Friday, 29 June 2012

BALMATA COLLEGE STUDENTS

ಶತಕದ ಸಂಭ್ರಮದಲ್ಲಿ ಬಲ್ಮಠ ಮಹಿಳಾ ಕಾಲೇಜು
-ಸಂದೇಶ ಶೆಟ್ಟಿ ಆರ್ಡಿ
ಮಂಗಳೂರು: ಹೆಣ್ಣು ಮಗುವಿಗೆ ವಿದ್ಯೆ ನೀಡಿದರೆ ಶಾಲೆಯೊಂದು ತೆರೆದಂತೆ.  “ವಿದ್ಯಾದದಾತಿ ವಿನಯಂ" ವಿದ್ಯೆಯು ವ್ಯಕ್ತಿಗೆ ಶೋಭೆಯನ್ನು ತರುವುದರೊಂದಿಗೆ ಸಮಾಜದಲ್ಲಿ ಗೌರವ ದೊರಕಿಸಿ ಕೊಡುತ್ತವೆ. ಸಂಸ್ಥೆ ಖಾಸಗಿ ಅಥವಾ ಸರಕಾರಿಯಾಗಿರಲಿ ಪ್ರತಿಯೊಂದು ವಿದ್ಯಾಸಂಸ್ಥೆ  ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಮಾಡುವುದು ಸುಳ್ಳಲ್ಲ. ನಗರದ ಹೃದಯ ಭಾಗದಲ್ಲಿರುವ ಬಲ್ಮಠ ಮಹಿಳಾ ವಿದ್ಯಾಸಂಸ್ಥೆಯು ಅನೇಕ ಪುಷ್ಪವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ೧ರಿಂದ ಪದವಿಯವರೆಗೆ ಶಿಕ್ಷಣ ನೀಡುತ್ತಿರುವ ಈ ವಿದ್ಯಾದೇಗುಲಕ್ಕಿಗ ಶತಕದ ಸಂಭ್ರಮ...ಅಲ್ಲದೇ ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೧೦೦ಫಲಿತಾಂಶದ ಸಾಧನೆ ಮಾಡಿದೆ.
ವಿದ್ಯಾಸಂಸ್ಥೆಯ ಹಿನ್ನೆಲೆ:
೧೨೫ ವರ್ಷಕ್ಕಿಂತಲೂ ಹಳೆಯದಾದ ಬಲ್ಮಠ ಕಾಲೇಜು ಪ್ರಾರಂಭದಲ್ಲಿ ಗಣಪತಿ ಕಾಲೇಜಿನ ಆಸುಪಾಸಿನಲ್ಲಿರುವ ನಲಂದಾ ಕಾಲೇಜಿನಲ್ಲಿ ಪ್ರಾರಂಭಗೊಂಡು, ಲೇಡಿಸ್ ಕ್ಲಬ್‌ಗೆ ಸ್ಥಳಾಂತರಗೊಂಡು, ೧೯೧೨ರಲ್ಲಿ ಈಗಿರುವ ಕಟ್ಟಡಕ್ಕೆ ಬಂದಿದೆ. ಈ ಕಾಲೇಜು ಮದ್ರಾಸ್ ಪ್ರಾಂತ್ಯದ ವ್ಯಾಪ್ತಿಗೆ ಬರುವ ದಕ್ಷಿಣ ವಲಯದೊಳಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಗವರ್ನ್‌ಮೆಂಟ್ ಟ್ರೈನಿಂಗ್ ಸ್ಕೂಲ್ ಫಾರ್ ಮಿಸ್ಟ್ರೇಸ್ ಎನ್ನುವ ನಾಮಧೇಯದೊಂದಿಗೆ ೧೯೧೨ರಲ್ಲಿ ಪ್ರಾರಂಭಗೊಂಡಿತ್ತು. ಕೊಯಂಬತ್ತೂರಿನ ರಾಜಾಸ್ಟ್ರೀಟ್‌ನ ಹೈಯರ್ ಸೆಕಂಡರಿ ಸ್ಕೂಲ್ ಇದೇ ಮಾದರಿಯಲ್ಲಿರುವುದು ಸಾಕ್ಷಿಯಾಗಿದೆ. ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಕೊಯಂಬತ್ತೂರು ಇನ್‌ಸ್ಪೆಕ್ಟರ್‌ರ ವ್ಯಾಪ್ತಿಗೆ ಬಲ್ಮಠ ಸೇರಿದಂತೆ ಕಲ್ಲಿಕೋಟೆ, ಕಣ್ಣನ್ನೂರಿನಲ್ಲಿರುವ ವಿದ್ಯಾಸಂಸ್ಥೆಗಳು ಒಳಪಟ್ಟಿದ್ದವು.
ಮಹಿಳೆಯರ ಟೀಚರ್‍ಸ್ ಟ್ರೈನಿಂಗ್ ಸ್ಕೂಲ್‌ನಲ್ಲಿ ೧ರಿಂದ ೮ ರವರೆಗೆ ಪ್ರಾರಂಭಗೊಂಡು ೯,೧೦ ಮತ್ತು ಶಿಕ್ಷಕಿಯರ ತರಬೇತಿ ತರಗತಿಗಳು ಸೇರ್ಪಡೆಗೊಂಡವು. ಭೂಗೋಳ, ಪ್ರಕೃತಿ ಅಧ್ಯಯನ, ಇತಿಹಾಸ, ನೃತ್ಯ, ಚಿತ್ರಕಲೆ, ಸಂಗೀತ, ಕಸೂತಿಕಲೆ, ಕೆನಾರೀಸ್(ಕನ್ನಡ) ಭಾಷೆ, ಕಾವ್ಯ, ಆಂಗ್ಲ ಭಾಷೆ, ಕೈತೋಟ ಇತ್ಯಾದಿ ವಿಷಯಗಳನ್ನು ಕ್ರಮಬದ್ದವಾಗಿ ಕಲಿಸಲಾಗುತ್ತಿತ್ತು.
ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ವಿದ್ಯಾರ್ಥಿ ವೇತನ ಸಂದಾಯವಾಗುತ್ತಿತ್ತು. ೨ನೇ ಮಹಾಯುದ್ದದ ಸಂದರ್ಭದಲ್ಲಿ ಸಂಸ್ಥೆಯು ಧನ ಸಂಗ್ರಹ ಮಾಡಿ ರಾಜ್ಯಪಾಲರ ನಿಧಿಗೆ ಒದಗಿಸಿದ್ದು, ಗಣ್ಯವ್ಯಕ್ತಿಗಳಿಂದ ಮಹಾಯುದ್ದದ ಕುರಿತು ಅತಿಥಿ ಉಪನ್ಯಾಸ ವ್ಯವಸ್ಥೆಗೊಳಿಸಿ, ಯುದ್ದದ ವರದಿ ಬೆಳವಣಿಗೆಯನ್ನು ಶಾಲಾ ಅಸೆಂಬ್ಲಿಯಲ್ಲಿ ಚರ್ಚಿಸುತ್ತಿದ್ದರು. ಆಗಿನ ಬ್ಯಾರಿಸ್ಟರ್ ಅಡ್ವೋಕೇಟ್ ಎ.ಕೆ. ನಂಬಿಯಾರ್ ಉಪನ್ಯಾಸ ನೀಡಿರುವುದಕ್ಕೆ ದಾಖಲೆಯಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ದ.ಕ.ಜಿಲ್ಲೆಯಲ್ಲಿ ಕುಂದಾಪುರ, ಕಾಸರಗೋಡು, ಮಂಗಳೂರು, ಉಡುಪಿ, ಉಪ್ಪಿನಂಗಡಿ ಎನ್ನುವ ೫ ತಾಲೂಕುಗಳು ಸೇರಿ, ಮಂಗಳೂರು ಜಿಲ್ಲಾ ಕೇಂದ್ರವಾಗಿದ್ದು, ಏಕೈಕ ಮಹಿಳಾ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿತ್ತು. ೧೯೭೨ರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಾರಂಭಗೊಂಡು ೨೦೦೪ರವರೆಗೆ ೧೪ ಪ್ರಾಚಾರ್ಯರು ಕಾಲೇಜಿನ ಏಳ್ಗೆಗಾಗಿ ಶ್ರಮಿಸಿದ್ದರು. ಶ್ಯಾಮ್ ಭಟ್ ಪ್ರಾಚಾರ್ಯರಾದ ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆತು, ಶಾಸಕರ ನೆರವಿನಿಂದ ಕಾಲೇಜು ಪ್ರತಿಷ್ಠಿತ ವಿದ್ಯಾಕೇಂದ್ರವಾಗಿ ರೂಪುಗೊಂಡಿದೆ. ಕಮಲಾಕರ ಹಾಲಂಬಿಯವರ ಅವಧಿಯಲ್ಲಿ ಪಿಯುಸಿ ವಿಜ್ಞಾನ ವಿಭಾಗ , ಸಮಾಜಶಾಸ್ತ್ರ, ವಾಣಿಜ್ಯ ವಿಭಾಗ ಪ್ರಾರಂಭಗೊಂಡವು. ಕಳೆದ ೭ ವರ್ಷಗಳಿಂದ ವಿಜ್ಞಾನ ಪಿ.ಯು.ಸಿ.ವಿಭಾಗಕ್ಕೆ ಕಂಪ್ಯೂಟರ್ ವಿಜ್ಞಾನ, ಜೀವಶಾಸ್ತ್ರದ ಬದಲಿಗೆ ಆಯ್ಕೆ ವಿಷಯವಾಗಿ ವಿದ್ಯಾರ್ಥಿಗಳಿಗೆ ಲಭ್ಯವಿದೆ. ೧೯೮೭ ರಿಂದ ಕಾಲೇಜಿನಲ್ಲಿ ವೃತ್ತಿ ಶಿಕ್ಷಣ ವಿಭಾಗ (ಜೆ.ಒ.ಸಿ)ದಲ್ಲಿ ಹೊಲಿಗೆ ಮತ್ತು ವಸ್ತ್ರವಿನ್ಯಾಸ ಪಿಯುಸಿ ಸರಿಸಮಾನ ಡಿಪ್ಲೋಮಾ ತರಗತಿ ಪ್ರಾರಂಭಗೊಂಡಿತ್ತು. (ಈಗ ಸರಕಾರದ ನೀತಿಯಂತೆ ರದ್ದಾಗಿದೆ). ೨೦೦೪ ಜೂ. ವಾಣಿಜ್ಯ ವಿಭಾಗದಲ್ಲಿ ಇತಿಹಾಸದ ಬದಲಿಗೆ ಕಂಪ್ಯೂಟರ್ ವಿಜ್ಞಾನ ಐಚ್ಚಿಕ ವಿಷಯವಾಗಿ ಅಭ್ಯಾಸ ಮಾಡುವ ಅವಕಾಶ ಒದಗಿದೆ.
ಸಂಸ್ಥೆಯಲ್ಲಿರುವ ಸೌಲಭ್ಯ:
ಕಾಲೇಜಿನಲ್ಲಿ ಸರಸ್ವತಿ ಬುಕ್‌ಬ್ಯಾಂಕ್‌ನ್ನು ತೆರವುಗೊಳಿಸಲಾಗಿದ್ದು ದಾನಿಗಳ ನೆರವಿನಿಂದ ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ  ಪ್ರಥಮ ಆದ್ಯತೆಯೊಂದಿಗೆ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರಥಮ ಪಿಯುಸಿ ವಿಜ್ಞಾನ (ಪಿಸಿಎಂಬಿ) ವಿಭಾಗದ ವಿದ್ಯಾರ್ಥಿನೀಯರ ಅರ್ಹತೆಯನ್ನು ಗಮನಿಸಿ ರೂ.೯೦೮ ಮೌಲ್ಯದ ಪಠ್ಯಪುಸ್ತಕವನ್ನು ದಾನಿಗಳ ನೆರವಿನಿಂದ ನೀಡಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆ, ವ್ಯಕ್ತಿತ್ವ ವಿಕಸನದಂತಹ ಪುಸ್ತಕವನ್ನು ನೀಡಲಾಗುವುದು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯನ್ನು ನೀಡಲಾಗಿದೆ. ಯಾವುದೇ ಟ್ಯೂಷನ್‌ಗೆ ಹೋಗದೇ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿದ್ದಾರೆ. ವಿದ್ಯಾರ್ಥಿ, ಉಪನ್ಯಾಸಕರಿಗೂ ಹಾಗೂ ಶೈಕ್ಷಣಿಕ ಪಾವಿತ್ರತೆ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಪವಿತ್ರ ನದಿಗಳ ಹೆಸರುಗಳನ್ನು ಪ್ರತಿಯೊಂದು ಕೊಠಡಿಗೆ ಇರಿಸಲಾಗಿದೆ. ೧ ರಿಂದ ೧೦ನೇ ತರಗತಿ, ಪಿಯುಸಿಯಲ್ಲಿ ಕಲಾ, ವಾಣಿಜ್ಯ(ಕಂಪ್ಯೂಟರ್ ಸೈನ್ಸ್) , ವಿಜ್ಞಾನ(m..ಞ.ಚಿ-), ಡಿಗ್ರಿಯಲ್ಲಿ ಬಿ.ಎ, ಬಿ.ಕಾಮ್, ಬಿ.ಬಿ.ಎಂ, ಬಿ.ಸಿ.ಎ, ಎ.ಎಸ್ಸಿ  ವಿಷಯವನ್ನು ಭೋದಿಸಲಾಗುತ್ತಿದೆ. ಸರಕಾರಿ ನಿಯಮದಂತೆ ಸಾಮಾನ್ಯ ಅರ್ಹತೆ ಶೇ.೫೦ ಹಾಗೂ ಮಿಸಲಾತಿ ಶೇ.೫೦ ಆಧರಿಸಿ ಸೀಟುಗಳ ಹಂಚಿಕೆ ಮಾಡಲಾಗುತ್ತಿದೆ. ೨೦೦೯ರಲ್ಲಿ ಸರಕಾರದಿಂದ ಪ್ರಾರಂಭವಾದ ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮ ಈ ವಿದ್ಯಾಸಂಸ್ಥೆಯಲ್ಲಿ ೨೦೦೩ರಲ್ಲಿಯೇ ಪ್ರಾರಂಭಗೊಂಡು ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ನ ಬಗ್ಗೆ ಮೂಲಅಂಶವನ್ನು ತಿಳಿಸಿಕೊಡುವ ಶಿಕ್ಷಣ ನಡೆಯುತ್ತಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಉದಾರ ದಾನಿಗಳ ನೆರವು, ಶಾಲಾಭಿವೃದ್ಧಿ ಸಂಸ್ಥೆಯ ನೆರವು ಪಡೆದು ಎಲ್ಲಾ ತರಗತಿಗೆ ಉಪನ್ಯಾಸಕರ ನೇಮಕ ಮಾಡಲಾಗಿದೆ. ಕರ್ಣಾಟಕ ಬ್ಯಾಂಕ್, ಕಾರ್ಪೋರೇಶನ್, ಇನ್‌ಪೋಸಿಸ್, ಕಂಪ್ಯೂಟರ್ ಕಲಿಯುತ್ತಿರುವ ವಿದ್ಯಾರ್ಥಿಗಳ ಪೋಷಕರ ನೆರವಿನಿಂದ ಕಂಪ್ಯೂಟರ್ ಲ್ಯಾಬ್ ನಿರ್ಮಾಣ ಮಾಡಲಾಗಿದೆ.
ಸಂಪನ್ನೆಯ ಪ್ರಧಾನ ಸಂಪಾದಕ  ಕೆ.ವಾಸುದೇವ ಕಾಮತ್:
೧೮ ವರ್ಷಗಳ ಸಮಾಜಶಾಸ್ತ್ರ ಉಪನ್ಯಾಸ ವೃತ್ತಿಯಲ್ಲಿ ೧೫ ವರ್ಷ ಶೇ.೧೦೦ ಫಲಿತಾಂಶ ದಾಖಲಿಸಲು ಕಾರಣಿಕರ್ತರಾಗಿ ಪ್ರಸ್ತುತ ಈ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜಿನ ವಾರ್ಷಿಕ ಸಂಚಿಕೆ ಸಂಪನ್ನೆಯ ಪ್ರಧಾನ ಸಂಪಾದಕರಾಗಿ ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ನಿರ್ಮಾಣ ಮಾಡಿರುವುದಲ್ಲದೇ ಪ್ರತಿಯೊಂದು ತರಗತಿಯಲ್ಲಿಯೂ ಪ್ರತ್ಯೇಕ ಸಂಚಿಕೆಯನ್ನು ತರುವಲ್ಲಿ ಕಾರಣೀಭೂತರಾಗಿದ್ದಾರೆ. ದಾನಿಗಳ ನೆರವಿನಿಂದ ೩೦ ಕಂಪ್ಯೂಟರ್‌ನ್ನು ಸಂಸ್ಥೆಗೆ ಒದಗಿಸುವಲ್ಲಿ ಶ್ರಮಿಸಿದ್ದಾರೆ.  ಮಳೆನೀರಿನ ಕೊಯ್ಲು, ಪರಿಸರ ಹಸಿರೀಕರಣ, ಐಚ್ಚಿಕ ಕನ್ನಡ, ಬಿತ್ತಿಪತ್ರ, ಗೋಡೆ ಬರಹ, ೧೯೯೪ರಿಂದ ಯಕ್ಷಗಾನ ತರಬೇತಿ ಒದಗಿಸುವಲ್ಲಿ ಶ್ರಮಿಸಿದ್ದಾರೆ. ಶತಮಾನೋತ್ಸವ ಸಂದರ್ಭದಲ್ಲಿ ದೇವಸ್ಯ ಮಾಸ್ಟರ್ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಪ್ರಾರಂಭಿಸುವ ಮಹತ್ತರ ಗುರಿಯನ್ನು ಇರಿಸಿಕೊಂಡಿದ್ದಾರೆ. ರ್‍ಯಾಂಕ್ ತೆಗೆಯುತ್ತೇನೆಂಬ ನಂಬಿಕೆಯಿದ್ದರೂ ಹಣಕಾಸಿನ ತೊಂದರೆಯಿಂದ ಪ್ರತಿಷ್ಠಿತ ಸಂಸ್ಥೆಗೆ ಸೇರಲು ಆಗಲಿಲ್ಲ ಎಂದು ನಿರಾಸೆ ತಾಳುವ ವಿದ್ಯಾರ್ಥಿನೀಯರಿಗೆ ಎಲ್ಲಾ ರೀತಿಯ ನೆರವು ಬಲ್ಮಠ ಮಹಿಳಾ ಸಂಸ್ಥೆ ನೀಡುತ್ತದೆ. ವಿದ್ಯಾರ್ಥಿಗಳ ಮಟ್ಟವನ್ನು ಗಮನಿಸಿ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಫಲಿತಾಂಶ ದಾಖಲಿಸುವಲ್ಲಿ ಶಿಕ್ಷಕ ವರ್ಗ ಸಹಕಾರಿಯಾಗಿದ್ದಾರೆ. 
ವಿದ್ಯಾಸಂಸ್ಥೆಗೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯ:
ಸಂಸ್ಥೆಯಲ್ಲಿ ಬಿಎ, ಬಿಕಾಮ್, ಬಿಬಿಎಂ, ಬಿಸಿಎ, ಈ ವರ್ಷದಿಂದ ಪ್ರಾರಂಭವಾದ ಬಿ.ಎಸ್ಸಿ (ಭೌತಶಾಸ್ತ್ರ, ಲೆಕ್ಕಶಾಸ್ತ್ರ, ಕಂಪ್ಯೂಟರ್ ಸೈನ್ಸ್) ಇರುವುದರಿಂದ ಕೊಠಡಿಯ ಕೊರತೆ ಕಂಡುಬರುತ್ತಿದೆ. ಈ ಬಾರಿ ೮ ನೇ ತರಗತಿಗೆ ೩೫, ೯(೧೨೦), ೧೦ ನೇ(೭೮), ಪ್ರಥಮ ಪಿಯುಸಿಗೆ ೩೬೬ ವಿದ್ಯಾರ್ಥಿನೀಯರು ಸೇರ್ಪಡೆಗೊಂಡಿದ್ದಾರೆ. ೧ರಿಂದ ೧೦ನೇ ತರಗತಿಯಲ್ಲಿ ೪೦೦ವಿದ್ಯಾರ್ಥಿಗಳು, ಪಿಯುಸಿಯಲ್ಲಿ ೭೦೦, ಡಿಗ್ರಿಯಲ್ಲಿ ೮೬೦, ಡಿ.ಎಡ್‌ನಲ್ಲಿ ೧೦೦ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿರುವುದು ವಿಶೇಷವಾಗಿದೆ. ಪಿಯುಸಿ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್, ಹಿಂದಿ, ಕಾಮರ್ಸ್ ವಿಷಯದಲ್ಲಿ ಉಪನ್ಯಾಸಕರು ಹಾಗೂ ಶಿಕ್ಷಕೇತರ ವಿಭಾಗದಲ್ಲಿ ಸಿಬ್ಬಂದಿಯ ಕೊರತೆಯಿದೆ. ಐದಾರು ವರ್ಷಗಳಿಂದ ಸುಣ್ಣ-ಬಣ್ಣ ಕಾಣದ ಸಂಸ್ಥೆಗೆ ಲೋಕೋಪಯೋಗಿ ಇಲಾಖೆಗೆ ಮನವಿ ನೀಡಿದ್ದರೂ ಕಾರ್ಯ ವಿಳಂಭವಾಗುತ್ತಿದೆ.
 ಸರಕಾರದ ನೀತಿಯಂತೆ ಟೈಲರಿಂಗ್ ಮಷಿನ್‌ಗಳು ಯಾವುದೇ ಕಾರ್ಯನಿರ್ವಹಿಸದೇ ಹಾಳು ಬಿದ್ದಿದೆ. ಸರಕಾರದ ಅನುಮತಿ ದೊರಕಿದರೆ ಬಡವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೃತ್ತಿ ಕೌಶಲ್ಯವನ್ನು ಕಲಿಸಲಾಗುವ ಹಂಬಲದಲ್ಲಿದ್ದಾರೆ. ಬಲ್ಮಠ ಸಂಸ್ಥೆಯಲ್ಲಿ ಕಲಿತು ದೇಶ ವಿದೇಶದಲ್ಲಿ ಉನ್ನತ ಸ್ಥರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನೂರರ ಸಂಭ್ರಮದಲ್ಲಿರುವ ಬಲ್ಮಠ ಮಹಿಳಾ ವಿದ್ಯಾಸಂಸ್ಥೆಯನ್ನು ಮಾದರಿ ಸಂಸ್ಥೆಯನ್ನಾಗಿ ಬೆಳೆಸುವ ಇಚ್ಚೆಯಿದೆ. ಹಾಗೂ ನೂತನ ಕಟ್ಟಡದ ವ್ಯವಸ್ಥೆ ಮಾಡುವ ಗುರಿಯಿದೆ. ವಿದ್ಯಾರ್ಥಿಯ ಬೌಧ್ದಿಕ ಬೆಳವಣಿಗೆಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಲಾಗಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ೨ ಬಾರಿ ಶೇ.೧೦೦ ಫಲಿತಾಂಶ ಹಾಗೂ ಪಿಯುಸಿಯಲ್ಲಿ ಶೇ.೯೪ ಫಲಿತಾಂಶ ದಾಖಲಿಸಿದ ಸಂತೃಪ್ತಿಯಿದೆ.
ಎನ್.ಯೋಗೀಶ್ ಭಟ್- ಕರ್ನಾಟಕ ವಿಧಾನ ಸಭಾ ಉಪಾಧ್ಯಕ್ಷ

ಬಡತನದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅರ್ಹತೆ ಆಧಾರದಲ್ಲಿ ಸಾಮಾಜಿಕ ಸೇವಾ ಮನೋಭಾವನೆಯಿಂದ ಉಚಿತ ಶಿಕ್ಷಣ ನೀಡಲು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದೆ ಬರಬೇಕಾಗಿದೆ. ಸಂಸ್ಥೆಯ ಮುಂಬಾಗದಲ್ಲಿರುವ ಬಸ್‌ನಿಲ್ದಾಣದಿಂದ ವಿದ್ಯಾರ್ಥಿಗಳ ಏಕಾಗ್ರತೆಗೆ ತೊಂದರೆಯುಂಟಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕಾಗಿದೆ. ಇಲ್ಲಿಯವರೆಗೆ ನೆರವು ನೀಡಿದ ಸಂಸ್ಥೆಗಳಿಗೆ ಋಣಿಯಾಗಿದ್ದೇವೆ.
ಕೆ.ವಾಸುದೇವ ಕಾಮತ್-ಪ್ರಾಂಶುಪಾಲರು ಮಹಿಳಾ ಕಾಲೇಜು ಬಲ್ಮಠ.

ಮಹಿಳೆಯರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳು ಈ ಶಿಕ್ಷಣ ಸಂಸ್ಥೆಯಲ್ಲಿದೆ. ೮ ನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗೆ ಓದಿದ್ದೇನೆ. ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಮಂಗಳೂರು ನಗರದಲ್ಲಿ ಬೆಳೆದು ನಿಂತಿದೆ.  ನಿರ್ಮಲಾ- ಕೆಎಸ್‌ಆರ್‌ಟಿಸಿ (ಬಿಎಂಟಿಸಿ)ಟ್ರಾಫಿಕ್ ಸಬ್‌ಇನ್‌ಸ್ಪೆಕ್ಟರ್ ಬೆಂಗಳೂರು.

ಆರ್ಥಿಕವಾಗಿ ಸದೃಢರಾಗಿಲ್ಲದ ನನ್ನ ಶಿಕ್ಷಣ ವ್ಯವಸ್ಥೆಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ಬಳಗ ಪ್ರೋತ್ಸಾಹ ನೀಡಿದ್ದಾರೆ. ಪಠ್ಯಪುಸ್ತಕದ ಖರೀದಿ ಹಾಗೂ ಇಂಜಿನಿಯರಿಂಗ್ ಶಿಕ್ಷಣ ವ್ಯವಸ್ಥೆಗೆ ದಾನಿಗಳ ನೆರವನ್ನು ಒದಗಿಸಿಕೊಟ್ಟಿದ್ದಾರೆ.
ವಿಖಿತಾ ಶೆಟ್ಟಿ- ದ್ವಿತೀಯ ರ್‍ಯಾಂಕ್( ೨೦೧೧-೧೨ ವಿಜ್ಞಾನ ವಿಭಾಗ)
ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿಶೇಷ ಸೌಲಭ್ಯವನ್ನು ಒದಗಿಸಿ, ಸಿಇಟಿ ಪರೀಕ್ಷೆಯನ್ನು ಬರೆಯುವುದರೊಂದಿಗೆ ಇತರ ಕಾಲೇಜಿನ ಮಕ್ಕಳಿಗೆ ಸರಿಸಮಾನರಾಗಿ ಬೆಳೆಯಲು ಅವಕಾಶ ಮಾಡಿದೆ. ಪ್ರಾಂಶುಪಾಲರಾದ ಶ್ಯಾಮ ಭಟ್, ವಾಸುದೇವ ಕಾಮತ್ ಮಕ್ಕಳ ಕುರಿತು ಕಾಳಜಿ ವಹಿಸಿದ್ದಾರೆ. ವಾಸುದೇವ ಕಾಮತ್ ಬಡವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ತುಂಬಿ ಶಿಕ್ಷಣಕ್ಕೆ ಅವಕಾಶ ನೀಡಿದ್ದಾರೆ.
ಶುಭಗೌರಿ-ಹಳೆ ವಿದ್ಯಾರ್ಥಿನಿ







Friday, 22 June 2012




ಮಂಗಳೂರಿನಲ್ಲಿ  ಸರಕಾರಿ ಬಸ್ ಸಂಚಾರ ಸಾಧ್ಯವೇ?
*ಸಂದೇಶ ಶೆಟ್ಟಿ ಆರ್ಡಿ
ಮಂಗಳೂರು: ದಿನದಿಂದ ದಿನಕ್ಕೆ  ನಗರದ ಅಭಿವೃದ್ಧಿಯೊಂದಿಗೆ ಜನಸಂಖ್ಯೆಯು ವಿಪರೀತವಾಗುತ್ತಿದೆ. ನಗರದಲ್ಲಿ ಸಾವಿರಾರು ವಾಹನಗಳು  ಹೆಚ್ಚಾಗುತ್ತಿದ್ದು, ಬಸ್ಸುಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಜನಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಂತಹ ಸೂಕ್ಷ್ಮ ಸಂಗತಿ ಗಮನಿಸಿದ ಸರಕಾರ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯು ನಗರದಲ್ಲಿ ಸರಕಾರಿ ಬಸ್ಸುಗಳ ಸಂಚಾರಕ್ಕೆ ತೀರ್ಮಾನಿಸಿದ್ದರೂ ಹಲವಾರು ಅನಾನುಕೂಲತೆಯಿಂದ ವಿಳಂಬವಾಗುತ್ತಿದೆ. ಬೆಂಗಳೂರು ನಗರದಂತೆ ಮಂಗಳೂರಿನಲ್ಲಿ ಸರಕಾರಿ ಬಸ್ಸುಗಳ ಸಂಚಾರ ಆರಂಭಗೊಂಡರೆ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಜನತೆಯ ಪಾಲಿಗೆ ವರವಾಗಿ ಪರಿಣಮಿಸುತ್ತದೆ.
ಪ್ರಾದೇಶಿಕ ಸಾರಿಗೆ ಅಕಾರಿ ಶೀಘ್ರದಲ್ಲಿಯೇ ಸರಕಾರಿ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದ್ದರೂ ರೀಜ್‌ನಲ್ ಟ್ರಾನ್ಸ್‌ಫೋರ್ಟ್ ಅಥಾರಿಟಿ(ಆರ್‌ಟಿಎ) ಮೀಟಿಂಗ್‌ನಲ್ಲಿ ಒಪ್ಪಿಗೆಯಾದರೆ ನಗರದಲ್ಲಿ ಸರಕಾರಿ ಬಸ್‌ಗಳು ಓಡಾಡಲಿವೆ.ಆರ್‌ಟಿಎ ಮೀಟಿಂಗ್‌ನಲ್ಲಿ ಜಿಲ್ಲಾಕಾರಿ ಕಾರ್ಯಾಧ್ಯಕ್ಷರಾಗಿರುತ್ತಾರೆ. ಸೂಪರಿಂಟೆಂಡೆಂಟ್ ಆಫ್ ಪೊಲೀಸ್, ಆರ್‌ಟಿಒ ಸೇರಿದಂತೆ ಇತರ ಅಕಾರಿಗಳು ಈ ಆರ್‌ಟಿಎ ಕಮಿಟಿಯಲ್ಲಿ ಇರುತ್ತಾರೆ.
ಮ್ಯಾಜಿಸ್ಟ್ರೇಟ್ ನೋಟಿಫಿಕೇಶನ್ ಬರಲು ಕಾರಣವಾದ ಅಂಶ?
೧೯೯೧ಜನವರಿ ೫ ರಂದು ಆಗಿನ ದಂಡಾಕಾರಿಯಾದ ಕೆ.ಪಿ.ಕೃಷ್ಣನ್ ಅವರು ಸಿಟಿ ಬಸ್‌ನ್ನು ಮ್ಯಾಜಿಸ್ಟ್ರೀ ನೋಟಿಫಿಕೇಶನ್ ಅಡಿಯಲ್ಲಿ ತಂದ ನಂತರದಲ್ಲಿ  ನಗರದಲ್ಲಿ ಸಿಟಿ ಬಸ್ ಸಂಚಾರಕ್ಕೆ ಅನುಮತಿ ನಿಲ್ಲಿಸಲಾಗಿದೆ. ೧೯೯೩ ಎಪ್ರಿಲ್ ೬ ರಂದು ಜಿಲ್ಲಾಕಾರಿಯಾದ ವಿ. ಮಧು ಅವರು ಸರ್ವಿಸ್ ಬಸ್‌ಗಳಿಗೆ ರೂಟ್ ಪರ್ಮೀಟ್ ಕೊಡುವುದನ್ನು ನಿಲ್ಲಿಸಿದ್ದರು. ೧೯೯೨ ಸಪ್ಟ್ಟೆಂಬರ್ ೧೩ ರಂದು ಟ್ರಾಫಿಕ್ ಪೊಲೀಸ್‌ನವರಿಂದ  ನಗರದ ಹಳೆ ಬಸ್‌ನಿಲ್ದಾಣ ಹಂಪನಕಟ್ಟೆ ವೃತ್ತದಲ್ಲಿ ಸರ್ವೇಯನ್ನು ನಡೆಸಿ ವರದಿಯನ್ನು ತಯಾರಿಸುತ್ತಾರೆ. ವೃತ್ತದಲ್ಲಿ ಪ್ರತಿ ಒಂದು ನಿಮಿಷಕ್ಕೆ ೧೫೬ ವಾಹನಗಳು ಬೆಳಿಗ್ಗೆ ೯ರಿಂದ ೧೦ ಗಂಟೆಯ ಅವಯಲ್ಲಿ ಸಂಚರಿಸುತ್ತದೆ. ನಿಮಿಷಕ್ಕೆ ೧೪೭ ವಾಹನಗಳು ೧೦ ರಿಂದ ೧೧ಗಂಟೆಯ ಅವಯಲ್ಲಿಯೂ ಹಾಗೂ ನಿಮಿಷಕ್ಕೆ ೧೪೧ ವಾಹನಗಳು  ೧೧ರಿಂದ ೧೨ರ ಅವಯಲ್ಲಿ ಸಂಚರಿಸುತ್ತಿದ್ದವು. ಆ ವಾಹನಗಳಲ್ಲಿ ಪ್ರತಿ ನಿಮಿಷಕ್ಕೆ ೧೩ ಬಸ್‌ಗಳು ಸಂಚರಿಸುತ್ತವೆ ಎಂದು ವರದಿ ಹೇಳಿದೆ. ಆರ್‌ಟಿಎ ಕಾರ್ಯದರ್ಶಿ ೧೯೯೩ ಮಾರ್ಚ್ ೨೬ರಂದು ಮತ್ತೊಂದು ವರದಿಯನ್ನು ತಯಾರಿಸಿದ್ದು ಅದರಲ್ಲಿ ೧೫೦೬ ಬಸ್‌ಟ್ರಿಪ್‌ಗಳಿದ್ದು, ೩೭೪ ಪರ್ಮಿಟ್‌ಗಳು ಹಂಪನಕಟ್ಟೆಯನ್ನು ತಲುಪುತ್ತಿದೆ. ಇದರಲ್ಲಿ  ೨೦೬ ಸಿಟಿ ಬಸ್ ಸೇವೆಗಳಿದ್ದು, ೨೦೦೨ ಟ್ರಿಪ್‌ಗಳು ಪ್ರತಿದಿನ ಹಂಪನಕಟ್ಟೆಯಲ್ಲಿ ವರದಿಯಾಗಿದೆ ಎನ್ನಲಾಗಿದೆ. ನಗರದಲ್ಲಿ ವಾಹನ ಸಂಖ್ಯೆ ಹೆಚ್ಚಾಗಿದ್ದರಿಂದ ವೆನ್ಲಾಕ್ ಆಸ್ಪತ್ರೆ ವೃತ್ತದ ಸಮೀಪದಲ್ಲಿರುವುದರಿಂದ ಜನಸಂಚಾರಕ್ಕೆ ತೊಂದರೆಯುಂಟಾಗುತ್ತದೆ ಎಂದು ತೀರ್ಮಾನಿಸಿ  ಜಿಲ್ಲಾಕಾರಿ ವಿ. ಮಧು ರೂಟ್ ಪರ್ಮೀಟ್ ಕೊಡುವುದನ್ನು ನಿಲ್ಲಿಸಲಾಗಿದೆ ಎನ್ನುವ ಆದೇಶವನ್ನು ಹೊರಡಿಸುತ್ತಾರೆ. ೧೯೯೩ ರಿಂದ ನಗರದಲ್ಲಿ ಯಾವುದೇ ಬಸ್ ಸಂಚಾರಕ್ಕೆ ಅನುಮತಿಯನ್ನು ನೀಡಲಾಗುತ್ತಿಲ್ಲ.
ಮ್ಯಾಜಿಸ್ಟ್ರೇಟ್ ನೋಟಿಫಿಕೇಶನ್ ಏನು ಹೇಳುತ್ತೆ?
ನಗರ ಪ್ರದೇಶದಲ್ಲಿ ಅನುಮತಿ ನೀಡುವುದನ್ನು ನಿಲ್ಲಿಸಲಾಗಿದ್ದರೂ, ನಗರ ಹೊರಭಾಗದಲ್ಲಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದ್ದರೂ ಮ್ಯಾಜಿಸ್ಟ್ರೇಟ್ ನೋಟಿಫಿಕೇಶನ್ ನಿಯಮದಂತೆ ಮರವೂರು, ಬೊಂದೇಲ್ ನಗರ ಸಾರಿಗೆ ಬಸ್‌ಗಳು ಕೆ.ಪಿ.ಟಿ ವೃತ್ತದಲ್ಲಿ ನಿಲುಗಡೆಯಾಗಬೇಕು. ಗುರುಪುರ, ಕುಲಶೇಖರದಿಂದ ಬರುವ ಬಸ್‌ಗಳು ಮಲ್ಲಿಕಟ್ಟೆಯಲ್ಲಿ ನಿಲುಗಡೆ, ತಲಪಾಡಿ, ಉಳ್ಳಾಲ, ಕೊಣಾಜೆ, ತೊಕ್ಕೊಟ್ಟು, ಪಡೀಲ್ ಮತ್ತು ನಾಗೂರಿ, ಕಂಕನಾಡಿಯಿಂದ ಬರುವ ಬಸ್‌ಗಳು ಕಂಕನಾಡಿಯಲ್ಲಿಯೂ, ಸುರತ್ಕಲ್, ಕೂಳೂರು, ಕೊಟ್ಟಾರ, ಉರ್ವಸ್ಟೋರ್, ಉರ್ವಮಾರ್ಕೇಟ್‌ನಿಂದ ಬಸ್‌ಗಳು ಲೇಡಿಹಿಲ್ ಸರ್ಕಲ್‌ನಲ್ಲಿ ನಿಲುಗಡೆಯಾಗಬೇಕು ಎಂದು ವರದಿಯಲ್ಲಿತ್ತು. ವಾಹನ ದಟ್ಟಣೆ ವಿಪರೀತವಾಗಿದ್ದು, ಶಬ್ದಮಾಲಿನ್ಯ ನಿವಾರಿಸುವ ದೃಷ್ಟಿಯಿಂದ ಆಗಿನ ಜಿಲ್ಲಾಕಾರಿ ಈ ಕಾರ್ಯವನ್ನು ಕೈಗೊಂಡು ನಗರದ ಒಳಗೆ ಬಸ್ ಸಂಚಾರದ ಅನುಮತಿಯನ್ನು ನಿರ್ಬಂಸಿದ್ದರು.
ನಗರದಲ್ಲಿ ಕೆಎಸ್‌ಆರ್‌ಟಿಸಿ
ಮ್ಯಾಜಿಸ್ಟ್ರೇಟ್  ನೋಟಿಫಿಕೇಶನ್, ವಾಹನಗಳ ದಟ್ಟಣೆಯಿಂದ ಹೊಸ  ಬಸ್ ಸಂಚಾರಕ್ಕೆ ಅನುಮತಿ ನೀಡುವುದು ಕಷ್ಟವೆನ್ನುವ ಒಂದು ಅಂಶ ಮೇಲ್ನೋಟಕ್ಕೆ ಕಾಣ ಸಿಕ್ಕಿದರೂ, ಜಿಲ್ಲಾಕಾರಿ ಶುಭೋಧಯ್ ಯಾದವ್ ಹಾಗೂ ಎಸ್‌ಪಿಯಾಗಿದ್ದ ಸುಬ್ರಹ್ಮಣ್ಯೇಶ್ವರ ರಾವ್ ಬಸ್‌ನಿಲ್ದಾಣ ಬದಲಾವಣೆ ವರದಿಯಂತೆ ತೊಕ್ಕೊಟ್ಟು - ಪಂಪ್‌ವೆಲ್‌ನ ರಸ್ತೆ ಅಗಲೀಕರಣವಾಗಿ ಪಂಪ್‌ವೆಲ್‌ನಲ್ಲಿ ಬಸ್ ನಿಲ್ದಾಣವಾದರೆ ಸರಕಾರಿ ಬಸ್‌ಗಳು ಸಂಚರಿಸುತ್ತವೆ. ನಗರದ ಹೊರಭಾಗದಲ್ಲಿ ಬಸ್ ಸಂಚಾರಕ್ಕೆ ರಸ್ತೆ ಪರವಾನಿಗೆ ನೀಡುತ್ತಿರುವುದರಿಂದ ಇದು ಸಾಧ್ಯವಿದೆ.
ಕೆಎಸ್ಸಾರ್ಟಿಸಿ ಬಸ್ಸುಗಳು ಆರಂಭಗೊಂಡದ್ದೇ ಆದರೆ ಸರಕಾರಿ ಮತ್ತು ಖಾಸಗಿ ಬಸ್ಸು ಸೇವೆಗಳ ನಡುವೆ ಆರೋಗ್ಯಕರ ಸ್ಪರ್ಧೆ ಉಂಟಾಗಿ ಜನರಿಗೆ ಉತ್ತಮ ಸೇವೆ ಲಭಿಸುವಂತಾದರೆ ಅದು ಜನರಿಗೆ ವರದಾನವಾಗಲಿದೆ.
ಈಗಾಗಲೇ ಕೆ.ಎಸ್.ಆರ್.ಟಿ.ಸಿ ವತಿಯಿಂದ ೪೧ ಅರ್ಜಿಗಳು ಇದ್ದು ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಕಾರಿ, ಎಸ್‌ಪಿ ಇತರ ಅಕಾರಿಗಳು ಸೇರುವ ಆರ್‌ಟಿಎ ಮೀಟಿಂಗ್‌ನಲ್ಲಿ ಅನುಮತಿ ದೊರಕಿದರೆ ನಗರದಲ್ಲಿ ಸರಕಾರಿ ಬಸ್‌ಗಳು ಸಂಚರಿಸುತ್ತವೆ.  ಜಿಲ್ಲಾಕಾರಿ ಯಾವ ಕಾರ್ಯ ಕೈಗೊಳ್ಳುತ್ತಾರೆ ಎನ್ನುವುದನ್ನು ಅವಲಂಬಿಸಿ ಸರಕಾರಿ ನಗರ ಸಾರಿಗೆ ಬಸ್‌ಗಳ ಸೇವೆ ನಿರ್ಧಾರವಾಗಲಿದೆ.
ಸಿ.ಮಲ್ಲಿಕಾರ್ಜುನ್- ಆರ್‌ಟಿಒ ಮಂಗಳೂರು.

ರಾಜ್ಯ ಸಾರಿಗೆ ಸಚಿವರು ಮಂಗಳೂರು ನಗರದಲ್ಲಿ ಸಾರಿಗೆ ಬಸ್‌ಗಳನ್ನು ಹಾಕುವ ಕುರಿತು ಆಲೋಚಿಸುತ್ತಿದ್ದಾರೆ. ನಗರ ಪ್ರದೇಶದಲ್ಲಿ ಸರಕಾರಿ ಬಸ್‌ಸೇವೆ ಆರಂಭವಾದರೆ ಸರಕಾರಕ್ಕೆ ಆದಾಯ ಹೆಚ್ಚಾಗಲಿದೆ. ನಗರದಲ್ಲಿ ಬಸ್ ಸಂಚಾರಕ್ಕೆ ಮಾರ್ಗ ಅನುಮತಿಗಾಗಿ ಮನವಿಯನ್ನು ನೀಡಿದ್ದು ಆರ್‌ಟಿಎ ಮೀಟಿಂಗ್‌ನಲ್ಲಿ ತೀರ್ಮಾನವಾಗಲಿದೆ. ಪ್ರಯಾಣಿಕರಿಗಾಗಿ ಉತ್ತಮ ಸೇವೆಯನ್ನು ಕೆಎಸ್‌ಆರ್‌ಟಿಸಿ ನೀಡುತ್ತಿದ್ದು ನಗರ ಸಾರಿಗೆಗೆ ಅನುಮತಿ ನೀಡಿದರೆ ಇದಕ್ಕಿಂತಲೂ ಹೆಚ್ಚಿನ ಸೇವೆ ನೀಡುತ್ತೇವೆ.
ರಮೇಶ್- ಡಿ.ಸಿ. ಕೆಎಸ್‌ಆರ್‌ಟಿಸಿ.

ಬೆಂಗಳೂರಿನಲ್ಲಿ ಬಿಎಂಟಿಸಿ ಇರುವಂತೆ ಮಂಗಳೂರಿನಲ್ಲಿಯೂ ಸರಕಾರಿ ಬಸ್‌ಸೇವೆ ಅಗತ್ಯ ಇದೆ.  ಸಾಮಾನ್ಯ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸರಕಾರಿ ಬಸ್ ಸೇವೆ ಬೇಕಾಗಿದೆ.
ಸಂತೋಷ ಪೂಜಾರಿ-ಚಿಲಿಂಬಿ ನಿವಾಸಿ



Thursday, 21 June 2012



amratha shatty
jayashri poojary

ಸರಕಾರಿ ಪ್ರೌಢಶಾಲೆ ಆರ್ಡಿಗೆ ಸುವರ್ಣ ಮಹೋತ್ಸವ ಸಂಭ್ರಮ:
ಸುವರ್ಣ ಅಕ್ಷರಗಳಲ್ಲಿ ಪಡಿಮೂಡಿದ ಎಸ್‌ಎಸ್‌ಎಲ್‌ಸಿಯ ಫಲಿತಾಂಶ:
ಕೆ.ಎಸ್.ಶೆಟ್ಟಿ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರಕಾರಿ ಪ್ರೌಢಶಾಲೆ ಆರ್ಡಿಯು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ ಎಂದಾಗ ವಿಶೇಷವೇನಿದೆ ಎನ್ನುವ ಪ್ರಶ್ನೆ ಮೂಡುವುದು ಸಹಜವಾಗಿದ್ದರೂ ಮುಂದೆ ಏನೋ ವಿಶೇಷವಿದೆಯೆನಿಸದಿರದು. ಅಂತಹ ಕುತೂಹಲ ಮೂಡಿದಾಗಲೇ ಲೇಖನಕ್ಕೆ ಒಂದು ಅರ್ಥ ಬರುವುದು. ಪೋಷಕರೆಲ್ಲಾ ಸರಕಾರಿ ಶಾಲೆಯ ಬಗ್ಗೆ ಕೀಳರಿಮೆ ತಳೆದು ಆಂಗ್ಲ ಮಾಧ್ಯಮಕ್ಕೆ ತಮ್ಮ ಮಕ್ಕಳನ್ನು ಸಾಲ-ಸೋಲ ಮಾಡಿ ಕಳುಹಿಸುವ ಪದ್ದತಿ ಸಾಮಾನ್ಯವಾಗಿದೆ. ಆದರೆ ಮಧ್ಯಮ ವರ್ಗದ ಮಕ್ಕಳು ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲದೇ ಅನ್ಯಥಾ ಮಾರ್ಗವಿಲ್ಲ. ತಾವು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಬಗ್ಗೆ ಕೀಳರಿಮೆ ತಾಳದೆ ಆರ್ಡಿ ಶಾಲೆಯಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿಯ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳು ಶಾಲೆಯ ದಾಖಲೆಯಲ್ಲಿ ಸುವರ್ಣ ಅಕ್ಷರದಿಂದ ಫಲಿತಾಂಶವನ್ನು ದಾಖಲು ಮಾಡಿದ್ದಾರೆ. ಪರೀಕ್ಷೆಗೆ ಕುಳಿತ ೬೩ ಮಕ್ಕಳು ಉತ್ತಮ ಅಂಕಗಳನ್ನು ಪಡೆದು ೫೦ ವರ್ಷಗಳಲ್ಲಿ ಶೇ.೧೦೦ ಪಡೆಯಲಾಗದ್ದನ್ನು ಈ ಬಾರಿ ಪಡೆದು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಗರಿಯನ್ನು ಪಡೆದಿದ್ದಾರೆ.
ಆರ್ಡಿ ಶಾಲೆಯ ವಿಶೇಷತೆ:
ಕುಂದಾಪುರ ತಾಲೂಕಿನ ಗಡಿಪ್ರದೇಶವಾದ ಆರ್ಡಿ ಕಟ್ಟಕಡೆಯ ಶಾಲೆ ಸರಕಾರಿ ಪ್ರೌಢಶಾಲೆಯಾಗಿದೆ. ಸುತ್ತಮುತ್ತಲ ಹತ್ತಾರು ಊರುಗಳಿಗೆ ಒಂದೇ ಪ್ರೌಢಶಾಲೆ. ೫೦ ವರ್ಷಗಳಲ್ಲಿ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಬ್ಯಾಂಕಿಂಗ್, ಶಿಕ್ಷಕ, ಪೊಲೀಸ್, ಪತ್ರಿಕಾರಂಗ, ಕಲಾರಂಗ,ಸ್ವ-ಉದ್ಯಮಗಳನ್ನು ನಡೆಸುತ್ತಾ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.  ಪ್ರತಿವರ್ಷ ಸುಮಾರು ೩೦೦ಕ್ಕೂ ಅಧಿಕ ಮಕ್ಕಳು ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವುದು ಗಮನಿಸಬೇಕಾದ ಅಂಶ. ಅಲ್ಬಾಡಿ, ಶೇಡಿಮನೆ, ಅರಸಮ್ಮಕಾನು, ಬೆಪ್ಡೆ, ಬಡಾಬೆಪ್ಡೆ, ಹಂಜ, ಮಡಾಮಕ್ಕಿ, ಕಾಸನಮಕ್ಕಿಯಿಂದ ವಿದ್ಯಾರ್ಥಿಗಳು ಈ ಶಾಲೆಗೆ ಬಂದು ಕಲಿಯುತ್ತಿದ್ದರು. ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳು ಇಲ್ಲದಾಗಿಯೂ ಶಾಲೆಯ ಮಕ್ಕಳು ಉತ್ತಮ ಅಂಕವನ್ನು ಪಡೆಯಲು ಶ್ರಮಿಸುತ್ತಿದ್ದರು. ಗ್ರಾಮೀಣ ಪ್ರದೇಶವಾದ್ದರಿಂದ ಬಸ್ಸಿನ ವ್ಯವಸ್ಥೆ ಇಲ್ಲದಿದ್ದರೂ ಮಕ್ಕಳು ಕೆಲವರು ಹತ್ತಾರು ಕಿ.ಮೀ. ನಡೆದುಕೊಂಡೆ ಮನೆಗೆ ಸೇರುತ್ತಿದ್ದರು. ಅದಕ್ಕಿಂತಲೂ ದೂರದಿಂದ  ಶಾಲೆಗೆ ಬರುವವರು ಬಸ್ಸಿಗಾಗಿ ಸಂಜೆ ೬ ಗಂಟೆಯವರೆಗೆ ಕಾದು ಮನೆಗೆ ತಲುಪುವಾಗ ಸಂಪೂರ್ಣ ಕತ್ತಲಾಗುತ್ತಿತ್ತು. ಮಕ್ಕಳ ಕಷ್ಟ  ನೋಡಿದ ಉದ್ಯಮಿ ಪ್ರಶಾಂತ್ ಶೆಟ್ಟಿ ಗೇರುಬೀಜ ಕಾರ್ಖಾನೆಯ ವಾಹನದಲ್ಲಿ ಮಕ್ಕಳನ್ನು ಬೀಡುವ ಕಾರ್ಯ ಮಾಡಿದ್ದರು. ಇಲ್ಲಿಯೂ ಕೂಡ ಅಂಗವಿಕಲ ಮಕ್ಕಳಿಗೆ ಸರಿಯಾದ ವ್ಯವಸ್ಥೆಯಿಲ್ಲದೇ ಪಜೀತಿ ಪಡುವಂಥಾಗಿದೆ. ಊರಿನವರ ಸಹಕಾರ, ಗುರುಗಳ ಶ್ರಮ, ವಿದ್ಯಾರ್ಥಿಗಳ ಸಾಧನೆಗೆ ಆರ್ಡಿ ಶಾಲೆಯ ಕೀರ್ತಿ  ಉತ್ತುಂಗಕ್ಕೆ ಏರಿದೆ.
ಹಳೆ ವಿದ್ಯಾರ್ಥಿಯ ಪರಿಶ್ರಮ:
ಆರ್ಡಿ ಶಾಲೆಯ ಹಳೆವಿದ್ಯಾರ್ಥಿಯಾಗಿ, ಪ್ರಸ್ತುತ  ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿಯವರ ಬ್ಯಾಚ್‌ನಲ್ಲಿ ಕೇವಲ ನಾಲ್ವರು ಪಾಸಾಗಿದ್ದರು. ಉನ್ನತ ವಿದ್ಯಾಭ್ಯಾಸ  ಮುಗಿಸಿ ಅದೇ ಶಾಲೆಗೆ ೬ ತಿಂಗಳು ಗೌರವ ಶಿಕ್ಷಕನಾಗಿ ಸೇವೆ ಸಲ್ಲಿಸಿ ಈಗ ಕುಂದಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಗೋಪಾಲ ಶೆಟ್ಟಿಯವರ ಶ್ರಮ ಈ ಸಂದರ್ಭದಲ್ಲಿ ಶ್ಲಾಘನೀಯ. ತಾನು ಕಲಿತ ಶಾಲೆಯನ್ನು ಬಹು ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವ ಚಿಂತನೆಯ ಫಲವೇ ಇಂದು ಶೇ.೧೦೦ ಫಲಿತಾಂಶ ಕಾಣಲು ಸಾಧ್ಯವಾಯಿತು. ೨೦೦೮-೦೯ರಲ್ಲಿ ಕುಂದಾಪುರ ತಾಲೂಕಿನ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಸರಕಾರದ ಅನುದಾನವಿಲ್ಲದೆ ಉತ್ತಮ ಫಲಿತಾಂಶ ಕಾಣಲು ಯಾವ ಕ್ರಮ ಕೈಗೊಳ್ಳಬಹುದು ಎನ್ನುವುದಕ್ಕಾಗಿ ಅಧ್ಯಾಪಕರೊಂದಿಗೆ ಚಿಂತನೆಯನ್ನು ನಡೆಸಿದ ಅವರು ಕುಂದಾಪುರದ ಜನಪ್ರತಿನಿಧಿ ಪತ್ರಿಕೆಯೊಂದಿಗೆ ಸಂಪರ್ಕವನ್ನು ಬೆಳೆಸಿ ಪ್ರತಿ ಶಾಲೆಗಳಿಗೂ ಉಚಿತ ಪತ್ರಿಕೆ ನೀಡುವ  ಮೂಲಕ ಅಧ್ಯಾಪಕರಿಂದ ಪಡೆದ ಸಲಹೆ- ಸೂಚನೆಯನ್ನು ತಲುಪಿಸಿದರು.  ಶಿಕ್ಷಣದಲ್ಲಿ ಕ್ರಾಂತಿ  ಮಾಡಬೇಕು ಎನ್ನುವ ಉದ್ದೇಶದಿಂದ ಫಲಿತಾಂಶ ಉತ್ತಮ ಪಡಿಸಲು ಹಲವಾರು ವಿಧವಾಗಿ ಶ್ರಮಿಸಿದರು. ಶಿಕ್ಷಣ ತಜ್ಞರ ಸಹಕಾರದಿಂದ ರೂ.೨.೫೦ ಲಕ್ಷ ಮೌಲ್ಯದ ಪರೀಕ್ಷಾ ಸ್ಪೂರ್ತಿ ಪುಸ್ತಕವನ್ನು ಪ್ರಾರಂಭಿಸಿದ್ದರೂ ನಿರ್ವಹಣೆಯ ಖರ್ಚು ಜಾಸ್ತಿಯಾದ್ದರಿಂದ ಸರಕಾರದಿಂದ ಭರಿಸಲು ಸಾಧ್ಯವಿಲ್ಲದಾಯಿತು. ಅವರ ಸ್ನೇಹಿತರಾದ ಮಡಾಮಕ್ಕಿ ಬಾಲಕೃಷ್ಣ ಶೆಟ್ಟಿ, ಕೆ.ಆರ್.ನಾಯಕ್ ಎನ್ನುವ ಇಬ್ಬರೂ ದಾನಿಗಳಿಂದ ರೂ.೨೦ಸಾವಿರ ಸಂಗ್ರಹಿಸಿ ಉಡುಪಿ ಜಿಲ್ಲೆಯ ಪ್ರತಿ ಶಾಲೆಗೆ ಸೆಟ್ಟಿಗೆ ಸ್ವಲ್ವ ಮೊತ್ತ ನಿಗಧಿ ಮಾಡಿ ನೀಡಲಾಯಿತು. ಕುಂದಾಪುರ ತಾಲೂಕಿನ ಮಕ್ಕಳಿಗಾಗಿ ಪರೀಕ್ಷಾ ಪ್ರೇರಣಾ ಎನ್ನುವ ಮಾರ್ಗದರ್ಶಿ ಪುಸ್ತಕ ಗಣೇಶ್ ಶೆಟ್ಟಿಗಾರ್ ಮತ್ತು ಉದಯ ಗಾಂವಕರ್ ಪ್ರಾರಂಭಿಸಿದರು. ಕೆಲವು ಶಾಲೆಗಳಿಗೆ ನೀಡಲಾಗಿದ್ದರೂ ಸುಮಾರು ೫೦ ಸಾವಿರ ಮೌಲ್ಯದ ಪುಸ್ತಕ ಉಳಿತಾಯಗೊಂಡಿತು. ಉದ್ಯಮಿ ಗಣೇಶ್ ಕಿಣಿ ಎನ್ನುವವರಿಂದ ರೂ.೨೫ ಸಾವಿರ ಸಂಗ್ರಹಿಸಿ ಸರಕಾರಿ ಪ್ರೌಢಶಾಲೆ ಆರ್ಡಿಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಉಚಿತವಾಗಿ ನೀಡಲಾಯಿತು. ಉಳಿದ ರೂ.೨೫ ಸಾವಿರ ಮೌಲ್ಯದ  ಪುಸ್ತಕವನ್ನು ಮುಂಬೈಯ ಉದ್ಯಮಿ ಉಮೇಶ ಪೂಜಾರಿ ಅವರ ಸಹಾಯ ಹಸ್ತದಿಂದ ಅವರು ಕಲಿತ ಹೆಮ್ಮಾಡಿ ಶಾಲೆಗೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಈ ಕಾರ್ಯವೈಖರಿಯಿಂದಲೇ ಆರ್ಡಿ ಶಾಲೆ ಶೇ.೧೦೦ ಫಲಿತಾಂಶ ಪಡೆಯುವದರೊಂದಿಗೆ ಉಡುಪಿ ಜಿಲ್ಲೆಗೆ ಅಗ್ರಣಿಯಾಗಿ ಮೂಡಿಬಂತು. ಹೆಮ್ಮಾಡಿ ಶಾಲೆ ಶೇ.೯೯ ಫಲಿತಾಂಶ ದೊರಕಿಸಿಕೊಂಡಿತು. ಈ ರೀತಿಯಾಗಿ ಯಾವಾಗಲೂ ಕೊನೆಯ ಸ್ಥಾನಕ್ಕೆ ತೃಪ್ತಿ ಪಡುತ್ತಿದ್ದ ಕುಂದಾಪುರ ವಲಯ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯಮಟ್ಟದಲ್ಲಿಯೇ ಗುರುತಿಸಿವಂತಾಯಿತು.
ಉಡುಪಿ ಜಿಲ್ಲಾ ಪಂಚಾಯತ್‌ನಲ್ಲಿ  ನಡೆದ ಚಿಂತನೆ ಹಾಗೂ  ಮಾರ್ಗದರ್ಶನ ಫಲಶ್ರುತಿಯೇ ಆರ್ಡಿ ಶಾಲೆ ಸುವರ್ಣ ಮಹೋತ್ಸವದ ಸಂದರ್ಭ ಸುವರ್ಣ ಅಕ್ಷರಗಳಲ್ಲಿ ದಾಖಲೆಯಾಗಿದೆ. ಕುಂದಾಪುರ ತಾಲೂಕಿನ ೩೯ ಶಾಲೆಗಳಲ್ಲಿ ೨೬೦೦ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತು ಶೇ.೯೪.೯೮ ಫಲಿತಾಂಶ ದೊರಕಿಸಿ ಕೊಟ್ಟಿದ್ದಾರೆ. ಇದರಲ್ಲಿ ೧೫ ಶಾಲೆ ಶೇ.೧೦೦ಫಲಿತಾಂಶ, ೫ಶಾಲೆ ಶೇ.೯೯ಪಡೆದಿದ್ದವು.
ತೆರೆಮರೆಯಲಿದ್ದು ಸಾಧನೆಗೆ ಕಾರಣರಾದ ಗುರುವೃಂದ:
ಆರ್.ಎನ್.ಪರಶಿವ ಮೂರ್ತಿ, ಮಾಲತಿ, ಶೈಲಜಾ, ಸುಜಾತ, ವೈಶಾಲಿ ಜಿ.ರಾವ್, ಉದಯ ಶೆಟ್ಟಿ, ಶ್ರೀಕಾಂತ ನಾಯಕ್, ರಾಜ ಮಾಣಿಕ್ಯ, ಕೆ.ಪ್ರೇಮನಾಥ್ ತೋಳಾರ್, ಮಹಾಂತೇಶ್, ಸುರೇಶ್ ಕುಮಾರ್, ಸಾಂಕ್ಲಿ ನಾಯ್ಕ ವಿದ್ಯಾರ್ಥಿಗಳ ಸಾಧನೆಗೆ ಶ್ರಮಿಸಿದ ಸರಕಾರಿ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ.
ಐ qsಟ್ಠ Zಛಿ Zಠಿಛ್ಟಿ ಟ್ಞ್ಝqs ಜ್ಞ್ಛಿಟ್ಟಞZಠಿಜಿಟ್ಞ ಠಿಛಿZeಛ್ಟಿ ಜಿo ಟಠಿ ಛ್ಚಿಛಿooZqs Zo ಠಿeಛಿqs Zಛಿ ZಡಿZಜ್ಝಿZಚ್ಝಿಛಿ ಜ್ಞಿ ಜಿಚ್ಟಿZಜಿಛಿo Zb ಜ್ಞಿಠಿಛ್ಟ್ಞಿಛಿಠಿ. ಆಠಿ ಜ್ಛಿ qsಟ್ಠ Zಛಿ Zಠಿಛ್ಟಿ ಜ್ಞಿomಜ್ಟಿZಠಿಜಿಟ್ಞ, ಞಟಠಿಜಿqZಠಿಜಿಟ್ಞ Zb ಜಟಟb ಜ್ಠಜಿbಛ್ಞ್ಚಿಛಿ ಠಿಛಿZeಛ್ಟಿ ಜಿo ಛ್ಚ್ಚಿಛಿooಟ್ಟqs.
ಗುರುವಿಲ್ಲದ ಜೀವನ ಅಪಾತ್ರವಾಗಿರುತ್ತದೆ. ಎಲ್ಲರ ಜೀವನದಲ್ಲಿ ಗುರುಗಳ ಪಾತ್ರ ಮುಖ್ಯವಾಗಿರುತ್ತದೆ. ಗುರುವಿನಿಂದ ಕಲಿತ ವಿದ್ಯೆ ಲೋಕದಲ್ಲಿ ಉತ್ತಮ ವ್ಯಕ್ತಿತ್ವ ನೆಲೆಗೊಳಿಸುವುದರೊಂದಿಗೆ  ಶ್ರೇಷ್ಠ ಜೀವನ ನಡೆಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಗುರುಗಳ ಪ್ರಾಮುಖ್ಯತೆ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ನಡೆನುಡಿ ತಪ್ಪಿದಾಗ ತಿದ್ದಿ ಸರಿದಾರಿಗೆ ಕೊಂಡೊಯ್ಯಲು ಹರಸಾಹಸ ಮಾಡುತ್ತಾರೆ. ಆದರೆ ಆ ಸಮಯದಲ್ಲಿ  ನಮ್ಮ ಮನಃ ಕೇಳುವ ಸ್ಥಿತಿಯಲ್ಲಿರುವುದಿಲ್ಲ ಎನ್ನುವುದೇನೋ ನಿಜವಾದರೂ ಅದರ ನಿಜವಾದ ಮರ್ಮ ತಿಳಿಯುವುದು ಶಾಲಾ-ಕಾಲೇಜು ಜೀವನ  ಮುಗಿಸಿ ವೃತ್ತಿಜೀವನಕ್ಕೆ ಕಾಲಿರಿಸಿದಾಗ ತಿಳಿಯುತ್ತದೆ. ಅದಕ್ಕಾಗಿ ಸಂಸ್ಕೃತ ಶ್ಲೋಕವೊಂದು ಗುರುವಿನ ಬಗ್ಗೆ
ಗುರುಬ್ರಹ್ಮ, ಗುರುವಿಷ್ಣು, ಗುರುರ್ದೇವೋ ಮಹೇಶ್ವರ;
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ: ಎಂದು ಸಾರಿದೆ.
ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕನ್ನು ಹರಿಸಲು ಗುರುವಿನ ಮೂಲಮಂತ್ರವೇ ಸಾಕಾಗಿರುತ್ತದೆ. ಜೀವನದ ಪಯಣದಲ್ಲಿ ಅನೇಕ ಗುರುಗಳು ಬಂದರೂ ಮೂಲಾಕ್ಷರವನ್ನು ಕಲಿಸಿದ ಗುರುವರ್ಯರ ನೆನಪು ಮಾತ್ರ ನೆನಪಿನಾಳದಿಂದ ಮಾಸುವುದಿಲ್ಲ.  ನಾನು ಕಲಿತ ಶಾಲೆಯಲ್ಲಿ ಓರ್ವ ಗುರುಗಳ ಹೊರತು ಪಡಿಸಿ ಉಳಿದಂತೆ ಎಲ್ಲಾ ಹೊಸಬರೇ. ಆದರೂ ಕೂಡ ನನಗೆ ಇವರನ್ನು ನೋಡಿದಾಗ ಹೆಮ್ಮೆಯಾಗುತ್ತದೆ. ಗ್ರಾಮೀಣ ಭಾಗದ  ಮಕ್ಕಳಿಗೆ ಟ್ಯೂಷನ್ ಅವಶ್ಯಕತೆಯಿಲ್ಲವೆನ್ನುವುದಕ್ಕೆ ಇವರ ಪಾಠವೈಖರಿಯಿಂದಾಗಿ ಶಾಲೆಯ ಫಲಿತಾಂಶವೇ ಉತ್ತರವಾಗಿದೆ. ಪಾಸಾಗಲು ಹರಸಾಹಸ ಮಾಡುವ ಅತೀ ಬುದ್ದಿವಂತ ಮಕ್ಕಳಿಗೆ ತರಗತಿಯ ನಂತರ ಉಚಿತವಾಗಿ ಪಾಠ ಮಾಡುವ ಗುರುಗಳು ದೊರಕಿದ್ದು ಆರ್ಡಿ ಶಾಲಾ ಮಕ್ಕಳ ಭಾಗ್ಯವೆಂದೇ ಹೇಳಬೇಕು. ಗುರುವರ್ಯರು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಸಮಯವನ್ನು ವ್ಯಯಿಸಿ ಸಮಾಜದಲ್ಲಿ ಗುರುತಿಸುವಂತೆ ಮಾಡಿದ್ದು ಮಾತ್ರವಲ್ಲದೇ ಸುವರ್ಣ ಮಹೋತ್ಸವದ ಹೊತ್ತಿನಲ್ಲಿರುವ ಶಾಲೆ ಹೆಸರನ್ನು ಸುವರ್ಣ ಅಕ್ಷರಗಳಲ್ಲಿ ರಂಜಿಸುವಂತೆ ಮಾಡಿದ್ದಾರೆ.
ಪರಿಶ್ರಮಿಗಳ ಹೃದಯಾಂತರಾಳದ ಮಾತು:
ತಂದೆ ಮಧ್ಯವ್ಯಸನಿಯಾಗಿದ್ದು, ತಾಯಿ ಬೀಡಿಕಟ್ಟುತ್ತಾ ಮೂವರು ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು. ಯಾವುದೇ ವಿದ್ಯಾರ್ಥಿ ವೇತನವನ್ನು ದೊರೆಯದೆ ಕೆಲವೊಮ್ಮೆ ಬಸ್ಸಿನಲ್ಲಿ ಶಾಲೆಗೆ ಬರುತ್ತಿದ್ದು ಉಳಿದಂತೆ ಸುಮಾರು ೧೦ ಕಿ.ಮಿ ನಡೆದುಕೊಂಡೆ ಶಾಲೆಗೆ ಬಂದು ೮೯.೨೮% ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದೇನೆ. ಫಲಿತಾಂಶವನ್ನು  ನೋಡಿ ಹೆಬ್ರಿಯ ಅಮೃತ ಭಾರತಿ ವಿದ್ಯಾಲಯ ಅತೀ ಕಡಿಮೆ ಶುಲ್ಕವನ್ನು ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿದೆ. ಟ್ಯೂಷನ್‌ಗೆ ಹೋಗದೆ ನಗರ ಪ್ರದೇಶದ ಮಕ್ಕಳಿಗೆ ನಮ್ಮಲ್ಲಿಯೂ ಸಾಮರ್ಥ್ಯವಿದೆ ಎಂದು ತೋರಿಸಿಕೊಟ್ಟಿದ್ದೇವೆ.
-ಜಯಲಕ್ಷ್ಮೀ ಶೆಟ್ಟಿ ಅರಸಮ್ಮಕಾನು.

ಮನೆಯಿಂದ ಶಾಲೆಗೆ ತುಂಬಾ ದೂರವಿದ್ದರಿಂದ ಯಾವುದೇ ಟ್ಯೂಷನ್‌ಗೆ ಹೋಗುವುದಕ್ಕೆ ಸಮಯವೇ ಸಾಲುತ್ತಿರಲಿಲ್ಲ. ಅದಲ್ಲದೇ ಗ್ರಾಮೀಣ ಮಟ್ಟದಲ್ಲಿ ಟ್ಯೂಷನ್ ಹಾವಳಿ ಇನ್ನೂ ಪ್ರಾರಂಭವಾಗಿಲ್ಲ. ಶಾಲೆಯಲ್ಲಿ ಗುರುಗಳ ನಿರಂತರ ಶ್ರಮ-ಪ್ರೋತ್ಸಾಹದಿಂದ ಶಾಲೆಗೆ ದ್ವಿತೀಯ ಸ್ಥಾನಿ (೮೫.೯೨)ಯಾಗಲು ಕಾರಣವಾಗಿದೆ. ಮೂವರು ಹೆಣ್ಣು ಮಕ್ಕಳಾದ ನಮ್ಮ ವಿದ್ಯಾಬ್ಯಾಸ ಇದೇ ಸರಕಾರಿ ಶಾಲೆಯಲ್ಲಿ ಆಗಿದೆ.
ಅಮೃತ ಶೆಟ್ಟಿ ಬೆಪ್ಡೆ

ಮನೆಯಲ್ಲಿ ಹೇಳಿಕೊಳ್ಳುವಂಥ ಸ್ಥಿತಿವಂತರಲ್ಲದ ನಾವು ಬುದ್ದಿವಂತಿಕೆಯಲ್ಲಿ ಯಾರಿಗೂ ಕಡಿಮೆ ಇಲ್ಲವೆನ್ನುವುದನ್ನು ಸಾಧಿಸಿ ತೋರಿಸಿದ್ದೇವೆ. ಮುಂದಿನ ದಿನದಲ್ಲಿ ಇದಕ್ಕಿಂತಲೂ ಹೆಚ್ಚಿನ ಫಲಿತಾಂಶ ಪಡೆದು ಶಾಲೆಗೆ ಕೀರ್ತಿಯನ್ನು ತರುತ್ತೇವೆ.
ಜಯಶ್ರೀ ಪೂಜಾರಿ (೮೫.೭೬)-ತೃತೀಯ ಸ್ಥಾನಿ

ಶಿಕ್ಷಕರ ನಿರಂತರ ಶ್ರಮ ಹಾಗೂ ವಿದ್ಯಾರ್ಥಿಗಳ ಅವಿರತ ಪ್ರಯತ್ನದಿಂದ ನಾನು ಕಲಿತಂಥ ಶಾಲೆ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗಿದೆ. ಮೂಲಭೂತ ಸೌಕರ್ಯಗಳು ಕಡಿಮೆ ಪ್ರಮಾಣದಲ್ಲಿ ದೊರಕಿದರೂ ಆ ಕುಂದುಕೊರತೆಗಳನ್ನು ವರವಾಗಿ ಸ್ವೀಕರಿಸಿದ ಮಕ್ಕಳು ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸುವರ್ಣ ಅಕ್ಷರದಲ್ಲಿ ಶಾಲೆಯ ಹೆಸರನ್ನು ಬರೆಸಿದ್ದಾರೆ. ಗುರುಗಳ ಪ್ರೋತ್ಸಾಹ ಹಾಗೂ ಪೋಷಿಸುವ ಕಾರ್ಯವೇ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುವುದರೊಂದಿಗೆ ೫೦ ವರ್ಷಗಳಲ್ಲಿ  ಈ ಸಾಧನೆ ಮಾಡಿದ್ದಾರೆ.
ಗೋಪಾಲ ಶೆಟ್ಟಿ-ಕ್ಷೇತ್ರ ಶಿಕ್ಷಣಾಧಿಕಾರಿ

ನಿವೃತ್ತಿಯ ಹಂತದಲ್ಲಿರುವ ನನ್ನ ಪಾಲಿಗೆ ಶಾಲೆಯ ಮಕ್ಕಳು ಉತ್ತಮ ಫಲಿತಾಂಶವನ್ನು ನೀಡಿ ಬಿಳ್ಕೋಟ್ಟಿದ್ದಾರೆ. ಸಹ ಶಿಕ್ಷಕರ ನಿರಂತರ ಕಾರ್ಯದಕ್ಷತೆ  ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ  ರಾಜ್ಯ ಮಟ್ಟದಲ್ಲಿ ಕುಂದಾಪುರ ವಲಯವನ್ನು ಗುರುತಿಸುವಂತೆ ಮಾಡಿದ್ದಾರೆ. ಸರಕಾರಿ ಶಾಲೆಯನ್ನು ನಿರ್ಲಕ್ಷಿಸುವ ಕಾಲಘಟ್ಟದಲ್ಲಿ ನಮ್ಮಲ್ಲಿಯೂ ಕೂಡ ಶಕ್ತಿಯಿದೆ ಎನ್ನುವುದನ್ನು ಮನದಟ್ಟು ಮಾಡಿದ್ದಾರೆ.
ಆರ್.ಎನ್.ಪರಶಿವ ಮೂರ್ತಿ- ಶಾಲಾ ಮುಖ್ಯೋಪಾಧ್ಯಾಯ









ಕರಾವಳಿಯಲ್ಲಿ ಮುಂಗಾರು ಆರಂಭ...ಮೀನುಗಾರರಿಗೆ ಜೂ.೧೪ರಿಂದ ನಿರ್ಬಂಧ
-ಸಂದೇಶ ಶೆಟ್ಟಿ ಆರ್ಡಿ
ಮುಂಗಾರು ಮಳೆ ಆಗಮನವಾದಾಗ ಅನೇಕ ಕಾರ್ಯಚಟುವಟಿಕೆಗಳು ಭರದಿಂದ ಪ್ರಾರಂಭವಾಗುತ್ತವೆ. ಮಕ್ಕಳು ಶಾಲಾ ಜೀವನಕ್ಕೂ, ರೈತರು ಕೃಷಿ ಕಾರ್ಯಕ್ಕೂ ಅಣಿಯಾಗುತ್ತಾರೆ. ನಿಶ್ಚಿತ ಅವಧಿಯವರೆಗೆ ವೃತ್ತಿಯನ್ನು ಅವಲಂಬಿಸಿದ್ದ ಯಕ್ಷಗಾನ ಮೇಳ ತಿರುಗಾಟವನ್ನು ಮುಗಿಸಿದ್ದು, ಮೀನುಗಾರರು ಕೂಡ ತಮ್ಮ ಯೋಜನಾಬದ್ದ ಕಾಯಕಕ್ಕೆ ವಿರಾಮ ಹೇಳುತ್ತಿದ್ದಾರೆ.  ಪ್ರತಿವರ್ಷದಂತೆ ಮುಂಗಾರು ಮಳೆ ಕರಾವಳಿಗೆ ಆಗಮನವಾಗಿದ್ದು ಸಮುದ್ರದ ತೀವ್ರತೆರನಾದ ಅಲೆಗಳಿಗೆ ತಮ್ಮ ಅಮೂಲ್ಯ ಜೀವವನ್ನು ಒತ್ತೆಯಿಟ್ಟು ಕುಟುಂಬದವರೊಡನೆ ನೆಮ್ಮದಿ ಜೀವನ ಕಂಡುಕೊಂಡ ಮೀನುಗಾರರು ಮಳೆಗಾಲದ ರಜೆಗಾಗಿ ತಮ್ಮ ಬೋಟುಗಳನ್ನು ದಡ ಸೇರಿಸುತ್ತಿದ್ದ ದೃಶ್ಯ ನಗರದ ಬಂದರಿನ ದಕ್ಕೆಯಲ್ಲಿ ಕಂಡುಬಂದಿದೆ. ಮೀನುಗಾರರಿಗೆ ಜೂ.೧೪ರಿಂದ ಮೀನು ಹಿಡಿಯುವುದಕ್ಕೆ ನಿರ್ಬಂಧ ಹೇರಲಾಗಿದೆ.
ದಕ್ಷಿಣ ಕನ್ನಡದಲ್ಲಿರುವ ೧,೧೦೬ ಯಾಂತ್ರಿಕೃತ ದೋಣಿ, ೧೦೧೯ ಸಣ್ಣ ಇಂಜಿನ್, ೩೭೧ ನಾಡದೋಣಿಗಳಲ್ಲಿ ಹಲವರು ಈಗಾಗಲೇ ದಡವನ್ನು ಸೇರಿದ್ದು,ಉಳಿದಂತೆ  ಜೂನ್ ೧೪ರ ಒಳಗೆ ದಡವನ್ನು ಸೇರಬೇಕಾಗಿದೆ. ಇವರು ವರ್ಷದ ೯ ತಿಂಗಳುಗಳ ಕಾಲ ಸಮುದ್ರದಲ್ಲಿ ಸುಮಾರು ೧೫೦ ಕಿ.ಮೀ.ಗಳವರೆಗೆ ಸಾಗಿ ಮೀನನ್ನು ಹಿಡಿಯುತ್ತಾರೆ. ದಕ್ಷಿಣ ಕನ್ನಡದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ  ಈ ಬಾರಿ ಹಿಡಿದ ಮೀನಿನ ಪ್ರಮಾಣ ಕಡಿಮೆಯಾಗಿದೆ. ೨೦೧೦-೧೧ರಲ್ಲಿ ೧.೩೪ ಲಕ್ಷ ಟನ್ ಆಗಿದ್ದು ೨೦೧೧-೧೨ನೇ ಸಾಲಿನಲ್ಲಿ ೧.೨೬ ಲಕ್ಷ ಟನ್ ಮೀನು ಸಂಗ್ರಹಿಸಲಾಗಿದೆ. ಹಿಡಿದಿರುವ ಹೆಚ್ಚಿನ ಮೀನುಗಳೆಲ್ಲಾ ಹರಾಜಿನ ಮೂಲಕ ಸ್ಥಳೀಯ ಮಾರುಕಟ್ಟೆಯನ್ನು ಪ್ರವೇಶಿಸುವುದು ಹಾಗೂ ಉಳಿದಂತೆ ಕೊಚ್ಚಿನ್, ಗೋವಾ ಇತರ ರಾಜ್ಯಗಳಿಗೆ ರಪ್ತು ಆಗಿದೆ.  ಸಾಮಾನ್ಯವಾಗಿ ಮೀನಿನ ಸಂಗ್ರಹಣೆಯು  ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕಡಿಮೆಯಾಗುತ್ತದೆ. ತಾಪಮಾನದ ವೈಪರಿತ್ಯದಿಂದಾಗಿಯೋ ಅಥವಾ ಪರಿಸರದ ಕಾರಣದಿಂದ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಈ ಬಾರಿ ಜೂನ್ ೧೫ರಿಂದ ಆಗಸ್ಟ್ ೧೫ರವರೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
೨೦೧೧-೧೨ರ ವಿಶೇಷತೆ:
ಈ ಬಾರಿ ಸಮುದ್ರದಲ್ಲಿ ಬಂಗುಡೆ, ಬೂತಾಯಿ, ರಾಣಿ ಮೀನು (ಮದುಮಗಳು),  ಕಪ್ಪೆ ಬೊಂಡಾಸ್ ಸಿಕ್ಕಿದ್ದವು. ಬೇರೆ ವಿಶೇಷವಾದ ಮೀನುಗಳು ಯಾವುದು ಸಿಕ್ಕಿರುವುದಿಲ್ಲ. ಕಪ್ಪೆ ಬೊಂಡಾಸ್ ಲಾಭದಾಯಕವಾಗಿದ್ದರೂ, ಇವುಗಳು ಸುಮಾರು  ೧೨೫ರಿಂದ ೧೪೦ ಮೀಟರ್ ಆಳದಲ್ಲಿ ಇರುವುದರಿಂದ ಹಿಡಿಯುವುದು ತುಂಬಾ ಕಷ್ಟಕರವಾಗಿದೆ. ಅಕ್ರಮ ಹಾಗೂ ಅವೈಜ್ಞಾನಿಕವಾಗಿ ಕಪ್ಪೆ ಬೊಂಡಾಸ್‌ನ್ನು ಹಿಡಿಯುವುದರಿಂದ ಅವುಗಳ ಸಂತತಿ ನಾಶವಾಗುವ ಭೀತಿಯಿದೆ. ಕೇರಳ ಮತ್ತು ತಮಿಳ್ನಾಡಿನಲ್ಲಿ ಕಪ್ಪೆ ಬೊಂಡಾಸ್‌ನ್ನು ಅಕ್ರಮವಾಗಿ ಹಿಡಿಯುವುದನ್ನು ನಿಷೇಧಿಸಲಾಗಿದೆ.  ತೆಂಗಿನ ನಾರನ್ನು ಬಂಡೆಗಳ ಸಮೀಪದಲ್ಲಿ ಹಾಕಿ ಕೊಳೆಯುವಂತೆ ಮಾಡಿದಾಗ ಬೊಂಡಾಸ್‌ಗಳು ಬಂದು ಮೊಟ್ಟೆ ಹಾಕುತ್ತವೆ.  ಮೊಟ್ಟೆ ಮರಿಯಾಗಿ ಬೆಳೆಯುವುದಕ್ಕಿಂತ ಮೊದಲೆ ಅವುಗಳನ್ನು ಹಿಡಿಯುವುದರಿಂದ ಮುಂದಿನ ದಿನದಲ್ಲಿ ಕಪ್ಪೆ ಬೊಂಡಾಸ್‌ನ ಹೆಸರನ್ನು ಹೇಳುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಬೇಸರ ವ್ಯಕ್ತ ಪಡಿಸುತ್ತಾರೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಶ್ಮಿತಾ.
ಇಲಾಖೆಯ ವತಿಯಿಂದ ಮೀನುಗಾರರಿಗೆ ಸೌಲಭ್ಯ:
ರಾಜ್ಯದಲ್ಲಿ ಮೀನುಗಾರರಿಗೆ ೧ಲಕ್ಷ ಲೀ. ಡಿಸೇಲ್‌ನ್ನು ತೆರೆಗೆ ರಹಿತವಾಗಿ ನೀಡಲಾಗುತ್ತಿದೆ. ೨೦೧೧-೧೨ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರಿಗೆ ೩೬ ಸಾವಿರ ಲೀಟರ್ ತೆರಿಗೆ ರಹಿತ ಡಿಸೇಲ್‌ನ್ನು ನೀಡಲಾಗಿದೆ. ಮೀನುಗಾರರಿಗೆ ಪ್ರತಿ ಲೀಟರ್‌ಗೆ ೬ ರೂಪಾಯಿ ರಿಯಾಯಿತಿ ದೊರೆಯುತ್ತಿದೆ. ಜಿಲ್ಲಾ ಪಂಚಾಯತ್‌ನ ವತಿಯಿಂದ ಜಿಪಿಎಸ್-ಫಿಶ್ ಫೈಂಡರ್ ರೆಡಿಯೋ ಟೆಲಿಫೋನ್ ಯೋಜನೆಯಡಿ ೩೪ ಸಾವಿರ ರೂ.ಗಳ ಸಬ್ಸಿಡಿ ನೀಡಲಾಗಿದೆ.
ತಾತ್ಕಾಲಿಕವಾಗಿ ನಿರ್ಬಂಧ ಹೇರಿದ್ದು, ರಜಾ ದಿನದಲ್ಲಿ ಬೋಟ್‌ಗಳ ರಿಪೇರಿ, ಬಲೆ ರೀಪೆರಿ ಕಾರ್ಯ ಮಾಡಲಾಗುತ್ತದೆ. ಉಡುಪಿ ಜಿಲ್ಲೆಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಿ ಮೀನಿನ ಸಂಗ್ರಹಣೆ ಹೇಳುವಂಥ ವ್ಯತ್ಯಾಸವೇನು ಆಗಿಲ್ಲ. ಉಡುಪಿಯಲ್ಲಿ ೨೦೧೦-೧೧ರಲ್ಲಿ ೧.೧೭ ಲ.ಟನ್ ಆಗಿದ್ದು, ೨೦೧೧-೧೨ನೇ ಸಾಲಿನಲ್ಲಿ ೧.೦೭ಲ.ಟನ್ ಸಂಗ್ರಹಿಸಲಾಗಿದೆ.

ಕಾರವಾರ ಬೋಟ್ ಎಜೆನ್ಸಿಯಲ್ಲಿ ಮೀನು ಹಿಡಿಯುವ ಕಾರ್ಯ ನಿರ್ವಹಿಸುತ್ತಿದ್ದೇನೆ. ತಮಿಳ್ನಾಡು ಮೂಲದವನಾದ ನಾನು ೨೫ ವರ್ಷಗಳಿಂದ ಈ ಕಾಯಕವನ್ನೇ ನಂಬಿಕೊಂಡಿದ್ದೇನೆ. ಈ ಬಾರಿ ಸುಮಾರು ೧.೫ ಕೋಟಿಯ ಮೀನನ್ನು ಹಿಡಿದಿದ್ದೇವೆ.
ಸುಬ್ರಹ್ಮಣ್ಯ ತಮಿಳ್ನಾಡು -ಕಾರವಾರ ಬೋಟ್ ಕಂಪೆನಿ
ದೇವಿ ಕಂಪೆನಿಯಲ್ಲಿ ೬ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಈ ಬಾರಿ ಸಮುದ್ರಕ್ಕೆ ಹೋದಾಗ ರಾಣಿ ಮೀನು, ಬಂಗಡೆ, ಬೂತಾಯಿಗಳಲ್ಲದೇ ಕಪ್ಪೆ ಬೊಂಡಾಸ್‌ಗಳನ್ನು ಸಂಗ್ರಹಿಸಿದ್ದೇವೆ. ೩೦ರಿಂದ ೬೦ ಮೀಟರ್ ಆಳದವರೆಗೆ ಬಲೆಯನ್ನು ಬೀಸಿ ಮೀನುಗಳನ್ನು ಹಿಡಿದಿದ್ದೇವೆ. ೨೬ ವರ್ಷಗಳಿಂದ ಕುಲಕಸುಬನ್ನು ಮಾಡುತ್ತಾ ಜೀವನವನ್ನು ಮಾಡುತ್ತಿದ್ದೇವೆ. ಇಲ್ಲಿ ೯ ತಿಂಗಳುಗಳ ಕಾಲ ಕೆಲಸವಿದ್ದು ಮಳೆಗಾಲದ ಮೂರು ತಿಂಗಳು ಬೇರೆ ಕೆಲಸವನ್ನು ಮಾಡುತ್ತೇವೆ.
ಹೊನ್ನಪ್ಪ ಹೊನ್ನಾವರ -ಶ್ರೀದೇವಿ ಬೋಟ್ ಕಂಪೆನಿ
೨೦೧೦-೧೧ನೇ ಸಾಲಿನ ದ.ಕ.ಜಿಲ್ಲೆಯ ಮೀನಿನ ಅಂಕಿ-ಅಂಶ:
ತಿಂಗಳು:               ಪ್ರಮಾಣ                  ಮೌಲ್ಯ
ಎಪ್ರಿಲ್-              ೪೮೦೦.೦೦                  ೧೪೫೦.೬೮
ಮೇ  --              ೮೦೨೦.೦೦                  ೨೨೮೦.೫೬
ಜೂನ್-               ೨೩೫.೦೦                    ೧೦೮.೦೫
ಜುಲೈ-                 ೨೯೦.೦೦                    ೧೪೧.೪೨
ಆಗಸ್ಟ್-               ೧೦೧೩೪.೦೦                 ೮೨೪೦.೫೯
ಸಪ್ಟಂಬರ್-          ೨೪೯೫೮.೦೦                 ೧೩೪೪೮.೩೬
ಅಕ್ಟೋಬರ್-        ೨೦೫೬೨.೦೦                 ೧೦೨೪೩.೩೩
ನವೆಂಬರ್-          ೧೪೩೫೮.೦೦                 ೫೭೯೧.೧೨
ಡಿಸೆಂಬರ್-          ೨೧೮೩೬.೦೦                  ೬೭೭೯.೧೭
ಜನವರಿ-              ೯೩೫೦.೦೦                   ೨೧೮೪.೮೯
ಫೆಬ್ರವರಿ-            ೧೦೩೩೫.೦೦                  ೨೭೧೧.೮೫
ಮಾರ್ಚ್-           ೯೮೬೧.೦೦                    ೨೭೧೧.೮೫
ಒಟ್ಟು-             ೧೩೪೭೩೯.೦೦              ೫೬೦೯೦.೧೭

೨೦೧೧-೧೨ ನೇ ಸಾಲಿನ ದ.ಕ.ಜಿಲ್ಲೆಯ ಮೀನಿನ ಅಂಕಿ-ಅಂಶ:
ತಿಂಗಳು                 ಪ್ರಮಾಣ                   ಮೌಲ್ಯ          
ಎಪ್ರಿಲ್                 ೪೧೭೩.೦೦                  ೧೦೭೨.೬೬
ಮೇ                     ೫೦೩೨.೦೦                  ೧೩೯೩.೮೮
ಜೂನ್                 ೨೮೫೮.೦೦                   ೯೬೦.೪೬
ಜುಲೈ                   ೨೫೯೮.೦೦                   ೨೧೦೮.೬೦
ಆಗಸ್ಟ್                  ೭೩೩೬.೦೦                   ೩೮೫೫.೭೫
ಸಪ್ಟಂಬರ್             ೭೯೨೪.೦೦                   ೪೫೯೨.೩೯
ಅಕ್ಟೋಬರ್           ೧೯೫೯೯.೦೦                 ೧೦೨೭೧.೮೩
ನವೆಂಬರ್             ೧೬೩೩೫.೦೦                  ೪೧೫೯.೨೨
ಡಿಸೆಂಬರ್             ೧೯೦೪೯.೦೦                  ೮೩೩೧.೦೦
ಜನವರಿ                 ೧೦೨೯೪.೦೦                 ೮೬೦೧.೯೩
ಫೆಬ್ರವರಿ                ೧೬೫೯೮.೦೦                 ೯೦೬೩.೮೪
ಮಾರ್ಚ್             ೧೪೯೨೫.೦೦                 ೭೬೬೩.೩೪
ಒಟ್ಟು                ೧೨೬೭೨೧.೦೦             ೬೨೦೭೪.೯೦




ಮನಪಾ ವತಿಯಿಂದ ಮಲೇರಿಯಾ ನಿಯಂತ್ರಣಕ್ಕೆ `ಆಕ್ಷನ್ ಪ್ಲ್ಯಾನ್'
ಸಂದೇಶ ಶೆಟ್ಟಿ ಆರ್ಡಿ
ಮಂಗಳೂರು: ಮಳೆಗಾಲ ಪ್ರಾರಂಭವಾಗಿದೆ ಎಂದು ಸಂತೋಷ ಪಡುತ್ತಿರುವಾಗಲೇ ನಗರದಲ್ಲಿ ಮಲೇರಿಯಾದ ಭೀತಿ ಎದುರಾಗಿದೆ. ಮಂಗಳೂರಿನಲ್ಲಿ ವಾಸವಾಗಿ ಜ್ವರ ಬಂದಿದೆ ಎಂದಾಕ್ಷಣ ಮಲೇರಿಯಾವೇ ಎನ್ನುವ ಮಾತು ಸಾಮಾನ್ಯವಾಗಿದೆ. ಮಲೇರಿಯಾ ಹಾಗೂ  ಮಂಗಳೂರಿಗೆ  ಬಿಡದ ನಂಟು ಎಂಬಂತಾಗಿದೆ.
ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ  ಬಹುಮಹಡಿ ಕಟ್ಟಡಗಳು ದಿನಕ್ಕೊಂದರಂತೆ ತಲೆಎತ್ತುತ್ತಿವೆ. ನಿರ್ಮಾಣವಾದ ಹಾಗೂ ನಿರ್ಮಾಣವಾಗುತ್ತಿರುವ ಕಟ್ಟಡದ ಸಮೀಪದಲ್ಲಿ ಹಾಗೂ ಚರಂಡಿಗಳಲ್ಲಿ ನಿಂತ ನೀರಿನಿಂದ ಮಲೇರಿಯಾ ರೋಗಾಣುಗಳು ಉತ್ಪತ್ತಿಯಾಗುತ್ತವೆ. ಈ ಸೊಳ್ಳೆಗಳು ಒಮ್ಮೆಲೆ ಸುಮಾರು ೨೦೦೦ದಷ್ಟು ಮೊಟ್ಟೆಗಳಿಟ್ಟು ಮರಿಮಾಡುತ್ತವೆ.  ಮಳೆ ನಿರಂತರವಾಗಿದ್ದರೆ  ಮಲೇರಿಯಾ ಕಡಿಮೆಯಾಗಿರುತ್ತದೆ. ಈ ಸೊಳ್ಳೆಗಳು ಮನುಷ್ಯನಿಗೆ ಕಚ್ಚುವುದರಿಂದ ಮಲೇರಿಯಾ ಸೋಂಕು ಹರಡುತ್ತವೆ.
ಮಹಾನಗರ ವ್ಯಾಪ್ತಿಯಲ್ಲಿ ಮೇ ತಿಂಗಳಲ್ಲಿ ವರದಿಯಾದ ಮಲೇರಿಯಾ:
ಪಾಲಿಕೆ ವ್ಯಾಪ್ತಿಯಲ್ಲಿ ಮೇ ತಿಂಗಳಲ್ಲಿ ೫೦೦ಪ್ರಕರಣಗಳು  ವರದಿಯಾಗಿದೆ. ಅತಿ ಹೆಚ್ಚು ಕದ್ರಿ ವಠಾರ ಹಾಗೂ ಉರ್ವ-೫೦, ದೇರೆಬೈಲ್ ಪಶ್ಚಿಮ ವಲಯ -೪೯, ಅತ್ತಾವರ-೪೩, ಕಂಕನಾಡಿ-೪೨ ವರದಿಯಾಗಿದೆ. ಅತಿ ಕಡಿಮೆ ದೇರೆಬೈಲ್ ದಕ್ಷಿಣ -೧, ಪಂಜಿನಮೊಗೆರು-೫,  ಕೂಳೂರು-೬, ಕಾವೂರು-೭ ವರದಿಯಾಗಿದೆ. ಡೆಂಗ್ಯೂ ಜ್ವರ ನಗರದಲ್ಲಿ ಜನವರಿಯಿಂದ ಜೂನ್‌ವರೆಗೆ-೩೨ ಪ್ರಕರಣಗಳು ವರದಿಯಾಗಿದೆ.
ಏನಿದು ಆಕ್ಷನ್ ಪ್ಲ್ಯಾನ್?
ಪಾಲಿಕೆ ವತಿಯಿಂದ ಮಲೇರಿಯಾ ನಿಯಂತ್ರಣಕ್ಕೆ ಒಂದು ವಾರದಲ್ಲಿ ಕಾರ್ಯರಂಭ ಮಾಡುವ ಯೋಜನೆಯಾಗಿದೆ. ವಿವಿಧ ಆರೋಗ್ಯ ಇಲಾಖೆಗಳ ೪೩ ಕಾರ್ಯಕರ್ತರು, ಪಾಲಿಕೆಯ ಸಿಬ್ಬಂದಿಗಳು ಸೇರಿ ೭೫ ಮಂದಿಯ ತಂಡ ಇದಾಗಿದೆ. ಲೇಡಿಹಿಲ್, ಅತ್ತಾವರ, ಜೆಪ್ಪು, ಕದ್ರಿ ನಾಲ್ಕು ಕಡೆಗಳಲ್ಲಿ ಸಬ್‌ಸೆಂಟರ್‌ಗಳನ್ನಾಗಿ ಮಾಡಲಾಗುವುದು. ಮಲೇರಿಯಾದ ಕುರಿತು ಮಾಹಿತಿ ನೀಡುವವರು, ಔಷಧಿ ಸಿಂಪಡಿಸುವ ಹಾಗೂ ಕ್ಲೀನ್ ಮಾಡುವವರು ಸೇರಿ ಮೂರು ಜನರ ತಂಡವಿರುತ್ತದೆ. ಮಹಾನಗರ ಪಾಲಿಕೆಯ ೬೦ ವಾರ್ಡ್ ಪೈಕಿ  ೪೫ ವಾರ್ಡ್‌ಗಳಲ್ಲಿ ತಂಡ ಕಾರ್ಯ ನಿರ್ವಹಿಸುತ್ತದೆ. ಉಳಿದಂತೆ  ೧೫ ವಾರ್ಡ್‌ಗಳಲ್ಲಿ ಗ್ರಾಮೀಣ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತದೆ.
ಆಕ್ಷನ್ ಪ್ಲ್ಯಾನ್ ಕಾರ್ಯಕರ್ತರು ಬಹುಮಹಡಿ ಕಟ್ಟಡ, ನಿರ್ಮಾಣ ಹಂತದಲ್ಲಿರುವ ಕಟ್ಟಡ ಸೇರಿದಂತೆ ಪ್ರತಿಯೊಂದು ಮನೆಗೂ ತೆರಳಿ ರಕ್ತ ತಪಾಸಣೆ, ಮದ್ದು ಸಿಂಪಡಣೆಯನ್ನು ಮಾಡುತ್ತಾರೆ. ಪ್ರತಿ ಎಂಟು ದಿನಗಳಿಗೊಮ್ಮೆ ನಿಂತ ನೀರನ್ನು ಖಾಲಿ ಮಾಡುವ ಹಾಗೂ ಔಷಧಿಯನ್ನು ಸಿಂಪಡಿಸುವ ಕಾರ್ಯವನ್ನು ಇವರು ಮಾಡುತ್ತಾರೆ. ಪಾಲಿಕೆಯ ವತಿಯಿಂದ ಹೊಟೇಲ್, ವಲಸೆ ಕಾರ್ಮಿರನ್ನು ಮುಖ್ಯವಾಗಿ ಗಮನಿಸಿ ಮಾಹಿತಿಯನ್ನು ನೀಡಲಾಗುವುದು. ಕಮಿಷನರ್ ಈಗಾಗಲೇ ಬಹುಮಹಡಿ ಕಟ್ಟಡ ಮಾಲಕರಿಗೆ ಸ್ವಚ್ಚತೆಯನ್ನು ಕಾಪಾಡುವಂತೆ ಮನವಿಯನ್ನು ಮಾಡಿದ್ದು, ನಿರ್ಲಕ್ಷಿಸಿದಲ್ಲಿ  ಮುಂದಿನ ದಿನದಲ್ಲಿ ಹಂತ-ಹಂತವಾಗಿ ಪರವಾನಿಗೆ ರದ್ದುಮಾಡುವ ಕುರಿತಂತೆ ತಿಳಿಸಿದ್ದಾರೆ.
ಆಕ್ಷನ್ ಪ್ಲ್ಯಾನ್‌ಗೆ ಕಾರಣವಾದ ಅಂಶ:
ಮಲೇರಿಯಾ ಕುರಿತು ಈಗಾಗಲೇ ಜಾಗೃತಿ ಮೂಡಿಸುವ ಕಾರ್ಯವನ್ನು ಆಯೋಜಿಸಿದ್ದರು ಕೆಲವೊಂದು ಅಧಿಕಾರಿಗಳ  ನಿರ್ಲಕ್ಷ್ಯದಿಂದಾಗಿಯೇ ರೋಗಗಳು ಹೆಚ್ಚಾಗಿವೆ. ಪ್ರತಿಯೊಂದು ಸ್ಥಳಕ್ಕೆ ಅಧಿಕಾರಿಗಳನ್ನು ನೇಮಿಸಿದ್ದರೂ ನಗರದಲ್ಲಿರುವ ಬಂದರು ಪ್ರದೇಶದ ಮಹಿಳಾ ಅಧಿಕಾರಿಯೊಬ್ಬರ  ನಿರ್ಲಕ್ಷ್ಯದಿಂದಾಗಿ ಹಲವಾರು ಮಲೇರಿಯಾ ರೋಗಿಗಳು ಇದ್ದರೂ ಅದರ ಕುರಿತಂತೆ ಮಾಹಿತಿ ಸಂಗ್ರಹಿಸಲಾಗಿಲ್ಲವೆಂದು ದೂರಲಾಗಿದೆ.  ಮಲೇರಿಯಾ ರೋಗಾಣುಗಳ ಹೊಡೆದೊಡಿಸುವ ಹೊಗೆಯಂತ್ರಕ್ಕೆ ಬಳಲಾಗುವ ಡೀಸೆಲ್ ಹಾಗೂ ಪೆಟ್ರೋಲ್‌ನ್ನು ಕೆಲವೊಂದು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡ ಕಾರಣದಿಂದಲೇ ಪಾಲಿಕೆ ಅನಿವಾರ್ಯ ಸ್ಥಳಗಳಿಗೆ ಮಾತ್ರ ಈ ಕಾರ್ಯವನ್ನು ವ್ಯವಸ್ಥೆಗೊಳಿಸಲಾಗಿದೆ. ನಗರ ಪ್ರದೇಶದಲ್ಲಿ ಮಲೇರಿಯಾ ಕುರಿತ ಮಾಹಿತಿ ಹಾಗೂ ಪಾರದರ್ಶಕ ಚಿಕಿತ್ಸೆಗಾಗಿ ಆಕ್ಷನ್ ಪ್ಲ್ಯಾನ್ ತಯಾರಾಗಿದೆ. ಇದರಿಂದ ರೋಗಿಗಳ ಮಾಹಿತಿ ಹಾಗೂ ಅವ್ಯವಹಾರವನ್ನು  ತಡೆಗಟ್ಟಬಹುದಾಗಿದೆ. ಮೇ ತಿಂಗಳಲ್ಲಿ ೩೨೮ ವರದಿ ದಾಖಲಾಗಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಗುರಿಯಾಗಿಟ್ಟುಕೊಂಡು ಮಲೇರಿಯಾ ನಿಯಂತ್ರಣಕ್ಕಾಗಿ ಶ್ರಮಿಸಲಾಗುವುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
ಜ್ವರ ಬಂದಾಗ ರಕ್ತ ತಪಾಸಣೆ ಹಾಗೂ ಚಿಕಿತ್ಸೆಯ ಸ್ಥಳ:
*ಲಾಲ್‌ಬಾಗ್‌ನ ಮನಪಾ ಮಹಡಿ
*ಬಿಜೈ ಪತಂಜಲಿ ಯೋಗ ಕೇಂದ್ರದ  ಮುಂಭಾಗ
*ಲೇಡಿಹಿಲ್ ಹಾಗೂ ಜೆಪ್ಪು ವೃತ್ತದ ಸಮೀಪ
* ಕದ್ರಿ ಸಿಟಿ ಆಸ್ಪತ್ರೆ ಮುಂಬಾಗ
* ದೇರೆಬೈಲು-ಉರ್ವಮಾರ್ಕೆಟ್
ಸಮಯ: ಬೆ.೯ರಿಂದ ಮಧ್ಯಾಹ್ನ ೧ರವರೆಗೆ
            ಮ: ೩ರಿಂದ ಸಂಜೆ ೫.೩೦ರವರೆಗೆ





ದಕ್ಷಿಣ ಕನ್ನಡದಲ್ಲಿ ಸರಕಾರಿ ಶಾಲೆಯ ಗುಣಮಟ್ಟದ ಶಿಕ್ಷಣಕ್ಕಾಗಿ ವಿಶೇಷ ಯೋಜನೆ
-ಕೆ.ಎಸ್.ಶೆಟ್ಟಿ
ಕಳೆದ ಎರಡು ತಿಂಗಳಿನಿಂದ ವಾರಕ್ಕೆ ರೂ.೧೦೦ರಂತೆ ಸಂಪಾದನೆ ಮಾಡಿ ಬೆಳಿಗ್ಗೆ ೯ರಿಂದ ಸಂಜೆ ೫ ರವರೆಗೆ ದುಡಿದು ಶಾಲಾ ಶುಲ್ಕವನ್ನು ಹೊಂದಿಸಿಕೊಂಡು ಶಾಲೆಯ ಮೆಟ್ಟಿಲನ್ನೇರಿದ ಕಾಟಿಪಳ್ಳದ ಶಿವಕುಮಾರ್ ಈಗ  ೮ನೇ ತರಗತಿ ವಿದ್ಯಾರ್ಥಿ. ಬಡತನದ ಬೇಗುದಿಯಲ್ಲಿ ಶಾಲಾ ಶುಲ್ಕವನ್ನು ಹೊಂದಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಟೈಯ್ಲರಿಂಗ್ ಅಂಗಡಿಯಲ್ಲಿ ದುಡಿದ ಶಿವ ಪ್ರತಿಭಾವಂತ. ಶಾಲೆ ಪ್ರಾರಂಭವಾದಾಗ ಆತನ ಮುಖದಲ್ಲಿ ಏನೋ ಒಂದು ರೀತಿಯ ಸಂತೃಪ್ತತೆ. ಹಲವಾರು ಮಕ್ಕಳು ರಜೆಯಲ್ಲಿ ಛ್ಞ್ಜಿಟqs ಮಾಡಿದ್ದರೆ ಶಿವಕುಮಾರ್ ಮಾತ್ರ ತಂದೆ- ತಾಯಿಗೆ ಸಹಾಯ ಮಾಡಬೇಕು ಎನ್ನುವ ಗುಣವನ್ನು ತನ್ನ ೮ನೇ ತರಗತಿಯ ವಿದ್ಯಾರ್ಜನೆ ಕಾಲಘಟ್ಟದಲ್ಲಿಯೇ ಬೆಳೆಸಿಕೊಂಡಿದ್ದಾನೆ. ಆತನ ಕಪಟವಿಲ್ಲದ ಪುಟ್ಟ ಮನಸ್ಸಿನಲ್ಲಿ ಉದ್ಬವವಾದ ಗುಣವನ್ನು ಇಲ್ಲಿ ಪ್ರಶಂಸಿಸಲೇ ಬೇಕು. ಶಿಕ್ಷಣದೊಂದಿಗೆ ಮುಂದಿನ ದಿನದಲ್ಲಿ ವೃತ್ತಿಯನ್ನಾಗಿ ಕಸೂತಿ ಕೆಲಸವನ್ನು ಕಲಿಯುವ ಮಹತ್ವಾಕಾಂಕ್ಷೆ ಆತನದು. ತಂದೆ-ತಾಯಿಯರಿಗೆ ಸಹಾಯ ಮಾಡಬೇಕು ಎನ್ನುವ ಗುಣ ಒಂದೆಡೆಯಾದರೆ ಶಾಲಾ ಶುಲ್ಕವನ್ನು ಹೊಂದಿಸಿಕೊಂಡ ವಿದ್ಯಾರ್ಥಿ. ಈತ ಕೆಲಸ ಮಾಡಿರುವುದು ಕಾನೂನು ಬಾಹಿರ ಎನಿಸಬಹುದು. ೮ನೇ ತರಗತಿ ವಿದ್ಯಾರ್ಥಿಯು ೧೪ ವರ್ಷ ತಲುಪಿರುತ್ತಾನೆ. ಅದು ಕಾನೂನು ಬಾಹಿರವಂತೆನಿಸುವುದು ಶಾಲಾ ಜೀವನವನ್ನು ತೊರೆದು ಖಾಯಂ ಆಗಿ ವೃತ್ತಿ ಜೀವನವನ್ನು ಅವಲಂಬಿಸಿದ್ದರೆ ತಾನೇ? ಆದರೆ ಆತ ತನ್ನ ವಿದ್ಯಾದೆಸೆಯ ರಜಾ ಸಮಯದಲ್ಲಿ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಂಡಿದ್ದಾನೆ. ಇಂಥಹ ಹಲವಾರು ಮಕ್ಕಳು ರಾಜ್ಯದೆಲ್ಲೆಡೆ ಕಂಡುಬರುತ್ತಾರೆ.
ನಗರದ ಶಾರದಾ ವಿದ್ಯಾಲಯದಲ್ಲಿ ಕಲಿಯುತ್ತಿರುವ ಅವಳಿ ಮಕ್ಕಳಾದ ಪ್ರತೀಕ್ಷಾ, ಪ್ರೀತಮ್ ರಜೆಯಲ್ಲಿ ಬೆಂಗಳೂರು, ನಕ್ಸಲೈಟ್ ತಾಣವಾದ ಪಶ್ಚಿಮ ಘಟ್ಟಗಳ ಬುಡದಲ್ಲಿರುವ ಮದ್ರಾಡಿ, ತಾಯಿಯ ಊರು ಮೂಡಿಗೆರೆ, ಎಂಡೋಸಲ್ಫಾನ್ ಪೀಡಿತ ಪ್ರದೇಶ  ಅಜ್ಜನ ಮನೆಯಾದ ಕೊಕ್ಕಡವನ್ನು ಸುತ್ತಿ ಬಂದಿದ್ದೇವೆ. ಹಿಂದು ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಭಜನೆ, ಶ್ಲೋಕ, ಮಂಕುತಿಮ್ಮನ ಕಗ್ಗ, ಯೋಗಾಸನವನ್ನು ಕಲಿತು ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಆಟೋಟ, ವನ್ಯಜೀವಿ ತಾಣ ಪಿಲಿಕುಳಕ್ಕೂ ಹೋಗಿದ್ದೇವೆ. ಆದರೂ ಶಾಲೆ ಪ್ರಾರಂಭವಾಗುವುದು ಬೇಸರವಾಗುತ್ತಿದೆ. ಒಂದು ವಾರ ರಜೆ ಇದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ಅವಳಿ ಮಕ್ಕಳ ಅನಿಸಿಕೆ.
ಈ ರೀತಿಯಾಗಿ ಯಾವುದೇ ಮಕ್ಕಳನ್ನು ಕೇಳಿದರೂ ಶಾಲೆ ಪ್ರಾರಂಭವಾಗಿಯೇ ಬಿಟ್ಟಿತಾ...! ಎನ್ನುವ ಉದ್ಗಾರ ಬರುವುದು ಸಹಜ. ಬೇಸಿಗೆ ರಜೆಯನ್ನು ಸಂತೋಷದಿಂದ ಕಳೆದು ಶಾಲಾ ಜೀವನಕ್ಕೆ ಅಣಿಯಾಗಿ ರಾಜ್ಯ ಹಾಗೂ ಕೇಂದ್ರೀಯ ಶಿಕ್ಷಣ ಸಂಸ್ಥೆಯ  ಮಕ್ಕಳೆಲ್ಲಾ ಶಾಲೆಯ ಕಡೆ ಮುಖ ಮಾಡಿದ್ದಾರೆ. ಅನೇಕ ಮಕ್ಕಳು ಕಳೆದ ಬಾರಿಯ ಪರೀಕ್ಷೆಯನ್ನು ಉತ್ತಮವಾಗಿ ಮಾಡಿ ಫಲಿತಾಂಶ ಬಂದು ಶಾಲಾ ಜೀವನದ ಸಮಯ ಸಾರಿಣಿಯನ್ನು ಮರೆತು ಬೇಸಿಗೆಯ ರಜೆಯಲ್ಲಿ ತಮ್ಮದೇ ಆದ ಆಟದಲ್ಲಿ ತಲ್ಲೀನರಾಗಿ ಬಿಟ್ಟಿದ್ದರು. ಕೆಲವು ಮಕ್ಕಳು ಶಾಲೆಯಲ್ಲಿ ಬೇಸಿಗೆ ರಜೆ ಘೋಷಿಸಿದ್ದರೂ ಕೂಡ ಶಾಲೆಗೆ ಬಂದಿದ್ದಾರೆ ಆದರೆ ಸರಕಾರದ ಅಧಿನಿಯಮದಂತಲ್ಲ. ಮನೆಯವರ ಒತ್ತಾಯಕ್ಕೆ ಮಣಿದೋ ಅಥವಾ ಸ್ವ-ಇಚ್ಚೆಯಿಂದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ  ಮಕ್ಕಳಲ್ಲಿಯೂ ಕೂಡ ರಜೆಯನ್ನು ಸಂತೋಷವಾಗಿ ಕಳೆದುವೆಂಬ ಆನಂದ. ಉಳಿದ ಮಕ್ಕಳು ಕಳೆದ ಬಾರಿಯ ಬೇರೆ ಶಾಲೆಯ ಸ್ನೇಹಿತರೊಂದಿಗೆ ಆಟವಾಡಿದ ಸುಸಂದರ್ಭವನ್ನು ಮೆಲುಕು ಹಾಕುತ್ತಿದ್ದಾರೆ.
ನಗರದ ಮಕ್ಕಳು ಅಜ್ಜ-ಅಜ್ಜಿಯ ಮನೆಗೂ ಹಾಗೂ ಹಳ್ಳಿಯ ಮಕ್ಕಳು ಒಮ್ಮೆಯಾದರೂ ಪೇಟೆ ನೋಡುವ ಆಸೆಯಿಂದ ನೆಂಟರಿಷ್ಟರ ಮನೆಗೋ ಬಂದಿರುತ್ತಾರೆ. ಆದರೆ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು ಹೇಗಾದರೂ ಮಾಡಿ ಮುಂದಿನ ಶಾಲಾ ಜೀವನಕ್ಕೆ ಅನುಕೂಲವಾಗುವ ದೃಷ್ಠಿಯಿಂದ ಹೋಟೆಲ್‌ನಲ್ಲಿಯೋ, ಗ್ಯಾರೇಜ್‌ಗಳಲ್ಲಿಯೋ, ಗೇರು ಬೀಜ ತೋಟದಲ್ಲಿ  ಅವರಿಗೆ ಇಷ್ಟವಾದ ಅಥವಾ ಇಷ್ಟವಿಲ್ಲದ ಕೆಲಸವನ್ನು ಕಷ್ಟವಾದರೂ ಮಾಡುತ್ತಾರೆ. ತಿಂಗಳಾಂತ್ಯದಲ್ಲಿ ಸಿಗುವ ಅತ್ಯಲ್ಪ ಮೊತ್ತವನ್ನು ಹಿಡಿದು ತಂದೆ-ತಾಯಿಯೊಂದಿಗೆ ಅವರಿಗೆ  ಬೇಕಾದ ಶಾಲಾ ಬ್ಯಾಗ್, ಪುಸ್ತಕ, ಮಳೆಗಾಲಕ್ಕೆ ಅನುಕೂಲವಾಗುವ ಛತ್ರಿ, ಹೊಸ ಚಪ್ಪಲಿಯನ್ನು ಕೊಂಡು-ಕೊಂಡು ಶಾಲೆಗೆ ಬರುವ ಸಂಭ್ರಮ ತುಂಬಿದೆ.
ಇದರೆಡೆಯಲ್ಲಿ ತಂದೆ ತಾಯಿಗೆ ಆರ್‌ಟಿಐ ಕಾಯ್ದೆಯನ್ವಯ ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸುವುದೆಂಬ ಚಿಂತೆಯಾದರೆ, ಮಕ್ಕಳಿಗೆ ಎರಡು ತಿಂಗಳು ತಮ್ಮಿಂದ ದೂರವಿದ್ದ ಗೆಳೆಯ-ಗೆಳೆತಿಯರನ್ನು ನೋಡುವ ತವಕ. ಕೆಲವರಿಗೆ ಹೊಸ ಶಾಲೆಯಲ್ಲಿ ಹೊಸ ಗೆಳೆತನ ಅಪೇಕ್ಷಿಸುವ ತುಮುಲ. ದಿನ ಬೆಳಗಾದರೆ ಶಾಲೆಗೆ ಹೋಗಬೇಕು ಎನ್ನುವ ಆತಂಕ. ಸವಿನೆನಪುಗಳು ಮಾಸುವುದರೊಳಗೆ ಮತ್ತೆ ಮರುಕಳಿಸಿತು ಅದೇ ದಿನಚರಿ ಎನ್ನುವ ನಿರಾಸೆ.
ರಜೆಯಲ್ಲಿ ತಂದೆ ತಾಯಿಯ ಮಾತಿಗೆ ಕಿವಿಕೊಡದೆ ಬೆಟ್ಟದ ನೆಲ್ಲಿಕಾಯಿ, ಮಾವಿನಹಣ್ಣು, ಹಲಸಿನ ಹಣ್ಣು ಕೊಯ್ಯಲು ಹೋದದ್ದು, ಒಟ್ಟಿಗೆ ನದಿಯಲ್ಲಿ ಈಜಿದ್ದು ಒಂದೆ ಎರಡೇ ಹೀಗೆ ಅನೇಕ ಚಟುವಟಿಕೆಯಲ್ಲಿ ಭಾಗವಹಿಸಿದ್ದ  ಮಕ್ಕಳ ಮನದಲ್ಲಿ ಪುನಃ ರಗಳೆ ಪ್ರಾರಂಭವಾಯ್ತಲ್ಲ ಎನ್ನುವ ಭಾವನೆಯಾದರೆ, ತಂದೆ ತಾಯಿ ಮಾತ್ರ ಅಬ್ಬಾ ಎಂದು ನಿಟ್ಟುಸಿರು ಬಿಟ್ಟು ರಗಳೆ ಮುಗಿಯಿತಲ್ಲ ಎನ್ನುವ ಕಾಲ. ಸ್ವಚ್ಚಂದವಾಗಿ ಊರಿನ ಸುತ್ತಲೂ ಓಡಾಡುತ್ತಿದ್ದ ಮಕ್ಕಳಿಗೆ ಮಾತ್ರ ಇನ್ನೂ ಸ್ವಲ್ಪ ದಿನ ರಜೆ ಇರಬಾರದೆ ಎನ್ನುವ ಆಸೆ.
ಗುರುಗಳು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ಕಳಕಳಿಯನ್ನು ಹೊಂದಿದ್ದಾರೆ ಎನ್ನುವುದು ಸ್ಪಷ್ಟ. ಮಕ್ಕಳಿಗೆ ರಜೆ ನೀಡಿದ್ದರೂ ತಾವು ಮಾತ್ರ ಮಕ್ಕಳ ಸರ್ವತೋಮುಖ ಏಳ್ಗೆಗಾಗಿ ಶ್ರಮಿಸಿ,ಅವರ ಜೀವನದಲ್ಲಿ ತಮ್ಮ ಪ್ರಭಾವವನ್ನು  ಬೀರಿ, ಸುಂದರ ಜೀವನವನ್ನು ಹಾಗೂ ಶಾಲೆಯ ಕೀರ್ತಿಯನ್ನು ಏರಿಸುವುದು  ಹೇಗೆ ಎನ್ನುವ ದೃಷ್ಟಿಯಿಂದಲೇ ಒಂದು ದಿನ ಮುಂಚಿತವಾಗಿ ಶಾಲೆಗೆ ಆಗಮಿಸಿದ್ದಾರೆ.  ಮಕ್ಕಳು ಮಾತ್ರ ಭಾರದ ಪುಸ್ತಕದ ಮೂಟೆಯನ್ನು ಹೊತ್ತು ಶಾಲೆಗೆ ಹೊರಡುವಾಗ ಬೈಯ್ಯುವುದು ಸುಳ್ಳಲ್ಲ..ಆದಷ್ಟೂ ಬೇಗ ಬರಲಿ ರಜೆ ಎನ್ನುತ್ತಾ ಶಾಲೆಗೆ ಹೋಗುವ ಸಂಭ್ರಮ ಮಕ್ಕಳ ಮನದಲ್ಲಿ....ಅನೇಕ ಬಾರಿ ಶಾಲೆ ಪ್ರಾರಂಭದಂದು ವರುಣನ ಆಗಮನವಾಗುತ್ತಿತ್ತು. ಆದರೆ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ವರುಣದೇವನ ಆಗಮನವಾಗಿ ಶುಭ ಹರಸಿದ್ದಾನೆ.
ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ದಕ್ಷಿಣ ಕನ್ನಡದಲ್ಲಿ ವಿಶೇಷ ಯೋಜನೆ:
ಬಹುತೇಕ ಮಂದಿ ಖಾಸಗಿ ಶಾಲೆಯ ಭರಾಟೆಯಲ್ಲಿ ಸರಕಾರಿ ಶಾಲೆಗಳು ಗುಣಮಟ್ಟ ಕ್ಷೀಣಿಸುತ್ತಿದೆ ಎಂದು ಬೊಬ್ಬಿಡುತ್ತಿದ್ದಾರೆ. ಇದು ನಿಜವಾದರೂ ಎಸ್.ಎಸ್.ಎಲ್.ಸಿ ದ್ವಿತೀಯ ಹಾಗೂ ಪಿಯುಸಿಯಲ್ಲಿ ಪ್ರಥಮ ಶ್ರೇಣಿಯನ್ನು ಪಡೆದ  ದಕ್ಷಿಣ ಕನ್ನಡದಲ್ಲಿ ಹಲವಾರು ಮದ್ಯಮ ವರ್ಗದ ಜನತೆಯು ಆಶ್ರಯಿಸಿರುವುದು ಸರಕಾರಿ ಶಾಲೆಗಳನ್ನೇ ಎನ್ನುವುದು ಸ್ಪಷ್ಟ. ಸರಕಾರಿ ಶಾಲೆಗಳೇ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದು ಖಾಸಗಿ ಶಾಲೆಗೆ ಸಡ್ಡು ಹೊಡೆದಿರುವುದು ಗಮನಿಸಬೇಕಾದ ಅಂಶವಾಗಿದೆ. ದ.ಕ.ಜಿಲ್ಲೆಯಲ್ಲಿ ೨೦೧೨-೧೩ನೇ ಸಾಲಿನಲ್ಲಿ ೧ನೇ ತರಗತಿಗೆ ಸೇರ್ಪಡೆಯಾದ ಪುಟಾಣಿ ಮಕ್ಕಳಿಗೆ ಶೈಕ್ಷಣಿಕ ತೇರನ್ನು ಏರಿಸುವ ವಿಶಿಷ್ಟ ಕಾರ್ಯಕ್ರಮವನ್ನು ವಿವಿಧ ಶಾಲೆಗಳಲ್ಲಿ ಆಯೋಜಿಸಲಾಗಿದೆ. ಅಂಥ ಒಂದು ಶಾಲೆಯಲ್ಲಿ ನಡೆದ ಕಾರ್ಯಕ್ರಮವಿದು:
ಕುಳಾಯಿ  ಮೈರ್‍ಪಾಡಿಯ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಾದ ಒಂದನೇ ತರಗತಿ ಪುಟಾಣಿಗಳಿಗೆ ಶೈಕ್ಷಣಿಕ ರಥವೇರುವ ಸಂಭ್ರಮದೊಂದಿಗೆ ಬ್ಯಾಂಡ್ ವಾಲಗದೊಂದಿಗೆ  ಹಿರಿಯ ವಿದ್ಯಾರ್ಥಿಗಳು ಶಾಲಾ ಆವರಣಕ್ಕೆ ಬರಮಾಡಿಕೊಂಡರು. ಶಾಲಾ ಮುಖ್ಯದ್ವಾರದಲ್ಲಿ ಶಿಕ್ಷಕರು ಹೂ-ಪನ್ನೀರ ಸಿಂಚನದೊಂದಿಗೆ ಸ್ವಾಗತಿಸಿದರು. ಹೊಸದಾಗಿ ಸೇರ್ಪಡೆಯಾದ ಮಕ್ಕಳಿಗೆ ವಿಶೇಷವಾಗಿ ಗೌರವಿಸಿ ದಾನಿಗಳಿಂದ ಪುಸ್ತಕ ವಿತರಣೆ ಹಾಗೂ ಸಮವಸ್ತ್ರ ವಿತರಣೆ ಮಾಡಿಸಿದರು. ರಜೆಯ ಮಜವನ್ನು ಅನುಭವಿಸಿ ಬಂದ ಮಕ್ಕಳಲ್ಲಿ ಕುಶಲೋಪಚರಿಯನ್ನು ನಡೆಸಿ ಅಕ್ಷರ ದಾಸೋಹದ ಬಿಸಿಯೂಟದೊಂದಿಗೆ ಮೌನವಾಗಿದ್ದ ಶಾಲಾ ಆವರಣವು ಮಕ್ಕಳ ಸ್ವರದ ಅನುರಣನದೊಂದಿಗೆ ಎರಡು ತಿಂಗಳ ಮೌನ ಮುರಿದಿದೆ. ಈ ರೀತಿಯಾಗಿ ಮಕ್ಕಳಿಗೆ ವಿಶೇಷ ಆಹ್ವಾನ ನೀಡಿ ಶಾಲೆಗೆ ಶಿಕ್ಷಕರು ಬರಮಾಡಿಕೊಂಡಿದ್ದಾರೆ. ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಹೊಸ ಉತ್ಸಾಹದೊಂದಿಗೆ ಗುರುವೃಂದ ಕಾಯುತ್ತಿದೆ.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮೂಡಿಸಲು ಸಿದ್ದವಾಗಿರುವ ದಕ್ಷಿಣ ಕನ್ನಡದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂತಹುದೇ ಕ್ರಾಂತಿಯಾಗಲಿ.. ಆಲ್ ದಿ ಬೆಸ್ಟ್

ಅಭಿಪ್ರಾಯ:
ಪ್ರತಿಯೊಂದು ಶಾಲೆಯನ್ನು ಅಲಂಕಾರ ಮಾಡಿ ಹೊಸದಾಗಿ ಶಾಲೆಗೆ ಸೇರ್ಪಡೆಗೊಳ್ಳುವ ಮಕ್ಕಳಿಗೆ ಸ್ವಾಗತ ಮಾಡಲಾಗುವುದು. ಶಾಲಾಭಿವೃದ್ದಿ ಸಮಿತಿಯ ಸಭೆ ಕರೆದು ಶಾಲೆಯ ಅಭಿವೃದ್ಧಿಯ ಕುರಿತು ಚರ್ಚಿಸಲಾಗುವುದು. ಶಾಲಾ ಶಿಕ್ಷಕರು ಹಾಗೂ ಅಧಿಕಾರಿಗಳು ಶೈಕ್ಷಣಿಕ ಯೋಜನೆಗಳನ್ನು ರೂಪಿಸಿ ಉತ್ತಮ ಫಲಿತಾಂಶವನ್ನು ಪಡೆಯಲು ಪ್ರಯತ್ನಿಸಲಾಗುವುದು.
-ಮೋಸೆಸ್ ಜಯಶೇಖರ್-ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ

ದ.ಕ.ಜಿಲ್ಲೆಯಲ್ಲಿನ ೫೦೦೦ವಿದ್ಯಾರ್ಥಿಗಳಿಗೆ ಕೃಷಿ ದರ್ಶನವೆನ್ನುವ ಆಧುನಿಕ ಕೃಷಿ, ಹೈನುಗಾರಿಕೆಯ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ, ಆಯ್ದ ಶಾಲೆಗಳಲ್ಲಿ ೪ ನೇ ತರಗತಿಯಲ್ಲಿಯೂ ಕೂಡ ನಲಿ ಕಲಿಯನ್ನು ಅಳವಡಿಸಲಾಗುವುದು. ಜಿಲ್ಲೆಯಲ್ಲಿರುವ ಎಲ್ಲಾ ಸರಕಾರಿ ಶಾಲೆಗಳಲ್ಲಿ ಆವರಣ ಗೋಡೆಯನ್ನು ನಿರ್ಮಿಸಲಾಗುವುದು. ಪೀಠೋಪಕರಣಗಳನ್ನು ಒದಗಿಸಲಾಗುವುದು. ೬ನೇ ತರಗತಿಯಿಂದ ಇಂಗ್ಲೀಷ್ ಶಿಕ್ಷಣಕ್ಕಾಗಿ ೫೦ ಶಾಲೆಗಳನ್ನು ಗುರುತಿಸಿ ಸರಕಾರಕ್ಕೆ ಮನವಿಯನ್ನು ನೀಡಲಾಗಿದೆ. ಆದಷ್ಟು ಶೀಘ್ರದಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು.
ಎನ್.ಶಿವಪ್ರಕಾಶ-ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ