Thursday, 9 May 2013

ಅವಿಭಜಿತ ದಕ್ಷಿಣ ಕನ್ನಡ-ಮತ್ತು ಉಡುಪಿ ವಿಧಾನ ಸಭಾ ಕ್ಷೇತ್ರ ಪರಿಚಯ:
ರಾಜ್ಯದ ಮೂರು ಕರಾವಳಿ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಕೃಷಿ ಪ್ರಧಾನವಾದ ಜಿಲ್ಲೆಗಳಾಗಿವೆ. ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿರುವ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬ್ಯಾಂಕಿಂಗ್ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಪ್ರಗತಿ ಸಾಸಿದೆ. ಇತ್ತೀಚಿಗಿನ ವರ್ಷಗಳಲ್ಲಿ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಕೂಡ ಅಭಿವೃದ್ಧಿಯತ್ತ ಸಾಗುತ್ತಿರುವ ಜಿಲ್ಲೆ ಇದಾಗಿದೆ. ಇಲ್ಲಿ ಶೈಕ್ಷಣೀಕವಾಗಿ ಪ್ರಗತಿ ಹೊಂದಿದ್ದು, ದೂರದ ಇತರ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಾರೆ ಎನ್ನುವುದಕ್ಕೆ ಇಲ್ಲಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಪ್ರತಿವರ್ಷ ಇತರರಿಗೆ ಬಿಟ್ಟುಕೊಡದ ಪಿಯುಸಿ ಮತ್ತು ೧೦ ತರಗತಿಯ ಫಲಿತಾಂಶಗಳು. ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಇಲ್ಲಿನ ಜನರ ಜೀವನ ಶೈಲಿ, ಆಚರಿಸುವ ಧಾರ್ಮಿಕ-ಆಚರಣೆಗಳಿಂದಾಗಿ ರಾಜ್ಯದಲ್ಲಿಯೇ ಗುರುತಿಸಿಕೊಂಡಿದೆ. ತುಳುನಾಡಿನ ಗಂಡುಕಲೆಯೆನಿಸಿಕೊಂಡ ಯಕ್ಷಗಾನದಿಂದ ದೇಶ ವಿದೇಶದಲ್ಲಿಯೇ ಗುರುತಿಸಿಕೊಂಡು ಅಮೇರಿಕಾದಲ್ಲಿ ನಡೆಯುವ ಅಕ್ಕಾ ಸಮ್ಮೇಳನದಲ್ಲಿ ಪ್ರದರ್ಶನಗೈದಿದೆ. ತುಳು ಪಾಡ್ದನ, ಭೂತಕೋಲ, ಕೋಳಿ ಅಂಕ, ಕಂಬಳ ಇತ್ಯಾದಿ ಒಂದೆ ಎರಡೇ ತುಳುನಾಡಿನ ಸಾಂಸ್ಕೃತಿಕ ಸೊಗಡನ್ನು ಬಣ್ಣಿಸಲು ಸಾಧ್ಯವಿಲ್ಲ. ಇತರ ಪ್ರದೇಶಗಳಿಗೆ ಹೋಲಿಸಿದರೆ ಕರಾವಳಿ ಎಂದಾಕ್ಷಣ ನೀವು ಬುದ್ದಿವಂತರು ಮರಾಯ್ರೆ ಎನ್ನುವ ಮಾತುಗಳು ಸರ್ವೇ ಸಾಮಾನ್ಯವಾಗಿದೆ.
ಮೇ.೫ ರಂದು ನಡೆಯುವ ವಿಧಾನ ಸಭಾ ಚುನಾವಣೆಯ ಬಿಸಿ ರಾಜ್ಯದಲ್ಲಿಯೇ ಮಾತ್ರವಲ್ಲದೇ ಕರಾವಳಿಯ ೨ ಜಿಲ್ಲೆಗಳಲ್ಲಿಯೂ ವ್ಯಾಪಿಸಿದೆ. ಎಲ್ಲಾ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕೆನ್ನುವ ನೆಲೆಯಲ್ಲಿ ತೀವ್ರ ಪೈಪೋಟಿಯ ಬಿರುಸಿನ ಪ್ರಚಾರ ಕೈಗೊಳ್ಳುತ್ತಿವೆ. ಆ ನಿಟ್ಟಿನಲ್ಲಿ ಸಂಕ್ಷಿಪ್ತವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಸಭಾ ಕ್ಷೇತ್ರದ ಕಿರು ಪರಿಚಯ:
ದಕ್ಷಿಣ ಕನ್ನಡ ಒಟ್ಟು ೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಸುಮಾರು ೧೪.೭೦ ಲಕ್ಷ ಮತದಾರರಿದ್ದಾರೆ. ಇದರಲ್ಲಿ ಅರ್ಧಾಂಶಕ್ಕಿಂತಲೂ ಅಕ ಮಹಿಳೆಯರಾಗಿದ್ದಾರೆ. ೧೯೫೭ರಿಂದ ೨೦೦೮ ರವರೆಗೆ ಜಿಲ್ಲೆಯಲ್ಲಿ ೧೧ವಿಧಾನ ಸಭಾ ಚುನಾವಣೆಗಳು ನಡೆದಿವೆ. ಬಹುತೇಕ ಪುರುಷರೇ ರ್ಸ್ಪಗಳು. ವಿಜೇತರು ಕೂಡ ಅವರೇ. ಈವರೆಗೆ ಕೇವಲ ನಾಲ್ಕು ಮಂದಿ ಮಹಿಳೆಯರು ಮಾತ್ರ ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚಿಗಿನ ರಾಜಕೀಯ ವಿದ್ಯಾಮಾನಗಳಲ್ಲಿ ಜಾತಿ ರಾಜಕೀಯ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದ್ದರೂ, ದಕ್ಷಿಣ ಕನ್ನಡ ಮಾತ್ರ ಇದಕ್ಕೆ ಹೊರತಾಗಿದೆ. ಇಲ್ಲಿನ ಜನರು ಜಾತಿಗಿಂತ ನೀತಿ, ತತ್ವ ಸಿದ್ದಾಂತ ಮತ್ತು ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಇತರ ಪ್ರದೇಶಗಳಂತೆ ಇಲ್ಲಿನ ಮತದಾರ ಜಾತಿಗೆ ಮನ್ನಣೆ ನೀಡಿರುವುದು ಇಲ್ಲಿ ಕಡಿಮೆಯಾಗಿದೆ. ರಾಜಕೀಯ ಪಕ್ಷಗಳ ಬಲದಿಂದ ಅತಿ ಸಣ್ಣ ಸಮುದಾಯದ ಅಭ್ಯರ್ಥಿಗಳು ಕೂಡ ಇಲ್ಲಿ ನಿರಾಯಾಸವಾಗಿ ಗೆಲುವು ಸಾಸಿದ್ದಾರೆ.
ದಕ್ಷಿಣ ಕನ್ನಡದ ೮ ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಅಂದರೆ ಮಂಗಳೂರು, ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ ಮತ್ತು ಮೂಡಬಿದ್ರೆ ಕ್ಷೇತ್ರಗಳು ಸಮುದ್ರ ತೀರಕ್ಕೆ ತಾಗಿಕೊಂಡಿವೆ. ಉಳಿದಂತೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ಇತರ ನಾಲ್ಕು ಕ್ಷೇತ್ರಗಳು.
ಮಂಗಳೂರು:
ಮಂಗಳೂರು ವಿಧಾನಸಭಾ ಕ್ಷೇತ್ರ ಸರ್ವ ಧರ್ಮ ಸಮನ್ವಯದ ಅಪೂರ್ವ ಪ್ರದೇಶ. ೧೫-೧೬ ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ದ ಸಮರ ಸಂಘಟಿಸಿ, ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದ ಉಳ್ಳಾಲದ ರಾಣಿ ಅಬ್ಬಕ್ಕನ ಗೌರವಾರ್ಥ ಪ್ರತಿಮೆಯನ್ನು ಉಳ್ಳಾಲದಲ್ಲಿ ಸ್ಥಾಪಿಸಲಾಗಿದೆ. ರಾಣಿ ಅಬ್ಬಕ್ಕ ಪೂಜಿಸುತ್ತಿದ್ದ ಸೋಮೇಶ್ವರದ ಸೋಮನಾಥ ದೇವಾಲಯ ಮತ್ತು ಉಳ್ಳಾಲ ಸೈಯದ್ ಮದನಿ ದರ್ಗಾ ಇಲ್ಲಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳು. ಮಂಗಳೂರು ವಿಶ್ವವಿದ್ಯಾನಿಲಯ, ಕೆ.ಎಸ್.ಹೆಗ್ಡೆ ಆಸ್ಪತ್ರೆ ಮೆಡಿಕಲ್ ಕಾಲೇಜುಗಳು ಹಾಗೂ ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳು ಸೇರಿದಂತೆ ಕೆಲವು ಪ್ರಸಿದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
ಕ್ಷೇತ್ರದಲ್ಲಿ ಸುಮಾರು ೧.೭೦ಲಕ್ಷ ಮತದಾರರಿದ್ದಾರೆ. ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಅಕವಾಗಿದೆ. ಸತತ ಎರಡು ಬಾರಿ ಕಾಂಗ್ರೆಸ್‌ನಿಂದ ಜಯಗಳಿಸಿರುವ ಯುವಶಾಸಕ ಯು.ಟಿ.ಖಾದರ್ ಈ ಸಲ ಮೂರನೇ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ. ಅವರಿಗೆ ಪ್ರತಿರ್ಸಯಾಗಿ ಚಂದ್ರಹಾಸ್ ಉಳ್ಳಾಲ್ ಕಣದಲ್ಲಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರ:
ಮಂಗಳೂರು ನಗರ ದಕ್ಷಿಣ ಕ್ಷೇತ್ರ ಮಂಗಳೂರು ಮಹಾನಗರ ಪಾಲಿಕೆಯ ೬೦ ವಾರ್ಡ್‌ಗಳ ಪೈಕಿ ೩೮ ವಾರ್ಡ್‌ಗಳನ್ನೊಳಗೊಂಡಿದೆ. ಅತ್ಯಾಧುನಿಕವಾಗಿ ರೂಪುಗೊಳ್ಳುತ್ತಿರುವ ಮಂಗಳೂರು ನಗರವನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಸುಮಾರು ೨ ಲಕ್ಷ ಮತದಾರರಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ, ಅಲೋಶಿಯಸ್ ಚಾಪೆಲ್, ಜೋಡುಪಳ್ಳಿ ದರ್ಗಾ ಕುದ್ರೋಳಿ ಸೇರಿದಂತೆ ಇತರ ಹಲವಾರು ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಈ ಕ್ಷೇತ್ರದಲ್ಲಿ ರಾಜ್ಯ ವಿಧಾನ ಸಭೆಯ ಉಪಸಭಾಪತಿಯಾಗಿರುವ ಎನ್.ಯೋಗೀಶ್ ಭಟ್ ಸತತ ನಾಲ್ಕು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಇಲ್ಲಿ ಜಯಗಳಿಸಿದ್ದಾರೆ. ಈ ಸಲ ೫ ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಕಣಕ್ಕಿಳಿದಿದ್ದಾರೆ. ಇವರಿಗೆ ಪ್ರತಿರ್ಸ್ಪಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಜೆ.ಆರ್.ಲೋಬೊ ಪ್ರಥಮ ಬಾರಿಗೆ ಚುನಾವಣಾ ಕಣದಲ್ಲಿದ್ದಾರೆ. ಇವರು ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಮಂಗಳೂರು ನಗರ ಉತ್ತರ:
ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ಮಹಾನಗರ ಪಾಲಿಕೆಯ ೨೨ ವಾರ್ಡ್‌ಗಳನ್ನು ಒಳಗೊಂಡಿದೆ. ಕರ್ನಾಟಕ ಕರಾವಳಿಯ ಪ್ರಗತಿಯ ಹೆಬ್ಬಾಗಿಲು ಎನ್ನುವ ಪ್ರತೀತಿ ಪಡೆದಿರುವ ನವ ಮಂಗಳೂರು ಬಂದರು, ಸುರತ್ಕಲ್‌ನ ಎನ್‌ಐಟಿಕೆ ಸಂಸ್ಥೆ ಹಾಗೂ ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಎಂಸಿಎಫ್ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
ಸುಮಾರು ೨ ಲಕ್ಷ ಮತದಾರರನ್ನು ಹೊಂದಿರುವ ಈ ಕ್ಷೇತ್ರವನ್ನು ಸತತ ಎರಡು ಬಾರಿ ಬಿಜೆಪಿಯ ಕೃಷ್ಣ ಜೆ.ಪಾಲೆಮಾರ್ ಪ್ರತಿನಿಸಿದ್ದಾರೆ. ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಸದನದಲ್ಲಿ ನೀಲಿ ಚಿತ್ರ ನೋಡಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಲ ಮೂರನೇ ಭಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸರ್ಧೆಗೆ ಇಳಿದಿದ್ದಾರೆ. ಇವರಿಗೆ ಪ್ರತಿರ್ಸ್ಪಯಾಗಿ ಕಾಂಗ್ರೆಸ್‌ನ ಮೊದಿನ್ ಬಾವ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಅಕವಾಗಿದ್ದಾರೆ. ಇಲ್ಲಿ ಮುಸ್ಲಿಂ ಸಂಖ್ಯೆ ವಿಪರೀತವಾಗಿದ್ದು, ಮುಸ್ಲಿಂ ಅಭ್ಯರ್ಥಿ ಕಣದಲ್ಲಿರುವುದರಿಂದ ಇಲ್ಲಿ ಎಸ್‌ಡಿಪಿಐ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಗೆಲುವು ಯಾರ ಕಡೆಗಾಗಲಿದೆ ಎನ್ನುವುದನ್ನು ನಿರೀಕ್ಷಿಸುವುದು ಕಷ್ಟಸಾದ್ಯ. 
ಮೂಡಬಿದ್ರೆ:
ಜೈನ ಕಾಶಿಯೆಂದೆ ಪ್ರಸಿದ್ದಿ ಪಡೆದಿರುವ ಮೂಡಬಿದ್ರೆ ಮಂಗಳೂರು ತಾಲೂಕಿನಲ್ಲಿ ಬರುವ ಮತ್ತೊಂದು ವಿಧಾನ ಸಭಾ ಕ್ಷೇತ್ರ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಸಾವಿರ ಕಂಬದ ಬಸದಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಎಂಆರ್‌ಪಿಎಲ್ ತೈಲ ಸಂಸ್ಕಾರಣಾಗಾರ ಸೇರಿದಂತೆ ನುಡಿಸಿರಿಯ ಮೂಲಕ ರಾಜ್ಯಾದ್ಯಂತ ಮನೆಮಾತಾಗಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯು ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
ಕಾಂಗ್ರೆಸ್ ಪಕ್ಷದ ಕೆ.ಅಭಯಚಂದ್ರ ಜೈನ್ ಸತತವಾಗಿ ಮೂರು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಬಾರಿ ಮತ್ತೆ ನಾಲ್ಕನೇ ಸಲ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರಿಗೆ ಪ್ರತಿರ್ಸ್ಪಯಾಗಿ ಬಿಜೆಪಿಯಿಂದ ಉಮನಾಥ್ ಕೋಟ್ಯಾನ್ ಕಣದಲ್ಲಿದ್ದಾರೆ. ರಾಜಕೀಯವಾಗಿ ಅನುಭವವಿಲ್ಲದಿದ್ದರೂ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅನೇಕ ಸಭೆ-ಸಮಾರಂಭಗಳಲ್ಲಿ ಭಾಗವಹಿಸಿದ ಕೀರ್ತಿ ಇವರಿಗಿದೆ. ಅಲ್ಲದೇ ಈ ಕ್ಷೇತ್ರದಲ್ಲಿ ಬಹಳ ಸಜ್ಜನ ಎನ್ನುವ ಹೆಸರು ಇವರ ಪಾಲಿಗಿದೆ.
ಬಂಟ್ವಾಳ:
ಬಂಟ್ವಾಳ ವಿಧಾನಸಭಾ ಕ್ಷೇತ್ರ ನೇತ್ರಾವತಿ ನದಿಯ ಇಕ್ಕೆಲಗಳಲ್ಲಿ ಹರಡಿಕೊಂಡಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ಮತ್ತು ಕಾರೀಂಜೇಶ್ವರ ಕ್ಷೇತ್ರ ವ್ಯಾಪ್ತಿಯ ಪ್ರಮುಖ ದೇವಸ್ಥಾನಗಳು. ಕೃಷಿ ಮತ್ತು ವ್ಯಾಪಾರ ಕೇಂದ್ರಿತವಾದ ಈ ಕ್ಷೇತ್ರದಲ್ಲಿ ಸುಮಾರು ೧.೯೬ ಲಕ್ಷ ಮತದಾರರಿದ್ದಾರೆ. ಕ್ಷೇತ್ರ ಬಹುತೇಕ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿದೆ. ಕ್ಷೇತ್ರದ ಶಾಸಕರಾಗಿರುವ ಕಾಂಗ್ರೆಸ್‌ನ ಬಿ.ರಮಾನಾಥ ರೈ ಐದು ಬಾರಿ ಬಂಟ್ವಾಳವನ್ನು ಪ್ರತಿನಿಸಿದ್ದಾರೆ. ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಇವರಿಗೆ ಪ್ರತಿರ್ಸ್ಪಯಾಗಿ ಆರ್‌ಎಸ್‌ಎಸ್‌ನ ಸ್ವಯಂಸೇವಕನೆಂದು ಬಿಂಬಿತನಾಗಿ, ಸಾವಯವ ಕೃಷಿಯ ಮೂಲಕ ಜಿಲ್ಲೆಯಲ್ಲಿ ಮನೆಮಾತಾಗಿರುವ ಉಳೆಪ್ಪಾಡಿ ಗುತ್ತು ರಾಜೇಶ್ ನಾಕ್ ಬಿಜೆಪಿಯಿಂದ ರ್ಸ್ಪಸುತ್ತಿದ್ದಾರೆ. ರಾಜಕೀಯ ಅನುಭವವಿಲ್ಲದಿದ್ದರೂ, ಸ್ವಉದ್ಯಮಿಯಾಗಿರುವ ಇವರು ರೈಗಳನ್ನು ಸೋಲಿಸಿಯಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಬೆಳ್ತಂಗಡಿ:
ಬೆಳ್ತಂಗಡಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದ ಕೆಲವು ಪ್ರದೇಶ ನಕ್ಸಲ್ ಬಾಧೆಗೊಳಗಾಗಿದೆ. ಹಚ್ಚ-ಹಸಿರಿನಿಂದ ಕೂಡಿರುವ ಈ ಕ್ಷೇತ್ರದಲ್ಲಿ ಅಡಿಕೆ, ತೆಂಗು, ರಬ್ಬರ್ ಮತ್ತು ಭತ್ತ ಪ್ರಮುಖ ಬೆಳೆಯಾಗಿದೆ. ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ದೇಶಕ್ಕೆ ಪರಿಚಿತವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ಈ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
೧೯೫೭ರಲ್ಲಿ ಈ ಕ್ಷೇತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನವರ್ಮ ಹೆಗ್ಗಡೆ ಪ್ರತಿನಿಸಿದ್ದರು. ಕಳೆದ ೨೪ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಬಂಗೇರ ಸಹೋದರರು ಪರಸ್ಪರ ರ್ಸಗಳಾಗಿದ್ದರು. ಈ ಬಾರಿ ಅದು ಅಂತ್ಯವಾಗಿದೆ. ಮೂರು ಬಾರಿ ಶಾಸಕರಾಗಿರುವ ವಸಂತ ಬಂಗೇರ ಮತ್ತೆ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಕಣದಲ್ಲಿದ್ದಾರೆ. ಅವರ ವಿರುದ್ದ ಬಿಜೆಪಿಯಿಂದ ರ್ಸ್ಪಸುತ್ತಿದ್ದ ಸಹೋದರ ಪ್ರಬಾಕರ ಬಂಗೇರ ಈ ಬಾರಿ ರ್ಸಸುತ್ತಿಲ್ಲ. ಬಿಜೆಪಿಯಿಂದ ಈಬಾರಿ ರಂಜನ್ ಗೌಡ ಯುವಕ ರ್ಸ್ಪಸುತ್ತಿದ್ದಾರೆ.
ಪುತ್ತೂರು:
ಪುತ್ತೂರು ವಿಧಾನ ಸಭಾ ಕ್ಷೇತ್ರ ಕಂದಾಯ ಉಪ ವಿಭಾಗವನ್ನು ಹೊಂದಿದೆ. ಅಡಿಕೆ ಮತ್ತು ರಬ್ಬರ್ ಇಲ್ಲಿನ ಪ್ರಮುಖ ಬೆಳೆಗಳು. ಪುತ್ತೂರಿನ ಮಹಾಲಿಂಗೇಶ್ವರ ಮತ್ತು ಉಪ್ಪಿನಂಗಡಿಯ ಸಹಸ್ರ ಲಿಂಗೇಶ್ವರ ಪ್ರಮುಖ ದೇವಸ್ಥಾನಗಳು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಎರಡು ಬಾರಿ ಪುತ್ತೂರು ಕ್ಷೇತ್ರವನ್ನು ಪ್ರತಿನಿಸಿದ್ದರು. ಈ ಕ್ಷೇತ್ರದಿಂದ ಇಬ್ಬರು ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ.
ಈಗ ಶಾಸಕಿಯಾಗಿರುವ ಮಲ್ಲಿಕಾ ಪ್ರಸಾದ್ ಈ ಬಾರಿ ಕಣದಿಂದ ಹಿಂದೆ ಸರಿದಿದ್ದಾರೆ. ೨೦೦೪ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಟಿ.ಶಕುಂತಲಾ ಶೆಟ್ಟಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಸಂಜೀವ ಮಠಂದೂರು ರ್ಸ್ಪಸುತ್ತಿದ್ದಾರೆ. ಕ್ಷೇತ್ರದಲ್ಲಿ ಸುಮಾರು ೧.೮೦ಲಕ್ಷ ಮತದಾರರಿದ್ದಾರೆ.
ಸುಳ್ಯ:
ಕೊಡಗು ಜಿಲ್ಲೆಗೆ ತಾಗಿಕೊಂಡಿರುವ ವಿಧಾನಸಭಾ ಕ್ಷೇತ್ರ ಸುಳ್ಯ. ರಾಜ್ಯದಲ್ಲಿ ಅತ್ಯಕ ಆದಾಯವಿರುವ ಮುಜರಾಯಿ ಇಲಾಖೆಯ ಅನದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಅಡಿಕೆ ಮತ್ತು ರಬ್ಬರ್ ಇಲ್ಲಿನ ಪ್ರಮುಖ ಬೆಳೆಯಾಗಿದೆ.
ಸುಳ್ಯ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿದ್ದು, ಬಿಜೆಪಿಯ ಎಸ್ ಅಂಗಾರ ಸತತವಾಗಿ ನಾಲ್ಕು ಬಾರಿ ಇಲ್ಲಿಂದ ಚುನಾಯಿತರಾಗಿದ್ದಾರೆ. ಈ ಸಲ ಮತ್ತೆ ಅದೃಷ್ಟ ಪರೀಕ್ಷಿಸಲು ಚುನಾವಣಾ ಕಣದಲ್ಲಿದ್ದಾರೆ. ಇವರಿಗೆ ಪ್ರತಿರ್ಸ್ಪಯಾಗಿ ಕಾಂಗ್ರೆಸ್‌ನಿಂದ ಬಿ.ರಘು ಕಣದಲ್ಲಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಹಲವಾರು ದೇವಸ್ಥಾನಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬೀಚ್‌ಗಳು ಕಾಣಸಿಗುತ್ತವೆ. ಅಂತೆಯೇ ಉಡುಪಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಿದ್ದು, ಕಾಪು, ಉಡುಪಿ, ಕಾರ್ಕಳ, ಕುಂದಾಪುರ ಮತ್ತು ಬೈಂದೂರುಗಳಾಗಿವೆ. 
ಕಾಪು ಕ್ಷೇತ್ರ:
ಕಾಪು ಬೀಚ್, ಮಾರಿಯಮ್ಮ ದೇವಸ್ಥಾನಗಳಿಂದ ಪ್ರಸಿದ್ದಗೊಂಡಿದ್ದು, ನೂತನವಾಗಿ ಯುಪಿಸಿಎಲ್ ವಿದ್ಯುತ್ ಘಟಕ ಸ್ಥಾಪನೆಗೊಂಡು ರಾಜ್ಯದಾದ್ಯಂತ ಜನಜನಿತವಾಗಿದೆ. ಕಾಪು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸಾಂಸದರಾಗಿ ಆಯ್ಕೆಗೊಂಡಿದ್ದ ವಿನಯ ಕುಮಾರ್ ಸೊರಕೆ ಈ ಬಾರಿ ಕಾಪು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ರ್ಸ್ಪಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ವಸಂತ ವಿ.ಸಾಲ್ಯಾನ್ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಬಿಜೆಪಿಯಿಂದ ಜಯಗಳಿಸಿದ್ದ ಲಾಲಾಜಿ ಮೆಂಡನ್ ಈಬಾರಿ ಬಿಜೆಪಿಯಿಂದ ರ್ಸ್ಪಸುತ್ತಿದ್ದಾರೆ. ಕಾಪು ಕ್ಷೇತ್ರ ಮೂವರು ಘಟಾನುಗಟಿಗಳಾಗಿದ್ದು, ವಿಜಯ ಮಾಲಿಕೆ ಯಾರಿಗೆ ದೊರೆಯುತ್ತದೆ ಎಂದು ಕಾದು ನೋಡಬೇಕಿದೆ.
ಉಡುಪಿ:
ಉಡುಪಿ ನಗರ ಸಭೆ, ಜಿಲ್ಲಾ ಪಂಚಾಯತ್‌ಗಳು ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಹಲವು ವರ್ಷಗಳಿಂದ ಬಿಜೆಪಿಯ ಸುರ್ಪಯಲ್ಲಿದ್ದ ನಗರಸಭೆಯನ್ನು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದುಕೊಂಡಿದೆ. ಮಲ್ಪೆ ಬೀಚ್, ಶ್ರೀಕೃಷ್ಣ ಮಠ, ಮಣಿಪಾಲ ವಿಶ್ವವಿದ್ಯಾನಿಲಯ ಹಾಗೂ ಆಸ್ಪತ್ರೆಗಳನ್ನು ಒಳಗೊಂಡಿದೆ. ಎರಡು ಬಾರಿ ಶಾಸಕರಾಗಿದ್ದ ಬಿಜೆಪಿಯ ರಘುಪತಿ ಭಟ್ ಜನಪರ ಕಾರ್ಯಗಳನ್ನು ಮಾಡಿದ್ದರೂ, ನೀಲಿ ಚಿತ್ರ ಹಗರಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಅವರ ಸ್ಥಾನವನ್ನು ತುಂಬಲು ಸುಧಾಕರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಎದುರಾಳಿ ಯುವ ಉದ್ಯಮಿ ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಕಣದಲ್ಲಿದ್ದಾರೆ.
ಕಾರ್ಕಳ:
ಗೋಮಟೇಶ್ವರನಿಂದಲೇ ಪ್ರಸಿದ್ದಿಯಾದ ಕಾರ್ಕಳದಲ್ಲಿ ತಾಲೂಕು ಕೇಂದ್ರವಾಗಿದ್ದು, ಹಲವಾರು ಶಿಕ್ಷಣ ಸಂಸ್ಥೆಗಳಿವೆ. ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ಬಾರಿ ಆಯ್ಕೆಗೊಂಡ ಗೋಪಾಲ ಭಂಡಾರಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದಾರೆ. ಒಮ್ಮೆ ಇದೆ ಕಣದಲ್ಲಿ ಗೋಪಾಲ ಭಂಡಾರಿಯವರನ್ನು ಸೋಲಿಸಿದ ಬಿಜೆಪಿಯ ಸುನಿಲ್ ಕುಮಾರ್ ಈ ಬಾರಿ ಅವರ ಪ್ರತಿರ್ಸ್ಪಯಾಗಿದ್ದಾರೆ. ಒಮ್ಮೆ ಭಂಡಾರಿ ಗೆಲುವು ಸಾಸಿದ ನಂತರ ಕಾರ್ಕಳದ ಜನತೆ ಸುನಿಲ್ ಕುಮಾರ್ ಅವರನ್ನು ಆಯ್ಕೆಗೊಳಿಸಿತ್ತು. ಆದರೆ ಸುನಿಲ್ ಕುಮಾರ್ ತನ್ನನ್ನು ಅಭಿವೃದ್ದಿ ಕೊಂಡ ಹೊರತಾಗಿ ಜನತೆಯ ಕಷ್ಟಗಳಿಗೆ ಸ್ಪಂದಿಸದ ಕಾರಣ ಕಳೆದ ಚುನಾವಣೆಯಲ್ಲಿ ಸೋಲಿಸಿದ್ದು ಮಾತ್ರವಲ್ಲದೇ ಕಳೆದ ವರ್ಷ ನಡೆದ ಎಂಪಿ ಚುನಾವಣೆಯಲ್ಲಿಯೂ ಕಾಂಗ್ರೆಸ್‌ನ ಜಯಪ್ರಕಾಶ ಹೆಗ್ಡೆ ಅವರ ವಿರುದ್ದವೂ ಹೇಳ ಹೆಸರಿಲ್ಲದಂತೆ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ನಿರೀಕ್ಷಿಸುವುದು ಕಷ್ಟಸಾಧ್ಯ.
ಕುಂದಾಪುರ ಕ್ಷೇತ್ರ:
ಸೌಕೂರು ದುರ್ಗಾಪರಮೇಶ್ವರಿ, ಮಂದಾರ್ತಿ ದುರ್ಗೆ, ಕಮಲಶಿಲೆ ಬ್ರಾಹ್ಮೀ, ಮಡಾಮಕ್ಕಿ ವೀರಭದ್ರ ಒಂದೆ ಎರಡೆ ಅನೇಕ ದೇವಸ್ಥಾನಗಳನ್ನೊಳಗೊಂಡು ಕುಂದಾಪುರ ಕನ್ನಡವೆನ್ನುವ ಭಾಷೆಯನ್ನು ಒಳಗೊಂಡ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಶೆಟ್ಟರ್ ಪಕ್ಷರಚನೆಯ ಸಂದರ್ಭ ಮಂತ್ರಿಗಿರಿ ಕೊಡಿಸುತ್ತೇನೆ ಎಂದು ಬೆಂಗಳೂರಿಗೆ ಕರೆಸಿಕೊಂಡು, ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡಿದ ಹಾಲಾಡಿಯ ನಡೆ ಕಳೆದ ೬ ತಿಂಗಳಿನಿಂದ ನಿಗೂಡವಾಗಿತ್ತು. ಬೆಂಬಲಿಗರ ಒತ್ತಾಯದಿಂದ ಮೂರು ಬಾರಿ ಗೆದ್ದಿರುವ ಹಾಲಾಡಿ ಇಂದು ಪಕ್ಷೇತರರಾಗಿ ರ್ಸ್ಪಸುತ್ತಿದ್ದಾರೆ. ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್‌ನ ಮಲ್ಯಾಡಿ ಶಿವರಾಮ ಶೆಟ್ಟಿ ಹಾಗೂ ಬಿಜೆಪಿಯಿಂದ ಕಿಶೋರ್ ಕುಮಾರ್ ಎನ್ನುವ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಲಾಡಿ ಅವರಿಗೆ ಜಾತಿ ಮತಕ್ಕಿಂತಲೂ ಹೆಚ್ಚಾಗಿ ಮಧ್ಯಮ ಹಾಗೂ ಬಡ ಜನತೆಯ ಮತಗಳು ಸಿಗಲಿವೆ. ಕಳೆದ ವರ್ಷ ಸುಮಾರು ೨೫ ಸಾವಿರ ಮತಗಳ ಅಂತರದಲ್ಲಿ ಗೆದ್ದ ಹಾಲಾಡಿ ಈ ಬಾರಿ ಅದಕ್ಕಿಂತಲೂ ಅಕ ಮತಗಳಿಂದ ಗೆಲ್ಲುತ್ತಾರೆ ಎನ್ನುವ ಮಾತುಗಳು ಈ ವಲಯದಲ್ಲಿ ಕೇಳಿಬರುತ್ತಿದೆ.
ಬೈಂದೂರು ಕ್ಷೇತ್ರ:
ಕುಂದಾಪುರ ತಾಲೂಕಿನ ಗಡಿಬಾಗ ಬೈಂದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಕೊಲ್ಲೂರು ಮೂಕಾಂಬಿಕೆ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸನ್ನಿದಿಗಳು ಬರುತ್ತವೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಿರಾಜಮಾನವಾಗಿ ಕಂಗೊಳಿಸುತ್ತಿರುವ ಕೊಲ್ಲೂರು ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರರಾಗಿ ಕಾರ್ಯ ನಿರ್ವಹಿಸಿದ ಬಿ.ಎಂ.ಸುಕುಮಾರ ಶೆಟ್ಟಿ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಅವರ ಎದುರಾಳಿಯಾಗಿ ಹಲವು ವರ್ಷಗಳಿಂದ ಗೆಲುವು ಸಾಸಿದ ಗೋಪಾಲ ಪೂಜಾರಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡದ ಜನತೆ ಬುದ್ದಿವಂತರು ಎಂದು ಹೇಳುತ್ತಿದ್ದರೂ ಕೆಲವು ನಾಯಕರು ಈಗಾಗಲೇ ಹಣ, ಹೆಂಡದ ಆಮಿಷ ನೀಡುತ್ತಿದ್ದಾರೆ. ಅದನ್ನು ಸ್ವೀಕರಿಸುವ ಮಂದಿಗೇನು ಕಡಿಮೆಯಿಲ್ಲಾ. ಚುನಾವಣೆ ಬಂದಾಗ ಕೆಲಸ ಕಾರ್ಯಗಳಿಗೆ ಸುದೀರ್ಘ ರಜೆ ಹಾಕಿ ನಾಯಕರು ನೀಡುವ ಎಂಜಲು ಕಾಸಿಗಾಗಿ ಹೋಗುವವರು ಅನೇಕರಿದ್ದಾರೆ. ಎಲ್ಲದಕ್ಕೂ ಮತದಾರ ಜಾಗೃತನಾಗಿದ್ದು, ತಮ್ಮ ಅಮೂಲ್ಯ ಮತಗಳನ್ನು ಸಾಮಾನ್ಯ ಕಾಸಿಗಾಗಿ ಮಾರಾಟ ಮಾಡದೆ ಉತ್ತಮ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾದ ಘನತರ ಹೊಣೆಗಾರಿಕೆಯಿದೆ. ಇದು ನಮ್ಮ ಹಕ್ಕು ಕೂಡ..ಸಮರ್ಥವಾಗಿ ನಿಭಾಯಿಸಿ..ಏನಂತಿರಾ




ಭಾರತದಲ್ಲಿ ೨ ನೇ ಭಾನುವಾರ-ವಿಶ್ವ ತಾಯಂದಿರ ದಿನ
ಅಜ್ಞಾನದ ಅಂಧಕಾರವನ್ನು ತೊಲಗಿಸಿ-ಸುಜ್ಞಾನದ ಬೆಳಕು ಹರಿಸಲು ಅಮ್ಮ ಎನ್ನುವ ಎರಡಕ್ಷರ ಸಾಕು..
(ಮಾತೃತ್ವದ ಬಲಿಷ್ಟ ಸಂಕೋಲೆಗಳಿಂದ ಬಂದಿಸದೆ, ಹೆಚ್ಚುತ್ತಿರುವ ಬುದ್ಧಿವಿಹೀನ ಮಕ್ಕಳ ತಪ್ಪುಗಳನ್ನು ಎಷ್ಟು ದಿನದವರೆಗೆ ಮಡಿಲಿನಲ್ಲಿಟ್ಟುಕೊಳ್ಳುವಿ ಅಮ್ಮಾ...)

ವಿಶ್ವಮಟ್ಟದಲ್ಲಿ ವಿವಿಧ ಸಂದರ್ಭಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ನೆನಪು ಮಾಡಲು ವರ್ಷದಲ್ಲೊಂದು ದಿನ ವಿಶೇಷ ದಿನವನ್ನಾಗಿ ಆಚರಿಸಲಾಗುತ್ತದೆ. ಇಂತಹವುಗಳಲ್ಲಿ ಮಾತೆಯರ ದಿನವೂ ಒಂದಾಗಿದೆ. ಅಮ್ಮ ಎನ್ನುವ ಎರಡಕ್ಷರವೇ ಪವಿತ್ರ ಭಾವನೆಯನ್ನು ಸೃಷ್ಟಿಸುವುದಲ್ಲದೇ ಪೂಜ್ಯತೆಯನ್ನು ಉಂಟು ಮಾಡುತ್ತದೆ. ಇದು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅಜ್ಞಾನದ ಅಂಧಕಾರವನ್ನು ತೊಲಗಿಸಿ, ಸುಜ್ಞಾನದ ಬೆಳಕನ್ನು ಹರಿಸಲು ತಾಯಿ ಎನ್ನುವ ಎರಡಕ್ಷರದ ಮಹಾಮಂತ್ರವೇ ಸಾಕು ಎಂದು ಬಲ್ಲವರು ಹೇಳಿದ್ದಾರೆ. ನವ ಮಾಸ ಪರ್ಯಂತ ತನ್ನ ಉದರದಲ್ಲಿ ಹೊತ್ತು, ಲೋಕದ ಬೆಳಕನ್ನು ಕಾಣುವಂತೆ ಮಾಡಿದ ತಾಯಿಯ ಪ್ರೀತಿ, ವಾತ್ಸಲ್ಯ, ಒಲುಮೆ ಮನುಕುಲದ ಉನ್ನತಿಯ ಚಿಲುಮೆಯಾಗಿರುವುದಷ್ಟೇ ಅಲ್ಲದೆ ಅಸಂಖ್ಯಾತ ಕವಿಗಳ, ಕಲಾವಿದರ, ಮಹಾನ್ ವ್ಯಕ್ತಿಗಳ ಜೀವನದ ಉತ್ಸಾಹದ ಚಿಲುಮೆಯೂ ಆಗಿದೆ. ವಿಶ್ವದ ಅನೇಕ ರಾಷ್ಟ್ರಗಳು ತಮ್ಮ ದೇಶವನ್ನು ಹಾಗೂ ಭಾಷೆಯನ್ನು ತಾಯಿಯೊಂದಿಗೆ ಗುರುತಿಸಿಕೊಳ್ಳುತ್ತಾರೆ. ಭಾರತದ ವೈಶಿಷ್ಟ್ಯವೂ ಕೂಡ ಇದೆ ಆಗಿದೆ. ನದಿ, ಬೆಟ್ಟ, ಪರ್ವತ, ನಿಸರ್ಗವನ್ನೂ ಮಾತೆಯೆಂದೇ ಆರಾಧಿಸಲಾಗುತ್ತದೆ. ಕಠೋರ ವ್ಯಕ್ತಿತ್ವದ ವ್ಯಕ್ತಿಯೂ ಕೂಡ ನೋವಾದಾಗ ಅಮ್ಮಾ ಎಂದು ಉದ್ಗರಿಸುತ್ತಾನೆ. ತಾಯಿಯ ಮಹಿಮೆಯೇ ಅಂತದ್ದು, ಮನುಕುಲದ ಅಭ್ಯುದಯಕ್ಕೆ, ವಿಕಾಸಕ್ಕೆ ಕಾರಣೀಕರ್ತಳಾದ ಅಮ್ಮನ ನೆನಪು ಮಾಡಲು ಈ ದಿನವನ್ನು ಆಚರಿಸಲಾಗುತ್ತದೆ. ವರ್ಷಕ್ಕೊಮ್ಮೆ ಮಾತ್ರ ತಾಯಿಯ ದಿನವನ್ನು ಆಚರಿಸಿದರೆ ಸಾಕೆ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳಬಹುದು. ಖಂಡಿತಾ ಒಂದು ದಿನ ಮಾತ್ರವಲ್ಲ. ಹುಟ್ಟಿಸಿದ ತಾಯಿಯ ನೆನಪು ಕ್ಷಣ-ಕ್ಷಣವೂ ಮನದಲ್ಲಿ ಅನುರಣನೀಯವಾಗಿರಬೇಕು. ಆದರೆ ಕಾರ್ಮಿಕ ದಿನ, ಮಕ್ಕಳ ದಿನ, ಮಹಿಳಾ ದಿನಗಳನ್ನು ಆಚರಿಸುವಂತೆ ತಾಯಂದಿರ ದಿನದ ಆಚರಣೆಗೂ ಒಂದು ಐತಿಹ್ಯವಿದೆ.
ತಾಯಂದಿರ ದಿನದ ವೈಶಿಷ್ಟ್ಯವೇ ಅಂತಹದು. ವಿಶ್ವದ ೪೬ ರಾಷ್ಟ್ರಗಳಲ್ಲಿ ವಿಶೇಷವಾಗಿ ಈ ದಿನವನ್ನು ಆಚರಿಸಲಾಯಿತಾದರೂ, ಒಂದೇ ದಿನದಂದು ಆಚರಿಸುವುದಿಲ್ಲ. ಆಸ್ಟ್ರೇಲಿಯ, ಬಾಂಗ್ಲಾ, ಬೆಲ್ಜಿಯಂ, ಟರ್ಕಿ, ಕೆನಡ, ಅಮೆರಿಕ, ನ್ಯೂಜಿಲೆಂಡ್, ಕ್ಯೂಬಾ, ಡೆನ್ಮಾರ್ಕ್, ಇಟಲಿ, ಜರ್ಮನಿ, ಜಪಾನ್ ಮತ್ತು ಭಾರತದಲ್ಲಿ ಮೇ ತಿಂಗಳ ಎರಡನೆ ಭಾನುವಾರ ಆಚರಿಸಲಾಗುತ್ತದೆ. ಆಫ್ಘಾನಿಸ್ತಾನ, ವಿಯಟ್ನಾಮ್, ಅಲ್ಜೀರಿಯಾದಲ್ಲಿ ಮಾಚ್ ೮ ರಂದು, ಹಂಗೇರಿ, ಸ್ಪೇನ್, ದಕ್ಷಿಣ ಕೊರಿಯಾದಲ್ಲಿ ಮೇ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ.
ಚಾರಿತ್ರಿಕ ಹಿನ್ನೆಲೆ:
೧೮೭೭ರ ಮೇ ೧೧ರ ಭಾನುವಾರದಂದು ಅಮೆರಿಕದ ಮೆಥೋಡಿಸ್ಟ್ ಎಪಿಸ್ಕೋಪಲ್ ಚರ್ಚಿನ ಪಾದ್ರಿಗಳು ತಮ್ಮ ಮಗ ಮಾಡಿದ ತಪ್ಪಿಗೆ ನೊಂದು ಪ್ರಾರ್ಥನೆಯ ಸಮಯದಲ್ಲೇ ಧರ್ಮಪೀಠ ತ್ಯಜಿಸಿ ಹೊರನಡೆದಾಗ ಅಲ್ಲಿಯೇ ಇದ್ದ ಜೂಲಿಯಟ್ ಬ್ಲಾಕ್ಲಿ ಎನ್ನುವ ಮಹಿಳೆ ಪೀಠಾರೋಹಣ ಮಾಡಿ, ಉಳಿದ ಆಚರಣೆಗಳನ್ನು ಪೂರ್ಣಗೊಳಿಸಿರುವುದು ಮಾತ್ರವಲ್ಲದೇ ಅಲ್ಲಿ ನೆರೆದಿದ್ದ ಎಲ್ಲಾ ತಾಯಂದಿರನ್ನೂ ತನ್ನೊಡನೆ ಸೇರಲು ಪ್ರೋತ್ಸಾಹಿಸುತ್ತಾಳೆ. ತಮ್ಮ ತಾಯಿಯ ಈ ಕ್ರಮ ನೋಡಿ ಸಂತೃಪ್ತರಾದ ಆಕೆಯ ಇಬ್ಬರು ಮಕ್ಕಳು ಪ್ರತಿ ವರ್ಷವೂ ತಾಯಿಯ ಹುಟ್ಟುಹಬ್ಬದಂದು ತಮ್ಮ ಸ್ವಂತ ಸ್ಥಳಕ್ಕೆ ಹೋಗಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿ ಬರುವ ಸಂಪ್ರದಾಯ ಪ್ರಾರಂಭಿಸುತ್ತಾರೆ. ಈ ರೀತಿಯಾಗಿ ಪ್ರತಿ ಮೇ ತಿಂಗಳ ಎರಡನೆ ಭಾನುವಾರದಂದು ತಾಯಂದಿರಿಗೆ ಶ್ರದ್ಧಾಂಜಲಿ ಅರ್ಪಿಸುವಂತೆ ಊರಿನ ಹಿರಿಯರಿಗೆ, ಅಧಿಕಾರಿಗಳಿಗೆ, ವ್ಯಾಪಾರಿಗಳಿಗೆ ಉತ್ತೇಜನ ನೀಡುತ್ತಾರೆ. ೧೯ನೇ ಶತಮಾನದ ಉಪಾಂತ್ಯದಲ್ಲಿ ಈ ಪರಂಪರೆ ಅಮೇರಿಕದ ಅನೇಕ ನಗರಗಳಿಗೆ ಹರಡುವುದರೊಂದಿಗೆ ಮೆಥೋಡಿಸ್ಟ್ ಎಪಿಸ್ಕೋಪಲ್ ಚರ್ಚ್ ಸಹ ಈ ಸಂಪ್ರದಾಯ ಆಚರಿಸಲು ಪ್ರಾರಂಬಿಸುತ್ತದೆ.
ಅಮೇರಿಕದ ಅಂತರ್ಯುದ್ಧದ ಸಂದರ್ಭದಲ್ಲಿ ಜನತೆಗೆ ಶಾಂತಿ ಮಾರ್ಗ ಬೋಧಿಸುವ ನಿಟ್ಟಿನಲ್ಲಿ  ಅನ್ ಮೇರಿ ರೀವ್ಸ್ ತಾಯಂದಿರ ಸ್ನೇಹದಿನ ಆಚರಿಸುವ ಸಂಪ್ರದಾಯವನ್ನು ಆರಂಭಿಸುತ್ತಾರೆ. ಇದೇ ಪರಂಪರೆ ಮುಂದುವರಿಸಿದ ಆಕೆಯ ಪುತ್ರಿ ಅನ್ನಾ ಜಾರ್ವಿಸ್ ಈ ಆಚರಣೆಯನ್ನು ಪ್ರತಿ ವರ್ಷವೂ ಮುಂದುವರಿಸುತ್ತಾರೆ. ೧೯೦೭ ರಲ್ಲಿ ಜಾರ್ವಿಸ್ ತನ್ನ ತಾಯಿಯ ಎರಡನೆಯ ಪುಣ್ಯ ತಿಥಿ ಆಚರಿಸುವ ವೇಳೆ ಗ್ರಾಫ್ಟನ್ ಚರ್ಚಿನ ಪಾದ್ರಿಗಳನ್ನೂ ಅದರಲ್ಲಿ ಪಾಲ್ಗೊಳ್ಳಲು ಒತ್ತಾಯಿಸುತ್ತಾಳೆ. ತದನಂತರ ತನ್ನ ಸಂಘಟನೆಯ ಮೂಲಕ ಜಾರ್ವಿಸ್ ಸಮಾಜದ ಎಲ್ಲ ಗಣ್ಯ ವ್ಯಕ್ತಿ, ಸಂಘಟನೆಗಳಿಗೂ ಪತ್ರ ಬರೆಯುವ ಮೂಲಕ ತಾಯಂದಿರ ದಿನವನ್ನು ಪ್ರತಿವರ್ಷ ಆಚರಿಸುವಂತೆ ಪ್ರೇರೇಪಿಸುತ್ತಾಳೆ. ಜಾರ್ವಿಸ್‌ಳ ಈ ಪ್ರಯತ್ನದಿಂದ ೧೯೧೧ರ ವೇಳೆಗೆ ಅಮೆರಿಕದ ಎಲ್ಲ ಪ್ರಾಂತ್ಯಗಳಲ್ಲಿಯೂ ಕೂಡ ತಾಯಂದಿರ ದಿನದ ಆಚರಣೆಯ ಸಂಪ್ರದಾಯ ಬೇರೂರುತ್ತದೆ. ಇತನ್ಮಧ್ಯೆ ಜ್ಯೂಲಿಯಾ ವಾರ್ಡ್ ಹೋವ್ ಎಂಬ ಲೇಖಕಿ ಬೋಸ್ಟನ್ ನಗರದಲ್ಲಿ ತಾಯಂದಿರ ದಿನವನ್ನು ಶಾಂತಿಗಾಗಿ ಆಚರಿಸುವುದರ ಮೂಲಕ ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ೧೯೧೪ರಲ್ಲಿ ವುಡ್ರೋ ವಿಲ್ಸನ್ ಸರ್ಕಾರ ಈ ದಿನದಂದು ರಾಷ್ಟ್ರೀಯ ರಜಾ ದಿನವೆಂದು ಘೋಷಿಸುತ್ತದೆ. ೨೦ ನೆಯ ಶತಮಾನದ ಮಹಿಳಾ ಚಳುವಳಿಗಳ ಪೈಕಿ ಅನ್ನಾ ಜಾರ್ವಿಸ್ ನಡೆಸಿದ ಹೋರಾಟಗಳು ನಿರ್ಲಕ್ಷ್ಯಕ್ಕೊಳಗಾದರೂ, ಆಕೆ ೧೯೦೮ ರ ಮೇ ೧೦ರಂದು ತನ್ನ ತಾಯಿ ಮೇರಿ ರೀವ್ಸ್ ಅವರ ನೆನಪಿನ ಸ್ಮಾರಕ ನಿರ್ಮಿಸಿದ್ದರು.
ಯಾರೀಕೆ ಮೇರಿ ರೀವ್ಸ್:
ಅನ್ ಮೇರಿ ರೀವ್ಸ್ ೧೮೪೩ ರಲ್ಲಿ ಮೆಥೋಡಿಸ್ಟ್ ಮಂತ್ರಿಯಾಗಿದ್ದ ತನ್ನ ತಂದೆ ಜೋಸಯ್ಯ ರಿವ್ಸ್‌ರೊಡನೆ ವರ್ಜಿನಿಯಾಗೆ ಬಂದು ನೆಲೆಸಿದಾಗ ಆಕೆಗೆ ಹನ್ನೆರಡರ ಪ್ರಾಯ. ೧೮೫೦ರಲ್ಲಿ ಗ್ರಾನ್‌ವಿಲೆ ಜಾರ್ವಿಸ್‌ರನ್ನು ವಿವಾಹವಾದ ಮೇರಿಗೆ ಹನ್ನೊಂದು ಮಕ್ಕಳಾದರೂ, ದುರದೃಷ್ಟದಿಂದ ಬದುಕುಳಿದದ್ದು ಕೇವಲ ನಾಲ್ವರು. ಅನ್ ಮೇರಿ ವಾಸಿಸುತ್ತಿದ್ದ ವೆಬ್‌ಸ್ಟರ್ ಪ್ರದೇಶದಲ್ಲಿ ನೈರ್ಮಲ್ಯದ ಅಭಾವದಿಂದ ರೋಗರುಜಿನಗಳು ಕಾಡುತ್ತಿದ್ದು, ಆಕೆಯ ಮಕ್ಕಳೂ ಬಲಿಯಾಗಿದ್ದರು. ಆದರೂ ಧೃತಿಗೆಡದೆ ಮಕ್ಕಳನ್ನು ಸಾಕಿದ ಮೇರಿ ಜನರಲ್ಲಿ ಶುಚಿತ್ವದ ಬಗ್ಗೆ ಅರಿವು ಮೂಡಿಸಲು ಸೋದರ ಜೇಮ್ಸ್ ಎಡ್ವರ್ಡ್ ರೀವ್ಸ್‌ನ ಸಹಾಯ ಪಡೆಯುತ್ತಿದ್ದಳು. ವೃತ್ತಿಯಲ್ಲಿ ವೈದ್ಯರಾಗಿದ್ದ ಜೇಮ್ಸ್ ಮೇರಿ ಸ್ಥಾಪಿಸಿದ್ದ ಮಹಿಳಾ ಕ್ಲಬ್‌ಗಳಿಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡುತ್ತಿದ್ದರು. ಕ್ಷಯರೋಗದಿಂದ ಬಳಲುತ್ತಿದ್ದ ತಾಯಂದಿರ ಆರೈಕೆಗಾಗಿ ಮಹಿಳಾ ಕ್ಲಬ್‌ನ ಸದಸ್ಯರು ಮನೆಗಳಿಗೆ ಭೇಟಿ ನೀಡುತ್ತಿದ್ದರು. ಈ ಎಲ್ಲಾ ಸೇವೆಗಳ ಹಿಂದೆ ಅನ್ ಮೇರಿಯ ಉದಾತ್ತ ಸೇವಾ ಮನೋಭಾವ ಪ್ರೇರಕ ಶಕ್ತಿಯಾಗಿತ್ತು.

ಅಮೇರಿಕದ ಅಂತರಿಕ ಯುದ್ಧ ಉಚ್ಚ್ರಾಯ ಸ್ಥಿತಿ ತಲುಪಿದ್ದ ಹಂತದಲ್ಲಿ, ೧೮೬೧ ರಲ್ಲಿ, ವೆಬ್‌ಸ್ಟರ್ ಮತ್ತು ಟೇಲರ್ ಗ್ರಾಮಗಳು ಬಹುತೇಕ ಸೇನಾ ನೆಲೆಗಳಾಗಿದ್ದವು. ಯುದ್ಧ ನಿರತರಾಗಿದ್ದ ಎರಡೂ ಬಣಗಳು ಈ ಪ್ರದೇಶದಲ್ಲಿ ಬೀಡು ಬಿಟ್ಟಿದ್ದವು. ಇದರಿಂದ ತನ್ನ ಕ್ಲಬ್‌ಗಳಿಗೆ ಸಮಸ್ಯೆಯಾಗಬಹುದೆಂದು ಭಾವಿಸಿದ ಮೇರಿ ಕೂಡಲೇ ತುರ್ತು ಸಭೆ ಕರೆದು ಎಂತಹ ವಿಷಮ ಪರಿಸ್ಥಿತಿ ಎದುರಾದರೂ ಕ್ಲಬ್ ಸದಸ್ಯರು ಪರಸ್ಪರ ಸ್ನೇಹ ಮರೆಯದೆ, ಯುದ್ಧ ನಡೆಯುವ ಸಂದರ್ಭವಾಗಲಿ, ಮುಗಿದ ತದನಂತರ ಚರ್ಚುಗಳ ವಿಭಜನೆಯಾಗದಂತೆ ಎಚ್ಚರ ವಹಿಸಬೇಕು ಎನ್ನುವ ವಾಗ್ದಾನವನ್ನು ಎಲ್ಲರಿಂದಲೂ ಪಡೆದುಕೊಂಡ ದಿಟ್ಟ ಮಹಿಳೆ. ಯುದ್ಧದ ಸಮಯದಲ್ಲಿ ಸೈನಿಕರು ಟೈಫಾಯ್ಡ್ ಮತ್ತು ದಡಾರ ರೋಗಗಳಿಗೆ ತುತ್ತಾದಾಗ ಸೇನಾ ಪಡೆಗಳು ಮೇರಿಯ ಕ್ಲಬ್‌ನ ಸಹಾಯ ಯಾಚಿಸಿದರು. ಸಹಾಯಹಸ್ತ ಚಾಚಿದ ಮೇರಿ ಯಾವುದೇ ಕಾರಣಕ್ಕೂ ಸೈನಿಕರು ಕ್ಲಬ್‌ನ ಸದಸ್ಯರನ್ನು ಅವಮಾನಿಸುವುದಾಗಲೀ, ಅನ್ಯ ಸಮುದಾಯಗಳ ವಿರುದ್ಧ ತಾರತಮ್ಯ ತೋರುವುದಾಗಲಿ ಮಾಡಕೂಡದೆಂದು ಷರತ್ತು ವಿಧಿಸಿದ್ದಳು. ಈ ಷರತ್ತಿಗೆ ಸೇನಾಪಡೆ ಒಪ್ಪಿದ ನಂತರವೇ ಸಹಾಯ ಒದಗಿಸಲಾಗಿ, ಕ್ಲಬ್ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.
ಅಂತರ್ಯುದ್ಧ ಮುಗಿದ ನಂತರ ಫ್ರುಂಟಿ ಟೌನ್‌ನ ಕೋರ್ಟ್ ಹೌಸ್‌ನಲ್ಲಿ ತಾಯಂದಿರ ದಿನ ಆಚರಿಸುವ ಮೂಲಕ ಮೇರಿ ಎರಡೂ ಸೈನ್ಯಗಳ ಸೈನಿಕರನ್ನು ಮತ್ತು ಕುಟುಂಬದವರನ್ನೂ ಒಂದುಗೂಡಿಸಿ, ಮನರಂಜನಾ ಕಾರ್ಯಕ್ರಮ ಏರ್ಪಡಿಸಿದ್ದರು. ಯುದ್ಧದ ಸಂದರ್ಭದಲ್ಲಿ ವಿರೋಧಿ ಬಣದ ಸೈನಿಕರು ನೀಲಿ ಮತ್ತು ಬೂದು ಬಣ್ಣದ ಉಡುಗೆ ಧರಿಸಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಮೇರಿ ಬೂದು ಬಣ್ಣದ ಉಡುಗೆ ಧರಿಸಿದ್ದರೆ, ಮತ್ತೊರ್ವ ಮಹಿಳೆ ನೀಲಿ ವಸ್ತ್ರ ಧರಿಸಿ, ಸಾಂಕೇತಿಕ ಐಕ್ಯತೆಯನ್ನು ಪ್ರದರ್ಶಿಸಿದ್ದರು. ಭಿನ್ನ ವಸ್ತ್ರಗಳನ್ನು ಧರಿಸಿದ ಇಬ್ಬರು ಮಹಿಳೆಯರು ಪರಸ್ಪರ ಆಲಂಗಿಸಿ, ಹಸ್ತಲಾಘವ ನೀಡುವುದರ ಮೂಲಕ ಮನುಜ ಸಂಬಂಧ ಬೆಸೆಯುವ ಸಂದೇಶವನ್ನೂ ಮೇರಿ ನೀಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರೂ ಇದೇ ರೀತಿ ಪರಸ್ಪರ ಆಲಂಗಿಸಿಕೊಂಡು ಐಕ್ಯತೆಯನ್ನು ಪ್ರದರ್ಶಿಸಿದ್ದರು. ಅಲ್ಲಿ ನೆರೆದಿದ್ದ ಎರಡೂ ಪಂಗಡಗಳ ಜನ ತಮಗೇ ಅರಿವಿಲ್ಲದಂತೆ ಯುದ್ಧ ಪರಂಪರೆಯನ್ನು ಮರೆತು, ತುಂಬಿದ ಕಂಗಳಿಂದ ಪರಸ್ಪರ ಆಲಂಗಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು.
ಈ ರೀತಿಯಾಗಿ ತಾಯಂದಿರ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದೇ ಅಲ್ಲದೆ ತನ್ಮೂಲಕ ವಿಶ್ವ ಭ್ರಾತೃತ್ವ, ಮಾನವತೆಯನ್ನು ಜಗತ್ತಿಗೆ ಸಾರುವ ಮಹತ್ತರ ಕಾರ್ಯ ಕೈಗೊಂಡ ಅನ್ ಮೇರಿ ರೀವ್ಸ್ ತನ್ನ ೭೨ ನೇ ವಯಸ್ಸಿನಲ್ಲಿ ೧೯೦೫ರಲ್ಲಿ ಇಹಲೋಕ ತ್ಯಜಿಸಿದ್ದರು. ಈ ಮಹಾನ್ ಚೇತನದ ನೆನಪಿನಲ್ಲೇ ಆಕೆಯ ಪುತ್ರಿ ಅನ್ನಾ ಜಾರ್ವಿಸ್ ಪ್ರತಿವರ್ಷವೂ ತಾಯಂದಿರ ದಿನವನ್ನು ಆಚರಿಸುವ ಸಂಪ್ರದಾಯ ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೆ ತಾಯಂದಿರ ದಿನವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆಚರಿಸುವ ನಿಟ್ಟಿನಲ್ಲೂ ಸಾಕಷ್ಟು ಶ್ರಮ ವಹಿಸಿದ್ದರು. ಇಂದಿಗೂ ಫಿಲಾಡೆಲ್ಫಿಯಾದಲ್ಲಿರುವ ಅನ್ ಮೇರಿ ರೀವ್ಸ್ ಅವರ ಸಮಾಧಿಗೆ ತಾಯಂದಿರ ದಿನದಂದು ತಂಡೋಪತಂಡವಾಗಿ ತೆರಳಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ.
ತಾಯಂದಿರ ದಿನದ ಸಾರ್ಥಕತೆ:
ಪುರಾತತ್ವ ಮಹತ್ತರ ಅಂಶಗಳಿಂದ ವಿಶ್ವಕ್ಕೆ ಮಾದರಿಯಾಗಿದ್ದ ಭಾರತದಲ್ಲಿಂದು ಆಧುನಿಕತೆಯ ಸೋಗಿನಲ್ಲಿ ಉದ್ಭವಿಸಿರುವ ಅನೇಕ ಸಮಸ್ಯೆಗಳಿಂದ ತಲೆತಗ್ಗಿಸುವಂತಾಗಿರುವುದು ಸತ್ಯ. ಇವುಗಳ ಪೈಕಿ ವೃದ್ಧಾಪ್ಯದಲ್ಲಿನ ಸಮಸ್ಯೆಯೂ ಒಂದಾಗಿದೆ. ಒಂದೆಡೆ ನಾಗರಿಕ ಸಮಾಜ ಹೆಚ್ಚು ಸುಶಿಕ್ಷಿತವಾಗುತ್ತಿರುವಂತೆಲ್ಲಾ ಹೆತ್ತವರನ್ನು ನಿರ್ಲಕ್ಷಿಸುವ ಪ್ರವೃತ್ತಿಯೂ ಹೆಚ್ಚಾಗುತ್ತಿರುವುದು ವಿಷಾದನೀಯ. ದೇಶದಲ್ಲಿಂದು ಅನಾಥಾಶ್ರಮಗಳಿಗಿಂತ ಹೆಚ್ಚು ವೃದ್ಧಾಶ್ರಮಗಳಿವೆ. ಡಾಲರ್‌ಗಳ ಬೆನ್ನಟ್ಟಿ ವಿದೇಶದಲ್ಲಿ ನೆಲೆಸುವ ಪುತ್ರ ರತ್ನರು ತಮ್ಮ ವೃದ್ಧ ಪೋಷಕರನ್ನು ವೃದ್ಧಾಶ್ರಮಕ್ಕೆ ವಹಿಸುವ ಪರಂಪರೆ ಒಂದೆಡೆಯಾದರೆ, ಮತ್ತೊಂದೆಡೆ ಇಲ್ಲಿಯೇ ನೆಲೆಸಿದ್ದರೂ ಕೌಟುಂಬಿಕ ಸಾಮರಸ್ಯ ನಿರ್ವಹಿಸಲಾಗದೆ ಹೆತ್ತವರನ್ನು ನಿರ್ಲಕ್ಷಿಸುವ ಪರಂಪರೆ ಸದ್ದಿಲ್ಲದೆ ಬೆಳೆಯುತ್ತಿದೆ. ಮಧ್ಯಮ ವರ್ಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಈ ಪ್ರವೃತ್ತಿಗೆ ಹಲವಾರು ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಕಾರಣಗಳಿವೆ. ಜಾಗತೀಕರಣದ ಪರಿಣಾಮವಾಗಿ ಯುವ ಜನಾಂಗದಲ್ಲಿ ಕಂಡುಬರುತ್ತಿರುವ ಧನದಾಹಿ ಮನೋಭಾವ, ಐಷಾರಾಮಿ ಜೀವನದ ಕನಸು, ಪೀಳಿಗೆಯ ಅಂತರದ ನೆಪದಲ್ಲಿ ಹಿರಿಯರ ಮನೋಭಾವ ಗ್ರಹಿಸಲಾಗದ ಯುವಕರ ಅಹಮಿಕೆ, ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಲು ಬೇಕಾದ ತಾಳ್ಮೆಯ ಕೊರತೆ ಇವೆಲ್ಲವೂ ಕೂಡ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ.
ಹೆತ್ತವರಿಗೆ ವೃದ್ಧಾಪ್ಯದಲ್ಲಿ ಒಂದು ನೆಮ್ಮದಿಯ ತಾಣದೊಂದಿಗೆ ಆರೋಗ್ಯಕರ ಸನ್ನಿವೇಶ ಒದಗಿಸುವುದು ಮಕ್ಕಳ ಕರ್ತವ್ಯ ಎನ್ನುವ ಭಾವನೆ ಕ್ಷೀಣಿಸುತ್ತಿದ್ದು, ಕೌಟುಂಬಿಕ ಸಂಬಂಧಗಳು ವ್ಯಾವಹಾರಿಕತೆಯ ಸೋಗಿನಲ್ಲಿ ಬಿಂಬಿತವಾಗುತ್ತಿದೆ. ಹಣಬಲವಿದ್ದು, ತಂದೆ ತಾಯಿಯನ್ನು ದೂರದ ಬಡಾವಣೆಗಳ ಐಷಾರಾಮಿ ಅಪಾರ್ಟುಮೆಂಟುಗಳಲ್ಲಿ ಪ್ರತ್ಯೇಕವಾಗಿರಿಸುವುದೂ ಒಂದು ಪ್ರತಿಷ್ಠೆಯ ಸಂಕೇತವಾಗಿದೆ. ನಮ್ಮ ತಂದೆ ತಾಯಿಗೇನೂ ತೊಂದರೆ ಇಲ್ಲ, ಆಗಾಗ್ಗೆ ಹೋಗಿ ನೋಡಿಬರುತ್ತೇವೆ, ಅವರಿಗೆ ಬೇಕಾದ್ದನ್ನೆಲ್ಲಾ ಒದಗಿಸುತ್ತೇವೆ ಎಂದು ಹೇಳುವುದೂ ಒಂದು ಗೌರವದ ಸಂಕೇತವೆನ್ನುವ ಹುಚ್ಚು ತಿಳುವಳಿಕೆ ಹೆಚ್ಚುತ್ತಿದೆ. ಇದಕ್ಕಿಂತಲೂ ಭಿನ್ನವಾದುದು ಮಕ್ಕಳು ಕೆಲವು ಸಂದರ್ಭಗಳಲ್ಲಿ ಹೆತ್ತವರನ್ನು ಅತ್ಯುತ್ತಮ ಸೌಲಭ್ಯಗಳಿರುವ ವೃದ್ಧಾಶ್ರಮದಲ್ಲಿ ಸೇರಿಸಿರುವುದನ್ನು ಮಕ್ಕಳು ಹೆಮ್ಮೆಯಿಂದ ಹೇಳಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಎಷ್ಟೇ ಸೌಲಭ್ಯಗಳಿಂದ ಕೂಡಿದ್ದು,ಚಿನ್ನದ ಸುಪ್ಪತ್ತಿಗೆಯಲ್ಲಿ ಕೂರಿಸಿ,  ಹವಾ ನಿಯಂತ್ರಿತ ಕೊಠಡಿಗಳಿದ್ದರೂ, ಹೆತ್ತವರಿಗೆ ಅತ್ಯಮೂಲ್ಯವಾಗಿ ಬೇಕಾಗಿರುವ ಪ್ರೀತಿ-ವಾತ್ಸಲ್ಯ. ವೃದ್ಧಾಪ್ಯದಲ್ಲಿ ಅಗತ್ಯವಾದ ಸಾಂತ್ವನ, ಮಕ್ಕಳ ಪ್ರೀತಿ ವಾತ್ಸಲ್ಯ, ಕೌಟುಂಬಿಕ ಪರಿಸರ, ಮೊಮ್ಮಕ್ಕಳ ಒಡನಾಟ ಇವೆಲ್ಲದರಿಂದಲೂ ವಂಚಿತರಾಗುವ ಹಿರಿಯರ ಬೇಗುದಿ ಇಂದಿನ ಯುವ ಪೀಳಿಗೆಗೆ ಅರಿವಾಗುತ್ತಿಲ್ಲ.
ಭಾರತೀಯ ಸಂಸ್ಕೃತಿಯ ಕುರಿತು ಪುಂಖಾನುಪುಂಖವಾಗಿ ಉಪನ್ಯಾಸ ನೀಡುವ ಸಾಂಸ್ಕೃತಿಕ ರಾಯಭಾರಿಗಳ ದೃಷ್ಟಿಯಲ್ಲಿ ಮಾತೆ ಪರಮ ಪೂಜನೀಯಳು. ನದಿ, ಬೆಟ್ಟ, ಪರ್ವತ, ಅರಣ್ಯ, ಭೂಮಿ ಎಲ್ಲವೂ ಮಾತೃ ಸಮಾನವೆಂದೇ ಪರಿಗಣಿಸಲಾಗುತ್ತದೆ. ಸಮಸ್ತ ಹಿಂದೂಗಳಿಗೆ ಗಂಗೆ, ಕನ್ನಡಿಗರಿಗೆ ಕಾವೇರಿ, ಭಾರತೀಯರಿಗೆ ಭಾರತ ಮಾತೆ, ಕರ್ನಾಟಕದ ಜನತೆಗೆ ಭುವನೇಶ್ವರಿ, ಎಲ್ಲವೂ ಪೂಜ್ಯವೇ. ಆದರೆ ಈ ಮಾತೃ ಸ್ವರೂಪ ನೈಸರ್ಗಿಕ ಸಂಪತ್ತಿಗೆ ನಾಗರಿಕ ಸಮಾಜ ಸಲ್ಲಿಸುತ್ತಿರುವ ಸೇವೆಯಾದರೂ ಎಂತಹುದು? ಭಾವನೆಗಳ ನೆಲೆಗಟ್ಟಿನಲ್ಲಿ ಈ ಪೂಜ್ಯ ಭಾವನೆ ವಿನಾಶಕಾರಿ ಸ್ವರೂಪ ತಾಳುವುದನ್ನೂ, ಮಾತೃ ಭಕ್ತಿ ಪರಾಕಾಷ್ಠೆ ತಲುಪಿದಾಗ ಭ್ರಾತೃಘಾತುಕ ಲಕ್ಷಣಗಳು ಹೊರ ಹೊಮ್ಮುವುದನ್ನೂ ಇತಿಹಾಸದಲ್ಲಿ ನೋಡಿದ್ದೇವೆ. ಮತ್ತೊಂದೆಡೆ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆಯುವುದರ ಮೂಲಕ ನದಿಗಳನ್ನು ಕಲುಷಿತಗೊಳಿಸುವ ಮೂಲಕ, ಅರಣ್ಯಗಳನ್ನು ನಾಶಮಾಡುವ ಮೂಲಕ, ಅನ್ನ ನೀಡುವ ಭೂತಾಯಿಯನ್ನು ಉದ್ಯಮಿಗಳಿಗೆ ಒಪ್ಪಿಸಿ, ಅನ್ನದಾತರನ್ನು ಕಡೆಗಣಿಸುವ ಮೂಲಕ ನಮ್ಮ ಮಾತೃ ಭಕ್ತಿಯನ್ನು ಪ್ರದರ್ಶಿಸುತ್ತಿದ್ದೇವೆ. ಮತೀಯ ಭಾವನೆಗಳನ್ನು ಕೆರಳಿಸಿ, ಜಾತಿ ವೈಷಮ್ಯವನ್ನು ಹೆಚ್ಚಿಸಿ, ಧರ್ಮ ಸಂರಕ್ಷಣೆಯ ಹೆಸರಿನಲ್ಲಿ, ಭಾರತ ಮಾತೆಯ ಮಕ್ಕಳ ನಿತ್ಯ ಸಂಹಾರವಾಗುತ್ತಿದ್ದರೂ ದಿವ್ಯಮೌನ ವಹಿಸಿದ್ದೇವೆ.
ತಾಯಂದಿರ ದಿನಾಚರಣೆ ಎಂದರೆ ಹೆತ್ತ ತಾಯಂದಿರನ್ನು ನೆನೆಯುವುದಷ್ಟೇ ಅಲ್ಲ, ಮನುಕುಲವನ್ನು ಪೊರೆವ ಮಾತೃ ಸಮಾನ ಪರಿಸರವನ್ನು ರಕ್ಷಿಸುವುದೂ ನಮ್ಮ ಕರ್ತವ್ಯವೆಂದು ನಾಗರಿಕ ಸಮಾಜ ಭಾವಿಸಬೇಕಿದೆ. ಆಧುನಿಕ ಜಗತ್ತಿನಲ್ಲಿ ಕೌಟುಂಬಿಕ ಮೌಲ್ಯಗಳು ನಶಿಸಿಹೋಗುತ್ತಿರುವ ಸಂದರ್ಭದಲ್ಲಿ ಯುವ ಪೀಳಿಗೆಗೆ ಒಂದು ಆದರ್ಶಪ್ರಾಯ ಮಾರ್ಗದರ್ಶನ ಇಲ್ಲದಿರುವುದು ಸ್ಪಷ್ಟ. ಸಂಸ್ಕೃತಿ, ಕಲೆ, ರಾಜಕೀಯ, ಶಿಕ್ಷಣ, ಸಾಹಿತ್ಯ, ಆಧ್ಯಾತ್ಮ ಎಲ್ಲ ಕ್ಷೇತ್ರಗಳಲ್ಲೂ ಸಂವೇದನೆ ಮಾಯವಾಗುತ್ತಿದ್ದು ವಾಣಿಜ್ಯೀಕರಣ ತಲೆದೋರುತ್ತಿದೆ. ಕೌಟುಂಬಿಕ ಕ್ಷೇತ್ರವೂ ಇದರ ಪ್ರಭಾವದಿಂದ ಹೊರತಾಗಿಲ್ಲ. ಆಸ್ತಿ-ಹಣದ ವ್ಯಾಮೋಹದಿಂದ ಹೆತ್ತವರನ್ನು ಹಾಗೂ ಬಂಧುಗಳನ್ನೇ ಕೊಲೆಮಾಡುವ ದುರ್ದರ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಒಂದು ಆದರ್ಶಪ್ರಾಯ ತಳಹದಿ ಒದಗಿಸುವಲ್ಲಿ ನಮ್ಮ ಆಧುನಿಕ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ ಎನ್ನುವುದು ಸತ್ಯ. ಪಠ್ಯ ಪುಸ್ತಕಗಳಲ್ಲಿ ಲಭ್ಯವಿರುವ ಪಾಠಗಳನ್ನು ಮೀರಿ ಮಕ್ಕಳಿಗೆ ನೀತಿ ಮಾರ್ಗ ತೋರಿಸುವ ಶಿಕ್ಷಕ ಪರಂಪರೆ ಬಹುತೇಕ ನಶಿಸಿಹೋಗಿದ್ದು, ವಿದ್ಯಾರ್ಜನೆ ಎನ್ನುವುದು ದುಡಿಮೆಗೆ, ಧನಾರ್ಜನೆಗೆ ಸೋಪಾನ ಎಂದೇ ಪರಿಗಣಿಸಲಾಗುತ್ತಿದೆ.
ಮಧ್ಯಮ ವರ್ಗ ಮತ್ತು ಗ್ರಾಮೀಣ ಭಾಗದಿಂದ ನಗರಗಳಿಗೆ ವಲಸೆ ಬಂದು ನಗರೀಕರಣಕ್ಕೊಳಗಾದ ಜನಸಮುದಾಯದಲ್ಲಿ ಉದ್ಭವಿಸಿರುವ ಅಭದ್ರತೆ ಹೋಗಲಾಡಿಸುವಲ್ಲಿ ಸರ್ಕಾರಗಳು ವಿಫಲವಾಗಿರುವುದರಿಂದ, ಯುವಪೀಳಿಗೆ ಸುಖದ ಬೆನ್ನಟ್ಟಿ ಹೋಗುವುದು ಸ್ವಾಭಾವಿಕ. ಯುವಪೀಳಿಗೆಗೆ ನೈತಿಕ ಮಟ್ಟದಲ್ಲಿ ಒಂದು ಉತ್ತಮ ಸಾಮಾಜಿಕ-ಸಾಂಸ್ಕೃತಿಕ ವೇದಿಕೆ ಒದಗಿಸುವಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ವಿದ್ಯಾರ್ಥಿಗಳಿಗೆ ಅಂಕಗಳಿಕೆಯೇ ಕಣ್ಣ ಮುಂದಿರುವ ಧ್ಯೇಯವಾದರೆ, ಶಿಕ್ಷಕರಿಗೆ ಹಣಗಳಿಕೆ ಧ್ಯೇಯವಾಗಿದೆ. ಮತ್ತೊಂದೆಡೆ ಹೆತ್ತವರಿಗೆ ಮಕ್ಕಳು ಐದಂಕಿಯ ಸಂಬಳ ಗಳಿಸುವುದೇ ಧ್ಯೇಯ. ಈ ಧನಗಾಹಿ ಸಂಸ್ಕೃತಿಯ ಪರಿಣಾಮಕ್ಕೆ ಬಲಿಯಾಗುತ್ತಿರುವವರಲ್ಲಿ ಹೆತ್ತವರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಯುವ ಪೀಳಿಗೆಯ ಆಶಯಗಳನ್ನು ಗ್ರಹಿಸುವಲ್ಲಿ ಮತ್ತು ಪೀಳಿಗೆಯ ಅಂತರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೆತ್ತವರ ವೈಫಲ್ಯವನ್ನೂ ಇಲ್ಲಿ ನಿರ್ಲಕ್ಷಿಸುವಂತಿಲ್ಲ. ಹಾಗಾಗಿ ಪ್ರಸಕ್ತ ಸನ್ನಿವೇಶಕ್ಕೆ, ಹೆತ್ತವರನ್ನು ನಿರ್ಲಕ್ಷಿಸುವ ಪರಂಪರೆಯ ಉಗಮಕ್ಕೆ ನಾಗರಿಕ ಸಮಾಜವೂ ಸೇರಿದಂತೆ, ಇಡೀ ವ್ಯವಸ್ಥೆ ಕಾರಣವಾಗಿದೆ.
ಸಂಸ್ಕೃತಿಯ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ಸಂಘಟನೆಗಳು, ಮನುಕುಲದ ಶ್ರೇಷ್ಟ ಪರಂಪರೆಯಾದ ಮಾತೃ ಪ್ರೇಮಕ್ಕೆ ದಕ್ಕೆ ಬಂದಿರುವುದನ್ನು ಗಮನಿಸಿಲ್ಲ. ಮಾತೃ ದೇವೋಭವ ಎಂಬ ಶ್ಲೋಕಗಳು ಮನಸ್ಸಿಗೆ ಆಹ್ಲಾದ ಉಂಟುಮಾಡಬಲ್ಲದೇ ಹೊರತು, ವಾಸ್ತವ ಸನ್ನಿವೇಶಗಳನ್ನು ಬದಲಿಸುವುದಿಲ್ಲ. ಹೆತ್ತವರಿಗೆ ದೈವೀಕ ಸ್ವರೂಪ ನೀಡಿ, ದೇಹವಿಲ್ಲದ ಆತ್ಮಗಳಿಗೆ ತರ್ಪಣ ನೀಡುವ ಸಂಸ್ಕೃತಿಗಿಂತಲೂ, ಜೀವಾತ್ಮವನ್ನು ಹೊತ್ತ ದೇಹಗಳಿಗೆ ಸಾಂತ್ವನ ನೀಡುವ ಸಂಸ್ಕೃತಿಯನ್ನು ಬೆಳೆಸುವುದು ಇಂದಿನ ಅಗತ್ಯತೆಯಾಗಿದೆ. ಅಗೋಚರ, ಅತೀತ ಕಲ್ಪನೆಗಳಿಗೆಲ್ಲಾ ಮಾತೃ ಸ್ವರೂಪವನ್ನು ನೀಡಿ ಪೂಜಿಸುವ ಸಮಾಜದಲ್ಲಿ ಹೆತ್ತ ತಾಯಿಯನ್ನೇ ನಿರ್ಲಕ್ಷಿಸುವ ಪರಂಪರೆ ಸದ್ದಿಲ್ಲದೆ ಬೆಳೆಯುತ್ತಿರುವುದು ಸತ್ಯ. ತಾಯಂದಿರ ದಿನದಂದು ನಾಗರಿಕ ಸಮಾಜದಲ್ಲಿ ಹೊಸ ಪ್ರಜ್ಞೆ ಮೂಡಿದಾಗಲೇ ಈ ದಿನದ ಸಾರ್ಥಕ್ಯವನ್ನು ಪಡೆದುಕೊಳ್ಳಲು ಸಾಧ್ಯ.
ಏನಂತಿರಾ.....


Saturday, 2 March 2013


ಹಿನ್ನೀರಿನ ಮಡಿಲಲ್ಲಿರುವ ಶಾಂತಸ್ವರೂಪಿ ಸಿಗಂದೂರು ಶ್ರೀ ಚೌಡೇಶ್ವರಿ ಅಮ್ಮ: 

ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಮಡಿಲಲ್ಲಿದ್ದು,ಕಾಡಿನಿಂದ ಆವೃತವಾದ ಸಣ್ಣ ಊರು ಸಿಗಂದೂರು. ವೈಜ್ಞಾನಿಕ ಯುಗದಲ್ಲಿ ಪಟ್ಟಣಗಳಲ್ಲಿನ ಗಲಾಟೆ ಗದ್ದಲಗಳಿಂದ ಹೊರತಾಗಿ ಪ್ರಶಾಂತವಾದ ಪ್ರಕೃತಿಯ ಮಡಿನಲ್ಲಿರುವ ಸಿಗಂದೂರು ಮಾನಸಿಕ ನೆಮ್ಮದಿಯ ತಾಣವಾಗಿರುವುದು ಮಾತ್ರವಲ್ಲ. ಭಗವದ್ ಭಕ್ತರ ಮನದಿಚ್ಚೆಯನ್ನು ನೆರವೇರಿಸುವ ದಿವ್ಯ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ. ಸಾಗರ ಪೇಟೆಯಿಂದ ಸುಮಾರು ೪೫ ಕಿ.ಮೀ.ದೂರದಲ್ಲಿರುವ ಸಿಗಂದೂರು ಸಮೀಪ ತುಮರಿ ಎನ್ನುವ ಊರಿದೆ.
ಸಿಗಂದೂರಿನ ಚೌಡೇಶ್ವರಿ ದೇವಿಯ ಕ್ಷೇತ್ರಕ್ಕೆ ಸುಮಾರು ೩೦೦ ವರ್ಷಗಳ ಇತಿಹಾಸವಿದೆ. ರಕ್ಷಣೆ ಕೋರಿ ಬರುವ ಭಕ್ತರನ್ನು ಹರಸಿ, ತನ್ನ ಮಡಿಲಲ್ಲಿಟ್ಟು ರಕ್ಷಿಸುವ ತಾಯಿ ಚೌಡೇಶ್ವರಿಯನ್ನು ಸಾವಿರಾರು ಭಕ್ತರು ನಂಬಿದ್ದಾರೆ. ಹೊರ ರಾಜ್ಯಗಳಿಂದ ಇಲ್ಲಿಗೆ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ. ಶರಾವತಿ ಹಿನ್ನೀರಿನ ವಿಶಾಲ ಪ್ರದೇಶದಲ್ಲಿ ಅಲ್ಲಲ್ಲಿ ಸೃಷ್ಟಿಯಾದ ನಡುಗಡ್ಡೆಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇವುಗಳ ಜೊತೆಗೆ ಚೌಡೇಶ್ವರಿ ದೇವಿಯ ಮಹಿಮೆಯಿಂದ ಸಿಗಂದೂರು ದೊಡ್ಡ ಧಾರ್ಮಿಕ ಕ್ಷೇತ್ರವಾಗಿ ರಾಜ್ಯದ  ಜನರ ಗಮನ ಸೆಳೆದಿದೆ.
ಇತರ ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿಲ್ಲದ ವಿಶೇಷತೆ ಸಿಗಂದೂರಿನಲ್ಲಿದೆ. ಕಳ್ಳರಿಂದ ತಮ್ಮ ಮನೆ, ಹೊಲಗಳಿಗೆ ರಕ್ಷಣೆ ಪಡೆಯಲು ನಾಮಫಲಕ ಕೊಡುವ ಪದ್ಧತಿ ಇಲ್ಲಿನ ವಿಶೇಷ. ಜಮೀನು, ತೋಟ, ಗz, ಬೇಣ ಮತ್ತು ಹೊಸ ಕಟ್ಟಡಗಳಲ್ಲಿನ ವಸ್ತುಗಳಿಗೆ ದೇವಿಯ ಕಾವಲಿದೆ ಎಂಬ ಬೋರ್ಡ್ ಹಾಕಿದರೆ ಅಲ್ಲಿ ಕಳ್ಳತನವಾಗುವುದಿಲ್ಲ ಎಂಬ ಪ್ರತೀತಿ. ಹೀಗಾಗಿಯೇ ಇಂದಿಗೂ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಗಳಲ್ಲಿರುವ ಮೂಲೆ-ಮೂಲೆಗಳ ಊರುಗಳಲ್ಲಿ ಸಿಗಂದೂರು ಚೌಡೇಶ್ವರಿ ದೇವಿಯ ಕಾವಲಿದೆ ಎನ್ನುವ ಬೋರ್ಡ್‌ಗಳನ್ನು ಕಾಣಬಹುದು.
ಪ್ರತಿ ವರ್ಷ ಮಕರ ಸಂಕ್ರಾಂತಿ (ಜ.೧೪ಅಥವಾ ೧೫ರಂದು) ಸಮಯದಲ್ಲಿ ಇಲ್ಲಿ ಜತ್ರೆ ನಡೆಯುತ್ತದೆ. ಸಾವಿರಾರು ಜನ ಸೇರುವುದು ಅಮ್ಮನ ಪ್ರಖ್ಯಾತಿಗೆ ಸಾಕ್ಷಿಯಾಗಿದೆ. ದೇವಸ್ಥಾನದಲ್ಲಿ ಅಭಿಷೇಕ, ಮಹಾಭಿಷೇಕ, ಪಂಚಾಮೃತ ಪೂಜೆ, ಅಲಂಕಾರ ಪೂಜೆಗಳು ನಡೆಯುತ್ತದೆ. ನಿತ್ಯ ಬೆಳಗಿನ ಜವದ ೪.೩೦ರಿಂದ ಬೆಳಿಗ್ಗೆ ೭ ರವರೆಗೆ, ಬೆಳಿಗ್ಗೆ ೯ರಿಂದ ಮಧ್ಯಾಹ್ನ ೨ ರವರೆಗೆ ಮತ್ತೆ ಸಂಜೆ ೬ರಿಂದ ೭ರವರೆಗೆ ಪೂಜೆ ಮತ್ತು ದರ್ಶನಕ್ಕೆ ಅವಕಾಶವಿದೆ. ದೇವಸ್ಥಾನದ ನಿರ್ವಹಣೆಯನ್ನು ಚೌಡಮ್ಮದೇವಿ ದೇವಾಲಯದ ಧರ್ಮದರ್ಶಿ ರಾಮಪ್ಪ ನೋಡಿಕೊಳ್ಳುತ್ತಿದ್ದಾರೆ. ಶೇಷಗಿರಿ ಭಟ್ಟರು ಇಲ್ಲಿನ ಪ್ರಧಾನ ಅರ್ಚಕರು.
ಸ್ಥಳ ಪುರಾಣ:
ಅದೊಂದು ದಿನ ಸೀಗೆ ಕಣಿವೆಯ ಪುಣ್ಯ ವಿಶೇಷವಿರಬೇಕು. ಆಗಿನ ಸಮಾಜದ ನಾಯಕರಾಗಿದ್ದ ಶೇಷಪ್ಪನವರು ತನ್ನ ಸಂಗಡಿಗರೊಂದಿಗೆ ಬೇಟೆಯಾಡಲು ಸೀಗೆ ಕಣಿವೆಯ ಅರಣ್ಯದ ಕಡೆ ಉತ್ಸುಕರಾಗಿ ಹೊರಟಿದ್ದರು. ಬೆಳೆದು ನಿಂತ ಮರ-ಬಳ್ಳಿ ಪೊದೆಗಳಿಂದಾವೃತವಾದ ಕಾಡದು. ಹುಲಿ, ಚಿರತೆ, ಕೋಣ ಮತ್ತು ಜಿಂಕೆಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಕಾಡಿನಲ್ಲಿ ಸಂಚರಿಸುವುದು ಮನಸ್ಸಿಗೆ ಒಂದು ರೀತಿಯ ಭೀತಿಯಾದರೂ, ತಂಪಾದ ವಾತಾವರಣದಲ್ಲಿ ಸಂಚರಿಸುವುದು ಮನಸ್ಸಿಗೆ ಒಂದು ರೀತಿಯ ಮುದ ನೀಡುವ ದಟ್ಟಾರಣ್ಯ. ಶೇಷಪ್ಪನವರು ಸಂಗಡಿಗರ ಜೊತೆ ಸರಿಯಾದ ಭೇಟೆ ಅರಸುತ್ತಾ ಮುಂದುವರೆಯುತ್ತಿದ್ದರು. ಮುಂದೆ ಶೇಷಪ್ಪ, ಹಿಂದೆ ಸಂಗಡಿಗರು. ಇದ್ದಕಿದ್ದ ಹಾಗೆ ಶೇಷಪ್ಪನವರಿಗೂ ಮತ್ತು ಸಂಗಡಿಗರ ನಡುವಿನ ಅಂತರ ಹೆಚ್ಚಾಯಿತು. ಇದರ ಅರಿವಿಲ್ಲದೇ ಶೇಷಪ್ಪನವರು ಮುಂದುವರಿಯುತ್ತಿzರೆ. ಇದ್ದಕಿದ್ದ ಹಾಗೆ ಹಿಂತಿರುಗಿ ನೋಡಿದರು. ಸಂಗಡಿಗರು ಯಾರೂ ಕಾಣಿಸಲಿಲ್ಲ. ಹಿಂದೆ ಎಂದೂ ಹೀಗಾಗಿರಲಿಲ್ಲ. ಇಂದೇಕೆ? ಒಂದು ಕ್ಷಣ ತಬ್ಬಿಬ್ಬಾದರು. ಒಂದೆಡೆ ಹುಲಿಯ ಘರ್ಜನೆಯಾದರೆ, ಇನ್ನೊಂದು ಕಡೆಯಿಂದ ಹುಳ ಹುಪ್ಪಟಗಳ ಶಬ್ಧ. ಪಶ್ಚಿಮಾಂಬುದಿಯಲ್ಲಿ ರವಿಯು ಅಸ್ತಂಗತನಾದ ಸಮಯದಲ್ಲಿ ಬೆಳಕು ಮಂದವಾಗತೊಡಗಿತು. ಅದೇನೋ ಒಂದು ರೀತಿಯ ಮಂಪರು... ಏನೂ ಮಾಡಲು ಹೊಳೆಯದಂತಹ ಆಲಸ್ಯ. ಹಿಂದೆಂದೂ ಮೂಡದ ಭಯದ ಸೆಳೆವು. ಶೇಷಪ್ಪನವರ ಹೃದಯಾಂತರಾಳದಿಂದ ಮಾತೊಂದು ಹೊರಬಿತ್ತು  ಅಮ್ಮಾ, ತಾಯೇ, ನಾನು ಇದುವರೆಗೆ ನನಗೆ ತಿಳಿದಂತೆ ಅನ್ಯಾಯ ಎಣಿಸಿಲ್ಲ. ನಿನ್ನನ್ನು ಇದುವರೆಗೆ ನಂಬಿ ಬಾಳಿದೆ. ನನ್ನನ್ನು ಕಾಯುವ ಭಾರ ನಿನ್ನದಮ್ಮ-ನಿನ್ನದು ಎಂದು ದೈನ್ಯತೆಯಿಂದ ಬೇಡಿದರು.
ಆ ಕ್ಷಣದಲ್ಲಿ ಶೇಷಪ್ಪನವರಿಗೆ ನಿದ್ರೆಯಾವರಿಸಿತು. ನಿದ್ರೆಯಲ್ಲಿ ಕನಸು. ಭೂಮಿ ಬಿರಿಯುವಂತೆ ಗುಡುಗು ಗುಡುಗಿತು. ಸಿಡಿಲು ಸಿಡಿಯಿತು. ಮಿಂಚು ಮಿಂಚಿತು. ವೇದ ನಾದದ ಅಂಗಣ ಹಿತವಾಗಿ ವ್ಯಾಪಿಸಿ ಮಧ್ಯದಂದು ಪ್ರಭೆ ಮೂಡಿತು. ಶಂಖ ಚಕ್ರ ಗಧಾದಾರಿಯಾಗಿ ಮಂದಹಾಸ ಬೀರುತ್ತಾ ನಿಂತಿzಳೆ - ಆದಿಶಕ್ತಿ, ಮಹಾಮಾಯೆ ಲೋಕಮಾತೆ ಸಿಗಂದೂರೇಶ್ವರಿ ರೂಪದಲ್ಲಿ. ನಾನಿಲ್ಲಿ ನೆಲೆಸಿ ಧರ್ಮೋದ್ದಾರ- ಭಕ್ತ ಪರಿಪಾಲನೆ ಮಾಡಬೇಕೆಂದು ನಿಶ್ಚಯಿಸಿzನೆ. ಆದರೆ ನೆಲೆ ನಿಲ್ಲಲು ಗುಡಿಯ ಅವಶ್ಯಕತೆಯಿದೆ. ನಾನು ನೆಲೆನಿಲ್ಲಲು ಗುಡಿಯೊಂದನ್ನು ಕಟ್ಟಿಸು, ನಿತ್ಯ ಪೂಜೆ ನಡೆಯ ಬೇಕು, ನಾನು ಶಿಲಾರೂಪಿಯಾಗಿ ನೆಲೆಸುತ್ತೇನೆ ಎಂದು ದೇವಿ ಕನಸಲ್ಲಿ ಬಂದು ಶೇಷಪ್ಪನವರಿಗೆ ಹೇಳಿದಳು. ಶೇಷಪ್ಪನವರಿಗೆ ಎಚ್ಚರವಾಯಿತು. ಸುತ್ತ ನೋಡಿದಾಗ ಕತ್ತಲಾವರಿಸಿತ್ತು. ಮನೆಯತ್ತ ನಡೆಯತೊಡಗಿದರು.
ಇದಾದ ನಂತರ ದಿನ ಕಳೆದಂತೆ ಶೇಷಪ್ಪನವರ ದಿನಚರಿ ಬದಲಾಯಿತು. ಆಧ್ಯಾತ್ಮದ ಕಡೆ ಒಲವು ಹರಿಯಿತು. ದೇವಿ ಶಿಲಾರೂಪಿಯಾಗಿ ಸೀಗೆ ಕಣಿವೆಯಲ್ಲಿ ನಿಂತಿರುವಳು ಎನ್ನುವುದನ್ನು ಖಚಿತ ಪಡಿಸಿಕೊಂಡರು. ಆದರೆ ಜನರನ್ನು ನಂಬಿಸುವುದೆಂತು. ನೂರಾರು ವರ್ಷ ತಪಸ್ಸನ್ನಾಚರಿಸಿದರೂ ಸಾಧು ಸಂತರಿಗೆ ಒಲಿಯದ ದೇವಿ ತನಗೆ ಕನಸಲ್ಲಿ ಬಂದು ಅಪ್ಪಣೆ ಕೊಡಿಸಿದಳು ಎಂದರೆ ಜನ ನಂಬಿಯಾರೆ? ಎನ್ನುವ ಚಿಂತೆಯ ಜಲಾವೃತವಾದ ಕಾಡನ್ನು ದಾಟಿ ಒಂಟಿಯಾಗಿ ತಾನು ಕನಸು ಕಂಡ ಸ್ಥಳ ಪರಿಶೀಲಿಸಿದರು. ಅಲ್ಲಿಯೇ ವಿಜೃಂಬಿಸುತ್ತಿದ್ದಳು ತಾಯಿ ಸಿಗಂದೂರೇಶ್ವರಿ. ತಾವು ದೇವಿಗೆ ಪೂಜೆ ಮಾಡಿದರು. ಆದರೂ ತೃಪ್ತಿ ಸಮಾಧಾನವಿಲ್ಲ.
ಭಾವನಾ ಪ್ರಪಂಚದ ತೇಲುತ್ತಿದ್ದ ಅವರ ಚಿತ್ತಭಿತ್ತಿಗೆ ಹೊಳೆದುದೇ ಆಗಮ ದುಗ್ಗಪ್ಪಜ್ಜ.
ದುಗ್ಗಪ್ಪಜ್ಜ ಸಾಧಾರಣ ವ್ಯಕ್ತಿ. ಬ್ರಾಹ್ಮಣರಾದರೂ ವೇದ, ಶಾಸ್ತ್ರ, ಮಂತ್ರ ಓದಿದವರಲ್ಲ. ಕೇವಲ ಶದ್ಧಾ ಭಕ್ತಿಯೇ ಅವರ ಉಸಿರು. ಮುಖದಲ್ಲಿ ಸದಾ ಹರ್ಷ, ಕಣ್ಗಳಲ್ಲಿ ನಿರ್ಮಲತೆ, ಮನಸ್ಸಿನಲ್ಲಿ ಪ್ರೀತಿ, ಮಾತಿನಲ್ಲಿ ಮಾಧುರ್ಯ, ಇವೇ ಅವರನ್ನು ಎಲ್ಲರೂ ಗೌರವಾಧರಗಳಿಂದ ಕಾಣುವಂತೆ ಮಾಡಿತ್ತು. ಶೇಷಪ್ಪನವರು ತಾನು ಕಂಡ ಕನಸಿನ ವಿಚಾರವನ್ನೆ ಸವಿಸ್ತಾರವಾಗಿ ನಿವೇದಿಸಿದರು. ತಾಯಿ ಶೇಷಪ್ಪನವರಿಗೆ ಕನಸ್ಸಲ್ಲಿ ಕಂಡ ವಿಷಯ ಕೇಳಿ ದಂಗಾದ ದುಗ್ಗಪ್ಪಜ್ಜ.
ತಾನು ದೇವಿಗೆ ದೇವಸ್ಥಾನ ಕಟ್ಟಿಸುತ್ತೇನೆ, ನೀವು ನನಗೆ ಮಾರ್ಗದರ್ಶಕರಾಗಬೇಕು. ಹೀಗೆ ಮಾಡು ಅಂತ ಅಪ್ಪಣೆ ಕೊಡಿಸಿ, ಅದರಂತೆ ಮಾಡುತ್ತೇನೆ. ನೀವೆ ಅರ್ಚಕರಾಗಿರಬೇಕು ಅಂತ ಶೇಷಪ್ಪನವರು ದುಗ್ಗಪ್ಪಜ್ಜ ಹತ್ತಿರ ಕೇಳಿಕೊಂಡರು. ಅದಕ್ಕೆ ದುಗ್ಗಪ್ಪಜ್ಜ ಸಮ್ಮತಿಸಿದರು.
ಸಣ್ಣದೊಂದು ಗುಡಿ ನಿರ್ಮಾಣವಾಯಿತು. ದುಗ್ಗಜ್ಜನವರೇ ಅರ್ಚಕರು. ಶೇಷಪ್ಪನವರೇ ಧರ್ಮದರ್ಶಿಗಳು. ಕ್ರಮೇಣ ಸಿಗಂದೂರೇಶ್ವರಿಯ ಖ್ಯಾತಿ ಪಸರಿಸತೊಡಗಿತು. ಭಕ್ತರ ಇಷ್ಟಾರ್ಥಗಳು ಫಲಪ್ರದವಾಗುತ್ತಿತ್ತು. ಭಕ್ತಾದಿಗಳು ಪೂಜೆ ಸಲ್ಲಿಸುತ್ತಿದ್ದರು.
ಕಷ್ಟ, ನೋವು, ಬೇನೆ, ಬೇಸರಿಕೆಗಳಿಂದ ಪರಿತಪಿಸುವ ಜನಸಾಮಾನ್ಯ ಭಕ್ತವೃಂದಕ್ಕೆ ಸಂಕ, ತೋಡು ದಾಟಲು ಕಟ್ಟುವ ಸೇತುವೆಗೆ ದಾಟುವಾಗ ಬೀಳದಂತೆ ಹಿಡಿಯಲು ಹಿಡಿಯಾಗುವಂತೆ ದುಗ್ಗಜ್ಜ ಭಕ್ತರ ಹಿಡಿಯಾದರು. ಶೇಷಪ್ಪನವರು ಸೇತುವೆಯಾದರು. ಮಾಳಿಗೆಯ ಮನೆಯಲ್ಲಿ ಒತ್ತಿ ತುಂಬಿಕೊಂಡ ಕತ್ತಲೆಯನ್ನು ಜನರಿಂದ ಹೊರಕ್ಕೆ ತಳ್ಳಿ ನೂಕಲಾಗದು. ಆದರೆ ಒಂದು ದೀಪವನ್ನು ಹೊತ್ತಿಸಿಟ್ಟರೆ ಮುತ್ತಿದ ಕತ್ತಲೆಯು ತಾನೇ ಕಾಲುಕಿತ್ತು ಓಡಿಹೋಗುತ್ತದೆ ಎಂಬಂತೆ ದೀನರಾಗಿ ಬಂದು ಬೇಡುವ ನೊಂದ ಜನರ ಪಾಲಿಗೆ ದುಗ್ಗಜ್ಜ-ಶೇಷಪ್ಪ ನಂದಾದೀಪವಾದರು.
ದುಗ್ಗಜ್ಜ-ಶೇಷಪ್ಪನವರ ಕಾಲಾನಂತರ ಶ್ರೀದೇವಿಯ ಮೂಲ ವಿಗ್ರಹ ನೀರಿನಲ್ಲಿಯೇ ಮುಳುಗಿರುವುದನ್ನು ನೋಡಿ, ದೇವಿಗೆ ನಿತ್ಯ ಪೂಜೆ ಸಲ್ಲುವಂತಾಗಬೇಕೆಂದು ಯೋಚಿಸಿ ದೇವಸ್ಥಾನವನ್ನು ಈಗಿರುವ ಎತ್ತರದ ಸ್ಥಳಕ್ಕೆ ಶ್ರೇಷ್ಟ ವೈದಿಕ ವೇದೋತ್ತಮರಿಂದ ವಿಧಿವತ್ತಾಗಿ ಪ್ರತಿಷ್ಟಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಸಿಗಂದೂರೇಶ್ವರಿ ತನ್ನನ್ನು ನಂಬಿದ ಭಕ್ತರನ್ನು ಕೈಬಿಡದೇ ಕಾಯುತ್ತಲೇ ಬಂದಿzಳೆ.
ಭಗವಾನ್ ಶೀಧರರೂ ಒಮ್ಮೆ ಸಿಗಂದೂರಿಗೆ ಬಂದಿದ್ದರು. ಆಗ ದೇವಿಯ ಉಗ್ರ ಸ್ವರೂಪಿಯಾಗಿzಳೆಂದು ಶ್ರೀಧರರು ಮೃದು ಸ್ವಭಾವದ ಭಕ್ತಪೋಷಣೆಯಾಗಬೇಕೆಂದು ಪ್ರಾರ್ಥಿಸಲು ಒಪ್ಪಿದ ದೇವಿಯು ಅಂದಿನಿಂದ ಸೌಮ್ಯವಾಗಿzಳೆನ್ನುವ ಪ್ರತೀತಿಯೂ ಇದೆ.

ಮಾರ್ಗಸೂಚಿ.
ಸಾಗರದಿಂದ ಆವಿನಹಳ್ಳಿ ದಾರಿಯಲ್ಲಿ ಹೊಳೆ ಬಾಗಿಲವರೆಗೆ ರಸ್ತೆಯಿದೆ. ಹೊಳೆಬಾಗಿಲಿನಲ್ಲಿ ಲಿಂಗನಮಕ್ಕಿ ಅಣೆಕಟ್ಟೆಯ ಹಿನ್ನೀರು ಎದುರಾಗುತ್ತದೆ. ಇಲ್ಲಿಂದ ಮುಂದೆ ಸೇತುವೆ ಇಲ್ಲ. ಲಾಂಚ್‌ನ ಮೂಲಕ ಹಿನ್ನೀರು ದಾಟಬೇಕು. ಈ ದಾರಿಯಲ್ಲಿ ಬರುವ ಎ ವಾಹನಗಳಿಗೂ ಲಾಂಚ್ ಬಳಕೆ ಅನಿವಾರ್ಯ. ಹಿನ್ನೀರು ಸುಮಾರು ೨ ಕಿ.ಮೀ. ಅಗಲವಿದೆ. ಲಾಂಚ್ ಸೇವೆ ನಿಗದಿತ ಸಮಯಗಳಲ್ಲಿ ಮಾತ್ರ ಲಭ್ಯ. ಹಿನ್ನೀರು ದಾಟಿದ ನಂತರ ಕಾಡಿನ ರಸ್ತೆಯಲ್ಲಿ ೫ ಕಿ.ಮೀ. ಸಾಗಿದರೆ ಚೌಡಮ್ಮ ದೇವಿಯ ದರ್ಶನವಾಗುತ್ತದೆ. ಲಾಂಚ್‌ಗೆ ೧ರೂ.ಶುಲ್ಕ, ವಾಹನಗಳಿಗೆ ತಲಾ ೫ರೂ. ಹಿನ್ನೀರು ದಾಟಿದ ತಕ್ಷಣ ಸಿಗಂದೂರು ಕ್ಷೇತ್ರಕ್ಕೆ ಹೋಗಲು ಖಾಸಗಿ ವಾಹನಗಳಿವೆ. ಕೊಲ್ಲೂರು ಕಡೆಯಿಂದ ಬರುವವರು ರಸ್ತೆ ಮಾರ್ಗವಾಗಿ ನಾಗೊಡ್ಡಿ ಘಟ್ಟವನ್ನು ದಾಟಿ ತುಮರಿ ಮಾರ್ಗವಾಗಿ ಸಿಗಂದೂರಿಗೆ ಬರಬಹುದು.
ದೂರದಿಂದ ಬರುವವರು ಶಿವಮೊಗ್ಗ ಅಥವಾ ಸಾಗರದಲ್ಲಿ ವಾಸ್ತವ್ಯ ಮಾಡಬಹುದಾಗಿದೆ.  ಸಿಗಂದೂರು ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಉಳಿಯಲು ವ್ಯವಸ್ಥೆ ಇದೆ. ಸಿಗಂದೂರು ಚೌಡಮ್ಮದೇವಿ ದೇವಾಲಯದ ದೂರವಾಣಿ ಸಂಖ್ಯೆ: ೦೮೧೮೬- ೨೪೫ ೦೮೮/ ೨೪೫ ೧೧೪ ಸಂಪರ್ಕಿಸಬಹುದು.
ಊಟದ ವ್ಯವಸ್ಥೆ ಮಾಡಿ....
ಸಿಗಂದೂರು ಕ್ಷೇತ್ರ ಹಿನ್ನೀರು ಪ್ರದೇಶದಲ್ಲಿ ಇರುವುದರಿಂದ ಇಲ್ಲಿಗೆ ಬರುವ ಭಕ್ತರಿಗೆ ಊಟದ ಸಮಸ್ಯೆ ಎದುರಾಗುತ್ತದೆ. ಇಲ್ಲಿ ಉತ್ತಮ ಊಟದ ಹೋಟೆಲ್‌ಗಳಿಲ್ಲ. ದೇವಸ್ಥಾನ ಸಮಿತಿ ಭಕ್ತರಿಗೆ ಊಟದ ವ್ಯವಸ್ಥೆ ಮಾಡಬೇಕು ಎಂಬುದು ಇಲ್ಲಿಗೆ ಬರುವ ಭಕ್ತರ ಬೇಡಿಕೆ. ಈ ಬೇಡಿಕೆಯನ್ನು ದೇವಸ್ಥಾನ ಸಮಿತಿ ಪರಿಶೀಲಿಸಬೇಕು ಎನ್ನುವುದು ಹಲವು ಭಕ್ತರ ಮನವಿ.

Saturday, 16 February 2013


ಗತ್ತು,ಘನತೆ, ಗಾಂಭೀರ್ಯದ ಪ್ರತೀಕ-ಬಂಟ ಸಮುದಾಯದ ಸಂಪ್ರದಾಯ 
ಇದು ತುಳುನಾಡಿನ ಬಂಟರ ಯಾನೆ ನಾಡವರ ಯಾನೆ ನಾಯರ್ ಸಮುದಾಯ ಗುಟ್ಟು.
ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿಯ ಸೌಂದರ್ಯ ಪ್ರವಾಸಿಗರನ್ನು ಆಕರ್ಷಿತವಾಗಿಸುತ್ತದೆ. ಅಲ್ಲದೇ ಕರಾವಳಿಯಲ್ಲಿ ತನ್ನದೇ ಆದ ಘನತೆ, ಗತ್ತು, ರಾಜ ಗಾಂಭೀರ್ಯದಿಂದ ನಾಗವಂಶಿಯರೆಂದು ಕರೆಸಿಕೊಂಡ ಬಂಟ ಯಾನೆ ನಾಡವರ ಪರಿಚಯದ ಅಗತ್ಯವಿದೆ. ಕೇರಳದ ಕಾಸರಗೋಡಿನಿಂದ ಪ್ರಾರಂಭಗೊಂಡು ಕುಂದಾಪುರದ ಭಟ್ಕಳದವರೆಗೆ ವ್ಯಾಪಿಸಿರುವ ಪ್ರದೇಶದಲ್ಲಿ ಬಂಟರು ವಾಸವಾಗಿದ್ದಾರೆ. ಇವರು ನಾಗವಂಶದ ವಂಶಾವಳಿಯರೆಂದು ಹಾಗೂ ಕ್ಷತ್ರಿಯ ಸಂತತಿಗಳೆಂದು ಕರೆಯುತ್ತಾರೆ. ರಾಷ್ಟ್ರ ಹಾಗೂ ರಾಜ್ಯದಲ್ಲಿ ಇವರನ್ನು ಮೇಲ್ವರ್ಗದ(ಒಬಿಸಿ-೨) ಜಾತಿಯೆಂದು ಕೂಡ ವರ್ಗಿಕರಿಸಲಾಗಿದೆ. ಸಾಂಪ್ರದಾಯಿಕವಾಗಿ ಮೂಲದ ಮತ್ತು ರಕ್ತಸಂಬಂಧದಿಂದಾಗಿ ಇವರು ಮಾತೃಸಂತತಿಯ ವ್ಯವಸ್ಥೆಯನ್ನು ಅನುಸರಿಸುವುದು ವಿಶೇಷವಾಗಿದೆ.
``ಬಂಟ" ಎನ್ನುವುದು ತುಳು ಭಾಷೆಯಲ್ಲಿ ಶಕ್ತಿಯುತ ವ್ಯಕ್ತಿ ಅಥವಾ ಸೈನಿಕ ಎಂದರ್ಥ. ವಿವಿಧ ಸಿದ್ಧಾಂತಗಳು ಮತ್ತು ಬಂಟ ಸಮುದಾಯದ ಮೂಲವನ್ನು ಈ ಪದ ಸಾರುತ್ತವೆ. ಎಲ್ಲಾ ಬಂಟರು ತುಳು ನಾಡು ಪ್ರದೇಶಕ್ಕೆ ಸ್ಥಳೀಯರಾಗಿಲ್ಲದೇ ಅವರಲ್ಲೂ ಉತ್ತರ ಭಾರತದಿಂದ ವಲಸೆ ಬಂದವರು ಎಂದು ಹೇಳಲಾಗುತ್ತದೆ. ದಂತಕಥೆಗಳಲ್ಲಿ ಮತ್ತು ಸಿದ್ಧಾಂತಗಳು ಹಿಂದೂ ಪುರಾಣಗಳಲ್ಲಿರುವ ನಾಗಾ ಹಾಗೂ ಐತಿಹಾಸಿಕ ಸೈಥಿಯನ್ ಜನರಿಗೆ ಬಂಟರ ಔಚಿತ್ಯವನ್ನು ಸೂಚಿಸುತ್ತವೆ.
ತುಳು ನಾಡಿನ ಬಂಟ ಅಸ್ತಿತ್ವವನ್ನು ಸೂಚಿಸುವ ಆರಂಭಿಕ ಲಭ್ಯವಿರುವ ಶಿಲಾಶಾಸನ ಪುರಾವೆಗಳು ಲಭ್ಯವಿವೆ. ಬಂಟ ಯೋಧರು ಹಾಗೂ ಶಿವಳ್ಳಿ ಬ್ರಾಹ್ಮಣರು ಜೊತೆಗೆ ವಿವರಿಸಲಾಗಿರುವುದನ್ನು ೯ನೇ ಶತಮಾನದಲ್ಲಿರುವ ಶಾಸನವು ಉಡುಪಿ ಸಮೀಪದ ಚೊಕ್ಕಾಡಿ ಹಳ್ಳಿಯಲ್ಲಿ ಕಂಡುಬರುತ್ತವೆ. ಎಸ್‌ಡಿಎಲ್ ಅಲ್ಗೋಡಿಯವರ ಪ್ರಕಾರ ಬಂಟರು  ಮೂಲತಃ ಯೋಧರ ವರ್ಗಕ್ಕೆ ಸೇರಿದವರಾಗಿದ್ದರು. ತುಳು ನಾಡಿನ ಸಮರ ಕಲೆಗಳಲ್ಲಿ ಪ್ರಖ್ಯಾತಿಯನ್ನು ಗಳಿಸಿದ್ದು, ಅವರು ಆಡಳಿತದಲ್ಲಿ ಸಾಕಷ್ಟು ಅನುಕೂಲತೆಗಳನ್ನು ತಂದ ಆಡಳಿತ ನಿಷ್ಣಾತರು ಎಂದು ಸಾರಲಾಗಿದೆ. ಪ್ರದೇಶದಲ್ಲಿ ಉತ್ತಮ ಆಳ್ವಿಕೆಯನ್ನು ನಡೆಸುತ್ತಾ, ಕುಟುಂಬವನ್ನು ಪಾಲಿಸುತ್ತಾ ಕುಲೀನರೆನಿಸಿಕೊಂಡಿದ್ದರು. ೧೫ರಿಂದ ೧೮ ನೇ ಶತಮಾನದಲ್ಲಿ ಬಂಟರು ಸಾಮಂತ ರಾಜ್ಯಗಳ ಉತ್ತುಂಗದ ತುತ್ತತುದಿಯಲ್ಲಿದ್ದರು. ಈ ಸಾರ್ವಭೌಮತೆಯನ್ನು ಹೊಂದಿರುವ ಕೆಲವು ಗಮನಾರ್ಹ ಬಂಟ ಕುಲಗಳು ಹೊಸಂಗಡಿಯ ಹೊನ್ನೆಯಕಂಬಾಲಿಸ್, ಮೂಲ್ಕಿಯ ಸಾಮಂತ ರಾಜರು, ಕಾರ್ಕಳದ ಬಾಯರ್ ಅರಸ್, ಕುಂಬ್ಳೆಯ ಅರಸ್, ವೇಣೂರಿನ ಅಜಿಲಾಸ್, ಉಡುಪಿಯ ಸೂರಾಲ್‌ನ ತೋಳಾರ್, ವಿಟ್ಲದ ಹೆಗ್ಗಡೆ, , ಉಳ್ಳಾಲ ಹಾಗೂ ಮೂಡಬಿದ್ರೆಯ ಚೌಟರು, ಬಂಗಾಡಿಯ ಬಂಗರು ಮುಖ್ಯರಾಗಿದ್ದಾರೆ. ಬಂಟರು ಸಾಮಾನ್ಯವಾಗಿ ತುಂಬು ಕುಟುಂಬ ವ್ಯವಸ್ಥೆಗೆ ಹೊಂದಿಕೊಂಡು ಸಮಾಜದ ಉತ್ತರಾಧಿಕಾರಿಯಾಗುತ್ತಿದ್ದರು. ಆದರೆ ವಸಾಹತುಶಾಹಿ ಬ್ರಿಟಿಶ್ ರಾಜ್ ಕಾಲದಲ್ಲಿ ವಿಯೋಜನೆ ಆರಂಭಿಸಿ, ಇಂದು ಬಂಟರು ಹೆಚ್ಚಾಗಿ ನಗರ ಜೀವನಕ್ಕೆ ಮಾರುಹೋಗಿದ್ದಾರೆ.
ಉಪವಿಭಾಗಗಳು:
ಸಾಂಪ್ರದಾಯಿಕವಾಗಿ ಬಂಟ ಸಮುದಾಯದಲ್ಲಿ ವಿವಿಧ ಉಪ ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ಉಪವಿಭಾಗದ ಆಚರಣೆ ಮತ್ತು ಸಂಪ್ರದಾಯಗಳನ್ನು ಕೊಂಚಮಟ್ಟಿಗೆ ಭಿನ್ನವಾಗಿದ್ದವು. ಕಾಲಾನಂತರದಲ್ಲಿ ಬಂಟ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಪ್ರಭಾವ ಬೀರಬಹುದಾದ ಅಂಶಗಳು ಉಪವಿಭಾಗೀಯ ವ್ಯತ್ಯಾಸದಿಂದ ಅಳಿವಿನ ಕಾರಣವಾಗಿದ್ದು ಇವುಗಳ ವ್ಯಾಖ್ಯಾನ ಅಸ್ಪಷ್ಟತೆಯಿಂದ ಕೂಡಿವೆ.
ಮಸಾಡಿಕ್ ಬಂಟ: ಇದು ಬಂಟ ಸಮುದಾಯದಲ್ಲಿ ಅಗಾಧವಾಗಿರುವ ಏಕೈಕ ಅತಿದೊಡ್ಡ ಉಪವಿಭಾಗವಾಗಿದೆ. ಸ್ಥಳೀಯವಾಗಿ ತುಳು ಭಾಷೆಯನ್ನು ಮಾತನಾಡುತ್ತಾರೆ. ಇವರು ಮಾತೃಸಂತತಿಯ ಆನುವಂಶಿಕತೆಯ ಅಳಿಯ ಕಟ್ಟು ವ್ಯವಸ್ಥೆಯನ್ನು ಅನುಸರಿಸುತ್ತಾರೆ. ಕೇರಳದ ಕಾಸರಗೋಡುವಿನಿಂದ ಪ್ರಾರಂಭಗೊಂಡು ಉಡುಪಿ ಜಿಲ್ಲೆಯ ಬ್ರಹ್ಮಾವರದವರೆಗೆ ವಾಸವಾಗಿರುವುದನ್ನು ನೋಡಬಹುದು.
ನಾಡ ಬಂಟ: ಇವರು ಬಂಟ ಸಮುದಾಯದಲ್ಲಿ ಎರಡನೇ ಅತಿದೊಡ್ಡ ಉಪವಿಭಾಗವಾಗಿದೆ. ಸ್ಥಳೀಯವಾಗಿ ಕುಂದಗನ್ನಡ ಮಾತನಾಡುತ್ತಾರೆ. ಇದು ಕನ್ನಡ ಭಾಷೆಯ ಉಪಭಾಷೆಯಾಗಿದ್ದು ಕುಂದಾಪುರ ತಾಲೂಕಿನಲ್ಲಿ ಕಂಡುಬರುತ್ತವೆ. ಇವರು ಅಳಿಯಕಟ್ಟು ವ್ಯವಸ್ಥೆಯನ್ನು ಅನುಸರಿಸುತ್ತಾರೆ. ಇವರಲ್ಲಿ ಮಾತೃಸಂತತಿಯ ಆಸ್ತಿಗಳು ಪಿತ್ರಾರ್ಜಿತವಾಗಿರುತ್ತದೆ. ಕುಂದಾಪುರದಲ್ಲಿ ಜಾಸ್ತಿಯಾಗಿ ಕಂಡು ಬರುತ್ತಾರೆ. ಇವರನ್ನು ನಾಡವರು ಎಂದು ಕರೆಯಲಾಗುತ್ತವೆ.
ಪರಿವಾರ ಬಂಟ: ಇವರು ಸ್ಥಳೀಯವಾಗಿ ತುಳು ಭಾಷೆ ಮಾತನಾಡುತ್ತಾರೆ. ಕಡಿಮೆ ಸಂಖ್ಯೆಯಲ್ಲಿರುವ ಪರಿವಾರವು ಪಾರಂಪರತೆಯನ್ನು ಧೃಡಪಡಿಸುವ ಆನುವಂಶಿಕತೆಯ ಮಕ್ಕಳ ಕಟ್ಟು ವ್ಯವಸ್ಥೆಯನ್ನು ಅನುಸರಿಸುತ್ತವೆ. ಇವರುಗಳು ದ.ಕ.ಜಿಲ್ಲೆಯ ಸುಳ್ಯ, ಕೊಡಗು, ಕೇರಳದ ಕಾಸರಗೋಡುವಿನಲ್ಲಿ ಕಂಡುಬರುತ್ತಾರೆ. ಅವರ ಆಚರಣೆ ಮತ್ತು ಸಂಪ್ರದಾಯಗಳು ಬಂಟ ಸಂಸ್ಕೃತಿ ಮತ್ತು ಶಿವಳ್ಳಿ ಬ್ರಾಹ್ಮಣರ ಮಿಶ್ರಣವಾಗಿದೆ.
ಜೈನ ಬಂಟ: ನಂಬಿಕೆಯ ಮೂಲಕ ಜೈನರಾಗಿದ್ದರೂ ಜೈನ ಬಂಟರು ಸಾಂಪ್ರದಾಯಿಕವಾಗಿ ಬಂಟ ಸಮುದಾಯದ ವಿಶಿಷ್ಟ ಉಪವಿಭಾಗವೆಂದು ವ್ಯಾಖ್ಯಾನಿಸಲಾಗಿದೆ. ಆದರೆ ಇವರನ್ನು ಒಂದು ಪ್ರತ್ಯೇಕ ಸಮುದಾಯವೆಂದು ವರ್ಗೀಕರಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಜೈನ್ ಧರ್ಮ ಪ್ರಸಾರ ಕಾಲದಲ್ಲಿ ಜೈನ್ ಸಂಪ್ರದಾಯದಿಂದ ಈ ಉಪವಿಭಾಗ ಹುಟ್ಟಿಕೊಂಡಿತು. ಇವರಲ್ಲಿ ಕಡಿಮೆ ಕುಟುಂಬಗಳು ಇರುವುದಾದರೂ ತುಳು ಭಾಷೆ ಅಥವಾ ಕನ್ನಡ ಭಾಷೆ ಮಾತನಾಡುತ್ತಾರೆ. ಪುರೋಹಿತ ಕರ್ತವ್ಯಗಳನ್ನು ಕೈಗೊಂಡ ಕೆಲವು ಕುಟುಂಬಗಳನ್ನು ಹೊರತುಪಡಿಸಿ, ಮಾತೃಸಂತತಿಯ ಆನುವಂಶಿಕತೆಯ ಅಳಿಯಕಟ್ಟು ವ್ಯವಸ್ಥೆಯನ್ನು ಹೊಂದಿದ್ದಾರೆ. ಇವರು ಜೈನ ಸಂಸ್ಕೃತಿ ಹಾಗೂ ಹಿಂದು ಬಂಟರ ಸಂಪ್ರದಾಯದ ಮಿಶ್ರಣವನ್ನು ಅನುಸರಿಸುತ್ತಾರೆ.
ಬಂಟರ ಸಂಪ್ರದಾಯ:
೨೦ ನೇ ಶತಮಾನದಲ್ಲಿ ಅಂತರ್ವಿವಾಹಗಳು, ರೀತಿ ರಿವಾಜುಗಳು ಅಸ್ತಿತ್ವದಲ್ಲಿದ್ದು, ಅದನ್ನು ಬಂಟರು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಸಗೋತ್ರಕ್ಕೆ ಹೆಣ್ಣನ್ನು ನೀಡದೆ ಅನ್ಯಗೋತ್ರಗಳ ವಿವಾಹ ಸಮಾರಂಭಕ್ಕೆ ಅಸ್ತು ಎನ್ನುವ ಸಂಪ್ರದಾಯ ಈಗಲೂ ಮುಂದುವರಿದಿದೆ. ಉಚಿತವಾಗಿ ಪರಸ್ಪರ ಅಂತರ್ವಿವಾಹ ನಾಡವರಲ್ಲಿ ಆಚರಣೆಯಲ್ಲಿತ್ತು. ಪರಿವಾರ ಮತ್ತು ಜೈನ ಸಮುದಾಯಗಳು ಸಗೋತ್ರಕ್ಕೆ ಒಲವು ನೀಡಿವೆ. ಇತರ ಉಪವಿಭಾಗಗಳು ಮತ್ತು ಮನುಷ್ಯ ಒಂದು ವ್ಯಕ್ತಿಯ ವಿವಾಹ ನಮೂದಿಸ ಬಹುದಾದ ವೈವಾಹಿಕ ಮೈತ್ರಿಯ ಅಪರೂಪದ ಸಂದರ್ಭಗಳಲ್ಲಿ ಹೊರತುಪಡಿಸಿ ಕಟ್ಟುಪಾಡುಗಳಿಲ್ಲ. ಹೀಗೆ ಬಂಟ ಸಮುದಾಯದಲ್ಲಿ ೯೦ ಉಪಕುಲಗಳಿವೆ ಎನ್ನುವ ಉಲ್ಲೇಖವಿದೆ.
೨೦ ನೇ ಶತಮಾನದಲ್ಲಿ ಬಂಟ ಯಾನೆ ನಾಡವರು ಕಿಂಗ್ ಮತ್ತು ಸಾಮಂತರು ಎನ್ನುವ ಬಿರುದುಗಳಿಂದ ಅಲಂಕೃತರಾಗಿದ್ದರು. ಬ್ರಿಟಿಷ್ ಆಡಳಿತಕ್ಕಿಂತ ಮುಂಚಿನ ಬಲ್ಲಾಳ ಬಂಟರ ಅವಧಿಯವರೆಗೆ ತುಳು ನಾಡಿನಲ್ಲಿ ಅಸ್ತಿತ್ವದಲ್ಲಿದ್ದ ಸಣ್ಣ ಸಂಸ್ಥಾನಗಳನ್ನು ಬಂಟ ಆಡಳಿತಗಾರರು ಹೊಂದಿದ್ದರು. ಪೆರುಮಾಳ್ ಸಂತತಿಯವರು ಕಟ್ಟುನಿಟ್ಟಾಗಿ ಸಸ್ಯಹಾರಿಯಾಗಿದ್ದು ಸಗೋತ್ರಕ್ಕೆ ಆದ್ಯತೆ ನೀಡದ ಕಾರಣ ಅವರನ್ನು ಬಂಟರು ಎಂದು ಉಲ್ಲೇಖಿಸಲಾಗಿದೆ. ಬಲ್ಲಾಳ ಕುಟುಂಬದ ಮುಖ್ಯಸ್ಥರು ಕಡ್ಡಾಯವಾಗಿ ಉಪನಯನಮ್ ಸಮಾರಂಭದಲ್ಲಿ ಒಳಗಾಗಿ ಜನಿವಾರವೆನ್ನುವ ಪವಿತ್ರ ದಾರವನ್ನು ಧರಿಸುತ್ತಿದ್ದರು. ಪವಿತ್ರ ನೂಲನ್ನು ಧರಿಸುವುದು ಮತ್ತು ಸಸ್ಯಾಹಾರ ಅಭ್ಯಾಸವು ಬಂಟರಿಗೆ ಪ್ರತೀಕವಾಗಿದ್ದರೂ ಇತರ ಬಂಟರಿಗೆ ಕಡ್ಡಾಯವಾಗಿಲ್ಲ. ತುಳು ನಾಡು ಪ್ರದೇಶದಲ್ಲಿ ಬಂಟಸಮುದಾಯವನ್ನು ಉದಾತ್ತತೆಯ ಅತ್ಯಧಿಕ ಅನುವಂಶಿಯತೆಯ ಶೀರ್ಷಿಕೆಯಾದ ``ರಾಯಧನ"ವೆನ್ನುವುದಾಗಿ ಕರೆಯಲಾಗುತ್ತದೆ. ಬಂಟ ಕುಟುಂಬ ಮುಖ್ಯಸ್ಥರನ್ನು ಶೆಟ್ಟಿ ವಾಲಾ ಮತ್ತು ಹೆಗ್ಡೆ ಎನ್ನುವುದಾಗಿ ಘೋಷಣೆ ಮಾಡಿ ಅವರನ್ನು ದೇವಾಲಯದ ಆಡಳಿತ ಮೊಕ್ತೇಸರರನ್ನಾಗಿ ಮಾಡುವ ಸಂಪ್ರದಾಯ ಈಗಲೂ ಮುಂದುವರಿದಿದೆ. ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದ ಪ್ರದೇಶಗಳ ಸಿವಿಲ್ ಅಥವಾ ಕ್ರಿಮಿನಲ್ ವಿವಾದಗಳನ್ನು ಪರಿಹರಿಸಲು ಕೂಡ ಪವಿತ್ರ ದಾರವನ್ನು ಧರಿಸುವ ಅಭ್ಯಾಸ ಬಂಟ ಸಮುದಾಯದಲ್ಲಿತ್ತು.
ಭಾಷೆ:
ಬಂಟರು ಬಹುಭಾಷೆಯನ್ನು ಬಲ್ಲವರಾಗಿದ್ದರು. ಸಾಮಾನ್ಯವಾಗಿ ತುಳು ಮತ್ತು ಕುಂದಗನ್ನಡವನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ತುಳುವರು ತುಳುವಿಗೂ ಹಾಗೂ ಕನ್ನಡಿಗರು ಕುಂದಗನ್ನಡಕ್ಕೂ ಪ್ರಾಶಸ್ತ್ಯ ನೀಡುತ್ತಾರೆ. ತಮ್ಮ ಮಾತೃಭಾಷೆಗೆ ಪ್ರಾದಾನ್ಯತೆ ನೀಡಿ ಉಳಿದ ಭಾಷೆಗಳಿಗೆ ಮನ್ನಣೆ ನೀಡುತ್ತಾರೆ. ತುಳುವರು ಉಡುಪಿಯ ದಕ್ಷಿಣಕ್ಕೆ ವಾಸಿಸುವವರಾಗಿದ್ದು ಅವರನ್ನು ತೆಂಕಣಿಗರು(ತೆಂಕ್ಲಾಯ್) ಹಾಗೂ ಕುಂದಗನ್ನಡ ಮಾತನಾಡುವವರನ್ನು ಬಡಗುಗಳು(ಬಡಕ್ಲಾಯ್). ಕನ್ನಡ ಬಂಟ ಹಾಗೂ ತುಳುಬಂಟ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ.
ಬಂಟರ ಧರ್ಮ:
ಉಡುಪಿ ಸಮೀಪದ ಮುಂಡ್ಕೂರು ದೇವಸ್ಥಾನದಲ್ಲಿ ದೇವಿ ಆದಿ ಶಕ್ತಿಯ ಮೂರ್ತಿಯಿದ್ದು ಬಂಟರ ಪವಿತ್ರ ಕ್ಷೇತ್ರವಾಗಿದೆ. ಭಗವಾನ್ ನಿತ್ಯಾನಂದರು ಬಂಟರ ಪೂಜನೀಯ ವ್ಯಕ್ತಿ. ಸುಬ್ರಹ್ಮಣ್ಯ ದೇವಸ್ಥಾನ ಸರ್ಪ ದೇವರುಗಳಿಗೆ ಅರ್ಪಿತವಾದ ಒಂದು ಪ್ರಮುಖ ದೇವಾಲಯವಾಗಿದೆ. ೧೯ನೇ ಶತಮಾನದಲ್ಲಿ ಬೆಳ್ಳಿ ಮುಖವಾಡದ ದೇವರು ಧೂಮಾವತಿಯು ಮಹಾವಿದ್ಯಾ ದೇವರೆಂದು ಗುರುತಿಸಲಾಗಿದೆ. ಉಡುಪಿಯ ಮೂಡುಬೆಳ್ಳೆಯಲ್ಲಿರುವ ನಾಗಬನವು ಇದಕ್ಕೆ ಸಾಕ್ಷಿಯಾಗಿದೆ.
ಬಂಟರು ಪ್ರಾಥಮಿಕವಾಗಿ ಆದಿ ಶಕ್ತಿಯನ್ನು ಪೂಜಿಸುತ್ತಾರೆ. ಬಂಟರು ಮೀಸಲು ಆದಿ ಶಕ್ತಿಗೆ ಮಾತ್ರವಾಗಿರದೆ ದೈವಿಕ ತಾಯಿ ಆದಿ ಶಕ್ತಿ ಅಂಶ ಶಿವ ಮತ್ತು ವಿಷ್ಣು ಸೇರಿದಂತೆ ಹಿಂದೂ ಧರ್ಮದ ಎಲ್ಲಾ ದೇವರನ್ನು ಅರ್ಚಿಸುತ್ತಾರೆ. ಬಂಟರು ಮೋಕ್ಷ ಅಥವಾ ಮುಕ್ತಿಗೆ ದಾರಿಯಾದ ದೈವಿಕ ತಾಯಿಯ ಯಾವುದೇ ಅಂಶವನ್ನು ಭಕ್ತಿ ಮೂಲವಾಗಿ ನಂಬಿದ್ದಾರೆ. ಆದ್ದರಿಂದ ತುಳು ನಾಡು ಬಂಟರು ಪೋಷಿಸಿದ ವಿವಿಧ ಹಿಂದೂ ದೇವರಿಗೆ ಮೀಸಲಾದ ಹಲವಾರು ದೇವಾಲಯಗಳು ಸಾಕ್ಷಿಯಾಗಿವೆ. ಆದ್ದರಿಂದಲೇ ಬಂಟರನ್ನು ಭಕ್ತಿ ತತ್ತ್ವದ ಅನುಯಾಯಿಗಳೆಂದು ಕರೆಯುತ್ತಿದ್ದು, ಅವರು ನಿರ್ಮಿಸಿದ ಶಿವಭಕ್ತಿಯನ್ನು ಸಾರುವ ಪರಶುರಾಮ ಕ್ಷೇತ್ರ ಉಡುಪಿಯ ಕುಂಜಾರು ಗಿರಿ ಕ್ಷೇತ್ರ(ಈಗಾಗಲೇ ಕ್ಷೇತ್ರದ ಕುರಿತು ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿದೆ).
ನಾಗರಾಧನೆ:
ಬಂಟರು ಸರ್ಪ ದೇವತೆಗಳನ್ನು ಪವಿತ್ರ ಜೀವಿಗಳು ಮತ್ತು ಸಾಕಾರ ಮೂರ್ತಿಗಳು ಎಂದು ಪರಿಗಣಿಸಿದ್ದಾರೆ. ಭಯಭಕ್ತಿಯಿಂದ ಸರ್ಪಗಳನ್ನು ಆರಾಧಿಸುತ್ತಾ ಸಾಂಪ್ರದಾಯಿಕ ಬಂಟ ಮನೆಗಳ ಪಕ್ಕದಲ್ಲಿ ನಾಗಬನಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಪುಣ್ಯಕ್ಷೇತ್ರಗಳಲ್ಲಿ ಅನೇಕ ಸರ್ಪ ವಿಗ್ರಹಗಳು ಕಾಣಸಿಗುತ್ತವೆ. ತುಳು ನಾಡಿನ ಬಂಟರು, ಕುಂದಗನ್ನಡದ ನಾಡವರು ಮತ್ತು ಕೇರಳದ ನಾಯರ್‌ಗಳು ಆಚರಿಸುವ ಸರ್ಪ ಪೂಜಾ ವ್ಯಾಪಕ ಆಚರಣೆಗಳು ಕಂಡುಬರುತ್ತವೆ. ಪುರಾಣದಲ್ಲಿ ತುಳುವರು ಕ್ಷತ್ರಿಯರಾಗಿದ್ದು ಅವರು ನಾಗವಂಶಸ್ಥರು ಎಂದು ಕರೆಯಲಾಗಿದೆ. ನಾಗಮಂಡಲ, ನಾಗನರ್ತನಗಳನ್ನು ಶಿವಳ್ಳಿ ಬ್ರಾಹ್ಮಣರು ಹಾಗೂ ಬೊಳ್ಳಿ ಪಂಬದಾಸ್‌ರು ನಡೆಸುತ್ತಿದ್ದು, ಬಂಟರು ಈ ಆಚರಣೆಗಳ ಅದಿಪತ್ಯವನ್ನು ನಡೆಸುತ್ತಾರೆ. ಕೇರಳದ ಬಂಟರು ಯಾವ ವೈಭವ ಮತ್ತು ಭವ್ಯತೆಯನ್ನು ಮಾಡದೆ ಸರ್ಪ ಪೂಜೆ ಸಂಪ್ರದಾಯಗಳನ್ನು ಆಚರಿಸುತ್ತಾರೆ.
ದೈವರಾಧನೆ:
ತುಳು ನಾಡಿನಲ್ಲಿರುವ ದೈವಗಳು ಎಲ್ಲಾ ಸಮುದಾಯಗಳ ಅನನ್ಯ ಹಿಂದೂ ಧರ್ಮ ಸ್ಥಿರ ದೇವರುಗಳ ಜೊತೆಗೆ, ಪೌರಾಣಿಕ ಮತ್ತು ಸ್ಥಳೀಯ ಮೂಲದ ವಿವಿಧ ಶಕ್ತಿಗಳು ತಮ್ಮ ಗೌರವವನ್ನು ಹೊಂದಿದೆ. ಇವುಗಳು ಭೌತಿಕ ನಿರೂಪಣೆಯ ಒಂದು ವಿಧದ ರಚನೆಯಲ್ಲಿ ಹೊಂದಿಲ್ಲವೆನ್ನುವುದು ಗಮನಿಸಬೇಕಾದ ಅಂಶ. ಸಾಂಕೇತಿಕವಾಗಿ ಇವುಗಳನ್ನು ದೈವ ಅಥವಾ ಭೂತಗಳೆಂದು ಕರೆಯಲಾಗುತ್ತಿದ್ದು, ಮರ ಅಥವಾ ಲೋಹದಿಂದ ಮಾಡಿದ ಪ್ರತಿಮೆಗಳಲ್ಲಿ ಅವುಗಳ ರೂಪಗಳನ್ನು ಬಿಂಬಿಸಲಾಗುತ್ತದೆ. ಇವುಗಳ ನೆಲೆಗೆ ಒಂದು ಶಂಕುವಿನಾಕಾರದ ಅಥವಾ ಅದರ ಮೇಲೆ ಒಂದು ಚಪ್ಪಟೆ ಕಲ್ಲುಗಳಿಂದ ಮರದ ಅಥವಾ ಕಲ್ಲಿನ ಕಂಬಗಳು ಹಲಗೆಗಳನ್ನು ಸಹ ಚೇತನದ ಸಂಕೇತಗಳಾಗಿವೆ. ಪ್ರಬಲ ಶಕ್ತಿಗಳು ಕೆಲವು ಹೆಚ್ಚು ವಿಸ್ತಾರವಾದ ಕಲ್ಲಿನ ಕಂಬಗಳು ಅಥವಾ ಕಲಾರಸಿಕರ ಶಾಶ್ವತ ದೇವಾಲಯದ ಆಕೃತಿಯನ್ನು ಹೊಂದಿರುತ್ತವೆ. ಸರಳ ರಚನೆಗಳು ಹುಲ್ಲು ಛಾವಣಿಗಳನ್ನು ಹೊಂದಿರುತ್ತವೆ. ವಿಸ್ತಾರವಾದ ದೇವಾಲಯ ದ್ರಾವಿಡ ವಾಸ್ತುಶೈಲಿಯ ಪ್ರಕಾರಗಳನ್ನು ಹೊಂದಿರುತ್ತವೆ. ಅಲ್ಲದೇ ವರ್ಷಂಪ್ರತಿ ಭೂತ ಕೋಲಗಳು ನಡೆಯುತ್ತವೆ.
ಬಂಟರು ಮತ್ತು ತುಳು ನಾಡಿನಲ್ಲಿರುವ ಇತರ ಸಮುದಾಯಗಳು ಈ ಉತ್ತಮ ಸ್ವಭಾವದ ಆತ್ಮಗಳನ್ನು ರಕ್ಷಣೆಗಾಗಿ ಹುಡುಕುತ್ತಾರೆ. ಈ ಶಕ್ತಿಗಳು ಇಡೀ ಹಳ್ಳಿಗೆ ಸೇರದೆ ಅಥವಾ ಒಂದು ನಿರ್ದಿಷ್ಟ ಸಮುದಾಯ ಅಥವಾ ಜಾತಿಗೆ ಅಥವಾ ಕುಟುಂಬಕ್ಕೆ ವರ್ಗೀಕರಿಸಲಾಗಿದೆ.
ಜುಮಾದಿ, ಜಾರಂದಾಯ, ಪಿಲಿಚಾಮುಂಡಿ, ವರ್‍ತೆ ಪಂಜುರ್ಲಿ, ಕಲ್ಕುಡ  ಇತ್ಯಾದಿ ದೈವಗಳು ಬಂಟ ಸಮುದಾಯದ ಹೃದಯದಲ್ಲಿ ವಿಶೇಷ ಸ್ಥಾನವನ್ನು ಅಲಂಕರಿಸಿವೆ. ಅಲ್ಲದೆ ಜುಮಾದಿ, ವಿಷ್ಣುಮೂರ್ತಿ, ಬ್ರಹ್ಮೇರ್, ವೀರಭದ್ರ ಇತ್ಯಾದಿ ಕೆಲವು ಶಕ್ತಿಗಳನ್ನು ಪೂಜಿಸಲಾಗುತ್ತದೆ.
ಭಗವಾನ್ ಸ್ವರೂಪಿ ನಿತ್ಯಾನಂದರು:
ಬಂಟರು ಭಯಭಕ್ತಿಯಿಂದ ಭಗವಾನ್ ನಿತ್ಯಾನಂದರನ್ನು ಆರಾಧಿಸುತ್ತಾರೆ. ಅವರು ತಮ್ಮ ಹೆಚ್ಚಿನ ಸಮಯವನ್ನು ಧ್ಯಾನದಲ್ಲಿ ಕಳೆದರು. ೧೮೯೭ರಿಂದ ೧೯೬೧ರವರೆಗೆ ದಕ್ಷಿಣ ಭಾರತದಲ್ಲಿ ಪ್ರಯಾಣ ಮಾಡಿ ಸನ್ಯಾಸತ್ವದ ಕುರಿತು ಬಂಟ ಸಮುದಾಯಕ್ಕೆ ತಿಳಿಹೇಳಿದರು. ಬಂಟರು ಸಹ ಮಹಾಬಲಿ ಹುತಾತ್ಮನಾದ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದು ಕೇರಳದಲ್ಲಿ ಓಣಂ ಹೆಸರಿನಿಂದ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ.
ಬಂಟರ ಪಾಕಶಾಲೆ:
ಕರಾವಳಿ ಕರ್ನಾಟಕದ ಪ್ರಮುಖ ಸಮುದಾಯವಾದ  ಬಂಟರ ತಿನಿಸು ಸ್ಥಳೀಯ ಉತ್ಪನ್ನಕ್ಕೆ ಮತ್ತು ಈ ಪ್ರದೇಶದಲ್ಲಿ ಕಂಡು ಹಣ್ಣುಗಳಿಂದ ಪ್ರೇರಣೆ ಪಡೆದಿವೆ. ಅಕ್ಕಿ ಭಕ್ಷ್ಯಗಳನ್ನು ವ್ಯಾಪಕವಾಗಿ ಬಳಸುತ್ತಾರೆ. ಹೆಚ್ಚಿನವರು ಕಟ್ಟುನಿಟ್ಟಾಗಿ ಸಸ್ಯಾಹಾರವನ್ನೇ ಅನುಸರಿಸುತ್ತಿದ್ದರೂ, ಮಾಂಸಾಹಾರಕ್ಕೆ ನಿಷೇಧವಿಲ್ಲ. ಕೋಳಿ, ಮೀನುಗಳಿಗೆ ಸ್ವಾತಂತ್ರ್ಯವಿದ್ದರೂ ಹಂದಿ ಹಾಗೂ ಗೋಮಾಂಸಕ್ಕೆ ನಿಷೇಧವಿದೆ. ಸ್ವಾತಂತ್ರ್ಯಪೂರ್ವದಲ್ಲಿ ಈ ಕುರಿತು ಬಹಿಷ್ಕಾರ ಅಥವಾ ಶುದ್ಧೀಕರಣದ ಆಚರಣೆಗಳಿಂದ ಕೆಲವೊಂದು ಬದಲಾವಣೆಗಳಿಗೆ ಕಾರಣವಾಯಿತು. ಹಲಸಿನಹಣ್ಣು, ಬಾಳೆಹಣ್ಣು, ಮಾವು ಇತರ ಭಕ್ಷ್ಯಗಳನ್ನು ಕುಂದಾಪುರದಿಂದ ಕಾಸರಗೋಡು ಪ್ರದೇಶದವರೆಗೆ ವಿವಿಧ ರೂಪಗಳಲ್ಲಿ ಬಳಸಲಾಗಿದೆ. ಕರಾವಳಿಯ ಬಂಟ ತಿನಿಸು ಅನನ್ಯ ಪದಾರ್ಥಗಳು ಮತ್ತು ತಯಾರಿಕೆಯ ವಿಧಾನಗಳಿಂದ ಅನೇಕರು ಆಕರ್ಷಿತರಾಗಿದ್ದು ಮಾತ್ರವಲ್ಲದೇ ಸಮುದಾಯದ ಪಾಕಶಾಲೆಯ ಅಚ್ಚರಿಗಳ ತಾಜಾತನವನ್ನು ಹೆಚ್ಚಿಸಿದೆ.
ಮುಂಬೈ, ಬೆಂಗಳೂರು ಸೇರಿದಂತೆ ದೇಶ-ವಿದೇಶಗಳಲ್ಲಿ ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಂಟರ ತಿನಿಸುಗಳು ಜನಪ್ರಿಯವಾಗಿವೆ. ಬಂಟರು ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳೆರಡರಲ್ಲೂ ಪರಿಣತಿ ಹೊಂದಿದ್ದಾರೆ. ಮಾಂಸಾಹಾರಿ ಭಕ್ಷ್ಯಗಳಲ್ಲಿ ಕೋರಿ ರೊಟ್ಟಿ, ಕಾನೆ ಗಸಿ, ನೀರು ದೋಸೆ, ಕೋರಿ ಗಸಿ, ಸಸ್ಯಹಾರದಲ್ಲಿ ಗುಲ್ಲ ಚಟ್ನಿ, ಪತ್ರೋಡೆ, ನೀರು ದೋಸೆ ಚಟ್ನಿಯಲ್ಲಿ ನಿಷ್ಣಾತರಾಗಿದ್ದಾರೆ.
ಸಾಂಪ್ರದಾಯಿಕ ಮನೆ:
ಸಾಂಪ್ರದಾಯಿಕ ಬಂಟ ಮನೆಯು ಮರದ ಕಂಬಗಳನ್ನೊಳಗೊಂಡು ಗುತ್ತುಮನೆ ಎಂದು ಹೆಸರಿನಿಂದ ಕರೆಯುತ್ತಿದ್ದ ಅವಿಭಕ್ತ ಕುಟುಂಬವಾಗಿದೆ. ೧೯ನೇ ಶತಮಾನದಲ್ಲಿ ಗುತ್ತುಮನೆಯಲ್ಲಿರುವ ಕೆಲವು ಪುರುಷ ಸದಸ್ಯರು ಪಶ್ಚಿಮ ವೇಷಭೂಷಣಗಳಿಂದ ಆಕರ್ಷಿತರಾಗಿದ್ದರೂ ಬಹುತೇಕ ಸದಸ್ಯರು ಸಾಂಪ್ರದಾಯಿಕ ಉಡುಗೆಯಲ್ಲಿಯೇ ಕಾಣಸಿಗುತ್ತಾರೆ. ಸಾಂಪ್ರದಾಯಿಕ ಬಂಟ ಮನೆಗಳು ಈಗಲೂ ತುಳು ನಾಡಿನಲ್ಲಿ ಕಾಣಸಿಗುತ್ತವೆ. ಮಂಗಳೂರಿನ ಹೃದಯಭಾಗದಲ್ಲಿರುವ ಕೊಡಿಯಾಳ್‌ಗುತ್ತುಮನೆ, ಕಣ್ಣೂರಿನ ಬದಿಲ್ ಗುತ್ತು, ದ.ಕ.ಜಿಲ್ಲೆಯ ಬಂಟ್ವಾಳದ ಉಳೆಪಾಡಿಗುತ್ತು, ಪದ್ದಣ ಗುತ್ತು, ಭವಗುತ್ತು, ಬೆಳ್ಳಕೊಂಜ ಗುತ್ತು, ಬಲ್ಲಾಡಿ ಗುತ್ತು, ಶಿರ್ವ ನಡಿಬೆಟ್ಟು, ಕಿನ್ನಿಗೊಳಿ ಸಮೀಪದ ಕೊಡೆತ್ತೂರು ಗುತ್ತು, ಯಡ್ತರೆ, ಕೊಂಡಾವರ, ಕೊಳ್ಕೆಬೈಲು ಇತ್ಯಾದಿಗಳನ್ನು ಕಾಣಬಹುದಾಗಿದೆ. ಅಲ್ಲದೇ ಶ್ರೀಮಂತ ರಾಜಮನೆತನಗಳಾದ ಮೂಲ್ಕಿ ಅರಮನೆ, ಕುತ್ಯಾರ್ ಅರಮನೆ, ವಿಟ್ಲ ಅರಮನೆ, ಕಣ್ಣಜಾರ್ ದೊಡ್ಮನೆ, ಕಾಸರಗೋಡಿನ ಮೈಪಾಡಿ ಪ್ಯಾಲೇಸ್‌ಗಳು ಬಂಟ ಸಮುದಾಯ ಜೀವಂತಿಕೆಗೆ ಸಾಕ್ಷಿಗಳಾಗಿವೆ.
ಕೈಯಲ್ಲಿರುವ ಎಲ್ಲಾ ಬೆರಳುಗಳು ಒಂದೆ ತೆರನಾಗಿಲ್ಲ ಎನ್ನುವ ಮಾತು ಸತ್ಯವಾದರೂ ಅವುಗಳು ಒಟ್ಟಾಗಿ ಸಂಘಟಿತವಾಗಿ ಕಾರ್ಯನಿರ್ವಹಿಸುತ್ತವೆ. ಅಂತೆಯೇ ಬಂಟ ಸಮುದಾಯದಲ್ಲಿ ಶ್ರೀಮಂತರು, ಬಡವರು ಇದ್ದರೂ ಸಮುದಾಯದ ಅಗತ್ಯಗಳ ಪೂರೈಕೆಗೆ ಅನೇಕ ಬಂಟ ಸಂಘಟನೆಗಳು ಅಸ್ತಿತ್ವದಲ್ಲಿವೆ. ಅವುಗಳಲ್ಲಿ ಪ್ರಾರಂಭದಲ್ಲಿ ನಿರ್ಮಾಣಗೊಂಡ ಬಂಟರ ಮಾತೃಸಂಘ ಮಂಗಳೂರಿನಲ್ಲಿ ಈಗಲೂ ಸಕ್ರೀಯವಾಗಿದೆ. ಬಂಟರ ಸಂಘ ಮುಂಬೈ ಎಂದು ತುಳು ನಾಡಿನ ಹೊರಗೆ ರೂಪುಗೊಂಡಿತು. ನಂತರ ಕುವೈತ್, ಯುನೈಟೈಡ್ ಕಿಂಗ್ಡಮ್, ಬಹ್ರೈನ್ ಇತ್ಯಾದಿ ಬಂಟ ಸಂಘಟನೆಗಳು ವಿದೇಶಗಳಲ್ಲಿ ಪ್ರಾರಂಭಗೊಂಡವು. ಸ್ಥಳೀಯವಾಗಿ ತಾಲೂಕು ಸ್ತರಗಳಲ್ಲಿ ಸಂಘಟನೆಗಳನ್ನು ನಿರ್ಮಿಸಿ, ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಇತ್ಯಾದಿ ಸೇವೆಗಳನ್ನು ಒದಗಿಸುತ್ತಾ ಬಂಟ ಸಮುದಾಯದ ಏಳ್ಗೇಗಾಗಿ ಶ್ರಮಿಸುತ್ತಿವೆ. ಬಂಟ ಸಮುದಾಯದಲ್ಲಿ ಅನೇಕ ಪ್ರತಿಭೆಗಳು ಮಿಂಚುತ್ತಿರುವುದು ಬಂಟರ ಹಾಗೂ ನಾಡವರ ಪ್ರಖ್ಯಾತಿಗೆ ತಿಲಕರೂಪವಾಗಿವೆ.


Monday, 21 January 2013


ಮಾನಸಿಕತೆಯ ಬದಲಾವಣೆ-ಭವಿಷ್ಯತ್ತಿನ ಸಮಾಜ ನಿರ್ಮಾಣ
ಅತ್ಯಾಚಾರ-ಹೆಣ್ಣು-ಗಂಡುಗಳ ನಡುವಿನ ತಪ್ಪು-ಒಪ್ಪು 

ದೇಶದಲ್ಲಿ ಹಲವಾರು ಹೆಣ್ಣುಮಕ್ಕಳ ಮೇಲೆ ನಡೆದ ಮೃಗೀಯ ವರ್ತನೆಯ ಅತ್ಯಾಚಾರದ ಕುರಿತಂತೆ ವಿಷಾಧವಿದ್ದರೂ, ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ತಾರತಮ್ಯದ ಕುರಿತು ಕೆಲವೊಂದು ಮಾತುಗಳನ್ನು ಈ ಸಂದರ್ಭದಲ್ಲಿ ಪ್ರಚುರ ಪಡಿಸುವುದು ಪ್ರಸ್ತುತವೇ ಸರಿ? ದೆಹಲಿಯಲ್ಲಿನ ಘಟನೆ ಹಾಗೂ ಧರ್ಮಸ್ಥಳ ಉಜಿರೆಯ ಸೌಜನ್ಯ ಸೇರಿದಂತೆ ಹಲವಾರು ಪ್ರಕರಣ ಗಮನಿಸಿದರೆ ಅರಳುವ ಹೂಗಳು ತಮ್ಮ ಮೊಗ್ಗಿನ ಸುವಾಸನೆಯನ್ನು ಪ್ರಪಂಚ ಮುಖಕ್ಕೆ ಪಸರಿಸುವ ಮುನ್ನವೆ ಕಾಮಾಂಧರ ಅಟ್ಟಹಾಸಕ್ಕೆ ಸುಟ್ಟು ಕರಕಲಾಗಿ ಕಮರಿಹೋಗಿವೆ. ಆದರೂ ಬುದ್ಧಿಜೀವಿಗಳೆನಿಸಿಕೊಂಡವರು ದೆಹಲಿಯಲ್ಲಿನ ಘಟನೆಗೆ ಪತ್ರಿಕಾ ಹೇಳಿಕೆ ನೀಡುತ್ತಾ ತಾವು ಸಮಾಜದಲ್ಲಿ ಸಭ್ಯರಂತೆ ನಡೆದುಕೊಳ್ಳುತ್ತಾ ಪ್ರತಿಭಟನೆ ಮಾಡುತ್ತಿದ್ದೇವೆ ಎನ್ನುವುದರ ಹಿಂದೆ ಅತ್ಯಾಚಾರದಿಂದ ಹತಳಾದ ವಿದ್ಯಾರ್ಥಿನಿಯ ಕುಟುಂಬಕ್ಕೆ ನಿಜವಾಗಿಯೂ ನ್ಯಾಯ ಒದಗಿಸಬೇಕು ಎನ್ನುವ ಕಾಳಜಿ ಇದೆಯೇ? ಅಥವಾ ರಾಜಧಾನಿಯಲ್ಲಿ ನಡೆದ ಘಟನೆಯಿಂದ ತಮಗೆ ಸುಲಭವಾಗಿ ಪ್ರಚಾರ ಸಿಗುತ್ತದೆ ಎನ್ನುವ ನಂಬಿಕೆಯೇ? ರಾಜಧಾನಿಯಲ್ಲಿ ನಡೆದ ಅತ್ಯಾಚಾರ ಹಾಗೂ ಮಾರ್ನಿಂಗ್ ಮಿಸ್ಟ್‌ನಲ್ಲಿ ಮಜಾ ಉಡಾಯಿಸಲು ಹೋದ ಹೆಣ್ಣು ಮಕ್ಕಳ ಕುರಿತು ಕಣ್ಣೀರು ಹರಿಸುವ ಬುದ್ದಿಜೀವಿಗಳು ಕರಾವಳಿಯಲ್ಲಿ ಅನೇಕ ಮೊಗ್ಗುಗಳನ್ನು ಹಿಸುಕಿ ಹಾಕಿದರಲ್ಲಾ ಆ ಕುರಿತಂತೆ ಷಂಡರಂತೆ ವರ್ತಿಸುತ್ತಿರುವ ಮರ್ಮವೇನು? ದೆಹಲಿಯ ಹಾಗೂ ಉಜಿರೆಯಲ್ಲಿ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯರಲ್ಲಿ ಭೇದ-ಭಾವ ಸೃಷ್ಟಿಸುವುದು ತರವೇ? ದೇಶದ ರಾಜಧಾನಿಯಲ್ಲಿ ನಡೆದ ಘಟನೆಯನ್ನು ಹೈಲೈಟ್ ಮಾಡಲು ಶ್ರಮಿಸಿದರೆ ಪ್ರಪಂಚಕ್ಕೆ ಮಾದರಿಯಾಗಿರುವ ಧರ್ಮದ ಬೀಡಾಗಿರುವ ಧರ್ಮಸ್ಥಳದಲ್ಲಿ ನಡೆದ ಘಟನೆಯ ಕುರಿತು ಮೌನಮುದ್ರೆ ಯಾಕಾಗಿ? ಎನ್ನುವ ಸಂಶಯ. ಅತ್ಯಾಚಾರಗಳು ನಡೆದಾಗ ಪ್ರಗತಿಪರ ಚಿಂತಕರು ಹೆಣ್ಣುಮಕ್ಕಳ ಉಡುಗೆ-ತೊಡುಗೆಯಲ್ಲಿ ಬದಲಾವಣೆಯಾಗಿದೆ. ವಿದ್ಯುನ್ಮಾನ ಮಾಧ್ಯಮ ಹಾಗೂ ಸಿನಿಮಾದ ಪ್ರಭಾವದಿಂದ ಅತ್ಯಾಚಾರ ಜಾಸ್ತಿಯಾಗುತ್ತಿದೆ ಎನ್ನುತ್ತಾರಲ್ಲಾ ಇದು ಎಷ್ಟರಮಟ್ಟಿಗೆ ಸರಿ ಸ್ವಾಮಿ? ಪಕ್ಕದ ಮನೆಯ ತೆಂಗಿನ ಮರದ ಗರಿ ನಮ್ಮ ಅಂಗಳಕ್ಕೆ ಬಿದ್ದರೆ ಕೋರ್ಟ್‌ಗೆ ಹೋಗುವ ನಾವು ದೇಶ, ರಾಜ್ಯ, ಜಿಲ್ಲೆ ಮಾತ್ರವಲ್ಲದೇ ಪಕ್ಕದ ಮನೆಯಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳನ್ನು ಕಂಡು-ಕಣ್ಣಿಲ್ಲದವರಂತೆ ವರ್ತಿಸುವುದಾದರೂ ಯಾಕೆ? ಕರಾವಳಿಯ ಬುದ್ದಿವಂತರೆನಿಸಿಕೊಂಡ ಜನರು ಇದಕ್ಕೆ ಉತ್ತರಿಸಿಯಾರೇ?

ಸಮಾಜದಲ್ಲಿ ನೀತಿ ಹೇಳುವವರು ಮಾಡುವ ಅನ್ಯಾಯಗಳ ಕುರಿತು ನಾವೆಲ್ಲಾ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಯೆಲ್ಲಾ ಕಾಮ ತುಂಬಿಕೊಂಡು ಮೇಲ್ನೋಟಕ್ಕೆ ರಾಮ ಕೃಷ್ಣ--ಗೋವಿಂದ, ಅಲ್ಲಾ, ಏಸು ಎಂದು ದೇವರ ಹೆಸರನ್ನು ಹೇಳುತ್ತಿರುತ್ತಾರೆ. ಅಲ್ಲದೇ ಕುತ್ತಿಗೆಯಲ್ಲಿ ಜ್ಯೋತಿಷಿಗಳು ಹೇಳಿದ ಮಾಲೆಗಳೆಲ್ಲಾ ನೇತಾಡುತ್ತಿರುತ್ತವೆ. ಹಣೆಯ ಮೇಲೆ ಕುಂಕುಮ, ವಿಭೂತಿಗಳು ರಾರಾಜಿಸುತ್ತವೆ. ಆದರೆ ಹುಡುಗಿಯ ವಿಷಯ ಮಾತನಾಡಿದರೆ ಸಾಕು ಕಿವಿ ನಿಮಿರಿ ಕೊಳ್ಳುತ್ತದೆ. ಇದನ್ನೆಲ್ಲಾ ನೋಡಿದರೆ ಪ್ರಪಂಚವೇ ವಿಚಿತ್ರವೆನಿಸುತ್ತದೆ. ನೋಡುವ ದೃಷ್ಟಿ ಬದಲಾಗಿದೆಯೇ ಅಥವಾ ಬದಲಾದ ಪ್ರಪಂಚದಲ್ಲಿ ನಮ್ಮ ಮಾನಸಿಕತೆ ನಾವು ಬದಲಿಸಿಕೊಂಡಿದ್ದೇವೆಯೇ ಎನ್ನುವ ಜಿಜ್ಞಾಸೆ ಮೂಡುತ್ತದೆ. ಮನೆಯಲ್ಲಿ ಹೆಂಡತಿಯಾದವಳು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬಂದು ಗಂಡನಲ್ಲಿ ಕೇಳಿದರೆ ಪತಿ ಮಹಾಶಯ ತಾನು ಬ್ಯುಸಿ ಎನ್ನುವುದನ್ನು ತೋರ್ಪಡಿಸಲು ಕೇಳಿದರೂ ಕೇಳದಂತೆ ವರ್ತಿಸುತ್ತಾನೆ. ಅದುವೇ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಕಚೇರಿಯಲ್ಲಿ ತನ್ನ ಸಹದ್ಯೋಗಿ ಹೆಣ್ಣು ಮಕ್ಕಳು ಮಾಡಿಕೊಂಡ ಡ್ರೆಸ್‌ಗಳ ಕುರಿತು ಇಲ್ಲದ ಹೇಳಿಕೆಗಳನ್ನು ನೀಡಿ ಅವಳನ್ನು ಹೊಗಳುತ್ತಾನೆ. ಇದುವೇ ಪ್ರಪಂಚದ ದಿನನಿತ್ಯದ ವಿಷಯವಲ್ಲವೇ?
ಹೆಣ್ಣು ಚಿಕ್ಕವಳೋ ಅಥವಾ ದೊಡ್ಡವಳೋ? ಹೆಣ್ಣು, ಆಂಟಿ, ಅಜ್ಜಿ, ಆಫೀಸ್‌ನಲ್ಲಿರುವ ಮೇಡಂ, ಸೆಕ್ರೇಟರಿ, ಕಾಲೇಜ್‌ನಲ್ಲಿರುವ ಲೇಡಿ ಲೆಕ್ಚರರ್, ಕೆಲಸದವಳು ಒಂದಷ್ಟು ಕಣ್ಣುಗಳು ಇವರೆಲ್ಲರ ಮೇಲೆ ಓಡಾಡುತ್ತಿರುತ್ತವೆ. ಅವಳ ಕುರಿತಂತೆ ಒಂದಷ್ಟು ಅನಾಮಿಕ ಚರ್ಚೆಗಳು ಎಗ್ಗಿಲ್ಲದೆ ಓಡಾಡುತ್ತಿರುತ್ತವೆ. ಸಣ್ಣ ಪುಟ್ಟ ಕಂಪೆನಿಗಳು ಮಾತ್ರವಲ್ಲದೇ ದೊಡ್ಡ ಕಂಪೆನಿಗಳು, ಬಸ್ಸು, ದೇವಸ್ಥಾನ, ಪೆಟ್ರೋಲ್ ಬಂಕ್, ವಿಧಾನ ಸೌಧ, ಸಂಘ-ಸಂಸ್ಥೆಗಳು, ಹೊಟೇಲ್‌ಗಳು...ಒಂದೇ ಸ್ಥಳವೇ ಕಾಮುಕ ಕಣ್ಣುಗಳಿಗೆ ಅವರ ನಡವಳಿಕೆಗೆ ಆಜಾಗ -ಈ ಜಾಗ ವೆನ್ನುವುದಿಲ್ಲ. ಅನೇಕ ಅತ್ಯಾಚಾರಗಳು ನಡೆದಾಗ ಒತ್ತಡದ ಪ್ರಪಂಚದಲ್ಲಿಯೂ ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡುವ ಕುಶಾಗ್ರಮತಿಗಳು ಈ ಸಮಾಜದಲ್ಲಿ ಅನೇಕರಿದ್ದಾರೆ. ಅತ್ಯಾಚಾರಕ್ಕೆ ಸಿನಿಮಾ, ಹೆಣ್ಣು ಧರಿಸುವ ಉಡುಗೆ ತೊಡುಗೆಗಳೆ ಕಾರಣವೆನ್ನುವುದನ್ನು ಸಾರಿ ಹೇಳುತ್ತಾರೆ. ಇಲ್ಲಿ ತಪ್ಪು ಯಾರದ್ದು ಎನ್ನುವುದಕ್ಕಿಂತ ಅದನ್ನು ಸರಿಪಡಿಸುವುದು ಹೇಗೆ ಎನ್ನುವ ಉತ್ತರ ಕಂಡುಕೊಳ್ಳಬೇಕಿದೆ.
ವೈಜ್ಞಾನಿಕ ಪ್ರಗತಿಯ ಬೆನ್ನಲ್ಲೇ ಸಿನಿಮಾ ರಂಗದಲ್ಲಿ ಅನೇಕ ಸಾಹಸ ಕಾರ್ಯ ಹಾಗೂ ಬದಲಾವಣೆಗಳು ನಡೆದು ಹೋದವು. ಹೊಸ ತಂತ್ರಜ್ಞಾನ ಬಳಸಿಕೊಂಡು ಜನತೆಯ ರುಚಿಗೆ ತಕ್ಕಂತೆ ಸಿನಿಮಾ ನೀಡುತ್ತಿದ್ದ ಮನರಂಜನೆಯ ಮಾಧ್ಯಮವೇ ಇಂದು ಮಕ್ಕಳ ಮೇಲೆ ಪ್ರಭಾವ ಬೀರಿ ಸಮಾಜದಲ್ಲಿನ ಅನೇಕ ದುಷ್ಕೃತ್ಯಗಳಿಗೆ ಕಾರಣವಾಗಿದೆ. ಹಿಂದಿನ ಸಿನಿಮಾ ಹಾಗೂ ಇಂದಿನ ಸಿನಿಮಾಗಳನ್ನು ತುಲನೆ ಮಾಡಿದಾಗ ಅನೇಕ ಸಂಗತಿಗಳು ಗೋಚರಿಸುತ್ತವೆ. ಈಗಿನದಕ್ಕಿಂತ ಹಳೆ ಸಿನೆಮಾಗಳ ಅತ್ಯಾಚಾರದ ದೃಶ್ಯಗಳು ಬೀಭತ್ಸವಾಗಿದ್ದವು. ನಾಯಕ-ನಾಯಕಿಯರು, ಖಳನಾಯಕರು ಅತ್ಯುತ್ತಮ ಕಲಾಕಾರರಾಗಿದ್ದು, ಹೆಣ್ಣಿನ ಭೀತಿ, ಸಂಕಟ, ಪಾರಾಗಲು ಅವಳು ನಡೆಸುವ ವ್ಯರ್ಥ ಪ್ರಯತ್ನ, ಗಂಡಿನ ಅಟ್ಟಹಾಸಗಳು ನೋಡುಗರ ಎದೆ ಝನಿಸುತ್ತಿರುವುದರೊಂದಿಗೆ ಅದು ನಿಜವೆನಿಸುತ್ತಿತ್ತು. ನೋಡುವ ದೃಷ್ಟಿ ಮಾನವೀಯ ನೆಲೆಯಲ್ಲಿ ಬಿಂಬಿತವಾದಾಗ ದೃಶ್ಯ  ನೋಡಿದ ಜನತೆಗೆ ಆ ಸಂದರ್ಭದಲ್ಲಿ ಅವರಿಗೆ ಆ ಖಳನನ್ನು ಸದೆಬಡಿದು ಅಬಲೆಯನ್ನು ಪಾರು ಮಾಡಬೇಕೆನಿಸುತ್ತಿತ್ತೇ ಹೊರತು, ತಾನೂ ಕೂಡ ಅತ್ಯಾಚಾರ ಮಾಡಬೇಕೆನ್ನುವ ಹುಮ್ಮಸ್ಸು ಮೂಡುತ್ತಿರಲಿಲ್ಲ ಎನ್ನುವುದು ಸ್ಪಷ್ಟ. ಕ್ರಮೇಣ ಪ್ರಖ್ಯಾತ ಹಿರೋಗಳೇ ತಾವೇ ರೇಪಿಸ್ಟ್‌ಗಳಂತೆ ವರ್ತಿಸಲಾರಂಬಿಸಿದ್ದರಿಂದ ಹೀರೊಯಿನ್‌ಗೆ ಇಷ್ಟ ಇರಲೀ ಬಿಡಲಿ ನಾಯಕನಿಗೆ ಅವಳು ವಶವಾಗಬೇಕಾಗಿತ್ತು. ಕಾಲ ವಿಭಿನ್ನವಾಗಿದೆ ಹಿಂದಿನ ಕಾಲಗತಿಯೇ ಬದಲಾಗಿದೆ. ಹೀರೋಯಿನ್‌ಗಳು ತಾವೇ ಮೈಮೇಲಿನ ಬಟ್ಟೆಗಳನ್ನು ಕಿತ್ತೆಸೆದು ಹೀರೋ-ವಿಲನ್ ಇಬ್ಬರನ್ನು ಅಟ್ಟಿಸಿಕೊಂಡು ಹೋಗಬಲ್ಲವರಾಗಿzರೆ. ಬಿಗಿದ ಮುಷ್ಟಿಯನ್ನು ಬಿಚ್ಚಿ ತೋರಿಸಿದ ಮೇಲೆ ಬಲವಂತವಾಗಿ ಬಿಡಿಸುವ ಕೆಲಸ ಎಲ್ಲಿದೆ ಸ್ವಾಮಿ?
ತೆರೆಯ ಮೇಲೆ ಕಣ್ ಕುಕ್ಕುವಂತೆ ಮೈದೆರೆದು ದೇಹದ ಅಂಗಾಂಗವನ್ನು ತೋರಿಸಿ ಕೆರಳಿಸುವುದರಿಂದ ಗಂಡಸು ಮೃಗವಾಗಿ ನಿಸ್ಸಹಾಯಕಳಾಗಿ ಆ ಸಂದರ್ಭದಲ್ಲಿ ಸಿಕ್ಕಿದ ಯಾವಳೋ ಒಬ್ಬಳನ್ನು ಅವಳೇ ಬಿಪಾಶಾ ಬಸು ಎಂದೋ ಅಥವಾ ವೀಣಾ ಮಲಿಕ್ ಎಂದೋ ಭ್ರಮಿಸಿಕೊಂಡು ಬಲವಂತದಿಂದ ಅನುಭವಿಸುತ್ತಾನೆಂದು ಹೇಳುವವರಿzರೆ. ಇದು ಎಷ್ಟರಮಟ್ಟಿಗೆ ಸರಿಯೆನ್ನುವುದು ನನ್ನ ಪ್ರಶ್ನೆ?
ಸಲ್ಮಾನ್‌ಖಾನ್, ಜನ್‌ಅಬ್ರಹಾಂ, ಪೃಥ್ವೀರಾಜ್ ತಮ್ಮ ದೇಹಸಿರಿಯನ್ನು ಪ್ರದರ್ಶನಕ್ಕಿಟ್ಟಿzರ, ಯುವತಿಯರು ಅವರಿಂದ ಹುಚ್ಚೆದ್ದು ಹೋಗಿ ಬೇರೆ ಯಾವನೋ ಒಂಟಿ ಯುವಕನ ಮೇಲೆರಗಿದಿದೆಯೇ? ಅಂಗಡಿಯಲ್ಲಿರುವ ರುಚಿಯಾದ ತಿನಿಸುಗಳನ್ನು ನೋಡಿದಾಗ ಆಸೆಯಾಗುತ್ತದೆ. ಆದರೆ ಅದನ್ನೆಲ್ಲಾ ಒಂದೆ ಸಮನೆ ತಿನ್ನಲು ಸಾಧ್ಯವಿದೆಯೇ ಎನ್ನುವ ಅಂಶವನ್ನು ಮನಗಾಣಬೇಕು. ಆಸೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ತಮ್ಮ ಆಹಾರದ ಸಮಯ, ಸ್ಥಳ, ಡಯಟ್‌ಗಳನ್ನು ಮರೆತು ಅಂಗಡಿಗೆ ನುಗ್ಗುವ ವ್ಯರ್ಥ ಪ್ರಯತ್ನ ತರವಲ್ಲ. ಅತ್ಯಾಚಾರ ಮಾಡುವವರು ಸಿನೆಮಾಗಳ ಸ್ಫೂರ್ತಿಗಾಗಿ ಕಾಯಬೇಕಾಗಿಲ್ಲ. ಹಿಂದೂ ಪುರಾಣಗಳ ಅದು ದಂಡಿಯಾಗಿ ಸಿಕ್ಕುತ್ತದೆ. ಕೌರವರು ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತಾಪಹರಣಕ್ಕೆ ಹೊರಟಿದ್ದು ರಾಜಕಾಂಕ್ಷೆಗಿಂತಲೂ ಕೌರವರ ನಾಶಕ್ಕೆ ಹೆಚ್ಚು ಮುಖ್ಯವಾದ ಕಾರಣವಾಯಿತು. ಕೀಚಕ, ಇನ್ನೂ ಅನೇಕ ಗಂಧರ್ವರು, ದೈತ್ಯರು ದ್ರೌಪದಿಯನ್ನು ಹೊತ್ತೊಯ್ಯಲು ಪ್ರಯತ್ನಿಸುವುದು, ಪಾಂಡವರು ಅದರಲ್ಲೂ ಭೀಮ ಅವರನ್ನು ಸಂಹರಿಸಿ ಅವಳನ್ನು ಪಾರು ಮಾಡುವುದು ಮಹಾಭಾರತದುದ್ದಕ್ಕೂ ಬರುತ್ತದೆ. ರಾವಣ ಸೀತೆಯನ್ನು ಮುಟ್ಟಲೀ ಬಿಡಲೀ ಅಪಹರಿಸಿ, ಬಂದಿಸಿಟ್ಟು ತನ್ನವಳಾಗುವಂತೆ ಪೀಡಿಸಿದ್ದು ಮಾನಸಿಕ ಅತ್ಯಾಚಾರವಲ್ಲವೇ? ಸೀತೆಯನ್ನು ಮೃದು ಸ್ವಭಾವ ಅಂದುಕೊಳ್ಳಬಹುದು. ದ್ರೌಪದಿ ಹಾಗಲ್ಲ. ಉಗ್ರ ಸ್ವರೂಪಿಣಿ. ದುಶ್ಶಾಸನ ಎಳೆಎಳೆದು ರಾಶಿ ಹಾಕಿದ ಸೀರೆಗಳನ್ನು -ದುಯೆಧನ ಅದೇನು ದಟ್ಟ ದರಿತ್ರ ಬಂದಿತ್ತೋ ಗೊತ್ತಿಲ್ಲ-ಅಂತಃಪುರಕ್ಕೆ ಸಾಗಿಸಿ ಎಂದನಂತೆ. ಆಗ ದ್ರೌಪದಿ ಒಂದ್ಸಲ ಕಣ್ಬಿಟ್ಟು  ನೋಡುತ್ತಲೇ ಸೀರೆಗಳು ಧಗ್ಗನೆ ಉರಿದು ಬೂದಿಯಾದವಂತೆ. ಅಂತ ಶಕ್ತಿಯಿದ್ದವಳು ತನ್ನ ಕಣ್ಣೋಟದಿಂದ ದುಶ್ಶಾಸನ, ದುಯೆಧನಾದಿಗಳನ್ನು ಸುಟ್ಟು ಬೂದಿ ಮಾಡಿದ್ದರೆ ಅಕ್ಷೆಹಿಣೀ ಸೈನ್ಯದ ನಾಶ ತಪ್ಪುತ್ತಿತ್ತು. ಇದೊಂದೇ ಅಲ್ಲ, ಪೌಂಡ್ರಕನೆಂಬ ದೈತ್ಯ ದೊರೆಯನ್ನು ಕೊಲ್ಲಲು ದ್ರೌಪದಿ ಎಂತಹಾ ರೌದ್ರಾವತಾರ ತಾಳಿದ್ದಳು ಎಂದರೆ ಅತ್ತ ಕಡೆ ನೋಡಲೂ ಧೈರ್ಯ ಸಾಲದೇ ಮುಖ ಮುಚ್ಚಿಕೊಂಡು ಮೂಲೆ ಸೇರಿದ್ದನಂತೆ ಅರ್ಜುನ. ಶ್ರೀಕೃಷ್ಣ  ನೋಡಯ್ಯ ನಿನ್ನ ನ..ಕಬ್ಬಿನ ಜ.. ಮಧುರ ಮೆ? ಎಂದು ಗೇಲಿ ಮಾಡಿದನಂತೆ. ಹಾಗೆ ಸತ್ಯಭಾಮಾ, ಕೈಕೇಯಿ ಕೂಡ ತಂತಮ್ಮ ಪತಿಯೆಂದಿಗೆ ಯುದ್ಧಗಳಲ್ಲಿ ವೀರಾವೇಶದಿಂದ ಹೋರಾಡಿದರೆಂದು ಚಿತ್ರಿಸಿದವರಿಗೆ ಒಮ್ಮೆಲೆ ಪುರುಷಾಹಂಕರ ಜಗೃತವಾಗಿದ್ದಿರಬೇಕು. ಹಾಗಾಗಿ ಆ ಸ್ತ್ರೀಪಾತ್ರಗಳ ಸಾಹಸ ಶೌರ್ಯಗಳನ್ನು ಗಂಡಂದಿರ ಪ್ರಭಾವಳಿಯಲ್ಲಿ ಹುದುಗಿಸಿ ಪುನಃ ಅವರನ್ನು ಕುಯ್ಯೆಮರ್ರೊ ಎನಿಸಿ ಪತಿಯ ಪ್ರಾಮುಖ್ಯವನ್ನು ಎತ್ತಿ ಹಿಡಿದಿzರೆ.
ಭಾರತೀಯ ಪುರುಷರ ಮಟ್ಟಿಗೆ ಹೇಳ ಬೇಕೆಂದರೆ ಹೆಣ್ಣು ಭೋಗವಸ್ತು. ಲೈಂಗಿಕ ಸಮಾಗಮದಲ್ಲಿ ಗಂಡಸಿನ ಇಷ್ಟಾನಿಷ್ಟಗಳು ಮುಖ್ಯವೇ ಹೊರತು ಹೆಣ್ಣಿನದಲ್ಲ ಎಂಬ ಶೀತಲ ಕ್ರೌರ್ಯಕ್ಕೆ ಪುರಾಣಗಳಲ್ಲಿ ಬರುವ ನಿಯೋಗ ಪದ್ಧತಿಗಳು, ಕೃಷ್ಣ, ಇಂದ್ರರ ಕೃತ್ಯಗಳು ಸಮರ್ಥನೆಗಳಾಗಿವೆ. ವಿವಾಹಗಳಲ್ಲಿ ರಾಕ್ಷಸ ವಿವಾಹ, ಪೈಶಾಚಿಕ ವಿವಾಹಗಳೂ ಇವೆ. ಹೆಣ್ಣನ್ನು ಹಾರಿಸಿಕೊಂಡು ಹೋಗಿ ಮದುವೆಯಾಗುವುದು ರಾಕ್ಷಸ ವಿವಾಹ. ಕ್ಷತ್ರಿಯರಲ್ಲಿ ಇದು ನ್ಯಾಯ ಬದ್ಧವೇ ಆಗಿತ್ತು. ಪೈಶಾಚಿಕ ಎಂದರೆ ಹೆಣ್ಣನ್ನು ಪ್ರe ತಪ್ಪಿಸಿ, ಕೂಡಿ ಮದುವೆಯಾಗುವುದಿರಬೇಕು. ಒಟ್ಟಿನಲ್ಲಿ ಹೆಣ್ಣನ್ನು ಅನುಭವಿಸಲು ಗಂಡಸು ರಾಕ್ಷಸನೋ, ಪಿಶಾಚಿಯೋ ಆದರೂ ಪರವಾಗಿಲ್ಲವೆಂಬ ಸಮ್ಮತಿ ನಮ್ಮ ಹಿಂದೂ ಧರ್ಮಶಾಸ್ತ್ರಗಳದ್ದು. ಬೇರೆ ಯಾವ ಧರ್ಮವೂ ಅತ್ಯಾಚಾರಕ್ಕೆ ಹೀಗೆ ಪರೋಕ್ಷ ಕುಮ್ಮಕ್ಕನ್ನು ನೀಡಿಲ್ಲ ಎನ್ನುವುದು ಇಲ್ಲಿ ಪ್ರಸ್ತುತವೇ ಸರಿ.
ಒಂದು ಕುಟುಂಬದಲ್ಲಿ ಹೆಣ್ಣು ಮತ್ತು ಗಂಡುಮಕ್ಕಳನ್ನು ಬೆಳೆಸುವ ವಿಧಾನದ ತಾರತಮ್ಯ ಇರುತ್ತದೆ. ನೀನು ಹೆಣ್ಣು ಹುಡುಗಿ. ಒಂಟಿಯಾಗಿ ಎಲ್ಲೂ ಹೋಗ್ಬೇಡ. ಅಣ್ಣ-ತಮ್ಮನ ಜೊತೆ ಹೋಗಿಬಾ. ದಾರಿಯಲ್ಲಿ ಯಾರಾದರೂ ಮೈಮೇಲೆ ಬಿದ್ದರೆ ಏನು ಮಾಡುತ್ತಿ? ಎಂದು ತಾಯಿ ಸಹಜವೆಂಬಂತೆ ಬೆದರಿಸುತ್ತಾಳೆ. ಇದರಿಂದ ಹೆಣ್ಣಿನ ಹೃದಯದಲ್ಲಿ ಭೀತಿ ಹುಟ್ಟಿಕೊಳ್ಳುವುದು ಒಂದಾದರೆ ಗಂಡು ಹುಡುಗರ ಮನಸ್ಸಿನಲ್ಲಿ ಹೆಣ್ಣು ಅಂದರೆ ಅಬಲೆ, ನಮ್ಮ ರಕ್ಷಣೆ ಇಲ್ಲದೇ ಇರಲಾರಳು, ಒಂದು ವೇಳೆ ಅವಳು ಒಂಟಿಯಾಗಿ ವಾಸಿಸಿದರೆ ಅಥವಾ ತಿರುಗುತ್ತಿದ್ದರೆ ಹಾಗೆ ಮಾಡಿದ್ದು ಅವಳ ತಪ್ಪೇ ಹೊರತು ಹ ಮಾಡಿದ ಗಂಡಸಿನದ್ದಲ್ಲ ಎಂಬ ಭಾವನೆ ತಲೆ ಎತ್ತುತ್ತದೆ. ಇಂಥವರಲ್ಲಿ ಮೃಗೀಯತೆ ಹೆಚ್ಚಾಗಿರುವವರು ಸಮಯ ಸಿಕ್ಕಲ್ಲಿ ಅತ್ಯಾಚಾರಕ್ಕೆ ಹೇಸುವುದಿಲ್ಲ. ಅಷ್ಟು ವಿಪರೀತಕ್ಕೆ ಹೋಗದವರು ಬಸ್ಸು, ರೈಲು, ಸಿನೆಮಾ, ಶಾಪಿಂಗ್ ಸಂದಣಿಗಳಲ್ಲಿ ಹತ್ತಿರವಿರುವ ಹೆಣ್ಣಿನ ಮೈಕೈ ಸವರಿ ಸ್ಪರ್ಶಕ್ಕಿಂತಲೂ ಅವಳ ಚಡಪಡಿಕೆಯಿಂದಲೇ ವಿಕೃತಾನಂದ ಭರಿತರಾಗುತ್ತಾರೆ. ಸಂಸ್ಕಾರವಂತರು ಇಂಥ ಅಸಹ್ಯಗಳಿಗೆ ಇಳಿಯದಿದ್ದರೂ ಹೆಣ್ಣು ಎಂದರೆ ತನ್ನ ನೆರಳಿನಲ್ಲಿ, ತನ್ನ ಆeನುವರ್ತಿಯಾಗಿ ಇರಬೇಕಾದವಳು ಎಂದುಕೊಳ್ಳುತ್ತಾರಲ್ಲದೆ, ಒಂಟಿ ಹೆಣ್ಣನ್ನು ಗೌರವಿಸಿ ಅವಳ ಕಷ್ಟಗಳಿಗೆ ಸ್ಪಂದಿಸಲಾಗದೇ ಹೋಗುತ್ತಾರೆ.
ವಿವಾಹ ಹೆಣ್ಣಿನ ಮಾನಪ್ರಾಣಗಳಿಗೆ ರಕ್ಷಾಕವಚ ಎನ್ನುವುದು ಪೂರ್ತಿ ಸುಳ್ಳಲ್ಲ. ಪೂರ್ತಿ ನಿಜವೂ ಅಲ್ಲ. ನೂರಕ್ಕೆ ತೊಂಬತ್ತರಷ್ಟು ಹೆಂಡತಿಯರು ಪತಿ ತಮಗೆ ಒದಗಿಸುವ ರಕ್ಷಣೆಗೆ ಎಷ್ಟೋ ಪಟ್ಟು ಹೆಚ್ಚಿನ ಪ್ರತಿಫಲವನ್ನು ಅವರಿಗೆ ಕೊಡುತ್ತಿದ್ದರಾದ್ದರಿಂದ ಇದೊಂದು ಹಂಗು ಎಂದು ಗೃಹಿಣಿ ಮುದುಡಿಕೊಳ್ಳ ಬೇಕಾಗಿಲ್ಲ. ಪುರುಷರಲ್ಲಿ ಅತ್ಯಾಚಾರ ಸಮರ್ಥರು ಇರುವುದರಿಂದ ನಾವು ಹೆಣ್ಣಿಗೆ ರಕ್ಷಣೆ ಒದಗಿಸ ಬೇಕಾಗಿದೆ ಎನ್ನುವುದು ಪುರುಷವರ್ಗ ತಲೆತಗ್ಗಿಸಬೇಕಾದ ವಿಷಯ. ಕೊರಳಲ್ಲಿ ಮಾಂಗಲ್ಯವಿರುವವಳನ್ನು ಪರಪುರಷ ಕಣ್ಣೆತ್ತಿಯೂ ನೋಡಲಾರ. ಅವಳು ಕೆಲಸ ಮಾಡುವ ಜಗದಲ್ಲಿ ಲೈಂಗಿಕ ಕಿರುಕುಳ ತಪ್ಪುತ್ತವೆನ್ನುವ ಅನುಕೂಲಗಳು ಭ್ರಮೆಗಳೆಂದು ತಳ್ಳಿ ಹಾಕಲಾಗದು. ಹಾಗೆಂದು ವಿವಾಹಿತೆ ಪೂರ್ತಿ ಸುರಕ್ಷಿತೆಯೇನಲ್ಲ. ಒಂಟಿಯಾಗಿ ಬರಿಗೊರಳಿನಲ್ಲಿ ಓಡಾಡುತ್ತಿರುವವಳ ಮೈಮೇಲೆ ಕೈ ಹಾಕಿದಷ್ಟು ಸಲೀಸಾಗಿ ಪಕ್ಕದಲ್ಲಿ ಗಂಡನಿದ್ದರೆ ಮುಟ್ಟಲಾರರು. ಗಂಡ ಸೂಪರ್‌ಮ್ಯಾನ್ ಅಲ್ಲ. ನಿರ್ಜನ ಪ್ರದೇಶದಲ್ಲಿ ೩-೪ ಜನ ಗಂಡನನ್ನು ಕಟ್ಟಿ ಬೀಳಿಸಿ, ಅವನ ಕಣ್ಣ ಮುಂದೆ ಅತ್ಯಾಚಾರ ನಡೆಸಿದ ಪ್ರಕರಣಗಳು ವರದಿಯಾಗುತ್ತಲೆ ಇವೆ. ಕುರುಡುಗಣ್ಣಿಗಿಂತ ಮೆಳ್ಳೆಗಣ್ಣು ಮೇಲು ಎಂಬಂತೆ ಇದು ಅಲ್ಲವೇ?
ಸ್ತ್ರೀಯರು ಮೈ ಕಾಣುವಂತೆ ಬಟ್ಟೆ ಧರಿಸುವುದು ಅನಾಹುತಕ್ಕೆ ಕಾರಣ ಎಂದು ಪೊಲೀಸ್ ಅಧಿಕಾರಿಗಳಿಬ್ಬರು ಹೇಳಿz ತಡ, ಸ್ತ್ರೀವಾದಿಗಳು ಹೋ ಎಂದು ಚೀರಿದರು. ನೋಡುವವರ ದೃಷ್ಟಿ ಸರಿಯಿರಬೇಕು? ನಮ್ಮಿಷ್ಟ. ನಾವೇನ್ ಬೇಕಾದ್ರೂ ಹಾಕ್ಕೋತೀವಿ ಎಂದು ನೆಲಕ್ಕೆ ಕಾಲಪ್ಪಳಿಸಿದರು. ಅವರ ಆವೇಶದಲ್ಲಿ ತಪ್ಪಿಲ್ಲ. ಆದರೆ ಮನೆಬಾಗಿಲನ್ನು ತೆರೆದಿಟ್ಟೇ ಹೋಗುತ್ತೇನೆ. ನನ್ನ ವಸ್ತು, ನನ್ನ ಹಣ ನನ್ನಿಷ್ಟ ಎಂದರೆ ಅವು ಉಳಿಯುತ್ತವೆಯೇ? ಕಳ್ಳರು ಎಷ್ಟೇ ಭದ್ರತೆ ಇದ್ದರೂ ದೋಚಬಲ್ಲರು. ಅಂತೆಯೇ ಅಪರಾಧ ನಡೆದಾಗ ಅದರ ಪೂರ್ತಿ ಹೊಣೆಯನ್ನು ಅಪರಾಧಿಯ ತಲೆಗೆ ಕಟ್ಟುವಂತೆ ಇಂತಹ ಸಂದರ್ಭದಲ್ಲಿ ನಮ್ಮಿಂದಾಗುವ ಎಲ್ಲ ಜಗರೂಕತೆಯನ್ನು ತೆಗೆದುಕೊಳ್ಳಬೇಕಲ್ಲವೇ ಮಾನಿನಿಯರೇ?
ಅತ್ಯಾಚಾರದಲ್ಲಿ ಅಪರಾಧಿ ಪುರುಷನ ಪರ ಹುಲ್ಲುಕಡ್ಡಿಯಷ್ಟು ಆಧಾರವೂ ಇರಬಾರದು. ಆಗ ಅವನು ಕಠಿಣ ಶಿಕ್ಷೆಯ ಹೊಂಡಕ್ಕೆ ಬಿz ಬೀಳುತ್ತಾನೆ. ಮಮತಾ ಬ್ಯಾನರ್ಜಿಯವರ ಮಾತುಗಳ ಹಿಂದಿನ ಧ್ವನಿ ಇದೇ ಇರಬೇಕು. ಸ್ತ್ರೀಪುರುಷರ ಮಧ್ಯೆ ಅತಿ ಸಲುಗೆ ಅತ್ಯಾಚಾರಕ್ಕೆ ದಾರಿ ತೆಗೆಯಬಲ್ಲದು ಎಂದು ಹೇಳುತ್ತಲೇ ಸೋಕಾಲ್ಡ್ ಪ್ರಗತಿಪರರಿಗೆ ಅವರು ಆಜನ್ಮ ವೈರಿಯಾಗಿ ಬಿಟ್ಟರು. ಸ್ತ್ರೀಪುರುಷರ ಮಧ್ಯೆ ಸ್ನೇಹ ಇರಬಾರದೆಂದಲ್ಲ. ಅದು ಅವರಿರ್ವರನ್ನು ಏಕಾಂತಕ್ಕೆ ಎಳೆಯಬಾರದು. ನಾನು ಕರೆದರೆ ಲಂಚ್‌ಗೆ ಬಂದಾಳು, ಪಾರ್ಟಿ-ಡಿನ್ನರ್‌ಗೆ ಬಂದಾಳು, ಮಂಚಕ್ಕೆ ಕರೆದ್ರೆ ಬರ್ದೇ ಇರ್ತಾಳಾ? ಎನ್ನುವಷ್ಟು ಅಗ್ಗವಾಗದಂತೆ ಎಚ್ಚರ ವಹಿಸಬೇಕು. ಹೆಗಲಮೇಲೆ ಕೈ ಹಾಕಲು, ಸೊಂಟ ಬಳಸಲು ಬಿಟ್ಟರೆ ಆ ಸಲುಗೆ ಗೌರವ ಕಳೆಯುತ್ತದೆ. ಗೌರವವಿಲ್ಲದ ಸ್ಥಳದಲ್ಲಿ ಏನು ಬೇಕಾದರೂ ಆಗಬಹುದು. ಗೆಳೆಯ, ಅವನ ಗೆಳೆಯರು ಹೆಣ್ಣಿಗೆ ಅಪಾಯಕಾರಿಗಳಾದ ಪ್ರಸಂಗಗಳು ಗ್ಯಾಂಗ್‌ರೇಪ್‌ನಲ್ಲಿ ಕಂಡು ಬಂದಿವೆ.
ಹೆಣ್ಣಿನ ಮೇಲೆ ಅತ್ಯಾಚಾರ ಮಾಡುವುದು ಮಹಾಪರಾಧ ಎಂಬ ಅರಿವನ್ನು ಹೆತ್ತವರು, ಶೈಕ್ಷಣಿಕ ವ್ಯವಸ್ಥೆ ಮತ್ತು ಸಮಾಜ ಗಂಡಿನಲ್ಲಿ ಬೆಳೆಸಬೇಕು. ಹೆಣ್ಣು ತನ್ನ ನಡವಳಿಕೆ, ಉಡುಗೆ, ಜೀವನ ವಿಧಾನಗಳಲ್ಲಿ ಘನತೆ ಕಾಪಾಡಿಕೊಳ್ಳುವುದರ ಜೊತೆಗೆ ಸ್ವಯಂ ರಕ್ಷಣಾ ಕಲೆಗಳಲ್ಲಿ ನಿಷ್ಣಾತಳಾಗಬೇಕು. ಇದೆಲ್ಲದರಾಚೆಗೆ ಮಕ್ಕಳು, ಮುದುಕಿಯರೆನ್ನದೇ, ತಾಯಿ-ಮಗಳು ಎಂಬ ಪರಿeನವಿಲ್ಲದೇ ಅತ್ಯಾಚಾರವೆಸಗುವ ಕಾಮಪಶುಗಳನ್ನು ಜೈಲಿನಲ್ಲಿ ಮೇಯಿಸುತ್ತಾ ಇಟ್ಟುಕೊಳ್ಳಬಾರದು. ಅವರಿಗೆ ಮರಣದಂಡನೆ, ಪುರುಷತ್ವ ಹರಣದಂಥ ಶಿಕ್ಷೆಗಳು ಜರಿಗೆ ಬಂದರೆ ಕಾಮುಕರಲ್ಲಿ ಸ್ವಲ್ಪವಾದರೂ ಭಯ ಹುಟ್ಟುತ್ತದೆ. ಜೀವದಾಸೆಗಿಂತ ಕಾಮದಾಸೆ ದೊಡ್ಡದಲ್ಲ ಎನ್ನುವ ಸತ್ಯವನ್ನು ಅರಿಯುತ್ತಾರೆ. ಇದುವೇ ಅಲ್ಲವೇ ಉತ್ತಮ ಸಮಾಜ ನಿರ್ಮಾಣ....ಏನಂತಿರಾ






ಪ್ರಕೃತಿಯ ರಮ್ಯತಾಣದಲ್ಲಿರುವ ಪ್ರಕೃತಿಯ ಕೂಸು, ಮಾನಸಿಕ ನೆಮ್ಮದಿಯ ತಾಣ.  ನೆಲ್ಲಿತೀರ್ಥ -ಸೋಮನಾಥೇಶ್ವರ ಗುಹಾಲಯ 
ಕೆಲವು ವರ್ಷಗಳ ಹಿಂದೆ ಶ್ರೀ ನೆಲ್ಲಿತೀರ್ಥ ಸೋಮನಾಥೇಶ್ವರ ದೇವಸ್ಥಾನ ಹಾಗೂ ತೀರ್ಥದ ಅದ್ಭುತ ಗುಹೆಯು ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತವಾಗುವ ಸಂದರ್ಭ ಎದುರಾದಾಗ ಊರಿನ ಪ್ರಜ್ಞಾವಂತ ವ್ಯಕ್ತಿಗಳು ಎಚ್ಚೆತ್ತು ಈ ಪ್ರಕೃತಿಯ ರಮ್ಯ ತಾಣವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಪ್ರಯತ್ನಿಸಿ ಸಫಲರಾದುದು ಈಗ ಇತಿಹಾಸ. ಸುಮಾರು ೫೦ ವರ್ಷಗಳಿಂದ ಈ ಕ್ಷೇತ್ರದಲ್ಲಿ ನಡೆದು ಬಂದ ಹೋರಾಟ, ಎದುರಿಸಿದ ಎಡರು ತೊಡರುಗಳು ಹಲವಾರು. ಆರ್ಥಿಕವಾಗಿ ತೀರಾ ಹಿಂದುಳಿದ ಪ್ರದೇಶವಾಗಿದ್ದು ಮಾತ್ರವಲ್ಲದೇ ಅನ್ಯಮತೀಯರ ಮಧ್ಯೆಯೂ ಮತೀಯ ಸಾಮರಸ್ಯ ಉಳಿಸಿಕೊಳ್ಳುತ್ತಾ ಅವರೆಲ್ಲರ ಸಹಕಾರ ಪಡೆದು ಕಾರ್ಯಸಾಧಿಸ ಬೇಕಿದೆ. ಆ ನಿಟ್ಟಿನಲ್ಲಿ ಅದ್ಭುತ ಪ್ರಕೃತಿಯ ಸೌಂದರ್ಯದ ತಾಣವನ್ನು ನಾಡಿನ ಜನತೆಗೆ ಪರಿಚಯಿಸಬೇಕಿದೆ. ಈ ಪ್ರಕೃತಿಯ ಕೂಸು, ಪ್ರಸಕ್ತ ಕಾಲದಲ್ಲಿ ಮಾನಸಿಕ ನೆಮ್ಮದಿಯನ್ನು ಕೊಡುವ ಅಕ್ಷಯ ಪಾತ್ರೆ ಎನ್ನುವುದರಲ್ಲಿ ಸಂಶಯವಿಲ್ಲಾ.
ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಒಂದು ಮಾತನ್ನು ಹೇಳಿರುವುದನ್ನು ನಾವು ನೆನಪಿಸಿಕೊಳ್ಳಲೇ ಬೇಕು. ನನ್ನನ್ನು ಪೂಜಿಸಲು ನಾನೇ ಸೃಷ್ಟಿಸಿದ ವಸ್ತುಗಳಿವೆ. ಪತ್ರ, ಪುಷ್ಪ, ಫಲ, ನೀರು, ಏನನ್ನು ಭಕ್ತಿಯಿಂದ ಸಮರ್ಪಿಸಿದರೂ ನಾನು ಸ್ವೀಕರಿಸುವೆ? ಆ ಮಾತನ್ನು ಈ ಯುಗದಲ್ಲೂ ನಿಜಗೊಳಿಸಲೋಸುಗವೋ ಎನ್ನುವಂತೆ ನೆಲ್ಲಿತೀರ್ಥದ ಗುಹಾಲಯ ಬೆಳೆದು ನಿಂತಿದೆ. ಪ್ರಕೃತಿ ಮುಖೇನ ಭಗವಂತನ ಆರಾಧನೆಗೆ ನೆಲ್ಲಿತೀರ್ಥ ಗುಹೆಯಂತಹ ಇನ್ನೊಂದು ತಾಣವಿಲ್ಲ. ಸಾಧಕನ ಆಧ್ಯಾತ್ಮಿಕ ಉನ್ನತಿಗೆ ನೆಲ್ಲಿತೀರ್ಥ ಗುಹಾಲಯ ಭಗವಂತ ನಿರ್ಮಿಸಿದ ಪ್ರಾಕೃತಿಕ ಗುರುಕುಲವೆಂದರೂ ತಪ್ಪಿಲ್ಲ.
ನಮ್ಮ ಆಧ್ಯಾತ್ಮಕ್ಕೂ ಸಂಖ್ಯೆ ಹದಿನೆಂಟಕ್ಕೂ ಆಳವಾದ ನಂಟಿದೆ, ಸುಲಭವಾಗಿ ಬಿಚ್ಚಲಾಗದ ಗಂಟಿದೆ. ಹದಿನೆಂಟು ಶಾಸ್ತ್ರ, ಹದಿನೆಂಟು ಪುರಾಣ, ಹದಿನೆಂಟು ದಿವಸಗಳ ಭಾರತದ ಯುದ್ಧ, ಹದಿನೆಂಟು ಅಧ್ಯಾಯಗಳ ಗೀತೆ. ಹೀಗೆಯೇ ಮುಂದುವರಿಯುತ್ತದೆ ಹದಿನೆಂಟರ ಲೆಕ್ಕಾಚಾರ. ಏನಿದು ಹದಿನೆಂಟು? ಈ ಹದಿನೆಂಟೇ ನಮ್ಮ ಹಿಂದೂ ಧರ್ಮದ ಒಳತಿರುಳು. ಇದುವೇ ವೇದ ಉಪನಿಷತ್ತು ಶಾಸ್ತ್ರ ಪುರಾಣಗಳೆಲ್ಲದರ ಜೀವಸತ್ತ್ವ. ಈ ಹದಿನೆಂಟನ್ನು ತಲುಪಲು ಪ್ರಪಂಚದ ನಾನಾ ಧರ್ಮಗಳು ಮಂತ್ರ ದೃಷ್ಠಾರರೂ ಶ್ರಮಿಸಿದ್ದು ಪರಮ ಸತ್ಯವಲ್ಲದೇ ಮತ್ತೇನು? ಈ ಪ್ರಯತ್ನ ಇಂದಿನ ವಿಜ್ಞಾನ ಯುಗದಲ್ಲೂ ಮುಂದುವರಿಯುತ್ತದೆ. ಈ ಹದಿನೆಂಟನೆ ಮೆಟ್ಟಿಲೇ ಮೋಕ್ಷ. ನಮ್ಮ ವೈದಿಕ ಧರ್ಮದ ಕೊನೆಯ ಮೆಟ್ಟಲು. ಈ ಮೆಟ್ಟಲನ್ನು ಮುಟ್ಟಬೇಕಾದರೆ ಮನುಷ್ಯನು ಮೊದಲಿನ ಹದಿನೇಳು ಮೆಟ್ಟಲುಗಳನ್ನು ಜನ್ಮದಾರಾಭ್ಯ ಏರಬೇಕಾಗಿದೆ. ಅದು ಆಧ್ಯಾತ್ಮಿಕ ಸಾಧನೆಯಿಂದ ಮಾತ್ರ ಸಾಧ್ಯ. ಅದನ್ನೇ ವೇದ ಉಪನಿಷತ್ತುಗಳು ಸಾರುತ್ತಿರುವುದು.
ನೆಲ್ಲಿತೀರ್ಥದ ಪ್ರಕೃತಿ ನಿರ್ಮಿತ ಗುಹೆಯೊಳಗಿನ ಶಿವಲಿಂಗದ ದರ್ಶನವಾಗಬೇಕಾದರೆ ನಾವು ಮೊದಲಿನ ೧೭ ಮೆಟ್ಟಲುಗಳನ್ನು ಹೇಗೆ ಏರಬೇಕು ಎಂಬುದನ್ನು ಅರ್ಥೈಸಿಕೊಂಡಾಗ ಮಾತ್ರ ಮೇಲೆ ಹೇಳಿದ ಸಿದ್ಧಾಂತದ ಒಳಗುಟ್ಟು ತಿಳಿಯುತ್ತದೆ. ದೇವರ ಸಾನ್ನಿಧ್ಯವನ್ನು ತಲುಪಬೇಕಾದರೆ ಗರ್ಭಸ್ಥ ಶಿಶುವಿನಿಂದ ವೃದ್ಧ್ಯಾಪ್ಯದವರೆಗೆ ಮಾಡಬೇಕಾದ ಸಾಧನೆ ಹಾಗೂ ಭಕ್ತಿಯೊಂದಿಗೆ ದೈಹಿಕ ಶ್ರಮಕ್ಕೂ, ಕರ್ಮಕ್ಕೂ ಅಷ್ಟೆ ಪ್ರಾಮುಖ್ಯತೆ ಇವೆ ಎನ್ನುವುದು ಸ್ಪಷ್ಟ. ಗುಹೆಗೆ ಇಳಿಯುವಾಗ ತಾಯಿಯ ಹೊಟ್ಟೆಯಲ್ಲಿನ ಗರ್ಭಾವಸ್ಥೆಯ ಶಿಶುವಿನ ರೀತಿಯಲ್ಲಿ ಕುಳಿತು ಇಳಿಯಬೇಕು. ವಸುಂಧರೆಯ ಗರ್ಭವನ್ನು ಪ್ರವೇಶಿಸಿದಂತೆ ನಾವು ಮುಂದಕ್ಕೆ ಶಿಶುವಿನ ಜನನದಾರಭ್ಯ ವಿವಿಧ ಬೆಳವಣಿಗೆಯ ಹಂತದ ರೀತಿಯಲ್ಲಿ ಅಂದರೆ ಹೊಟ್ಟೆಯನ್ನು ನೆಲಕ್ಕೆ ತಾಗಿಸಿಕೊಂಡು ಮುಂದೆ ಹೋಗುವುದರಿಂದ ಕುಕ್ಕುರುಗಾಲು, ಅಂಬೆಗಾಲು ಇಡುವವರೆಗೆ ನಾನಾ ರೀತಿಯ ಅವಸ್ಥೆಗಳಲ್ಲಿ ಮುಂದುವರಿಯ ಬೇಕಾಗುತ್ತದೆ.
ಮನುಷ್ಯನ ಆಯುಷ್ಯ ಪ್ರಮಾಣ ೧೨೦ ವರ್ಷ ಎಂದಾದರೆ ಸಾಮಾನ್ಯವಾಗಿ ೨೦ರಿಂದ ೫೦ರ ೩೦ ವರುಷಗಳನ್ನು ಜೀವನದ ಸಾಧನೆಯ ಕಾಲವೆಂದು ಅರ್ಥೈಸಬಹುದು. ಈ ಪ್ರಕಾರ ನಮಗೆ ಸುಮಾರು ೨೫ ವರುಷಗಳಾದಾಗ ಭವಿಷ್ಯದ ಬದುಕನ್ನು ಬೃಹದಾಕಾರವಾಗಿ ನೋಡುವ ಹಂತಕ್ಕೆ ತಲುಪಿರುತ್ತೇವೆ. ಅಂತೆಯೇ ಗುಹೆಯ ಮಧ್ಯಭಾಗಕ್ಕೆ ಬಂದಾಗ ಅದು ನಮಗೆ ಬೃಹದಾಕಾರವಾಗಿ ಕಾಣಿಸ ತೊಡಗುತ್ತದೆ. ಅದರ ಒಳಗೆ ಒಂದು ಚಿಕ್ಕ ಗುಡ್ಡವಿದ್ದು ನಂತರ ಅದನ್ನು ಏರಬೇಕಾಗಿದೆ. ಅದನ್ನು ನಮ್ಮ ಜೀವನದ ಸಾಧನೆಯ ಕಾಲಕ್ಕೆ ಹೋಲಿಸಬಹುದು. ಅದರ ತುದಿ ಮುಟ್ಟಿದಾಗ ೬೦ರ ಅನುಭವ. ಅದು ಷಷ್ಠಿಪೂರ್ತಿ. ನಮ್ಮ ವ್ಯವಹಾರಗಳನ್ನು ಮಕ್ಕಳಿಗೆ ಬಿಟ್ಟು, ಅಂದರೆ ಈ ಮನೆಯ ವ್ಯಾಮೋಹವನ್ನು ತೊರೆದು ಆ ಮನೆಯ ಕಡೆಗೆ ಗಮನ ಕೊಡುವ ಕಾಲ. ಪ್ರತಿ ಮನುಷ್ಯನಿಗೆ ಎರಡು ಮನೆಗಳಿವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಮನುಷ್ಯ ಮೋಹಕ್ಕೊಳಪಟ್ಟು ಒಂದನೇ ಮನೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತ ಮಡದಿ, ಮಕ್ಕಳು ಹೀಗೆ ಎಲ್ಲಾ ವಿಷಯ ಸುಖಗಳಲ್ಲಿ ಮಗ್ನನಾಗಿ ಬಿಡುತ್ತಾನೆ. ಆದರೆ ಆತನಿಗೆ ಇನ್ನೊಂದು ಮನೆಗೆ ಹೋಗಲಿಕ್ಕಿದೆ. ಆ ಮನೆಗೆ ಅವನ ಹಿರಿಯರೆಲ್ಲಾ ಹೋಗಿರುತ್ತಾರೆ. ತನಗೂ ಅಲ್ಲಿ ಬೇಗನೆ ಹೋಗಲಿಕ್ಕಿದೆ .ಅದಕ್ಕಾಗಿ ಆ ಮನೆಯ ವ್ಯವಸ್ಥೆಗಾಗಿ ಏನಾದರೂ ಸಂಗ್ರಹಿಸು ಎನ್ನುವುದು ಇದರ ತಾತ್ಪರ್ಯ. ಅದಕ್ಕಾಗಿ ಆಧ್ಯಾತ್ಮ ಚಿಂತನೆ, ಸತ್ಕರ್ಮ ಮಾಡುವುದು, ತೀರ್ಥಕ್ಷೇತ್ರಗಳ ಸಂದರ್ಶನ. ನೆಲ್ಲಿತೀರ್ಥದಲ್ಲಿ ನಾವು ಏರಿದ ಗುಡ್ಡವನ್ನು ದಕ್ಷಿಣಾಭಿ ಮುಖವಾಗಿ ಇಳಿಯುತ್ತೇವೆ. ಇಲ್ಲಿ ದಕ್ಷಿಣಾಮುಖ ಎಂಬುದು ಬಹಳ ಪ್ರಾಮುಖ್ಯವಾದ ವಿಷಯ. ಕೆಳಗಿಳಿದಾಗ ನಮಗೆ ಪ್ರಕೃತಿ ನಿರ್ಮಿತ ಸುಂದರ ಸರೋವರ ಎದುರಾಗುತ್ತದೆ. ಅದುವೇ ಸಂಸಾರ ಸರದಿ. ಅದನ್ನು ದಾಟಿದಾಗ ಪರಾತ್ಪರ ಸ್ವರೂಪಿ ಜಾಬಾಲೇಶ್ವರ ಶಿವಲಿಂಗದ ದರ್ಶನ. ಅದುವೇ ಮೋಕ್ಷ.
ಗುಹೆಯ ಪ್ರಾರಂಭದಿಂದ ಕೊನೆಯ ತನಕ ನಾವು ಸಾಗುವಾಗ ಸುಮಾರು ೧೮ ಅವಸ್ಥೆಗಳನ್ನು ದಾಟ ಬೇಕಾಗುತ್ತದೆ. ನಮ್ಮನ್ನೇ ನಾವು ಮರೆತು ಭಗವಂತನ ನಾಮಸ್ಮರಣೆ ಮಾಡುತ್ತಾ, ಧ್ಯಾನದ ಅನುಭವವು ನಮಗೆ ಆಗಿ ಎಲ್ಲವನ್ನು ಮರೆಯುತ್ತೇವೆ. ನೆಲ್ಲಿತೀರ್ಥದ ಸೊಬಗೆ ಅಂಥದ್ದು. ಇದರ ಆನಂದವನ್ನು ಸವಿಯಬೇಕಿದ್ದರೆ ಸ್ವ-ಅನುಭವ ಅಗತ್ಯವಲ್ಲವೇ? ಒಮ್ಮೆ ಬಂದು ಈ ಕ್ಷೇತ್ರದ ದರ್ಶನ ಪಡೆದು ಕೃತಾರ್ಥರಾಗಬೇಕು.
ಪರಿವಾರ ದೇವತೆಗಳು ಮತ್ತು ದೈವಗಳು...
ಶ್ರೀ ಮಹಾಗಣಪತಿ ದೇವಳವು ಮುಖ್ಯ ದೇವಸ್ಥಾನದ ಒಳಾಂಗಣದಲ್ಲಿ ನೈರುತ್ಯ ಭಾಗದಲ್ಲಿದ್ದು ಪ್ರತ್ಯೇಕ ಗುಡಿಯನ್ನು ಹೊಂದಿದೆ. ಗಣಪತಿ ದೇವರಿಗೆ ಗಣಹೋಮ, ಸಂಕಷ್ಟ ಚತುರ್ಥಿ ಪೂಜೆ, ಅಪ್ಪದ ಪೂಜೆ, ಕಜ್ಜಾಯ ಹರಕೆಯಾಗಿ ನಡೆಸಲ್ಪಡುತ್ತದೆ. ವ್ಯಾಘ್ರಚಾಮುಂಡಿ ಶ್ರೀಕ್ಷೇತ್ರದ ಮತ್ತು ಊರಿನ ಪ್ರಧಾನ ದೈವ. ತುಳುವಿನಲ್ಲಿ ರಾಜನ್‌ದೈವ ಎಂದು ಮನ್ನಣೆ ಪಡೆದಿರುವ ಈಕೆ ದೇವಾಸ್ಥಾನದ ಆಗ್ನೇಯ ದಿಕ್ಕಿನಲ್ಲಿದ್ದು ಭಕ್ತಾಭೀಷ್ಟ ಪ್ರದಾಯಕಿಯಾಗಿದ್ದಾಳೆ. ನಿತ್ಯ ಪೂಜೆಯೊಂದಿಗೆ ಶುಕ್ರವಾರದಂದು ಹೂವಿನ ಪೂಜೆ, ಅಗೆಲು ಸೇವೆ ಹರಕೆಯಾಗಿ ಸಲ್ಲಿಸಲ್ಪಡುತ್ತವೆ. ವಾರ್ಷಿಕ ಉತ್ಸವದ ಸಮಯ ಶ್ರೀ ದೇವರ ಚೂರ್ಣೋತ್ಸವದ ಸಂದರ್ಭ, ಊರವರ ಸಮ್ಮುಖದಲ್ಲಿ ದರ್ಶನ ಪಾತ್ರಿಯ ಮೈಮೇಲೆ ವ್ಯಾಘ್ರಚಾಮುಂಡಿಯನ್ನು ಆಹ್ವಾನಿಸಿದಾಗ ಶ್ರೀ ದೇವರ ಭೇಟಿಗೆ ತೆರೆಳುವ ವ್ಯಾಘ್ರಚಾಮುಂಡಿಯು ಮಹಾಪ್ರಸಾದದೊಂದಿಗೆ ಭಕ್ತಾದಿಗಳನ್ನು ಹರಸುವುದು ಅನುಚಾನವಾಗಿ ನಡೆದು ಕೊಂಡು ಬರುತ್ತಿದೆ. ಹಾಗೆಯೇ ಧ್ವಜಾವರೋಹಣದ ಮಾರನೇ ದಿನ ವ್ಯಾಘ್ರಚಾಮುಂಡಿ ನೇಮೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ಅಲ್ಲದೇ ಧೂಮಾವತಿ, ರಕ್ತೇಶ್ವರಿ, ಕಾಂತರ ಧೂಮಾವತಿ, ಬಂಟ, ವ್ಯಾಘ್ರಚಾಮುಂಡಿ ಬಂಟ, ಸರಳ ಧೂಮಾವತಿ ಎಂಬ ಇತರ ಆರು ದೈವಗಳು ಪೂಜಿಸಲ್ಪಟ್ಟು ನೇಮೋತ್ಸವ ನಡೆಯುತ್ತದೆ.
ಮಹರ್ಷಿ ಜಾಬಾಲಿ:
ದೇವಸ್ಥಾನದ ಹೊರಾಂಗಣದ ಉತ್ತರ ದಿಕ್ಕಿನಲ್ಲಿ ವೃಂದಾವನ ಸ್ವರೂಪದಲ್ಲಿ ಮಹರ್ಷಿ ಜಾಬಾಲಿಯು ಕಂಗೊಳಿಸುತ್ತಿದ್ದಾರೆ. ಅಲ್ಲದೆ ಈ ವೃಂದಾವನದ ಇತರ ಮೂರು ದಿಕ್ಕುಗಳಲ್ಲಿ ಅವರ ಆರಾಧ್ಯ ದೇವರುಗಳಾದ ಮಹಾಗಣಪತಿ, ಪಾರ್ವತಿ, ಮಹೇಶ್ವರರು ಪೂಜಿಸಲ್ಪಡುತ್ತಿದ್ದು ಬಹಳ ಕಾರಣೀಕದ ಪೀಠವಾಗಿದೆ. ಗುಹೆಯೊಳಗೆ ತೀರ್ಥಸ್ನಾನ ಮಾಡಿ ಜಾಬಾಲೇಶ್ವರನನ್ನು ಅರ್ಚಿಸಿ ಮಹರ್ಷಿಗಳ ಸನ್ನಿಧಾನದಲ್ಲಿ ಫಲ ಸಮರ್ಪಣೆ ಮಾಡಿ, ಪ್ರಾರ್ಥಿಸಿಕೊಂಡಾಗ ಮನಸ್ಸಿನಲ್ಲಿ ಇಚ್ಚಿಸಿದ ಕಾರ್ಯವು ಕ್ಷಿಪ್ರವಾಗಿ ಈಡೇರುತ್ತಿರುವುದು ಈ ಸ್ಥಳದ ವಿಶೇಷ.
ಮಹರ್ಷಿ ಜಾಬಾಲಿ ಕಾಶೀ ವಿಶ್ವನಾಥನ ಸನ್ನಿಧಿಯಿಂದ ಬಂದು ಅಂದು ಬಿಲ್ವ ವನವೆಂದು ಪ್ರಸಿದ್ಧಿಯಾದ (ನಿರ್ಜರಾರಣ್ಯ - ಕಟೀಲು ಕ್ಷೇತ್ರ) ನೆಲ್ಲಿತೀರ್ಥದ ಗುಹೆಯಲ್ಲಿ ತಪಸ್ಸನ್ನಾಚರಿಸಿ ಜನರ ಕಷ್ಟಸುಖಗಳಿಗೆ ಸ್ಪಂದಿಸಿ ನಂದಿನಿಯನ್ನು ನದಿಯಾಗಿ ಹರಿಸಿ, ಈ ಪ್ರದೇಶದ ಕ್ಷಾಮ ಡಾಮರಗಳನ್ನು ಪರಿಹರಿಸಿ ಮುಂದಕ್ಕೆ ಅರುಣಾಸುರ ವಧೆಗೆ ಕಾರಣೀಭೂತರಾದ ಮಹಾಮಹಿಮರು ಇವರು. ಇಂದಿಗೂ ಗುಹೆಯಲ್ಲಿ ತಪಸ್ಸನ್ನಾಚರಿಸುತ್ತ ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಕಾಮಧೇನುವಾಗಿದ್ದಾರೆ ಎನ್ನುವುದು ಹಿಂದಿನಿಂದ ಬಂದ ನಂಬಿಕೆ.
ಕ್ಷೇತ್ರಪಾಲ - ಕ್ಷೇತ್ರ ಉಲ್ಲಾಯ
ದೇವಸ್ಥಾನದ ಮುಂಭಾಗದಲ್ಲಿ ಇರುವ ದೈವಕ್ಷೇತ್ರ ಉಲ್ಲಾಯ. ಕ್ಷೇತ್ರರಕ್ಷಕನಾದ ಈತನಿಗೆ ಅವಭೃತ (ಆರಾಟ) ದಿವಸ ವಿಶಿಷ್ಟ ರೀತಿಯ ನೇಮೋತ್ಸವ ನಡೆಯುತ್ತದೆ. ವಿಚಿತ್ರ ಸಂಪ್ರದಾಯದಿಂದ ಕೂಡಿದ ಈ ನೇಮವು ಮಹಾರಾಜನು ಅಧಿಕಾರಿಗಳನ್ನು ಪ್ರಶ್ನಿಸುವ ರೀತಿಯಲ್ಲಿ ಇದ್ದು, ಆತನ ವೇಷಭೂಷಣಗಳು ಇದನ್ನು ಪುಷ್ಟೀಕರಿಸುತ್ತವೆ. ಮುಖದಲ್ಲಿ ಮೀಸೆಯನ್ನು ಹೊತ್ತು ಧನುರ್ಧಾರಿಯಾಗಿ ದೇವರು ಸ್ನಾನ ಮಾಡಿ ವಿಜೃಂಭಣೆಯಿಂದ ಬರುತ್ತಿರುವಾಗ ಅರ್ಧದಲ್ಲಿ ಅಡ್ಡಗಟ್ಟಿ, ತಂತ್ರಿಗಳನ್ನು ಅಧಿಕಾರಯುತವಾಗಿ ಕೇಳುವ ಮಾತುಗಳು ಬಹುಶಃ ದಕ್ಷಿಣ ಕನ್ನಡದಲ್ಲಿಯೇ ವಿಶಿಷ್ಟ ರೀತಿಯದ್ದಾಗಿದೆ? ತಂತ್ರಿಗಳೇ, ನನ್ನ ದೇವರ ಮೂರು ದಿವಸದ ದೇವಬಲಿ, ಒಂದು ದಿವಸದ ಭೂತಬಲಿ, ಆರಡ ಅಂಬೋಲಿ ಸರಿಯಾಗಿ ನೆರೆವೇರಿತು ತಾನೆ? ಶ್ರೀ ದೇವರ ಅಂದರೆ ನನ್ನ ಉಲ್ಲಾಯ ಒಡೆಯನ ನಿತ್ಯ ಬಲಿ, ನಂದಾದೀಪ ಸಾಂಗವಾಗಿ ನೆರವೇರುತ್ತಾ ಇದೆ ತಾನೆ? ಹಾಗಿದ್ದ ಪಕ್ಷದಲ್ಲಿ ಧ್ವಜಾವರೋಹಣವಾಗಲಿ ಮತ್ತು ನನ್ನ ಒಡೆಯ ಗರ್ಭಗುಡಿ ಪ್ರವೇಶಿಸಲಿ, ನಾನು ನನ್ನ ಗುಡಿ ಸೇರುತ್ತೇನೆ? ಎನ್ನುತ್ತಾ ಧರಾಶಾಯಿಯಾಗುತ್ತಾನೆ. ಅಲ್ಲಿಗೆ ನೇಮ ಸಮಾಪ್ತಿಯಾಗುತ್ತದೆ. ಈ ರೀತಿಯ ಸಂಪ್ರದಾಯ ತುಳುನಾಡಿನಲ್ಲಿ ಬೇರೆಲ್ಲೂ ಕಂಡು ಬರುವುದಿಲ್ಲ.
ನಾಗಬ್ರಹ್ಮರು ಮತ್ತು ದೈವಗಳು:
ದೇವಸ್ಥಾನದಿಂದ ವಾಯವ್ಯ ದಿಕ್ಕಿಗೆ ಸುಮಾರು ೨ ಫರ್ಲಾಂಗ್ ದೂರದಲ್ಲಿ ಕಾಡಿನ ಮಧ್ಯೆ ನಾಗಬ್ರಹ್ಮ ಹಾಗೂ ಪರಿವಾರ ದೈವಗಳ ಸಾನ್ನಿಧ್ಯವಿದ್ದು ಜೀರ್ಣೋದ್ಧಾರದ ಹಂತದಲ್ಲಿದೆ. ವರ್ಷಕ್ಕೆ ಎರಡಾವರ್ತಿ ವಾರ್ಷಿಕ ಪೂಜೆಗಳು ನಡೆಯುತ್ತಿದ್ದು, ಬಹಳ ಕಾರಣಿಕ ಸ್ಥಳವಾಗಿದೆ. ಈ ಸನ್ನಿಧಾನದಲ್ಲಿ ವಾರಾಹಿ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ, ಬೊಬ್ಬರ್ಯ, ಪಾಶಾಣಮೂರ್ತಿ ಎಂಬ ಆರು ದೈವಗಳ ಸಾನ್ನಿಧ್ಯವಿದ್ದು ಇವುಗಳ ಮಧ್ಯೆ ನಾಗಬ್ರಹ್ಮರು ರಾರಾಜಿಸುತ್ತಿದ್ದಾರೆ.
ನೆಲ್ಲಿತೀರ್ಥ-ಕೆಲವು ಪ್ರಾಚೀನ ಉಲ್ಲೇಖಗಳು:




ತುಳುನಾಡಿನ ಪ್ರಾಚೀನ ದೇವಾಲಯಗಳಿಗೆಲ್ಲ ಒಂದು ಭವ್ಯ ಪರಂಪರೆಯಿದೆ. ಹಿಂದೆ ಈ ಪ್ರದೇಶವನ್ನು ಆಳಿದ್ದ ಆಳುಪ, ವಿಜಯನಗರ, ಕೆಳದಿ ಸಂಸ್ಥಾನಗಳಿಂದಲೂ, ಸ್ಥಳೀಯ ರಾಜವಂಶೀಯರಿಂದಲೂ ಆರಾಧಿಸಲ್ಪಡುತ್ತಿದ್ದ ಅನೇಕ ದೇವಾಲಯಗಳು ಇಲ್ಲಿವೆ. ದೇವಾಲಯಗಳ ವಿನಿಯೋಗಗಳು ಸಾಂಗವಾಗಿ ನಡೆಯಬೇಕೆಂಬ ಸದುದ್ದೇಶದಿಂದ, ಅಂದಿನ ಅರಸರು ಬಿಟ್ಟುಕೊಟ್ಟ ದತ್ತಿ ಶಾಸನಗಳ ಸಂಖ್ಯೆ ಅಪರಿಮಿತವಾಗಿದೆ. ಇಲ್ಲಿಯ ತುಂಡರಸರಲ್ಲಿ ಚೌಟರು ಸುಪ್ರಸಿದ್ಧರು. ಇವರು ಮೂಲತಃ ಕರಾವಳಿಯ ಉಳ್ಳಾಲದವರಾಗಿದ್ದು, ಮುಂದೆ ಪುತ್ತಿಗೆ, ಮೂಡಬಿದಿರೆಗಳಲ್ಲಿ ಕೇಂದ್ರಸ್ಥಾನವನ್ನೇರ್ಪಡಿಸಿ ರಾಜ್ಯಭಾರ ಮಾಡುತ್ತಿದ್ದರು. ಇವರು ಸೋಮನಾಥ ದೇವರ ಭಕ್ತರಾಗಿದ್ದರು. ಆದ ಕಾರಣ ಇವರು ಆಳಿಕೊಂಡಿದ್ದ ಭಾಗದಲ್ಲಿ ಅನೇಕ ಸೋಮನಾಥ ದೇವಾಲಯಗಳಿವೆ. ಉಳ್ಳಾಲ, ಪುತ್ತಿಗೆ, ಅಮ್ಮೆಂಬಳ, ಪೆರ್ಮುದೆ, ಪೋರ್ಕೋಡಿ, ಗುರುಪುರ, ಇರಾ, ನೆಲ್ಲಿತೀರ್ಥ ಮೊದಲಾದೆಡೆ ಸೋಮನಾಥ ದೇವಾಲಯಗಳಿವೆ. ಇವುಗಳಲ್ಲಿ ನೆಲ್ಲಿತೀರ್ಥವು ಪವಿತ್ರ ಗುಹಾತೀರ್ಥದ ಸನ್ನಿಧಿಯಲ್ಲಿದ್ದು ಅತಿ ಮಹಿಮಾನ್ವಿತವಾಗಿದೆ. ಪೂರ್ವಕಾಲದಲ್ಲಿ ಇದು ಜಾಬಾಲಿಮುನಿಯ ಸಿದ್ಧಾಶ್ರಮವಾಗಿತ್ತೆಂದು ಪುರಾಣೋಕ್ತಿಯಿದೆ. ಕ್ಷೇತ್ರದಲ್ಲಿರುವ ಅರಸರ ಮಂಚ, ಅರಸು ಕಟ್ಟೆಗಳು ಇಲ್ಲಿಗೆ ಚೌಟರಸರು ಆಗಾಗ ಭೇಟಿ ಕೊಡುತ್ತಿದ್ದರೆನ್ನುವುದಕ್ಕೆ ಮೂಕಸಾಕ್ಷಿಯಾಗಿದೆ. ದ.ಕ ಜಿಲ್ಲೆಯ ಪ್ರಾಚೀನ ಇತಿಹಾಸ ಬರೆದಿರುವ ದಿ.ಗಣಪತಿರಾವ್ ತನ್ನ ಕೃತಿಯಲ್ಲಿ ಹೇಳಿರುವ ಕೆಲವು ವಿಷಯಗಳು ಮುಖ್ಯವಾಗಿವೆ. ಕ್ರಿ.ಶ ೧೪೦೩-೧೪೭೦ರ ಅವಧಿಯಲ್ಲಿದ್ದ ೨ ನೇ ಚೆನ್ನರಾಯ ಚೌಟನು ಒಂದು ಯುದ್ಧಕಾಲದಲ್ಲಿ ಬಂಗರಸರಿಗೆ ಸೈನ್ಯ ಸಹಾಯ ಮಾಡಿ ಜಯ ದೊರಕಿಸಿ ಕೊಟ್ಟ ಕಾರಣಕ್ಕೆ ಮಣೇಲ, ಪೇಜಾವರ, ಮುಂಡ್ಕೂರು ಸೀಮೆಗಳನ್ನು ಉಡುಗೊರೆಯಾಗಿ ಪಡೆದನು. ಅವನು ಹಿಂತಿರುಗಿ ಬರುವಾಗ ಜಾಬಾಲಿ ಋಷಿಯ ಆಶ್ರಮವಿದ್ದ ಸ್ಥಳದಲ್ಲಿ ಗುಹಾತೀರ್ಥದಲ್ಲಿ ಸ್ನಾನಮಾಡಿ, ಆ ಋಷಿಯ ಪ್ರತಿಷ್ಠೆ ಮಾಡಿ, ಸೋಮನಾಥೇಶ್ವರ ದೇವರ ದರ್ಶನ ಮಾಡಿಕೊಂಡು ನೆಲ್ಲಿತೀರ್ಥ ಮತ್ತು ಕರಂಬಾರು ಗ್ರಾಮಗಳನ್ನು ಈ ದೇವಸ್ಥಾನಕ್ಕೆ ದಾನವಾಗಿ ನೀಡಿದನು ಎಂದು ಹೇಳಲಾಗಿದೆ. ಈಗಲೂ ಕೆಂಜಾರು, ಕರಂಬಾರು ಗ್ರಾಮದವರು ಉತ್ಸವದ ಸಮಯದಲ್ಲಿ ಬಂದು ಅಗ್ನಿಕುಳಿಯನ್ನು ನಡೆಸಿಕೊಡುತ್ತಾರೆ.
ಕ್ರಿ.ಶ ೧೫೭೪ ರಲ್ಲಿ ನೆಲ್ಲಿತೀರ್ಥ ಕ್ಷೇತ್ರದಲ್ಲಿ ನಡೆದ ಘಟನೆಯಿದು. ಆಗ ತಾನೆ ತುಳುನಾಡಿನಲ್ಲಿ ಬೇರು ಬಿಡುತ್ತಿದ್ದ ವೀರಶೈವ ಧರ್ಮದವರಿಗೂ, ಬ್ರಾಹ್ಮಣರಿಗೂ ದೇವತಾರಾಧನೆಯ ಕುರಿತು ವಿವಾದವೆದ್ದಿತು. ವಿಜಯನಗರ ಸಾಮ್ರಾಜ್ಯದ ವರ್ಚಸ್ಸು ಇಳಿಮುಖವಾಗಿ, ಕೆಳದಿ ಅರಸರು (ವೀರಶೈವ) ಇಲ್ಲಿ ಆಳ್ವಿಕೆ ಆರಂಭಿಸಿದ ಕಾಲವದು. ವೀರಶೈವರು ಬಾಳೇಹಳ್ಳಿಯ ಸಿಂಹಾಸನಾಧೀಶ ಕುಮಾರ ಚನ್ನಬಸವೆಂಬ ಪ್ರಭಾವಿ ವ್ಯಕ್ತಿಯಲ್ಲಿ ದೂರಿಡುವರು. ಅವನು ಈ ನ್ಯಾಯ ತೀರ್ಮಾನವನ್ನು ಮಾಡಬೇಕೆಂದು ಮೂಡಬಿದಿರೆಯ ಚೌಟವನೆ ರಾಣಿ ಅಬ್ಬಕ್ಕದೇವಿ ೨ (೧೫೪೪-೧೫೮೨)ಯ ಸನ್ನಿಧಿಗೆ ಅರಿಕೆ ಮಾಡುವನು. ಅಬ್ಬಕ್ಕ ದೇವಿಯು ಉಭಯ ಪಕ್ಷದವರನ್ನೂ ಮೂಡಬಿದಿರಿಗೆ ಕರೆಸಿ, ತುಳುನಾಡಿನ ಬೇರೆ ಅರಸರನ್ನೂ ಬರಿಸಿ, ಬಿದಿರೆಯ ಹಲವರು, ಸೆಟ್ಟಿಕಾರರ ಸಮಕ್ಷಮದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿ, ಕ್ಷೇತ್ರದ ಪಾವಿತ್ರ್ಯವನ್ನು ರಕ್ಷಿಸುವಳು. ವಿಜಯನಗರದ ಬುಕ್ಕರಾಯನ ಕಾಲದ (ಕ್ರಿ.ಶ ೧೩೬೮) ಒಂದು ಶಾಸನವು (ಶ್ರವಣ ಬೆಳಗೊಳ) ಜೈನರಿಗೂ, ವೈಷ್ಣವರಿಗೂ ಬಂದ ಮನಸ್ತಾಪವನ್ನು ಒಪ್ಪಂದ ಮೂಲಕ ಬಗೆಹರಿಸಿದ ವಿಷಯವನ್ನು ತಿಳಿಸುತ್ತದೆ. ಅದೇ ಆದರ್ಶವನ್ನು ಅಬ್ಬಕ್ಕ ದೇವಿ ಇಲ್ಲಿ ತೋರಿಸುತ್ತಾಳೆ. ಈ ರೀತಿಯಾಗಿ ಸಾಗುವ ನೆಲ್ಲಿತೀರ್ಥದ ವಿಶೇಷತೆಯೇ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದಕ್ಷಿಣ ಕನ್ನಡದಿಂದ ಕಟೀಲು ದೇವಸ್ಥಾನಕ್ಕೆ ಹೋಗುವಾಗ ಹಳೆಯಂಗಡಿ ಸಮೀಪದಲ್ಲಿ ನೆಲ್ಲಿತೀರ್ಥ ಸಿಗುತ್ತದೆ.

Thursday, 3 January 2013

ಖಾಸಗಿ ವಿವಿ ಸ್ಥಾಪನೆಗೆ ರಾಜ್ಯ ಸರಕಾರ ಹಸಿರು ನಿಶಾನೆ: ಕಂಗೆಟ್ಟ ವಿದ್ಯಾರ್ಥಿ ಸಮೂಹ
ವಿದ್ಯಾವಿಹೀನಂ ಪಶು ಸಮಾನ ಎನ್ನುವ ಉಕ್ತಿ ಕೇಳಿದಾಗ ಶಿಕ್ಷಣದ ಕುರಿತಾಗಿ ಮನದಾಳದಲ್ಲಿ ಹುದುಗಿರುವ ಭಾವನೆಗಳು ಮುಖದಲ್ಲಿ ಸಂಚಾರಗೊಂಡು ಆ ಶಬ್ದಕ್ಕೆ ಒಂದು ಅರ್ಥ ಕಲ್ಪಿಸಿ ಕೊಡುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ನನ್ನ ಭಾವನೆ. ಅಂತೆಯೇ ನಿಮ್ಮೆಲ್ಲರದೂ. ಬುದ್ಧಿಮತ್ತೆಯನ್ನು ಪಡೆದು ಸ್ವಲ್ಪ ವಿಚಾರವನ್ನು ತಾರ್ಕಿಕ ಶಕ್ತಿಯಾಗಿ ಪರಿವರ್ತನೆ ಮಾಡಿ ಲೋಕದಲ್ಲಿ ಪ್ರಸ್ತುತ ಪಡಿಸಲು ಭೂಮಿಯಲ್ಲಿ ಜನಿಸಿದ ಮಾನವನಿಗೆ ವಿದ್ಯೆ ಎನ್ನುವುದು ಅವಶ್ಯಕ. ಹಿಂದಿನ ಕಾಲದಲ್ಲಿ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವು ಇಂದು ಮಹಿಳೆಯರಿಗೂ ವಿಫುಲ ಅವಕಾಶ ದೊರೆತು, ಅವರನ್ನು ಕೂಡ ಸಮಾಜದ ಮುಖ್ಯವಾಹಿನಿಗೆ ತಂದು ವಿವಿಧ ಸ್ತರಗಳಲ್ಲಿ ಮುಕ್ತವಾಗಿ, ಎದೆಗಾರಿಕೆಯಿಂದ ನಿರ್ಭೀತರಾಗಿ ಕಾರ್ಯ ನಿರ್ವಹಿಸುವಂತೆ ಮಾಡಿದೆ. ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದಾಗ ಯಾಕೋ ಅನುಮಾನ ಕಾಡುತ್ತದೆ.
ನಮ್ಮದು ಋಷಿ ಮುನಿಗಳ ಸಂಸ್ಕೃತಿ. ಪುರಾಣದ ಪುಟವನ್ನು ಒಂದೊಂದಾಗಿ ಸರಿಸಿದಾಗ ನಮಗೆ ವಿದ್ಯೆಯ ಮಹತ್ವ ತಿಳಿಯುತ್ತದೆ. ಪೋಷಕರನ್ನು ಬಿಟ್ಟು, ಗುರು ಮಠದಲ್ಲಿದ್ದು ಕೊಂಡು ಗುರುವಿನ ಸೇವೆ ಮಾಡುತ್ತಾ ವಿದ್ಯೆ ಕಲಿಯುವ ಕಾಲಘಟ್ಟದಲ್ಲಿ ವಿದ್ಯಾದಾನ ವೆನ್ನುವುದು ಶ್ರೇಷ್ಟ ದಾನವೆಂದು ತಿಳಿದುಕೊಂಡ ಮಹಾನ್ ನಾಡು ನಮ್ಮದಾಗಿತ್ತು. ಆದರೆ ಇಂದು ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆ. ಶಿಕ್ಷಣದ ಮಹತ್ವ ಕಳೆದುಕೊಂಡು ಅದು ಇಂದು ವ್ಯಾಪಾರಿಕರಣವಾಗಿದೆ. ರಾಜ್ಯಾದ್ಯಂತ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಎಲ್.ಕೆ.ಜಿ ಮತ್ತು ಯುಕೆಜಿ ಗಳ ಪ್ರವೇಶ ನೀತಿ, ಶುಲ್ಕ ನೀತಿಗಳನ್ನು ಸ್ಪಷ್ಟವಾಗಿ ರೂಪಿಸದೇ ಇರುವ ಕಾರಣದಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಶೋಷಣೆ ಗೊಳಗಾಗಿದ್ದಾರೆ. ಕೇವಲ ಕೆ.ಜಿ.ಕ್ಲಾಸ್‌ಗಳಲ್ಲಿ ಪ್ರವೇಶ ಪಡೆಯಲಿಂದು ಲಕ್ಷಗಟ್ಟಲೇ ಶುಲ್ಕ ನೀಡಬೇಕೆಂದರೆ ನಮ್ಮ ದೇಶದಲ್ಲಿ ನಿಶುಲ್ಕವಾಗಿ ಶಿಕ್ಷಣ ನೀಡುತ್ತಿದ್ದ ಮಹಾನ್‌ಶಿಕ್ಷಣದ ಮೌಲ್ಯ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದು ಅರ್ಥವಾಗುತ್ತದೆ. ಎಲ್‌ಕೆ.ಜಿ, ಯುಕೆಜಿ ವ್ಯಾಪಾರೀಕರಣದ ಸಮಸ್ಯೆ ತಡೆಗಟ್ಟಲಾಗದ ಸರ್ಕಾರದ ಕೈಯಲ್ಲಿ ಉನ್ನತ ಶಿಕ್ಷಣದ ದೈತ್ಯಾಕಾರದ ಖಾಸಗಿ ವಿವಿಗಳ ವ್ಯಾಪಾರೀಕರಣ ತಡೆಗಟ್ಟಲು ಸಾಧ್ಯವೇ? ಈಗಾಗಲೇ ಬಿಜೆಪಿ ಆಡಳಿತದ ರಾಜ್ಯ ಸರಕಾರವು ೧೨ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ಧೋರಣೆ ತಳೆದಿರುವುದು ತಿಳಿದುಬಂದಿದೆ.
ಸರಕಾರ ಖಾಸಗಿ ವಿವಿ ಸ್ಥಾಪನೆಗೆ ಸ್ವಷ್ಟ ಮಾರ್ಗಸೂಚಿ ರೂಪಿಸದೆ ಅವುಗಳ ಸ್ಥಾಪನೆಗೆ ಅನುಮತಿ ನೀಡಿದ್ದಾದರೆ ಶಿಕ್ಷಣ ಕ್ಷೇತ್ರದ ವ್ಯಾಪಾರೀಕರಣ ತಡೆಗಟ್ಟಲು ಸಾಧ್ಯವಾಗುತ್ತದೆಯೇ? ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಪ್ರಸಿದ್ಧಿ ಪಡೆದಿದ್ದು ಬೇರೆ ರಾಜ್ಯದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಹಾತೊರೆಯುತ್ತಿದ್ದಾರೆ. ರಾಜ್ಯದಲ್ಲಿ ಖಾಸಗಿ ವಿವಿಗಳು ಬೇರೆ ರಾಜ್ಯಗಳಲ್ಲಿರುವ ಬಂಡವಾಳ ಶಾಹಿಗಳ ತೆಕ್ಕೆಯಲ್ಲಿರುವುದರಿಂದ ಆ ಕಾಲೇಜುಗಳಲ್ಲಿ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗುವುದರೊಂದಿಗೆ ನಮ್ಮ ರಾಜ್ಯದಲ್ಲಿರುವ ದುರ್ಬಲ, ಮಧ್ಯಮ ವರ್ಗ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗುವ ಸಂಭವವೇ ಜಾಸ್ತಿ. ಇದನ್ನು ಗಮನಿಸಿದ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಕಾರ್ಯಕರ್ತರು ರಾಜ್ಯದೆಲ್ಲೆಡೆ ಕಾಲೇಜು ಬಹಿಷ್ಕರಿಸಿ ಪ್ರತಿಭಟನೆ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎನ್ನುವುದು ಇಲ್ಲಿ ಉಲ್ಲೇಖನೀಯ. ಇಲ್ಲಿ ಗಮನಿಸಬೇಕಾದ ಅಂಶ ಖಾಸಗಿ ವಿವಿ ಸ್ಥಾಪನೆಯ ಅನುಮತಿಯನ್ನು ಖಂಡಿಸಿ ಬೀದಿಗಿಳಿದ ವಿದ್ಯಾರ್ಥಿಗಳು ಅನ್ಯರಾಜ್ಯದಿಂದ ಬಂದವರಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದ ಕನ್ನಡದ ಇತರ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಉದ್ದೇಶದಿಂದ ಹೋರಾಟ ಮಾಡಿದ್ದರ ಹಿಂದೆ ವಿದ್ಯಾರ್ಥಿಗಳಲ್ಲಿರುವ ಮುಂದಾಲೋಚನೆ ಎಲ್ಲಾ ಅಕಾರಿಗಳು ಅರ್ಥಮಾಡಿಕೊಳ್ಳಬೇಕು. ಹಿಂದೆ ರಾಜ್ಯ ಸರಕಾರ ಡಿಪ್ಲೋಮಾ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಹೋರಾಟ ಮಾಡಿದ ಪರಿಣಾಮವಿಂದು ಹೆಚ್ಚಿಸಿದ ಶುಲ್ಕವನ್ನು ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಬೇಕು ಎನ್ನುವ ಆದೇಶದಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉಸಿರಾಡುವಂತಾಗಿದೆ ಎನ್ನುವುದು ಮರೆಯುವಂತಿಲ್ಲ.
ರಾಜ್ಯ ಸರಕಾರ ಬೆಳಗಾವಿಯಲ್ಲಿ ಕರೆದಿರುವ ವಿಧಾನ ಮಂಡಲದ ಅವೇಶನದಲ್ಲಿ ಹಲವು ಖಾಸಗಿ ವಿವಿಗಳ ಸ್ಥಾಪನೆಯ ವಿಧೇಯಕ ಮಂಡನೆಯಾಗುವ ಪ್ರಸ್ತಾಪ ಮಾಡುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಸರಕಾರ ಯಾವುದೇ ಪೂರ್ವ ತಯಾರಿ, ಸ್ಪಷ್ಟ-ಮಾರ್ಗಸೂಚಿಯಿಲ್ಲದೆ  ಖಾಸಗಿ ವಿವಿ ಪ್ರಾರಂಭಕ್ಕೆ ಅನುಮತಿ ನೀಡಲು ಹೊರಟಿರುವ ಸರಕಾರದ ಕ್ರಮ ಅನುಮಾನಕ್ಕೆ ಎಡೆಮಾಡಿದೆ. ಈಗಾಗಲೇ ಯುಜಿಸಿಯ ಕಪ್ಪುಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಹಲವು ಡೀಮ್ಡ್ ವಿವಿಗಳು ಬೇರೆ ಬೇರೆ ಹೆಸರಿನಲ್ಲಿ ಖಾಸಗಿ ವಿವಿಗಳ ಸ್ಥಾಪನೆಗೆ ಮುಂದಾಗುತ್ತಿವೆ ಎನ್ನುವ ಸಂಶಯವಿದೆ. ಖಾಸಗಿ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿ ತಮ್ಮ ವ್ಯಾಪಾರ ಕೇಂದ್ರ ತೆರೆಯಲು ರಾಜ್ಯ ಅಥವಾ ಕೇಂದ್ರ ಸರಕಾರದ ಪೂರ್ವಾನುಮತಿಯಿಲ್ಲದೇ, ಯುಜಿಸಿಯ ಮಾನ್ಯತೆಯಿಲ್ಲದೇ ಅಸ್ತಿತ್ವಕ್ಕೆ ಬರಲು ಪ್ರಯತ್ನಿಸುತ್ತಿದೆ.
ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬಡ-ಪ್ರತಿಭಾವಂತ ವಿದ್ಯಾರ್ಥಿಗಳ ಹಿತ ಕಾಪಾಡಲು ಖಾಸಗಿ ವಿವಿಗಳ ಕೆಲವೊಂದು ಅಂಶಗಳು ಸಾರ್ವಜನಿಕ ರಂಗದಲ್ಲಿ ವ್ಯಾಪಕ ಚರ್ಚೆಯಾಗಬೇಕಿದೆ ಎನ್ನುವುದು ನನ್ನ ಭಾವನೆ. ಮಾತ್ರವಲ್ಲ ವಿದ್ಯಾರ್ಥಿಗಳ ಹಿತ ಬಯಸುವ ಪ್ರತಿಯೊಬ್ಬ ನಾಗರಿಕನ ಭಾವನೆ ಇದುವೇ ಆಗಿದೆ. ಸರಕಾರಿ, ಅನುದಾನಿತ-ಅನುದಾನ ರಹಿತ ಕಾಲೇಜುಗಳಲ್ಲಿರುವಂತೆ ಎಸ್‌ಸಿ/ಎಸ್‌ಟಿ/ಒಬಿಸಿ ವಿದ್ಯಾರ್ಥಿಗಳಿಗೆ ಸಿಗುವ ಮೀಸಲಾತಿ ನೀತಿ ಖಾಸಗಿ ವಿವಿಯಲ್ಲಿ ಇರುತ್ತದೆಯೇ? ಈ ವಿವಿಗಳಲ್ಲಿ ಶುಲ್ಕ ನೀತಿ ಹಾಗೂ ಇತರೆ ಶುಲ್ಕಗಳ ಕುರಿತು ಪಾರದರ್ಶಕತೆ ಲಭ್ಯವೇ? ಖಾಸಗಿ ವಿವಿಗಳಲ್ಲಿ ಎಷ್ಟು ಪಟ್ಟು ಶುಲ್ಕ ಹೆಚ್ಚಳ ಇರಬೇಕು ಎನ್ನುವ ಮಾಹಿತಿ? ಮತ್ತು ಈಗಿರುವ ಖಾಸಗಿ ಕಾಲೇಜುಗಳಲ್ಲಿರುವಂತೆ ಸರಕಾರಿ ಕೋಟಾ ಮತ್ತು ಆಡಳಿತ ಮಂಡಳಿ ಸೀಟುಗಳು ಖಾಸಗಿ ವಿವಿಗಳಲ್ಲಿರುವವೇ? (ಖಾಸಗಿ ಇಂಜಿನೀಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ಸರಕಾರಿ ಸೀಟು ಮತ್ತು ಶುಲ್ಕ ನೀತಿ ಇದ್ದಂತೆ). ಆದರೆ ಖಾಸಗಿ ವಿವಿಗಳಲ್ಲಿರುವ ಎಲ್ಲಾ ಸೀಟುಗಳು ಆಡಳಿತ ಮಂಡಳಿ ಸೀಟುಗಳೇ ಆಗಿರುತ್ತವೆ. ಉದಾಹರಣೆ ರಾಜ್ಯದಲ್ಲಿರುವ ಅಲೈಯನ್ಸ್ ಬಿಸಿನೆಸ್ ವಿವಿಯ ಶಿಕ್ಷಣ ವ್ಯಾಪಾರೀಕರಣದ ಚಿತ್ರಣ ನೋಡಿದರೆ ತಿಳಿಯುತ್ತದೆ. ಈ ವಿವಿಯಲ್ಲಿ ೨೦೦೭ರಲ್ಲಿ ಎಂಬಿಎಗೆ ರೂ.೭ಲಕ್ಷವಿತ್ತು. ೨೦೦೯ರಲ್ಲಿ ರೂ.೯.೭೫ ಲಕ್ಷ, ೨೦೧೦ರಲ್ಲಿ ರೂ.೧೧ಲಕ್ಷ, ೨೦೧೧-೧೨ರಲ್ಲಿ ಇದುವೇ ಎಂಬಿಎಗೆ ರೂ.೧೨.೫ ಲಕ್ಷ ಹೆಚ್ಚಳವಾಗಿದೆ. ಅಲ್ಲದೇ ಈ ವಿವಿಯಲ್ಲಿ ಶೇ.೧೫ ಸೀಟುಗಳು ಮಾತ್ರ ಕರ್ನಾಟಕದವರಿಗೆ ಮೀಸಲು ಎಂದಾಗ ಖಾಸಗಿ ವಿವಿಗಳಲ್ಲಿ ಕರ್ನಾಟಕದವರ ಪಾಲು ಎಷ್ಟರವರೆಗೆ ಎನ್ನುವುದು ತಿಳಿಯುತ್ತದೆ. ಅಲೈಯನ್ಸ್ ಬಿಸಿನೆಸ್ ವಿವಿಯಂತೆ ಒಂದು ಕಾಲೇಜ್ ರೀತಿ ಶಿಕ್ಷಣದ ವ್ಯಾಪಾರಿಕರಣ ಮಾಡುವಾಗ ರಾಜ್ಯ ಸರಕಾರ ಕೊಟ್ಟಿರುವ ೧೨ ವಿವಿಗಳು ಶಿಕ್ಷಣದ ವ್ಯಾಪಾರ ಮಾಡುವುದಿಲ್ಲವೆನ್ನುವುದಕ್ಕೆ ಏನು ಗ್ಯಾರಂಟಿ?
ಶಿಕ್ಷಣ ವ್ಯಾಪಾರೀಕರಣದ ಕಾಲಘಟ್ಟದಲ್ಲಿ ಖಾಸಗಿ ವಿವಿಗಳಲ್ಲಿ ಬಡವರು, ಮದ್ಯಮ ವರ್ಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಾಧ್ಯವೇ? ಎನ್ನುವ ಸಂದೇಹ ವಿಪರೀತವಾಗುತ್ತಿದೆ. ಸರಕಾರ ಏಕಾಏಕಿ ನಿರ್ಧಾರದಿಂದ ಖಾಸಗಿ ವಿವಿಗಳ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿದ್ದು, ಈ ವಿವಿಗಳಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಮೀಸಲಾತಿ, ಶುಲ್ಕ ರಿಯಾಯಿತಿ, ಶುಲ್ಕ ಪಡೆಯುವಲ್ಲಿ ಪಾರದರ್ಶಕತೆ ಇನ್ನಿತರ ಶುಲ್ಕಗಳ ಯಾವುದೇ ಮಾಹಿತಿಯ ರೂಪುರೇಷೆಯಿಲ್ಲದಿರುವುದರಿಂದ ಈ ವಿವಿಗಳಲ್ಲಿ ಶ್ರೀಮಂತ ವಿದ್ಯಾರ್ಥಿಗಳು ಪ್ರತಿಷ್ಠೆಗಾಗಿ ಶಿಕ್ಷಣ ಪಡೆಯ ಬಹುದಾಗಿದೆ. ಸರಕಾರ ಅವುಗಳಿಗೆ ಅನುಮತಿ ನೀಡುವುದಕ್ಕಿಂತ ಮುಂಚಿತ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ದಾಖಲಾತಿ ಮತ್ತು ಸಿಬ್ಬಂಗಳ ನೇಮಕಾತಿಯಲ್ಲಿ ಮೀಸಲಾತಿ, ರೋಸ್ಟರ್ ಪದ್ಧತಿಯನ್ನು ಅನುಸರಿಸುತ್ತವೆಯೇ ಎನ್ನುವುದನ್ನು ಯಾಕೆ ಮನಗಂಡಿಲ್ಲ ಎನ್ನುವುದು ಯಕ್ಷಪ್ರಶ್ನೆ ಅಲ್ಲವೇ?
ಖಾಸಗಿ ವಿವಿಯಲ್ಲಿ ಶೇ.೫೦ ರಷ್ಟು ವಿದ್ಯಾರ್ಥಿಗಳು ಕರ್ನಾಟಕದವರಿದ್ದು, ಇವರ ಶುಲ್ಕವನ್ನು ಸರ್ಕಾರ ನಿಗದಿಪಡಿಸಬೇಕು. ವಿವಿಯ ಪ್ರವೇಶದ ಸಂದರ್ಭದಲ್ಲಿ ಸೀಟು ಹಂಚಿಕೆ ಮತ್ತು ಶುಲ್ಕ ನೀತಿಯನ್ನು ರೂಪಿಸಲು ವಿಶ್ರಾಂತ ಕುಲಪತಿಗಳ ನೇತೃತ್ವದಲ್ಲಿ ಶುಲ್ಕ ಸಂರಚನೆ ಮತ್ತು ಸೀಟು ಹಂಚಿಕೆ ಸಮಿತಿಯನ್ನು ಸರಕಾರವೇ ನೇಮಿಸಬೇಕು. ಅಲ್ಲದೇ ಖಾಸಗಿ ವಿವಿಗಳಿಗೆ ಅನುಮತಿ ನೀಡಿದರೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಸಿಬ್ಬಂದಿಗಳ ನೇಮಕಾತಿ ಸಂದರ್ಭ ಮೀಸಲಾತಿ ಮತ್ತು ರೋಸ್ಟರ್ ಪದ್ದತಿ ಅನುಸರಿಸಬೇಕು. ಖಾಸಗಿ ವಿವಿಗಳಲ್ಲಿ ಯುಜಿಸಿಯ ನಿಯಮಾವಳಿಗೆ ಅನುಗುಣವಾಗಿ ಬೇಕಾದ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಹೊಂದಿರಬೇಕು. ಉದ್ದೇಶಿತ ಖಾಸಗಿ ವಿವಿಗಳು ಯಾವುದೇ ಕಾಲೇಜುಗಳ ಸಂಯೋಜನೆ ಹೊಂದುವಂತಿಲ್ಲ. ಖಾಸಗಿ ವಿವಿಗಳ ಕಾರ್ಯವ್ಯಾಪ್ತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಅದಕ್ಕೆ ನಿರ್ಬಂದವನ್ನಿರಿಸಬೇಕು. ಉದ್ದೇಶಿತ ಖಾಸಗಿ ವಿವಿ ವ್ಯಾಪ್ತಿಯಲ್ಲಿ ಬರುವ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ೧೫೬ ಮೆಡಿಕಲ್, ೨೦೦ ಡೆಂಟಲ್, ೧೬೮೮ ಇಂಜಿನಿಯರಿಂಗ್ ಸೀಟುಗಳು ಸಿಇಟಿ ಸರಕಾರಿ ಕೋಟಾದಡಿ ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದು, ಈ ಸೀಟುಗಳ ಪರಿಸ್ಥಿತಿ ಏನು ಎನ್ನುವುದರ ಕುರಿತು ಮಾಹಿತಿ ಒದಗಿಸಬೇಕು. ಈ ವಿವಿಗಳು ದೂರಶಿಕ್ಷಣ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಬಾರದು. ಈಗಾಗಲೇ ಕಪ್ಪುಪಟ್ಟಿಯಲ್ಲಿರುವ ಜೈನ್ ವಿವಿ, ದೇವರಾಜ್ ಅರಸು ವಿವಿಗಳಿಗೆ  ಖಾಸಗಿ ವಿವಿಯ ಸ್ಥಾನಮಾನ ನೀಡಬೇಕೆ? ಅಲ್ಲದೇ ಅಲಯನ್ಸ್ ವಿವಿಯು ರೂ.೫೦ಕೋ.ಯುಜಿಸಿಯ ಅನುದಾನ ಪಡೆದಿದ್ದು ಯಾವ ಆಧಾರದ ಮೇಲೆ ಇಷ್ಟು ದೊಡ್ಡ ಮೊತ್ತದ ಹಣ ಪಡೆಯಲು ಸಾಧ್ಯವಾಯಿತು? ಅಲ್ಲದೇ ಖಾಸಗಿ ವಿವಿಗಳು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಚಟುವಟಿಕೆಗಳನ್ನು ನಡೆಸಲು ಉತ್ಸುಕರಾಗಿರುವುದು ಏಕೆ?
ಖಾಸಗಿ ವಿವಿಗಳು ರಾಜ್ಯದಲ್ಲಿ ಕ್ಯಾಂಪಸ್ ಇಲ್ಲದಿದ್ದರೂ ಶಿಕ್ಷಣ ಕ್ಷೇತ್ರಕ್ಕೆ ಆಸಕ್ತಿ ತೋರುತ್ತಿದ್ದು, ಅವರು ಇಲ್ಲಿ ತೆಗೆದುಕೊಳ್ಳುವ ಭೂಮಿಯ ಬೆಲೆಯು ನೇರವಾಗಿ ವಿದ್ಯಾರ್ಥಿಗಳಿಂದ ವಸೂಲಿ ಮಾಡಬಹುದು ಎನ್ನುವ ನಂಬಿಕೆಯಿಂದಲ್ಲವೇ? ಅಲ್ಲದೇ ಈ ವಿವಿಗಳು ಕಾಷನ್ ಡೆಪಾಸಿಟ್ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುತ್ತಿರುವುದರ ಮೇಲೆ ನಿಯಂತ್ರಣವಿಲ್ಲದಿರುವ ಯಾವುದೇ ಅಂಶ ಗಮನಿಸದ ಸರಕಾರ ಈಗಿರುವ ಶಿಕ್ಷಣ ಪದ್ದತಿಯನ್ನು ಸರಿಯಾಗಿ ನಿಯಂತ್ರಿಸದೆ ಖಾಸಗಿ ವಿವಿಗಳ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿರುವುದರ ಹಿಂದಿರುವ ತಂತ್ರ ಶಿಕ್ಷಣದ ವ್ಯಾಪಾರೀಕರಣವೇ?
ಎಲ್ಲಾ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಕೇಳುವ ಪ್ರಶ್ನೆಗೆ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕಚ್ಚಾಡುವ ನಾಯಕರುಗಳು ಉತ್ತರಿಸಿಯಾರೇ? ಮುಂದಿನ ಪೀಳಿಗೆಗೆ ಉನ್ನತ ಶಿಕ್ಷಣ ಮರೀಚಿಕೆಯಾಗಬಾರದು ಎನ್ನುವ ಉದ್ದೇಶವಿದ್ದರೆ ಖಾಸಗಿ ವಿವಿಗಳಿಗೆ ಅನುಮತಿ ನೀಡದೆ ಈಗಿರುವ ಶಿಕ್ಷಣದ ವ್ಯವಸ್ಥೆಯನ್ನು ಸರಿಪಡಿಸಿ, ಗುಣಮಟ್ಟದ ಶಿಕ್ಷಣವನ್ನು ಮದ್ಯಮ, ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೊರಕುವಂತಾಗಬೇಕು? ವಿದ್ಯಾರ್ಥಿಗಳ ಹೋರಾಟಕ್ಕೆ ನಮ್ಮ ಕಿಂಚಿತ್ ಪ್ರಯತ್ನ ಬೇಡವೇ ಎನ್ನುವ ಪ್ರಶ್ನೆಯನ್ನು ತಮಗೆ ಹಾಕಿಕೊಂಡಾಗ ಸರಕಾರದ ಈ ಯೋಜನೆ ಜಾರಿಯಾದರೆ ಅದನ್ನು ನಿಯಂತ್ರಿಸಬಹುದಲ್ಲವೇ.....?