Thursday, 30 January 2014

ವನಸಿರಿಯ ನಡುವೆ ಭಕ್ತಿ-ಭಾವದ ಸುಬ್ರಹ್ಮಣ್ಯನ ಆಲಯ 
ಸುತ್ತಲೂ ವನಸಿರಿ ಸೊಬಗಿನ ನಡುವೆ ಭವ್ಯ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕಂಗೊಳಿಸುತ್ತಿದೆ. ಎಂಟು ನೂರು ವರ್ಷಗಳಿಂದ ಆಸ್ತಿಕ ಜನಕೋಟಿಯ ಆಶೋತ್ತರ ಈಡೇರಿಸುತ್ತಾ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನೆಲೆ ನಿಂತಿರುವುದು ಇಲ್ಲಿನ ವಿಶೇಷ. ಶ್ರೀ ಸುಬ್ರಹ್ಮಣ್ಯ ದೇವರ ವಿಗ್ರಹ ಐದು ಹೆಡೆಗಳಿರುವ ಸರ್ಪದ ಆಕೃತಿಯಲ್ಲಿದೆ. ಕರಿಶಿಲೆಯ ಈ ವಿಗ್ರಹವೇ ಅಪೂರ್ವ ಕಲಾಕೃತಿ. ವಿಗ್ರಹದ ಶಿರೋಭಾಗದ ಹಿಂಭಾಗದಲ್ಲಿರುವ ಕಮಲ ಪುಷ್ಪದ ಚಿಹ್ನೆ ದಕ್ಷಿಣ ಭಾರತದಲ್ಲೇ ಅಪೂರ್ವವಾಗಿದೆ. ದೇವಸ್ಥಾನದ ಗೋಪುರದಲ್ಲಿರುವ ಗುಡಿಗಳಲ್ಲಿ ಸ್ಥಾಪಿಸಲ್ಪಟ್ಟಿರುವ ಶ್ರೀ ಮಹಾಗಣಪತಿ ಮತ್ತು ಶ್ರೀ ದುರ್ಗಾ ಮಾತೆಯ ಪಂಚಲೋಹದ ವಿಗ್ರಹಗಳು ಕೂಡ ಪ್ರಾಚೀನ ಕಾಲದ್ದಾಗಿದೆ.
ಷಷ್ಠಿ ಮಹಿಮೆ:
ಷಷ್ಠಿ ಮಹೋತ್ಸವ ಇಲ್ಲಿನ ಪ್ರಮುಖ ಉತ್ಸವ. ಐದು ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತದೆ. ಸಾವಿರಾರು ಮಂದಿ ಈ ಉತ್ಸವದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ. ಈ ಸಂದರ್ಭ ದೈವಗಳ ನೇಮೋತ್ಸವ ನಡೆಯುತ್ತದೆ. ಅಲ್ಲದೆ ದೇವಳದಲ್ಲಿ ಪ್ರತಿನಿತ್ಯ ಮೂರು ಹೊತ್ತು ಪೂಜೆ ನೆರವೇರುತ್ತದೆ. ಪ್ರತಿ ತಿಂಗಳೂ ಸಂಕ್ರಾತಿ, ವರ್ಷಂಪ್ರತಿ ನಾಗರ ಪಂಚಮಿ, ನೂಲಹುಣ್ಣಿಮೆ, ಗಣೇಶ ಚೌತಿ, ನವರಾತ್ರಿ, ಪ್ರತಿಷ್ಠಾ ವಾರ್ಷಿಕೋತ್ಸವ, ವಿಷು, ಪತ್ತನಾಜೆ, ತಂಬಿಲ ಇತ್ಯಾದಿ ವಿಶೇಷ ದಿನಗಳ ಆಚರಣೆ ಪೂಜೆ ನಡೆಯುತ್ತದೆ. ಸೇವಾಸಕ್ತರಿಗೆ ಪ್ರತಿದಿನ ಸೇವಾವಕಾಶವಿದೆ.
ಬಲಿವಾಡು ತಂದವರಿಗೆ ಭೋಜನ ಪ್ರಸಾದದ ವ್ಯವಸ್ಥೆಯು ಇದೆ. ಭಕ್ತಾದಿಗಳ ಅನುಕೂಲಕ್ಕಾಗಿ ವಿವಾಹ, ಉಪನಯನ ಇತ್ಯಾದಿ ಶುಭ ಕಾರ್ಯಗಳಿಗೆ ಅವಕಾಶವಿದ್ದು, ವೇದಪಾಠವೂ ಇಲ್ಲಿ ನಡೆಯುತ್ತದೆ.
ಕೋಟೆ, ವಾರಣಾಶಿ, ಕೆದಿಲ ಈ ಮೂರು ಮನೆತನದವರು ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಳದ ಅನುವಂಶಿಕ ಮೊಕ್ತೇಸರರಾಗಿದ್ದಾರೆ. ಮೋಟುಕಾನ, ಮುಂಡುಗಾರು, ಬಾಳಿಲ, ಕಳಂಜಗುತ್ತು, ಮುಪ್ಪೇರ್ಯ, ಕಜೆಮೂಲೆ, ಪಟ್ಟೆ, ಭಜನಿ ಮನೆತನದವರು ಶ್ರೀ ದೇವಳದ ನಿಕಟ ಸಂಪರ್ಕ ಹೊಂದಿದ್ದರು. ಮೊಕ್ತೇಸರರು ಅರ್ಚಕರು ಸಹಿತ ಒಟ್ಟು ೧೨ ಮಂದಿಗೆ ಗೌರ ಪ್ರಸಾದ ಈಗಲೂ ಸಲ್ಲುತಿದೆ. ಇಲ್ಲಿನ ದೈವಗಳ ನುಡಿಗಟ್ಟಿನಲ್ಲಿಯೂ ಈ ಹೆಸರುಗಳು ಕೇಳಿ ಬರುತ್ತಿವೆ. ಕಳೆದ ೩೦ ವರ್ಷಗಳಿಂದ ಶ್ರೀ ದೇವಾಲಯ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ. ಗರ್ಭಗುಡಿ ಮತ್ತು ಗೋಪುರಗಳ ಜೀರ್ಣೋದ್ಧಾರ, ದೈವಗಳ ಗುಡಿ ನಿರ್ಮಾಣ, ಮಹಾದ್ವಾರ, ಪಾಕಶಾಲೆ ನಿರ್ಮಾಣವಾಗಿದ್ದು, ಕಲ್ಯಾಣ ಮಂಟಪ ಕಾಮಗಾರಿ ಶೇ.೭೫ರಷ್ಟು ಪೂರ್ಣಗೊಂಡಿದೆ.
ಮಾರ್ಗಸೂಚಿ:
ಸುಳ್ಯ ತಾಲೂಕು ಕಳಂಜ ಗ್ರಾಮದಲ್ಲಿರುವ ಕೋಟೆ ಶ್ರೀ ಸುಬ್ರಹ್ಮಣ್ಯ ದೇವಳ ತಾಲೂಕು ಕೇಂದ್ರದಿಂದ ೧೫ ಕಿ.ಮೀ, ಪುತ್ತೂರಿನಿಂದ ೩೨ ಕಿ.ಮೀ ಹಾಗೂ ಕುಕ್ಕೆ ಸುಬ್ರಹ್ಮಣ್ಯದಿಂದ ೩೩ ಕಿ.ಮೀ ದೂರದಲ್ಲಿದೆ.

ಸಂತಾನ ಪ್ರಾಪ್ತಿ, ಕೌಟುಂಬಿಕ ಸಮಸ್ಯೆ ಪರಿಹಾರ ಕೋಟೆ ಶ್ರೀ ಸುಬ್ರಹ್ಮಣ್ಯ ದೇವರ ಅನುಗ್ರಹದಿಂದ ಸಾಧ್ಯವಾಗಿದೆ. ಅಸಂಖ್ಯಾತ ಭಕ್ತರ ಸಹಕಾರದಲ್ಲಿ ದೇವಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಕಲ್ಯಾಣ ಮಂಟಪ ಕಾಮಗಾರಿ ಶೀಘ್ರ ಮುಗಿಯಲಿದೆ.
*ಸತ್ಯನಾರಾಯಣ ಕೋಟೆ-ಆಡಳಿತ ಧರ್ಮದರ್ಶಿ.

ಕೋಟೆ ಶ್ರೀ ಸುಬ್ರಹ್ಮಣ್ಯ ದೇವರ ಜತೆಗೆ ಪ್ರತಿನಿತ್ಯ ಶ್ರೀ ಗಣಪತಿ, ಶ್ರೀ ದುರ್ಗಾದೇವಿ, ಶ್ರೀ ನೇರಳತ್ತಾಯ, ಶ್ರೀ ರಕ್ತೇಶ್ವರಿ, ಶ್ರೀ ಉಳ್ಳಾಕಳು ದೈವಗಳಿಗೂ ಪೂಜೆ ನಡೆಯುತ್ತದೆ. ಇತರ ಕಡೆಗಳಲ್ಲಿ ಗಣಪತಿ ದೇವರ ವಾಹನ ಮೂಷಿಕ ಆದರೆ ಕೋಟೆ ದೇವಸ್ಥಾನದ ಗಣಪತಿ ದೇವರ ವಾಹನ ವೃಷಭ.
*ವಾರಣಾಶಿ ಗೋಪಾಲಕೃಷ್ಣ-ಧರ್ಮದರ್ಶಿ.



ಪರಶುರಾಮ ಸೃಷ್ಠಿಯ ವೈಶಿಷ್ಟ್ಯಗಳು:-
ಪಶ್ಚಿಮದಲ್ಲಿ ಬೋರ್ಗರೆಯುವ ಅರಬ್ಬಿಸಮುದ್ರ-ಪೂರ್ವದಲ್ಲಿ ಸುತ್ತುವರಿದಿರುವ ಪಶ್ಚಿಮಘಟ್ಟಗಳ ನಡುವಿನ ಸುಂದರ ತಾಣ-ನಮ್ಮ ಕರಾವಳಿ
ಪಶ್ಚಿಮ ಘಟ್ಟದ ತಪ್ಪಲಿನ ಭಾಗವನ್ನೊಮ್ಮೆ ಕಣ್ಣಾಯಿಸಿದಾಗ ಅನೇಕ ದೇಗುಲಗಳು, ಶಿಕ್ಷಣ ಕೇಂದ್ರಗಳು, ಗದ್ದೆ-ತೋಟಗಳಿಂದಾವೃತವಾದ ಭೂಭಾಗ ಕಣ್ಮುಂದೆ ತನ್ನದೇ ರೂಪದೊಂದಿಗೆ ಬಿಂಬಿತವಾಗುತ್ತದೆ. ಪ್ರಕೃತಿ ರಮಣೀಯ ಆಗುಂಬೆಯಲ್ಲಿ ನಿಂತು ದೃಷ್ಟಿ ಹಾಯಿಸಿದರೆ, ಪಶ್ಚಿಮದಲ್ಲಿ ಕಣ್ಣಾಲಿಗಳೇ ನಿಲುಕದಷ್ಟು ದೂರದವರೆಗೆ ಶಾಂತ ಸ್ವರೂಪಿಯಾಗಿ ಬೃಹತ್ ಅಲೆಗಳ ಅಬ್ಬರದೊಂದಿಗೆ ಭೂಭಾಗಕ್ಕೆ ಅಪ್ಪಳಿಸುವ ಅರಬ್ಬಿ ಸಮುದ್ರ ಕಂಡುಬರುತ್ತದೆ. ಪರಶುರಾಮನ ಸೃಷ್ಠಿಯ ಕರಾವಳಿಗೆ ಯಾವುದೇ ತೊಡಕಾಗುವುದಿಲ್ಲ ಎನ್ನುವ ನಂಬಿಕೆ ಇಲ್ಲಿಯ ನಿವಾಸಿಗಳದು. ನ್ಯಾಯ-ಧರ್ಮಗಳಿಗೆ ಪ್ರಸಿದ್ದಿ ಪಡೆದ ಕರಾವಳಿಯ ಚಿತ್ರಣವನ್ನು ನಿಮ್ಮ ಮುಂದೆ ತರುವ ಒಂದು ಸಣ್ಣ ಪ್ರಯತ್ನವೇ ಈ ಲೇಖನ.
ಕರಾವಳಿ ಕರ್ನಾಟಕವು ಹಿಂದು ಹಾಗೂ ಜೈನ ಸಮುದಾಯದ ಯಾತ್ರಾ ಸ್ಥಳಗಳ ಭದ್ರಕೋಟೆಯಾಗಿದೆ ಎಂದರೂ, ತಪ್ಪಿಲ್ಲ. ದ್ವೈತ ತತ್ವಶಾಸ್ತ್ರದ ಕೇಂದ್ರಗಳಾದ ಉಡುಪಿಯ ಅಷ್ಟಮಠಗಳು, ವೇದ-ಮಂತ್ರಗಳ ಅಭ್ಯಾಸಕ್ಕೆ ಗೋಕರ್ಣ, ಕಾರ್ಕಳ-ಮೂಡಬಿದ್ರೆ ವರಂಗ-ಧರ್ಮಸ್ಥಳದ ಜೈನ ಮಂದಿರಗಳು ಹಾಗೂ ವಿವಿದೆಡೆಗಳಲ್ಲಿ ವೈಷ್ಣವ ಆಚರಣೆಗಳ ಪ್ರಸಿದ್ದ ತಾಣವಾಗಿ ಮಾರ್ಪಟ್ಟಿದೆ. ಚಾಲುಕ್ಯರು ನಿರ್ಮಿಸಿದ ವಿಜಯನಗರ ಶೈಲಿಯ ದೇವಾಲಯಗಳು ಭಟ್ಕಳ, ಕುಮಟಾ, ಶಿರಾಲಿಯಲ್ಲಿ ಮೂಡಿ ಬಂದಿರುವುದು ಕರಾವಳಿಗೆ ವಿಜಯನಗರದ ಕಳೆಯನ್ನು ತಂದಿಟ್ಟಿದೆ.
ಪರಶುರಾಮ ಸೃಷ್ಠಿಗೆ ಸುಮಾರು ೩೦೦ ಕಿ.ಮೀ ವ್ಯಾಪ್ತಿಯ ಪ್ರಾಚೀನ ಕರಾವಳಿಯ ಆಶೀರ್ವಾದವಿದೆ. ಉತ್ತರ ಕನ್ನಡದ ಹವಳದ ದ್ವೀಪ ನೇತ್ರಾಣಿ, ಕಂದುಬಣ್ಣದ ಅಗ್ನಿಶಿಲೆಯಿಂದಾವೃತವಾದ ಸೇಂಟ್ ಮೇರಿಸ್ ದ್ವೀಪ, ಸೂರ್ಯಾಸ್ತಮಾನದ ಹೃದಯಂಗಮ ಸವಿಯನ್ನುಣಬಡಿಸುವ ಮಲ್ಪೆ, ಮುರ್ಡೆಶ್ವರ, ಮರವಂತೆ, ಗೋಕರ್ಣ, ಕುಮಟಾ ಸ್ಥಳಗಳಲ್ಲಿನ ಬೀಚ್‌ಗಳು, ಅತ್ಯದ್ಬುತ ಪರ್ವತ ಶ್ರೇಣಿಗಳು, ಆಗುಂಬೆ, ಕೊಡಚಾದ್ರಿ, ಕೆಮ್ಮಣ್ಣುಗುಂಡಿ ಗಿರಿಧಾಮಗಳು ಪ್ರವಾಸಿಗರಿಗೆ ಅಪಾರವಾದ ಸೂರ್ಯನ ಬೆಳಕು ಹಾಗೂ ಹಸಿರನ್ನು ಒದಗಿಸುವ ತಾಣವಾಗಿದೆ. ಇವೆಲ್ಲವೂ ಕಣ್ಣಿಗೆ ಕಾಣುವ, ಜನರ ಬಾಯಿಯಿಂದ ಸಾಮಾನ್ಯವಾಗಿ ಕೇಳಿಬರುವಂತ ಗಿರಿಧಾಮಗಳಾಗಿದ್ದು, ಬೆಳಕಿಗೆ ಬಾರದ ಅನೇಕ ಗಿರಿಧಾಮಗಳು ಕರಾವಳಿಯಲ್ಲಿದೆ.
ಕರಾವಳಿಯ ಪ್ರೇಕ್ಷಣಿಯ ತಾಣಗಳಿವು:
*ಗೋಕರ್ಣ:
ಕಾರವಾರದಿಂದ ೫೬ಕಿ.ಮೀ ದೂರದಲ್ಲಿರುವ ಯಾತ್ರಾಸ್ಥಳ ಗೋಕರ್ಣ ಸಂಸ್ಕೃತ ಕಲಿಕೆಯ ಕೇಂದ್ರ. ಇದು ಮಹಾಬಲೇಶ್ವರ ದೇವಸ್ಥಾನವಾಗಿದ್ದು, ಶಿವನಿಗೆ ಮೀಸಲಾದ ಆತ್ಮಲಿಂಗ. ಶಿವನ ಹುಟ್ಟುಹಬ್ಬ ಫೆಬ್ರವರಿಯಂದು ಶಿವನ ರಥದ ಮೆರವಣಿಗೆ ನಡೆಯಲಿದೆ. ಇಲ್ಲಿನ ತಂಬ್ರಪರ್ಣಿ ತೀರ್ಥದಲ್ಲಿ ಮೃತರ ಅಂತ್ಯಸಂಸ್ಕಾರ ಮಾಡಿದಾಗ ಸದ್ಗತಿ ದೊರಕುತ್ತದೆ ಎನ್ನುವ ಅಪಾರವಾದ ನಂಬಿಕೆ ಹಿಂದುಗಳದು. ಸಮೀಪದಲ್ಲಿಯೇ ಓಂ ಬೀಚ್ ಇದೆ.
*ಉಡುಪಿ:
ಮಂಗಳೂರಿನಿಂದ ೫೮ ಕಿ.ಮೀ ದೂರದಲ್ಲಿರುವ ಉಡುಪಿಯು ಕರಾವಳಿಯ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ೧೪ನೇ ಶತಮಾನದಲ್ಲಿ ಆಚಾರ್ಯ ಮಧ್ವರು ದೇವಾಲಯ ಸ್ಥಾಪಿಸಿ, ಕೃಷ್ಣನ ಸೇವೆಗಾಗಿ ಎಂಟು ಮಠವನ್ನು ರಚಿಸಿದ್ದರು. ಎರಡು ವರ್ಷಗಳಿಗೊಮ್ಮೆ ಪರ್ಯಾಯ ಉತ್ಸವ ನಡೆಯುತ್ತದೆ. ದೇವಳದ ಸಮೀಪದಲ್ಲಿ ಕಡಿಯಾಳಿ ದುರ್ಗಾ ದೇವಸ್ಥಾನ, ಅಂಬಲ್ಪಾಡಿ ಶಕ್ತಿ ದೇವಾಲಯ, ರಾಘವೇಂದ್ರ ಮಠ, ವೆಂಕಟರಮಣ ಸ್ವಾಮಿ ದೇವಾಲಯವಿದೆ. ಹತ್ತಿರದಲ್ಲಿಯೇ ಮಲ್ಪೆ ಬಂದರು ಇದ್ದು, ವಡಬಾಂಡೇಶ್ವರ ಬಲರಾಮ ದೇವಾಲಯ ಹಾಗೂ ಬೀಚ್ ಹೊಂದಿದೆ.
*ತಂತ್ರಾಡಿ:
ಉಡುಪಿಯಿಂದ ೨೨ ಕಿ.ಮೀ ದೂರದಲ್ಲಿನ ತಂತ್ರಾಡಿ ಪವಿತ್ರ ಸ್ಥಳಗಳಲ್ಲಿ ಒಂದು. ರಾಮಣ್ಣ ಬಾಯರಿ ನಿರ್ಮಿಸಿದ ಬ್ರಹ್ಮಸ್ಥಾನ ದೇವಸ್ಥಾನವು ಪ್ರಸಿದ್ದಿಯಾಗಿದ್ದು, ಇದು ಅಷ್ಟಬಂಧ ಬ್ರಹ್ಮನಾಗಿದೆ.
*ಕಾರ್ಕಳ: 
ಮಂಗಳೂರಿನಿಂದ ೫೦ ಕಿ.ಮಿ ಮತ್ತು ಮೂಡಬಿದ್ರೆಯಿಂದ ೨೦ ಕಿ.ಮೀ ಉತ್ತರಕ್ಕಿರುವ ಕಾರ್ಕಳ ಜೈನ ಧರ್ಮದ ಪ್ರಮುಖ ಕೇಂದ್ರ. ಹಲವಾರು ದೇವಾಲಯಗಳಿದ್ದು, ಸಣ್ಣ ಬೆಟ್ಟದ ಮೇಲೆ ೧೭ ಮೀಟರ್ ಎತ್ತರದ ಬಾಹುಬಲಿ(ಗೋಮಟೇಶ್ವರ)ಯ ಪ್ರತಿಮೆ. ಪ್ರಮುಖ ಜೈನ ಬಸದಿಗಳಲ್ಲಿ ಚತುರ್ಮುಖ ಬಸದಿ (೧೫೮೭), ನೇಮಿನಾಥ ಬಸದಿ, ಅನಂತಪದ್ಮನಾಭ ದೇವಾಲಯ (೧೫೬೭) ಮತ್ತು ವೆಂಕಟರಮಣ ದೇವಸ್ಥಾನ (ಪಡು ತಿರುಪತಿ)ವಿದೆ.
*ವೇಣೂರು:
ಮಂಗಳೂರಿನಿಂದ ೫೦ ಕಿ.ಮೀ ಈಶಾನ್ಯಕ್ಕಿರುವ ವೇಣೂರಿನಲ್ಲಿ ಎಂಟು ಬಸದಿಗಳು ಹಾಗೂ ಮಹಾದೇವ ದೇವಸ್ಥಾನದ ಅವಶೇಷಗಳಿವೆ. ಶಾಂತಿನಾಥನ ೧೭ ಸಿ ಕಲ್ಲಿಬಸದಿಯಿದ್ದು, ಗೋಮಟೇಶ್ವರನ ಏಕಶಿಲಾ ಮೂರ್ತಿಯಿದೆ.
*ಮಲ್ಪೆ ಬೀಚ್:
ಮಂಗಳೂರಿನಿಂದ ೬೬ ಕಿ.ಮೀ ಉತ್ತರಕ್ಕಿರುವ ಮಲ್ಪೆ ಬೀಚ್ ಮಣಿಪಾಲ, ಉಡುಪಿಯ ಸಮೀಪದಲ್ಲಿದೆ. ಪ್ರವಾಸಿ ತಾಣವಾಗಿದ್ದು, ದೋಣಿಯಲ್ಲಿ ತೆರಳಿ ಸೈಂಟ್ ಮೇರಿಸ್ ದ್ವೀಪಕ್ಕೆ ಸಾಗಬಹುದು. ಕಂದುಬಣ್ಣದ ಅಗ್ನಿಶಿಲೆಯಿಂದಾವೃತವಾದ ದ್ವೀಪವು ಅತ್ಯದ್ಬುತ ಭೂವೈಜ್ಞಾನಿಕ ರಚನೆಯನ್ನೊಳಗೊಂಡಿದೆ.
*ಧರ್ಮಸ್ಥಳ:
ಮಂಗಳೂರಿನಿಂದ ೭೫ ಕಿ.ಮೀ ದೂರದಲ್ಲಿರುವ ಧರ್ಮಸ್ಥಳವು ಬೆಟ್ಟದ ನಡುವಿನ ಎತ್ತರದ ಸ್ಥಳದಲ್ಲಿದೆ. ದೇವಳದ ಅಕ್ಕಪಕ್ಕದಲ್ಲಿಯೂ ಗದ್ದೆಗಳು, ನೇತ್ರಾವತಿಯಿಂದಾವೃತವಾದ ಆಕರ್ಷಕ ತಾಣ. ಪ್ರೇಕ್ಷಣಿಯ ಸ್ಥಳವಾಗಿದ್ದು, ಬೆಟ್ಟದ ಮೇಲೆ ೧೯೭೩ ರಲ್ಲಿ ನಿರ್ಮಿಸಿದ ೧೪ ಮೀಟರ್‌ಎತ್ತರದ ಏಕಶಿಲೆಯ ಬಾಹುಬಲಿ ಮೂರ್ತಿಯಿದೆ. ದೇವಳದ ಅಧಿಕಾರದಲ್ಲಿ ಉಚಿತ ವಸತಿ ಮತ್ತು ಊಟವನ್ನು ಭಕ್ತಾದಿಗಳಿಗೆ ನೀಡಲಾಗುತ್ತದೆ. ಸಣ್ಣ ವಸ್ತು ಸಂಗ್ರಹಾಲಯ, ಮಂಜೂಷಾ ಮ್ಯೂಸಿಯಂ, ಗೋದಾಮು, ಎರಡು ದೇವಾಲಯದ ರಥಗಳಲ್ಲಿ ಫಲಕಗಳು, ಕಂಚಿನ ಶಿಲ್ಪಗಳು ಧಾರ್ಮಿಕ ವಸ್ತುಗಳನ್ನು ಕೆತ್ತಲಾಗಿದೆ.
*ಕೊಲ್ಲೂರು:
ಮಂಗಳೂರಿನಿಂದ ೧೪೭ ಕಿ.ಮೀ. ದೂರದಲ್ಲಿದೆ. ಮೂಕಾಂಬಿಕೆಯ ತಾಣವು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿದೆ. ಮೂಕಾಂಬಿಕೆಯು ಕೊಡಚಾದ್ರಿ ಬೆಟ್ಟದ ಮೇಲೆ ನೆಲೆಯಾಗಿದ್ದಾಳೆ. ದೇವತೆಯು ಶಿವ ಮತ್ತು ಶಕ್ತಿಯ ಅಂಶಗಳನ್ನೊಳಗೊಂಡ ಜ್ಯೋತಿರ್ಲಿಂಗವಾಗಿದ್ದು, ದಿನನಿತ್ಯ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ.
*ಮೂಡಬಿದ್ರೆ:
ಮಂಗಳೂರಿನಿಂದ ೩೫ ಕಿ.ಮೀ ದೂರದಲ್ಲಿರುವ ಮೂಡಬಿದ್ರೆಯು ಜೈನ ಬಸದಿಯ ತಾಣ. ೧೮ ಜೈನ ದೇವಾಲಯಗಳಿದ್ದು, ೧೪೨೯ರಲ್ಲಿ ರಚಿತವಾದ ಚಂದ್ರನಾಥ ಬಸದಿಯು ೧೦೦೦ ಕಂಬಗಳನ್ನು ಹೊಂದಿರುವ ಪುರಾತನ ಬಸದಿಯಾಗಿದೆ. ಜೈನ್ ಮಾಥಾ ಎನ್ನುವ ಹಸ್ತಪ್ರತಿಗಳ ಪ್ರಮುಖ ಸಂಗ್ರಹವಿದೆ. ಇತರ ಪುಣ್ಯಕ್ಷೇತ್ರಗಳಾದ ಶಾಂತಿನಾಥ, ಸೆಟ್ಟರಾ, ದೆರಾಮಾ ಸೆಟ್ಟಿ ಬಸದಿ, ಗುರುಬಸದಿ, ಕೋಟೆ ಹಾಗೂ ವಿಕ್ರಮ ಸೆಟ್ಟಿ ಬಸದಿ ಮುಖ್ಯವಾಗಿದೆ.
*ಭಟ್ಕಳ: 
ಕಾರವಾರದಿಂದ ೧೩೫ಕಿ.ಮೀ ದೂರದ ಭಟ್ಕಳವು ೧೬ ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಮುಖ್ಯ ಬಂದರಾಗಿತ್ತು. ಪ್ರಾಚೀನ ಪಟ್ಟಣದ ವಿಜಯನಗರ ಶೈಲಿ ಮತ್ತು ಅನೇಕ ಆಸಕ್ತಿದಾಯಕ ಜೈನ ಸ್ಮಾರಕ ದೇವಸ್ಥಾನಗಳಿವೆ. ೧೭ ನೇ ಶತಮಾನದಲ್ಲಿ ಹಿಂದು ದೇವಾಲಯದ ವಿಜಯನಗರ ಶೈಲಿಯ ಪ್ರಾಣಿ ಕೆತ್ತನೆಗಳಾಗಿವೆ.
*ಹೊನ್ನಾವರ:
ಕಾರವಾರದಿಂದ ೯೦ಕಿ.ಮೀ ದೂರದಲ್ಲಿರುವ ಹೊನ್ನಾವರವು ಪೋರ್ಚುಗೀಸರ ಬಂದರಾಗಿತ್ತು. ಬಸವರಾಜ ದುರ್ಗಾ ದ್ವೀಪವು ಸಮೀಪದಲ್ಲಿದ್ದು, ಶರಾವತಿ ನದಿಯ ತಟದಲ್ಲಿದೆ.
*ಅಂಕೋಲಾ:
ಕಾರವಾರದಿಂದ ೩೭ಕಿ.ಮೀ ದಕ್ಷಿಣಕ್ಕೆ ಅಂಕೋಲಾವಿದ್ದು, ಸಣ್ಣ ನಗರವಾಗಿದೆ. ೧೫ನೇ ಶತಮಾನದ ರಾಜ ಸರ್ಪಮಲ್ಲಿಕಾ ಕೋಟೆ ಹಾಗೂ ಪ್ರಾಚೀನತೆ ಸಾರುವ ಶ್ರೀ ವೆಂಕಟರಮಣ ದೇವಾಲಯದ ಪಾಳುಬಿದ್ದ ಗೋಡೆಗಳ ಅವಶೇಷಗಳು ಲಭ್ಯವಿದೆ. ದೇವಳದ ಬಳಿ ರಾಮಾಯಣದ ದೃಶ್ಯಗಳನ್ನು ಕೆತ್ತಿದ ಎರಡು ದೈತ್ಯ ಮರದ ರಥಗಳಿವೆ.
*ಮುರ್ಡೆಶ್ವರ ದೇವಾಲಯ:
ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದೇವಾಲಯವು ೨೪೯ ಅಡಿ ರಾಜಾ ಗೋಪುರ ಹೊಂದಿದೆ. ದೇವಾಲಯ ಸಂಕೀರ್ಣದಲ್ಲಿರುವ ಶಿವನ ಮೂರ್ತಿಯು ೧೨೩ ಅಡಿ ಎತ್ತರವನ್ನು ಹೊಂದಿದೆ. ದೇವಾಲಯಕ್ಕೆ ಸೇರ್ಪಡೆಯಾಗಿರುವ ರಾಜಗೋಪುರವನ್ನು ಉದ್ಯಮಿ ಆರ್.ಎನ್.ಶೆಟ್ಟಿ ಕೊಡುಗೆ ನೀಡಿದ್ದು, ಪ್ರಪಂಚದಲ್ಲಿಯೇ ಅತಿ ಎತ್ತರದ ಹಿಂದೂ ದೇವಸ್ಥಾನದ ಗೋಪುರದಲ್ಲೊಂದಾಗಿದೆ. ಗೋಪುರವು ಹಿಂದೂ ದೇವಾಲಯಗಳಿಗೆ ಸಂಬಂದಿಸಿದ ಅನನ್ಯ ಅಲಂಕೃತ ರಚನೆಯನ್ನೊಳಗೊಂಡಿದೆ. ರಾಜಗೋಪುರದ ನೆಲಅಂತಸ್ತು ಸೇರಿದಂತೆ ೨೧ ಮಹಡಿಯನ್ನು ಹೊಂದಿದೆ. ೧೦೫ ಅಡಿ ಉದ್ದ ಮತ್ತು ೫೧ಅಡಿ ಅಗಲವಿದೆ. ಗೋಪುರಕ್ಕೆ ಲಿಫ್ಟ್ ಸೌಲಭ್ಯವಿದ್ದು, ಪ್ರವಾಸಿಗರು ಮೇಲೆ ಹೋಗಿ ಅರಬ್ಬಿ ಸಮುದ್ರದ ವೈಮಾನಿಕ ನೋಟ ಹಾಗೂ ಶಿವನ ಪ್ರತಿಮೆ ವೀಕ್ಷಿಸಬಹುದಾಗಿದೆ. ಗೋಪುರದ ತಳದಲ್ಲಿ ಎರಡು ಆನೆಗಳ ಪ್ರತಿಮೆಗಳನ್ನು ಹೊಂದಿದೆ. ವಿಶ್ವದ ಅತಿ ಎತ್ತರದ ಶಿವನ ಮೂರ್ತಿಯಾಗಿದೆ.
ಕಣ್ಮನ ಸೆಳೆಯುವ ಕಡಲತೀರಗಳು: 
ರವೀಂದ್ರನಾಥ್ ಟಾಗೋರ್ ಕವಿತೆಗಳಲ್ಲಿ ಕಾರವಾರದ ಬೀಚ್‌ಗಳನ್ನು ವರ್ಣಿಸಿದ್ದು, ಬ್ಲೂ ಲಗೂನ್ ಬೀಚ್, ಲೇಡಿಸ್ ಬೀಚ್‌ಗಳು ಮುಖ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಓಂ ಬೀಚ್, ಮುರ್ಡೆಶ್ವರ ಬೀಚ್, ನೇತ್ರಾಣಿ ದ್ವೀಪ, ೧೬ ಮತ್ತು ೧೭ ನೇ ಶತಮಾನದ ಕೆಳದಿ ಅರಸರು ನಿರ್ಮಿಸಿದ ದ್ವೀಪ ಕೋಟೆ ಬಸವರಾಜ ದುರ್ಗಾಗಳು ಸೇರಿವೆ. ಅಲ್ಲದೇ ದೇವಘಡ ಮತ್ತು ಕುರ್ಮಾಘಡ ಎನ್ನುವ ಎರಡು ದ್ವೀಪಗಳು ಕಾರವಾರದ ಸಮೀಪವಿದೆ. ಸುಮಾರು ೩೨೦ಕಿ.ಮೀ ದೀರ್ಘ ಕರಾವಳಿಯನ್ನು ಹೊಂದಿದ್ದು, ಕರಾವಳಿಯ ಜಾನಪದ ಸೊಗಡು, ಅಪ್ಯಾಯಮಾನ ತಿನಿಸುಗಳ ಸ್ವಾಭಾವಿಕತೆ ಇತರೆಡೆಗಳಲ್ಲಿ ಸಿಗಲು ಸಾಧ್ಯವಿಲ್ಲ. ಪ್ರವಾಸಿಗರ ಆಕರ್ಷಣೀಯ ತಾಣವಾಗಿರುವ ಕರಾವಳಿ ಕಾರವಾರ, ಮಲ್ಪೆ, ಮರವಂತೆ, ಮುರ್ಡೆಶ್ವರ, ಭಟ್ಕಳ, ಉಳ್ಳಾಲ, ಕಾಪು, ಗೋಕರ್ಣ, ಪಣಂಬೂರು, ತಣ್ಣೀರುಬಾವಿ ಇತ್ಯಾದಿ ಬೀಚ್‌ಗಳು ಜನಾಕರ್ಷಣೀಯವಾಗಿದೆ.
ದಕ್ಷಿಣ ಕನ್ನಡದಲ್ಲೇನಿದೆ...?  
ದಕ್ಷಿಣ ಕನ್ನಡ ಜಿಲ್ಲೆಯು ಉತ್ತರಕ್ಕೆ ಉಡುಪಿ, ಈಶಾನ್ಯದಲ್ಲಿ ಚಿಕ್ಕಮಗಳೂರು,
ಪೂರ್ವಕ್ಕೆ ಹಾಸನ, ಆಗ್ನೇಯದಲ್ಲಿ ಕೊಡಗು, ದಕ್ಷಿಣದಲ್ಲಿ ಕಾಸರಗೋಡು ಕೇರಳವನ್ನು ಗಡಿಯನ್ನಾಗಿ ಹೊಂದಿದೆ. ಪಶ್ಚಿಮದಲ್ಲಿ ಅರಬ್ಬಿ ಸಮುದ್ರವನ್ನು ಹೊಂದಿದ್ದು, ಮಂಗಳೂರು ಜಿಲ್ಲಾ ಕೇಂದ್ರವಾಗಿದೆ. ಜಿಲ್ಲೆಯು ೪,೮೬೬ ಚದರ ಕಿ.ಮೀ೨ ವಿಸ್ತೀರ್ಣವನ್ನು ಹೊಂದಿದ್ದು, ಪ್ರತಿ ಚ.ಕಿ.ಮೀಗೆ ೩೯೦ ಜನಸಾಂದ್ರತೆಯಿದ್ದು, ೩೫೪ ಹಳ್ಳಿಗಳಿವೆ. ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ಎನ್ನುವ ಐದು ತಾಲೂಕುಗಳಿದ್ದು, ೮ ವಿಧಾನಸಭಾ ಕ್ಷೇತ್ರವನ್ನೊಳಗೊಂಡಿದೆ. ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮಂಗಳೂರು, ಮೂಡಬಿದ್ರೆ, ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಪುತ್ತೂರುಗಳೆಂದು ವಿಂಗಡಿಸಲಾಗಿದೆ. ಕನ್ನಡ, ಕೊಂಕಣಿ, ತುಳು, ಬ್ಯಾರಿ ಅಧಿಕೃತ ಭಾಷೆಯಾಗಿದ್ದು, ವಾಹನ ನೋಂದಣಿ ಸಂಖ್ಯೆಯು ಕೆ.ಎ-೨೧, ಕೆ.ಎ-೧೯ಆಗಿದೆ.
ದಕ್ಷಿಣ ಕನ್ನಡವು ೧೮೬೦ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಏಕೈಕ ಆಡಳಿತದಲ್ಲಿದ್ದು, ಬ್ರಿಟಿಷರು ದಕ್ಷಿಣ ಕೆನರಾ ಮತ್ತು ಉತ್ತರ ಕೆನರಾವೆಂದು ವಿಂಗಡಿಸಿ ಆಳ್ವಿಕೆ ನಡೆಸುತ್ತಿದ್ದರು. ೧೮೬೨ರಲ್ಲಿ ಬಾಂಬೆ ಪ್ರಾಂತ್ಯಕ್ಕೆ ಸೇರಲ್ಪಟ್ಟಿದ್ದು, ಕುಂದಾಪುರ ತಾಲೂಕು ಮೊದಲು ಉತ್ತರ ಕೆನರಾದಲ್ಲಿ ಸೇರ್ಪಡೆಯಾಗಿದ್ದು, ನಂತರ ದಕ್ಷಿಣ ಕೆನರಾಕ್ಕೆ ಸೇರಿತ್ತು. ೧೯೫೬ ರಲ್ಲಿ ಸಂಸ್ಥಾನದ ಪುನರ್ವಿಂಗಡಣೆ ಸಂದರ್ಭ ಕಾಸರಗೋಡು ಬೇರ್ಪಟ್ಟು ಕೇರಳ ರಾಜ್ಯಕ್ಕೆ ಹಾಗೂ ದಕ್ಷಿಣ ಕನ್ನಡವು ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು. ನಂತರ ಕರ್ನಾಟಕ ಸರಕಾರವು ಬೃಹತ್ ಆಗಿರುವ ದಕ್ಷಿಣ ಕನ್ನಡವನ್ನು ಪುನರ್‌ವಿಂಗಡನೆ ಮಾಡಿ, ೧೯೯೭ರ ಆಗಸ್ಟ್ ೧೫ ರಂದು ಉಡುಪಿ ಜಿಲ್ಲೆಯನ್ನಾಗಿ ವಿಂಗಡಿಸಿತ್ತು. ಮಂಗಳೂರು ಕೆಂಪು ಮಣ್ಣಿನ ಛಾವಣಿ ಹೆಂಚುಗಳು, ಗೇರು ಬೀಜದ ಉತ್ಪನ್ನಗಳು, ಬ್ಯಾಂಕಿಂಗ್, ಶಿಕ್ಷಣ ಮತ್ತು ಸಹಜವಾಗಿರುವ ವಿಲಕ್ಷಣ ತಿನಿಸುಗಳು ಪ್ರಸಿದ್ದವಾಗಿದೆ.
ಕೆನರಾ ಜಿಲ್ಲೆಯು ೧೯೪೭ರಲ್ಲಿ ದಕ್ಷಿಣ ಕನ್ನಡವಾಗಿ ಮರುನಾಮಕರಣವಾಗಿತ್ತು. ಧರ್ಮಕ್ಕನುಗುಣವಾಗಿ ಜಿಲ್ಲೆಯಲ್ಲಿ ಹಿಂದು ಶೇ.೬೮.೫೯; ಮುಸ್ಲಿಂ-ಶೇ.೨೨.೦೭; ಕ್ರೈಸ್ತ-ಶೇ.೮.೬೯; ಜೈನ-ಶೇ.೧ ಹಾಗೂ ಇತರರು ಶೇ.೦.೫೫ ರಷ್ಟಿದ್ದಾರೆ. ೨೦೧೧ರಲ್ಲಿ ಜಿಲ್ಲೆಯ ಜನಸಂಖ್ಯೆಯು ೨೦,೮೩,೬೨೫ ಹೊಂದಿದೆ. ಜನಸಂಖ್ಯಾ ಬೆಳವಣಿಗೆ ದರವು ಶೇ.೯.೮ ಆಗಿದ್ದು, ಪ್ರತಿ ೧೦೦೦ ಪುರುಷರಿಗೆ ೧೦೧೮ ಹೆಣ್ಣು ಒಂದು ಲಿಂಗ ಅನುಪಾತವಿದೆ. ಶೇ.೮೮.೬೨ ಸಾಕ್ಷರತಾ ದರ ಹೊಂದಿದೆ. ಜಿಲ್ಲೆಯಲ್ಲಿ ಸಾಗುವ ನೇತ್ರಾವತಿ, ಕುಮಾರಾಧಾರ, ಫಲ್ಗುಣಿ, ಶಾಂಭವಿ, ನಂದಿನಿ, ಪಯಸ್ವಿನಿ ನದಿಗಳು ಅರೇಬಿಯನ್ ಸಮುದ್ರವನ್ನು ಸೇರುತ್ತವೆ.
ವೇಣೂರು ಬಾಹುಬಲಿ, ಕದ್ರಿ ಮಂಜುನಾಥ, ಮೂಡಬಿದ್ರೆ ಜೈನ ಬಸದಿ, ಕೃಷ್ಣಾಪುರ ಮಠ, ಧರ್ಮಸ್ಥಳ ಮಂಜುನಾಥೇಶ್ವರ, ಕಟೀಲು ದುರ್ಗಾಪರಮೇಶ್ವರಿ, ಕುದ್ರೋಳಿ ಗೋಕರ್ಣನಾಥೇಶ್ವರ, ಮುಂಡ್ಕೂರು ದುರ್ಗಾಪರಮೇಶ್ವರಿ, ಕಾರಿಂಜೇಶ್ವರ ದೇವಸ್ಥಾನ, ಉಳ್ಳಾಲ ಬೀಚ್, ಕುಕ್ಕೆ ಸುಬ್ರಹ್ಮಣ್ಯ, ಮೂಲ್ಕಿ ದುರ್ಗಾಪರಮೇಶ್ವರಿ, ಸಂತ ಅಲೋಶಿಯಸ್ ಚಾಪೆಲ್, ಮಿಲಾಗ್ರಿಸ್ ಚರ್ಚ್ ಮಂಗಳೂರು, ಸಯ್ಯದ್ ಮದನಿ ಮಸೀದಿ ಮತ್ತು ದರ್ಗಾ ಉಳ್ಳಾಲ, ಸುಲ್ತಾನ್ ಬತ್ತೇರಿ ಮಂಗಳೂರು, ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಕೇಪು, ಅನಂತಾಡಿ, ಬಲ್ನಾಡಿನ ಉಳ್ಳಾಲ್ತಿ ದೇವಳ, ಉಳ್ಳಾಲ ಸೋಮೇಶ್ವರ ದೇವಸ್ಥಾನ, ಸಮ್ಮರ್ ಸ್ಯಾಂಡ್ ಉಳ್ಳಾಲ ಬೀಚ್, ಪಿಲಿಕುಳ ನಿಸರ್ಗಾಲಯ, ಕುಡುಪು ದೇವಸ್ಥಾನಗಳಿವೆ. ಜಿಲ್ಲೆಯಲ್ಲಿ ಎಂಸಿಎಫ್, ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್, ಎಂಆರ್‌ಪಿಎಲ್, ಬಿಎಎಸ್‌ಎಫ್, ಭಾರತಿ ಶಿಪ್‌ಯಾರ್ಡ್, ಕ್ಯಾಂಪ್ಕೋ ಇತ್ಯಾದಿ ಕೈಗಾರಿಕೆಗಳು ಪ್ರಮುಖವಾಗಿದೆ.
ಅನೇಕ ಶಿಕ್ಷಣ ಸಂಸ್ಥೆ-ಸಂಶೋಧನಾ ಕೇಂದ್ರಗಳಿವೆ. ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ, ಎಸ್‌ಡಿಎಂ ಸಮೂಹ ಶಿಕ್ಷಣ ಸಂಸ್ಥೆಗಳು, ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು, ಶ್ರೀದೇವಿ ಶಿಕ್ಷಣ ಸಂಸ್ಥೆ, ಎ.ಜೆ.ಶೆಟ್ಟಿ ದಂತ ವೈದ್ಯಕೀಯ ವಿದ್ಯಾಲಯ, ಕೆ.ಎಸ್.ಹೆಗ್ಡೆ, ಯೆನಪೋಯ, ಕೆಂಎಂಸಿ ವೈದ್ಯಕೀಯ ಸಂಸ್ಥೆಗಳು ಸೇರಿದಂತೆ, ಫಿಶರಿಸ್ ಕಾಲೇಜುಗಳಿಂದಾವೃತವಾಗಿರುವ ದ.ಕ.ಜಿಲ್ಲೆಯು ಶಿಕ್ಷಣ ಕಾಶಿಯೆಂದು ಪ್ರಸಿದ್ದಿ ಪಡೆದಿದೆ.
ಉಡುಪಿ ಜಿಲ್ಲೆ ಹೆಮ್ಮೆಯ ತಾಣಗಳಿವು: 
೧೯೯೭ರ ನಂತರ ವಿಭಜನೆಗೊಂಡ ಉಡುಪಿ ಜಿಲ್ಲೆಯು ಕುಂದಾಪುರ, ಕಾರ್ಕಳ, ಉಡುಪಿ ತಾಲೂಕುಗಳನ್ನೊಳಗೊಂಡು ಒಟ್ಟು ೩,೮೮೦ ಕಿಮಿ ೨ (೧,೫೦೦ ಚ. ಮೈಲಿ)
ವಿಸ್ತೀರ್ಣವನ್ನು ಹೊಂದಿದೆ. ಕಾರ್ಕಳ, ಕಾಪು, ಉಡುಪಿ, ಕುಂದಾಪುರ, ಬೈಂದೂರು ಎನ್ನುವ ಐದು ವಿಧಾನಸಭಾ ಕ್ಷೇತ್ರವನ್ನು ಹೊಂದಿದೆ. ೨೦೦೧ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯು ೧೧,೧೨,೨೪೩ಆಗಿದ್ದು, ತುಳು, ಕನ್ನಡ, ಕೊಂಕಣಿ, ಕುಂದಗನ್ನಡ ಅಧಿಕೃತ ಭಾಷೆಯಾಗಿದೆ. ೯೮ ಕಿ.ಮೀ ಕರಾವಳಿ ಹೊಂದಿರುವ ಉಡುಪಿ ಜಿಲ್ಲೆಯು ೮೬.೨೫ಸಾಕ್ಷರತೆ ಪ್ರಮಾಣ ಹೊಂದಿದೆ. ಕೆ.ಎ.೨೦ ಇಲ್ಲಿನ ವಾಹನ ನೋಂದಾವಣೆ ಸಂಖ್ಯೆಯಾಗಿದ್ದು, ಉತ್ತರದಲ್ಲಿ ಉತ್ತರ ಕನ್ನಡ, ದಕ್ಷಿಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿದೆ. ಈಶಾನ್ಯ ಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಗಡಿಯಿದ್ದು, ಪೂರ್ವಕ್ಕೆ ಚಿಕ್ಕಮಗಳೂರು ಜಿಲ್ಲೆ ಸುತ್ತುವರಿದಿದೆ.
ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ ಹೊಂದಿರುವ ಜಿಲ್ಲೆಯು ಅಷ್ಟಮಠಗಳಿಂದ ಪ್ರಸಿದ್ದಿ ಪಡೆದಿದೆ. ಉಡುಪಿಯು ಪ್ರಾಚೀನ ಶಿಕ್ಷಣ ಕೇಂದ್ರವೂ ಆಗಿದ್ದು, ಯಕ್ಷಗಾನ, ನಾಟಕ, ಜಾನಪದ ನೃತ್ಯ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿದೆ.
ಸಣ್ಣ ಸಣ್ಣ ಬೆಟ್ಟಗಳು, ತೆಂಗು, ಅಡಿಕೆ, ಗೇರು ತೋಟಗಳು ವಿಸ್ತಾರವಾಗಿದ್ದು, ಪ್ರಸ್ತುತ ರಬ್ಬರ್ ತೋಟಗಳನ್ನು ಕಾಣಬಹುದು. ಕೃಷಿ ಭೂಮಿಗಳಲ್ಲಿ ತೆನೆಭರಿತ ಭತ್ತದ ಫಸಲುಗಳು ಹೃದಯಂಗಮ ನೋಟವಾಗಿದೆ. ಹೆಬ್ರಿಯ ಸಮೀಪದಲ್ಲಿ ಸೋಮೇಶ್ವರ ಅಭಯಾರಣ್ಯ, ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯವಿದೆ. ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳು ಮಲೆನಾಡಿಗೆ ಸರಿಸಾಟಿಯಾಗಿ ಅರಣ್ಯದಿಂದಾವೃತವಾಗಿದ್ದು, ಹಸಿರು ಗಿಡಮರಗಳು ಸುಂದರ ಗಾಳಿ ಪಸರಿಸುತ್ತವೆ. ಅಪರೂಪದ ಗಿಡಮರಗಳು, ಪ್ರಾಣಿಪಕ್ಷಿಗಳು ಹುಲಿ, ಕಾಳಿಂಗ ಸರ್ಪ, ಜಿಂಕೆ, ಕಾಡೆಮ್ಮೆ ಇತರ ಪ್ರಾಣಿಗಳ ವಿಹಂಗಮ ನೋಟದ ಸವಿ ಸವಿಯಬಹುದು. ಜಿಲ್ಲೆಯು ಉಷ್ಣವಲಯದ ಹವಾಗುಣವನ್ನು ವಿಶೇಷವಾಗಿದೆ. ಉಡುಪಿಯು ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತಮ ಸಾಕ್ಷರತೆ ದರ ಹೊಂದಿದ್ದು, ರಾಜ್ಯದ ಶಿಕ್ಷಣ ಮಂಡಳಿಯು ನಡೆಸುವ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಉಡುಪಿಯೇ ಅಗ್ರಸ್ಥಾನದಲ್ಲಿರುವುದು ಇದಕ್ಕೆ ಸಾಕ್ಷಿ. ಜಿಲ್ಲೆಯು ಅಂತರಾಷ್ಟ್ರೀಯವಾಗಿ ಪ್ರಸಿದ್ದಿ ಪಡೆದ ಶೈಕ್ಷಣಿಕ ಸಂಸ್ಥೆಗಳ ತವರೂರಾಗಿದ್ದು, ಉನ್ನತ ಶಿಕ್ಷಣದ ಮಣಿಪಾಲ್ ಅಕಾಡೆಮಿ ಶಾಲಾ, ಕಾಲೇಜುಗಳು ಮತ್ತು ನಿಟ್ಟೆ ಶಿಕ್ಷಣ ಸಮೂಹ ಸಂಸ್ಥೆಗಳು ಸೇರಿದಂತೆ ಕೃಷಿ, ಕಾನೂನು, ತೋಟಗಾರಿಕೆ ಕಾಲೇಜುಗಳನ್ನೊಳಗೊಂಡಿದೆ. ಜಿಲ್ಲೆಯಲ್ಲಿ ಅಕ್ಕಿ, ತೆಂಗಿನಕಾಯಿ, ಅಡಿಕೆ ತೋಟಗಳನ್ನು ಕಾಣಬಹುದಾಗಿದ್ದು, ಗೋಡಂಬಿಯು ವಾಣಿಜ್ಯ ವ್ಯವಹಾರವಾಗಿದೆ. ಹಾಲು ಖರೀದಿ ಮತ್ತು ಸಂಸ್ಕರಣಾ ಘಟಕ ಮಣಿಪಾಲದಲ್ಲಿದೆ.
ಜಿಲ್ಲೆಯಲ್ಲಿ ಒಳನಾಡು ಮೀನುಗಾರಿಕೆ ಮತ್ತು ಆಳಸಮುದ್ರದ ಮೀನುಗಾರಿಕೆಗೆ ಮಲ್ಪೆ ಮತ್ತು ಗಂಗೊಳ್ಳಿ ಕೇಂದ್ರವಾಗಿದೆ. ನಂದಿಕೂರಿನಲ್ಲಿ ಯುಪಿಸಿಎಲ್ ಪವರ್ ಪ್ರಾಜೆಕ್ಟ್ ಇದೆ.
ಸಾಹಿತ್ಯ ಕೃಷಿಗೆ ಪೂರಕ: 
ಜಿಲ್ಲೆಯಲ್ಲಿ ಅನೇಕರು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕೋಟ ಶಿವರಾಮ ಕಾರಂತರು ಕುಂದಾಪುರ ತಾಲೂಕಿನ ಕೋಟದಲ್ಲಿ ವಾಸವಾಗಿದ್ದರು.
ಕವಿ ಗೋಪಾಲಕೃಷ್ಣ ಅಡಿಗ, ಪ್ರೊ.ಎ.ವಿ.ನಾವಡ, ಖ್ಯಾತ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ, ಸಾಹಿತ್ಯ ವಿಮರ್ಶಕ ಜನಾರ್ದನ ಭಟ್, ಕವಿ ಜಯರಾಮ್ ಭಟ್ ಕೊಡುಗೆ ನೀಡಿದ್ದಾರೆ. ಉದ್ಯಮಿಗಳಾದ ಟಿಎಂಎ ಪೈ, ಟಿ.ಎ.ಪೈ, ಡಾ.ಬಿ.ಆರ್.ಶೆಟ್ಟಿ, ರಾಜ್ ಶೆಟ್ಟಿ ಹೆಸರು ಮಾಡಿದ್ದಾರೆ. ಕಲೆ  ಮತ್ತು ಸಂಸ್ಕೃತಿಗೆ ಪ್ರಸಿದ್ದವಾಗಿದ್ದು, ಕೋಣಗಳ ಓಟ ವಂಡಾರು ಕಂಬಳ, ಯಡ್ತಾಡಿ, ತೊನ್ನಾಸೆ, ಕಾರ್ಕಳ ತಾಲೂಕಿನ ಲವ-ಕುಶ ಜೋಡು ಕಂಬಳಗಳು ಪ್ರಸಿದ್ದ. ಬಡಗು ಶೈಲಿಯ ಯಕ್ಷಗಾನ ಕೇಂದ್ರವೂ ಉಡುಪಿಯ ಇಂದ್ರಾಳಿಯಲ್ಲಿದೆ. ನಾಗರಾಧನೆಗೆ ಪ್ರಸಿದ್ದವಾಗಿರುವ ಕರಾವಳಿಯಲ್ಲಿ ನಾಗನಿಗೆ ವಿಶೇಷ ಗೌರವ, ಪೂಜ್ಯತಾ ಭಾವನೆಯಿದೆ. ಭೂತಕೋಲ, ಆಟಿಕಳೆಂಜ, ಕಾಡ್ಯನಾಟ ಎನ್ನುವ ನಂಬಿಕೆಯೊಂದಿಗೆ ಪ್ರಕೃತಿ ಪೂಜೆಯನ್ನು ನಡೆಸಲಾಗುತ್ತದೆ. ಕೋಳಿ ಅಂಕಗಳು ಜನರು ಮನಸ್ಸಿನ ಬೇಸರ ಕಳೆಯಲು ಸಹಕಾರಿ. ಯಕ್ಷಗಾನ ಕ್ಷೇತ್ರಕ್ಕೆ ಅನೇಕ ಕಲಾವಿದರು ಕೊಡುಗೆ ನೀಡಿದ್ದು, ದಿವಂಗತ ಕಾಳಿಂಗ ನಾವುಡ, ದಿ.ನಾರಣಪ್ಪ ಉಪ್ಪೂರು, ವಂಡಾರು ಬಸವ ಇತರರು ಪ್ರಖ್ಯಾತರಾಗಿದ್ದಾರೆ.
ನೋಡಬೇಕಾದ ಸ್ಥಳಗಳು: 
ಸೇಂಟ್ ಮೇರೀಸ್ ದ್ವೀಪ, ಕಾಪು ದೀಪಸ್ತಂಭ, ಮರವಂತೆ ಬೀಚ್, ಒತ್ತಿನೆಣೆ ಬೀಚ್‌ಗಳಿವೆ. ಧಾರ್ಮಿಕ ಸ್ಥಳಗಳಾದ ಕೊಲ್ಲೂರು, ಕಾರ್ಕಳ ಗೋಮಟೇಶ್ವರ, ಆನೆಗುಡ್ಡೆ ಮಹಾಗಣಪತಿ, ಹಟ್ಟಿಯಂಗಡಿ ಗಣಪತಿ, ಮಂದಾರ್ತಿ ದುರ್ಗಾಪರಮೇಶ್ವರಿ, ಉಡುಪಿಯಿಂದ ೨೫ ಕಿ.ಮೀ.ದೂರದಲ್ಲಿ ಅತ್ತೂರ್ ಚರ್ಚ್, ಕಾಪು ಮಾರಿಯಮ್ಮ ದೇವಸ್ಥಾನ, ೧೫ ಕಿ.ಮೀ.ದೂರದಲ್ಲಿ ಬಾರ್ಕೂರು ಸಂಸ್ಥಾನದ ಅವಶೇಷಗಳು, ಸಾಲಿಗ್ರಾಮ ದೇವಸ್ಥಾನ, ಪೆರ್ಣಂಕಿಲ ಗಣಪತಿ, ಪೆರ್ಡೂರು ಅನಂತಪದ್ಮನಾಭ, ಹಿರಿಯಡ್ಕ ವೀರಭದ್ರ, ಶಂಕರನಾರಾಯಣ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ, ಸೌಕೂರು ದುರ್ಗಾಪರಮೇಶ್ವರಿ ಇತ್ಯಾದಿ ದೇವಸ್ಥಾನಗಳಿವೆ.
ಉಡುಪಿಯಿಂದ ೪೨ ಕಿ.ಮೀ ದೂರದಲ್ಲಿ ಹೆಬ್ರಿಯ ಸಮೀಪ ಕೂಡ್ಲುತೀರ್ಥ, ಸೀತಾ ಫಾಲ್ಸ್, ೫೪ ಕಿ.ಮೀ.ದೂರದಲ್ಲಿ ಬರ್ಕಣ ಫಾಲ್ಸ್, ೫೦ ಕಿ.ಮೀ ದೂರದಲ್ಲಿ ಬೆಲ್ಕಲ್ ತೀರ್ಥ ಫಾಲ್ಸ್, ಕೊಲ್ಲೂರು ಸಮೀಪದ ಅರಿಸಿನ ಗುಂಡಿ, ಹೆಬ್ರಿ ಸಮೀಪದ ಜೋಮ್ಲು ತೀರ್ಥ, ಕೋಸಳ್ಳಿ ವಾಟರ್ ಫಾಲ್ಸ್‌ಗಳನ್ನು ಹೊಂದಿದೆ.
ಕುದ್ರುಗಳೆಂದು ಕರೆಯಲ್ಪಡುವ ದ್ವೀಪಗಳು:
ಸೌಪರ್ಣಿಕ, ಸ್ವರ್ಣ, ಚಕ್ರ, ಸೀತಾ, ವರಾಹಿ ಮತ್ತು ಕುಬ್ಜಾ ನದಿಗಳು ಸುಂದರ ಹಾಗೂ ಸಾಮಾನ್ಯವಾದ ನದಿ ದ್ವೀಪಗಳನ್ನು ಸೃಷ್ಟಿಸಿದ್ದು, ಇವುಗಳನ್ನು ಕುದ್ರುಗಳೆಂದು ಕರೆಯಲಾಗುತ್ತದೆ. ಅನೇಕ ಸ್ಥಳಗಳಿಗೆ ಕುಡಿಯುವ ನೀರು, ವಿದ್ಯುತ್ ಮತ್ತು ಸಾರಿಗೆ ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಉದಾಹರಣೆಗೆ ಸುಳ್ ಕುದ್ರು, ಕನ್ನಡ ಕುದ್ರು, ಬಬ್ಬು ಕುದ್ರು, ಕಟ್ಟೆ ಕುದ್ರು, ಬೆಣ್ಣೆ ಕುದ್ರು, ಕುಕ್ಕುದೆ ಕುದ್ರು, ಉಪ್ಪಿನ ಕುದ್ರು, ತಿಮ್ಮಣ್ಣ ಕುದ್ರು, ಪಡು ಕುದ್ರು, ಹಟ್ಟಿಕುದ್ರು, ಬಾಳಕುದ್ರು, ಬವಳಿ ಕುದ್ರು, ಶೆಟ್ಟಿ ಕುದ್ರು, ಜಾರುಕುದ್ರು ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತಿವೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯು ಯಕ್ಷಗಾನಕ್ಕೆ ಪ್ರಸಿದ್ದಿಯನ್ನು ಪಡೆದಿದ್ದು, ತೆಂಕು-ಬಡಗುಗಳೆನ್ನುವ ಎರಡು ವಿಧದೊಂದಿಗೆ ಹಲವಾರು ದೇವಳದ ನಾಮಾಂಕಿತದೊಂದಿಗೆ ಕನ್ನಡದ ಸೊಬಗನ್ನು, ಪುರಾಣದ ತತ್ವವನ್ನು ಸಾರುತ್ತಿವೆ. ಕರಾವಳಿಯಲ್ಲಿ ಅನೇಕ ಪ್ರೇಕ್ಷಣಿಯ ಸ್ಥಳಗಳಿದ್ದುಕೆಲವನ್ನು ಪರಿಚಯಿಸಲಾಗಿದೆ. ಒಮ್ಮೆ ಸ್ಥಳಗಳಿಗೆ ಭೇಟಿ ನೀಡಿದಾಗ ಸ್ಥಳದ ಮಹತ್ವಿಕೆಯನ್ನು ತಿಳಿದು ಸ್ವ-ಅನುಭವ ಪಡೆಯಬಹುದು..ಏನಂತಿರಾ.

ಆರೋಪಿ ಹಿಂದುವಾದರೆ ಬೊಬ್ಬೆ-ಇಲ್ಲವಾದರೆ ಮೌನ...!
 ಯಾಕೀ ತಾರತಮ್ಯ..ಎದ್ದೇಳಿ ಸೋ-ಕಾಲ್ಡ್ ಜರ್ನಲಿಸ್ಟ್‌ಗಳೆ? ಕಮ್ಯೂನಿಸ್ಟ್‌ಗಳೆ? ವಿಚಾರವಾದಿಗಳೇ?
(ಕರಾವಳಿಯ ಎರಡು ಪ್ರತಿಷ್ಠಿತ ವೈದ್ಯಕೀಯ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಸೂಕ್ಷ್ಮ ಅವಲೋಕನದ ಈ ಲೇಖನ-ಪ್ರಸ್ತುತ ಜನತೆಯ ನಡೆ)
ಸೂರ್ಯನಿಂದ ಗುರುತಿಸಲಾಗದ ವಸ್ತುವನ್ನು ಇರುಳಿನಲ್ಲಿ ದೀಪವು ಬೆಳಗಿ ಅದರ ಇರವನ್ನು ತೋರ್ಪಡಿಸುತ್ತದೆ. ಇದರರ್ಥ ಸೂರ್ಯನಿಗಿಂತ ದೀಪವೇ ಶ್ರೇಷ್ಠವೆಂದಲ್ಲ. ಸಮಾಜದಲ್ಲಿ ವಿವೇಕಯುತ-ಉತ್ತಮ ಸೌಹಾರ್ದ ಬದುಕಿಗೆ ಅಗತ್ಯವಿರುವ ಅಂಶವನ್ನು ಹಿರಿಯರು-ಕಿರಿಯರು ಎನ್ನುವ ಭೇದವಿಲ್ಲದೇ ಸ್ವೀಕರಿಸಬೇಕು ಎನ್ನುವ ನಾಣ್ಣುಡಿ ಜನಜನಿತವಾಗಿದೆ. ವೈಜ್ಞಾನಿಕತೆಯ ಸೋಗಿನಲ್ಲಿ ಯಾರಿಂದ ಯಾವ ಅಂಶವನ್ನು ಸ್ವೀಕರಿಸಬೇಕು ಎನ್ನುವ ಸಮಸ್ಯೆಯಲ್ಲಿ ಹಿಂದು ಸಮಾಜ ತೊಳಲಾಡುತ್ತಿದೆಯೇ? ಎನ್ನುವ ಗೊಂದಲದ ತಕ್ಕಡಿಯಲ್ಲಿದೆ. ಕಾರಣವಿಷ್ಟೆ ಕೆಲವು ದಿನದ ಹಿಂದೆ ಮಂಗಳೂರಿನ ದೇರಳಕಟ್ಟೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ದೌರ್ಜನ್ಯದಿಂದ ನಾವು ತಾಲಿಬಾನ್‌ನಲ್ಲಿದ್ದೆವೊ ಅಥವಾ ಮಾನವೀಯ ಮೌಲ್ಯಗಳ ಪ್ರತೀಕ ಭಾರತದಲ್ಲಿದ್ದೆವೊ ಎನ್ನುವ ಸಂಶಯ ತಾಂಡವವಾಡುತ್ತಿದೆ. ದಿನನಿತ್ಯ, ಪ್ರತಿಕ್ಷಣವೂ ಭಯದ ವಾತಾವರಣದಲ್ಲಿ ಹೇಡಿಗಳಂತೆ ಜೀವನ ನಡೆಸುವಂತ ಸ್ಥಿತಿ ಬಹುಸಂಖ್ಯಾತ ಹಿಂದುಗಳಾದಾಯಿತೆ?
ತಾಲಿಬಾನ್ ಸಂಸ್ಕೃತಿಯಲ್ಲಿ, ಭಯೋತ್ಪಾದಕರೂ ಅಸಹಾಯಕ ಮಹಿಳೆಯ ಮೇಲೆ ಅತ್ಯಾಚಾರಗೈದಿಲ್ಲವೆಂದಲ್ಲ. ಅಲ್ಲಿ ಹಲವು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೂ, ಅವೆಲ್ಲವೂ ಕೊಲೆಯಲ್ಲಿ ಅಂತ್ಯವಾಗಿದೆ. ಆದರೆ ದೇರಳಕಟ್ಟೆಯ ಪ್ರಕರಣ ಮಾತ್ರ ವಿಭಿನ್ನ. ಭಾರತೀಯ ಸಂಸ್ಕೃತಿಯಲ್ಲಿ ಪರಮೋಚ್ಛ ಸ್ಥಾನವನ್ನಲಂಕರಿಸಿರುವ ವಿರುದ್ದ ಲಿಂಗಿಗಳ ಮನಸ್ಸು, ದೇಹಗಳು ಒಂದಾಗುವ ಲೈಂಗಿಕ ಕ್ರಿಯೆ, ನಾಲ್ಕು ಗೋಡೆಗಳ ಮಧ್ಯೆ ನಡೆಯ ಬೇಕಾಗಿರುವುದನ್ನು ಪಾಶ್ಚಾತ್ಯರಲ್ಲೂ ಕಂಡುಬರದಂತೆ ಎಂಟು ಮಂದಿ ಆರೋಪಿಗಳ ಸಮ್ಮುಖದಲ್ಲಿ ನಡೆಸಲು ಆಗ್ರಹಿಸುತ್ತಾರೆ ಎಂದಾಗ ಆರೋಪಿಗಳು ಆ ವಿದ್ಯಾರ್ಥಿನಿಯೊಂದಿಗೆ ಎಷ್ಟು ವಿಕೃತವಾಗಿ ವರ್ತಿಸಿರಬಹುದು ಎನ್ನುವ ದೃಶ್ಯವೇ ಕಲ್ಪನೆಗೆ ನಿಲುಕದಿರುವಾಗ ವಿದ್ಯಾರ್ಥಿನಿಯ ಪರಿಸ್ಥಿತಿ ಹೇಗಿರಬೇಡ ಎನ್ನುವುದನ್ನು ಪ್ರತಿಯೊರ್ವನು ಆಲೋಚಿಸಬೇಕು. ಕಾರಣ ಪ್ರತಿಯೊರ್ವನು ತಾಯಿಯ ಗರ್ಭದಿಂದ ಭೂಮಿಗಿಳಿದವರಾಗಿರುವ ಕಾರಣ, ತಾಯಿ, ಅಕ್ಕ-ತಂಗಿ, ಹೆಂಡತಿಯನ್ನು ಹೊಂದಿರುವ ಪ್ರತಿಯೊರ್ವನೂ ಸಂತ್ರಸ್ತೆಯ ಸ್ಥಾನದಲ್ಲಿ ತಮ್ಮ ಬಂಧುಗಳನ್ನು ಕಲ್ಪಿಸಿಕೊಂಡಾಗ ಪರಿಸ್ಥಿತಿಯ ಗಂಬೀರತೆ ಅರ್ಥವಾಗುತ್ತದೆ ಎನ್ನುವ ಭಾವನೆ ನನ್ನದು. ಲೈಂಗಿಕ ದೃಶ್ಯವನ್ನು ಚಿತ್ರಿಸಿಕೊಂಡು ಹಣದ ಬೇಡಿಕೆಯಿಡುವಂತಹ ಭಂಡ ಧೈರ್ಯ ಮಾಡಿ, ಸಮಾಜದಲ್ಲಿ ವಿದ್ರೋಹಿ ಚಟುವಟಿಕೆ ನಡೆಸುವವರಿಗೂ ನಾವು ನಿಮ್ಮಂತೆ ಸರಿಸಮಾನರು ಎನ್ನುವ ಪರೋಕ್ಷ ಸಂದೇಶ ಸಾರುವ ಆರೋಪಿಗಳ ಮನಸ್ಥಿತಿಯ ಕುರಿತು ಸಂಶಯ ಹುಟ್ಟುತ್ತದೆ. ಹೀನಕೃತ್ಯವನ್ನೆಸಗುವ ತಾಲಿಬಾನಿಗಳು ಕೂಡ ಹುಬ್ಬೇರಿಸುವಂತ ಘಟನೆ ಕರಾವಳಿಯಲ್ಲಿ ವರದಿಯಾಗಿದೆ ಎಂದಾಗ ನಮ್ಮ ಪರಿಸ್ಥಿತಿಯ ಕುರಿತು ಆತ್ಮಾವಲೋಕನ ಅಗತ್ಯವಿದೆ ಎಂದೆನಿಸುವುದರಲ್ಲಿ ತಪ್ಪಿಲ್ಲವಲ್ಲ? ಅತ್ಯಾಚಾರಕ್ಕೊಳಗಾಗಿ ದೈಹಿಕ-ಮಾನಸಿಕವಾಗಿ ಜರ್ಜರಿತಳಾದ ಹುಡುಗಿಯಲ್ಲಿ ೫೦ಲಕ್ಷ ರೂ.ಬೇಡಿಕೆಯಿಟ್ಟು, ಅದನ್ನು ತರಲು ಧೈರ್ಯದಿಂದ ಆಕೆಯನ್ನು ಬಿಟ್ಟಿದ್ದಾರೆ ಎನ್ನುವಾಗ ಮುಸಲ್ಮಾನರಿಗೆ ಪೂರಕವಾಗಿರುವ ಸರಕಾರವೆನ್ನುವ ಅಂಶ ತಿಳಿಯುವುದಿಲ್ಲವೇ? ಕೆಲವು ಮತಾಂಧ ಮುಸಲ್ಮಾನರ ಪರವಾಗಿದ್ದು ಅವರು ಮಾಡಿದ್ದೆಲ್ಲವೂ ಸರಿಯೆನ್ನುವ ಲಜ್ಜೆಗೇಡಿತನದ ಸರಕಾರದಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಎನ್ನುವ ಅನುಮಾನ ಕಾಡುತ್ತದೆ.
ಕಳೆದ ಏಳೆಂಟು ವರ್ಷಗಳಲ್ಲಿ ಕರಾವಳಿಯಲ್ಲಿ ೩೦೦೦ಕ್ಕೂ ಅಧಿಕ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ ಎನ್ನುವುದನ್ನು ದಾಖಲೆ ತಿಳಿಸುತ್ತದೆ. ಕಲ್ಪನೆಗೂ ಮೀರಿದ, ಊಹೆಗೂ ನಿಲುಕದಷ್ಟು ಎತ್ತರವಾದ ಭಯೋತ್ಪಾದನಾ ಕೃತ್ಯಗಳಿಲ್ಲಿ ವರದಿಯಾಗಿವೆ. ಆದರೆ ತಾಲಿಬಾನ್‌ನಲ್ಲಿ ನಡೆಯುವ ಘಟನೆಗಿಂತಲೂ ಕೀಳುಮಟ್ಟದ ಮೃಗೀಯ ವರ್ತನೆಯ ಅತ್ಯಾಚಾರವನ್ನು ಪೊಲೀಸರು ಮುಚ್ಚಿಡಲು ಪ್ರಯತ್ನಿಸುತ್ತಿರುವುದಾದರೂ ಯಾಕೆ? ಆರೋಪಿಗಳನ್ನು ಹಿಡಿದು ಹೆಸರು ಪ್ರಕಟ ಪಡಿಸದೆ, ಮಾಧ್ಯಮಕ್ಕೆ ತಿಳಿಯಿತು ಎನ್ನುವ ನೆಲೆಯಲ್ಲಿ ಹೆಸರನ್ನು ಪ್ರಕಟ ಪಡಿಸಿದ ಹಿಂದಿರುವ ದುರುದ್ದೇಶವಾದರೂ ಎಂತದ್ದು? ಎನ್ನುವ ಪ್ರಶ್ನೆಗಳು ಸಹಜ. ಆದರೆ ಸರಕಾರ-ಪೊಲೀಸ್ ಇಲಾಖೆಯ ಗೌಪ್ಯ ನಡೆಯಿಂದ ಹಿಂದೂ ಸಮಾಜ ಬಹುದಿನಗಳಿಂದ ಮತಾಂತರ, ಲವ್‌ಜಿಹಾದ್, ಹೆಣ್ಣು ಮಕ್ಕಳ ರಕ್ಷಣೆ, ಗೋರಕ್ಷಣೆಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದರೂ ಪ್ರಸ್ತುತ ಆತಂಕವನ್ನೆದುರಿಸುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ತಾನು ಹಿಂದು ವಿರೋಧಿ ಎನ್ನುವ ನೆಲೆಯಲ್ಲಿ ಹಲವಾರು ಯೋಜನೆ ಜಾರಿಗೆ ತಂದಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಮೂಢ ನಂಬಿಕೆ ಹೆಸರಿನಲ್ಲಿ ಹಿಂದೂ ಧಾರ್ಮಿಕ ಶ್ರದ್ಧ್ಧೆಗೆ ಕೊಡಲಿಯೇಟು ನೀಡಿದ್ದು, ರಾಜ್ಯದಲ್ಲಿ ೮ ವರ್ಷದ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಕರೆದು ಮಾನ-ಸಮ್ಮಾನ, ವೇದಿಕೆಗಳನ್ನು ನೀಡಿದ `ಬೆನ್ನಿಹಿನ್' ಗೆ ಪುನಃ ಸ್ವಾಗತ ಬಯಸಿದ್ದು ಇದಕ್ಕೆಲ್ಲಾ ಪೂರಕವೆಂಬಂತಿದೆ. ಅಲ್ಪಸಂಖ್ಯಾತರಿಗೆ ಶಾದಿಭಾಗ್ಯ, ಅವರಿಗೆ ವಿಶೇಷ ಕೋರ್ಟ್ ರಚನೆ ಮಾಡಬೇಕು ಎನ್ನುವ ಕುತ್ಸಿತ ಮನಸ್ಸು ರಾಜ್ಯಸರಕಾರದ್ದಾಗಿದೆ. ಈ ಓಲೈಕೆಯ ರಾಜಕಾರಣ, ಸಾಮಾಜಿಕ ನ್ಯಾಯ-ಸಮಾನತೆಯ ಕುರಿತು ಮಾತನಾಡುವ ಸಿಎಂ ವಿರುದ್ದ ಸಮಾಜದಲ್ಲಿ ಗಣ್ಯರೆಂದು ಬಿಂಬಿಸಿಕೊಂಡ ಸೋ-ಕಾಲ್ಡ್ ಬುದ್ಧಿಜೀವಿಗಳು ಸಾರ್ವಜನಿಕ ಹೇಳಿಕೆಗೆ ಸಿದ್ದರಿಲ್ಲದಿರುವುದು ಸಿದ್ಧರಾಮಯ್ಯನ ಮೋಡಿಯೋ? ಅಥವಾ ಕಾಯಾ-ವಾಚಾ-ಮನಸ್ಸಿನಿಂದ ತಮ್ಮ ಸರಕಾರ ನಡೆಸಲು ಅಲ್ಪಸಂಖ್ಯಾತರು ಅನಿವಾರ್ಯ ಎನ್ನುವ ಕೀಳು ಧೋರಣೆಯೇ? ಇದರಿಂದ ಹೈರಾಣಾಗುತ್ತಿರುವುದು ಮಾತ್ರ ಹಿಂದೂ ಸಮಾಜ.
ದೇರಳಕಟ್ಟೆ ಪ್ರಕರಣದ ವಿವರ:
ಡಿ.೧೮ ರಂದು ರಾತ್ರಿ ೧೧ ಗಂಟೆಗೆ ಮಂಗಳೂರು ತಾಲೂಕಿನ ದೇರಳಕಟ್ಟೆ ಶ್ರೀಅಯ್ಯಪ್ಪ ಭಜನಾ ಮಂದಿರದ ಬಳಿ ಕಾರಿನಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಸ್ನೇಹಿತ ಡಾಕ್ಟರ್ ಊಟಕ್ಕೆಂದು ತೆರಳಿದ್ದರು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಎಂಟು ಮಂದಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಗೈದು ವಿದ್ಯಾರ್ಥಿಯ ಕಾರನ್ನು ವಶಕ್ಕೆ ತೆಗೆದುಕೊಂಡು, ಅವರಿಬ್ಬರನ್ನೂ ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಕಣ್ಣಿಗೆ ಬಟ್ಟೆ ಕಟ್ಟಿ, ಯಾವುದೋ ಒಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ವಾಸವಿಲ್ಲದ ಮನೆಯೊಂದರಲ್ಲಿ ಅಕ್ರಮವಾಗಿ ಬಂಧಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒತ್ತಾಯಿಸಿ, ಇದಕ್ಕೆ ವಿದ್ಯಾರ್ಥಿಗಳು ಒಪ್ಪದಿzಗ ಆರೋಪಿಗಳು ಅವರಿಗೆ ಹ ಮಾಡಿ ಜೀವ ಬೆದರಿಕೆ ಒಡ್ಡಿ ಬಲತ್ಕಾರದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡು, ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿದ್ದರು. ಆರೋಪಿಗಳು ಅವರಲ್ಲಿ ರೂ.೫೦ಲಕ್ಷ ಕೊಡಲು ಒತ್ತಾಯಿಸಿದ್ದು, ಇಲ್ಲವಾದಲ್ಲಿ ದೃಶ್ಯವನ್ನು ಅಂತಜಲ, ಸಾಮಾಜಿಕ ತಾಣ, ತಂದೆ ತಾಯಿ ಮತ್ತು ಕಾಲೇಜಿನ ಪ್ರಿನ್ಸಿಪಾಲ್‌ಗೆ ತಿಳಿಸಿ ಮರ್ಯಾದೆ ಹರಾಜು ಮಾಡುವುದಾಗಿ ಬೆದರಿಕೆ ಒಡ್ಡಿ ಅಮಾನವೀಯವಾಗಿ ವರ್ತಿಸಿದ್ದರು. ಆರೋಪಿಗಳ ಒತ್ತಡಕ್ಕೆ ಭಯಗೊಂಡ ವಿದ್ಯಾರ್ಥಿಗಳು ಮೂರು ಲಕ್ಷ ರೂ. ನೀಡಲು ಒಪ್ಪಿದ್ದರಿಂದ ಆರೋಪಿಗಳು ಅವರನ್ನು ಬೇರೆ ನಿರ್ಜನ ಗುಹೆ ಮಾದರಿಯ ಒಳ ಪ್ರದೇಶಕ್ಕೆ ಕರೆದೊಯ್ದು ಅಕ್ರಮವಾಗಿ ಬಂಧಿಸಿಟ್ಟಿದ್ದರು. ಡಿ.೨೦ರಂದು ಬೆಳಗ್ಗೆ ತೊಕ್ಕೊಟ್ಟು ಬಳಿ ವಿದ್ಯಾರ್ಥಿನಿಯನ್ನು ಬಿಟ್ಟು ಮಧ್ಯಾಹ್ನ ೧೨ ಗಂಟೆಯ ಒಳಗೆ ೩ ಲಕ್ಷ ರೂ. ಹಣ ತಂದು ಕೊಡದಿದ್ದರೆ ಗೆಳೆಯನನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಹೆದರಿದ ಹುಡುಗಿ ಹಣ ತರಲೆಂದು ಮನೆಗೆ ಬಂದಿದ್ದು, ಅಲ್ಲಿಂದ ಪರಿಚಯದ ವಕೀಲರೊಬ್ಬರನ್ನು ಸಂಪರ್ಕಿಸಿದ್ದಳು. ವಕೀಲರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಕಿಡ್ನಾಪ್ ಆದ ಹುಡುಗನ ಮೊಬೈಲ್‌ಗೆ ಕರೆ ಮಾಡಿ ಹಣ ನೀಡಲು ಎಲ್ಲಿಗೆ ಬರಬೇಕು ಎಂಬುದನ್ನು ಕೇಳಿ ಕಾರ್ಯಾಚರಣೆ ನಡೆಸಿದರು. ಆದರೆ ವಿದ್ಯಾರ್ಥಿನಿಯ ಗೆಳೆಯ ಎರಡು ಮಕ್ಕಳ ತಂದೆಯಾಗಿದ್ದು, ಆತನೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನುವುದಕ್ಕೆ ಪೂರಕವಾಗಿ ಆತ ದೂರು ದಾಖಲಿಸದಿರುವ ಕುರಿತು ಅನುಮಾನಗಳು ಹುಟ್ಟುತ್ತಿವೆ. ಒಟ್ಟಾರೆಯಾಗಿ ಗಮನಿಸಿದಾಗ ಇದೊಂದು ಪೂರ್ವ ನಿಯೋಜಿತ ಕೃತ್ಯವೆನ್ನುವುದು ಸ್ಪಷ್ಟ.
ಕಾಟಿಪಳ್ಳದ ಶಂಸುದ್ದೀನ್ ವೃತ್ತದ ಬಳಿ ಆರೋಪಿಯೊಬ್ಬನ ಮನೆಗೆ ದಾಳಿ ನಡೆಸಿ ಅಲ್ಲಿದ್ದ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದರು. ನಾಟೆಕಲ್ ಮಂಜನಾಡಿ ಮಂಗಳ ನಗರದ ನಿಸಾರ್ ಅಹಮದ್(೧೮) ಸುರತ್ಕಲ್ ಮುಕ್ಕಾ ಜುಮಾ ಮಸೀದಿ ಬಳಿಯ ನಿವಾಸಿ ಇಮ್ರಾನ್ ಅಲ್ತಾಫ್(೨೩), ನಾಟೆಕಲ್ ಸಹಾ ರೆಸಿಡೆನ್ಸಿಯ ಅರಾಫತ್(೧೮), ಕಾಟಿಪಳ್ಳ ಈದ್ಗಾದ ಸೆಕೆಂಡ್ ಬ್ಲಾಕ್ ನಿವಾಸಿ ಸಮೀರ್(೨೪), ಕೈರಂಗಳ ಫೌಜಿಯಾ ಕಂಪೌಂಡಿನ ನವಾಝ್(೨೧), ದೇರಳಕಟ್ಟೆ ಗ್ರೀನ್ ಗ್ರೌಂಡ್ ರೆಸಿಡೆನ್ಸಿಯ ಇಕ್ಬಾಲ್ ಆರಿಫ್(೨೧), ದೇರಳಕಟ್ಟೆ ಬೆಳ್ಮ ಕಾಣಕೆರೆಯ ಅಬ್ದುಲ್ ರವೂಫ್(೨೨) ಕೊಪ್ಪಳ ಹಳೆಯಂಗಡಿಯ ಹುಸೈನ್ ಯಾನೆ ಸಫ್ವಾನ್(೨೧) ಬಂಧಿತ ಆರೋಪಿಗಳು. ಇವರೆಲ್ಲಾ ಪೊಲೀಸರು ಬಂಧಿಸಲು ಬಂದಾಗ ಮಾರಾಕಾಸ್ತ್ರಗಳಿಂದ ಧಾಳಿ ಮಾಡಿದ್ದು ಮಾತ್ರವಲ್ಲದೇ, ಉದ್ದಟತನದಿಂದ ಮಾತನಾಡಿದ್ದರು.
ಇವರಿಗೆ ರಾಜ್ಯದಲ್ಲಿರುವುದು ತಮ್ಮದೇ ಸರಕಾರವೆನ್ನುವ ಗಾಢ ಗರ್ವ ಹೆಚ್ಚಿದಂತಿದೆ ಎನ್ನುವುದು ಜನಸಾಮಾನ್ಯರ ಅಂಬೋಣ. ಆರೋಪಿಗಳ ಮಾತಿನಲ್ಲಿ ಕಾನೂನು ಪಾಲಕರು ಪೊಲೀಸರು ಆರೋಪಿಗಳನ್ನು ಬಂಧಿಸದೆ ರಕ್ಷಣೆ ಮಾಡಬೇಕು ಎನ್ನುವ ಸಂದೇಶ ಸಮಾಜಕ್ಕೆ ನೀಡಿದಂತಿಲ್ಲವೇ? ನಿಷ್ಠಾವಂತ ಪೊಲೀಸ್ ಅಧಿಕಾರಿಯೊರ್ವ ತನ್ನ ಸ್ವಾಭಿಮಾನ, ಹೆಣ್ಣಿನ ಮಾನ, ದೇಶ ರಕ್ಷಣೆ, ಆತ್ಮರಕ್ಷಣೆಗಾಗಿ ನೀಚ ಕೃತ್ಯವನ್ನೆಸಗಿದ ಆರೋಪಿಗಳನ್ನು ಗುಂಡಿಟ್ಟು ಕೊಲ್ಲುವಂತ ಪರಿಸ್ಥಿತಿಯಿದ್ದರೂ, ನಿಯಂತ್ರಿಸಿಕೊಂಡು ಅವರನ್ನು ರಕ್ಷಣೆ ಮಾಡುತ್ತಾರೆ ಎಂದಾಗ ಇವರ ಮೇಲೆ ಸರಕಾರದ ಒತ್ತಡ ಯಾವ ರೀತಿಯಾಗಿದೆ ಎನ್ನುವುದು ತಿಳಿಯುತ್ತದೆ. ಆಂದ್ರದ ಜನಪ್ರತಿನಿಧಿ ಓವೈಸಿ ಎನ್ನುವ ಮತಾಂಧ ಮುಸಲ್ಮಾನನೊರ್ವ ``ದೇಶದಲ್ಲಿರುವ ಪೊಲೀಸರು, ಸೈನಿಕರೆಲ್ಲಾ ನಪುಂಸಕರು. ೧೫ ನಿಮಿಷ ಕಾಲಾವಕಾಶ ಕೊಟ್ಟರೆ ೧೦೦ಕೋಟಿ ಹಿಂದುಗಳನ್ನು ನೋಡಿಕೊಳ್ಳುತ್ತೇವೆ" ಎಂದು ಹೇಳಿ ವಾರ ಕಳೆದು ಬಂಧಿಸಿದ ಅಲ್ಲಿನ ಕಾಂಗ್ರೆಸ್ ಸರಕಾರವು ಮುಸ್ಲಿಂರ ಕುರಿತು ಒಲವನ್ನು ಸೂಚಿಸುತ್ತದೆ. ಅದೇ ರೀತಿ ದೇರಳ ಕಟ್ಟೆಯ ಪ್ರಕರಣದಲ್ಲಿಯೂ ಆಮೆಗತಿಯ ತನಿಖೆಯಿಂದ ಸರಕಾರ ಇವರಿಗಾಗಿಯೇ ಕಾರ್ಯತತ್ಪರವಾಗಿದೆ ಎನ್ನುವ ಸತ್ಯ ಅನಕ್ಷರಸ್ತನಿಗೂ ತಿಳಿಯುತ್ತದೆ. ಜಾತ್ಯಾತೀತ ಪ್ರಜಾಪ್ರಭುತ್ವದೇಶದಲ್ಲಿ ಬಹುಸಂಖ್ಯಾತ ಹಿಂದುಗಳಿಗೆ ಅನ್ಯಾಯವಾಗುತ್ತಿದ್ದರೂ, ಕಣ್ಣಿದ್ದು ಕುರುಡರಾಗಿ, ಬಾಯಿದ್ದು ಮೂಕರಾಗಿ, ಧೈರ್ಯವಿದ್ದು ಹೋರಾಟ ಮಾಡದಿರುವಂತ ಪರಿಸ್ಥಿತಿಗೆ ದೇಶದ ಕಾನೂನು ರೂಪುಗೊಳಿಸುವ ಹುನ್ನಾರವಾಗುತ್ತಿದೆ.
ದೇರಳಕಟ್ಟೆ ಪ್ರಕರಣದಲ್ಲಿ ಸಂತ್ರಸ್ತೆ ಮುಸಲ್ಮಾನ ಹುಡುಗಿಯಾಗಿ, ಆರೋಪಿಗಳು ಹಿಂದುಗಳಾಗಿದ್ದರೆ ಪರಿಸ್ಥಿತಿ ಹೇಗಿರುತಿತ್ತು ಎಂದು ಊಹಿಸಲು ಸಾಧ್ಯವೇ? ಮಣಿಪಾಲದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಮಾರ್ನಿಂಗ್ ಮಿಸ್ಟ್ ಹೋಮ್‌ಸ್ಟೇ ಪ್ರಕರಣ, ಪಬ್ ದಾಳಿ, ದೆಹಲಿಯ ನಿರ್ಭಯಾ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿರುವುದು ಹಿಂದು ಯುವಕರು. ಹಿಂದುಗಳು ಗಟ್ಟಿಯಾಗಿ ಕೆಮ್ಮಿದರೂ, ದೊಡ್ಡ ಪ್ರಮಾದವಾಯಿತು ಎನ್ನುವಂತೆ ಗುಲ್ಲೆಬ್ಬಿಸುವ ತಥಾಕಥಿತ ಕಮ್ಯೂನಿಸ್ಟ್‌ರು, ವಿಚಾರವಾದಿಗಳು, ಎಡಪಂಥಿಯ ಮಾಧ್ಯಮಗಳು ದೇರಳ ಕಟ್ಟೆ ಪ್ರಕರಣದಲ್ಲಿ ಇವರ ಸೊಲ್ಲಿಲ್ಲ. ವಿಟ್ಲದ ಸಂಜೆ ಪತ್ರಿಕೆ ವರದಿಗಾರನ ಮೇಲೆ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಹಲ್ಲೆ ಮಾಡಿದಾಗ ವಿ.ಟಿ.ಪ್ರಸಾದ ಹಿಂದುವಾದರೂ, ಎಡಪಂಥಿಯ ಎನ್ನುವ ನೆಲೆಯಲ್ಲಿ ರಕ್ಷಣೆಗೆ ಬಂದಿದ್ದವರೂ ಈಗ ಮೌನವೃತ ತಾಳಿದ್ದಾರೆ. ಹೋಮ್‌ಸ್ಟೇ ದಾಳಿಯಲ್ಲಿ ವ್ಯವಸ್ಥಿತ ಪಿತೂರಿ ನಡೆಸಿ ಅದನ್ನು ಚಿತ್ರಿಕರಿಸಿ, ಮಾಧ್ಯಮ ಕಾನೂನನ್ನು ಮೀರಿ ಟಿಆರ್‌ಪಿ ಹೆಚ್ಚಳಕ್ಕೆ ದೃಶ್ಯ ವೈಭವೀಕರಿಸಿ ಬಿತ್ತರಿಸಿದ ಎಡಪಂಥೀಯ ನವೀನ್ ಸೂರಿಂಜೆ, ದಾಳಿ ನಡೆಸಿದ ಹಿಂದು ಯುವಕರನ್ನು ನಮ್ಮ ಕೈಗೆ ಕೊಡಿ ಎಂದು ಬೊಬ್ಬಿಟ್ಟ ಮಹಿಳಾ ಸಂಘಟನೆ, ಕೆಲವು ವಿದ್ಯಾಸಂಸ್ಥೆಗಳು ದೇರಳಕಟ್ಟೆಯ ವಿಷಯದಲ್ಲಿ ಮೌನಮುದ್ರೆ ತಾಳಿದ್ದಾದರೂ ಯಾಕೆ? ಭವಿಷ್ಯದಲ್ಲಿ ಕೆಟ್ಟದ್ದು ಉಂಟೆಂದು ಯೋಚಿಸಲು ಆಗದ ಘಟನೆ ನಡೆಸಿದ ಆರೋಪಿಗಳೆಲ್ಲಾ ಮತಾಂಧ ಮುಸ್ಲಿಂರಾಗಿದ್ದರಿಂದ ಇವರ ವಿರುದ್ದ ಮಾತನಾಡಿದರೆ ಜೀವಕ್ಕೆ ಅಪಾಯವಿದೆ ಎನ್ನುವ ಹೆದರಿಕೆ ಹುಟ್ಟಿರಬಹುದೆ? ಅಥವಾ ಸ್ವಾಭಿಮಾನಕ್ಕೆ ಕಿಚ್ಚು ಹಚ್ಚಿ, ಹಿಂದುಗಳ ತಪ್ಪಿದ್ದಾಗ ಮಾತ್ರ ಹೋರಾಟವೆನ್ನುವ ಮಿಷನರಿ, ಜಿಹಾದ್‌ಗಳ ತಂತ್ರವೇ? ಘಟನೆಯ ತುಲನೆ ಮಾಡಿದಾಗ ಆರೋಪಿಗಳು ಹಿಂದುಗಳಾದರೆ ಮಾತ್ರ ಈ ಹೋರಾಟ, ಮಾಧ್ಯಮಗಳ ವೈಭವಿಕರಣವೆನ್ನುವ ಸತ್ಯವನ್ನು ಹಿಂದುಗಳು ಅರಿಯಬೇಕಿದೆ. ಎಡಪಂಥಿಯರ ಹೋರಾಟದ ಗುಲ್ಲಿನ ನಡುವೆ ಹಿಂದುಗಳ ಶಕ್ತಿಯನ್ನು ಕ್ಷೀಣಿಸುವ ಪರಿ, ಮತಾಂಧ ಅಲ್ಪಸಂಖ್ಯಾತರು ಮಾಡಿದ ತಪ್ಪನ್ನು ಸರಿಯೆನ್ನುವುದಾಗಿ ಬಿಂಬಿಸುತ್ತಿರುವ ಮಾಧ್ಯಮಗಳು ಆರೋಪಿ ಹಿಂದುವಾದರೆ ಮಾತ್ರ ಎಡಪಂಥಿಯರು, ವಿಚಾರವಾದಿಗಳ ರಾಕ್ಷಸೀಗುಣ ಪ್ರವೃತ್ತಗೊಳ್ಳುತ್ತದೆ. ಕಾರಣ ಆರೋಪಿ ಸ್ಥಾನದಲ್ಲಿರುವುದು ಹಿಂದುಗಳು!
ಆರೋಪಿಗಳು ಹಿಂದುಗಳಾಗಿದ್ದರೆ ಕಮ್ಯೂನಿಷ್ಟ್‌ಗಳು, ವಿಚಾರವಾದಿಗಳು ಹಾಗೂ ಸಮಾಜದಲ್ಲಿ ಸಭ್ಯರೆನಿಸಿದವರೂ ದೃಶ್ಯ ಮಾಧ್ಯಮದೊಂದಿಗೆ ದೊಡ್ಡ ಸ್ವರದೊಂದಿಗೆ ಹೇಳಿಕೆ ನೀಡುತ್ತಾರೆ. ಆದರೆ ದೇರಳ ಕಟ್ಟೆ ಪ್ರಕರಣದ ನಂತರ ಅವರ ಸ್ವರ ಯಾಕಿಲ್ಲ? ಈಗ  ಆ ಸಭ್ಯರೆಲ್ಲಿ? ಮಾಧ್ಯಮದವರೆಲ್ಲಿ? ಹಿಂದು ಆರೋಪಿ ಕೋಪದ ಭರದಲ್ಲಿ ತಪ್ಪು ಮಾಡಿ, ಅಪರಾಧಿ ಪ್ರಜ್ಞೆ ಕಾಡಿ ಪಶ್ಚಾತ್ತಾಪ ಪಡುತ್ತಿರುವಾಗಲೇ, ಸಭ್ಯತೆಯ ಸೋಗಿನಲ್ಲಿರುವ ನಾಯಕರು ನಾಲಗೆಯನ್ನು ಚಪ್ಪಲಿಯಂತೆ ಬಳಸುತ್ತಿದ್ದಾರೆ. ಈ ಎಲ್ಲಾ ಕಾರಣಗಳೆ ಮುಸಲ್ಮಾನರನ್ನು ಪ್ರಚೋದಿಸುತ್ತಿವೆ. ತಾವು ಏನು ಮಾಡಿದರೂ ನಡೆಯುತ್ತದೆ ಎನ್ನುವ ನೆಲೆಯಲ್ಲಿ ದೇಶ-ವಿರೋಧಿಗಳನ್ನು ಮೆಚ್ಚಿಸುವ ಕೆಲಸಕ್ಕೆ ಕೈಹಾಕಿರುವುದಂತು ಸ್ಪಷ್ಟ.
ಇದುವರೆಗೆ ಯಾವುದೇ ಮುಸಲ್ಮಾನ ಮುಖಂಡ ಹಿಂದು ಸಂತ್ರಸ್ತೆಯ ಕುರಿತು ಮಾತನಾಡಿಲ್ಲ. ಮುಸ್ಲಿಂ ಆರೋಪಿಗಳ ವಿರುದ್ದವೂ ಮಾತನಾಡಿಲ್ಲ. ಇವರನ್ನು ಹಿಂದು ಸಮಾಜ ನಂಬುವುದು ಹೇಗೆ? ಮಲ್ಲೂರಿನ ಮರಣದ ಮನೆಯಲ್ಲಿ ದುಃಖತಪ್ತರಾಗಿದ್ದ ವೇಳೆ ಹೋಗಿ ಗಲಾಟೆ ಮಾಡಿ, ರಕ್ತಕ್ರಾಂತಿಗೆ ಕಾರಣವಾಗುವ ಮತಾಂಧರು ಮಾನವೀಯತೆ ಇಲ್ಲದಂತೆ ವರ್ತಿಸುತ್ತಾರೆ. ಶೇ.೮೦ರಷ್ಟು ಮುಸ್ಲಿಂರು ನಮ್ಮ ಅಕ್ಕ-ತಂಗಿಯನ್ನು ಕಾಮದ ವಸ್ತುವಾಗಿಯೇ ನೋಡುವ ಪರಿಸ್ಥಿತಿ ಕಣ್ಣಮುಂದಿದೆ. ಇಂತಹ ಮಾನಸಿಕತೆಯನ್ನು ಒಪ್ಪಿಕೊಳ್ಳುವ ಸರಕಾರದಿಂದ ದೇಶದ ಪರಿಸ್ಥಿತಿ ಬಿಗಡಾಯಿಸುತ್ತದೆ.
ಅಪರಾಧಿಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸದೆ, ಸಾಮಾನ್ಯ ನ್ಯಾಯ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಹಿಂದುಗಳು ತಪ್ಪು ಮಾಡದಿದ್ದರೂ ಅದು ಘೋರ ತಪ್ಪು. ನೀಚ ಕೆಲಸವನ್ನು ಮಾಡುವ ಮುಸಲ್ಮಾನ ಏನು ಮಾಡಿದರೂ ತಪ್ಪಲ್ಲವೆನ್ನುವ ಇಬ್ಬಗೆಯ ನೀತಿಯಿಂದ ಮುಕ್ತಿ ಸಿಗಬೇಕು. ಹಿಂದು ಆರೋಪಿಗಳ ವಿರುದ್ದ ಮಾತನಾಡುವ ಸಭ್ಯರು ಮುಸಲ್ಮಾನ ಆರೋಪಿಗಳ ವಿರುದ್ಧ ಸ್ವರ ಎತ್ತದಿದ್ದಲ್ಲಿ ನಮ್ಮ ದೇಶವನ್ನು ಇನ್ನೊಂದು ಮತಾಂಧ ರಾಷ್ಟ್ರವನ್ನಾಗಿ ಮಾಡಲು ಎಡೆಮಾಡಿದಂತಾಗುತ್ತದೆ. ಹಿಂದು ಸಮಾಜದ ರಕ್ಷಣೆಗಾಗಿ ರಾಜಕೀಯ ರಹಿತವಾಗಿ ದೇಶದ ಜನತೆ ಮುಂದುವರಿಯಬೇಕಾದ ಅವಶ್ಯಕತೆಯಿದೆ. ಇಲ್ಲದಿದ್ದರೆ ಮುಂದೊಂದು ದಿನ ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಹಿಂದೂಗಳೇ ಈ ಕುರಿತು ಎಚ್ಚರ ಅಗತ್ಯವಲ್ಲವೇ..ಏನಂತಿರಾ.



ನಾಗನ ದೋಷಗಳಿಗೆ ಕುಡುಪು ದೇವಳದಲ್ಲಿಯೂ ಪರಿಹಾರ ಸಾಧ್ಯ..ಸುಬ್ರಹ್ಮಣ್ಯದಷ್ಟೆ ಪ್ರಖ್ಯಾತಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಪವಿತ್ರ ಯಾತ್ರಾ ಸ್ಥಳಗಳಿದ್ದು, ಅಂತಹ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಶ್ರೀ ಕ್ಷೇತ್ರ ಕುಡುಪು ಕೂಡ ಒಂದಾಗಿದ್ದು ಬಹಳ ಪ್ರಾಮುಖ್ಯತೆ ಪಡೆದಿದೆ. ಜಿಲ್ಲೆಯಲ್ಲಿನ ಪ್ರಮುಖ ನಾಗ ದೇವರ ದೇವಸ್ಥಾನಗಳಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನ ಶ್ರೀ ಕ್ಷೇತ್ರ ಕುಡುಪುವಿಗೆ ಸಲ್ಲುತ್ತದೆ. ನಾಗದೇವರ ಶ್ರೀಕ್ಷೇತ್ರದಲ್ಲಿ ಸಕಲ ಶಾಪಗಳಿಗೂ ಪರಿಹಾರವಿದ್ದು ನಿತ್ಯವು ನೂರಾರು ಜನರು ದೇವರ ಸೇವೆಯನ್ನು ಪಡೆದು ಕೃತಾರ್ಥರಾಗುತ್ತಾರೆ.
ಕ್ಷೇತ್ರದ ಇತಿಹಾಸ:
ಶ್ರೀ ಕ್ಷೇತ್ರ ಕುಡುಪು ದೇವಸ್ಥಾನವು ಸುಮಾರು ೨,೦೦೦ ವರ್ಷಗಳಿಗಿಂತಲೂ ಹಿಂದಿನ ಇತಿಹಾಸ ಹೊಂದಿದೆ. `ಕುಡುಪು' ಎಂದರೆ ತುಳು ಭಾಷೆಯಲ್ಲಿ ಅನ್ನ ಬಸಿಯುವ ಸಲಕರಣೆಯೆಂದರ್ಥ. ಶತ-ಶತಮಾನಗಳ ಹಿಂದೆ ಈಗಿನ ಕುಡುಪು ಮತ್ತು ಸುತ್ತಮುತ್ತಲಿನ ಪ್ರದೇಶವು ಕದಲೀವನ ಎನ್ನುವ ಅರಣ್ಯ ಪ್ರದೇಶವಾಗಿತ್ತು. ಈ ಅರಣ್ಯದ ಮಧ್ಯಭಾಗದಲ್ಲಿ ಈಗಿನ ಕುಡುಪು ಕ್ಷೇತ್ರದಲ್ಲಿರುವ 'ಭದ್ರಾ ಸರಸ್ವತಿ' ಸರೋವರವಿತ್ತು. ಈ ಸರೋವರದಲ್ಲಿ ದೇವಾದಿ-ದೇವತೆಗಳು, ಋಷಿ ಮುನಿಗಳು ಸ್ನಾನ ಮಾಡುತ್ತಿದ್ದರು ಎನ್ನುವ ಉಲ್ಲೇಖವಿದೆ.
ಸರೋವರದ ಸಮೀಪದ ಊರಿನಲ್ಲಿ ಸುಮಂತು ಹೆಸರಿನ ಬ್ರಾಹ್ಮಣ ತನ್ನ ಮಗ ಕೇದಾರನೊಂದಿಗೆ ವಾಸವಾಗಿದ್ದ. ಕೇದಾರನು ವಿವಾಹವಾಗಿ ವರ್ಷಗಳು ಸಂದರೂ, ಮಕ್ಕಳಾಗದೇ ಕೊರಗುತ್ತಿದ್ದನು. ಒಂದು ದಿನ ಮಕ್ಕಳಾಗದ ಚಿಂತೆಯಲ್ಲಿ ಸಾಗುತ್ತಾ ಭದ್ರಾ ಸರಸ್ವತಿ ಸರೋವರದ ಪಕ್ಕ ಬಂದಾಗ ಧ್ಯಾನದಲ್ಲಿ ನಿರತರಾಗಿರುವ ಋಷಿಶೃಂಗರನ್ನು ಕಾಣುತ್ತಾನೆ. ಶೃಂಗ ಮುನಿಯಲ್ಲಿ ತನ್ನ ಸಮಸ್ಯೆಯನ್ನು ಕೇದಾರ ತಿಳಿಸಿದಾಗ, ಭದ್ರಾ ಸರಸ್ವತಿ ತೀರ್ಥ ಸರೋವರದಲ್ಲಿ ನಿತ್ಯವೂ ಸ್ನಾನ ಮಾಡಿ ಸುಬ್ರಹ್ಮಣ್ಯನ್ನು ಭಜಿಸಿದರೆ ಸುಬ್ರಹ್ಮಣ್ಯ ಪ್ರತ್ಯಕ್ಷನಾಗಿ ಅನುಗ್ರಹ ನೀಡುವನು ಎನ್ನುವ ಪರಿಹಾರ ಸೂಚಿಸಿದರು.
ತಪಸ್ಸು ಆಚರಿಸಿ ದಿನಗಳು ಕಳೆದರೂ ಸುಬ್ರಹ್ಮಣ್ಯ ದೇವರು ಪ್ರತ್ಯಕ್ಷರಾಗದಿದ್ದಾಗ ಕೇದಾರನು ತನ್ನ ತಪಸ್ಸನ್ನು ಮತ್ತಷ್ಟು ಕಠಿಣಗೊಳಿಸಿದ್ದನು. ಕೊನೆಯಲ್ಲಿ ಕೇದಾರನಿಗೆ ಒಲಿದ ಸುಬ್ರಹ್ಮಣ್ಯ ಸ್ವಾಮಿ ಮಕ್ಕಳಾಗುವಂತೆ ವರ ನೀಡುತ್ತಾನಂತೆ. ಕೇದಾರನು ವರ ಪಡೆದು ವರ್ಷವಾಗಲು ಆತನ ಮಡದಿ ಗರ್ಭವತಿಯಾಗಿ ಮಗುವಿನ ಬದಲು ಮೂರು ಹಾವಿನ ಮೊಟ್ಟೆಗಳಿನ್ನು ಹಡೆಯುವಳು. ಇದರಿಂದ ಕೇದಾರನು ಬೇಸರಗೊಳ್ಳಲು ಆಕಾಶದಲ್ಲಿ ಅಶರೀರವಾಣಿಯು ಕೇಳುತ್ತದೆ. ಹುಟ್ಟಿದ ಮೂರು ಹಾವಿನ ಮೊಟ್ಟೆಗಳು ಮಹಾಶೇಷ, ಮಹಾವಿಷ್ಣು ಮತ್ತು ಸುಬ್ರಹ್ಮಣ್ಯ ರೂಪವಾಗಿದ್ದು ಲೋಕ ಕಲ್ಯಾಣಕ್ಕಾಗಿ ಕೇದಾರನ ಮಡದಿ ಹೊಟ್ಟೆಯಲ್ಲಿ ಹುಟ್ಟಿದಾಗಿ ತಾನು ತಪಸ್ಸಚರಿಸಿದ ಭದ್ರಾ ಸರಸ್ವತಿ ಸರೋವರದಲ್ಲಿ ಮೊಟ್ಟೆಗಳನ್ನು ಗುಪ್ತವಾಗಿ ಪ್ರತಿಷ್ಠಾಪಿಸುವಂತೆ ತಿಳಿಸುತ್ತದೆ. ಅಲ್ಲದೆ ಅಲ್ಲಿ ಪದ್ಮನಾಭ ಸ್ವಾಮಿಯನ್ನು ಪೂಜಿಸುವಂತೆ ಹಾಗೂ ಅಲ್ಲಿ ಭಕ್ತಿಯಿಂದ ಪೂಜಿಸಿದವರಿಗೆ ಸಂತಾನ, ಶಾಪ ವಿಮೋಚನೆ ಲಭಿಸುವ ಬಗ್ಗೆ ತಿಳಿಸುತ್ತದೆ. ನಂತರ ಕೇದಾರನು ಮೂಟ್ಟೆಗಳನ್ನು ಕಾಡುಬಳ್ಳಿಗಳಿಂದ ಹೆಣೆದಿರುವ ತಟ್ಟೆಯಲ್ಲಿ (ಕುಡುಪುವಿನಲ್ಲಿ) ಕೊಂಡು ಹೋಗಿ ತಾನು ತಪಸ್ಸಾಚರಿಸಿದ ಸ್ಥಳದಲ್ಲಿ ಗುಪ್ತವಾಗಿ ಪ್ರತಿಷ್ಠಾಪಿಸುವನು. ಮುಂದೆ ಆ ಸ್ಥಳದಲ್ಲಿ ಹುತ್ತ ಬೆಳೆಯುವುದು, ಕೇದಾರ ಅನಂತಪದ್ಮನಾಭ ದೇವರನ್ನು ಪ್ರಾರ್ಥಿಸುತ್ತ ಮುಕ್ತಿ ಹೊಂದುವನು.
ಅದೇ ಸಮಯದಲ್ಲಿ ಶೂರಸೇನಾ ಎಂಬ ರಾಜ ಆಳ್ವಿಕೆ ಮಾಡುತ್ತಿದ್ದ. ಧರ್ಮದಲ್ಲಿ ನಿಷ್ಟೆ, ಶ್ರದ್ಧೆ ಹೊಂದಿದ ಶೂರಸೇನನಿಗೆ ವೀರಬಾಹು ಹೆಸರಿನ ಮಗನಿದ್ದ. ತಂದೆಯಂತೆ ದೈವ ಭಕ್ತನಾದ ವೀರಬಾಹು ಒಂದಿರುಳು ತನ್ನ ಹಾಸಿಗೆಯಲ್ಲಿ ಮಲಗಿರುವ ಪುತ್ರಿಯನ್ನು ಮಡದಿಯೆಂದು ಭಾವಿಸಿ ತಪ್ಪು ಕೆಲಸ ಮಾಡುತ್ತಾನೆ. ಕಡೆಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುತ್ತಾ ತನ್ನ ತಪ್ಪಿಗೆ ಪರಿಹಾರವನ್ನು ಅರಮನೆಯ ಬ್ರಾಹ್ಮಣರಲ್ಲಿ ಕೇಳುತ್ತಾನೆ. ಬ್ರಾಹ್ಮಣರು ಈ ಮೊದಲು ಇಂತಹ ಕೃತ್ಯ ಎಲ್ಲೂ ನಡೆದಿಲ್ಲ. ಈ ಘೋರ ಕೃತ್ಯ ಮಾಡಿದ ತಪ್ಪಿಗಾಗಿ ವೀರಬಾಹು ಬಾಹುಗಳನ್ನು ಕಡಿದು ಪ್ರಾಯಶ್ಚಿತ ಮಾಡಿಕೊಳ್ಳುವಂತೆ ಸೂಚಿಸುವರು. ಅಂತೆಯೇ ವೀರಬಾಹು ವಿಷ್ಣುವನ್ನು ಪ್ರಾರ್ಥಿಸುತ್ತ ತನ್ನ ಎರಡು ಬಾಹುಗಳನ್ನು ತುಂಡರಿಸುವನು. ಕಡಿದ ಬಾಹುಗಳ ಜಾಗದಲ್ಲಿ ಬಂಗಾರದ ಬಾಹುಗಳನ್ನು ತೊಟ್ಟುಕೊಳ್ಳುತ್ತಾ 'ಸ್ವರ್ಣಬಾಹು' ಎಂದು ಪ್ರಖ್ಯಾತನಾಗುತ್ತಾನೆ.
ಕೈಗಳಿಲ್ಲದ ಕೊರಗು ಸ್ವರ್ಣಬಾಹುವನ್ನು ಅತಿಯಾಗಿ ಕಾಡುತಿತ್ತು. ಒಂದಿನ ಪರಿವಾರ ಸಮೇತವಾಗಿ ವಿಹಾರಕ್ಕೆ ತೆರಳುವಾಗ ಭದ್ರಾ ಸರಸ್ವತಿ ತೀರ್ಥ ಸರೋವರವನ್ನು ಕಂಡು ಪುಳಕಿತನಾಗಿ, ಸ್ನಾನ ಮಾಡಿ ಅಲ್ಲಿ ವಿಷ್ಣುವನ್ನು ಕುರಿತು ಧ್ಯಾನ ಮಾಡುವನು. ಪ್ರತ್ಯಕ್ಷನಾದ ವಿಷ್ಣು ಲೋಕ ಕಲ್ಯಾಣಕ್ಕಾಗಿ ಮಹಾವಿಷ್ಣು, ಆದಿಶೇಷ ಮತ್ತು ಸುಬ್ರಹ್ಮಣ್ಯ ಗುಪ್ತವಾಗಿ ಇಲ್ಲಿ ನೆಲೆಸಿದ್ದು ಈ ಸ್ಥಳದಲ್ಲಿ ದೇವಾಲಯ ಕಟ್ಟುವಂತೆ ಹಾಗೂ ಮುಂಜಾನೆಯೊಳಗೆ ಗರ್ಭ ಗುಡಿಯನ್ನು ನಿರ್ಮಾಣ ಮಾಡಿದರೆ ಎಲ್ಲಾ ಪಾಪವು ಪರಿಹಾರವಾಗಿ ಬಾಹುಗಳು ಮತ್ತೆ ಬರುವುದಾಗಿ ತಿಳಿಸುವರು. ರಾಜನು ಕೂಡಲೇ ತನ್ನ ಪರಿವಾರ ಸಮೇತನಾಗಿ ಗರ್ಭಗುಡಿ ನಿರ್ಮಾಣದಲ್ಲಿ ತೊಡಗುವನು. ಆದೇ ಸಮಯದಲ್ಲಿ ರಾಜ ದೇವಸ್ಥಾನ ಕಟ್ಟುವ ವಿಚಾರ ತಿಳಿದ ಶತ್ರು ಕಡೆಯವನು ಮುಂಜಾನೆ ಮೂರು ಗಂಟೆಗೆ ಕೋಳಿಯಂತೆ ಕೂಗಿ ದೇವಸ್ಥಾನ ನಿರ್ಮಾಣಕ್ಕೆ ಆಡಚಣೆ ಮಾಡಲು ನೋಡುವನು. ಇದರಿಂದ ವಿಚಲಿತರಾಗದ ರಾಜನ ಪರಿವಾರವು ನಿರ್ಮಾಣ ಕಾರ್ಯವನ್ನು ಬಿರುಸಿನಿಂದ ಮಾಡುವರು. ಮುಂಜಾನೆ ಸೂರ್ಯ ಕಿರಣಗಳು ಆಕಾಶದಿಂದ ಹೊರ ಹೊಮ್ಮಲು ಆಕಾಶದಿಂದ ದೇವಸ್ಥಾನ ನಿರ್ಮಾಣ ಕಾರ್ಯ ನಿಲ್ಲಿಸುವಂತೆ ಆಶರೀರ ಧ್ವನಿ ಕೇಳಿ ಬರುತ್ತದೆ. ಹಾಗಾಗಿ ದೇವಸ್ಥಾನದ ಶಿಖರ (ಮುಗುಳಿ) ಪ್ರತಿಷ್ಠಾಪನೆಯಾಗದೇ ಕಾರ್ಯ ನಿಲ್ಲುತ್ತದೆ. ಸ್ವರ್ಣ ಬಾಹುವಿಗೆ ಮತ್ತೆ ಕೈಗಳು ಬರುತ್ತವೆ. ಇಂದಿಗೂ ಶ್ರೀ ಕ್ಷೇತ್ರ ಕುಡುಪು ದೇವಸ್ಥಾನದಲ್ಲಿ ಮುಗುಳಿ ಇಲ್ಲದಿರುವುದನ್ನು ಕಾಣಬಹುದಾಗಿದೆ.
ದೇಗುಲದ ವೈಶಿಷ್ಟ್ಯತೆ:
ಕ್ಷೇತ್ರದ ಮುಖ್ಯ ದೇವರಾದ ಅನಂತ ಪದ್ಮನಾಭನ ಮೂರ್ತಿಯು ಸುಂದರವಾಗಿದ್ದು ಪಶ್ವಿಮಾಭಿಮುಖವಾಗಿದೆ. ದೇವಾಲಯದ ಹಿಂಭಾಗದಲ್ಲಿ ನಾಗಬನವಿದ್ದು ಸುಮಾರು ೩೦೦ಕ್ಕೂ ಹೆಚ್ಚು ನಾಗಬಿಂಬಗಳಿವೆ. ದೇವಸ್ಥಾನದ ಎಡಭಾಗದಲ್ಲಿ ಭದ್ರಾ ಸರಸ್ವತಿ ತೀರ್ಥವಿದ್ದು ಮನಮೋಹಕವಾಗಿದೆ. ಇತ್ತೀಚಿಗೆ ಈ ಸರೋವರವು ನವೀಕರಣಗೊಂಡಿದೆ. ದೇವಾಲಯದ ಮುಂಭಾಗ ಜಾರಂದಾಯ ದೈವಸ್ಥಾನವಿದೆ. ದೇವಾಲಯದ ಒಳಗಿನ ಹುತ್ತದಲ್ಲಿ ಸುಬ್ಯಹ್ಮಣ್ಯ ವಿಗ್ರಹ, ಪ್ರಧಾನ ದೇವರ ಎಡಭಾಗದಲ್ಲಿ ಜಯ ವಿಜಯ ಶಿಲಾ ವಿಗ್ರಹ, ಹೊರಗೆ ವಲ್ಮೀಕ ಮಂಟಪ, ನವಗ್ರಹ ಹಾಗೂ ಅಯ್ಯಪ್ಪ ಗುಡಿಗಳಿವೆ.

ದೇವಾಲಯದ ವಾರ್ಷಿಕ ಉತ್ಸವವು ಮಾರ್ಗಶಿರ ಶುದ್ಧ ಪಾಡ್ಯದಿಂದ ಮಾರ್ಗಶಿರ ಶುದ್ಧ ಷಷ್ಠಿಯವರೆಗೆ ನಡೆಯುತ್ತದೆ. ಧನುರ್ಮಾಸದ ಶುದ್ಧ ಚತುರ್ದಶಿಯಂದು ನಾಲ್ಕು ದಿನಗಳ ಉತ್ಸವ ನಡೆಯುತ್ತದೆ. ಕುಡುಪು ಕ್ಷೇತ್ರದಲ್ಲಿ ಆಶ್ಲೇಷಾ ಬಲಿಯು ಮುಖ್ಯ ಸೇವೆಯಾಗಿದೆ. ಅಲ್ಲದೆ ಪ್ರತಿದಿನವೂ ಅನ್ನದಾನ ಸೇವೆಯು ನಡೆಯುತ್ತದೆ. ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಷ್ಟೇ ಪಾವಿತ್ಯತೆ ಹೊಂದಿರುವ ಕುಡುಪು ಕ್ಷೇತ್ರದಲ್ಲಿ ನಾಗ ಸಂಬಂದಿತ ಎಲ್ಲಾ ದೋಷಗಳಿಗೆ ಪರಿಹಾರ ಕಾಣಬಹುದಾಗಿದೆ.
ಶಿಲಾ ಶಾಸನಗಳು:
ದೇವಾಲಯದ ಹಿಂದೆ ಬಲಭಾಗದಲ್ಲಿ ಮತ್ತು ನಾಗಬನದ ಎಡಭಾಗದಲ್ಲಿ ಪುರಾತನ ಶಿಲಾಶಾಸನಗಳಿವೆ. ಈ ಶಾಸನಗಳಲ್ಲಿ ಹಲವಾರು ಅಮೂಲ್ಯ ವಿಷಯಗಳು ಇದ್ದರೂ ಈ ಶಾಸನವನ್ನು ಇಂದಿಗೂ ಓದಲಾಗಿಲ್ಲ. ಈ ಶಾಸನಗಳು ಓದಲ್ಪಟ್ಟರೆ ಸುತ್ತಮುತ್ತಲಿನ ಊರಿನ  ಇತಿಹಾಸ, ದೇವಸ್ಥಾನ ವಿಚಾರಗಳನ್ನು ತಿಳಿಯಲು ಸಹಾಯವಾಗಬಹುದು ಎನ್ನುವುದು ಹಿರಿಯರ ಅಂಬೋಣ.
ಹೋಗುವುದು ಬಗೆ:
ಶ್ರೀ ಕ್ಷೇತ್ರ ಕುಡುಪು ದೇವಸ್ಥಾನವು ಮಂಗಳೂರಿನಿಂದ ೧೦ಕಿ.ಮೀ ದೂರದ ಕುಡುಪು ಗ್ರಾಮದಲ್ಲಿದೆ. ಮಂಗಳೂರಿನಿಂದ ಗುರುಪುರ ಕೈಕಂಬವಾಗಿ ಮೂಡಬಿದ್ರೆ, ಕಾರ್ಕಳ ಸಾಗುವ ದಾರಿಯಲ್ಲಿ ಪ್ರಯಾಣಿಸಿ ದೇವಸ್ಥಾನ ಸೇರಬಹುದು. ಮಂಗಳೂರಿನಿಂದ ಅನೇಕ ಬಸ್ಸುಗಳು ಶ್ರೀ ಕ್ಷೇತ್ರ ಕುಡುಪು ದೇವಸ್ಥಾನ ಮಾರ್ಗವಾಗಿ ಸಾಗುತ್ತದೆ.



ಕನ್ನಡ ನಾಡು-ನುಡಿ ಸಂಸ್ಕೃತಿಯ ವಿಶ್ವಸಮ್ಮೇಳನ-ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್-೨೦೧೩
ಸಾಂಸ್ಕೃತಿಕತೆಯ ವಿರಾಟ್ ಸ್ವರೂಪ ತೆರೆದಿಟ್ಟ ವಿದ್ಯಾಗಿರಿ-ಜೈನಕಾಶಿ ಮೂಡಬಿದಿರೆ
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಮಿಜಾರುಗುತ್ತು ಮೋಹನ ಆಳ್ವರ ನೇತೃತ್ವದ ವಿಶ್ವ ನುಡಿಸಿರಿ ವಿರಾಸತ್ ಕನ್ನಡ ನಾಡು-ನುಡಿ ಸಂಸ್ಕೃತಿಯ ವಿಶ್ವಸಮ್ಮೇಳನಕ್ಕೆ ಡಿ.೧೯ ರಂದು ಮಧ್ಯಾಹ್ನ ಭವ್ಯ ಮೆರವಣಿಗೆಯೊಂದಿಗೆ ಆರಂಭ. ಜಾನಪದ ಕ್ಷೇತ್ರದ ಕಣಜ ಸುಕ್ರಿ ಬೊಮ್ಮಗೌಡ ಅಭೂತಪೂರ್ವ ಮೆರವಣಿಗೆ ಅರ್ಥಪೂರ್ಣ ಚಾಲನೆ. ಮೆರವಣಿಗೆಯಲ್ಲಿ ಭಾಗವಹಿಸಿದ ನೂರಾರು ತಂಡಗಳ ಸಾವಿರಾರು ಕಲಾವಿದರು ಮೂಡುಬಿದಿರೆಯಲ್ಲಿ ಮಿನಿ ಭಾರತವನ್ನು ಸೃಷ್ಠಿಸಿ, ಪ್ರೇಕ್ಷಕರನ್ನು ದಂಗುಬಡಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಡಾ.ಹೆಗ್ಗಡೆ: 
 ರಾಜ್ಯದ ಶಾಲೆ ಕಾಲೇಜುಗಳಲ್ಲಿ ಕಲೆ ಮತ್ತು ಕ್ರೀಡೆಗೆ ಹೆಚ್ಚು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಎರಡು ವರ್ಷಗಳ ಪದವಿ ಪೂರ್ವ ತರಗತಿಗಳಿಗೆ ನಾವು ಸಂಸ್ಕೃತಿ ಮತ್ತು ಕ್ರೀಡೆಗೆ ನಿರ್ಬಂಧ ವಿದಿಸಿ, ಪಠ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಡ ಹಾಕುತ್ತೇವೆ. ಇಲ್ಲಿ ಅಂಕಗಳಿಕೆಯೇ ಪ್ರಧಾನ ಉದ್ದೇಶವಾಗಿರುತ್ತದೆ. ಕ್ರೀಡೆ ಮತ್ತು ಸಾಂಸ್ಕೃತಿಕ ವಿಷಯಗಳಲ್ಲಿ ತೊಡಗಿಸಿಕೊಂಡರೆ ಎಲ್ಲಿ ಅನುತ್ತೀರ್ಣರಾಗುತ್ತಾರೋ ಎನ್ನುವ ಭಯ ಹೆತ್ತವರನ್ನು ಕಾಡುತ್ತದೆ. ಆದರೆ ಆಳ್ವಾಸ್ ಶಿಕ್ಷಣ ಸಂಸ್ಥೆ ತನ್ನ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಂಡು ಪ್ರತಿಶತ ಶೇ.೯೬ ರಷ್ಟು ಪಲಿತಾಂಶ ದಾಖಲಿಸಿ, ಯಶಸ್ವಿಯಾಗಿರುವುದು ಒಂದು ಅತ್ಯುತ್ತಮ ಮಾದರಿ ಎಂದು ಡಾ.ಹೆಗ್ಗಡೆ ಹೇಳಿದರು. ಎರಡು ಮಹಾಯುದ್ದಗಳ ಆತಂಕ ಸಾವು-ನೋವು ಮತ್ತು ಆರ್ಥಿಕ ನಷ್ಟ ವಿಶ್ವದ ಕಲ್ಪನೆಯನ್ನು ಬೆಳೆಸುತ್ತದೆ. ಅಲ್ಲಿ ಆಗ ಶಾಂತಿಯ ಪಾಠ ಸಾಧ್ಯವಾಗುವುದು ಕಲೆಯಿಂದ. ಎಂ.ಎಸ್.ಸುಬ್ಬುಲಕ್ಷ್ಮಿಯಂತಹ ಮೇರು ಕಲಾವಿದರು ವಿಶ್ವಸಂಸ್ಥೆಯಲ್ಲಿ ಸಂಗೀತದ ಹೊಳೆ ಹರಿಸುವ ಮೂಲಕ ಕಲೆಗೆ ಶಾಂತಿಯ ಗುಣವಿದೆ ಎನ್ನುವುದನ್ನು ತೋರಿಸಿಕೊಟ್ಟರು. ಕಲಾವಿದರೆಲ್ಲರೂ ಒಟ್ಟು ಸೇರಿದರೆ ಪ್ರಪಂಚವನ್ನು ಪ್ರಕಾಶಿಸಬಹುದು. ಕಲೆ ಸಂಸ್ಕೃತಿಗಳಿಂದ ಹೃದಯ-ಹೃದಯಗಳಿಂದ ಬೆಸೆಯಬಹುದು ಎನ್ನುವುದು ಆಗ ಜಗತ್ತಿಗೆ ಮನದಟ್ಟಾಯಿತು ಎಂದು ಕಲೆಯ ಮಹತ್ವದ ಕುರಿತು ಧರ್ಮಾಕಾರಿ ಬೆಳಕು ಚೆಲ್ಲಿದರು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗುತ್ತದೆಯೇ ಹೊರತು ಎಂದೂ ತೊಡಕಾಗುವುದಿಲ್ಲ ಎನ್ನುವುದು ಡಾ.ಮೋಹನ್ ಆಳ್ವರ ಪ್ರಯೋಗದಿಂದ ಖಚಿತವಾಗಿದೆ. ಹಾಗಾಗಿ ಈ ಪ್ರಯೋಗ ವಿಸ್ತಾರಗೊಳ್ಳುವುದು ಮತ್ತು ಮಕ್ಕಳನ್ನು ಆ ದಿಸೆಯಲ್ಲಿ ಪ್ರೋತ್ಸಾಹಿಸುವುದು ಅಗತ್ಯ ಎನ್ನುವುದು ಹೆಗ್ಗಡೆ ಅವರ ಉದ್ಘಾಟನಾ ನುಡಿ.
ಕೇವಲ ಭಾಷೆಯಲ್ಲ!
ಕನ್ನಡವೆಂಬುದು ಕೇವಲ ಭಾಷೆಯಲ್ಲ. ಅದೊಂದು ಕೃಷಿ, ಜಾನಪದ, ಸಂಸ್ಕೃತಿ, ಜಾತಿ, ಧರ್ಮ ಮತ್ತು ಮತಗಳ ಸಮ್ಮಿಲನವು ಹೌದು. ಇವೆಲ್ಲ ಜೊತೆಗೂಡಿ ಕನ್ನಡವನ್ನು ಶ್ರೀಮಂತಗೊಳಿಸಿದೆ ಎಂದು ನುಡಿದ ಡಾ.ಡಿ.ಹೆಗ್ಗಡೆ ಕನ್ನಡವನ್ನು ವಿಶ್ವಾತ್ಮಕವಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಯುವಜನಾಂಗ ಭಾರತೀಯ ಸಂಸ್ಕೃತಿಯಿಂದ ದೂರವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಹಾಗಿಲ್ಲ. ಭಾರತೀಯ ಸಂಸ್ಕೃತಿಯ ಪರಿಶುದ್ದವಾದ ಮುಖವನ್ನು ಪರಿಚಯಿಸಿದರೆ ಅದನ್ನು ನಮ್ಮ ಯುವಜನಾಂಗ ಅತ್ಮೀಯವಾಗಿ ಸ್ವೀಕರಿಸುತ್ತದೆ ಎಂದು ಹೇಳಿದ ಡಾ.ಹೆಗ್ಗಡೆಯವರು ಜಾಗತಿಕರಣದ ಓಟದಲ್ಲಿ ಜನವಿರೋದಿ, ಪರಿಸರ ವಿರೋದಿ ನಿಲುವುಗಳ ಜಾರಿ ಮತ್ತು ಆ ಮೂಲಕ ನಮ್ಮ ಹಳ್ಳಿಗಳು, ಅಲ್ಲಿನ ಸಂಸ್ಕೃತಿಗಳು ನಾಶವಾಗದಂತೆ ಎಚ್ಚರವಹಿಸುವ ಅಗತ್ಯ ಮನಗಾಣಿಸಿದ್ದರು.
ಅಭೂತಪೂರ್ವ ನುಡಿ ಜಾತ್ರೆಯ ಮೆರವಣಿಗೆ: 
ಪೂರ್ವಾಂಬುದಿಯಲ್ಲಿ ಉದಯಿಸಿದ ಸೂರ್ಯ ಪಶ್ಚಿಮದಲ್ಲಿ ಅಸ್ತಂಗತನಾಗುವ ಹೊತ್ತು. ವಿದ್ಯಾಕಾಶಿ ವಿದ್ಯಾಗಿರಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿತ್ತು. ಬೃಹತ್ ಸೂರ್ಯ ರಶ್ಮಿಯಿಂದ ಒಂದೆಡೆ ಬಿಸಿಲ ಬೇಗೆ..ಆ ಬೇಗೆಯನ್ನೂ ಕೂಡ ನೀಗಿಸುವ ಬೃಹತ್ ಜಾನಪದ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆಯ ವೈಭವದ ಘಳಿಗೆ. ಸಮಯಕ್ಕೆ ಆದ್ಯತೆ ನೀಡುವ ಮೋಹನ ಆಳ್ವರ ಸಮಯ ಪ್ರಜ್ಞೆ ಇಲ್ಲಿಯೂ ಕೂಡ ಮೆರೆದಿತ್ತು. ಕಲೆ, ಸಾಹಿತ್ಯಗಳ ಬಣ್ಣದ ಲೋಕಕ್ಕೆ ಕೊಂಡೊಯ್ಯುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನ ಜಾನಪದ ಸಾಂಸ್ಕೃತಿಕ ಮೆರವಣಿಗೆಗೆ ನಾಡೋಜ ಸುಕ್ರಿ ಬೊಮ್ಮಗೌಡ ಅವರು ಕನ್ನಡದ ಧ್ವಜ ಹಾರಿಸುವ ಮೂಲಕ, ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ವಿವಿಧ ಕಲಾತಂಡಗಳು ಮೂಡುಬಿದಿರೆಯ ಹನುಮಂತನ ದೇವಸ್ಥಾನದ ಸಮೀಪ ಆಗಮಿಸಿದ್ದವು. ನುಡಿಸಿರಿಯ ರೂವಾರಿ ಡಾ.ಎಂ.ಮೋಹನ್ ಆಳ್ವರು ಸುಮಾರು ೨.೫೫ಕ್ಕೆ ಅಲ್ಲಿಗೆ ಆಗಮಿಸಿ ದೇವಳದಲ್ಲಿ ಪ್ರಾರ್ಥಿಸಿದರು. ೩ ಗಂಟೆಗೆ ಪ್ರಾರಂಭವಾದ ಮೆರವಣಿಗೆಯು ಮೂಡಬಿದಿರೆ ಪೇಟೆಯ ಮೂಲಕ ಸಾಗಿತ್ತು. ವಿವಿಧ ಕಲಾತಂಡಗಳ ಮೆರವಣಿಗೆಯಲ್ಲಿದ್ದು, ಮೊದಲ ತಂಡವು ವಿದ್ಯಾಗಿರಿಯ ಆವರಣಕ್ಕೆ ಸುಮಾರು ೪ ಗಂಟೆಗೆ ಆಗಮಿಸಿತ್ತು.
ಮುಗಿಲು ಮುಟ್ಟಿದ ಕೊಂಬು-ಕಹಳೆಗಳ ನಾದ: 
ಮೆರವಣಿಗೆಯಲ್ಲಿ ಕೊಂಬು ಕಹಳೆಗಳ ನಾದವು ಮುಗಿಲನ್ನು ಮುಟ್ಟಿದರೆ, ವಿವಿಧ ಚೆಂಡೆಗಳ ವಾದನವು ರಣಭೂಮಿಯಲ್ಲಿದ್ದ ವಾತಾವರಣವನ್ನು ಸೃಷ್ಠಿಸಿತ್ತು. ರಸ್ತೆಯ ಇಕ್ಕೆಲಗಳಲ್ಲೂ ಕಲಾಸಕ್ತರು ಜನಪದ ತಂಡಗಳನ್ನು ಆಶ್ಚರ್ಯ ಚಕಿತರಾಗಿ ನೋಡುತ್ತಿದ್ದರು ಮಾತ್ರವಲ್ಲದೇ ತಮ್ಮಲ್ಲಿರುವ ಮೊಬೈಲು, ಟ್ಯಾಬ್ಲೆಟ್‌ಗಳ ಮೂಲಕ ಮನಮೋಹಕ ದೃಶ್ಯವನ್ನು ಸೆರೆಹಿಡಿಯುತ್ತಿದ್ದರು. ಬಾಯಾರಿಕೆಯಿಂದ ಬಳಲಿದ್ದ ತಂಡಗಳಿಗೆ ಸ್ಥಳೀಯರು ನೀರು ಕೊಟ್ಟು ದಣಿವು ಆರಿಸುತ್ತಿದ್ದ ದೃಶ್ಯವೂ ಕಂಡುಬಂದಿದೆ. ಪ್ರತಿಯೊರ್ವ ನಾಗರಿಕರು, ಪ್ರತಿನಿದಿಗಳು ಕಲಾ ತಂಡಗಳನ್ನು ಸ್ವಾಗತಿಸುತ್ತಿದ್ದರು. ಕೊಂಬು-ಕಹಳೆಯ ವಾದನವು ನುಡಿಸಿರಿಗೆ ಮೆರುಗು ನೀಡುತ್ತಿರುವುದು ಒಂದೆಡೆಯಾದರೆ, ಸಿಡಿಮದ್ದುಗಳ ಪ್ರದರ್ಶನವು ಪ್ರೇಕ್ಷಕರ ಎದೆಯನ್ನು ಝಲ್ಲೆನ್ನಿಸುತ್ತಿತ್ತು. ಪಕ್ಕಿ ನಿಶಾನೆ, ಆರು ಮಂದಿಯ ತಂಡದಲ್ಲಿ ನಾಲ್ಕು ಬಸವಗಳು, ರಾಜನ ಓಲಗವನ್ನು ನೆನಪಿಸುವ ಸುಮಾರು ೫೦ಕ್ಕಿಂತ ಅಕ ಛತ್ರಿ ಚಾಮರಗಳು, ಸಮವಸ್ತ್ರಧಾರಿಗಳಾಗಿ ಕನ್ನಡ ಬಾವುಟಗಳನ್ನು ಹಿಡಿದ ಪುಟಾಣಿ ಮಕ್ಕಳು, ದಾಸ ಸಾಹಿತ್ಯವನ್ನು ನೆನಪಿಸುವ ಭಜನಾ ತಂಡದಿಂದ ಭಜನೆ ಮೆರವಣಿಗೆಯಲ್ಲಿ ಕಂಡು ಬಂದಿದೆ.
ಶಂಖದ ನಿನಾದ, ದಾಸಯ್ಯರ ವೇಷಗಳೊಂದಿಗೆ ಹಾಡುಗಳು, ಕೊಂಬು, ಚೆಂಡೆಗಳ ಅಬ್ಬರದ ವಾದನ, ಮುಗಿಲು ಮುಟ್ಟಿಸುವ ತೆರದಲ್ಲಿ ತಟ್ಟಿರಾಯನ ವೇಷಗಳು, ನಂದಿಧ್ವಜ, ಕೊರಗರ ಗಜಮೇಳ, ಕೀಲುಕುದುರೆ ನೃತ್ಯ, ಕಲ್ಲಡ್ಕದ ಗೊಂಬೆ ಬಳಗ, ಕಂಸಾಳೆ ನೃತ್ಯ, ಹಾವೇರಿಯ ಜನಜೀವನವನ್ನು ಬೆಂಬಿಸುವ ಬೆಂಡರ ಕುಣಿತ, ತುಳು ನಾಡಿನ ಸಂಸ್ಕೃತಿಯ ಪ್ರತೀಕ ಆಟಿ ಕಳೆಂಜ, ಕೇರಳದ ಚೆಂಡೆ, ಮುಸ್ಲಿಂ ಸಮುದಾಯದ ದಪ್ಪು, ಪೂಕವಾಡಿ, ಹೊನ್ನಾವರದ ಬ್ಯಾಂಡ್ ಸೆಟ್, ಹಾಲಕ್ಕಿ ಕುಣಿತ, ಸೃಷ್ಠಿಗೊಂಬೆ, ಜಗ್ಗಳಿಕೆ ಮೇಳ, ಕುಡುಬಿ ನೃತ್ಯ(ಹೋಳಿಹಬ್ಬ), ಶಾರ್ದೂಲ, ಸಮರ ಕಲೆ, ತಾಲೀಮು ಕಾಸರಗೋಡು, ಕೋಲಾಟ, ಗೊರವರ ಕುಣಿತ, ಪಟದ ಕುಣಿತ, ನಗಾರಿ, ಕೊರಗರ ಡೋಲು, ಕಂಗೀಲು ಕುಣಿತ, ಗಾರುಡಿ ಗೊಂಬೆ, ಸೋಮನ ಕುಣಿತ, ಕೇರಳದ ದೇವರ ವೇಷ, ಡ್ರ್ಯಾಗನ್, ಶ್ರೀಲಂಕಾದ ನೃತ್ಯ, ಮಣಿಪುರದ ನೃತ್ಯ, ದೇಶದ ವಿವಿಧ ರಾಜ್ಯದ ವಿವಿಧ ಬಂಜಾರ ನೃತ್ಯ ತಂಡಗಳು, ಸಮವಸ್ತ್ರಧಾರಿ ಮಹಿಳಾ ಚೆಂಡೆ ವಾದನ, ಮೋಹಿನಿಯಾಟ್ಟಂ, ಕಥಕ್, ಮಹಿಳಾ ಡೊಳ್ಳು, ಗುಜರಾತ್ ನೃತ್ಯ, ರಾಜಸ್ತಾನ್ ನೃತ್ಯ, ಕಣಿ ಮಜಲು, ಮಹಿಳಾ ಪಟದ ಕುಣಿತ, ಸಿದ್ಧವೇಷ, ರೇಂಜರ್‍ಸ್ ಮತ್ತು ರೋವರ್‍ಸ್, ಅಲಂಗಾರ್ ಬ್ಯಾಂಡ್‌ಸೆಟ್, ವೀರಗಾಸೆ, ಗಿಡ್ಡ ಮನುಷ್ಯರನ್ನು ಬಿಂಬಿಸುವ ತಂಡಗಳು, ಕಲ್ಲಡ್ಕದ ಕರಗ ನೃತ್ಯ, ಕೇಸರಿ, ಬಿಳಿ, ಹಸಿರು ವಸ್ತ್ರಧಾರಿ ಆಳ್ವಾಸ್ ವಿದ್ಯಾರ್ಥಿ ಸಮೂಹಗಳು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದ್ದವು.
ಲಯಭರಿತವಾಗಿ ಜೈನ್ ಶಾಲೆಯ ಮಕ್ಕಳಿಂದ ಬ್ಯಾಂಡ್‌ಸೆಟ್‌ನ ಘೋಷ, ಶಿವರಾಮ ಕಾರಂತರ ಕಾದಂಬರಿ ಚೋಮನ ದುಡಿಯನ್ನು ನೆನಪಿಸುವ 'ದುಡಿ ಕುಣಿತ', ಕೊಡಗಿನ ಉಮ್ಮತ್ತಾಟ್, ಹುಲಿವೇಷ, ತಾಸೆ, ಕುಂದಗನ್ನಡ ಸಾರವನ್ನು ಬಿಂಬಿಸುವ ಕುಂದಾಪುರ ಕೊರಗರ ಡೋಲು ಕುಣಿತ, ಪೂಜಾ ಕುಣಿತ, ರಾಜ್ಯ ಪ್ರಶಸ್ತಿ ವಿಜೇತ ತಂಡಗಳಾದ ಮುನಿವೆಂಕಟಪ್ಪ, ಮಂಡ್ಯ ನಾಗಮಂಡಲದ ವೀರಗಾಸೆ ಹಾಗೂ ವೀರಭದ್ರ ವೇಷಧಾರಿಗಳ ಮೈ ನವಿರೇಳಿಸುವ ಕುಣಿತಗಳು ಸಾಹಿತ್ಯಾಸಕ್ತರನ್ನು ತುದಿಗಾಲಲ್ಲಿ ನಿಲ್ಲಿಸಿದ್ದವು. ೧೦ ಕ್ಕಿಂತಲೂ ಅಕ ಮರಗಾಲು ಕುಣಿತ, ಕಿಂದರಿ ಜೋಗಿ, ಮುನಿವೆಂಕಟೇಶ್ವರ ತಂಡಗಳಿಂದ ತಮಟೆವಾದನ, ಆಳ್ವಾಸ್ ವಿದ್ಯಾರ್ಥಿಗಳ ಎನ್‌ಸಿಸಿ, ಸೇವಾದಳ, ಸ್ಕೌಟ್ ಅಂಡ್ ಗೈಡ್ಸ್ ಸೇರಿದಂತೆ ಅಳಕೆಯ ಬ್ಯಾಂಡ್, ರೋಟರಿ ಬ್ಯಾಂಡ್, ಪುರವಂತಿಕೆ, ಕಲರಿ ಫೈಯಟ್, ಕೇರಳದ ಪಂಚವಾದ್ಯ, ಚಿತ್ರದುರ್ಗದ ದುರ್ಗಾಬ್ಯಾಂಡ್ ಸೆಟ್, ಕರಡಿ ಮಜಲು, ದಟ್ಟಿ ಕುಣಿತ, ಸೈನಿಕರ ನೆನಪನ್ನು ಸ್ಮರಿಸುವ ನಿಟ್ಟಿನಲ್ಲಿ ಸೈನಿಕ ವೇಷದಲ್ಲಿ ವಿದ್ಯಾರ್ಥಿ ಸಮೂಹ, ತಮಿಳುನಾಡಿನ ಕರಗ ನೃತ್ಯ, ಹೆಜ್ಜೆ ಕುಣಿತ, ಮಂಗಳೂರಿನ ಕೇರಳ ಶೈಲಿಯ ಚೆಂಡೆ, ಅಸಾದಿ ಮೇಳ, ಮಂಡ್ಯದ ನಂದಿಧ್ವಜ, ಅಲಂಗಾರು ಬ್ಯಾಂಡ್, ಚಿಲಿಪಿಲಿ ಗೊಂಬೆ ಬಳಗ, ಪುರವಂತಿಕೆ, ರಂಗಾಯಣ ಕಲಾವಿದರು, ರೈತರು, ತುಳುನಾಡ ವಾದ್ಯಗಳು, ಕೇರಳದ ತಯ್ಯಮ್, ಡೊಳ್ಳು ಕುಣಿತ, ಪೂರ್ಣಕುಂಭ, ಪಲ್ಲಕ್ಕಿ, ಟ್ರಕ್ ಯಕ್ಷಗಾನ ಬಡಗು, ತೆಂಕು, ಮಣಿಪುರಿ ರಾಸಲೀಲೆ, ಪುರೂಲಿಯೊ ಛಾವೊ, ಕೆನೆಡಿಯನ್ ಹಾಗೂ ರಬೋನ್ ಡ್ಯಾನ್ಸ್, ಮೂಡಲಪಾಯ ಇತ್ಯಾದಿ ಸುಮಾರು ೧೦೦ ಕ್ಕೂ ಮಿಕ್ಕಿದ ಕಲಾತಂಡಗಳು ನುಡಿಸಿರಿಯ ಮೆರವಣಿಗೆಗೆ ಸಾಕ್ಷಿಯಾಗಿದ್ದವು.
೩೪ ನೇ ರಾಜ್ಯಮಟ್ಟದ ಕೃಷಿ ಸಮ್ಮೇಳನ: ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ..ಆಳ್ವಾಸ್ ನುಡಿಸಿರಿಯಲ್ಲಿರುವ ಸೌಭಾಗ್ಯ:
ಆಳ್ವಾಸ್ ವಿಶ್ವ ನುಡಿಸಿರಿಯ ಆಕರ್ಷಣೆಯಾಗಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ೩೪ ನೇ ಕೃಷಿ ಮೇಳ ಸೇರ್ಪಡೆಗೊಂಡಿರುವುದು ವಿದ್ಯಾಗಿರಿಗೆ ಮೆರುಗು ತಂದಿತ್ತು. ಕಳೆದ ಬಾರಿ ಕುಮಟಾದಲ್ಲಿ ನಡೆದ ಕೃಷಿ ಮೇಳವೂ ಆಳ್ವಾಸ್ ನುಡಿಸಿರಿಯಲ್ಲಿ ಕೃಷಿಕರಿಗಾಗಿ ಕೃಷಿ ಸಲಕರಣೆಗಳ ಪ್ರದರ್ಶನ, ಮಾರಾಟ ಮಳಿಗೆಯನ್ನು ತೆರೆದಿಟ್ಟಿದೆ. ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿರದೆ, ಕೊಡಗು, ಕರಾವಳಿ, ಮಲೆನಾಡು ಜಿಲ್ಲೆಗಳಿಂದ ವಿವಿಧ ಮಳಿಗೆಗಳು ಕೃಷಿ ಮೇಳದಲ್ಲಿ ಪಾಲ್ಗೊಳ್ಳುತ್ತಿರುವುದೇ ಒಂದು ವಿಶೇಷ.
ನುಡಿಸಿರಿ ಕೃಷಿಮೇಳದಲ್ಲಿ ೫೦೦ಕ್ಕೂ ಮಿಕ್ಕಿದ ಕೃಷಿ ಮಳಿಗೆಗಳು ಭಾಗವಹಿಸಿವೆ. ಕೃಷಿ ಇಲಾಖೆ, ಸಣ್ಣ, ಮಧ್ಯಮ ಹಾಗೂ ದೊಡ್ಡ ಕೃಷಿಕರಿಗೆ ಉಪಯೋಗವಾಗುವ ಕೃಷಿ ಯಂತ್ರೋಪಕರಣ, ತೋಟಗಾರಿಕೆ ಇಲಾಖೆ, ಹೂವಿನ ಗಿಡಗಳ ಪ್ರದರ್ಶನ, ಮಾರಾಟ, ಕೃಷಿ ಕುಟುಂಬದ ಮಾದರಿ, ಜಲಾನಯನ ಇಲಾಖೆಯ ಯೋಜನೆಯ ಮಾದರಿಗಳು ಈಗಾಗಲೇ ಕೃಷಿ ಮೇಳಕ್ಕೆ ಸಿದ್ದಗೊಂಡಿವೆ. ವಿಶೇಷವಾಗಿ ಗ್ರಾಮಾಭಿವೃದ್ಧಿಯ ಸ್ವಸಹಾಯ ಸಂಘಗಳ ಉತ್ಪನ್ನಗಳು ಆಕರ್ಷಣೆಯಾಗಿವೆ. ವಿಶೇಷವಾಗಿ ವಿವಿಧ ಜಿಲ್ಲೆಯ ಕೃಷಿ ಚಟುವಟಿಕೆಗಳ ಕುರಿತಾಗಿ ಮಾದರಿ ರಥಗಳನ್ನಾಗಿ ಮಾಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಭತ್ತದ ರಥ, ಅನಾನಸ್‌ನಿಂದ ರಚಿತವಾದ ಕಣ್ಮನ ಸೆಳೆಯುವ ರಥ, ಶಿವಮೊಗ್ಗದ ಜೋಳದ ಗೋಪುರಾಕೃತಿ, ಚಿಕ್ಕಮಗಳೂರಿನ ಪಾರಮ್ಯವನ್ನು ಸಾರುವ ಕಾಫಿ ಗಿಡಗಳ ಮಾದರಿ, ಕೊಡಗಿನ ಜೀವನದಿ ಕಾವೇರಿಯನ್ನು ಧರೆಗಿಳಿಸಿದ ಮಾದರಿಗಳು ಜನಾಕರ್ಷಕವಾಗಿದ್ದವು. ಮೈಸೂರು ಅರಮನೆ, ಉಡುಪಿಯ ಎಳನೀರು ರಥ, ಕುಂದಾಪುರ ತಾಲೂಕು ಕೊಲ್ಲೂರಿನ ಕೊಡಚಾದ್ರಿ ಬೆಟ್ಟದ ವೈಭವ, ಮೀನುಗಾರಿಕೆಯ ಮಾದರಿಗಳು ಸೇರಿದಂತೆ ನಾಗನ ನೆಲೆವೀಡು ಕರಾವಳಿಯ ಚಿತ್ರಣವನ್ನು ಕಾರ್ಕಳ ತಾಲೂಕಿನ ವತಿಯಿಂದ ರಚಿಸಲಾಗಿತ್ತು. ೩೦ಕ್ಕೂ ಹೆಚ್ಚು ತಳಿಯ ಗೋವುಗಳ ಪ್ರದರ್ಶನ. ಆಳ್ವಾಸ್ ನುಡಿಸಿರಿಯ ಕೃಷಿ ಮೇಳದಲ್ಲಿ ವಿಶೇಷವಾಗಿ ಕಂಬಳದ ಗದ್ದೆ ನಿರ್ಮಾಣ ಮಾಡಿದ್ದರು. ಈ ಗದ್ದೆಯಲ್ಲಿ ಭತ್ತದ ಕೃಷಿ ನಾಟಿ, ಜಾನಪದ ಸ್ಪರ್ಧೆ, ಕೋಣಗಳನ್ನು ಬಳಸಿ ಉಳುಮೆ ವಿಧಾನ ತೊರಿಸುವ ವಿಶೇಷ ಕಾರ್ಯಕ್ರಮ ಜೋಡಿಸಲಾಗಿತ್ತು.
ಸಂಘದ ಸ್ವಗೃಹ ಯೋಜನೆ-
ಮಾದರಿ ರೈತನ ಕುಟುಂಬ ಹೇಗಿರಬೇಕು ಎನ್ನುವ ಕಲ್ಪನೆಯೇ ಸ್ವಗೃಹ ಯೋಜನೆಯ ಮೂಲಸ್ವರೂಪ. ಇದು ಮೂರ್ತರೂಪ ತಳೆದದ್ದು ಕೃಷಿಮೇಳದಲ್ಲಿ. ಮನೆಯ ಮುಂಬಾಗದಲ್ಲಿ ಸಣ್ಣದಾಗಿ ರಚಿತವಾದ ಗದ್ದೆಯಲ್ಲಿ "ಶ್ರೀ ಪದ್ದತಿ" ಒಂದೆಡೆಯಾದರೆ ಇನ್ನೊಂದೆಡೆ ಮಾಮೂಲಿ ರೈತನ ಕೃಷಿ ಚಟುವಟಿಕೆಗಳು, ದನದ ಕೊಟ್ಟಿಗೆ, ಅಡಿಕೆ-ತೆಂಗಿನ ತೋಟಗಳು, ಹೂವಿನ ತೋಟ, ಮನೆಯ ಮಾಂಗಲ್ಯವಾಗಿರುವ ತುಳಸಿಕಟ್ಟೆ, ಕುಡಿಯುವ ನೀರಿಗಾಗಿ ಬಾವಿಗಳಿರಬೇಕು ಎನ್ನುವುದರ ಸಾಕಾರ ರೂಪವೇ ಸ್ವಗೃಹ ಯೋಜನೆ.
ತೀರ್ಥಹಳ್ಳಿಯ ಆಲೆಮನೆ-
೩೫ ವರ್ಷದಿಂದ ಆಲೆಮನೆಯನ್ನು ನಡೆಸುತ್ತಾ ಹಲವಾರು ಕೃಷಿ ಮೇಳ, ಜಾತ್ರೆಗಳಲ್ಲಿ ಭಾಗವಹಿಸಿ, ಈ ಬಾರಿ ನುಡಿಸಿರಿಯಲ್ಲಿ ಭಾಗವಹಿಸಿದ ತೀರ್ಥಹಳ್ಳಿ ಆರಗದ ಕಡೆಗದ್ದೆ ಉಮೇಶ ಅವರ ತಂಡವು ಗುರುವಾರದಿಂದಲೇ ಶುದ್ದ ಕಬ್ಬಿನ ಹಾಲಿನ ಮಾರಾಟ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಕೋಣವನ್ನು ಕಟ್ಟಿ ಕಬ್ಬಿನ ಹಾಲನ್ನು ತೆಗೆದು ಕೇವಲ ೧೦ ರೂ ಗೆ ಶುದ್ದ ಕಬ್ಬಿನ ರಸವನ್ನು ನೀಡುವುದು ಮಾತ್ರವಲ್ಲ. ಸ್ಥಳದಲ್ಲಿಯೇ ರಚಿತವಾದ ಜೋನಿಬೆಲ್ಲದ ಮಾರಾಟವು ಕೂಡ ಲಭ್ಯವಿತ್ತು. ಆರೋಗ್ಯಕ್ಕೆ ಉತ್ತಮವಾದ, ರಕ್ತ ಶುದ್ಧಿಕರಣಕ್ಕೆ ಯೋಗ್ಯವಾದ ಶುದ್ದ ಕಬ್ಬಿನ ಹಾಲು ಆಲೆಮನೆಯಲ್ಲಿ ಸಿಗುತ್ತಿತ್ತು.
ಅಡಿಕೆ, ತೆಂಗು, ಅಲಂಕಾರಿಕ ಗಿಡಗಳು ಲಭ್ಯ ಮಾರಾಯ್ರೆ...
ಧ.ಗ್ರಾ.ಯೋಜನೆಯ ವತಿಯಿಂದ ವಿವಿಧ ಬಣ್ಣದ ಗುಲಾಬಿ ಗಿಡಗಳು, ಅಲಂಕಾರಿಕ ವಸ್ತುಗಳು, ತೋಟಗಾರಿಕೆಯ ಗಿಡಗಳು ಮಾರಾಟಕ್ಕಿವೆ. ಸರ್ವಋತುಗಳಲ್ಲಿಯೂ ಫಲವನ್ನುಕರಾವಳಿ ಹಾಗೂ ಬಯಲು ಸೀಮೆಯ ಹಲಸಿನ ತಳಿಗಳು, ಜಾಯಿಕಾಯಿ, ಚಕೋತ, ಎಳನೀರಿಗಾಗಿಯೇ ಇರುವ ತೆಂಗಿನ ಗಿಡಗಳು, ನೇರಳೆ, ೬ ತಿಂಗಳಲ್ಲಿ ಫಲವನ್ನುನೀಡುವ ತೈವಾನ್‌ನ ಲೇಡಿರೆಡ್ ಹೆಸರಿನ ಪಪ್ಪಾಯಿ, ಕಾಳು ಮೆಣಸು ಬಳ್ಳಿಗಳು ಮಾತ್ರವಲ್ಲದೇ ಎರೆಹುಳ ಗೊಬ್ಬರಗಳು ಮಾರಾಟಕ್ಕಿವೆ. ಉಪವನ ಗಾರ್ಡನ್, ಬ್ರಹ್ಮಾವರದ ಕ್ಲಾಸಿಕ್ ನರ್ಸರಿಯಲ್ಲಿ ಅಂಜೂರ ಗಿಡಗಳು ಮಾರಾಟಕ್ಕಿರುವುದು ಕೃಷಿಮೇಳದ ಸೌಂದರ್ಯವನ್ನು ವೃದ್ಧಿಸಿದೆ. ಕರಾವಳಿಯ ಜನತೆ ಮಾತ್ರವಲ್ಲದೇ, ನಾಡಿನ ಎಲ್ಲಾ ಜನತೆಯು ಕೃಷಿ ಮೇಳದಲ್ಲಿ ಭಾಗವಹಿಸಿ, ಮೇಳದ ಸೊಬಗನ್ನು ಸವಿಯಲು ನುಡಿಸಿರಿಯಲ್ಲಿ ಮಾತ್ರ ಅವಕಾಶವಾಗಿತ್ತು.
ಕುಂದಾಪ್ರ ಕನ್ನಡ್ದ ಸೊಬಗ್ ಕಾಣಿಯೇ..
ಜೀವನ್ದಂಗ್ ಒಂದ್ಸಾಲ್ ಆರೂ ಆಳ್ವಾಸ್ ನುಡಿಸಿರಿ ಕಾಣ್ಕ್ ಮರ್ರೆ..
ಹ್ವಾಯ್ ಎಂತಾ ಚಳಿ ಮರ್ರೆ...ಚಳಿ ಆರೂ ಕಾಂತಿಲ್ಯೆ ಕಾಲಿಡುಕೂ ಜಾಗ ಇಲ್ದಿದಂಗ್ ಮಾಡಿ ಬಿಟ್ಟಿರ್ ಮರ್ರೆ. ಎಲ್ ಕಂಡ್ರೂ ಜನವೇ, ಕುಂದಾಪ್ರದ ಕೊಡಿ ಹಬ್ಬದಕ್ಕಿಂತ ಹತ್‌ಪಟ್ ಜಾಸ್ತಿ ಇತ್ತೆ. ಕುಡುಕೆ ನೀರ್ ಕೆಂಡ್ರ ಕೂಡ್ಲೆ ಸಿಕ್ಕತ್ತ್, ಊಂಬಕಂತ್ತು ಮೂರ್‍ನಾಲ್ಕ್ ಕಡಿ ಹಾಕ್ತಿದ್ರೆ..ಡೋಲು, ಯಕ್ಷಗಾನ್ದ ಚೆಂಡಿ, ಹೋಳಿ ಹಬ್ಬದ ಕುಣ್ತ, ಯಬ್ಯಾ ನಾನ್ ಕಂಡದ್ ಮೊದ್ಲ ಕುಂದಾಪ್ರ ಮಾತ್ರ ಅಲ್ದಾ..ಅಲ್ಲ ಹೋಯ್ ಎಂತಾ ಕಾಂಬದ್, ಯಾವ್ದನ್ ಕಾಂಬದ್, ಯಾವ್ದನ್ ಬಿಡೂದ್ ಅಂತಾ ಗೊತ್ತಾಲ್ಯೆ. ನೂರ್ ಎಕ್ರಿ ಜಾಗ್ ಇತ್ತ್ ಅಂಬ್ರ ಕಾಣಿ..ಎಲ್ ಕಂಡ್ರೂ ವೇದಿಕೆ ಮಾಡಿರೆ..ಒಂದ್ಕಿಂತ್ ಒಂದ್ ಒಳ್ಳೆ ಕಾರ್ಯಕ್ರಮ...ಹ್ವಾಯ್ ನಾನ್ ಹೇಳೂಕೆ ಹೊರಟದ್ ಡಾ.ಮೋನಣ್ಣ ಮಾಡಿರಲ್ದಾ ಆಳ್ವಾಸ್ ವಿಶ್ವನುಡಿಸಿರಿ ಬಗ್ಗೆ ಮರ್ರೆ.
ಮೋನಣ್ಣ ಇಷ್ಟ್ ವರ್ಷ ನುಡಿಸಿರಿ, ವಿರಾಸತ್ ಎರ್‍ಡೂ ಬ್ಯಾರೆ ಬ್ಯಾರೆ ಮಾಡ್ತಿದ್ರ ಅಂಬ್ರ. ಒಂದ್ ವಿದ್ಯಾಗಿರಿಯಂಗ್..ಇನ್ನೊಂದ್ ಶೋಭಾವನ್ದಂಗ್ ಅಂಬ್ರ. ಆರೆ ಈ ಸರ್ತಿ ಎರ್‍ಡೂ ಒಟ್ಟಿಗೆ ಮಾಡಿ, ವಿಶ್ವ ಆಳ್ವಾಸ್ ನುಡಿಸಿರಿ ಅಂದೇಳಿ ಮಾಡಿರೆ. ಹೆಸ್ರಿಗೆ ಸರಿಯಾಯಿ ತುಂಬಾ ಜನ ಬಂದಿರ್ ಮರ್ರೆ. ಆ ಬೆಳಿ ಬೆಳಿ, ಕೆಂಚ್ ಕೂದಲ್ ಬಿಟ್ಟಕಂಡ್, ಗೋಣಿಚೀಲ್ದ ಕಂಡಂಗಿದ್ ಬ್ಯಾಗ್ ಹೈಕಂಡ್ ಬತ್ರಲ್ದ ವಿದೇಶಿಯರ್ ಕೂಡ ಅಲ್ಲಿದ್ರ್ ಮರ್ರೆ. ಹ್ವಾಯ್ ಗಮ್ಮತ್ ಅಂದ್ರೆ ಇದ್ ಕಾಣಿ ಅವ್ರಿಗೆ ಕನ್ನಡ ಬರ್‍ದಿದ್ರೂ ಇಲ್ಲಿನ ಜನಗಳ ಮಾತ್, ಜನಪದ ತಂಡಗಳ ಕೊಣಿಯುದ್‌ನ್ ಫೋಟೊ ತೆಕ್ಕಂಡ್ ಹೊತ್ ಇದ್ರೆ. ನಾನ್ ಯಾಕ್ ಅಂತಾ ಅವ್ರತ್ರ ಕುಂದಾಪ್ರದ ಇಂಗ್ಲಿಷ್ಂಗ್ ಕೆಂಡ್ ಕೂಡ್ಲೆ ಅವ್ರ್ ನಾವ್ ಸಂಶೋಧನೆ ಮಾಡೊ ವಿದ್ಯಾರ್ಥಿಗಳ್ ಅಂದ್ರೆ. ನಂಗಂತೂ ಎಷ್ಟ್ ಖುಷಿ ಆಯ್ತ್ ಅಂದ್ರೆ ನಮ್ ಕನ್ನಡ ನೆಲದ್ ಸಂಸ್ಕೃತಿನ, ಜನಜೀವನವನ್ನು ವಿದೇಶಿಗಳ್ ಬಂದ್ ಅಭ್ಯಾಸ್ ಮಾಡ್ತ್ರ್ ಅಂದ್ರೆ ನಮ್ ದೇಶದ್ ಹಿರಿಮೆ ಸಾಗರದಾಚೆಗೂ ಹೊತ್ತ್ ಅಲ್ದಾ. ಅದ್ಕಿಂತ್ಲೂ ಅವ್ರ ವೇದಿಕ್ಯಾಂಗ್ ಭಾರತೀಯ ಉಡುಪಂಗೆ ಮಿಂಚ್ತಾ ಇದದ್ ಕಾಂಬಕೆ ಎಷ್ಟ್ ಖುಷಿ ಆತಿತ್ ಗೊತ್ತಾ! ಇದ್ಕೆಲ್ಲಾ ಕಾರಣ್ ಆದ್ ಮೋನಣ್ಣ ನಡೆಸುವ ನುಡಿಸಿರಿ ಮರ್ರೆ
ಎಲ್ ಕಂಡ್ರೂ ಜನ..ಅಂಗಡಿ, ಜನಪದ ತಂಡಗಳು-
ನುಡಿಸಿರಿಯಂಗೆ ಕಾಲಿಡೂಕು ಜಾಗ ಇಲ್ಯೆ. ವಿದ್ಯಾರ್ಥಿಗಳ್ ಜಾಸ್ತಿ ಇತ್ ಅಂದೆಳಿ ತಿಳ್ಕಂಡ್ ಧರ್ಮಸ್ಥಳದ ಕೃಷಿಮೇಳಕ್ಕೆ ಹೋಯ್ ಕಂಡ್ರೆ ಅಲ್ಲಂತೂ ರೈತ್ರೆ ಇದ್ರ್ ಮರ್ರೆ. ಸಣ್ ಸಣ್ ಕೋಣ್ಯಂಗ್ ಬಟ್ಟಿ ತಕಂಬರಿಗೆ ಬಟ್ಟಿ, ತಿಂಡಿ ತಿಂಬರಿಗೆ ತಿಂಡಿ, ಬಾಯಾರಿಕೆ ಆರೆ ಕಬ್ಬಿನ ಹಾಲ್ ಇತ್ತೆ. ಇದೆಲ್ಲಾ ಬಹಳ ಪಿರಿಯಾ ಮರ್ರೆ. ದೊಡ್ಡ ವೇದಿಕ್ಯಾಂಗ್ ಕೃಷಿ ವಿಷಯಕ್ಕೆ ಸರಿಯಾಯಿ ಮಾರ್ಗದರ್ಶನ ಮಾಡ್ತಾ ಇದ್ರೆ. ಅಲ್ಲ್ ಭತ್ತ್‌ದಂಗೆ, ಪರಂಗಿ ಹಣ್ಣಂಗೆ, ಕಾಫಿ ಬೀಜದಂಗೆ, ಮೆಣ್ಸಿನ್ ಕಾಯಂಗೆ ಮಾಡದ್ ಗೋಪುರಗಳಿತ್ ಮರ್ರೆ. ಅಡ್ಕಿ, ಬೊಂಡ್ದಂಗ್ ಮಾಡಿದ್ ರಥದ್ ಶೈಲಿ ಕಾಂಬ್ಕೆ ಖುಷಿ ಆತಿತ್ತೆ. ಒಂದ್ಸಲಾ ನಾನ್ ಎಲ್ಲಿಗೆ ಹೊಯ್ದಿ ಅಂದೇಳಿ ನಂಗೆ ಗೊತ್ತಾಯ್ಲ್ಯೆ..ನಾಗಮಂಡಲದ ಚಪ್ಪರ ಇತ್, ನಮ್ ಕೊಲ್ಲೂರ್ ಕೊಡಚಾದ್ರಿ ಬೆಟ್ಟ ಇತ್, ಕಂಬಳ ಗೆದ್ದಿ ಇತ್, ದೊಡ್ಡ್ ದೊಡ್ ದನಗಳಿದ್ದೊ. ಕೃಷಿ ಮೇಳ ಅಂತೂ ನುಡಿಸಿರಿಂಗೆ ಜೋಡ್ಸಕಂಡದ್ ರೈತ್ರಿಗೆ, ಮಕ್ಳಿಗೆ ಒಳ್ಳೆದಾಯ್ತ್.
ಅದನ್ ಮುಗ್ಸಿ ಗುಡ್ಡಿನ ಕೊರದ್ ಜಾಗದ್ ಮೇಲ್ ನಡ್ಕಂಡ್ ಹೋರ್ ಕೂಡ್ಲೆ ಪುಸ್ತಕ ಮಳಿಗೆ ಇತ್ ಮರ್ರೆ..ಪುಸ್ತಕದ್ ಮಳಿಗ್ಯಾಂಗ್ ಎಲ್ಲಾ ತರದ್ ಪುಸ್ತಕ ಇತ್. ನಾಲ್ಕಾಣಿ, ೫೦ಪೈಸಿಯಿಂದ್ ಶುರು ಆಯಿ ೫೦೦ ರೂಪ್ಯಾ ತನ್ಕ್ ಇತ್ ಮರ್ರೆ. ಹೆಚ್ಚಿನವ್ರ ಅಂತೂ ಪುಸ್ತಕ್ ಬ್ಯಾಗಂಗ್ ತುಂಬ್ಸಕಂಡ್ ಹೊತ್ ಕಂಡ್ರೆ ಮೀನ್ ತುಂಬ್ಸಕಂಡ್ ಹೋದ್ಹಂಗೆ ಇತ್ ಮರ್ರೆ. ಹೂಗಳ ಪ್ರದರ್ಶನ ಅಂತೂ ಕಾಂಬುಕೆ ಖುಷಿ ಆತಿತ್ತೆ. ಪಕ್ಕದಂಗೆ ಆಹಾರ್‌ದ್ ಅಂಗಡಿಗಳಿತ್. ಕನ್ನಡದ್ ಸಾಹಿತಿ, ಮನಸುಗಳನ್ ಬೆಸೆಯುವ ಮೋಹನ್ ಆಳ್ವರ ಕಾರ್ಯ ಯಾರಿಂದ್ಲೂ ಮಾಡೂಕೆ ಆತಿಲ್ಯ.. ಆಳ್ವಾಸ್‌ನ ವಿದ್ಯಾರ್ಥಿಗಳ್ ಮಾತ್ರ ರಾತ್ರಿ-ಹಗಲ್ ಅಂತಾ ಕಾಣ್ದೆ ಬಂದವರ ಬೇಕು ಬೇಡಗಳನ್ ಪೂರೈಸುತ್ತಿದ್ರ್ ಮರ್ರೆ..ಜೀವನ್ದಂಗ್ ಒಂದ್ ಸಲವಾರೂ ಇದನ್ ಕಾಣ್ಕೆ ಇಲ್ದಿದ್ರೆ ನುಡಿಸಿರಿಯ ವಿಶೇಷ ತಿಳ್ಕಂಬಕೆ ಆತಿಲ್ಯೆ..


ಸಾಂಸ್ಕೃತಿಕತೆಯ ವಿರಾಟ್ ಸ್ವರೂಪ: ಸಿ.ಟಿ.ರವಿ
ಕನ್ನಡಿಗರಲ್ಲಿ ಆತ್ಮವಿಶ್ವಾಸ, ಸಾಂಸ್ಕೃತಿಕ ಮನಸ್ಸು, ಒಲವನ್ನು ಮೂಡಿಸುವ ಚಿಂತನೆಯ ಸಾಂಸ್ಕೃತಿಕತೆಯ ವಿರಾಟ ಸ್ವರೂಪದ ದರ್ಶನವನ್ನು ಡಾ.ಮೋಹನ್ ಆಳ್ವ ಮೂಡಿಸಿದ್ದಾರೆ. ಸರಕಾರಿ, ಸಾಹಿತ್ಯ ಪರಿಷತ್ ನಡೆಸುವ ಸಾಹಿತ್ಯ ಸಮ್ಮೇಳನಕ್ಕಿಂತ ವಿಭಿನ್ನವಾಗಿ ಕನ್ನಡ ಮನಸುಗಳನ್ನು ಜೋಡಣೆ ಮಾಡಿದ್ದಾರೆ. ವ್ಯಕ್ತಿಯಾಗಿ ಸೃಷ್ಠಿಯ ಅನಾವರಣಗೊಳಿಸಿದ್ದಾರೆ. ಇತ್ತೀಚಿಗೆ ಸರಕಾರ ಮತ್ತು ಸಾಹಿತ್ಯ ಪರಿಷತ್‌ಗಳ ಸಮ್ಮೇಳನ ಆದ್ವಾನಗಳ ಬೀಡಾಗುತ್ತಿರುವುದು ಕಂಡು ಬರುತ್ತಿದೆ. ಕಲಿಕೆಯ ದೃಷ್ಟಿಯಿಂದ ರೂಪಿತವಾದ ಜಾನಪದ, ಸಾಹಿತ್ಯ, ಸಾಂಸ್ಕೃತಿಕತೆಯ ರೂಪವಾಗಿದೆ. ನೋಡಿದ ಕನಸನ್ನು ನನಸಾಗಿಸಲು ಸಾಮರ್ಥ್ಯವಿರಬೇಕು. ಈ ನಿಟ್ಟಿನಲ್ಲಿ ಡಾ.ಆಳ್ವ ಸಫಲವಾಗಿದ್ದಾರೆ.
---

ಡಾ.ಮೋಹನ್ ಆಳ್ವ ಭಾನುವಾರ (ಡಿ.೨೨)ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿದಾಗ ಪತ್ರಿಕೆಯೊಂದಿಗೆ ಆಡಿದ ಮನದಾಳದ ಮಾತುಗಳಿವು:
ವಿಶ್ವನುಡಿಸಿರಿಯ ಸೂಕ್ಷ್ಮತೆ ಅರಿತಾಗ ಆಡಿದ ಮಾತು-ಕೃತಿ ಒಂದುಗೂಡಿದ ಸಂತೋಷ ನನ್ನಪಾಲಿಗಾಗಿದೆ. ಸಾಹಿತ್ಯ, ಭಾಷೆ, ಮುಗ್ದಕೃಷಿಕರು, ಚಂಚಲತೆಯಿದ್ದರೂ, ಕನಸುಗಳನ್ನು ಹೊತ್ತ ಯುವಸಮೂಹ, ಜಾನಪದ ವಿದ್ವಾಂಸರು, ಕಲಾವಿದರನ್ನು ಕಂಡಾಗ ನುಡಿಸಿರಿಯ ಸಾರ್ಥಕತೆಯ ನೆನೆದು ಮನಸ್ಸಿಗೆ ನೆಮ್ಮದಿಯ ಭಾವ ಮೂಡಿದೆ. ನುಡಿಸಿರಿಯ ಕುರಿತು ಮುಂದಿನ ೧೫ ದಿನಗಳಲ್ಲಿ ಸಮಿತಿಯವರೊಂದಿಗೆ ಚರ್ಚಿಸಲಾಗುವುದು. ಗೌಜಿ-ಗಮ್ಮತ್‌ನ ವೈಭವೀಕರಣ ಸಾಧ್ಯವಿಲ್ಲ. ನುಡಿಸಿರಿ-ವಿರಾಸತ್‌ನ್ನು ಕೊಂಡೊಯ್ಯುವ ಪರಿಕಲ್ಪನೆಯನ್ನು ಗಂಭೀರವಾಗಿ ಆಲೋಚನೆ ಮಾಡುವ ಅಗತ್ಯವಿದೆ.
ಬಂಡಾಯವೆನ್ನುವ ಮಾತು ಬೇಸರ ತಂದಿದೆ:
ಬರಗೂರು ರಾಮಚಂದ್ರ ಅವರ ಮಾತಿನ ಬಗ್ಗೆ ನನಗೆ ಸಂಶಯವಿದೆ. ಅವರ ವಿಚಾರಗಳು ಬೇರೆಯಾದರೂ, ವೈಯಕ್ತಿಕವಾಗಿ ಅವರೊಂದಿಗೆ ನನ್ನ ಬಾಂಧವ್ಯ ಚೆನ್ನಾಗಿದೆ. ನುಡಿಸಿರಿ ಪ್ರಾರಂಭಿಸಿದ ದಿನದಿಂದಲೂ ಅವರೊಂದಿಗೆ ದೂರವಾಣಿ ಸಂಪರ್ಕ ನಿರಂತರವಾಗಿತ್ತು. ಅವರೇ ಹುಟ್ಟುಹಾಕಿದ ನುಡಿಸಿರಿಯ ಕುರಿತು ಬಂಡಾಯವೆನ್ನುವ ಮಾತುಗಳಿಂದ ಬೇಸರವಾಗಿದೆ. ಕನ್ನಡ ಮನಸುಗಳನ್ನು ಒಂದುಗೂಡಿಸುವ ಚಿಂತನೆಗಳಾಗಬೇಕೆ ಹೊರತು ಬಂಡಾಯವೆನ್ನುವ ಮಾತು ಸರಿಯಲ್ಲ.
೧೫ದಿನದಲ್ಲಿ ಕನ್ನಡ ಭವನಕ್ಕೆ ಶಂಕುಸ್ಥಾಪನೆ:
ಯುವಪೀಳಿಗೆಗೆ ಒತ್ತು ನೀಡುವ ನಿಟ್ಟಿನಲ್ಲಿ ನುಡಿಸಿರಿ-ವಿರಾಸತ್ ಮುಂದುವರಿಯಲಿದೆ. ಪ್ರಶಸ್ತಿಗಳನ್ನು ನೀಡುವ ಕುರಿತ ಚಿಂತನೆ ನಡೆಸಲಾಗುವುದು. ಪ್ರಾರಂಭದ ೨೦೦೩ರ ನುಡಿಸಿರಿ ಹಾಗೂ ವಿಶ್ವ ನುಡಿಸಿರಿಯಲ್ಲಿ ಬಹಳಷ್ಟು ವ್ಯತ್ಯಾಸಗಳಾಗಿವೆ. ಸ್ವರಾಜ್ ಮೈದಾನವನ್ನು ರಕ್ಷಣೆ ಮಾಡಿದ್ದು ಮಾತ್ರವಲ್ಲದೆ ಪಕ್ಕದಲ್ಲಿಯೇ ೧ ಎಕ್ರೆ ಭೂಮಿಯನ್ನು ಖರೀದಿಸಿದ್ದು, ಕನ್ನಡ ಭವನಕ್ಕೆ ಮುಂದಿನ ೧೫ದಿನದೊಳಗೆ ಪಂಚಾಂಗ ಹಾಕಲಾಗುವುದು. ಇದು ಆಳ್ವಾಸ್‌ನ ಭಾಗವಾಗಿ ಸಾರ್ವಜನಿಕ ವಲಯವಾಗಿ ಕಂಗೊಳಿಸಲಿದೆ.





ಹಿಂದೂ ಸಮಾಜಕ್ಕಿದು ಕಂಟಕ -`ಪ್ರೀತಿಯ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳ ಮತಾಂತರ-ಜಿಹಾದಿಗಳ `ಲವ್‌ಜಿಹಾದ್'
(ಕರಾವಳಿಯ ಯಾವುದೇ ಹಿಂದೂ ಯುವತಿಯಲ್ಲಿ ಜಿಹಾದಿಗಳ ಉಪಟಳಕ್ಕೆ ಸಿಲುಕಿದ್ದಿರಾ ಎಂದು ಕೇಳಿದರೂ ಆಕೆಯಿಂದ ಉತ್ತರದ ಹೊರತಾಗಿ ಕಣ್ಣೀರು, ಮೌನ ಅಹುದು ಎನ್ನುತ್ತದೆ..ಇದು ಕರಾವಳಿಯ ಘೋರ ಸತ್ಯ)
ಜಾತ್ಯಾತೀತತೆಯ ಬಹು ಸಂಖ್ಯಾತ ಹಿಂದುಸ್ಥಾನದಲ್ಲಿ ಹಿಂದುಗಳ ರಕ್ಷಣೆಯೊಂದಿಗೆ ಅಖಂಡ ಭಾರತ ನಿರ್ಮಾಣದ ಕನಸ್ಸು ಹೊತ್ತ ಹಿಂದೂ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ.  ಕರಾವಳಿ ಭಾಗದಲ್ಲಿ ಹಿಂದುಗಳ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಕುದ್ರೋಳಿ ಗೋಕರ್ಣನಾಥೇಶ್ವರ, ಮಂಗಳಾದೇವಿ, ಕದ್ರಿ ಶ್ರೀ ಮಂಜುನಾಥೇಶ್ವರ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಉಡುಪಿ ಶ್ರೀ ಕೃಷ್ಣ ದೇವಾಲಯ, ಕೊಲ್ಲೂರು ಮೂಕಾಂಬಿಕೆ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ, ಆನೆಗುಡ್ಡೆ ಶ್ರೀ ಮಹಾಗಣಪತಿ..ಹೀಗೆ ಹಲವು ದೇವಾಲಯಗಳಿಂದ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳು ಮೇಳೈಸುತ್ತಿವೆ. ವೀರೇಂದ್ರ ಹೆಗ್ಗಡೆ, ಪೇಜಾವರ ಶ್ರೀಗಳು, ಓಡಿಯೂರು ಶ್ರೀ ಗುರುದೇವಾನಂದ ಅನೇಕ ಸ್ವಾಮೀಜಿಗಳು ಹಿಂದೂ ಧರ್ಮದ ಸಾರವನ್ನು ಪ್ರವಚನ ರೂಪದಲ್ಲಿ ಸಾರುತ್ತಿರುವ ಕರಾವಳಿಯಲ್ಲಿ ಹಿಂದೂಗಳಿಗೆ ಕಂಟಕವಾಗಿತ್ತಿರುವ ಸನ್ನಿವೇಶಗಳು ಇತ್ತಿಚಿನ ದಿನಗಳಲ್ಲಿ ವರದಿಯಾಗುತ್ತಿವೆ.
ದೇಶದ ಗಡಿಸಮಸ್ಯೆ, ಹಿಂದುಗಳ ಮೇಲಿನ ನಿತ್ಯನಿರಂತರ ಆಕ್ರಮಣ, ದೇಶದೊಳಗೆ ಅಕ್ರಮ ನುಸುಳುವಿಕೆ, ಮತಾಂತರ, ಗೋಹತ್ಯೆಗಳಂಥ ಸಮಸ್ಯೆಗಳಿದ್ದರೂ, ಮುಖ್ಯವಾಗಿ ಹಿಂದು ಸಮಾಜವು ಲವ್‌ಜಿಹಾದ್ ಎನ್ನುವ ಮುಸ್ಲಿಂ ಯುವಕರ ಸಂಚಿಗೆ ಆತಂಕವನ್ನೆದುರಿಸುತ್ತಿದೆ. ಎಂತಹ ಸಮಸ್ಯೆಗಳು ಎದುರಾದರೂ, ಅದನ್ನು ಸಲೀಸಾಗಿ ನಿರ್ನಾಮ ಮಾಡುತ್ತೇವೆ ಎನ್ನುವ ದೃಢಸಂಕಲ್ಪದೊಂದಿಗೆ ಅಸಂಖ್ಯಾತ ಹಿಂದು ಬಾಂಧವರು ಸ್ವಾರ್ಥಪೇಕ್ಷೆಯಿಲ್ಲದೇ, ತಮ್ಮ ಜೀವನವನ್ನು ಮುಡುಪಾಗಿಟ್ಟು ಅವಿರತ ಶ್ರಮಿಸುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಹಿಂದೂ ಸಮಾಜ ಸುರಕ್ಷೆಯಾಗಿರಬೇಕು ಎನ್ನುವ ಉದ್ದೇಶದಿಂದ ಶ್ರಮಿಸುತ್ತಿರುವ ಬಂಧುಗಳು ಒಂದೆಡೆಯಾದರೆ, ಇಂತಹ ಸಮಾಜದಲ್ಲಿ ಕ್ರಿಮಿಗಳಂತೆ ಪ್ರಗತಿಪರ ಚಿಂತಕರು, ಬುದ್ಧಿವಿಹೀನರಾದ ಬುದ್ದಿಜೀವಿಗಳು, ಎಡಪಂಥೀಯ ಎಡಬಿಡಂಗಿ ಹಿಂದುಗಳಿಂದಲೇ ಆತಂಕವುಂಟಾಗುತ್ತಿದೆ. ಆದರೆ ಕರಾವಳಿಯ ಇತ್ತೀಚಿನ ಘಟನೆ ಪರಾಮರ್ಶಿಸಿದಾಗ ಇದಕ್ಕಿಂತಲೂ ಆತಂಕಕಾರಿ ಬೆಳವಣಿಗೆಯೆನ್ನುವಂತೆ, ಹಿಂದು ಸಮಾಜದ ಭಗಿನಿಯರಿಂದಲೇ ಹಿಂದು ಸಮಾಜಕ್ಕೆ ಮಸಿ ಬಳಿಯುವಂತ ಕಾರ್ಯವಾಗುತ್ತಿದೆಯೆನೋ ಎನ್ನುವ ಸಂಶಯ ಮನದ ಮೂಲೆಯಲ್ಲಿ ಹುಟ್ಟಿಕೊಳ್ಳುತ್ತಿದೆ.
ಸಮಾಜ, ಸುರಕ್ಷೆಯ ಪ್ರಶ್ನೆ ಬಂದಾಗ ದೂರದೃಷ್ಠಿತ್ವ-ದೃಢ ನಿರ್ಧಾರದ ಅಗತ್ಯತೆಯನ್ನು ಪ್ರತಿಯೊರ್ವರು ಮನಗಾಣುತ್ತಾರಾದರೂ, ಕಾರ್ಯರೂಪಕ್ಕೆ ತರುವಲ್ಲಿ ಮಾತ್ರ ವಿಳಂಭ ನೀತಿ. ನಿತ್ಯ ನಿರಂತರವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಸಂಭವಿಸಿದಾಗ ನಿರ್ಧಾರ ಕೈಗೊಳ್ಳುವಂತಹ ಅಧಿಕಾರ ಮಹಿಳೆಯರಿಗೆ ಸಿಗುವಂತಾಗಬೇಕು ಎನ್ನುವ ಕೂಗು ಮಹಿಳಾ ಸಂಘಟನೆಗಳಿಂದ ಕೇಳಿಬರುತ್ತದೆ. `ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ' ಎನ್ನುವ ಮಾತಿನಂತೆ ಎಲ್ಲಿ ಮಹಿಳೆಗೆ ಗೌರವ, ಮರ್ಯಾದೆ ಸಿಗುತ್ತದೆಯೋ ಅಲ್ಲಿ ದೇವತೆಗಳು ನೆಲೆಯಾಗುತ್ತಾರೆ ಎಂದು ಹಿಂದೂ ಸಮಾಜ ಬಹು ಹಿಂದಿನಿಂದಲೂ ನಂಬಿಕೊಂಡು, ಅದನ್ನು ಪಾಲಿಸುತ್ತಾ (ಅಪವಾದಕ್ಕೆ ಕೆಲವೊಂದು ಘಟನೆಗಳನ್ನು ಹೊರತು ಪಡಿಸಿ)ಬಂದಿದೆ. ಪ್ರಜಾಪ್ರಭುತ್ವದಲ್ಲಿ ಹೆಣ್ಣಿಗೆ ಗೌರವ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಪುರುಷ ಸಮಾಜ ಸಹಕಾರ ನೀಡುತ್ತಿದ್ದರೂ, ಹೆಣ್ಣು ಮಕ್ಕಳೇ ಎಡವುತ್ತಿದ್ದಾರೆ ಎನ್ನುವ ಆತಂಕ.
ರಾಜ್ಯದಲ್ಲಿ ೨೦೦೯ರಿಂದ ೨೦೧೧ರವರೆಗೆ ಸುಮಾರು ೨೪,೦೦೦ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ ಎನ್ನುವ ವರದಿ ಪ್ರಕಟಗೊಂಡಿದೆ. ಇಲ್ಲಿನ ಪ್ರಕರಣಗಳಲ್ಲಿ ಶೇ.೭೫ರಷ್ಟು ಮುಗ್ದ ಹೆಣ್ಣುಮಕ್ಕಳು ರಾಕ್ಷಸರ ಕೈಗೆ ಸಿಕ್ಕಿದ್ದಾದರೂ, ಉಳಿದಂತೆ ಶೇ.೨೫ರಷ್ಟು ಹೆಣ್ಣು ಮಕ್ಕಳು ತಾವಾಗಿಯೇ ಹೋಗಿ ರಕ್ಕಸರ ಕೈಯಲ್ಲಿ ಸಿಕ್ಕಿ ಅಲ್ಲಿಂದ ಹೊರಬರಲಾಗದೇ ಒದ್ದಾಡುತ್ತಿದ್ದಾರೆ. ಹಿಂದು ಸಮಾಜದಲ್ಲಿ ಹೆಣ್ಣಿಗೆ ಮಾನ್ಯತೆ, ಸ್ವ-ನಿರ್ಧಾರ ಕೈಗೊಳ್ಳುವಂತ ವಿಫುಲ ಅವಕಾಶವಿದ್ದು, ಅದುವೇ ಮಾರಕವಾಯಿತೇ? ಹಿಂದೂ ಸಮಾಜದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಲವ್‌ಜಿಹಾದ್ ಎನ್ನುವ ಗುಣಪಡಿಸಲಾಗದ ವೈರಸ್ ಮಾರಕವಾಗಿ ಪರಿಣಮಿಸುತ್ತಿದೆ. ಮತಾಂಧ ಮುಸಲ್ಮಾನರ ಕಪಿಮುಷ್ಠಿಯಲ್ಲಿ ಸಿಕ್ಕಿಕೊಳ್ಳುವ ಮುಗ್ದ ಹೆಣ್ಣು ಮಕ್ಕಳ ಲವ್‌ಜಿಹಾದ್ ಎನ್ನುವ ವ್ಯಾದಿಯನ್ನು ಬುಡಸಮೇತ ಕಿತ್ತೊಗೆಯಲು `ಆಂಟಿ ವೈರಸ್'ನ್ನು ಹಿಂದು ಸಂಘಟನೆಗಳು ನಿರ್ಮಾಣ ಮಾಡುತ್ತಿವೆ. ಇಷ್ಟೆಲ್ಲಾವಿದ್ದರೂ ಲವ್‌ಜಿಹಾದ್ ವಿರುದ್ದದ ಪರಿವಾರ ಸಂಘಟನೆಗಳ ತಂತ್ರವನ್ನೆ ವಿಫಲಗೊಳಿಸುವ ಯತ್ನಗಳು ಹಿಂದು ಹೆಣ್ಣು ಮಕ್ಕಳಿಂದಾಗುತ್ತಿದೆಯೇ ಎನ್ನುವ ಅನುಮಾನ.
ಕಳೆದೆರಡು ತಿಂಗಳ ಹಿಂದೆ ದೇರಳಕಟ್ಟೆಯ ವೈದ್ಯಕೀಯ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತನೆನಿಸಿಕೊಂಡವ ಎರಡು ಮಕ್ಕಳ ತಂದೆ ಕೇರಳದ ಹಂಬಲ್ ಮೊಹಮ್ಮದ್ ಸಮಾಜದಲ್ಲಿ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗಿರುವ ಎಂಟು ಮಂದಿ ಥರ್ಡ್‌ಕ್ಲಾಸ್‌ಗಳೊಂದಿಗೆ ಸೇರಿ ಆಕೆಯನ್ನು ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸಿರುವ ಸಂಗತಿ ಎಲ್ಲರಿಗೂ ತಿಳಿದಿರುವ ಸತ್ಯ. ಘಟನೆ ನಡೆದಂದಿನಿಂದ ಹಿಂದು ಸಂಘಟನೆಗಳು ಹೆಣ್ಣು ಮಗಳಿಗೆ ನ್ಯಾಯ ಒದಗಿಸಲು ಹಲವು ಪ್ರತಿಭಟನೆಗಳನ್ನು ನಡೆಸಿದ್ದಾಗಿಯೂ, ಪ್ರಗತಿಪರ ಬುದ್ದಿಜೀವಿಗಳು, ಎಡಪಂಥೀಯ ಪತ್ರಕರ್ತರು ಆರೋಪಿಗಳ ಪರವಾಗಿದ್ದು, ಪ್ರಕರಣವನ್ನು ಕೇವಲ ಕರಾವಳಿಗಷ್ಟೆ ಸೀಮಿತವಾಗುವಂತೆ ನೋಡಿಕೊಂಡಿದ್ದರು. ಈ ಮೂಲಕ ತಾವು ಎಂಜಲು ಕಾಸಿಗೆ ಆಸೆ ಪಡುತ್ತಿರುವವರು ಎನ್ನುವ ನೈಜ ಬುದ್ಧಿಯನ್ನು ತೋರ್ಪಡಿಸಿದ್ದರು. ಪ್ರಕರಣ ನಡೆದು ಕೇವಲ ೧೫ ದಿನಗಳಲ್ಲಿ ಉಡುಪಿಯಲ್ಲಿ ಮತ್ತೊಂದು ಲವ್‌ಜಿಹಾದ್ ಪ್ರಕರಣ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬಿತ್ತರಗೊಂಡಿತ್ತು. ಉಡುಪಿಯ ಪ್ರತಿಷ್ಠಿತ ಕಾಲೇಜಿನ ನಾಯಕ್ ಕುಟುಂಬದ ವಿದ್ಯಾರ್ಥಿನಿ, ಕಟಪಾಡಿಯ ಮುಹಮ್ಮದ್ ಯಾಸೀರ್ ಎನ್ನುವ ಅಬ್ಬೆಪಾರಿಯೊಂದಿಗೆ ಪ್ರೇಮಾಂಕುರವಾಗಿತ್ತು. ಅವರಿಬ್ಬರ ನಡುವೆ ಪ್ರೇಮಕ್ಕಿಂತ ಕಾಮವೇ ಅತಿಯಾಗಿ ತಂದೆ ತಾಯಿಗೂ ತಿಳಿಯದಂತೆ, ಲಾಡ್ಜ್‌ನಲ್ಲಿ ಉಳಿದುಕೊಂಡು ತನ್ನ ದೇಹಸಿರಿಯನ್ನು ಅಬ್ಬೆಪಾರಿಗೆ ಒಪ್ಪಿಸಿದ್ದು, ಮಾತ್ರವಲ್ಲದೇ ಅಶ್ಲೀಲ ಭಂಗಿಯಲ್ಲಿ ಚಿತ್ರ ತೆಗೆಸಿಕೊಂಡಿದ್ದರು. ಎರಡು ಕೈ ಸೇರಿದಾಗ ಚಪ್ಪಾಳೆಯಾಗುತ್ತದೆಯೇ ವಿನಃ ಒಂದು ಕೈಯನ್ನು ಬೀಸಿದಾಗ ಅದು ಚಪ್ಪಾಳೆಯಾಗುವುದಿಲ್ಲ. ಯಾವುದೇ ಗಂಡು ಹೆಣ್ಣಿನ ಒಪ್ಪಿಗೆಯಿಲ್ಲದೇ ದೈಹಿಕ ಸಂಪರ್ಕ, ಮುದ್ದಾಡುವ ಸ್ಥಿತಿಯಲ್ಲಿ ಫೋಟೊ ತೆಗೆಯಲು ಸಾಧ್ಯವಾಗುವುದಿಲ್ಲ ಎನ್ನುವ ಸತ್ಯ ಎಲ್ಲರಿಗೂ ತಿಳಿದಿದೆ. ಆ ಭಾವಚಿತ್ರವೇ ಹೆಣ್ಣಿಗೆ ಮಾರಕವಾಗುತ್ತದೆ ಎನ್ನುವ ಸತ್ಯ ಅರಿಯುವ ಮೊದಲು ಪರಿಸ್ಥಿತಿ ಕೈಮೀರಿತ್ತು. ಉಡುಪಿಯಲ್ಲಿಯೂ ಸಿನಿಮಿಯ ರೀತಿಯಲ್ಲಿ ಭಾವಚಿತ್ರವನ್ನು ಮುಂದಿಟ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದ ಆಕೆಯ ಪ್ರಿಯತಮ. ಮೊದಲಿಗೆ ಮೂರು ಲಕ್ಷವನ್ನು ಪಡೆದು ನಂತರ ೧೦ಲಕ್ಷಕ್ಕೆ ಬೇಡಿಕೆಯಿಟ್ಟಾಗ ಪೋಷಕರು ಹಣ ನೀಡಲು ನಿರಾಕರಿಸಿದ್ದರು. ಆ ಚಿತ್ರವನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿ, ಹುಡುಗಿಯ ಕುಟುಂಬಿಕರ ಮಾನ ಹರಾಜಾಗಿತ್ತು.
ಇದಾಗಿ ವಾರ ಕಳೆಯುವುದರೊಳಗೆ ಮಂಗಳೂರಿನಲ್ಲಿ ಒಂದೇ ದಿನದಲ್ಲಿ ಎರಡು ಘಟನೆ ವರದಿಯಾಗಿತ್ತು. ನಗರದ ಪ್ರತಿಷ್ಠಿತ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿರುವ ಹಿಂದು ಹುಡುಗಿ, ವೃತ್ತಿಯಲ್ಲಿ ಚಾಲಕನಾಗಿರುವ ಮುಸ್ಲಿಂ ಯುವಕನ ಜೊತೆ ಲಾಡ್ಜ್‌ನಲ್ಲಿ ಸಿಕ್ಕಿಹಾಕಿಕೊಂಡು, ಒಪ್ಪಂದದ ಮೂಲಕ ಅವರನ್ನು ಕಳುಹಿಸಿದ್ದರು. ಇನ್ನೊಂದೆಡೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಬ್ಬರು ಸಿಕ್ಕಿಕೊಂಡಿದ್ದರು. ರಾಷ್ಟ್ರೀಯ ಚಿಂತನೆಯನ್ನು ಹೊತ್ತ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯರ ತಮ್ಮನ ಮಗಳು, ಬಜ್ಪೆಯ ಮುಸ್ಲಿಂ ಯುವಕನೊಂದಿಗೆ ಬೀಚ್‌ನಲ್ಲಿ ಅಶ್ಲೀಲವಾಗಿ ವರ್ತಿಸುತ್ತಿದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಸಿಕ್ಕಿದ್ದರು. ಇದು ಕೇವಲ ವರದಿಯಾದ ಘಟನೆಗಳಾದರೆ, ವರದಿಯಾಗದ ಅದೆಷ್ಟೊ ಘಟನೆಗಳು ಸಮಾಜದಲ್ಲಿ ನಡೆಯುತ್ತಿದೆ ಎಂದಾಗ ಹಿಂದು ಸಮಾಜಕ್ಕೆ ಆತಂಕವಾಗದೇ ಉಳಿದಿತೇ?
ಲವ್‌ಜಿಹಾದ್‌ನ ಕುರಿತು ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡುತ್ತಿದ್ದರೂ, ಹಿಂದೂ ಹೆಣ್ಣು ಮಕ್ಕಳು ಅದನ್ನು ಲೆಕ್ಕಿಸದೇ, ಅಹಂಕಾರದಿಂದ ವರ್ತಿಸಿ ಪ್ರೀತಿಯೊಂದಿಗೆ ಶೀಲವನ್ನು ಕಳೆದು ಕೊಳ್ಳುವುದಕ್ಕೂ ಮುಂದುವರಿಯುತ್ತಾರೆ ಎಂದಾಗ ಎಡವಿದ್ದು ಯಾರು? ಎನ್ನುವ ಪ್ರಶ್ನೆ ಉದ್ಬವವಾಗುತ್ತದೆ. ಸಂಸ್ಕಾರದ ಕುರಿತು ವೇದಿಕೆಯಲ್ಲಿ ಗಂಟೆ ಗಟ್ಟಲೇ ಹಿತೋಪದೇಶ ನೀಡಿದಾಗಲೂ, ಸಂಸ್ಕಾರವಿಹೀನರಾಗಿ ಲವ್‌ಜಿಹಾದ್ ಎನ್ನುವ ಮಾಹೆಯಲ್ಲಿ ಬೀಳುತ್ತಿದ್ದಾರಲ್ಲ? ಪ್ರೀತಿಯ ಹೆಸರಿನಲ್ಲಿ ಹೆಣ್ಣಿಗೆ ಅಮೂಲ್ಯವಾದ ಶೀಲಕ್ಕೆ ಕೊಡಲಿಯೇಟು ಹಾಕಿಕೊಳ್ಳುವುದು ಮಾತ್ರವಲ್ಲದೇ ಸಮಾಜದಲ್ಲಿ ತಂದೆ-ತಾಯಿ, ಬಂಧು-ಬಳಗ ತಲೆ ತಗ್ಗಿಸುವಂತಾ ಹೀನ ಕಾರ್ಯಕ್ಕೆ ಮುಂದಾಗುತ್ತಿರುವ ಹಿಂದೂ ಸಹೋದರಿಯರೂ ಇದರಿಂದ ಸಾಧಿಸುವುದಾದರೂ ಏನು ಎನ್ನುವ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ.
ಪ್ರೀತಿ ಮಾಡುವುದು ತಪ್ಪಲ್ಲ. ಪ್ರೀತಿ ಮಾಡುವಾಗ ಜಾತಿ, ಧರ್ಮ, ಮತ, ಅಂತಸ್ತು ಅಡ್ಡಿಯಾಗುವುದಿಲ್ಲ ಎನ್ನುವ ಮಾತುಗಳನ್ನಾಡುತ್ತಾರೆ. ಆದರೆ ನನ್ನ ಪ್ರಕಾರ ನಿಜವಾದ ಪ್ರೀತಿಯಲ್ಲಿ ತ್ಯಾಗವೇ ಅಧಿಕವಾಗಿರುತ್ತದೆ. ಪ್ರೀತಿಸಿದ ಹೆಣ್ಣಿನ ದೇಹದ ಸಿರಿಯನ್ನು ಅನುಭವಿಸುವ ಚಪಲವಿರುವುದಿಲ್ಲ. ಮುಸ್ಲಿಂ ಯುವಕರು ಇಂತಹ ಪ್ರೀತಿಯನ್ನು ನಡೆಸಿ, ತಿಂಗಳು ಕಳೆಯುವುದರೊಳಗೆ ಯುವತಿಯ ದೇಹಸಿರಿಯ ಅನುಭವಿಸಿ, ಅದನ್ನು ಚಿತ್ರಿಕರಿಸುವ ಹಿಂದಿರುವ ಕುತಂತ್ರವೇನು? ಈ ರೀತಿ ಲವ್ ಮಾಡಿ ಪಾರ್ಕ್, ಬೀಚ್‌ಗಳಲ್ಲಿ ಸುತ್ತಾಡುತ್ತಾ ಕಿಸ್ ಮಾಡುವುದನ್ನು ಅಥವಾ ಆಕೆಯನ್ನು ತೊಡೆಯ ಮೇಲೆ ಮಲಗಿಸಿಯೋ, ಈತನೇ ಮಲಗಿಯೋ ಫೋಟೊ ಕ್ಲಿಕ್ಕಿಸಿಕೊಂಡಾಗ ಅದುವೇ ಬ್ಲ್ಯಾಕ್‌ಮೇಲ್ ಮಾಡುವುದಕ್ಕೆ ಸಹಕಾರಿ ಎನ್ನುವುದನ್ನು ಜಿಹಾದಿಗಳು ಅರಿತುಕೊಂಡಿರುತ್ತಾರೆ. ಆದರೆ ಹಿಂದೂ ಹೆಣ್ಣು ಮಕ್ಕಳು ಕುರುಡು ಪ್ರೀತಿಯ ಗುಂಗಿನಲ್ಲಿ ಸಿಲುಕಿರುತ್ತಾರೆ. ಪ್ರೀತಿಸಿ ಮದುವೆಯಾದ ನಂತರದಲ್ಲಿ ಆಕೆಯನ್ನು ಜಿಹಾದಿ ನಿಜವಾಗಿ ಪ್ರೀತಿಸಿದ್ದೆ ಆದರೆ ಆಕೆಗೆ ಕಡ್ಡಾಯವಾಗಿ ಬುರ್ಖಾ ಧರಿಸಬೇಕು? ಹಿಂದೂ ದೇವಸ್ಥಾನಕ್ಕೆ ತೆರಳಬಾರದು? ಎಂದು ಕಟ್ಟಪ್ಪಣೆ ಮಾಡುವುದಾದರೂ ಯಾಕೆ? ಆದರೆ ಕರಾವಳಿಯಲ್ಲಿ ನಡೆಯುತ್ತಿರುವ ಘಟನೆಯಲ್ಲಿ ಪ್ರೀತಿಗಿಂತ ಜಿಹಾದ್‌ನ ಹೆಸರಿನಲ್ಲಿ ಹಿಂದು ಹೆಣ್ಣು ಮಕ್ಕಳನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಮತಾಂತರ ಮಾಡುತ್ತಿದ್ದಾರೆ. ಉಡುಪಿಯ ಶಿರ್ವದಲ್ಲಿ ಬಸ್‌ನಲ್ಲಿ ಸಂಚರಿಸುತ್ತಿದ್ದ ೧೩ ವರ್ಷದ ಹಿಂದೂ ಹೆಣ್ಣಿನ ಮೈ ಮೇಲೆ ಹಾಡಹಗಲೇ ಕೈಹಾಕುವ ಮುಸ್ಲಿಂ ವ್ಯಕ್ತಿಯ ವಯಸ್ಸು ಮಾತ್ರ ಕೇವಲ ೫೬ ಎಂದಾಗ ಎಲ್ಲರಿಗೂ ಆಶ್ಚರ್ಯವಾಗುತ್ತದೆ.
ಶಿಕ್ಷಣ ಕಾಶಿ ಕರಾವಳಿಗೆ ಹಲವು ಜಿಲ್ಲೆಗಳಿಂದ, ರಾಜ್ಯಗಳಿಂದ ವಿದ್ಯಾರ್ಜನೆಗೆ ಬರುತ್ತಾರೆ. ಪೋಷಕರನ್ನು ಬಿಟ್ಟು ಬರುವ ಹೆಣ್ಣು ಮಕ್ಕಳು ಸುರಕ್ಷಿತವಾಗಿ ವಿದ್ಯೆ ಕಲಿಯಲು ಸಾಧ್ಯವೇ ಎಂದಾಗ ಅನುಮಾನದ ಉತ್ತರ ನೀಡ ಬೇಕಾಗುತ್ತದೆ. ಕಾರಣ ಇಲ್ಲಿನ ಹಾಸ್ಟೆಲ್‌ಗಳು ಕೂಡ ಸುರಕ್ಷಿತವಾಗಿಲ್ಲ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಬೈಲ್ ಅಂಗಡಿಗಳು ಹೆಚ್ಚಾಗಿ ಮುಸ್ಲಿಂ ಯುವಕರದ್ದೆ. ಇಲ್ಲಿ ರಿಚಾರ್ಜ್ ಮಾಡುವಾಗ ಹೆಣ್ಣು ಮಕ್ಕಳ ನಂಬರ್ ತೆಗೆದುಕೊಂಡು, ಅದರ ಮಾಹಿತಿ ಇನ್ನೊರ್ವರಿಗೆ ತಿಳಿಯದಂತೆ ಎಚ್ಚರವಹಿಸಬೇಕಾಗಿದ್ದು, ಮಾಲಿಕನ ಕರ್ತವ್ಯವಾದರೂ, ಅದನ್ನು ಮರೆತು ಇತರರ ಕೈಸೇರುವಂತೆ ಮಾಡುತ್ತಾನೆ. ಈ ವಿಷಯ ಪೊಲೀಸರು ತಿಳಿದರೂ, ಆ ಕುರಿತು ನಿರ್ಲಕ್ಷ್ಯ. ಈ ಎಲ್ಲಾ ಪರಿಸ್ಥಿತಿಗಳಿಂದ ಹೆಣ್ಣನ್ನು ಹೊತ್ತ ಪೋಷಕರು ಭಯದಿಂದ ಕಾಲಕಳೆಯುವಂತ ಸ್ಥಿತಿ. ಮಂಗಳೂರು ಕೇಂದ್ರದಿಂದ ಕಾಸರಗೋಡು ಅಥವಾ ಮಂಜೇಶ್ವರಕ್ಕೊ, ಉಡುಪಿ, ಮಣಿಪಾಲದ ಕಡೆಗೊ ಹಾಗೂ ಮೂಡಬಿದ್ರೆ, ಕಾರ್ಕಳದ ಕಡೆಗೊ ದಿನಂಪ್ರತಿ ಸಂಚರಿಸುವ ಅಕ್ಕಂದಿರನ್ನೊ, ತಂಗಿಯರನ್ನೊ, ಮಾತೆಯರನ್ನೊ ಒಮ್ಮೆ ತೆರೆದ ಮನಸ್ಸಿನಿಂದ ಕೇಳಿ ನೋಡಿ..ಜಿಹಾದಿಗಳ ಕೀಟಲೆಗೆ ತುತ್ತಾಗಿದ್ದಿರೇ? ಎಂದಾಗ ಅವರ ಕಣ್ಣಿನಲ್ಲಿ ನೀರು ಬಿಟ್ಟರೆ ಬಾಯಿಯಿಂದ ಇಲ್ಲವೆನ್ನುವ ಉತ್ತರ ಬರಲು ಸಾಧ್ಯವಿಲ್ಲ ಬಂಧುಗಳೇ.
ಪ್ರತಿದಿನ, ಪ್ರತಿಕ್ಷಣ ಹಿಂದೂ ಪೋಷಕರು ತಮ್ಮ ಮಗಳು, ಸಹೋದರಿಯರೂ ಲವ್‌ಜಿಹಾದ್‌ನಲ್ಲಿ ಸಿಲುಕಿಕೊಳ್ಳುತ್ತಾಳೋ ಎನ್ನುವ ಭಯ..ಲವ್‌ಜಿಹಾದ್ ಕರಾವಳಿಯಲ್ಲಿ ಇಲ್ಲವೆನ್ನುವುದಾದರೆ ಹಿಂದು ಯುವಕನೊರ್ವ ಮುಸ್ಲಿಂ ಯುವತಿಯೊಂದಿಗೆ ಮಾತನಾಡುತ್ತಿದ್ದಾಗ ಹತ್ತಾರು ಜಿಹಾದಿಗಳು ಅಡ್ಡಗಟ್ಟಿ ಹಲ್ಲೆ ನಡೆಸುವಂತ ಹೀನ ಪ್ರವೃತ್ತಿ ಹೆಚ್ಚುತ್ತಿರುವುದಾದರೂ ಯಾಕೆ. ಲವ್‌ಜಿಹಾದ್, ಹಲ್ಲೆಗಳು ನಡೆದಾಗ ಕರಾವಳಿಯಲ್ಲಿ ಅನೇಕ ವಿಚಾರಗೋಷ್ಠಿಗಳು, ದುಂಡು ಮೇಜಿನ ಸಭೆಗಳು ನಡೆದು, ನಿರ್ಣಯಗಳು ತೆಗೆದುಕೊಂಡರೂ, ಅವುಗಳು ವಾರ ಕಳೆಯುವುದರೊಳಗೆ ಇಲಾಖೆಯಲ್ಲಿರುವ ಹಳೆಯ ಕಡತಗಳ ಸಾಲಿಗೆ ಸೇರ್ಪಡೆಯಾಗುತ್ತಿರುವುದು ವಿಪರ್ಯಾಸ.
ಭಯದ ವಾತಾವರಣದಲ್ಲಿ ಬದುಕುತ್ತಿರುವ ಹಿಂದೂಗಳು..ಜಿಹಾದಿಗಳ ಅಟ್ಟಹಾಸ ಮುಂದುವರಿಯುತ್ತಿದ್ದು, ಗೋಮಾತೆ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗೆ ಶ್ರಮಿಸಬೇಕಾದ ಅವಶ್ಯಕತೆ ನಮ್ಮ ಕಣ್ಣಮುಂದಿದೆ. ಹಿಂದು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಲವ್‌ಜಿಹಾದ್‌ನ ಕುರಿತು ಹೆಣ್ಣು ಮಕ್ಕಳೇ ಒಕ್ಕೊರಳ ಆವಾಜ್ ಹುಟ್ಟು ಹಾಕಬೇಕಾದ ಅನಿವಾರ್ಯತೆಯಿದೆ. ಸರಕಾರ ತನ್ನ ಜವಾಬ್ದಾರಿಯನ್ನು ಮರೆತಿದ್ದು, ಅದನ್ನು ನೆನಪಿಸುವ ನಿಟ್ಟಿನಲ್ಲಿ ಹಿಂದು ಬಾಂಧವರು ಸಮಾಜದಲ್ಲಿ ಸತತವಾಗಿ ಕಾರ್ಯಾಚರಿಸುತ್ತಿದ್ದಾರೆ. ವಿಶ್ವವಂದ್ಯರಾದ ಝಾನ್ಸಿರಾಣಿ ಲಕ್ಷ್ಮಿಭಾಯಿ, ಕಿತ್ತೂರ ರಾಣಿ ಚೆನ್ನಮ್ಮಾ, ಉಳ್ಳಾಲದ ರಾಣಿ ಅಬ್ಬಕ್ಕರ ನಾಡಿನಲ್ಲಿ ಮಹಿಳೆಯ ಮೇಲಿನ ದೌರ್ಜನ್ಯದ ಕುರಿತಾಗಿರುವ ಪ್ರಶ್ನೆಗೆ ಪುರುಷ ಸಿಂಹರು ಸಾಥ್ ನೀಡುತ್ತಿದ್ದಾರೆ. ಆದರೆ ಅದನ್ನು ಅರಿಯುವ ಪ್ರಯತ್ನದಲ್ಲಿ ಕೆಲವೊಂದು ಹಿಂದೂ ಸಹೋದರಿಯರು ವಿಫಲರಾಗಿದ್ದಾರೆ.
ಹಿಂದೂ ಸಂಸ್ಕೃತಿಯಲ್ಲಿ ಮಹಿಳೆ ಮತ್ತು ಪುರುಷ ಪರಸ್ಪರ ಪರಾವಲಂಬಿಯಾಗಿದ್ದು, ಅವರಿಬ್ಬರು ಪಕ್ಷಿಯ ಎರಡು ರೆಕ್ಕೆಗಳಿದ್ದಂತೆ. ಒಂದು ರೆಕ್ಕೆ ಬಲವಿಲ್ಲದಿದ್ದರೂ, ಪಕ್ಷಿಗೆ ಹಾರಾಟ ನಡೆಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಲಿಷ್ಠ ಸಮಾಜ ನಿರ್ಮಾಣಕ್ಕೆ ಪುರುಷ-ಮಹಿಳೆ ಇಬ್ಬರೂ ಅಗತ್ಯವಿದ್ದು, ಅವರಿಬ್ಬರಲ್ಲಿ ಸಮಾನತೆ-ಆತ್ಮೀಯತೆ ಪಡಿಮೂಡಬೇಕು. ಮಹಿಳೆಯರಿಗೆ ಶಿಕ್ಷಣ ದೊರೆತಾಗ ಸಮಾಜ ಸುಧಾರಣೆ ಸಾಧ್ಯವೆಂದು ನಂಬಿ, ಮಹಿಳೆಗೆ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದು, ಅದುವೇ ಅವರಿಗೆ ಮಾರಕವಾಗಬಾರದು. ಸಮಾಜದಲ್ಲಿ ಶಾಸನ ನಂಬದಿರುವಂತ ದುಶ್ಯಾಸನರನ್ನು ಬಗ್ಗು ಬಡಿಯುವ ಕೆಲಸ ಸಂಘಟನೆಯಿಂದಾಗಬೇಕು. ಕಾನೂನಿನ ಬಿಗಿ ಭದ್ರತೆಯಿದ್ದರೆ ಹಗಲಿನಲ್ಲಿಯೂ ಭಯವಿಲ್ಲದೇ ಮಹಿಳೆ ತಿರುಗಾಡಬಹುದು. ಸಮೃದ್ಧ, ಸನಾತನ ಭಾರತ ಉಳಿಯಲು ಸಮಾಜ ದ್ರೋಹಿ ಅನ್ಯಾಯಗಳನ್ನು ಸಂಘಟನಾತ್ಮಕವಾಗಿ ಖಂಡಿಸಬೇಕು. ಹಿಂದುಗಳ ಮೇಲೆ ಹಿಂದುಗಳೇ ಆಕ್ರಮಣ ಮಾಡುವುದು ಸರಿಯಲ್ಲ. ಈ ನಿಟ್ಟಿನಲ್ಲಿ ನಾವು ಭಾರತವಾಸಿಗಳೆನ್ನುವ ಭಾವನೆ ಮರೆಯಿಸುವ, ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸುವ ರಾಜಕೀಯ ವ್ಯವಸ್ಥೆಯನ್ನು ಕಿತ್ತೊಗೆಬೇಕು. ಹಿಂದೂ ಹೆಣ್ಣುಮಕ್ಕಳು ಅಪರಿಚಿತರೊಡನೆ ಅನವಶ್ಯಕ ಮಾತನಾಡುವುದನ್ನು ಕಡಿಮೆಗೊಳಿಸಿದಾಗ ನಮ್ಮನ್ನು ರಕ್ಷಣೆ ಮಾಡಬಹುದು. ಎಚ್ಚರಿಕೆಯಿಂದ ವ್ಯವಹರಿಸಿದಾಗ ಅನರ್ಥ ಪರಂಪರೆ ತಡೆಯಬಹುದು. ವಿವೇಕಾನಂದರ ಪ್ರೇರಣೆಯಿಂದ ಬೆಳಗಬೇಕಾದ ಯುವಶಕ್ತಿಯು ಪಾಶ್ಚಾತ್ಯ ಸಂಸ್ಕೃತಿಯ ಬೆಂಬತ್ತಿ, ಅಂದಾನುಕರಣೆಯಲ್ಲಿ ತೊಳಲಾಡುತ್ತಿರುವುದರ ಕುರಿತು ಎಚ್ಚೆತ್ತುಕೊಳ್ಳಬೇಕು. ಹಿಂದೂ ಸಹೋದರಿಯರು ಲವ್‌ಜಿಹಾದ್‌ನ ಕುರಿತಾಗಿ ಸಕಾಲದಲ್ಲಿ ಎಚ್ಚೆತ್ತಾಗ ನಿಮ್ಮ ರಕ್ಷಣೆಗೆ ಪಣತೊಟ್ಟಿರುವ ನಿಮ್ಮ ಸಹೋದರರ ಕಾರ್ಯ ಫಲಪ್ರದವಾಗುವುದರಲ್ಲಿ ಸಂಶಯವಿಲ್ಲಾ...ಏನಂತಿರಾ.

Friday, 22 November 2013

ಅಂತರಂಗದಲ್ಲಿ ಕಾಮ ತುಂಬಿಕೊಂಡು ಬಾಹ್ಯದಲ್ಲಿ ರಾಮ ರಾಮ
ವೈಜ್ಞಾನಿಕತೆಯ ಗುಂಗಿನಲ್ಲಿ ಕಾಮಪಶರಾಗುವ ನೀಚರಿಂದ ಮರ್‍ಯಾದಸ್ಥರಿಗೂ ಅವಮಾನ
ಯುಕ್ತಿಯುಕ್ತಂ ಪ್ರಗೃಹ್ಣೀಯಾತ್ ಬಾಲಾದಪಿ ವಿಚಕ್ಷಣಃ/
ರವೇರವಿಷಯಂ ವಸ್ತು ಕಿಂ ನ ದೀಪಃ ಪ್ರಕಾಶಯೇತ್?//
ವಿವೇಕವಿರುವ ಯಾವುದನ್ನಾದರೂ ಯಾರಿಂದಲಾದರೂ (ಮಕ್ಕಳಿಂದಾದರೂ)ಪ್ರಾಜ್ಞರು ಸ್ವೀಕರಿಸಬೇಕು. ಸೂರ್ಯನಿಂದ ಬೆಳಗಿಸಲಾಗದ ವಸ್ತುಗಳನ್ನು ಇರುಳಿನಲ್ಲಿ ದೀಪವು ಬೆಳಗಿಸಿ ತೋರಿಸುವುದಿಲ್ಲವೇ!
ಎಂತಹ ಅರ್ಥಪೂರ್ಣ ಮಾತುಗಳಿವು. ನನಗೆ ಎಲ್ಲವೂ ತಿಳಿದಿದೆ ಎಂದು ಸಮಾಜದಲ್ಲಿ ವ್ಯಕ್ತಿಯೊರ್ವ ಮಾಡಿದ ತಪ್ಪುಗಳನ್ನೆಲ್ಲಾ ಒಪ್ಪಿಕೊಂಡು ಮೌನಮುದ್ರೆ ತಾಳಿ ಸಮಾಜದಲ್ಲಿ ನಾವಿಂದು ಅಹುದು ಅಹುದು ಎಂದು ತಲೆಯಾಡಿಸುವ ಬಸವ ನಂತಾಗಿದ್ದೇವೆಯೊ ಎನ್ನುವ ಸಂದೇಹ. ಇದಕ್ಕೆ ಪೂರಕವೆನ್ನುವಂತೆ ಅನೇಕ ಘಟನೆಗಳು ನಮ್ಮ ಕಣ್ಣಮುಂದೆ ನಡೆಯುತ್ತಿದೆ.                                                                                                     ವೈಜ್ಞಾನಿಕ  ಯುಗದಲ್ಲಿ ನಾವಿದ್ದೇವೆ ಎನ್ನುವ ಹೆಮ್ಮೆ ಒಂದೆಡೆ. ಇನ್ನೊಂದೆಡೆ ವೈಜ್ಞಾನಿಕತೆಯ ಸೋಗಿನಲ್ಲಿ ನಮ್ಮತನವನ್ನೇ ಕಳೆದುಕೊಳ್ಳುತ್ತಿದ್ದೇವೆಯೇ ಎನ್ನುವ ಆತಂಕ. ಹಿರಿಯರ ಕಾಲದಲ್ಲಿದ್ದ ಮಾನವೀಯ ಸಂಬಂಧಗಳು ಎತ್ತ ಹೋಗಿವೆ. ಸಮಾಜದಲ್ಲಿಂದು ನೀತಿ ಹೇಳುವವರು ಮಾಡುವ ಅನ್ಯಾಯಗಳ ಕುರಿತು ನಾವೆಲ್ಲಾ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಂತು ಸತ್ಯ. ಮೈಯೆಲ್ಲಾ ಕಾಮ ತುಂಬಿಕೊಂಡು ಮೇಲ್ನೋಟಕ್ಕೆ ರಾಮ ಕೃಷ್ಣ--ಗೋವಿಂದ, ಅಲ್ಲಾ, ಏಸು ಎಂದು ದೇವರ ಹೆಸರನ್ನು ಹೇಳುತ್ತಾ, ಕುತ್ತಿಗೆಯಲ್ಲಿ ಜ್ಯೋತಿಷಿಗಳು ಹೇಳಿದ ಮಾರುದ್ದದ ಮಾಲೆ ಧರಿಸಿರುತ್ತಾರೆ. ಹಣೆಯ ಮೇಲೆ ನಾಮ, ವಿಭೂತಿಗಳು ರಾರಾಜಿಸುತ್ತವೆ. ಆದರೆ ಹುಡುಗಿಯ ವಿಷಯದಲ್ಲಿ ಮಾತ್ರ ಮೂರು ಬಿಟ್ಟವರ ಥರ ಅವರ ವರ್ತನೆ.
ಯಾವುದೇ ಊರಿನಲ್ಲಿ ಉತ್ತಮ ರಾಜಕೀಯ ನಾಯಕರ ಉದಯವಾಗದಿದ್ದರೂ, ಪುಡಾರಿ ನಾಯಕರಿಗಂತೂ ಕೊರತೆಯೆನ್ನುವುದಿಲ್ಲ. ತಾವೇ ದೊಡ್ಡ ಸಂಭಾವಿತರೆನ್ನುವ ನಿಟ್ಟಿನಲ್ಲಿ ಸಮಾಜದಲ್ಲಿ ನಡೆಯುವ ಅನ್ಯಾಯಗಳಿಗೆ ಹೈಕೋರ್ಟುಗಳ ನ್ಯಾಯಾದೀಶರಂತೆ ನ್ಯಾಯ ತೀರ್ಮಾನ ಮಾಡುವ ಇವರುಗಳಿಂದಲೇ ಸಮಾಜದಲ್ಲಿ ಅತ್ಯಾಚಾರ, ಅನಾಚಾರಗಳು ನಡೆಯುತ್ತಿವೆ.
ಬಡ ಕುಟುಂಬದ ಹೆಣ್ಣುಮಕ್ಕಳು ಜೀವನದಲ್ಲಿ ಕಷ್ಟಕೋಟಲೆ ಅನುಭವಿಸುತ್ತಾ, ಟಿ.ವಿ.ಮಾಧ್ಯಮಗಳ ಪ್ರಭಾವದಿಂದ ಆದಷ್ಟು ಬೇಗ ಸಿರಿವಂತರಾಗಬೇಕು. `ಸಾಲ ಮಾಡಿಯಾದರೂ ತುಪ್ಪ ತಿನ್ನು' ಎನ್ನುವ ನಾಣ್ಣುಡಿಯಂತೆ ಮಾನ ಮರ್ಯಾದೆ, ಶೀಲ ಕಳೆದುಕೊಂಡಾದರೂ ತಾನು ಹಣಗಳಿಸಬೇಕು. ಮೈತುಂಬಾ ಬಂಗಾರದ ಒಡವೆಗಳನ್ನು ಧರಿಸಿ ಮೆರೆದಾಡಬೇಕು ಎನ್ನುವ ನೆಲೆಯಲ್ಲಿ ಮೈಮುರಿದು ದುಡಿಯಲು ಮನಸ್ಸು ಬಾರದೆ, ದೇಹವನ್ನೇ ಪರಪುರುಷನಿಗೆ ಒಪ್ಪಿಸುವ ಮಾನಸಿಕತೆ ಹೆಣ್ಣುಮಕ್ಕಳಲ್ಲಿ ಬೆಳೆಯುತ್ತಿದೆ ಎನ್ನುವುದು ಕರ್ಣ ಕಠೋರವಾದರೂ, ವಾಸ್ತವ ಸಂಗತಿ..!
ಎರಡು ಕೈ ಸೇರಿದಾಗ ಮಾತ್ರ ಚಪ್ಪಾಳೆಯಾಗುತ್ತದೆಯೇ ವಿನಃ ಒಂದು ಕೈ ಸೇರಿದರೆ ಅದು ಚಪ್ಪಾಳೆಯಾಗುವುದಕ್ಕೆ ಸಾಧ್ಯವೇ ಇಲ್ಲಾ. ಸಮಾಜದಲ್ಲಿ ಹೆಣ್ಣನ್ನು ಗುರುತಿಸುವುದು ಆಕೆ ತೊಟ್ಟ ಉಡುಗೆ ತೊಡುಗೆ, ಧರಿಸಿದ ಆಭರಣಗಳಿಂದಲ್ಲ. ಹೆಣ್ಣಿಗೆ ಶೀಲವೆ ಶೋಭೆ ಎನ್ನುವ ಮಾತು ಸರ್ವಕಾಲಕ್ಕೂ ಅನ್ವಯವಾಗುವಂತದ್ದು. ವೈಜ್ಞಾನಿಕವಾಗಿ ನಾವು ತಂತ್ರಜ್ಞಾನಗಳಿಗೆ ಹೊಂದಿಕೊಂಡು, ಅದುವೇ ನಮ್ಮ ಜೀವನವೆಂದು ಸಾಗಿದ್ದರೂ, ಹೆಣ್ಣಿನ ವಿಷಯ ಬಂದಾಗ ಆಕೆ ರೂಪವತಿಯಾಗಿಲ್ಲದಿದ್ದರೂ ಶೀಲವಂತಳಾಗಿರಬೇಕು ಎನ್ನುವ ಮಾನಸಿಕತೆ ಗಂಡು ಮಕ್ಕಳದಾಗಿರುತ್ತದೆ. ಪ್ರಸ್ತುತ ಸಮಾಜದಲ್ಲಿ ಮದುವೆಯಾದ ನವದಂಪತಿಗಳ ಮೂಹೂರ್ತ ಮುಗಿದು, ಸಭಾಭವನದಿಂದ ಹೊರಹೋಗುವ ಮೊದಲೇ ಕೋರ್ಟ್ ಮೆಟ್ಟಿಲು ಹತ್ತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಾರೆಂದರೆ ಅವರಲ್ಲಿನ ಭಿನ್ನಮತಕ್ಕೆ ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳುವ ಅಗತ್ಯವಿದೆಯಲ್ಲವೇ? ಹೆಚ್ಚಿನ ಹೆಣ್ಣುಮಕ್ಕಳ ಶೀಲ, ಚಾರಿತ್ರ್ಯಗಳ ಸತ್ಯಾಂಶ ತಿಳಿದುಕೊಂಡ ವರ ಮಹಾಶಯ ಆಕೆಯೊಂದಿಗೂ ಹಾಗೂ ವರನ ವಿಷಯ ತಿಳಿದ ವಧುವು ವಿಚ್ಛೇದನಕ್ಕೆ ಮನ ಮಾಡುತ್ತಿರುವುದು ದಾಂಪತ್ಯ ಜೀವನಕ್ಕೆ ಆವರಿಸಿಕೊಂಡ ವಿಲಕ್ಷಣತೆಯ ವೈರಸ್ ಅಂತಲ್ಲವೇ?
ದರಿದ್ರತಾ ಧೀರತಯಾ ವಿರಾಜತೇ ಕುರೂಪತಾ ಶೀಲತಯಾ ವಿರಾಜತೇ/
ಕುಭೋಜನಂ ಚೋಷ್ಣತಯಾ ವಿರಾಜತೇ ಕುವಸ್ತ್ರತಾ ಶುಭ್ರತತಾ ವಿರಾಜತೇ//
ಬಡತನದಲ್ಲಿಯೂ ಕೂಡ ಬುದ್ಧಿ ವಿವೇಕವು ಸ್ಥಿರತೆ-ಶೋಭೆ ಕೊಡುತ್ತದೆ. ಕುರೂಪವಿದ್ದರೂ ಒಳ್ಳೆಯ ನಡತೆ ಶೋಭೆ ತರುತ್ತದೆ. ಕೆಟ್ಟ ಅಡಿಗೆಯೂ ಬಿಸಿಯಾಗಿದ್ದಲ್ಲಿ ರುಚಿಸುತ್ತದೆ. ಹರಕು ಬಟ್ಟೆಯೂ ಶುಭ್ರವಾಗಿದ್ದರೆ ಶೋಭಿಸುತ್ತದೆ. ಸಮಾಜದಲ್ಲಿರುವ ವಸ್ತುಸ್ಥಿತಿಯು ನಮ್ಮ ಅಭಿರುಚಿಯ ಮೇಲಿನ ಮಾನಸಿಕತೆಯ ನೆಲೆಯಾಗಿದೆ. ಕಾಮಾತುರಾಣಾಂ ನ ಭಯಂ ನ ಲಜ್ಜಾ ಎನ್ನುವ ನಾಣ್ಣುಡಿಯಂತೆ ಕಾಮ ಅತಿಯಾದವನಿಗೆ ಭಯ, ನಾಚಿಕೆಯೆನ್ನುವುದು ಆತನ ಹತ್ತಿರಕ್ಕೆ ಸುಳಿಯುವುದಿಲ್ಲ. ಮೂರು ಬಿಟ್ಟವರಿಗೆ ನಾಚಿಕೆಯೆನ್ನುವುದಿಲ್ಲವಾದರೂ, ಇಂತಹವರಿಂದ ಮರ್‍ಯಾದಸ್ತರಿಗೂ ಮುಖವೆತ್ತಿ ನಡೆದಾಡುವುದು ಕಷ್ಟವಾಗುತ್ತಿರುವುದು ಪ್ರಸ್ತುತ ಸಮಾಜದ ದುರಂತ. ಇದನ್ನು ಯಾವುದೇ ಇಲಾಖೆ ತಡೆಯಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಬಂದಾಗ ಒಪ್ಪಿಗೆಯಿಂದ ನಡೆಯುವ ಕೆಲಸಗಳಿಗೆ ಯಾವ ಇಲಾಖೆ ಏನು ತಾನೆ ಮಾಡಲು ಸಾಧ್ಯ? ಲೇಖನದಲ್ಲಿ ಕೆಲವೊಂದು ಉದಾಹರಣೆ ನೀಡುವುದರೊಂದಿಗೆ ಸಾಮಾನ್ಯವಾಗಿರುವ ಅಂಶಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. (ಇಲ್ಲಿನ ಘಟನೆಗಳು ನಿರ್ದಿಷ್ಟವಾದ ವ್ಯಕ್ತಿಗೆ ಸೇರಿದ್ದಲ್ಲ-ಸಂದರ್ಭಕ್ಕೆ ತಕ್ಕಂತೆ ಹೆಸರುಗಳನ್ನು ಸೇರಿಸಲಾಗಿದೆ) ದೃಢಕಾಯದ ವ್ಯಕ್ತಿಯೊರ್ವ ಸಮಾಜದಲ್ಲಿ ಉದ್ದಿಮೆ ನಡೆಸುತ್ತಾ `ಪ್ರಶಾಂತ'ತೆಯ ಜೀವನ ನಡೆಸಬೇಕಿದ್ದವ, ಕೆಲಸಕ್ಕೆ ಬರುವ ಬಡ ಹೆಣ್ಣು ಮಕ್ಕಳನ್ನು ತನ್ನ ಹಣಬಲದಿಂದ ಕಾಮಪಿಪಾಸುವಾಗಿ ಮಂಚಕ್ಕೆ ಕರೆಯುತ್ತಾನೆಂದರೆ ಇಂತಹವರು ದೇವಳಗಳಿಗೆ ಹಣ ನೀಡಿದಾಕ್ಷಣ ಹಿರಿಯ ವ್ಯಕ್ತಿಯಾಗಲು ಸಾಧ್ಯವೇ? ಆಚಾರ-ವಿಚಾರ, ತಾನು ಮಾಡುವ ಕಾರ್ಯದಿಂದ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಬೇಕೆ ಹೊರತು ಸಮಾಜದಲ್ಲಿ ಬಡವರ ಪಾಲಿಗೆ ಬೆಳಕಾಗಿರಬೇಕಾದ ವ್ಯಕ್ತಿಯೇ ಮುಗ್ದ ಹೆಣ್ಣು ಮಕ್ಕಳನ್ನು ಹಣಬಲದಿಂದ ಕಾಮದಾಟಕ್ಕೆ ಬಳಸಿಕೊಳ್ಳುವ ದುರ್ದರ ಸ್ಥಿತಿ ಬೇರೆ ಬೇಕೆ? ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ಅವರ ಬಾಳಿನಲ್ಲಿ `ಸಂತೋಷ' ದ ಬೆಳಕು ಮೂಡಿಸಲು ನ್ಯಾಯಪಂಚಾಯ್ತಿಕೆ ಮಾಡುವ ವ್ಯಕ್ತಿಯೇ ಮುಖವಾಡ ಕಳಚಿಕೊಂಡು, ಆ ಹೆಣ್ಣುಮಕ್ಕಳ ಅಸಹಾಯಕತೆ, ದೌರ್ಬಲ್ಯವನ್ನು ತನಗೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾನೆಂದರೆ ಇವರಿಂದ ಸಮಾಜ ಏನನ್ನು ನಿರೀಕ್ಷೆ ಮಾಡಬಹುದು. ಹಿಂದುಗಳ ಪವಿತ್ರ ಗ್ರಂಥ ರಾಮಾಯಣದ ನಾಯಕ ಏಕಪತ್ನಿ ವೃತಸ್ಥ `ಸೀತಾರಾಮ' ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆತನ ಹೆಸರು ಇರಿಸಿಕೊಂಡ ವ್ಯಕ್ತಿಗಳು ರಾಮನಂತೆ ವ್ಯವಹರಿಸಬೇಕಿತ್ತು. ಆದರೆ ಆಧುನಿಕ ಜಗತ್ತಿನಲ್ಲಿ ಮಾತ್ರ ಅವರ ವ್ಯವಹಾರಗಳು ತದ್ವಿರುದ್ದ. ಗೋವು ಅಪಹರಣ, ಲವ್‌ಜಿಹಾದ್, ಪ್ರತಿಭಟನೆ ಎಂದು ಬ್ಯಾನರ್ ಹಿಡಿದುಕೊಂಡು ಪ್ರಚಾರಕ್ಕಾಗಿ ಹಾತೊರೆಯುವ ವ್ಯಕ್ತಿಯ ಮನೆಯ ಹೆಣ್ಣುಮಕ್ಕಳ ಮೊಬೈಲ್ ಸಂಖ್ಯೆ ಪಡೆದುಕೊಂಡು ಅವರಿಗೆ ನಿರಂತರ ಕರೆ ಮಾಡಿ, ನಿನ್ನನ್ನು ಅತ್ಯಂತ ಸಿರಿವಂತೆಯನ್ನಾಗಿ ಮಾಡುತ್ತೇನೆ ಎನ್ನುವ ನೀಚನ ವಿರುದ್ದ ಧ್ವನಿ ಹೊರಬರದ ಸಮಾಜದ ಪ್ರಮುಖ ಸಂಘಟನೆಯ ಮುಖಂಡನಿಂದ ಸಮಾಜದಲ್ಲಿ ಯಾವ ಹೆಣ್ಣನ್ನು ತಾನೇ ರಕ್ಷಣೆ ಮಾಡಲು ಸಾಧ್ಯ?
ಇವರೆಲ್ಲಾ ಸಮಾಜದಲ್ಲಿ ಗಣ್ಯವ್ಯಕ್ತಿಗಳೆಂದು ತಾವೇ ಬಿಂಬಿಸಿಕೊಳ್ಳುತ್ತಾರೆ. ಉದ್ಯಮಿ, ಸಾಮಾಜಿಕ ಕಾರ್ಯಕರ್ತ, ಸಂಘಟನೆಯ ಮುಖಂಡನೆಂದು ಬಿಂಬಿಸಿಕೊಳ್ಳುವ ಇವರುಗಳು ಮಾಡುವ ಅನಾಚಾರಗಳಿಂದ ಸಮಾಜದ ಉನ್ನತಿಯಂತೂ ಸಾಧ್ಯವೇ ಇಲ್ಲಾ. ಇಷ್ಟು ಮಾತ್ರವಲ್ಲ. ಅಜ್ಞಾನದ ಅಂದಕಾರ ತೊಲಗಿಸಿ ಸುಜ್ಞಾನದ ಬೆಳಕನ್ನು ಹರಿಸಲು ತಾಯಿಯ ನಂತರದ ಸ್ಥಾನವಿರುವುದು ಗುರುವಿಗೆ ಮಾತ್ರ. Teachers is like the candle which lights others in consuming itself. ಗುರು ಚಲಿಸುವ ಗ್ರಂಥಾಲಯವಿದ್ದಂತೆ. ಮೊಗೆದಷ್ಟು ವಿಷಯಗಳು ಹೊರಜಗತ್ತಿಗೆ ತಿಳಿಯುತ್ತದೆ. ಗುರುವಿನ ಸ್ಥಾನಕ್ಕೆ ಅಷ್ಟು ಮಹತ್ವವಿದೆ. ಪುರಾಣದಲ್ಲಿ ಬ್ರಹ್ಮದೇವ ಹುಟ್ಟಿಸಿದ ಮಗಳನ್ನೆ ಮದುವೆಯಾಗಿದ್ದ ಎನ್ನುವ ಘಟನೆ ಕೇಳಿ ತಿಳಿದಿದ್ದೆವು. ಆದರೆ ಪ್ರಸ್ತುತ ಸಮಾಜದಲ್ಲಿ ಗುರು ಆಧುನಿಕ ಬ್ರಹ್ಮರಾಗಲು ಹೊರಟಿದ್ದಾರೆ. ಮುದಿಗೂಬೆ `ಚಿನ್ನಯ್ಯ', ನಾಮಾಂಕಿತ ಗುರು ಸ್ಥಾನದಲ್ಲಿರುವ ಉದ್ಯಮಿ `ಮುದ್ದು', ಹೆಂಡತಿಯಿದ್ದರೂ ಆಕೆಯೊಂದಿಗೆ ಜಗಳವಾಡಿ ಕುಡುಬಿ ಸಮಾಜದ ವಿವಾಹಿತೆ ಹೆಂಗಸಿನೊಂದಿಗೆ ಸಂಪರ್ಕವಿಟ್ಟುಕೊಂಡಿರುವ `ವಿಜಯ'...ಸಮಾಜದಲ್ಲಿರುವ ಅಲ್ಪಗುರುಗಳ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ. ಇವರನ್ನೆಲ್ಲಾ ಶಿಕ್ಷಕರು ಎಂದು ಹೇಳಿದರೆ ನಮ್ಮ ಬಾಯಿ ಹೊಲಸಾಗುತ್ತದೆ. ಮೇಲೆ ನೋಡಿ ಉಗುಳಿದ ಎಂಜಲು ನಮ್ಮ ಮುಖದ ಮೇಲಲ್ಲದೇ ಬೇರೆ ಕಡೆ ಬೀಳುವುದಕ್ಕೆ ಸಾಧ್ಯವಿಲ್ಲವೆ? ಇಂತಹ ಅನೇಕ ಶಿಕ್ಷಕರುಗಳ ಕಾಮಪುರಾಣಗಳು ದಾಖಲಾಗಿದ್ದು, ಸಮಾಜದಲ್ಲಿ ಎಲ್ಲರಿಗೂ ತಿಳಿದಿರುವ ಸತ್ಯತೆಯಾದರೂ ಇಂತಹವರ ಮಧ್ಯೆ ಒಳ್ಳೆಯ ಶಿಕ್ಷಕರುಗಳು ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ತಾನು ಕಲಿಸಿದ ವಿದ್ಯಾರ್ಥಿಗಳನ್ನೆ ಕಾಮದಾಟಕ್ಕೆ ಬಳಸಿಕೊಂಡ ಕಾಮಾಂಧರು. ಶಾಲೆಯಲ್ಲಿ ಲೈಂಗಿಕ ಶಿಕ್ಷಣದ ಜಾಗೃತಿ ಮೂಡಿಸಬೇಕು ಎನ್ನುವ ಆಗ್ರಹ ಒತ್ತಾಯಗಳು ಕೇಳಿಬರುತ್ತಿದ್ದರೆ, ಇಂತಹ ಶಿಕ್ಷಕರುಗಳು ಪ್ರ್ಯಾಕ್ಟಿಕಲ್ ಆಗಿ ಮಾಡಿತೋರಿಸುತ್ತಿದ್ದಾರೆ ಎಂದಾಗ ಕಾನೂನು ಹಾಗೂ ಶಿಕ್ಷಣ ಇಲಾಖೆಗೆ ಸವಾಲಾಗಿ ನಮ್ಮಗಳ ನಡುವೆಯಿದ್ದಾರೆ.
ಲೈಂಗಿಕ ಭಾವನೆಗಳೇ ಅರ್ಥವಾಗದ ಮುಗ್ದ ಹೆಣ್ಣುಮಕ್ಕಳ ಗುಪ್ತಾಂಗಳ ಸ್ಪರ್ಶ ಮಾಡುವ ನೀಚ ಶಿಕ್ಷಕರು ಇಲಾಖೆಯಲ್ಲಿ ವಕ್ಕರಿಸಿಕೊಂಡಿದ್ದರೂ, ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಇಂತಹವರನ್ನು ಗುರುತಿಸಿ, ಕಿತ್ತೆಸೆಯುವುದರ ಮೂಲಕ ಶಿಕ್ಷಕ ವೃತ್ತಿಯ ಶಿಕ್ಷಣವನ್ನು ಮುಗಿಸಿ, ಬಯಸಿದ ಕೆಲಸ ಸಿಗದೆ, ನಗರಗಳನ್ನು ಸೇರಿ ಜೀವನ ನಿರ್ವಹಣೆಗಾಗಿ ಸಿರಿವಂತರ ಮನೆಯ ಸೆಕ್ಯೂರಿಟಿಗಳಾಗಿಯೊ, ಹೊಟೇಲ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಡಿಮೆ ಸಂಬಳಕ್ಕೆ ಶಿಕ್ಷಕ ವೃತ್ತಿಯನ್ನೆ ಮಾಡುತ್ತಿರುವ ಯುವಸಮೂಹವಿಂದು ಉತ್ಸುಕರಾಗಿದ್ದಾರೆ. ಅಂತಹ ಜೀವಗಳಿಗೆ ಜೀವನದ ಕಷ್ಟ ನಷ್ಟಗಳ ಅರಿವಿದೆ. ಅವರಿಂದ ನಾವು ಉತ್ತಮ ಪುಷ್ಪಗಳನ್ನು ರೂಪಿಸುವ ಘನತರ ಜವಾಬ್ದಾರಿ ನಿರೀಕ್ಷಿಸಲು ಸಾಧ್ಯವಿದೆ ಎನ್ನುವ ಮಾತು ಅತಿಶಯೋಕ್ತಿಯೆನಿಸುವುದಿಲ್ಲ.
ಇತ್ತೀಚಿಗೆ ಮಣಿಪಾಲದ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ನಾಲ್ವರು ಅತ್ಯಾಚಾರ ನಡೆಸಿರುವುದು ರಾಜ್ಯವ್ಯಾಪಿ ಪ್ರಚಾರಗೊಂಡು, ಅನೇಕ ಹೋರಾಟಗಳು ನಡೆದಿದ್ದವು. ಅದು ಹೋರಾಟಗಳಾಗಿಯೇ ಉಳಿದು, ಪ್ರಚಾರ ಪಡೆದುಕೊಂಡು ಕಡತಗಳಲ್ಲಿ ಉಳಿದಿದೆ. ಆರೋಪಿಗಳು ಮಾತ್ರ ಸದ್ಯದಲ್ಲಿಯೇ ಹೊರಗಡೆ ಬರಲಿದ್ದಾರೆ ಎನ್ನುವುದಂತೂ ಕಹಿ ಸತ್ಯ. ಇಂತಹ ಘಟನೆಗಳು ನಮ್ಮ ನೆನಪಿನಿಂದ ಮಾಸುವ ಮುನ್ನವೇ ಏನು ಅರಿಯದ ಖಾಸಗಿ ಶಾಲೆಯ ೪ ನೇ ತರಗತಿಯ ಮುಗ್ದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನಡೆಯಿತಲ್ಲ. ಅದು ಕೂಡ ಮಣಿಪಾಲದಲ್ಲಿಯೆ ಎನ್ನುವಾಗ ಹೆಣ್ಣುಮಕ್ಕಳು ಮತ್ತಷ್ಟು ಭಯಕ್ಕೆ ಒಳಗಾಗಿದ್ದಾರೆ.
ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಕ್ಕರೆ ಮಾತ್ರ ಸಾಲುವುದಿಲ್ಲ. ಭಯದ ವಾತಾವರಣ ಮುಕ್ತಗೊಂಡು ಪೋಷಕರು ಕೂಡ ಮಕ್ಕಳು ಸುರಕ್ಷಿತವಾಗಿದ್ದಾರೆ ಎನ್ನುವ ನಿಟ್ಟುಸಿರುವ ಬಿಡುವಂತೆ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಪಾಠ ಬೋಧನೆ ಮಾತ್ರವಲ್ಲ ಶಿಕ್ಷಕರಿಗಿರುವ ನೀತಿ ಸಂಹಿತೆ ಪಾಲನೆಯೊಂದಿಗೆ ಮಕ್ಕಳ ಸುರಕ್ಷತೆ, ಭದ್ರತೆ ನಿಟ್ಟಿನಲ್ಲಿ ಹೆತ್ತವರ ಬಳಿಕದ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಸಾಕಷ್ಟು ಹೊರೆಯಿದ್ದರೂ, ಜವಾಬ್ದಾರಿಯುತವಾಗಿ ನಿಭಾಯಿಸುವ ಅಗತ್ಯವಿದೆ. ಸರಕಾರಿ-ಖಾಸಗಿ ಯಾವುದೇ ಶಾಲೆಯಿರಲಿ, ಶಿಕ್ಷಕ ರಕ್ಷಕ ಸಂಘದ ರಚನೆಯಾಗಬೇಕು. ಕನಿಷ್ಟ ಮೂರು ತಿಂಗಳಿಗೊಮ್ಮೆ ಸೇರಬೇಕು. ಪಾಠ ಮಾತ್ರವಲ್ಲ ಶಾಲೆಯ ಒಳ ಹೊರಗಿನ ವ್ಯವಸ್ಥೆಯಲ್ಲಿನ ಲೋಪ ಕಂಡು ಹುಡುಕಿ ಬಗೆಹರಿಸುವುದರೊಂದಿಗೆ ಶಾಲಾ ಬಸ್ಸುಗಳಲ್ಲಿರುವ ಸಿಬ್ಬಂದಿ ಬಗ್ಗೆ ಹೆತ್ತವರೂ ಕೂಡ ಮಾಹಿತಿ ಪಡೆದುಕೊಳ್ಳಬೇಕು. ಅಲ್ಲಿ ಕೆಲಸ ನಿರ್ವಹಿಸುವ ವ್ಯಕ್ತಿಗಳು ಮಕ್ಕಳನ್ನು ಸ್ಪರ್ಶಿಸದೆ ವ್ಯವಹರಿಸುವಂತಾಗಬೇಕು.
ಅಂತರ್ಜಾಲ, ಆಧುನಿಕ ಮಾಧ್ಯಮ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಬಿಗಿ ಕ್ರಮ ಅಗತ್ಯವನ್ನು ಪೋಷಕರು ಮನಗಾಣಬೇಕಿದೆ. ಕಚೇರಿ ಮತ್ತು ಶಾಲೆಗಳಲ್ಲಿ ಹೆಣ್ಮಕ್ಕಳ ಮೇಲಾಗುವ ಲೈಂಗಿಕ ಕಿರುಕುಳ ದೌರ್ಜನ್ಯ ತಡೆ ಹಾಗೂ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಸಹಿತ ಸರಕಾರದಿಂದ ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆ ಕಟ್ಟು ನಿಟ್ಟಾಗಿ ಪಾಲಿಸಬೇಕು. ಇಂತಹ ನಿರ್ಲಕ್ಷ್ಯತನಗಳು ಕಂಡುಬಂದಲ್ಲಿ ಯಾವುದೇ ಆಮಿಷ, ಒತ್ತಡಗಳಿಗೆ ಒಳಗಾಗದೆ ಕರ್ತವ್ಯ ನಿಭಾಯಿಸಬೇಕು. ಸಮಾಜದಲ್ಲಿ ಪ್ರತಿಷ್ಠೆ, ಅನಿವಾರ್ಯತೆ ಹೆಸರಲ್ಲಿ ಮನೆ ಹತ್ತಿರದಲ್ಲೇ ಶಾಲೆ ಇದ್ದರೂ ಮಕ್ಕಳನ್ನು ಬಸ್ಸಿನಲ್ಲಿ ದೂರದ ಶಾಲೆಗೆ ಕಳಿಸಲಾಗುತ್ತಿದೆ. ಮನೆಯಿಂದ ಹೊರಗಿನ ಮಕ್ಕಳ ಬಾಲ್ಯವಿಂದು ಅಸುರಕ್ಷಿತವಾಗಿದೆ. ಇದಕ್ಕೆ ಸಮಾಜದ ಎಲ್ಲರೂ ಕಾರಣ. ಅಮೂಲಾಗ್ರವಾಗಿ ಬದಲಾವಣೆ , ಪರಿವರ್ತನೆ ಆಗಬೇಕು. ಈ ನಿಟ್ಟಿನಲ್ಲಿ ಚರ್ಚೆ ಚಿಂತನೆ, ಸಾಮಾಜಿಕ ಮೌಲ್ಯವರ್ಧನೆ ಆಗಬೇಕು.
ಸಮಾಜದಲ್ಲಿ ಇನ್ನೊರ್ವರಿಗೆ ಬುದ್ದಿ ಹೇಳುವುದು, ಬೆರಳಿಟ್ಟು ತೋರಿಸುವುದಕ್ಕಿಂತ ನಾವು ಸರಿಯಾಗಿರಬೇಕು. ಗಣ್ಯವ್ಯಕ್ತಿಗಳಂತೆ ಬಿಂಬಿಸಿಕೊಳ್ಳುವುದಕ್ಕಿಂತ ತಮ್ಮ ಮನೆಯಲ್ಲಿಯೂ ಹೆಂಡತಿ, ಮಕ್ಕಳು, ಅಕ್ಕ-ತಂಗಿಯರು ಇದ್ದಾರೆ ಎನ್ನುವ ಭಾವನೆ ಯಾಕೆ ಮೂಡಿಸಿಕೊಳ್ಳುತ್ತಿಲ್ಲ. ಸರಸ್ವತಿ, ವಿಮಲ, ಸೀತಾ, ಲಕ್ಷ್ಮೀ, ಸೀತಾರಾಮ, ಈಶ್ವರ, ನಾರಾಯಣ, ಕೃಷ್ಣ ಎನ್ನುವ ದೇವರುಗಳ ಹೆಸರನ್ನಿರಿಸಿಕೊಂಡು ಹೆಸರಿನ ಮೌಲ್ಯಕ್ಕೆ ಕುಂದು ತರುವಂತ ಕಾರ್ಯದಲ್ಲಿ ನಿರತರಾಗುವ ಬದಲು `ಮಾನ'ಯುತ ಜೀವನ ನಡೆಸಲು ಸಾಧ್ಯವಿದೆ ಎನ್ನುವ ಸತ್ಯ ಅರಿಯಬೇಕು. ಇನ್ನೊರ್ವರ ಮನೆಯ ಹೆಣ್ಣು ಮಕ್ಕಳ ಕುರಿತು ಕೀಳಾಗಿ ವ್ಯವಹರಿಸುವಾಗ, ನನ್ನಂತೆ ಇನ್ನೊರ್ವ ತನ್ನ ಹೆಂಡತಿ, ಮಗಳನ್ನು ಕೂಡ ಕಾಮದೃಷ್ಠಿಯಿಂದ ನೋಡುತ್ತಾನೆ ಎನ್ನುವ ಸತ್ಯ ಅರಿತಾಗ ಸಮಾಜದಲ್ಲಿ ಇಂತಹ ಕೃತ್ಯಗಳನ್ನು ತಡೆಗಟ್ಟಬಹುದು. ಮುಖವಾಡ ಕಳಚಿ ಸುಂದರ ಸಮಾಜ ನಿರ್ಮಾಣ ಮಾಡಲು ಮರ್‍ಯಾದೆಯ ಜೀವನ ನಡೆಸಿದಾಗ ಸಿಗುವ ಗೌರವ ನೂರ್ಕಾಲ ಇರುವುದರಲ್ಲಿ ಸಂಶಯವೇ ಇಲ್ಲಾ. ಹಣದಿಂದ ಪಡೆಯುವ ಗೌರವ ಕ್ಷಣಿಕವೆನ್ನುವುದನ್ನು ಅರಿತಾಗ ನಮ್ಮ ಬದುಕು ಹಸನಾಗುತ್ತದೆ. ಜೀವನದಲ್ಲಿ ಮಾನ-ಮರ್ಯಾದೆಯೇ ಮುಖ್ಯಎನ್ನುವುದು ನನ್ನ ಭಾವನೆ. ಏನಂತಿರಾ..



ಹೆಣ್ಣು ಮಕ್ಕಳೇ ಮಾನಸಿಕ ಎಚ್ಚರಿಕೆಯೊಂದಿಗೆ ಧೈರ್ಯ ತಂದುಕೊಳ್ಳಿ
   -ಭವಿಷ್ಯದ ಅಪಾಯಕಾರಿ ಘಟನೆಗಳಿಗೆ ಇದುವೇ ಮಹಾನ್ ಆಯುಧ
ದೆಹಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ, ಉಜಿರೆಯ ಸೌಜನ್ಯಳ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣಗಳು ಮನದಿಂದ ಮಾಸುವ ಮೊದಲೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಣಿಪಾಲದಲ್ಲಿ ಇಂತದೊಂದು ಘಟನೆ ನಡೆಯಿತಲ್ಲ ಎಂದು ಜನಸಾಮಾನ್ಯರು ಒಮ್ಮೆ ಆತಂಕಿತರಾಗಿದ್ದರು. ಆದರೆ ಇಂತಹ ಘಟನೆಗಳು ಸರ್ವೇ ಸಾಮಾನ್ಯವಾಗಿದೆ ಎನ್ನುವುದು ಜನತೆಯ ಬಾಯಿಯಿಂದ ಕೇಳಿಬರುತ್ತಿದೆ.
ಜೂ.೨೦ ರಂದು ರಾತ್ರಿ ಹೆಸರಾಂತ ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದ ಕೇರಳ ಮೂಲದವಳಾದ ಆಕೆ ಗ್ರಂಥಾಲಯದಿಂದ ತನ್ನ ಫ್ಲ್ಯಾಟಗೆ ಹಿಂತಿರುಗುತ್ತಿದ್ದಾಗ ಅಪಹರಿಸಿ ಸಾಮೂಹಿಕ ಅತ್ಯಾಚಾರ ವೆಸಗಿದ್ದರು ಎನ್ನುವುದಾಗಿ ಬಿಂಬಿತವಾಗಿತ್ತು. ಇದು ಎಷ್ಟರಮಟ್ಟಿಗೆ ಸರಿಯಾಗಿದೆ ಎನ್ನುವುದು ನಾವು ಅರಿಯಬೇಕಿದೆ. ನಿಜವಾಗಿ ಆಕೆಯನ್ನು ಅಪಹರಿಸಿರುವುದೇ? ಅಪಹರಿಸಿ ಆಕೆಯನ್ನು ಬಲತ್ಕಾರ ಮಾಡಿದ್ದಾರೆಯೇ? ಯಾವ ರೀತಿ, ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಹೀಗೆ ಹಲವಾರು ಪ್ರಶ್ನೆಗಳು ಮೂಡುವುದು ಸಹಜ. ಅಲ್ಲದೇ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ನಡೆಸಲಾಗಿದ್ದರೂ, ಸುಮಾರು ೧೨ ದಿನಗಳವರೆಗೆ ಆಕೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಸಂಶಯಕ್ಕೆ ಎಡೆಮಾಡಿದೆ. ಇಂತಹ ಅತ್ಯಾಚಾರಗಳು ಮಣಿಪಾಲದಲ್ಲಿ ಸಾಮಾನ್ಯವೇನಲ್ಲ. ಆದರೆ ಅವತ್ತು ಮಾತ್ರ ರಾತ್ರಿ ಪಾಳಿಯಲ್ಲಿ ಕಾವಲು ಕಾಯುತ್ತಿದ್ದ ವ್ಯಕ್ತಿಯಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಮೆಡಿಕಲ್ ವಿದ್ಯಾರ್ಥಿನಿ ಗ್ರಂಥಾಲಯದಿಂದ ಹೊರಗೆ ಬರುವುದಕ್ಕಿಂತ ಶಂಕಿತ ಆರೋಪಿ ಆನಂದನ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದು, ತಾನೀಗ ಲೈಬ್ರೆರಿಯಿಂದ ಹೊರಟಿದ್ದೇನೆ ಎನ್ನುವ ಸಂದೇಶದ ಜಾಡನ್ನು ಹಿಡಿದು ಪೊಲೀಸರು ತನಿಖೆ ನಡೆಸಿದ್ದರು. ವೈದ್ಯಕೀಯ ವಿದ್ಯಾರ್ಥಿನಿಯೊರ್ವಳು ಸಾಮಾನ್ಯ ಆಟೋ ಚಾಲಕನಾಗಿರುವ ಆನಂದನಿಗೆ ಸಂದೇಶ ಕಳುಹಿಸಿದ್ದಾಳೆ ಎಂದರೆ ಅವರಿಬ್ಬರೂ ಪ್ರೇಮಿಗಳೇ ಎನ್ನುವ ಸಂಶಯ ಎಲ್ಲರಲ್ಲೂ ಮೂಡುತ್ತದೆಯಲ್ಲವೇ? ಹೀಗೆ ಪ್ರಕರಣವನ್ನು ಭೇದಿಸಿದ್ದಾರಂತೆ? ಸಂದೇಶ ಸ್ವೀಕರಿಸಿದ ಆಕೆಯನ್ನು ಕರೆದುಕೊಂಡು ಹೋಗಲು ಆನಂದ ಆಟೋದಲ್ಲಿ ಬಂದಿದ್ದಾಗ ಆಟೋದೊಳಗಿದ್ದ ಆತನ ಇಬ್ಬರು ಸ್ನೇಹಿತರು ಕಂಠಪೂರ್ತಿ ಕುಡಿದಿರುವುದನ್ನು ಗಮನಿಸಿ, ಅವನೊಂದಿಗೆ ಹೋಗಲು ನಿರಾಕರಿಸಿದ್ದಳು. ಈ ಸಂದರ್ಭದಲ್ಲಿ ಬಲವಂತವಾಗಿ ಆಕೆಯನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋದ ಅವರು ಆಕೆಯನ್ನು ಬಲತ್ಕರಿಸಿದ್ದರಂತೆ? ನಂತರ ಅವಳನ್ನು ಜೀವಂತವಾಗಿ ಆಕೆಯ ವಾಸವಾಗಿರುವ ಅಪಾರ್ಟ್‌ಮೆಂಟ್ ಸಮೀಪ ತಂದು ಬಿಟ್ಟು ಹೋಗಿದ್ದಾರಂತೆ? ಅಬ್ಬಾ ಏನಿದು ಅಂತೆ ಕಂತೆಗಳ ಸಂತೆ ಎನ್ನುವುದಾಗಿ ಎಲ್ಲರಿಗೂ ಸಂಶಯ, ಕುತೂಹಲ ಜಾಸ್ತಿಯಾಗುತ್ತಿದೆ ಅಲ್ಲವೇ? ಖಂಡಿತಾ ಆ ರೀತಿ ಆಗಲೇ ಬೇಕು. ಇಂತಹ ವಿಷಯವನ್ನು ತಿಳಿದುಕೊಳ್ಳುವಾಗಲೂ ಎಲ್ಲರಿಗೂ ಆತುರವಿದ್ದೆ ಇರುತ್ತದೆ. ಆ ನಿಟ್ಟಿನಲ್ಲಿಯೇ ಕೆಲವೊಂದು ಪ್ರಶ್ನೆಗಳನ್ನು ವಿಷಯದ ಮಧ್ಯದಲ್ಲಿ ತುರುಕಿದ್ದೇನೆ. ಈ ಪ್ರಕರಣದ ಕುರಿತು ತಿಳಿದುಕೊಳ್ಳುವಾಗ ನನಗೆ ಹುಟ್ಟಿದ ಕೆಲವೊಂದು ಅನುಮಾನಗಳೇ ಇಂದು
ಪ್ರಶ್ನಾ ರೂಪತಾಳಿದೆ.
ಮಣಿಪಾಲ ವಿಶ್ವವಿದ್ಯಾನಿಲಯ ದೇಶ-ವಿದೇಶದಲ್ಲಿಯೇ ಪ್ರಸಿದ್ಧಿ ಪಡೆದಿದ್ದು, ಹಳ್ಳಿಯ ಜನತೆಗೆ ಫ್ಯಾಶನ್ ಹಾಗೂ ಎಂ ಟಿವಿಯ ಸೊಬಗನ್ನು ಉಣಬಡಿಸಿದ ಕೀರ್ತಿ ಏನಿದ್ದರೂ, ಮಣಿಪಾಲ ವಿವಿಯ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ. ಮನೆಯಲ್ಲಿ ಬೇಕಾದಷ್ಟು ಹಣವಿದ್ದರೂ, ಬಿಕ್ಷುಕನಿಗಿಂತಲೂ ಕಡೆಯಾದ ಬಟ್ಟೆಯನ್ನು ಧರಿಸಿ, ರಾಜರೋಷವಾಗಿ ಜನರ ಮಧ್ಯದಲ್ಲಿ ಓಡಾಡುವುದು, ಸಾರ್ವಜನಿಕ ಸ್ಥಳದಲ್ಲಿಯೇ ಸಿಗರೇಟುಗಳಿಂದ ಯಾವ ಕಾರ್ಖಾನೆಗಳಿಗೂ ಕಡಿಮೆಯಿಲ್ಲವೆನ್ನುವಂತೆ ಹೊಗೆ ಬಿಡುವುದು, ಅನೇಕ ಬಾರ್ ಅಂಡ್ ರೆಸ್ಟೋರೆಂಟ್‌ಗಳು ತಡರಾತ್ರಿಯವರೆಗೂ ಕಾರ್ಯನಿರ್ವಹಿಸುವುದು, ಇವರ ಅನೈತಿಕ ವ್ಯವಹಾರಕ್ಕಾಗಿಯೇ ಅನೇಕ ಲಾಡ್ಜ್‌ಗಳು ಪಲ್ಲಂಗವನ್ನು ತಯಾರಿಸಿರುವುದು. ಇಲ್ಲಿ ಅಭ್ಯಾಸ ಮಾಡುತ್ತಿದ್ದ ಶೇ.೮೦ರಷ್ಟು ವಿದ್ಯಾರ್ಥಿಗಳು ಮೇಲೆ ತಿಳಿಸಿದ ಎಲ್ಲಾ ಸುಖವನ್ನು ಅನುಭವಿಸಿದವರೇ? ಇದಕ್ಕೆ ತಲೆಯಾಡಿಸುತ್ತಾ ಮಣಿಪಾಲ ವಿಶ್ವವಿದ್ಯಾನಿಲಯ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಅನೇಕ ಬಾರಿ ಇಂತಹ ಪ್ರಕರಣಗಳು ನಡೆದಿದ್ದರೂ, ಆಡಳಿತ ಮಂಡಳಿಯ ಪ್ರಬಾವದಿಂದ ಅವುಗಳು ಬೆಳಕಿಗೆ ಬರಲೇ ಇಲ್ಲಾ. ಈ ಪ್ರಕರಣವೂ ಕೂಡ ಬೆಳಕಿಗೆ ಬರುತ್ತಿರಲಿಲ್ಲ. ಎಂದಿನಂತೆ ಕಾರ್ಯನಿರ್ವಹಿಸುವ ವಾಚ್‌ಮೆನ್ ಅಂದು ಇದ್ದಿದ್ದರೆ ಸದ್ದಿಲ್ಲದೇ ಈ ಪ್ರಕರಣ ಮುಚ್ಚಿಹೋಗುತ್ತಿತ್ತು. ಆದರೆ ಅತ್ಯಂತ ಗಂಭೀರವಾದ ಗ್ಯಾಂಗ್‌ರೇಪ್ ಪ್ರಕರಣ ಬಯಲಿಗೆ ಬರಲು ಮೂಲ ಕಾರಣಕರ್ತ ಮಣಿಪಾಲ ವಿವಿ ಗ್ರಂಥಾಲಯದ ಸೆಕ್ಯುರಿಟಿ ಸಿಬ್ಬಂದಿ. ಆದರೆ ಒಬ್ಬಳು ಹೆಣ್ಣು ಮಗಳಿನ ಅಪಹರಣ ಪ್ರಕರಣ ಬೆಳಕಿಗೆ ತರಲು ಯತ್ನಿಸಿದ ಈ ಸಿಬ್ಬಂದಿಯ ಕರ್ತವ್ಯ ದಕ್ಷತೆ, ಪ್ರಾಮಾಣಿಕತೆ, ಸಾಮಾಜಿಕ ಕಾಳಜಿ, ಜೀವಪರ ನಿಲುವುಗಳ ಪ್ರಶ್ನಿಸದೆ, ಸರಕಾರ, ಪೊಲೀಸ್ ಇಲಾಖೆಯನ್ನು ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ. ಆದರೆ ಸತ್ಯಾಂಶವೆನೆಂದರೆ ಇವರ ಹೊಗಳಿಕೆಗೆ ಕಾರಣೀಕರ್ತ, ಮೂಲಬಿಂದು ಸೆಕ್ಯುರಿಟಿ ಸಿಬ್ಬಂದಿ ಮಾತ್ರ ಇಂದು ಯಾರಿಗೂ ಬೇಡವಾಗಿದ್ದಾನೆ.
ಸತ್ಯ ಎಷ್ಟು ಕಹಿಯಾಗಿರುತ್ತದೆ. ತಾನು ಪ್ರಾಮಾಣಿಕವಾಗಿ ಇರುತ್ತೇನೆ. ಪ್ರಪಂಚವನ್ನು ಸರಿಮಾಡುತ್ತೇನೆ ಎಂದು ಬಡವನಾದವ ಮನ ಮಾಡಿದರೆ ಆತ ಎಲ್ಲರಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಾನೆ ಎನ್ನುವುದು ಆತ ಅರಿಯಬೇಕಿತ್ತು. ಆತ ಅದನ್ನು ಅರಿಯದೇ ಸತ್ಯಾಂಶವನ್ನು ಜನತೆಗೆ ಬಿತ್ತರಿಸುವ ಮನಮಾಡಿದ. ಪರಿಣಾಮವಾಗಿ ಆತ ಇಂದು ಕೆಲಸ ಕಳೆದು ಕೊಳ್ಳುವಂತ ಪರಿಸ್ಥಿತಿ. ಮೊದಲಿನ ಘಟನೆಗಳು ಇದೇ ರೀತಿ ಮುಚ್ಚಿ ಹೋಗಿವೆ ಎನ್ನುವುದು ಸಾಮಾನ್ಯನಿಗೂ ಅರಿವಿಗೆ ಬರುತ್ತದೆ. ಅತ್ಯಾಚಾರ ಪ್ರಕರಣ ನಡೆದು ಸಿಸಿ ಕ್ಯಾಮರಾದ ಮೂಲದ ಆರೋಪಿಗಳ ಜಾಡನ್ನು ಹಿಡಿದ ಪೊಲೀಸರು ಮೂವರನ್ನು ಬಂದಿಸಿದ್ದಾರೆ. ಪ್ರಮುಖ ಆರೋಪಿ ಯೋಗೀಶ್ ಪೂಜಾರಿ, ಹರಿಪ್ರಸಾದ ಹಾಗೂ ಆನಂದನನ್ನು ಬಂಧಿಸಲಾಗಿದೆ. ಇತ್ತೀಚಿಗೆ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ್ದಾರೆ ಎನ್ನುವ ನೆಲೆಯಲ್ಲಿ ಹರೀಂದ್ರ ಪೂಜಾರಿ, ಬಾಲಚಂದ್ರ ಪೂಜಾರಿ ಅವರುಗಳನ್ನು ಬಂಧಿಸಿದ್ದಾರೆ ಎನ್ನುವಾಗ ಪೊಲೀಸರು ಕಾರ್ಯತತ್ಪರತೆಗೆ ಮೆಚ್ಚಲೇ ಬೇಕು ಅಲ್ಲವೇ?
ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು, ಮಣಿಪಾಲ ವಿವಿ ಆಡಳಿತ ಮಂಡಳಿ, ಮಾಹಿತಿದಾರರು, ಪೊಲೀಸ್ ಸಿಬ್ಬಂದಿಯನ್ನು ಕೊಂಡಾಡುವ ಪೊಲೀಸ್ ಅಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರನ್ನು ಕೊಂಡಾಡುತ್ತಿದ್ದಾರೆಯೇ ವಿನಃ ಯಾರೊಬ್ಬರೂ ವಿದ್ಯಾರ್ಥಿನಿಯ ಅಪಹರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಸೆಕ್ಯೂರಿಟಿ ಸಿಬ್ಬಂದಿಯನ್ನು ಈ ನಡುವೆ ಮರೆತು ಬಿಟ್ಟಿದ್ದಾರೆ. ಮಣಿಪಾಲ ವಿವಿ ಆಡಳಿತ ಮಂಡಳಿ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ೩ ಲಕ್ಷ ರೂ.ಬಹುಮಾನ ನೀಡುತ್ತೇವೆ ಎಂದು ಪೊಲೀಸ್ ಇಲಾಖಾಧಿಕಾರಿಗಳ ಮೂಲಕ ಘೋಷಣೆ ಮಾಡಿದೆ. ಇಲಾಖೆಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೨ಲಕ್ಷ ರೂ ಬಹುಮಾನ ಘೋಷಿಸಿದೆ. ಆದರೆ ಪ್ರಕರಣ ಬೆಳಕಿಗೆ ಬರಲು ಕಾರಣಕರ್ತನಾದ ತನ್ನದೇ ಸಂಸ್ಥೆಯ ಗ್ರಂಥಾಲಯದ ಸೆಕ್ಯೂರಿಟಿ ಸಿಬ್ಬಂದಿಗೆ ಬಹುಮಾನವಾಗಲೀ, ಭಡ್ತಿ ನೀಡುವುದರ ಬದಲು ಅಮಾನತಿನಂಥ ಶಿಕ್ಷೆ ವಿಧಿಸಿದೆ. ವಿವಿಯ ಈ ಕೃತ್ಯದಿಂದಾಗಿ ಪ್ರಕರಣ ಬಯಲಾಗದೇ, ಅಲ್ಲಿಯೇ ಮುಚ್ಚಿ ಹೋಗಬೇಕಾಗಿತ್ತು ಎನ್ನುವ ಉದ್ದೇಶವಿತ್ತು ಎಂದು ನಾಗರಿಕ ಸಮಾಜದಲ್ಲಿ ಸಂಶಯ ಹರಡುವಂತೆ ಮಾಡಿದೆ.
ವಿವಿಧ ಪಕ್ಷಗಳ ರಾಜಕಾರಣಿಗಳು, ಜನಪ್ರತಿನಿಧಿಗಳು, ಕೆಲವು ಸಂಘ-ಸಂಸ್ಥೆಗಳು ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸ್ ಇಲಾಖೆಯನ್ನು ಅಭಿನಂದಿಸಿದರು. ಆದರೆ ಯಾರು ಕೂಡ ಅಪ್ಪಿ ತಪ್ಪಿಯೂ ಸಾಮಾನ್ಯರಲ್ಲಿ ಸಾಮಾನ್ಯನಾದ ಸೆಕ್ಯೂರಿಟಿ ಸಿಬ್ಬಂದಿಯನ್ನು ಸೌಜನ್ಯಕ್ಕೂ ಕನಿಷ್ಟ ನೆನಪೂ ಕೂಡ ಮಾಡಿಕೊಂಡಿಲ್ಲ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳ ನಿಜವಾದ ಆಶಯವನ್ನು ನಾಗರಿಕ ಸಮಾಜ ಪ್ರಶ್ನಿಸುವಂತೆ ಮಾಡಿದೆ ಎನ್ನುವುದು ಸತ್ಯ. ಕೆಲವರಿಗೆ ಪ್ರಚಾರ ಮುಖ್ಯ. ಇನ್ನು ಕೆಲವರಿಗೆ ಉನ್ನತ ಅಧಿಕಾರಿಗಳ ಗಮನ ಸೆಳೆಯುವ, ಆ ಮೂಲಕ ಅವರಿಗೆ ಹತ್ತಿರವಾಗುವ ಪ್ರಯತ್ನ. ಮತ್ತೆ ಕೆಲವರಿಗೆ ಪ್ರಕರಣದ ಹಿನ್ನೆಲೆ ಮತ್ತು ನಿಜವಾದ ಮುಖವನ್ನು ಮರೆ ಮಾಚುವುದು ಮುಖ್ಯ. ಇವರಿಗೆಲ್ಲ ಮಣಿಪಾಲದ ಮತ್ತು ಆಡಳಿತ ಪಕ್ಷದ ಹಿತಾಸಕ್ತಿ ಕಾಪಾಡುವುದರಲ್ಲಿ ಇರುವಷ್ಟು ಆಸಕ್ತಿ ಇಡೀ ಪ್ರಕರಣ ಬಹಿರಂಗಕ್ಕೆ ಬರಲು ಕಾರಣಕರ್ತನಾದ ಸಾಮಾನ್ಯರಲ್ಲಿ ಸಾಮಾನ್ಯನಾದ ಸೆಕ್ಯೂರಿಟಿ ಸಿಬ್ಬಂದಿಯ ನೆನಪು ಮಾಡಿಕೊಳ್ಳದೇ ಇರುವುದು ಸರಕಾರ, ಜನಪ್ರತಿನಿಧಿಗಳು, ರಾಜಕಾರಣಿಗಳು, ಸರಕಾರಿ ಅಧಿಕಾರಿಗಳ ನಡವಳಿಕೆಗಳು ಹಾಗೂ ವಿವಿ ಮತ್ತು ಆಸ್ಪತ್ರೆ ಸಿಬ್ಬಂದಿಯ ಧೋರಣೆ, ವಿದ್ಯಾರ್ಥಿನಿಯ ಮೌನ ಸಾರ್ವಜನಿಕರಲ್ಲಿ ಪ್ರಕರಣದ ಕುರಿತಾಗಿ ಬಗ್ಗೆ ಅನುಮಾನ ಮೂಡಿಸುತ್ತಿದೆ.
ಯೋಗೀಶ್ ಪೂಜಾರಿ, ಹರಿಪ್ರಸಾದ್, ಆನಂದ ಪಾಣಾರ ಅವರುಗಳು ಆರೋಪಿಗಳೇ ನಿಜವಾಗಿರುವುದಾದರೆ ಅವರಿಗೆ ಶಿಕ್ಷೆ ನೀಡಲು ಯಾಕೆ ಹಿಂಜರಿಯುತ್ತಿದ್ದಾರೆ. ಸಾಕ್ಷ್ಯಗಳನ್ನು ನಾಶ ಮಾಡಲು ಪ್ರಚೋದನೆ ನೀಡಿದ ಹರೀಂದ್ರ ಪೂಜಾರಿ, ಬಾಲಚಂದ್ರ ಪೂಜಾರಿ ಅವರುಗಳು ಯಾಕೆ ಯಾರ ಪ್ರಚೋದನೆಯಿಂದ ಈ ಕೃತ್ಯ ಎಸಗಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿಯ ಮೌನಕ್ಕೆ ಕಾರಣಗಳಾವು? ಆಕೆಗೆ ಯಾರಾದರೂ ಒತ್ತಡ ಹೇರಿದ್ದಾರೆಯೇ? ವಿವಿಯ ಧೋರಣೆಯೇನು? ಇಲಾಖೆಯ ನಿಲುವುಗಳೇನು? ಹೀಗೆ ಹಲವಾರು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದರೂ, ಪೊಲೀಸರು ಆರೋಪಿಗಳನ್ನು ಬಂದಿಸಿದ್ದರೂ, ಇವರೇ ನಿಜವಾದ ಆರೋಪಿಗಳಾ? ಆದರೂ ಒಂದಂತೂ ಸತ್ಯ. ಪ್ರಕರಣ ಮಾತ್ರ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು, ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಅತ್ಯಾಚಾರ ನಡೆದಿರುವುದಂತೂ ಹೌದು. ಈ ಪ್ರಕರಣದ ಅಂತ್ಯ ಯಾವ ರೀತಿ ಎನ್ನುವುದೇ ಕಾದು ನೋಡಬೇಕಿದೆ. ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆಯೇ? ಹಿಂದಿನ ಪ್ರಕರಣದಂತೆ ಈ ಕಡತಗಳು ಕೊಠಡಿಯ ಅಟ್ಟಕ್ಕೆ ಸೇರಿ ಧೂಳು ಹಿಡಿಯುತ್ತದೆಯೇ?
ಅದೇನೇ ಇರಲಿ ಪದೇ ಪದೇ ರಾಜ್ಯದಲ್ಲಿ, ದೇಶದಲ್ಲಿ ನಮ್ಮ ಮನೆಯ ಪಕ್ಕದಲ್ಲಿಯೇ ಇಂತಹ ಪ್ರಕರಣಗಳು ನಡೆಯುತ್ತಿರುವುದರಿಂದ ಹೆಣ್ಣುಮಕ್ಕಳು ದೈರ್ಯದಿಂದ ತಿರುಗಾಡುವುದೇ ಕಷ್ಟಸಾದ್ಯ. ಗಾಂಧೀಜಿ ಕಂಡ ಕನಸು ನನಸಾಗುವುದು ಸಾಧ್ಯವೇ ಇಲ್ಲ ಎನ್ನುವಂತ ಪರಿಸ್ಥಿತಿ. ಹೆಣ್ಣು ಮಗಳೊರ್ವಳು ಮಧ್ಯರಾತ್ರಿ ಯಾವುದೇ ಅಂಜಿಕೆಯಿಲ್ಲದೇ ತಿರುಗಾಡುತ್ತಾಳೆ ಎಂದಾಗ ನಮಗೆ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿದೆ ಎಂದು ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದ್ದರೂ, ಹಗಲಿನಲ್ಲಿಯೇ ಹೆಣ್ಣು ಮಗಳು ತಿರುಗಾಡುವುದೇ ಕಷ್ಟ. ಇನ್ನೂ ರಾತ್ರಿಯಲ್ಲಿ ಕಲ್ಪನೆ ಮಾಡಿಕೊಳ್ಳುವುದೇ ಕಷ್ಟ. ಕರಾವಳಿಯಲ್ಲಿ ಇಂತಹ ಘಟನೆಗಳು ಹಲವಾರು ನಡೆಯುತ್ತಿದೆ. ಅವುಗಳಲ್ಲಿ ಬೆಳಕಿಗೆ ಬರುವುದು ಕೆಲವೊಂದು ಪ್ರಕರಣಗಳು ಮಾತ್ರ. ಜೀವನ ನಿರ್ವಹಣೆಗಾಗಿ, ಮನೆಯಲ್ಲಿರುವ ಬಡತನವನ್ನು ನಿವಾರಿಸಲು ಒಬ್ಬಂಟಿಯಾಗಿ ಪಟ್ಟಣಗಳಲ್ಲಿ ಕಾರ್ಯ ನಿರ್ವಹಿಸುವ, ಒಂಟಿಯಾಗಿ ತಿರುಗುವ ಮಹಿಳೆಯರಿಗಾಗಿ ಟೈಮ್ಸ್ ಆಫ್ ದೀನಬಂಧು ಪತ್ರಿಕೆಯ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬಿಸಲು ಕೆಲವೊಂದು ಸಲಹೆಗಳನ್ನು ನೀಡುತ್ತಿದೆ.

ಹೆಣ್ಣುಮಕ್ಕಳೇ ಜಾಗರೂಕರಾಗಿರಿ: 

೧.ಬಹುಮಹಡಿ ಅಪಾರ್ಟ್‌ಮೆಂಟ್ ಅಥವಾ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳೆ ಅನಿವಾರ್ಯವಾಗಿ ತಡರಾತ್ರಿಯಲ್ಲಿ ಅಲ್ಲಿನ ಲಿಫ್ಟ್‌ನಲ್ಲಿ ಪುರುಷರೊಂದಿಗೆ ಸಂಚರಿಸಬೇಕಿದ್ದರೆ? 
*ಲಿಫ್ಟ್‌ನೊಳಗೆ ಹೋದಾಗ ಮಹಿಳೆ ಮೊದಲಿಗೆ ಮಾಡಬೇಕಾದ ಕಾರ್ಯವೆಂದರೆ ಉದಾಹರಣೆಗೆ ಆಕೆಗೆ ೧೩ ನೇ ಮಹಡಿಗೆ ತೆರಳ ಬೇಕಿದ್ದರೆ ಕೇವಲ ೧೩ನೇ ಬಟನ್‌ನ್ನು ಮಾತ್ರ ಒತ್ತಬೇಡಿ. ೧ರಿಂದ ೧೩ ಮಹಡಿಯ ಎಲ್ಲಾ ಬಟನ್‌ಗಳನ್ನು ಒತ್ತಿ ಪ್ರತಿ ಮಹಡಿಯಲ್ಲಿಯೂ ಲಿಫ್ಟ್ ನಿಲ್ಲುತ್ತದೆ. ಎದುರಿಗಿರುವ ಪುರುಷನ ಕುರಿತಾಗಿ ಭಯ ಕಡಿಮೆಯಾಗಬಹುದು.

೨. ನಿಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಅಪರಿಚಿತನೊರ್ವ ದಾಳಿಗೆ ಬಂದಾಗ?
*ಧೈರ್ಯಗೆಡಬೇಡಿ. ನೀವು ಅಡುಗೆ ಮನೆಗೆ ಓಡಬೇಕು. ಮೆಣಸಿನ ಹುಡಿ ಮತ್ತು ಅರಶಿನ ಪುಡಿ ಎಲ್ಲಿದೆ ಎಂದು ನಿಮಗೆ ಮಾತ್ರ ತಿಳಿದಿದೆ. ಅಲ್ಲದೇ ಚಾಕು ಮತ್ತು ತಟ್ಟೆಗಳಿರುವುದನ್ನು ನೋಡಿ ಅವುಗಳು ಮುಗಿಯುವರೆಗೆ ಆತನೆಡೆಗೆ ಎಸೆಯಬೇಕು. ಈ ಸಂದರ್ಭದಲ್ಲಾದ ಶಬ್ದ ಹಾಗೂ ಬೊಬ್ಬೆಯಿಂದ ಎದುರಾಳಿ ಭಯಗೊಳ್ಳುತ್ತಾನೆ. ಆತ ಸಿಕ್ಕಿಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಅಲ್ಲಿಂದ ಆತ ಓಡಿಹೋಗುತ್ತಾನೆ. 

೩.ರಾತ್ರಿ ಸಮಯದಲ್ಲಿ ಆಟೋ ಅಥವಾ ಟ್ಯಾಕ್ಸಿ ಪಡೆಯುವಾಗ?
*ರಾತ್ರಿ ಆಟೋ ಅಥವಾ ಟ್ಯಾಕ್ಸಿ ಹಿಡಿದು ಕುಳಿತುಕೊಳ್ಳುವುದಕ್ಕಿಂತ ಮುಂಚಿತವಾಗಿ ಅದರ ನೋಂದಣಿ ಸಂಖ್ಯೆಯನ್ನು ಗಮನಿಸಿ, ಕೂಡಲೇ ನಿಮಗೆ ಗೊತ್ತಿರುವ ನಂಬರ್‌ಗೆ ಸಂದೇಶ ರವಾನಿಸಿ. ನಂತರ ನಿಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ಚಾಲಕನಿಗೆ ಅರ್ಥ ಆಗುವ ಭಾಷೆಯಲ್ಲಿ ಮೊಬೈಲ್‌ನಿಂದ ಕರೆ ಮಾಡಿ. ಯಾರೂ ನಿಮ್ಮ ಕರೆಗೆ ಉತ್ತರವನ್ನು ನೀಡದಿದ್ದರೂ ಸಂಭಾಷಣೆಯಲ್ಲಿರುವಂತೆ ನಟಿಸಿ. ಚಾಲಕ ತನ್ನ ವಿವರಗಳು ಇತರರಿಗೆ ತಿಳಿದಿದೆ ಎನ್ನುವ ಭಯದಿಂದ ತಾನು ಯಾವುದೇ ತಪ್ಪು ಕಾರ್ಯಗಳಿಗೆ ಮನ ಮಾಡಿದರೆ ಗಂಭೀರ ಸಮಸ್ಯೆಯಾಗಬಹುದು ಎಂದು ತಿಳಿಯುತ್ತಾನೆ. ಆಗ ಆತನೇ ಸುರಕ್ಷಿತವಾಗಿ ನಿಮ್ಮನ್ನು ಮನೆಗೆ ತಲುಪಿಸುತ್ತಾನೆ. ಸಂಭಾವ್ಯ ಆಕ್ರಮಣಕಾರರೊಂದಿಗೆ ನೀವು ನಡೆಸುವ ಚಟುವಟಿಕೆಯೇ ನಿಮ್ಮ ರಕ್ಷಕನಾಗಿರುತ್ತದೆ. ಎಲ್ಲಕ್ಕಿಂತ ಮೊದಲು ಕುಡಿದುಕೊಂಡಿದ್ದಾನೆಯೇ ಎನ್ನುವುದನ್ನು ಗಮನಿಸಿಕೊಳ್ಳಿ. 

೪.ಚಾಲಕ ರಸ್ತೆ ಬದಲಾವಣೆ ಮಾಡಿದಾಗ?
*ಎಚ್ಚರದಲ್ಲಿದ್ದು, ನೀವು ಸೇರಬೇಕಾದ ಸ್ಥಳ ಅದಲ್ಲವೆನ್ನುವುದನ್ನು ಮನಗಂಡು ಅಪಾಯದ ವಲಯ ತಲುಪುತ್ತಿದ್ದೇವೆ ಎನ್ನುವುದನ್ನು ಅರಿತುಕೊಳ್ಳಬೇಕು. ಈ ಸಂದರ್ಭದಲ್ಲಿ ನಿಮ್ಮ ಪರ್ಸ್‌ನ ಹ್ಯಾಂಡಲ್ ಅಥವಾ ನಿಮ್ಮ ದುಪ್ಪಟ್ಟಾವನ್ನು ಆತನ ಕುತ್ತಿಗೆಗೆ ಸುತ್ತಿ, ಹಿಂದುಗಡೆ ಎಳೆಯಬೇಕು. ಸೆಕೆಂಡುಗಳ ಅಂತರದಲ್ಲಿ ಈ ಕ್ರಿಯೆ ನಡೆಯುವುದರಿಂದ ಆತ ಅಸಹಾಯಕನಾಗುತ್ತಾನೆ. ಕೆಲವು ಸಂದರ್ಭದಲ್ಲಿ ನಿಮ್ಮಲ್ಲಿ ಪರ್ಸ್ ಅಥವಾ ದುಪ್ಪಟ್ಟಾ ಇಲ್ಲದಾಗ ಅವನು ಧರಿಸಿದ ಶರ್ಟ್‌ನ ಕಾಲರ್ ಹಿಡಿದು ಹಿಂದಕ್ಕೆ ಎಳೆಯಬೇಕು. ಮೇಲಿನ ಬಟನ್ ಧರಿಸಿರುವುದರಿಂದ ಕುತ್ತಿಗೆ ಬಿಗಿದು ಅಸಹಾಯಕನಾಗುತ್ತಾನೆ.

೫.ರಾತ್ರಿಯ ಸಮಯದಲ್ಲಿ ನಿಮ್ಮನ್ನು ಯಾರಾದರೂ ಅನುಸರಿಸುತ್ತಿದ್ದರೆ...
*ದಾರಿಯ ಪಕ್ಕದಲ್ಲಿರುವ ಅಂಗಡಿ ಅಥವಾ ಮನೆಯನ್ನು ಗುರುತಿಸಿ ನಿಮ್ಮ ಪರಿಸ್ಥಿತಿಯನ್ನು ವಿವರಿಸಿ. ಕೆಲವೊಂದು ಸಂದರ್ಭದಲ್ಲಿ ರಾತ್ರಿ ಸಮಯದಲ್ಲಿ ಅಂಗಡಿಗಳು ಮುಚ್ಚಿರುತ್ತವೆ. ಈ ಸಂದರ್ಭದಲ್ಲಿ ನೇರವಾಗಿ ಎಟಿಎಂ ನೊಳಗೆ ಹೋಗಬೇಕು. ಎಟಿಎಂ ಕೇಂದ್ರದಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳು ಇರುತ್ತಾರೆ. ಅಲ್ಲದೇ ಕ್ಲೋಸ್ ಸರ್ಕ್ಯೂಟ್ ಟೆಲಿವಿಷನ್ ಮೂಲಕ ಎಲ್ಲವನ್ನು ಪರೀಕ್ಷಿಸಲಾಗುತ್ತದೆ. ಗುರುತು ಹಿಡಿಯಬಹುದು ಎನ್ನುವ ನೆಲೆಯಲ್ಲಿ ದಾಳಿಗೆ ಮುಂದಾಗುವುದಿಲ್ಲ.
ಮಾನಿನಿಯರೇ, ಇದೆಲ್ಲದಕ್ಕಿಂತ ಮುಖ್ಯವಾಗಿ ಮಾನಸಿಕ ಎಚ್ಚರಿಕೆಯನ್ನು ಹೊಂದಿ, ಧೈರ್ಯವನ್ನು ತಂದುಕೊಂಡಾಗ ಅದುವೇ ನಿಮ್ಮ ಪಾಲಿಗೆ ಮಹಾನ್ ಆಯುಧವಾಗುತ್ತದೆ. ಯಾವುದೇ ಸಂದರ್ಭದಲ್ಲಿಯೂ ಧೈರ್ಯಗೆಡದಿರಿ..ಸ್ನೇಹಿತರೇ ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಪ್ರೀತಿ-ಪಾತ್ರ ಸಹೋದರಿಯರೊಂದಿಗೆ ಹಂಚಿಕೊಂಡಾಗ ಭವಿಷ್ಯದಲ್ಲಿ ಸಂಭವಿಸುವ ಘಟನೆಗಳಿಗೆ ಧೈರ್ಯ ತುಂಬಬಹುದು ಏನಂತಿರಾ...



ಅವಳು ನನಗೆ ಬೇಕೇ ಬೇಕು ಎನ್ನುವ ತಿಕ್ಕಲುತನದ ಅಪಾಯ..!ಅನಾಹುತ..!
ಪ್ರೀತಿ-ಪ್ರೇಮದ ಗುಂಗಿನಲ್ಲಿ ತಂದೆ-ತಾಯಿಯನ್ನು ಬೇರೆ ಮಾಡುವ ಯುವಜನಾಂಗ 

ವೈಜ್ಞಾನಿಕ ಯುಗದಲ್ಲಿ ನಾವಿದ್ದೇವೆ ಎಂದು ಎದೆಯುಬ್ಬಿಸಿ ಹೇಳಿಕೊಳ್ಳುತ್ತೇವೆ. ನಾವು ಮಾಡಬೇಕಾದ ಹೆಚ್ಚಿನ ಕೆಲಸವನ್ನು ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುವ ಕಂಪ್ಯೂಟರ್, ರೊಬೋಟ್‌ಗಳು, ವಿಷಯಗಳ ತಾಣ ಇಂಟರ್ನೆಟ್, ಸಂಬಂಧಗಳನ್ನು ಬೆಳೆಸುವ ಜಾಲತಾಣಗಳು ಅನೇಕವಿದ್ದರೂ, ನಾವೆಲ್ಲೋ ಕಳೆದು ಹೋಗುತ್ತಿದ್ದೇವೆ ಎನ್ನುವ ಭಾವನೆ ನಮಗೆ ಬರುವುದೇ ಇಲ್ಲಾ. ಹಿಂದಿನ ಕಾಲದಲ್ಲಿ ಪತ್ರದ ಮೂಲಕ ಸಂಪರ್ಕಿಸಬೇಕಿದ್ದ ಮಾನವೀಯ ಕೌಟುಂಬಿಕ ಸಂಬಂಧಗಳಿಂದು, ಕ್ಷಣಮಾತ್ರದಲ್ಲಿ ಅವರನ್ನು ಸಂಪರ್ಕಿಸುವ, ಅವರೊಂದಿಗೆ ಗಂಟೆಗಟ್ಟಲೆ ಹರಟೆ ಹೊಡೆಯುವ ಸಾಧನಗಳು ಮನುಷ್ಯ ಕೈ ಸೇರಿವೆ. ಇದರಿಂದಾಗಿ ಮನುಷ್ಯನಿಗೆ ಸ್ವಂತವಾಗಿ ಆಲೋಚಿಸುವ ಬುದ್ದಿ ಕಡಿಮೆಯಾಗಿದೆ ಎನ್ನುವುದಂತೂ ಸ್ಪಷ್ಟ.
ಮೊಬೈಲ್ ಮೂಲಕ ಹತ್ತಾರು ರೋಮ್ಯಾಂಟಿಕ್ ಮೆಸೇಜ್‌ಗಳು ರವಾನೆಯಾಗಿದ್ದೇ ತಡ ಪ್ರೀತಿ ಪ್ರೇಮದ ಪುರಾಣವೇ ಆರಂಭವಾಗುವ ಈ ದಿನದಲ್ಲಿ ಮುಂದಾಗುವ ಪರಿಣಾಮದ ಪರಿವಿಲ್ಲದೇ ದುಡುಕುವ ಹುಡುಗಾಟದ ಹುಡುಗ-ಹುಡುಗಿಯರು ಏನೇನೋ ಅನಾಹುತ ಅನುಭವಿಸುವುದಿದೆ. ``ಕಾಮಾತುರಾಣಾಂ ನ ಭಯಂ ನ ಲಜ್ಜಾ" ಎನ್ನುವ ಮಾತಿನಂತೆ ಬರೀ ಮೋಹವನ್ನೆ ಪ್ರೀತಿಯೆಂದು ಪರಿಭಾವಿಸುವ ಹುಚ್ಚು ಖೊಡಿ ಮನಸ್ಸಿನ ಬೆನ್ನಿಗೆ ಬಿದ್ದವರು ಮಾಡಬಾರದ್ದನ್ನೆಲ್ಲಾ ಮಾಡಿ, ತಮ್ಮ ಬದುಕನ್ನೇ ನರಕವಾಗಿಸಿಕೊಳ್ಳುತ್ತಾರೆ. ನಮ್ಮೂರಿನ ಎರಡು ಘಟನೆಯನ್ನು ನೀವು ತಿಳಿದಾಗ ಕೌಟುಂಬಿಕ ಸಂಬಂಧಗಳ ಸೂಕ್ಷ್ಮತೆಯ ಅರಿವು ನಿಮ್ಮ ಪಾಲಿಗೂ ತಿಳಿಯುತ್ತದೆ.
ಘಟನೆ-೧:
ಬಂಟ ಸಮುದಾಯದ ದಂಪತಿಗೆ ನಾಲ್ವರು ಮಕ್ಕಳಲ್ಲಿ ಬದುಕಿದ್ದು ಆರತಿಗೊರ್ವ ಮಗ(ಚಂದ್ರ), ಕೀರ್ತಿಗೊರ್ವಳು ಮಗಳು ಲತಾ(ಹೆಸರು ಬದಲಿಸಲಾಗಿದೆ). ಇವರ ತಂದೆ ಎಲ್ಲರಂತೆ ಕುಡಿತದ ಹವ್ಯಾಸಕ್ಕೆ ತೊಡಗಿ, ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಡುಕ ಗಂಡ ಉಪಟಳವಿದ್ದರೂ, ತಾಯಿ ಮಾತ್ರ ಮಕ್ಕಳನ್ನು ಕಷ್ಟ ಪಟ್ಟು ಓದಿಸುತ್ತಿದ್ದರು. ತಾಯಿಯ ಆಸೆಗೆ ಮಗ ಚಂದ್ರ ಮಸಿ ಬಳಿಯದೆ ಚೆನ್ನಾಗಿ ಓದಿ ಉದ್ಯೋಗಗಿಟ್ಟಿಸಿಕೊಂಡು ಸಂತೋಷದ ಜೀವನ ನಡೆಸಬೇಕು ಎನ್ನುವ ಆಸೆ ಚಿಗುರೊಡೆದಿತ್ತು. ತಂಗಿಯಾದ ಲತಾ ಅಣ್ಣನಂತೆ ಚೆನ್ನಾಗಿ ಓದು ಮುಗಿಸುವ ಬದಲು ಪ್ರಥಮ ಪಿಯುಸಿಗೆ ಹೋಗುವಾಗಲೇ ಪ್ರೀತಿ ಪ್ರೇಮದ ಸುಳಿಗೆ ಸಿಲುಕಿ, ಅದು ಮನೆಯವರಿಗೆ ವಿಷಯ ತಿಳಿಯುವುದರೊಂದಿಗೆ ಶಿಕ್ಷಣಕ್ಕೆ ತೀಲಾಂಜಲಿಯನ್ನಿಟ್ಟುಕೊಂಡಿದ್ದಳು. ಇಷ್ಟಾದ ಮೇಲೆಯೂ ಕೂಡ ಆಕೆಗೆ ಬುದ್ದಿ ಬರಬೇಕಿತ್ತು. ಆದರೆ ಮನೆಯ ಹತ್ತಿರದ ದೇವಸ್ಥಾನಕ್ಕೆ ಆರೂಢ ಪ್ರಶ್ನೆ ಕೇಳಲು ಕೇರಳದ ಪುದುವಾಳರು ಬಂದಿದ್ದು, ಅವರನ್ನು ಕರೆದುಕೊಂಡು ಬಂದ ಕಾರಿನ ಚಾಲಕನೊಂದಿಗೆ ಪ್ರೇಮಾಂಕುರವಾಗಿತ್ತು. ಅಲ್ಲಿನ ಇವರಿಬ್ಬರ ಸಂಭಾಷಣೆ ಮುಂದುವರಿದು, ರಿಜಿಸ್ಟರ್ ಮದುವೆಯಲ್ಲಿ ಕೊನೆಗೊಂಡಿತ್ತು. ಆದರೆ ಲತಾಳನ್ನು ಮದುವೆಯಾದವನಿಗೆ ಅದು ಪ್ರಥಮ ಮದುವೆಯಾಗಿರಲಿಲ್ಲ. ಸತ್ಯ ತಿಳಿಯುವುದರೊಳಗೆ ಕಾಲ ಮಿಂಚಿ ಹೋಗಿದ್ದು, ಆಕೆ ಸಂಪೂರ್ಣವಾಗಿ ತವರಿನ ಸಂಬಂಧ ಕಡಿದುಕೊಂಡಿದ್ದಳು. ಕಷ್ಟದ ಜೀವನ ಸಾಗಿಸುತ್ತಿದ್ದ ಲತಾ ಕೊನೆಗೊಂದು ದಿನ ಮನೆಯವರೊಂದಿಗೆ ನನಗಿಲ್ಲಿ ಕಷ್ಟವಾಗುತ್ತಿದೆ ಎಂದು ಹೇಳಿದವಳು ಇತ್ತೀಚಿಗೆ ಹೆಣವಾಗಿ ಮನೆಗೆ ಬಂದಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಂಡಳೇ? ಕೊಲೆಯೋ? ಎನ್ನುವುದು ಇನ್ನೂ ಕೂಡ ಪ್ರಶ್ನಾತೀತ.
ಘಟನೆ:೨:
ಇವರು ಕೂಡ ಮಧ್ಯಮ ವರ್ಗದ ಬಂಟ ಸಮುದಾಯದ ತಂದೆ ತಾಯಿಗೆ ಮೂವರು ಮಕ್ಕಳು. ಇಬ್ಬರು ಗಂಡು ಹಾಗೂ ಓರ್ವ ಹುಡುಗಿ. ಹಿರಿಯವ ಅಣ್ಣ, ನಂತರದಲ್ಲಿ ಹೆಣ್ಣು ಕೊನೆಯವನೇ ಹರ್ಷರಾಜ್(ಹೆಸರು ಬದಲಿಸಲಾಗಿದೆ). ತಂದೆ-ತಾಯಿ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಚೆನ್ನಾಗಿ ಓದಿಸಿದ್ದರು. ಅಣ್ಣ ಒಳ್ಳೆಯ ಉದ್ಯೋಗ ಪಡೆದು ತಂಗಿಗೆ ಮದುವೆ ಮಾಡಿಸಲು ಹೆಣ್ಣನ್ನು ನೋಡುತ್ತಿರುವಾಗಲೇ ಹವ್ಯಾಸಿ ಫೋಟೋಗ್ರಫಿ ಕೆಲಸ ನಿರ್ವಹಿಸುತ್ತಿದ್ದ ತಮ್ಮ ರಾಯನ ಪ್ರೀತಿಯಲ್ಲಿ ಮೋಹವೇ ಜಾಸ್ತಿಯಾಗಿ ಅದು ಕಾಮವಾಗಿ ಮಾರ್ಪಟ್ಟಿತ್ತು. ಅಕ್ಕನಿಗೆ ಮದುವೆ ಮಾಡಿಸಬೇಕು, ತಂದೆ ತಾಯಿಗೆ ಬೆನ್ನೆಲುಬಾಗಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಕಿಂಚಿತ್ ಯೋಚನೆಯೇ ಇಲ್ಲದೇ ತಾನು ಪ್ರೀತಿಸಿದ ಹೆಣ್ಣಿನೊಂದಿಗೆ ಮನೆ-ಸಂಬಂಧವನ್ನು ತೊರೆದು ಬೇರೆ ಊರಿನಲ್ಲಿ ನೆಲೆಯಾಗಿ ಬಿಟ್ಟ. ಇಂತಹ ಪರಿಸ್ಥಿತಿಯಲ್ಲಿ ಮನೆಯ ವಾತಾವರಣ ಹೇಗಿರುತ್ತದೆ ಎನ್ನುವುದನ್ನು ಊಹಿಸಲು ಕಷ್ಟಸಾಧ್ಯ. ಮದುವೆಯಾಗದ ಅಕ್ಕನಿಗೆ ಗಂಡು ನೋಡಲು ಹೆಣಗುವ ಅಣ್ಣ, ಕಷ್ಟಪಟ್ಟು ಸಾಕಿ ಬೆಳೆಸಿ, ಅನಾರೋಗ್ಯದಲ್ಲಿರುವ ಪೋಷಕರನ್ನು ಲೆಕ್ಕಿಸದೇ ಪ್ರೀತಿಯ ಮೋಹಕ್ಕೆ ಸಿಲುಕಿ ಮನೆಬಿಟ್ಟು ತೆರಳಿದ ವಿದ್ಯಾವಂತ ಯುವಕ ಹರ್ಷರಾಜ್.
ಹೀಗೆ ಅನೇಕ ಘಟನೆಗಳು ಸಮಾಜದಲ್ಲಿ ನಡೆಯುತ್ತಿರುತ್ತವೆ. ಪ್ರೀತಿ ಮಾಡುವುದು ತಪ್ಪಲ್ಲ. ಅದನ್ನು ಪಡೆದುಕೊಳ್ಳಬೇಕು ಎನ್ನುವ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಹುಚ್ಚು ಪ್ರೀತಿಗೆ ಬಲಿಯಾಗಿ, ಹಿಂದೆ ಮುಂದೆ ಆಲೋಚಿಸದೆ ತನ್ನ ಜೀವನವನ್ನೇ ಕೊನೆಗಾಣಿಸಿದ ಲತಾ ಒಂದೆಡೆಯಾದರೆ, ಮುತ್ತು ಕೊಡೊಳು ಸಿಕ್ಕಾಗ ತುತ್ತನ್ನ ನೀಡಿದ ಪೋಷಕರನ್ನು ತೊರೆದ ಹರ್ಷರಾಜ್ ಇವರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ನಿರೀಕ್ಷಿಸಲು ಸಾಧ್ಯವೇ? ಪೋಷಕರು ನೋಡಿದ ಗಂಡು-ಹೆಣ್ಣನ್ನು ಮದುವೆ ಮಾಡಿಕೊಂಡಾಗ ಸಂತೋಷದ ಜೀವನ ಸಾಗಿಸಬಹುದಾಗಿದ್ದರೂ, ಎಲ್ಲಿಯೋ ಒಂದು ಕಡೆ ನಾವು ಎಡವುತ್ತಿದ್ದೇವೆ ಎನ್ನುವುದು ಸತ್ಯ.
ಈ ವಿಷಯ ಪ್ರಸ್ತಾಪಿಸುವಾಗ ನನ್ನ ಸ್ನೇಹಿತನೊರ್ವ ಕರೆ ಮಾಡಿ, ತಂದೆ-ತಾಯಿಯರ ಮಾತಿಗೆ ಮನ್ನಣೆ ನೀಡಿ, ಹಿಂದು ಸಂಪ್ರದಾಯದಂತೆ ತಂಗಿಯರಿಗೆ ಮದುವೆ ಮಾಡಿಸಿದ ನಂತರವೇ ಮದುವೆಯಾಗಲು ತೀರ್ಮಾನಿಸಿ ವರ್ಷ ಮೂವತ್ತು ಕಳೆದರೂ ಮದುವೆ ಯಾಗುವುದು ಬಿಡು. ಪ್ರೀತಿಯ ಬಲೆಯಲ್ಲಿ ಸಿಲುಕಲು ಸಾಧ್ಯವಾಗಿಲ್ಲ ಎಂದಾಗ ಆತನ ಮಾತಿನಲ್ಲೂ ಸತ್ಯಾಂಶವಿದೆ ಎನಿಸಿತು. ಆತ ಪ್ರೀತಿ ಮಾಡಲು ಸಾಧ್ಯವಿಲ್ಲದೆ ಇಲ್ಲಿಯವರೆಗೆ ಕುಳಿತಿರುವುದಲ್ಲ. ಆತನ ಮೇಲಿರುವ ಘನತರ ಜವಾಬ್ದಾರಿ ಮುಗಿಸಿದ ನಂತರ ಮದುವೆಯಾಗಬೇಕು ಎನ್ನುವ ನೆಲೆಯಲ್ಲಿ ತಂದೆ ತಾಯಿಗೆ ಆಸರೆಯಾಗಬೇಕು ಎನ್ನುವ ಉನ್ನತವಾದ ಗುರಿಯಿದೆಯಲ್ಲ. ಪ್ರಸ್ತುತ ವೈಜ್ಞಾನಿಕ ಯುಗದಲ್ಲಿ ಇಂತಹ ಉದಾತ್ತವಾದ ಗುರಿ, ಉದ್ದೇಶಗಳು ಮರೆಯಾಗುತ್ತಿದೆ ಎನ್ನುವ ಸತ್ಯ ಅರಿಯಬೇಕಿದೆ.
ಪ್ರೀತಿ ಎನ್ನುವುದು ಸಹಜವಾದುದೇ? ಆದರೆ ಇದೇ ಪ್ರೀತಿಯು ಹಲವು ರೀತಿಯ ಗೊಂದಲದ ಸಂಗತಿಗಳಿಗೆ ಎಡೆಮಾಡುತ್ತದೆ. ಎರಿಕ್ ಫ಼್ರಾಮ್ ಎನ್ನುವ ಸಮಾಜಶಾಸ್ತ್ರಜ್ಞ ಹೇಳುವ ಹಾಗೆ ನಿಜವಾದ ಪ್ರೀತಿಯಲ್ಲಿ ಕೊಡುವ ಗುಣವಿದೆಯೇ ಹೊರತು ಕಸಿಯುವ, ಕಿತ್ತುಕೊಳ್ಳುವ, ವಿರೂಪಗೊಳಿಸುವ ಭಂಜನೆಯ ಗುಣವಿರುವುದಿಲ್ಲ. ಪೊಸ್ಸೆಸ್ಸಿವ್ ಗುಣ ಒಂದು ಹಂತದವರೆಗೆ ಓಕೆ. ಆದರೆ ಅದು ಅತಿರೇಕಕ್ಕೆ ತಿರುಗಿ ಏನೇ ಆಗಲಿ ಅವಳು ನನಗೆ ಬೇಕೆ ಬೇಕು, ಪಡೆದೆ ತೀರುತ್ತೇನೆ ಎನ್ನುವ ಹಠ ಪ್ರಯೋಗದ ನಡುವೆ ಅವಳು ಒಂದೊಮ್ಮೆ ಒನ್‌ವೇ ಪ್ರೀತಿಯನ್ನು ನಿರಾಕರಿಸಿದ್ದೆಯಾದರೆ ಈತ ಇದ್ದಕ್ಕಿದ್ದಂತೆ ಸೈತಾನ ರೂಪ ತಾಳುತ್ತಾನೆ. ಅಷ್ಟರವರೆಗೆ ಚಿನ್ನ, ರನ್ನ ಎಂದು ಕೊಂಡಾಡಿದ ವ್ಯಕ್ತಿ ಆಕೆಯ ಸುಂದರ ಮುಖಕ್ಕೆ ಆಸಿಡ್ ಎರಚುವುದೋ, ಕತ್ತು ಕೊಯ್ಯುವ ಇಲ್ಲವೇ ಹಲ್ಲೆ ಮಾಡುವ ಹುಂಬತನಕ್ಕಿಳಿಯುತ್ತಾನೆ. ಇಂಥಾ ತಿಕ್ಕಲು ಮನ:ಸ್ಥಿತಿಯನ್ನೇ ಸಿನೆಮಾ ಮಾಡಿ ದುಡ್ಡು ಮಾಡಿಕೊಂಡವರಿಗೂ ನಮ್ಮಲ್ಲಿ ಕೊರತೆಯೆನಿಲ್ಲಾ.
ತಿಕ್ಕಲು ಹುಡುಗನೊಬ್ಬನ ಅತಿಯಾದ ಪೊಸೆಸ್ಸಿವ್‌ನಿಂದಾಗಿ ಅನೇಕ ಸುಂದರ ಯುವತಿಯರಿಂದು ವಿಕಾರವಾಗಿದ್ದಾರೆ. ೧೯೯೯ ರ ಎಪ್ರಿಲ್ ೨೦ರಂದು ಹಸೀನಾ, ೨೦೦೧ರ ಫೆಬ್ರವರಿಯಲ್ಲಿ ನೂರಜಹಾನ್, ೨೦೦೨ರ ಆಗಸ್ಟ್ ೧೨ರಂದು ಶ್ರುತಿ ಸತ್ಯನಾರಾಯಣ, ೨೦೦೭ರ ಜೂನ್ ೨೪ರಂದು ಸರೋಜಿನಿ ಕಲಭಾಗ, ೨೦೦೭ರ ಅಗಸ್ಟ್ ೮ ರಂದು ಹಿನಾ ಫ಼ಾತಿಮಾ, ೨೦೦೮ರ ಅಕ್ಟೋಬರ್ ೨೧ರಂದು ಕಾರ್ತಿಕಾ ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಇವರೆಲ್ಲರೂ ಆಸಿಡ್ ಧಾಳಿಗೆ ತುತ್ತಾದವರು. ಇದು ನಿಜವಾದ ಪ್ರೀತಿಯೇ? ಖಂಡಿತಾ ಅಲ್ಲಾ. ನಿಜವಾದ ಪ್ರೀತಿಯು ಹೀಗೆ ಹಿಂಸೆ-ಸೇಡಿಗೆ ಪುಷ್ಟಿ ನೀಡುವುದಿಲ್ಲ ಎನ್ನುವ ಸತ್ಯಾಂಶ ತಿಳಿದಿರಬೇಕು.
ಈಚೆಗೆ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ಆಕಾಶ ಎನ್ನುವ ಹುಡುಗ ರೋಷನಿ ಗುಪ್ತಾ ಎನ್ನುವ ಹುಡುಗಿಯನ್ನು ಕೊಡಲಿಯಿಂದ ಹಲ್ಲೆ ಮಾಡಿದ್ದು ಅಲ್ಲದೆ ಮರಣಪತ್ರ ಬರೆದಿಟ್ಟು ತಾನೂ ಕೂಡಾ ಕತ್ತು ಕತ್ತರಿಸಿಕೊಂಡಿದ್ದಾನೆ. ರೋಷನಿಯ ತಲೆಬುರುಡೆಗೆ ತೀವ್ರ ಪೆಟ್ಟು ಬಿದ್ದು ಈಗ ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಕೊಡಲಿಯ ಪೆಟ್ಟು ಕೊಟ್ಟಾತ ಅದಾಗಲೇ ಇಹಲೋಕ ತ್ಯಜಿಸಿದ್ದಾನೆ. ಬಿಹಾರ ಗಯಾ ಮೂಲದ ಆಕಾಶ ಒಬ್ಬ ಬಡ ರೈತನ ಮಗ. ಓದಲೆಂದು ದೆಹಲಿಗೆ ಬಂದವನು ಮಾಡಿರುವ ಕಿಸಾಮತಿ ಇದು. ಆತ ಬರೆದಿರುವ ಮರಣ ಪತ್ರದಲ್ಲಿ ನನ್ನನ್ನು ಕ್ಷಮಿಸಿ, ಪ್ರತಿ ಬಾರಿಯೂ ಹುಡುಗರದೆ ತಪ್ಪಿರುವದಿಲ್ಲ.. ನಾನು ಎಂಥವನು ಎನ್ನುವದನ್ನು ನನ್ನ ಗೆಳೆಯರಿಂದ ಕೇಳಿ ತಿಳಿಯಿರಿ ಹೀಗೆ ಇನ್ನೂ ಅನೇಕ ವಿಷಯಗಳನ್ನು ನಾಲ್ಕು ಪುಟದ ಪತ್ರದಲ್ಲಿ ಬರೆದಿದ್ದ ಆಕಾಶ್. ಸ್ನೇಹಿತರು ಹೇಳುವಂತೆ ಆಕಾಶ್ ಅಂತರ್ಮುಖಿಯಾಗಿದ್ದು, ಕಡಿಮೆ ಮಾತನಾಡುತ್ತಿದ್ದ. ತನ್ನದೆ ಸಹಪಾಠಿಯನ್ನು ಭೀಕರವಾಗಿ ಕೊಡಲಿಯಿಂದ ಹಲ್ಲೆ ಮಾಡಿ, ತಾನೂ ಸಾವಿಗೀಡಾಗಿದ್ದು ಸರಿಯಾದ ನಿಲುವಂತೂ ಅಲ್ಲವೇ ಅಲ್ಲಾ.
ಮೇ ತಿಂಗಳಲ್ಲಿ ಮುಂಬೈನ ಬಾಂದ್ರಾದಲ್ಲಿ ಒಬ್ಬ ಯುವಕ ೨೩ ವರ್ಷ ವಯಸ್ಸಿನ ಯುವತಿಯ ಮುಖಕ್ಕೆ ಆಸಿಡ್ ಎರಚಿ ಪರಾರಿಯಾದ. ಆ ಹುಡುಗಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾಳೆ ಅವಳ ಮೊಬೈಲನ್ನು ಪೋಲಿಸರು ಪರಿಶೀಲಿಸಿದಾಗ ಅದರಲ್ಲಿ ಸುಮಾರು ೨೫೦ ರಷ್ಟು ರೋಮ್ಯಾಂಟಿಕ್ ಸಂದೇಶಗಳಿದ್ದವು. ಆ ಸಂದೇಶಗಳು ದೆಹಲಿಯ ಅನಾಮಿಕನೊಬ್ಬನಿಂದ ಬಂದಿತ್ತು. ಕಳೆದ ತಿಂಗಳು ಚೆನೈನ ಎಮ್‌ಜಿಆರ್ ಸ್ವಾಯತ್ತ ವಿಶ್ವವಿದ್ಯಾಲಯದಲ್ಲಿ ಜಾರ್ಖಂಡ್ ಮತ್ತು ಬಿಹಾರದ ಇಬ್ಬರು ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ವಿಷಯವಾಗಿ ಜಗಳಾಡಿ ಒಬ್ಬಾತ ಪಿಸ್ತೂಲಿನಿಂದ ಇನ್ನೊಬ್ಬನ ತಲೆಗೆ ಗುರಿಯಿಟ್ಟಿದ್ದ. ಹೊಡೆದವನು ತಾನು ಪ್ರೀತಿಸುತ್ತಿರುವ ಹುಡುಗಿಯೊಂದಿಗೆ ಮಾತನಾಡಬೇಡ ಎನ್ನುವುದು ಕಡಕ್ ವಾರ್ನಿಂಗ್ ಆಗಿತ್ತು. ವಿಚಿತ್ರವೆಂದರೆ ಆ ಹುಡುಗಿ, ಈ ಇಬ್ಬರು ಯುವಕರು ಒಂದೇ ತರಗತಿಯಲ್ಲಿ ಓದುವವರು.
ಕಳೆದ ಎಪ್ರಿಲ್‌ನಲ್ಲಿ ಮುಂಬೈನ ಠಾಣಾದಲ್ಲಿ ಒಂದು ಘಟನೆ ನಡೆದಿತ್ತು. ೧೯ ವರ್ಷದ ಓರ್ವ ಯುವತಿಯನ್ನು ೨೨ ವರ್ಷದ ಒಬ್ಬ ಯುವಕ ಪ್ರೀತಿಸುತ್ತಿದ್ದ. ಅದು ಬಹುತೇಕ ಒನ್‌ವೇ ಲವ್ ಆಗಿತ್ತು. ಆ ಹುಡುಗಿ ಅವನನ್ನು ಮದುವೆಯಾಗಲು ಇಷ್ಟವಿಲ್ಲ ಎಂದದ್ದೇ ಆತ ನೇರವಾಗಿ ಅವರ ಮನೆಗೆ ತೆರಳಿ, ಕಲಹಕ್ಕಿಳಿದು ಆ ಹುಡುಗಿಯ ಕತ್ತಲ್ಲಿ ಚಾಕು ಹಾಕಿ ಬಿಟ್ಟ ಹಾಗೆಯೇ ತಾನೂ ಕತ್ತನ್ನು ಸೀಳಿಕೊಂಡ. ಸುದೈವಕ್ಕೆ ಇಬ್ಬರೂ ಬದುಕಿ ಉಳಿದರು. ಇಂತಹ ಅದೆಷ್ಟೋ ಘಟನೆಗಳು ಪ್ರೇಮ ವೈಫ಼ಲ್ಯ ಇಲ್ಲವೆ ನಿರಾಕರಣೆಯ ಹೆಸರಲ್ಲಿ ನಮ್ಮೂರಲ್ಲಿಯೂ ನಡೆಯುತ್ತಿವೆ.
ಅದರಲ್ಲಿಯೂ ಈಗೀಗ ಮೊಬೈಲ್ ಮೂಲಕ ಪ್ರೇಮ ಪ್ರಕರಣ ಆರಂಭವಾಗುತ್ತಿವೆ. ಮೊಬೈಲ್‌ಗಳ ಮೂಲಕವೇ ಎಲ್ಲಾ ಸಂಬಂಧಗಳಿಗೂ ಅವಕಾಶ ಕಲ್ಪಿಸುವುದರಿಂದ ಪ್ರಬುದ್ಧತೆ ಮತ್ತು ಪರಸ್ಪರರನ್ನು ಅರಿಯಲು ಅಲ್ಲಿ ಅವಕಾಶವೇ ಇಲ್ಲದಂತಾಗಿದೆ. ಮೊಬೈಲ್ ಪರಿಚಯದ ಹುಡುಗಾಟವೇ ಪ್ರೇಮವಾಗಿ ಅನೇಕ ಅನಾಹುತಗಳಿಗೆ ಕಾರಣವಾಗಿದೆ. ಹಗಲಿರುಳೆನ್ನದೇ ನಿರಂತರ ರೋಮ್ಯಾಂಟಿಕ್ ಮೆಸೇಜ್‌ಗಳನ್ನು ರವಾನಿಸುವುದೇ ಪ್ರೀತಿ ಎನ್ನುವುದನ್ನು ತಿಳಿದುಕೊಂಡಿದ್ದಾರೆ. ಪ್ರೇಮ ಎನ್ನುವುದು ತರಾತುರಿಯಲ್ಲಿ ಕುದುರುವ ವ್ಯವಹಾರವಲ್ಲ. ಹಾಗೆಯೇ ಮೋಹ ಸೆಳೆತಗಳನ್ನೇ ಹಂಬಲಿಸಿ ಪ್ರೀತಿಸುವದು ಸರಿಯೂ ಅಲ್ಲ. ಆದರೆ ಪ್ರೀತಿಯ ಮೌಲ್ಯವನ್ನು ಅರಿಯದೇ ಸಿಕ್ಕಾಪಟ್ಟೆ ಪ್ರೀತಿಸಿ, ಯುವಸಮೂಹ ಅನಾಹುತಕ್ಕೆ ನಾಂದಿಯಾಗಿರುವ ಅನೇಕ ಘಟನೆಗಳು ನಮ್ಮ ಕಣ್ಣಮುಂದಿದೆ. ಆದರೂ ನೈಜಪ್ರೀತಿಯನ್ನು ಅರಿಯುವ ತಾಳ್ಮೆ ಕಳೆದುಕೊಂಡಿದ್ದಾರೆ.
ಪ್ರೀತಿಯನ್ನು ಒಂದು ಮೌಲ್ಯ ಎಂದು ಪರಿಗಣಿಸುವ ಮನೋಭಾವ ಬೆಳೆಯಬೇಕು. ಆ ದಿಶೆಯಲ್ಲಿ ನಮ್ಮ ಯುವಕರಿಗೆ ಸುತ್ತಲಿನ ಪರಿಸರ ಮಾರ್ಗದರ್ಶನ ನೀಡಬೇಕು. ಅದಕ್ಕೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಿರಬೇಕು. ಹಣವಿದ್ದಾಕ್ಷಣ ದೇಗುಲಗಳಿಗೆ ದಾನ ಧರ್ಮ ಮಾಡುತ್ತಾ, ಊರಿನಲ್ಲಿ ಗಣ್ಯ ವ್ಯಕ್ತಿಗಳೆಂದು ಗುರುತಿಸಿಕೊಳ್ಳುವ ವ್ಯಕ್ತಿಗಳ ಕಾಮಪುರಾಣವು ಹೆಚ್ಚಾದೊಡನೆ ಆ ಊರಿನ ಸಾಮಾನ್ಯ ಯುವಸಮೂಹವು ಕೂಡ ದೃತಿಗೆಡುತ್ತದೆ. ಮದುವೆಯಾಗಿ ಮಕ್ಕಳಿರುವ ಪುರುಷ ಅಥವಾ ಮಹಿಳೆಯೇ ಸಮಾಜದಲ್ಲಿ ಅನೈತಿಕ ವ್ಯವಹಾರದಲ್ಲಿ ಭಾಗಿಯಾಗುತ್ತಾನೆ/ಳೆ ಎಂದರೆ ಅವರಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಎನ್ನುವ ಪ್ರಶ್ನೆ ಸಹಜವಾದುದು. ಇವುಗಳ ನಡುವೆಯೇ ಪ್ರೀತಿ ಪ್ರೇಮದ ಹೆಸರಿನಲ್ಲಿ ತಲೆಕೆಡಿಸಿಕೊಂಡು ಅದು ಫಲಿಸದೇ ಹೋದಾಗ ಹೀನ ಕೃತ್ಯಗಳಿಗೂ ಮುಂದಾಗುತ್ತಾನೆ. ಪ್ರೀತಿಸಿದವರು ಬೇರಾದಾಗ ಕತ್ತು ಕತ್ತರಿಸಿಕೊಳ್ಳುವ ಇಲ್ಲವೇ ಕೊಯ್ಯುವ, ವಿಷ ಸೇವಿಸುವ ಇಲ್ಲವೇ ಆಸಿಡ್ ಎರಚುವ ಕ್ರಿಯೆಗಳಿಗಿಂತಲೂ ಈ ಪ್ರೀತಿ ಎನ್ನುವುದು ಅಗಾಧವಾದುದು. ನಿಜವಾದ ಪ್ರಾಮಾಣಿಕ ಪ್ರೀತಿ ಪರಸ್ಪರರ ಖುಷಿ ಮತ್ತು ಏಳ್ಗೆಯನ್ನು ಬಯಸುತ್ತದೆಯೇ ಹೊರತು ಪರಸ್ಪರರ ದುರಂತ ಕತೆಗಳನ್ನಲ್ಲ ಎನ್ನುವುದನ್ನು ಎಲ್ಲಾ ಯುವ ಪ್ರೇಮಿಗಳು ಅರಿತುಕೊಳ್ಳಬೇಕು. ಪ್ರೀತಿಯೆನ್ನುವುದು ಪ್ರೀತಿಸಿದ ವ್ಯಕ್ತಿಯನ್ನು ಬಲವಂತವಾಗಿ ಪಡೆದು, ಅನುಭವಿಸುವುದಲ್ಲ. ಪ್ರೀತಿಸುವ ಜೀವಗಳು ಒಂದಾಗಬೇಕು, ಪ್ರತಿನಿತ್ಯ ಜೊತೆಗಿರಬೇಕು, ಪ್ರತಿಕ್ಷಣ ಮಾತನಾಡುತ್ತಿರಬೇಕು ಎನ್ನುವುದು ಮಾತ್ರ ಪ್ರೀತಿಯಲ್ಲ. ಅನಿವಾರ್ಯ ಕಾರಣದಿಂದ ಪ್ರೀತಿಸುವವರು ದೂರಾದಾಗ ಅವರನ್ನು ಹಿಂಸಿಸದೇ, ಅವರು ಸಂತೋಷವಾಗಿರಬೇಕು ಎಂದು ಬಯಸುವುದೇ ನಿಜವಾದ ಪ್ರೀತಿ..ಏನಂತಿರಾ


ಪ್ರೀತಿ-ಪ್ರೇಮದ ಗುಂಗು-ಮೋಹದ ಮುಸುಕಿನಲ್ಲಿ ಮರೆಯಾಗುತ್ತಿರುವ ತಂದೆ-ತಾಯಿಯ ನೈಜ ಪ್ರೀತಿ

ವೈಜ್ಞಾನಿಕ ಯುಗದಲ್ಲಿ ನಾವಿದ್ದೇವೆ ಎಂದು ಎದೆಯುಬ್ಬಿಸಿ, ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತೇವೆ. ನಮ್ಮ ಕೆಲಸವನ್ನು ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುವ ಕಂಪ್ಯೂಟರ್, ರೊಬೋಟ್‌ಗಳು, ವಿಷಯಗಳ ಸಂಗ್ರಹಕ್ಕೆ ಅಂತರ್ಜಾಲ, ಸಂಬಂಧಗಳನ್ನು ಬೆಳೆಸುವ ಸಾಮಾಜಿಕ ಜಾಲತಾಣಗಳಿಂದ ನಮ್ಮತನವೆನ್ನುವುದು ನಮಗೆ ಅರಿವಿಲ್ಲದೇ ಮರೆಯಾಗುತ್ತಿದ್ದರೂ, ಅದರ ಕುರಿತು ಕ್ಯಾರೆ ಎನ್ನದೇ ದಿನ ದೂಡುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಪತ್ರದ ಮೂಲಕ ಸಂಪರ್ಕಿಸಬೇಕಿದ್ದ ಮಾನವೀಯತೆಯ, ಕೌಟುಂಬಿಕ ಸಂಬಂಧಗಳಿಂದು, ಅಂಕಿಗಳನ್ನು ಒತ್ತಿದರೆ ಕ್ಷಣಮಾತ್ರದಲ್ಲಿ ಅವರೊಂದಿಗೆ ಮಾತನಾಡುವ, ದೃಶ್ಯದ ಮೂಲಕವು ಅವರೊಂದಿಗೆ ಹರಟುವ ಸಾಧನಗಳಿಗೇನೂ ಕೊರತೆಯಿಲ್ಲಾ. ಮಾರುಕಟ್ಟೆಗೆ ದಿನನಿತ್ಯ ಹೊಸ ಹೊಸ ಸಾಧನಗಳು ಬರುತ್ತಿದ್ದು, ಮನುಷ್ಯ ಮಾತ್ರ ಅವುಗಳ ಮೊರೆ ಹೋಗಿ ಸ್ವಂತವಾಗಿ ಆಲೋಚಿಸುವ ಬುದ್ದಿ ಕಡಿಮೆಯಾಗುತ್ತಿದೆ ಎನ್ನುವುದಂತು ಸತ್ಯ. ಅದನ್ನು ಅರಿಯುವ ಮೊದಲೇ ಬಾಳಿ ಬದುಕಬೇಕಿದ್ದ ಅನೇಕರು ಸಂಬಂಧಗಳನ್ನು ಕಡಿದುಕೊಂಡಿದ್ದು ಮಾತ್ರವಲ್ಲದೇ ಲೋಕವನ್ನೇ ಬಿಟ್ಟು ಪರಲೋಕ ಸೇರಿದವರು ಅದೆಷ್ಟೋ ಮಂದಿ.
ಮೊಬೈಲ್ ಮೂಲಕ ಹತ್ತಾರು ರೋಮ್ಯಾಂಟಿಕ್ ಮೆಸೇಜ್‌ಗಳು ರವಾನೆಯಾಗಿದ್ದೇ ತಡ ಪ್ರೀತಿ ಪ್ರೇಮದ ಪುರಾಣವೇ ಆರಂಭವಾಗುವ ಈ ದಿನದಲ್ಲಿ ಮುಂದಾಗುವ ಪರಿಣಾಮದ ಪರಿವಿಲ್ಲದೇ ದುಡುಕುವ ಹುಡುಗಾಟದ ಹುಡುಗ-ಹುಡುಗಿಯರು ಏನೇನೋ ಅನಾಹುತ ಅನುಭವಿಸುವುದಿದೆ. ``ಕಾಮಾತುರಾಣಾಂ ನ ಭಯಂ ನ ಲಜ್ಜಾ" ಎನ್ನುವ ಮಾತಿನಂತೆ ಬರೀ ಮೋಹವನ್ನೆ ಪ್ರೀತಿಯೆಂದು ಪರಿಭಾವಿಸುವ ಹುಚ್ಚು ಖೊಡಿ ಮನಸ್ಸಿನ ಬೆನ್ನಿಗೆ ಬಿದ್ದವರು ಮಾಡಬಾರದ್ದನ್ನೆಲ್ಲಾ ಮಾಡಿ, ತಮ್ಮ ಬದುಕನ್ನೇ ನರಕವಾಗಿಸಿಕೊಳ್ಳುತ್ತಾರೆ. ಹಿಂದು ಸಮಾಜದ ಹೆಣ್ಣುಮಕ್ಕಳನ್ನು ಲವ್‌ಜಿಹಾದ್ ಎನ್ನುವ ಹೆಸರಿನಲ್ಲಿ ಪ್ರೀತಿಸಿ ಮದುವೆಯಾಗುವ ಮುಸ್ಲಿಂರು ಒಂದೆಡೆಯಾದರೆ, ಸ್ಲೋ ಪಾಯ್ಸ್‌ನ್‌ನಂತೆ ಮತಾಂತರದೊಂದಿಗೆ ಹಿಂದು ಹೆಣ್ಣುಮಕ್ಕಳನ್ನು ಅಪಹರಿಸುವ ಜಾಲ ಸಕ್ರೀಯವಾಗಿದೆ. ಪ್ರೀತಿಸಿದ ವ್ಯಕ್ತಿಗೆ ಹೆಣ್ಣು ಸಿಗಲಿಲ್ಲವೆಂದ ಮಾತ್ರಕ್ಕೆ ತನ್ನ ಜೀವನವೇ ಅಂತ್ಯವಾಯಿತು ಎಂದು ಹೀನ ಕೃತ್ಯಕ್ಕೂ ಮನಮಾಡುವ ಯುವ ಸಮೂಹ. ಸಮಾಜದಲ್ಲಿ ಅನೇಕ ಘಟನೆಗಳು ನಮ್ಮ ಕಣ್ಣೆದುರಿಗೆ ನಡೆಯುತ್ತಿದ್ದರೂ, ಯಾಕೆ ನಮ್ಮ ಹೆಣ್ಣುಮಕ್ಕಳಿಗೆ ಅರ್ಥವಾಗುವುದಿಲ್ಲ. ಪ್ರೀತಿಸುವ ಕಣ್ಣಿಗೆ ತಂದೆ-ತಾಯಿಯ ಪ್ರೀತಿ ಕಾಣದೇ ಹೋಗುತ್ತದೆಯೇ? ಇಲ್ಲಿನ ಉದಾಹರಣೆಗಳನ್ನು ತಿಳಿದಾಗ ಕೌಟುಂಬಿಕ ಸಂಬಂಧಗಳ ಸೂಕ್ಷ್ಮತೆಯ ಅರಿವು ಎಲ್ಲರಿಗೂ ಅರಿವಾಗುತ್ತದೆ ಎನ್ನುವುದು ನನ್ನ ಭಾವನೆ.
ಬಂಟ ಸಮುದಾಯದ ದಂಪತಿಗೆ ನಾಲ್ವರು ಮಕ್ಕಳಲ್ಲಿ ಬದುಕಿದ್ದು ಆರತಿಗೊರ್ವ ಮಗ (ಚಂದ್ರ), ಕೀರ್ತಿಗೊರ್ವಳು ಮಗಳು ಲತಾ(ಹೆಸರು ಬದಲಿಸಲಾಗಿದೆ). ಇವರ ತಂದೆ ಎಲ್ಲರಂತೆ ಕುಡಿತದ ಹವ್ಯಾಸಕ್ಕೆ ತೊಡಗಿ, ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಡುಕ ಗಂಡನ ಉಪಟಳವಿದ್ದರೂ, ತಾಯಿ ಮಾತ್ರ ಮಕ್ಕಳನ್ನು ಕಷ್ಟ ಪಟ್ಟು ಓದಿಸಿದ್ದರು. ತಾಯಿಯ ಆಸೆಯನ್ನು ಚಂದ್ರ ಹುಸಿಗೊಳಿಸಿಲ್ಲ. ಚೆನ್ನಾಗಿ ಓದಿ ಉದ್ಯೋಗಗಿಟ್ಟಿಸಿಕೊಂಡು ಸಂತೋಷದ ಜೀವನ ನಡೆಸಬೇಕು ಎನ್ನುವ ಆಸೆ ಚಿಗುರೊಡೆದಿದೆಯಷ್ಟೆ. ಲತಾ ಮಾತ್ರ ಅಣ್ಣನಂತೆ ಚೆನ್ನಾಗಿ ಓದು ಮುಗಿಸುವ ಬದಲು ಪ್ರಥಮ ಪಿಯುಸಿಗೆ ಹೋಗುವಾಗಲೇ ಪ್ರೀತಿ ಪ್ರೇಮದ ಸುಳಿಗೆ ಸಿಲುಕಿ, ಅದು ಮನೆಯವರಿಗೆ ವಿಷಯ ತಿಳಿಯುವುದರೊಂದಿಗೆ ಶಿಕ್ಷಣಕ್ಕೆ ತೀಲಾಂಜಲಿಯನ್ನಿಟ್ಟುಕೊಂಡಿದ್ದಳು. ಇಷ್ಟಾದ ಮೇಲೆಯೂ ಕೂಡ ಆಕೆಗೆ ಬುದ್ದಿ ಬರಬೇಕಿತ್ತು. ಆದರೆ ಮನೆಯ ಹತ್ತಿರದ ದೇವಸ್ಥಾನಕ್ಕೆ ಆರೂಢ ಪ್ರಶ್ನೆ ಕೇಳಲು ಕೇರಳದ ಪುದುವಾಳರು ಬಂದಿದ್ದು, ಅವರನ್ನು ಕರೆದುಕೊಂಡು ಬಂದ ಕಾರಿನ ಚಾಲಕ ಕ್ರಿಶ್ಚಿಯನ್ ಸಮುದಾಯದ ಜಾನ್‌ನೊಂದಿಗೆ ಪ್ರೇಮಾಂಕುರವಾಗಿತ್ತು. ಅಲ್ಲಿನ ಇವರಿಬ್ಬರ ಸಂಭಾಷಣೆ ಮುಂದುವರಿದು, ರಿಜಿಸ್ಟರ್ ಮದುವೆಯಲ್ಲಿ ಕೊನೆಗೊಂಡಿತ್ತು. ಆದರೆ ಲತಾಳನ್ನು ಮದುವೆಯಾದವನಿಗೆ ಅದು ಪ್ರಥಮ ಮದುವೆಯಾಗಿರಲಿಲ್ಲ ಎನ್ನುವ ಸತ್ಯ ಲತಾಳಿಗೆ ತಿಳಿಯುವುದರೊಳಗೆ ಕಾಲ ಮಿಂಚಿ ಹೋಗಿದ್ದು, ಆಕೆ ಸಂಪೂರ್ಣ ತವರಿನ ಸಂಬಂಧ ಕಡಿದುಕೊಂಡಿದ್ದಳು. ಕಷ್ಟದ ಜೀವನ ಸಾಗಿಸುತ್ತಿದ್ದ ಲತಾ ಕೊನೆಗೊಂದು ದಿನ ಮನೆಯವರೊಂದಿಗೆ ನನಗಿಲ್ಲಿ ಕಷ್ಟವಾಗುತ್ತಿದೆ ಎಂದು ಹೇಳಿದವಳು ಇತ್ತೀಚಿಗೆ ಹೆಣವಾಗಿ ಮನೆಗೆ ಬಂದಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಂಡಳೇ? ಕೊಲೆಯೋ? ಎನ್ನುವುದು ಇನ್ನೂ ಕೂಡ ಪ್ರಶ್ನಾತೀತ.
ಲವ್‌ಜಿಹಾದ್ ಹೆಸರಿನಲ್ಲಿ ಕಟಪಾಡಿಯ ಅಕ್ಷತಾ, ಕಾಸರಗೋಡಿನ ಸ್ವಪ್ನಾ, ಕುಂದಾಪುರದ ಜ್ಯೋತಿ, ಬೆಂಗಳೂರಿನ ಕಾವೇರಿ ಹೀಗೆ ಅನೇಕ ಹೆಸರುಗಳು ಪಟ್ಟಿ ಮಾಡಬಹುದು. ಪ್ರೀತಿ ಮಾಡುತ್ತೇವೆ ಎನ್ನುವ ಇವರ ಪ್ರೀತಿಯಲ್ಲಿ ಮೋಹವೇ ಜಾಸ್ತಿಯಾಗಿ ಅದು ಕಾಮವಾಗಿ ಮಾರ್ಪಟ್ಟಿತ್ತು. ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ತುತ್ತನ್ನವನ್ನು ಬೇಯಿಸಿ ಹಾಕಿದ ತಂದೆ-ತಾಯಿಯರ ಪ್ರೀತಿ ಅವರ ಕಣ್ಣಿಗೆ ಮಂಕಾಗಿ ಕಾಣುತ್ತದೆ. ಕಷ್ಟಪಟ್ಟು ಸಾಕಿ ಬೆಳೆಸಿದ, ಅನಾರೋಗ್ಯದಲ್ಲಿರುವ ಪೋಷಕರನ್ನು ಲೆಕ್ಕಿಸದೇ ಪ್ರೀತಿಯ ಮೋಹಕ್ಕೆ ಸಿಲುಕಿ ಮನೆಬಿಟ್ಟು ತೆರಳಿದ ಈ ಯುವತಿಯರು ತಮ್ಮ ಕಷ್ಟವನ್ನು ತಾವೇ ತಂದುಕೊಳ್ಳುತ್ತಾರೆ. ಲವ್‌ಜಿಹಾದ್ ಹೆಸರಿನಲ್ಲಿ ಪ್ರೀತಿಯ ಮೋಹಕ್ಕೆ ಸಿಲುಕಿ ಅವರೊಂದಿಗೆ ಹೋಗುವಾಗಲೇ ಆಲೋಚನೆ ಮಾಡಬೇಕು. ಹಿಂದು ಧರ್ಮದಲ್ಲಿದ್ದಂತೆ ಸ್ವಾತಂತ್ರ್ಯ, ಪ್ರೀತಿಸುವಾಗ ಇರುವ ಸ್ವೇಚ್ಛೆ ತಮಗೆ ಮುಂದೆ ಸಿಗುವುದಿಲ್ಲ ಎನ್ನುವ ಯೋಚನೆಯನ್ನೂ ಕೂಡ ಮಾಡುವುದಿಲ್ಲ. ಮದುವೆಯಾದ ದಿನದಿಂದಲೇ ಅವರು ಜೆರ್ಸಿ ದನದಂತೆ ವರ್ಷದಿಂದ ವರ್ಷಕ್ಕೆ ಕರು(ಮಗು)ವನ್ನು ಹಾಕುತ್ತಾ, ಬುರ್ಖಾದ ಮುಸುಕಿನಲ್ಲಿ ಜೀವನ ನಡೆಸುತ್ತಾ, ವರ್ಷವಾಗದಿದ್ದರೂ ಮುದಿಯಾಗಿ ಕಸಾಯಿಖಾನೆಗೆ ಸೇರಬೇಕಾಗುತ್ತದೆ. ಇದನ್ನು ನಮ್ಮ ಹೆಣ್ಣುಮಕ್ಕಳು ಅರಿಯದೇ ತಾವೇ ಹಗಲು ನೋಡಿದ ಬಾವಿಯಲ್ಲಿ ಹೋಗಿ ಬೀಳುತ್ತಾರೆ. ಇದನ್ನೆಲ್ಲಾ ಅರಿಯುವಾಗ ಕಾಲಮೀರಿ ಹೋಗಿರುತ್ತದೆ.
ಸಮಾಜದಲ್ಲಿಂದು ಅನೇಕ ಘಟನೆಗಳು ನಡೆಯುತ್ತಿದೆ. ಪ್ರೀತಿ ಮಾಡುವುದು ತಪ್ಪಲ್ಲ. ಮೊಬೈಲ್ ಪ್ರೀತಿಯಲ್ಲಿ ಸ್ವಾರ್ಥ, ಕಾಮವೇ ಅಧಿಕವಿರುತ್ತದೆ. ಲವ್‌ಜಿಹಾದ್ ಎನ್ನುವ ಹೆಸರಿನಲ್ಲಿ ಮುಸ್ಲಿಂ ಯುವಕರು ಹಿಂದು ಹೆಣ್ಣುಮಕ್ಕಳನ್ನು ತಮ್ಮ ಬಲೆಗೆ ಬೀಸಲು ದಿನದ ೨೪ ಗಂಟೆಗಳೂ ಸಾಮಾಜಿಕ ಜಾಲತಾಣ, ಮೊಬೈಲ್ ಸಿಕ್ಕಿದ ನಂಬರ್‌ಗಳಿಗೆ ಕರೆ, ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತಾರೆ. ಎಲ್ಲಿಯಾದರೂ ಹೆಣ್ಣು ತಪ್ಪಿ ಪ್ರತಿಕ್ರಿಯೆ ನೀಡಿದರೆ ಅವಳ ಭವಿಷ್ಯಕ್ಕೆ ಆಕೆಯೇ ಎಳ್ಳುನೀರು ಬಿಟ್ಟಂತಾಗುತ್ತದೆ. ಸಕಾಲದಲ್ಲಿ ಎಚ್ಚೆತ್ತುಕೊಂಡರೆ ಯಾವುದೇ ಅನಾಹುತಗಳು ಸಂಭವಿಸುವುದಿಲ್ಲಎನ್ನುವ ಸತ್ಯವನ್ನು ಕೂಡ ಅರಿಯಬೇಕು.
ಪ್ರೀತಿಯನ್ನು ಪಡೆಯಬೇಕು ಎನ್ನುವ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಹುಚ್ಚು ಪ್ರೀತಿಗೆ ಬಲಿಯಾಗಿ ಪೋಷಕರನ್ನು ತೊರೆಯುವ ಮಕ್ಕಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ನಿರೀಕ್ಷಿಸಲು ಸಾಧ್ಯವೇ? ಪೋಷಕರು ನೋಡಿದ ಗಂಡು-ಹೆಣ್ಣನ್ನು ಮದುವೆ ಮಾಡಿಕೊಂಡಾಗ ಸಂತೋಷದ ಜೀವನ ಸಾಗಿಸಬಹುದಾಗಿದ್ದರೂ, ಎಲ್ಲಿಯೋ ಒಂದು ಕಡೆ ನಾವು ಎಡವುತ್ತಿರುವುದಂತು ಸತ್ಯ.
ಅದಕ್ಕಿಂತಲೂ ಹೊರತಾಗಿರುವ ವಿಚಿತ್ರತೆಯ ಮನೋಭಾವ ಪ್ರೀತಿಸುವ ಮನಸ್ಸುಗಳಲ್ಲಿ ಮೂಡುತ್ತಿರುವುದು ಆಘಾತಕಾರಿ ಬೆಳವಣಿಗೆಯೇ ಸರಿ. ಪ್ರೀತಿ ಸಹಜವಾದುದೇ? ಆದರೆ ಇದೇ ಪ್ರೀತಿ ಹಲವು ರೀತಿಯ ಗೊಂದಲಗಳಿಗೆ ಎಡೆಮಾಡುತ್ತದೆ. ಎರಿಕ್ ಫ಼್ರಾಮ್ ಎನ್ನುವ ಸಮಾಜಶಾಸ್ತ್ರಜ್ಞ ಹೇಳುವ ಹಾಗೆ ನಿಜವಾದ ಪ್ರೀತಿಯಲ್ಲಿ ಕೊಡುವ ಗುಣವಿದೆಯೇ ಹೊರತು ಕಸಿಯುವ, ಕಿತ್ತುಕೊಳ್ಳುವ, ವಿರೂಪಗೊಳಿಸುವ ಭಂಜನೆಯ ಗುಣವಿರುವುದಿಲ್ಲ. ಪೊಸ್ಸೆಸ್ಸಿವ್ ಗುಣ ಒಂದು ಹಂತದವರೆಗೆ ಓಕೆ. ಆದರೆ ಅದು ಅತಿರೇಕಕ್ಕೆ ತಿರುಗಿ ಏನೇ ಆಗಲಿ ಅವಳು ನನಗೆ ಬೇಕೆ ಬೇಕು, ಪಡೆದೆ ತೀರುತ್ತೇನೆ ಎನ್ನುವ ಹಠ ಪ್ರಯೋಗದ ನಡುವೆ ಅವಳು ಒಂದೊಮ್ಮೆ ಒನ್‌ವೇ ಪ್ರೀತಿ ನಿರಾಕರಿಸಿದ್ದೆಯಾದರೆ ಈತ ಇದ್ದಕ್ಕಿದ್ದಂತೆ ಸೈತಾನ ರೂಪ ತಾಳುತ್ತಾನೆ. ಅಷ್ಟರವರೆಗೆ ಚಿನ್ನ, ರನ್ನ ಎಂದು ಕೊಂಡಾಡಿದ ವ್ಯಕ್ತಿ ಆಕೆಯ ಸುಂದರ ಮುಖಕ್ಕೆ ಆಸಿಡ್ ಎರಚುವುದೋ, ಕತ್ತು ಕೊಯ್ಯುವ ಇಲ್ಲವೇ ಹಲ್ಲೆ ಮಾಡುವ ಹುಂಬತನಕ್ಕಿಳಿಯುತ್ತಾನೆ.
ಪ್ರೀತಿಯಲ್ಲಿ ಅದನ್ನು ಪಡೆಯಬೇಕೆನ್ನುವ ಪೊಸೆಸ್ಸಿವ್‌ನಿಂದಾಗಿ ಅನೇಕ ಸುಂದರ ಯುವತಿಯರಿಂದು ವಿಕಾರವಾಗಿದ್ದಾರೆ. ೧೯೯೯ ರ ಎಪ್ರಿಲ್ ೨೦ರಂದು ಹಸೀನಾ, ೨೦೦೧ರ ಫೆಬ್ರವರಿಯಲ್ಲಿ ನೂರಜಹಾನ್, ೨೦೦೨ರ ಆಗಸ್ಟ್ ೧೨ರಂದು ಶ್ರುತಿ ಸತ್ಯನಾರಾಯಣ, ೨೦೦೭ರ ಜೂನ್ ೨೪ರಂದು ಸರೋಜಿನಿ ಕಲಭಾಗ, ೨೦೦೭ರ ಅಗಸ್ಟ್ ೮ ರಂದು ಹಿನಾ ಫ಼ಾತಿಮಾ, ೨೦೦೮ರ ಅಕ್ಟೋಬರ್ ೨೧ರಂದು ಕಾರ್ತಿಕಾ ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಇವರೆಲ್ಲರೂ ಆಸಿಡ್ ಧಾಳಿಗೆ ತುತ್ತಾದವರು. ಇದು ನಿಜವಾದ ಪ್ರೀತಿಯೇ? ಖಂಡಿತಾ ಅಲ್ಲಾ. ನಿಜವಾದ ಪ್ರೀತಿಯು ಹೀಗೆ ಹಿಂಸೆ-ಸೇಡಿಗೆ ಪುಷ್ಟಿ ನೀಡುವುದಿಲ್ಲ ಎನ್ನುವ ಸತ್ಯಾಂಶ ತಿಳಿದಿರಬೇಕು.
ಈಚೆಗೆ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ರೈತನ ಮಗನಾದ ಆಕಾಶ ಎನ್ನುವ ಹುಡುಗ ರೋಷನಿ ಗುಪ್ತಾ ಎನ್ನುವ ಹುಡುಗಿಯನ್ನು ಕೊಡಲಿಯಿಂದ ಹಲ್ಲೆ ಮಾಡಿದ್ದ. ಮೇ ತಿಂಗಳಲ್ಲಿ ಮುಂಬೈನ ಬಾಂದ್ರಾದಲ್ಲಿ ಒಬ್ಬ ಯುವಕ ೨೩ ವರ್ಷ ವಯಸ್ಸಿನ ಯುವತಿಯ ಮುಖಕ್ಕೆ ಆಸಿಡ್ ಎರಚಿ ಪರಾರಿಯಾಗಿದ್ದು, ಹುಡುಗಿ ಇನ್ನೂ ಚೇತರಿಸಿಕೊಂಡಿಲ್ಲ. ಮೊಬೈಲ್ ಪರೀಕ್ಷಿಸಿದಾಗ ಅದರಲ್ಲಿ ೨೫೦ಕ್ಕೂ ಅಧಿಕ ರೋಮ್ಯಾಂಟಿಕ್ ಮೆಸೇಜ್‌ಗಳಿದ್ದವಂತೆ.  ಕಳೆದ ತಿಂಗಳು ಚೆನೈನ ಎಮ್‌ಜಿಆರ್ ಸ್ವಾಯತ್ತ ವಿಶ್ವವಿದ್ಯಾಲಯದಲ್ಲಿ ಜಾರ್ಖಂಡ್ ಮತ್ತು ಬಿಹಾರದ ಇಬ್ಬರು ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ವಿಷಯವಾಗಿ ಜಗಳಾಡಿ ಒಬ್ಬಾತ ಪಿಸ್ತೂಲಿನಿಂದ ಇನ್ನೊಬ್ಬನ ತಲೆಗೆ ಗುರಿಯಿಟ್ಟಿದ್ದನು. ಮುಂಬೈನ ಠಾಣಾದಲ್ಲಿ ೧೯ ವರ್ಷದ ಓರ್ವ ಯುವತಿಯನ್ನು ೨೨ ವರ್ಷದ ಒಬ್ಬ ಯುವಕ ಪ್ರೀತಿಸುತ್ತಿದ್ದ. ಅದು ಬಹುತೇಕ ಒನ್‌ವೇ ಲವ್ ಆಗಿತ್ತು. ಆ ಹುಡುಗಿ ಅವನನ್ನು ಮದುವೆಯಾಗಲು ಇಷ್ಟವಿಲ್ಲ ಎಂದದ್ದೇ ಆತ ನೇರವಾಗಿ ಅವರ ಮನೆಗೆ ತೆರಳಿ, ಕಲಹಕ್ಕಿಳಿದು ಆ ಹುಡುಗಿಯ ಕತ್ತಲ್ಲಿ ಚಾಕು ಹಾಕಿ ಬಿಟ್ಟ ಹಾಗೆಯೇ ತಾನೂ ಕತ್ತನ್ನು ಸೀಳಿಕೊಂಡ. ಸುದೈವಕ್ಕೆ ಇಬ್ಬರೂ ಬದುಕಿ ಉಳಿದರು. ಇಂತಹ ಅದೆಷ್ಟೋ ಘಟನೆಗಳು ಪ್ರೇಮ ವೈಫ಼ಲ್ಯ ಇಲ್ಲವೆ ನಿರಾಕರಣೆಯ ಹೆಸರಲ್ಲಿ ನಮ್ಮೂರಲ್ಲಿಯೂ ನಡೆಯುತ್ತಿವೆ.
ನಾವು ಎಲ್ಲಿ ಎಡವುತ್ತಿದ್ದೇವೆ. ಮೊಬೈಲ್..ಇದರ ಮೂಲಕವೇ ಎಲ್ಲಾ ಸಂಬಂಧಗಳಿಗೂ ಅವಕಾಶ ಕಲ್ಪಿಸುವುದರಿಂದ ಪ್ರಬುದ್ಧತೆ ಮತ್ತು ಪರಸ್ಪರರನ್ನು ಅರಿಯಲು ಅಲ್ಲಿ ಅವಕಾಶವೇ ಇಲ್ಲದಂತಾಗಿದೆ. ಮೊಬೈಲ್ ಪರಿಚಯದ ಹುಡುಗಾಟವೇ ಪ್ರೇಮವಾಗಿ ಅನೇಕ ಅನಾಹುತಗಳಿಗೆ ಕಾರಣವಾಗಿದೆ. ಹಗಲಿರುಳೆನ್ನದೇ ನಿರಂತರ ರೋಮ್ಯಾಂಟಿಕ್ ಮೆಸೇಜ್‌ಗಳನ್ನು ರವಾನಿಸುವುದೇ ಪ್ರೀತಿ ಎನ್ನುವುದನ್ನು ಯುವಸಮೂಹ ತಿಳಿದುಕೊಂಡಿದ್ದಾರೆ. ಪ್ರೇಮ ಎನ್ನುವುದು ತರಾತುರಿಯಲ್ಲಿ ಕುದುರುವ ವ್ಯವಹಾರವಲ್ಲ. ಹಾಗೆಯೇ ಮೋಹ ಸೆಳೆತಗಳನ್ನೇ ಹಂಬಲಿಸಿ ಪ್ರೀತಿಸುವದು ಸರಿಯೂ ಅಲ್ಲ. ಆದರೆ ಪ್ರೀತಿಯ ಮೌಲ್ಯವನ್ನು ಅರಿಯದೇ ಸಿಕ್ಕಾಪಟ್ಟೆ ಪ್ರೀತಿಸಿ, ನೈಜಪ್ರೀತಿಯನ್ನು ಅರಿಯುವ ತಾಳ್ಮೆ ಕಳೆದುಕೊಂಡ ಯುವಸಮೂಹ ಅನಾಹುತಕ್ಕೆ ನಾಂದಿಯಾಗಿತ್ತಿದ್ದಾರೆ.
ಪ್ರೀತಿಯನ್ನು ಒಂದು ಮೌಲ್ಯ ಎಂದು ಪರಿಗಣಿಸುವ ಮನೋಭಾವ ಬೆಳೆಯಬೇಕು. ಆ ದಿಶೆಯಲ್ಲಿ ನಮ್ಮ ಯುವಕರಿಗೆ ಸುತ್ತಲಿನ ಪರಿಸರ ಮಾರ್ಗದರ್ಶನ ನೀಡಬೇಕು. ಅದಕ್ಕೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಿರಬೇಕು. ಹಣವಿದ್ದಾಕ್ಷಣ ದೇಗುಲಗಳಿಗೆ ದಾನ ಧರ್ಮ ಮಾಡುತ್ತಾ, ಊರಿನಲ್ಲಿ ಗಣ್ಯ ವ್ಯಕ್ತಿಗಳೆಂದು ಗುರುತಿಸಿಕೊಳ್ಳುವ ವ್ಯಕ್ತಿಗಳ ಕಾಮಪುರಾಣವು ಹೆಚ್ಚಾದೊಡನೆ ಆ ಊರಿನ ಸಾಮಾನ್ಯ ಯುವಸಮೂಹವು ಕೂಡ ದೃತಿಗೆಡುತ್ತದೆ. ಮದುವೆಯಾಗಿ ಮಕ್ಕಳಿರುವ ಪುರುಷ ಅಥವಾ ಮಹಿಳೆಯೇ ಸಮಾಜದಲ್ಲಿ ಅನೈತಿಕ ವ್ಯವಹಾರದಲ್ಲಿ ಭಾಗಿಯಾಗುತ್ತಾನೆ/ಳೆ ಎಂದರೆ ಅವರಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಎನ್ನುವ ಪ್ರಶ್ನೆ ಮೂಡುತ್ತದೆ. ಇವುಗಳ ನಡುವೆಯೇ ಪ್ರೀತಿ ಪ್ರೇಮದ ಹೆಸರಿನಲ್ಲಿ ತಲೆಕೆಡಿಸಿಕೊಂಡು ಅದು ಫಲಿಸದೇ ಹೋದಾಗ ತಾಳ್ಮೆ ಕಳೆದುಕೊಂಡು ಹೀನ ಕೃತ್ಯಗಳಿಗೂ ಮುಂದಾಗುತ್ತಾನೆ. ಪ್ರೀತಿಸಿದವರು ಬೇರಾದಾಗ ಕತ್ತು ಕತ್ತರಿಸಿಕೊಳ್ಳುವ ಇಲ್ಲವೇ ಕೊಯ್ಯುವ, ವಿಷ ಸೇವಿಸುವ ಇಲ್ಲವೇ ಆಸಿಡ್ ಎರಚುವ ಕ್ರಿಯೆಗಳಿಗಿಂತಲೂ ಈ ಪ್ರೀತಿ ಎನ್ನುವುದು ಅಗಾಧವಾದುದು. ನಿಜವಾದ ಪ್ರಾಮಾಣಿಕ ಪ್ರೀತಿ ಪರಸ್ಪರರ ಖುಷಿ ಮತ್ತು ಏಳ್ಗೆಯನ್ನು ಬಯಸುತ್ತದೆಯೇ ಹೊರತು ಪರಸ್ಪರರ ದುರಂತ ಕತೆಗಳನ್ನಲ್ಲ ಎನ್ನುವುದನ್ನು ಎಲ್ಲಾ ಯುವ ಪ್ರೇಮಿಗಳು ಅರಿತುಕೊಳ್ಳಬೇಕು. ಪ್ರೀತಿಯೆನ್ನುವುದು ಪ್ರೀತಿಸಿದ ವ್ಯಕ್ತಿಯನ್ನು ಬಲವಂತವಾಗಿ ಪಡೆದು, ಅನುಭವಿಸುವುದಲ್ಲ. ಪ್ರೀತಿಸುವ ಜೀವಗಳು ಒಂದಾಗಬೇಕು, ಪ್ರತಿನಿತ್ಯ ಜೊತೆಗಿರಬೇಕು, ಪ್ರತಿಕ್ಷಣ ಮಾತನಾಡುತ್ತಿರಬೇಕು ಎನ್ನುವುದು ಮಾತ್ರ ಪ್ರೀತಿಯಲ್ಲ. ಅನಿವಾರ್ಯ ಕಾರಣದಿಂದ ಪ್ರೀತಿಸುವವರು ದೂರಾದಾಗ ಅವರನ್ನು ಹಿಂಸಿಸದೇ, ಅವರು ಸಂತೋಷವಾಗಿರಬೇಕು ಎಂದು ಬಯಸುವುದೇ ನಿಜವಾದ ಪ್ರೀತಿ. ಪ್ರೀತಿಯ ನಡುವೆಯೂ ತಮ್ಮ ಪೋಷಕರ ಸುಖ-ಸಂತೋಷವನ್ನು ಮನಗಂಡು ಅದನ್ನು ಈಡೇರಿಸುವವರು ನಿಜವಾದ ಮಕ್ಕಳು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ತಂದೆ ತಾಯಿಯ ನೈಜ ಪ್ರೀತಿಯನ್ನು ಅರಿಯೋಣವಲ್ಲವೇ..ಏನಂತಿರಾ


ಗ್ರಾಮಾಭಿವೃದ್ಧಿಯ ಹರಿಕಾರ-ಬಡವರು-ಕುಡುಕರ ಪಾಲಿನ ನಂದಾದೀಪ
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀಕ್ಷೇತ್ರಕ್ಕೆ ಕಳಂಕ ತಂದ ದುಷ್ಟ ಶಕ್ತಿಗಳ ಸಂಚು ಬಹಿರಂಗಗೊಳ್ಳಲಿ 
ವಿದ್ಯಾ ವಿವಾದಾಯ ಧನಂ ಮದಾಯ, ಶಕ್ತಿಃ ಪರೇಷಾಂ ಪರಪೀಡನಾಯ/
ಖಲಸ್ಯ ಸಾಧೋರ್ವಿಪರೀತ ಮೇತತ್ ಜ್ಞಾನಾಯ ದಾನಾಯ ಚ ರಕ್ಷಣಾಯ//
ಸುಂದರವಾದ ಸೂಕ್ತಿಯ ನಿಜವಾದ ಅರ್ಥ ಮನಗಂಡಾಗ ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳಲ್ಲಿನ ಸೂಕ್ಷ್ಮತೆ ಅರ್ಥೈವಿಸಿಕೊಳ್ಳಲು ಸಾಧ್ಯ. ತಾತ್ಪರ್ಯವಿಷ್ಟೆ ``ದುಷ್ಟನಿಗೆ ವಿದ್ಯೆಯೆನ್ನುವುದು ವಿವಾದಗಳಿಗೂ, ಧನವು ಅಹಂಕಾರಕ್ಕೂ ಶಕ್ತಿಯು ಇನ್ನೊಬ್ಬರನ್ನು ಪೀಡಿಸಲು ಉಪಯೋಗಕ್ಕೆ ಬರುತ್ತದೆ. ಆದರೆ ಸಜ್ಜನರಿಗೆ ಹೀಗಲ್ಲ. ವಿದ್ಯೆ-ಧನ-ಶಕ್ತಿಗಳು ಜ್ಞಾನ-ದಾನ-ರಕ್ಷಣೆಗಳಿಗಾಗಿಯೇ ಸಮಾಜಕ್ಕೆ ಅವರಿಂದ ಮೀಸಲಾಗುತ್ತದೆ". ಇದು ಸಜ್ಜನ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಬಾಳಿನಲ್ಲಿ ಅಕ್ಷರಶಃ ಸತ್ಯವೆನ್ನುವುದು ನನ್ನ ಭಾವನೆ. ಮಾತ್ರವಲ್ಲ ಶ್ರೀಕ್ಷೇತ್ರ ಭಕ್ತಾಭಿಮಾನಿಗಳೆಲ್ಲರದು. ದುಷ್ಟ ಶಕ್ತಿಗಳು  ತಮ್ಮ ತಂತ್ರವನ್ನು ಸಜ್ಜನರ ಮೇಲೆಯೇ ಪ್ರಯೋಗಿಸಿದರಲ್ಲ ಎನ್ನುವಾಗ ನಾವು ಎಲ್ಲಿದ್ದೇವೆ ಎನ್ನುವ ಸಂಶಯ ಕಾಡುತ್ತದೆ.
ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ದುರುದ್ದೇಶ ಪೂರ್ವಕ ಟೀಕೆಗಳಿಂದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮನಸ್ಸು ನೋಯಿಸುವಂತ ಘಟನೆ ವರದಿಯಾಗುತ್ತಿರುವುದು ಕಲಿಯುಗದ ಸಾರ್ವಭೌಮತೆ ತಿಳಿಸುತ್ತಿವೆಯೊ ಎನ್ನುವಂತಾಗಿದೆ. ಪರಶುರಾಮ ಸೃಷ್ಟಿಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೂಲ ಲಿಂಗಾತ್ಮನಾಗಿ ಮಂಜುನಾಥ ಸ್ವಾಮಿ ಪ್ರಸಿದ್ದಿ ಪಡೆದರೂ, ಕ್ಷೇತ್ರದ ಮಹಿಮೆ ಮಾತ್ರ ಪುಣ್ಯಭೂಮಿಯ ಪಟ್ಟಾಭಿಷಿಕ್ತ ಖಾವಂದರ ಧೀಮಂತ ವ್ಯಕ್ತಿತ್ವದಿಂದಲೇ ಜಗ-ದ್ವಿಖ್ಯಾತವಾಗಿದೆ ಎನ್ನುವುದು ನೂರರಷ್ಟು ಸತ್ಯ. ಹೆಗ್ಗಡೆಯವರ ದಕ್ಷತೆಯ ದಿಟ್ಟ ನಾಯಕತ್ವ ಗುಣ ಅಸಾಮಾನ್ಯವಾದುದು. ಪ್ರಶಸ್ತಿ, ಪುರಸ್ಕಾರಗಳನ್ನು ಹಣ ನೀಡಿ ಕೊಂಡುಕೊಳ್ಳುವ ಜನರಿರುವ ಸಾಮಾನ್ಯ ಜಗತ್ತಿನಲ್ಲಿ ಸೇವೆಯ ಮೂಲಕ ವಿಶ್ವಮಾನ್ಯತೆಗೆ ಪಾತ್ರರಾಗಿ ಡಾಕ್ಟರೇಟ್, ಪದ್ಮಶ್ರೀಗಳಂತಹ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
ಧರ್ಮಕ್ಷೇತ್ರ, ಪುಣ್ಯಕ್ಷೇತ್ರದ ಧರ್ಮಾಧಿಕಾರಿಯಾಗಿ ಬಡವರ ಪಾಲಿಗೆ ಬೆಳಕಾಗಿರುವ ಪೂಜ್ಯ ಖಾವಂದರ ಕುರಿತು ಇಲ್ಲದ ಸಲ್ಲದ ಆರೋಪ ಮಾಡಿರುವುದು, ಧರ್ಮವೇ ಘನತೆವೆತ್ತ ಧರ್ಮದ ನೆಲೆಬೀಡು ಧರ್ಮಸ್ಥಳದ ಪರಿಸರದಲ್ಲಿ ವಾಸವಾಗಿರುವ ನಾಗರಿಕರಿಗೆ ಇದು ಸಭ್ಯತೆಯೆನಿಸುತ್ತದೆಯೇ? ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಸಿಐಡಿ ತನಿಖೆ ಪ್ರಗತಿಯಲ್ಲಿರುವಾಗ ಗೌರವಯುತ ವ್ಯಕ್ತಿಯ ಹಾಗೂ ಘನತೆಯ ಶ್ರೀಕ್ಷೇತ್ರದ ಮೇಲೆ ಆರೋಪ ಮಾಡಿ ಜನತೆಯ ದೃಷ್ಟಿಯಲ್ಲಿ ತಪ್ಪಿತಸ್ಥರು ಎನ್ನುವ ಭಾವನೆ ಮೂಡಿಸುವುದು ಎಷ್ಟರಮಟ್ಟಿಗೆ ಸರಿ?
ಹಿಂಸೆಯೇ ನಿಷಿದ್ದವಾದ ಜೈನಕುಲದಲ್ಲಿ ಜನಿಸಿದ ವೀರೇಂದ್ರ ಹೆಗ್ಗಡೆಯವರು ಸಮಾಜದಲ್ಲಿ ನ್ಯಾಯ, ನೀತಿ, ಧರ್ಮಕ್ಕಾಗಿ ಅವಿರತ ಶ್ರಮಿಸಿದವರು. ಕರಾವಳಿ ಜಿಲ್ಲೆಗಳು ಮಾತ್ರವಲ್ಲದೇ ರಾಜ್ಯದಲ್ಲಿರುವ ಅನೇಕ ಪ್ರದೇಶಗಳಲ್ಲಿ ಸಾಮಾಜಿಕ-ಶೈಕ್ಷಣಿಕ ಸೇವೆಯೊಂದಿಗೆ ಗ್ರಾಮಾಭಿವೃದ್ಧಿಯ ಹರಿಕಾರರಾಗಿ, ಬಡವರ-ಮದ್ಯಮ ವರ್ಗದ ಜನತೆಯ ಸಮೃದ್ಧಿಯುತ ಜೀವನಕ್ಕೆ ಪ್ರೇರಕರಾಗಿದ್ದಾರೆ. ಕುಡಿತವೇ ಜೀವನವೆಂದು ಸುರಪಾನ ಮುಕ್ತರಾಗಿರುವ ಕುಟುಂಬದ ಯಜಮಾನರಿಗೆ ಮಧ್ಯವರ್ಜನಾ ಶಿಬಿರಗಳನ್ನು ಆಯೋಜಿಸಿ, ಸಮಗ್ರ ಜನತೆಗೆ ಶಾಂತಿ-ಸಮಾಧಾನ-ನೆಮ್ಮದಿಯ ಬಾಳ್ವೆಗೆ ಪಾತ್ರವಾಗಿರುವ ಹೆಗ್ಗಡೆಯವರ ಮೇಲಿನ ಆರೋಪಗಳ ಹಿಂದೆ ದುರುದ್ದೇಶ ಅಡಗಿದೆ ಎನ್ನುವುದು ಸತ್ಯ. ಘಟನೆಯ ಹಿಂದಿನ ಎಲ್ಲಾ ಮನಸ್ತಾಪ ಶೀಘ್ರವೇ ಶಮನಗೊಂಡು ಧರ್ಮಸ್ಥಳ ಕ್ಷೇತ್ರ ಹಾಗೂ ಪೂಜ್ಯ ಖಾವಂದರನ್ನು ನಂಬಿದ ಭಕ್ತ ಸಮೂಹದಲ್ಲಿ ಶಾಂತಿಯುತ, ನೆಮ್ಮದಿಯ ಬಾಳಿಗೆ ಮಂಜುನಾಥ ದೇವರು ಅನುಗ್ರಹಿಸಬೇಕು ಎನ್ನುವುದು ಸಕಲರ ಅಭಿಪ್ರಾಯ.
ಹೆಗ್ಗಡೆಯವರ ಮನಸ್ಸಿಗೆ ನೋವಾಗುವ ಘಟನೆಯಾದರೂ ಯಾವುದು?
ದೇಶದ ರಾಜಧಾನಿ ದೂರದ ದೆಹಲಿಯಲ್ಲಿ ಅಮಾನುಷವಾಗಿ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಅತ್ಯಾಚಾರ ಪ್ರಕರಣ ನಡೆದಾಗ ದೇಶ-ವಿದೇಶದ ಜನತೆ ತಮ್ಮಲ್ಲಿರುವ ಅಕ್ರೋಶ ವ್ಯಕ್ತಪಡಿಸಿದ್ದರು. ಆದರೆ ನಮ್ಮ ರಾಜ್ಯದ ಧರ್ಮದ ನೆಲೆಬೀಡು ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಪ್ರಕರಣ ರಾಜ್ಯದ ಕೆಲವು ಕಡೆ ಸುದ್ದಿ ಮಾಡಿತೇ ಹೊರತು ರಾಜ್ಯದ ಗಡಿಯನ್ನು ಕೂಡ ದಾಟಿಲ್ಲ. ದೆಹಲಿ ಹಾಗೂ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿನ ಭೀಕರತೆಗೇನು ಕಡಿಮೆಯಿರಲಿಲ್ಲ. ದೆಹಲಿಯ ೨೩ ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಎನ್ನುವ ಹುಡುಗಿಯ ಸಾವಿಗೆ ಕಣ್ಣಿರು ಸುರಿಸಿದ, ನಮ್ಮ ಜನ ಧರ್ಮಸ್ಥಳದ ೧೭ ವರ್ಷದ ಸೌಜನ್ಯಾಳ ಸಾವಿಗೆ ಮಾತ್ರ ಅಷ್ಟೊಂದು ಪ್ರಾಮುಖ್ಯತೆ ನೀಡಿಲ್ಲದಿರುವುದು ಬೇಸರದ ಸಂಗತಿ? ದೆಹಲಿಯ ಜೀವಕ್ಕೊಂದು ನ್ಯಾಯ, ಹಳ್ಳಿಯ ಜೀವಕ್ಕೊಂದು ನ್ಯಾಯವನ್ನು ಒದಗಿಸಿದ ನಾಗರಿಕರಲ್ಲಿಗ ಸಂಶಯದ ವಿಷಬೀಜವನ್ನು ಬಿತ್ತಲು ದುಷ್ಟಶಕ್ತಿಗಳು ಶ್ರಮಿಸುತ್ತಿವೆ.
ನ್ಯಾಯಕ್ಕೊಸ್ಕರ ಹೋರಾಡಿದ ಬಡ ಸೌಜನ್ಯಾಳ ಹೆತ್ತವರ ಹೋರಾಟಕ್ಕೆ ಪ್ರಕರಣ ನಡೆದು ವರ್ಷ ಒಂದಾದರೂ, ನ್ಯಾಯ ಸಿಕ್ಕಿಲ್ಲ. ಬಡ ಕುಟುಂಬದ ನೋವಿಗೆ ನ್ಯಾಯ ದೊರಕಿಸಿ ಕೊಡಬೇಕಾದ ನಮ್ಮ ಕಾನೂನು ಪಾಲಕರು ಹಾಗೂ ಕಾನೂನು ರಕ್ಷಕರು ಪ್ರಕರಣದ ನೈಜತೆಯನ್ನು ಭೇದಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವಾಗ ಸಮಾಜದ ವ್ಯವಸ್ಥೆಯ ಕುರಿತು ಪ್ರಶ್ನೆಗಳು ಎದುರಾಗುತ್ತದೆ. ದಿನದಿಂದ ದಿನಕ್ಕೆ ಸಂಶಯಾತ್ಮಕ ಪ್ರಶ್ನೆಗಳು ಹೆಚ್ಚುತ್ತಿವೆಯೇ ಹೊರತು ಉತ್ತರ ಮಾತ್ರ ಶೂನ್ಯವಾಗಿದೆ. ಹಣ, ಅಧಿಕಾರ ಬಲದಿಂದ ನ್ಯಾಯ ದೇವತೆಯ ಕಣ್ಣಿಗೆ ಶಾಶ್ವತವಾಗಿ ಬಟ್ಟೆ ಕಟ್ಟಲಾಗಿದೆ. ದೇಶದ ಅನೇಕ ಪ್ರಕರಣಗಳಲ್ಲಿ ಕಾನೂನು ದ್ವಿಮುಖವಾಗಿ ಸಾಗಿ ನ್ಯಾಯ ದೊರಕದ ಸ್ಥಿತಿ ನಿರ್ಮಾಣವಾಗಿದೆ. ಉಜಿರೆಯ ಸೌಜನ್ಯ ಪ್ರಕರಣದಲ್ಲೂ ನೈಜಅಪರಾಧಿಗಳು ಸಿಗದೆ, ಪೊಲೀಸರ ವಿಳಂಭದಿಂದ ಪೂಜ್ಯ ಹೆಗ್ಗಡೆ ಹಾಗೂ ಕ್ಷೇತ್ರದ ಹೆಸರನ್ನು ಕೆಡಿಸುವ ಷಡ್ಯಂತ್ರ ರೂಪುಗೊಂಡಿವೆ ಎನ್ನುವುದು ಮೇಲ್ಮುಖವಾಗಿ ಗೋಚರವಾಗುತ್ತದೆ.
ಅಂದು ನಡೆದದ್ದಾದರೂ ಏನು ಸ್ವಾಮಿ?
ಅಂದು ೨೦೧೨ ರ ಅ.೯ ರಂದು ಸಂಜೆ ಕಾಲೇಜಿನಿಂದ ಮನೆಗೆ ಹೊರಟ ಸೌಜನ್ಯಾ (೧೭) ಮನೆಗೆ ತಲುಪಲೇ ಇಲ್ಲ . ಮನೆಯಲ್ಲಿ ಮಗಳಿಗೋಸ್ಕರ ಕಾಯುತ್ತಿದ್ದ ಹೆತ್ತವರು ದಿನಂಪ್ರತಿ ಕಾಲೇಜಿನಿಂದ ಕ್ಲಪ್ತ ಸಮಯದಲ್ಲಿ ಆಗಮಿಸುತ್ತಿದ್ದ ಮಗಳು ಆಗಮಿಸದಿದ್ದಾಗ ಆತಂಕಗೊಂಡಿದ್ದರು. ಸ್ಥಳಿಯರ ಜೊತೆಗೂಡಿ ರಾತ್ರಿಯಿಡಿ ಹುಡುಕಿದರೂ ಮಗಳು ಮಾತ್ರ ಸಿಗಲೇ ಇಲ್ಲಾ. ಮರುದಿನ ಬೆಳಿಗ್ಗೆಯೂ ಹುಡುಕಾಟ ಮುಂದುವರಿಸಿದಾಗ ಮಧ್ಯಾಹ್ನದ ವೇಳೆಗೆ ನೇತ್ರಾವತಿ ಸ್ನಾನ ಘಟ್ಟದಿಂದ ಸ್ವಲ್ಪ ದೂರದಲ್ಲಿ ಮುಖ್ಯ ರಸ್ತೆಯಿಂದ ಬಲ ತಿರುವು ಮೂಲಕ ಪಾಂಗಾಳಕ್ಕೆ ಹೋಗುವ ರಸ್ತೆ ಬದಿಯ ಕಾಡಿನಲ್ಲಿ ಸೌಜನ್ಯಳ ಮೃತದೇಹ ಸಿಕ್ಕಿತ್ತು. ಹೆತ್ತ ಜೀವಗಳಿಗೆ ತಮ್ಮ ಮಗಳನ್ನು ಆ ಪರಿಸ್ಥಿತಿಯಲ್ಲಿ ನೋಡಿ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಆದರೆ ಹೆತ್ತವರ ನೋವು ಯಾರ ಮನಸ್ಸಿಗೂ ಅರ್ಥವಾಗಿಲ್ಲ. ಆ ಹೊತ್ತಿಗಾಗಲೇ ಅಪರಾಧಿಗಳು ತಮ್ಮ ರಕ್ತದ ಕೈಗಳನ್ನು ಪ್ರಸನ್ನೆಯಾಗಿ ಹರಿಯುತ್ತಿರುವ ನೇತ್ರಾವತಿಯಲ್ಲಿ ತೊಳೆದುಕೊಂಡು ಮನೆ ಸೇರಿದ್ದರು. ಆದರೆ ಸೌಜನ್ಯಳ ಹೆತ್ತ ಜೀವಗಳ ಪರಿಸ್ಥಿತಿಯನ್ನು ಓರ್ವ ತಂದೆಯಾಗಿಯೊ, ತಾಯಿಯಾಗಿಯೊ, ಅಣ್ಣ, ಅಕ್ಕ, ಬಂಧುವಾಗಿಯೋ ಮಾನವೀಯ ನೆಲೆಯಲ್ಲಿ ಯೋಚಿಸಿ ನೋಡಿದರೆ ಘಟನೆಯ ತೀವ್ರತೆ ಅರ್ಥವಾಗುತ್ತದೆ. ಆ ಮುಗ್ದ ಜೀವದ ಸಾವಿಗೆ ನ್ಯಾಯ ಒದಗಿಸಿಕೊಡ ಬೇಕಾಗಿದ್ದ ಆಗಿನ ಬಿಜೆಪಿ ಸರಕಾರ ಸರಿಯಾಗಿ ಆ ಘಟನೆಗೆ ನ್ಯಾಯ ಒದಗಿಸಿಕೊಡುವ ಕಿಂಚಿತ್ ಪ್ರಯತ್ನ ಕೂಡ ಮಾಡಿಲ್ಲ. ಈ ಪ್ರಕರಣದಲ್ಲಿ ಪೋಲಿಸರ ನಡೆಯೂ ಕೂಡ ಅನುಮಾನಕ್ಕೆ ದಾರಿ ಮಾಡಿ ಕೊಡುತ್ತಿದೆ. ಬಿಜೆಪಿ ಸರಕಾರ ಹಾಗೂ ಪೊಲೀಸ್ ಇಲಾಖೆ ಪ್ರಕರಣದ ಸೂಕ್ತ ತನಿಖೆ ಮಾಡಿದ್ದರೆ ಇಂದು ಧರ್ಮಸ್ಥಳ ಹಾಗೂ ಧರ್ಮವನ್ನು ಮೈಗೂಡಿಸಿಕೊಂಡ ವೀರೇಂದ್ರ ಹೆಗ್ಗಡೆಯವರ ಮೇಲೆ ವೃಥಾ ಆರೋಪಗಳು ಬರುತ್ತಿರಲಿಲ್ಲ ಎನ್ನುವುದು ಸ್ಪಷ್ಟ.
ಪ್ರಕರಣವನ್ನು ಆರಂಭದಲ್ಲಿಯೇ ಮುಚ್ಚಿಹಾಕುವ ಪ್ರಯತ್ನ ನಡೆದಿದ್ದವು ಅನ್ನೋದು ಸೌಜನ್ಯಾಳ ಹೆತ್ತವರ ಆರೋಪ. ಪ್ರಕರಣದಲ್ಲಿ ಕೆಲವೊಂದು ಪ್ರಭಾವಿ ವ್ಯಕ್ತಿಗಳ ಹೆಸರನ್ನು ತಳುಕು ಹಾಕಲಾಗಿದೆ. ಆರೋಪಿಗಳು, ಮೃತ ಸೌಜನ್ಯ ಹಾಗೂ ದೇವರಿಗೆ ಹೊರತಾಗಿ ಎಲ್ಲರೂ ಪ್ರಕರಣವನ್ನು ಕೇಳಿದ್ದಾರೆಯೇ ಹೊರತು ನೈಜತೆ ಏನೆಂಬುದು ಒಬ್ಬರಿಗೂ ತಿಳಿದಿಲ್ಲ. ಪ್ರಕರಣದ ತನಿಖೆ ನಡೆದು ನಿಜವಾದ ಆರೋಪಿಗಳಿಗೆ ಶಿಕ್ಷೆಯಾದರೆ ಸೌಜನ್ಯ ಎನ್ನುವ ಮುಗ್ದ ಆತ್ಮಕ್ಕೆ ಶಾಂತಿ ಸಿಗುತ್ತದೆ ಮಾತ್ರವಲ್ಲದೇ ಶ್ರೀ ಕ್ಷೇತ್ರದ ಮೇಲಿನ ಆರೋಪ ಹಾಗೂ ಹೆಗ್ಗಡೆಯವರ ಮೇಲಿನ ಕಳಂಕ ದೂರಾಗುತ್ತವೆ. ದೆಹಲಿ ಘಟನೆಯಂತೆ ಸೌಜನ್ಯಳ ಪ್ರಕರಣವನ್ನು ಕೇಂದ್ರ ಸರಕಾರ ಹಾಗೂ ಈಗಿನ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದಾಗ ಮಾತ್ರ ಈ ಘಟನೆಗೆ ನ್ಯಾಯ ಸಿಗಲು ಸಾಧ್ಯವಿದೆ.
ಸಿಕ್ಕಿಹಾಕಿಕೊಂಡ ಅಪರಾಧಿ?
ಸೌಜನ್ಯ ಕೊಲೆ ಪ್ರಕರಣ ಸಂಬಂಧ ಇನ್ನೊಂದು ವಾರದಲ್ಲಿ ಸರ್ಕಾರಕ್ಕೆ ಅಂತಿಮ ವರದಿ ನೀಡಲು ಸಿಐಡಿ ನಿರ್ಧರಿಸಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕುಟುಂಬ ವರ್ಗದ ಪಾತ್ರವಿದೆ ಎಂದು ಕೆಲವರು ಆಪಾದನೆ ಮಾಡಿದ ಹಿನ್ನೆಲೆಯಲ್ಲಿ, ಸರ್ಕಾರದ ಸೂಚನೆ ಪ್ರಕಾರ, ಹೆಚ್ಚುವರಿ ತನಿಖೆ ನಡೆಸಿದ ಸಿಐಡಿ ಈಗ ಅಂತಿಮ ಹಂತ ತಲುಪುತ್ತಿದೆ. ಪ್ರಾರಂಭಿಕ ತನಿಖೆಯಲ್ಲಿ ಸಿಐಡಿ ೨೦೧೩ ರ ಜನವರಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆ ವರದಿಯಲ್ಲಿ ಆರೋಪಿ ಸಂತೋಷ್ ರಾವ್ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದಾನೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹೆಚ್ಚುವರಿ ತನಿಖೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಿರುವ ಸಿಐಡಿ ಅಧಿಕಾರಿಗಳು, ಈಗ ಕೆಲವರು ಆರೋಪ ಮಾಡುತ್ತಿರುವ ವ್ಯಕ್ತಿಗಳು ಘಟನೆ ನಡೆದ ಸಂದರ್ಭದಲ್ಲಿ ಉಜಿರೆಯಲ್ಲಿ ಇರಲಿಲ್ಲ ಎಂಬ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಈ ಎಲ್ಲ ಅಂಶಗಳನ್ನು ಆಧರಿಸಿ, ಇನ್ನೊಂದು ವಾರದಲ್ಲಿ ಅಂತಿಮ ವರದಿ ನೀಡಲಿದೆ. ಪ್ರಕರಣದಲ್ಲಿ ಹೆಗ್ಗಡೆ ಕುಟುಂಬ ವರ್ಗದವರ ಕೈವಾಡವಿದೆ ಎನ್ನುವ ಆರೋಪ ವ್ಯಕ್ತವಾದ ನಂತರ ದಕ್ಷ ಅಧಿಕಾರಿ ಡಿಐಜಿ ಸೌಮೇಂದು ಮುಖರ್ಜಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್‌ಪಿ ಸಿರಿಗೌರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಆದರೆ ಹೊಸ ಆರೋಪ ಸಾಬೀತು ಮಾಡುವುದಕ್ಕೆ ಅಗತ್ಯವಾದ ಯಾವುದೇ ಅಂಶಗಳು ತನಿಖೆ ಸಂದರ್ಭದಲ್ಲಿ ಪತ್ತೆಯಾಗಿಲ್ಲ ಎನ್ನುವುದು ಅಧಿಕಾರಿಗಳ ಹೇಳಿಕೆ.
ವೈಜ್ಞಾನಿಕ ಪರೀಕ್ಷೆಯಲ್ಲಿ ರಾವ್ ಆರೋಪಿ:
ಮುಖ್ಯವಾಗಿ ಆರೋಪಿ ಸಂತೋಷ್ ರಾವ್ ಹಾಗೂ ಸೌಜನ್ಯ ಮೃತ ದೇಹದಲ್ಲಿ ದೊರೆತ ಅಂಶಗಳನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದಾಗ ಆತನೇ ಈ ಕೃತ್ಯ ಎಸಗಿದ್ದಾನೆ ಎನ್ನುವುದು ದೃಢಪಟ್ಟಿದೆ. ಈ ವಿಚಾರದ ಕುರಿತಾಗಿ ಸಿಐಡಿ ದೋಷಾರೋಪ ಪಟ್ಟಿಯಲ್ಲೂ ಹೇಳಿರುವುದನ್ನು ಗಮನಿಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆರೋಪಿ ಸಂತೋಷ್ ಕುಮಾರ್ ವಿಕೃತ ಮನಸ್ಥಿತಿಯವನಾಗಿದ್ದು, ಅಸಹಾಯಕ ಸ್ಥಿತಿಯಲ್ಲಿ ಸಿಕ್ಕ ಸೌಜನ್ಯಳ ಮೇಲೆ ಅತ್ಯಚಾರ ಎಸಗಿ ಕೊಲೆ ಮಾಡಿದ್ದ. ಪೊಲೀಸರು ಆತನನ್ನು ಬಂಧಿಸಿದಾಗ ಮೊದಲು ಕೊಲೆ ಮಾಡಿದ್ದು ಮಾತ್ರ ಹೌದು ಎಂದು ಒಪ್ಪಿದ್ದ. ನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ಅತ್ಯಾಚಾರದ ಸಂಗತಿಯನ್ನೂ ಬಾಯ್ಬಿಟ್ಟಿದ್ದ ಎಂದು ಸಿಐಡಿ ಮೂಲಗಳು ತಿಳಿಸಿವೆ. ಆತ ಅತ್ಯಂತ ವಿಕೃತವಾಗಿ ಅತ್ಯಾಚಾರ ಎಸಗಿದ್ದ. ಆ ಸಂದರ್ಭ ಆತನ ಮರ್ಮಾಂಗಕ್ಕೂ ಗಾಯವಾಗಿತ್ತು. ನಂತರ ಆತ ಸೌಜನ್ಯಳ ಗುಪ್ತಾಂಗದೊಳಗೆ ಮರಳನ್ನು ಹಾಕಿ ಪರಾರಿಯಾಗಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸೌಜನ್ಯ ಹತ್ಯೆಯನ್ನು ಸಂತೋಷ್ ರಾವ್ ಮಾಡಿದ್ದಾನೆ ಎನ್ನುವುದಕ್ಕೆ ಬೇಕಾದ ಸಾಕ್ಷ್ಯಗಳು ನಮ್ಮ ಬಳಿ ಇದೆ. ಸಿಬಿಐ ಸೇರಿದಂತೆ ಬೇರೆ ಯಾವುದೇ ತನಿಖಾ ಸಂಸ್ಥೆ ತನಿಖೆ ನಡೆಸಿದರೂ, ಇದಕ್ಕಿಂತ ಭಿನ್ನವಾದ ಸಂಗತಿ ಹೊರಬರಲು ಸಾಧ್ಯವಿಲ್ಲ ಎನ್ನುವುದನ್ನು ಸಿಐಡಿ ಅಧಿಕಾರಿಗಳು ಬಹಿರಂಗವಾಗಿ ಸವಾಲು ಹಾಕಬಲ್ಲರು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನುವಾಗ ಹೆಗ್ಗಡೆಯವರ ಮೇಲಿನ ಆರೋಪ ಷಡ್ಯಂತ್ರ ಎನ್ನುವುದು ಸ್ಪಷ್ಟ ತಾನೇ?
ಪ್ರಕರಣದ ನಂತರದಲ್ಲಿ ಹೆಗ್ಗಡೆಯವರು ಏನೆನ್ನುತ್ತಾರೆ?
ಸೌಜನ್ಯಾ ಅತ್ಯಾಚಾರ -ಕೊಲೆ ಪ್ರಕರಣ ಹಾಗೂ ಧರ್ಮಸ್ಥಳದಲ್ಲಿ ನಡೆದ ಜೋಡಿ ಕೊಲೆಯು ಕ್ಷೇತ್ರದಿಂದ ಹೊರಗೆ ನಡೆದಿದ್ದರೂ ಈ ಬಗ್ಗೆ ಸಮರ್ಪಕವಾದ ತನಿಖೆ ನಡೆಸುವಂತೆ ಘಟನೆಯ ಬೆನ್ನಲ್ಲೇ ಆಗಿನ ಗೃಹ ಸಚಿವರಿಗೆ ದೂರವಾಣಿ ಕರೆ ಮಾಡಿ ಒತ್ತಾಯಿಸಿದ್ದೆ. ಮುಂದೆ ಸಿಐಡಿ ತನಿಖೆಗೆ ಆಗ್ರಹಿಸಿದ್ದೆ. ತಾನಾಗಲಿ, ತನ್ನ ಕುಟುಂಬದವರಾಗಲಿ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ.  ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ತನ್ನ ತಮ್ಮನ ಮಗ ನಿಶ್ಚಲನ ಹೆಸರನ್ನು ಎಳೆಯಲಾಗಿದೆ. ಆತ ನ್ಯೂಯಾರ್ಕ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ. ಘಟನೆ ನಡೆದ ಸಂದರ್ಭದಲ್ಲೂ ಆತ ಅಲ್ಲಿಯೇ ಇದ್ದ ಎಂದು ಸ್ಪಷ್ಟಪಡಿಸಿದ ಹೆಗ್ಗಡೆ ಪಾಸ್‌ಪೋರ್ಟ್ ಮತ್ತು ಬ್ಯಾಂಕ್ ವ್ಯವಹಾರದ ದಾಖಲೆಗಳನ್ನು ಮುಂದಿಟ್ಟಿದ್ದರು. ಸೌಜನ್ಯಾ ಕೊಲೆ ನಡೆದ ಬಳಿಕ ಮನೆಯವರು ತನ್ನ ಬಳಿ ಬಂದಿದ್ದರು. ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದೆ. ಆ ಬಳಿಕ ಅವರ ಮನೆಗೆ ನಾಗರಿಕ ಸೇವಾ ಟ್ರಸ್ಟ್‌ನವರು, ತಿಮರೋಡಿ ಮಹೇಶ್ ಶೆಟ್ಟಿ, ಕೇಮಾರು ಶ್ರೀಗಳು ಭೇಟಿ ನೀಡಿದ ಬಳಿಕ ಇಡೀ ಪ್ರಕರಣ ತಿರುವು ಪಡೆದಿದೆ.
ನನ್ನ ಸೇವಾ ಕಾರ್ಯಗಳನ್ನು ಎಂದಿಗೂ ನಿಲ್ಲಿಸುವುದಿಲ್ಲ. ನನ್ನಲ್ಲಿ ಆತ್ಮವಿಶ್ವಾಸ, ಆತ್ಮಾಭಿಮಾನದ ಕೊರತೆ ಆಗಿಲ್ಲ. ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ಬಗ್ಗೆ ಸಂಪೂರ್ಣ ಜವಾಬ್ದಾರಿ ಸರ್ಕಾರ, ಬೆಳ್ತಂಗಡಿ ಶಾಸಕರದ್ದು. ನಾನು ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರದ ಅಭಿಮಾನಿಗಳ ಬೃಹತ್ ಸಮಾವೇಶದಲ್ಲಿ ಹೇಳಿಕೆ ನೀಡಿದ್ದಾರೆ.
ಸೌಜನ್ಯಾ ಪ್ರಕರಣದ ತನಿಖೆಗೆ ಪೂರ್ಣ ಸಹಕಾರ ನೀಡಿದ್ದೇನೆ. ಆಕೆ ಕಾಲವಾದಾಗ ಹೃದಯ ಪೂರ್ವಕವಾಗಿ ಅವರ ಮನೆಯವರೊಂದಿಗೆ ಸ್ಪಂದಿಸಿದ್ದೇನೆ. ತನಿಖೆ ಮಾಡುವುದು ಸರ್ಕಾರ ಹಾಗೂ ಪೊಲೀಸರ ಕೆಲಸ. ತನಿಖೆಯಾಗಿಲ್ಲ ಎಂದರೆ ಅದು ಪೊಲೀಸರು ಹಾಗೂ ಸರ್ಕಾರಕ್ಕೆ ಅವಮಾನ. ಆರಂಭದಲ್ಲೇ ಸಿಐಡಿ ತನಿಖೆ ನಡೆಸಿದ್ದು, ತನಿಖೆಯ ವಿಚಾರಗಳನ್ನು ಅವರು ಬಹಿರಂಗ ಪಡಿಸಿರಲಿಲ್ಲ. ಈ ಬಗ್ಗೆ ಅವರನ್ನು ಕೇಳಿದಾಗ ತನಿಖಾ ಸಂದರ್ಭ ಮಾಹಿತಿಗಳನ್ನು ಬಹಿರಂಗ ಪಡಿಸಲು ಕಾನೂನು ಪ್ರಕಾರ ಸಾಧ್ಯವಿಲ್ಲ ಎಂದಿರುವುದೇ ಜನರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಮುಂದೆ ಸಿಬಿಐ ಅಥವಾ ಯಾವುದೇ ತನಿಖೆಗಳಾಗಲಿ ಅದನ್ನು ನಡೆಸುವುದು ಮತ್ತು ಸತ್ಯ ಹೊರತರುವ ಜವಾಬ್ದಾರಿ ಎಂದು ಸ್ಪಷ್ಟವಾಗಿ ನುಡಿದಿದ್ದರು.
ಧರ್ಮಸ್ಥಳದಲ್ಲಿ ಯಾವುದೇ ಭೂ ಮಾಫಿಯಾ ಇಲ್ಲ. ಯಾಕೆ ತಪ್ಪು ಅಭಿಪ್ರಾಯಗಳು ಮೂಡುತ್ತಿವೆ ಎನ್ನುವುದು ತಿಳಿಯುತ್ತಿಲ್ಲ. ಶ್ರೀಮಂತರು ನಮ್ಮಿಂದ ದೂರ ಇದ್ದಾರೆ ಎಂದು ತಿಳಿದುಕೊಂಡಿದ್ದೆ. ಆದರೆ ಇಂದು ಬಡವರನ್ನೂ ದೂರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕೆಲವು ಶಕ್ತಿಗಳು ಅನಗತ್ಯ ಗೊಂದಲ ಹುಟ್ಟಿಸುವ ಪ್ರಯತ್ನ ನಡೆಸಿದ್ದಾರೆ. ನನ್ನ ಕೆಲಸ ನಾನು ನಿಲ್ಲಿಸುವುದಿಲ್ಲ. ಇಂದಿನಿಂದ ಹೊಸ ಹುರುಪಿನಿಂದ, ಹೊಸ ಯೋಜನೆಗಳನ್ನು ಸಾಕಾರಗೊಳಿಸಲು ಶ್ರಮಿಸುತ್ತೇನೆ.
ಧರ್ಮದ ನೆಲೆಬೀಡು ಧರ್ಮಸ್ಥಳದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೆ ಪೊಲೀಸರ, ಸರಕಾರದ ವೈಫಲ್ಯದಿಂದಾಗಿ ತನಿಖೆ ನಡೆದಿಲ್ಲದಿರುವುದೇ ಇಂದು ಹೆಗ್ಗಡೆ ಹಾಗೂ ಶ್ರೀಕ್ಷೇತ್ರಕ್ಕೆ ಮಸಿ ಬಳಿಯುವ ಕಾರ್ಯವಾಗಿದೆ. ಇಲಾಖೆ ಸೂಕ್ತ ರೀತಿಯಲ್ಲಿ ಪ್ರಕರಣವನ್ನು ಬೇದಿಸಿ, ಮುಗ್ದೆಯ ಆತ್ಮಕ್ಕೆ ಶಾಂತಿ ದೊರಕಿಸುವುದರೊಂದಿಗೆ ಅಂಟಿಕೊಂಡಿರುವ ಕಳಂಕವನ್ನು ಹೋಗಲಾಡಿಸಬೇಕು. ಸತ್ಯತೆ ಜಗತ್ತಿನ ಜನತೆಗೆ ತಿಳಿಯಬೇಕು. ತಪ್ಪು ಯಾರು ಮಾಡಿದ್ದರೂ, ಕಾನೂನಿನ ಮಟ್ಟಿಗೆ ಎಲ್ಲರೂ ಸಮಾನ ಎನ್ನುವ ಭಾವನೆ ನಮ್ಮದು. ಆದ್ದರಿಂದ ಈ ಪ್ರಕರಣವು ಶೀಘ್ರದಲ್ಲಿ ಇತ್ಯರ್ಥವಾಗಲಿ. ಮುಗ್ದೆ ಸೌಜನ್ಯಳ ಆತ್ಮಕ್ಕೆ ಶಾಂತಿ ದೊರಕಲಿ. ಕ್ಷೇತ್ರಕ್ಕೆ ಅಂಟಿದ ಕಪ್ಪು ಕಲೆ ಹಾಗೂ ಹೆಗ್ಗಡೆಯವರ ಮೇಲಿನ ಕಳಂಕಗಳು ದೂರಾಗಲಿ ಎನ್ನುವುದು ಎಲ್ಲರ ಹಾರೈಕೆ.

ಗಣ್ಯರು ಏನಂತಾರೆ? 
ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಅಪನಂಬಿಕೆ ಬರುವಂತಹ ಸಂಚುಗಳು ನಡೆಯುತ್ತಿದೆ. ಧರ್ಮಸ್ಥಳದಂತಹ ಕ್ಷೇತ್ರಗಳ ಮೇಲಿನ ನಂಬಿಕೆ ಹೊರಟು ಹೋದರೆ ಶ್ರದ್ಧಾ ಕೇಂದ್ರಗಳೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. 
ಡಾ.ಡಿ.ವೀರೇಂದ್ರ ಹೆಗ್ಗಡೆ-ಧರ್ಮಾಧಿಕಾರಿ, ಧರ್ಮಸ್ಥಳ

ಕ್ಷುಲ್ಲಕ ವಿಚಾರವನ್ನು ಮುಂದಿಟ್ಟು, ಕೆಲವು ದುಷ್ಕರ್ಮಿಗಳು ಮಾತನಾಡುತ್ತಿದ್ದು, ಸಿಐಡಿ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರದ ಚಾರಿತ್ರ್ಯಹರಣ ಮಾಡುವುದಕ್ಕೆ ಪೂರ್ಣ ವಿರಾಮ ಹಾಕಬೇಕು. ಈ ಕುರಿತು ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳ ಗಮನಕ್ಕೆ ತಂದು ಸತ್ಯಾಂಶ ಹೊರತರುವಲ್ಲಿ ಪ್ರಯತ್ನಿಸುತ್ತೇನೆ.
ವಿನಯಕುಮಾರ್ ಸೊರಕೆ-ನಗರಾಭಿವೃದ್ಧಿ ಸಚಿವ 

ತುಳುನಾಡಿನ ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆ ತರುವಂತಹ ಶಕ್ತಿಗಳನ್ನು ಧೈರ್ಯವಾಗಿ ಎದುರಿಸುತ್ತೇವೆ. ಸಮಾಜವು ಕ್ಷೇತ್ರದೊಂದಿಗಿದೆ. ಪ್ರತಿಭಟನೆಗಳು ಪೊಲೀಸರ ವಿರುದ್ಧ ನಡೆದು ಸತ್ಯ ಹೊರಬರಲಿ. ಎಂದೆಂದಿಗೂ ಸತ್ಯದ ಜೊತೆ ನಾವಿದ್ದೇವೆ.
ಡಾ.ಎಂ.ಎನ್.ರಾಜೇಂದ್ರಕುಮಾರ್-ಅಧ್ಯಕ್ಷ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್.


ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಡಾ.ಹೆಗ್ಗಡೆಯವರ ಹೆಸರನ್ನು ಎಳೆತಂದು ಅವರ ಗೌರವಕ್ಕೆ ಚ್ಯುತಿ ತರಲು ಪ್ರಯತ್ನಿಸಿರುವುದು ಖಂಡನೀಯ. ಧರ್ಮಾಧಿಕಾರಿಯವರ ನೋವು ನಮ್ಮೆಲ್ಲರ ನೋವಾಗಿದೆ. ಅವರು ನಂಬಿದಂತ ಸತ್ಯ ಅವರನ್ನು ಕಾಪಾಡಿಕೊಂಡು ಬರುತ್ತದೆ. ಡಾ.ಎಂ.ಮೋಹನ್ ಆಳ್ವ-ಅಧ್ಯಕ್ಷ, ಆಳ್ವಾಸ್ ಶಿಕ್ಷಣ ಸಂಸ್ಥೆ.