ಅವಿಭಜಿತ ದಕ್ಷಿಣ ಕನ್ನಡ-ಮತ್ತು ಉಡುಪಿ ವಿಧಾನ ಸಭಾ ಕ್ಷೇತ್ರ ಪರಿಚಯ:
ರಾಜ್ಯದ ಮೂರು ಕರಾವಳಿ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಕೃಷಿ ಪ್ರಧಾನವಾದ ಜಿಲ್ಲೆಗಳಾಗಿವೆ. ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿರುವ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬ್ಯಾಂಕಿಂಗ್ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಪ್ರಗತಿ ಸಾಸಿದೆ. ಇತ್ತೀಚಿಗಿನ ವರ್ಷಗಳಲ್ಲಿ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಕೂಡ ಅಭಿವೃದ್ಧಿಯತ್ತ ಸಾಗುತ್ತಿರುವ ಜಿಲ್ಲೆ ಇದಾಗಿದೆ. ಇಲ್ಲಿ ಶೈಕ್ಷಣೀಕವಾಗಿ ಪ್ರಗತಿ ಹೊಂದಿದ್ದು, ದೂರದ ಇತರ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಾರೆ ಎನ್ನುವುದಕ್ಕೆ ಇಲ್ಲಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಪ್ರತಿವರ್ಷ ಇತರರಿಗೆ ಬಿಟ್ಟುಕೊಡದ ಪಿಯುಸಿ ಮತ್ತು ೧೦ ತರಗತಿಯ ಫಲಿತಾಂಶಗಳು. ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಇಲ್ಲಿನ ಜನರ ಜೀವನ ಶೈಲಿ, ಆಚರಿಸುವ ಧಾರ್ಮಿಕ-ಆಚರಣೆಗಳಿಂದಾಗಿ ರಾಜ್ಯದಲ್ಲಿಯೇ ಗುರುತಿಸಿಕೊಂಡಿದೆ. ತುಳುನಾಡಿನ ಗಂಡುಕಲೆಯೆನಿಸಿಕೊಂಡ ಯಕ್ಷಗಾನದಿಂದ ದೇಶ ವಿದೇಶದಲ್ಲಿಯೇ ಗುರುತಿಸಿಕೊಂಡು ಅಮೇರಿಕಾದಲ್ಲಿ ನಡೆಯುವ ಅಕ್ಕಾ ಸಮ್ಮೇಳನದಲ್ಲಿ ಪ್ರದರ್ಶನಗೈದಿದೆ. ತುಳು ಪಾಡ್ದನ, ಭೂತಕೋಲ, ಕೋಳಿ ಅಂಕ, ಕಂಬಳ ಇತ್ಯಾದಿ ಒಂದೆ ಎರಡೇ ತುಳುನಾಡಿನ ಸಾಂಸ್ಕೃತಿಕ ಸೊಗಡನ್ನು ಬಣ್ಣಿಸಲು ಸಾಧ್ಯವಿಲ್ಲ. ಇತರ ಪ್ರದೇಶಗಳಿಗೆ ಹೋಲಿಸಿದರೆ ಕರಾವಳಿ ಎಂದಾಕ್ಷಣ ನೀವು ಬುದ್ದಿವಂತರು ಮರಾಯ್ರೆ ಎನ್ನುವ ಮಾತುಗಳು ಸರ್ವೇ ಸಾಮಾನ್ಯವಾಗಿದೆ.
ಮೇ.೫ ರಂದು ನಡೆಯುವ ವಿಧಾನ ಸಭಾ ಚುನಾವಣೆಯ ಬಿಸಿ ರಾಜ್ಯದಲ್ಲಿಯೇ ಮಾತ್ರವಲ್ಲದೇ ಕರಾವಳಿಯ ೨ ಜಿಲ್ಲೆಗಳಲ್ಲಿಯೂ ವ್ಯಾಪಿಸಿದೆ. ಎಲ್ಲಾ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕೆನ್ನುವ ನೆಲೆಯಲ್ಲಿ ತೀವ್ರ ಪೈಪೋಟಿಯ ಬಿರುಸಿನ ಪ್ರಚಾರ ಕೈಗೊಳ್ಳುತ್ತಿವೆ. ಆ ನಿಟ್ಟಿನಲ್ಲಿ ಸಂಕ್ಷಿಪ್ತವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಸಭಾ ಕ್ಷೇತ್ರದ ಕಿರು ಪರಿಚಯ:
ದಕ್ಷಿಣ ಕನ್ನಡ ಒಟ್ಟು ೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಸುಮಾರು ೧೪.೭೦ ಲಕ್ಷ ಮತದಾರರಿದ್ದಾರೆ. ಇದರಲ್ಲಿ ಅರ್ಧಾಂಶಕ್ಕಿಂತಲೂ ಅಕ ಮಹಿಳೆಯರಾಗಿದ್ದಾರೆ. ೧೯೫೭ರಿಂದ ೨೦೦೮ ರವರೆಗೆ ಜಿಲ್ಲೆಯಲ್ಲಿ ೧೧ವಿಧಾನ ಸಭಾ ಚುನಾವಣೆಗಳು ನಡೆದಿವೆ. ಬಹುತೇಕ ಪುರುಷರೇ ರ್ಸ್ಪಗಳು. ವಿಜೇತರು ಕೂಡ ಅವರೇ. ಈವರೆಗೆ ಕೇವಲ ನಾಲ್ಕು ಮಂದಿ ಮಹಿಳೆಯರು ಮಾತ್ರ ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚಿಗಿನ ರಾಜಕೀಯ ವಿದ್ಯಾಮಾನಗಳಲ್ಲಿ ಜಾತಿ ರಾಜಕೀಯ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದ್ದರೂ, ದಕ್ಷಿಣ ಕನ್ನಡ ಮಾತ್ರ ಇದಕ್ಕೆ ಹೊರತಾಗಿದೆ. ಇಲ್ಲಿನ ಜನರು ಜಾತಿಗಿಂತ ನೀತಿ, ತತ್ವ ಸಿದ್ದಾಂತ ಮತ್ತು ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಇತರ ಪ್ರದೇಶಗಳಂತೆ ಇಲ್ಲಿನ ಮತದಾರ ಜಾತಿಗೆ ಮನ್ನಣೆ ನೀಡಿರುವುದು ಇಲ್ಲಿ ಕಡಿಮೆಯಾಗಿದೆ. ರಾಜಕೀಯ ಪಕ್ಷಗಳ ಬಲದಿಂದ ಅತಿ ಸಣ್ಣ ಸಮುದಾಯದ ಅಭ್ಯರ್ಥಿಗಳು ಕೂಡ ಇಲ್ಲಿ ನಿರಾಯಾಸವಾಗಿ ಗೆಲುವು ಸಾಸಿದ್ದಾರೆ.
ದಕ್ಷಿಣ ಕನ್ನಡದ ೮ ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಅಂದರೆ ಮಂಗಳೂರು, ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ ಮತ್ತು ಮೂಡಬಿದ್ರೆ ಕ್ಷೇತ್ರಗಳು ಸಮುದ್ರ ತೀರಕ್ಕೆ ತಾಗಿಕೊಂಡಿವೆ. ಉಳಿದಂತೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ಇತರ ನಾಲ್ಕು ಕ್ಷೇತ್ರಗಳು.
ಮಂಗಳೂರು:
ಮಂಗಳೂರು ವಿಧಾನಸಭಾ ಕ್ಷೇತ್ರ ಸರ್ವ ಧರ್ಮ ಸಮನ್ವಯದ ಅಪೂರ್ವ ಪ್ರದೇಶ. ೧೫-೧೬ ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ದ ಸಮರ ಸಂಘಟಿಸಿ, ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದ ಉಳ್ಳಾಲದ ರಾಣಿ ಅಬ್ಬಕ್ಕನ ಗೌರವಾರ್ಥ ಪ್ರತಿಮೆಯನ್ನು ಉಳ್ಳಾಲದಲ್ಲಿ ಸ್ಥಾಪಿಸಲಾಗಿದೆ. ರಾಣಿ ಅಬ್ಬಕ್ಕ ಪೂಜಿಸುತ್ತಿದ್ದ ಸೋಮೇಶ್ವರದ ಸೋಮನಾಥ ದೇವಾಲಯ ಮತ್ತು ಉಳ್ಳಾಲ ಸೈಯದ್ ಮದನಿ ದರ್ಗಾ ಇಲ್ಲಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳು. ಮಂಗಳೂರು ವಿಶ್ವವಿದ್ಯಾನಿಲಯ, ಕೆ.ಎಸ್.ಹೆಗ್ಡೆ ಆಸ್ಪತ್ರೆ ಮೆಡಿಕಲ್ ಕಾಲೇಜುಗಳು ಹಾಗೂ ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳು ಸೇರಿದಂತೆ ಕೆಲವು ಪ್ರಸಿದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
ಕ್ಷೇತ್ರದಲ್ಲಿ ಸುಮಾರು ೧.೭೦ಲಕ್ಷ ಮತದಾರರಿದ್ದಾರೆ. ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಅಕವಾಗಿದೆ. ಸತತ ಎರಡು ಬಾರಿ ಕಾಂಗ್ರೆಸ್‌ನಿಂದ ಜಯಗಳಿಸಿರುವ ಯುವಶಾಸಕ ಯು.ಟಿ.ಖಾದರ್ ಈ ಸಲ ಮೂರನೇ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ. ಅವರಿಗೆ ಪ್ರತಿರ್ಸಯಾಗಿ ಚಂದ್ರಹಾಸ್ ಉಳ್ಳಾಲ್ ಕಣದಲ್ಲಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರ:
ಮಂಗಳೂರು ನಗರ ದಕ್ಷಿಣ ಕ್ಷೇತ್ರ ಮಂಗಳೂರು ಮಹಾನಗರ ಪಾಲಿಕೆಯ ೬೦ ವಾರ್ಡ್‌ಗಳ ಪೈಕಿ ೩೮ ವಾರ್ಡ್‌ಗಳನ್ನೊಳಗೊಂಡಿದೆ. ಅತ್ಯಾಧುನಿಕವಾಗಿ ರೂಪುಗೊಳ್ಳುತ್ತಿರುವ ಮಂಗಳೂರು ನಗರವನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಸುಮಾರು ೨ ಲಕ್ಷ ಮತದಾರರಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ, ಅಲೋಶಿಯಸ್ ಚಾಪೆಲ್, ಜೋಡುಪಳ್ಳಿ ದರ್ಗಾ ಕುದ್ರೋಳಿ ಸೇರಿದಂತೆ ಇತರ ಹಲವಾರು ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಈ ಕ್ಷೇತ್ರದಲ್ಲಿ ರಾಜ್ಯ ವಿಧಾನ ಸಭೆಯ ಉಪಸಭಾಪತಿಯಾಗಿರುವ ಎನ್.ಯೋಗೀಶ್ ಭಟ್ ಸತತ ನಾಲ್ಕು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಇಲ್ಲಿ ಜಯಗಳಿಸಿದ್ದಾರೆ. ಈ ಸಲ ೫ ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಕಣಕ್ಕಿಳಿದಿದ್ದಾರೆ. ಇವರಿಗೆ ಪ್ರತಿರ್ಸ್ಪಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಜೆ.ಆರ್.ಲೋಬೊ ಪ್ರಥಮ ಬಾರಿಗೆ ಚುನಾವಣಾ ಕಣದಲ್ಲಿದ್ದಾರೆ. ಇವರು ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಮಂಗಳೂರು ನಗರ ಉತ್ತರ:
ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ಮಹಾನಗರ ಪಾಲಿಕೆಯ ೨೨ ವಾರ್ಡ್‌ಗಳನ್ನು ಒಳಗೊಂಡಿದೆ. ಕರ್ನಾಟಕ ಕರಾವಳಿಯ ಪ್ರಗತಿಯ ಹೆಬ್ಬಾಗಿಲು ಎನ್ನುವ ಪ್ರತೀತಿ ಪಡೆದಿರುವ ನವ ಮಂಗಳೂರು ಬಂದರು, ಸುರತ್ಕಲ್‌ನ ಎನ್‌ಐಟಿಕೆ ಸಂಸ್ಥೆ ಹಾಗೂ ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಎಂಸಿಎಫ್ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
ಸುಮಾರು ೨ ಲಕ್ಷ ಮತದಾರರನ್ನು ಹೊಂದಿರುವ ಈ ಕ್ಷೇತ್ರವನ್ನು ಸತತ ಎರಡು ಬಾರಿ ಬಿಜೆಪಿಯ ಕೃಷ್ಣ ಜೆ.ಪಾಲೆಮಾರ್ ಪ್ರತಿನಿಸಿದ್ದಾರೆ. ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಸದನದಲ್ಲಿ ನೀಲಿ ಚಿತ್ರ ನೋಡಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಲ ಮೂರನೇ ಭಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸರ್ಧೆಗೆ ಇಳಿದಿದ್ದಾರೆ. ಇವರಿಗೆ ಪ್ರತಿರ್ಸ್ಪಯಾಗಿ ಕಾಂಗ್ರೆಸ್‌ನ ಮೊದಿನ್ ಬಾವ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಅಕವಾಗಿದ್ದಾರೆ. ಇಲ್ಲಿ ಮುಸ್ಲಿಂ ಸಂಖ್ಯೆ ವಿಪರೀತವಾಗಿದ್ದು, ಮುಸ್ಲಿಂ ಅಭ್ಯರ್ಥಿ ಕಣದಲ್ಲಿರುವುದರಿಂದ ಇಲ್ಲಿ ಎಸ್‌ಡಿಪಿಐ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಗೆಲುವು ಯಾರ ಕಡೆಗಾಗಲಿದೆ ಎನ್ನುವುದನ್ನು ನಿರೀಕ್ಷಿಸುವುದು ಕಷ್ಟಸಾದ್ಯ.
ಮೂಡಬಿದ್ರೆ:
ಜೈನ ಕಾಶಿಯೆಂದೆ ಪ್ರಸಿದ್ದಿ ಪಡೆದಿರುವ ಮೂಡಬಿದ್ರೆ ಮಂಗಳೂರು ತಾಲೂಕಿನಲ್ಲಿ ಬರುವ ಮತ್ತೊಂದು ವಿಧಾನ ಸಭಾ ಕ್ಷೇತ್ರ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಸಾವಿರ ಕಂಬದ ಬಸದಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಎಂಆರ್‌ಪಿಎಲ್ ತೈಲ ಸಂಸ್ಕಾರಣಾಗಾರ ಸೇರಿದಂತೆ ನುಡಿಸಿರಿಯ ಮೂಲಕ ರಾಜ್ಯಾದ್ಯಂತ ಮನೆಮಾತಾಗಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯು ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
ಕಾಂಗ್ರೆಸ್ ಪಕ್ಷದ ಕೆ.ಅಭಯಚಂದ್ರ ಜೈನ್ ಸತತವಾಗಿ ಮೂರು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಬಾರಿ ಮತ್ತೆ ನಾಲ್ಕನೇ ಸಲ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರಿಗೆ ಪ್ರತಿರ್ಸ್ಪಯಾಗಿ ಬಿಜೆಪಿಯಿಂದ ಉಮನಾಥ್ ಕೋಟ್ಯಾನ್ ಕಣದಲ್ಲಿದ್ದಾರೆ. ರಾಜಕೀಯವಾಗಿ ಅನುಭವವಿಲ್ಲದಿದ್ದರೂ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅನೇಕ ಸಭೆ-ಸಮಾರಂಭಗಳಲ್ಲಿ ಭಾಗವಹಿಸಿದ ಕೀರ್ತಿ ಇವರಿಗಿದೆ. ಅಲ್ಲದೇ ಈ ಕ್ಷೇತ್ರದಲ್ಲಿ ಬಹಳ ಸಜ್ಜನ ಎನ್ನುವ ಹೆಸರು ಇವರ ಪಾಲಿಗಿದೆ.
ಬಂಟ್ವಾಳ:
ಬಂಟ್ವಾಳ ವಿಧಾನಸಭಾ ಕ್ಷೇತ್ರ ನೇತ್ರಾವತಿ ನದಿಯ ಇಕ್ಕೆಲಗಳಲ್ಲಿ ಹರಡಿಕೊಂಡಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ಮತ್ತು ಕಾರೀಂಜೇಶ್ವರ ಕ್ಷೇತ್ರ ವ್ಯಾಪ್ತಿಯ ಪ್ರಮುಖ ದೇವಸ್ಥಾನಗಳು. ಕೃಷಿ ಮತ್ತು ವ್ಯಾಪಾರ ಕೇಂದ್ರಿತವಾದ ಈ ಕ್ಷೇತ್ರದಲ್ಲಿ ಸುಮಾರು ೧.೯೬ ಲಕ್ಷ ಮತದಾರರಿದ್ದಾರೆ. ಕ್ಷೇತ್ರ ಬಹುತೇಕ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿದೆ. ಕ್ಷೇತ್ರದ ಶಾಸಕರಾಗಿರುವ ಕಾಂಗ್ರೆಸ್‌ನ ಬಿ.ರಮಾನಾಥ ರೈ ಐದು ಬಾರಿ ಬಂಟ್ವಾಳವನ್ನು ಪ್ರತಿನಿಸಿದ್ದಾರೆ. ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಇವರಿಗೆ ಪ್ರತಿರ್ಸ್ಪಯಾಗಿ ಆರ್‌ಎಸ್‌ಎಸ್‌ನ ಸ್ವಯಂಸೇವಕನೆಂದು ಬಿಂಬಿತನಾಗಿ, ಸಾವಯವ ಕೃಷಿಯ ಮೂಲಕ ಜಿಲ್ಲೆಯಲ್ಲಿ ಮನೆಮಾತಾಗಿರುವ ಉಳೆಪ್ಪಾಡಿ ಗುತ್ತು ರಾಜೇಶ್ ನಾಕ್ ಬಿಜೆಪಿಯಿಂದ ರ್ಸ್ಪಸುತ್ತಿದ್ದಾರೆ. ರಾಜಕೀಯ ಅನುಭವವಿಲ್ಲದಿದ್ದರೂ, ಸ್ವಉದ್ಯಮಿಯಾಗಿರುವ ಇವರು ರೈಗಳನ್ನು ಸೋಲಿಸಿಯಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಬೆಳ್ತಂಗಡಿ:
ಬೆಳ್ತಂಗಡಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದ ಕೆಲವು ಪ್ರದೇಶ ನಕ್ಸಲ್ ಬಾಧೆಗೊಳಗಾಗಿದೆ. ಹಚ್ಚ-ಹಸಿರಿನಿಂದ ಕೂಡಿರುವ ಈ ಕ್ಷೇತ್ರದಲ್ಲಿ ಅಡಿಕೆ, ತೆಂಗು, ರಬ್ಬರ್ ಮತ್ತು ಭತ್ತ ಪ್ರಮುಖ ಬೆಳೆಯಾಗಿದೆ. ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ದೇಶಕ್ಕೆ ಪರಿಚಿತವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ಈ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
೧೯೫೭ರಲ್ಲಿ ಈ ಕ್ಷೇತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನವರ್ಮ ಹೆಗ್ಗಡೆ ಪ್ರತಿನಿಸಿದ್ದರು. ಕಳೆದ ೨೪ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಬಂಗೇರ ಸಹೋದರರು ಪರಸ್ಪರ ರ್ಸಗಳಾಗಿದ್ದರು. ಈ ಬಾರಿ ಅದು ಅಂತ್ಯವಾಗಿದೆ. ಮೂರು ಬಾರಿ ಶಾಸಕರಾಗಿರುವ ವಸಂತ ಬಂಗೇರ ಮತ್ತೆ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಕಣದಲ್ಲಿದ್ದಾರೆ. ಅವರ ವಿರುದ್ದ ಬಿಜೆಪಿಯಿಂದ ರ್ಸ್ಪಸುತ್ತಿದ್ದ ಸಹೋದರ ಪ್ರಬಾಕರ ಬಂಗೇರ ಈ ಬಾರಿ ರ್ಸಸುತ್ತಿಲ್ಲ. ಬಿಜೆಪಿಯಿಂದ ಈಬಾರಿ ರಂಜನ್ ಗೌಡ ಯುವಕ ರ್ಸ್ಪಸುತ್ತಿದ್ದಾರೆ.
ಪುತ್ತೂರು:
ಪುತ್ತೂರು ವಿಧಾನ ಸಭಾ ಕ್ಷೇತ್ರ ಕಂದಾಯ ಉಪ ವಿಭಾಗವನ್ನು ಹೊಂದಿದೆ. ಅಡಿಕೆ ಮತ್ತು ರಬ್ಬರ್ ಇಲ್ಲಿನ ಪ್ರಮುಖ ಬೆಳೆಗಳು. ಪುತ್ತೂರಿನ ಮಹಾಲಿಂಗೇಶ್ವರ ಮತ್ತು ಉಪ್ಪಿನಂಗಡಿಯ ಸಹಸ್ರ ಲಿಂಗೇಶ್ವರ ಪ್ರಮುಖ ದೇವಸ್ಥಾನಗಳು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಎರಡು ಬಾರಿ ಪುತ್ತೂರು ಕ್ಷೇತ್ರವನ್ನು ಪ್ರತಿನಿಸಿದ್ದರು. ಈ ಕ್ಷೇತ್ರದಿಂದ ಇಬ್ಬರು ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ.
ಈಗ ಶಾಸಕಿಯಾಗಿರುವ ಮಲ್ಲಿಕಾ ಪ್ರಸಾದ್ ಈ ಬಾರಿ ಕಣದಿಂದ ಹಿಂದೆ ಸರಿದಿದ್ದಾರೆ. ೨೦೦೪ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಟಿ.ಶಕುಂತಲಾ ಶೆಟ್ಟಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಸಂಜೀವ ಮಠಂದೂರು ರ್ಸ್ಪಸುತ್ತಿದ್ದಾರೆ. ಕ್ಷೇತ್ರದಲ್ಲಿ ಸುಮಾರು ೧.೮೦ಲಕ್ಷ ಮತದಾರರಿದ್ದಾರೆ.
ಸುಳ್ಯ:
ಕೊಡಗು ಜಿಲ್ಲೆಗೆ ತಾಗಿಕೊಂಡಿರುವ ವಿಧಾನಸಭಾ ಕ್ಷೇತ್ರ ಸುಳ್ಯ. ರಾಜ್ಯದಲ್ಲಿ ಅತ್ಯಕ ಆದಾಯವಿರುವ ಮುಜರಾಯಿ ಇಲಾಖೆಯ ಅನದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಅಡಿಕೆ ಮತ್ತು ರಬ್ಬರ್ ಇಲ್ಲಿನ ಪ್ರಮುಖ ಬೆಳೆಯಾಗಿದೆ.
ಸುಳ್ಯ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿದ್ದು, ಬಿಜೆಪಿಯ ಎಸ್ ಅಂಗಾರ ಸತತವಾಗಿ ನಾಲ್ಕು ಬಾರಿ ಇಲ್ಲಿಂದ ಚುನಾಯಿತರಾಗಿದ್ದಾರೆ. ಈ ಸಲ ಮತ್ತೆ ಅದೃಷ್ಟ ಪರೀಕ್ಷಿಸಲು ಚುನಾವಣಾ ಕಣದಲ್ಲಿದ್ದಾರೆ. ಇವರಿಗೆ ಪ್ರತಿರ್ಸ್ಪಯಾಗಿ ಕಾಂಗ್ರೆಸ್‌ನಿಂದ ಬಿ.ರಘು ಕಣದಲ್ಲಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಹಲವಾರು ದೇವಸ್ಥಾನಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬೀಚ್‌ಗಳು ಕಾಣಸಿಗುತ್ತವೆ. ಅಂತೆಯೇ ಉಡುಪಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಿದ್ದು, ಕಾಪು, ಉಡುಪಿ, ಕಾರ್ಕಳ, ಕುಂದಾಪುರ ಮತ್ತು ಬೈಂದೂರುಗಳಾಗಿವೆ.
ಕಾಪು ಕ್ಷೇತ್ರ:
ಕಾಪು ಬೀಚ್, ಮಾರಿಯಮ್ಮ ದೇವಸ್ಥಾನಗಳಿಂದ ಪ್ರಸಿದ್ದಗೊಂಡಿದ್ದು, ನೂತನವಾಗಿ ಯುಪಿಸಿಎಲ್ ವಿದ್ಯುತ್ ಘಟಕ ಸ್ಥಾಪನೆಗೊಂಡು ರಾಜ್ಯದಾದ್ಯಂತ ಜನಜನಿತವಾಗಿದೆ. ಕಾಪು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸಾಂಸದರಾಗಿ ಆಯ್ಕೆಗೊಂಡಿದ್ದ ವಿನಯ ಕುಮಾರ್ ಸೊರಕೆ ಈ ಬಾರಿ ಕಾಪು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ರ್ಸ್ಪಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ವಸಂತ ವಿ.ಸಾಲ್ಯಾನ್ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಬಿಜೆಪಿಯಿಂದ ಜಯಗಳಿಸಿದ್ದ ಲಾಲಾಜಿ ಮೆಂಡನ್ ಈಬಾರಿ ಬಿಜೆಪಿಯಿಂದ ರ್ಸ್ಪಸುತ್ತಿದ್ದಾರೆ. ಕಾಪು ಕ್ಷೇತ್ರ ಮೂವರು ಘಟಾನುಗಟಿಗಳಾಗಿದ್ದು, ವಿಜಯ ಮಾಲಿಕೆ ಯಾರಿಗೆ ದೊರೆಯುತ್ತದೆ ಎಂದು ಕಾದು ನೋಡಬೇಕಿದೆ.
ಉಡುಪಿ:
ಉಡುಪಿ ನಗರ ಸಭೆ, ಜಿಲ್ಲಾ ಪಂಚಾಯತ್‌ಗಳು ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಹಲವು ವರ್ಷಗಳಿಂದ ಬಿಜೆಪಿಯ ಸುರ್ಪಯಲ್ಲಿದ್ದ ನಗರಸಭೆಯನ್ನು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದುಕೊಂಡಿದೆ. ಮಲ್ಪೆ ಬೀಚ್, ಶ್ರೀಕೃಷ್ಣ ಮಠ, ಮಣಿಪಾಲ ವಿಶ್ವವಿದ್ಯಾನಿಲಯ ಹಾಗೂ ಆಸ್ಪತ್ರೆಗಳನ್ನು ಒಳಗೊಂಡಿದೆ. ಎರಡು ಬಾರಿ ಶಾಸಕರಾಗಿದ್ದ ಬಿಜೆಪಿಯ ರಘುಪತಿ ಭಟ್ ಜನಪರ ಕಾರ್ಯಗಳನ್ನು ಮಾಡಿದ್ದರೂ, ನೀಲಿ ಚಿತ್ರ ಹಗರಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಅವರ ಸ್ಥಾನವನ್ನು ತುಂಬಲು ಸುಧಾಕರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಎದುರಾಳಿ ಯುವ ಉದ್ಯಮಿ ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಕಣದಲ್ಲಿದ್ದಾರೆ.
ಕಾರ್ಕಳ:
ಗೋಮಟೇಶ್ವರನಿಂದಲೇ ಪ್ರಸಿದ್ದಿಯಾದ ಕಾರ್ಕಳದಲ್ಲಿ ತಾಲೂಕು ಕೇಂದ್ರವಾಗಿದ್ದು, ಹಲವಾರು ಶಿಕ್ಷಣ ಸಂಸ್ಥೆಗಳಿವೆ. ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ಬಾರಿ ಆಯ್ಕೆಗೊಂಡ ಗೋಪಾಲ ಭಂಡಾರಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದಾರೆ. ಒಮ್ಮೆ ಇದೆ ಕಣದಲ್ಲಿ ಗೋಪಾಲ ಭಂಡಾರಿಯವರನ್ನು ಸೋಲಿಸಿದ ಬಿಜೆಪಿಯ ಸುನಿಲ್ ಕುಮಾರ್ ಈ ಬಾರಿ ಅವರ ಪ್ರತಿರ್ಸ್ಪಯಾಗಿದ್ದಾರೆ. ಒಮ್ಮೆ ಭಂಡಾರಿ ಗೆಲುವು ಸಾಸಿದ ನಂತರ ಕಾರ್ಕಳದ ಜನತೆ ಸುನಿಲ್ ಕುಮಾರ್ ಅವರನ್ನು ಆಯ್ಕೆಗೊಳಿಸಿತ್ತು. ಆದರೆ ಸುನಿಲ್ ಕುಮಾರ್ ತನ್ನನ್ನು ಅಭಿವೃದ್ದಿ ಕೊಂಡ ಹೊರತಾಗಿ ಜನತೆಯ ಕಷ್ಟಗಳಿಗೆ ಸ್ಪಂದಿಸದ ಕಾರಣ ಕಳೆದ ಚುನಾವಣೆಯಲ್ಲಿ ಸೋಲಿಸಿದ್ದು ಮಾತ್ರವಲ್ಲದೇ ಕಳೆದ ವರ್ಷ ನಡೆದ ಎಂಪಿ ಚುನಾವಣೆಯಲ್ಲಿಯೂ ಕಾಂಗ್ರೆಸ್‌ನ ಜಯಪ್ರಕಾಶ ಹೆಗ್ಡೆ ಅವರ ವಿರುದ್ದವೂ ಹೇಳ ಹೆಸರಿಲ್ಲದಂತೆ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ನಿರೀಕ್ಷಿಸುವುದು ಕಷ್ಟಸಾಧ್ಯ.
ಕುಂದಾಪುರ ಕ್ಷೇತ್ರ:
ಸೌಕೂರು ದುರ್ಗಾಪರಮೇಶ್ವರಿ, ಮಂದಾರ್ತಿ ದುರ್ಗೆ, ಕಮಲಶಿಲೆ ಬ್ರಾಹ್ಮೀ, ಮಡಾಮಕ್ಕಿ ವೀರಭದ್ರ ಒಂದೆ ಎರಡೆ ಅನೇಕ ದೇವಸ್ಥಾನಗಳನ್ನೊಳಗೊಂಡು ಕುಂದಾಪುರ ಕನ್ನಡವೆನ್ನುವ ಭಾಷೆಯನ್ನು ಒಳಗೊಂಡ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಶೆಟ್ಟರ್ ಪಕ್ಷರಚನೆಯ ಸಂದರ್ಭ ಮಂತ್ರಿಗಿರಿ ಕೊಡಿಸುತ್ತೇನೆ ಎಂದು ಬೆಂಗಳೂರಿಗೆ ಕರೆಸಿಕೊಂಡು, ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡಿದ ಹಾಲಾಡಿಯ ನಡೆ ಕಳೆದ ೬ ತಿಂಗಳಿನಿಂದ ನಿಗೂಡವಾಗಿತ್ತು. ಬೆಂಬಲಿಗರ ಒತ್ತಾಯದಿಂದ ಮೂರು ಬಾರಿ ಗೆದ್ದಿರುವ ಹಾಲಾಡಿ ಇಂದು ಪಕ್ಷೇತರರಾಗಿ ರ್ಸ್ಪಸುತ್ತಿದ್ದಾರೆ. ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್‌ನ ಮಲ್ಯಾಡಿ ಶಿವರಾಮ ಶೆಟ್ಟಿ ಹಾಗೂ ಬಿಜೆಪಿಯಿಂದ ಕಿಶೋರ್ ಕುಮಾರ್ ಎನ್ನುವ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಲಾಡಿ ಅವರಿಗೆ ಜಾತಿ ಮತಕ್ಕಿಂತಲೂ ಹೆಚ್ಚಾಗಿ ಮಧ್ಯಮ ಹಾಗೂ ಬಡ ಜನತೆಯ ಮತಗಳು ಸಿಗಲಿವೆ. ಕಳೆದ ವರ್ಷ ಸುಮಾರು ೨೫ ಸಾವಿರ ಮತಗಳ ಅಂತರದಲ್ಲಿ ಗೆದ್ದ ಹಾಲಾಡಿ ಈ ಬಾರಿ ಅದಕ್ಕಿಂತಲೂ ಅಕ ಮತಗಳಿಂದ ಗೆಲ್ಲುತ್ತಾರೆ ಎನ್ನುವ ಮಾತುಗಳು ಈ ವಲಯದಲ್ಲಿ ಕೇಳಿಬರುತ್ತಿದೆ.
ಬೈಂದೂರು ಕ್ಷೇತ್ರ:
ಕುಂದಾಪುರ ತಾಲೂಕಿನ ಗಡಿಬಾಗ ಬೈಂದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಕೊಲ್ಲೂರು ಮೂಕಾಂಬಿಕೆ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸನ್ನಿದಿಗಳು ಬರುತ್ತವೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಿರಾಜಮಾನವಾಗಿ ಕಂಗೊಳಿಸುತ್ತಿರುವ ಕೊಲ್ಲೂರು ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರರಾಗಿ ಕಾರ್ಯ ನಿರ್ವಹಿಸಿದ ಬಿ.ಎಂ.ಸುಕುಮಾರ ಶೆಟ್ಟಿ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಅವರ ಎದುರಾಳಿಯಾಗಿ ಹಲವು ವರ್ಷಗಳಿಂದ ಗೆಲುವು ಸಾಸಿದ ಗೋಪಾಲ ಪೂಜಾರಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡದ ಜನತೆ ಬುದ್ದಿವಂತರು ಎಂದು ಹೇಳುತ್ತಿದ್ದರೂ ಕೆಲವು ನಾಯಕರು ಈಗಾಗಲೇ ಹಣ, ಹೆಂಡದ ಆಮಿಷ ನೀಡುತ್ತಿದ್ದಾರೆ. ಅದನ್ನು ಸ್ವೀಕರಿಸುವ ಮಂದಿಗೇನು ಕಡಿಮೆಯಿಲ್ಲಾ. ಚುನಾವಣೆ ಬಂದಾಗ ಕೆಲಸ ಕಾರ್ಯಗಳಿಗೆ ಸುದೀರ್ಘ ರಜೆ ಹಾಕಿ ನಾಯಕರು ನೀಡುವ ಎಂಜಲು ಕಾಸಿಗಾಗಿ ಹೋಗುವವರು ಅನೇಕರಿದ್ದಾರೆ. ಎಲ್ಲದಕ್ಕೂ ಮತದಾರ ಜಾಗೃತನಾಗಿದ್ದು, ತಮ್ಮ ಅಮೂಲ್ಯ ಮತಗಳನ್ನು ಸಾಮಾನ್ಯ ಕಾಸಿಗಾಗಿ ಮಾರಾಟ ಮಾಡದೆ ಉತ್ತಮ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾದ ಘನತರ ಹೊಣೆಗಾರಿಕೆಯಿದೆ. ಇದು ನಮ್ಮ ಹಕ್ಕು ಕೂಡ..ಸಮರ್ಥವಾಗಿ ನಿಭಾಯಿಸಿ..ಏನಂತಿರಾ
No comments:
Post a Comment