Wednesday 29 May 2013





ಹುಟ್ಟಿದ ಮಗುವಿನಲ್ಲಿ ಸ್ವಾಮಿಗಳು ಹೇಗಿರಬೇಕಪ್ಪಾ ಎನ್ನುವ ಪ್ರಶ್ನೆಯನ್ನು ಕೇಳಿದರೆ ಮಗುವು ಕೂಡ ಚೆನ್ನಾಗಿ ಉತ್ತರಿಸುತ್ತದೆ. ಕಷಾಯವನ್ನು ಧರಿಸಿದ ಅವರು ಸಮಾಜದಲ್ಲಿರುವ ಜನರಿಗೆ ಮಾರ್ಗದರ್ಶಕರಾಗಿರಬೇಕು. ಸತ್ಯಾಂಶ ಸಂಭೂತರಾಗಿರುವ ಅವರು ಕಾಮ-ಕ್ರೋಧ-ಲೋಭ-ಮೋಹ ಮದ-ಮಾತ್ಸರ್ಯವನ್ನು ತ್ಯಜಿಸಬೇಕು ಎನ್ನುವ ಸತ್ಯ ಎಲ್ಲರಿಗೂ ತಿಳಿದಿದೆ. ಇತ್ತೀಚಿಗೆ ಕಾವಿ ವಸ್ತ್ರವನ್ನು ಧರಿಸಿದ ಸ್ವಾಮಿಗಳ ಕಾಮಪುರಾಣ ಪತ್ರಿಕೆಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಎಲ್ಲಾ ಸ್ವಾಮೀಗಳ ಮೇಲಿನ ಗೌರವ ಕಳೆಗುಂದುತ್ತಿರುವ ಕಾಲಘಟ್ಟದಲ್ಲಿ ಕರಾವಳಿಯ ಸ್ವಾಮಿಗಳು ಆಗಬಹುದು ಎನ್ನುವ ಸ್ವಲ್ಪ ಮಟ್ಟಿನ ತಿಳುವಳಿಕೆ ನಮ್ಮದಾಗಿತ್ತು.
ಆದರೆ ಇಂದು ನಡೆದ ಘಟನೆಯಿಂದ ಇಂತಹ ಸ್ವಾಮೀಗಳು ಇದ್ದಾರಾ ಎನ್ನುವ ಸಂಶಯ ಮೂಡುತ್ತದೆ. ಈ ಸ್ವಾಮಿ ಸ್ವಾರ್ಥಿಯಾದರೆ....ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯ ಮೇಲಿಟ್ಟಿದ್ದ ಜನರ ನಂಬಿಕೆಗೆ ತಣ್ಣೀರು ಎರಚಿದರೆ..ಕೇವಲ ಮಠದ ಸುತ್ತಲಿರುವ ಜಾಗವನ್ನು ಅಕ್ರಮವಾಗಿ ಮಠಕ್ಕೆ ಬರೆಸಿಕೊಳ್ಳುವ ಇವರ ಸ್ವಾರ್ಥಕ್ಕೆ ಇಂದು ೬೫ ವರ್ಷದ ಶಾರದಮ್ಮ ಮತ್ತು ಈಶ್ವರ ಚಂದ್ರ ಶಾಸ್ತ್ರಿ ಬಲಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವಾಗ ಇವರು ಸ್ವಾಮಿಯೇ ಅಥವಾ ಗೂಂಡಾಗಿರಿಯನ್ನು ಸಾರುವ ಗೂಂಡಾ ಸ್ವಾಮೀಜಿಯೇ?
ಒಡಿಯೂರು ಸ್ವಾಮಿಗಳು ಈಶ್ವರ ಚಂದ್ರ ಶಾಸ್ತ್ರಿ ಅವರ ಜಾಗದ ಗಲಾಟೆಯನ್ನು ಸರಿಪಡಿಸುವುದರ ಹೊರತಾಗಿ ಅವರಿಗೆ ಬೆದರಿಕೆ ಹಾಕಲು ಮಂಗಳೂರಿನಿಂದ ಅರುಣ್, ಸಂತೂ ಅವರ ನೇತೃತ್ವದ ೧೦ ಜನರ ತಂಡವನ್ನು ಕರೆತಂದು ಹಲ್ಲೆ ನಡೆಸಿದರಲ್ಲ. ಈ ಸಂದರ್ಭದಲ್ಲಿ ೬೫ ವರ್ಷದ ಶಾರದಮ್ಮ ಎನ್ನುವ ವೃದ್ಧೆಯ ಮೇಲೂ ಕೈ ಎಸಗಿ ಆಸ್ಪತ್ರೆ ಸೇರುವಂತೆ ಮಾಡಿದರಲ್ಲ. ವಿಚಾರಿಸಿದ್ದಕ್ಕೆ ತಕರಾರು ಮಾಡಿದರೆ ಜೀವ ತೆಗೆಯುತ್ತೇವೆ ಎನ್ನುವ ಬೆದರಿಕೆಯೂ ಕೂಡ ಹಾಕಿದ್ದಾರೆ. ಹಿಂದೊಮ್ಮೆ ಶ್ರೀನಿವಾಸ ಭಟ್ಟರ ಜಮೀನಿನ ವಿಷಯದಲ್ಲಿಯೂ ಕೂಡ ಗಲಾಟೆ ಸಂಭವಿಸಿದ್ದು, ಪೊಲೀಸ್ ದೂರು ದಾಖಲಿಸಿದ್ದರೂ, ಯಾವುದೇ ಪರಿಹಾರ ದೊರಕಿಲ್ಲ.
ಒಡಿಯೂರು ಭಕ್ತರಿಗೆ ಬೇಸರವಾಗಬಹುದು...ಸ್ವಾಮೀಜಿಗಳು ಹೀಗೆ ಇದ್ದಾರಾ ಎನ್ನುವುದಾಗಿ..ಅದಕ್ಕೆ ಅಲ್ಲವೇ ಕುರುಡು ಕಾಂಚಾಣ ಕುಣಿಯುತ್ತಲಿತ್ತು..ಕಾಲಿಗೆ ಬಿದ್ದೊರ ತುಳಿಯುತ್ತಲಿತ್ತು ಎಂದಿರುವುದು...
ಸ್ವಾಮೀಗಳೇ ನಿಮಗೆ ಗೌರವಕ್ಕೆ ಹಾಗೂ ಕಾವಿ ಬಟ್ಟೆಯನ್ನು ಧರಿಸಿರುವುದಕ್ಕೆ ನೀವು ಮಾಡುವ ಈ ಕಾರ್ಯ ನ್ಯಾಯವೇ...?

No comments:

Post a Comment