸದಿರದು. ಅಂತಹ ಕುತೂಹಲ ಮೂಡಿದಾಗಲೇ ಲೇಖನಕ್ಕೆ ಒಂದು ಅರ್ಥ ಬರುವುದು. ಪೋಷಕರೆಲ್ಲಾ ಸರಕಾರಿ ಶಾಲೆಯ ಬಗ್ಗೆ ಕೀಳರಿಮೆ ತಳೆದು ಆಂಗ್ಲ ಮಾಧ್ಯಮಕ್ಕೆ ತಮ್ಮ ಮಕ್ಕಳನ್ನು ಸಾಲ-ಸೋಲ ಮಾಡಿ ಕಳುಹಿಸುವ ಪದ್ದತಿ ಸಾಮಾನ್ಯವಾಗಿದೆ. ಆದರೆ ಮಧ್ಯಮ ವರ್ಗದ ಮಕ್ಕಳು ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲದೇ ಅನ್ಯಥಾ ಮಾರ್ಗವಿಲ್ಲ. ತಾವು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಬಗ್ಗೆ ಕೀಳರಿಮೆ ತಾಳದೆ ಆರ್ಡಿ ಶಾಲೆಯಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿಯ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳು ಶಾಲೆಯ ದಾಖಲೆಯಲ್ಲಿ ಸುವರ್ಣ ಅಕ್ಷರದಿಂದ ಫಲಿತಾಂಶವನ್ನು ದಾಖಲು ಮಾಡಿದ್ದಾರೆ. ಪರೀಕ್ಷೆಗೆ ಕುಳಿತ ೬೩ ಮಕ್ಕಳು ಉತ್ತಮ ಅಂಕಗಳನ್ನು ಪಡೆದು ೫೦ ವರ್ಷಗಳಲ್ಲಿ ಶೇ.೧೦೦ ಪಡೆಯಲಾಗದ್ದನ್ನು ಈ ಬಾರಿ ಪಡೆದು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಗರಿಯನ್ನು ಪಡೆದಿದ್ದಾರೆ.
ಆರ್ಡಿ ಶಾಲೆಯ ವಿಶೇಷತೆ:
ಕುಂದಾಪುರ ತಾಲೂಕಿನ ಗಡಿಪ್ರದೇಶವಾದ ಆರ್ಡಿ ಕಟ್ಟಕಡೆಯ ಶಾಲೆ ಸರಕಾರಿ ಪ್ರೌಢಶಾಲೆಯಾಗಿದೆ. ಸುತ್ತಮುತ್ತಲ ಹತ್ತಾರು ಊರುಗಳಿಗೆ ಒಂದೇ ಪ್ರೌಢಶಾಲೆ. ೫೦ ವರ್ಷಗಳಲ್ಲಿ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಬ್ಯಾಂಕಿಂಗ್, ಶಿಕ್ಷಕ, ಪೊಲೀಸ್, ಪತ್ರಿಕಾರಂಗ, ಕಲಾರಂಗ,ಸ್ವ-ಉದ್ಯಮಗಳನ್ನು ನಡೆಸುತ್ತಾ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.  ಪ್ರತಿವರ್ಷ ಸುಮಾರು ೩೦೦ಕ್ಕೂ ಅಧಿಕ ಮಕ್ಕಳು ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವುದು ಗಮನಿಸಬೇಕಾದ ಅಂಶ. ಅಲ್ಬಾಡಿ, ಶೇಡಿಮನೆ, ಅರಸಮ್ಮಕಾನು, ಬೆಪ್ಡೆ, ಬಡಾಬೆಪ್ಡೆ, ಹಂಜ, ಮಡಾಮಕ್ಕಿ, ಕಾಸನಮಕ್ಕಿಯಿಂದ ವಿದ್ಯಾರ್ಥಿಗಳು ಈ ಶಾಲೆಗೆ ಬಂದು ಕಲಿಯುತ್ತಿದ್ದರು. ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳು ಇಲ್ಲದಾಗಿಯೂ ಶಾಲೆಯ ಮಕ್ಕಳು ಉತ್ತಮ ಅಂಕವನ್ನು ಪಡೆಯಲು ಶ್ರಮಿಸುತ್ತಿದ್ದರು. ಗ್ರಾಮೀಣ ಪ್ರದೇಶವಾದ್ದರಿಂದ ಬಸ್ಸಿನ ವ್ಯವಸ್ಥೆ ಇಲ್ಲದಿದ್ದರೂ ಮಕ್ಕಳು ಕೆಲವರು ಹತ್ತಾರು ಕಿ.ಮೀ. ನಡೆದುಕೊಂಡೆ ಮನೆಗೆ ಸೇರುತ್ತಿದ್ದರು. ಅದಕ್ಕಿಂತಲೂ ದೂರದಿಂದ  ಶಾಲೆಗೆ ಬರುವವರು ಬಸ್ಸಿಗಾಗಿ ಸಂಜೆ ೬ ಗಂಟೆಯವರೆಗೆ ಕಾದು ಮನೆಗೆ ತಲುಪುವಾಗ ಸಂಪೂರ್ಣ ಕತ್ತಲಾಗುತ್ತಿತ್ತು. ಮಕ್ಕಳ ಕಷ್ಟ  ನೋಡಿದ ಉದ್ಯಮಿ ಪ್ರಶಾಂತ್ ಶೆಟ್ಟಿ ಗೇರುಬೀಜ ಕಾರ್ಖಾನೆಯ ವಾಹನದಲ್ಲಿ ಮಕ್ಕಳನ್ನು ಬೀಡುವ ಕಾರ್ಯ ಮಾಡಿದ್ದರು. ಇಲ್ಲಿಯೂ ಕೂಡ ಅಂಗವಿಕಲ ಮಕ್ಕಳಿಗೆ ಸರಿಯಾದ ವ್ಯವಸ್ಥೆಯಿಲ್ಲದೇ ಪಜೀತಿ ಪಡುವಂಥಾಗಿದೆ. ಊರಿನವರ ಸಹಕಾರ, ಗುರುಗಳ ಶ್ರಮ, ವಿದ್ಯಾರ್ಥಿಗಳ ಸಾಧನೆಗೆ ಆರ್ಡಿ ಶಾಲೆಯ ಕೀರ್ತಿ  ಉತ್ತುಂಗಕ್ಕೆ ಏರಿದೆ.
ಹಳೆ ವಿದ್ಯಾರ್ಥಿಯ ಪರಿಶ್ರಮ:
ಆರ್ಡಿ ಶಾಲೆಯ ಹಳೆವಿದ್ಯಾರ್ಥಿಯಾಗಿ, ಪ್ರಸ್ತುತ  ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿಯವರ ಬ್ಯಾಚ್‌ನಲ್ಲಿ ಕೇವಲ ನಾಲ್ವರು ಪಾಸಾಗಿದ್ದರು. ಉನ್ನತ ವಿದ್ಯಾಭ್ಯಾಸ  ಮುಗಿಸಿ ಅದೇ ಶಾಲೆಗೆ ೬ ತಿಂಗಳು ಗೌರವ ಶಿಕ್ಷಕನಾಗಿ ಸೇವೆ ಸಲ್ಲಿಸಿ ಈಗ ಕುಂದಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಗೋಪಾಲ ಶೆಟ್ಟಿಯವರ ಶ್ರಮ ಈ ಸಂದರ್ಭದಲ್ಲಿ ಶ್ಲಾಘನೀಯ. ತಾನು ಕಲಿತ ಶಾಲೆಯನ್ನು ಬಹು ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವ ಚಿಂತನೆಯ ಫಲವೇ ಇಂದು ಶೇ.೧೦೦ ಫಲಿತಾಂಶ ಕಾಣಲು ಸಾಧ್ಯವಾಯಿತು. ೨೦೦೮-೦೯ರಲ್ಲಿ ಕುಂದಾಪುರ ತಾಲೂಕಿನ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಸರಕಾರದ ಅನುದಾನವಿಲ್ಲದೆ ಉತ್ತಮ ಫಲಿತಾಂಶ ಕಾಣಲು ಯಾವ ಕ್ರಮ ಕೈಗೊಳ್ಳಬಹುದು ಎನ್ನುವುದಕ್ಕಾಗಿ ಅಧ್ಯಾಪಕರೊಂದಿಗೆ ಚಿಂತನೆಯನ್ನು ನಡೆಸಿದ ಅವರು ಕುಂದಾಪುರದ ಜನಪ್ರತಿನಿಧಿ ಪತ್ರಿಕೆಯೊಂದಿಗೆ ಸಂಪರ್ಕವನ್ನು ಬೆಳೆಸಿ ಪ್ರತಿ ಶಾಲೆಗಳಿಗೂ ಉಚಿತ ಪತ್ರಿಕೆ ನೀಡುವ  ಮೂಲಕ ಅಧ್ಯಾಪಕರಿಂದ ಪಡೆದ ಸಲಹೆ- ಸೂಚನೆಯನ್ನು ತಲುಪಿಸಿದರು.  ಶಿಕ್ಷಣದಲ್ಲಿ ಕ್ರಾಂತಿ  ಮಾಡಬೇಕು ಎನ್ನುವ ಉದ್ದೇಶದಿಂದ ಫಲಿತಾಂಶ ಉತ್ತಮ ಪಡಿಸಲು ಹಲವಾರು ವಿಧವಾಗಿ ಶ್ರಮಿಸಿದರು. ಶಿಕ್ಷಣ ತಜ್ಞರ ಸಹಕಾರದಿಂದ ರೂ.೨.೫೦ ಲಕ್ಷ ಮೌಲ್ಯದ ಪರೀಕ್ಷಾ ಸ್ಪೂರ್ತಿ ಪುಸ್ತಕವನ್ನು ಪ್ರಾರಂಭಿಸಿದ್ದರೂ ನಿರ್ವಹಣೆಯ ಖರ್ಚು ಜಾಸ್ತಿಯಾದ್ದರಿಂದ ಸರಕಾರದಿಂದ ಭರಿಸಲು ಸಾಧ್ಯವಿಲ್ಲದಾಯಿತು. ಅವರ ಸ್ನೇಹಿತರಾದ ಮಡಾಮಕ್ಕಿ ಬಾಲಕೃಷ್ಣ ಶೆಟ್ಟಿ, ಕೆ.ಆರ್.ನಾಯಕ್ ಎನ್ನುವ ಇಬ್ಬರೂ ದಾನಿಗಳಿಂದ ರೂ.೨೦ಸಾವಿರ ಸಂಗ್ರಹಿಸಿ ಉಡುಪಿ ಜಿಲ್ಲೆಯ ಪ್ರತಿ ಶಾಲೆಗೆ ಸೆಟ್ಟಿಗೆ ಸ್ವಲ್ವ ಮೊತ್ತ ನಿಗಧಿ ಮಾಡಿ ನೀಡಲಾಯಿತು. ಕುಂದಾಪುರ ತಾಲೂಕಿನ ಮಕ್ಕಳಿಗಾಗಿ ಪರೀಕ್ಷಾ ಪ್ರೇರಣಾ ಎನ್ನುವ ಮಾರ್ಗದರ್ಶಿ ಪುಸ್ತಕ ಗಣೇಶ್ ಶೆಟ್ಟಿಗಾರ್ ಮತ್ತು ಉದಯ ಗಾಂವಕರ್ ಪ್ರಾರಂಭಿಸಿದರು. ಕೆಲವು ಶಾಲೆಗಳಿಗೆ ನೀಡಲಾಗಿದ್ದರೂ ಸುಮಾರು ೫೦ ಸಾವಿರ ಮೌಲ್ಯದ ಪುಸ್ತಕ ಉಳಿತಾಯಗೊಂಡಿತು. ಉದ್ಯಮಿ ಗಣೇಶ್ ಕಿಣಿ ಎನ್ನುವವರಿಂದ ರೂ.೨೫ ಸಾವಿರ ಸಂಗ್ರಹಿಸಿ ಸರಕಾರಿ ಪ್ರೌಢಶಾಲೆ ಆರ್ಡಿಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಉಚಿತವಾಗಿ ನೀಡಲಾಯಿತು. ಉಳಿದ ರೂ.೨೫ ಸಾವಿರ ಮೌಲ್ಯದ  ಪುಸ್ತಕವನ್ನು ಮುಂಬೈಯ ಉದ್ಯಮಿ ಉಮೇಶ ಪೂಜಾರಿ ಅವರ ಸಹಾಯ ಹಸ್ತದಿಂದ ಅವರು ಕಲಿತ ಹೆಮ್ಮಾಡಿ ಶಾಲೆಗೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಈ ಕಾರ್ಯವೈಖರಿಯಿಂದಲೇ ಆರ್ಡಿ ಶಾಲೆ ಶೇ.೧೦೦ ಫಲಿತಾಂಶ ಪಡೆಯುವದರೊಂದಿಗೆ ಉಡುಪಿ ಜಿಲ್ಲೆಗೆ ಅಗ್ರಣಿಯಾಗಿ ಮೂಡಿಬಂತು. ಹೆಮ್ಮಾಡಿ ಶಾಲೆ ಶೇ.೯೯ ಫಲಿತಾಂಶ ದೊರಕಿಸಿಕೊಂಡಿತು. ಈ ರೀತಿಯಾಗಿ ಯಾವಾಗಲೂ ಕೊನೆಯ ಸ್ಥಾನಕ್ಕೆ ತೃಪ್ತಿ ಪಡುತ್ತಿದ್ದ ಕುಂದಾಪುರ ವಲಯ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯಮಟ್ಟದಲ್ಲಿಯೇ ಗುರುತಿಸಿವಂತಾಯಿತು.
ಉಡುಪಿ ಜಿಲ್ಲಾ ಪಂಚಾಯತ್‌ನಲ್ಲಿ  ನಡೆದ ಚಿಂತನೆ ಹಾಗೂ  ಮಾರ್ಗದರ್ಶನ ಫಲಶ್ರುತಿಯೇ ಆರ್ಡಿ ಶಾಲೆ ಸುವರ್ಣ ಮಹೋತ್ಸವದ ಸಂದರ್ಭ ಸುವರ್ಣ ಅಕ್ಷರಗಳಲ್ಲಿ ದಾಖಲೆಯಾಗಿದೆ. ಕುಂದಾಪುರ ತಾಲೂಕಿನ ೩೯ ಶಾಲೆಗಳಲ್ಲಿ ೨೬೦೦ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತು ಶೇ.೯೪.೯೮ ಫಲಿತಾಂಶ ದೊರಕಿಸಿ ಕೊಟ್ಟಿದ್ದಾರೆ. ಇದರಲ್ಲಿ ೧೫ ಶಾಲೆ ಶೇ.೧೦೦ಫಲಿತಾಂಶ, ೫ಶಾಲೆ ಶೇ.೯೯ಪಡೆದಿದ್ದವು.
ತೆರೆಮರೆಯಲಿದ್ದು ಸಾಧನೆಗೆ ಕಾರಣರಾದ ಗುರುವೃಂದ:
ಆರ್.ಎನ್.ಪರಶಿವ ಮೂರ್ತಿ, ಮಾಲತಿ, ಶೈಲಜಾ, ಸುಜಾತ, ವೈಶಾಲಿ ಜಿ.ರಾವ್, ಉದಯ ಶೆಟ್ಟಿ, ಶ್ರೀಕಾಂತ ನಾಯಕ್, ರಾಜ ಮಾಣಿಕ್ಯ, ಕೆ.ಪ್ರೇಮನಾಥ್ ತೋಳಾರ್, ಮಹಾಂತೇಶ್, ಸುರೇಶ್ ಕುಮಾರ್, ಸಾಂಕ್ಲಿ ನಾಯ್ಕ ವಿದ್ಯಾರ್ಥಿಗಳ ಸಾಧನೆಗೆ ಶ್ರಮಿಸಿದ ಸರಕಾರಿ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ.
ಐ qsಟ್ಠ Zಛಿ Zಠಿಛ್ಟಿ ಟ್ಞ್ಝqs ಜ್ಞ್ಛಿಟ್ಟಞZಠಿಜಿಟ್ಞ ಠಿಛಿZeಛ್ಟಿ ಜಿo ಟಠಿ ಛ್ಚಿಛಿooZqs Zo ಠಿeಛಿqs Zಛಿ ZಡಿZಜ್ಝಿZಚ್ಝಿಛಿ ಜ್ಞಿ ಜಿಚ್ಟಿZಜಿಛಿo Zb ಜ್ಞಿಠಿಛ್ಟ್ಞಿಛಿಠಿ. ಆಠಿ ಜ್ಛಿ qsಟ್ಠ Zಛಿ Zಠಿಛ್ಟಿ ಜ್ಞಿomಜ್ಟಿZಠಿಜಿಟ್ಞ, ಞಟಠಿಜಿqZಠಿಜಿಟ್ಞ Zb ಜಟಟb ಜ್ಠಜಿbಛ್ಞ್ಚಿಛಿ ಠಿಛಿZeಛ್ಟಿ ಜಿo ಛ್ಚ್ಚಿಛಿooಟ್ಟqs.
ಗುರುವಿಲ್ಲದ ಜೀವನ ಅಪಾತ್ರವಾಗಿರುತ್ತದೆ. ಎಲ್ಲರ ಜೀವನದಲ್ಲಿ ಗುರುಗಳ ಪಾತ್ರ ಮುಖ್ಯವಾಗಿರುತ್ತದೆ. ಗುರುವಿನಿಂದ ಕಲಿತ ವಿದ್ಯೆ ಲೋಕದಲ್ಲಿ ಉತ್ತಮ ವ್ಯಕ್ತಿತ್ವ ನೆಲೆಗೊಳಿಸುವುದರೊಂದಿಗೆ  ಶ್ರೇಷ್ಠ ಜೀವನ ನಡೆಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಗುರುಗಳ ಪ್ರಾಮುಖ್ಯತೆ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ನಡೆನುಡಿ ತಪ್ಪಿದಾಗ ತಿದ್ದಿ ಸರಿದಾರಿಗೆ ಕೊಂಡೊಯ್ಯಲು ಹರಸಾಹಸ ಮಾಡುತ್ತಾರೆ. ಆದರೆ ಆ ಸಮಯದಲ್ಲಿ  ನಮ್ಮ ಮನಃ ಕೇಳುವ ಸ್ಥಿತಿಯಲ್ಲಿರುವುದಿಲ್ಲ ಎನ್ನುವುದೇನೋ ನಿಜವಾದರೂ ಅದರ ನಿಜವಾದ ಮರ್ಮ ತಿಳಿಯುವುದು ಶಾಲಾ-ಕಾಲೇಜು ಜೀವನ  ಮುಗಿಸಿ ವೃತ್ತಿಜೀವನಕ್ಕೆ ಕಾಲಿರಿಸಿದಾಗ ತಿಳಿಯುತ್ತದೆ. ಅದಕ್ಕಾಗಿ ಸಂಸ್ಕೃತ ಶ್ಲೋಕವೊಂದು ಗುರುವಿನ ಬಗ್ಗೆ
ಗುರುಬ್ರಹ್ಮ, ಗುರುವಿಷ್ಣು, ಗುರುರ್ದೇವೋ ಮಹೇಶ್ವರ;
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ: ಎಂದು ಸಾರಿದೆ.
ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕನ್ನು ಹರಿಸಲು ಗುರುವಿನ ಮೂಲಮಂತ್ರವೇ ಸಾಕಾಗಿರುತ್ತದೆ. ಜೀವನದ ಪಯಣದಲ್ಲಿ ಅನೇಕ ಗುರುಗಳು ಬಂದರೂ ಮೂಲಾಕ್ಷರವನ್ನು ಕಲಿಸಿದ ಗುರುವರ್ಯರ ನೆನಪು ಮಾತ್ರ ನೆನಪಿನಾಳದಿಂದ ಮಾಸುವುದಿಲ್ಲ.  ನಾನು ಕಲಿತ ಶಾಲೆಯಲ್ಲಿ ಓರ್ವ ಗುರುಗಳ ಹೊರತು ಪಡಿಸಿ ಉಳಿದಂತೆ ಎಲ್ಲಾ ಹೊಸಬರೇ. ಆದರೂ ಕೂಡ ನನಗೆ ಇವರನ್ನು ನೋಡಿದಾಗ ಹೆಮ್ಮೆಯಾಗುತ್ತದೆ. ಗ್ರಾಮೀಣ ಭಾಗದ  ಮಕ್ಕಳಿಗೆ ಟ್ಯೂಷನ್ ಅವಶ್ಯಕತೆಯಿಲ್ಲವೆನ್ನುವುದಕ್ಕೆ ಇವರ ಪಾಠವೈಖರಿಯಿಂದಾಗಿ ಶಾಲೆಯ ಫಲಿತಾಂಶವೇ ಉತ್ತರವಾಗಿದೆ. ಪಾಸಾಗಲು ಹರಸಾಹಸ ಮಾಡುವ ಅತೀ ಬುದ್ದಿವಂತ ಮಕ್ಕಳಿಗೆ ತರಗತಿಯ ನಂತರ ಉಚಿತವಾಗಿ ಪಾಠ ಮಾಡುವ ಗುರುಗಳು ದೊರಕಿದ್ದು ಆರ್ಡಿ ಶಾಲಾ ಮಕ್ಕಳ ಭಾಗ್ಯವೆಂದೇ ಹೇಳಬೇಕು. ಗುರುವರ್ಯರು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಸಮಯವನ್ನು ವ್ಯಯಿಸಿ ಸಮಾಜದಲ್ಲಿ ಗುರುತಿಸುವಂತೆ ಮಾಡಿದ್ದು ಮಾತ್ರವಲ್ಲದೇ ಸುವರ್ಣ ಮಹೋತ್ಸವದ ಹೊತ್ತಿನಲ್ಲಿರುವ ಶಾಲೆ ಹೆಸರನ್ನು ಸುವರ್ಣ ಅಕ್ಷರಗಳಲ್ಲಿ ರಂಜಿಸುವಂತೆ ಮಾಡಿದ್ದಾರೆ.
ಪರಿಶ್ರಮಿಗಳ ಹೃದಯಾಂತರಾಳದ ಮಾತು:
ತಂದೆ ಮಧ್ಯವ್ಯಸನಿಯಾಗಿದ್ದು, ತಾಯಿ ಬೀಡಿಕಟ್ಟುತ್ತಾ ಮೂವರು ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು. ಯಾವುದೇ ವಿದ್ಯಾರ್ಥಿ ವೇತನವನ್ನು ದೊರೆಯದೆ ಕೆಲವೊಮ್ಮೆ ಬಸ್ಸಿನಲ್ಲಿ ಶಾಲೆಗೆ ಬರುತ್ತಿದ್ದು ಉಳಿದಂತೆ ಸುಮಾರು ೧೦ ಕಿ.ಮಿ ನಡೆದುಕೊಂಡೆ ಶಾಲೆಗೆ ಬಂದು ೮೯.೨೮% ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದೇನೆ. ಫಲಿತಾಂಶವನ್ನು  ನೋಡಿ ಹೆಬ್ರಿಯ ಅಮೃತ ಭಾರತಿ ವಿದ್ಯಾಲಯ ಅತೀ ಕಡಿಮೆ ಶುಲ್ಕವನ್ನು ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿದೆ. ಟ್ಯೂಷನ್‌ಗೆ ಹೋಗದೆ ನಗರ ಪ್ರದೇಶದ ಮಕ್ಕಳಿಗೆ ನಮ್ಮಲ್ಲಿಯೂ ಸಾಮರ್ಥ್ಯವಿದೆ ಎಂದು ತೋರಿಸಿಕೊಟ್ಟಿದ್ದೇವೆ.
-ಜಯಲಕ್ಷ್ಮೀ ಶೆಟ್ಟಿ ಅರಸಮ್ಮಕಾನು.

ಮನೆಯಿಂದ ಶಾಲೆಗೆ ತುಂಬಾ ದೂರವಿದ್ದರಿಂದ ಯಾವುದೇ ಟ್ಯೂಷನ್‌ಗೆ ಹೋಗುವುದಕ್ಕೆ ಸಮಯವೇ ಸಾಲುತ್ತಿರಲಿಲ್ಲ. ಅದಲ್ಲದೇ ಗ್ರಾಮೀಣ ಮಟ್ಟದಲ್ಲಿ ಟ್ಯೂಷನ್ ಹಾವಳಿ ಇನ್ನೂ ಪ್ರಾರಂಭವಾಗಿಲ್ಲ. ಶಾಲೆಯಲ್ಲಿ ಗುರುಗಳ ನಿರಂತರ ಶ್ರಮ-ಪ್ರೋತ್ಸಾಹದಿಂದ ಶಾಲೆಗೆ ದ್ವಿತೀಯ ಸ್ಥಾನಿ (೮೫.೯೨)ಯಾಗಲು ಕಾರಣವಾಗಿದೆ. ಮೂವರು ಹೆಣ್ಣು ಮಕ್ಕಳಾದ ನಮ್ಮ ವಿದ್ಯಾಬ್ಯಾಸ ಇದೇ ಸರಕಾರಿ ಶಾಲೆಯಲ್ಲಿ ಆಗಿದೆ.
ಅಮೃತ ಶೆಟ್ಟಿ ಬೆಪ್ಡೆ

ಮನೆಯಲ್ಲಿ ಹೇಳಿಕೊಳ್ಳುವಂಥ ಸ್ಥಿತಿವಂತರಲ್ಲದ ನಾವು ಬುದ್ದಿವಂತಿಕೆಯಲ್ಲಿ ಯಾರಿಗೂ ಕಡಿಮೆ ಇಲ್ಲವೆನ್ನುವುದನ್ನು ಸಾಧಿಸಿ ತೋರಿಸಿದ್ದೇವೆ. ಮುಂದಿನ ದಿನದಲ್ಲಿ ಇದಕ್ಕಿಂತಲೂ ಹೆಚ್ಚಿನ ಫಲಿತಾಂಶ ಪಡೆದು ಶಾಲೆಗೆ ಕೀರ್ತಿಯನ್ನು ತರುತ್ತೇವೆ.
ಜಯಶ್ರೀ ಪೂಜಾರಿ (೮೫.೭೬)-ತೃತೀಯ ಸ್ಥಾನಿ

ಶಿಕ್ಷಕರ ನಿರಂತರ ಶ್ರಮ ಹಾಗೂ ವಿದ್ಯಾರ್ಥಿಗಳ ಅವಿರತ ಪ್ರಯತ್ನದಿಂದ ನಾನು ಕಲಿತಂಥ ಶಾಲೆ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗಿದೆ. ಮೂಲಭೂತ ಸೌಕರ್ಯಗಳು ಕಡಿಮೆ ಪ್ರಮಾಣದಲ್ಲಿ ದೊರಕಿದರೂ ಆ ಕುಂದುಕೊರತೆಗಳನ್ನು ವರವಾಗಿ ಸ್ವೀಕರಿಸಿದ ಮಕ್ಕಳು ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸುವರ್ಣ ಅಕ್ಷರದಲ್ಲಿ ಶಾಲೆಯ ಹೆಸರನ್ನು ಬರೆಸಿದ್ದಾರೆ. ಗುರುಗಳ ಪ್ರೋತ್ಸಾಹ ಹಾಗೂ ಪೋಷಿಸುವ ಕಾರ್ಯವೇ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುವುದರೊಂದಿಗೆ ೫೦ ವರ್ಷಗಳಲ್ಲಿ  ಈ ಸಾಧನೆ ಮಾಡಿದ್ದಾರೆ.
ಗೋಪಾಲ ಶೆಟ್ಟಿ-ಕ್ಷೇತ್ರ ಶಿಕ್ಷಣಾಧಿಕಾರಿ

ನಿವೃತ್ತಿಯ ಹಂತದಲ್ಲಿರುವ ನನ್ನ ಪಾಲಿಗೆ ಶಾಲೆಯ ಮಕ್ಕಳು ಉತ್ತಮ ಫಲಿತಾಂಶವನ್ನು ನೀಡಿ ಬಿಳ್ಕೋಟ್ಟಿದ್ದಾರೆ. ಸಹ ಶಿಕ್ಷಕರ ನಿರಂತರ ಕಾರ್ಯದಕ್ಷತೆ  ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ  ರಾಜ್ಯ ಮಟ್ಟದಲ್ಲಿ ಕುಂದಾಪುರ ವಲಯವನ್ನು ಗುರುತಿಸುವಂತೆ ಮಾಡಿದ್ದಾರೆ. ಸರಕಾರಿ ಶಾಲೆಯನ್ನು ನಿರ್ಲಕ್ಷಿಸುವ ಕಾಲಘಟ್ಟದಲ್ಲಿ ನಮ್ಮಲ್ಲಿಯೂ ಕೂಡ ಶಕ್ತಿಯಿದೆ ಎನ್ನುವುದನ್ನು ಮನದಟ್ಟು ಮಾಡಿದ್ದಾರೆ.
ಆರ್.ಎನ್.ಪರಶಿವ ಮೂರ್ತಿ- ಶಾಲಾ ಮುಖ್ಯೋಪಾಧ್ಯಾಯ





1 comment: